Tag: karnataka election2018

  • ಕಲಘಟಗಿಯಲ್ಲಿ ಲಾಡ್‍ಗೆ ಮತ್ತೆ ತರಾಟೆ – ಮೈಸೂರಿನಲ್ಲಿ ಖರ್ಗೆಗೆ ಪ್ರಶ್ನೆಗಳ ಸುರಿಮಳೆ – ಸಿವಿ ರಾಮನ್‍ನಗರ ಶಾಸಕರಿಗೆ ಫುಲ್ ಕ್ಲಾಸ್

    ಕಲಘಟಗಿಯಲ್ಲಿ ಲಾಡ್‍ಗೆ ಮತ್ತೆ ತರಾಟೆ – ಮೈಸೂರಿನಲ್ಲಿ ಖರ್ಗೆಗೆ ಪ್ರಶ್ನೆಗಳ ಸುರಿಮಳೆ – ಸಿವಿ ರಾಮನ್‍ನಗರ ಶಾಸಕರಿಗೆ ಫುಲ್ ಕ್ಲಾಸ್

    ಮೋದಿ 15 ಲಕ್ಷ ಅಕೌಂಟ್‍ಗೆ ಹಾಕಿದ್ನಾ- ಏಕವಚನದಲ್ಲೇ ಗ್ರಾಮಸ್ಥರಿಂದ ಸಂತೋಷ್ ಲಾಡ್ ಗೆ ಪ್ರಶ್ನೆ

    ಬೆಂಗಳೂರು: ಸಚಿವ ಸಂತೋಷ್ ಲಾಡ್ ಕಲಘಟಗಿ ಕ್ಷೇತ್ರದ ಪ್ರಚಾರಕ್ಕೆ ಹೋದಾಗಲೆಲ್ಲಾ ತೀವ್ರ ಮುಖಭಂಗ ಅನುಭವಿಸ್ತಿದ್ದಾರೆ. ಗ್ರಾಮದ ಸಮಸ್ಯೆಗಳನ್ನ ಇತ್ಯಥ್ರ್ಯ ಮಾಡಿಲ್ಲ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಮೋದಿ ಮೋದಿ ಅಂತ ಘೋಷಣೆ ಕೂಗಿದ್ದಕ್ಕೆ ಸಿಟ್ಟಾದ ಲಾಡ್, ಮೋದಿ 15 ಲಕ್ಷ ಅಕೌಂಟ್‍ಗೆ ಹಾಕಿದ್ನಾ ಎಂದು ಏಕವಚನದಲ್ಲೇ ಪ್ರಶ್ನಿಸಿದ್ರು. ಈ ವೇಳೆ ಲಾಡ್ ಹಾಗೂ ಗ್ರಾಮಸ್ಥರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.

    ಮೈಸೂರಿನಲ್ಲಿ ರೋಡ್‍ಶೋ ನಡೆಸುತ್ತಿದ್ದ ಮಲ್ಲಿಕಾರ್ಜುನ್ ಖರ್ಗೆಗೆ ಸ್ಥಳೀಯ ದಲಿತ ಮುಖಂಡರು ಪ್ರಶ್ನೆಗಳ ಸುರಿಮಳೆಗೈದ್ರು. ಎಲ್ಲಾ ಕ್ಷೇತ್ರದಲ್ಲಿ ದಲಿತರು ಕಾಂಗ್ರೆಸ್‍ಗೆ ವೋಟ್ ಹಾಕ್ತೀವಿ. ಆದ್ರೆ ಪರಮೇಶ್ವರ್ ಕ್ಷೇತ್ರದಲ್ಲಿ ಸಿಎಂ ಸಮುದಾಯದವರು ಯಾಕೆ ಕಾಂಗ್ರೆಸ್‍ಗೆ ವೋಟ್ ಹಾಕಲ್ಲ ಅಂತ ಪ್ರಶ್ನಿಸಿದ್ರು. ಅಶೋಕಪುರಂನಲ್ಲಿ ಖರ್ಗೆ ಪ್ರಚಾರ ವಾಹನ ತಡೆದ ಯುವಕನೊಬ್ಬ ದಲಿತ ಮುಖ್ಯಮಂತ್ರಿಗಾಗಿ ಆಗ್ರಹಿಸಿದ್ರು.

