Tag: Karnataka Election

  • ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಭವಾನಿ ರೇವಣ್ಣ ಸ್ಕೆಚ್! – ವಿಡಿಯೋ ನೋಡಿ

    ಜೆಡಿಎಸ್ ಅಭ್ಯರ್ಥಿಯನ್ನು ಸೋಲಿಸಲು ಭವಾನಿ ರೇವಣ್ಣ ಸ್ಕೆಚ್! – ವಿಡಿಯೋ ನೋಡಿ

    ಬೆಂಗಳೂರು: ಚುನಾವಣೆಗೆ ದಿನಗಣನೆ ಶುರುವಾಗಿದ್ರೂ ಜೆಡಿಎಸ್‍ನಲ್ಲಿ ಇನ್ನೂ ಭಿನ್ನಮತ ಮುಂದುವರಿದಿದೆ. ಮೈಸೂರಿನ ಕೆ.ಆರ್. ನಗರದ ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಅವರನ್ನ ಸೋಲಿಸಲು ದೇವೇಗೌಡ್ರ ಸೊಸೆ ಭವಾನಿ ರೇವಣ್ಣ ಷಡ್ಯಂತ್ರ ರೂಪಿಸಿದ್ದಾರಾ ಅನ್ನೋ ಚರ್ಚೆ ಎದ್ದಿದೆ.

    ಇವತ್ತು ಸಾಲಿಗ್ರಾಮದ ಒಕ್ಕಲಿಗ ಮುಖಂಡರ ಜೊತೆ ಭವಾನಿ ರೇವಣ್ಣ ನಡೆಸಿದ ಗೌಪ್ಯ ಸಭೆಯ ವೀಡಿಯೋ ವೈರಲ್ ಆಗಿದೆ. ಸಾ.ರಾ.ಮಹೇಶ್ ಸೋಲಿಗೆ ತನ್ನದೇ ಹೆಸರು ಬಳಸಿಕೊಳ್ಳಿ ಅಂತ ಭವಾನಿ ರೇವಣ್ಣ ತನ್ನ ಬೆಂಬಲಿಗರಿಗೆ ಹೇಳಿದ್ದಾರೆ.

    ಕೆ.ಆರ್.ನಗರದಲ್ಲಿ ಭವಾನಿ ಸ್ಪರ್ಧಿಸೋಕೆ ಯತ್ನಿಸಿದ್ದರು. ಆದ್ರೆ, ದೇವೇಗೌಡ್ರು ಒಪ್ಪದ ಕಾರಣ ಈಗ ಈ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ. ಮತ್ತೊಂದ್ಕಡೆ, ಯುವಘರ್ಜನೆ ಹೆಸರಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕ್ಯಾಂಪೇನ್ ಶುರು ಮಾಡಿದ್ದಾರೆ.

    ತುಮಕೂರಿನ ಹಲವು ಕ್ಷೇತ್ರಗಳಲ್ಲಿ ಇದೇ ವಾರ ನಿಖಿಲ್ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ, ಇವತ್ತು ಚಿಕ್ಕಬಳ್ಳಾಪುರದ ಅಭ್ಯರ್ಥಿ ಬಚ್ಚೇಗೌಡರ ನಾಮಪತ್ರ ಸಲ್ಲಿಕೆ ವೇಳೆ ನಿಖಿಲ್ ಸಾಥ್ ನೀಡಿದ್ರು. ಆದ್ರೆ, ಟಿಕೆಟ್ ಆಕಾಂಕ್ಷಿ ಪ್ರಜ್ವಲ್ ಅವರನ್ನ ಸುಮ್ಮನಾಗಿಸಿದ್ದ ದೇವೇಗೌಡ್ರು, ಹಾಸನಕ್ಕೆ ಮಾತ್ರ ಸೀಮಿತಗೊಳಿಸಿದ್ರಾ ಅಂತ ಚರ್ಚೆ ಶುರುವಾಗಿದೆ.

     

    https://www.youtube.com/watch?v=_cQaaLgUtx0

     

     

  • 2008ರಲ್ಲಿ 75 ಕೋಟಿ ಇದ್ದ ಡಿಕೆಶಿ ಆಸ್ತಿ ಈಗ 548 ಕೋಟಿ ರೂ.ಗೆ ಏರಿಕೆ!

    2008ರಲ್ಲಿ 75 ಕೋಟಿ ಇದ್ದ ಡಿಕೆಶಿ ಆಸ್ತಿ ಈಗ 548 ಕೋಟಿ ರೂ.ಗೆ ಏರಿಕೆ!

    ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ತಮ್ಮ ಬಳಿ 548,85,20,592  ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ.

    ಇಂದು ಬೆಳಗ್ಗೆ ಕನಕಪುರ ತಾಲೂಕಿನ ಕಬ್ಬಾಳುವಿನಲ್ಲಿರುವ ಕಬ್ಬಾಳಮ್ಮ ದೇವಿಗೆ, ಕನಕಪುರದ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿದರು.

