https://youtu.be/aJ3k6nsP2ls
Tag: Karnataka Election
-

ಎರಡು ಕ್ಷೇತ್ರಗಳಲ್ಲಿ ಹೆಚ್‍ಡಿಕೆ ಸ್ಪರ್ಧಿಸಲು ನನ್ನ ಅಭ್ಯಂತರವಿಲ್ಲ: ಹೆಚ್‍ಡಿಡಿ
ನವದೆಹಲಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನನ್ನ ಅಭ್ಯಂತರವಿಲ್ಲ. ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿಗಳಿಲ್ಲ, ಅನಿತಾ ಕುಮಾರಸ್ವಾಮಿಯವ್ರು ಸ್ಪರ್ಧೆ ಮಾಡಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಪಕ್ಷದಿಂದ ಯಾವುದೇ ತಡೆ ಇಲ್ಲ ಅಂತಾ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ನಾಳೆ ನಡೆಯುವ ಕಾವೇರಿ ಕುರಿತ ಸಭೆಯಲ್ಲಿ ಭಾಗಿಯಾಗಲಿದ್ದೇನೆ. ಸಭೆಯಲ್ಲಿ ಕೇಂದ್ರ ಸಚಿವರೆಲ್ಲಾ ಇದ್ದರೆ ಒಳ್ಳೆಯದು. ಸಂಸತ್ ಅಧಿವೇಶನ ಇರುವುದರಿಂದ ಬಿಜೆಪಿ ಸಂಸದರು ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ನಾನು ಒಂದು ಸ್ಕೀಂ ಮಾಡಿಕೊಟ್ಟಿದ್ದೇನೆ. ತಮಿಳುನಾಡಿನ ಎಲ್ಲಾ ಪಕ್ಷದ ಸಂಸದರು ಒಗ್ಗಟ್ಟಾಗಿದ್ದು, ನಮ್ಮ ರಾಜ್ಯದ ಸಂಸದರೆಲ್ಲಾ ಒಗ್ಗಾಟಗಬೇಕಿದೆ ಅಂತಾ ದೇವೇಗೌಡ್ರು ತಿಳಿಸಿದ್ರು.

ಜೆಡಿಎಸ್ ನಿಂದ ಅಮಾನತಾಗಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ ಮಾತುಕತೆಗೆ ಸಿದ್ಧ ಎಂಬ ಹೇಳಿಕೆ ಪ್ರತಿಕ್ರಿಯಿಸಿದ ದೇವೇಗೌಡ್ರು, ಈಗಾಗಲೇ ಅವರಿಗೆ ಸಾಕಷ್ಟು ಸಮಯವಕಾಶ ಕೊಟ್ಟಿದ್ದೇವೆ. ಅವರನ್ನು ಅಮಾನತು ಮಾಡಲಾಗಿತ್ತು ಅಷ್ಟೆ, ಪಕ್ಷದಿಂದ ಉಚ್ಛಾಟಿಸುವ ನಿರ್ಧಾರ ತೆಗೆದುಕೊಂಡಿರಲಿಲ್ಲ. ಈ ಹಿಂದೆ ಗೋಪಾಲಯ್ಯ ತಪ್ಪು ಒಪ್ಪಿಕೊಂಡ ನಂತರ ಅವರನ್ನು ಬಿಟ್ಟಿಲ್ಲವೆ. ಮೊದಲು ಸ್ಪೀಕರ್ ಕೋರ್ಟ್ ತೀರ್ಪು ಬರಲಿ. ಮುಂದೆ ಏನಾಗುತ್ತೆ ಎಂಬುದನ್ನು ನೋಡೋಣ ಅಂತಾ ಅಂದ್ರು.
ಹೆಚ್.ಡಿ.ಕುಮಾರಸ್ವಾಮಿ ಮುಂದಿನ ಚುನಾವಣೆಗೆ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಂದ ನಿಲ್ಲಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಜೆಡಿಎಸ್‍ನಿಂದ ಅಧಿಕೃತವಾಗಿ ಈ ವಿಚಾರ ಪ್ರಕಟವಾಗಿಲ್ಲ