    ಇತ್ತ ಬೆಂಗಳೂರಿನ ಸಿವಿ ರಾಮನ್‍ನಗರದಲ್ಲಿ ವೋಟ್ ಕೇಳಲು ಹೋದ ಬಿಜೆಪಿ ಅಭ್ಯರ್ಥಿ, ಶಾಸಕ ರಘು ಅವರಿಗೆ ಜನ ಚಳಿ ಬಿಡಿಸಿದ್ರು. ಎಲೆಕ್ಷನ್ ಟೈಂನಲ್ಲಿ ಮನೆ ಹುಡ್ಕೊಂಡು ಬರ್ತೀರಾ, ಬೇರೆ ಟೈಂನಲ್ಲಿ ಕೈಗೆ ಸಿಗಲ್ಲ ಅಂತಾ ಜನ ಗರಂ ಆದ್ರು. ಈ ವೇಳೆ ಶಾಸಕರು ಬಾಯ್ತಪ್ಪಿ ವೋಟು ಬೇಡ ಹೋಗ್ರಿ ಅಂದಿದ್ದಾರೆ. ಕೊನೆಗೆ ಜನ್ರ ಆಕ್ರೋಶಕ್ಕೆ ಬೆದರಿದ ಶಾಸಕರು ಸ್ಥಳದಿಂದ ಕಾಲ್ಕಿತ್ತರು.

  • 5 ಕೋಟಿ ದಾಟಿದ ಮತದಾರರ ಸಂಖ್ಯೆ, 2924 ನಾಮಪತ್ರ ಸಲ್ಲಿಕೆ: ನಗದು ಸಿಕ್ಕಿದ್ದು ಎಷ್ಟು? ಕೇಸ್ ಎಷ್ಟು ಬಿದ್ದಿದೆ?

    5 ಕೋಟಿ ದಾಟಿದ ಮತದಾರರ ಸಂಖ್ಯೆ, 2924 ನಾಮಪತ್ರ ಸಲ್ಲಿಕೆ: ನಗದು ಸಿಕ್ಕಿದ್ದು ಎಷ್ಟು? ಕೇಸ್ ಎಷ್ಟು ಬಿದ್ದಿದೆ?

    ಬೆಂಗಳೂರು: ರಾಜ್ಯದ ಮತದಾರರ ಸಂಖ್ಯೆ 5 ಕೋಟಿ ದಾಟಿದೆ. ಈ ಚುನಾವಣೆಗೆ 5,10,39,107 ಮಂದಿ ಮತದಾರರಿದ್ದಾರೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸಂಜೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಸಲು ನಿಗದಿಯಾಗಿದ್ದ ಅವಧಿ ಮುಕ್ತಾಯಗೊಂಡಿದೆ. ಇದೂವರೆಗೂ ಮಂಗಳವಾರ ಸಂಜೆ 6:30ರ ವೇಳೆಗೆ 2,924 ನಾಮಪತ್ರಗಳು ಸಲ್ಲಿಕೆಯಾಗಿದ್ದು 16 ವಿಧಾನಸಭಾ ಕ್ಷೇತ್ರಗಳಲ್ಲಿ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಧ್ಯರಾತ್ರಿ ನಂತರ ಪೂರ್ಣ ಮಾಹಿತಿ ಲಭ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.

    ಈವರೆಗೂ 19.62 ಕೋಟಿ ರೂ. ಮೌಲ್ಯದ 4,09,099 ಲೀಟರ್ ಮದ್ಯವನ್ನು ವಶ ಪಡಿಸಿದ್ದು, 20.88 ಕೋಟಿ ರೂ. ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 31,476 ಜಾಮೀನು ರಹಿತ ಪ್ರಕರಣ ದಾಖಲಾಗಿದ್ದು, 72,435 ಗೂಂಡಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

