Tag: Karnataka Election

  • ಸಿದ್ದರಾಮಯ್ಯ ಗೇಮ್‍ಗೆ, ರೀ ಗೇಮ್ ಆಡಲು ಅಮಿತ್ ಶಾ ಚಿಂತನೆ!

    ಸಿದ್ದರಾಮಯ್ಯ ಗೇಮ್‍ಗೆ, ರೀ ಗೇಮ್ ಆಡಲು ಅಮಿತ್ ಶಾ ಚಿಂತನೆ!

    ಬೆಂಗಳೂರು: ಬಿಜೆಪಿ ಭಾನುವಾರ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದ್ರೆ ಈ ಬಾರಿ ಚುನಾವಣೆಯಲ್ಲಿ ತೀವ್ರ ಕುತೂಹಲ ಹುಟ್ಟಿಸಿರುವ ಮೈಸೂರಿನ ವರುಣಾ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಮಾತ್ರ ಘೋಷಣೆ ಮಾಡಿಲ್ಲ.  ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಕಾಂಗ್ರೆಸ್‍ನಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿಎಂ ಸಿದರಾಮಯ್ಯ ಮತ್ತು ವರುಣಾದಿಂದ ಪುತ್ರ ಯತೀಂದ್ರ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ವರುಣಾ ಕ್ಷೇತ್ರದ ಟಿಕೆಟ್ ಫೈನಲ್ ಮಾಡೋದು ಬೇಡ. ಸಿಎಂ ಸಿದ್ದರಾಮಯ್ಯ ಅವರನ್ನ ವರುಣಾ ಅಥವಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಕಟ್ಟಿ ಹಾಕಬೇಕು. ನಾವು ಸಿದ್ದರಾಮಯ್ಯ ಗೇಮ್ ಗೆ ನಾವು ರೀ ಗೇಮ್ ಆಡೋಣ ಅಂತಾ ಅಮಿತ್ ಶಾ ಹೇಳಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ. ಇದನ್ನೂ ಓದಿ: ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

    ಭಾನುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಟ್ಟಿ ಪ್ರಕಟ ಬಳಿಕ ಸಿದ್ದರಾಮಯ್ಯ ಮತ್ತು ಯತೀಂದ್ರ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸ್ತಾರೆ ಎಂಬುದು ಖಾತ್ರಿಯಾದ ಮೇಲೆ ಅಲ್ಲಿಯ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲು ಅಮಿತ್ ಶಾ ಚಿಂತಿಸಿದ್ದಾರೆ ಎನ್ನಲಾಗಿದೆ.

  • ಆಡು ಆಟ ಆಡೂ..!!

    ಆಡು ಆಟ ಆಡೂ..!!

    https://youtu.be/_9MC0umw2xU

  • ಕೈ ಸಮಾವೇಶದಲ್ಲಿ ತಪ್ಪಿದ ಭಾರೀ ದುರಂತ- ನೋಡನೋಡ್ತಿದಂತೆ ಉರುಳಿ ಬಿತ್ತು ಬೃಹತ್ ಕಟೌಟ್

    ಕೈ ಸಮಾವೇಶದಲ್ಲಿ ತಪ್ಪಿದ ಭಾರೀ ದುರಂತ- ನೋಡನೋಡ್ತಿದಂತೆ ಉರುಳಿ ಬಿತ್ತು ಬೃಹತ್ ಕಟೌಟ್

    ಬೆಂಗಳೂರು: ಕಾಂಗ್ರೆಸ್ ಸಮಾವೇಶದಲ್ಲಿ ದುರಂತವೊಂದು ತಪ್ಪಿದ್ದು, ಕಟೌಟ್ ಹಾಕಿದ್ದ ಮರದ ಸ್ಟ್ಯಾಂಡ್ ಗಾಳಿಗೆ ಮುರಿದುಬಿದ್ದಿದೆ.

    ಅರಮನೆ ಮೈದಾನದಲ್ಲಿ ಭಾನುವಾರದ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ಎಸ್‍ಆರ್ ಪಾಟೀಲ್, ದಿನೇಶ್ ಗುಂಡೂರಾವ್ ಅವರ ದೊಡ್ಡ ಕಟೌಟ್ ಹಾಕಲಾಗಿತ್ತು. ಆದರೆ ಗಾಳಿಗೆ ಈ ಕಟೌಟ್ ಮುರಿದು ಬಿದ್ದಿದೆ.

