Tag: Karnataka Election

  • ಮೇ 8ಕ್ಕೆ ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ ಪ್ರಚಾರ

    ಮೇ 8ಕ್ಕೆ ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ ಪ್ರಚಾರ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಆಗಮಿಸಲಿದ್ದಾರೆ.

    ಹುಬ್ಬಳ್ಳಿಯಲ್ಲಿ ಮೇ 8ರ ಮಂಗಳವಾರ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಕೈ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳ ಪರ ಸೋನಿಯಾ ಗಾಂಧಿ ಪ್ರಚಾರ ಮಾಡಲಿದ್ದಾರೆ.

    ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಾದ್ಯಂತ ಸುತ್ತಾಡಿ ಕಾಂಗ್ರೆಸ್ ಪ್ರಚಾರ ನಡೆಸುತ್ತಿದ್ದಾರೆ. ಸೋನಿಯಾ ಗಾಂಧಿ ಅವರು ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಮಾತ್ರ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  • ಧಿಕ್ಕಾರಕ್ಕೆ ಬಗ್ಗದ ನಟ ದರ್ಶನ್‍ರಿಂದ ಚಾಮುಂಡೇಶ್ವರಿಯಲ್ಲಿ ಅಬ್ಬರದ ಪ್ರಚಾರ

    ಧಿಕ್ಕಾರಕ್ಕೆ ಬಗ್ಗದ ನಟ ದರ್ಶನ್‍ರಿಂದ ಚಾಮುಂಡೇಶ್ವರಿಯಲ್ಲಿ ಅಬ್ಬರದ ಪ್ರಚಾರ

    ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪರ ಚಾಮುಂಡೇಶ್ವರಿಯಲ್ಲಿ ಪ್ರಚಾರ ನಡೆಸಿರುವ ನಟ ದರ್ಶನ್ ಪ್ರಚಾರದ ವೇಳೆ ಸಿಎಂ ಪುತ್ರ ರಾಕೇಶ್ ರನ್ನು ನೆನೆದು, ಮಗ ಮೃತಪಟ್ಟರು ಕುಗ್ಗದೆ ಸಿಎಂ ಜನರಿಗಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಕ್ಷೇತ್ರದ ಹಳ್ಳಿಗಳಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ದರ್ಶನ್, ರಾಕೇಶ್ ಸಾವನ್ನಪ್ಪಿದ ವೇಲೆ ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿದೆ. ಬಳಿಕ 10-15 ದಿನಗಳಲ್ಲೇ ಮಗನ ಸಾವಿನಿಂದ ಕುಗ್ಗದೆ ಎದ್ದು ಬಂದರು. ಅಲ್ಲದೇ ಜನರು ತನ್ನನ್ನು ಗೆಲ್ಲಿಸಿದ್ದಾರೆ ಅವರ ಪರ ಕೆಲಸ ಮಾಡಬೇಕು ಎಂದು ಹೇಳಿದ್ದರು. ಮನುಷ್ಯನಿಗೆ ಕಷ್ಟ ಬರುತ್ತೆ ಆದರೆ ಅದನ್ನು ಎದುರಿಸಬೇಕು. ಅದ್ದರಿಂದ ಈ ಬಾರಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಬೇಕು. ಸಿದ್ದರಾಮಯ್ಯ ಅವರನ್ನು ನಂಬಿ. ಅವರನ್ನು ಗೆಲ್ಲಿಸಿಕೊಟ್ಟ ಜನರ ಪರ ಅವರು ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಡೇರ್ ಅಂಡ್ ಡೆವಿಲ್. ಹೀಗಾಗಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

    ಯತೀಂದ್ರ ಸಾಥ್: ಚಾಮುಂಡೇಶ್ವರಿಯಲ್ಲಿ ತಂದೆ ಪರ ಪ್ರಚಾರ ನಡೆಸುತ್ತಿರುವ ದರ್ಶನ್ ಅವರಿಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ಸಾಥ್ ನೀಡಿದ್ರು. ಅಲ್ಲದೇ ಕಾಂಗ್ರೆಸ್ ಮುಖಂಡರಾದ ಧ್ರುವಕುಮಾರ್, ಶಿವಣ್ಣ, ರಾಕೇಶ್ ಪಾಪಾಣ್ಣ ಕೂಡ ಪ್ರಚಾರದಲ್ಲಿ ಭಾಗವಹಿಸಿದ್ದರು. ದರ್ಶನ್ ಪ್ರಚಾರ ನಡೆಸುತ್ತಿರುವ ನೋಡಲು ಹಲವು ಅಭಿಮಾನಿಗಳು ಆಗಮಿಸಿದ್ರು. ಪ್ರಚಾರ ನಡೆಸಿದ ಎಲ್ಲಾ ಗ್ರಾಮಗಳಲ್ಲಿ ಮಾತನಾಡಿದ ದರ್ಶನ್, ಸಿಎಂ ಪರ ಪ್ರಚಾರ ಮಾಡುತ್ತಿರುವುದು ಒಳ್ಳೆಯದು ಅಲ್ಲವೇ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