-

ತೆನೆಯ ಹೊರೆ ಇಳಿಸಿ ಕಮಲ ಹಿಡಿದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ
-ಅಪ್ಪ-ಮಗ, ಅಣ್ಣ-ತಮ್ಮ ಸ್ಪರ್ಧೆ ಮಾಡ್ಬಹುದು, ಗಂಡ-ಹೆಂಡ್ತಿ ಯಾಕೆ ಸ್ಪರ್ಧಿಸಬಾರದು ಜೆಡಿಎಸ್‍ಗೆ ನಡಹಳ್ಳಿ ಪ್ರಶ್ನೆ
ಬೆಂಗಳೂರು: ಕಾಂಗ್ರೆಸ್ ನಿಂದ ಉಚ್ಚಾಟಿತರಾಗಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಶಾಸಕ ನಡಹಳ್ಳಿ ಮಂಗಳವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ರು. ಇಂದು ಬೆಳಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಯಡಿಯೂರಪ್ಪರ ನೇತೃತ್ವದಲ್ಲಿ ಎ.ಎಸ್.ಪಾಟೀಲ್ ನಡಹಳ್ಳಿ, ಪತ್ನಿ ಮಹಾದೇವಿ, ಮಧುಗಿರಿ ಕ್ಷೇತ್ರದ ಮಾಜಿ ಶಾಸಕರಾದ ಗಂಗಹನುಮಯ್ಯ, ಪಾವಗಡ ಜಿ.ಪಂ.ಸದಸ್ಯ, ಮಾಜಿ ಸಚಿವ ವೆಂಕಟರಮಣಪ್ಪ ಅವರ ಪುತ್ರ ಕುಮಾರಸ್ವಾಮಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ್ರು.

ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಶಾಸಕ ನಡಹಳ್ಳಿ, ಅಪ್ಪ-ಮಗ, ಅಣ್ಣ-ತಮ್ಮ ಸ್ಪರ್ಧೆ ಮಾಡ್ಬಹುದು, ಗಂಡ-ಹೆಂಡ್ತಿ ಯಾಕೆ ಸ್ಪರ್ಧಿಸಬಾರದು ಅಂತಾ ಪರೋಕ್ಷವಾಗಿ ಜೆಡಿಎಸ್ ಗೆ ಪ್ರಶ್ನೆ ಮಾಡಿದ್ರು. ನಾನು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿದ್ದು ನಿಜ, ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಜೊತೆಯಲ್ಲಿ ಪಕ್ಷದ ಬಲವರ್ಧನೆಗೂ ಮುಂದಾಗಿದ್ದೆ. ಆದ್ರೆ ನಾನು ಇದೂವರೆಗೂ ಜೆಡಿಎಸ್ ಸದಸ್ಯತ್ವವನ್ನು ಪಡೆದುಕೊಂಡಿರಲಿಲ್ಲ. ದೇವರ ಹಿಪ್ಪರಗಿ ಕ್ಷೇತ್ರ ನನ್ನ ತಾಯಿ. ಆ ಕ್ಷೇತ್ರ ಕಟ್ಟಿದ್ದು ನಾನು, ಅಲ್ಲಿ ಟಿಕೆಟ್ ಕೇಳುವುದಕ್ಕೆ ನನಗೆ ಹಕ್ಕಿದೆ. ಆದ್ರೆ ಕುಮಾರಸ್ವಾಮಿ ಟಿಕೆಟ್ ಹಂಚಿಕೆಯಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದ್ರು. ಆ ಕಾರಣಕ್ಕಾಗಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದೇನೆ ಅಂತಾ ಅಂದ್ರು.
2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಎ.ಎಸ್.ಪಾಟೀಲ್ ನಡಹಳ್ಳಿ ಎರಡು ಬಾರಿಯ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಎರಡು ಬಾರಿ ಶಾಸಕರಾಗಿದ್ದಾರೆ. 2008ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ಆರ್.ಪಾಟೀಲ್‍ರನ್ನು 30,893 ಮತಗಳ ಅಂತರದಿಂದ ಸೋಲಿಸಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿ ಸೋಮನಗೌಡ ಪಾಟೀಲ ಅವರನ್ನು 7,916 ಮತಗಳ ಅಂತರದಿಂದ ಸೋಲಿಸುವ ಮೂಲಕ ವಿಜಯ ಪತಾಕೆಯನ್ನು ಹಾರಿಸಿದ್ರು.

