Tag: Karnataka Election

  • ಬಿಜೆಪಿ ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದೆ: ದಿನೇಶ್ ಗುಂಡೂರಾವ್

    ಬಿಜೆಪಿ ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿ ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

    ಸರ್ಕಾರ ರಚನೆಗೆ ಬೇರೆಯವರಿಗೆ ಅವಕಾಶ ನೀಡುವ ಮಾತೇ ಇಲ್ಲ ಅಂತಾ ಪ್ರಧಾನಿ ಮೋದಿ ಹೇಳ್ತಾರೆ ಅಂದ್ರೆ ಎಂತಹ ಲೆವಲ್ ಗೆ ಇಳಿದಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಕರ್ನಾಟಕದ ಜನತೆ ಅವರಿಗೆ ಸಂಪೂರ್ಣ ಬಹುಮತ ನೀಡಿಲ್ಲ. ಹೀಗಾಗಿ ಸರ್ಕಾರ ರಚನೆಯಿಂದ ದೂರ ಇದ್ರೆ ಸರಿಯಾಗುತ್ತೆ ಅಂತಾ ತಿಳಿಸಿದ್ರು. ಇದನ್ನೂ ಓದಿ: ವೀರಶೈವ ಮುಖಂಡರು ಬಿಜೆಪಿ ಸೇರ್ತಾರಾ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ

    ವಾಮಾ ಮಾರ್ಗ, ಬ್ಲಾಕ್ ಮೇಲ್, ಕುದುರೆ ವ್ಯಾಪಾರ ಮೂಲಕ ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರನ್ನು ಖರೀದಿಸುವ ಹೇಸಿಗೆ ತರಿಸುವಂತ ವಾತಾವರಣವನ್ನು ಕರ್ನಾಟಕದಲ್ಲಿ ನಿರ್ಮಾಣ ಮಾಡಬೇಡಿ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಬಹುಮತವನ್ನು ಪಡೆದುಕೊಂಡಿದೆ. ಈ ಹಿಂದೆಯೂ ಕರ್ನಾಟಕದ ಜನರು ಆಪರೇಷನ್ ಕಮಲದಂತಹ ಕೀಳುಮಟ್ಟದ ರಾಜಕೀಯವನ್ನು ನೋಡಿದ್ದಾರೆ. ಒಂದು ವೇಳೆ ಸ್ವಯಂ ಪ್ರೇರಿತವಾಗಿ ಶಾಸಕರು ನಿಮ್ಮ ಬಳಿ ಬಂದ್ರೆ ಕರೆದುಕೊಂಡು ಹೋಗಿ ನಮ್ಮದೇನು ವಿರೋಧವಿಲ್ಲ ಅಂತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಸ್ಫೋಟಕ ಮಾಹಿತಿ ಹೊರಗೆಡವಿದ ಕೆ.ಎಸ್ ಈಶ್ವರಪ್ಪ

  • ಸ್ಫೋಟಕ ಮಾಹಿತಿ ಹೊರಗೆಡವಿದ ಕೆ.ಎಸ್ ಈಶ್ವರಪ್ಪ

    ಸ್ಫೋಟಕ ಮಾಹಿತಿ ಹೊರಗೆಡವಿದ ಕೆ.ಎಸ್ ಈಶ್ವರಪ್ಪ

    ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬೆನ್ನಲ್ಲೇ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸ್ಫೋಟಕ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

    ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಯನ್ನು ಸಂಪರ್ಕಿಸುತ್ತಿದ್ದಾರೆ. ಆ ಶಾಸಕರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಬೇಕಿಲ್ಲವಂತೆ. ಅವರಾಗಿಯೇ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಯಾರು ಎಷ್ಟು ಅಂತಾ ಈಗ ಹೇಳಲ್ಲ ಎಂದ ಈಶ್ವರಪ್ಪ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಹಿಂಬಾಗಿಲಿನ ಮೂಲಕ ಬಿಎಸ್‍ವೈ ಮನೆಗೆ ಎಂಟ್ರಿ ಕೊಟ್ಟ ಪಕ್ಷೇತರ ಶಾಸಕ

