Tag: Karnataka Election

  • ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಮತಯಾಚನೆಗೆ ಮುಂದಾದ ಯಶ್

    ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಮತಯಾಚನೆಗೆ ಮುಂದಾದ ಯಶ್

    ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಚುಣಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಮತ್ತು ಜೆಡಿಎಸ್ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರೋ ನಟ ಯಶ್ ಇಂದು ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

    ಯಶ್ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆ ನಡೆಸಲಿದ್ದಾರೆ. ಇಂದು ಸಂಜೆ ಸುಮಾರು 5 ಗಂಟೆಗೆ ನಾಯಕನಟ್ಟಿಯಲ್ಲಿ ಬಹಿರಂಗ ಪ್ರಚಾರ ಆರಂಭಿಸಿ ನಾಯಕನಟ್ಟಿ, ಕೊಂಡ್ಲಹಳ್ಳಿ, ಮೊಳಕಾಲ್ಮೂರು ಹಾಗು ರಾಂಪುರದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಬಾರಿ ಸಂಸದ ಶ್ರೀರಾಮುಲು ಸ್ಪರ್ಧೆಯಿಂದಾಗಿ ಮೊಳಕಾಲ್ಮೂರು ಕ್ಷೇತ್ರ ಬಾರಿ ಹೈ ವೊಲ್ಟೇಜ್ ಎನ್ನಿಸಿಕೊಂಡಿದೆ. ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಪರ ಪ್ರಚಾರಕ್ಕಿಳಿದು ಮತದಾರರ ಗೊಂದಲಕ್ಕೆ ತೆರೆ ಎಳೆದ ಯಶ್

    ಉತ್ತಮ ಕೆಲಸ ಮಾಡುವ ವ್ಯಕ್ತಿಗಳು ಮುಖ್ಯ. ಅದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದೇನೆ. ಯಾರು ಜನಪರ ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕಿ ಅಂತ ಹೇಳಿದ್ದ ನಟ ಯಶ್ ಈಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪರ ಬಹಿರಂಗವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

    ನಟ ಯಶ್, ನಾನು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದರಿಂದ ಮತದಾರರಿಗೆ ಗೊಂದಲವಾಗಿರಬಹುದೆಂದು ನಿನ್ನೆಯಷ್ಟೇ ಸಮರ್ಥನೆ ನೀಡಿದ್ದರು. ನನ್ನ ಪ್ರಚಾರ ಯಾವುದೇ ಪಕ್ಷದ ಪರ ಅಲ್ಲ. ನನಗೆ ಇಷ್ಟವಾಗುವ ವ್ಯಕ್ತಿಗಳ ಪರ ಮತಯಾಚನೆ ಮಾಡುವೆ. ನಾನು ರಾಜ್ಯದ ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ಆದರೆ ಆ ಬಗ್ಗೆ ನಾನು ಚಿಂತಿಸಿಲ್ಲ ಅಂತ ಹೇಳಿದ್ದರು.

  • ಬೆಳಗಾವಿ: ಎಂಇಎಸ್ ಅಭ್ಯರ್ಥಿಗೆ ಮರಾಠಿಗರಿಂದಲೇ ತರಾಟೆ

    ಬೆಳಗಾವಿ: ಎಂಇಎಸ್ ಅಭ್ಯರ್ಥಿಗೆ ಮರಾಠಿಗರಿಂದಲೇ ತರಾಟೆ

    ಬೆಳಗಾವಿ: ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಎಂಇಎಸ್ ಪಕ್ಷದ ಅಭ್ಯರ್ಥಿಗೆ ಮರಾಠಿ ಯುವಕರೇ ಘೇರಾವ್ ಹಾಕಿದ್ದಾರೆ.

    ಎಂಇಎಸ್ ಅಭ್ಯರ್ಥಿ ಬಾಳಾಸಾಹೇಬ ಕಾಕತಕರ ಮತಯಾಚನೆಗಾಗಿ ಬೆಳಗಾವಿ ಪಟ್ಟಣದ ಶಿವಾಜಿ ನಗರಕ್ಕೆ ತೆರಳಿದ್ದರು. ಈ ವೇಳೆ ಬಾಳಾಸಾಹೇಬ ನಗರಕ್ಕೆ ಆಗಮಿಸುತ್ತಿದ್ದಂತೆ ಕೋಪಗೊಂಡ ಕೆಲ ಮರಾಠಿ ಭಾಷಿಕ ಯುವಕರು ಆರಂಭದಲ್ಲೇ ಅವರನ್ನು ತಡೆದಿದ್ದಾರೆ.

     

    ಮರಾಠಿ ಹೆಸರಲ್ಲಿ ವೋಟ್ ಕೇಳ್ತಿರಿ, ಆಮೇಲೆ ನಮ್ಮನ್ನು ನಿರ್ಲಕ್ಷ್ಯ ಮಾಡ್ತೀರಿ. ನಿಮ್ಮಿಂದಾಗಿ ಮರಾಠಾ ಸಮುದಾಯಕ್ಕೆ ಯಾವುದೇ ಕೊಡುಗೆಗಳಿಲ್ಲ. ಇದೂವರೆಗೂ ಎಂಇಎಸ್ ಮರಾಠಿಗರ ಅಭಿವೃದ್ಧಿ ಮಾಡು ವಲ್ಲಿ ವಿಫಲಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

    ಸಾರ್ವಜನಿಕವಾಗಿ ಮರಾಠಿ ಭಾಷಿಕರಿಂದಲೇ ತರಾಟೆಗೊಳಗಾದ ಬಾಳಾಸಾಹೇಬ ತೀವ್ರ ಮುಜುಗರಕ್ಕೊಳಗಾದ್ರು.

  • ನವಲಗುಂದದಲ್ಲಿ ಕೋನರೆಡ್ಡಿ ಗೆಲ್ಲಿಸಲು ಕೈ ಖೇಲ್ – ಬದಾಮಿಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಡೀಲ್..?

    ನವಲಗುಂದದಲ್ಲಿ ಕೋನರೆಡ್ಡಿ ಗೆಲ್ಲಿಸಲು ಕೈ ಖೇಲ್ – ಬದಾಮಿಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಡೀಲ್..?

