Tag: Karnataka Election

  • ವಿಶೇಷ ಚೇತನನಿಂದ ಮತದಾನ – ಕಾಲು ಬೆರಳಿಗೆ ಶಾಯಿ ಹಾಕಿದ ಅಧಿಕಾರಿಗಳು

    ವಿಶೇಷ ಚೇತನನಿಂದ ಮತದಾನ – ಕಾಲು ಬೆರಳಿಗೆ ಶಾಯಿ ಹಾಕಿದ ಅಧಿಕಾರಿಗಳು

    ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಎರಡು ಕೈ ಇಲ್ಲದ ವಿಶೇಷ ಚೇತನನೊಬ್ಬರು ಬಳ್ಳಾರಿಯಲ್ಲಿ (Ballary) ಮತದಾನ ಚಲಾಯಿಸಿದರು.

    ಬಳ್ಳಾರಿ ಗ್ರಾಮೀಣ ಕ್ಷೇತ್ರದ  ಕೊಳಗಲ್ಲು ಗ್ರಾಮದ ಮುಸ್ತಫಾ ಅವರಿಗೆ ಕೈಗಳೆರಡು ಇಲ್ಲ. ಆದರೂ ಅತ್ಯಂತ ಹುರುಪಿನಿಂದ ಮತಗಟ್ಟೆಗೆ ಬಂದ ಮುಸ್ತಫಾ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ಈ ಮೂಲಕ ಉಳಿದವರಿಗೂ ಮಾದರಿಯಾದರು. ಈ ವೇಳೆ ಚುನಾವಣಾ ಅಧಿಕಾರಿಗಳು ಮುಸ್ತಫಾಗೆ ಎರಡೂ ಕೈ ಇಲ್ಲದ ಕಾರಣ ಕಾಲು ಬೆರಳಿಗೆ ಮತದಾನದ ಶಾಹಿ ಹಾಕಿದರು. ವಿಶೇಷ ಚೇತನ ಎಂ.ಡಿ ಮುಸ್ತಫಾ ಅವರು ಮತದಾನ ಮಾಡಿದರು. ಇದನ್ನೂ ಓದಿ: ರಾಮನಗರ, ಉಡುಪಿಯಲ್ಲಿ ಭರ್ಜರಿ ಮತದಾನ – ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ನೀರಸ ಪ್ರತಿಕ್ರಿಯೆ

    ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ಚುನಾವಣೆ ಇಂದು ಬೀರುಸಿನಿಂದ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

  • ಬೆಂಗಳೂರಿನಲ್ಲಿ ಬಿರುಸುಗೊಂಡ ಮತದಾನ – ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ವೋಟಿಂಗ್‌

    ಬೆಂಗಳೂರಿನಲ್ಲಿ ಬಿರುಸುಗೊಂಡ ಮತದಾನ – ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿ ವೋಟಿಂಗ್‌

    ಬೆಂಗಳೂರು: ಮತಹಬ್ಬಕ್ಕೆ ಕರ್ನಾಟಕದಲ್ಲಿ (Karnataka Election) ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಬೆಳಗ್ಗೆ 11 ಗಂಟೆಯ ವೇಳೆಗೆ ಒಟ್ಟು ರಾಜ್ಯದಲ್ಲಿ 20.99 % ಮತದಾನ ನಡೆದಿದೆ.

    ಉಡುಪಿ 30.26%, ದಕ್ಷಿಣ ಕನ್ನಡ 28.46%, ಕೊಡಗು 26.49% ಉತ್ತರ ಕನ್ನಡ 25.46% ಮತದಾನ ನಡೆದಿದೆ. ಇದನ್ನೂ ಓದಿ: Karnataka Election 2023 Live – ಕರ್ನಾಟಕದಲ್ಲಿ 11 ಗಂಟೆವರೆಗೆ 20.99% ಮತದಾನ

     

    ಪ್ರತಿ ಬಾರಿಯೂ ಬೆಂಗಳೂರಿನಲ್ಲಿ ಮತದಾನ ಕಡಿಮೆ ನಡೆಯುತ್ತಿರುತ್ತದೆ. ಆದರೆ ಈ ಬಾರಿ ಬೆಳಗ್ಗೆಯಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಿರಿಯ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದರೆ, ಯುವ ಜನತೆ ಸಂಖ್ಯೆ ಕಡಿಮೆಯಿದೆ. ಮಧ್ಯಾಹ್ನದ ಬಳಿಕ ಯುವಜನತೆ ಮತಗಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ. ಮಧ್ಯಾಹ್ನದ ಬಳಿಕ ಬೆಂಗಳೂರಿನಲ್ಲಿ ಮಳೆ ಬರುವ ಸಾಧ್ಯತೆ ಇರುವ ಕಾರಣ ಬಹಳಷ್ಟು ಮಂದಿ ಬೆಳಗ್ಗೆ ಮತ ಹಾಕಲು ಆಸಕ್ತಿ ತೋರಿಸಿದ್ದಾರೆ.