    ಇತ್ತ ಈಶ್ವರಪ್ಪ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಬಿ.ಎಸ್.ಯಡಿಯೂರಪ್ಪರ ಮನೆಗೆ ಕರೆತಂದಿದ್ದಾರೆ. ಈಶ್ವರಪ್ಪರ ದೂರದ ಸಂಬಂಧಿಯಾಗಿರುವ ಆರ್.ಶಂಕರ್ ಬಿಜೆಪಿಗೆ ಬೆಂಬಲ ನೀಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಳಿಕ ಬಿಜೆಪಿಯ ನಡೆ ನಿಗೂಢ!

  • ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಳಿಕ ಬಿಜೆಪಿಯ ನಡೆ ನಿಗೂಢ!

    ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಳಿಕ ಬಿಜೆಪಿಯ ನಡೆ ನಿಗೂಢ!

    ಬೆಂಗಳೂರು: ರಾಜ್ಯ ಚುನಾವಣಾ ಫಲಿತಾಂಶದ ಬಳಿಕ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇತ್ತ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಮುಂದಿನ ನಡೆ ಏನೆಂಬುದರ ಬಗ್ಗೆ ತೀವ್ರ ಕೂತುಹಲವನ್ನು ಹುಟ್ಟುಹಾಕಿದೆ.

    ಆಪರೇಷನ್ ಕಮಲ ಮಾಡಲು ಮುಂದಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಶತಾಗತಯ ಪ್ರಯತ್ನ ಮಾಡುತ್ತಿದೆ. ಇತ್ತ ರಾಜ್ಯಪಾಲರ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚನೆಗೆ ಎರಡು ದಿನಗಳ ಕಾಲಾವಕಾಶ ಕೋರಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಕಾಂಗ್ರೆಸ್-ಜೆಡಿಎಸ್ ನಾಯಕರ ನಿಯೋಗ ಜೊತೆಯಾಗಿ ರಾಜಭವನಕ್ಕೆ ತೆರಳಿ ಸರ್ಕಾರ ರಚಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿವೆ.

    ಸರ್ಕಾರ ರಚಿಸಲು ಬಿಜೆಪಿಯ ಮುಂದಿನ ನಡೆ ಏನು?
    * ದೊಡ್ಡ ಪಕ್ಷವಾಗಿದ್ದಕ್ಕೆ ಸರ್ಕಾರ ರಚನೆಗೆ ಅವಕಾಶ ಕೋರಿಕೆ.
    * ಒಂದು ವಾರದೊಳಗೆ ಸಂಖ್ಯಾಬಲವನ್ನು ಹೊಂದಿಸಲು ಯತ್ನ.
    * ಸರ್ಕಾರ ರಚಿಸಿದ ಬಳಿಕ ಬಹುಮತ ಸಾಬೀತುಪಡಿಸಲು ತೆಗೆದುಕೊಳ್ಳಬಹುದು.
    * ಬಹುಮತ ಸಾಬೀತಿನ ಸಮಯದಲ್ಲಿ ಜೆಡಿಎಸ್- ಕಾಂಗ್ರೆಸ್‍ನ 15ಕ್ಕೂ ಹೆಚ್ಚು ಶಾಸಕರು ಗೈರಾಗುವಂತೆ ನೋಡಿಕೊಳ್ಳುವುದು.
    * ಸಾಂವಿಧಾನಿಕ ಮತ್ತು ಕಾನೂನಾತ್ಮಕವಾಗಿ ಮುಂದಿನ ಹೆಜ್ಜೆ.
    * ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖ.
    * ಜೆಡಿಎಸ್ ಅಥವಾ ಕಾಂಗ್ರೆಸ್ ಶಾಸಕರಿಗೆ ಗಾಳ..?
    * ಮುಖ್ಯವಾಗಿ ಲಿಂಗಾಯತ ಶಾಸಕರನ್ನು ಸೆಳೆಯಲು ಪ್ಲಾನ್.
    * ಜೆಡಿಎಸ್- ಕಾಂಗ್ರೆಸ್ ಮೈತ್ರಿಗೆ ಅಸಮಾಧಾನ ತೋರುವವರ ಮೇಲೆ ಕಣ್ಣು.
    * ಜೆಡಿಎಸ್- ಕಾಂಗ್ರೆಸ್ ಸಂಧಾನದವರೆಗೆ ಕಾದು ನೋಡುವ ತಂತ್ರ.

