Tag: Karnataka Election

  • Exclusive – ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಔಟ್: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

    Exclusive – ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಔಟ್: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

    ಬೆಂಗಳೂರು: ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಔಟ್ ಆಗಿದ್ದು, ಬಹುತೇಕ ಹಿರಿಯ ಶಾಸಕರಿಗೆ ಹಾಲಿ ಕ್ಷೇತ್ರದ ಟಿಕೆಟ್ ಪಕ್ಕಾ ಆಗಿದೆ.

    ಮೊದಲ 80 ಕ್ಷೇತ್ರಗಳ ಪಟ್ಟಿ ಅಂತಿಮವಾಗಿದ್ದು, ಶಿಕಾರಿಪುರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಬಿಎಸ್‍ವೈ ಪುತ್ರ ರಾಘವೇಂದ್ರ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ನಿರಾಕರಿಸಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

    ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಕೃಷ್ಣಯ್ಯ ಶೆಟ್ಟಿಗೆ ಟಿಕೆಟ್ ಸಿಕ್ಕಿದ್ದು, ಸೊರಬದಿಂದ ಕುಮಾರಬಂಗಾರಪ್ಪ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

    ಸಂಭವನೀಯ ಅಭ್ಯರ್ಥಿಗಳ ಮೊದಲ ಪಟ್ಟಿ ಇಲ್ಲಿದೆ.

    1. ಶಿಕಾರಿಪುರ- ಯಡಿಯೂರಪ್ಪ
    2. ಹುಬ್ಬಳಿ ಧಾರವಾಡ ಸೆಂಟ್ರಲ್ – ಜಗದೀಶ್ ಶೆಟ್ಟರ್
    3. ಪದ್ಮನಾಭನಗರ- ಆರ್.ಅಶೋಕ್
    4. ಅಥಣಿ – ಲಕ್ಷ್ಮಣ್ ಸವದಿ
    5. ಅರಬಾವಿ- ಬಾಲಚಂದ್ರ ಜಾರಕಿಹೊಳಿ
    6. ನಿಪ್ಪಾಣಿ- ಶಶಿಕಲಾ ಜೊಲ್ಲೆ
    7. ಬೈಲಹೊಂಗಲ- ವಿಶ್ವನಾಥ್ ಪಾಟೀಲ್
    8. ಸವದತ್ತಿ- ಆನಂದ್ ಮಾಮನಿ
    9. ಬೆಳಗಾವಿ ಗ್ರಾಮಾಂತರ ಸಂಜಯ್ ಪಾಟೀಲ್
    10. ಕಾಗವಾಡ- ಭರಮಗೌಡ ಕಾಗೆ

    11. ಹುಕ್ಕೇರಿ- ಉಮೇಶ್ ಕತ್ತಿ
    12. ಕುಡಚಿ- ಪಿ.ರಾಜೀವ್
    13. ರಾಯಭಾಗ- ಧುರ್ಯೋಧನ ಐಹೊಳೆ
    14. ಮುಧೋಳ- ಗೋವಿಂದ ಕಾರಜೋಳ
    15. ಬೀಳಗಿ- ಮುರುಗೇಶ್ ನಿರಾಣಿ
    16. ಔರಾದ್ – ಪ್ರಭು ಚವ್ಹಾಣ್
    17. ಸಿಂದಗಿ- ರಮೇಶ್ ಭೂಸನೂರು
    18. ಗುಲ್ಬರ್ಗಾ ದಕ್ಷಿಣ- ದತ್ತಾತ್ರೇಯ ಪಾಟೀಲ್ ರೇವೂರ್
    19. ದೇವದುರ್ಗ- ಶಿವನಗೌಡ ನಾಯಕ್
    20. ರಾಯಚೂರು ಗ್ರಾಮಾಂತರ- ತಿಪ್ಪರಾಜು

    21. ರಾಯಚೂರು ನಗರ – ಡಾ.ಶಿವರಾಜ್ ಪಾಟೀಲ್
    22. ಲಿಂಗಸಗೂರು- ಮಾನಪ್ಪ ವಜ್ಜಲ್
    23. ಶಿಗ್ಗಾಂವ್ – ಬಸವರಾಜ್ ಬೊಮ್ಮಾಯಿ
    24. ಕುಷ್ಟಗಿ- ದೊಡ್ಡನಗೌಡ ಪಾಟೀಲ್
    25. ಕಂಪ್ಲಿ- ಸುರೇಶ್ ಬಾಬು
    26. ಮೊಳಕಾಲ್ಮೂರು- ತಿಪ್ಪೇಸ್ವಾಮಿ
    27. ಚಿತ್ರದುರ್ಗ- ತಿಪ್ಪಾರೆಡ್ಡಿ
    28. ತುಮಕೂರು ಗ್ರಾಮಾಂತರ- ಸುರೇಶ್ ಗೌಡ
    29. ಕೆಜಿಎಫ್ – ಸಂಪಂಗಿ
    30. ಮಾಲೂರು- ಕೃಷ್ಣಯ್ಯ ಶೆಟ್ಟಿ

