Tag: Karnataka Election

  • 1,2,5 ರೂ. ನಾಣ್ಯಗಳನ್ನು ಕೂಡಿಸಿ 2000ರೂ. ಹೆಚ್‍ಡಿಕೆಗೆ ನೀಡಿದ 7ನೇ ತರಗತಿ ವಿದ್ಯಾರ್ಥಿನಿ!

    1,2,5 ರೂ. ನಾಣ್ಯಗಳನ್ನು ಕೂಡಿಸಿ 2000ರೂ. ಹೆಚ್‍ಡಿಕೆಗೆ ನೀಡಿದ 7ನೇ ತರಗತಿ ವಿದ್ಯಾರ್ಥಿನಿ!

    ಚಿಕ್ಕಮಗಳೂರು: ಏಳನೇ ತರಗತಿ ವಿಧ್ಯಾರ್ಥಿನಿಯೊಬ್ಬಳು ಒಂದು, ಎರಡು ಮತ್ತು ಐದು ರೂಪಾಯಿ ನಾಣ್ಯಗಳ ಎರಡು ಸಾವಿರ ಹಣವನ್ನ ಕೂಡಿಟ್ಟು ಚುನಾವಣೆಯ ಖರ್ಚಿಗಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ನೀಡಿದ್ದಾಳೆ.

    ಭಾನುವಾರ ಚಿಕ್ಕಮಗಳೂರು ಜೆಡಿಎಸ್ ಅಭ್ಯರ್ಥಿ ಹರೀಶ್ ಪರ ಮತಯಾಚನೆಗೆ ತೆರಳಿದ್ದ ಹೆಚ್‍ಡಿಕೆ ಭಾಷಣ ಮಾಡುತ್ತಿದ್ದರು. ಈ ವೇಳೆ 7ನೇ ತರಗತಿಯ ವಿದ್ಯಾರ್ಥಿನಿ ವೇದಿಕೆ ಮೇಲೆ ಬಂದು ತಾನು ಕೂಡಿಟ್ಟಿದ್ದ 2 ಸಾವಿರ ಹಣವನ್ನು ಚುನಾವಣೆಯ ಖರ್ಚಿಗಾಗಿ ನೀಡಿದ್ದಾಳೆ.

    ಇದೇ ವೇಳೆ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದಲ್ಲು ನಾಲ್ಕು ಮಕ್ಕಳು ಹಣವನ್ನ ತಂದು ಕೊಟ್ಟಿದ್ದನ್ನ ನೆನಪು ಮಾಡಿಕೊಂಡು ಇದೇ ನನ್ನ ಆಸ್ತಿ ಎಂದು ಮತದಾರರಿಗೆ ನನ್ನನ್ನು ಮರೆಯಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಸಿಎಂ ಅಭ್ಯರ್ಥಿಯನ್ನಾಗಿ ಬಿಎಸ್‍ವೈಯನ್ನು ಘೋಷಿಸಿದ್ದು ನನಗೆ ಪ್ಲಸ್ ಪಾಯಿಂಟ್: ಸಿದ್ದರಾಮಯ್ಯ

    ಸಿಎಂ ಅಭ್ಯರ್ಥಿಯನ್ನಾಗಿ ಬಿಎಸ್‍ವೈಯನ್ನು ಘೋಷಿಸಿದ್ದು ನನಗೆ ಪ್ಲಸ್ ಪಾಯಿಂಟ್: ಸಿದ್ದರಾಮಯ್ಯ

    ಬೆಂಗಳೂರು: ಮೂರು ಪಕ್ಷಗಳ ನಡುವೆ ಪೈಪೋಟಿ ಇದೆ. ಕೆಲವು ಭಾಗಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗು ಕೆಲವು ಭಾಗಗಳಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ ಇದೆ. ಕುಮಾರಸ್ವಾಮಿ ನಾನೇ ಕಿಂಗ್ ಅಂತಿದ್ದಾರೆ. ಆದರೆ ಎರಡು ಪಕ್ಷಗಳ 2 ವರ್ಷಗಳ ಕಾರ್ಯ ವೈಖರಿ ನೋಡಿದರೆ ಬಿಜೆಪಿ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಜೊತೆ ಪ್ರೆಸ್ ಕ್ಲಬ್ ನಲ್ಲಿ ಸಂವಾದ ನಡೆಯಿತು.

    ಸಂವಾದದಲ್ಲಿ ಸಿಎಂ ಮಾತು
    * ಯಡಿಯೂರಪ್ಪ ಅವರನ್ನ ಸಿಎಂ ಅಭ್ಯರ್ಥಿ ಮಾಡಿರುವುದೇ ನನಗೆ ಪ್ಲಸ್ ಪಾಯಿಂಟ್. ಇದು ಸಿದ್ದರಾಮಯ್ಯ ವರ್ಸಸ್ ಮೋದಿ ಅಲ್ಲ. ಸಿದ್ದರಾಮಯ್ಯ ಆಂಡ್ ಯಡಿಯೂರಪ್ಪ ನಡುವಿನ ಫೈಟ್. ಕರ್ನಾಟಕದಲ್ಲಿ ಮೋದಿ ಯಾವುದೇ ಮ್ಯಾಜಿಕ್ ಮಾಡೋದಕ್ಕೆ ಆಗಲ್ಲ. ನನ್ನ ಕ್ಯಾಂಪ್ ಮೋದಿ ಕ್ಯಾಂಪೇನ್ ಗಿಂತ ಹೆಚ್ಚು.

    * 24 ಜನ ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ ಅಂತ ಮೋದಿ ಸೇರಿದಂತೆ ಎಲ್ಲ ಬಿಜೆಪಿ ಮುಖಂಡರು ಹೇಳಿದ್ದಾರೆ. 12 ಜನ ಮಾತ್ರ ಪಿಎಫ್‍ಐ ಮತ್ತು ಎಸ್‍ಡಿಪಿಐ ಕಾರ್ಯಕರ್ತರಿಂದ ಹಿಂದು ಕಾರ್ಯಕರ್ತರ ಕೊಲೆ ಆಗಿದೆ. ಉಳಿಕೆ ವೈಯುಕ್ತಿಕ ಕಾರಣಗಳಿಂದ ಕೊಲೆ ಆಗಿದೆ. ಬೇರೆ ಬೇರೆ ಕಾರಣಗಳಿಂದ ಕೊಲೆ ಆಗಿದೆ. ಹಿಂದು ಸಂಘಟನೆ ಗಳಿಂದಲೂ ಹತ್ತು ಕೊಲೆಯಾಗಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರ ಕೊಲೆಗೆ ಬಿಜೆಪಿ ಕಾರ್ಯಕರ್ತರೇ ಕಾರಣರಾಗಿದ್ದಾರೆ.

    * ಕಳೆದ ಬಾರಿ ಮೈಸೂರು, ಚಾಮರಾಜನಗರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ 7 ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಾಧಿಸಿದೆ. ಈ ಬಾರಿ ಸಹ ಯಾವುದೇ ಬದಲಾವಣೆ ಆಗಿಲ್ಲ. ಆದರೂ ನಾವು ಗೆಲ್ಲುತ್ತೇವೆಂದು ಬಿಜೆಪಿ ಹೇಳುತ್ತಿದೆ.

