Tag: Karnataka Election

  • ಬಿಎಸ್‍ವೈಗೆ ಮಾನ ಮರ್ಯಾದೆ ಇದ್ರೆ, ರಾಜಿನಾಮೆ ಕೊಟ್ಟು ಹೋಗ್ಬೇಕು: ರಾಮಲಿಂಗಾ ರೆಡ್ಡಿ

    ಬಿಎಸ್‍ವೈಗೆ ಮಾನ ಮರ್ಯಾದೆ ಇದ್ರೆ, ರಾಜಿನಾಮೆ ಕೊಟ್ಟು ಹೋಗ್ಬೇಕು: ರಾಮಲಿಂಗಾ ರೆಡ್ಡಿ

    ಬೆಂಗಳೂರು: ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಅವ್ರಿಗೆ ಮಾನ ಮರ್ಯಾದೆ ಇದ್ರೆ ರಾಜಿನಾಮೆ ಕೊಟ್ಟು ಹೋಗಬೇಕು ಅಂತಾ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

    ರಾಜಭವನ ಚಲೋ ಪ್ರತಿಭಟನೆ ವೇಳೆಯಲ್ಲಿ ಭಾಗಿಯಾಗಿದ್ದ ವೇಳೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಮಾಜಿ ಸಚಿವರು, ಈಗಾಗಲೇ ಸುಪ್ರೀಂ ಕೋರ್ಟ್ ಶನಿವಾರ ಸಂಜೆ 4 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಮಾಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ನಾವು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡುತ್ತೇವೆ. ನಮ್ಮ ಪಕ್ಷ ಹಾಗು ಜೆಡಿಎಸ್ ನಿಂದ ಟಿಕೆಟ್ ಪಡೆದು ಗೆಲುವು ಸಾಧಿಸಿರುವ ನಮ್ಮ ಶಾಸಕರು ಬಿಜೆಪಿಗೆ ಹೋಗಲ್ಲ ಅಂತಾ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

    ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಇಂದು ಕಾಂಗ್ರೆಸ್ ನಾಯಕರು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಮುಂದಾಗಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್‍ನ ರಾಜ್ಯ ಹಾಗು ಕೇಂದ್ರದ ನಾಯಕರು ರಾಜಭವನ ಚಲೋ ಚಳುವಳಿಗೆ ಚಾಲನೆ ಕೊಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಕಾಂಗ್ರೆಸ್‍ನ ಕೇಂದ್ರ ನಾಯಕರಾದ ಗುಲಾಂನಬೀ ಆಜಾದ್, ಮಲ್ಲಿಕಾರ್ಜುನ್ ಖರ್ಗೆ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಎಲ್ಲ ನಾಯಕರು ಮುಂದಾಗಿದ್ದಾರೆ.

    ಸುಪ್ರೀಂ ಕೋರ್ಟ್ ನ ತ್ರಿಸದ್ಯ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ಶನಿವಾರ 4 ಗಂಟೆಯ ಒಳಗಡೆ ಬಹುಮತವನ್ನು ಸಾಬೀತುಪಡಿಸಬೇಕು. ಅಷ್ಟೇ ಅಲ್ಲದೇ ಅಂಗ್ಲೋ ಇಂಡಿಯನ್ ನೇಮಕ ಮಾಡುವಂತಿಲ್ಲ. ಇದರ ಜೊತೆಯಲ್ಲಿ ಬಹುಮತ ಸಾಬೀತುಪಡೆಸುವ ವರೆಗೂ ಯಾವುದೇ ಆಡಳಿತಾತ್ಮಕ ನಿರ್ಧಾರವನ್ನು ಬಿಎಸ್ ಯಡಿಯೂರಪ್ಪನವರನ್ನು ಪ್ರಕಟಿಸುವಂತಿಲ್ಲ ಎಂದು ಆದೇಶಿಸಿದೆ.

    ಸುಪ್ರೀಂ ಆದೇಶವನ್ನು ಬಿಜೆಪಿ ಸ್ವಾಗತಿಸಿದ್ದು, ನಮಗೆ ಸಂಖ್ಯಾಬಲವಿದ್ದು ಬಹುಮತವನ್ನು ಸಾಬೀತು ಪಡಿಸುತ್ತೇವೆ ಎಂದು ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

  • ಸಿಎಂ ಬಿಎಸ್‍ವೈಗೆ ಅಗ್ನಿ ಪರೀಕ್ಷೆ-ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು?

    ಸಿಎಂ ಬಿಎಸ್‍ವೈಗೆ ಅಗ್ನಿ ಪರೀಕ್ಷೆ-ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು?

    ಬೆಂಗಳೂರು: ನಾಟಕೀಯ ತಿರುವುಗಳು, ಕಾನೂನು ಹೋರಾಟಗಳ ಆತಂಕದ ಮಧ್ಯೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವ್ರಿಗೆ ಬಹುಮತ ಸಾಬೀತುಪಡಿಸುವ ಮುನ್ನವೇ ಸುಪ್ರೀಂ ಪರೀಕ್ಷೆ ಎದುರಾಗಿದೆ.

    ಜೆಡಿಎಸ್ ಮತ್ತು ಕಾಂಗ್ರೆಸ್ ಸಲ್ಲಿಸಿರೋ ಅರ್ಜಿಯ ವಿಚಾರಣೆ ಇಂದು ಕೂಡ ಮುಂದುವರೆಯಲಿದೆ. ಸುಪ್ರೀಂಕೋರ್ಟ್ ನ ತ್ರಿಸದಸ್ಯಪೀಠ ಗುರುವಾರ ಸೂಚಿಸಿದ್ದ ಪ್ರಕಾರ, ರಾಜ್ಯಪಾಲರಿಗೆ ಸಲ್ಲಿಸಲಾದ ಶಾಸಕರ ಬೆಂಬಲ ಪತ್ರವನ್ನು ಬಿಎಸ್‍ವೈ ಇಂದು ಹಾಜರುಪಡಿಸಬೇಕಿದೆ. ಮಂಗಳವಾರ ಮತ್ತು ಬುಧವಾರ ಯಡಿಯೂರಪ್ಪ ಸರ್ಕಾರ ರಚೆನೆಗೆ ಅವಕಾಶ ಕೋರಿ ರಾಜ್ಯಪಾಲರಿಗೆ ಎರಡು ಪತ್ರಗಳನ್ನು ನೀಡಿದ್ದರು. ಬಿಎಸ್‍ವೈ ಸಲ್ಲಿಸುವ ಈ ಬೆಂಬಲ ಪತ್ರಗಳಲ್ಲಿ ಕಂಟೆಂಟ್ ಆಧಾರದ ಮೇಲೆ ಇವತ್ತು ವಿಚಾರಣೆ ನಡೆಯೋ ಸಾಧ್ಯತೆಗಳಿವೆ.