    ಬಾಗಲಕೋಟೆ: ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆಯಂತೆ ಅಂತಾ ಹೇಳಿಕೊಂಡು 10 ದಿನದಿಂದ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡ್ತಿದ್ದಾರೆ. ಮೋದಿ-ದೇವೇಗೌಡರು ಪರಸ್ಪರ ಹೊಗಳಿಕೊಂಡ ಮೇಲಂತೂ ಸಿಎಂ ಹೇಳಿಕೆ ತೀವ್ರ ಸ್ವರೂಪ ಪಡೆದಿದೆ.

    ಈ ಬಾರಿಯ ಚುನಾವಣೆಯಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಸಿದ್ದರಾಮಯ್ಯ ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಯಾವುದಕ್ಕೂ ಇರಲಿ ಅಂತಾ ಸಿಎಂ ಕೆಲ ಜೆಡಿಎಸ್ ಅಭ್ಯರ್ಥಿಗಳ ಜೊತೆ ಡೀಲ್ ಮಾಡಿಕೊಂಡ್ರಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ನವಲಗುಂದದಲ್ಲಿ ಜೆಡಿಎಸ್ ಕೋನರೆಡ್ಡಿಯನ್ನು ಸುಲಭವಾಗಿ ಗೆಲ್ಲುವಂತೆ ನೋಡಿಕೊಂಡು, ಒಂದು ವೇಳೆ ಮೈತ್ರಿ ಸಂದರ್ಭ ಬಂದ್ರೆ ಕೋನರೆಡ್ಡಿಯನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಲು ಸಿಎಂ ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.

    ಕೋನರೆಡ್ಡಿ ಅವರನ್ನು ಗೆಲ್ಲಿಸುವುದಕ್ಕಾಗಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಸಿಎಂ ಸ್ಪರ್ಧಿಸಿರೋ ಬದಾಮಿಯಲ್ಲಿಯೂ ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದದ ಚರ್ಚೆ ನಡೆದಿದ್ಯಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ.

    ಕಾಂಗ್ರೆಸ್-ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂಬ ಪ್ರಶ್ನೆಗಳಿಗೆ ಪೂರಕ ಎಂಬಂತೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಹಾಗೂ ಬದಾಮಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ್ ಭೇಟಿ ಮಾಡಿ 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.

    ಭೇಟಿ ಬಳಿಕ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ್, ಎಸ್.ಆರ್.ಪಾಟೀಲರನ್ನ ಭೇಟಿಯಾಗಿದ್ದು ನಿಜ. ಔಪಚಾರಿಕವಾಗಿ ಭೇಟಿಯಾಗಿದ್ದೆ ಅಷ್ಟೇ ಅವರೊಂದಿಗೆ ರಾಜಕೀಯ ಚರ್ಚೆ ನಡೆಸಿಲ್ಲ. ಆಕಸ್ಮಿಕವಾಗಿ ಹೋಟೆಲ್ ನಲ್ಲಿ ಸಿಕ್ಕಿದ್ದರು ಮಾತನಾಡಿಸಿದೆ. ಬಿಜೆಪಿ ನಾಯಕರು ಎದರುಗಡೆ ಸಿಕ್ಕರೆ ಮಾತನಾಡಿಸುವೆ ಇದರಲ್ಲಿ ಯಾವುದೇ ಒಳಒಪ್ಪಂದವಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಸೋಲಿನ ಭಯದಿಂದ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಬದಾಮಿ ಅತಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಅಂತಾ ಸ್ಪಷ್ಟನೆ ನೀಡಿದ್ರು.

    ಇದೇ ವಿಚಾರವಾಗಿ ಮಾತನಾಡಿದ ಎಸ್.ಆರ್.ಪಾಟೀಲ್, ಒಂದೇ ಹೋಟೆಲ್ ನಲ್ಲಿ ಇರೋದಕ್ಕೆ ಜೆಡಿಎಸ್ ಅಭ್ಯರ್ಥಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ನನ್ನೊಂದಿಗೆ ಚಹಾ ಸೇವಿಸಿದ್ರು. ಭೇಟಿಯ ವೇಳೆ ನಮ್ಮಿಬ್ಬರ ಮಧ್ಯೆ ಯಾವುದೇ ರಾಜಕೀಯ ಒಳ ಒಪ್ಪಂದದ ಚರ್ಚೆಯಾಗಿಲ್ಲ. ಹಳೆಯ ಸ್ನೇಹ ಇರೋದಕ್ಕೆ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ನನ್ನನ್ನು ಭೇಟಿಯಾಗಿದ್ರು ಅಂತ ಪಾಟೀಲ್ ಸಮರ್ಥಿಸಿಕೊಂಡ್ರು.

  • ಏಯ್ ರೆಡ್ಡಿ ಬಾರಪ್ಪ ನೀನು ಎಂದ ಸಿಎಂ – ಊಹುಂ ನಾ ಬರಕಿಲ್ಲ ಎಂದ ಮಾಜಿ ಶಾಸಕ

    ಏಯ್ ರೆಡ್ಡಿ ಬಾರಪ್ಪ ನೀನು ಎಂದ ಸಿಎಂ – ಊಹುಂ ನಾ ಬರಕಿಲ್ಲ ಎಂದ ಮಾಜಿ ಶಾಸಕ

    ಬಳ್ಳಾರಿ: ನಗರದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಶಾಸಕರೊಬ್ಬರನ್ನು ವೇದಿಕೆಗೆ ತರಲು ಸಿಎಂ ಹರಸಾಹಸ ಪಟ್ಟ ಘಟನೆ ನಡೆಯಿತು.

