Tag: Karnataka Election

  • ಬಿಎಸ್‌ವೈಯಂತೆ ಹಿರಿಯ ನಾಯಕರು ಸ್ವಯಂ ನಿವೃತ್ತಿ ಘೋಷಿಸಲಿ

    ಬಿಎಸ್‌ವೈಯಂತೆ ಹಿರಿಯ ನಾಯಕರು ಸ್ವಯಂ ನಿವೃತ್ತಿ ಘೋಷಿಸಲಿ

    – ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್‌ನಿಂದ ಸಂದೇಶ

    ಬೆಂಗಳೂರು: ಗುಜರಾತ್‌, ಹಿಮಾಚಲ ಪ್ರದೇಶದ ಕಾರ್ಯತಂತ್ರದಂತೆ ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ(Karnataka Election) ಹಿರಿಯರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ಹೈಕಮಾಂಡ್‌(BJP High Command) ಈಗಲೇ ರವಾನಿಸಿದೆ.

    ಡಿ. 5ರಂದು ಗುಜರಾತ್‌ ಚುನಾವಣೆ ಮುಗಿದಿದ್ದು ಅಂದು ದೆಹಲಿಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆದಿದೆ. ಈ ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಾಗಿಯಾಗಿದ್ದರು. ಈ ವೇಳೆ ಹೈಕಮಾಂಡ್ ರಾಜ್ಯ ನಾಯಕರಿಗೆ ಮುಖ್ಯವಾದ ಸಂದೇಶಗಳನ್ನು ಕಳುಹಿಸಿದೆ.

    ಸಂದೇಶ ಏನು?
    ಮಾಜಿ ಸಿಎಂ ಯಡಿಯೂರಪ್ಪ(Yediyurappa) ಅವರಂತೆ ಹಿರಿಯ ನಾಯಕರು ಅವರೇ ಸ್ವಯಂ ನಿವೃತ್ತಿ ಘೋಷಿಷಿಕೊಳ್ಳಬೇಕು. ಹಿರಿಯ ಸಚಿವರಿಗೆ ಮನವರಿಕೆ ಮಾಡಿಕೊಡುವಂತೆ ಕೆಲ ನಾಯಕರಿಗೆ ನಿರ್ದೇಶನ ನೀಡಬೇಕು. ಇದನ್ನೂ ಓದಿ: ರಾಹುಲ್ ಟೀಂ ಚುನಾವಣಾ ಸಮೀಕ್ಷೆಗೆ ಸಿದ್ದು ಸಿಡಿಮಿಡಿ

    ಸ್ವಯಂ ನಿವೃತ್ತಿ ನಿರ್ಧಾರ ತಮ್ಮದೇ, ಪಕ್ಷದಿಂದ ಮಾಡಿಸಿದ್ದಲ್ಲ. ಪಕ್ಷಕ್ಕೂ ತಮ್ಮ ನಿರ್ಧಾರಕ್ಕೂ ಸಂಬಂಧ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಘೋಷಿಸಬೇಕು. ಕಾರ್ಯಕರ್ತರ ವಲಯ ಹಾಗೂ ನಿಮ್ಮ ಕ್ಷೇತ್ರಗಳಲ್ಲಿ ಗೊಂದಲ ಆಗದಂತೆ ನಿಗಾ ವಹಿಸಬೇಕು. ಈ ಸಂದೇಶವನ್ನು 73 ವರ್ಷದ ಮೀರಿದ ಕೆಲ ಹಿರಿಯರಿಗೆ ತಲುಪಿಸುವಂತೆ ರಾಜೇಶ್‍ಗೆ ಹೈಕಮಾಂಡ್ ಸೂಚನೆ ನೀಡಿದೆ.