     

    ವೀಕೆಂಡ್‌ನಲ್ಲಿ ಚುನಾವಣೆ ದಿನಾಂಕ ಇದ್ದರೆ ಪ್ರತಿ ಬಾರಿಯೂ ಬೆಂಗಳೂರಿನಲ್ಲಿ ಕಡಿಮೆ ಪ್ರಮಾಣದ ಮತದಾನ ನಡೆಯುತ್ತಿತ್ತು. ಆದರೆ ಈ ಬಾರಿ ವಾರದ ಮಧ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಹೆಚ್ಚಿನ ಮತದಾನ ನಡೆಯುವ ಸಾಧ್ಯತೆಯಿದೆ.

    ಎಲ್ಲಿ ಎಷ್ಟು?
    ಬೆಂಗಳೂರು ಕೇಂದ್ರ – 19.30%
    ಬೆಂಗಳೂರು ಉತ್ತರ – 18.34%
    ಬಿಬಿಎಂಪಿ ದಕ್ಷಿಣ -19.18%
    ಬೆಂಗಳೂರು ಗ್ರಾಮಾಂತರ – 20.13%
    ಬೆಂಗಳೂರು ನಗರ – 17.72%

  • Karnataka Election 2023 Live – Exit Poll: ಕಾಂಗ್ರೆಸ್‌ ಮುನ್ನಡೆ ಸಾಧಿಸಿದ್ರೂ ಅತಂತ್ರ

    Karnataka Election 2023 Live – Exit Poll: ಕಾಂಗ್ರೆಸ್‌ ಮುನ್ನಡೆ ಸಾಧಿಸಿದ್ರೂ ಅತಂತ್ರ

    ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿವೆ. ಕೆಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಸಿಕ್ಕಿದ್ದರೂ ಈ ಬಾರಿಯೂ ಅತಂತ್ರ ಸರ್ಕಾರ ಎಂದು ಹೇಳುತ್ತಿವೆ. ಇನ್ನೂ ಕೆಲ ಸಮೀಕ್ಷೆಗಳು ಬಿಜೆಪಿಗೆ ಬಹುಮತ ನೀಡಿವೆ. ಯಾವ ಸಮೀಕ್ಷೆಗಳು ಏನು ಹೇಳುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.


     



  • ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ

    ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ

    ಬೆಂಗಳೂರು: ರಾಜ್ಯದಲ್ಲಿ ಮತದಾನ (Karnataka Election) ಆರಂಭವಾಗಿದ್ದು ವಿಶೇಷವಾಗಿ ಬೆಂಗಳೂರಿನಲ್ಲಿ (Bengaluru) ಬೆಳಗ್ಗೆ ಜನರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

    ಪ್ರತಿಬಾರಿಯೂ ಬೆಂಗಳೂರು ನಗರದಲ್ಲಿ ಕಡಿಮೆ ಪ್ರಮಾಣದ ಮತದಾನ ದಾಖಲಾಗುತ್ತದೆ. ಹೀಗಾಗಿ ಈ ಬಾರಿ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ (Election Commission) ಮತ ಪ್ರಮಾಣ ಹೆಚ್ಚಿಸಲು ಕಸರತ್ತು ಮಾಡಿತ್ತು. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

    ಬೆಳಗ್ಗೆ 7 ಗಂಟೆಗೆ ಜನರು ಸರದಿ ನಿಂತು ವೋಟ್‌ ಹಾಕಿದ್ದಾರೆ. 2018ರ ಚುನಾವಣೆ ಮೇ 12 ಶನಿವಾರ ನಡೆದಿತ್ತು. ವೀಕೆಂಡ್‌ ಆದ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದ ಮತದಾನ ನಡೆದಿತ್ತು. ಆದರೆ ಈ ಬಾರಿ ಬುಧವಾರ ನಡೆಯುತ್ತಿರುವ ಕಾರಣ ಹೆಚ್ಚಿನ ಪ್ರಮಾಣದ ಮತದಾನ ನಡೆಯುವ ನಿರೀಕ್ಷೆಯಿದೆ. ಮಧ್ಯಾಹ್ನದ ಬಳಿಕ ಮಳೆ ಬರುವ ಸಾಧ್ಯತೆ ಇರುವುದರಿಂದ ನಗರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಬರುತ್ತಿದ್ದಾರೆ.

