Tag: Karnataka Election

  • ಪ್ರಿಯಾಂಕ್ ಖರ್ಗೆಯನ್ನು ಲುಚ್ಚಾ ಅಂತ ಕರೆದ ಮಾಲೀಕಯ್ಯ ಗುತ್ತೇದಾರ್

    ಪ್ರಿಯಾಂಕ್ ಖರ್ಗೆಯನ್ನು ಲುಚ್ಚಾ ಅಂತ ಕರೆದ ಮಾಲೀಕಯ್ಯ ಗುತ್ತೇದಾರ್

    ಕಲಬುರಗಿ: ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆ ಮೊನ್ನೆ ಕಣ್ಣು ಬಿಟ್ಟಿದ್ದಾನೆ. ಆತನನ್ನು ಬಚ್ಚಾ ಅಂತಾ ಕರೆಯಬಾರದು ಅಂತೆ. ಅವನೊಬ್ಬ ಲುಚ್ಚಾ ಅಂತ ಮಾಲೀಕಯ್ಯ ಗುತ್ತೇದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಚಿತ್ತಾಪುರದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಅವರು, ಚಿತ್ತಾಪುರಕ್ಕೆ ಚುನಾವಣೆಯ ಸಂದರ್ಭದಲ್ಲಿ ನಾನು ಮತ್ತೆ ಬರ್ತೀನಿ. ಸಭೆಯಲ್ಲಿದ್ದ ಎಲ್ಲರು ನನ್ನ ನಂಬರ್ ಬರೆದುಕೊಳ್ಳಿ ಅಂತಾ ಹೇಳಿ ಮಾಲೀಕಯ್ಯ ತನ್ನ ಫೋನ್ ನಂಬರ್ ನೀಡಿದ್ದಾರೆ.

    ಬಳಿಕ ನಿಮಗೆ ಯಾರಾದ್ರು ತೊಂದ್ರೆ ಕೊಟ್ಟರೆ ತಕ್ಷಣ ನನಗೆ ಕರೆ ಮಾಡಿ. ಚಿತ್ತಾಪುರದಲ್ಲಿ ಯಾರಿಗೂ ಕೂಡ ಭಯ ಪಡುವಂತಿಲ್ಲ. ಕಾಂಗ್ರೆಸ್ ನಲ್ಲಿ ಏನೇ ಆಗಬೇಕಾದ್ರೂ ಖರ್ಗೆ ಚೇಲಾಗಳಿಗೆ ಆಗಬೇಕು. ಹಾಗಾಗಿಯೇ ಇಂದು ಕಾಂಗ್ರೆಸ್ ಮುಕ್ತ ಮಾಡೋದಕ್ಕೆ ನಾನು ಪಣ ತೊಟ್ಟಿದ್ದೆನೆ. ಚಿತ್ತಾಪುರದ ಶಾಸಕ ಪ್ರಿಯಾಂಕ್ ಖರ್ಗೆ ಮೊನ್ನೆ ಕಣ್ಣು ಬಿಟ್ಟಿದ್ದಾನೆ. ಅವನೊಬ್ಬ ಲುಚ್ಚಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕದಲ್ಲಿ ಕೌರವ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಆಡಳಿತ ಮಾಡ್ತಿದೆ. ಬಿಜೆಪಿಯಲ್ಲಿ ನ್ಯಾಯದ ಬತ್ತಳಿಕೆ ಇದೆ. ಕಾಂಗ್ರೆಸ್ ನಲ್ಲಿ ಭ್ರಷ್ಟಾಚಾರದ ಬತ್ತಳಿಕೆ ಇದೆ. ಕಲಬುರಗಿ ಭಾಗದಲ್ಲಿ ಧರ್ಮಸಿಂಗ್ ಖರ್ಗೆ ಸಂಗ್ಯಾ ಬಾಳ್ಯಾ ಇದ್ದ ಹಾಗೆ. ಒಬ್ಬರಿಗೆ ಮಂತ್ರಿ ಮಾಡಿದ್ರೆ ಮತ್ತೊಬ್ಬರಿಗೆ ಹಾರ್ಟ್ ಅಟ್ಯಾಕ್ ಆಗುತ್ತೆ. ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಖರ್ಗೆ ನಮ್ಮ ಮನೆ ಬಾಗಿಲಿಗೆ ಬಂದಿದ್ದ. ಆಗ ನಮ್ಮ ತಂದೆ ವೆಂಕಯ್ಯ ಕೂಸಯ್ಯ ಗುತ್ತೆದಾರ್ ಬಂಗಾರಪ್ಪನಿಗೆ ಹೇಳಿ ಮಂತ್ರಿ ಸ್ಥಾನ ಕೊಡಿಸಿದ್ದರು. ಈ ಮಾತು ಹೇಳೊ ಪರಿಸ್ಥಿತಿ ಬರ್ತಿರಲಿಲ್ಲ. ಆದ್ರೆ ಖರ್ಗೆ ಮಗ ಬಹಳ ಮುಂದು ಹೋಗಿದ್ದಾನೆ ಅದಕ್ಕೆ ಹೇಳುತ್ತಿದ್ದೇನೆ. ಈ ಮಾತು ಸುಳ್ಳು ಆದ್ರೆ ಬುದ್ಧವಿಹಾರಕ್ಕೆ ಬರಲಿ ಖರ್ಗೆ ಅಲ್ಲೇ ಆಣೆ ಪ್ರಮಾಣ ಮಾಡೋಣ ಅಂತ ಗುತ್ತೇದಾರ್ ಹೇಳಿದ್ದಾರೆ.