    ಕಾಂಗ್ರೆಸ್ ಪರ ಅಭಿಷೇಕ್ ಮನು ಸಿಂಘ್ವಿ, ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್, ಬಿಎಸ್‍ವೈ ಪರ ಮುಕುಲ್ ರೊಹ್ಟಗಿ ವಾದ ಮಂಡಿಸಲಿದ್ದಾರೆ. ವೈಯಕ್ತಿಕ ನೆಲೆಯಲ್ಲಿ ರಾಜ್ಯಪಾಲರ ನಡೆ ಪ್ರಶ್ನಿಸಿದ ಜೇಠ್ಮಲಾನಿ ಕೂಡ ತಮ್ಮ ವಾದ ಮಂಡಿಸುವ ಸಾಧ್ಯತೆಗಳಿವೆ. ಈ ನಡುವೆ ಬಿಜೆಪಿಗೆ ಅನುಕೂಲ ಮಾಡಿಕೊಡಲು ರಾಜ್ಯಪಾಲರು ಆಂಗ್ಲೋ ಇಂಡಿಯನ್ ಶಾಸಕರಾಗಿ ವಿನಿಶಾ ನಿರೋರಾ ನಾಮನಿರ್ದೇಶನಕ್ಕೆ ರಾಜ್ಯಪಾಲರು ತರಾತುರಿಯಲ್ಲಿ ಅಂಕಿತ ಹಾಕಿದ್ದಾರೆ ಆರೋಪಿಸಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಮತ್ತೊಂದು ಅರ್ಜಿ ಸಲ್ಲಿಸಿದೆ. ಈ ಅರ್ಜಿಯೂ ಇಂದೇ ವಿಚಾರಣೆಗೆ ಬರುವ ಸಾಧ್ಯತೆ ಇದೆ.

    ಸುಪ್ರೀಂಕೋರ್ಟ್ ನಲ್ಲಿ ಇಂದು ಏನಾಗಬಹುದು..?
    * 104 ಶಾಸಕರನ್ನು ಹೊರತುಪಡಿಸಿ ನಿಮ್ಮ ಬೆಂಬಲಕ್ಕಿರುವ ಶಾಸಕರು ಯಾರು ಎಂದು ಪ್ರಶ್ನಿಸಬಹುದು.
    * 104 ಶಾಸಕರಷ್ಟೇ ನಿಮ್ಮ ಬಳಿ ಇದ್ದಾರೆ.. ಬಹುಮತ ಹೇಗೆ ಸಾಬೀತುಪಡಿಸುವಿರಿ ಎಂದು ಪ್ರಶ್ನೆ ಮಾಡಬಹುದು.
    * ಬಹುಮತ ಸಾಬೀತಿಗೆ ನೀಡಲಾದ ಕಾಲಾವಕಾಶವನ್ನು ಕಡಿಮೆ ಮಾಡಬಹುದು.
    * ವಿಶ್ವಾಸಮತ ಸಾಬೀತುಪಡಿಸುವಂತೆ ಸಿಎಂ ಬಿಎಸ್‍ವೈಗೆ ಸೂಚಿಸಬಹುದು.
    * ಶಾಸಕರ ಪ್ರಮಾಣ ಸ್ವೀಕಾರಕ್ಕೆ ಮುನ್ನ ಅನ್ವಯ ಆಗಲ್ಲವೇ.. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗಲ್ಲವೇ ಎಂಬ ಬಗ್ಗೆ ಚರ್ಚೆ ನಡೆಯಬಹುದು.

    ಗುರುವಾರ ವಿಚಾರಣೆ ವೇಳೆ ಅಟಾರ್ನಿ ಜನರಲ್ ಜನಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕವಷ್ಟೇ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಆಗುತ್ತದೆ ಎಂದು ಹೇಳಿದ್ದರು.

  • ರಾತ್ರಿಯಿಡೀ ಖಾಸಗಿ ಹೋಟೆಲ್‍ನಲ್ಲಿ ಬಿಎಸ್‍ವೈ ಮೀಟಿಂಗ್-ಬಹುಮತ ಹೇಗೆ ಸಾಬೀತು ಮಾಡ್ತಾರೆ?

    ರಾತ್ರಿಯಿಡೀ ಖಾಸಗಿ ಹೋಟೆಲ್‍ನಲ್ಲಿ ಬಿಎಸ್‍ವೈ ಮೀಟಿಂಗ್-ಬಹುಮತ ಹೇಗೆ ಸಾಬೀತು ಮಾಡ್ತಾರೆ?

    ಬೆಂಗಳೂರು: ಇಂದು ಸುಪ್ರೀಂಕೋರ್ಟ್ ಮುಂದೆ ನೂತನ ಸಿಎಂ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕಿದೆ. ಇತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಹೈಡ್ರಾಮಗಳ ಬಹುಮತ ಸಾಬೀತುಪಡಿಸಲು ಅಗತ್ಯವಿರುವ ಸಂಖ್ಯಾಬಲವನ್ನು ಹೊಂದಿಸೋ ಬಗ್ಗೆ ಹಾಗು ಮುಂದಿನ ರಣತಂತ್ರಗಳ ಬಗ್ಗೆ ರಾತ್ರಿಯಿಡೀ ಬಿಜೆಪಿ ನಾಯಕರು ಚರ್ಚೆ ನಡೆಸಿದ್ದಾರೆ.

    ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ಜೆಪಿ ನಡ್ಡಾ, ಧಮೇಂದ್ರ ಪ್ರಧಾನ್ ಮತ್ತು ಅನಂತ್ ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ರು.

    ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜ್ಯದ ಬಾರ್ಡರ್ ದಾಟಿದ್ದು ಬಿಎಸ್‍ವೈಗೆ ಫುಲ್ ಟೆನ್ಶನ್ ತರಿಸಿದೆ. ರಾತ್ರಿ ಮನೆಗೆ ಕೂಡ ಹೋಗದೇ ಮುಂದೇನು ಮಾಡಬೇಕು ಅನ್ನೋ ಬಗ್ಗೆ ತಲೆಕೆಡಿಸಿಕೊಂಡು ಕುಳಿತಿದ್ರು ಅಂತಾ ಎನ್ನಲಾಗಿದೆ. ಕೆಲವೇ ಕ್ಷಣಗಳ ಹಿಂದೆ ಬಿಎಸ್‍ವೈ ಮನೆಗೆ ಹಿಂದಿರುಗಿದ್ದಾರೆ. ಈ ನಡುವೆ ನೇರವಾಗಿ ಎಲ್ಲೂ ಕಾಣಿಸಿಕೊಳ್ಳದಿರಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಬಹುಮತ ಹೇಗೆ ಸಾಬೀತು ಮಾಡಬಹುದು ಯಡಿಯೂರಪ್ಪ ಅನ್ನೋದನ್ನು ನೋಡೋದಾದ್ರೆ:
    * ಶಾಸಕರು ಪ್ರಮಾಣ ಸ್ವೀಕಾರ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಕೆಲವರನ್ನು ಸೆಳೆದು ರಾಜೀನಾಮೆ ಕೊಡಿಸಬಹುದು.
    * ಒಂದು ಪಕ್ಷದ ಒಟ್ಟು ಸಂಖ್ಯೆಯ 3ನೇ 2ರಷ್ಟು ಶಾಸಕರನ್ನು ಬಿಜೆಪಿಗೆ ಬರುವಂತೆ ಮಾಡುವುದು.
    * ಕಾನೂನಿನ ರಿಸ್ಕ್ ತೆಗೆದುಕೊಂಡು ಶಾಸಕರಿಂದ ಅಡ್ಡ ಮತದಾನ ಮಾಡಿಸಬಹುದು.
    * ಚುನಾಯಿತ ಸದಸ್ಯರನ್ನು ಪ್ರಮಾಣ ವಚನದಿಂದ ದೂರ ಉಳಿಸಿ ಸದನದ ಸಂಖ್ಯಾಬಲ ಕುಗ್ಗಿಸಬಹುದು.
    * ಬಹುಮತ ಸಾಬೀತಿನ ಬಳಿಕ ಆ ಪ್ರತಿನಿಧಿಗಳನ್ನ ಶಪಥ ಸ್ವೀಕರಿಸುವಂತೆ ಮಾಡಬಹುದು.
    * ಜೆಡಿಎಸ್ ಬೆಂಬಲ ಪಡೆಯಲು ಮತ್ತೊಂದು ಸುತ್ತು ಮಾತುಕತೆಗೆ ಮುಂದಾಗಬಹುದು.
    * ಕಾಂಗ್ರೆಸ್ ರೀತಿಯಲ್ಲಿ ಭೇಷರತ್ ಬೆಂಬಲವನ್ನು ಜೆಡಿಎಸ್‍ಗೆ ಬಿಜೆಪಿಯೂ ನೀಡಬಹುದು.

    ರಾಜ್ಯಪಾಲರಿಗೆ ಸರ್ಕಾರ ರಚನೆ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಬರೆದಿರುವ ಪತ್ರದಲ್ಲಿ ಏನಿದೆ? ಬಹುಮತ ಸಾಬೀತಿಗೆ ಬೇಕಾದ ಬೆಂಬಲ ಯಾರು ನೀಡ್ತಾರೆ? ಎಂಬೆಲ್ಲ ಮಾಹಿತಿ ಆಧರಿಸಿ ವಿಚಾರಣೆ ನಡೆಯಲಿದೆ. ಇದರ ಜೊತೆಗೆ ಹಿರಿಯ ವಕೀಲ ರಾಮ್ ಜೇಠ್ಮಾಲಾನಿ ಕೂಡಾ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ್ದು, ಯಾವ ಆಯಾಮದಲ್ಲಿ ವಾದ ಮಂಡಸಿಲಿದ್ದಾರೆ ಎಂಬ ಕುತೂಹಲ ಮೂಡಿದೆ.

    ಈ ಎಲ್ಲ ಅರ್ಜಿಯ ಜೊತೆಗೆ ಆಂಗ್ಲೋ ಇಂಡಿಯನ್ ಶಾಸಕರನ್ನು ತರಾತುರಿಯಲ್ಲಿ ರಾಜ್ಯಪಾಲರು ನೇಮಕ ಮಾಡಿದ್ದಾರೆ ಅಂತಾ ಆರೋಪಿಸಿರುವ ಕಾಂಗ್ರೆಸ್ ಜೆಡಿಎಸ್ ಜಂಟಿಯಾಗಿ ಮತ್ತೊಂದು ಅರ್ಜಿಯೊಂದನ್ನ ಸುಪ್ರಿಂಕೊರ್ಟ್ ಗೆ ಸಲ್ಲಿಸಿದ್ದು, ಒಟ್ಟು ನಾಲ್ಕು ಅರ್ಜಿಗಳು ಏಕ ಕಾಲದಲ್ಲಿ ವಿಚಾರಣೆಗೆ ಬರಲಿದೆ. ಒಟ್ಟಿನಲ್ಲಿ ಇಂದು ಬಿಎಸ್‍ವೈ ಭವಿಷ್ಯ ನಿರ್ಧರವಾಗಿದೆ.