    31. ಚನ್ನಪಟ್ಟಣ- ಸಿ.ಪಿ.ಯೋಗೇಶ್ವರ್
    32. ಕಾರ್ಕಳ- ಸುನೀಲ್ ಕುಮಾರ್
    33. ಶೃಂಗೇರಿ- ಜೀವರಾಜ್
    34. ಚಿಕ್ಕಮಗಳೂರು- ಸಿ.ಟಿ.ರವಿ
    35. ಶಿರಸಿ- ವಿಶ್ವೇಶ್ವರ ಹೆಗಡೆ ಕಾಗೇರಿ
    36. ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅರವಿಂದ್ ಬೆಲ್ಲದ್
    37. ಹಿರೇಕೆರೂರು – ಯು.ಬಿ.ಬಣಕಾರ್
    38. ಕುಂದಾಪುರ – ಹಾಲಾಡಿ ಶ್ರೀನಿವಾಸ ಶೆಟ್ಟಿ
    39. ಸೊರಬ- ಕುಮಾರ್ ಬಂಗಾರಪ್ಪ
    40. ಮುದ್ದೇಬಿಹಾಳ – ಎ.ಎಸ್.ಪಾಟೀಲ್ ನಡಹಳ್ಳಿ

    41. ಬಬಲೇಶ್ವರ – ವಿಜುಗೌಡ ಪಾಟೀಲ್
    42. ಹೊನ್ನಾಳಿ- ರೇಣುಕಾಚಾರ್ಯ
    43. ಮಲ್ಲೇಶ್ವರಂ – ಸಿ.ಅಶ್ವಥ್ ನಾರಾಯಣ್
    44. ದಾಸರಹಳ್ಳಿ- ಮುನಿರಾಜ್
    45. ಬಸವನಗುಡಿ – ರವಿಸುಬ್ರಮಣ್ಯ
    46. ರಾಜಾಜಿನಗರ – ಸುರೇಶ್ ಕುಮಾರ್
    47. ಬೊಮ್ಮನಹಳ್ಳಿ- ಸತೀಶ್ ರೆಡ್ಡಿ
    48. ಸಿ.ವಿ.ರಾಮನ್ ನಗರ- ರಘು
    49. ಜಯನಗರ – ವಿಜಯಕುಮಾರ್
    50. ಬೆಂಗಳೂರು ದಕ್ಷಿಣ – ಕೃಷ್ಣಪ್ಪ

    51. ಶಿವಾಜಿನಗರ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು
    52. ಹೆಬ್ಬಾಳ- ನಾರಾಯಣಸ್ವಾಮಿ
    53. ಯಲಹಂಕ – ಎಸ್.ಆರ್.ವಿಶ್ವನಾಥ್
    54. ಮಹದೇವಪುರ- ಅರವಿಂದ ಲಿಂಬಾವಳಿ
    55. ಸುಳ್ಯ- ಎಸ್. ಅಂಗಾರ
    56. ಶಹಾಪುರ- ಗುರುಪಾಟೀಲ್
    57. ಸುರಪುರ- ರಾಜೂಗೌಡ
    58. ಆನೇಕಲ್ – ನಾರಾಯಣಸ್ವಾಮಿ
    59. ಶ್ರೀರಂಗಪಟ್ಟಣ ನಂಜುಂಡೇಗೌಡ
    60. ಗುಂಡ್ಲುಪೇಟೆ- ನಿರಂಜನ
    61. ಕೊಳ್ಳೇಗಾಲ – ಜಿ.ಎನ್.ನಂಜುಂಡಸ್ವಾಮಿ
    62. ಹರಪನಹಳ್ಳಿ – ಕರುಣಾಕರ ರೆಡ್ಡಿ
    63. ನವಲಗುಂದ – ಶಂಕರಪಾಟೀಲ್ ಮುನೇನಕೊಪ್
    64. ಹಾನಗಲ್ – ಸಿ.ಎಂ.ಉದಾಸಿ
    65. ನರಗುಂದ – ಸಿ.ಸಿ.ಪಾಟೀಲ್