    ದೇವಾಲಯದಿಂದ ಬೃಹತ್ ರ‍್ಯಾಲಿ ಮೂಲಕ ಸಾವಿರಾರು ಬೆಂಬಲಿಗರೊಡನೆ ತಾಲೂಕು ಕಚೇರಿಗೆ ಆಗಮಿಸಿದ ಸಚಿವರು ಚುನಾವಣಾಧಿಕಾರಿ ಉಮೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಉಷಾ, ತಾಯಿ ಗೌರಮ್ಮ, ತಮ್ಮ ಡಿ.ಕೆ.ಸುರೇಶ್ ಸಚಿವರ ಜೊತೆಗಿದ್ದರು.

    ಡಿಕೆ ಶಿವಕುಮಾರ್  548 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದರೆ,  ಮಗಳು ಐಶ್ವರ್ಯ ಬಳಿ 102.88 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಪತ್ನಿ ಉಷಾ 86.95 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಡಿಕೆಶಿ ಕೈಯಲ್ಲಿ 6.49 ಲಕ್ಷ ರೂ. ಇದೆ. ಇದನ್ನೂ ಓದಿ: ಬಿಎಸ್‍ವೈ ಬಳಿಯಿದೆ 7.23 ಕೋಟಿ ರೂ. ಮೌಲ್ಯದ ಆಸ್ತಿ!

    2 ಕೆಜಿ 184 ಗ್ರಾಂ ಚಿನ್ನ, 12 ಕೆಜಿ 600 ಗ್ರಾಂ ಬೆಳ್ಳಿ, 1 ಕೆಜಿ 66 ಗ್ರಾಂ ಚಿನ್ನ, 321 ಗ್ರಾಂ ವಜ್ರ, ಪತ್ನಿ ಉಷಾ ಬಳಿ 2 ಕೆಜಿ 600 ಗ್ರಾಂ ಚಿನ್ನ, ಮಗ ಆಕಾಶ್ ಕೆಂಪೇಗೌಡ ಬಳಿ 615 ಗ್ರಾಂ ಚಿನ್ನ, ಮಗಳು ಐಶ್ವರ್ಯ ಬಳಿ 950 ಗ್ರಾಂ ಚಿನ್ನ, ಮಗಳು ಆಭರಣ ಹೆಸರಲ್ಲಿ 675 ಗ್ರಾಂ ಚಿನ್ನವಿದೆ ಎಂದು ಡಿಕೆ ಶಿವಕುಮಾರ್ ಘೋಷಿಸಿಕೊಂಡಿದ್ದಾರೆ.

    2013ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯಲ್ಲಿ ತನ್ನ ಬಳಿ 251 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದರು. ಇದಕ್ಕೂ ಮೊದಲು 2008ರಲ್ಲಿ ನಡೆದ ಚುನಾವಣೆ ವೇಳೆ ತನ್ನ ಬಳಿ 75 ಕೋಟಿ ರೂ. ಆಸ್ತಿ ಇದೆ ಎಂದು ತಿಳಿಸಿದ್ದರು.

    ಎರಡನೇ ಶ್ರೀಮಂತ ಸಚಿವ: 251 ಕೋಟಿ ರೂ. ಆಸ್ತಿಯನ್ನು ಹೊಂದುವ ಮೂಲಕ ಡಿಕೆ ಶಿವಕುಮಾರ್ ಅವರು ದೇಶದ ಶ್ರೀಮಂತ ಸಚಿವರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರು. 2016ರ ಆಗಸ್ಟ್ ನಲ್ಲಿ ಅಸೋಶಿಯೇಷನ್ ಫಾರ್ ಡೆಮೊಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 496 ಕೋಟಿ ರೂ. ಆಸ್ತಿಯನ್ನು ಹೊಂದಿರುವ ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಸಚಿವ ಪೊಂಗುರು ನಾರಾಯಣ ದೇಶದ ಅತ್ಯಂತ ಶ್ರೀಮಂತ ಸಚಿವರು ಎನಿಸಿಕೊಂಡಿದ್ದರು. ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ನೀಡಿರುವ ಆಸ್ತಿ ಮೌಲ್ಯದ ಮಾಹಿತಿಯನ್ನು ಆಧರಿಸಿ, 29 ವಿಧಾನಸಭೆ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 620 ಸಚಿವರ ಪೈಕಿ 609 ಸಚಿವರನ್ನು ಅಧ್ಯಯನ ನಡೆಸಿ ವರದಿ ತಯಾರಿಸಿತ್ತು.