    ಸ್ಥಳೀಯ ಮುಖಂಡರಿಗೆ ವೇದಿಕೆ ನೀಡದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ವೇದಿಕೆಯಿಂದ ದೂರ ಉಳಿದಿದ್ದರು. ವಿಷಯ ತಿಳಿದ ಸಿಎಂ ಸಿದ್ದರಾಮಯ್ಯ ಬಾ ರೆಡ್ಡಿ ಅಂತಾ ಕೂಗಿ ಕರೆದ್ರೂ ಬರಲಿಲ್ಲ. ಕೊನೆಗೆ ಸಿ.ಎಂ ಇಬ್ರಾಹಿಂ ಅವರೇ ಕೆಳಗಿಳಿದು ಸೂರ್ಯನಾರಾಯಣ ರೆಡ್ಡಿಯನ್ನು ವೇದಿಕೆಗೆ ಕರೆತಂದಿದ್ದು ವಿಶೇಷವಾಗಿತ್ತು. ಇದನ್ನು ಓದಿ: ನಿಮ್ ಜೊತೆ ಬರಲ್ಲ, ವೋಟು ಹಾಕಲ್ಲ- ಪ್ರಚಾರದ ವೇಳೆ ಸಿದ್ದು ಮರಿಸ್ವಾಮಿ ಮಾತಿನ ಜಟಾಪಟಿ

    ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ, ಹಾಗೂ ಕುಮಾರಸ್ವಾಮಿ ಎಷ್ಟೇ ತಿಪ್ಪರಲಾಗ ಹಾಕಿದ್ರೂ ಸಿಎಂ ಆಗಲ್ಲ, ನಾನೇ ಸಿಎಂ ಆಗೋದು. ಜೆಡಿಎಸ್-ಬಿಜೆಪಿ ಸರ್ಕಾರ ರಚನೆಗೆ ದಿನಾಂಕ ನಿಗದಿ ಮಾಡಿದ್ದಾರೆ. ಆದ್ರೆ ಅವರ ಕನಸು ಈಡೇರಲ್ಲ, ಬಿಜೆಪಿಯ ಅಲಿಬಾಬಾ ಮತ್ತು 40 ಮಂದಿ ಕಳ್ಳರು ಮತ್ತೆ ಒಂದಾಗಿದ್ದಾರೆ. ನಮ್ಮನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ ಅಂತಾ ಗುಡುಗಿದ್ರು. ಇದನ್ನೂ ಓದಿ: ಸಿಎಂ ಜೊತೆ ಮಾತಿನ ಜಟಾಪಟಿ ನಡೆಸಿದ್ದ ಮರಿಸ್ವಾಮಿಗೆ ಎಚ್‍ಡಿಕೆಯಿಂದ ಸನ್ಮಾನ

  • ಯಾವ ಭಾಗದಲ್ಲಿ ಪಕ್ಷಗಳ ಟ್ರೆಂಡ್ ಹೇಗಿದೆ? 50:50 ಕ್ಷೇತ್ರಗಳು ಯಾವುದು? ಸಿಎಂ ಯಾರಾಗಬೇಕು?

    ಯಾವ ಭಾಗದಲ್ಲಿ ಪಕ್ಷಗಳ ಟ್ರೆಂಡ್ ಹೇಗಿದೆ? 50:50 ಕ್ಷೇತ್ರಗಳು ಯಾವುದು? ಸಿಎಂ ಯಾರಾಗಬೇಕು?

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರಕ್ಕೆ ಇನ್ನು 10 ದಿನ ಮಾತ್ರ ಬಾಕಿಯಿದೆ. ಎಲ್ಲಾ ಪಕ್ಷಗಳ ಪ್ರಚಾರ ಭರ್ಜರಿಯಾಗಿದ್ದು, ಸೋಲು-ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಬಿಜೆಪಿ 150, ಕಾಂಗ್ರೆಸ್‍ನವರು 130 ಸೀಟ್‍ಗಳಿಸಿ ಸರ್ಕಾರ ರಚಿಸುತ್ತೇವೆ ಎಂದು ಘಂಟಾಘೋಷವಾಗಿ ಹೇಳಿಕೆ ನೀಡಿ ಬೀಗುತ್ತಿದ್ದಾರೆ. ಜೆಡಿಎಸ್ ಸಹ ಸರ್ಕಾರ ನಮ್ಮದೇ ಅಂತ ಹೇಳ್ತಿದೆ. ಯಾರ್ ಏನೇ ಡಂಗೂರ ಸಾರಿಕೊಂಡ್ರೂ ಪ್ರಜಾಪ್ರಭುತ್ವದಲ್ಲಿ ಭವಿಷ್ಯ ನಿರ್ಧರಿಸೋದು ಮತದಾರರ ಪ್ರಭುಗಳು. ಹೀಗಾಗಿ ಮತದಾರ `ಓಟ್‍ಮಿಡಿತ’ ಯಾರ ಕಡೆಗಿದೆ? ಯಾವ ಸರ್ಕಾರ ಬರುತ್ತೆ? ಯಾರು ಗದ್ದುಗೆ ಏರುತ್ತಾರೆ ಅಂತ ನಿಮ್ಮ ಪಬ್ಲಿಕ್ ಟಿವಿಯು ಮೆಗಾ ಸೆಮಿಫೈನಲ್ ಸರ್ವೆ ಮಾಡಿದೆ.

    ಈ ಸಮೀಕ್ಷೆಯನ್ನು ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ ನಂತರ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ 50 ಕ್ಷೇತ್ರಗಳಲ್ಲಿ ಭಾರೀ ಸ್ಪರ್ಧೆ ಇರುವುದು ಕಂಡು ಬಂದಿದ್ದು, ಈ ಕ್ಷೇತ್ರಗಳಲ್ಲಿ ಯಾರು ಅತಿ ಹೆಚ್ಚು ಸ್ಥಾನವನ್ನು ಗೆಲ್ಲುತ್ತಾರೋ ಅವರು ಅಧಿಕಾರ ಏರಲಿದ್ದಾರೆ. ಹಾಗೆಂದ ಮಾತ್ರಕ್ಕೆ ಇದೇ ಅಂತಿಮ ಸಮೀಕ್ಷೆಯಲ್ಲ. ಕೊನೆ ದಿನ ಹತ್ತಿರ ಬರುತ್ತಿದ್ದಂತೆ ಮೂರು ಪಕ್ಷಗಳ ಪ್ರಚಾರ ಜೋರಾಗಲಿದೆ. ಅಷ್ಟೇ ಅಲ್ಲದೇ ಮೋದಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಈ ವಿಚಾರಗಳು ಮತದಾರರ ಮೇಲೆ ಪ್ರಭಾವ ಬೀಳುವ ಸಾಧ್ಯತೆ ಇರುತ್ತದೆ. ಕೊನೆ ಕ್ಷಣದಲ್ಲಿ ಮತದಾರರ ನಿರ್ಧಾರ ಬದಲಾಗುತ್ತಾ? ಅಥವಾ ಇದೇ ರೀತಿ ಫಲಿತಾಂಶ ಬರುತ್ತಾ ಎನ್ನುವುದು ಚುನಾವಣೆಗೆ ಮುನ್ನ ಪ್ರಸಾರವಾಗಲಿರುವ ಫೈನಲ್ ಸಮೀಕ್ಷೆಯಲ್ಲಿ ಪ್ರಕಟವಾಗಲಿದೆ. ಹೀಗಾಗಿ ಸದ್ಯ ವಲಯವಾರು ಅಥವಾ ಪ್ರಾಂತ್ಯವಾರು ಪಕ್ಷಗಳ ಟ್ರೆಂಡ್ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.