  • ಜೆಡಿಎಸ್-ಕಾಂಗ್ರೆಸ್ ಮೈತ್ರಿಗಾಗಿ ನಡೆದ ಸಂಧಾನದಲ್ಲಿ ಏನೆಲ್ಲಾ ಚರ್ಚೆಯಾಯ್ತು?

    ಜೆಡಿಎಸ್-ಕಾಂಗ್ರೆಸ್ ಮೈತ್ರಿಗಾಗಿ ನಡೆದ ಸಂಧಾನದಲ್ಲಿ ಏನೆಲ್ಲಾ ಚರ್ಚೆಯಾಯ್ತು?

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮತದಾರ ಯಾವ ಪಕ್ಷಕ್ಕೂ ಬಹುಮತವನ್ನು ನೀಡಿಲ್ಲ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಜೊತೆಯಾಗಿ ಸರ್ಕಾರ ರಚನೆಗೆ ಮುಂದಾಗಿವೆ. ಇನ್ನು 104 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿ ಎರಡು ದಿನಗಳ ಕಾಲಾವಕಾಶ ಕೋರಿದೆ.

    ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನಡುವೆ ಸಂಧಾನ ನಡೆದಿದೆ. ಇಂದು ಎರಡೂ ಪಕ್ಷಗಳ ನಿಯೋಗ ಜೊತೆಯಾಗಿ ಸೇರಿ ಜಂಟಿ ಸಭೆ ನಡೆಸಲಿವೆ. ಆದರೆ ಮೈತ್ರಿಗಾಗಿ ನಡೆದ ಸಂಧಾನದಲ್ಲಿ ಏನೆಲ್ಲಾ ಚರ್ಚೆಯಾಯ್ತು?

    ಜೆಡಿಎಸ್- ಕಾಂಗ್ರೆಸ್ ಸಂಧಾನ
    ಸೂತ್ರ- 1
    ಜೆಡಿಎಸ್‍ಗೆ ಮುಖ್ಯಮಂತ್ರಿ ಹುದ್ದೆ
    ಕಾಂಗ್ರೆಸ್‍ಗೆ ದಲಿತ ಡಿಸಿಎಂ ಸ್ಥಾನ

    ಸೂತ್ರ- 2
    ಪೂರ್ಣಾವಧಿಗೆ ಜೆಡಿಎಸ್‍ಗೆ ಬೆಂಬಲ
    ತಲಾ 16 ಸಚಿವ ಸ್ಥಾನಗಳ ಹಂಚಿಕೆ

    ಸೂತ್ರ- 3
    ಉಭಯ ಪ್ರಣಾಳಿಕೆ ಅನುಷ್ಠಾನಕ್ಕೆ ಸಮನ್ವಯ ಸಮಿತಿ
    ಇಬ್ಬರಿಗೂ ಒಪ್ಪಿಗೆ ಆಗುವ ಭರವಸೆಗಳ ಈಡೇರಿಕೆ

    ಇತ್ತ ಬಿಜೆಪಿ ಸರ್ಕಾರ ರಚನೆಗೆ ಎರಡು ದಿನಗಳ ಅವಕಾಶ ಕೋರದಿ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಪಕ್ಷದ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ರೆಸಾರ್ಟ್ ರಾಜಕೀಯದ ಮೊರೆ ಹೋಗಬಹುದು. ಬಿಜೆಪಿ ಬಹುಮತ ಸಾಬೀತು ಮಾಡೋವರೆಗೆ ತಮ್ಮ ಶಾಸಕರನ್ನು ಅವರಿಗೆ ಸಿಗದಂತೆ ನೋಡಿಕೊಳ್ಳುವಂತೆ ಮಾಡುವ ಸಾಧ್ಯತೆಗಳಿವೆ.

