Tag: Karnataka Election

  • ಬಿಜೆಪಿ 2ನೇ ಪಟ್ಟಿ ಔಟ್- ವಿಶೇಷತೆಗಳು ಏನು? ಯಾರಿಗೆ ಟಿಕೆಟ್ ಇಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

    ಬಿಜೆಪಿ 2ನೇ ಪಟ್ಟಿ ಔಟ್- ವಿಶೇಷತೆಗಳು ಏನು? ಯಾರಿಗೆ ಟಿಕೆಟ್ ಇಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

    ಬೆಂಗಳೂರು: ರಾಜ್ಯ ವಿಧಾಸನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಕ್ಕೆ ಒಂದು ದಿನ ಬಾಕಿ ಇರುವಂತೆ ಬಿಜೆಪಿ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಬಿಜೆಪಿ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಾಮುಂಡೇಶ್ವರಿ, ವರುಣಾ, ವಿರಾಜಪೇಟೆ ಹಾಗೂ ಚಾಮರಾಜಪೇಟೆಗೆ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷರ್ದನ್, ಬಳ್ಳಾರಿಯಲ್ಲಿ ರೆಡ್ಡಿ, ರಾಮುಲು ಕುಟುಂಬ, 8 ಮಾಜಿ ಸಚಿವರಿಗೆ ಎರಡನೇ ಲಿಸ್ಟ್‍ನಲ್ಲಿ ಟಿಕೆಟ್ ಕೊಡಲಾಗಿದೆ. ಅಲ್ಲದೆ ಕಳಂಕಿತ ಆರೋಪದಡಿ ಕಳೆದ ಬಾರಿ ಟಿಕೆಟ್ ನಿರಾಕರಿಸಿದ್ದ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕೃಷ್ಣಯ್ಯ ಶೆಟ್ಟಿಗೂ ಎರಡನೇ ಪಟ್ಟಿಯಲ್ಲಿ ಟಿಕೆಟ್ ಕರುಣಿಸಲಾಗಿದೆ. ಕೊನೆ ಕ್ಷಣದಲ್ಲಿ ಹರತಾಳು ಹಾಲಪ್ಪಗೆ ಟಿಕೆಟ್ ನೀಡಲಾಗಿದೆ. ಮತ್ತೊಂದು ಅಚ್ಚರಿ ಎಂಬಂತೆ ಸಾಗರದಲ್ಲಿ ಬೇಳೂರು ಬದಲಿಗೆ ಹರತಾಳು ಹಾಲಪ್ಪ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

    2ನೇ ಲಿಸ್ಟ್ ನಲ್ಲಿ ಇರುವ ಪ್ರಮುಖರ ಹೆಸರು:

    * ಬಳ್ಳಾರಿ ನಗರ  – ಸೋಮಶೇಖರ ರೆಡ್ಡಿ
    * ಬಳ್ಳಾರಿ ಗ್ರಾ.  – ಫಕೀರಪ್ಪ
    * ಶಿವಾಜಿನಗರ  – ಕಟ್ಟಾ ಸುಬ್ರಮಣ್ಯ ನಾಯ್ಡು
    * ಮಾಲೂರು  – ಕೃಷ್ಣಯ್ಯ ಶೆಟ್ಟಿ
    * ಮಳವಳ್ಳಿ  – ಬಿ. ಸೋಮಶೇಖರ್
    * ಸೊರಬ  – ಕುಮಾರ ಬಂಗಾರಪ್ಪ
    * ಸಾಗರ  – ಹರತಾಳು ಹಾಲಪ್ಪ
    * ಬೀದರ್  – ಸೂರ್ಯಕಾಂತ ನಾಗಮಾರಪಳ್ಳಿ
    * ಹೊನ್ನಾಳ್ಳಿ  – ರೇಣುಕಾಚಾರ್ಯ
    * ಬೀಳಗಿ  – ಮುರುಗೇಶ್ ನಿರಾಣಿ

    ಯಾವ ಪ್ರಮುಖರಿಗೆ ಟಿಕೆಟ್ ಇಲ್ಲ:

        ಕ್ಷೇತ್ರ                                     ಯಾರಿಗೆ ಇಲ್ಲ ..!                                        ಯಾರಿಗೆ ಸಿಕ್ತು..?
    * ತುಮಕೂರು ನಗರ                   – ಸೊಗಡು ಶಿವಣ್ಣ                                          – ಜ್ಯೋತಿ ಗಣೇಶ್
    * ಬ್ಯಾಡಗಿ                                 – ಸುರೇಶ್‍ಗೌಡ ಪಾಟೀಲ್ /ಶಿವರಾಜ್ ಸಜ್ಜನ್     – ವಿರೂಪಕ್ಷಪ್ಪ ಬಳ್ಳಾರಿ
    * ಸಾಗರ                                  – ಬೇಳೂರು ಗೋಪಾಲ ಕೃಷ್ಣ                            – ಹರತಾಳು ಹಾಲಪ್ಪ
    * ಕಲಬರುಗಿ ಉತ್ತರ                   – ಶಶಿಲ್ ನಮೋಶಿ                                          – ಚಂದ್ರಕಾಂತ್ ಬಿ. ಪಾಟೀಲ್
    * ದೇವರ ಹಿಪ್ಪರಗಿ                      – ಮಹದೇವಿ ನಡಹಳ್ಳಿ                                    – ಸೋಮನ್‍ಗೌಡ ಪಾಟೀಲ್
    * ಗದಗ                                    – ಶ್ರೀಶೈಲಪ್ಪ ಬಿದರೂರು                                 – ಅನಿಲ್ ಮೆಣಸಿನಕಾಯಿ
    * ಇಂಡಿ                                    – ರವಿಕಾಂತ್ ಪಾಟೀಲ್                                   – ದಯಾಸಾಗರ್
    * ನವಲಗುಂದ                          – ಮೋಹನ್ ಲಿಂಬಿಕಾಯಿ                                 – ಶಂಕರ್ ಮುನೇನಕೊಪ್ಪ ಪಾಟೀಲ್

    2ನೇ ಪಟ್ಟಿಯಲ್ಲಿನ ಹೊಸಮುಖಗಳು:

    * ನಂಜನಗೂಡು   – ಹರ್ಷವರ್ಧನ್ (ಮಾಜಿ ಶಾಸಕ ಶ್ರೀನಿವಾಸ್ ಪ್ರಸಾದ್ ಅಳಿಯ)
    * ವಿಜಯನಗರ   – ರವೀಂದ್ರ (ಬಿಬಿಎಂಪಿ ಮಾಜಿ ಕಾರ್ಪೊರೇಟರ್)
    * ಗದಗ  – ಅನಿಲ್ ಮೆಣಸಿನಕಾಯಿ
    * ಚಳ್ಳಕೆರೆ   – ಕೆ.ಟಿ ಕುಮಾರಸ್ವಾಮಿ (ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ)
    * ಕಲಘಟಗಿ   – ಮಹೇಶ್ ತೆಂಗಿನಕಾಯಿ (ಉದ್ಯಮಿ)