    * ಕೊಡಗು ಜಿಲ್ಲೆಯ ಎರಡು ಕ್ಷೇತ್ರ ಬಿಟ್ಟರೆ ಉಳಿದ ಎಲ್ಲ ಕಡೆ ಕಾಂಗ್ರೆಸ್ ಐದು ಆರು ಸ್ಥಾನ ಗಳನ್ನ ಗೆದ್ದಿದೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ನಾವು ಅಧಿಕಾರಕ್ಕೆ ಬರುತ್ತೇವೆಂದು ಹೇಳಿಕೊಂಡು ತಿರುಗುತ್ತಿರುವುದು ವ್ಯರ್ಥ.

    * ಪ್ರಧಾನಿ ನರೇಂದ್ರ ಮೋದಿ ಅವರದ್ದು ಕೀಳು ಅಭಿರುಚಿಯ ಪ್ರಚಾರ. ನನಗೆ ಮಾತ್ರ ವಂಶಪಾರಂಪರ್ಯ ರಾಜಕಾರಣ ಅಂತಾರೆ. ಬಿಜೆಪಿ ಅವರಲ್ಲಿಯೂ ನಿಂತಿಲ್ಲವಾ.? ಮೋದಿ ಪ್ರಧಾನಿ ರೀತಿಯಲ್ಲಿ ಮಾತನಾಡುತ್ತಾರೆ ಅಂದುಕೊಂಡಿದ್ದೆ. ಆದರೆ ಹಾಗೇ ಮೋದಿ ಅವರು ಮಾತಾಡಲೇ ಇಲ್ಲ.

    * ನಾವೆಲ್ಲಾ ಬಿಜೆಪಿಯವರು ಸುಸಂಸ್ಕೃತರು ಅಂತಾ ಅಂದುಕೊಂಡಿದ್ದೆವು. ಆದರೆ ನರೇಂದ್ರ ಮೋದಿ ಸೇರಿ ಎಲ್ಲ ಬಿಜೆಪಿ ಮುಖಂಡರು ಕೆಟ್ಟದ್ದಾಗಿ, ವೈಯಕ್ತಿಕವಾಗಿ ಮಾತನಾಡುತ್ತಾರೆ. ಯಡಿಯೂರಪ್ಪ, ಕುಮಾರಸ್ವಾಮಿ ಆಧಾರವಿಲ್ಲದ ಆರೋಪ ಮಾಡಿದಾಗ, ಅನಿವಾರ್ಯವಾಗಿ ನಾವು ಮಾತಾಡಲೇ ಬೇಕು.

    * ಸೀದಾರೂಪಯ್ಯ ಅಂದ್ರೆ ಏನು ಹೇಳೋದು, 10% ಸರ್ಕಾರ ಅಂದರೆ ಸುಮ್ನೆ ಇರೋಕಾಗುತ್ತಾ? ಅವರಿಗೆ ಮಾಹಿತಿ ನೀಡಲಿಕ್ಕೆ ಸಾಕಷ್ಟು ಎಜೆನ್ಸಿಗಳಿವೆ. ಅವುಗಳಿಂದ ಮಾಹಿತಿ ಪಡೆದಾದರೂ ಮಾತಾಡಬಹುದಿತ್ತು. ಸಿದ್ದರಾಮಯ್ಯ 2+1 ಅಂತೆ, ಇದರಲ್ಲಿ ಯಾವುದಾದರೂ ಲಾಜಿಕ್ ಇದೆಯಾ? ಯಡಿಯೂರಪ್ಪ + ಮಗ, ಶಶಿಕಲಾ ಜೊಲ್ಲೆ + 1, ಗೋವಿಂದ ಕಾರಜೋಳ + ಮಗ, ರಾಮಚಂದ್ರೇಗೌಡ + ಮಗ. ಹೀಗಿರುವಾಗ ನಮ್ಮ ಬಗ್ಗೆ ಮಾತನಾಡುತ್ತಾರೆ.

    * ಮಹದಾಯಿ ವಿಚಾರದಲ್ಲಿ ಜವಾಬ್ದಾರಿ ಬೇರೆಯವರ ಮೇಲೆ ಹಾಕುತ್ತಾರೆ. ಸೋನಿಯಾ ಗಾಂಧಿ ಪ್ರಧಾನಿಯಾಗಿರಲಿಲ್ಲ. ನಾಲ್ಕು ವರ್ಷ ಆಡಳಿತ ಮಾಡಿರುವವರು ಇವರು ತಾನೇ? ಸೋನಿಯಾ ಗಾಂಧಿ ಪ್ರಧಾನಿಯಾಗಿದ್ರಾ? ದಾರಿತಪ್ಪಿಸುವ ಹೇಳಿಕೆಗಳಿಂದ ವಾಕರಿಕೆ ಬರುತ್ತಿದೆ. ರಾಜ್ಯದ ಜನ ಇದನ್ನ ಒಪ್ಪಿಕೊಳ್ಳುವುದಿಲ್ಲ.

    * ಸಾಲ ಮನ್ನಾ ಮಾಡಿ ಅಂದರೆ ಮಾಡಲ್ಲ. ರಾಜ್ಯದವರೇ ಮಾಡಿಕೊಳ್ಳಿ ಅಂತಾರೆ, ರಾಜ್ಯ ಬಿಜೆಪಿ ಅವರು ಹಂಗೆ ಕುಣಿತಾರೆ. ಪ್ರಧಾನಿ ಬಳಿ ನಿಯೋಗ ಹೋದರೆ ತುಟಿ ಬಿಚ್ಚಲ್ಲ. ಅಚ್ಛೇ ದಿನ ಯಾವಾಗ ಬರುತ್ತೆ? ಬರಲೇ ಇಲ್ಲ. ನಿಮ್ ಮಾತಿಗೂ, ಆರ್ಥಿಕ ಪರಿಸ್ಥಿತಿಗೂ ಏನಾದರೂ ಸಂಬಂಧ ಇದೆಯಾ?

    * ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿದೆ. ನರೇಂದ್ರ ಮೋದಿ ಕರೆದುಕೊಂಡು ಬಂದು ಮ್ಯಾಜಿಕ್ ಮಾಡೋದು ಭ್ರಮೆ ಅಷ್ಟೇ. ಜೆಡಿಎಸ್ ಪಾಪ 8 ಜಿಲ್ಲೆಯಲ್ಲಿ ಫೈಟ್ ಮಾಡುತ್ತಾರೆ ಅಷ್ಟೇ. ಹಾಗಾಗಿಯೇ ನಾವೇ ಅಧಿಕಾರಕ್ಕೆ ಬರುತ್ತೇವೆ.

    * ಬಿಜೆಪಿಯದ್ದು ಯೂ ಟರ್ನ್ ಗೌರ್ನಮೆಂಟ್. ನಮ್ಮ ಅನ್ನ ಭಾಗ್ಯ ಕಾಪಿ ಮಾಡಿ ಅನ್ನಪೂರ್ಣ ಮಾಡುತ್ತಾರಂತೆ. ಅವರು ಅಧಿಕಾರಕ್ಕೆ ಬರಲ್ಲ, ಮಾಡೋದು ಇಲ್ಲ. ನರೇಂದ್ರ ಮೋದಿ ಬಂದು ಸಿದ್ದರಾಮಯ್ಯ ಸರ್ಕಾರ 10% ಸರ್ಕಾರ ಅಂದಾಕ್ಷಣ ನಂಬಿ ಬಿಡ್ತಾರಾ?

