https://youtu.be/DOKzffyCieM
Tag: Karnataka Election
-

ಮೇ 15ಕ್ಕೆ ದೆಹಲಿಗೆ ಹೋಗ್ತಿನಿ, 17ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಿನಿ: ಬಿ.ಎಸ್ ವೈ
ಬೆಂಗಳೂರು: ಬಿಜೆಪಿ 125-130 ಸ್ಥಾನ ಪಡೆಯೋದು ಖಚಿತ. ನಾವೇ ಈ ಬಾರಿ ಕರ್ನಾಟಕದಲ್ಲಿ ಸರ್ಕಾರ ರಚಿಸೋದು. ಈ ಎರಡು ದಿನ ಕಾರ್ಯಕರ್ತರನ್ನು ಭೇಟಿ ಮಾಡಿ ವರದಿ ಪಡೆದುಕೊಂಡು ಮೇ 15 ರಂದು ದೆಹಲಿಗೆ ಹೋಗಿ 17ರಂದು ಪ್ರಮಾಣ ವಚನಕ್ಕೆ ದಿನಾಂಕ ಫಿಕ್ಸ್ ಮಾಡಿಕೊಂಡು ಬರ್ತೀನಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮತದಾನ ಮಾಡಿದ ರಾಜ್ಯದ ಜನತೆಗೆ ವಿನಯ ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಜನತೆ ಈ ಬಾರಿ ಪರಿವರ್ತನೆಗಾಗಿ ಮತ ಚಲಾಯಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ನಮಗೆ ಪೂರಕ ಪ್ರತಿಕ್ರಿಯೆ ಲಭ್ಯವಾಗಿದೆ. ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಜನ ಕ್ಷಮಿಸೊಲ್ಲ. ಹೀಗಾಗಿ ಕಾಂಗ್ರೆಸ್ 70 ಸೀಟ್‍ಗಿಂತ ಹೆಚ್ಚು ಗೆಲ್ಲೊಲ್ಲ ಅಂದ್ರು.

ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ 20-25 ಸೀಟ್ ಬರಬಹುದು. ನಮಗೆ 130 ಕ್ಷೇತ್ರಗಳಲ್ಲಿ ಗೆಲುವು ಖಂಡಿತ, ಬೇಕಾದ್ರೆ ಯಾವ ಯಾವ ಕ್ಷೇತ್ರಗಳು ಅಂತಾ ಬೇಕಾದ್ರೂ ಹೇಳಬಲ್ಲೆ ಎಂದು ಆಗಾಧ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.
ನಮ್ಮ ಪ್ರಣಾಳಿಕೆ ಶೇ.3 ರಷ್ಟು ಮತಗಳನ್ನು ಹೆಚ್ಚಳ ಮಾಡಿದ್ದು, ಎಕ್ಸಿಟ್ ಪೋಲ್‍ಗಳ ಬಗ್ಗೆ ಮಾತನಾಡಲ್ಲ. ಈ ಹಿಂದೆ ಉತ್ತರ ಪ್ರದೇಶದ ರಿಸಲ್ಟ್ ಏನಾಯ್ತು. ಇದೇ ರೀತಿ ಕರ್ನಾಟಕದಲ್ಲಿ ಫಲಿತಾಂಶ ಬರಲಿದೆ. ಇನ್ನು ಎರಡು ದಿನ ಕಾದು ನೋಡಿ, ನೂರಕ್ಕೆ ನೂರು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಸಿದ್ದರಾಮಯ್ಯ ಮೆಂಟಲಿ ಅಪ್ಸೆಟ್ ಆಗಿದ್ದಾರೆ. ಅದಕ್ಕೆ ಅವರು ಹಾಗೇ ಮಾತಾಡ್ತಾರೆ ಎಂದು ವಿಕ್ಟರಿ ಸಿಂಬಲ್ ತೋರಿಸಿದ್ರು.