    ಜೆಡಿಎಸ್ ಪ್ರತಿಭಟನೆ: ಪ್ರಚಾರಕ್ಕೂ ಮೊದಲು ನಟ ದರ್ಶನ್ ಅವರನ್ನು ಗ್ರಾಮಕ್ಕೆ ಪ್ರವೇಶ ಮಾಡದಂತೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಚಾಮುಂಡೇಶ್ವರಿಯ ನಾಗನಹಳ್ಳಿಯಲ್ಲಿ ದರ್ಶನ್ ಗ್ರಾಮಕ್ಕೆ ಅಗಮಿಸದಂತೆ ಘೋಷಣೆ ಕೂಗಿದ್ದರು. ಅಲ್ಲದೆ ಯಾವುದೇ ಕಾರಣಕ್ಕೂ ದರ್ಶನ ಗ್ರಾಮಕ್ಕೆ ಆಗಮಿಸಬಾರದು ಎಂದು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಸಿಎಂ ಕಳೆದ 12 ವರ್ಷಗಳಿಂದ ತಮ್ಮ ಕ್ಷೇತ್ರವನ್ನು ಮರೆತಿದ್ದಾರೆ. ಅಲ್ಲದೇ ಅವರ ಅಧಿಕಾರ ಅವಧಿಯಲ್ಲಿ ರೈತಪರ ಕೆಲಸ ಮಾಡಿಲ್ಲ. ಅಣ್ಣ ಅಂಬರೀಶ್ ಅವರನ್ನು ಕಾಂಗ್ರೆಶ್ ಪಕ್ಷದಿಂದ ದೂರ ಮಾಡಿದ್ದಾರೆ. ಅದ್ದರಿಂದ ಯಾವುದೇ ಕಾರಣಕ್ಕೂ ಪ್ರಚಾರ ಮಾಡಬಾರದು. ಎಂದು ರೈತ ವಿರೋಧಿ ದರ್ಶನ್ ಎಂದು ಘೋಷಣೆ ಕೂಗಿದ್ದರು.

  • ಚಾಮುಂಡೇಶ್ವರಿ ಪ್ರಚಾರದ ಸಿಎಂ ಆಹ್ವಾನಕ್ಕೆ ಕಿಚ್ಚ ಪ್ರತಿಕ್ರಿಯೆ

    ಚಾಮುಂಡೇಶ್ವರಿ ಪ್ರಚಾರದ ಸಿಎಂ ಆಹ್ವಾನಕ್ಕೆ ಕಿಚ್ಚ ಪ್ರತಿಕ್ರಿಯೆ

    ಯಾದಗಿರಿ: ಸಿಎಂ ಪರ ಬದಾಮಿಗೆ ಪ್ರಚಾರಕ್ಕೆ ಹೋಗಲ್ಲ ಅಂತ ಹೇಳಿದ್ದ ನಟ ಕಿಚ್ಚ ಅವರನ್ನು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಪ್ರಚಾರಕ್ಕೂ ಕರೆದಿದ್ದಾರೆ ಅಂತ ಸುದೀಪ್ ಹೇಳಿದ್ದಾರೆ.

    ಬಿಜೆಪಿ ಅಭ್ಯರ್ಥಿ ರಾಜುಗೌಡ ಪರ ಪ್ರಚಾರಕ್ಕಾಗಿ ಸುರಪುರ ಹೆಲಿಪ್ಯಾಡಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಸಿಎಂ ಪ್ರಚಾರಕ್ಕೆ ಚಾಮುಂಡೇಶ್ವರಿಗೆ ಕರೆದಿದ್ದಾರೆ. ಆದ್ರೆ ಈ ಬಗ್ಗೆ ನಾನು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

    ಕ್ಷೇತ್ರದ ನಾಲ್ಕು ಕಡೆ ಅಂದ್ರೆ ಸುರಪುರ, ಕಕ್ಕೇರಾ, ಹುಣಸಗಿ ಹಾಗೂ ಕೊಡೆಕಲ್ ದಲ್ಲಿ ಪ್ರಚಾರ ಮಾಡಲಿರುವ ಸುದೀಪ್ ಅವರು, ವೈಯಕ್ತಿಕವಾಗಿ ನಾನು ನನ್ನ ಸಹೋದರ ರಾಜುಗೌಡ ಪರ ಪ್ರಚಾರ ಮಾಡಲು ಬಂದಿದ್ದೆನೆ. ಈ ಚುನಾವಣೆಯಲ್ಲಿ ರಾಜುಗೌಡ ಗೆಲ್ಲುತ್ತಾರೆ. ಬಾದಾಮಿಯಲ್ಲಿ ಸಿಎಂ ಪರ ಪ್ರಚಾರಕ್ಕೆ ಹೋಗುವುದಿಲ್ಲ ಅಂತ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ: ಯಾದಗಿರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಕಿಚ್ಚ ಸುದೀಪ್!