    ಮತಗಟ್ಟೆಯ ಒಳಗಡೆ ಮೊಬೈಲ್‌ (Mobile) ತೆಗೆದುಕೊಂಡು ಹೋಗುವುದಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಕೆಲವೊಂದು ಕಡೆ ಪೊಲೀಸರೇ ಸ್ವಿಚ್‌ ಆಫ್‌ ಮಾಡಿ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಮೊಬೈಲ್‌ ವಿಚಾರದ ಬಗ್ಗೆ ಕೆಲವೊಂದು ಕಡೆ ಕಿರಿಕಿರಿ ನಡೆದ ಘಟನೆ ನಡೆದಿದೆ.

    ಕರ್ನಾಟಕ ಅಸೆಂಬ್ಲಿ ಚುನಾವಣೆ ವಿಶೇಷ
    * ಒಟ್ಟು ಮತ ಕ್ಷೇತ್ರ – 224
    * ಒಟ್ಟು ಅಭ್ಯರ್ಥಿಗಳು – 2631
    * ಬಿಜೆಪಿ ಅಭ್ಯರ್ಥಿಗಳು – 224
    * ಕಾಂಗ್ರೆಸ್ ಅಭ್ಯರ್ಥಿಗಳು – 223 (ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ)
    * ಜೆಡಿಎಸ್ ಅಭ್ಯರ್ಥಿಗಳು – 207
    * ಮತ ಕೇಂದ್ರ – 58,282
    * ಮತಗಟ್ಟೆಯ ಭದ್ರತಾ ಸಿಬ್ಬಂದಿ – 84,119
    * ವಿಶೇಷ ಸಿಬ್ಬಂದಿ ಸಂಖ್ಯೆ – 2,959
    * ಮತದಾರರ ಸಂಖ್ಯೆ – 5.21 ಕೋಟಿ
    * ಪುರುಷ ಮತದಾರರ ಸಂಖ್ಯೆ – 2.62 ಕೋಟಿ
    * ಮಹಿಳಾ ಮತದಾರರ ಸಂಖ್ಯೆ – 2.59 ಕೋಟಿ
    * 112 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು
    * ಫಸ್ಟ್ ಟೈಮ್ ವೋಟರ್‌ಗಳ ಸಂಖ್ಯೆ – 9.17 ಲಕ್ಷ
    * 100 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ – 16,976
    * ಶಾಂತಿ ಭದ್ರತೆಗೆ ನಿಯೋಜನೆಯಾದ ಪೊಲಿಸರು – 2.2 ಲಕ್ಷ

     

  • ಇಂದು ಕರ್ನಾಟಕ ಚುನಾವಣೆ – ಐದು ಕೋಟಿಗೂ ಹೆಚ್ಚು ಜನರ ಮೇಲೆ ನಿಂತಿದೆ ರಾಜ್ಯದ ಭವಿಷ್ಯ

    ಇಂದು ಕರ್ನಾಟಕ ಚುನಾವಣೆ – ಐದು ಕೋಟಿಗೂ ಹೆಚ್ಚು ಜನರ ಮೇಲೆ ನಿಂತಿದೆ ರಾಜ್ಯದ ಭವಿಷ್ಯ

    ಬೆಂಗಳೂರು: ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ಕರ್ನಾಟಕ ಚುನಾವಣೆ (Karnataka Election) ಇಂದು ನಡೆಯಲಿದೆ. ಬೆಳಗ್ಗೆ ಏಳು ಗಂಟೆಗೆ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ಆರಂಭ ಆಗಲಿದೆ.

    ಸಂಜೆ ಆರು ಗಂಟೆಯವರೆಗೂ ನಿರಂತರವಾಗಿ ಮತದಾನ (Vote) ಮಾಡಲು ಅವಕಾಶ ಇರಲಿದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ನಡೆಸಿದೆ. ಹಿಂದೆಂದೂ ಕಾಣದಷ್ಟು ಭದ್ರತೆ ಕೂಡ ಕೈಗೊಳ್ಳಲಾಗಿದೆ.  ಇದನ್ನೂ ಓದಿ: ಮತಗಟ್ಟೆ ತರಬೇತಿಯಲ್ಲಿ ಉದ್ಧಟತನ – ಮಹಿಳಾ ಇನ್‌ಸ್ಪೆಕ್ಟರ್‌ ಅಮಾನತು