    ಕಲಬುರಗಿಯ ಅಫ್ಜಲ್ಪುರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಗುತ್ತೇದಾರ್ ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

  • ಸಿಎಂಗೆ `ಬಾದಾಮಿ’ ಸಿಗಬಾರದು, ಬಿಜೆಪಿಗೆ ಸಿಗಬೇಕು: ಚರ್ಚೆ ನಂತ್ರ ಕೊನೆಗೆ ರೆಡಿಯಾದ್ರು ಅಭ್ಯರ್ಥಿ

    ಸಿಎಂಗೆ `ಬಾದಾಮಿ’ ಸಿಗಬಾರದು, ಬಿಜೆಪಿಗೆ ಸಿಗಬೇಕು: ಚರ್ಚೆ ನಂತ್ರ ಕೊನೆಗೆ ರೆಡಿಯಾದ್ರು ಅಭ್ಯರ್ಥಿ

    ಬೆಂಗಳೂರು: ಬಾದಾಮಿಯಲ್ಲಿ ಸ್ಪರ್ಧಿಸಲು ಮುಂದಾಗುತ್ತಿರುವ ಸಿಎಂ ಸಿದ್ದರಾಮಯ್ಯನವರನ್ನು ಸೋಲಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ.

    ಹೌದು. ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುರುವಾರ ಬಾದಾಮಿಯಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಗಂಭೀರ ಚರ್ಚೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ, ಬಂಡಾಯ ಇರಬಾರದು ಎಂದು ಸೂಚನೆ ನೀಡಿದ್ದಾರೆ.

    ಈ ಬಾರಿ ಶತಾಯುಗತಾಯವಾದರೂ ಬಾದಾಮಿಯಲ್ಲಿ ಬಿಜೆಪಿ ಗೆಲ್ಲಲೇಬೇಕು ಎಂದು ಅಮಿತ್ ಶಾ ಹೇಳಿದ ಹಿನ್ನೆಲೆಯಲ್ಲಿ ಓರ್ವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಸಿದ್ಧತೆ ನಡೆದಿದೆ.

    ಯಾರು ಅಭ್ಯರ್ಥಿ?
    ಕಳೆದ ಬಾರಿ ಜೆಡಿಎಸ್‍ನಿಂದ ಸ್ಪರ್ಧೆ ಮಾಡಿದ್ದ ಮಹಾಂತೇಶ್ ಗುರುಪಾದಪ್ಪ ಮಮದಾಪುರ ಅವರನ್ನು ಸಿಎಂ ವಿರುದ್ಧ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. 2013ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಂ.ಕೆ.ಪಟ್ಟಣಶೆಟ್ಟಿ ಕಣಕ್ಕೆ ಇಳಿದಿದ್ದರು. ಆದರೆ ಈ ಬಾರಿ ಅವರಿಗೆ ಟಿಕೆಟ್ ನೀಡದೇ ಇರಲು ಬಿಜೆಪಿ ನಿರ್ಧಾರ ಮಾಡಿದೆ.

    ಮಮದಾಪುರ, ಎಂ.ಕೆ.ಪಟ್ಟಣಶೆಟ್ಟಿ ಇಬ್ಬರು ಸಂಬಂಧಿಗಳಾಗಿದ್ದು ಮಾವ, ಅಳಿಯನ ಸಂಬಂಧವಿದೆ. ಹೀಗಾಗಿ ಅಂತಿಮವಾಗಿ ಮಾವನನ್ನ ಮನವೊಲಿಸುವ ಕಾರ್ಯವನ್ನು ಅಳಿಯನಿಗೆ ಬಿಟ್ಟಿದ್ದಾರೆ. ಅಮಿತ್ ಶಾ ಜೊತೆಗಿನ ಸಭೆಯಲ್ಲಿ ಅಭ್ಯರ್ಥಿ ಕ್ಲಿಯರ್ ಆಗಿದ್ದು, ದೆಹಲಿಯಲ್ಲಿ ಭಾನುವಾರ ನಡೆಯಲಿರುವ ಸಭೆಯ ಬಳಿಕ ಅಧಿಕೃತವಾಗಿ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ.