    * ನಾವು ಪಕ್ಷದ ಎಲ್ಲಾ ಭರವಸೆ ಈಡೇರಿಸಿದ್ದೇವೆ. ನಮ್ಮ ಅನ್ನಭಾಗ್ಯದ ಬಗ್ಗೆ ಆರೋಪ ಮಾಡಿದ್ರು, ಅನ್ನಭಾಗ್ಯ ತಂದು ಜನರನ್ನ ಸೋಮಾರಿ ಮಾಡಿದ್ರು ಅಂದ್ರು. ಈಗ ಅವರು ಏನ್ಮಾಡಿದ್ರು, ಅನ್ನಪೂರ್ಣ ಯೋಜನೆ ತರುತ್ತೇವೆ ಅಂತಿದ್ದಾರೆ. ಇದು ಜನರನ್ನ ಸೋಮಾರಿ ಮಾಡುವುದಿಲ್ಲವೇ?

    * 2012 ರಲ್ಲಿ ಅಭಿವೃದ್ಧಿಯಲ್ಲಿ 13 ನೇ ಸ್ಥಾನದಲ್ಲಿದ್ದೆವು. ಇವತ್ತು ಅಭಿವೃದ್ಧಿಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ರೈತರ ಸಾಲ ಮನ್ನಾ ಮಾಡಲಿಲ್ಲ. ರಾಜ್ಯಕ್ಕೆ ಕೊಡಬೇಕಾದ ಅನುದಾನ ಸರಿಯಾಗಿ ಕೊಟ್ಟಿಲ್ಲ. ಅಮಿತ್ ಶಾ ಲೆಕ್ಕ ಬೇರೆ ಕೇಳುತ್ತಾರೆ. ಪ್ರಧಾನಿ ರಾಜ್ಯಕ್ಕೆ ಏನು ಕೊಟ್ಟಿದ್ದಾರೆ?

    * ಇವನು ಯಾವ ಚಾಣಕ್ಯ ಅಂತಾ ನನಗೆ ಗೊತ್ತಿಲ್ಲ. ನಾನಂತೂ ಚಾಣಕ್ಯನನ್ನ ನೋಡಿಲ್ಲ. ಇವನು ಸುಳ್ಳು ಹೇಳುವ ಚಾಣಕ್ಯ. ಏನ್ ಮ್ಯಾಜಿಕ್ ಮಾಡಿದರೂ ಆಟ ನಡೆಯಲ್ಲ. ನಾನು ಜೈನ್ ಅಲ್ಲ ಅಂತಾರೆ, ಇದಕ್ಕಿಂತ ಸುಳ್ಳು ಬೇಕಾ? ರಾಜ್ಯಸಭಾ ನಾಮಿನೇಶನ್ ನಲ್ಲಿ ಜೈನ್ ಅಂತಾ ಬರೆದುಕೊಂಡಿದ್ದಾರೆ. ನಾನು ಪಕ್ಕಾ ಹಿಂದೂ, ಆದರೆ ಅಮಿತ್ ಶಾ ಹಿಂದೂ ಅಲ್ಲ.

    * ಜೆಡಿಎಸ್ ಬಗ್ಗೆ ನಾನು ಹೆಚ್ಚು ಮಾತಾಡಲ್ಲ. ಅವರ ಬಗ್ಗೆ ನಮಗೆ ಸಾಫ್ಟ್ ಕಾರ್ನರ್ ಇಲ್ಲವೇ ಇಲ್ಲ. ರಾಜಕಾರಣದಲ್ಲಿ ನಮ್ಮ ಪ್ರತಿಸ್ಪರ್ಧಿ. ಪೂರ್ವನೂ ಇಲ್ಲ, ಆಶ್ರಮನೂ ಇಲ್ಲ. ನಮ್ಮ ಪೂರ್ವಾಶ್ರಮ ಸೊಶಿಯಲಿಸ್ಟ್ ಪಾರ್ಟಿ.

    * ಇದೇ ದೇವೇಗೌಡ ನರೇಂದ್ರ ಮೋದಿ ಪಿಎಂ ಆದರೆ ಪಾರ್ಲಿಮೆಂಟ್ ಗೆ ಹೋಗಲ್ಲ ಅಂದಿದ್ದರು. ಇದೇ ಮೋದಿ ದೇವೇಗೌಡರನ್ನ ವೃದ್ಧಾಶ್ರಮಕ್ಕೆ ಕಳುಹಿಸಬೇಕು ಅಂತೇಳಿದ್ದರು. ಆದರೆ ಈಗ ಇಬ್ಬರು ಹೊಗಳಿಕೊಳ್ಳುತ್ತಾರೆ. ಅಡ್ವಾಣಿ ಅವರಿಗೆ ಗೌರವ ಕೊಡಲಿಲ್ಲ ಇವರು, ನಮಗೇನು ಹೇಳೋದು?

    * ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂತಾರೆ. 224 ಕ್ಷೇತ್ರದಲ್ಲಿ ಒಬ್ಬ ಮುಸ್ಲಿಂಗೆ ಟಿಕೆಟ್ ಕೊಟ್ಟಿಲ್ಲ. ಒಬ್ಬ ಕ್ರಿಶ್ಚಿಯನ್ ಗೆ ಟಿಕೆಟ್ ಕೊಟ್ಟಿಲ್ಲ. ಇವರೇನು ಮಾತಾಡೋದು?

    * ನನ್ನ, ಪರಮೇಶ್ವರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೈಕಮಾಂಡ್ ನಿರ್ಧಾರ ಮಾಡುತ್ತೆ. ಮೋದಿಯವರ ಆಡಳಿತದಲ್ಲಿ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ. ಶೇ.38 ರಷ್ಟು ದಲಿತರ ಮೇಲೆ ಹಲ್ಲೆ ಪ್ರಕರಣಗಳು ಬಿಜೆಪಿ ಅವಧಿಯಲ್ಲಿ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದು ಮತ್ತೆ ಅಧಿಕಾರ ಪಡೆಯಲಿದೆ. ಅಂತಂತ್ರ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗುವುದಿಲ್ಲ. ಇದೇ ವಾಸ್ತವ.

    * ಐಟಿ ದಾಳಿ ಬಗ್ಗೆ ಭಯವಿಲ್ಲ. ನನ್ನ ಬಳಿ ಏನೂ ಇಲ್ಲ, ದಾಳಿ ಮಾಡಲಿ ನನಗೇನು ಚಿಂತೆ ಇಲ್ಲ. ಐಟಿ ದಾಳಿ ವಿರೋಧಿಯಲ್ಲ, ದಾಳಿ ಮಾಡಲಿ ಅದಕ್ಕೆ ಆಕ್ಷೇಪಣೆ ಇಲ್ಲ. ಆ ಇಲಾಖೆ ಇರುವುದೇ ಅದಕ್ಕೆ, ಆದರೆ ಚುನಾವಣಾ ವೇಳೆ ದಾಳಿ ಮಾಡಿ ಹೆದರಿಸುತ್ತಿದ್ದಾರೆ. ಇದರ ಹಿಂದ ಮೋದಿ ಶಾ ಇದ್ದಾರೆ. ಸೋಮಶೇಖರ ರೆಡ್ಡಿ ಜಡ್ಜ್ ಗೆ ಲಂಚ ಕೊಡೋಕೆ ಹೋಗಿ ಜೈಲಿಗೆ ಹೋಗಿರಲಿಲ್ಲವೇ? ಅದು ಅಮಿತ್ ಶಾಗೆ ಗೊತ್ತಿಲ್ಲವೇ?