    ಪಕ್ಷಾಂತರಿಗಳಿಗೂ ಬಿಜೆಪಿ ಟಿಕೆಟ್ :

    * ಸೊರಬ – ಕುಮಾರ ಬಂಗಾರಪ್ಪ
    * ಮಹಾಲಕ್ಷ್ಮೀ ಲೇಔಟ್ – ನೆ.ಲ. ನರೇಂದ್ರ ಬಾಬು
    * ನರಸಿಂಹರಾಜ – ಸಂದೇಶ್ ಸ್ವಾಮಿ

    2ನೇ ಪಟ್ಟಿಯಲ್ಲಿನ ವಿಶೇಷತೆಯಾಗಿ ಬಿಜೆಪಿ ಗಂಡ ಹೆಂಡತಿ ಇಬ್ಬರಿಗೂ ಟಿಕೆಟ್ ನೀಡಿದೆ. ಮೊದಲ ಪಟ್ಟಿಯಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಪತ್ನಿ ಶಶಿಕಲಾ ಜೊಲ್ಲೆ ಟಿಕೆಟ್ ಪಡೆದರೆ, 2ನೇ ಪಟ್ಟಿಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಟಿಕೆಟ್ ಪಡೆದಿದ್ದಾರೆ.

    ಬಿಜೆಪಿಯ ಮೊದಲ ಮತ್ತು ಎರಡನೇ ಪಟ್ಟಿ ಸೇರಿ ಒಟ್ಟು 152 ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಹೆಚ್ಚು ಲಿಂಗಾಯತರಿಗೆ ಟಿಕೆಟ್ ನೀಡಲಾಗಿದೆ.

    ಯಾವ ಜಾತಿಯವರಿಗೆ ಎಷ್ಟು ಟಿಕೆಟ್?
    * ಲಿಂಗಾಯತ – 53
    * ಒಕ್ಕಲಿಗ – 27
    * ಎಸ್‍ಸಿ – 21
    * ಎಸ್‍ಟಿ – 13
    * ಒಬಿಸಿ – 21
    * ಬ್ರಾಹ್ಮಣ – 11
    * ರೆಡ್ಡಿ – 04
    * ಜೈನ – 01
    * ಕೊಡವ – 01

  • ಟಿಕೆಟ್ ತಪ್ಪಿದ್ದಕ್ಕೆ ಗೋಳೊ ಅಂತಾ ಗಳಗಳನೇ ಕಣ್ಣೀರಿಟ್ಟ ಬಿಜೆಪಿ ಮಾಜಿ ಎಂಎಲ್‍ಸಿ

    ಟಿಕೆಟ್ ತಪ್ಪಿದ್ದಕ್ಕೆ ಗೋಳೊ ಅಂತಾ ಗಳಗಳನೇ ಕಣ್ಣೀರಿಟ್ಟ ಬಿಜೆಪಿ ಮಾಜಿ ಎಂಎಲ್‍ಸಿ

    ಕಲಬುರಗಿ: ಇಂದು ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ತಪ್ಪಿದ್ದಕ್ಕೆ ಮಾಜಿ ಎಂಎಲ್‍ಸಿ ಶಶೀಲ್ ನಮೋಶಿ ಗಳಗಳನೇ ಅತ್ತಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಲಬುರಗಿ ಉತ್ತರದ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇತ್ತು. ಆದ್ರೆ ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಚಂದ್ರಕಾಂತ್ ಬಿ. ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಎಲ್ಲ ವಿಭಾಗಗಳಲ್ಲಿಯೂ ನಾನು ಸಮರ್ಥ ಅಭ್ಯರ್ಥಿಯಾಗಿದ್ದು, 1992ರಿಂದಲೂ ಪಕ್ಷದಲ್ಲಿದ್ದೇನೆ ಎಂದು ಹೇಳಿ ಭಾವುಕರಾಗಿ ಕಣ್ಣೀರು ಹಾಕಿದರು.

    ಇದಾದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ನಾನು ಯಾರ ವಿರುದ್ಧವೂ ಹೇಳಿಕೆಗಳನ್ನು ನೀಡಲ್ಲ. ಆದ್ರೆ ನನಗೆ ಮೋಸ ಆಗಿದ್ದು ಮಾತ್ರ ಸತ್ಯ. ಬಿಜೆಪಿ ಹೈಕಮಾಂಡ್ ನಡೆಸಿದ ಸರ್ವೆಯಲ್ಲಿ ನನ್ನ ಹೆಸರು ಉಲ್ಲೇಖಿಸಲಾಗಿದೆ ಎಂಬ ಮಾಹಿತಿಗಳು ನನಗೆ ಸಿಕ್ಕಿದ್ದವು. ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯನ್ನು ಕೆರೆದು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

  • ಬಿಜೆಪಿಯ ಎರಡನೇ ಲಿಸ್ಟ್ ಬಿಡುಗಡೆ: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

    ಬಿಜೆಪಿಯ ಎರಡನೇ ಲಿಸ್ಟ್ ಬಿಡುಗಡೆ: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

    ಬೆಂಗಳೂರು: ಒಂದೇ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಬಿಜೆಪಿ ತನ್ನ ಪೊಲಿಟಿಕಲ್ ಗೇಮ್ ಪ್ಲಾನ್ ಬದಲಿಸಿಕೊಂಡಿದ್ದು ಇಂದು ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 82 ಮಂದಿಗೆ ಟಿಕೆಟ್ ಸಿಕ್ಕಿದೆ.

    ರಾಜ್ಯಾಧ್ಯಕ್ಷ , ಸಂಸದರಾದ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಈ ಬಾರಿ ಕಣಕ್ಕಿಳಿಯಲಿರುವ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಏಪ್ರಿಲ್ 8ರಂದು ಬಿಡುಗಡೆ ಮಾಡಿತ್ತು.

     

    1. ಚಿಕ್ಕೊಡಿ-ಸದಲಗಾ -ಅಣ್ಣಾ ಸಾಹೇಬ್ ಜೊಲ್ಲೆ
    2. ಗೋಕಾಕ್ -ಅಶೋಕ್ ಪೂಜಾರಿ
    3. ಯಮಕನಮರಡಿ(ಎಸ್.ಟಿ) -ಮಾರುತಿ ಅಷ್ಟಗಿ
    4. ರಾಮದುರ್ಗ -ಮಹದೇವಪ್ಪ ಎಸ್
    5. ತೇರದಾಳ -ಸಿದ್ದು ಸವದಿ
    6. ಜಮಖಂಡಿ -ಶ್ರೀಕಾಂತ್ ಕುಲಕರ್ಣಿ
    7. ಬೀಳಗಿ -ಮುರುಗೇಶ್ ನಿರಾಣಿ
    8. ಬಾಗಲಕೋಟೆ -ವೀರಣ್ಣ ಚರಂತಿಮಠ್
    9. ಹುನಗುಂದ- ದೊಡ್ಡನಗೌಡ ಜಿ.ಪಾಟೀಲ್
    10. ದೇವರಹಿಪ್ಪರಗಿ -ಸೋಮನಗೌಡ ಪಾಟೀಲ್ ಸಾಸನೂರು