  • ನಾವ್ಯಾಕೆ ರೆಸಾರ್ಟ್ ಗೆ ಹೋಗೋಣ: ಸಿದ್ದರಾಮಯ್ಯ

    ನಾವ್ಯಾಕೆ ರೆಸಾರ್ಟ್ ಗೆ ಹೋಗೋಣ: ಸಿದ್ದರಾಮಯ್ಯ

    ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡಲಿದೆ. ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಮಾಹಿತಿ ನನಗಿಲ್ಲ. ನಾವ್ಯಾಕೆ ರೆಸಾರ್ಟ್ ಗೆ ಹೋಗಬೇಕೆಂದು ಹಂಗಾಮಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬುಧವಾರ ಕಾಂಗ್ರೆಸ್-ಜೆಡಿಎಸ್ ಶಾಸಕಾಂಗದ ಸಭೆ ನಡೆಯಲಿದೆ. ಸಭೆಯಲ್ಲಿ ಒಮ್ಮತದ ತೀರ್ಮಾಣ ತೆಗೆದುಕೊಳ್ಳಲಾಗುವುದು. ಈಗಾಗಲೇ ರಾಜ್ಯಪಾಲರಿಗೆ ಸರ್ಕಾರ ರಚನೆ ಮಾಡಲಿದ್ದೇವೆ ಅಂತಾ ಪತ್ರ ಬರೆಯಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ದೇವೇಗೌಡರಿಗೂ ನಮ್ಮ ಬೆಂಬಲವಿದೆ ಅಂತಾ ಪತ್ರದ ಮೂಲಕ ತಿಳಿಸಿದ್ದೇವೆ ಅಂತಾ ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯಪಾಲರ ಅಂಗಳದಲ್ಲೀಗ ಸರ್ಕಾರದ ಚೆಂಡು: ಯಾವ ಸಮಯದಲ್ಲಿ ಏನಾಯ್ತು?

    ಇನ್ನು ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಮಾಡೋದು ಸಹಜ. ಆದ್ರೆ ಆ ವಿಚಾರ ಈಗ ಅಪ್ರಸ್ತುತ. ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಸರ್ಕಾರ ರಚನೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ. ಯಾವ ಆಪರೇಷನ್ ಕಮಲ ಕೂಡ ನಡೆಯಲ್ಲ ಅಂತಾ ತಿಳಿಸಿದ್ದಾರೆ.

  • ಆಪರೇಷನ್ ಕಮಲ ಗಾಳಿ ಸುದ್ದಿ – ಎಚ್‍ಡಿಕೆ

    ಆಪರೇಷನ್ ಕಮಲ ಗಾಳಿ ಸುದ್ದಿ – ಎಚ್‍ಡಿಕೆ

    ಬೆಂಗಳೂರು: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜೆಡಿಎಸ್‍ಗೆ ಬೆಂಬಲ ನೀಡುವುದಾಗಿ ಕಾಂಗ್ರೆಸ್ ತಿಳಿಸಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

    ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ, ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಬೆಂಬಲದ ಪತ್ರವನ್ನು ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ನೀಡಿದ್ದಾರೆ. ಇಂದು ರಾಜ್ಯಪಾಲರಿಗೆ ಎರಡೂ ಪಕ್ಷದ ನಿಯೋಗದಿಂದ ಸರ್ಕಾರ ರಚಿಸಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದೇವೆ ಎಂದರು.