  • ಸುಪ್ರೀಂ ವಿಚಾರಣೆ ಬಗ್ಗೆ ಬಿಜೆಪಿಯಿಂದ ಮಂಥನ- ಇತ್ತ ಬಿಹಾರ, ಗೋವಾ ರಾಜಕೀಯದಲ್ಲಿ ಕಂಪನ

    ಸುಪ್ರೀಂ ವಿಚಾರಣೆ ಬಗ್ಗೆ ಬಿಜೆಪಿಯಿಂದ ಮಂಥನ- ಇತ್ತ ಬಿಹಾರ, ಗೋವಾ ರಾಜಕೀಯದಲ್ಲಿ ಕಂಪನ

    – ಇಂದು ಕಾಂಗ್ರೆಸ್‍ನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ

    ಬೆಂಗಳೂರು: ಒಂದು ಕಡೆ ನೂತನ ಸಿಎಂ ಆಗಿ ಆಯ್ಕೆಗೊಂಡಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಅತ್ಯಂತ ಪ್ರಮುಖವಾದ ದಿನವಾಗಿದೆ. ಈಗಾಗಲೇ ರಾಜ್ಯಪಾಲ ವಜೂಭಾಯಿ ವಾಲಾರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್-ಜೆಡಿಎಸ್ ಜಂಟಿಯಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿವೆ. ಇಂದು ಕಾಂಗ್ರೆಸ್-ಜೆಡಿಎಸ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.

    ಸುಪ್ರೀಂ ವಿಚಾರಣೆಯ ಬಗ್ಗೆ ಬಿಜೆಪಿ ಅಂಗಳದಲ್ಲಿ ಭಾರೀ ಚರ್ಚೆಗಳು ಆರಂಭಗೊಂಡಿವೆ. ಇತ್ತ ಕರ್ನಾಟಕದ ರಾಜ್ಯಪಾಲರ ನಡೆಯನ್ನು ಗಾಳವಾಗಿ ಬಳಸಿಕೊಂಡು ಬಿಹಾರ, ಗೋವಾ, ಮೇಘಾಲಯ ಮತ್ತು ಮಣಿಪುರ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿದೆ.

    ಪ್ರಜಾಪ್ರಭುತ್ವ ಉಳಿಸಿ: ಕಾಂಗ್ರೆಸ್ ನಾಯಕರುಗಳು ಇಂದು ರಾಜಭವನ ಚಲೋ ನಡೆಸಲು ತೀರ್ಮಾನಿಸಿದ್ದಾರೆ. ರಾಜ್ಯಪಾಲ ವಜೂಬಾಯ್ ವಾಲ ಬಿಜೆಪಿ ಪರ ವರ್ತಿಸುತ್ತಿದ್ದಾರೆ ಎಂಬುದನ್ನ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. `ಪ್ರಜಾಪ್ರಭುತ್ವ ಉಳಿಸಿ’ ಹೆಸರಿನಡಿ ಇಂದು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

    ರಾಷ್ಟ್ರ ಹಾಗೂ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮಲ್ಲಿಕಾರ್ಜುನ್ ಖರ್ಗೆ, ಗುಲಾಂ ನಬಿ ಆಜಾದ್, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ನಾಯಕರುಗಳು ಭಾಗವಹಿಸಲಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ರಾಜಭವನಕ್ಕೆ ತೆರಳಿ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ.

    ಗೋವಾ ವಿಧಾನಸಭಾ ಸಭೆ ಒಟ್ಟು 40 ಸ್ಥಾನಗಳನ್ನು ಹೊಂದಿದೆ. 2017 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 17, ಬಿಜೆಪಿ 13, ಎಂಎಜಿ 3, ಎಫ್‍ಪಿ 3, ಐಎನ್‍ಡಿ 3 ಹಾಗೂ ಇತರೇ ಒಂದು ಸ್ಥಾನ ಪಡೆದಿದ್ದರು. ಕಾಂಗ್ರೆಸ್ 17 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರು, 13 ಕ್ಷೇತ್ರಗಳಲ್ಲಿ ಜಯ ಪಡೆದಿದು ಎರಡನೇ ಸ್ಥಾನ ಪಡೆದಿದ್ದ ಬಿಜೆಪಿ, ಗೋವಾ ಫಾರವರ್ಡ್ ಪಾರ್ಟಿ (ಜಿಎಫ್‍ಪಿ) ಮತ್ತು ಎಂಜಿಪಿ ಪಕ್ಷಗಳ ನೆರವಿನಿಂದ ಬಹುಮತ ಪಡೆದು ಸರ್ಕಾರ ರಚಿಸಿತ್ತು. ಇತರೇ 3 ಕ್ಷೇತ್ರಗಳಲ್ಲಿ ಜಯಗಳಿಸಿದ್ದ ಪಕ್ಷೇತರರು ಸಹ ಬಿಜೆಪಿಗೆ ಬೆಂಬಲ ನೀಡಿದ್ದರು. ಗೋವಾ ವಿಧಾನಸಭಾ ಮ್ಯಾಜಿಕ್ ನಂಬರ್ 20 ಸ್ಥಾನಗಳನ್ನು ಗಡಿದಾಟಿ ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದೆ.

  • ಕ್ಷಣ ಕ್ಷಣಕ್ಕೂ ಕಾಂಗ್ರೆಸ್ ಜೆಡಿಎಸ್ ಪ್ಲಾನ್ ಚೇಂಜ್- ಏರ್ ಪೋರ್ಟ್ ಟೋಲ್ ಬರುತ್ತಿದ್ದಂತೆ ಬಸ್ ಎಕ್ಸ್ ಚೇಂಜ್

    ಕ್ಷಣ ಕ್ಷಣಕ್ಕೂ ಕಾಂಗ್ರೆಸ್ ಜೆಡಿಎಸ್ ಪ್ಲಾನ್ ಚೇಂಜ್- ಏರ್ ಪೋರ್ಟ್ ಟೋಲ್ ಬರುತ್ತಿದ್ದಂತೆ ಬಸ್ ಎಕ್ಸ್ ಚೇಂಜ್

    ಬೆಂಗಳೂರು: ಶಾಂಗ್ರಿಲಾದಲ್ಲಿದ್ದ ಜೆಡಿಎಸ್ ನಾಯಕರು ಮತ್ತು ಈಗಲ್‍ಟನ್‍ನಲ್ಲಿದ್ದ ಕಾಂಗ್ರೆಸ್ ಶಾಸಕರು ರಾಜ್ಯದಿಂದ ಹೊರ ರಾಜ್ಯಕ್ಕೆ ಶಿಫ್ಟ್ ಆಗಿದ್ದಾರೆ. ಕ್ಷಣಕ್ಷಣಕ್ಕೂ ಪ್ಲಾನ್ ಚೇಂಜ್ ಆಗಿ ಇದೀಗ ಕಾಂಗ್ರೆಸ್ ಜೆಡಿಎಸ್ ಮೈತ್ರಿಮೇಳ ಹೈದರಾಬಾದ್‍ಗೆ ಶಿಫ್ಟ್ ಆಗಿದೆ.

