Tag: Karnataka Election

  • ಬಾಯಿಗೆ ಬಂದಂಗೆ ಮಾತಾಡಿ ಕೆರಳಿಸ್ಬೇಡ, ನಾನು ಗಂಡು ಮಗನೇ- ಕಾರ್ಯಕರ್ತನಿಗೆ ಅಪ್ಪಚ್ಚುರಂಜನ್ ಅವಾಜ್

    ಬಾಯಿಗೆ ಬಂದಂಗೆ ಮಾತಾಡಿ ಕೆರಳಿಸ್ಬೇಡ, ನಾನು ಗಂಡು ಮಗನೇ- ಕಾರ್ಯಕರ್ತನಿಗೆ ಅಪ್ಪಚ್ಚುರಂಜನ್ ಅವಾಜ್

    ಮಡಿಕೇರಿ: ಶಾಸಕ ಅಪ್ಪಚ್ಚು ರಂಜನ್ ಅವರನ್ನು ಬಿಜೆಪಿ ಕಾರ್ಯಕರ್ತರೇ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

    ಕಡಗದಾಳ್ ಗ್ರಾಮಕ್ಕೆ ಅಪ್ಪಚ್ಚುರಂಜನ್ ಚುನಾವಣಾ ಪ್ರಚಾರಕ್ಕೆ ಹೋಗಿದ್ರು. ಈ ವೇಳೆ ಆರ್‍ಎಸ್‍ಎಸ್ ಬಗ್ಗೆ ಅಪ್ಪಚ್ಚುರಂಜನ್ ಉಡಾಫೆ ವರ್ತನೆ ತೋರುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ:  ಮಸೀದಿಯ ಕೆಲ್ಸ ಮಾಡಿದ್ರಿ, ದೇವಸ್ಥಾನದ ಅಭಿವೃದ್ಧಿ ಯಾಕ್ ಮಾಡಿಲ್ಲವೆಂದ ಯುವಕನಿಗೆ ಆನಂದ್ ಸಿಂಗ್ ಅವಾಜ್

    ನೀವು ಮಾಡ್ತಿರೋದ ಸರೀನಾ ಅಂತಾ ಪ್ರಶ್ನಿಸಿದ್ರು. ಇದ್ರಿಂದ ಕೋಪಗೊಂಡ ಶಾಸಕ ಅಪ್ಪಚ್ಚು ರಂಜನ್, ಕುಳಿತ ಸ್ಥಳದಿಂದ ಎದ್ದು ಬಂದು ಕಾರ್ಯಕರ್ತನಿಗೆ ಅವಾಜ್ ಹಾಕಿದ್ದಾರೆ. ಬಾಯಿಗೆ ಬಂದಂಗೆ ಮಾತಾಡಬೇಡ, ನನ್ನನ್ನ ಕೆರಳಿಸಬೇಡ. ನಾನು ಗಂಡು ಮಗನೇ ಅಂತಾ ಕೈ ತಟ್ಟಿ ಅಪ್ಪಚ್ಚುರಂಜನ್ ಅಬ್ಬರಿಸಿದ್ದಾರೆ. ಇದನ್ನೂ ಓದಿ: ಜಗ್ಗೇಶ್ ಗೆದ್ದರೆ ಹಿಂದು ಗೆದ್ದಂತೆ ಟ್ವೀಟ್ – ವಿಡಿಯೋ ಮೂಲಕ ಯುವತಿಯಿಂದ ಜಗ್ಗೇಶ್‍ಗೆ ತರಾಟೆ

    ಶಾಸಕರ ಈ ನಡೆಗೆ ಬಿಜೆಪಿ ವಲಯದಲ್ಲಿಯೇ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

  • ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವ್ಯಕ್ತಿಯೇ ಮಿಸ್ಸಿಂಗ್!

    ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವ್ಯಕ್ತಿಯೇ ಮಿಸ್ಸಿಂಗ್!

    ಚಿಕ್ಕಬಳ್ಳಾಪುರ: ಚುನಾವಣೆಗೆ ಸ್ವತಂತ್ರ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ನಡೆದಿದೆ.

    ಗಂಗನಹಳ್ಳಿ ಗ್ರಾಮದ ಮೋಹನ್ ನಾಪತ್ತೆಯಾದ ಅಭ್ಯರ್ಥಿ. ಮೋಹನ್ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಏಪ್ರಿಲ್ 24 ರಂದು ನಾಮಪತ್ರ ಸಲ್ಲಿಕೆ ಮಾಡಿದ್ದರು.