    ಇಂದು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಸುಗಮವಾಗಿ ನಡೆದಿದೆ. ಪ್ರಧಾನಿ ಮೋದಿ (PM Modi), ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ (Rahul Dravid) ಸೇರಿ ಅನೇಕರು ಬನ್ನಿ ಮತ ಚಲಾಯಿಸಿ ಎಂದು ಕರೆ ನೀಡಿದ್ದಾರೆ.  ಇದನ್ನೂ ಓದಿ: ನಿಮ್ಮ ಮತಗಟ್ಟೆ ಯಾವುದು? – ಮೊಬೈಲ್‌ನಲ್ಲೇ ಚೆಕ್‌ ಮಾಡಿ

    ಕರ್ನಾಟಕ ಅಸೆಂಬ್ಲಿ ಚುನಾವಣೆ ವಿಶೇಷ
    * ಒಟ್ಟು ಮತ ಕ್ಷೇತ್ರ – 224
    * ಒಟ್ಟು ಅಭ್ಯರ್ಥಿಗಳು – 2631
    * ಬಿಜೆಪಿ ಅಭ್ಯರ್ಥಿಗಳು – 224
    * ಕಾಂಗ್ರೆಸ್ ಅಭ್ಯರ್ಥಿಗಳು – 223 (ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ)
    * ಜೆಡಿಎಸ್ ಅಭ್ಯರ್ಥಿಗಳು – 207
    * ಮತ ಕೇಂದ್ರ – 58,282
    * ಮತಗಟ್ಟೆಯ ಭದ್ರತಾ ಸಿಬ್ಬಂದಿ – 84,119
    * ವಿಶೇಷ ಸಿಬ್ಬಂದಿ ಸಂಖ್ಯೆ – 2,959
    * ಮತದಾರರ ಸಂಖ್ಯೆ – 5.21 ಕೋಟಿ
    * ಪುರುಷ ಮತದಾರರ ಸಂಖ್ಯೆ – 2.62 ಕೋಟಿ
    * ಮಹಿಳಾ ಮತದಾರರ ಸಂಖ್ಯೆ – 2.59 ಕೋಟಿ
    * 112 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚು
    * ಫಸ್ಟ್ ಟೈಮ್ ವೋಟರ್‌ಗಳ ಸಂಖ್ಯೆ – 9.17 ಲಕ್ಷ
    * 100 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ – 16,976
    * ಶಾಂತಿ ಭದ್ರತೆಗೆ ನಿಯೋಜನೆಯಾದ ಪೊಲಿಸರು – 2.2 ಲಕ್ಷ

     

  • ನಾಳೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ – LIVE UPDATES

    ನಾಳೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ – LIVE UPDATES

    ರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಮೇ 10ರ ಬುಧವಾರ ನಡೆಯಲಿದ್ದು, ಮತದಾನಕ್ಕೆ ಕ್ಷಣಗಣನೆ (Karnataka Voting) ಆರಂಭವಾಗಿದೆ. ರಾಜ್ಯಾದ್ಯಂತ ಮತಗಟ್ಟೆಗಳಲ್ಲಿ ಸಿದ್ಧತೆಗಳು ಹೇಗಿವೆ, ಮನೆ ಮನೆ ಪ್ರಚಾರದ ಹೇಗೆ ನಡೆಯುತ್ತಿದೆ, ಈ ಚುನಾವಣೆಯ ತಾಜಾ ಸುದ್ದಿಗಳ ಈ ಕ್ಷಣದ ಮಾಹಿತಿ..

     

  • ಚುನಾವಣಾ ದಿನ ನಂದಿಗಿರಿಧಾಮ ಸಂಪೂರ್ಣ ಬಂದ್‌

    ಚುನಾವಣಾ ದಿನ ನಂದಿಗಿರಿಧಾಮ ಸಂಪೂರ್ಣ ಬಂದ್‌

    ಚಿಕ್ಕಬಳ್ಳಾಪುರ: ಚುನಾವಣೆ ದಿನ ನಂದಿಗಿರಿಧಾಮ (Nandi Hills) ಬಂದ್ ಮಾಡಿ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಮತದಾನ (Election) ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂಬ ದೃಷ್ಟಿಯಿಂದ ಮೇ 10 ರಂದು ಪ್ರವಾಸಿಗರಿಗೆ ನಿರ್ಬಂಧ ಹೇರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ನಾಗರಾಜು ಆದೇಶ ಪ್ರಕಟಿಸಿದ್ದಾರೆ.