    ಡಿಕೆಶಿ ಬಳಿ ಯಾವ ವರ್ಷ ಎಷ್ಟು ಆಸ್ತಿ ಇತ್ತು?
    2008 – 75,59,87,229 ರೂ.
    2013 – 251,50,96,329 ರೂ.
    2018 – 548,85,20,592

  • ಕಾಂಗ್ರೆಸ್‍ನ ಮತ್ತೊಂದು ವಿಕೆಟ್ ಪತನ-ಜೆಡಿಎಸ್ ಸೇರಿದ ನಟ ಶಶಿಕುಮಾರ್

    ಕಾಂಗ್ರೆಸ್‍ನ ಮತ್ತೊಂದು ವಿಕೆಟ್ ಪತನ-ಜೆಡಿಎಸ್ ಸೇರಿದ ನಟ ಶಶಿಕುಮಾರ್

    ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ನಟ ಶಶಿಕುಮಾರ್ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

    ಶಶಿಕುಮಾರ್ ಹೊಸದುರ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಈ ಬಾರಿ ಬಿ.ಜಿ.ಗೋವಿಂದಪ್ಪರಿಗೆ ಟಿಕೆಟ್ ನೀಡಿದೆ. ಇದ್ರಿಂದ ಅಸಮಾಧಾನಗೊಂಡಿದ್ದ ಶಶಿಕುಮಾರ್ ಕಾಂಗ್ರೆಸ್ ತೊರೆದು ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಸೇರಿದ್ದಾರೆ.

    ಜೆಡಿಎಸ್ ನಾಯಕರು ಶಶಿಕುಮಾರ್ ಅವರಿಗೆ ಹೊಸದುರ್ಗ ಕ್ಷೇತ್ರದಿಂದಲೇ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಇತ್ತೀಚೆಗೆ ನಟಿ ಅಮೂಲ್ಯ ಜಗದೀಶ್ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದರು.

    2013ರಲ್ಲಿ ನಡೆದ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಬಿ.ಜಿ.ಗೋವಿಂದಪ್ಪ ಸ್ಪರ್ಧಿಸಿ ಗೆಲುವನ್ನು ಕಂಡಿದ್ದರು. ಒಟ್ಟು ಮೂರು ಬಾರಿ ಹೊಸದುರ್ಗ ಕ್ಷೇತ್ರದಿಂದ ಶಾಸಕರಾಗಿರುವ ಬಿ.ಜಿ.ಗೋವಿಂದಪ್ಪ 2008ರಲ್ಲಿ ಪಕ್ಷೇತರ ಅಭ್ಯರ್ಥಿ ಎದರು ಒಂದು ಸಾರಿ ಸೋಲು ಅನುಭವಿಸಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿ.ಜಿ.ಗೋವಿಂದಪ್ಪ 58,010 ಮತಗಳನ್ನು ಪಡೆದಿದ್ರೆ, ಎದುರಾಳಿ ಪಕ್ಷೇತರ ಅಭ್ಯರ್ಥಿ ಶೇಕರ್ ಗೂಳಿಹಟ್ಟಿ ಅವರು 37,993 ಮತಗಳನ್ನು ಗಳಿಸಿದ್ರು.

  • ಸಿದ್ದಲಿಂಗಯ್ಯ ಮನೆಗೆ ಶಾ – ಕುಡಿಯುವ ನೀರಿನ ಬಾಟಲಿಗೆ ಬಗ್ಗೆ ಫೇಸ್‍ಬುಕ್‍ನಲ್ಲಿ ಟೀಕೆ, ನಿಂದನೆ

    ಸಿದ್ದಲಿಂಗಯ್ಯ ಮನೆಗೆ ಶಾ – ಕುಡಿಯುವ ನೀರಿನ ಬಾಟಲಿಗೆ ಬಗ್ಗೆ ಫೇಸ್‍ಬುಕ್‍ನಲ್ಲಿ ಟೀಕೆ, ನಿಂದನೆ

    ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದಲಿತ ಕವಿ ಸಿದ್ದಲಿಂಗಯ್ಯ ಅವರನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಟೀಕೆ ವ್ಯಕ್ತವಾಗಿದೆ.

    ಬುಧವಾರ ಅಮಿತ್ ಶಾ ಹಿರಿಯ ಸಾಹಿತಿ ಚಿದಾನಂದ ಮೂರ್ತಿ ಮತ್ತು ದಲಿತ ಕವಿ ಸಿದ್ದಲಿಂಗಯ್ಯ ಅವರನ್ನು ಭೇಟಿ ಮಾಡುವ ಮೂಲಕ ಪ್ರಣಾಳಿಕೆಗಾಗಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ. ಈ ವಿಚಾರವನ್ನು ಇಟ್ಟುಕೊಂಡು ಸಿದ್ದಲಿಂಗನವರನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ಟೀಕೆ ಮಾಡುತ್ತಿದ್ದಾರೆ.