    ರಾಜು ಗೌಡ ಅವರು ಇವತ್ತಿಂದ ಪರಿಚಯವಲ್ಲ. ಬಹಳ ಹಳೇ ಕಾಲದಿಂದಲೂ ನನಗೆ ಪರಿಚಯವಿದ್ದಾರೆ. ನಮ್ಮದೇ ಕುಟುಂಬ ಅವನು. ಹೀಗಾಗಿ ರಾಜು ಎಲ್ಲಿರ್ತಾನೋ ಅಲ್ಲೇ ಇರ್ತಿವಿ ನಾವು. ಒಂದು ಕ್ರಿಕೆಟ್ ಮೈದಾನದಲ್ಲಿ ನಾವಿಬ್ಬರು ಪರಿಚಯವಾದ್ವಿ. ಅಲ್ಲಿಂದ ಇಲ್ಲಿಯವರೆಗೂ ನಾವು ಒಂದೇ ಕುಟುಂಬದವರಂತೆ ಬೆಳೆಯುತ್ತಿದ್ದೇವೆ ಅಂದ್ರು. ಇದನ್ನೂ ಓದಿ: ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

    ರಾಜು ಗೌಡ ನಾವಿಲ್ದೇನೆ ಗೆಲ್ತಾರೆ. ಒಬ್ಬ ಒಳ್ಳೆಯ ವ್ಯಕ್ತಿ ಹಾಗೂ ಒಳ್ಳೆಯ ಕೆಲಸಗಳನ್ನು ಕೂಡ ಮಾಡಿ ಹೆಸರು ಮಾಡಿದ್ದಾರೆ. ಎಲ್ಲಾ ಕಡೆಯೂ ಪ್ರಚಾರದಿಂದಲೇ ಒಬ್ಬ ವ್ಯಕ್ತಿ ಗೆಲ್ತಾನೆ ಅಂದ್ರೆ ಜನರು ದಡ್ಡರಾಗುತ್ತಾರೆ. ಜನಗಳು ಅವರ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದು ಒಂದು ಬೆಂಬಲ ಅಂತ ಅಂದುಕ್ಕೊಳ್ಳಿ ಅಷ್ಟೇ. ಅವರನ್ನು ಗೆಲ್ಲಿಸಿ ಅನ್ನೋ ಅಧಿಕಾರ ನಮಗಿಲ್ಲ ಅಂತ ಅಂತ ಕಿಚ್ಚ ಹೇಳಿದ್ರು. ಇದನ್ನೂ ಓದಿ: ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!

    ಯಾವುದೇ ಪಕ್ಷದ ಪರ ನಾನು ಪ್ರಚಾರ ಮಾಡಲು ಹೋಗಲ್ಲ, ವ್ಯಕ್ತಿಯ ಪರವಷ್ಟೇ ಪ್ರಚಾರಕ್ಕೆ ತೆರಳುತ್ತೇನೆ. ಬದಾಮಿಯಲ್ಲಿ ಸಿಎಂ ಪರ ಪ್ರಚಾರಕ್ಕೆ ಹೋಗುತ್ತೇನೆ ಅಂತ ನಾನು ಎಲ್ಲೂ ಹೇಳಿಕೊಂಡಿಲ್ಲ. ರಾಜು ಗೌಡ ಪರಿಚಯವಾಗಿದ್ದ ಸಮಯದಿಂದಲೇ ನನಗೆ ಶ್ರೀರಾಮುಲು ಕೂಡ ಪರಿಚಯ. ಅವರೂ ಕೂಡ ನಮ್ಮ ಸಹೋದರ ಇದ್ದಂಗೆ. ಹೀಗಾಗಿ ಅವರ ವಿರುದ್ಧ ನಾನ್ಯಾಕೆ ಪ್ರಚಾರ ಮಾಡಲಿ. ಆದ್ರೆ ಶ್ರೀರಾಮುಲು ಪ್ರಚಾರಕ್ಕೆ ಕರೆದ್ರೆ ಖಂಡಿತವಾಗಿ ಹೋಗ್ತೀನಿ ಅಂದ್ರು. ಇದನ್ನೂ ಓದಿ: ಏಯ್ ಶ್ರೀರಾಮುಲು.. ಯಾಕೆ ಸಿನಿಮಾ ಹೀರೋಗಳನ್ನು ಕರೆಸ್ತೀಯಾ?- ಶ್ರೀರಾಮುಲು, ಯಶ್ ವಿರುದ್ಧ ತಿಪ್ಪೇಸ್ವಾಮಿ ವಾಗ್ದಾಳಿ

  • ಪ್ರಧಾನಿಯ 15 ನಿಮಿಷದ ಸವಾಲಿಗೆ ಸಿಎಂ ಕೊಟ್ರು 5 ನಿಮಿಷದ ಚಾಲೆಂಜ್!