    ಕಳೆದ ಬಾರಿ ಜೆಡಿಎಸ್‍ನಿಂದ ಸ್ಪರ್ಧಿಸಿದ್ದ ಮಮಾದಪುರ 42,333 ಮತ ಪಡೆದಿದ್ದರೆ, ಬಿಬಿ ಚಿಮ್ಮನ್ನಕಟ್ಟಿ 57446 ಮತಗಳನ್ನು ಪಡೆದಿದ್ದರು.

  • ಪರೋಕ್ಷವಾಗಿ ತಮಿಳುನಾಡು ಕಾವೇರಿ ಪ್ರತಿಭಟನೆಯನ್ನು ಬೆಂಬಲಿಸಿದ ರಮ್ಯಾ: ಕನ್ನಡಿಗರಿಂದ ತರಾಟೆ

    ಪರೋಕ್ಷವಾಗಿ ತಮಿಳುನಾಡು ಕಾವೇರಿ ಪ್ರತಿಭಟನೆಯನ್ನು ಬೆಂಬಲಿಸಿದ ರಮ್ಯಾ: ಕನ್ನಡಿಗರಿಂದ ತರಾಟೆ

    ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತಾಗಿ ಪ್ರಕಟವಾದ ಸುದ್ದಿಯನ್ನು ರಮ್ಯಾ ಟ್ವೀಟ್ ಮಾಡಿದ್ದನ್ನು ಕನ್ನಡಿಗರು ಖಂಡಿಸಿದ್ದಾರೆ.

    ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆಗ್ರಹಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆನ್‍ಲೈನ್ ತಾಣವೊಂದು ಈ ಸುದ್ದಿಯನ್ನು ಪ್ರಕಟಿಸಿದ್ದು, ರಮ್ಯಾ ಅವರು ಈ ಸುದ್ದಿಯನ್ನು ಟ್ವಿಟ್ಟರ್ ನಲ್ಲಿ ಹಾಕಿ “Loud and clear ಎಂದು ಬರೆದುಕೊಂಡಿದ್ದಾರೆ.

    ಈ ಟ್ವೀಟ್ ಅನ್ನು ಕನ್ನಡಿಗರು ಖಂಡಿಸಿದ್ದು, ಕನ್ನಡ ದ್ರೋಹಿ ರಮ್ಯಾ ಅವರಿಗೆ ಧಿಕ್ಕಾರ ಎಂದು ಬರೆದು ಟೀಕಿಸಿದ್ದಾರೆ. ನಿಮ್ಮ ಟ್ವೀಟ್ ನಿಂದಾಗಿ ಕಾಂಗ್ರೆಸ್‍ಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೆಂಬ ಆಗ್ರಹ ಇರುವುದು ಗೊತ್ತಾಯಿತು ಎಂದು ಬರೆದು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

     

     

    https://twitter.com/paivijay/status/984331150633021441

  • ಚುನಾವಣಾ ಆಯೋಗದ ಹೊಸ ರೂಲ್ಸ್ ಗೆ ಜನಸಾಮಾನ್ಯರು, ಬ್ಯಾಂಕ್‍ನವರು ಸುಸ್ತು!

    ಚುನಾವಣಾ ಆಯೋಗದ ಹೊಸ ರೂಲ್ಸ್ ಗೆ ಜನಸಾಮಾನ್ಯರು, ಬ್ಯಾಂಕ್‍ನವರು ಸುಸ್ತು!

    -ಕಟ್ಟೆಚ್ಚರದ ನಡುವೆಯೂ ಚುನಾವಣಾ ಅಕ್ರಮ

    ಬೆಂಗಳೂರು: ರಾಜಕೀಯ ಕುಳಗಳ ಅಕ್ರಮ ಹಣದ ಹರಿವಿಗೆ ಬ್ರೇಕ್ ಹಾಕಲು ಚುನಾವಣಾ ಆಯೋಗ ಮತ್ತೆ ಚಾಣಕ್ಯ ತಂತ್ರ ಅನುಸರಿಸಿದೆ. ಇಲ್ಲಿಯವರೆಗೆ ಹತ್ತು ಲಕ್ಷ ದುಡ್ಡು ಡ್ರಾ ಮಾಡಿದವರ ವಿವರವನ್ನು ಬ್ಯಾಂಕ್ ಅಧಿಕಾರಿಗಳಿಂದ ಕಲೆ ಹಾಕುತ್ತಿದ್ದ ಆಯೋಗ ಈಗ ಈ ಪ್ರಮಾಣವನ್ನು ಎರಡು ಲಕ್ಷದಿಂದ ಶುರು ಮಾಡಿದೆ.