    ಯಾರಿಗೆ ಬಂತು ಎಲ್ಲಿಗೆ ಬಂತು ಸ್ವಾತಂತ್ರ್ಯ ಅಂತಾ ಆಡಳಿತವನ್ನು ಪೆನ್ನಿನ ಮೂಲಕ ಟೀಕಿಸುತ್ತಿದ್ದ ಸಿದ್ದಲಿಂಗಯ್ಯ ಇವತ್ತು ಗೂಟದ ಕಾರಿನ ಮೋಹಕ್ಕೆ ಬಲಿಯಾದ್ರಾ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಮನೆಗೆ ಭೇಟಿ ನೀಡಿದ ಶಾಗೆ ಚಿದಾನಂದ ಮೂರ್ತಿ ನೀಡಿದ್ರು 5 ಸಲಹೆ

    ಈ ಟೀಕೆಯ ಜೊತೆಗೆ ಸಿದ್ದಲಿಂಗಯ್ಯರ ಮನೆಯಲ್ಲಿ ಅಮಿತ್ ಶಾ ಅವರಿಗೆ ಬಾಟಲ್ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದ ಕೆಲವರು ಸಿದ್ದಲಿಂಗಯ್ಯ ದಲಿತ ವ್ಯಕ್ತಿಯೆಂದು ಅವರ ಮನೆಯಲ್ಲಿ ನೀರು ಕುಡಿಯಲಿಲ್ಲವೋ ಅಥವಾ ಸಿದ್ದಲಿಂಗಯ್ಯರ ಮನೆಯಲ್ಲಿ ಬಾಟಲ್ ನೀರನ್ನು ಕುಡಿಯುತ್ತಿರಬಹುದು ಎಂದು ಬರೆದುಕೊಂಡಿದ್ದಾರೆ.

    ಮಠಾಧೀಶರ ಬಳಿಕ ಅಮಿತ್ ಶಾ ಈಗ ಸಾಹಿತಿಗಳನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಸಾಮಾಜಿಕ ಜಾಲತಾಣದಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ.

  • ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಮಾತನ್ನು ಹೇಳಿದ್ರೆ, ಕಾಂಗ್ರೆಸ್‍ಗೆ ನಮ್ಮೆಲ್ಲರ ಮತ: ಬಿಜೆಪಿ ಶಾಸಕ ಸಂಜಯ್ ಪಾಟೀಲ್

    ಲಕ್ಷ್ಮೀ ಹೆಬ್ಬಾಳ್ಕರ್ ಒಂದು ಮಾತನ್ನು ಹೇಳಿದ್ರೆ, ಕಾಂಗ್ರೆಸ್‍ಗೆ ನಮ್ಮೆಲ್ಲರ ಮತ: ಬಿಜೆಪಿ ಶಾಸಕ ಸಂಜಯ್ ಪಾಟೀಲ್

    ಬೆಳಗಾವಿ: ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ರಾಮ ಮಂದಿರ ಕಟ್ಟಲು ನಾವು ಬದ್ಧರಿದ್ದೇವೆ ಅಂತಾ ಒಂದು ಮಾತನ್ನು ಹೇಳಿದ್ರೆ ಈ ಬಾರಿ ಚುನಾವಣೆಯಲ್ಲಿ ನಮ್ಮೆಲ್ಲರ ಮತ ಕಾಂಗ್ರೆಸ್ ಅಂತಾ ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

    ವಿಧಾನಸಭಾ ಚುನಾವಣೆ ಪ್ರಯುಕ್ತ ಸುಳೆಬಾವಿ ಗ್ರಾಮದಲ್ಲಿ ಪ್ರಚಾರಕೈಗೊಂಡಿದ್ದ ವೇಳೆ ಮಾತನಾಡಿದ ಶಾಸಕರು, ಭಾರತ ಹಿಂದೂ ರಾಷ್ಟ್ರ. ರಾಮ ಮಂದಿರ ನಿರ್ಮಾಣ ಆಗಬೇಕಿದ್ದು, ಇದಕ್ಕಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧ. ನಾವು ರಾಮ ಮಂದಿರ ನಿರ್ಮಾಣ ಮಾಡೋರು, ಅವರು ಬಾಬರಿ ಮಸೀದಿ ಕಟ್ಟುವರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಂದು ಬಾರಿ ರಾಮ ಮಂದಿರ ಕಟ್ಟಲು ನಾವು ಬದ್ಧರಿದ್ದೇವೆ ಅಂತಾ ಒಂದು ಮಾತನ್ನು ಹೇಳಿದ್ರೆ ನಾವೆಲ್ಲರೂ ಕಾಂಗ್ರೆಸ್‍ಗೆ ಮತ ಹಾಕೋಣ ಅಂತಾ ಹೇಳಿದ್ದಾರೆ.