    ಮೇ 10 ಬೆಳಿಗ್ಗೆ 5 ರಿಂದ ರಾತ್ರಿ 8 ಗಂಟೆಯವರೆಗೆ ‌ಪ್ರವೇಶ ನಿಷೇಧಿಸಲಾಗಿದೆ. ಮೇ 10 ರಂದು ಆನ್‌ಲೈನ್ ಬುಕ್ಕಿಂಗ್‌ಗೂ ಸಹ ನಿರ್ಬಂಧ ವಿಧಿಸಲಾಗಿದೆ.  ಇದನ್ನೂ ಓದಿ: ಅಮೆರಿಕದ ಮಾಲ್‌ನಲ್ಲಿ ಶೂಟೌಟ್ ಪ್ರಕರಣ – ಭಾರತ ಮೂಲದ ಎಂಜಿನಿಯರ್ ಸೇರಿ 9 ಮಂದಿ ಸಾವು

     

    ಬುಧವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ (Campaign) ತೆರೆ ಬಿದ್ದಿದೆ. ಸ್ಥಳೀಯರಲ್ಲದ ನಾಯಕರು ಕ್ಷೇತ್ರಗಳನ್ನು ತೊರೆದರೆ ರಾಷ್ಟ್ರೀಯ ಮುಖಂಡರು ರಾಜ್ಯವನ್ನು ತೊರೆದಿದ್ದಾರೆ. ಇನ್ನು ಏನೇ ಇದ್ದರೂ ಮನೆ ಮನೆ ಪ್ರಚಾರದ ಆಟವಷ್ಟೇ ಬಾಕಿ ಉಳಿದಿದೆ.

  • ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ – ಇನ್ನೇನಿದ್ದರೂ ಮನೆಮನೆ ಪ್ರಚಾರ

    ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ – ಇನ್ನೇನಿದ್ದರೂ ಮನೆಮನೆ ಪ್ರಚಾರ

    ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ, ಮುಂದಿನ ಲೋಕಸಭೆ ಚುನಾವಣೆ (Lok Sabha Election) ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುವ ಜಿದ್ದಾಜಿದ್ದಿನ ಅಖಾಡ ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Election) ಮೊದಲ ಅಂಕಕ್ಕೆ ಇಂದು ತೆರೆ ಬಿದ್ದಿದೆ.

    ಬುಧವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಆರು ಗಂಟೆಗೆ ಬಹಿರಂಗ ಪ್ರಚಾರಕ್ಕೆ (Campaign) ತೆರೆ ಬಿದ್ದಿದೆ. ಸ್ಥಳೀಯರಲ್ಲದ ನಾಯಕರು ಕ್ಷೇತ್ರಗಳನ್ನು ತೊರೆದರೆ ರಾಷ್ಟ್ರೀಯ ಮುಖಂಡರು ರಾಜ್ಯವನ್ನು ತೊರೆದಿದ್ದಾರೆ. ಇನ್ನು ಏನೇ ಇದ್ದರೂ ಮನೆ ಮನೆ ಪ್ರಚಾರದ ಆಟವಷ್ಟೇ ಬಾಕಿ ಉಳಿದಿದೆ. ಇದನ್ನೂ ಓದಿ: ಕೊಡಗು-ಕೇರಳ ಗಡಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಕೂಂಬಿಂಗ್

    ಚುನಾವಣಾ ಅಧಿಸೂಚನೆ ಹೊರಬಿದ್ದ ಮೇ 13ರಿಂದ ಇವತ್ತು ಸಂಜೆ 6 ಗಂಟೆಯವರೆಗೆ ಮತದಾರನ ಓಲೈಕೆಗಾಗಿ ಕೇಂದ್ರ, ರಾಜ್ಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದರು. ಇದನ್ನೂ ಓದಿ: ರಾಜಸ್ಥಾನದಲ್ಲಿ ಬೃಹತ್ ಲಿಥಿಯಂ ನಿಕ್ಷೇಪ ಪತ್ತೆ – ಇದಕ್ಕಿದೆ ಭಾರತದ 80% ಬೇಡಿಕೆ ಪೂರೈಸುವ ಸಾಮರ್ಥ್ಯ

    ರಾಜ್ಯದಲ್ಲಿ ಮದ್ಯ ಮಾರಾಟ ಬಂದ್ ಆಗಿದ್ದು, ಮುಂದಿನ ಮೂರು ದಿನ ಮದ್ಯ ಸಿಗುವುದಿಲ್ಲ. ಸುಗಮ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ನಡೆಸಿದೆ. ಮಂಗಳವಾರ ಚುನಾವಣಾ ಸಿಬ್ಬಂದಿ ಮತಯಂತ್ರಗಳೊಂದಿಗೆ ನಿಗದಿತ ಮತಗಟ್ಟೆಗಳಿಗೆ ಎಂಟ್ರಿ ಕೊಡಲಿದ್ದಾರೆ.