    ಪ್ರಧಾನಿಯ 15 ನಿಮಿಷದ ಸವಾಲಿಗೆ ಸಿಎಂ ಕೊಟ್ರು 5 ನಿಮಿಷದ ಚಾಲೆಂಜ್!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ 15 ನಿಮಿಷದ ಸವಾಲ್ ಹಾಕಿದ್ದರು. ಇದೀಗ ಇಂದು ಸಿದ್ದರಾಮಯ್ಯ ಮೋದಿಗೆ 5 ನಿಮಿಷದ ಸವಾಲ್ ಹಾಕಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು 15 ನಿಮಿಷ ಯಾವುದೇ ನೋಟ್ಸ್ ಸಹಾಯವಿಲ್ಲದೇ ಮಾತನಾಡುವಂತೆ ಸವಾಲು ಎಸೆದಿದ್ದರು. ಈಗ ಕರ್ನಾಟಕ ಚುನಾವಣಾ ಪ್ರಚಾರಕ್ಕಾಗಿ ಬರುತ್ತಿರುವ ಮೋದಿಗೆ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.

    ಆತ್ಮೀಯ ಪ್ರಧಾನಿ ನರೇಂದ್ರ ಮೋದಿ ಅವರೇ, ಈ ಚುನಾವಣೆಯಲ್ಲಿ ನೀವು ಭ್ರಷ್ಟಾಚಾರವನ್ನು ಮಾಡಿದ್ದೀರಿ ಎಂದು ನನಗೆ ಖುಷಿಯಾಗಿದೆ. ಏಕೆಂದರೆ ಅದು ನಿಮ್ಮ ದುರ್ಬಲ ಅಂಶವಾಗಿದೆ. ನಮ್ಮ ಸರಕಾರದ ಬಗ್ಗೆ ಭ್ರಷ್ಟಾಚಾರದ ಆಧಾರವಿಲ್ಲದೇ ಆರೋಪಗಳನ್ನು ಮಾಡುತ್ತಿದ್ದೀರಿ. ಆದ್ದರಿಂದ ಈ ಚುನಾವಣೆಯಲ್ಲಿ ಗೆಲ್ಲಬೇಕಾದರೆ ರೆಡ್ಡಿ ಬ್ರದರ್ಸ್ ಬಳಸುವ ನೈತಿಕತೆಯ ಬಗ್ಗೆ ನೀವು 5 ನಿಮಿಷಗಳ ಕಾಲ ಮಾತನಾಡಬಹುದೇ? ಎಂದು ಸಿದ್ದರಾಮಯ್ಯ ಮೋದಿಗೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ 3 ಸವಾಲೆಸೆದ ರಾಹುಲ್ ಗಾಂಧಿ!

    ರೆಡ್ಡಿ ಪಾಳಯದ 8 ಮಂದಿಗೆ ಟಿಕೆಟ್ ಕೊಟ್ರಲ್ಲ, ಆ ಬಗ್ಗೆ ಹೇಳಿ..! ಫೋರ್ಜರಿ ಸೇರಿ 23 ಭ್ರಷ್ಟಾಚಾರ ಕೇಸ್ ಇರೋ ಯಡಿಯೂರಪ್ಪರನ್ನು ಸಿಎಂ ಅಭ್ಯರ್ಥಿ ಮಾಡಿದ್ರಲ್ಲಾ..! ನಿಮ್ಮ ಪಕ್ಷದ 11 ಮಂದಿ ವಿರುದ್ಧ ಭ್ರಷ್ಟಾಚಾರದ ಕೇಸ್ ಇದೆ. 35 ಸಾವಿರ ಕೋಟಿ ರೂಪಾಯಿ ಗಣಿ ಲೂಟಿ ಹೊಡೆದ ರೆಡ್ಡಿಗಳ ಬಗ್ಗೆ ಮಾತಾಡಿ. ನೀವು ಬೇಕಾದರೆ ಪೇಪರ್ ನೋಡಿ ಮಾತಾಡಬಹುದು ಎಂದು ಕಿಡಿಕಾರಿದ್ದಾರೆ

    ಶ್ರೀರಾಮುಲು – 3 ಕ್ರಿಮಿನಲ್ ಕೇಸ್, ಸೋಮಶೇಖರ ರೆಡ್ಡಿ – 5 ಕ್ರಿಮಿನಲ್ ಕೇಸ್, ಸುರೇಶ್ ಬಾಬು – 6 ಕ್ರಿಮಿನಲ್ ಕೇಸ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು – 4 ಕ್ರಿಮಿನಲ್ ಕೇಸ್ , ಸಿ.ಟಿ.ರವಿ – 3 ಕ್ರಿಮಿನಲ್ ಕೇಸ್ , ಮುರುಗೇಶ್ ನಿರಾಣಿ – 2 ಕ್ರಿಮಿನಲ್ ಕೇಸ್ , ಕೃಷ್ಣಯ್ಯ ಶೆಟ್ಟಿ – 4 ಕ್ರಿಮಿನಲ್ ಕೇಸ್, ಶಿವನಗೌಡ ನಾಯಕ್ – 3 ಕ್ರಿಮಿನಲ್ ಕೇಸ್, ಅಶೋಕ್ – 2 ಕ್ರಿಮಿನಲ್ ಕೇಸ್ ಈ ಎಲ್ಲಾ ಪ್ರಕರಣದ ಬಗ್ಗೆ ಯಾವಾಗ ಮಾತನಾಡುತ್ತೀರಿ. ನಾನು ಕಾಯುತ್ತಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಮೋದಿಗೆ ಟ್ಯಾಗ್ ಮಾಡಿದ್ದಾರೆ.