    ಈ ಚುನಾವಣೆ ರಸ್ತೆ, ಚರಂಡಿ, ಕುಡಿಯುವ ನೀರಿಗಾಗಿ ಇಲ್ಲ. ಇದು ಹಿಂದು, ಮುಸ್ಲಿಂ ಧರ್ಮದ ಬಗ್ಗೆ ಇದೆ. ಯಾರಿಗೆ ಬಾಬಾರಿ ಮಸೀದಿ, ಟಿಪ್ಪು ಜಯಂತಿ ಮಾಡೋದು ಇಷ್ಟವೋ ಅವರೆಲ್ಲರು ಕಾಂಗ್ರೆಸ್‍ಗೆ ಬೆಂಬಲ ನೀಡಿ, ಶಿವಾಜಿ ಮಹರಾಜರು ಬೇಕಿದರೆ ಬಿಜೆಪಿಗೆ ನಿಮ್ಮ ಬೆಂಬಲ ನೀಡಿ ಎಂಬ ಹೇಳಿರುವ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ನನ್ನ ಟಿಕೆಟ್ ತಪ್ಪಿಸಿ, ಅತ್ಯಾಚಾರಿಗಳಿಗೆ ಬಿಜೆಪಿ ಮಣೆ ಹಾಕಿದೆ: ಬೇಳೂರು ಗೋಪಾಲಕೃಷ್ಣ

    ನನ್ನ ಟಿಕೆಟ್ ತಪ್ಪಿಸಿ, ಅತ್ಯಾಚಾರಿಗಳಿಗೆ ಬಿಜೆಪಿ ಮಣೆ ಹಾಕಿದೆ: ಬೇಳೂರು ಗೋಪಾಲಕೃಷ್ಣ

    ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿ ಸಾಗರ ಕ್ಷೇತ್ರದಲ್ಲಿ ಕಣಕ್ಕಿಳಿಯಬೇಕು ಅಂತಾ ಆಸೆ ಪಟ್ಟಿದ್ದೆ. ಆದ್ರೆ ನನಗೆ ಟಿಕೆಟ್ ತಪ್ಪಿಸಿ, ಬಿಜೆಪಿ ಅತ್ಯಾಚಾರಿಗಳಿಗೆ ಮಣೆ ಹಾಕುವ ಮೂಲಕ ಕ್ಷೇತ್ರದ ಜನತೆಗೆ ಮೋಸ ಮಾಡಿದ್ದಾರೆ ಅಂತಾ ಟಿಕೆಟ್ ವಂಚಿತ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.

    ಸಮ್ಮಿಶ್ರ ಸರ್ಕಾರವಿದ್ದಾಗ ಕುಮಾರಸ್ವಾಮಿ ಅಧಿಕಾರ ಕೊಡಲಿಲ್ಲ ಅಂತಾ ಅತ್ತೂ ಕರೆದು ರಾಜ್ಯದ ಜನರ ಮುಂದೆ ಹೋದ್ರಿ. ಆದ್ರೆ ಇವತ್ತು ನೀವೆಲ್ಲಾ ಬೇಳೂರು ಗೋಪಾಲಕೃಷ್ಣಗೆ ಮಾಡಿದ್ದೇನು? ಎರಡು ಬಾರಿ ಸಾಗರ ಕ್ಷೇತ್ರದ ಶಾಸಕನಾಗಿ ಆಯ್ಕೆಗೊಂಡಿದ್ದರೂ, ನನಗೇಕೆ ಟಿಕೆಟ್ ನೀಡಲಿಲ್ಲ ಅಂತಾ ಬಿಜೆಪಿಗೆ ಪ್ರಶ್ನೆ ಮಾಡಿದ್ರು. ಇದನ್ನೂ ಓದಿ: ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

    ಅವನ ಸಿಡಿ ಎಲ್ಲೋ ಇವರ ಬಳಿ ಇರಬೇಕು ಹಾಗಾಗಿ ಟಿಕೆಟ್ ನೀಡಿದ್ದಾರೆ. ಸಾಗರದ ಹೆಣ್ಣು ಮಕ್ಕಳು ಅತ್ಯಾಚಾರಿಗೆ ಟಿಕೆಟ್ ಕೊಟ್ಟಿದ್ರಿಂದ ಛೀ.. ಥೂ.. ಅಂತಿದ್ದಾರೆ. ನನಗೆ ಟಿಕೆಟ್ ಕೈ ತಪ್ಪಲು ಯಡಿಯೂರಪ್ಪ ಹಾಗು ಅವರ ಮಗ ರಾಘವೇಂದ್ರ ಕಾರಣ. ನನ್ನ ರಾಜಕೀಯ ಗುರು ಬಂಗಾರಪ್ಪನವರನ್ನ ಎದುರು ಹಾಕಿಕೊಂಡು ಬಿವೈ ರಾಘವೇಂದ್ರನಿಗೆ ಪ್ರಚಾರ ನಡೆಸಿದ್ದರಿಂದ ಅಂದು ಅವರು ಗೆಲುವನ್ನು ಕಂಡಿದ್ದಾರೆ. ರಾಜ್ಯದಲ್ಲಿ ಯಾರ ಮೇಲಾದರು ಐಟಿ ರೇಡ್ ಮಾಡುವುದಿದ್ದರೆ ಸಂಸದೆ ಶೋಭಾ ಕರಂದ್ಲಾಜೆ ಮನೆ ಮೇಲೆ ಮಾಡಲಿ. ಎಲ್ಲರ ದುಡ್ಡನ್ನ ಬಾಚಿ ಹಾಕಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರೋದಿಲ್ಲ ಅಂತಾ ಗೊತ್ತಾಗಿ ಎಲ್ಲ ಕಡೆಯಿಂದಲೂ ಸಾಧ್ಯವಾದಷ್ಟು ದುಡ್ಡು ಬಾಚಿಕೊಳ್ಳುತ್ತಿದ್ದಾರೆ ಅಂತಾ ಆಕ್ರೋಶವನ್ನು ಹೊರ ಹಾಕಿದ್ರು.

    ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಂಡಾಯ ಶಾಸಕನಾಗಿ ಸಾಗರ ಕ್ಷೇತ್ರದಿಂದ ಸ್ವರ್ಧಿಸುತ್ತಿದ್ದೇನೆ. ಶಿವಮೊಗ್ಗ ರಾಜಕಾರಣದಲ್ಲಿ ಯಡಿಯೂರಪ್ಪನೋ ಅಥವಾ ಬೇಳೂರು ಗೋಪಾಲಕೃಷ್ಣನೋ ನೋಡೆ ಬಿಡೋಣ. ಸಾಗರದ ಜನ ಬೇಳೂರು ಗೋಪಾಲಕೃಷ್ಣ ಜೊತೆಗಿದ್ದಾರೆ. ಸಾಗರದ ಎಲ್ಲಾ ನನ್ನ ಜನತೆಯ ಜೊತೆ ಮಾತಾಡಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುತ್ತೇನೆ ಅಂತಾ ಸವಾಲೆಸದರು.

    ಈ ಬಾರಿ ಚುನಾವಣೆಗೆ ಸಾಗರ ಕ್ಷೇತ್ರದಿಂದ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

  • ಟಿಕೆಟ್ ತಪ್ಪಿದ್ದಕೆ ಹೆಚ್‍ಡಿಡಿ, ಹೆಚ್‍ಡಿಕೆಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಟಿ.ಎಚ್.ಶಿವಶಂಕರಪ್ಪ

    ಟಿಕೆಟ್ ತಪ್ಪಿದ್ದಕೆ ಹೆಚ್‍ಡಿಡಿ, ಹೆಚ್‍ಡಿಕೆಯನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಟಿ.ಎಚ್.ಶಿವಶಂಕರಪ್ಪ

    ಚಿಕ್ಕಮಗಳೂರು: ಜೆಡಿಎಸ್ ಟಿಕೆಟ್ ತಪ್ಪಿದ್ದಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಟಿ.ಎಚ್.ಶಿವಶಂಕರಪ್ಪ ಬೆಂಬಲಿಗರು ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಷ್ಟು ದಿನ ಟಿಕೆಟ್ ನಿನಗೆ ಎಂದು ಹೇಳುತ್ತಿದ್ದ ಕುಮಾರಸ್ವಾಮಿ ಈಗ ಶ್ರೀನಿವಾಸ್‍ಗೆ ನೀಡಿದ್ದಾರೆ. ಅಪ್ಪ-ಮಗ ಇಬ್ಬರು ಹಣಕ್ಕಾಗಿ ಟಿಕೆಟ್ ಮಾರಿಕೊಂಡಿದ್ದಾರೆಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ತರೀಕೆರೆಯ ಹಾಲಿ ಕಾಂಗ್ರೆಸ್ ಶಾಸಕ ಜಿ.ಎಚ್. ಶ್ರೀನಿವಾಸ್‍ಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಶ್ರೀನಿವಾಸ್ ಬೆಂಗಳೂರಿಗೆ ತೆರಳಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.

    ಟಿಕೆಟ್ ಕೂಡ ಶ್ರೀನಿವಾಸ್‍ಗೆ ಎಂದು ಮಾತುಕತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಟಿ.ಎಚ್. ಶಿವಶಂಕರಪ್ಪ ಬೆಂಬಲಿಗರು ತರೀಕೆರೆಯ ಗಾಂಧಿ ವೃತ್ತದಲ್ಲಿ ನೂರಾರು ಕಾರ್ಯಕರ್ತರು ರಸ್ತೆ ಬಂದ್, ರಸ್ತೆ ಮಧ್ಯೆ ಟೈರ್ ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.

    ಇದೇ ವೇಳೆ ಶಿವಶಂಕರಪ್ಪ ಬೆಂಬಲಿಗರೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡರು. ಅಷ್ಟರಲ್ಲಿ ಅಲ್ಲೇ ಇದ್ದ ಪೊಲೀಸರು ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಜಾಗ್ರತ ಕ್ರಮವಾಗಿ ತರೀಕೆರೆಯಲ್ಲಿ 200ಕ್ಕೂ ಅಧಿಕ ಪೊಲೀಸರು ಬಂದೋಬಸ್ತ್ ಏರ್ಪಡಿಸಲಾಗಿದೆ. ಉದ್ರೇಕ ಬೆಂಬಲಿಗರು ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಅದೃಷ್ಟವಷಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