    11.ಇಂಡಿ -ದಯಾಸಾಗರ್ ಪಾಟೀಲ್
    12.ಜೇವರ್ಗಿ -ದೊಡ್ಡನಗೌಡ ಪಾಟೀಲ್ ನರಿಬೋಳ
    13.ಯಾದಗಿರಿ-ವೆಂಕಟರೆಡ್ಡಿ ಮುದನಾಳ್
    14.ಗುರುಮಿಟ್ಕಲ್ -ಸಾಯಿಬಣ್ಣ ಬೋರ್ ಬಂಡ
    15.ಸೇಡಂ-ರಾಜಕುಮಾರ್ ತೇಲ್ಕೂರು
    16. ಕಲ್ಬುರ್ಗಿ ಉತ್ತರ-ಚಂದ್ರಕಾಂತ್ ಬಿ.ಪಾಟೀಲ್
    17. ಬೀದರ್ -ಸೂರ್ಯಕಾಂತ್ ನಾಗರಮರಪಲ್ಲಿ
    18. ಭಾಲ್ಕಿ- ಡಿ.ಕೆ.ಸಿದ್ದರಾಮ
    19. ಮಸ್ಕಿ(ಎಸ್.ಟಿ)- ಬಸವನಗೌಡ ತುರಿವಿಹಳ್
    20. ಕನಕಗಿರಿ (ಎಸ್ ಸಿ) – ಬಸವರಾಜ್ ದಡೇಸಾಗೂರ್

    21. ಗಂಗಾವತಿ- ಕರಣ್ಣ ಮುನವಳ್ಳಿ
    22. ಯಲಬುರ್ಗಾ-ಹಾಲಪ್ಪ ಬಸಪ್ಪ ಆಚಾರ್
    23. ಕೊಪ್ಪಳ – ಸಿ.ವಿ.ಚಂದ್ರಶೇಖರ್
    24. ಶಿರಹಟ್ಟಿ (ಎಸ್ ಸಿ)-ರಾಮಣ್ಣ ಲಮಾಣಿ
    25. ಗದಗ -ಅನಿಲ್ ಮೆಣಸಿನಕಾಯಿ
    26. ರೋಣ-ಕಳಕಪ್ಪ ಬಂಡಿ
    27. ನರಗುಂದ- ಸಿ.ಸಿ.ಪಾಟೀಲ್
    28. ನವಲಗುಂದ- ಶಂಕರ್ ಗೌಡ ಪಾಟೀಲ್ ಮುನೇನಕೊಪ್ಪ
    29. ಕಲಘಟಕಿ- ಮಹೇಶ್ ತೆಂಗಿನಕಾಯಿ
    30. ಹಳಯಾಳ-ಸುನಿಲ್ ಹೆಗಡೆ

    31. ಭಟ್ಕಳ್- ಸುನಿಲ್ ನಾಯಕ್
    32. ಯಲ್ಲಾಪುರ-ವಿ.ಎಸ್.ಪಾಟೀಲ್
    33. ಬೈದಗಿ- ವೀರೂಪಾಕ್ಷಪ್ಪ ಬಳ್ಳಾರಿ
    34. ಹಡಗಲಿ (ಎಸ್ ಸಿ) -ಚಂದ್ರನಾಯಕ್
    35. ಹಗರಿಬೊಮ್ಮನಹಳ್ಳಿ (ಎಸ್ ಸಿ)- ನೇಮಿರಾಜ್ ನಾಯಕ್
    36. ಸಿರಗುಪ್ಪ (ಎಸ್ ಟಿ)- ಎಂ.ಎಸ್.ಸೋಮಲಿಂಗಪ್ಪ
    37. ಬಳ್ಳಾರಿ (ಎಸ್ ಟಿ)- ಸಣ್ಣಫಕೀರಪ್ಪ
    38. ಬಳ್ಳಾರಿ ನಗರ- ಜಿ. ಸೋಮಶೇಖರ ರೆಡ್ಡಿ
    39. ಚಳ್ಳಕೆರೆ (ಎಸ್ ಟಿ) -ಕೆ.ಟಿ.ಕುಮಾರಸ್ವಾಮಿ
    40. ಹೊಳಲ್ಕೆರೆ (ಎಸ್ ಸಿ)- ಎಂ.ಚಂದ್ರಪ್ಪ

    41. ಚನ್ನಗಿರಿ- ಮದಾರು ವಿರೂಪಾಕ್ಷಪ್ಪ
    42. ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ
    43. ಶಿವಮೊಗ್ಗ ಗ್ರಾಮಾಂತರ (ಎಸ್ ಸಿ)- ಅಶೋಕ್ ನಾಯಕ್
    44. ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
    45. ಸೊರಬ – ಕುಮಾರ್ ಬಂಗಾರಪ್ಪ
    46. ಸಾಗರ – ಹರತಾಳ್ ಹಾಲಪ್ಪ
    47. ಬೈಂದೂರು – ಬಿ.ಸುಕುಮಾರ್ ಶೆಟ್ಟಿ
    48. ಕಡೂರು – ಬೆಳ್ಳಿ ಜಯಪ್ರಕಾಶ್
    49. ಚಿಕ್ಕನಾಯಕನಹಳ್ಳಿ – ಜೆ.ಸಿ.ಮಧುಸ್ವಾಮಿ
    50. ತಿಪಟೂರು – ಬಿ.ಸಿ.ನಾಗೇಶ್
    50. ತುರುವೇಕರೆ – ಮಸಾಲೆ ಜಯರಾಂ

    51. ತುಮಕೂರು ನಗರ – ಜಿ.ಬಿ.ಜ್ಯೋತಿ ಗಣೇಶ್
    52. ಕೊರಟಗೆರೆ (ಎಸ್ ಸಿ) – ವೈ.ಹುಚ್ಚಯ್ಯ
    53. ಗುಬ್ಬಿ – ಬೆಟ್ಟಸ್ವಾಮಿ
    54. ಸಿರಾ – ಬಿ.ಕೆ.ಮಂಜುನಾಥ್
    55. ಮಧುಗಿರಿ- ಎಂ.ಆರ್.ಹುಳಿನಾಯ್ಕರ್
    56. ಚಿಕ್ಕಬಳ್ಳಾಪುರ- ಡಾ.ಮಂಜುನಾಥ್
    57. ಬಂಗಾರಪೇಟೆ(ಎಸ್.ಸಿ) – ಬಿ.ಪಿ.ವೆಂಟಕಮುನಿಯಪ್ಪ
    58. ಕೋಲಾರ- ಓಂ ಶಕ್ತಿ ಚಲಪತಿ
    59. ಮಾಲೂರು- ಎಸ್.ಎನ್. ಕೃಷ್ಣಯ್ಯ ಶೆಟ್ಟಿ
    60. ಕೆ.ಆರ್. ಪುರಂ -ನಂದೀಶ್ ರೆಡ್ಡಿ