    66. ಬಾಗಲಕೋಟೆ – ವೀರಣ್ಣ ಚರಂತಿಮಠ
    67. ಚನ್ನಗಿರಿ- ಮಾಡಾಳು ವಿರೂಪಾಕ್ಷಪ್ಪ
    68. ಬಳ್ಳಾರಿ ನಗರ- ಗಾಲಿ ಸೋಮಶೇಖರ ರೆಡ್ಡಿ
    69. ತಿಪಟೂರು- ಬಿ.ಸಿ.ನಾಗೇಶ್
    70. ಜಗಳೂರು – ರಾಮಚಂದ್ರ
    71. ಹೊಸಪೇಟೆ – ಗವಿಯಪ್ಪ
    72. ತೇರದಾಳ – ಸಿದ್ದು ಸವದಿ
    73. ಚಿಂಚೋಳ್ಳಿ – ಸುನೀಲ್ ವಲ್ಯಾಪುರೆ
    74. ಕುಮಟಾ – ದಿನಕರ ಶೆಟ್ಟಿ
    75. ಭಟ್ಕಳ – ಜೆ.ಡಿ.ನಾಯಕ್
    76. ಹುನಗುಂದ – ದೊಡ್ಡನಗೌಡ ಪಾಟೀಲ್
    77. ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
    78. ಸಿರಗುಪ್ಪ – ಸೋಮಲಿಂಗಪ್ಪ
    79. ಮೂಡಿಗೆರೆ ಎಂ.ಪಿ.ಕುಮಾರಸ್ವಾಮಿ

  • ಕೆಪಿಸಿಸಿ ಸ್ಥಿತಿಗತಿ ಬಗ್ಗೆ ಹೈಕಮಾಂಡ್‍ಗೆ ಗುಪ್ತ ವರದಿ- ಪರಂ ವರದಿಯಲ್ಲಿವೆ ಪಂಚ ಅಂಶಗಳು

    ಕೆಪಿಸಿಸಿ ಸ್ಥಿತಿಗತಿ ಬಗ್ಗೆ ಹೈಕಮಾಂಡ್‍ಗೆ ಗುಪ್ತ ವರದಿ- ಪರಂ ವರದಿಯಲ್ಲಿವೆ ಪಂಚ ಅಂಶಗಳು

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಎಲ್ಲ ಪಕ್ಷಗಳು ಚುನಾವಣೆಗಾಗಿ ಭರ್ಜರಿ ಸಿದ್ಧತೆ ನಡೆಸಿಕೊಂಡಿವೆ. ರಾಷ್ಟ್ರೀಯ ಪಕ್ಷಗಳೂ ಸಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಗುಪ್ತ ವರದಿಗಳನ್ನು ತರಿಸಿ ಅಧ್ಯಯನ ನಡೆಸುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಈಗಾಗಲೇ ಗುಪ್ತ ವರದಿಯೊಂದನ್ನು ತಯಾರು ಮಾಡಿ ಕಳುಹಿಸಿದ್ದಾರೆ ಅಂತ ಹೇಳಲಾಗುತ್ತಿದೆ.

    ಅಭ್ಯರ್ಥಿಗಳ ಪಟ್ಟಿ ಯಾವ ರೀತಿಯಲ್ಲಿ ಸಿದ್ಧಪಡಿಸಬೇಕು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿಗತಿ ಹೇಗಿದೆ ಎಂಬುದರ ಬಗ್ಗೆ ಎಲ್ಲ ಮಾಹಿತಿಗಳು ವರದಿಯಲ್ಲಿ ದಾಖಲಾಗಿವೆ ಎಂದು ತಿಳಿದುಬಂದಿದೆ. ಪರಮೇಶ್ವರ್ ನೀಡಿರುವ ವರದಿಯಲ್ಲಿ ಪಂಚ ಅಂಶಗಳು ಇದೆ ಅಂತಾ ಹೇಳಲಾಗುತ್ತಿದ್ದು, ಅವುಗಳು ಈ ಕೆಳಗಿನಂತಿವೆ.