  • ನಿಮ್ಮ ಮತಗಟ್ಟೆ ಯಾವುದು? – ಮೊಬೈಲ್‌ನಲ್ಲೇ ಚೆಕ್‌ ಮಾಡಿ

    ನಿಮ್ಮ ಮತಗಟ್ಟೆ ಯಾವುದು? – ಮೊಬೈಲ್‌ನಲ್ಲೇ ಚೆಕ್‌ ಮಾಡಿ

    ಬೆಂಗಳೂರು: ಈ ಬಾರಿ ಮತ ಹಾಕಬೇಕು. ಆದರೆ ಮತಗಟ್ಟೆ (Polling Booth) ಯಾವುದು ಅಂತ ತಿಳಿಯುತ್ತಿಲ್ಲ ಎಂಬ ಚಿಂತೆಯಲ್ಲಿ ನೀವಿದ್ದೀರಾ? ಹಾಗಾದ್ರೆ ನೀವು ಚಿಂತೆ ಮಾಡುವ ಅಗತ್ಯವೇ ಇಲ್ಲ. ನೀವು ಮನಸ್ಸು ಮಾಡಿದರೆ ಕೆಲ ನಿಮಿಷದಲ್ಲೇ ನಿಮ್ಮ ಮೊಬೈಲ್‌ನಲ್ಲೇ ಮತಗಟ್ಟೆಯ ವಿವರವನ್ನು ತಿಳಿಯಬಹುದು.

    ಮತದಾರರು ಮೂರು ರೀತಿಯಲ್ಲಿ ಮತಗಟ್ಟೆಯನ್ನು ವಿವರವನ್ನು ಪಡೆದುಕೊಳ್ಳಬಹುದು. ಒಂದನೇಯದು ಮೊಬೈಲ್‌ ಅಪ್ಲಿಕೇಶನ್‌, ಎರಡನೇಯದ್ದು ವೆಬ್‌ಸೈಟ್‌, ಮೂರನೇಯದ್ದು ಕಾಲ್‌ ಸೆಂಟರ್‌ಗೆ ಕರೆ ಮಾಡುವ ಮೂಲಕ ಮತಗಟ್ಟೆಯ ವಿವರವನ್ನು ತಿಳಿದುಕೊಳ್ಳಬಹುದು.

    1. ಚುನಾವಣಾ ಅಪ್ಲಿಕೇಶನ್‌
    ಚುನಾವಣಾ ಆಯೋಗ ʼಚುನಾವಣಾʼ ಹೆಸರಿನಲ್ಲಿ ಆಂಡ್ರಾಯ್ಡ್‌ ಮತ್ತು ಐಒಎಸ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ ಓಪನ್‌ ಮಾಡಿದಾಗ Search by Epic No ಅಥವಾ Search by Name ಎಂಬ ಎರಡು ಆಯ್ಕೆ ಸಿಗುತ್ತದೆ.

    Search by Epic No ಆಯ್ಕೆ ಮಾಡಿದರೆ ವೋಟರ್‌ ಐಡಿ ನಂಬರ್‌ ಹಾಕಿದರೆ ಸಾಕಾಗುತ್ತದೆ. Search by Name ಆಯ್ಕೆ ಆರಿಸಿದರೆ ಹೆಸರು, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಸಂಬಂಧಿಯ ಹೆಸರು, ಲಿಂಗ ಆಯ್ಕೆ ಮಾಡಿ ಹುಡುಕಬಹುದು. ಇಷ್ಟೇ ಅಲ್ಲದೇ ಜಿಪಿಎಸ್‌ ಆನ್‌ ಮಾಡಿ ಲೊಕೇಶನ್‌ ಮೂಲಕವೂ ಮತಗಟ್ಟೆಯನ್ನು ಹುಡುಕಬಹುದು.