    ನಾಮಪತ್ರ ಪರಿಶೀಲನೆ ದಿನವಾದ ಏಪ್ರಿಲ್ 27 ರಂದು ಮನೆಯಿಂದ ಹೊರ ಹೋದ ಮೋಹನ್ ಮತ್ತೆ ಮನಗೆ ಬಂದಿಲ್ಲ. ತೋಟದ ಬಳಿ ಮೋಟಾರ್ ರಿಪೇರಿ ಮಾಡಿಸಿ ಬರ್ತೀನಿ ಅಂತ ಸ್ಕೂಟರ್ ನಲ್ಲಿ ಹೋದ ಮೋಹನ್ ಮತ್ತೆ ಮನಗೆ ವಾಪಾಸ್ಸಾಗಿಲ್ಲ.

    ಈ ಸಂಬಂಧ ಭಯಬೀತರಾದ ಮೋಹನ್ ತಂದೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.

  • ಎಲೆಕ್ಷನ್ ಎಫೆಕ್ಟ್: ಬನಶಂಕರಿ ದೇಗುಲದ ಹುಂಡಿಯಲ್ಲಿ ಭರ್ಜರಿ ದುಡ್ಡು

    ಎಲೆಕ್ಷನ್ ಎಫೆಕ್ಟ್: ಬನಶಂಕರಿ ದೇಗುಲದ ಹುಂಡಿಯಲ್ಲಿ ಭರ್ಜರಿ ದುಡ್ಡು

    ಬೆಂಗಳೂರು: ಚುನಾವಣೆ ಬಂದಿದ್ದೇ ಬಂದಿದ್ದು, ರಾಜ್ಯದಲ್ಲಿ ಚುನಾವಣಾ ಅಭ್ಯರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ನಾಯಕ ಗೆಲ್ಲಲಿ ಅಂತಾ ದೇವರ ಮೊರೆ ಹೋಗ್ತಿದ್ದಾರೆ.

    ಬನಶಂಕರಿ ದೇಗುಲದ ಹುಂಡಿ ಎಲೆಕ್ಷನ್ ಕೃಪೆಯಿಂದ ತುಂಬಿ ತುಳುಕಿದ್ದು ಮಗದೊಂದು ದಾಖಲೆಯ ಮೊತ್ತ ಹುಂಡಿಯಲ್ಲಿ ಸಂಗ್ರಹವಾಗಿದೆ. ಸಾಮಾನ್ಯವಾಗಿ ಒಂದು ತಿಂಗಳಲ್ಲಿ ಹುಂಡಿ ತೆರೆದಾಗ 20 ಲಕ್ಷ ದಿಂದ 22 ಲಕ್ಷದಷ್ಟು ದುಡ್ಡು ಸಂಗ್ರಹವಾಗುತ್ತಿತ್ತು. ಒಂದೇ ತಿಂಗಳಿಗೆ ಎಂಟು ಲಕ್ಷ ಆದಾಯ ಹೆಚ್ಚಾಗಿದೆ.

    ಈ ಬಾರಿ ಬರೋಬ್ಬರಿ 30 ಲಕ್ಷದಷ್ಟು ಹಣ ಸಂಗ್ರಹವಾಗಿದ್ದು ಮುಜರಾಯಿ ಇಲಾಖೆಯವರು ಫುಲ್ ಖುಷ್ ಆಗಿದ್ದಾರೆ. ಸಚಿವ ರಾಮಲಿಂಗರೆಡ್ಡಿ ಮಗಳು ಸೌಮ್ಯ ರೆಡ್ಡಿ ಸೇರಿದಂತೆ ಜಯನಗರ, ಬಿಟಿಎಂ ಲೇಔಟ್ ಹಾಗೂ ಬೆಂಗಳೂರು ವಿಧಾನಸಭಾ ಕ್ಷೇತ್ರದ ಬಹುತೇಕ ಅಭ್ಯರ್ಥಿಗಳು, ಕಾರ್ಯಕರ್ತರು ನಾಮಪತ್ರ ಸಲ್ಲಿಕೆಗೂ ಮುನ್ನ ಬನಶಂಕರಿ ದೇವರಿಗೆ ಪೂಜೆ ಮಾಡಿಸಿದ್ದರು.

  • ಬಿಜೆಪಿ ಜೊತೆ ಹೋದ್ರೆ ಎಚ್ಡಿಕೆಗೆ ಮನೆಯಿಂದಲೇ ಬಹಿಷ್ಕಾರ- ಎಚ್‍ಡಿ ದೇವೇಗೌಡ

    ಬಿಜೆಪಿ ಜೊತೆ ಹೋದ್ರೆ ಎಚ್ಡಿಕೆಗೆ ಮನೆಯಿಂದಲೇ ಬಹಿಷ್ಕಾರ- ಎಚ್‍ಡಿ ದೇವೇಗೌಡ

    ಬೆಂಗಳೂರು: ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಕುಮಾರಸ್ವಾಮಿ ಬಿಜೆಪಿ ಜೊತೆ ಹೋದರೆ ಆತನನ್ನು ಮನೆಯಿಂದಲೇ ಬಹಿಷ್ಕಾರ ಹಾಕುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹೇಳಿದ್ದಾರೆ.