  • ನಾಳೆ ಸಿಎಂ ಸಿದ್ದರಾಮಯ್ಯ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯಾಟಿಂಗ್

    ನಾಳೆ ಸಿಎಂ ಸಿದ್ದರಾಮಯ್ಯ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ಯಾಟಿಂಗ್

    ಮೈಸೂರು: ಈ ಬಾರಿಯ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರಕ್ಕೆ ಧುಮುಕುತ್ತಿರುವ ನಟ, ನಟಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ವೇಳೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಶನಿವಾರ ಪ್ರಚಾರ ಮಾಡಲಿದ್ದಾರೆ.

    ಈಗಾಗಲೇ ಸಿದ್ದರಾಮಯ್ಯ ಅವರ ಪರ ನಟಿ ಜಯಮಾಲಾ, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಬಾಲಿವುಡ್ ನಟ ರಾಜ್ ಬಬ್ಬರ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಕಣಕ್ಕೆ ಇಳಿಯುತ್ತಿದ್ದಾರೆ. ನಾಳೆ ಬೆಳಗ್ಗೆ 9 ಗಂಟೆಯಿಂದ ಆರಂಭವಾಗುವ ದರ್ಶನ್ ಅವರ ಪ್ರಚಾರ ರಾತ್ರಿ 7.30ರ ವರೆಗೆ ಮುಂದುವರೆಯಲಿದೆ. ಕ್ಷೇತ್ರದ ಒಟ್ಟು 33 ಹಳ್ಳಿಗಳಲ್ಲಿ ದರ್ಶನ್ ರೋಡ್ ಶೋ ನಡೆಸಿ ಪ್ರಚಾರ ನಡೆಸಲಿದ್ದಾರೆ.

    ಮೂಲತಃ ದರ್ಶನ್ ಮೈಸೂರಿನವರಾಗಿದ್ದು, ಅವರ ತಾಯಿ ಮೀನಾ ತೂಗುದೀಪ ಅವರು ಕಾಂಗ್ರೆಸ್ ಮುಖಂಡರು. ಹೀಗಾಗಿ ದರ್ಶನ್ ಸಿಎಂ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.

    ಕಿಚ್ಚ ಸುದೀಪ್ ಪ್ರಚಾರ: ಮೇ 9 ರಂದು ನಟ ಕಿಚ್ಚ ಸುದೀಪ್ ಸಿಎಂ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾರೆ ಎನ್ನಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಅಖಾಡ ದಿನದಿನಕ್ಕೂ ಹೆಚ್ಚು ಪೈಪೋಟಿ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಎಲ್ಲಾ ರೀತಿಯ ಪ್ರಚಾರ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ನಡೆದ ಯಾವುದೇ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರು ಯಾರು ಸಿದ್ದರಾಮಯ್ಯ ಅವರ ಪರ ಪ್ರಚಾರ ನಡೆಸಿರಲಿಲ್ಲ.