    61. ಬ್ಯಾಟರಾಯನಪುರ – ಎ. ರವಿ
    62. ಮಹಾಲಕ್ಷ್ಮಿಲೇಔಟ್- ಎನ್.ಎಲ್.ನರೇಂದ್ರಬಾಬು
    63. ಶಿವಾಜಿನಗರ- ಕಟ್ಟಾಸುಬ್ರಮಣ್ಯ ನಾಯ್ಡು
    64. ಶಾಂತಿನಗರ- ವಾಸುದೇವಮೂರ್ತಿ
    65. ವಿಜಯನಗರ- ಹೆಚ್.ರವೀಂದ್ರ
    66. ದೊಡ್ಡಬಳ್ಳಾಪುರ- ಜೆ.ನರಸಿಂಹ ಸ್ವಾಮಿ
    67. ಮಾಗಡಿ- ಹನುಮಂತರಾಜು
    68. ಮಳವಳ್ಳಿ (ಎಸ್.ಸಿ)- ಬಿ.ಸೋಮಶೇಖರ್
    69. ಅರಕಲಗೂಡು- ಹೆಚ್.ಯೋಗಾ ರಮೇಶ್
    70. ಬೆಳ್ತಂಗಡಿ- ಹರೀಶ್ ಪೂಂಜಾ

    71. ಮೂಡಬಿದ್ರಿ- ಉಮಾನಾಥ್ ಕೋಟ್ಯಾನ್
    72. ಬಂಟ್ವಾಳ- ಯು.ರಾಜೇಶ್ ನಾಯಕ್
    73. ಪುತ್ತೂರು- ಸಂಜೀವ್ ಮಠಂದೂರು
    74. ಪಿರಿಯಾಪಟ್ಟಣ- ಎಸ್.ಮಂಜುನಾಥ್
    75. ಹೆಗ್ಗಡದೇವನಕೋಟೆ- ಸಿದ್ದರಾಜು
    76. ನಂಜನಗೂಡು(ಎಸ್.ಸಿ)- ಹರ್ಷವರ್ಧನ
    77. ನರಸಿಂಹರಾಜ- ಎಸ್.ಸತೀಶ್(ಸಂದೇಶ್ ಸ್ವಾಮಿ)
    78. ಹನೂರು- ಡಾ.ಪ್ರೀತಂ ನಾಗಪ್ಪ
    79. ಕೊಳ್ಳೇಗಾಲ- ಜಿ.ಎನ್. ನಂಜುಂಡಸ್ವಾಮಿ
    80. ಚಾಮರಾಜನಗರ -ಪ್ರೊ. ಮಲ್ಲಿಕಾರ್ಜುನಪ್ಪ
    81. ಗುಂಡ್ಲುಪೇಟೆ- ಹೆಚ್.ಎಸ್.ನಿರಂಜನ್ ಕುಮಾರ್

  • ಹೊಸ ಮುಖಗಳಿಗೆ ಸಿಕ್ತು ಕೈ ಟಿಕೆಟ್: 2013ರಲ್ಲಿ ಇಲ್ಲಿ ಗೆದ್ದವರು ಯಾರು?

    ಹೊಸ ಮುಖಗಳಿಗೆ ಸಿಕ್ತು ಕೈ ಟಿಕೆಟ್: 2013ರಲ್ಲಿ ಇಲ್ಲಿ ಗೆದ್ದವರು ಯಾರು?

    ಬೆಂಗಳೂರು: 2018ರ ಚುನಾವಣೆಗೆ ರಣತಂತ್ರ ಹೆಣೆಯುತ್ತಿರುವ ಕಾಂಗ್ರೆಸ್ ಈಗ 12 ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ಮೂಲಕ ಎದುರಾಳಿ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಲು ಮುಂದಾಗಿದೆ.

    ಕಲಬುರಗಿ ಗ್ರಾಮೀಣ, ಕಲಬುರಗಿ ಉತ್ತರ, ಖಾನಾಪುರ, ಕೆಜಿಎಫ್ ಮತ್ತು ಚಿಂತಾಮಣಿ, ಜಗಳೂರು, ಬೇಲೂರು, ಬೆಂಗಳೂರಿನ ಮಹಾಲಕ್ಷ್ಮಿಲೇಔಟ್, ರಾಜಾಜಿನಗರ, ಸಿ.ವಿ.ರಾಮನ್‍ನಗರ, ಬೊಮ್ಮನಹಳ್ಳಿ, ಜಯನಗರ ಕ್ಷೇತ್ರಗಳಿಂದ ಹೊಸ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.

    1 ಕಲಬುರಗಿ ಗ್ರಾಮೀಣ: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಮೊದಲ ಚುನಾವಣೆಯಲ್ಲಿಯೇ ಬಿಜೆಪಿ ಅಭ್ಯರ್ಥಿ ರೇಣು ನಾಯಕ್ ಬೆಳಮಗಿ ಗೆಲುವು ಸಾಧಿಸಿದ್ದರು. 2013 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ರಾಮಕೃಷ್ಣ ಅವರು 40,075 ಮತ ಪಡೆದರೆ, ರೇಣು ನಾಯಕ್ 32,866 ಮತ ಪಡೆದು ಪರಾಭವಗೊಂಡರು. ಆದರೆ, ಕೆಲ ದಿನಗಳ ಹಿಂದೆ ಬಿಜೆಪಿ ಸೇರಿದ್ದ ಅವರು ಮತ್ತೆ ಕಾಂಗ್ರೆಸ್‍ಗೆ ಸೇರಿಕೊಂಡರೂ ಅವರ ಬದಲಾಗಿ ಸ್ಥಳೀಯ ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಅವರಿಗೆ ಟಿಕೆಟ್ ನೀಡಿಲಾಗಿದೆ.

    2 ಕಲಬುರಗಿ ಉತ್ತರ: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಪ್ರಾರಂಭದಿಂದಲೇ ಇದು ಕಾಂಗ್ರೆಸ್ ಭದ್ರಕೋಟೆಯಾಗಿದೆ. 2008 ಮತ್ತು 2013ರ ಚುನಾವಣೆಯಲ್ಲಿ ಖಮರ್ ಉಲ್ಲ್ ಇಸ್ಲಾಂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಖಮರ್ ಉಲ್ ಇಸ್ಲಾಂ 50,498 ಮತ ಪಡೆದರೆ, ಕೆಜೆಪಿ ಅಭ್ಯರ್ಥಿ ನಾಶಿರ್ ಹುಸೇನ್ ಉಸ್ತಾದ್ 30,377 ಮತ ಗಳಿಸಿದ್ದರು. ಇತ್ತೀಚೆಗೆ ಖಮರ್ ಉಲ್ಲ್ ಇಲ್ಸಾಂ ನಿಧನರಾಗಿದ್ದರಿಂದ ಅವರ ಪತ್ನಿ ಫಾತೀಮಾ ಅವರಿಗೆ ಟಿಕೆಟ್ ನೀಡಲಾಗಿದೆ.