    ವರದಿಯಲ್ಲಿ ಏನಿದೆ..?
    1. ಹಾಲಿ 124 ಶಾಸಕರ ಪೈಕಿ 70 ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಸೋಲುವ ಭಯ ಇರುವ ಶಾಸಕರ ಬದಲಿಗೆ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು.
    2. ಅರ್ಜಿ ಹಾಕಿದವರಿಗಷ್ಟೆ ಟಿಕೆಟ್ ಎಂಬ ನಿಯಮವಿದೆ. ಆದ್ರೆ ಕ್ರೀಡಾ ಕ್ಷೇತ್ರ, ಕಲೆ ಸಾಹಿತ್ಯ, ಉದ್ಯಮ ಕ್ಷೇತ್ರದ ಸ್ಟಾರ್ ವ್ಯಾಲ್ಯೂ ಇರುವ ಕನಿಷ್ಠ 15 ಜನರಿಗೆ ಟಿಕೆಟ್ ನೀಡುವುದು ಸೂಕ್ತ.
    3. ರಾಜ್ಯದಲ್ಲಿ ಪಕ್ಷಕ್ಕೆ ಉತ್ತಮ ವಾತಾವರಣವಿದ್ರೂ ಬೆಂಗಳೂರಲ್ಲಿ ಪಕ್ಷ ಸ್ವಲ್ಪ ವೀಕ್ ಆಗಿದೆ. ಬೆಂಗಳೂರಿನ ಜನರ ಮನಸ್ಥಿತಿ ಹಾಗೂ ವಿಭಿನ್ನತೆ ಪಕ್ಷಕ್ಕೆ ಹೆಚ್ಚಿನ ನೆರವು ನೀಡಲ್ಲ.
    4. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದು, ಪಕ್ಷ ಗೆದ್ದರೆ ಅವರಿಗೆ ಮೊದಲ ಆದ್ಯತೆ. ಹಾಗೆಯೇ ಪಕ್ಷಕ್ಕೆ ಹಿನ್ನಡೆಯಾದರೂ ಅದ್ರ ಜವಾಬ್ದಾರಿ ಅವರದ್ದೇ ಆಗಲಿದೆ.
    5. ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಸರ್ಕಾರದ ಮಧ್ಯಪ್ರವೇಶ ಅಗತ್ಯ ಇರಲಿಲ್ಲ. ಸಮುದಾಯದ ಮುಖಂಡರುಗಳು ಹಾಗೂ ಮಠಾಧೀಶರಿಗೆ ಬಿಟ್ಟಿದ್ದರೆ ಒಳ್ಳೆಯದಿತ್ತು.

    ಪರಮೇಶ್ವರ್ ನೀಡಿರುವ ಗುಪ್ತ ವರದಿಯಲ್ಲಿ ಪ್ರಮುಖವಾಗಿ ಈ ಐದು ಅಂಶಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಯಾರು ಯಾರಿಗೆ ಟಿಕೆಟ್ ನೀಡ್ತಾರೆ ಎಂಬುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

  • ಸಿದ್ದರಾಮಯ್ಯ ಹೊರಡುತ್ತಿದ್ದಂತೆಯೇ ಚಿಕ್ಕಬಳ್ಳಾಪುರದಲ್ಲಿ ಬಾಡೂಟ ಸೀಜ್

    ಸಿದ್ದರಾಮಯ್ಯ ಹೊರಡುತ್ತಿದ್ದಂತೆಯೇ ಚಿಕ್ಕಬಳ್ಳಾಪುರದಲ್ಲಿ ಬಾಡೂಟ ಸೀಜ್

    ಚಿಕ್ಕಬಳ್ಳಾಪುರ: ಕರ್ನಾಟಕ ಚುನಾವಣೆಯ ದಿನಾಂಕ ಘೋಷಣೆಯಾಗಿ, ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ರಾಜ್ಯದಲ್ಲೇ ಮೊಟ್ಟ ಮೊದಲ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಸಿದ್ದರಾಮಯ್ಯ ಅವರು ಚಿಕ್ಕಬಳ್ಳಾಪುರದಿಂದ ಹೊರಟ ಕೂಡಲೇ ಜಿಲ್ಲಾ ಚುನಾವಣಾಧಿಕಾರಿಗಳು ಸಿಎಂ ಭೇಟಿ ನಿಮಿತ್ತ ಆಯೋಜಿಸಿದ್ದ ಬಾಡೂಟ ಸೀಜ್ ಮಾಡಿದ್ದಾರೆ.

    ಕೋಚಿಮುಲ್ ನ ನಿರ್ದೇಶಕ ಹಾಗೂ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಕೆವಿ ನಾಗರಾಜ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಾಗರಾಜ್ `ಕೈ’ ಹಿಡಿದ್ರು. ಈ ಹಿನ್ನೆಲೆಯಲ್ಲಿ ಅವರು ಕಣಜೇನಹಳ್ಳಿ ಗ್ರಾಮದಲ್ಲಿ ಸುಮಾರು 3 ಸಾವಿರ ಮಂದಿಗೆ ಬಾಡೂಟ ಆಯೋಜನೆ ಮಾಡಿದ್ದರು.

    ಆದ್ರೆ ಇತ್ತ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದು, ಮೆಗಾಡೈರಿ ಉದ್ಘಾಟನೆಗೆ ತೆರಳಿದ್ದ ಮುಖ್ಯಮಂತ್ರಿ ಅವರು ಉದ್ಘಾಟನೆ ಮಾಡದೇ ಅಲ್ಲಿಂದ ನಾಗರಾಜ್ ಮನೆಗೆ ತೆರಳಿದ್ದಾರೆ. ಸಿಎಂ ಭೇಟಿ ಹಿನ್ನೆಲೆಯಲ್ಲಿ ನಾಗರಾಜ್ ಮನೆಯಲ್ಲಿ ಬಾಡೂಟ ಆಯೋಜನೆ ಮಾಡಿದ್ದರು.