    ಇನ್ಮುಂದೆ ಎರಡು ಲಕ್ಷಕ್ಕಿಂತ ಅಧಿಕ ದುಡ್ಡು ಪಡೆದವರ ಎಲ್ಲಾ ವಿವರವೂ ಐಟಿ ಹಾಗೂ ಎಲೆಕ್ಷನ್ ಕಮೀನಷನ್‍ಗೆ ಸಲ್ಲಿಕೆಯಾಗಲಿದೆ. ಈಗಾಗಲೇ ಬ್ಯಾಂಕ್ ಅಧಿಕಾರಿಗಳಿಗೆ ಸುತ್ತೋಲೆ ನೀಡಿದ್ದು ಇಂದಿನಿಂದ ಮಾಹಿತಿ ರವಾನೆಯಾಗಲಿದೆ. ಚುನಾವಣಾ ಆಯೋಗ ಅಕ್ರಮ ದುಡ್ಡು ಸಾಗಾಟ ತಡೆಗೆ ಎಷ್ಟೇ ಪ್ರಯತ್ನ ಪಟ್ರು, ಚೆಕ್‍ಪೋಸ್ಟ್ ನಲ್ಲಿ ಮಾತ್ರ ನಿತ್ಯ ಕೋಟಿ ಕೋಟಿ ದುಡ್ಡು ಪತ್ತೆಯಾಗುತ್ತಿರೋದ್ರಿಂದ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

    ಈ ನಡುವೆ ಜನಸಾಮಾನ್ಯರಿಗೆ ಬ್ಯಾಂಕ್‍ನಲ್ಲಿ ದುಡ್ಡು ಸಿಗದೇ ಇರೋದ್ರ್ರಿಂದ ಮದುವೆ, ಫಂಕ್ಷನ್, ಗೃಹಪ್ರವೇಶ ಸೇರಿದಂತೆ ಎಲ್ಲಾ ಶುಭ ಸಮಾರಂಭಗಳನ್ನು ಮುಂದೂಡುವ ಪರಿಸ್ಥಿತಿ ಬಂದಿದೆ. ಇನ್ನು ಬ್ಯಾಂಕ್‍ನವರು ಕೂಡ ಆರ್‍ಬಿಐ ದುಡ್ಡು ವಿತರಣೆ ಮಾಡುತ್ತಿಲ್ಲ. ಆದ್ದರಿಂದ ಜನರಿಗೆ ದುಡ್ಡು ನೀಡೋದಕ್ಕೆ ಆಗ್ತಿಲ್ಲ. ಒಂದು ಲಕ್ಷ ಕೇಳಿದ್ರೇ ಹಂತಹಂತವಾಗಿ ದುಡ್ಡು ವಿತರಿಸುತ್ತೇವೆ ಅಂತ್ತಿದ್ದಾರಂತೆ.

  • ಚುನಾವಣಾಧಿಕಾರಿಗಳಿಂದ ಬಿಎಸ್‍ವೈ ಪ್ರಯಾಣಿಸಿದ ಕಾರ್ ಜಪ್ತಿ

    ಚುನಾವಣಾಧಿಕಾರಿಗಳಿಂದ ಬಿಎಸ್‍ವೈ ಪ್ರಯಾಣಿಸಿದ ಕಾರ್ ಜಪ್ತಿ

    ಕೊಪ್ಪಳ: ಪರವಾನಗಿ ಇಲ್ಲದೇ ಬಿ.ಎಸ್.ಯಡಿಯೂರಪ್ಪ ಕರೆತಂದಿದ್ದ ಕಾರನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ನಗರದಲ್ಲಿ ರೈತ ಸಂವಾದ ಕಾರ್ಯಕ್ರಮಕ್ಕೆ ಬಿಎಸ್‍ವೈರನ್ನು ಹೆಲಿಪ್ಯಾಡ್‍ನಿಂದ ಸಂವಾದ ಸ್ಥಳಕ್ಕೆ ಪರವಾನಗಿ ಇಲ್ಲದ ಕಾರಲ್ಲಿ ಕರೆತಲಾಗಿತ್ತು. ಕಾರು ತಡೆಯಲು ಹೋದಾಗ ಕಾರು ಚಾಲಕ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ.

    ಕಾರಿನ ಹಿಂಬದಿ ನಂಬರ್ ಪ್ಲೇಟಿನಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಹಾಕಲಾಗಿತ್ತು. ಪ್ರಕರಣ ಸಂಬಂಧ ಚುನಾವಣಾ ಅಧಿಕಾರಿಗಳು, ಪರಶುರಾಮ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

    ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಬಿಜೆಪಿ ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದ್ದು, ಸಣ್ಣ- ಪುಟ್ಟ ಗೊಂದಲಗಳ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಬಿಎಸ್ ವೈ ರಾಜ್ಯ ಸುತ್ತಲಿದ್ದು, ಮೊದಲನೇ ದಿನವಾದ ಮಂಗಳವಾರ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ರೈತರ ಸಂವಾದ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಕಷ್ಟ- ನಷ್ಟಗಳನ್ನು ಕೇಳಿ ತಿಳಿದುಕೊಂಡ್ರು.

  • ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಾಸಕರಿಗೆ ಬಿಜೆಪಿ ಟಿಕೆಟ್-ಟ್ವಿಟ್ಟರ್ ನಲ್ಲಿ ಅಸಮಾಧಾನ

    ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಾಸಕರಿಗೆ ಬಿಜೆಪಿ ಟಿಕೆಟ್-ಟ್ವಿಟ್ಟರ್ ನಲ್ಲಿ ಅಸಮಾಧಾನ

    ಯಾದಗಿರಿ: ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಹಾಪುರ ಶಾಸಕ ಗುರುಪಾಟೀಲ್‍ರಿಗೆ ಬಿಜೆಪಿ ಟಿಕೆಟ್ ನೀಡಿದೆ.

    ರಾಜ್ಯಾದ್ಯಂತ ಬಿಜೆಪಿ ಟಿಪ್ಪು ಜಯಂತಿಗೆ ಭಾರೀ ವಿರೋಧವನ್ನು ವ್ಯಕ್ತಪಡಿಸಿತ್ತು. ಆದ್ರೂ ಶಹಾಪುರ ಬಿಜೆಪಿ ಶಾಸಕ ಗುರುಪಾಟೀಲ್ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದರು. ಆದ್ರೆ ಇದೀಗ ಬಿಜೆಪಿ ಮತ್ತೊಮ್ಮೆ ಗುರುಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದು, ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಬಿಜೆಪಿಯ ಟಿಪ್ಪು ಜಯಂತಿ ವಿರೋಧದ ಪ್ರತಿಭಟನೆ ಕೇವಲ ರಾಜಕೀಯ ಬೂಟಾಟಿಕೆ ಆಯಿತಾ? ಇದು ಚೀಪ್ ಪೊಲಿಟಿಕ್ಸ್. ಪಕ್ಷದ ವಿರೋಧದ ನಡುವೆಯೂ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಗುರುಪಾಟೀಲ್ ಗೆ ಬಿಜೆಪಿ ಟಿಕೆಟ್ ನೀಡಿರುವುದು ಎಷ್ಟು ಸರಿ ಅಂತಾ ನಮೋ ಬ್ರಿಗೇಡ್‍ನ ಮಾಜಿ ಸದಸ್ಯ ನೀರಜ್ ಕಾಮತ್ ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಈ ಹಿಂದೆ ಹೊಸಪೇಟೆಯ ಶಾಸಕ ಆನಂದ್ ಸಿಂಗ್ ಬಿಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದಕ್ಕೆ, ರಾಜ್ಯ ನಾಯಕರೆಲ್ಲಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಂತೆಯೇ ಜಯಂತಿಯಲ್ಲಿ ಭಾಗವಹಿಸಿದ್ದಕ್ಕೆ ಉತ್ತರ ನೀಡಬೇಕೆಂದು ಬಿಜೆಪಿ ಆನಂದ್ ಸಿಂಗ್ ಅವರಿಗೆ ಶೋಕಾಸ್ ನೋಟಿಸ್ ಸಹ ಜಾರಿ ಮಾಡಿತ್ತು. ಇದನ್ನೂ ಓದಿ: ಶಾಸಕ ಆನಂದ್ ಸಿಂಗ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

  • ಚುನಾವಣೆ ಗೆಲ್ಲೋಕೆ ಯುಗಾದಿ ಹಬ್ಬದಿಂದಲೇ ಊಟ ಬಿಟ್ಟ ಅಭ್ಯರ್ಥಿ

    ಚುನಾವಣೆ ಗೆಲ್ಲೋಕೆ ಯುಗಾದಿ ಹಬ್ಬದಿಂದಲೇ ಊಟ ಬಿಟ್ಟ ಅಭ್ಯರ್ಥಿ

    ಚಿಕ್ಕಬಳ್ಳಾಪುರ: ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಯೊಬ್ಬರು ಸಿನಿಮಾ ಸ್ಟೈಲಲ್ಲಿ ಪವರ್ ಫುಲ್ ಡೈಲಾಗ್ ಹೇಳುತ್ತಾ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಪ್ರಬಲ ಪಕ್ಷೇತರ ಅಭ್ಯರ್ಥಿಗಳನ್ನು ನಾನು ಸೋಲಿಸಿ ಎಂಎಲ್‍ಎ ಆಗುತ್ತೇನೆ ಅಂತಾ ಹೇಳುತ್ತಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕು ಅಂಕಾಲಮಡುಗು ಗ್ರಾಮದ ಭಾಸ್ಕರ್ ರೆಡ್ಡಿ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಚಿಂತಾಮಣಿ ಕ್ಷೇತ್ರದ ಎಲ್ಲ ಅಭ್ಯರ್ಥಿಗಳನ್ನು ಸೋಲಿಸುತ್ತೇನೆ ಅಂತಾ ಸವಾಲು ಹಾಕುತ್ತಾರೆ. ಇದೇ ಏಪ್ರಿಲ್ 17ರಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದು, ಚಿಂತಾಮಣಿಯಲ್ಲಿ ಈ ಬಾರಿ ನನ್ನದೇ ಗೆಲುವು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸ್ತಾರೆ.