    3 ಬೇಲೂರು: ಹಾಸನದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲಿ ವೈ.ಎನ್.ರುದ್ರೇಶ್‍ಗೌಡ ಆಯ್ಕೆಯಾಗಿದ್ದರು. 2013ರ ಚುನಾವಣೆಯಲ್ಲಿ ರುದ್ರೇಶ್‍ಗೌಡ ಅವರು 48,802 ಮತ ಪಡೆದಿದ್ದರೆ, ಜೆಡಿಎಸ್ ಅಭ್ಯರ್ಥಿ ಕೆ.ಎಸ್. ಲಿಂಗೇಶ 41,273 ಮತ ಗಳಿಸಿದ್ದರು. ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ರುದ್ರೇಶ್‍ಗೌಡ ಪತ್ನಿ ಕೀರ್ತನಾ ಅವರಿಗೆ ಅನುಕಂಪದ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ.

    4 ಮಹಾಲಕ್ಷ್ಮಿಲೇಔಟ್: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರದ ಇದಾಗಿದೆ. ಮೊದಲ ಚುನಾವಣೆಯಲ್ಲಿಯೇ ಸ್ಥಾನ ಪಡೆದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎನ್.ಎಲ್.ನರೇಂದ್ರಬಾಬು ಅವರು 2015ರ ಚುನಾವಣೆಯಲ್ಲಿ 50,757 ಮತ ಪಡೆದು ಸೋತರು. ಜೆಡಿಎಸ್ ಅಭ್ಯರ್ಥಿ ಗೋಪಾಲಯ್ಯ. ಕೆ. 66,127 ಮತ ಗಳಿಸಿ ಗೆಲವು ಸಾಧಿಸಿದ್ದರು. ಆದರೆ, ಎನ್.ಎಲ್.ನರೇಂದ್ರಬಾಬು ಅವರು ಬಿಜೆಪಿಗೆ ಸೇರಿದ್ದರಿಂದ ಎನ್.ಎಸ್.ಯು.ಐ ಮಂಜುನಾಥ್ ಗೌಡ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.

    5 ರಾಜಾಜಿನಗರ: ಕಳೆದ ಎರಡು ವರ್ಷಗಳಿಂದ ಈ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಹೆಚ್ಚು ಮತಗಳ ಅಂತರದಲ್ಲಿ ಸೋಲುತ್ತಿರುವ ಕಾಂಗ್ರೆಸ್ ಈ ಬಾರಿ ಬಿಬಿಎಂಪಿ ಮಾಜಿ ಮೇಯರ್ ಪದ್ಮಾವತಿ ಅವರನ್ನು ಕಣಕ್ಕಿಳಿಸುತ್ತಿದೆ. 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಸುರೇಶಕುಮಾರ ಅವರು 39,297 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಆರ್.ಮಂಜುಳಾ ನಾಯ್ಡು 24,482 ಮತ ಗಳಿಸಿದ್ದರು.

    6 ಸಿ.ವಿ.ರಾಮನ್‍ನಗರ: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ ಇದಾಗಿದೆ. ಈ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು, ಅದನ್ನು ಈ ಬಾರಿ ಒಡೆಯಲು ಕಾಂಗ್ರೆಸ್ ಬಿಬಿಎಂಪಿ ಮೇಯರ್ ಸಂಪತ್‍ರಾಜ್ ಅವರನ್ನು ಕಣಕ್ಕಿಳಿಸಿದೆ. 2013ರ ಚುನಾವಣೆಯಲ್ಲಿ ಎಸ್.ರಾಹುಲ್ ಅವರು 53,364 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪಿ.ರಮೇಶ ಅವರು 44,945 ಮತ ಗಳಿಸಿದ್ದರು.

    7 ಬೊಮ್ಮನಹಳ್ಳಿ: 2008ರಲ್ಲಿ ರಚನೆಯಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಕಳೆದ ಎರಡು ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿ ಎಂ.ಸತೀಶರೆಡ್ಡಿ ಆಯ್ಕೆಯಾಗಿದ್ದಾರೆ. ಈ ಭದ್ರಕೋಟೆ ಒಡೆಯಲು ಕಾಂಗ್ರೆಸ್ ಸುಷ್ಮಾರಾಜ್ ಗೋಪಾಲರೆಡ್ಡಿ ಅವರನ್ನು ಕಣಕ್ಕಿಳಿಸುತ್ತಿದೆ. 2013ರ ಚುನಾವಣೆಯಲ್ಲಿ ಎಂ.ಸತೀಶ್‍ರೆಡ್ಡಿ 86,552 ಮತಗಳನ್ನು ಪಡೆದಿದ್ದರೆ, ರಾಗಭೂಷನ್.ಸಿ 60,700 ಮತ ಗಳಿಸಿದ್ದರು.

    8 ಜಗಳೂರು: ದಾವಣಗೆರೆಯ ಕಾಂಗ್ರೆಸ್ ಭದ್ರಕೋಟೆಯಾಗಿರುವ ಈ ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ರಾಜೇಶ್ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಟಿಕೆಟ್ ಕೈ ತಪ್ಪಿದ್ದು, ಪುಷ್ಪಾ ಅವರಿಗೆ ನೀಡಲಾಗಿದೆ. 2013ರ ಚುನಾವಣೆಯಲ್ಲಿ ಎಚ್.ಪಿ. ರಾಜೇಶ್ ಅವರು 77,805 ಮತ ಪಡೆದಿದ್ದರೆ, ಕೆಜಿಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ 40,915 ಮತ ಗಳಿಸಿದ್ದರು.

    9 ಖಾನಾಪುರ: ಪಕ್ಷೇತರ ಅಭ್ಯರ್ಥಿಗಳೇ ಹೆಚ್ಚಾಗಿ ಆಯ್ಕೆಯಾಗಿರುವ ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಹೊಸ ಆಯ್ಕೆ ಎನ್ನುವಂತೆ ಐಪಿಎಸ್ ಅಧಿಕಾರಿ ಹೇಮಂತ್ ನಿಬಾಳ್ಕರ್ ಪತ್ನಿ ಅಂಜಲಿ ನಿಂಬಾಳ್ಕರ್ ಅವರನ್ನು ಕಣಕ್ಕಿಳಿಸುತ್ತಿದೆ. 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರವಿಂದ ಚಂದ್ರಕಾಂತ ಪಾಟೀಲ 37,055 ಮತ ಪಡೆದಿದ್ದರೆ, ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ರಫಿಕ್ ಖತಲಬ್ ಖಾನಾಪುರಿ 20,903 ಮತಗಳನ್ನು ಗಳಿಸಿದ್ದರು.

    10 ಜಯನಗರ: ಕಳೆದ ಎರಡು ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್.ವಿಜಯಕುಮಾರ ಅವರು ಆಯ್ಕೆಯಾಗಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಗೃಹ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ. 2013ರ ಚುನಾವಣೆಯಲ್ಲಿ ಬಿ.ಎನ್.ವಿಜಯಕುಮಾರ 43,990 ಮತ ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ವೇಣುಗೋಪಾಲ 31,678 ಮತ ಗಳಿಸಿದ್ದರು.