ಆದ್ರೆ ಈ ಬಾರಿ ಎ.ಎಸ್.ಪಾಟೀಲ್ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇತ್ತ ತವರು ಕ್ಷೇತ್ರದಲ್ಲಿ ಪತ್ನಿ ಮಹಾದೇವಿ ನಡಹಳ್ಳಿ ಅವರನ್ನು ಕಣ್ಣಕ್ಕಿಳಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್‍ನ ಭದ್ರತೆ ಕೋಟೆ ಅಂತಾ ಬಿಂಬಿತವಾಗಿರುವ ಮುದ್ದೇಬಿಹಾಳ ಕ್ಷೇತ್ರದಲ್ಲಿ ನಡಹಳ್ಳಿ ಕಮಲದ ರಣಕಹಳೆ ಮೊಳಗಿಸುತ್ತಾರಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಮುದ್ದೇಬಿಹಾಳ ಕ್ಷೇತ್ರದ ಶಾಸಕರಾಗಿರುವ ಕಾಂಗ್ರೆಸ್‍ನ ಅಪ್ಪಾಜಿ ನಾಡಗೌಡ ನಾಲ್ಕು ಬಾರಿ ಶಾಸಕರಾಗಿದ್ದಾರೆ.
-

ಕಾಂಗ್ರೆಸ್‍ನಿಂದ ಉಚ್ಛಾಟಿತರಾಗಿ, ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ಶಾಸಕ ನಡಹಳ್ಳಿ ಕಮಲ ಹಿಡಿಯಲು ಪ್ಲ್ಯಾನ್!
ವಿಜಯಪುರ: ಕಾಂಗ್ರೆಸ್ ಉಚ್ಛಾಟಿತರಾಗಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಜಿಲ್ಲೆಯಾದ್ಯಂತ ಕೇಳಿ ಬರುತ್ತಿವೆ ಶಾಸಕ ನಡಹಳ್ಳಿ ಅವರು ಬಿಜೆಪಿ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಅಂತಾ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ್ ಕಟಕದೊಂಡ ಹೇಳಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ್ ಕಟಕದೊಂಡ ನೇರವಾಗಿ ನನಗೆ ಹೇಳದಿದ್ದರೂ, ನಮ್ಮ ಪಕ್ಷದ ಹಿರಿಯ ಮುಖಂಡರೊಂದಿಗೆ ನಡಹಳ್ಳಿ ಅವರು ಚರ್ಚಿಸಿರುವ ಮಾಹಿತಿ ನನಗೆ ಬಂದಿದೆ. ಇದೇ ರೀತಿಯಾಗಿ ಇನ್ನೂ ಹಲವು ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಬಿಜೆಪಿ ಸೇರಲಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಗೆ ಭವಿಷ್ಯವಿಲ್ಲ ಎಂದು ಅರಿತು ಬಿಜೆಪಿಗೆ ಸೇರಲು ನಡಹಳ್ಳಿ ಬಯಸಿದ್ದಾರೆಂದು ಅಂತಾ ವಿಠ್ಠಲ್ ಕಟಕದೊಂಡ ತಿಳಿಸಿದ್ದಾರೆ.

ಬಿಜೆಪಿ ಸೇರ್ಪಡೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಡದ ಶಾಸಕ ನಡಹಳ್ಳಿ ಅವರು ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡಿ ಅಂತಾ ಹೇಳಿದ್ದಾರೆ. ನಡಹಳ್ಳಿ ಅವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದ್ದು, ಇದೇ ತಿಂಗಳು 23ರಂದು ನಡಹಳ್ಳಿ ಬಿಜೆಪಿ ಸೇರ್ಪಡೆಯ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ತಿಳಿದು ಬಂದಿದೆ.
-