    ಆಪರೇಷನ್ ಕಮಲದ ಬಗ್ಗೆ ಕೇಳಿದ ಪ್ರಶ್ನೆಗೆ, ಬಿ.ಎಸ್.ಯಡಿಯೂರಪ್ಪ ಯಾವ ಕಾರಣಕ್ಕೆ ಎರಡು ದಿನಗಳ ಕಾಲಾವಕಾಶ ಕೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆಪರೇಷನ್ ಕಮಲದ ಬಗ್ಗೆ ಗಾಳಿ ಸುದ್ದಿಗಳು ಕೇಳಿ ಬರ್ತೀವಿ ಎಂದರು.

    ಸಿದ್ದರಾಮಯ್ಯ ಮಾತನಾಡಿ, ಜೆಡಿಎಸ್ ಗೆ ಸರ್ಕಾರ ರಚನೆ ಮಾಡಲು ಕಾಂಗ್ರೆಸ್ ಸಂಪೂರ್ಣ ಬೆಂಬಲವನ್ನು ನೀಡುತ್ತಿದೆ. ಕಾಂಗ್ರೆಸ್ ತೀರ್ಮಾನವನ್ನು ಪತ್ರದ ಮೂಲಕ ರಾಜ್ಯಪಾಲರಿಗೆ ತಿಳಿಸಿದ್ದೇವೆ. ನಮ್ಮ ಪಕ್ಷದ ತೀರ್ಮಾನವನ್ನು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರಿಗೂ ಪತ್ರದ ಮೂಲಕ ತಿಳಿಸಲಾಗಿದೆ. ಸರ್ಕಾರ ರಚನೆ ಮಾಡಲು ಬೇಕಾದ ಬಹುಮತ ನಮ್ಮಲಿದೆ ಅಂತಾ ತಿಳಿಸಿದ್ರು.

    ನಾವು ನಮ್ಮ ಪಕ್ಷದ ಎಲ್ಲ ನಾಯಕರೊಂದಿಗೆ ಬಂದಿದ್ದು, ಹಾಗೆಯೇ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ನಿಯೋಗದಿಂದ ಬಂದು ಎರಡೂ ಪಕ್ಷಗಳಿಂದ ಒಂದೊಂದು ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದೇವೆ. ಪತ್ರದಲ್ಲಿ ನಾವು ಜೆಡಿಎಸ್‍ಗೆ ಸರ್ಕಾರ ರಚಿಸಲು ಸಂಪೂರ್ಣ ಬೆಂಬಲವನ್ನು ನೀಡಿದ್ದೇವೆ.ಕಾಂಗ್ರೆಸ್ ಮನವಿಗೆ ಜೆಡಿಎಸ್ ಸಹ ಬೆಂಬಲ ನೀಡಿದೆ ಎಂದರು.