    11 ಕೆಜಿಎಫ್: 1967ರ ವಿಧಾನ ಸಭಾ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಈ ಮತಕ್ಷೇತ್ರದಲ್ಲಿ ಅಧಿಕಾರ ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸುವ ಉದ್ದೇಶದಿಂದ ರೂಪಾ ಶಶಿಧರ್ ಅವರನ್ನು ಕಣಕ್ಕಿಳಿಸುತ್ತಿದೆ. 2013ರ ಚುನಾವಣೆಯಲ್ಲಿ ವೈ.ರಾಮಕ್ಕ 55,014 ಮತ ಪಡೆದಿದ್ದರೆ, ಜೆಡಿಎಸ್ ಎಮ್. ಭಕ್ತವತ್ಸಲಂ 28,992 ಮತ ಗಳಿಸಿದ್ದರು.

    12 ಚಿಂತಾಮಣಿ: ಪಕ್ಷೇತರ ಅಭ್ಯರ್ಥಿಗಳೇ ಹೆಚ್ಚಾಗಿ ಆಯ್ಕೆಯಾಗಿರುವ ಕೋಲಾರದ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ಸ್ಥಾಪಿಸಲು ವಾಣಿ ಕೃಷ್ಣಾರೆಡ್ಡಿ ಅವರನ್ನು ಕಣಕ್ಕಿಳಿಸಲಾಗುತ್ತಿದೆ. 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜೆ.ಕೆ.ಕೃಷ್ಣಾರೆಡ್ಡಿ ಅವರು 68,950 ಮತ ಪಡೆದಿದ್ದರೆ, ಪಕ್ಷೇತರ ಅಭ್ಯರ್ಥಿ ಡಾ.ಎಂ.ಸಿ. ಸುಧಾಕರ 67254 ಮತ ಗಳಿಸಿದ್ದರು.

    ಹೊಸ ಮುಖಗಳು
    * ಗುಲ್ಬರ್ಗಾ ಗ್ರಾಮೀಣ – ವಿಜಯಕುಮಾರ್
    * ಗುಲ್ಬರ್ಗಾ ಉತ್ತರ – ಫಾತೀಮ, ಖಮರುಲ್ಲಾ ಇಸ್ಲಾಂ ಪತ್ನಿ
    * ಬೇಲೂರು – ಕೀರ್ತನಾ, ರುದ್ರೇಶ್‍ಗೌಡ ಪತ್ನಿ
    * ಮಹಾಲಕ್ಷ್ಮಿಲೇಔಟ್ – ಎನ್.ಎಸ್.ಯು.ಐ ಮಂಜುನಾಥ್ ಗೌಡ
    * ರಾಜಾಜಿನಗರ – ಪದ್ಮಾವತಿ, ಮಾಜಿ ಮೇಯರ್
    * ಸಿ.ವಿ ರಾಮನ್‍ನಗರ – ಸಂಪತ್‍ರಾಜ್, ಮೇಯರ್
    * ಬೊಮ್ಮನಹಳ್ಳಿ – ಸುಷ್ಮಾರಾಜ್ ಗೋಪಾಲರೆಡ್ಡಿ
    * ಜಗಳೂರು – ಪುಷ್ಪಾ
    * ಖಾನಾಪುರ – ಶ್ರೀ. ಅಂಜಲಿ ನಿಂಬಾಳ್ಕರ್
    * ಜಯನಗರ – ಸೌಮ್ಯ ರೆಡ್ಡಿ
    * ಬೊಮ್ಮನಹಳ್ಳಿ – ಸುಷ್ಮಾರಾಜಗೋಪಾಲರೆಡ್ಡಿ
    * ಬೇಲೂರು – ಕೀರ್ತನಾ
    * ಕೆಜಿಎಫ್ – ರೂಪಾ ಶಶಿಧರ್
    * ಚಿಂತಾಮಣಿ – ವಾಣಿ ಕೃಷ್ಣಾರೆಡ್ಡಿ

  • ಜೆಡಿಎಸ್‍ಗೆ ಬೆಂಬಲ ಸೂಚಿಸಿದ ಸಂಸದ ಅಸಾದುದ್ದೀನ್ ಓವೈಸಿ

    ಜೆಡಿಎಸ್‍ಗೆ ಬೆಂಬಲ ಸೂಚಿಸಿದ ಸಂಸದ ಅಸಾದುದ್ದೀನ್ ಓವೈಸಿ

    ಬೆಂಗಳೂರು: ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆಸಿ.ಚಂದ್ರಶೇಖರ್ ರಾವ್ ಹಾಗೂ ಬಿಎಸ್‍ಪಿ ನಾಯಕಿ ಮಾಯಾವತಿ ಜೆಡಿಎಸ್‍ಗೆ ಬೆಂಬಲ ಸೂಚಿಸಿದ ಬೆನ್ನಲ್ಲೆ ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್ ಮುಸಲ್ಮಿನ್(ಎಐಎಂಐಎಂ) ಪಕ್ಷದ ನಾಯಕ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಜೆಡಿಎಸ್‍ಗೆ ಮತ್ತೊಂದು ಪ್ರಾದೇಶಿಕ ಪಕ್ಷದ ಬೆಂಬಲ ಸಿಕ್ಕಂತಾಗಿದೆ.

    ದೇವೇಗೌಡರಿಗೆ ಸಾಥ್ ನೀಡುವುದಾಗಿ ನಾನು ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿರುವೆ. ಈ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದ ಅವರು, ಬಿಜೆಪಿಯನ್ನು ತಡೆಯುವ ಶಕ್ತಿ ಕಾಂಗ್ರೆಸ್‍ಗೆ ಇಲ್ಲ. ದೇಶದ ಹಾಗೂ ಕರ್ನಾಟಕ ರಾಜ್ಯದ ಹಿತಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಅವರು ಹೇಳಿದ್ದಾರೆ.

    ರಾಷ್ಟ್ರ ಮಟ್ಟದಲ್ಲಿ ತೃತಿಯ ರಂಗ ಸ್ಥಾಪನೆ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ಟಿಆರ್ ಎಸ್ ಪಕ್ಷದ ನಾಯಕ ಕೆಸಿ ಚಂದ್ರಶೇಖರ್ ರಾವ್(ಕೆಸಿಆರ್) ಕಳೆದ ಶುಕ್ರವಾರ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ನಗರದ ಪದ್ಮನಾಭ ನಗರದ ಎಚ್‍ಡಿಡಿ ನಿವಾಸಕ್ಕೆ ಆಗಮಿಸಿದ ಚಂದ್ರಶೇಖರ್ ರಾವ್ ಅವರು ಸುಮಾರು 2 ಗಂಟೆಕಾಲ ದೇವೇಗೌಡರ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ, ನಟ ಪ್ರಕಾಶ್ ರೈ, ಟಿಆರ್ ಎಸ್ ಪಕ್ಷದ ಸಂಸದರು, ಶಾಸಕರು ಚರ್ಚೆಯಲ್ಲಿ ಭಾಗಿಯಾಗಿದ್ದರು.