    * ನಾನು ಬಿಜೆಪಿ ಸೇರಲು ಹೋಗಿದ್ದೆ ಅನ್ನೋದು ಸುಳ್ಳು. ಆಧಾರವಿಲ್ಲದೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಡ್ವಾಣಿ ಅವರು ನನಗೆ ಚೆನ್ನಾಗಿಯೇ ಗೊತ್ತು. ಬಿಜೆಪಿ ಜತೆ ಅಧಿಕಾರ ಮಾಡಿದರೆ ನನ್ ಹೆಣದ ಮೇಲೆ ಅಂತಾ ದೇವೇಗೌಡರು ಹೇಳಿದ್ರು. ಈಗ ನನ್ ಮನೆಗೆ ಸೇರಿಸಲ್ಲ ಅಂತ ಹೇಳಿದ್ದಾರೆ ದೇವೇಗೌಡರು. ಇದಕ್ಕೇನು ಹೇಳೋದು?

    * ಯೋಗಿ ಆದಿತ್ಯನಾಥ್ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆ. 307 ಕೇಸ್ ಅವರ ಮೇಲಿದೆ. ಇಂತವರು ರಾಜ್ಯದಲ್ಲಿ ಪ್ರಚಾರ ಮಾಡುತ್ತಾರೆ. ಇದು ಹಾಸ್ಯಾಸ್ಪದವಾಗಿದೆ.

  • ಖರ್ಗೆ, ಪರಮೇಶ್ವರ್, ಸಿಎಂ ಮೂವರು ಒಂದೇ ಕಡೆ ಪ್ರಚಾರ ನಡೆಸಲಿ: ಸಂವಾದದಲ್ಲಿ ಬಿಎಸ್‍ವೈ ಸವಾಲು

    ಖರ್ಗೆ, ಪರಮೇಶ್ವರ್, ಸಿಎಂ ಮೂವರು ಒಂದೇ ಕಡೆ ಪ್ರಚಾರ ನಡೆಸಲಿ: ಸಂವಾದದಲ್ಲಿ ಬಿಎಸ್‍ವೈ ಸವಾಲು

    ಬೆಂಗಳೂರು: 224 ಕ್ಷೇತ್ರಗಳನ್ನು ಸುತ್ತಿ ಬಂದಿದ್ದು, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆ ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಸಂವಾದ ನಡೆಯಿತು.

    ಅಂಬೇಡ್ಕರ್ ಜಯಂತಿಯಂದು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಧಿಕಾರ ಸ್ವೀಕಾರ ಮಾಡಿದೆ. ಸುಮಾರು 3 ಬಾರಿ ನಾನು ರಾಜ್ಯ ಸುತ್ತಿದ್ದೇನೆ. 224 ಕ್ಷೇತ್ರಗಳನ್ನು ಸುತ್ತಿ ಬಂದಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಮ್ಮಿಂದ 3 ಸರ್ವೇಗಳನ್ನು ಮಾಡಿಸಿದ್ದಾರೆ. ನಾನು ಕೊಟ್ಟ ಅಭ್ಯರ್ಥಿಗಳ ಲಿಸ್ಟ್ 95% ಭಾಗ ಕೂಡ ಒಂದೇ ಆಗಿತ್ತು. ಹಾಗಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲ ಆಗಲಿಲ್ಲ ಎಂದು ತಿಳಿಸಿದರು.

    ಸಂವಾದಲ್ಲಿ ಬಿಎಸ್‍ವೈ ಹೇಳಿದ್ದು ಹೀಗೆ
    ಎಲ್ಲರೂ ಒಂದೇ ಕಡೆ ಪ್ರಚಾರ ಮಾಡುವುದಕ್ಕಿಂತ ಬೇರೆ ಬೇರೆ ಕಡೆ ಮಾಡಬೇಕು ಅನ್ನೋ ಉದ್ದೇಶ ಇದೆ ಅಷ್ಟೇ. ರಾಜ್ಯವನ್ನ ಮಾದರಿ ರಾಜ್ಯವನ್ನಾಗಿ ಮಾಡಬೇಕೆಂಬ ಕನಸಿದೆ. ಇದೇ 17 ಕ್ಕೆ ನಾನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ನನ್ನ ಜೀವನವನ್ನೇ ರೈತರಿಗಾಗಿ ಮುಡುಪಾಗಿಟ್ಟವನು ನಾನು. ಈಗ ಬೆಂಗಳೂರು ರೇಪ್, ಗಾರ್ಬೇಜ್ ಸಿಟಿ ಆಗಿದೆ. ಎಲ್ಲವನ್ನು ಸರಿ ಮಾಡುತ್ತೇವೆ.

    ಬೆಂಗಳೂರನ್ನ ಮಾದರಿ ಸಿಟಿಯನ್ನಾಗಿ ಮಾಡುತ್ತೇನೆ. ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ತಕ್ಷಣವೇ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿರುವ ರೈತರ ಒಂದು ಲಕ್ಷ ಹಾಗೂ ಸಹಕಾರಿ ಬ್ಯಾಂಕ್ ಗಳಲ್ಲಿರುವ ರೈತರ ಸಾಲವನ್ನ ಮನ್ನಾ ಮಾಡುತ್ತೇನೆ.

    ಇನ್ನು ನೀರಾವರಿಗೆ 1.5 ಲಕ್ಷ ಕೋಟಿ ತೆಗೆದಿಡುವ ನಿರ್ಧಾರ ಮಾಡಿದ್ದೇವೆ. ಭಾಗ್ಯಲಕ್ಷ್ಮಿ ಯೋಜನೆಗೆ ಎರಡು ಲಕ್ಷದವರೆಗೆ ಡೆಪಾಸಿಟ್ ಇಡುವ ನಿರ್ಧಾರ ಕೈಗೊಂಡಿದ್ದೇವೆ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡಲಿದ್ದೇವೆ. ಕೃಷಿಕರಿಗೆ ಅನೇಕ ಯೋಜನೆಗಳನ್ನು ರೂಪಿಸುತ್ತೇವೆ. ಸ್ತ್ರೀ ಶಕ್ತಿ ಸಂಘಗಳ ಬಲಪಡಿಸುವ ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಕಾಂಗ್ರೆಸ್ ನಲ್ಲಿ ಮೂರು ಭಾಗ ಆಗಿದೆ. ಸಿದ್ದರಾಮಯ್ಯ ಒಂದು ಕಡೆ, ಪರಮೇಶ್ವರ್ ಒಂದು ಕಡೆ, ಮಲ್ಲಿಕಾರ್ಜುನ ಖರ್ಗೆ ಒಂದು ಕಡೆ. ಅವರು ಮೂರು ಜನ ಒಟ್ಟಿಗೆ ಪ್ರಚಾರ ಮಾಡಲಿ ನೋಡೋಣ.

    ಆನಂದ್ ಸಿಂಗ್, ನಾಗೇಂದ್ರ ಯಾರು? ಗಣಿ ಅಕ್ರಮದ ಆರೋಪ ಅವರ ಮೇಲಿಲ್ಲವೇ..? ಭ್ರಷ್ಟಾಚಾರದ ಬಗ್ಗೆ ಮಾತನಾಡುವವರಿಗೆ ಸಿದ್ದರಾಮಯ್ಯ ಟಿಕೆಟ್ ಹೇಗೆ ಕೊಟ್ರು? ಕಾಲು ಹಿಡಿದು, ಕಾಲಿಗೆ ಮುಗಿದು ವೋಟು ಕೇಳಿ ಅಂತೇಳಿರೋದು ಅದು. ಇದು ನಮ್ಮ ಪಾರ್ಟಿಯ ಸಿದ್ಧಾಂತ. ಕಾಲು ಕಟ್ಟಿ, ಕೈಗೆ ಹಗ್ಗ ಕಟ್ಟಿ ವೋಟ್ ಕೇಳಿ ಅಂತ ಹೇಳಿಲ್ಲ.

    ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧಿಸಿರುವುದು ಯಾಕೆ? ಸೋಲಿನ ಭಯದಿಂದ ಎರಡು ಕಡೆ ನಿಂತಿದ್ದಾರೆ. ಖರ್ಗೆ, ಪರಂ ಕೂಡ ಇದನ್ನ ವಿರೋಧಿಸಿದ್ದರು. ಆದರೂ ಪಟ್ಟು ಹಿಡಿದು ದೆಹಲಿಯಲ್ಲಿ ಬದಾಮಿ, ಚಾಮುಂಡೇಶ್ವರಿಯಲ್ಲಿ ಸೀಟು ಗಿಟ್ಟಿಸಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ಇಬ್ಬರು ಹೋದರೂ ರಾಮುಲು ಸೇರಿ ಉಳಿದವರು ಇದ್ದಾರೆ. ಅವರಿಗೆ ಟಿಕೆಟ್ ನೀಡಿದ್ದೇವೆ. ಅವರು ಗೆಲ್ಲಲಿದ್ದಾರೆ. ಜನಾರ್ದನ ರೆಡ್ಡಿ ಚುನಾವಣೆ ಟಿಕೆಟ್ ಕೇಳಲಿಲ್ಲ. ಅವರೇ ಬಂದು ಪ್ರಚಾರ ಮಾಡುತ್ತಿದ್ದಾರೆ. ನಾವು ವಿರೋಧಿಗಳ ಮನೆಗೂ ಮತ ಕೇಳಲು ಹೋಗುತ್ತೇವೆ. ಹಳೆಯದು ಮರೆತು ಹೋಗುತ್ತಿದ್ದೇವೆ.

    ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ನಾವು ಯಾಕೆ ಅವರ ಜೊತೆ ಮೈತ್ರಿಯಾಗಬೇಕು. ನಮ್ಮದೇ ಗುಡ್ ಮೆಜಾರಿಟಿ ಬರುತ್ತದೆ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದು ಸಿದ್ದರಾಮಯ್ಯ. ಎಲ್ಲರೂ ಉಗಿದ ಮೇಲೆ ಈ ವಿಚಾರದಲ್ಲಿ ತಟಸ್ಥರಾಗಿದ್ದಾರೆ. ಅದಕ್ಕೆ ಮೂರು ತಿಂಗಳಿಂದ ಸಿಎಂ ಬಾಯಿ ಮುಚ್ಚಿಕೊಂಡಿದ್ದಾರೆ.

    ಸಂಸ್ಕೃತಿ, ಆಚಾರ, ವಿಚಾರ, ನಡೆ, ನುಡಿಯ ಬಗ್ಗೆ ಯಾರಿಂದಲೂ ನಾವು ಪಾಠ ಮಾಡಿಸಿಕೊಳ್ಳಬೇಕಿಲ್ಲ. ದಲಿತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸಿಗಿಲ್ಲ ಎಂದಿದ್ದಾರೆ. ಸಂವಿಧಾನ ಬದಲಾವಣೆ ವಿಚಾರದಲ್ಲಿ ಅನಂತಕುಮಾರ್ ಹೆಗಡೆ ಕ್ಷಮೆ ಕೇಳಿದ್ದಾರೆ.

    2004 ರಲ್ಲಿ ಸಿದ್ದರಾಮಯ್ಯ ಬಿಜೆಪಿ ಸೇರುವ ಪ್ರಯತ್ನ ಮಾಡಿದ್ರಾ? ಅನ್ನೋ ಪ್ರಶ್ನೆಗೆ, ಸಿದ್ದರಾಮಯ್ಯ ಬಿಜೆಪಿಗೆ ಬರ್ತೀನಿ ಅಂದರೂ ಸೇರಿಸಿಕೊಳ್ಳಲ್ಲ. ಅಂದು ಸಿದ್ದರಾಮಯ್ಯ ಬಿಜೆಪಿ ಸೇರಲು ಹೋಗಿದ್ದರು ಅಂತಾ ಯಾರು ಹೇಳಿದ್ದಾರೋ ಅವರಿಗೆ ಸಿದ್ದರಾಮಯ್ಯ ಉತ್ತರ ನೀಡಲಿ. ಆ ಬಗ್ಗೆ ನಾನೇನೂ ಹೇಳಲ್ಲ. ನಮ್ಮ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ಸರ್ಕಾರದ ಒಳ್ಳೆಯ ಯೋಜನೆಗಳನ್ನು ಮುಂದುವರಿಸುತ್ತೇವೆ. ಹೆಸರು ಬದಲಾಗಬಹುದು, ಯೋಜನೆಗಳು ಬದಲಾಗಲ್ಲ. ಅವರಂತೂ ನಮ್ಮ ಯೋಜನೆಗಳನ್ನು ಮುನ್ನಡೆಸಲಿಲ್ಲ. ಆದ್ರೆ ನಾವು ಅವರ ಯೋಜನೆಯನ್ನು ಮುಂದುವರಿಸುತ್ತೇವೆ.

  • 24 ಗಂಟೆ ಗಡುವು ನೀಡ್ತೀನಿ, ದಾಖಲೆ ರಿಲೀಸ್ ಮಾಡಿ: ಸಿಎಂಗೆ ಅನಂತ್ ಕುಮಾರ್ ಸವಾಲ್

    24 ಗಂಟೆ ಗಡುವು ನೀಡ್ತೀನಿ, ದಾಖಲೆ ರಿಲೀಸ್ ಮಾಡಿ: ಸಿಎಂಗೆ ಅನಂತ್ ಕುಮಾರ್ ಸವಾಲ್

    ಬೆಂಗಳೂರು: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತ್ ಕುಮಾರ್ ಅವರು ಮುಖ್ಯಮುಂತ್ರಿ ಸಿದ್ದರಾಮಯ್ಯಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

    ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿಮಾನ ಪ್ರಯಾಣದ ದಾಖಲೆ ಬಿಡುಗಡೆ ಮಾಡುವಂತೆ 24 ಗಂಟೆ ಗಡುವು ನೀಡಿ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಅನಂತ್ ಕುಮಾರ್ ಸವಾಲ್ ಹಾಕಿದ್ದಾರೆ.