    ಆಪರೇಷನ್ ಕಮಲ ಭೀತಿಯಿಂದ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ತಡರಾತ್ರಿ ಹೈದರಾಬಾದ್‍ಗೆ ಪ್ರಯಾಣಿಸಿದ್ದಾರೆ. ವಿಶೇಷ ವಿಮಾನಯಾನಕ್ಕೆ ಅನುಮತಿ ಸಿಗದಿದ್ದರಿಂದ ಶಾಸಕರು ಬಸ್‍ಗಳಲ್ಲಿ ಪ್ರಯಾಣ ಬೆಳೆಸಿದ್ದರು. ಅದರಲ್ಲೂ ಕಾಂಗ್ರೆಸ್ ಶಾಸಕರು ಪುದುಚೇರಿಗೆ, ಜೆಡಿಎಸ್ ಶಾಸಕರು ಕೊಚ್ಚಿಗೆ ಹೋಗೋದೆಂದು ಹೊರಟಿದ್ದರು. ಆದರೆ ಕೊನೆ ಕ್ಷಣದವರೆಗೆ ಎಲ್ಲಿಗೆ ಎಂದು ಹೇಳದ ಮುಖಂಡರು, ರಾತ್ರಿ 11 ಗಂಟೆಗೆ 4 ಪ್ರತ್ಯೇಕ ಬಸ್‍ಗಳಲ್ಲಿ ಬೆಂಗಳೂರು ಬಿಟ್ಟರು.

    ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ, ಕಾಂಗ್ರೆಸ್‍ನವರು ಪುದುಚೇರಿ, ಜೆಡಿಎಸ್‍ನವರು ಕೊಚ್ಚಿಗೆ ಹೋಗುತ್ತಿದ್ದೇವೆ ಎಂದರು. ಆದರೆ ಬಸ್ ದೇವನಹಳ್ಳಿ ಏರ್‍ಪೋರ್ಟ್ ಟೋಲ್ ಬಳಿ ಬರುತ್ತಿದ್ದಂತೆ ಮತ್ತೆ ಪ್ಲಾನ್ ಬದಲಾಯಿತು. ಟೋಲ್ ಬಳಿ ಬರುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಮೂರು ಸ್ಲೀಪರ್ ಕೋಚ್ ಬಸ್‍ಗೆ ಶಿಫ್ಟ್ ಆದ್ರು. ಕೊನೆಗೆ ಕಾಂಗ್ರೆಸ್- ಜೆಡಿಎಸ್ ಶಾಸಕರು ಹೈದರಾಬಾದ್‍ನತ್ತ ಪ್ರಯಾಣಿಸಿದ್ರು.

    ನೂತನ ಮುಖ್ಯಮಂತ್ರಿಯಾಗಿರುವ ಖುಷಿಯಲಿರುವ ಬಿ.ಎಸ್ ಯಡಿಯೂರಪ್ಪ ಅವರಿಗೆ ಇಂದು ಅತ್ಯಂತ ಪ್ರಮುಖ ದಿನ. ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಮುಂದುವರಿಯಲಿದೆ.

  • ಬಹುಮತ ಪರೀಕ್ಷೆಗೂ ಮುನ್ನ ಸುಪ್ರೀಂ ಟೆಸ್ಟ್- ಸುಪ್ರೀಂಕೋರ್ಟ್ ನಿಂದ ಇಂದು ಬಿಎಸ್‍ವೈ ಭವಿಷ್ಯ ಪ್ರಕಟ

    ಬಹುಮತ ಪರೀಕ್ಷೆಗೂ ಮುನ್ನ ಸುಪ್ರೀಂ ಟೆಸ್ಟ್- ಸುಪ್ರೀಂಕೋರ್ಟ್ ನಿಂದ ಇಂದು ಬಿಎಸ್‍ವೈ ಭವಿಷ್ಯ ಪ್ರಕಟ

    -ಏಕ್ ದಿನ್ ಕಾ ಸುಲ್ತಾನ್ ಆಗ್ತಾರಾ ನೂತನ ಸಿಎಂ!!

    ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿರುವ ಖುಷಿಯಲಿರುವ ಬಿ.ಎಸ್ ಯಡಿಯೂರಪ್ಪ ಅವರಿಗೆ ಇಂದು ಅತ್ಯಂತ ಪ್ರಮುಖ ದಿನ. ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾರ ನಡೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಮುಂದುವರಿಯಲಿದೆ.

    ನ್ಯಾ. ಎ.ಕೆ. ಸಿಕ್ರಿ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ಮುಂದುವರಿಸಲಿದ್ದು, ಇಂದು ಮಹತ್ವದ ತೀರ್ಪು ನೀಡಲಿದೆ. ಬುಧವಾರ ರಾತ್ರಿ ಐದು ಗಂಟೆಗಳ ಕಾಲ ದೀರ್ಘ ವಿಚಾರಣೆ ನಡೆಸಿದ್ದ ಪೀಠ ಸಾಂವಿಧಾನಕ ಹುದ್ದೆ ರಾಜ್ಯಪಾಲರ ನಿರ್ಣಯಕ್ಕೆ ಹಸ್ತಕ್ಷೇಪ ಮಾಡದೆ ಪ್ರಮಾಣ ವಚನ ತಡೆ ಒಪ್ಪಿಗೆ ನೀಡಲಿಲ್ಲ. ಬದಲಿಗೆ ರಾಜ್ಯಪಾಲರಿಗೆ ಬಿಎಸ್‍ವೈ ಬರೆದಿರುವ ಪತ್ರದ ಪ್ರತಿಯನ್ನು ಸುಪ್ರಿಂಕೊರ್ಟ್ ಗೆ ಸಲ್ಲಿಸುವಂತೆ ಕೇಳಿತ್ತು.