    ಎನ್‍ಡಿ ಟಿವಿ ಮುಖ್ಯಸ್ಥ ಪ್ರಣಯ್ ರಾಯ್ ನಡೆಸಿದ ಸಂದರ್ಶನದಲ್ಲಿ ಅವರು, 2006ರಲ್ಲಿ ಬಿಜೆಪಿ ಜೊತೆ ಸರ್ಕಾರ ನಡೆಸಿದ ತಪ್ಪಿನಿಂದ ಕುಮಾರಸ್ವಾಮಿ ಪಾಠ ಕಲಿತಿದ್ದಾನೆ. ಸಾರ್ವಜನಿಕ ಭಾಷಣದಲ್ಲೂ ಈ ಬಗ್ಗೆ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾನೆ. ನಾನು ತಪ್ಪು ಮಾಡಿದೆ, ನನ್ನ ತಂದೆ ಆರೋಗ್ಯ ಕೂಡಾ ಹಾಳಾಯ್ತು, ಅವರು ಸಂಕಟ ಅನುಭವಿಸಿದ್ರು. ನಾನು ಮತ್ತೆ ಆ ತಪ್ಪು ಮಾಡಲ್ಲ ಅಂತ ಹೇಳಿದ್ದಾನೆ ಎಂದು ಎಚ್‍ಡಿಡಿ ತಿಳಿಸಿದರು.

    ಕಾಂಗ್ರೆಸ್ ಈಗಿನ ಚುನಾವಣಾ ವಾತಾವರಣವನ್ನು ಹಾಳು ಮಾಡಲು ಯತ್ನಿಸುತ್ತಿದೆ. ಎರಡೂ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪ್ರಾದೇಶಿಕ ಪಕ್ಷವನ್ನು ಬಳಸಿ ಎಸೆಯುತ್ತಿವೆ. ಶಿವಸೇನೆ ಯಾಕೆ ಹೊರಬಂತು. ಚಂದ್ರಬಾಬು ನಾಯ್ಡು ಯಾಕೆ ಹೊರಬಂದರು. ಬಿಜೆಪಿಯಿಂದ ಬೆಂಬಲ ಪಡೆಯುವ ಪರಿಸ್ಥಿತಿ ಬರಲ್ಲ. ಕುಮಾರಸ್ವಾಮಿಗೆ ತಂದೆಯ ಆರೋಗ್ಯ ಎಲ್ಲಕ್ಕಿಂತ ಮುಖ್ಯವಾಗಿದೆ ಎಂದ್ರು.

    ಒಂದು ವೇಳೆ ಬಿಜೆಪಿ ಜೊತೆ ಕುಮಾರಸ್ವಾಮಿ ಹೋದರೆ ಅವನು ನನ್ನ ಮಗನೇ ಅಲ್ಲ. ನಮ್ಮ ಕುಟುಂಬದಿಂದಲೇ ಕುಮಾರಸ್ವಾಮಿಗೆ ಬಹಿಷ್ಕಾರ ಹಾಕುತ್ತೇನೆ. ನನ್ನ ಅನುಮತಿ ಇಲ್ಲದೇ ಕಾಂಗ್ರೆಸ್ ಜೊತೆಗೂ ಹೋಗುವಂತಿಲ್ಲ ಎಂದು ಎಚ್.ಡಿ. ದೇವೇಗೌಡ ಖಡಕ್ ಮಾತನ್ನು ಆಡಿದ್ದಾರೆ.

  • ವೋಟ್ ಹಾಕಿ ಅಂತ ಬಿಕ್ಕಳಿಸಿ ಅತ್ತ ಕೈ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ -ವಿಡಿಯೋ

    ವೋಟ್ ಹಾಕಿ ಅಂತ ಬಿಕ್ಕಳಿಸಿ ಅತ್ತ ಕೈ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ -ವಿಡಿಯೋ