    ಪಕ್ಷದ ಕಾರ್ಯಕ್ರಮಗಳಲ್ಲಿ ಊಟೋಪಚಾರ ನಡೆಸುವ ವಿಚಾರದ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಪಕ್ಷಕ್ಕೆ ದುಡಿಯುವವರಿಗೆ ಊಟ ಮಾಡಿಸಬಹುದು. ಆದರೆ ಬೇರೆಯವರಿಗೆ ಊಟ ನೀಡಿದರೆ ಅದು ಆಮಿಷ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

    ಚುನಾವಣಾ ಆಯೋಗ ಯಾವುದೇ ಬಾರ್ ಲೈಸೆನ್ಸ್ ರದ್ದು ಮಾಡಿಲ್ಲ. ಆದರೆ ಆದರೆ ನೀತಿ ಸಂಹಿತೆ ಉಲ್ಲಂಘಿಸುವ ಬಾರ್ ಗಳ ಮೇಲೆ ಅಬಕಾರಿ ಆಯುಕ್ತರು ಕ್ರಮ ಜರುಗಿಸುತ್ತಾರೆ. ಬೆಂಗಳೂರು ನಗರದಲ್ಲಿ ರಾಜಕೀಯ ಪಕ್ಷಗಳ ಹೋಲ್ಡಿಂಗ್ ಗಳಿಗೆ ಅನುಮತಿ ನೀಡಲು ಚುನಾವಣಾ ಆಯೋಗ ಮಾರ್ಗಸೂಚಿ ರಚಿಸಿದೆ. ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.

    ಆಯೋಗದ ಆನ್ ಲೈನ್ ದೂರು ಸ್ವೀಕಾರ ವ್ಯವಸ್ಥೆ `ಸುವಿಧಾ’ದಲ್ಲಿ ಸ್ವೀಕಾರವಾದ ದೂರುಗಳಿಗೆ 24 ತಾಸುಗಳಲ್ಲಿ ಪರಿಹಾರ ಸೂಚಿಸಲಾಗುತ್ತದೆ. ಅಗ್ನಿಶಾಮಕ ದಳದಿಂದ ಪೂರ್ವಾನುಮತಿ ಪಡೆದಿರುವ ಕಡೆಗಳಲ್ಲಿ ಹೆಲಿಕಾಪ್ಟರ್ ಬಳಕೆಗೆ ಒಂದು ಗಂಟೆಯಲ್ಲಿ ಅನುಮತಿ ನೀಡಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.

    ಈ ವೇಳೆ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲ ಬಾರಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಅದಕ್ಕೆ ಆಯೋಗ ಆಕ್ಷೇಪ ವ್ಯಕ್ತಪಡಿಸಿತ್ತು. ಎರಡನೇ ಬಾರಿ ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ಆಯೋಗದ ಪಾತ್ರವಿಲ್ಲ. ಡಿಪಿಎಆರ್ ಕಾನೂನಿನಂತೆ ಸರ್ಕಾರ ವರ್ಗಾವಣೆ ನಡೆಸಿದೆ ಎಂದು ಅವರು ಹೇಳಿದರು.

    ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು 2054
    ಒಟ್ಟು ಪುರುಷ ಅಭ್ಯರ್ಥಿಗಳು – 1920
    ಒಟ್ಟು ಮಹಿಳಾ ಅಭ್ಯರ್ಥಿಗಳು – 134
    ಒಟ್ಟು ಪಕ್ಷೇತರ ಅಭ್ಯರ್ಥಿಗಳು – 885
    ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗಳು – 15
    ಬಿಜೆಪಿ ಮಹಿಳಾ ಅಭ್ಯರ್ಥಿಗಳು – 13
    ಜೆಡಿಎಸ್ ಮಹಿಳಾ ಅಭ್ಯರ್ಥಿಗಳು – 11
    ಎಂಇಪಿ ಮಹಿಳಾ ಅಭ್ಯರ್ಥಿಗಳು – 12

  • ಜೆಡಿಎಸ್ ಅಭ್ಯರ್ಥಿಗಳಿಗೆ ಪತ್ನಿಯರೇ ಪ್ರತಿಸ್ಪರ್ಧಿಗಳು

    ಜೆಡಿಎಸ್ ಅಭ್ಯರ್ಥಿಗಳಿಗೆ ಪತ್ನಿಯರೇ ಪ್ರತಿಸ್ಪರ್ಧಿಗಳು

    ರಾಯಚೂರು: ಜಿಲ್ಲೆಯ ಮಸ್ಕಿ ಮತ್ತು ಲಿಂಗಸಗೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಅವರ ಪತ್ನಿಯರೇ ಪ್ರತಿಸ್ಪರ್ಧಿಗಳಾಗಿದ್ದಾರೆ.