    ರಾಜ್ಯಪಾಲರಿಗೆ ಸರ್ಕಾರ ರಚನೆ ವಿಚಾರವಾಗಿ ಬಿಎಸ್ ಯಡಿಯೂರಪ್ಪ ಬರೆದಿರುವ ಪತ್ರದಲ್ಲಿ ಏನಿದೆ? ಬಹುಮತ ಸಾಬೀತಿಗೆ ಬೇಕಾದ ಬೆಂಬಲ ಯಾರು ನೀಡ್ತಾರೆ? ಎಂಬೆಲ್ಲ ಮಾಹಿತಿ ಆಧರಿಸಿ ವಿಚಾರಣೆ ನಡೆಯಲಿದೆ. ಇದರ ಜೊತೆಗೆ ಹಿರಿಯ ವಕೀಲ ರಾಮ್ ಜೇಠ್ಮಾಲಾನಿ ಕೂಡಾ ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿದ್ದು, ಯಾವ ಆಯಾಮದಲ್ಲಿ ವಾದ ಮಂಡಸಿಲಿದ್ದಾರೆ ಎಂಬ ಕುತೂಹಲ ಮೂಡಿದೆ.

    ಈ ಎಲ್ಲ ಅರ್ಜಿಯ ಜೊತೆಗೆ ಆಂಗ್ಲೋ ಇಂಡಿಯನ್ ಶಾಸಕರನ್ನು ತರಾತುರಿಯಲ್ಲಿ ರಾಜ್ಯಪಾಲರು ನೇಮಕ ಮಾಡಿದ್ದಾರೆ ಅಂತಾ ಆರೋಪಿಸಿರುವ ಕಾಂಗ್ರೆಸ್ ಜೆಡಿಎಸ್ ಜಂಟಿಯಾಗಿ ಮತ್ತೊಂದು ಅರ್ಜಿಯೊಂದನ್ನ ಸುಪ್ರಿಂಕೊರ್ಟ್ ಗೆ ಸಲ್ಲಿಸಿದ್ದು, ಒಟ್ಟು ನಾಲ್ಕು ಅರ್ಜಿಗಳು ಏಕ ಕಾಲದಲ್ಲಿ ವಿಚಾರಣೆಗೆ ಬರಲಿದ್ದು ಇಂದು ಬಿಎಸ್‍ವೈ ಭವಿಷ್ಯ ನಿರ್ಧರಿಸಲಿವೆ.

  • ಸಿಎಂ ಕಚೇರಿ ವಾಸ್ತು ಪ್ರಕಾರ ಬದಲು- ಪೂರ್ವಾಭಿಮುಖವಾಗಿ ಆಸೀನರಾದ ಬಿಎಸ್‍ವೈ

    ಸಿಎಂ ಕಚೇರಿ ವಾಸ್ತು ಪ್ರಕಾರ ಬದಲು- ಪೂರ್ವಾಭಿಮುಖವಾಗಿ ಆಸೀನರಾದ ಬಿಎಸ್‍ವೈ

    – ಸಿದ್ದರಾಮಯ್ಯ ಓಡಾಡುತ್ತಿದ್ದ ಪಶ್ಚಿಮ ದ್ವಾರವೂ ಬಂದ್

    ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಿಎಂ ಆಗಿ ಆಯ್ಕೆಯಾದ ಬಳಿಕ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದ ಮೆಟ್ಟಿಲಿಗೆ ನಮಸ್ಕರಿಸಿ ಒಳ ಪ್ರವೇಶಿಸಿದ್ರು.

    ಮುಖ್ಯಮಂತ್ರಿಗಳ ಕಚೇರಿಗೆ ಆಗಮಿಸಿದ ಬಿ.ಎಸ್.ಯಡಿಯೂರಪ್ಪ ವಾಸ್ತು ಪ್ರಕಾರ ಕೊಠಡಿಯನ್ನು ಬದಲಾವಣೆ ಮಾಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಓಡಾಡುತ್ತಿದ್ದ ಪಶ್ಚಿಮ ದ್ವಾರವೂ ಬಂದ್ ಮಾಡಿಸಿದ್ದಾರೆ. ದ್ವಾರವನ್ನು ಮುಚ್ಚಿಸಿದ ಬಳಿಕ ಸಿಎಂ ಯಡಿಯೂರಪ್ಪ ಪೂರ್ವಾಭಿಮುಖವಾಗಿ ಆಸೀನರಾಗಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಇತ್ತ ವಿಧಾನಸೌಧದಲ್ಲಿ ಕೊಠಡಿಯನ್ನು ಸ್ವಚ್ಛಗೊಳಿಸಲಾಗಿತ್ತು. ವಿಧಾನಸೌಧದ ಮೂರನೇ ಕೊಠಡಿಯ ಮುಂಭಾಗದಲ್ಲಿ ಹಾಕಲಾಗಿದ್ದ ಸಿದ್ದರಾಮಯ್ಯ ನಾಮಫಲಕವನ್ನು ತೆಗೆದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಫಲಕವನ್ನ ವಿಧಾನಸೌಧದ ಸಿಬ್ಬಂದಿ ಹಾಕಿದ್ದಾರೆ.

    ಕೊಠಡಿಯಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ನಾಡಿನ ರೈತ ಸಮೂಹಕ್ಕೊಂದು ಭರವಸೆ ನೀಡಿದ್ದೆ. ಮುಖ್ಯಮಂತ್ರಿಯಾದ ತಕ್ಷಣ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1 ಲಕ್ಷದವರೆಗಿನ ಸಾಲಮನ್ನಾ ಹಾಗೆಯೇ ಸಹಕಾರಿ ಸಂಘದ ರೈತರ ಸಾಲಮನ್ನಾ, ನೇಕಾರರ ಸಾಲಮನ್ನಾ ಮಾಡುವುದಾಗಿ ತಿಳಿಸಿದ್ದೆ. ಈ ವಿಷಯದ ಬಗ್ಗೆ ಈಗಾಗಲೇ ಸಂಬಂಧಪಟ್ಟವರಲ್ಲಿ ಕೂಡ ಪ್ರಸ್ತಾಪ ಮಾಡಿದ್ದೇನೆ. ಅವರು ಅಂಕಿ-ಅಂಶಗಳನ್ನು ನೋಡಿ ಸಂಜೆಯೊಳಗೆ ಅಥವಾ ನಾಳೆ ಬೆಳಗ್ಗೆ ಮಾಹಿತಿ ನೀಡಲಿದ್ದಾರೆ ಅಂತ ಹೇಳಿದ್ರು.

    ಜನರ ಬೆಂಬಲ ನನ್ನಪರ ಇದ್ದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅನೈತಿಕವಾಗಿ ಚುನಾವಣಾ ಫಲಿತಾಂಶದ ನಂತರ ಒಪ್ಪಂದ ಮಾಡಿಕೊಂಡು ಅಧಿಕಾರ ಕಬಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ಜನರ ಬೆಂಬಲ ನನ್ನ ಹಾಗೂ ಪಕ್ಷದ ಪರ ಇದೆ. ಈ ವಿಚಾರದಲ್ಲಿ ನಾನು ನೂರಕ್ಕೆ ನೂರು ಯಶಸ್ಸನ್ನು ಕಾಣುತ್ತೇನೆಂಬ ವಿಶ್ವಾಸ ನನಗಿದೆ ಎಂದರು.

  • ಫಲಿತಾಂಶಕ್ಕೂ ಮೊದಲೇ ಜೆಡಿಎಸ್, ಕಾಂಗ್ರೆಸ್ ಶಾಸಕರು ಬುಕ್?

    ಫಲಿತಾಂಶಕ್ಕೂ ಮೊದಲೇ ಜೆಡಿಎಸ್, ಕಾಂಗ್ರೆಸ್ ಶಾಸಕರು ಬುಕ್?

    ಬೆಂಗಳೂರು: ಫಲಿತಾಂಶಕ್ಕೂ ಮೊದಲೇ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ಬುಕ್ ಆಗಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಹೌದು. ಸಾಧಾರಣವಾಗಿ ಶಾಸಕರ ಬೆಂಬಲ ಇಲ್ಲದೇ ಇದ್ದರೆ ಯಾರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ನಿರ್ಧಾರವನ್ನು ಮಾಡುವುದಿಲ್ಲ. ಆದರೆ ಬಿಎಸ್‍ವೈಗೆ ಶಾಸಕರ ಬೆಂಬಲ ಇಲ್ಲದೇ ಇದ್ದರೂ ಧೈರ್ಯವಾಗಿ ಪ್ರಮಾಣವಚನ ಸ್ವೀಕರಿಸಿದ್ದು ನೋಡಿದಾಗ ಈ ಮೇಲಿನ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಬಹುತೇಕ ಸಮೀಕ್ಷೆಗಳಲ್ಲಿ ಈ ಬಾರಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿಯ ಟಾಪ್ ನಾಯಕರು ಫಲಿತಾಂಶಕ್ಕೆ ಮೊದಲೇ ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಧೈರ್ಯದಲ್ಲೇ ಬಿಎಸ್‍ವೈ ಪ್ರಮಾಣವಚನ ಸ್ವೀಕರಿಸಿದ್ದಾರೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿದೆ.

    ಈಗಾಗಲೇ ಬಹುಮತ ಸಾಬೀತು ಪಡಿಸಲು ಬಿಜೆಪಿ ತಯಾರಿ ನಡೆಸುತ್ತಿದೆ. ಬಿಜೆಪಿ ಕಚೇರಿಯಲ್ಲೇ ರಾಜ್ಯ ಉಸ್ತುವಾರಿಗಳಾದ ಮುರಳೀಧರ್ ರಾವ್, ಪ್ರಕಾಶ್ ಜಾವಡೇಕರ್ ರಾಜ್ಯದ ನಾಯಕರಾದ ಆರ್. ಅಶೋಕ್, ಶ್ರೀರಾಮುಲು, ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

    ಬಿಜೆಪಿ ನಾಯಕರ ನಡೆಗೆ ಪುಷ್ಠಿ ಎನ್ನುವಂತೆ ಫಲಿತಾಂಶ ಪ್ರಕಟವಾದ ಮೇ 15 ಸಂಜೆ 6.30ರ ವೇಳೆ ಮೈಸೂರಿನ ಸಂಸ ಪ್ರತಾಪ್ ಸಿಂಹ, ಬಿಜೆಪಿ ಸರ್ಕಾರ ರಚನೆ ಮಾಡೋ ಬಗ್ಗೆ ಯಾರಿಗಾದರೂ ಡೌಟ್ ಇದೆಯಾ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಗುರುವಾರ ರಾತ್ರಿ ನಿನ್ನೆ ನಾನು ಏನು ಹೇಳಿದ್ದೆ. ನಾಳೆ ಅದೇ ಆಗುತ್ತೆ! ಮುಖ್ಯಮಂತ್ರಿ ಬಿಎಸ್‍ವೈ ಎಂದು ಬರೆದು ಮತ್ತೊಂದು ಟ್ವೀಟ್ ಮಾಡಿದ್ದರು.