  • ಕರ್ನಾಟಕ ಚುನಾವಣೆಯ ಬೆನ್ನಲ್ಲೆ ಪಾಕ್ ಸರ್ಕಾರದಿಂದ ಟಿಪ್ಪು ಸುಲ್ತಾನ್ ಹೊಗಳಿಕೆ

    ಕರ್ನಾಟಕ ಚುನಾವಣೆಯ ಬೆನ್ನಲ್ಲೆ ಪಾಕ್ ಸರ್ಕಾರದಿಂದ ಟಿಪ್ಪು ಸುಲ್ತಾನ್ ಹೊಗಳಿಕೆ

    ಬೆಂಗಳೂರು: ಇದೇ ಮೊದಲ ಬಾರಿಗೆ ಪಾಕಿಸ್ತಾನ ಸರ್ಕಾರ ಟಿಪ್ಪು ಸುಲ್ತಾನ್ ಹೊಗಳಿ ಟ್ವೀಟ್ ಮಾಡಿದ್ದು ದೇಶದೆಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಟಿಪ್ಪು ಸುಲ್ತಾನ್ ಮೃತಪಟ್ಟ 218ನೇ ವರ್ಷಾಚರಣೆಯ ಸಂದರ್ಭದಲ್ಲಿ ಪಾಕ್ ಸರ್ಕಾರ “ಮೈಸೂರಿನ ಹುಲಿ” ಎಂದು ಬಣ್ಣಿಸಿ ಟ್ವೀಟ್ ಮಾಡಿದೆ. ಟ್ವೀಟ್ ನಲ್ಲಿ ಫೋಟೋ ಪ್ರಕಟಿಸಿ, 2 ಸಾವಿರಕ್ಕೂ ಹೆಚ್ಚು ಭಾಷೆಯಲ್ಲಿ ಟಿಪ್ಪುವಿನ ಬಗ್ಗೆ ಪುಸ್ತಕ ಬರೆಯಲಾಗಿದೆ ಬಣ್ಣಿಸಿದೆ.

    ಕರ್ನಾಟಕ ಚುನಾವಣೆಗೆ 9 ದಿನ ಬಾಕಿ ಇರುವಾಗಲೇ ಪಾಕ್ ಸರ್ಕಾರದಿಂದ ಈ ಹೇಳಿಕೆ ಪ್ರಕಟವಾಗಿದ್ದು, ಸಿದ್ದರಾಮಯ್ಯನವರಿಗೆ ನೆರವಾಗಲೆಂದೇ ಈ ಟ್ವೀಟ್ ಪ್ರಕಟವಾಗಿದೆ ಎಂದು ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್ ಆರೋಪಿಸಿದ್ದಾರೆ.

    ಕರ್ನಾಟಕ ಸರ್ಕಾರದ ಟಿಪ್ಪು ಜಯಂತಿಗೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಈಗ ಪಾಕ್ ಸರ್ಕಾರವೇ ಟಿಪ್ಪುವನ್ನು ಹೊಗಳುವ ಮೂಲಕ ಕರ್ನಾಟಕ ಚುನಾವಣೆಯಲ್ಲಿ ಟಿಪ್ಪು ಸುಲ್ತಾನ್ ವಿಚಾರ ಚರ್ಚೆಗೆ ಬಂದಿದೆ.

     

  • ಸಿಎಂ ಪರ ನಟ ಸುದೀಪ್ ಪ್ರಚಾರಕ್ಕೆ ಶುರುವಾಯ್ತು ತೀವ್ರ ವಿರೋಧ

    ಸಿಎಂ ಪರ ನಟ ಸುದೀಪ್ ಪ್ರಚಾರಕ್ಕೆ ಶುರುವಾಯ್ತು ತೀವ್ರ ವಿರೋಧ

    ಬಾಗಲಕೋಟೆ: ತೀವ್ರ ಕುತೂಹಲ ಕೆರಳಿಸಿರುವ ಬಾದಾಮಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪರ ನಟ ಸುದೀಪ್ ಪ್ರಚಾರಕ್ಕೆ ಆರಂಭದಲ್ಲೇ ವಿರೋಧ ಕೇಳಿ ಬಂದಿದೆ.

    ಸಿಎಂ ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಮೇ 9 ರಂದು ಪ್ರಚಾರ ನಡೆಸಲು ವೇಳಾಪಟ್ಟಿ ನಿಗದಿಯಾಗಿದೆ. ಈ ದಿನದಂದು ನಟ ಸುದೀಪ್ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸುದೀಪ್ ಅವರು ರಾಜಕೀಯ ಪಕ್ಷವೊಂದರ ಪರ ಪ್ರಚಾರ ನಡೆಸಲು ಕಾಂತಿ ವೀರ ಸಿಂಧೂರ ಲಕ್ಷ್ಣಣ ಯುವಸೇನೆ (ರಿ) ಜಿಲ್ಲಾ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.

    ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ಅವಧಿಯಲ್ಲಿ ವಾಲ್ಮಿಕಿ ಸಮುದಾಯಕ್ಕೆ ಸೂಕ್ತ ಮೀಸಲಾತಿ ನೀತಿ ಬೇಡಿಕೆಯನ್ನು ಪೂರೈಸದ ಹಿನ್ನೆಲೆಯಲ್ಲಿ ಯುವಸೇನೆ ನಾಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸುದೀಪ್ ಅವರು ಸಿಎಂ ಪರ ಪ್ರಚಾರ ಆಗಮಿಸಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

    ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ಪಣತೊಟ್ಟಿರುವ ಬಿಜೆಪಿ ಸಂಸದ ಶ್ರೀರಾಮುಲುರನ್ನು ಬಾದಾಮಿಯಲ್ಲಿ ಕಣ್ಣಕ್ಕಿಳಿಸಿರುವುದು ತಿಳಿದ ಸಂಗತಿ. ಶ್ರೀರಾಮುಲು ಅವರು ರಾಜ್ಯ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾಗಿದ್ದು, ಕ್ಷೇತ್ರದಲ್ಲಿ ಸಮುದಾಯದ ಮತ ಪ್ರಮುಖ ಪಾತ್ರವಹಿಸುತ್ತವೆ. ಈ ಮತಗಳನ್ನು ಸೆಳೆಯಲು ವಾಲ್ಮಿಕಿ ನಾಯಕ ಸಮುದಾಯದ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆತರಲು ಸಿದ್ಧತೆ ನಡೆಸಿತ್ತು.