    ಸಿಎಂ ಅವರು ಮನೆಯಿಂದ ವಾಪಸ್ಸಾಗುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ಜಿಲ್ಲಾ ಚುನಾವಣಾಧಿಕಾರಿಗಳು ನಾಗರಾಜ್ ಮನೆಗೆ ದಾಳಿ ನಡೆಸಿ ಬಾಡೂಟ ಸೀಜ್ ಮಾಡಿದ್ದಾರೆ. ಅಧಿಕಾರಿಗಳು ಬರುತ್ತಿದ್ದಂತೆಯೇ ಬಾಡೂಟ ಸವಿಯುತ್ತಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ.

  • ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುವಷ್ಟರಲ್ಲಿ ಜಾರಿ-ಸಂಕಷ್ಟಕ್ಕೆ ಸಿಲುಕಿದ ಇಂಧನ ಸಚಿವ

    ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುವಷ್ಟರಲ್ಲಿ ಜಾರಿ-ಸಂಕಷ್ಟಕ್ಕೆ ಸಿಲುಕಿದ ಇಂಧನ ಸಚಿವ

    ಶಿವಮೊಗ್ಗ: ಹೆಲಿಕಾಪ್ಟರ್ ಹತ್ತುವಾಗ ಇಲ್ಲದ ನೀತಿ ಸಂಹಿತೆ ಇಳಿಯುಷ್ಟರಲ್ಲಿಯೇ ಜಾರಿಯಾಗಿದ್ದರಿಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕೆಲ ಕಾಲ ಸಂಕಷ್ಟಕ್ಕೆ ಸಿಲುಕಿದ ಘಟನೆ ಇಂದು ನಡೆಯಿತು.

    ಜಕ್ಕೂರು ವಿಮಾನ ನಿಲ್ದಾಣದಿಂದ ಸಚಿವರು ಶಿವಮೊಗ್ಗದಲ್ಲಿ ನಿಗದಿಯಾಗಿ ಮೆಸ್ಕಾ ಅಧಿಕಾರಿಗಳ ಸಭೆಯಲ್ಲಿ ಭಾಗಿಯಾಗಲು ಪ್ರಯಾಣ ಬೆಳೆಸಿದ್ದರು. ಸಚಿವರನ್ನು ಕರೆದೊಯ್ಯಲು ಶಿವಮೊಗ್ಗ ಹೆಲಿಪ್ಯಾಡ್ ಗೆ ಬಂದಿದ್ದ ಸರ್ಕಾರಿ ವಾಹನವನ್ನು ಜಿಲ್ಲಾಡಳಿತ ಹಿಂದೆ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಖಾಸಗಿ ಕಾರ್ ವ್ಯವಸ್ಥೆ ಮಾಡಿದ್ದರು.

    ಮಧ್ಯಾಹ್ನ 12.40ಕ್ಕೆ ಶಿವಮೊಗ್ಗ ಹೆಲಿಪ್ಯಾಡ್‍ಗೆ ಬಂದ ಸಚಿವರು ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಮಾತನಾಡಿ, ಹೌದು ನಾನು ಕಾಪ್ಟರ್ ಹತ್ತುವಾಗ ಯಾವುದೇ ನೀತಿ ಸಂಹಿತೆ ಜಾರಿಯಾಗಿರಲಿಲ್ಲ. ಆದ್ರೆ ಮಾರ್ಗ ಮಧ್ಯೆ ನೀತಿ ಸಂಹಿತೆ ಜಾರಿಯಾಗಿರುವುದು ಗೊತ್ತಾಯಿತು. ಹಾಗಾಗಿ ಹೆಲಿಪ್ಯಾಡ್ ನಿಂದ ಖಾಸಗಿ ವಾಹನದಲ್ಲಿಯೇ ತೆರಳುತ್ತಿದ್ದೇನೆ ಅಂತಾ ಹೇಳಿದ್ರು.

  • ವಿಡಿಯೋ: ಚುನಾವಣಾ ನೀತಿ ಸಂಹಿತೆ ಎಚ್ಚರಿಸಿದ ಡಿಸಿಗೆ ತಲೆ ಮೊಟಕಿ ಹೆದರಬೇಡ ಅಂದ ಸಿಎಂ

    ವಿಡಿಯೋ: ಚುನಾವಣಾ ನೀತಿ ಸಂಹಿತೆ ಎಚ್ಚರಿಸಿದ ಡಿಸಿಗೆ ತಲೆ ಮೊಟಕಿ ಹೆದರಬೇಡ ಅಂದ ಸಿಎಂ

    ಚಿಕ್ಕಬಳ್ಳಾಪುರ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಅಂತಾ ಎಚ್ಚರಿಸಿದ ಜಿಲ್ಲಾಧಿಕಾರಿ ಡಿಸಿ ದೀಪ್ತಿ ಅದಿತ್ಯಾ ಕಾನಡೆ ತಲೆಗೆ ಮೊಟಕಿ ಹೆದರಬೇಡ ಅಂತಾ ಸಿಎಂ ಹೇಳಿರುವ ಘಟನೆಯೊಂದು ಇಂದು ನಡೆದಿದೆ.