    ಸಂಖ್ಯಾಬಲ ಇಲ್ಲದೇ ಇದ್ದರೂ ಹೇಗೆ ಬಹುಮತವನ್ನು ತೋರಿಸುತ್ತಿರಿ ಎಂದು ಕೇಳಿದ್ದಕ್ಕೆ ಶೋಭಾ ಕರಂದ್ಲಾಜೆ, ಯಡಿಯೂರಪ್ಪ ಸಿಎಂ ಆಗುತ್ತಿರುವುದು ಖುಷಿ ತಂದಿದೆ. ಬಹುಮತ ಸಾಬೀತು ಹೇಗೆ ಮಾಡುತ್ತೇವೆ ಎಂಬುದನ್ನು ಮಾಧ್ಯಮಗಳಿಗೆ ಹೇಳಲು ಬರುವುದಿಲ್ಲ. ಅದು ಪಕ್ಷದ ಆಂತರಿಕ ವಿಚಾರ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಊಹಿಸಲೂ ಸಾಧ್ಯವಾಗದಷ್ಟು ಬಹುಮತ ಸಾಬೀತುಪಡಿಸುತ್ತೇವೆ: ಶ್ರೀರಾಮುಲು

  • ಪ್ರತಿಭಟನೆ ಮಾಡ್ತೀರೋ ಉದ್ದೇಶ ತಿಳಿಸಿದ ಮಲ್ಲಿಕಾರ್ಜುನ್ ಖರ್ಗೆ

    ಪ್ರತಿಭಟನೆ ಮಾಡ್ತೀರೋ ಉದ್ದೇಶ ತಿಳಿಸಿದ ಮಲ್ಲಿಕಾರ್ಜುನ್ ಖರ್ಗೆ

    ಬೆಂಗಳೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರುನಾಡಿನ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತ ವಿಕಾಸ ಸೌಧದ ಮುಂಭಾಗದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರು ಪ್ರತಿಭಟನೆ ಆರಂಭಿಸಿದ್ದಾರೆ.

    ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಪ್ರತಿಭಟನೆ ಮಾಡ್ತೀರೊ ಉದ್ದೇಶವನ್ನು ತಿಳಿಸಿದ್ರು. ನಮ್ಮ ಬಳಿ ಬಹುಮತದ ನಂಬರ್ ಇದ್ರೂ ಸರ್ಕಾರ ರಚನೆಗೆ ನಮಗೆ ಅವಕಾಶ ನೀಡಿಲ್ಲ. ದೇಶದಲ್ಲಿ ಯಾವ ರಾಜ್ಯಪಾಲರು ಬಹುಮತ ಸಾಬೀತಿಗೆ 15 ದಿನದ ಅವಕಾಶ ನೀಡಿಲ್ಲ ಅಂತಾ ಆಕ್ರೋಶ ಹೊರ ಹಾಕಿದ್ರು.

    ಈ 15 ದಿನದಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ್ದೇ ಕಾನೂನು ಬಾಹಿರ ಅಂತಾ ಖರ್ಗೆ ಗುಡುಗಿದರು.

  • ಬಹುಮತ ಸಾಬೀತುಪಡಿಸಲು 15 ದಿನದ ಕಾಲಾವಕಾಶ ಕೊಟ್ಟಿದ್ದು ದೇಶದಲ್ಲಿ ಇದೇ ಮೊದಲು: ಹೆಚ್‍ಡಿಕೆ

    ಬಹುಮತ ಸಾಬೀತುಪಡಿಸಲು 15 ದಿನದ ಕಾಲಾವಕಾಶ ಕೊಟ್ಟಿದ್ದು ದೇಶದಲ್ಲಿ ಇದೇ ಮೊದಲು: ಹೆಚ್‍ಡಿಕೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಅಧಿಕಾರದ ದುರಪಯೋಗ ಮಾಡಿಕೊಳ್ಳುತ್ತಿದೆ. ಸಂವಿಧಾನದ ವಿರುದ್ಧ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲ ವಜೂಭಾಯಿ ವಾಲಾರವರ ಮೇಲೆ ಕೇಂದ್ರ ಒತ್ತಡ ಹಾಕಿದೆ ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಬಿಜೆಪಿಗೆ ಬಹುಮತ ಸಾಬೀತು ಮಾಡಲು 15 ದಿನದ ಕಾಲಾವಕಾಶ ನೀಡಿದ್ದು, ದೇಶದಲ್ಲಿಯೇ ಮೊದಲಾಗಿದೆ. ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ರಾಜ್ಯಪಾಲರು 4ರಿಂದ5 ದಿನದ ಅವಕಾಶ ಕೊಡುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. 15 ದಿನದ ಅವಕಾಶ ಪಡೆದುಕೊಂಡ ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಲಿದೆ ಅಂತಾ ಅಸಮಧಾನ ವ್ಯಕ್ತಪಡಿಸಿದ್ರು.

    ವಿಧಾನಸೌಧದ ಬಳಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಹ ಭಾಗಿಯಾಗಲಿದ್ದಾರೆ. ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದು ಪ್ರತಿಭಟನೆಯ ಮುಂದಾಳತ್ವವನ್ನು ತೆಗೆದುಕೊಳ್ಳಬೇಕೆಂದು ನಾನು ನಮ್ಮ ತಂದೆಯವರಲ್ಲಿ ಮನವಿ ಮಾಡಿಕೊಳ್ಳಲಿದ್ದೇನೆ. ದೇಶದ ರಕ್ಷಣೆಗಾಗಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಬಿಎಸ್‍ಪಿ ನಾಯಕಿ ಮಾಯಾವತಿ, ಚಂದ್ರಬಾಬು ನಾಯ್ಡು, ಚಂದ್ರಶೇಖರ್ ರಾವ್ ಸೇರಿದಂತೆ ಎಲ್ಲ ನಾಯಕರ ಬೆಂಬಲಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಅಂತಾ ತಿಳಿಸಿದ್ರು.

    2008 ರಿಂದ 2013ರಲ್ಲಿ ಬಿಜೆಪಿ ಮಾಡಿದ ಹಗರಣಗಳನ್ನು ನಾಡಿನ ಜನತೆ ನೆನಪು ಮಾಡಿಕೊಳ್ಳಬೇಕಿದೆ. ಭ್ರಷ್ಟಾಚಾರ ನಡೆಸುವುದು ಬಿಜೆಪಿಯ ಹುಟ್ಟುಗುಣ ಅದು ಅವರನ್ನು ಬಿಟ್ಟು ಹೋಗಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸುವ ಸಲುವಾಗಿ ನಾಡಿನ ಜನರ ಬೀದಿಗಿಳಿದು ಶಾಂತಿಯುತ ಹೋರಾಟ ನಡೆಸಬೇಕೆಂದು ಕರೆ ಕೊಟ್ಟರು.