    ಮಂಡ್ಯ: ಕೆಟ್ಟ ರಾಜಕಾರಣವನ್ನು ಹೋಗಲಾಡಿಸಲು ನನಗೆ ಮತ ನೀಡಿ ಗೆಲ್ಲಿಸಿ ಎಂದು ಕಾಂಗ್ರೆಸ್ ಕೆ.ಆರ್. ಪೇಟೆ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಕಣ್ಣೀರಿಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಕೆ.ಆರ್. ಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮತದಾರರೆದುರು ಬಿಕ್ಕಳಿಸಿ ಅತ್ತಿದ್ದಾರೆ. ಕೆ.ಬಿ.ಚಂದ್ರಶೇಖರ್ ಹೆಮ್ಮನಹಳ್ಳಿ ಗ್ರಾಮಕ್ಕೆ ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ ಪ್ರಚಾರ ಭಾಷಣದಲ್ಲಿ ಮಾತನಾಡುತ್ತ, ಈ ತಾಲೂಕಿನಲ್ಲಿ ಕೆಟ್ಟ ರಾಜಕಾರಣ ಹೋಗಲಾಡಿಸಬೇಕಾದರೆ, ನಾನು ನಿಮ್ಮೂರಿನ ಮಗನಾದ ನನಗೆ ಶಕ್ತಿಕೊಡಿ. ನಿಮ್ಮ ಋಣ ತೀರಿಸ್ತೀನಿ. ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ಬಿಕ್ಕಳಿಸಿ ಅತ್ತಿದ್ದಾರೆ.

    ಇದು ನಾನು ಹುಟ್ಟಿ ಬೆಳೆದಂತ ಗ್ರಾಮ ಇದು. ನನಗೆ ನೀವು ಎಲ್ಲರೂ ಒಟ್ಟಾಗಿ ಸೇರಿ ಇಡೀ ಗ್ರಾಮ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರ ಅಳುವನ್ನು ನೋಡಿ ಏನು ಹೇಳಬೇಕೆಂದು ತಿಳಿಯದ ಗ್ರಾಮಸ್ಥರು ಅಳಬೇಡಿ ಎಂದು ಸಮಾಧಾನ ಮಾಡಿದ್ದಾರೆ.

    https://www.youtube.com/watch?v=nMommiJVZQk&feature=youtu.be

  • ಗೌರಿ ಸಂತಾನ, ಆ ಸಂತಾನ ಅಂತಾ ಹೇಳಿಕೊಳ್ಳುವ ಬಹುತೇಕ ಬುದ್ದಿ ಜೀವಿಗಳು ಮಾರಾಟವಾಗಿದ್ದಾರೆ: ಅನಂತಕುಮಾರ್ ಹೆಗ್ಡೆ

    ಗೌರಿ ಸಂತಾನ, ಆ ಸಂತಾನ ಅಂತಾ ಹೇಳಿಕೊಳ್ಳುವ ಬಹುತೇಕ ಬುದ್ದಿ ಜೀವಿಗಳು ಮಾರಾಟವಾಗಿದ್ದಾರೆ: ಅನಂತಕುಮಾರ್ ಹೆಗ್ಡೆ

    ಬೆಳಗಾವಿ: ಪ್ರಧಾನಿ ಮೋದಿ ವಿರುದ್ಧ ಪ್ರಚಾರ ನಡೆಸಲು ಕಾಂಗ್ರೆಸ್ ಕೆಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ 5 ಲಕ್ಷ ಕೋಟಿ. ರೂಪಾಯಿಗೆ ಗುತ್ತಿಗೆ ನೀಡಿದೆ. ಮೋದಿ ವಿರುದ್ಧ ಪ್ರಚಾರ ನಡೆಸಲು ಗೌರಿ ಸಂತಾನ, ಆ ಸಂತಾನ ಎಂಬ ಎಲ್ಲ ವಿಚಾರವಾದಿಗಳ ಬೆಂಬಲವಿದೆ. ರಾಜ್ಯದ ಬಹುತೇಕ ಬುದ್ದಿಜೀವಿಗಳು ತಮ್ಮನ್ನ ಹಣಕ್ಕಾಗಿ ಮಾರಾಟ ಮಾಡಿಕೊಂಡಿದ್ದಾರೆ ಅಂತಾ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಆರೋಪಿಸಿದ್ರು.

    ಭಾನುವಾರ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅನಂತಕುಮಾರ್ ಹಗ್ಡೆ, ನಟ ಪ್ರಕಾಶ್ ರೈ ನಾಲಿಗೆ ಎರಡು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ. ಪ್ರಕಾಶ್ ರೈ ನಾನು ಹಿಂದೂ ವಿರೋಧಿ ಅಲ್ಲ, ಆದ್ರೆ ಮೋದಿ, ಅಮಿತ್ ಶಾ ಮತ್ತು ಅನಂತಕುಮಾರ್ ಹಗ್ಡೆ ವಿರೋಧಿ ಅಂತಾ ಹೇಳ್ತಾರೆ. ನಿದ್ದೆ ಮಂಪರಿನಲ್ಲಿ ಹುಚ್ಚು ಹಿಡಿದವ್ರು ಮಾತ್ರ ಈ ರೀತಿ ಹೇಳೋದಕ್ಕೆ ಸಾಧ್ಯ ಅಂತಾ ರೈ ವಿರುದ್ಧ ಕಿಡಿಕಾರಿದ್ರು.