    ಪ್ರಚಾರ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅನಂತ್ ಕುಮಾರ್, ಸಿದ್ದರಾಮಯ್ಯಗೆ ನಾನು ಮೂರು ದಿನದಿಂದ ಹೇಳುತ್ತಿದ್ದೇನೆ. ಅಮಿತ್ ಶಾ ಮತ್ತು ಕುಮಾರಸ್ವಾಮಿ ಅವರು ವಿಶೇಷ ವಿಮಾನದಲ್ಲಿ ಎಲ್ಲಿಗೆ ಹೋದರು? ದೆಹಲಿಗೆ ಹೋಗಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಪುರಾವೆ ಇದೆ. ಅದನ್ನು ನಾನು ಬಹಿರಂಗ ಪಡಿಸುತ್ತೇನೆ ಅಂತ ಹೇಳುತ್ತಿದ್ದಾರೆ. ಆದರೆ ಅವರು ಯಾವುದನ್ನು ಬಹಿರಂಗ ಪಡಿಸುತ್ತಿಲ್ಲ. ಅವರು ರಾಜ್ಯದ ಮುಖ್ಯಮಂತ್ರಿ ಭಯಪಡುವ ಅಗತ್ಯ ಇಲ್ಲ. ನಾವೇ ಪ್ರೆಸ್ ಕಾನ್ಫರೆನ್ಸ್ ಮಾಡುತ್ತೇವೆ. ಅಲ್ಲಿಗೆ ಬಂದು ಅವರಲ್ಲಿರುವ ಎಲ್ಲ ಪುರಾವೆಯನ್ನು ಇಟ್ಟರೆ ಅವರು ಸತ್ಯ ಹೇಳುತ್ತಿದ್ದಾರೋ ಅಥವಾ ಸುಳ್ಳು ಹೇಳುತ್ತಿದ್ದಾರೋ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

    ಸಿದ್ದರಾಮಯ್ಯ ಅವರು ಸೋಲುವ ಭೀತಿಯಿಂದ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇನ್ನು 24 ಗಂಟೆ ಸಮಯ ಕೊಡುತ್ತೇನೆ. ಅಷ್ಟರಲ್ಲಿ ಅವರು ದಾಖಲೆ ಬಿಡುಗಡೆ ಮಾಡದಿದ್ದಲ್ಲಿ ಬದಾಮಿ ಹಾಗೂ ಚಾಮುಂಡೇಶ್ವರಿ ಎರಡು ಚುನಾವಣಾ ಕಣದಿಂದ ನಿವೃತ್ತರಾಗವೇಕು ಎಂದಿದ್ದಾರೆ.

    ನಾನು ರಾಜ್ಯದ ಜನತೆಗೆ ಹಸಿ ಸುಳ್ಳನ್ನು ಹೇಳುತ್ತಿದ್ದೇನೆ. ಸುಳ್ಳೇ ನಮ್ಮ ಮನೆಯ ದೇವರು. ಆದ್ದರಿಂದ ನಾನು ಜನತೆಯಲ್ಲಿ ಕ್ಷಮೆ ಕೇಳಿ ಎರಡು ಕ್ಷೇತ್ರದ ಸ್ಪರ್ಧೆಯಿಂದ ನಿವೃತ್ತರಾಗುತ್ತಿದ್ದೇನೆಂದು ಅವರು ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಅವರ ವಿರುದ್ಧ ಅನಂತ್ ಕುಮಾರ್ ವಾಗ್ದಾಳಿ ಮಾಡಿದ್ದಾರೆ.

  • ಟೀಕೆ ಮಾಡೋದು ಸ್ಟಂಟ್ ಆಗಿದೆ, ಯಾವನ್ದೋ ಪ್ರಶ್ನೆಗೆ ನಾನೇನು ಹೇಳಲಿ: ಬಿಎಸ್‍ವೈ ಕಿಡಿ

    ಟೀಕೆ ಮಾಡೋದು ಸ್ಟಂಟ್ ಆಗಿದೆ, ಯಾವನ್ದೋ ಪ್ರಶ್ನೆಗೆ ನಾನೇನು ಹೇಳಲಿ: ಬಿಎಸ್‍ವೈ ಕಿಡಿ

    ದಾವಣಗೆರೆ: ಈಗ ಟೀಕೆ ಮಾಡೋದು ಒಂದು ಸ್ಟಂಟ್ ಆಗಿದೆ. ಯಾವನ್ದೋ ಪ್ರಶ್ನೆಗೆ ನಾನೇನು ಹೇಳಲಿ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

    ಮಹದಾಯಿ ವಿಚಾರವನ್ನು ಇತ್ಯರ್ಥ ಮಾಡಲಾಗುವುದು ಅಂತ ಪ್ರಧಾನಿಗಳು ಶನಿವಾರ ಗದಗ್ ನಲ್ಲಿ ತಿಳಿಸಿದ್ದಾರೆ. ಆದ್ರೆ ಸಿಎಂ ಮಾತ್ರ ಪ್ರಧಾನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ರೀತಿಯ ಹೇಳಿಕೆಯನ್ನು ನೀಡ್ತಿದ್ದಾರೆ ಅಂತಾ ತಿರುಗೇಟು ಕೊಟ್ಟಿದ್ದರು. ಈ ಸಂಬಂಧ ಯಡಿಯೂರಪ್ಪ, ಸಿಎಂ ತಿರುಗೇಟಿಗೆ ಏಕವಚನದಲ್ಲಿಯೇ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮೋದಿ ಮಹದಾಯಿ ಹೇಳಿಕೆ ನೀಡಿದ್ದಾರೆ: ಸಿಎಂ ತಿರುಗೇಟು

    ಗದಗ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದ ವೇಳೆ, ಕಾಂಗ್ರೆಸ್ ಮಹದಾಯಿ ವಿಷಯದಲ್ಲಿ ರಾಜಕಾರಣ ಮಾಡ್ತಿದೆ. ಈ ಹಿಂದೆ ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ರೂ ಮಹದಾಯಿ ವಿವಾದ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಈ ವಿವಾದವನ್ನು ಬಗೆಹರಿಸುವ ಸಂಕಲ್ಪ ಮಾಡಿದೆ ಅಂತ ಹೇಳಿದ್ರು. ಇದನ್ನೂ ಓದಿ: ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

  • ಬದಾಮಿಯಲ್ಲಿ ಸುದೀಪ್ ಪ್ರಚಾರಕ್ಕೆ ಸ್ಪಷ್ಟನೆ ನೀಡಿದ ಸಂಸದ ಶ್ರೀರಾಮುಲು

    ಬದಾಮಿಯಲ್ಲಿ ಸುದೀಪ್ ಪ್ರಚಾರಕ್ಕೆ ಸ್ಪಷ್ಟನೆ ನೀಡಿದ ಸಂಸದ ಶ್ರೀರಾಮುಲು

    ಕೊಪ್ಪಳ: ನಟ ಸುದೀಪ್ ನಮ್ಮ ಸಮಾಜದ ಓರ್ವ ಕಲಾವಿದ. ಸಿನಿಮಾದಲ್ಲಿ ಸುದೀಪ್ ಅದ್ಭುತವಾಗಿ ನಟನೆ ಮಾಡುವ ಮೇಲಕ್ಕೆ ಬಂದಿದ್ದಾರೆ. ಶ್ರೀರಾಮುಲು ಸಮಾಜಪರ ಕೆಲಸಗಳಿಂದ ರಾಜಕಾರಣದಲ್ಲಿ ಮೇಲೆ ಬಂದಿದ್ದೇನೆ. ಇಂದು ಬೆಳಗ್ಗೆ ಸುದೀಪ್ ಅವರ ಫೋನ್ ನಲ್ಲಿ ಮಾತನಾಡಿದ್ದು, ಬದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂತಾ ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಚುನಾವಣಾ ಪ್ರಚಾರಕ್ಕೆ ಶ್ರೀರಾಮುಲು ಆಗಮಿಸಿದ್ರು. ಈ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಸಂಸದರು, ನನ್ನ ವಿರುದ್ಧ ಪ್ರಚಾರ ಮಾಡಲ್ಲ ಅಂತಾ ಸುದೀಪ್ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯಗಳು ಬಂದಿದ್ದರಿಂದ ಹಿಂದೆ ಸರಿದಿದ್ದಾರೆ. ಇಂದು ಬೆಳಗ್ಗೆ ಎಂತಹ ಪರಿಸ್ಥಿತಿಯಲ್ಲೂ ನನ್ನ ವಿರುದ್ಧದ ಚುನಾವಣೆ ಪ್ರಚಾರಕ್ಕೆ ಬರಲ್ಲ ಅಂತಾ ಹೇಳಿದ್ದಾರೆ ಎಂದು ತಿಳಿಸಿದ್ರು.