  • ಜನಾರ್ದನ ರೆಡ್ಡಿ ಆಸೆಗೆ ಸುಪ್ರೀಂ ತಣ್ಣೀರು

    ನವದೆಹಲಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಇದೇ 12 ರಂದು ಮತದಾನ ಮಾಡಲು ಬಳ್ಳಾರಿಗೆ ತೆರಳು ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

    ಜನಾರ್ದನ ರೆಡ್ಡಿ ಎರಡು ದಿನಗಳ ಕಾಲ ಬಳ್ಳಾರಿಯಲ್ಲಿ ತಂಗಲು ಅನುಮತಿ ನೀಡುವಂತೆ ಕೋರಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಮನವಿಯ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಮತದಾನ ಮಾಡಲು ಸಾಕಷ್ಟು ಬೇರೆ ವಿಧಾನಗಳಿವೆ. ಅದ್ದರಿಂದ ಬದಲಿ ವಿಧಾನದ ಮೂಲಕ ಮತದಾನ ಮಾಡುವಂತೆ ಸೂಚಿಸಿದೆ.

    ಬಳ್ಳಾರಿಗೆ ಜನಾರ್ದನ ರೆಡ್ಡಿ ಭೇಟಿ ನೀಡುವುದರಿಂದ ಬಳ್ಳಾರಿಯ ರಾಜಕೀಯ ಮೇಲೆ ಪ್ರಭಾವ ಉಂಟಾಗಬಹುದು ಎಂಬ ಕಾರಣ ನೀಡಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.

    ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಹಿಂದೆ ಜಾಮೀನು ವೇಳೆ ವಿಧಿಸಿದ್ದ ಷರತ್ತನ್ನು ಬದಲಾವಣೆ ಮಾಡುವಂತೆ ಕೋರಿ ಜನಾರ್ದನ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು. ಬಳ್ಳಾರಿಗೆ ಹೋಗದಂತೆ ವಿಧಿಸಿದ್ದ ಷರತ್ತಿನಲ್ಲಿ ಸಡಿಲಿಕೆ ಇಲ್ಲ. ಅಲ್ಲದೇ ಆಂಧ್ರದ ಕರ್ನೂಲು, ಅನಂತಪುರಂಗೂ ಭೇಟಿ ನೀಡುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು. ಆದರೆ ಮಗಳ ಮದುವೆಗಾಗಿ ಜರ್ನಾದನ ರೆಡ್ಡಿ ಬಳ್ಳಾರಿಗೆ ಹೋಗಲು ಸುಪ್ರೀಂ ಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು.

  • ಫೀಲ್ಡ್ ನಲ್ಲಿ ಸೈಲೆಂಟಾಗು, ಇಲ್ಲದಿದ್ದರೆ ಮನೆಗೆ ಹೋಗಲ್ಲ- ಬೈಂದೂರು ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ!

    ಫೀಲ್ಡ್ ನಲ್ಲಿ ಸೈಲೆಂಟಾಗು, ಇಲ್ಲದಿದ್ದರೆ ಮನೆಗೆ ಹೋಗಲ್ಲ- ಬೈಂದೂರು ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ!

    ಉಡುಪಿ: ಕರ್ನಾಟಕ ವಿಧಾನ ಸಭಾ ಚುನಾಚಣಾ ಕಣದಿಂದ ಹಿಂದೆ ಸರಿಯುವಂತೆ ಜಿಲ್ಲೆಯ ಬೈಂದೂರಿನ ಜೆಡಿಎಸ್ ಅಭ್ಯರ್ಥಿಗೆ ದುಬೈನಿಂದ ಕೊಲೆ ಬೆದರಿಕೆ ಕರೆ ಬಂದಿದೆ.

    ಬೈಂದೂರು ಅಭ್ಯರ್ಥಿ ರವಿ ಶೆಟ್ಟಿಗೆ ದುಬೈನಿಂದ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ರವಿ ಶೆಟ್ಟಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದು, ಪೊಲೀಸರು ರವಿ ಶೆಟ್ಟಿಗೆ ಗನ್ ಮ್ಯಾನ್ ನೀಡಿದ್ದಾರೆ.