    ಎಚ್‍ಡಿಡಿ ನಿವಾಸದಲ್ಲೇ ಮಧ್ಯಾಹ್ನದ ಭೋಜನ ಸೇವಿಸಿದ ಕೆಸಿಆರ್ ಕರ್ನಾಟಕ ವಿಧಾನಸಭಾ ಚನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಕರ್ನಾಟಕದಲ್ಲಿರುವ ಎಲ್ಲ ತೆಲುಗು ಭಾಷಿಕ ಮತದಾರರಿಗೆ ಮನವಿ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೇ ಕುಮಾರಸ್ವಾಮಿ ಅವರು ಎಲ್ಲೆಲ್ಲಿ ನನ್ನ ಅಗತ್ಯ ಇದೆ ಎಂದು ಕರೆಯುತ್ತಾರೋ ಅಲ್ಲಿಗೆ ನಾನು ಪ್ರಚಾರಕ್ಕೆ ಬರುತ್ತೇನೆ ಎಂದು ತಿಳಿಸಿದ್ದರು.

  • ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ

    ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ

    ಚಿಕ್ಕಮಗಳೂರು: ಇಂದು ಬೆಳಗ್ಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಕಾಂಗ್ರೆಸ್ ಮುಖಂಡರ  ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಮುರುಳಿ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರಾದ ಸುಬ್ರಹ್ಮಣ್ಯ ಶೆಟ್ಟಿ ಮತ್ತು ಸತೀಶ್ ಎಂಬವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಕೊಪ್ಪದ ತಿಲಕ್ ನಗರದ ಬಳಿ ಇರುವ ಸುಧೀರ್ ಅವರ ಮನೆ ಮೇಲೆ ದಾಳಿ ನಡೆದಿದೆ.

    ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಕೊಪ್ಪದಲ್ಲಿ ಐಟಿ ದಾಳಿ ನಡೆದಿದ್ದು, ಐಟಿ ಅಧಿಕಾರಿಗಳು ಮೂವರು ಕಾಂಗ್ರೆಸ್ ಮುಖಂಡರ ಮನೆಯಲ್ಲಿ ದಾಖಲೆ ಪತ್ರ ಪರಿಶೀಲನೆ ನಡೆಸುತ್ತಿದ್ದಾರೆ.

  • ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡದ ಕಾಂಗ್ರೆಸ್ ಹೈಕಮಾಂಡ್

    ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡದ ಕಾಂಗ್ರೆಸ್ ಹೈಕಮಾಂಡ್

    ಬೆಂಗಳೂರು: 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರು ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ.

    ಬೆಂಗಳೂರಿನ ಶಾಂತಿನಗರ, ಕಿತ್ತೂರು, ನಾಗಾಠಾಣ, ಸಿಂಧಗಿ, ರಾಯಚೂರು ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿಲ್ಲ.

    1. ಶಾಂತಿನಗರ: 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಎನ್.ಎ.ಹ್ಯಾರೀಸ್ ಗೆಲುವನ್ನು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಜೆಡಿಎಸ್‍ನ ಕೆ.ವಾಸುದೇವ ಮೂರ್ತಿ 34,137 ಮತಗಳಿಸಿದ್ರೆ, ಹ್ಯಾರಿಸ್ 54,342 ಮತಗಳನ್ನು ಪಡೆದಿದ್ರು.

    2. ಕಿತ್ತೂರು: ಕಾಂಗ್ರೆಸ್‍ನ ಹಾಲಿ ಶಾಸಕರಾಗಿರುವ ಬಸನಗೌಡ ಇನಾಮದಾರ ಅವರ ಟಿಕೆಟ್ ನ್ನು ಹೈಕಮಾಂಡ್ ಘೋಷಣೆ ಮಾಡಿಲ್ಲ. 2013ರ ಚುನಾವಣೆಯಲ್ಲಿ ಬಿಜೆಪಿ ಸುರೇಶ್ ಶಿವರುದ್ರಪ್ಪ ಮಾರಿಹಾಳ 35,634 ಮತ ಪಡೆದಿದ್ರೆ, ಬಸನಗೌಡ ಇನಾಮದಾರ 53,924 ವೋಟ್ ಪಡೆದು ಗೆಲವನ್ನು ತಮ್ಮದಾಗಿಸಿಕೊಂಡಿದ್ರು.

    3. ನಾಗಠಾಣಾ: 2008ರಲ್ಲಿ ರಚಿತವಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, 2008ರಲ್ಲಿ ಬಿಜೆಪಿಯ ವಿಠಲ್ ದೋಂಡಿಬಾ ಜಯ ಸಾಧಿಸಿದ್ದರೆ, 2013ರಲ್ಲಿ ಕಾಂಗ್ರೆಸ್ ನ ರಾಜು ಆಲಗೂರ ಗೆಲು ಸಾಧಿಸಿದ್ರು. 2013ರಲ್ಲಿ ಕಾಂಗ್ರೆಸ್ ನ ರಾಜು ಆಲಗೂರು 45,570 ಮತಗಳನ್ನು ಪಡೆದಿದ್ದರೆ ಜೆಡಿಎಸ್‍ನ ದೇವಾನಂದ್ ಚವ್ಹಾನ್ 44,903 ಮತ ಪಡೆದಿದ್ರು.

    4. ಸಿಂಧಗಿ: 2004, 2008 ಮತ್ತು 2013ರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೆ ಗೆಲವನ್ನು ಸಾಧಿಸಿದ್ದಾರೆ. ಈ ಮೂರು ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್ ನ ಮಲ್ಲಪ್ಪ ಮನಗೂಳಿ ಪ್ರಬಲ ಪೈಪೋಟಿಯನ್ನು ನೀಡುತ್ತಾ ಬಂದಿದ್ದಾರೆ. 2013ರ ಚುನಾವಣೆಯಲ್ಲಿ ಹಾಲಿ ಶಾಸಕ ರಮೇಶ್ ಭುಸನೂರ 37,834 ಮತ ಪಡೆದ್ರೆ, ಸಮೀಪದ ಸ್ಪರ್ಧಿ ಮಲ್ಲಪ್ಪ ಮನಗೂಳಿ 37,082 ಮತ ಪಡೆದಿದ್ದರು.

    5. ರಾಯಚೂರು: ರಾಯಚೂರು ವಿಧಾನಸಭಾ ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸೈಯದ್ ಯಾಸೀನ್, ಜೆಡಿಎಸ್ ನ ಶಿವರಾಜ್ ಪಾಟೀಲ್ ಎದುರು ಸೋಲಿನ ರುಚಿಯನ್ನು ಕಂಡಿದ್ದರು. ಸೈಯದ್ ಯಾಸೀನ್ 37,392 ಮತ ಪಡೆದಿದ್ರೆ, ಶಿವರಾಜ್ ಪಾಟೀಲ್ 45,263 ಮತಗಳನ್ನು ಗಳಿಸಿ ಶಾಸಕರಾಗಿದ್ದರು.

    6.ಮೇಲುಕೋಟೆ: ಈ ವಿಧಾನಸಭಾ ಕ್ಷೇತ್ರದಲ್ಲಿ ರೈತಪರ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ರು. 2008ರಲ್ಲಿ ರಚಿತವಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, 2013ರಲ್ಲಿ ಪುಟ್ಟಣ್ಣಯ್ಯ ವಿರುದ್ಧ ಜೆಡಿಎಸ್ ಸಿಎಸ್ ಪುಟ್ಟರಾಜು ಸ್ಪರ್ಧಿಸಿ ಸೋಲನ್ನಪ್ಪಿದ್ದರು.