    ವೇದಿಕೆ ಎಡಭಾಗದ ಕಟೌಟ್ ಸ್ಟ್ಯಾಂಡ್ ಕುಸಿದು ಬಿದ್ದು ಐದು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓರ್ವ ಪೊಲೀಸ್ ಪೇದೆ ಹಾಗೂ ನಾಲ್ವರು ಸಾರ್ವಜನಿಕರಿಗೆ ಗಾಯಗೊಂಡಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    ಇಷ್ಟು ದೊಡ್ಡ ಗಾತ್ರದ ಮರಗಳ ಕಟೌಟ್ ಹೂಳಬೇಕಾದರೆ ಕನಿಷ್ಟ ನಾಲ್ಕು ಅಡಿ ಮಣ್ಣನ್ನು ತೆಗೆಯಬೇಕಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಕೇವಲ ಅರ್ಧ ಅಡಿ ಮಣ್ಣನ್ನು ತೆಗೆದು ಕಟ್ಟಲಾಗಿತ್ತು. ಬೃಹತ್ ಗಾತ್ರದ ಕಟೌಟ್ ಗಳು ಆಗಿದ್ದ ಕಾರಣ ವೇಗವಾಗಿ ಬೀಸಿದ ಗಾಳಿಗೆ ನೆಲಕ್ಕೆ ಉರುಳಿದೆ.

    ಗಾಳಿ ಜೋರಾಗಿ ಬೀಸಿದ ಪರಿಣಾಮ ಕಟೌಟ್ ಗಳು ಕೆಳಗೆ ಬಿದ್ದಿವೆ. ಇಂತಹ ಕಾರ್ಯಕ್ರಮ ನಡೆಯುವಾಗ ಸರಿಯಾಗಿ ಕಟೌಟ್ ಗಳನ್ನು ನಿರ್ಮಿಸಬೇಕಿತ್ತು. ಸರಿಯಾಗಿ ಕಟ್ಟದೆ ಇರೋದಕ್ಕೆ ಈ ರೀತಿ ಆಗಿದೆ. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    https://www.youtube.com/watch?v=rc32_blkBXU

  • ರಾಜ್ಯ ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿಟ್ಟ ಅಂಬರೀಶ್!

    ರಾಜ್ಯ ಕಾಂಗ್ರೆಸ್ ನಾಯಕರಿಗೆ ತಲೆನೋವು ತಂದಿಟ್ಟ ಅಂಬರೀಶ್!

    ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಸನೀಹದಲ್ಲಿದ್ದು ಎಲ್ಲ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ, ಆದ್ರೆ ಶಾಸಕ ಅಂಬರೀಶ್ ಮಾತ್ರ ಇದೂವರೆಗೂ ಮಂಡ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಾಂಗ್ರೆಸ್ ನಿಂದ ಟಿಕೆಟ್ ಕನ್ಫರ್ಮ್ ಆದ್ರೆ ಮಾತ್ರ ಪ್ರಚಾರಕ್ಕೆ ಇಳಿಯುತ್ತೇನೆ ಇಲ್ಲವಾದಲ್ಲಿ ಹೋಗಲ್ಲ ಅಂತಾ ಅಂಬರೀಶ್ ಹೇಳಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿ ಗೆ ಲಭ್ಯವಾಗಿವೆ. ಇದನ್ನೂ ಓದಿ: ಮಾಜಿ ಸಚಿವ ಅಂಬರೀಶ್‍ಗೆ ಕೆ.ಸಿ ವೇಣುಗೋಪಾಲ್ ಖಡಕ್ ಸೂಚನೆ!

    ಭಾನುವಾರ ಸಂಜೆಯೊಳಗಾಗಿ ನನ್ನ ಸ್ಪರ್ಧೆ ಬಗ್ಗೆ ತಿಳಿಸಿ ಅಂತಾ ಹೈಕಮಾಂಡ್ ಗೆ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. 2013ರ ಚುನಾವಣೆಯಂತೆ ಈ ಬಾರಿಯ ಮಂಡ್ಯ ಜಿಲ್ಲೆಯ ಟಿಕೆಟ್ ಹಂಚಿಕೆ ನಾನು ಹೇಳಿದಂತೆ ನಡೆಯಬೇಕು ಎನ್ನುವ ಡಿಮ್ಯಾಂಡ್ ಇಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಗೆ ಕಗ್ಗಂಟಾದ ಅಂಬರೀಶ್ ಮೌನ- `ಕೈ’ ಬಿಡ್ತಾರಾ ಮಂಡ್ಯದ ಗಂಡು!