ಬಸವ ನಾಡಿನಲ್ಲಿ ಪಕ್ಷದ ಲಾಂಛನ ಬಿಡುಗಡೆ ಮಾಡಿದ ಅನುಪಮಾ ಶೆಣೈ
ವಿಜಯಪುರ: ಮಾಜಿ ಡಿವೈಎಸ್ ಪಿ ಅನುಪಮಾ ಶಣೈ ನೇತೃತ್ವದ ಹೊಸ ಪಕ್ಷ ‘ಭಾರತೀಯ ಜನಶಕ್ತಿ ಕಾಂಗ್ರೆಸ್’ನ ಲಾಂಛನವನ್ನು ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಬಿಡುಗಡೆ ಮಾಡಲಾಯಿತು.
ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಚಿಹ್ನೆ ಬೆಂಡೆಕಾಯಿ ಅಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಮಹಾದೇವಪ್ಪ ಉದ್ಗಾವಿ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅನುಪಮಾ ಶಣೈ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಮತ್ತು ರೈತರು ಪಾಲ್ಗೊಂಡಿದ್ದರು.

ಇದೇ ವೇಳೆ ಮಾತನಾಡಿದ ಅನುಪಮಾ ಶೆಣೈ ಉಡುಪಿ ಮತಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದೇನೆ. ಚುನಾವಣೆಯಲ್ಲಿ ಹಣ ನೀಡಿ ಮತ ಕೇಳೊದಿಲ್ಲ. ಚುನಾವಣೆ ಅಂದ್ರೆ ಹುಡುಗಾಟಿಕ್ಕೆ ಅಲ್ಲ. ನಮ್ಮ ಬಂಧು ಬಳಗ ನೀಡಿದ ಹಣವನ್ನೆ ಚುನಾವಣೆಯಲ್ಲಿ ಬಳಕೆ ಮಾಡಿಕೊಳ್ತೇನೆ ಎಂದರು. ಭಾರತೀಯ ಜನಶಕ್ತಿ ಕಾಂಗ್ರೆಸ್ಗೆ ಬೆಂಡೆಕಾಯಿ ಚಿನ್ಹೆಯನ್ನು ಅಧಿಕೃತವಾಗಿ ಚುನಾವಣಾ ಆಯೋಗ ನೀಡಿದೆ. ಮುಂದಿನ ದಿನಗಳಲ್ಲಿ ಪಕ್ಷದ ಚಿಹ್ನೆ ಬದಲಾಗುವ ಸಾಧ್ಯತೆಗಳಿವೆ ಅಂತಾ ತಿಳಿಸಿದ್ರು.
ಐಪಿಎಸ್ ಅಧಿಕಾರಿಗಳ ಎತ್ತಗಂಡಿ ಮಾಡ್ತಾ ಇರೋದು ತಪ್ಪು. ಎಂಎಲ್ಎ ಗಳಿಗೆ ಹೇಗೆ ಐದು ವರ್ಷ ಕಾಲಾವಕಾಶವಿರುತ್ತದೆ. ಹಾಗೇ ಐಪಿಎಸ್ ಅಧಿಕಾರಿಗಳಿಗೆ ಏಕೆ ಇಲ್ಲ. ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಎರಡು ವರ್ಷ ಆದ್ರು ಅವಕಾಶ ನೀಡಬೇಕೆಂದು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