    ಮಸ್ಕಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ಸೋಮನಾಥ್ ನಾಯಕ್ ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ ತಮ್ಮ ಪತ್ನಿ ತಾರಾರಾಣಿ ಅವರಿಂದಲೂ ಜೆಡಿಎಸ್ ಪಕ್ಷದಿಂದಲೇ ನಾಮಪತ್ರ ಹಾಕಿಸಿದ್ದಾರೆ. ಲಿಂಗಸುಗೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿದ್ದಪ್ಪ ಬಂಡಿ ಹಾಗೂ ತಮ್ಮ ಪತ್ನಿ ಗಂಗಾ ಬಂಡಿ ಇಬ್ಬರೂ ನಾಮಪತ್ರಗಳನ್ನ ಸಲ್ಲಿಸಿದ್ದಾರೆ.

    ಲಿಂಗಸಗೂರಿನ ಬಿಜೆಪಿ ಅಭ್ಯರ್ಥಿಗೆ ಸಹೋದರನ ಮಗನೇ ಎದುರಾಳಿಯಾಗಿದ್ದಾನೆ. ಆದ್ರೆ ಒಂದೇ ಪಕ್ಷದಿಂದ ಒಂದೇ ಮನೆಯಲ್ಲಿನ ಇಬ್ಬಿಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಈ ರೀತಿಯಾಗಿ ಪತ್ನಿಯರು ನಾಮಪತ್ರ ಸಲ್ಲಿಸೋದಕ್ಕೆ ಜ್ಯೋತಿಷಿಗಳು ಕಾರಣ ಎನ್ನಲಾಗಿದ್ದು, ಪತ್ನಿಯರಿಂದಲೂ ನಾಮಪತ್ರ ಹಾಕಿಸಿದರೆ ಒಳ್ಳೆಯದು ಅಂತ ಈ ಇಬ್ಬರು ಅಭ್ಯರ್ಥಿಗಳು ಎರಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಲಿಂಗಸಯಗೂರಿನ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ತಮ್ಮ ಸಹೋದರನ ಪುತ್ರ ದೇವರಾಜ್ ದೋತ್ರೆ ಬಿಜೆಪಿ ಪಕ್ಷದಿಂದಲೇ ತಮ್ಮ ಉಮೇದುಗಾರಿಕೆ ಸಲ್ಲಿಸಿದ್ದಾರೆ. ಒಂದು ವೇಳೆ ತಮ್ಮ ನಾಮಪತ್ರ ತಿರಸ್ಕೃತವಾದ್ರೆ ಇರಲಿ ಅಂತ ಸಹೋದರನ ಪುತ್ರನಿಂದಲೂ ನಾಮಪತ್ರ ಹಾಕಿಸಿದ್ದಾರೆ ಎನ್ನಲಾಗಿದೆ.

  • ಟಿಕೆಟ್ ಹಂಚಿಕೆ ಮುನ್ನವೇ `ಕೈ’ನಲ್ಲಿ ಭಿನ್ನಮತ – ಸಿಎಂ ವಿರುದ್ಧ ಖರ್ಗೆ, ಮೊಯ್ಲಿ ಅಸಮಾಧಾನ

    ಟಿಕೆಟ್ ಹಂಚಿಕೆ ಮುನ್ನವೇ `ಕೈ’ನಲ್ಲಿ ಭಿನ್ನಮತ – ಸಿಎಂ ವಿರುದ್ಧ ಖರ್ಗೆ, ಮೊಯ್ಲಿ ಅಸಮಾಧಾನ

    ನವದೆಹಲಿ: ಟಿಕೆಟ್ ಹಂಚಿಕೆ ಮುನ್ನವೇ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಭಿನ್ನಮತ ಭುಗಿಲೆದ್ದಿದೆ. ಬೆಂಬಲಿಗರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಮತ್ತು ವೀರಪ್ಪ ಮೊಯ್ಲಿ ನಡುವೆ ಮುನಿಸು ಶುರುವಾಗಿದೆ.

    ಇಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಹಿನ್ನೆಲೆಯಲ್ಲಿ ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಗುರುವಾರ ರಾತ್ರಿ ಪೂರ್ವಭಾವಿ ಸಭೆ ನಡೆದಿತ್ತು. ದೆಹಲಿಯ ಕಾಂಗ್ರೆಸ್ ವಾರ್ ರೂಂನಲ್ಲಿ ನಡೆದ ಸಭೆಯಲ್ಲಿ ಅಸಮಧಾನ ಸ್ಫೋಟವಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಬೀದರ್ ನಿಂದ ಅಶೋಕ್ ಖೇಣಿ ಟಿಕೆಟ್ ನೀಡಲು ಸಿಎಂ ಒತ್ತಡ ಹೇರಿದ್ರು. ಇದ್ರಿಂದ ಸಿಟ್ಟಾದ ಮಲ್ಲಿಕಾರ್ಜುನ ಖರ್ಗೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗ್ತಿದೆ. ಕನಿಷ್ಠ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಾದ್ರೂ ನಮ್ಮನ್ನು ಗಂಭೀರವಾಗಿ ಪರಿಗಣಿಸಿ ಎಂದು ಆಕ್ರೋಶಗೊಂಡು ಸಭೆಯಿಂದ ಹೊರ ಬಂದಿದ್ದಾರೆ. ಖರ್ಗೆ ಬೆನ್ನಲ್ಲೆ ವೀರಪ್ಪ ಮೊಯ್ಲಿ ಕೂಡಾ ತಮ್ಮ ಅಮಸಧಾನ ಹೊರ ಹಾಕಿದ್ದಾರೆ. ಗಣಿ ಆರೋಪ ಇರುವ ಆನಂದ ಸಿಂಗ್, ನಾಗೇಂದ್ರಗೆ ಟಿಕೆಟ್ ನೀಡಿವ ವಿಚಾರದಲ್ಲಿ ಮೊಯ್ಲಿ ಮುನಿಸಿಕೊಂಡಿದ್ದಾರಂತೆ. ಅಲ್ಲದೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡರಿಗೆ ಟಿಕೆಟ್ ನೀಡ್ತಿರುವುದಕ್ಕೂ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.

    ಫಸ್ಟ್ ಲಿಸ್ಟ್ ರಿಲೀಸ್ ಸಾಧ್ಯತೆ: ಇಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪರಿಶೀಲನಾ ಸಮಿತಿ ಸಭೆ ನಡೆಯಲಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಮಧುಸೂದನ್ ಮಿಸ್ತ್ರಿ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ರಾಜ್ಯ ಉಸ್ತುವಾರಿ ಕೆ. ವೇಣುಗೋಪಾಲ, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

    ನಿನ್ನೆ ರಾತ್ರಿ ನಡೆದ ಸಭೆಯ ಅಂತಿಮ ವರದಿಯನ್ನು ಚುನಾವಣಾ ಸಮಿತಿಯ ಮುಂದೆ ಪ್ರಸ್ತಾಪಿಸಲಿದ್ದಾರೆ. ಹಾಲಿ ಶಾಸಕರು, ಬಂಡಾಯ ಶಾಸಕರು, ಹೊಸದಾಗಿ ಸೇರ್ಪಡೆಗೊಂಡವರಿಗೆ ಟಿಕೆಟ್ ನೀಡುವ ಬಗ್ಗೆ, ಪ್ರಮುಖವಾಗಿ, ಎರಡು ಕ್ಷೇತ್ರಗಳಲ್ಲಿ ಸ್ವರ್ಧೆ ಹಾಗೂ ಪ್ರಮುಖ ನಾಯಕರ ಮಕ್ಕಳಿಗೆ ಟಿಕೆಟ್ ನೀಡುವ ಬಗ್ಗೆಯೂ ಅಂತಿಮ ತೀರ್ಮಾನ ಮಾಡಲಿದ್ದಾರೆ. ಇಂದು ಸಂಜೆ ಹೊತ್ತಿಗೆ ಮೊದಲ ಹಂತದಲ್ಲಿ 130-140 ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