    ನರೇಂದ್ರ ಮೋದಿ ಕಪ್ಪು ಹಣದ ಬಾಣ ಬಿಡುತ್ತಿದ್ದಂತೆ ಒಬ್ಬೊಬ್ಬರು ದೇಶ ಬಿಟ್ಟು ಹೋಗಲು ಆರಂಭಿಸಿದ್ರು. ಇನ್ನೇನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕೊಲೊಂಬಿಯಾ ಗರ್ಲ್ ಫ್ರೆಂಡ್ ಜೊತೆ ಹೋಗಲಿದ್ದಾರೆ. ಮಗನ ಜೊತೆ ಸೋನಿಯಾ ಗಾಂಧಿ ದೇಶ ಬಿಡ್ತಾರೆ ಅಂತಾ ಭವಿಷ್ಯ ನುಡಿದ್ರು.

    ಸಿದ್ದರಾಮಯ್ಯ ರಾಜ್ಯದ ದೇವಸ್ಥಾನ, ಮಠಗಳ ಮೇಲೆ ಕಣ್ಣೀಟ್ಟಿದ್ದಾರೆ. ಆದ್ರೆ ಜಕಾತ್ (ದಾನ) ಹೆಸರಲ್ಲಿ ಮಸೀದಿ, ಚರ್ಚ್ ಗಳಿಗೆ ಎಷ್ಟು ಹಣ ಬರುತ್ತೆಂದು ಲೆಕ್ಕ ಇಟ್ಟಿದ್ದಾರಾ? ಜಕಾತ್ ಹೆಸರಲ್ಲಿ ಬಂದ ಹಣದಿಂದ ಬಾಂಬ್, ತಲ್ವಾರ್ ಖರೀದಿ ಮಾಡಲಾಗುತ್ತೆ ಅಂತಾ ಆರೋಪ ಮಾಡಿದ್ರು.

  • ಕುಮಾರಸ್ವಾಮಿ ಕನಸು ಕಾಣಲಿ ತಪ್ಪೇನಿಲ್ಲ, ಹಾಕಿರೋದು ಮಾತ್ರ 50 ರಿಂದ 60 ಸೀಟ್-ಡಿಕೆಶಿ ವ್ಯಂಗ್ಯ

    ಕುಮಾರಸ್ವಾಮಿ ಕನಸು ಕಾಣಲಿ ತಪ್ಪೇನಿಲ್ಲ, ಹಾಕಿರೋದು ಮಾತ್ರ 50 ರಿಂದ 60 ಸೀಟ್-ಡಿಕೆಶಿ ವ್ಯಂಗ್ಯ

    ಹಾಸನ/ರಾಮನಗರ: ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕನಸು ಕಾಣೋದರಲ್ಲಿ ತಪ್ಪೇನಿಲ್ಲ. ಆದ್ರೆ ಚುನಾವಣೆ ಹಾಕಿರೋದು 50 ರಿಂದ 60 ಸೀಟ್ ಮಾತ್ರ ಅಂತಾ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.

    ಹಾಸನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್ 50 ರಿಂದ 60 ಸ್ವಂತ ಅಭ್ಯರ್ಥಿಗಳನ್ನು ಮಾತ್ರ ಕಣ್ಕಕೀಳಿಸಿದೆ. ಇನ್ನು ಉಳಿದಂತೆ ಕಾಂಗ್ರೆಸ್ ಹಾಗು ಬಿಜೆಪಿ ಟಿಕೆಟ್ ವಂಚಿತ ನಾಯಕರಿಗೆ ಜೆಡಿಎಸ್ ಟಿಕೆಟ್ ನೀಡಿದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಬೇಕೆಂದು ಹಾಕಿದೆ. ಮಾತಿಗೋಸ್ಕರ ನಾನು ರೈತನ ಮಗ, ಮಣ್ಣಿನ ಮಗ ಅಂತಾ ಹೇಳಿ ಕೊಳ್ಳಬಾರದು. ರಾಜ್ಯದ ರೈತರಿಗಾಗಿ ಕೆಲಸ ಮಾಡಬೇಕು. ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಹಲವು ರೈತಪರ ಯೋಜನೆಗಳನ್ನು ಜಾರಿಗೆ ತಂದಿದೆ ಅಂತಾ ಹೇಳಿದ್ರು.