-

ಸಿಎಂ, ರಾಜ್ಯದ ಮುಖಂಡರಿಗೆ ಸಪ್ತ ಸೂತ್ರಗಳನ್ನ ಬೋಧಿಸಿದ ಎಐಸಿಸಿ ನಾಯಕರು
ಬೆಂಗಳೂರು: ದೆಹಲಿಯ ಎಐಸಿಸಿ ಅಧಿವೇಶನದ ಮಧ್ಯದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಿಗೆ ಕರ್ನಾಟಕದ ಚಿಂತೆ ಉಂಟಾಗಿದೆ. ಕರ್ನಾಟಕದ ಗೆಲುವಿನೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗೆ ಅಡಿಗಲ್ಲು ಹಾಕಲು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಅಧಿವೇಶನದಲ್ಲಿ ಎಐಸಿಸಿ ನಾಯಕರು ರಾಜ್ಯದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರಿಗೆ ಸಪ್ತ ಸೂತ್ರಗಳನ್ನು ಬೋಧನೆ ಮಾಡಿದ್ದಾರೆ ಎನ್ನಲಾಗಿದೆ. ದಕ್ಷಿಣ ಭಾರತದ ಕರ್ನಾಟಕದ ಚುನಾವಣೆಯಲ್ಲಿ ಅಧಿಕಾರ ಸ್ಥಾಪನೆ ಮಾಡಬೇಕೆಂದು ಬಿಜೆಪಿ ಸಹ ಹಲವು ರಾಜಕೀಯ ತಂತ್ರಗಳನ್ನು ಪ್ರಯೋಗಿಸುತ್ತಿದೆ. ಇತ್ತ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲಲು ಎಐಸಿಸಿ ನಾಯಕರು ಬೋಧಿಸಿರುವ ಸಪ್ತ ಸೂತ್ರಗಳು ಈ ಕೆಳಗಿನಂತಿವೆ.

ಸಪ್ತ ಸೂತ್ರಗಳು:
ಸೂತ್ರ 1. ನೀವು ಯಾವಾಗ ಕರೆದರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬರ್ತಾರೆ. ಚುನಾವಣೆ ಮುಗಿಯುವವರೆಗೆ ಕರ್ನಾಟಕ ಬಿಟ್ಟು ಬೇರೆ ಪ್ರವಾಸದ ಬಗ್ಗೆ ರಾಹುಲ್ ಗಾಂಧಿ ಯೋಚಿಸಲ್ಲ.
ಸೂತ್ರ 2. ಅಗತ್ಯ ಬಿದ್ದರೆ ಮಾಜಿ ಏಐಸಿಸಿ ಅಧ್ಯಕ್ಷೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಸಹ ಒಂದೆರೆಡು ಬೃಹತ್ ಸಮಾವೇಶಗಳಲ್ಲಿ ಭಾಗವಹಿಸುತ್ತಾರೆ.
ಸೂತ್ರ 3. ದಲಿತ ವಿವಾದ ಹಾಗೂ ಲಿಂಗಾಯತ ಪ್ರತ್ಯಕ್ಷ ಧರ್ಮದ ವಿಷಯವನ್ನು ಸೂಕ್ಷ್ಮವಾಗಿ ನಿರ್ವಹಿಸುವಂತೆ ಎಐಸಿಸಿ ನಾಯಕರು ಸಿಎಂ ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರಿಗೆ ಕಿವಿ ಮಾತು ಹೇಳಿದ್ದಾರೆ.
ಸೂತ್ರ 4. ರಾಜ್ಯದಲ್ಲಿಯ ಹಿರಿಯ ಕಾಂಗ್ರೆಸ್ ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಮೊಯ್ಲಿ ಪ್ರಕರಣದಂತೆ ಯಾವುದೇ ಘಟನೆಗಳು ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಿಬೇಕು.
ಸೂತ್ರ 5. ರಾಹುಲ್‍ಗಾಂಧಿ ರಾಜ್ಯಕ್ಕೆ ಬಂದಾಗಲೆಲ್ಲಾ ಆದಷ್ಟು ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಲು ವೇದಿಕೆ ಕಲ್ಪಿಸಬೇಕು.
ಸೂತ್ರ 6. ಸಂಬಂಧಿಕರಿಗೆ, ಮಕ್ಕಳಿಗೆ ಟಿಕೆಟ್ ಬೇಕು ಎಂಬ ಗೊಂದಲಗಳು ಬೇಡ. ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಪ್ರಭಾವಿ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಹಂಚಿಕೆ ಮಾಡಬೇಕು.
ಸೂತ್ರ 7. ಇವಿಎಂ ಗಳ ಬಗ್ಗೆ ಗೊಂದಲ ಬೇಡ. ಅನುಮಾನ ಇದ್ದರೆ ರಾಜ್ಯದ ಇತರೆ ಪಕ್ಷಗಳ ನೆರವು ಪಡೆದು ಚುನಾವಣೆ ಬಹಿಷ್ಕಾರದ ಬಗ್ಗೆ ಚಿಂತಿಸಿ. ಕರ್ನಾಟಕ ಚುನಾವಣೆಯಲ್ಲಿ ಬ್ಯಾಲೆಟ್ ಬಳಕೆ ಸಂಬಂಧ ಚುನಾವಣಾ ಆಯೋಗದ ಮೇಲೆ ಒತ್ತಡ ತನ್ನಿ ಅಂತಾ ಹೇಳಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗೆಲ್ಲುವ ಮೂಲಕ ಬಿಜೆಪಿ ಗೆ ತಿರುಗೇಟು ನೀಡಲು ಕಾಂಗ್ರೆಸ್ ಸಕಲ ಸಿದ್ಧತೆಗಳನ್ನು ಮಾಡಿಕೊಂಡಂತೆ ಕಾಣಿಸುತ್ತಿದೆ. ಇತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚುನಾವಣಾ ಪ್ರಚಾರಗಳಲ್ಲಿ ಭಾಗಿಯಾಗಲು ಸಹಾಯವಾಗುವಂತೆ ಬೆಂಗಳೂರಿನಲ್ಲಿಯೇ ಮನೆ ಮಾಡಿದ್ದಾರೆ.