    ಬೂತ್ ಮಟ್ಟದಲ್ಲಿ ವ್ಯಕ್ತಿಗಿಂತ ಪಕ್ಷವೇ ಸ್ಟ್ರಾಂಗ್ ಪಾಲಿಸಿ ಅಳವಡಿಕೆ ಮಾಡಬೇಕು. ಕಾರ್ಯಕರ್ತರೇ ನಮ್ಮ ಶಕ್ತಿ. ಈ ನಿಟ್ಟಿನಲ್ಲಿ ಪಕ್ಷವನ್ನು ಬಲಪಡಿಸಬೇಕೆಂಬ ಸಂದೇಶವನ್ನು ಕಳುಹಿಸಲಾಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಗುಜರಾತ್ ಆಯ್ತು, ಇಂದಿನಿಂದಲೇ ಕರ್ನಾಟಕ ಚುನಾವಣೆಗೆ ತಯಾರಿ

    ಗುಜರಾತ್ ಆಯ್ತು, ಇಂದಿನಿಂದಲೇ ಕರ್ನಾಟಕ ಚುನಾವಣೆಗೆ ತಯಾರಿ

    ನವದೆಹಲಿ: ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆ (Gujarat Election) ಅಂತ್ಯವಾದ ಬೆನ್ನಲ್ಲೇ ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳ ಬಗ್ಗೆ ಚರ್ಚಿಸಲು ಬಿಜೆಪಿ (BJP) ರಾಷ್ಟ್ರೀಯ ಪದಾಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ನೇತೃತ್ವದಲ್ಲಿ ದೆಹಲಿಯ ಕೇಂದ್ರ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.

    ಈ ಸಭೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amit Shah) ಕೂಡಾ ಭಾಗಿಯಾಗಿದ್ದು, ಹಲವು ರಾಜ್ಯಗಳ ರಾಜ್ಯಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಮುಖ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನ, ತ್ರಿಪುರ ವಿಧಾನಸಭೆ ಚುನಾವಣೆಗಳು ಹಾಗೂ 2024ರ ಲೋಕಸಭೆ ಚುನಾವಣೆ (Parliament Election 2024) ತಯಾರಿ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಇದನ್ನೂ ಓದಿ: ಕ್ಯಾಚ್ ಕೈಚೆಲ್ಲಿದ ಸುಂದರ್‌ಗೆ ಕೆಟ್ಟದಾಗಿ ಬೈದ ರೋಹಿತ್ – ನೆಟ್ಟಿಗರ ಆಕ್ರೋಶ

    ವಿಧಾನಸಭೆ ಚುನಾವಣೆ ಮುಂಬರುವ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ಜಾರಿ ಮಾಡುವುದು, ಫಲಾನುಭವಿಗಳನ್ನು ಗುರುತಿಸುವುದು, ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವುದು ಸೇರಿ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಯಲಿದೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟ ಮನದೀಪ್ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    2024 ಲೋಕಸಭೆ ಚುನಾವಣೆ ದೃಷ್ಟಿಯಿಂದ ಈ ರಾಜ್ಯಗಳಲ್ಲಿ ಅಧಿಕಾರ ಹಿಡಿಯುವುದು ಮುಖ್ಯವಾಗಿರುವ ಹಿನ್ನಲೆ ಹಿಮಾಚಲ, ಗುಜರಾತ್ ಬೆನ್ನಲ್ಲೇ ಬಾಕಿ ರಾಜ್ಯಗಳ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ ಹೈಕಮಾಂಡ್ ಬಾಕಿ ನಾಯಕರಿಗೆ ಬೇರೆ ಬೇರೆ ಟಾಸ್ಕ್ಗಳನ್ನು ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

  • ಚುನಾವಣೆಗೆ ನಿಂತವರಲ್ಲಿ ಒಳ್ಳೆಯವರು ಕಾಣದಿದ್ರೆ ನೋಟಾಗೆ ಒತ್ತಿ: ಕಾಗೇರಿ ಕರೆ

    ಚುನಾವಣೆಗೆ ನಿಂತವರಲ್ಲಿ ಒಳ್ಳೆಯವರು ಕಾಣದಿದ್ರೆ ನೋಟಾಗೆ ಒತ್ತಿ: ಕಾಗೇರಿ ಕರೆ

    ಕಲಬುರಗಿ: ಚುನಾವಣೆಗೆ (Elections) ನಿಂತವರಲ್ಲಿ ಯಾರೂ ಒಳ್ಳೆಯವರು ಕಾಣದಿದ್ದರೆ ನೋಟಾಗೆ ಒತ್ತಿ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಕರೆ ನೀಡಿದ್ದಾರೆ.