    ಆಂಡ್ರಾಯ್ಡ್‌ ಆಪ್‌ ಡೌನ್‌ಲೋಡ್‌ ಮಾಡಿChunavana
    ಐಒಎಸ್‌ ಆಪ್‌ ಡೌನ್‌ಲೋಡ್‌ ಮಾಡಿChunavana

    2. ವೆಬ್‌ಸೈಟ್‌
    ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಸಾಧ್ಯವಾಗದವರು ವೆಬ್‌ಸೈಟ್‌ ಮೂಲಕ ಮತಗಟ್ಟೆಯನ್ನು ಹುಡುಕಬಹುದು. ಆಪ್‌ನಲ್ಲಿ ಹೇಗೆ ವೈಯಕ್ತಿಕ ಡೇಟಾ ಎಂಟ್ರಿ ಮಾಡುತ್ತಿರೋ ಅದೇ ರೀತಿಯ ವಿವರಗಳನ್ನು ಸಲ್ಲಿಸಿ ಮತಗಟ್ಟೆಯ ಮಾಹಿತಿಯನ್ನು ಪಡೆಯಬಹುದು.

     ಚುನಾವಣಾ ಆಯೋಗದ ವೆಬ್‌ಸೈಟ್‌ ಕ್ಲಿಕ್‌ ಮಾಡಿ: www.kgis.ksrsac.in

    3. ದೂರವಾಣಿ
    ಆಪ್‌ ಮತ್ತು ವೆಬ್‌ಸೈಟ್‌ ಮೂಲಕ ಮತಗಟ್ಟೆಯ ಮಾಹಿತಿ ಪಡೆಯಲು ಸಾಧ್ಯವಾಗದವರು 1950 ಅಥವಾ 180042 551950 ನಂಬರ್‌ಗೆ ಕರೆ ಮಾಡಿ ಮತಗಟ್ಟೆಯ ವಿವರ ತಿಳಿದುಕೊಳ್ಳಬಹುದು. ಇದನ್ನೂ ಓದಿ: ನನಗೆ ಗಗನಯಾತ್ರಿ ಆಗಬೇಕೆಂಬ ಆಸೆ: SSLC ಫಸ್ಟ್ ರ‍್ಯಾಂಕ್ ವಿದ್ಯಾರ್ಥಿನಿ

    ಮೊಬೈಲ್‌ ಅಪ್ಲಿಕೇಶನ್‌ ಮತ್ತು ವೆಬ್‌ಸೈಟ್‌ನಲ್ಲಿ ನಿಮ್ಮ ಕ್ಷೇತ್ರದ ಅಭ್ಯರ್ಥಿಯ ವಿವರ, ಪಾರ್ಕಿಂಗ್‌ ಸ್ಥಳ, ಗಾಲಿ ಕುರ್ಚಿ ನೋಂದಣಿ, ಸಮೀಪದ ಮತದಾನ ಕೇಂದ್ರಗಳು, ಆರೋಗ್ಯ ಸೌಲಭ್ಯಗಳನ್ನು ಸುಲಭವಾಗಿ ತಿಳಿಯಬಹುದು.

    ವೋಟರ್‌ ಐಡಿ ಇಲ್ಲದಿದ್ದರೆ ಏನು?
    ಚುನಾವಣೆ ಸಮಯದಲ್ಲಿ ಬಳಕೆಯಾಗುವ ಮತದಾರರ ಗುರುತಿನ ಚೀಟಿ ಅತ್ಯಂತ ಪ್ರಮುಖವಾದ ದಾಖಲೆ. ಒಂದು ವೇಳೆ ವೋಟರ್‌ ಐಡಿ ಇಲ್ಲದೇ ಇದ್ದರೂ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್‌, ಸರ್ಕಾರಿ ನೌಕರರ ಗುರುತಿನ ಚೀಟಿ, ಫೋಟೋ ಸಹಿತ ಇರುವ ಪಾಸ್‌ಬುಕ್, ಪಾನ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಸ್ಮಾರ್ಟ್‌ ಕಾರ್ಡ್, ಕಾರ್ಮಿಕ ಇಲಾಖೆ ಆರೋಗ್ಯ ವಿಮೆ ಕಾರ್ಡ್, ಪಿಂಚಣಿ ದಾಖಲೆ,ಆಧಾರ್ ಕಾರ್ಡ್‌ ಬಳಕೆ ಮಾಡಿಯೂ ಮತ ಹಾಕಬಹುದು.

    ಪ್ರತಿ ಚುನಾವಣೆಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತದಾನ ನಡೆದರೆ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇರುತ್ತದೆ. ಈ ಕಾರಣಕ್ಕೆ ಚುನಾವಣಾ ಆಯೋಗ ಮತದಾರರಿಗೆ ಸುಲಭವಾಗಿ ಮತಗಟ್ಟೆಯ ವಿವರ ತಿಳಿದುಕೊಳ್ಳಲು ಉತ್ತಮ ವ್ಯವಸ್ಥೆ ಮಾಡಿದೆ.

  • ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ

    ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ

    ಬೆಂಗಳೂರು: ಈಗಾಗಲೇ ಮನೆಯೊಡತಿಗೆ 2 ಸಾವಿರ, 200 ಯೂನಿಟ್ ವಿದ್ಯುತ್ ಉಚಿತ, 10 ಕೆಜಿ ಅಕ್ಕಿ ಉಚಿತ, ಅಂಗನವಾಡಿ ಕಾರ್ಯಕರ್ತರಿಗೆ 15 ಸಾವಿರ ವೇತನ ಗ್ಯಾರಂಟಿಗಳನ್ನು ಘೋಷಿಸಿರುವ ಕಾಂಗ್ರೆಸ್ (Congress) ಪಕ್ಷದ ಪರವಾಗಿ ಕೊನೆಯ ದಿನದ ಚುನಾವಣಾ ಪ್ರಚಾರದ ವೇಳೆ ಡಿಕೆ ಶಿವಕುಮಾರ್ ಮತ್ತೊಂದು ಗ್ಯಾರಂಟಿಯನ್ನ ಘೋಷಿಸಿದೆ.

    ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ (DK Shivakumar) ಅವರು, ಈ ರಾಜ್ಯಕ್ಕೆ ಒಳ್ಳೆಯ ಸರ್ಕಾರ ಕೊಡ್ತೀವಿ. ರೈತರಿಗಾಗಿ ಎಷ್ಟು ಸಾಧ್ಯವೋ ಅಷ್ಟೂ ಕೆರೆಗಳನ್ನ ತುಂಬಿಸುತ್ತೇವೆ. ಹೆಣ್ಣುಮಕ್ಕಳಿಗಾಗಿ ಪ್ರತಿ ತಾಲೂಕಿನಲ್ಲೂ ತಾಯಿ-ಮಗು ಆಸ್ಪತ್ರೆಯನ್ನ ಹೊಸದಾಗಿ ನಿರ್ಮಿಸಿ, ಉಚಿತವಾಗಿ ಹೆರಿಗೆ ಸೌಲಭ್ಯ ಸಿಗುವಂತೆ ಮಾಡುತ್ತೇವೆ. ಎಲ್ಲರನ್ನೂ ಸಮಾನತೆಯಿಂದ ನೋಡುತ್ತೇವೆ. ಮಕ್ಕಳಿಗೆ ಗ್ರಾಮೀಣ ಭಾಗದಲ್ಲೇ ಉತ್ತಮ ಶಿಕ್ಷಣ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನಂತಹ ನಗರಗಳಿಗೆ ಬರೋದು ತಪ್ಪಿಸುತ್ತೇವೆ ಎಂದು ಹೇಳಿದ್ದಾರೆ.

    ಬ್ಲ್ಯಾಕ್‌ಮೇಲ್‌ ಗೆ ಹೆದರಲ್ಲ: `ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಕೇಂದ್ರದ ಯೋಜನೆಗಳಿಗೆ ಬ್ರೇಕ್’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಮಿಸ್ಟರ್ ನಡ್ಡಾಜಿ, ಡೋಂಟ್ ತ್ರೆಟನ್ ಅಸ್, ಏನ್ ಹೆದರಿಸ್ತೀರಾ? ಕೇಂದ್ರದ ಯೋಜನೆಗಳನ್ನು ನಿಲ್ಲಿಸ್ತೇವೆ ಅಂತ ಹೆದರಿಸ್ತೀರಾ? ಇಂತಹ ಬ್ಲ್ಯಾಕ್‌ಮೇಲ್‌ಗೆ ಹೆದರಲ್ಲ. ನಿಮ್ಮ ಶಾಸಕರು ಸಂಸದರು ಮಕ್ಕಳ ತರಹ ಸುಮ್ಮನಿರಬಹುದು. ಕಾಂಗ್ರೆಸ್ ನಾಯಕರು ನಿಮ್ಮ ಬೆದರಿಕೆಗೆ ಹೆದರೋದಿಲ್ಲ. ನಿಮ್ಮ ಪ್ರಧಾನಿಯನ್ನ ಬೀದಿ ಬೀದಿ ಅಲೆಯೋ ತರಹ ಮಾಡಿರೋದು ನೀವು ಎಂದು ತಿರುಗೇಟು ನೀಡಿದ್ದಾರೆ.

    ನಾವು 141 ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. 15ನೇ ತಾರೀಕು ಕಾಂಗ್ರೆಸ್ ಸರ್ಕಾರ ತಂದು ನಾವು ಘೋಷಣೆ ಮಾಡಿರುವ ಗ್ಯಾರಂಟಿಯನ್ನು ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.