    1. ಸಿಎಂ ಸಿದ್ದರಾಮಯ್ಯ ಅವರು ಎರಡು ಕಡೆ ಸ್ಪರ್ಧೆ ಕಾಂಗ್ರೆಸ್ ಲಾಭನಾ..? ನಷ್ಟನಾ?
    ಹೈದರಾಬಾದ್ ಕರ್ನಾಟಕ
    ಲಾಭ – 28.33%
    ನಷ್ಟ – 49.67%
    ವ್ಯತ್ಯಾಸ ಆಗಲ್ಲ – 14.33%
    ಏನು ಹೇಳಲ್ಲ -7.67%

    ಮುಂಬೈ ಕರ್ನಾಟಕ
    ಲಾಭ – 31.00%
    ನಷ್ಟ – 47.25%
    ವ್ಯತ್ಯಾಸ ಆಗಲ್ಲ – 14.75%
    ಏನು ಹೇಳಲ್ಲ -7.00%

    ಕರಾವಳಿ ಕರ್ನಾಟಕ
    ಲಾಭ – 23.33%
    ನಷ್ಟ – 46.00%
    ವ್ಯತ್ಯಾಸ ಆಗಲ್ಲ -19.33%
    ಏನು ಹೇಳಲ್ಲ – 11.34%

    ಮಧ್ಯ ಕರ್ನಾಟಕ/ ಮಲೆನಾಡು
    ಲಾಭ – 15.00%
    ನಷ್ಟ – 58.00%
    ವ್ಯತ್ಯಾಸ ಆಗಲ್ಲ -19.00%
    ಏನು ಹೇಳಲ್ಲ – 8.00%

    ಹಳೆ ಮೈಸೂರು
    ಲಾಭ – 26.89%
    ನಷ್ಟ – 50.22%
    ವ್ಯತ್ಯಾಸ ಆಗಲ್ಲ -13.11%
    ಏನು ಹೇಳಲ್ಲ – 9.78%

    ಬೆಂಗಳೂರು ನಗರ
    ಲಾಭ – 27.44%
    ನಷ್ಟ – 56.32%
    ವ್ಯತ್ಯಾಸ ಆಗಲs್ಲ – 10.47%
    ಏನು ಹೇಳಲ್ಲ – 5.77%

    ಸಮಗ್ರ ಕರ್ನಾಟಕ
    ಲಾಭ -26.51%
    ನಷ್ಟ – 50.93%
    ವ್ಯತ್ಯಾಸ ಆಗಲ್ಲ – 14.46%
    ಏನು ಹೇಳಲ್ಲ – 8.10%

    2. ವರುಣಾದಲ್ಲಿ ಯಡಿಯೂರಪ್ಪ ಮಗನಿಗೆ ಟಿಕೆಟ್ ಕೊಡದೇ ಬಿಜೆಪಿ ಎಡವಟ್ಟು ಮಾಡಿಕೊಂಡಿತಾ?
    ಸಮಗ್ರ ಕರ್ನಾಟಕ
    ಹೌದು – 48.45%
    ಇಲ್ಲ – 31.68%
    ಗೊತ್ತಿಲ್ಲ – 19.87%

    3. ಯಡಿಯೂರಪ್ಪ ಮಗನ ಟಿಕೆಟ್ ರಾದ್ಧಾಂತದ ನಂತರವೂ ಲಿಂಗಾಯತರು ಬಿಜೆಪಿ ಪರ ನಿಲ್ಲುತ್ತಾರಾ?
    ಹೈದರಾಬಾದ್ ಕರ್ನಾಟಕ
    ಹೌದು – 43.33%
    ಇಲ್ಲ – 32.33%
    ಗೊತ್ತಿಲ್ಲ – 24.34%

    ಮುಂಬೈ ಕರ್ನಾಟಕ
    ಹೌದು – 47.00%
    ಇಲ್ಲ – 31.00%
    ಗೊತ್ತಿಲ್ಲ – 22.00%

    ಕರಾವಳಿ ಕರ್ನಾಟಕ
    ಹೌದು – 40.00%
    ಇಲ್ಲ – 30.67%
    ಗೊತ್ತಿಲ್ಲ – 29.33%

    ಮಧ್ಯ ಕರ್ನಾಟಕ/ಮಲೆನಾಡು
    ಹೌದು – 59.50%
    ಇಲ್ಲ – 20.00%
    ಗೊತ್ತಿಲ್ಲ – 20.50%

    ಹಳೆ ಮೈಸೂರು
    ಹೌದು – 41.56%
    ಇಲ್ಲ – 34.44%
    ಗೊತ್ತಿಲ್ಲ – 24.00

    ಬೆಂಗಳೂರು ನಗರ
    ಹೌದು – 34.30%
    ಇಲ್ಲ – 45.84%
    ಗೊತ್ತಿಲ್ಲ – 19.86%

    ಸಮಗ್ರ
    ಹೌದು – 43.84%
    ಇಲ್ಲ – 33.14%
    ಗೊತ್ತಿಲ್ಲ – 23.02%

    4. ಸಿದ್ದರಾಮಯ್ಯ ಅವರ ಲಿಂಗಾಯತ ಧರ್ಮಾಸ್ತ್ರ ಕಾಂಗ್ರೆಸ್ ಬುಟ್ಟಿಗೆ ಮತ ತಂದುಕೊಡುತ್ತಾ?
    ಸಮಗ್ರ ಕರ್ನಾಟಕ
    ಹೌದು – 28.19%
    ಇಲ್ಲ – 54.70%
    ಗೊತ್ತಿಲ್ಲ – 17.11%