    ಇತ್ತ ಅಂಬರೀಶ್ ಮಾತನ್ನು ಒಪ್ಪಿಕೊಳ್ಳಬೇಕಾ ಅಥವಾ ಹೈಕಮಾಂಡ್ ಅನತಿಯಂತೆ ನಡೆಯಬೇಕಾ ಎಂಬ ಗೊಂದಲದಲ್ಲಿ ರಾಜ್ಯ ನಾಯಕರಿದ್ದಾರೆ ಅಂತಾ ಹೇಳಲಾಗುತ್ತಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರದಿಂದ ದೂರ ಉಳಿದ ಮಂಡ್ಯದ ಗಂಡು-ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದ ಅಂಬಿ ನಡೆ

  • ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಎಚ್‍ಡಿಡಿ ನಿವಾಸದ ಮುಂದೆ ಪ್ರತಿಭಟನೆ

    ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಎಚ್‍ಡಿಡಿ ನಿವಾಸದ ಮುಂದೆ ಪ್ರತಿಭಟನೆ

    ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರ ನಿವಾಸದ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ಆರ್.ಆರ್.ನಗರ ಕ್ಷೇತ್ರ ಉಳಿಸಲು ಪ್ರಜ್ವಲ್‍ಗೆ ಟಿಕೆಟ್ ಕೊಡಿ ಎಂದು ಒತ್ತಾಯ ಮಾಡಿದ್ದಾರೆ. ಈ ವಿಚಾರದಲ್ಲಿ ಸ್ವಲ್ಪ ಗೊಂದಲಗಳಿವೆ ಹಾಗಾಗಿ ಈ ವಿಷಯದ ಹೆಚ್ಚಿಗೆ ಮಾತನಾಡಲ್ಲ ಅಂತಾ ದೇವೇಗೌಡ್ರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಈ ವಿಷಯವನ್ನು ಬೀದಿಗೆ ತರಬೇಡಿ ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ಈ ವಿಷಯವನ್ನು ಬೀದಿಗೆ ತರುವಂತೆ ಮಾಡಿದ್ದೇ ನೀವು, ಅಭ್ಯರ್ಥಿ ವಿಚಾರದಲ್ಲಿರುವ ಸಮಸ್ಯೆ ಬಗೆಹರಿಸಿ. ದೇವೇಗೌಡರು, ಕುಮಾರಸ್ವಾಮಿ ಅವರ ಮನವೊಲಿಸಿ ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.

    ಮೊದಲ ಪಟ್ಟಿಯಲ್ಲಿ 35 ವರ್ಷದ ಒಳಗಿನ ವ್ಯಕ್ತಿಗೆ ಟಿಕೆಟ್ ನೀಡಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಲೇಬೇಕು. ಆರ್ ಆರ್ ನಗರದಲ್ಲಿ ಏಪ್ರಿಲ್ 13ರಂದು ನಡೆಯಲಿರುವ ಸಮಾವೇಶದಲ್ಲಿ ಪ್ರಜ್ವಲ್ ಹೆಸರನ್ನು ಘೋಷಿಸುವಂತೆ ಮಾಡಲು ಶರವಣ ಅವರಿಗೆ ಬೆಂಬಲಿಗರು ಆಗ್ರಹಿಸಿದರು. ಕುಟುಂಬದೊಳಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶರವಣ ತಿಳಿಸಿದ್ದಾರೆ.

    ಆರ್ ಆರ್ ನಗರದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಅನ್ನುವುದು ನಮ್ಮ ಆಗ್ರಹ. ಈಗಾಗಲೇ ದೇವೇಗೌಡರಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಈ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಚರ್ಚಿಸುವುದಾಗಿ ಅಂತಾ ದೇವೇಗೌಡರು ಹೇಳಿದ್ದಾರೆ. ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸೋಲಿಸಲು ಸಮರ್ಥ ಅಭ್ಯರ್ಥಿಯನ್ನು ಹಾಕಬೇಕಿದೆ. ಒಂದು ವೇಳೆ ಡಮ್ಮಿ ಅಭ್ಯರ್ಥಿಯ ಹೆಸರನ್ನು ಸೂಚಿಸಿದ್ದಲ್ಲಿ, ದೇವೇಗೌಡ ಅಪ್ಪಾಜಿಯ ಆಶೀರ್ವಾದ ಪಡೆದು ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಜೆಡಿಎಸ್ ಮುಖಂಡ ನಾರಾಯಣ ಸ್ವಾಮಿ ಹೇಳಿದ್ದಾರೆ.