-

ಯುಪಿ ಉಪ ಚುನಾವಣೆಯ ಸೋಲಿನ ಬಳಿಕ ಬದಲಾಯ್ತು ಅಮಿತಾ ಶಾ ರಾಜಕೀಯ ತಂತ್ರ
ಬೆಂಗಳೂರು: ಉತ್ತರಪ್ರದೇಶದ ಉಪ ಚುನಾವಣೆಗಳ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯಲು ಪ್ಲಾನ್ ಮಾಡುತ್ತಿದ್ದು, ಈ ನಿಟ್ಟಿನಲ್ಲಿಯೇ ಮುಂದಿನ ಚುನಾವಣೆಯ ಯೋಜನೆಗಳನ್ನು ರೂಪಿಸಲು ಅಮಿತ್ ಶಾ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.
ರಾಜ್ಯದಲ್ಲಿ ಮುಸ್ಲಿಂ ಮತದಾರರು ಹೆಚ್ಚಿರುವ ಕಡೆಗಳಲ್ಲಿ ಅಲ್ಪಸಂಖ್ಯಾತ ಸಮಾವೇಶ ಆಯೋಜನೆಗೆ ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಮುಸ್ಲಿಂ ಮತಗಳನ್ನು ಸೆಳೆಯಲು ಮುಸ್ಲಿಮರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳ ಬಗ್ಗೆ ವ್ಯಾಪಾಕ ಪ್ರಚಾರ ಮಾಡಲಿದೆ. ಮುಸ್ಲಿಮರನ್ನು ಸೆಳೆಯುವುದಕ್ಕೆ ಬಿಜೆಪಿ ರಾಷ್ಟ್ರೀಯ ಮುಸ್ಲಿಂ ನಾಯಕರಾದ ಸಿಕಂದರ್ ಬಕ್ಷ್, ಮುಕ್ತಾರ್ ಅಬ್ಬಾಸ್ ನಖ್ವಿ, ಶಹನವಾಜ್ ಹುಸೇನ್, ಎಂ.ಜೆ.ಅಕ್ಬರ್ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!