    5. ಜನಾರ್ದನ ರೆಡ್ಡಿಗೆ ರೆಡ್ ಕಾರ್ಪೆಟ್ ಹಾಸಿದ್ದು ಬಿಜೆಪಿಗೆ ತಿರುಗುಬಾಣ ಆಗುತ್ತಾ?
    ಸಮಗ್ರ ಕರ್ನಾಟಕ
    ಹೌದು ಉಲ್ಟಾ ಹೊಡೆಯುತ್ತೆ – 33.26%
    ಇಲ್ಲ, ಲಾಭ ಆಗುತ್ತೆ – 40.57%
    ಗೊತ್ತಿಲ್ಲ – 26.17%

    6. ಕಾವೇರಿ ಪರ ಸುಪ್ರೀಂ ಕೋರ್ಟ್ ತೀರ್ಪು ಕಾಂಗ್ರೆಸ್ ಪ್ಲಸ್ ಆಗುತ್ತಾ?
    ಸಮಗ್ರ
    ಹೌದು – 36.58%
    ಇಲ್ಲ – 46.09%
    ಗೊತ್ತಿಲ್ಲ – 17.33%

    7. ಸಿದ್ದರಾಮಯ್ಯ ಆಡಳಿತದ ಈ 5 ವರ್ಷ ನಿಮಗೆ ತೃಪ್ತಿ ತಂದಿದ್ಯಾ?
    ಸಮಗ್ರ
    ಅತ್ಯುತ್ತಮ – 14.63%
    ಉತ್ತಮ – 17.28%
    ಸಾಧಾರಣ – 32.02%
    ಕಳಪೆ – 31.34%
    ಏನೂ ಹೇಳಲ್ಲ – 4.73%

    8. ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಬಯಸುತ್ತೀರ?
    ಹೈದ್ರಾಬಾದ್ ಕರ್ನಾಟಕ
    ಸಿದ್ದರಾಮಯ್ಯ _ 29.00%
    ಯಡಿಯೂರಪ್ಪ – 31.00%
    ಕುಮಾರಸ್ವಾಮಿ – 25.33%
    ಇವರಾರೂ ಬೇಡ – 14.67%

    ಮುಂಬೈ ಕರ್ನಾಟಕ
    ಸಿದ್ದರಾಮಯ್ಯ _ 33.00%
    ಯಡಿಯೂರಪ್ಪ – 43.75%
    ಕುಮಾರಸ್ವಾಮಿ – 13.50%
    ಇವರಾರೂ ಬೇಡ – 9.75%

    ಕರಾವಳಿ ಕರ್ನಾಟಕ
    ಸಿದ್ದರಾಮಯ್ಯ _ 21.33%
    ಯಡಿಯೂರಪ್ಪ – 34.67%
    ಕುಮಾರಸ್ವಾಮಿ – 22.00%
    ಇವರಾರೂ ಬೇಡ – 22.00%

    ಮಧ್ಯ ಕರ್ನಾಟಕ/ಮಲೆನಾಡು
    ಸಿದ್ದರಾಮಯ್ಯ _ 12.00%
    ಯಡಿಯೂರಪ್ಪ – 55.50%
    ಕುಮಾರಸ್ವಾಮಿ – 19.00%
    ಇವರಾರೂ ಬೇಡ – 13.50%

    ಹಳೇ ಮೈಸೂರು
    ಸಿದ್ದರಾಮಯ್ಯ _ 20.67%
    ಯಡಿಯೂರಪ್ಪ – 20.00%
    ಕುಮಾರಸ್ವಾಮಿ – 43.11%
    ಇವರಾರೂ ಬೇಡ – 16.22%

    ಬೆಂಗಳೂರು ನಗರ
    ಸಿದ್ದರಾಮಯ್ಯ _ 26.94%
    ಯಡಿಯೂರಪ್ಪ – 28.52%
    ಕುಮಾರಸ್ವಾಮಿ – 38.79%
    ಇವರಾರೂ ಬೇಡ – 5.75%

    ಸಮಗ್ರ
    ಸಿದ್ದರಾಮಯ್ಯ _ 30.56%
    ಯಡಿಯೂರಪ್ಪ – 28.77%
    ಕುಮಾರಸ್ವಾಮಿ – 32.13%
    ಇವರಾರೂ ಬೇಡ – 8.54%

    9. ನಿಮ್ಮ ಮತ ಯಾರಿಗೆ?
    ಕಾಂಗ್ರೆಸ್ – 34.75%
    ಬಿಜೆಪಿ – 35.12%
    ಜೆಡಿಎಸ್ – 26.28%
    ಪಕ್ಷೇತರ – 1.68%
    ನೋಟಾ – 1.01%
    ಏನೂ ಹೇಳಲ್ಲ – 1.16%

    10. ಈ ಬಾರಿ ಸ್ವತಂತ್ರ ಸರ್ಕಾರವೋ ಸಮ್ಮಿಶ್ರ ಸರ್ಕಾರವೋ?
    ಬಹುಮತ ಸರ್ಕಾರ – 40.80%
    ಸಮ್ಮಿಶ್ರ ಸರ್ಕಾರ – 43.89%
    ಏನೂ ಹೇಳಲ್ಲ – 15.31%