    ದೇವೇಗೌಡರ ಮನೆ ಎದುರು ಪ್ರತಿಭಟನೆ ನಡೆದಿದ್ದು, ಎಚ್‍ಡಿಡಿ ಅವರ ಕಾರನ್ನು ಪ್ರತಿಭಟನಾಕಾರರು ತಡೆದಿದ್ದಾರೆ. ಪ್ರತಿಭಟನಾಕಾರರನ್ನು ಬಲವಂತವಾಗಿ ಪೊಲೀಸರು ತೆರವುಗೊಳಿಸಿದ ನಂತರ ಮನೆಯಿಂದ ದೇವೇಗೌಡ್ರು ಜೆಪಿ ಭವನಕ್ಕೆ ತೆರಳಿದ್ದಾರೆ. ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡು ಬಂದಿದ್ದು, ರಾಜ್ಯದ ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ 15 ಕ್ಕೂ ಹೆಚ್ಚು ಬಸ್‍ಗಳಲ್ಲಿ ಪ್ರಜ್ವಲ್ ಬೆಂಬಲಿಗರು ನಗರಕ್ಕೆ ಆಗಮಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ.

  • ನಾನ್ಯಾರ ನಗುವನ್ನು ಕಿತ್ತುಕೊಂಡಿಲ್ಲ, ಅವರ ನಗುವನ್ನು ಅವರೇ ಕಿತ್ತುಕೊಂಡಿದ್ದಾರೆ: ಬೇಳೂರು ಗೋಪಾಲಕೃಷ್ಣ

    ನಾನ್ಯಾರ ನಗುವನ್ನು ಕಿತ್ತುಕೊಂಡಿಲ್ಲ, ಅವರ ನಗುವನ್ನು ಅವರೇ ಕಿತ್ತುಕೊಂಡಿದ್ದಾರೆ: ಬೇಳೂರು ಗೋಪಾಲಕೃಷ್ಣ

    ಬೆಂಗಳೂರು: ನಾನು ಹಾಲಪ್ಪರ ನಗುವನ್ನು ಕಿತ್ತುಕೊಂಡಿಲ್ಲ. ತಮ್ಮ ನಗುವನ್ನು ಅವರೇ ಕಿತ್ತುಕೊಂಡಿದ್ದಾರೆ. ನಾನು ಸಿಗಂಧೂರು ದೇವಿ ಪ್ರಸಾದ ಸ್ವೀಕರಿಸಿ ಆಣೆ ಮಾಡಲು ಸಿದ್ಧನಿದ್ದೇನೆ. ಆಣೆ ಮಾಡಲು ಅವರು ದೇವಿಯ ಸನ್ನಿಧಿಗೆ ಬರಲಿ. ಯಾರನ್ನು ಮುಗಿಸಿ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ ಅಂತ ಬೇಳೂರು ಗೋಪಾಲಕೃಷ್ಣ ಗೆಳೆಯ ಅವರು ಮಾಜಿ ಸಚಿವ ಹಾಲಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಾನು ಯಾರ ಮೇಲಾದ್ರೂ ಆಪಾದನೆ ಮಾಡಿದ್ರೆ ಜಿಲ್ಲೆ ಮತ್ತು ರಾಜ್ಯದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತೆ ಅಂತ ತಿಳಿದಿದ್ದರೆ ಅದು ತಪ್ಪಾಗುತ್ತದೆ. ನಾನು ಇವತ್ತು ಮುಂದೆಯೇ ಹೇಳುತ್ತೇನೆ ನನ್ನ ಮೇಲೆ ಆಪಾದನೆಗಳಿದ್ದರೆ ಪ್ರಸಾದ ಸ್ವೀಕರಿಸಿ ಪ್ರಮಾಣ ಮಾಡ್ತೇನೆ ಅಂದ್ರು. ಇದನ್ನೂ ಓದಿ: ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