ಏಪ್ರಿಲ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗಮನದಲ್ಲಿ ಇಟ್ಟುಕೊಂಡು ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಗಳಿವೆ. ಮುಸ್ಲಿಮರಿಗಾಗಿ ಕೇಂದ್ರ ಸರ್ಕಾರ ಜಾರಿ ಮಾಡಿದ ತ್ರಿವಳಿ ತಲಾಖ್ ರದ್ದು, ಹಜ್ ಸಬ್ಸಿಡಿ, ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಮುಸ್ಲಿಂ ಮಹಿಳೆಯರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ‘ನಯೀ ರೋಶಿನಿ’ ಕಾರ್ಯಕ್ರಮಗಳ ಬಗ್ಗೆ ಬಿಜೆಪಿ ರಾಜ್ಯದಲ್ಲಿ ಪ್ರಚಾರ ನಡೆಸಲಿದೆ. ಶೀಘ್ರದಲ್ಲಿಯೇ ಅಮಿತ್ ಶಾ ಸಮಾವೇಶದ ದಿನಾಂಕ, ಸ್ಥಳ ಮತ್ತು ರೂಪರೇಷಗಳನ್ನು ತಯಾರಿಸಲಿದ್ದಾರೆ ಅಂತಾ ತಿಳಿದು ಬಂದಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗ- ಬಿಹಾರದಲ್ಲಿ ಆರ್ ಜೆಡಿಗೆ ಗೆಲುವು
ಬಿಜೆಪಿ ಸುಮಾರು 30 ಸಾವಿರ ಮುಸ್ಲಿಂ ಕಾರ್ಯಕರ್ತರ ನೊಂದಣಿ ಮಾಡಿಸುವ ಗುರಿಯನ್ನು ಹೊಂದಿದ್ದು, ರಾಜ್ಯದ ಸುಮಾರು 30 ಕ್ಷೇತ್ರಗಳಲ್ಲಿ ಸಮಾವೇಶ ನಡೆಯುವ ಸಾಧ್ಯತೆಗಳಿವೆ.
https://www.youtube.com/watch?v=8S_c6n7KvqE
https://www.youtube.com/watch?v=kcmY9YR5AqY
-

ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಕೌಂಟ್‍ಡೌನ್ – ಯಾರ‍್ಯಾರಿಗೆಲ್ಲಾ ಸಿಗುತ್ತೆ ಕಾಂಗ್ರೆಸ್ ಟಿಕೆಟ್..?
ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಚುರುಕುಗೊಳಿಸಿದೆ. ಇಂದು ಬೆಳಗ್ಗೆ 11 ಗಂಟೆಯಿಂದ ಕೆಪಿಸಿಸಿ ಚುನಾವಣಾ ಸಮಿತಿ ಸಭೆ ನಗರದ ಹೊರ ವಲಯದ ರೆಸಾರ್ಟ್ ನಲ್ಲಿ ನಡೆಯಲಿದೆ.
ಅಭ್ಯರ್ಥಿಗಳ ಹಾಗೂ ಗೆಲ್ಲುವ ಆಕಾಂಕ್ಷಿಗಳ ಬಗ್ಗೆ ಚರ್ಚಿಸಿ ಸ್ಕ್ರೀನಿಂಗ್ ಕಮಿಟಿಗೆ ಸಮಿತಿ ಪಟ್ಟಿಯನ್ನ ರವಾನಿಸಲಿದೆ. ಎರಡಕ್ಕಿಂತ ಹೆಚ್ಚು ಬಾರಿ ಜಯಗಳಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಅನ್ನೋ ಮನವಿಯನ್ನು ಹೈಕಮಾಂಡ್‍ಗೆ ಸಮಿತಿ ಮಾಡುವ ಸಾಧ್ಯತೆ ಇದೆ.
ರಾಜ್ಯ ಕಾಂಗ್ರೆಸ್ ಚುನಾವಣಾ ಸಮಿತಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್ ಹಾಗೂ ಸಂಸದರು, ಸಚಿವರು ಸೇರಿದಂತೆ 45 ಮಂದಿ ಸದಸ್ಯರಿದ್ದಾರೆ. ಇದೂವರೆಗೆ ಕೆಪಿಸಿಸಿಯಿಂದ 2,650 ಅರ್ಜಿ ಸ್ವೀಕರಿಸಲಾಗಿದೆ. ಇದರಲ್ಲಿ 1,570 ಅರ್ಜಿ ಸಲ್ಲಿಕೆಯಾಗಿದ್ದು, ಎಷ್ಟು ಜನರಿಗೆ ಅಭ್ಯರ್ಥಿಯಾಗುವ ಭಾಗ್ಯ ಒಲಿಯಲಿದೆ ಎಂಬುದು ಇಂದು ತೀರ್ಮಾನವಾಗಲಿದೆ.