  • ಮೊಳಕಾಲ್ಮೂರಿನಲ್ಲಿ ಮನೆ ಮಾಡಿದ್ದು ಯಾಕೆ ಅಂತಾ ಸ್ಪಷ್ಟನೆ ನೀಡಿದ ಜನಾರ್ದನ ರೆಡ್ಡಿ

    ಮೊಳಕಾಲ್ಮೂರಿನಲ್ಲಿ ಮನೆ ಮಾಡಿದ್ದು ಯಾಕೆ ಅಂತಾ ಸ್ಪಷ್ಟನೆ ನೀಡಿದ ಜನಾರ್ದನ ರೆಡ್ಡಿ

    ಚಿತ್ರದುರ್ಗ: ದಾಖಲೆಯ ಬಹುಮತಗಳಿಂದ ಗೆಳೆಯ ಸಂಸದ ಶ್ರೀರಾಮುಲು ಅವರನ್ನು ಗೆಲ್ಲಿಸಲು ಮೊಳಕಾಲ್ಮೂರಿನಲ್ಲಿ ಮನೆ ಮಾಡಿದ್ದೆನೆ ಅಂತಾ ಮಾಜಿ ಸಚಿವ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

    ಗೆಳೆಯ ಶ್ರೀರಾಮುಲು ಗೆಲುವಿಗಾಗಿ ಟೊಂಕ ಕಟ್ಟಿ ನಿಂತಿರೊ ಗಣಿದಣಿ ಗಾಲಿ ಜನಾರ್ಧನ ರೆಡ್ಡಿ ಅವರ ಆತ್ಮೀಯ ಸಂಬಂಧಿ ಚಳ್ಳಕೆರೆಯ ರಾಮಕೃಷ್ಣಾರೆಡ್ಡಿ ಮನೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೋಟೆನಾಡು ಚಿತ್ರದುರ್ಗ ಹಾಗು ಬಳ್ಳಾರಿ ಜಿಲ್ಲೆಗಳೆರೆಡು ಭೌಗೋಳಿಕವಾಗಿ ಬೇರೆ ಬೇರೆಯಾದರೂ ಮಾನಸಿಕವಾಗಿ ಒಂದೆಯಾಗಿವೆ. ಕೇವಲ ಇಲ್ಲಿ ಹಿಡಿತ ಸಾಧಿಸೋ ಪ್ರಶ್ನೆಯೇ ಇಲ್ಲ. ಅಲ್ಲದೇ ಇಲ್ಲಿನ ನಮ್ಮ ಜನರೆನ್ನೆಲ್ಲ ನೋಡಿ ನನಗೆ ಖುಷಿಯಾಗಿದೆ. ಈ ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಬೇಕು. ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೂ ಒಳ್ಳೆಯದಾಗಲಿ ಎಂದು ಹೇಳಿದ್ರು.

    ಅಷ್ಟೇ ಅಲ್ಲದೇ ನಾನು ಎಂದೂ ಕೂಡ ವಿಧಾನಸಭಾ ಚುನಾವಣೆಗೆ ಪಕ್ಷದಿಂದ ಟಿಕೆಟ್ ಕೇಳಿಲ್ಲ. ಆದರೆ ಬಿಜೆಪಿ ತೀರ್ಮಾನಿಸಿ ನನ್ನನ್ನು ಎಂಎಲ್‍ಸಿ ಮಾಡಿ ಸಚಿವರನ್ನಾಗಿಸಿತ್ತು. ಹೀಗಾಗಿ ಟಿಕೆಟ್ ನೀಡಿಲ್ಲವೆಂದು ಪಕ್ಷದ ಮೇಲೆ ಯಾವುದೇ ಬೇಸರವಿಲ್ಲ. ಜೊತೆಗೆ ಈ ಬಾರಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದ್ರು.

    ಪಕ್ಷದ ಗೆಲುವಿಗಾಗಿ, ಪಕ್ಷದ ಬಲವರ್ಧನೆಗಾಗಿ ರಾಜ್ಯಾದ್ಯಂತ ಶ್ರೀರಾಮುಲು, ಯಡಿಯೂರಪ್ಪ ಓಡಾಡುತ್ತಿದ್ದಾರೆ. ಆದ್ದರಿಂದ ಅವರಿಗೆ ನಾನು ಸಾಥ್ ನೀಡುವ ಉದ್ದೇಶದಿಂದ ಮೊಳಕಾಲ್ಮೂರಿನಲ್ಲಿ ಮನೆ ಮಾಡಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟಿಸುತ್ತೇನೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುತ್ತದೆ. ಜೊತಗೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗೋದು ಕೂಡ ಸತ್ಯ ಅಂದ್ರು. ಇದನ್ನೂ ಓದಿ: 101 ರೂ. ನೀಡಿ ಬಾಡಿಗೆ ಪಡೆದಿರುವ ರೆಡ್ಡಿ ತೋಟದ ಮನೆಯ ವಿಶೇಷತೆ ಇಲ್ಲಿದೆ

  • ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧಿಸಿದ್ರು ಅವರ ಪರ ಪ್ರಚಾರ ಮಾಡ್ತೇನೆ- ರಮ್ಯಾ ತಾಯಿ!

    ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧಿಸಿದ್ರು ಅವರ ಪರ ಪ್ರಚಾರ ಮಾಡ್ತೇನೆ- ರಮ್ಯಾ ತಾಯಿ!

    ಮಂಡ್ಯ: ಕಾಂಗ್ರೆಸ್‍ನಿಂದ ಯಾರೇ ಸ್ಪರ್ಧಿಸಿದರು ಅವರ ಪರ ಮಂಡ್ಯಕ್ಕೆ ಬಂದು ಪ್ರಚಾರ ಮಾಡುತ್ತೇನೆ ಎಂದು ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಹೇಳಿದ್ದಾರೆ.

    ಕಾಂಗ್ರೆಸ್ ಪಕ್ಷದಲ್ಲಿ ನನ್ನನ್ನು ಸರಿಯಾಗಿ ಗುರುತಿಸುತ್ತಿಲ್ಲ ಎಂದು ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದಿದ್ದ ರಂಜಿತ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಬುಧವಾರ ಮಂಡ್ಯಕ್ಕೆ ಆಗಮಿಸಿ ಅಧಿಕೃತವಾಗಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದರು.

    ಹಿರಿಯ ನಾಯಕರು, ಹಿತೈಷಿಗಳ ಸಲಹೆಯಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಮುಂಬರುವ ದಿನಗಳಲ್ಲಿ ಪಕ್ಷದಿಂದ ಸೂಕ್ತ ಅವಕಾಶ ಸಿಗುವ ಭರವಸೆಯಿದೆ. ಬುಧವಾರ ಬಸವ ಜಯಂತಿ. ಈ ಶುಭದಿನದಿಂದ ಕಾಂಗ್ರೆಸ್ ಪರ ಪ್ರಚಾರ ಮಾಡಲು ಬಂದಿದ್ದೇನೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷದಿಂದ ಯಾರೇ ಸ್ಪರ್ಧಿಸಿದ್ದರು ಅವರ ಪರ ಪ್ರಚಾರ ಮಾಡುತ್ತೇನೆ. ಮಂಡ್ಯದಲ್ಲಿ ಸಕ್ರಿಯವಾಗಿರುತ್ತೇನೆ ಎಂದು ರಂಜಿತ ತಿಳಿಸಿದ್ದಾರೆ.

    ಇದೇ ಸಮಯದಲ್ಲಿ ರಮ್ಯಾ ಮಂಡ್ಯಕ್ಕೆ ಆಗಮಿಸುವ ಬಗ್ಗೆ ಮಾತನಾಡಿದ ಅವರು, ರಮ್ಯಾ ಅವರ ಹೆಸರು ಸ್ಟಾರ್ ಕ್ಯಾಂಪೇನ್ ಲಿಸ್ಟ್ ನಲ್ಲಿದೆ. ಅವರು ಎಲ್ಲ ಕಡೆ ಬಂದು ಪ್ರಚಾರ ಮಾಡುತ್ತಾರೆ. ಖಂಡಿತ ಮಂಡ್ಯಕ್ಕೆ ಬಂದು ಪ್ರಚಾರ ಮಾಡ್ತಾರೆ ಎಂದು ಹೇಳಿದ್ದರು. ಇದನ್ನೂ ಓದಿ: ಕಾಂಗ್ರೆಸ್ ವಿರುದ್ಧವೇ ಸಿಡಿದ ರಮ್ಯಾ ತಾಯಿ-30 ವರ್ಷ ದುಡಿದ್ರೂ ಕಾಂಗ್ರೆಸ್‍ನಿಂದ ಅನ್ಯಾಯ!

    ಅಷ್ಟೇ ಅಲ್ಲದೇ ಸಿದ್ದರಾಮಯ್ಯ ಅವರ ಯೋಜನೆಗಳನ್ನು ಹಾಡಿ ಹೊಗಳಿದ ರಂಜಿತ, ಸಿಎಂ ಒಳ್ಳೊಳ್ಳೆ ಕೆಲಸ ಮಾಡಿದ್ದಾರೆ. ಎಲ್ಲ ರೀತಿಯ ಭಾಗ್ಯ ಕೊಟ್ಟಿದ್ದಾರೆ. ಜನರು ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾರೆ. ಕಾಂಗ್ರೆಸ್ ಪಕ್ಷದ ಪರ ಯಾರೇ ನಿಂತರೂ ಗೆಲ್ಲುತ್ತಾರೆ. ಖಂಡಿತ ಈ ಬಾರೀ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ರಾಹುಲ್ ಗಾಂಧಿ ರಾಜ್ಯಕ್ಕೆ ಬಂದಾಗಲೇ ರಮ್ಯಾ ತಾಯಿ ಕೈ ವಿರುದ್ಧ ಅಪಸ್ವರ ಎತ್ತಿದ್ದೇಕೆ?

    https://youtu.be/uwuE6Mz5wVU