    ಭಾಸ್ಕರ್ ರೆಡ್ಡಿ ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥಸ್ವಾಮಿಯ ಭಕ್ತ ಎಂದು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆಗೆ ನಿಲ್ಲೋಕೆ ಅಂತಲೇ ಯುಗಾದಿ ಹಬ್ಬದಿಂದ ಊಟ ಬಿಟ್ಟು ಬರೀ ಹಣ್ಣು-ಹಂಪಲು, ಹಾಲು ಸೇವಿಸಿ ಬದುಕುತ್ತಿದ್ದಾರೆ. ಹೊಸ ವರ್ಷ ಆರಂಭದಿಂದಲೇ ಈ ಬಾರಿ ಚುನಾವಣೆಗೆ ನಿಲುತ್ತೀನಿ ಎಂದು ಮದ್ಯಪಾನ, ಮಾಂಸಾಹಾರ ಬಿಟ್ಟು ಗಾಂಧಿತತ್ವ ಪಾಲಿಸುತ್ತಿದ್ದಾರೆ. ಭಾಸ್ಕರ್ ರೆಡ್ಡಿ ಒಂದು ರೀತಿಯಲ್ಲಿ ಡಿಫೆರೆಂಟ್ ಹೇಳಿಕೆ ಕೊಡುತ್ತಿದ್ದು, ಸಸಿಗಳನ್ನ ನೆಟ್ಟು, ಅಂಗಾಗ ಹಾಗೂ ದೇಹ ದಾನ ಮಾಡುವ ಮೂಲಕ ನಾಮಪತ್ರ ಸಲ್ಲಿಸುವುದಾಗಿ ಎಂದು ತಿಳಿಸಿದ್ದಾರೆ.

    ಚಿಂತಾಮಣಿ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಅಭ್ಯರ್ಥಿಗಳು, ಜನ ವಿರೋಧಿ, ಭ್ರಷ್ಟಚಾರ ನಡೆಸಿದ್ದಾರೆ ಎಂದು ಭಾಸ್ಕರ್ ರೆಡ್ಡಿ ಆರೋಪಿಸಿದ್ದಾರೆ.

  • ಒಬ್ಬರಿಗೊಬ್ರು ಟೂ ಬಿಟ್ಟುಕೊಂಡ್ರಂತೆ ಕುಚುಕು ಗೆಳೆಯರಾದ ಸಿಎಂ, ಮಹದೇವಪ್ಪ?

    ಒಬ್ಬರಿಗೊಬ್ರು ಟೂ ಬಿಟ್ಟುಕೊಂಡ್ರಂತೆ ಕುಚುಕು ಗೆಳೆಯರಾದ ಸಿಎಂ, ಮಹದೇವಪ್ಪ?

    ಬೆಂಗಳೂರು: ಈ ವಿಧಾನಸಭಾ ಚುನಾವಣೆಗಾಗಿ ಎಲ್ಲ ನಾಯಕರು ತಮ್ಮ ಪಕ್ಷಗಳಿಂದ ಟಿಕೆಟ್ ಪಡೆಯಲು ಮುಂದಾಗಿದ್ದರೆ, ಕೆಲ ಹಿರಿಯ ಸಚಿವರು ಮಾತ್ರ ತಮ್ಮ ಜೊತೆ ಪುತ್ರರಿಗೂ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದಾರೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಈ ಬಾರಿ ಸಚಿವರ ಪುತ್ರರಿಗೆ ಟಿಕೆಟ್ ಇಲ್ಲ ಎಂಬ ಸ್ಪಷ್ಟ ಆದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.