    ಇತ್ತ ರಾಮನಗರದ ಚನ್ನಪಟ್ಟಣದಲ್ಲಿ ಅಮಿತ್ ಶಾ ಜೊತೆಗೆ ಹೆಚ್‍ಡಿಕೆ ಒಂದೇ ವಿಮಾನದಲ್ಲಿ ಪ್ರಯಾಣಿಸಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಅಮಿತ್ ಶಾ ಜೊತೆಗಿರುವ ದಾಖಲೆಗಳಿದ್ರೆ ಬಿಡುಗಡೆ ಮಾಡಲಿ. ಅವರಿಗೆ ಜವಬ್ದಾರಿ ಏನಾದ್ರೂ ಇದ್ರೆ ಈ ರೀತಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಅಲ್ಲದೇ ಅಮಿತ್ ಶಾ ಭೇಟಿ ಮಾಡಲು ನನಗೆ ಏನು ಸಂಬಂಧ ಅವರೇನೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾ ಪ್ರವಾಸ ಮಾಡೋಕೆ ಅವರ ಜೊತೆಗೆ ವಿಮಾನದಲ್ಲಿ ಎಲ್ಲಿಗೆ ಹೋಗಲು ಸಾಧ್ಯ ಎಂದು ಪ್ರಶ್ನಿಸಿದ್ರು. ಅಲ್ಲದೇ ಹೀಗೆ ಹೇಳಿದ್ರೆ ಸಿಎಂ ಕುಡಿದು ಮಾತನಾಡುತ್ತಿದ್ದಾರೆ ಅಂತಾ ಜನ ಕಾಮೆಂಟ್ಸ್ ಮಾಡ್ತಾರೆ ಎಂದು ಕಿಡಿಕಾರಿದ್ರು.

  • ವಿಮಾನ ಕುಸಿಯುತ್ತಿದ್ದಾಗ ಎಲ್ಲಾ ಮುಗೀತು ಅಂದ್ಕೊಂಡೆ – ಹುಬ್ಬಳ್ಳಿ ಘಟನೆ ಬಗ್ಗೆ ರಾಹುಲ್ ಮಾತು

    ವಿಮಾನ ಕುಸಿಯುತ್ತಿದ್ದಾಗ ಎಲ್ಲಾ ಮುಗೀತು ಅಂದ್ಕೊಂಡೆ – ಹುಬ್ಬಳ್ಳಿ ಘಟನೆ ಬಗ್ಗೆ ರಾಹುಲ್ ಮಾತು

    -ಕೈಲಾಸ ಯಾತ್ರೆಗೆ ಪರ್ಮೀಷನ್ ಕೊಡಿ

    ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬದಲಾಗಿದ್ದಾರೆ. ಈ ಮಾತು ಯಾಕೆಂದರೆ ಎರಡು ವಾರ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆ ಹೋಗುವುದಕ್ಕೆ ರಾಹುಲ್ ಗಾಂಧಿ ಕಾರ್ಯಕರ್ತರ ಅನುಮತಿ ಕೇಳಿದ್ದಾರೆ.

    ಈ ಹಿಂದೆ ವಿದೇಶಕ್ಕೆ ಸೈಲೆಂಟಾಗಿ ವಾರಗಟ್ಟಲೇ ಹೋಗಿ ಬರುತ್ತಿದ್ದ ರಾಹುಲ್ ವಿವಾದಕ್ಕೆ ತುತ್ತಾಗ್ತಿದ್ದರು. ಭಾನುವಾರ ದೆಹಲಿಯಲ್ಲಿ ನಡೆದ ಜನಾಕ್ರೋಶ ಸಮಾವೇಶದಲ್ಲಿ ರಾಹುಲ್ ಜನರ ಅನುಮತಿ ಕೇಳಿದ್ದು, ನಾಲ್ಕೈದು ದಿನಗಳ ಹಿಂದೆ ಹುಬ್ಬಳ್ಳಿಗೆ ತೆರಳುವಾಗ ವಿಶೇಷ ವಿಮಾನದಲ್ಲಿ ಜೀವಭಯ ಎದುರಿಸಿದ ಬಗ್ಗೆ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನ ಹುಬ್ಬಳ್ಳಿಗೆ ಬಂದಾಗ ನಿಜವಾಗಿಯೂ ಆಗಿದ್ದೇನು?

    ವಿಮಾನ ಹಠಾತ್ತನೇ 8 ಸಾವಿರ ಅಡಿ ಕೆಳಗೆ ಕುಸಿದಾಗ ಎಲ್ಲಾ ಮುಗಿದು ಹೋಯ್ತು ಅಂದುಕೊಂಡೆ. ಆ ಕ್ಷಣದಲ್ಲೇ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆಗೆ ನಿರ್ಧರಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಮೇಲೆ ಯಾತ್ರೆ ಹೋಗುತ್ತೀನಿ ಎಂದು ಅನುಮತಿ ಕೊಡಿ ಅಂತಾ ಕೇಳಿಕೊಂಡಿದ್ದಾರೆ.