He (PM Modi) is in touch with me and Amit Shah. Everybody is confident of winning with absolute majority. We are 100% sure of forming the government on May 17: BS Yeddyurappa, BJP #KarnatakaElections2018 pic.twitter.com/YktylGJrXB
— ANI (@ANI) May 13, 2018
-

ಕೋಟೆನಾಡಿನಲ್ಲಿ ಎಲೆಕ್ಷನ್‍ಗೆ ನಿಂತ ಅಭ್ಯರ್ಥಿಗಳಿಗೇ ಇಲ್ಲ ವೋಟ್ ಭಾಗ್ಯ!
ಚಿತ್ರದುರ್ಗ: ಸತತ ಒಂದು ತಿಂಗಳಿಂದ ಮತದಾರರಲ್ಲಿ ಮತಭಿಕ್ಷೆ ಕೇಳಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಆರು ಜನ ಅಭ್ಯರ್ಥಿಗಳಿಗೆ ಮತದಾನದ ಭಾಗ್ಯವೇ ಇಲ್ಲವಾಗಿದೆ.
ಸಮಯದ ಅಭಾವ, ಕ್ಷೇತ್ರ ಬದಲಾವಣೆ ಹಾಗು ಅಭ್ಯರ್ಥಿಗಳು ಮತ್ತೊಂದೆಡೆ ನೆಲೆಸಿರೋದು ಇದಕ್ಕೆ ಪ್ರಮುಖ ಕಾರಣವಾಗಿದ್ದೂ, ತಮ್ಮ ಗೆಲುವಿಗಾಗಿ ಮತದಾರ ಪ್ರಭುಗಳ ಮನವೊಲಿಸಿ ತಪ್ಪದೇ ಮತ ಹಾಕುವಂತೆ ಒತ್ತಾಯಿಸುವಲ್ಲಿ ಬ್ಯುಸಿಯಾಗಿದ್ದ ಅಭ್ಯರ್ಥಿಗಳೇ ತಮ್ಮ ಮತದಾನದ ಹಕ್ಕನ್ನು ಮರೆತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ರೂ ಚಿಕ್ಕಣ್ಣ ವೋಟ್ ಹಾಕಿಲ್ಲ!
ಚಳ್ಳಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಅವರ ಮತವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಸಮಯದ ಅಭಾವದ ಕಾರಣ ಮತ ಚಲಾವಣೆ ಮಾಡಲಾಗಿಲ್ಲ. ಚಿತ್ರದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಮತವು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ದೊಡ್ಡಬಳ್ಳಾಪುರ ಮತಕ್ಷೇತ್ರದ ಮತದಾರರಾಗಿರೋದ್ರಿಂದ ಇಬ್ಬರೂ ಮತದಾನದಿಂದ ದೂರ ಉಳಿದಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ!
ಹಿರಿಯೂರಿನ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಅವರು ಬೆಂಗಳೂರಿನ ಕೆ.ಆರ್ ಪುರಂ ನಿವಾಸಿಯಾಗಿದ್ದು, ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಹಾಗು ಮಾಜಿ ಸಚಿವ ಡಿ.ಸುಧಾಕರ್ ಕೂಡ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿದ್ದ ಅವರ ಮತವನ್ನು ಚಲಾವಣೆ ಮಾಡುವಲ್ಲಿ ವಿಫಲರಾಗಿದ್ದು, ಹೊಳಲ್ಕೆರೆ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಚಂದ್ರಪ್ಪ ಕೂಡ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿರೋ ಅವರ ಮತವನ್ನು ಹಾಕಲು ಮರೆತಿದ್ದಾರೆ. ಇದನ್ನೂ ಓದಿ: ಮತದಾನಕ್ಕೆ ಅವಕಾಶ ನೀಡದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ತುಂಬು ಗರ್ಭಿಣಿ!
ಹೊಸದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಟ ಶಶಿಕುಮಾರ್ ಸಹ ಬೆಂಗಳೂರಿನ ರಾಜಾಜೀನಗರದ ನಿವಾಸಿಯಾಗಿದ್ದು, ಮತ ಹಾಕುವ ಅವಕಾಶದಿಂದ ವಂಚಿತರಾಗಿದ್ದಾರೆ. ಮತ ಚಲಾವಣೆ ನಮ್ಮ ಹಕ್ಕೆಂದು ಚುನಾವಣಾ ಆಯೋಗ ನಿರಂತರವಾಗಿ ಜಾಗೃತಿ ಮೂಡಿಸಿದ್ದರೂ ಸಹ ಮತ ಕೇಳಿ ಹಾಕಿಸುವ ಅಭ್ಯರ್ಥಿಗಳೇ ತಮ್ಮ ಮತ ಹಾಕುವ ಹಕ್ಕನ್ನು ಮರೆತಿರೋದು ವಿಪರ್ಯಾಸವೇ ಸರಿ. ಇದನ್ನೂ ಓದಿ: ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ
-

ಮಗ ನಿಖಿಲ್ ಜೊತೆ ಸಿಂಗಾಪುರಕ್ಕೆ ತೆರಳಿದ ಹೆಚ್‍ಡಿ ಕುಮಾರಸ್ವಾಮಿ!
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮತದಾನ ಮುಗಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ.
ಮಗ ನಿಖಿಲ್ ಜೊತೆ ಕುಮಾರಸ್ವಾಮಿ ಅವರು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಹೆಚ್ ಡಿಕೆ ಅವರು ಅವಿರತವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಹಗಲು, ರಾತ್ರಿ ಎನ್ನದೇ ದಣಿವರಿಯದಂತೆ ಓಡಾಡಿದ್ದರು. ಹೀಗಾಗಿ ಪ್ರಚಾರದ ಕೊನೆ ದಿನಗಳಲ್ಲಿ ಸುಸ್ತಾಗಿದ್ರು. ಹೀಗಾಗಿ ತನ್ನ ಮಗನ ಜೊತೆ ಚಿಕಿತ್ಸೆಗೆಂದು ಸಿಂಗಾಪುರಕ್ಕೆ ತೆರಳಿದ್ದಾರೆ.
ಅಪ್ಪ- ಮಗ ನಾಳೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
-

ಸ್ಟ್ರಾಂಗ್ ರೂಮ್‍ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ- ಯಾವ ಕಾಲೇಜಿನಲ್ಲಿ ಯಾವ ಯಾವ ಕ್ಷೇತ್ರದ ಮತ ಎಣಿಕೆಯಾಗುತ್ತೆ?
ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಕರೆಯಲಾಗಿದ್ದ ಕರ್ನಾಟಕ ಎಲೆಕ್ಷನ್ ಮುಗಿದಿದ್ದು, 2,622 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. ಮೇ 15 ಮಂಗಳವಾರದಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಇದೆಲ್ಲದರ ನಡುವೆ ಚುನಾವಣಾ ವೇಳೆ ದೇಶದಲ್ಲೇ ಅತೀಹೆಚ್ಚು ಹಣ, ಮದ್ಯ ಪೂರೈಕೆ ಆಗಿದ್ದು ಇಲ್ಲೇ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ನಗರದ ಮಹಾರಾಣಿ ಕಾಲೇಜ್, ಮೌಂಟ್ ಕಾರ್ಮಲ್ ಕಾಲೇಜ್, ಆರ್.ಸಿ ಕಾಲೇಜ್, ಆರ್.ವಿ ಕಾಲೇಜ್‍ನಲ್ಲಿ ಎಲ್ಲಾ ಕ್ಷೇತ್ರದ ಎಲ್ಲಾ ಕ್ಷೇತ್ರದ ಮತ ಪೆಟ್ಟಿಗೆಗಳನ್ನ ಭದ್ರವಾಗಿ ಇಡಲಾಗಿದೆ. ಇನ್ನು ಸ್ಟ್ರಾಂಗ್ ರೂಂ ಸುತ್ತಮತ್ತ ಖಾಕಿ ಸರ್ಪಗಾವಲು ಮಾಡಲಾಗಿದೆ.
ಯಾವ ಕಾಲೇಜಿನಲ್ಲಿ ಯಾವ ಯಾವ ಕ್ಷೇತ್ರದ ಮತ ಎಣಿಕೆ ಆಗುತ್ತೆ ಆನ್ನೊದನ್ನ ನೋಡೊದಾದ್ರೆ..