    ವಲಯಾವಾರು ಪ್ರಶ್ನೆಗಳು
    ಮುಂಬೈ ಕರ್ನಾಟಕ
    11.ನಿಮ್ಮ ಪ್ರಮುಖ ಚುನಾವಣಾ ವಿಚಾರ ಯಾವುದು?
    ಲಿಂಗಾಯತ ಧರ್ಮ – 17.75%
    ಮಹಾದಾಯಿ ವಿವಾದ – 20.50%
    ಕನ್ನಡ ಮರಾಠಿ – 2.00%
    ಅಭಿವೃದ್ಧಿ – 55.00%
    ಗೊತ್ತಿಲ್ಲ – 4.75%

    ಹೈದ್ರಾಬಾದ್ ಕರ್ನಾಟಕ
    12. ನಿಮ್ಮ ಪ್ರಮುಖ ಚುನಾವಣಾ ವಿಚಾರ ಯಾವುದು?
    ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ – 48.75%
    ಪ್ರತ್ಯೇಕ ರಾಜ್ಯದ ಕೂಗು – 11.00%
    ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ – 25.00%
    ಲಿಂಗಾಯತ ಪ್ರತ್ಯೇಕ ಧರ್ಮ – 5.25%
    ಗೊತ್ತಿಲ್ಲ – 10.00%

    ಕರಾವಳಿ ಕರ್ನಾಟಕ
    13. ಕರಾವಳಿ ಭಾಗದಲ್ಲಿ ಪ್ರಮುಖ ಚುನಾವಣಾ ವಿಷಯ ಹಿಂದುತ್ವನಾ, ಅಭಿವೃದ್ಧಿನಾ?
    ಹಿಂದುತ್ವ – 32.50%
    ಅಭಿವೃದ್ಧಿ – 32.00%
    ಎರಡೂ – 18.50%
    ಏನೂ ಹೇಳಲ್ಲ -17.00%

    ಹಳೆ ಮೈಸೂರು
    14. ಹಳೆ ಮೈಸೂರು ಭಾಗದಲ್ಲಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ಪೈಕಿ ಯಾರು ಪವರ್ ಫುಲ್?
    ದೇವೇಗೌಡ – 47.33%
    ಸಿದ್ದರಾಮಯ್ಯ – 25.78%
    ಇಬ್ಬರೂ ಅಲ್ಲ – 13.78%
    ಗೊತ್ತಿಲ್ಲ – 13.11%

    ಬೆಂಗಳೂರು ನಗರ
    15. ಸಿದ್ದರಾಮಯ್ಯ ಆಡಳಿತದಲ್ಲಿ ನಿಮ್ಮ ಕನಸಿನ ಬೆಂಗಳೂರು ಸಾಕಾರಗೊಂಡಿದ್ಯಾ?
    ಉತ್ತಮ ಅಭಿವೃದ್ಧಿ – 16.61%
    ಸಾಧಾರಣ ಅಭಿವೃದ್ಧಿ – 25.83%
    ನಿರೀಕ್ಷಿತ ಮಟ್ಟ ಮುಟ್ಟಿಲ್ಲ – 18.45%
    ಏನು ಆಗಿಲ್ಲ – 33.57%
    ಏನು ಹೇಳಲ್ಲ – 5.54%

    ಸೀಟು ಲೆಕ್ಕಾಚಾರ
    ಮುಂಬೈ ಕರ್ನಾಟಕ
    ಕಾಂಗ್ರೆಸ್ – 21
    ಬಿಜೆಪಿ – 19
    ಜೆಡಿಎಸ್ -02

    ಹೈದರಾಬಾದ್ ಕರ್ನಾಟಕ
    ಕಾಂಗ್ರೆಸ್ – 13
    ಬಿಜೆಪಿ – 15
    ಜೆಡಿಎಸ್ – 03

    ಕರಾವಳಿ ಕರ್ನಾಟಕ
    ಕಾಂಗ್ರೆಸ್ – 10
    ಬಿಜೆಪಿ – 06
    ಜೆಡಿಎಸ್ -0

    ಮಧ್ಯ ಕರ್ನಾಟಕ/ ಮಲೆನಾಡು
    ಕಾಂಗ್ರೆಸ್ – 08
    ಬಿಜೆಪಿ – 08
    ಜೆಡಿಎಸ್ – 05

    ಹಳೆ ಮೈಸೂರು
    ಕಾಂಗ್ರೆಸ್ – 17
    ಬಿಜೆಪಿ – 05
    ಜೆಡಿಎಸ್ – 19

    ಬೆಂಗಳೂರು ನಗರ
    ಕಾಂಗ್ರೆಸ್ – 12
    ಬಿಜೆಪಿ – 10
    ಜೆಡಿಎಸ್ – 01

    ಸಮಗ್ರ ಕರ್ನಾಟಕ
    ಕಾಂಗ್ರೆಸ್ – 81
    ಬಿಜೆಪಿ – 63
    ಜೆಡಿಎಸ್ -30

    50:50 ಕ್ಷೇತ್ರಗಳು
    ಮುಂಬೈ ಕರ್ನಾಟಕ
    ಬಿಜೆಪಿ/ಕಾಂಗ್ರೆಸ್ -05
    ಬಿಜೆಪಿ/ಜೆಡಿಎಸ್ -00
    ಕಾಂಗ್ರೆಸ್/ಜೆಡಿಎಸ್ – 00
    ಇತರೆ – 03

    8 ಕ್ಷೇತ್ರಗಳು: ಬೆಳಗಾವಿ ದಕ್ಷಿಣ, ಖಾನಾಪುರ, ಬಾದಾಮಿ, ಹುನಗುಂದ, ರೋಣ, ನರಗುಂದ, ಶಿಗ್ಗಾಂವಿ, ರಾಣೆಬೆನ್ನೂರು

    ಹೈದರಾಬಾದ್ ಕರ್ನಾಟಕ
    ಬಿಜೆಪಿ/ಕಾಂಗ್ರೆಸ್ – 06
    ಬಿಜೆಪಿ/ಜೆಡಿಎಸ್ – 01
    ಕಾಂಗ್ರೆಸ್/ಜೆಡಿಎಸ್ – 01
    ಇತರೆ – 01

    9 ಕ್ಷೇತ್ರಗಳು: ಗುಲ್ಬರ್ಗ ದಕ್ಷಿಣ, ಚಿತ್ತಾಪುರ, ಆಳಂದ, ಗುರುಮಿಟ್ಕಲ್, ಹಡಗಲಿ, ವಿಜಯನಗರ, ಸಂಡೂರು, ಹುಮನಾಬಾದ್, ಭಾಲ್ಕಿ