    ಕ್ಷೇತ್ರದಲ್ಲಿ ಬೇಳೂರುದ್ದೇ ಆದ ಶಕ್ತಿ ಮತ್ತು ಸಂಘಟನೆ ಇದೆ. ಅದನ್ನು ನಾನು ಯಾರಿಂದ ಕಲಿತು ಬಂದಿದ್ದೇನೆ ಎಂಬುದು ನನಗೆ ಗೊತ್ತಿದೆ. ಹಾಲಪ್ಪ ಅವರು ನನ್ನ ಬಗ್ಗೆ ಏನಾದ್ರೂ ತಿಳಿದುಕೊಂಡಿದ್ದರೆ ಅದು ತಪ್ಪಾಗುತ್ತದೆ. ನನ್ನ ಬಗ್ಗೆ ಏನಾದ್ರೂ ಆರೋಪಗಳಿದ್ದರೆ ಕ್ಷೇತ್ರದ ಜನ ಹೇಳಿದ್ರೆ ತಲೆ ಬಾಗಿಸುತ್ತೇನೆ ವಿನಃ ಬೇರೆ ಯಾರಾದ್ರೂ ಹೇಳಿದ್ರೆ ಕೇಳುವ ಪ್ರಶ್ನೆ ಇಲ್ಲ. ಹಾಲಪ್ಪ ಆಪಾದನೆ ಮಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು ಅಂತ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಾಗರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ

    ಈ ಹಿಂದೆ ಸಾಗರ ಕ್ಷೇತ್ರದಿಂದ ಟಿಕೆಟ್ ಸಿಗದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವ್ರಿಗೆ ಬೈದವರಿಗೆ ಟಿಕೆಟ್ ನೀಡಲಾಗುತ್ತಿದೆ ಅಂತ ಪರೋಕ್ಷವಾಗಿ ಬೇಳೂರು ಗೋಪಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು.

    https://youtu.be/Hs0JxZBSuK8

  • ಗಮನಿಸಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋದು ನಕಲಿ ಗುಪ್ತಚರ ವರದಿ ಪ್ರತಿ

    ಗಮನಿಸಿ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋದು ನಕಲಿ ಗುಪ್ತಚರ ವರದಿ ಪ್ರತಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರ ಸೇಫ್ ಅಲ್ಲ ಎಂಬ ಅಂಶವುಳ್ಳ ನಕಲಿ ಗುಪ್ತಚರ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗುಪ್ತಚರ ಇಲಾಖೆಯೇ ಈ ವರದಿಯನ್ನು ನೀಡಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ನಕಲಿ ವರದಿಯಲ್ಲಿ ಏನಿದೆ?: ಈ ಬಾರಿ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಸೇಫ್ ಅಲ್ಲ. ವರುಣಾ, ಶಾಂತಿನಗರ, ಗಂಗಾವತಿ ಅಥವಾ ಬಸವಕಲ್ಯಾಣ ಕ್ಷೇತ್ರಗಳು ಸೇಫ್ ಅಂತ ಉಲ್ಲೇಖವಾಗಿದೆ. ಇಂಗ್ಲಿಷ್ ನಲ್ಲಿ ಸಿದ್ಧಪಡಿಸಿರುವ ಪ್ರತಿಯೊಂದು ಎಲ್ಲೆಡೆ ಹರಿದಾಡುತ್ತಿದ್ದು, ಇದು ನಕಲಿ ಪ್ರತಿ ಎಂದು ಗುಪ್ತದಳ ಇಲಾಖೆ ಸ್ಪಷ್ಟನೆ ನೀಡಿದೆ.

    ಚುನಾವಣೆ ಸಂದರ್ಭದಲ್ಲಿ ಮತದಾರರಲ್ಲಿ ಗೊಂದಲ ಮೂಡಿಸಲು ಈ ರೀತಿ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಗುಪ್ತಚರ ಇಲಾಖೆ ತನ್ನ ವರದಿಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವ ಪದ್ಧತಿಯನ್ನು ಹೊಂದಿಲ್ಲ ಎಂಬುದಾಗಿ ಹೇಳಿದೆ.

    ಇತ್ತ ನಕಲಿ ಗುಪ್ತಚರ ವರದಿ ವೈರಲ್ ಆಗುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.