* ಆರ್.ಸಿ. ಕಾಲೇಜ್
* ನೆಲಮಂಗಲ
* ಹೊಸಕೋಟೆ
* ದೊಡ್ಡಬಳ್ಳಾಪುರ
* ದೇವನಹಳ್ಳಿ
* ಮಹಾರಾಣಿ ಕಾಲೇಜ್* ಮಾಹದೇವಪುರ
* ಯಲಹಂಕ
* ಬ್ಯಾಟರಾಯನಪುರ
* ಯಶವಂತಪುರ
* ದಾಸರಹಳ್ಳಿ
* ಆನೆಕಲ್ಲು
* ಎಸ್ .ಎಸ್.ಎಂ.ಆರ್.ವಿ ಕಾಲೇಜ್ ಜಯನಗರ ಟಿ ಬ್ಲಾಕ್
* ಬಸವನಗುಡಿ
* ಬೊಮ್ಮನಹಳ್ಳಿ
* ಬಿಟಿಎಂ ಲೇಔಟ್
* ಪದ್ಮನಾಭನಗರ
* ವಿಜಯ ನಗರ
* ಗೋವಿಂದರಾಜ್ ನಗರ* ಬಿಎಂಎಸ್ ಮಹಿಳಾ ಕಾಲೇಜ್ ಬಸವನ ಗುಡಿ
* ಶಿವಾಜಿ ನಗರ
* ಶಾಂತಿ ನಗರ
* ಗಾಂಧಿ ನಗರ
* ರಾಜಾಜಿ ನಗರ
* ಚಾಮರಾಜ ಪೇಟೆ
* ಚಿಕ್ಕ ಪೇಟೆ
* ಮೌಂಟ್ ಕಾರ್ಮಲ್ ಕಾಲೇಜ್
* ಮಹಾಲಕ್ಷ್ಮಿ ಲೇಔಟ್
* ಸರ್ವಜ್ಞ ನಗರ
* ಹೆಬ್ಬಾಳ
* ಕೆ.ಆರ್ ಪುರಂ
* ಸಿವಿ ರಾಮ್ ನಗರರಾಮನಗರದಲ್ಲಿ ಅತೀ ಹೆಚ್ಚು ಮತದಾನವಾದರೆ ಬೆಂಗಳೂರಿನಲ್ಲೇ ಕಡಿಮೆ ಮತದಾನವಾಗಿದೆ. ಗ್ರಾಮೀಣ ಭಾಗಗಳಷ್ಟು ಇಲ್ಲಿ ಮತದಾನವಾಗಿಲ್ಲ. ಬೆಂಗಳೂರಿನಲ್ಲಿ ಕೇವಲ 50 ಪರ್ಸೆಂಟ್ ಮತದಾನವಾಗಿದೆ. ಐಟಿ-ಬಿಟಿಗಳಿಗೆ ಶನಿವಾರ, ಭಾನುವಾರ ರಜಾ ಹಿನ್ನೆಲೆ ಬೆಂಗಳೂರಿಗರು ಮತ ಹಾಕಲು ಮನಸು ಮಾಡಿಲ್ಲ. 2 ದಿನ ರಜಾ ಹಿನ್ನೆಲೆ ಎಲ್ಲರೂ ಟ್ರಿಪ್ ಅಂತಾ ತೆರಳಿದ್ರು. ಚುನಾವಣಾ ಆಯೋಗ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ ಮತದಾನ ಪ್ರಮಾಣ 50ಕ್ಕಿಂತ ಹೆಚ್ಚು ದಾಟಲಿಲ್ಲ.