    ಇದೇ ಗುರುವಾರ ರಾಹುಲ್ ಗಾಂಧಿ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಕರಾವಳಿ ಕರ್ನಾಟಕಕ್ಕೆ ಪ್ರಚಾರಕ್ಕೆ ಆಗಮಿಸಿದ್ದರು. ರಾಹುಲ್ ಗಾಂಧಿ ಅವರು ವಿಶೇಷ ವಿಮಾನದಲ್ಲಿ ದೆಹಲಿಯಿಂದ ಹುಬ್ಬಳ್ಳಿಗೆ ಹೊರಟಿದ್ದರು. ಆದರೆ ವಿಮಾನದ ಲ್ಯಾಂಡಿಂಗ್ ವೇಳೆ ಸಮಸ್ಯೆ ಕಾಣಿಸಿಕೊಂಡಿದ್ದು, ವಿಮಾನ ದಿಢೀರನೇ ಎಡಭಾಗಕ್ಕೆ ವಾಲಿತ್ತು. ವೇಗವಾಗಿ ಆಗಸದಿಂದ ಕೆಳಗಿಳಿಯುತ್ತಿರುವಂತೆ ತೊಂದರೆ ಉಂಟಾಗಿತ್ತು.

  • ನೀವು ಬಿಟ್ಟರೂ ನಾನು ಮಾತ್ರ ಬಿಡಲ್ಲ-ಶ್ರೀರಾಮುಲು ಗೆಲ್ಲಿಸಿಕೊಂಡು ಬರ್ತೀನಿ ಅಂತಾ ಹೈಕಮಾಂಡ್‍ಗೆ ರೆಡ್ಡಿ ಸಂದೇಶ

    ನೀವು ಬಿಟ್ಟರೂ ನಾನು ಮಾತ್ರ ಬಿಡಲ್ಲ-ಶ್ರೀರಾಮುಲು ಗೆಲ್ಲಿಸಿಕೊಂಡು ಬರ್ತೀನಿ ಅಂತಾ ಹೈಕಮಾಂಡ್‍ಗೆ ರೆಡ್ಡಿ ಸಂದೇಶ

    ಚಿತ್ರದುರ್ಗ: ನೀವು ಬಿಟ್ಟರೂ ನಾನು ಮಾತ್ರ ಬಿಡಲ್ಲ. ಬಹಿರಂಗವಾಗಿ ಬರಲ್ಲ. ಆದ್ರೆ ಒಳಗಡೆಯಿಂದ ಬಿಡಲ್ಲ ಅನ್ನೋ ಮಂತ್ರವನ್ನು ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ಬಳಗ ಜಪಿಸುತ್ತಿದೆ. ಕಾಂಗ್ರೆಸ್ ಪಕ್ಷ ರೆಡ್ಡಿಯನ್ನು ಟಾರ್ಗೆಟ್ ಮಾಡಿದ್ದ ಬೆನ್ನಲ್ಲೇ, ಅಮಿತ್ ಶಾ ಅಬ್ಬರದ ಪ್ರಚಾರಕ್ಕೆ ಬ್ರೇಕ್ ಹಾಕಿಕೊಳ್ಳುವಂತೆ ತಾಕೀತು ಮಾಡಿದ್ರು.

    ಹೈಕಮಾಂಡ್ ಆದೇಶಕ್ಕೆ ಓಕೆ ಅಂದಿರುವ ಜನಾರ್ದನ ರೆಡ್ಡಿ, ಸಂಸದ ಶ್ರೀರಾಮುಲು ಮೂಲಕ ಹೈಕಮಾಂಡ್‍ಗೆ ಮತ್ತೊಂದು ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಭಾನುವಾರ ಮತ್ತೆ ಮೊಳಕಾಲ್ಮೂರಿಗೆ ಶಿಫ್ಟ್ ಆಗಿರುವ ಜನಾರ್ದನ ರೆಡ್ಡಿ, ನಾನು ಬಹಿರಂಗವಾಗಿ ಅಖಾಡಕ್ಕೆ ಇಳಿಯಲ್ಲ, ಆದ್ರೆ ಒಳಗೆ ಕೆಲಸ ಮಾಡ್ತೀನಿ. 10 ರಿಂದ 12 ಸೀಟುಗಳನ್ನು ಬಿಜೆಪಿಗೆ ಗೆಲ್ಲಿಸಿ ಕೊಡೋದು ನನ್ನ ಜವಾಬ್ದಾರಿ ಎಂದು ಮಾತು ಕೊಟ್ಟಿದ್ದಾರಂತೆ.

    ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ರಾಯಚೂರಿನಲ್ಲಿ ನಮ್ಮದೇ ಹವಾ. ನನ್ನ ಮೊದಲ ಟಾರ್ಗೆಟ್ ಸಿಎಂ ಸಿದ್ದರಾಮಯ್ಯ, ಅವ್ರನ್ನ ಬದಾಮಿಯಲ್ಲಿ ಸೋಲಿಸಿ, ಶ್ರೀರಾಮುಲು ಗೆಲ್ಲಿಸಿಕೊಂಡು ಬರ್ತೀನಿ ಅಂತಾ ರೆಡ್ಡಿ ಬಿಜೆಪಿ ಹೈಕಮಾಂಡ್‍ಗೆ ಸಂದೇಶ ಕಳುಹಿಸಿದ್ದು, ಅಲ್ಲಿಂದಲೂ ಅನುಮತಿ ದೊರತಿದೆ ಎನ್ನಲಾಗಿದೆ.

  • ನಿಮ್ಮೂರಲ್ಲಿ ವೋಟು ಬಂದಿಲ್ಲ, ಅಭಿವೃದ್ಧಿಗೆ ಅನುದಾನ ನೀಡಲ್ಲ: ಅನ್ಸಾರಿ

    ನಿಮ್ಮೂರಲ್ಲಿ ವೋಟು ಬಂದಿಲ್ಲ, ಅಭಿವೃದ್ಧಿಗೆ ಅನುದಾನ ನೀಡಲ್ಲ: ಅನ್ಸಾರಿ

    ಕೊಪ್ಪಳ: ನಿಮ್ಮೂರಿನಲ್ಲಿ ನನಗೆ ವೋಟ್ ಬಂದಿಲ್ಲ. ಹದಿನೈದಿಪ್ಪತ್ತು ವೋಟ್ ಬಂದ್ರೆ ಕೆಲಸ ಮಾಡಲು ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ಕೈ ನಾಯಕ ಇಕ್ಬಾಲ್ ಅನ್ಸಾರಿ ಸಂವಿಧಾನ ವಿರೋಧಿ ನಡೆ ಅನುಸರಿಸಿದ್ದಾರೆ.

    ಗಂಗಾವತಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಬಾಯಿಂದಲೇ ಇಂಥ ಸಂವಿಧಾನ ವಿರೋಧಿ ಹೇಳಿಕೆ ಹೊರ ಬಿದ್ದಿದೆ. ನನಗೆ ವೋಟ್ ಹಾಕದ ಗ್ರಾಮಕ್ಕೆ ಅಭಿವೃದ್ಧಿಗಾಗಿ ಅನುದಾನ ನೀಡಲ್ಲ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ.

    ಗಂಗಾವತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಇಂದಿರಾನಗರ ಗ್ರಾಮದಲ್ಲಿ ಶನಿವಾರ ಅನ್ಸಾರಿ ಪ್ರಚಾರಕ್ಕೆ ತೆರಳಿದ್ದಾರೆ. ಈ ವೇಳೆ ಜನ, ಕಳೆದ ಬಾರಿ ಬಂದಾಗ ಮಸೀದಿ ಅಭಿವೃದ್ಧಿಗೆ ಹಣ ನೀಡುತ್ತೇನೆ ಎಂದು ಭರವಸೆ ನೀಡಿದ್ದೀರಿ. ಆದರೆ ಇದೂವರೆಗೆ ಹಣ ಬಿಡುಗಡೆ ಮಾಡಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

    ಈ ಪ್ರಶ್ನೆಗೆ ಅನ್ಸಾರಿ,  2013ರಲ್ಲಿ ನನಗೆ ನಿಮ್ಮ ಗ್ರಾಮದವರು ಎಷ್ಟು ಮತ ನೀಡಿದ್ದೀರಿ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಅಲ್ಲದೇ ನಿಮ್ಮೂರಲ್ಲಿ ಕೇವಲ 15 ರಿಂದ 20 ವೋಟ್ ಮಾತ್ರ ಬಂದಿವೆ. ಇಷ್ಟು ವೋಟ್ ಹಾಕಿದ್ರೆ ಕೆಲಸ ಮಾಡಲು ಆಗುತ್ತಾ ಎಂದು ಉತ್ತರಿಸಿದ್ದಾರೆ. ಕೊನೆಗೆ ಈ ಸಲ ನನ್ನ ಜೊತೆ ಇರಿ ಎಲ್ಲ ಮಾಡೋಣ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

    https://www.youtube.com/watch?v=CGrl__faRx0