    ಫೀಲ್ಡ್ ನಲ್ಲಿ ಸೈಲೆಂಟ್ ಆಗು. ಇಲ್ಲದಿದ್ದರೆ ಮನೆಗೆ ಹೋಗಲ್ಲ ಅಂತ ಇಂಟರ್ನೆಟ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ. ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷನಾಗಿರುವ ರವಿ ಶೆಟ್ಟಿ ಕಳೆದ ಒಂದು ವರ್ಷದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

    ಎದುರಾಳಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಡುಕ ಹುಟ್ಟಿದ್ದು, ತಮ್ಮ ಮತಗಳ ವಿಭಜನೆಯಾಗಬಹುದೆಂದು ಈ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ರವಿ ಶೆಟ್ಟಿ ದೂರಿದ್ದಾರೆ. ಆದ್ರೆ ನಾನು ಯಾವುದೇ ಗೊಡ್ಡು ಬೆದರಿಕೆಗೆ ಬಗ್ಗಲ್ಲ, ಅಂತ ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿ ಹೇಳಿದ್ದಾರೆ.

    ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ, ಬೈಂದೂರು ಜಿಲ್ಲೆಯ ಪೈಕಿ ಅತೀ ಹೆಚ್ಚು ಜೆಡಿಎಸ್ ಮತದಾರರು ಇರುವ ಕ್ಷೇತ್ರ. ನಮ್ಮ ಅಭ್ಯರ್ಥಿ ಪ್ರತೀ ಮನೆಗಳಿಗೂ ಭೇಟಿ ನೀಡಿ ಪ್ರಚಾರ ಮಾಡಿದ್ದಾರೆ. ನೈತಿಕ ಸ್ಥೈರ್ಯ ಕಸಿದುಕೊಳ್ಳಲು ಯತ್ನ ನಡೆಯುತ್ತಿದ್ದು, ಇದಕ್ಕೆಲ್ಲಾ ನಮ್ಮ ಪಕ್ಷ ಜಗ್ಗುವುದಿಲ್ಲ ಅಂತ ಹೇಳಿದ್ದಾರೆ. ಇನ್ನೂ ಉತ್ಸಾಹದಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ.

  • ಪ್ರಚಾರಕ್ಕಾಗಿ ಬಾಚಣಿಕೆ, ಕತ್ತರಿ ಹಿಡಿದ ಕಾಂಗ್ರೆಸ್ ಅಭ್ಯರ್ಥಿ

    ಪ್ರಚಾರಕ್ಕಾಗಿ ಬಾಚಣಿಕೆ, ಕತ್ತರಿ ಹಿಡಿದ ಕಾಂಗ್ರೆಸ್ ಅಭ್ಯರ್ಥಿ

    ಬೀದರ್: ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಅವರು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತದಾರರನ್ನು ಸೆಳೆಯಲು ವಿಚಿತ್ರ ವರಸೆ ಸುರು ಮಾಡಿದ್ದಾರೆ.

    ನೈಸ್ ಖ್ಯಾತಿಯ ಅಶೋಕ್ ಖೇಣಿ ಬೀದರ್ ದಕ್ಷಿಣ ಕ್ಷೇತ್ರದ ಅಣದೂರು ಗ್ರಾಮದಲ್ಲಿ ಗುರುವಾರ ಮತಯಾಚನೆ ಮಾಡುವ ವೇಳೆ, ಸೆಲೂನ್ ಅಂಗಡಿಯಲ್ಲಿ ಕ್ಷೌರ ಮಾಡುವ ಮೂಲಕ ಮೊತ್ತೊಮ್ಮೆ ಮತದಾರರನ್ನು ಸೆಳೆಯುವ ನಾಟಕ ಮಾಡಿದ್ದಾರೆ. ಇದನ್ನೂ ಓದಿ: ಮತ ಕೇಳಲು ಹೋದ ಶಾಸಕ ಅಶೋಕ್ ಖೇಣಿಗೆ ಬೆವರಿಳಿಸಿದ ಬೀದರ್ ಮತದಾರರು!

    ಬಾಚಣಿಕೆ, ಕತ್ತರಿ ಹಿಡಿಯುವ ಮೂಲಕ ಸವಿತ ಸಮಾಜದ ಮತಗಳ ಬೇಟೆಗಾಗಿ ವಿಚಿತ್ರ ಗಿಮಿಕ್ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮದುವೆ, ಮುಂಜಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರನ್ನು ಮೊತ್ತೊಮ್ಮೆ ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ರೋಸಿ ಹೋಗಿರುವ ಮತದಾರ ಪ್ರಭು ಕಿಡಿ ಕಾರಿದ್ದಾರೆ.

    ಕಳೆದ ಬಾರಿ ಚುನಾವಣೆಯಲ್ಲಿ ಬೀದರ್ ದಕ್ಷಿಣವನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಕಲರ್ ಕಲರ್ ಕಾಗೆ ಹಾರಿಸಿದ್ದರು. ನಂತರ ಗೆದ್ದು ಐದು ವರ್ಷ ಕಣ್ಮರೆಯಾಗಿದ್ದ ಖೇಣಿ ಈಗ ಮತ್ತೆ ಬಂದಿರುವುದರಿಂದ ಅವರ ವಿರುದ್ಧ ಕ್ಷೇತ್ರದ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.