  • ರಾಜ್ಯದ ಜನತೆ ಡೀಲ್ ಪಾರ್ಟಿಗೆ ಸ್ಪಷ್ಟ ಅಧಿಕಾರ ನೀಡಿಲ್ಲ: ಹೆಚ್.ಆಂಜನೇಯ

    ರಾಜ್ಯದ ಜನತೆ ಡೀಲ್ ಪಾರ್ಟಿಗೆ ಸ್ಪಷ್ಟ ಅಧಿಕಾರ ನೀಡಿಲ್ಲ: ಹೆಚ್.ಆಂಜನೇಯ

    ಚಿತ್ರದುರ್ಗ: ಕರ್ನಾಟಕ ಜನತೆ ಡೀಲ್ ಪಾರ್ಟಿಗೆ ಸ್ಪಷ್ಟ ಅಧಿಕಾರ ನೀಡಿಲ್ಲ. ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳ ವಿರುದ್ಧ ಅಪಪ್ರಚಾರ ಮಾಡಲಾಯಿತು. ಪ್ರಧಾನಿ ಮೋದಿ ಕೂಡ ಆಧಾರ ರಹಿತವಾಗಿ ಆರೋಪ ಮಾಡಿದ್ರು ಅಂತಾ ಮಾಜಿ ಸಮಾಜ ಕಲ್ಯಾಣ ಸಚಿವ ಆಂಜನೇಯ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿಗೆ ಬಹುಮತ ಸಿಗದಿರುವುದು ನಮಗೆ ನೆಮ್ಮದಿ ತಂದಿದೆ. ವಾಮ ಮಾರ್ಗದ ಮೂಲಕ ಗೆಲುವು ಸಾಧಿಸಲು ಹೊರಟ್ಟಿದ್ದ ಬಿಜೆಪಿ ಯತ್ನಕ್ಕೆ ವಿಫಲವಾಗಿದೆ. ಪ್ರಜಾಪ್ರಭುತ್ವಕ್ಕೆ ಅಪಚಾರವೆಸಗಿ, ಅಪಕೀರ್ತಿಗೆ ಒಳಗಾಗಿರುವ ಬಿಜೆಪಿಗೆ ಅಧಿಕಾರ ನೀಡದಿರುವುದು ಸ್ವಾಗತಾರ್ಹ. ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದ್ರು.

    ಚುನಾವಣೆಯಲ್ಲಿ ಸೋಲು-ಗೆಲುವನ್ನು ಎರಡನ್ನೂ ಸಮಾನಾಗಿ ಸ್ವೀಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡಲಿದ್ದು, ನಮ್ಮ ಬೆಂಬಲವನ್ನು ಜೆಡಿಎಸ್ ಗೆ ನೀಡುತ್ತೇವೆ ಅಂತಾ ತಿಳಿಸಿದ್ರು.

    ಈ ಬಾರಿ ಹೆಚ್. ಆಂಜನೇಯ ಹೊಳಲ್ಕರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು. ಆದ್ರೆ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ವಿರುದ್ಧ 40 ಸಾವಿರ ಮತಗಳಿಂದ ಪರಾಭವಗೊಂಡಿದ್ದಾರೆ.

  • ಕ್ಷೇತ್ರದ ಜನ ನನ್ನನ್ನ ಮನೆ ಮಗ ಅಂತಾ ಆಶೀರ್ವದಿಸಿದ್ದಾರೆ: ಜಮೀರ್ ಅಹ್ಮದ್

    ಕ್ಷೇತ್ರದ ಜನ ನನ್ನನ್ನ ಮನೆ ಮಗ ಅಂತಾ ಆಶೀರ್ವದಿಸಿದ್ದಾರೆ: ಜಮೀರ್ ಅಹ್ಮದ್

    ಬೆಂಗಳೂರು: ಕ್ಷೇತ್ರದ ಜನ ನನ್ನನ್ನು ಮನೆ ಮಗ ಅಂತಾ ಆಶೀರ್ವದಿಸಿ ಗೆಲ್ಲಿಸಿದ್ದಾರೆ ಎಂದು ಚಾಮರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

    ಕ್ಷೇತ್ರದ ಜನ ನನ್ನನ್ನು ರಾಜಕೀಯ ವ್ಯಕ್ತಿ ಎಂದು ಭಾವಿಸಿಲ್ಲ. ಮುಂದಿನ ದಿನಗಳಲ್ಲಿ ಅವರ ಸೇವೆ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ. ಮುಂಬರುವ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಇನ್ನು ಅನೇಕ ಅಭಿವೃದ್ಧಿ ಕೆಲಸ ಕಾರ್ಯ ಮಾಡುತ್ತೇನೆ ಅಂತಾ ಅಂದ್ರು.

    ನನ್ನ ಮತ್ತು ಕುಮಾರಸ್ವಾಮಿ ಅವರ ನಡುವೆ ವ್ಯತ್ಯಾಸವಿದೆ. ನಾನಾಗಿಯೇ ಜೆಡಿಎಸ್ ಬಿಟ್ಟಿಲ್ಲ, ನನ್ನನ್ನು ಪಕ್ಷ ಬಿಡುವಂತೆ ಮಾಡಲಾಯಿತು. ಬಿಜೆಪಿ ಕೋಮವಾದಿ ಪಕ್ಷವಾಗಿದ್ದು, ಜೆಡಿಎಸ್ ಸೆಕ್ಯೂಲರ್ ಆಗಿದೆ. ಇಂದಿಗೂ ನಾನು ಜೆಡಿಎಸ್ ಬಿಟ್ಟಿದ್ದನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತೇನೆ ಅಂತಾ ಸ್ಪಷ್ಟಪಡಿಸಿದ್ರು.