  • ಇಂದಿನಿಂದ ವಿಶೇಷ ವಾಹನದಲ್ಲಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಪ್ರಜ್ವಲ್ ರೇವಣ್ಣ

    ಇಂದಿನಿಂದ ವಿಶೇಷ ವಾಹನದಲ್ಲಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಪ್ರಜ್ವಲ್ ರೇವಣ್ಣ

    ಬೆಂಗಳೂರು: ಜೆಡಿಎಸ್ ವರಿಷ್ಠ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇಂದಿನಿಂದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

    ಪ್ರಚಾರಕ್ಕಾಗಿ ಈಗಾಗಲೇ ವಿಶೇಷ ವಾಹನ ರೆಡಿ ಮಾಡಿಸಿದ್ದಾರೆ. ರೇವಣ್ಣ ಬೆಂಬಲಿಗರೊಬ್ಬರು ಪ್ರಚಾರಕ್ಕಾಗಿ ವಿಶೇಷ ವಾಹನ ರೆಡಿ ಮಾಡಿಕೊಟ್ಟಿದ್ದು, ಅದಕ್ಕೆ ಸೋಮವಾರ ಪೂಜೆ ಮಾಡಿದ್ದಾರೆ. ಈ ವೇಳೆ ತಾಯಿ ಭವಾನಿ ರೇವಣ್ಣ ಕೂಡ ಸಾಥ್ ನೀಡಿದ್ರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಎಚ್‍ಡಿಡಿ ನಿವಾಸದ ಮುಂದೆ ಪ್ರತಿಭಟನೆ

    ಪುತ್ರನ ಪ್ರಚಾರ ವಾಹನವನ್ನು ಖುದ್ದು ಪರಿಶೀಲಿಸಿದ್ರು. ಅಂದಹಾಗೆ, ಪ್ರಜ್ವಲ್ ರೇವಣ್ಣ ಪ್ರಚಾರ ವಾಹನದಲ್ಲಿ ದೇವೇಗೌಡ, ತಂದೆ ರೇವಣ್ಣ, ಚಿಕ್ಕಪ್ಪ ಹೆಚ್.ಡಿ ಕುಮಾರಸ್ವಾಮಿ ಅವರ ಫೋಟೋಗಳನ್ನು ಬಳಸಲಾಗಿದೆ.

    ಮೊದಲ ಪಟ್ಟಿಯಲ್ಲಿ 35 ವರ್ಷದ ಒಳಗಿನ ವ್ಯಕ್ತಿಗೆ ಟಿಕೆಟ್ ನೀಡಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಲೇಬೇಕು. ಆರ್ ಆರ್ ನಗರದಲ್ಲಿ ಏಪ್ರಿಲ್ 13ರಂದು ನಡೆಯಲಿರುವ ಸಮಾವೇಶದಲ್ಲಿ ಪ್ರಜ್ವಲ್ ಹೆಸರನ್ನು ಘೋಷಿಸುವಂತೆ ಮಾಡಲು ಶರವಣ ಅವರಿಗೆ ಪ್ರಜ್ವಲ್ ಬೆಂಬಲಿಗರು ಇತ್ತೀಚೆಗೆ ದೇವೇಗೌಡ ಅವರ ನಿವಾಸದ ಎದುರು ನಡೆಸಿದ ಪ್ರತಿಭಟನೆಯ ವೇಳೆ ಆಗ್ರಹಿಸಿದ್ದರು. ಕುಟುಂಬದೊಳಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಈ ವೇಳೆ ಶರವಣ ಪ್ರತಿಭಟನಾಕಾರರಿಗೆ ತಿಳಿಸಿದ್ದರು. ಇದನ್ನೂ ಓದಿ: ಬೇಲೂರು ವಿಧಾನಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ?

  • ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!

    ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!

    ಬೆಂಗಳೂರು: ಮಾಜಿ ಸಚಿವ ಅಂಬರೀಶ್ ಅವರ ವರ್ತನೆಗೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ರಾಜ್ಯ ಕಾಂಗ್ರೆಸ್ ನಾಯಕರಿಗೆ ಮಾತಿಗೂ ಸಿಗದೆ, ತಮ್ಮ ಅಭಿಪ್ರಾಯವನ್ನು ತಿಳಿಸದೆ ಸತಾಯಿಸುತ್ತಿರುವ ಅಂಬರೀಶ್ ವರ್ತನೆಯಿಂದ ಬೇಸತ್ತ ಕೆಪಿಸಿಸಿ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಬರೀಶ್ ಅವರನ್ನ ಸಂಪರ್ಕ ಮಾಡಿದ ಕೆ.ಸಿ.ವೇಣುಗೋಪಾಲ್ ಭಾನುವಾರ ಸಂಜೆ ಒಳಗೆ ತಮ್ಮ ನಿರ್ಧಾರ ತಿಳಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಗೆ ಕಗ್ಗಂಟಾದ ಅಂಬರೀಶ್ ಮೌನ- `ಕೈ’ ಬಿಡ್ತಾರಾ ಮಂಡ್ಯದ ಗಂಡು!

    ಮಂಡ್ಯದಿಂದ ಸ್ಪರ್ಧೆ ಮಾಡುವುದಾದರೆ ಪಕ್ಷ ನಿಮಗೆ ಟಿಕೆಟ್ ನೀಡಲಿದೆ. ತಮಗೆ ಇಷ್ಟ ಇಲ್ಲದಿದ್ದರೆ ಬೇರೆ ಅಭ್ಯರ್ಥಿ ಆಯ್ಕೆಯನ್ನು ಪಕ್ಷ ಮಾಡಲಿದೆ. ಏಪ್ರಿಲ್ 9 ರಂದು ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿಯ ಕೊನೆಯ ಸಭೆ ನಡೆಯಲಿದೆ. ಅಷ್ಟರೊಳಗೆ ನಿಮ್ಮ ನಿರ್ಧಾರ ನಮಗೆ ತಿಳಿಸಿ. ನಿಮ್ಮ ಬದಲಿಗೆ ನೀವು ಸೂಚಿಸುವ ನಿಮ್ಮ ಆಪ್ತರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ. ನಿಮ್ಮನ್ನು ಬಿಟ್ಟು ಬೇರೆ ಯಾರಿಗೆ ಟಿಕೆಟ್ ನೀಡುವುದಾದರು ಜಿಲ್ಲೆಯ ಪಕ್ಷದ ಮುಖಂಡರುಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತೆ. ಆದ್ದರಿಂದ ತಮ್ಮ ಅಭಿಪ್ರಾಯವನ್ನ ನೇರವಾಗಿ ನನ್ನ ಬಳಿಯೆ ಹಂಚಿಕೊಳ್ಳಿ ಅಂತ ವೇಣುಗೋಪಾಲ್ ತಿಳಿಸಿದ್ದಾರೆಂದು ಹೇಳಲಾಗಿದೆ.

    ಭಾನುವಾರ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಅವರ ಬೃಹತ್ ಸಮಾವೇಶವಿದೆ. ಎರಡು ದಿನಗಳ ಕಾಲ ನಾನು ಬೆಂಗಳೂರಿನಲ್ಲಿ ಇರುತ್ತೇನೆ. ತಮ್ಮದು ಏನೇ ಅಭಿಪ್ರಾಯ ಇದ್ದರೂ, ಬಂದು ನನ್ನೊಂದಿಗೆ ಚರ್ಚಿಸಿ, ತೀರ್ಮಾನ ತಿಳಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದು, ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷರಿಗೂ ಮಂಡ್ಯ ಜಿಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಿ ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.