    ಕರಾವಳಿ ಕರ್ನಾಟಕ
    ಬಿಜೆಪಿ/ಕಾಂಗ್ರೆಸ್ – 03
    ಬಿಜೆಪಿ/ಜೆಡಿಎಸ್ – 00
    ಕಾಂಗ್ರೆಸ್/ಜೆಡಿಎಸ್ – 00
    ಇತರೆ – 00

    3 ಕ್ಷೇತ್ರಗಳು: ಕಾಪು, ಕುಮಟಾ, ಕಾರವಾರ

    ಮಧ್ಯ ಕರ್ನಾಟಕ/ ಮಲೆನಾಡು
    ಬಿಜೆಪಿ/ಕಾಂಗ್ರೆಸ್ – 01
    ಬಿಜೆಪಿ/ಜೆಡಿಎಸ್ – 01
    ಕಾಂಗ್ರೆಸ್/ಜೆಡಿಎಸ್ – 0
    ಇತರೆ – 03

    5 ಕ್ಷೇತ್ರಗಳು: ತರೀಕೆರೆ, ಶೃಂಗೇರಿ, ಮೊಳಕಾಲ್ಮೂರು, ಹರಪನಹಳ್ಳಿ, ಮಾಯಕೊಂಡ


    ಹಳೆ ಮೈಸೂರು
    ಬಿಜೆಪಿ/ಕಾಂಗ್ರೆಸ್ – 02
    ಬಿಜೆಪಿ/ಜೆಡಿಎಸ್ – 03
    ಕಾಂಗ್ರೆಸ್/ಜೆಡಿಎಸ್ – 10
    ಇತರೆ -05

    20 ಕ್ಷೇತ್ರಗಳು: ಬೇಲೂರು, ಹಾಸನ, ಹೆಚ್.ಡಿ.ಕೋಟೆ, ಚಾಮುಂಡೇಶ್ವರಿ, ಚಾಮರಾಜ, ಟಿ.ನರಸೀಪುರ, ಕೊಳ್ಳೇಗಾಲ, ಮಳವಳ್ಳಿ, ಮೇಲುಕೋಟೆ, ಕೋಲಾರ, ಕೆಜಿಎಫ್, ಮಾಲೂರು, ಶ್ರೀನಿವಾಸಪುರ, ಚಿಂತಾಮಣಿ, ತುಮಕೂರು ಗ್ರಾಮೀಣ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಗುಬ್ಬಿ, ಮಾಗಡಿ

    ಬೆಂಗಳೂರು ನಗರ
    ಬಿಜೆಪಿ/ಕಾಂಗ್ರೆಸ್ – 04
    ಬಿಜೆಪಿ/ಜೆಡಿಎಸ್ – 01
    ಕಾಂಗ್ರೆಸ್/ಜೆಡಿಎಸ್ – 00
    ಇತರೆ – 00

    5 ಕ್ಷೇತ್ರಗಳು: ದಾಸರಹಳ್ಳಿ, ಹೆಬ್ಬಾಳ, ಶಿವಾಜಿನಗರ, ಗೋವಿಂದರಾಜ ನಗರ, ಜಯನಗರ

    50:50 ಸಮಗ್ರ
    ಬಿಜೆಪಿ/ಕಾಂಗ್ರೆಸ್ – 21
    ಬಿಜೆಪಿ/ಜೆಡಿಎಸ್ – 06
    ಕಾಂಗ್ರೆಸ್/ಜೆಡಿಎಸ್ -11
    ಇತರೆ – 12

  • ರಾಹುಲ್‍ಗೆ ಮೋದಿಯಿಂದ 15 ನಿಮಿಷದ ಚಾಲೆಂಜ್- ಮತ್ತೆ ಪ್ರಧಾನಿಯನ್ನು ಕಾಲೆಳೆದ ರಮ್ಯಾ

    ರಾಹುಲ್‍ಗೆ ಮೋದಿಯಿಂದ 15 ನಿಮಿಷದ ಚಾಲೆಂಜ್- ಮತ್ತೆ ಪ್ರಧಾನಿಯನ್ನು ಕಾಲೆಳೆದ ರಮ್ಯಾ

    ಬೆಂಗಳೂರು: ಕರ್ನಾಟಕ ಚುನಾವಣಾ ರಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಟ್ಟಿದ್ದು, ಮೊದಲ ದಿನವೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.

    ಚಾಮರಾಜನಗರ ಜಿಲ್ಲೆಯ ಸಂತೇಮರಳ್ಳಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ಮೋದಿ ನೇರವಾಗಿ ರಾಹುಲ್ ಗಾಂಧಿ ಸವಾಲು ಹಾಕಿದ್ರು. ರಾಹುಲ್ ಗಾಂಧಿ ಚೀಟಿ ಇಲ್ಲದೇ ಕರ್ನಾಟಕ ಸರ್ಕಾರದ ಸಾಧನೆಯನ್ನು 15 ನಿಮಿಷ ಭಾಷಣ ಮಾಡಲಿಕ್ಕೆ ಆಗುತ್ತಾ? ವಿಶ್ವೇಶ್ವರಯ್ಯ ಹೆಸರನ್ನು 5 ಬಾರಿ ಸ್ಪಷ್ಟವಾಗಿ ಹೇಳಲು ಸಾಧ್ಯವೇ ಎಂದು ಮೋದಿ ಬಹಿರಂಗ ಸವಾಲು ಹಾಕಿದ್ದರು.