  • ಕಾಂಗ್ರೆಸ್-ಜೆಡಿಎಸ್ ಮೊದಲೇ ಹೊಂದಾಣಿಕೆ ಆಗ್ಬೇಕಿತ್ತು: ಮಮತಾ ಬ್ಯಾನರ್ಜಿ

    ಕಾಂಗ್ರೆಸ್-ಜೆಡಿಎಸ್ ಮೊದಲೇ ಹೊಂದಾಣಿಕೆ ಆಗ್ಬೇಕಿತ್ತು: ಮಮತಾ ಬ್ಯಾನರ್ಜಿ

    ಬೆಂಗಳೂರು: ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕಮಾಡಿಕೊಳ್ಳಬೇಕಿತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಟ್ವಟ್ಟರ್ ನಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ. ಈ ಮೊದಲೇ ಜೆಡಿಎಸ್ ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರೆ ಅತಂತ್ರ ಪರಿಸ್ಥಿತಿ ನಿರ್ಮಾಣ ಆಗ್ತಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಸದ್ಯದಲ್ಲಿ ಕರ್ನಾಟಕ ವಿಧಾನಸಭೆಯ ಫಲಿತಾಂಶ ಅತಂತ್ರವಾಗಿದ್ದು, ಈಗಾಗಲೇ ಕಾಂಗ್ರೆಸ್ ನಾವು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಬೆಂಬಲ ನೀಡುತ್ತಿದ್ದೇವೆ ಅಂತಾ ಅಧಿಕೃತವಾಗಿ ತಿಳಿಸಿದ್ದಾರೆ. ಇನ್ನೂ ಕಾಂಗ್ರೆಸ್ ಮನವಿಗೆ ಜೆಡಿಎಸ್ ಹಾಗು ಪಕ್ಷದ ಮುಖಂಡರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

  • ತೀರ್ಪಿನ ಮೊದಲೇ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

    ತೀರ್ಪಿನ ಮೊದಲೇ ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

    ಮಂಗಳೂರು: ಇಂದು ಕರ್ನಾಟಕ ಕುರುಕ್ಷೇತ್ರದ ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಬೆಳಗ್ಗೆ 7ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ.

    ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೋ ಬೆಂಬಲಿಗರು ಚುನಾವಣಾ ಫಲಿತಾಂಶದ ಮೊದಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಯುವ ಕಾಂಗ್ರೆಸ್ ಸದಸ್ಯರು ಮಂಗಳೂರಿನ ಫಳ್ನೀರ್ ಮಿಲಾಗ್ರಿಸ್ ವಾರ್ಡ್ ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಫಲಿತಾಂಶಕ್ಕೂ ಮೊದ್ಲೇ ಬಿಜೆಪಿ ಅಭ್ಯರ್ಥಿಯಿಂದ ವಿಜಯೋತ್ಸವ!

    ನಗರದ ಮಥಾಯಸ್ ಪಾರ್ಕ್ ಬಳಿಯೂ ತಡರಾತ್ರಿ ಕಾಂಗ್ರೆಸ್ ಸದಸ್ಯರು ಸಂಭ್ರಮ ಆಚರಣೆ ಮಾಡಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಜೆ.ಆರ್.ಲೋಬೋ, ಬಿಜೆಪಿಯಿಂದ ವೇದವ್ಯಾಸ ಕಾಮತ್ ಮತ್ತು ಜೆಡಿಎಸ್ ನಿಂದ ರತ್ನಾಕರ ಸುವರ್ಣ ಕಣದಲ್ಲಿದ್ದಾರೆ.