    ಮೋದಿ ವಿರುದ್ಧ ಸಿಎಂ ಟ್ವೀಟ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಸಿದ ಶ್ರೀರಾಮುಲು, ಗಾಜಿನ ಮನೆ ಮೇಲೆ ನಿಂತು ಇನ್ನೊಬ್ಬರ ಮನೆ ಮೇಲೆ ಕಲ್ಲು ಹೊಡೆಯುವ ಕೆಲಸವನ್ನು ಸಿಎಂ ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ಭ್ರಷ್ಟ ಮಂತ್ರಿಗಳು ತುಂಬಿಕೊಂಡಿದ್ದಾರೆ. ಮೂರು ಬಿಟ್ಟವರೇ ಅಂದ್ರೆ ಕಾಂಗ್ರೆಸ್‍ನವರು ಅಂತಾ ಟೀಕಿಸಿದ್ರು.

  • ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲ: ಜಿಗ್ನೇಶ್ ಮೇವಾನಿ

    ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲ: ಜಿಗ್ನೇಶ್ ಮೇವಾನಿ

    ರಾಯಚೂರು: ಪ್ರಧಾ ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲಾ ಅಂತ ಗುಜರಾತನ ಶಾಸಕ ಜಿಗ್ನೇಶ್ ಮೇವಾನಿ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.

    ರಾಯಚೂರಿನಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಗ್ನೇಶ್, ನಾಟಕ ಬಂದ್ ಮಾಡಿ ಬಡವರಿಗೆ ಹಾಗು ದಲಿತರಿಗೆ ಊಟ ನೀಡಿ ಅಂತ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಿಗಳಿಗೆ ಈಗ ದಲಿತರ ಬಗ್ಗೆ ಪ್ರೇಮವಾಗಿದೆ. ಗುಜರಾತ್ ದಲಿತರ ಮೇಲೆ ದೌರ್ಜನ್ಯ ನಡೆದಾಗ ಮೋದಿ ಹಾಗು ಬಿಜೆಪಿ ಮುಖಂಡರು ಎಲ್ಲಿಗೆ ಹೋಗಿದ್ದರು ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ಕರ್ನಾಟಕ ಚುನಾವಣೆ ಬಂದಾಗ ದಲಿತರ ಮನೆಯಲ್ಲಿ ಊಟ ಮಾಡುತ್ತಿದ್ದಾರೆ. ಸಫಾಯಿ ಕರ್ಮಚಾರಿ ಕೆಲಸ ಮಾಡುವುದನ್ನು ಬಿಡಿಸಲು ಟೆಕ್ನಾಲಾಜಿ ತೆಗೆದುಕೊಂಡು ಬನ್ನಿ. ರೋಹಿತ್ ವೇಮಲು ಹತ್ಯೆ ಮಾಡಿ ಈಗ ನಾಟಕ ಮಾಡುತ್ತೀರಿ, ನೀವು ಮನುವಾದಿ. ಪ್ರಧಾನ ಮಂತ್ರಿ ಮೋದಿ ನಾಲ್ಕು ವರ್ಷ ಬ್ಯಾಂಕುಗಳ ಕೊಳ್ಳೆ ಹೊಡೆದಿದ್ದಾರೆ. ಇವರು ಚೌಕಿದಾರರಲ್ಲ ದೇಶದ ನಂಬರ್ ಕಳ್ಳ ಅಂತಾ ಕಟು ಪದಗಳಿಂದ ಟೀಕಿಸಿದ್ರು.

  • ಪ್ರಧಾನಿ ಮೋದಿ ನನ್ನನ್ನು ಹೊಗಳಿದ್ದು ಯಾಕೆ ಗೊತ್ತು ಅಂತಾ ಅಂದ್ರು ಹೆಚ್‍ಡಿಡಿ

    ಪ್ರಧಾನಿ ಮೋದಿ ನನ್ನನ್ನು ಹೊಗಳಿದ್ದು ಯಾಕೆ ಗೊತ್ತು ಅಂತಾ ಅಂದ್ರು ಹೆಚ್‍ಡಿಡಿ

    ಚಿಕ್ಕಮಗಳೂರು: ಪ್ರಧಾನಿ ಮೋದಿ ನನ್ನನ್ನು ಯಾಕೆ ಹೊಗಳಿದ್ದು ಯಾಕೆ ಅಂತಾ ಗೊತ್ತಿದೆ ಅಂತಾ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರು ಜಿಲ್ಲೆಯ ಕಡೂರಿನಲ್ಲಿ ನಡೆದ ಸಮಾವೇಶದಲ್ಲಿ ತಿಳಿಸಿದ್ದಾರೆ.

    ಪ್ರಧಾನಿ ಮೋದಿ ನನ್ನನು ಮೊದಲು ಹೊಗಳಿ, ನಂತರ ಜೆಡಿಎಸ್ ಗೆ ವೋಟ್ ಹಾಕ್ಬೇಡಿ ಅಂತಾ ಅಂದ್ರು. ಒಬ್ಬ ಕನ್ನಡಿಗ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದರು, ಮತ್ತೊಮ್ಮೆ ನಮ್ಮ ರಾಜ್ಯದ ನಾಯಕ ಪ್ರಧಾನಿ ಆಗುವ ಸಾಧ್ಯತೆಗಳು ಕಡಿಮೆ ಇವೆ. ಈ ಹಿನ್ನೆಲೆಯಲ್ಲಿ ಒಬ್ಬ ಮಾಜಿ ಪ್ರಧಾನಿಗಳ ಬಗ್ಗೆ ಅಗೌರವದಿಂದ ಮಾತನಾಡಬೇಡಿ ಅಂತಾ ಕಾಂಗ್ರೆಸ್ ನಾಯಕರಿಗೆ ತಿಳಿಸುವದಕ್ಕಾಗಿ ನನ್ನನ್ನು ಹೊಗಳಿದ್ದಾರೆ ಅಂತಾ ಸ್ಪಷ್ಟನೆ ನೀಡಿದ್ರು.

    ಒಬ್ಬ ಕನ್ನಡಿಗ ಪ್ರಧಾನಿ ಆಗಿದ್ದಾರೆ ಅಂತಾ ಜೆ.ಹೆಚ್.ಪಟೇಲ್ ರು ಮುಖ್ಯಮಂತ್ರಿ ಕಚೇರಿ ನನ್ನ ಫೋಟೋ ಹಾಕಿದ್ದರು. ನಂತರ ಬಂದ ಎಸ್.ಎಂ.ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡರು ನನ್ನ ಫೋಟೋ ತೆಗೆಯಲಿಲ್ಲ. ಆದ್ರೆ ಸಿದ್ದರಾಮಯ್ಯ ಬಂದ ಕೂಡಲೇ ನನ್ನ ಫೋಟೋ ತೆಗೆದು ಹಾಕಿದ್ರು, ಆ ಅನಾಗರಿಕತೆಗೆ ಮೋದಿ ಸಿಎಂಗೆ ನನ್ನ ಬಗ್ಗೆ ಹೇಳಿದ್ದಾರೆ ಅಂತಾ ಹೇಳಿದ್ರು.