    ಈ ಎಲ್ಲ ಬೆಳವಣಿಗೆಯ ನಡುವೆಯೂ ಸಿಎಂ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರನಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಸಿಎಂ ಒತ್ತಡಕ್ಕೆ ಮಣಿದಿರುವ ಹೈಕಮಾಂಡ್ ಸಹ ಯತೀಂದ್ರನಿಗೆ ಟಿಕೆಟ್ ನೀಡುವ ಭರವಸೆ ನೀಡಿದೆ ಎಂಬ ಮಾಹಿತಿಗಳು ಲಭಿಸಿವೆ. ಸಿಎಂ ಪುತ್ರನಿಗೆ ಮಾತ್ರ ಟಿಕೆಟ್ ನೀಡಿದ್ದು, ಸಹಜವಾಗಿ ಸಚಿವ ಹೆಚ್.ಸಿ.ಮಹದೇವಪ್ಪ ಅವರ ಮುನಿಸಿಗೆ ಕಾರಣವಾಗಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಮಹದೇವಪ್ಪಗೆ ಬಿಗ್ ಶಾಕ್ ನೀಡಿದ ‘ಕೈ’ಕಮಾಂಡ್

    ರಾಜಕೀಯದಲ್ಲಿ ಕುಚುಕು ಗೆಳೆಯರು ಅಂತ ಕರೆಸಿಕೊಳ್ಳುವ ಸಿಎಂ ಮತ್ತು ಹೆಚ್.ಸಿ.ಮಹದೇವಪ್ಪ ಕಳೆದ 10 ದಿನಗಳಿಂದ ಒಬ್ಬರಿಗೊಬ್ರು ಮಾತನಾಡಿಲ್ಲವಂತೆ. ಸಿಎಂ ಕಾಲ್ ಮಾಡಿದ್ರೂ, ಸಚಿವ ಮಹದೇವಪ್ಪ ಮಾತ್ರ ಉತ್ತರ ನೀಡಿಲ್ಲವಂತೆ. ನೀವು ಮಾತ್ರ ಅಪ್ಪ-ಮಕ್ಕಳು ಚುನಾವಣೆಗೆ ನಿಲ್ಲಬಹುದು? ನಾವು ನಿಲ್ಲಬಾರದಾ…? ನಿಮ್ಮ ಮಗನಿಗೆ ನೀವು ರಾಜಕೀಯ ದಾರಿ ಮಾಡಿಕೊಡಬಹುದು. ಆದ್ರೆ ನನ್ನ ಮಗನಿಗೆ ನಾನು ದಾರಿ ಮಾಡಿಕೊಡಬಾರದಾ? ಎಂಬ ಪ್ರಶ್ನೆಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಹೆಚ್.ಸಿ.ಮಹದೇವಪ್ಪ ಪುತ್ರನ ವಿಚಾರಣೆ

    ಟಿ.ನರಸೀಪುರ ಕ್ಷೇತ್ರದಲ್ಲಿ ನೀವು ಯಾರಾದ್ರೂ ಒಬ್ಬರು ಚುನಾವಣೆಗೆ ನಿಲ್ಲಿ. ಈಗ ಇಬ್ಬರಿಗೂ ಕ್ಷೇತ್ರ ಹುಡುಕಿಕೊಡೋದು ಕಷ್ಟವಾಗಲಿದೆ ಅಂತಾ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದ್ದು, ಸಿಎಂ ವಿರುದ್ಧ ರಾಂಗ್ ಆಗಿದ್ದಾರೆ ಎನ್ನಲಾಗಿದೆ.

  • ಅವರಪ್ಪನ ಮೇಲೆ ಆಣೆ ಹಾಕಲ್ಲ ಅಂತಾರೆ, ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಜಮೀರ್ ಅಹಮದ್

    ಅವರಪ್ಪನ ಮೇಲೆ ಆಣೆ ಹಾಕಲ್ಲ ಅಂತಾರೆ, ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಜಮೀರ್ ಅಹಮದ್

    ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಅವರ ತಂದೆ ಮೇಲೆ ಆಣೆ ಹಾಕದೆ, ನಮ್ಮ ತಂದೆ ಮೇಲೆ ಯಾಕೆ ಆಣೆ ಮಾಡ್ತಾರೆ ಅಂತಾ ಹೆಚ್.ಡಿ.ಕುಮಾರಸ್ವಾಮಿ ಹೇಳ್ತಾರೆ. ತಗೊಳ್ಳಿ ಇಂದು ನಮ್ಮಪ್ಪಾಣೆ ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಅಂತಾ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಜಮೀರ್ ಅಹಮದ್ ಭವಿಷ್ಯ ನುಡಿದಿದ್ದಾರೆ.

    ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್ ಅಹಮದ್, ಜೆಡಿಎಸ್ ಪಕ್ಷ ಸೆಕ್ಯೂಲರ್ ಅಲ್ಲವೇ ಅಲ್ಲ. ಕುಮಾರಸ್ವಾಮಿ ಅವರಲ್ಲಿ ಶೇ.10 ರಷ್ಟು ಜಾತ್ಯಾತೀತ ಅಂಶಗಳಿಲ್ಲ. ಈ ಚುನಾವಣೆಯಲ್ಲಿ ಏನಾದ್ರೂ ಜೆಡಿಎಸ್ 115 ಸೀಟ್ ಬಂದ್ರೆ, ನಮ್ಮ ತಾಯಾಣೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುವುದರ ಜೊತೆಗೆ ರಾಜ್ಯ ಬಿಟ್ಟು ಹೋಗ್ತೇನೆ ಅಂತ ಹೇಳಿದ್ದಾರೆ.