    ಇಂದು ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದ ನಂದಿ ಗ್ರಾಮದ ನೂತ ಮೆಗಾಡೈರಿ ಉದ್ಘಾಟನೆಗಾಗಿ ಆಗಮಿಸಿದ್ರು. ಆದ್ರೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಕೇವಲ ಭೇಟಿ ನೀಡಿ ವೀಕ್ಷಣೆ ಮಾಡಿದ್ರು. ಈ ವೇಳೆ ಜಿಲ್ಲಾಧಿಕಾರಿಗಳು ಸಿಎಂ ಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಅಂತಾ ಎಚ್ಚರಿಸಿದ್ರು. ಏನು ಆಗಲ್ಲ, ಊಟ ಮಾಡ್ಕೊಂಡು ಹೋಗ್ತೀನಿ ಅಂತಾ ಜಿಲ್ಲಾಧಿಕಾರಿ ತಲೆಗೆ ಮೊಟಕಿದ್ರು. ಇದನ್ನೂ ಓದಿ: ಹೆಂಗಸರು ಸೆಲ್ಫಿ ಸೆಲ್ಫಿ ಎಂದು ನನ್ನನ್ನು ಹಿಡಿದುಕೊಳ್ಳುತ್ತಾರೆ: ಸಿಎಂ

    ರಾಜ್ಯ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರು ಉದ್ಘಾಟನಾ ಕಾರ್ಯಕ್ರಮ ಹಾಗೂ ನಿಗದಿಯಾಗಿದ್ದ ಎಲ್ಲ ಕಾರ್ಯಕ್ರಮ ರದ್ದಾಗಿದೆ. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಉದ್ಘಾಟನೆ ಮಾಡದೇ ಮೆಗಾಡೈರಿ ವೀಕ್ಷಿಸಿ ನಂತರ ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ವಿಡಿಯೋ: ಮಂಗ್ಳೂರು ಮೇಯರ್ ಗೆ ಪಂಚ್ ಕೊಟ್ರು ಸಿಎಂ!

  • ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲ್ಲ: ಅಮಿತ್ ಶಾ

    ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲ್ಲ: ಅಮಿತ್ ಶಾ

    ದಾವಣಗೆರೆ: ಕರ್ನಾಟಕ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಜೊತೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳಲ್ಲ. 224 ಕ್ಷೇತ್ರಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧೆ ಮಾಡಲಿದ್ದೇವೆ ಅಂತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಹೆಚ್ಚು ಅನುದಾನವನ್ನು ನೀಡಿದೆ. ಆದ್ರೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತೋರಿಸ್ತಿದ್ದಾರೆ. ಯುಪಿಎ ಸರ್ಕಾರಕ್ಕಿಂತ ಬಿಜೆಪಿ ಸರ್ಕಾರ ರಾಜ್ಯಕ್ಕೆ ಹೆಚ್ಚು ಅನುದಾನವನ್ನು ನೀಡಿದ್ದೇವೆ. ಸಿದ್ದರಾಮಯ್ಯ ಹಿಂದೂ ವಿರೋಧಿಯಾಗಿದೆ. ಇಷ್ಟು ದಿನಗಳ ನಂತರ ಚುನಾವಣೆ ಸಮಯದಲ್ಲಿ ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಆದ್ರೆ ಲಿಂಗಾಯಿತ ಜನ ಯಡಿಯೂರಪ್ಪನವರ ಪರ ಇದ್ದಾರೆ ಅಂತಾ ಅಮಿತ್ ಶಾ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ರು.

    ಮಹದಾಯಿ ವಿಚಾರದಲ್ಲಿ ನಾನು ಸಾಕಷ್ಟು ಬಾರಿ ಮಾತಾಡಿದ್ದೇನೆ. ರಚನಾತ್ಮಕವಾಗಿ ಸಮಸ್ಯೆ ಬಗೆಹರಿಸಲು ಮೋದಿ ಸರ್ಕಾರ ಸಿದ್ಧವಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಶೀಘ್ರ ನಿರ್ಧಾರ ಮಾಡುತ್ತೇವೆ. ಆದ್ರೆ ತಮಗೆ ಟಿಕೆಟ್ ಬೇಕೆಂದು ಯಾವ ಸ್ವಾಮೀಜಿಗಳು ನಮ್ಮನ್ನ ಸಂಪರ್ಕಿಸಿಲ್ಲ. ಆದ್ರೆ ಮೆರಿಟ್ ಆಧಾರದ ಮೇಲೆಯೇ ಟಿಕೆಟ್ ಫೈನಲ್ ಆಗಲಿದೆ ಅಂತಾ ಅಮಿತ್ ಶಾ ಹೇಳಿದ್ರು.