    ರಮ್ಯಾ ಉತ್ತರ: ಕಾಂಗ್ರೆಸ್ ಸಾಮಾಜಿಕ ಜಾಲತಾಗಳ ಮುಖ್ಯಸ್ಥೆ ರಮ್ಯಾ, ನೇರವಾಗಿ ಮೋದಿಯವರ ಭಾಷಣದ ತುಣುಕುಗಳನ್ನು ಬಳಸಿ ಕಾಲೆಳೆದಿದ್ದಾರೆ. ಈ ಹಿಂದೆ ರಾಹುಲ್ ಗಾಂಧಿ ಲೋಕಸಭೆಯಲ್ಲಿ ನನಗೆ ಮೋದಿ ಅವರ ಜೊತೆ ಮಾತನಾಡಲು 15 ನಿಮಿಷಗಳ ಕಾಲಾವಕಾಶ ನೀಡಿ ರಾಫೆಲ್ ಮತ್ತು ನೀರವ್ ಮೋದಿ ಬಗ್ಗೆ ಮಾತನಾಡ್ತೇನೆ. ನನ್ನ ಪ್ರಶ್ನೆಗಳಿಗೆ ಮೋದಿ ನನ್ನ ಮುಂದೆ ನಿಲ್ಲೋದಕ್ಕೆ ಆಗಲ್ಲ ಅಂತಾ ಹೇಳಿರುವ ಕ್ಲಿಪ್ ಜೊತೆಗೆ ಮೋದಿಯವರ ಭಾಷಣದ ವಿಡಿಯೋ ಸೇರಿಸಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಕಾಂಗ್ರೆಸ್ ಟ್ವಟ್ಟರ್ ಖಾತೆಯಲ್ಲಿ ಇನ್ನೊಂದು ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಇಲ್ಲಿಯೂ ಸಹ ಮೋದಿಯವರ ಭಾಷಣದ ತುಣುಕುಗಳನ್ನೇ ಬಳಸಿ ಕಾಲೆಳೆದಿದ್ದಾರೆ. ಮಂಗಳವಾರ ಮೋದಿ ತಮ್ಮ ಭಾಷಣದಲ್ಲಿ ನಾವು ಒಂದು ಒಳ್ಳೆಯ ಬಟ್ಟೆ ಸಹ ಹಾಕಲ್ಲ ಅಂದಿರುವ ಹೇಳಿಕೆಯನ್ನು ಬಳಸಲಾಗಿದೆ. ಈ ಹೇಳಿಕೆಯ ಜೊತೆಗೆ ಹೈಫೈ ಬಟ್ಟೆ ತೊಟ್ಟಿರುವ ಮೋದಿಯವರ ಫೋಟೋ ಹಾಗು ಅವುಗಳ ಬೆಲೆಯನ್ನು ತೋರಿಸಲಾಗಿದೆ. ಈ ವಿಡಿಯೋಗೆ 1974ರಲ್ಲಿ ತೆರೆಕಂಡ ‘ಸಗಿನಾ’ ಸಿನಿಮಾದ ಕಿಶೋರ್ ಕುಮಾರ್ ಹಾಡಿರುವ ದಿಲೀಪ್ ನಟನೆಯ ‘ಸಾಲಾ ಮೈ ತೋ ಸಾಬ್ ಬನ್ ಗಯಾ’ ಹಾಡನ್ನು ಬಳಸಿಕೊಳ್ಳಲಾಗಿದೆ.

    ಒಟ್ಟಿನಲ್ಲಿ ಕರ್ನಾಟಕ ರಾಜಕೀಯ ಕುರುಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

  • ಮೇ 4ರಿಂದ ಜೆಡಿಎಸ್ ಪರ ಅಸಾವುದ್ದೀನ್ ಓವೈಸಿ ಪ್ರಚಾರ

    ಮೇ 4ರಿಂದ ಜೆಡಿಎಸ್ ಪರ ಅಸಾವುದ್ದೀನ್ ಓವೈಸಿ ಪ್ರಚಾರ

    ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಅಂತ ಅಖಾಡಕ್ಕಿಳಿದಿರುವ ಜೆಡಿಎಸ್ ಗೆ ಮತ್ತೊಂದು ಬೆಂಬಲದ ರಕ್ಷೆ ಸಿಕ್ಕಿದೆ. ಈಗಾಗಲೇ ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದೆ.

    ಈಗ ಬಿಎಸ್‍ಪಿ ಜೊತೆ ಎಂಐಎಂ ಪಕ್ಷದ ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಬೆಂಬಲವು ಜೆಡಿಎಸ್ ಗೆ ಸಿಕ್ಕಿದ್ದು, ಮೇ 4ರಿಂದ ಓವೈಸಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಜೆಡಿಎಸ್ ಗೆ ಬೆಂಬಲ ನೀಡಲು ಒಪ್ಪಿರುವ ಓವೈಸಿ, ಜೆಡಿಎಸ್ ಪರವಾಗಿ ಮೇ 4 ರಿಂದ ಮುರ್ನಾಲ್ಕು ದಿನ ಮುಸ್ಲಿಂ ಮತಗಳಿರುವ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲಿದ್ದಾರೆ.

    ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮುಸ್ಲಿಂಮರು ಹೆಚ್ವು ಇರುವ ಕಡೆ ಓವೈಸಿಯಿಂದ ಪ್ರಚಾರ ಮಾಡಿಸಲು ಜೆಡಿಎಸ್ ಸಿದ್ಧತೆ ಮಾಡಿದೆ. ಅಲ್ಲದೆ ರೆಬೆಲ್ ಶಾಸಕ ಜಮೀರ್ ಅಹಮದ್ ಕ್ಷೇತ್ರವಾದ ಚಾಮರಾಜಪೇಟೆ ಹೆಚ್ಚು ಪ್ರಚಾರ ಮಾಡಿಸಿ ಜಮೀರ್‍ಗೆ ಪಾಠ ಕಲಿಸಲು ದೊಡ್ಡ ಗೌಡ್ರು ಪ್ಲಾನ್ ಹಾಕಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಬಳ್ಳಾರಿ, ಹೈದ್ರಾಬಾದ್ ಕರ್ನಾಟಕ ಭಾಗದಲ್ಲೂ ಓವೈಸಿ ಪ್ರಚಾರಕ್ಕೆ ಜೆಡಿಎಸ್ ಪ್ಲಾನ್ ಮಾಡಿಕೊಂಡಿದೆ ಎಂಬುದಾಗಿ ಪಕ್ಷದ ಮೂಲದಿಂದ ತಿಳಿದುಬಂದಿದೆ.