    ನಾವು ಈ ಬಾರಿ 20 ರಿಂದ 30 ಕ್ಷೇತಗಳಲ್ಲಿ ಗೆಲವು ಸಾಧಿಸುತ್ತೇವೆ ಎಂಬುವುದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಸಿದ್ದರಾಮಯ್ಯ ಯಾವಾಗಲೂ ಹುಲಿ. ಅವರಿಗೆ ಹಿಂದೆ ಹೋಗುವುದು ಗೊತ್ತಿಲ್ಲ. ಭಯ ಬಂದಿರೋದು ಕುಮಾರಸ್ವಾಮಿ ಅವರಿಗೆ, ಹೀಗಾಗಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಅಂತಾ ವ್ಯಂಗ್ಯ ಮಾಡಿದರು.

  • ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ  ಬಹುತೇಕ ಹಾಲಿ ಶಾಸಕರ ಟಿಕೆಟ್‍ಗೆ ಗ್ರೀನ್‍ಸಿಗ್ನಲ್

    ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಬಹುತೇಕ ಹಾಲಿ ಶಾಸಕರ ಟಿಕೆಟ್‍ಗೆ ಗ್ರೀನ್‍ಸಿಗ್ನಲ್

    ನವದೆಹಲಿ: ರಾಜ್ಯ ಕಾಂಗ್ರೆಸ್ ರಾಷ್ಟ್ರ ರಾಜಧಾನಿ ದೆಹಲಿಗೆ ಶಿಫ್ಟ್ ಆಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ, ಅಳೆದು ತೂಗಿ ಸಮರ್ಥರನ್ನು ಆಯ್ಕೆ ಮಾಡಲಾಗುತ್ತಿದೆ.

    ಸೋಮವಾರ ನಡೆದ ಸಭೆಯಲ್ಲಿ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಅನಾರೋಗ್ಯ ಮತ್ತು ವಯಸ್ಸು ಪರಿಗಣಿಸಿ ಒಂದಷ್ಟು ಹಾಲಿಗಳ ಟಿಕೆಟ್‍ಗೆ ಕತ್ತರಿ ಹಾಕಲಾಗಿದ್ದು, ಅವರು ಸೂಚಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ: ದೆಹಲಿಯಲ್ಲಿ ನಡೆಯುತ್ತಿದೆ ಟಿಕೆಟ್ ಸ್ಕ್ರೀನಿಂಗ್- ರೆಬೆಲ್ ಸ್ಟಾರ್ ಅಂಬರೀಶ್‍ಗೆ ನೋ ಟೆನ್ಷನ್

    ಮಂಡ್ಯ ಕ್ಷೇತ್ರದಿಂದ ಅಂಬರೀಶ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಾದಾಮಿಯಿಂದ ಸಿಎಂ ಸ್ಪರ್ಧೆ ಕಾರಣಕ್ಕೆ ಬಿ.ಬಿ ಚಿಮ್ಮನಕಟ್ಟಿ ಸ್ಪರ್ಧೆಗೂ ಬ್ರೇಕ್ ಬಿದ್ದಿದೆ. ಹಾನಗಲ್‍ನಿಂದ ಮನೋಹರ್ ತಹಶೀಲ್ದಾರ್, ದಾವಣಗೆರೆ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪಗೆ ಟಿಕೆಟ್ ಇಲ್ಲ ಎನ್ನಲಾಗ್ತಿದೆ. ಇಂದಿನ ಸಭೆಯಲ್ಲಿ ಬಾಕಿ ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದ್ದು ಸರ್ವೆ ವರದಿಗಳನ್ನು ಆಧರಿಸಿ ಪಟ್ಟಿ ಅಂತಿಮ ಮಾಡಲಾಗ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಬದಾಮಿಯಿಂದ ಸಿಎಂ ಸ್ಪರ್ಧೆ ಮಾಡ್ತಾರಾ? ಈ ಕ್ಷೇತ್ರ ಸೇಫ್ ಯಾಕೆ?

    ಜೊತೆಗೆ ಶಾಸಕರ ಮಕ್ಕಳಿಗೂ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದ್ದು, ಇಂದು ಸಂಜೆ ವೇಳೆಗೆ ಅಂತಿಮ ಪಟ್ಟಿ ತಯಾರಾಗಲಿದೆ. ಸ್ಕ್ರೀನಿಂಗ್ ಕಮಿಟಿ ಅಂತಿಮಗೊಳಿಸುವ ಪಟ್ಟಿ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಗೆ ರವಾನೆಯಾಗಲಿದ್ದು, ಬುಧವಾರ ಸಂಜೆ ಅಥವಾ ಗುರುವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?