  • ಮೇ 12ರಂದು ಕರ್ನಾಟಕ ಚುನಾವಣೆ- ವೇಳಾಪಟ್ಟಿ ಇಲ್ಲಿದೆ

    ಮೇ 12ರಂದು ಕರ್ನಾಟಕ ಚುನಾವಣೆ- ವೇಳಾಪಟ್ಟಿ ಇಲ್ಲಿದೆ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಮೇ 12ರ ಶನಿವಾರ ಏಕಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಘೋಷಣೆಯಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಒ.ಪಿ.ರಾವತ್ ಹೇಳಿದರು.

    ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿ ನಿರ್ವಾಚನ್ ಸದನ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ಚುನಾವಣೆಗೆ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ರಾಜ್ಯದಲ್ಲಿ ಒಟ್ಟು 4.96 ಕೋಟಿ ಮತದಾರರಿದ್ದಾರೆ ಅಂತಾ ಹೇಳಿದ್ರು.

    2013ರಲ್ಲಿ ಮೇ 5ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು. 2,948 ಮಂದಿ ಕಣದಲ್ಲಿ ಸ್ಪರ್ಧಿಸಿದ್ದ ಈ ಚುನಾವಣೆಯಲ್ಲಿ 71.45% ಮತದಾನ ನಡೆದಿತ್ತು.

    ಕರ್ನಾಟಕ ಚುನಾವಣಾ ವೇಳಾಪಟ್ಟಿ
    ಅಧಿಸೂಚನೆ ಜಾರಿ- ಮಾರ್ಚ್ 27, 2018
    ನಾಮಪತ್ರ ಸಲ್ಲಿಕೆಗೆ ಕಡೆಯ ದಿನ – ಏಪ್ರಿಲ್ 24
    ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ- ಏಪ್ರಿಲ್ 27
    ಮತದಾನ – ಮೇ 12
    ಮತ ಎಣಿಕೆ/ಫಲಿತಾಂಶ- ಮೇ 18
    ಮತದಾನದ ಅವಧಿ- ಬೆಳಗ್ಗೆ 8ರಿಂದ ಸಂಜೆ 5 ಯವರೆಗೆ

    ರಾಜ್ಯದ ಒಟ್ಟು 224 ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗೆ 36 ಹಾಗೂ ಪರಿಶಿಷ್ಟ ಪಂಗಡಕ್ಕೆ 15 ಕ್ಷೇತ್ರಗಳು ಮೀಸಲಾಗಿವೆ.

     

  • 2018ರ ಕರ್ನಾಟಕ ಮಹಾಯುದ್ಧ: ಮೇ 12ಕ್ಕೆ ಚುನಾವಣೆ, ಮೇ 15ಕ್ಕೆ ಫಲಿತಾಂಶ

    2018ರ ಕರ್ನಾಟಕ ಮಹಾಯುದ್ಧ: ಮೇ 12ಕ್ಕೆ ಚುನಾವಣೆ, ಮೇ 15ಕ್ಕೆ ಫಲಿತಾಂಶ

    ನವದೆಹಲಿ: ಬಹುನೀರಿಕ್ಷಿತ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ. ಮೇ 12 ರಂದು ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಘೋಷಣೆಯಾಗಲಿದೆ ಅಂತ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಹೇಳಿದ್ದಾರೆ.

    ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿ ನಿರ್ವಾಚನ್ ಸದನ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕರ್ನಾಟಕ ಚುನಾವಣೆಗೆ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ರಾಜ್ಯದಲ್ಲಿ ಒಟ್ಟು 4.96 ಕೋಟಿ ಮತದಾರರಿದ್ದಾರೆ. ಈ ಬಾರಿ 36 ಲಕ್ಷದಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ ಎಂದರು.

    ಮೇ 28ರಂದು ಹಾಲಿ ವಿಧಾನಸಭೆ ಅವಧಿ ಅಂತ್ಯವಾಗಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಹೀಗಾಗಿ ಇಂದಿನಿಂದಲೇ ಸರ್ಕಾರ ಯಾವುದೇ ನಿರ್ಧಾರ, ಘೋಷಣೆ ಮಾಡುವಂತಿಲ್ಲ ಅಂತ ಅವರು ತಿಳಿಸಿದ್ದಾರೆ.