-

ಮಂಗಳವಾರ ಕರ್ನಾಟಕ ಕುರುಕ್ಷೇತ್ರದ ರಿಸಲ್ಟ್- ಮತ್ತೆ ನಾನೇ ಸಿಎಂ ಅಂದ್ರು ಸಿದ್ದರಾಮಯ್ಯ
ಮೈಸೂರು: ಶನಿವಾರ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದ್ದು, ಮತಗಟ್ಟೆ ಸಮೀಕ್ಷೆಯ ಫಲಿತಾಂಶಗಳು ಹೊರಬಂದಿವೆ. ಎರಡು ಸಮೀಕ್ಷೆಗಳು ಕಾಂಗ್ರೆಸ್ ಮುನ್ನಡೆ ಅಂತಾ ತಿಳಿಸಿದ್ರೆ, ಇನ್ನೆರಡು ಬಿಜೆಪಿ ಜಯದ ಮೆಟ್ಟಿಲಿಗೆ ಸನೀಹದಲ್ಲಿವೆ ಅಂತಾ ತಿಳಿಸಿವೆ. ಇನ್ನೊಂದು ಸಮೀಕ್ಷೆ ಬಿಜೆಪಿ ಗೆಲ್ಲುವ ನಿಶ್ಚಿತ ಅಂತಾ ಹೇಳಿದೆ.
ಮತದಾನ ಮತ್ತು ಮತಗಟ್ಟೆ ಸಮೀಕ್ಷೆ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಸಿಎಂ ಮಾತನಾಡಿದ್ದಾರೆ. ನಾನು ಮೊದಲಿನಿಂದಲೂ ಅಂದ್ರೆ ಆರು ತಿಂಗಳ ಹಿಂದಿನಿಂದಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಅಂತಾ ಹೇಳಿಕೊಂಡು ಬಂದಿದ್ದೇನೆ. ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ ಬಳಿಕ ನನಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದು ಗೊತ್ತಾಯಿತು. ಕಾಂಗ್ರೆಸ್ 120 ಸೀಟ್‍ಗಳಲ್ಲಿ ಗೆಲುವು ಸಾಧಿಸಲಿದೆ ಅಂತಾ ತಿಳಿಸಿದ್ರು. ಇದನ್ನೂ ಓದಿ: ಬಿಜೆಪಿಗೆ ಸ್ಪಷ್ಟ ಬಹುಮತ: ಟುಡೇಸ್ ಚಾಣಕ್ಯ ಸಮೀಕ್ಷೆ

ಪ್ರಧಾನಿ ಮೋದಿ ಅವರ ಭಾಷಣದಿಂದ ಕರ್ನಾಟಕದಲ್ಲಿ ಯಾವ ಅಲೆಯೂ ನಿರ್ಮಾಣವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದ್ದು, ಅದೇನು ಬದಲಾಗಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವ್ಯಾಪಕವಾಗಿ ಪ್ರಚಾರ ಮಾಡಿದ್ದು ಮತ್ತು ನಾವು ಐದು ವರ್ಷ ಮಾಡಿರುವ ಕೆಲಸಗಳು ನಮಗೆ ಅನುಕೂಲವಾಗಿವೆ ಅಂದ್ರು. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ: ಎರಡರಲ್ಲಿ ಕಾಂಗ್ರೆಸ್, ಎರಡಲ್ಲಿ ಬಿಜೆಪಿಗೆ ಮುನ್ನಡೆ
ಚುನಾವಣೆ ಫಲಿತಾಂಶ ಬರುವರೆಗೂ ಎರಡು ದಿನ ವಿಶ್ರಾಂತಿ ಮಾಡುತ್ತೇನೆ. ಮತದಾನ ಮುಗಿದಿದ್ದು, ಎಲ್ಲವನ್ನೂ ತಲೆಯಿಂದ ತೆಗೆದು ಹಾಕಿ ರೆಸ್ಟ್ ಮಾಡ್ತೀನಿ. ಚಾಮುಂಡೇಶ್ವರಿ ಮತ್ತು ಬದಾಮಿ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ನಾನೇ ಗೆಲ್ಲುತ್ತೇನೆ. ಎಕ್ಸಿಟ್ ಪೋಲ್‍ಗಳು ಏನೇ ಬರಲಿ ಗೆಲುವು ನಮ್ಮದೇ, ನಾನೇ ಮುಂದಿನ ಮುಖ್ಯಮಂತ್ರಿ ಅಂತಾ ಆತ್ಮವಿಶ್ವಾಸ ವ್ಯಕ್ತಪಡಿಸಿದ್ರು.