    ಈ ಆರು ಕ್ಷೇತ್ರಗಳ ಟಿಕೆಟ್ ಮಾತ್ರ ಕಾಂಗ್ರೆಸ್ ಘೋಷಣೆ ಮಾಡಿಲ್ಲ.

  • ಕೊನೆಗೂ ರಿಲೀಸ್ ಆಯ್ತು ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ -ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಕೊನೆಗೂ ರಿಲೀಸ್ ಆಯ್ತು ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ -ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    – ಸಿಎಂಗೆ ಬದಾಮಿ ಇಲ್ಲ; ಚಾಮುಂಡಿಯೇ ಗತಿ

    ನವದೆಹಲಿ: ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಪಟ್ಟಿ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿತ್ತು, ಆದೆ ಈಗ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಎಲ್ಲಾ 218 ಕ್ಷೇತ್ರಗಳ ಪಟ್ಟಿ ರಿಲೀಸ್ ಮಾಡಿದೆ. ಆದ್ರೆ ಆರು ಕ್ಷೇತ್ರಗಳ ಪಟ್ಟಿ ಮಾತ್ರ ರಿಲೀಸ್ ಆಗಿಲ್ಲ. ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿಯಿಂದ ಮಾತ್ರ ಕಣಕ್ಕಿಳಿಯುತ್ತಾರೆ. ಬದಾಮಿಯಿಂದ ಸಿಎಂಗೆ ಟಿಕೆಟ್ ಕೊಡೋದು ಬೇಡ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ.

    ಹೆಚ್.ಎಂ.ರೇವಣ್ಣಗೆ ಚನ್ನಪಟ್ಟಣದ ಟಿಕೆಟ್ ಸಿಕ್ಕಿದೆ. ಇನ್ನೋರ್ವ ಎಂಎಲ್‍ಸಿ ಎಂ.ಆರ್.ಸೀತಾರಾಮ್ ಮಲ್ಲೇಶ್ವರಂನಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಇನ್ನು ವಯಸ್ಸು, ಆರೋಗ್ಯ ಮತ್ತು ಇತರೆ ಕಾರಣಗಳ ನೆಪ ಒಡ್ಡಿ ಓರ್ವ ಮಂತ್ರಿಯೂ ಸೇರಿದಂತೆ ಹಲವು ಮಾಜಿ ಮಂತ್ರಿಗಳು, ಶಾಸಕರಿಗೆ ಟಿಕೆಟ್ ನೀಡಿಲ್ಲ. ಆದಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ.

    ಸಿಎಂ ಸಿದ್ದರಾಮಯ್ಯ ಸೇರಿ ಹಲವು ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಮಕ್ಕಳನ್ನು ಗೆಲ್ಲಿಸಿಕೊಂಡು ಬರುವ ರಾಜಕಾರಣಿಗಳ ಬಲಾಬಲವನ್ನು ಅಳೆದೂತೂಗಿದ ಸ್ಕ್ರೀನಿಂಗ್ ಕಮಿಟಿ ಕೆಲವರ ಮಕ್ಕಳಿಗೆ ಮಾತ್ರ ಟಿಕೆಟ್ ನೀಡಿದೆ.

     

  • ಬೆಂಗ್ಳೂರು, ದಾವಣಗೆರೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಣ-ಬೆಳಗಾವಿಯಲ್ಲಿ ಬಿಜೆಪಿ, ಎಂಇಪಿಯ ಶಾಲು, ಕ್ಯಾಪ್ ವಶಕ್ಕೆ

    ಬೆಂಗ್ಳೂರು, ದಾವಣಗೆರೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಣ-ಬೆಳಗಾವಿಯಲ್ಲಿ ಬಿಜೆಪಿ, ಎಂಇಪಿಯ ಶಾಲು, ಕ್ಯಾಪ್ ವಶಕ್ಕೆ

    ಬೆಂಗಳೂರು/ದಾವಣಗೆರೆ/ಬೆಳಗಾವಿ: ಚುನಾವಣಾ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ನೆಲಮಂಗಲದ ತ್ಯಾಮಗೊಂಡ್ಲು ಸಮೀಪದ ಮುದ್ದಲಿಂಗಹಳ್ಳಿ ಹಾಗೂ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಿಲುನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಾಹನ ತಪಾಸಣೆ ವೇಳೆ ಬೈಕ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮುದ್ದಲಿಂಗನಹಳ್ಳಿ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳ ತಂಡ ಕಾರ್ಯಚರಣೆ ನಡೆಸಿದ್ದಾರೆ. ತುಮಕೂರಿನ ಕೊಳಾಲ ಬಳಿಯ ಎಲೆರಾಂಪುರದ ಸ್ವಾಮಿ ಎಂಬವರ ಬಳಿಯಲ್ಲಿನ ಕೈ ಚೀಲದಲ್ಲಿದ್ದ 1 ಲಕ್ಷ 52 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮದುವೆ ಸಾಮಾಗ್ರಿಗಳನ್ನು ಖರೀದಿಸಲು ಹಣ ಸಾಗಾಟ ಮಾಡುತ್ತಿರುವುದಾಗಿ ಸ್ವಾಮಿ ಹೇಳಿಕೆ ನೀಡಿದ್ದಾರೆ. ಚುನಾವಣಾಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಿಲುನಲ್ಲಿ ಖಾಸಗಿ ಬಸ್ ಮೇಲೆ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಬಸ್‍ನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 2.48 ಲಕ್ಷ ಹಣ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಣವನ್ನು ತಾಲೂಕು ಖಜಾನೆಯಲ್ಲಿ ಅಧಿಕಾರಿಗಳು ಇರಿಸಲಾಗಿದೆ.

    ಬೆಳಗಾವಿ: ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ ಬಿಜೆಪಿಯ 3 ಸಾವಿರ ಶಾಲು ಮತ್ತು ಎಂಇಪಿ ಪಕ್ಷಕ್ಕೆ ಸೇರಿದ 40 ಸಾವಿರ ಕ್ಯಾಪ್ ಗಳನ್ನು ಜಿಲ್ಲೆಯ ನಿಪ್ಪಾಣಿಯ ಕರ್ನಾಟಕ ಮತ್ತು ಮಹಾ ಗಡಿಯ ಚೆಕ್ ಪೋಸ್ಟ್ ನಲ್ಲಿ ನಿಪ್ಪಾಣಿ ಪೊಲೀಸ್ರು ವಶ ಪಡಿಸಿಕೊಂಡಿದ್ದಾರೆ. ಶಾಲು ಮತ್ತು ಕ್ಯಾಪ್ ಗಳನ್ನು ಮುಂಬೈನಿಂದ ಬೆಳಗಾವಿಗೆ ತರಲಾಗುತ್ತಿತ್ತು ಎಂಬ ಮಾಹಿತಿಗಳು ಲಭ್ಯವಾಗಿದ್ದು, ಬಸ್ ಡ್ರೈವರ್, ಕ್ಲೀನರ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.