  • ಕಾಂಗ್ರೆಸ್ ನವರು ಕರೆದ್ರೆ ಮೈತ್ರಿಗೆ ಸಿದ್ಧ: ಹೆಚ್.ಡಿ.ದೇವೇಗೌಡ

    ಕಾಂಗ್ರೆಸ್ ನವರು ಕರೆದ್ರೆ ಮೈತ್ರಿಗೆ ಸಿದ್ಧ: ಹೆಚ್.ಡಿ.ದೇವೇಗೌಡ

    ಬೆಂಗಳೂರು: ಕಾಂಗ್ರೆಸ್ ನವರು ನಮ್ಮನ್ನು ಕರೆದ್ರೆ ನಾವು ಮೈತ್ರಿಗೆ ಸಿದ್ಧ ಎಂಬ ಅಚ್ಚರಿಯ ಹೇಳಿಕೆಯೊಂದನ್ನು ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೀಡಿದ್ದಾರೆ.

    ಇನ್ನೇನು ಕೆಲವೇ ಸಮಯದಲ್ಲಿ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡುತ್ತಿದೆ. ಕಾಂಗ್ರೆಸ್ ಒಂದು ದೊಡ್ಡ ರಾಷ್ಟ್ರೀಯ ಪಕ್ಷ ಮತ್ತು ಜಾತ್ಯಾತೀತ ಅಂತಾ ಹೇಳಿಕೊಳ್ಳುತ್ತಿದೆ. ನಾವು ಪಕ್ಷದ ಹೆಸರಿನಲ್ಲಿಯೇ ಜಾತ್ಯಾತೀತವನ್ನು ಹೊಂದಿದ್ದೇವೆ. ಕಾಂಗ್ರೆಸ್ ನಮಗೆ ಎಷ್ಟು ಸೀಟ್ ಬಿಟ್ಟುಕೊಡುತ್ತವೆ ಹಾಗು ನಾವು ಅವರಿಗೆ ಎಷ್ಟು ಸೀಟ್ ಬಿಟ್ಟುಕೊಡುತ್ತೇವೆ ಎಂಬುದು ಅಲ್ಲಿಯೇ ನಿರ್ಣಯವಾಗಬೇಕಿದೆ ಅಂತಾ ದೇವೇಗೌಡರು ಹೇಳಿದ್ದಾರೆ.

    ಕಳೆದು ಒಂದು ವಾರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಜೆಡಿಎಸ್ ವಿರುದ್ಧ ಸತತವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದರು. ಕಾಂಗ್ರೆಸ್ ನಾಯಕರ ಹೇಳಿಕೆಗೆ ದೇವೇಗೌಡ್ರು ಸಹ ತಿರುಗೇಟು ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ದೇವೇಗೌಡ್ರು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

    ವ್ಯಂಗ್ಯ ಮಾಡಿದ್ರಾ ಹೆಚ್‍ಡಿಡಿ?: ಕಳೆದ ಕೆಲವು ದಿನಗಳಿಂದ ಜೆಡಿಎಸ್ ಬಿಜೆಪಿಯ ಬಿ ಟೀಮ್ ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಹಾಸನದಲ್ಲಿ ದೇವೇಗೌಡರ ಮಕ್ಕಳನ್ನು ಗೆಲ್ಲಿಸಿದ್ದು ಸಾಕು ಎಂಬ ಸಿಎಂ ಆಡಿಯೋ ಸಹ ವೈರಲ್ ಆಗಿತ್ತು. ರಾಹುಲ್ ಗಾಂಧಿ ಸಹ ನೇರಾ ನೇರ ಮಾಜಿ ಪ್ರಧಾನಿಗಳನ್ನೇ ಟಾರ್ಗೆಟ್ ಮಾಡಿಕೊಂಡು ವಾಗ್ದಾಳಿ ನಡೆಸಿದ್ರು. ಈ ಎಲ್ಲ ಬೆಳವಣಿಗೆಗೆ ಸಂಬಂಧಪಟ್ಟಂತೆ ದೇವೇಗೌಡ್ರು ಕಾಂಗ್ರೆಸ್ ಗೆ ತಮ್ಮ ಮೊನಚಾದ ಮಾತುಗಳಿಂದ ಕಾಂಗ್ರೆಸ್ ಗೆ ವ್ಯಂಗ್ಯ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

    ಒಟ್ಟಿನಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿಗೆ ಸಿದ್ಧ ಎಂಬ ದೇವೇಗೌಡರ ಹೇಳಿಕೆ ಸಾಕಷ್ಟು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಚುನಾವಣೆಯನ್ನು ಎದುರಿಸುತ್ತಾ ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.