    ಜೆಡಿಎಸ್‍ಗೆ ಮತ ಹಾಕಿದ್ರೆ ಬಿಜೆಪಿಗೆ ಹೋಗುತ್ತದೆ ಅಂತಾ ನಮ್ಮ ಗೌರವಯುತ ಮಹಾನ್ ದೊಡ್ಡ ಮುಖ್ಯಮಂತ್ರಿ ಹೇಳ್ತಾರೆ. ಸಿಎಂ ಹೇಳುವ ಶೈಲಿಯನ್ನ ನಾನು ಮಾಡಿ ತೋರಿಸಬಲ್ಲೆ, ಆದ್ರೆ ಅದು ತಪ್ಪಾಗುತ್ತದೆ. ಸಿದ್ದರಾಮಯ್ಯರನ್ನು ನಾವು ರಾಜಕೀಯವಾಗಿ ತಲೆ ಮೇಲೆ ಹೊತ್ತು ಮೆರೆದಿದ್ದೇವೆ. ಈತ ವ್ಯಕ್ತಿಯಲ್ಲ, ಶಕ್ತಿ ಎಂದು ಹೇಳಿದ ನನಗೇ ಬುದ್ದಿ ಹೇಳ್ತಾರೆ ಅಂತಾ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ದೇವೇಗೌಡ್ರು ತಿರುಗೇಟು ನೀಡಿದ್ರು.

  • ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

    ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

    ಗದಗ: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಪ್ರಯುಕ್ತ ಪಕ್ಷದ ಪರ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಇಂದು ಗದಗ ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜ್ ಪಕ್ಕದ ಜಮೀನಿನಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ರು.

    2007 ರಲ್ಲಿ ಗೋವಾ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಮಹದಾಯಿ ನೀರನ್ನು ಕೊಡುವುದಿಲ್ಲ ಎಂದಿದ್ದರು. ಗೋವಾದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದ್ದು, ಕರ್ನಾಟಕದಲ್ಲಿ ಬಂದು ಸಮಸ್ಯೆ ಸೃಷ್ಟಿ ಮಾಡಿದ್ದಾರೆ. ಮಹದಾಯಿ ಸಮಸ್ಯೆಯನ್ನ ಮುಂದೆ ಹಾಕುವ ಪ್ರವೃತ್ತಿ ನಮ್ಮದಲ್ಲ. ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ ಅಂದ್ರು.

    2007ರಲ್ಲಿ ಸೋನಿಯಾ ಗಾಂಧಿ ಏನು ಹೇಳಿದ್ರು ಅಂತಾ ಸಿಎಂ ಸಿದ್ದರಾಮಯ್ಯರಿಗೆ ಗೊತ್ತಿಲ್ಲ. ಕಾರಣ ಸಿಎಂ ಕಾಂಗ್ರೆಸ್‍ನಲ್ಲಿ ಇರಲಿಲ್ಲ, ಆದ್ರೆ ಯಾವ ದಳದಲ್ಲಿ ಇದ್ರೆಂಬುದು ಅವರಿಗೂ ನೆನಪಿರಲಿಕ್ಕಿಲ್ಲ. ಯಾಕಂದ್ರೆ ಪಕ್ಷ ಬದಲಿಸೋದು ಸಿದ್ದರಾಮಯ್ಯರ ರೂಢಿಯಾಗಿದೆ ಅಂತಾ ವಾಗ್ದಾಳಿ ನಡೆಸಿದ್ರು.

    ಈ ಹಿಂದೆ ಕರ್ನಾಟಕ, ಗೋವಾ ಮತ್ತು ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರಗಳಿದ್ದರೂ, ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಮಹದಾಯಿ ವಿಷಯವನ್ನು ರಾಜಕೀಯವಾಗಿ ಬಳಸಿಕೊಂಡು ಅದನ್ನು ಟ್ರಿಬ್ಯೂನಲ್ ಗೆ ಹಾಕಲಾಯಿತು. ಈ ಸಮಸ್ಯೆ ಮುಂದಿನ ನಿಮ್ಮ ಪೀಳಿಗೆಗೂ ಮುಂದುವರೆಯಬಾರದು ಅಂತಾ ನಾನು ಆಶಿಸುತ್ತೇನೆ ಅಂತಾ ತಿಳಿಸಿದ್ರು.

  • ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ ಅಂದ್ರು ನಟ ಯಶ್

    ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ ಅಂದ್ರು ನಟ ಯಶ್

    ಕಾರವಾರ: ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಭರ್ಜರಿಯಿಂದ ಸಾಗುತ್ತಿದ್ದು, ಸ್ಟಾರ್ ನಾಯಕರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ.

    ಇಂದು ನಟ ರಾಕಿಂಗ್ ಸ್ಟಾರ್ ಯಶ್, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ನಟ ಯಶ್ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ.

    ಸಿದ್ದಾಪುರದ ತಿಮ್ಮಪ್ಪ ನಾಯ್ಕ ಸರ್ಕಲ್‍ನಲ್ಲಿ ರೋಡ್ ಶೋ ವೇಳೆ ಯಶ್ ಮಾತನಾಡಿದ್ದು, ಸಮಾಜ, ರಾಜಕಾರಣಿಗಳು ಹಾಗೂ ನಾವು ಸೇರಿದರೆ ಅಭಿವೃದ್ಧಿ ಸಾಧ್ಯ. ನಿಮ್ಮೂರೇ ನನಗೆ ಸ್ಫೂರ್ತಿ. ಶಿವಾನಂದ ಕಳವೆ ಅವರ ಕೆಲಸಗಳು ನನಗೆ ಸ್ಫೂರ್ತಿ ಕೊಟ್ಟಿದೆ. ನಾನು ಉತ್ತಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದೇನೆ. ಶಿಲೆ ನಮ್ಮೂರಲ್ಲೇ ಇದ್ದರೂ ನಮಗೆ ಕಾಣುವುದಿಲ್ಲ. ಅದೇ ರೀತಿ ಕಾಗೇರಿ ಅವರ ವ್ಯಕ್ತಿತ್ವ.  ಕಾಗೇರಿಯವರನ್ನ ಗೆಲ್ಲಿಸಿ. ಕಾಗೇರಿ ಅವರ ಮುಖಾಂತರ ನಾನು ಬಂದು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ. ಜನಗಳಿಗೋಸ್ಕರ ನಾನು ಬಂದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಅವರು ಸಿನಿಮಾ ಡೈಲಾಗ್ ಹೇಳಿದ್ದು, ನಾವು ಮಾಡುವ ಒಂದು ವೋಟಿಂದ 5 ವರ್ಷ ನಮ್ಮ ಭವಿಷ್ಯ ಇರುತ್ತದೆ. `ಬಿರುಗಾಳಿ ಸುಂಟರಗಾಳಿ ಯಾವಾಗ್ಲೋ ಒಂದು ಸಾರಿ ಬರುವುದು. ಅದು ಬರುತ್ತೆ ಅಂದಾಗ ಭಯ ಇರುತ್ತೆ. ಬಂದು ಹೋದ ಮೇಲೆ ಅದರ ಹವಾ ಇರುತ್ತದೆ. ನಾನು ಬರೋವರೆಗೆ ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಮ್ದೆ ಹವಾ’ ಎಂದು ಹೇಳಿದ್ದಾರೆ.