    ಬುಧವಾರ ನಗರದ ಡಾ.ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ `ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ್ದಾರೆ. ಈ ವೇಳೆ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ `ನನ್ನ ಮತ ಮಾರಾಟಕ್ಕಿಲ್ಲ’ ಎಂಬ ಆತ್ಮಸಾಕ್ಷಿಯ ಅಭಿಯಾನ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: 15 ಸಾವಿರ ಪ್ರಾಥಮಿಕ ಶಿಕ್ಷಕರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

    ಚುನಾವಣೆಯಲ್ಲಿಂದು ಹಣ, ತೋಳ್ಬಲ ಹಾಗೂ ಜಾತಿ ಬಲ ಪ್ರಮುಖ ಪಾತ್ರ ವಹಿಸುತ್ತಿವೆ. ಸಂವಿಧಾನ ಬದ್ಧವಾಗಿ ಸಿಕ್ಕಿರುವ ಮತದಾನದ ಹಕ್ಕನ್ನು ಮತದಾರರು ಅರಿಯಬೇಕು. ಮತ ಮಾರಾಟ ಮಾಡದೇ ಸ್ಫರ್ಧಾಳುಗಳಲ್ಲಿ ಉತ್ತಮರನ್ನು ಆಯ್ಕೆ ಮಾಡಿ. ಒಂದು ವೇಳೆ ಚುನಾವಣೆ ನಿಂತವರಲ್ಲಿ ಯಾರೂ ಒಳ್ಳೆಯವರು ಕಾಣದಿದ್ದರೆ ನೋಟಾಗೆ ಒತ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ: iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ. ಭ್ರಷ್ಟಾಚಾರ ವ್ಯಾಪಿಸಿದೆ. ಜನಪ್ರತಿನಿಧಿಗಳು ಜನರಿಗೆ ನೀಡಿದ ಆಶ್ವಾಸನೆ ಈಡೇರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಕಾರ್ಯಾಂಗದಲ್ಲಿ ಮಾನವೀಯತೆ ಮರೆತ ಪರಿಣಾಮ ಜನರು ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆದಾಡಿ ರೋಸಿ ಹೋಗಿದ್ದಾರೆ. ನ್ಯಾಯಾಲಯಗಳು (Court) ನ್ಯಾಯ ನೀಡುವ ಬದಲಾಗಿ ನಿರ್ಣಯ ನೀಡುತ್ತಿವೆ. ಇನ್ನು ಮಾಧ್ಯಮ ಕ್ಷೇತ್ರವೂ ಸಾಮಾಜಿಕ ಹೊಣೆಗಾರಿಕೆ ಮರೆತಿದ್ದು, ಇಲ್ಲಿಯೂ ಭ್ರಷ್ಟಾಚಾರ ಕಾಲಿಟ್ಟಿದೆ. ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯತೆಯನ್ನು ಮರೆತಂತಿವೆ ಎಂದಿದ್ದಾರೆ.

    ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈಗಾಗಲೇ ವಿಧಾನಸಭೆಯಲ್ಲಿ ಚರ್ಚಿಸಲಾಗಿದೆ. ಪಕ್ಷಾಂತರ ಕಾಯ್ದೆಗೆ ಮತ್ತಷ್ಟು ಬಲ ನೀಡಲು ಚಿಂತನೆ ನಡೆದಿದೆ. ಪ್ರಣಾಳಿಕೆ ಈಡೇರಿಸುವತ್ತ ಆಡಳಿತ ಪಕ್ಷ ಗಮನಹರಿಸಬೇಕಿದೆ. ಇವೆಲ್ಲದರ ಬಗ್ಗೆ ಜನಾಭಿಪ್ರಾಯ ಮೂಡಿಸಲು ಜನರೊಂದಿಗೆ ಸಂವಾದ ನಡೆಸಲಾಗುತ್ತಿದೆ. ಈಗಾಗಲೇ ರಾಯಚೂರು, ಹುಬ್ಬಳ್ಳಿ, ದಾವಣಗೆರೆ, ವಿಜಯಪುರ, ಕೋಲಾರ ಸೇರಿ ಹಲವು ಕಡೆ ಸಂವಾದ ನಡೆಸಿದ್ದು, ಇಂದು ಕಲಬುರಗಿಯಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ರಾಯಚೂರು: ಬೆಂಗಳೂರಿನ ಚಿಲುಮೆ ಸಂಸ್ಥೆ (Chilume) ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ರಾಯಚೂರಿನಲ್ಲಿ (Raichur) ಮತದಾರರ ಪಟ್ಟಿಯಲ್ಲಿ (Voters List) ಹೆಸರು ನಾಪತ್ತೆಯಾಗಿರುವ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

    ರಾಯಚೂರಿನಲ್ಲಿ (Raichur) 40 ಸಾವಿರಕ್ಕೂ ಹೆಚ್ಚು ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಜೆಪಿ (BJP) ಶಾಸಕರಿಂದ ಗೋಲ್‌ಮಾಲ್ ನಡೆದಿದೆ ಅಂತ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿಗಳು ದಾಖಲೆ ಹಿಡಿದು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪೊಲೀಸ್ ಪೇದೆ ಪತ್ನಿ ಅನುಮಾನಾಸ್ಪದ ಸಾವು

    2020 ರಲ್ಲಿ ರಾಯಚೂರು ನಗರ ಕ್ಷೇತ್ರದಲ್ಲಿ 2,36,710 ಮತದಾರರಿದ್ದರೆ, 2022 ರಲ್ಲಿ 2,38,000 ಮತದಾರರು ಇದ್ದಾರೆ. ಆದರೆ 2023ರ ಚುನಾವಣೆಗಾಗಿ (Elections) ಬಿಡುಗಡೆಯಾಗಿರುವ ಪರಿಷ್ಕೃತ ಮತದಾರರ ಕರಡು ಪ್ರತಿಯಲ್ಲಿ 2,13,000 ಮತದಾರರಿದ್ದಾರೆ. 16 ಸಾವಿರ ಹೊಸ ಮತದಾರನ್ನ ಸೇರ್ಪಡೆ ಮಾಡಲಾಗಿದೆ. ಆದ್ರೆ ಮೊದಲಿನಿಂದ ಇದ್ದ 40 ಸಾವಿರ ಮತದಾರರ ಹೆಸರನ್ನ ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ಕರಡು ಮತದಾರರ ಪಟ್ಟಿಯಲ್ಲಿ ಗುರುತಿನ ಚೀಟಿ ಸಂಖ್ಯೆ ಇದ್ದರೂ ಹೆಸರು, ತಂದೆ ಹೆಸರು, ವಿಳಾಸ ಅಳಿಸಿ ಹಾಕಲಾಗಿದೆ, ವಿಳಾಸ ಬದಲಿಸಲಾಗಿದೆ. ಬಹಳಷ್ಟು ಮುಸ್ಲಿಂ ಮತದಾರರನ್ನ (Muslim Voters) ಪಟ್ಟಿಯಿಂದಲೇ ತೆಗೆದು ಹಾಕಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮತದಾರರ ಪಟ್ಟಿ (Voters List) ಪರಿಷ್ಕರಣೆಗೆ ಡಿಸೆಂಬರ್ 24ರ ವರೆಗೆ ಸಮಯಾವಕಾಶ ನೀಡುವಂತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಡಾ.ರಜಾಕ್ ಉಸ್ತಾದ್ ಹಾಗೂ ಜಾವೀದ್ ಉಲ್ ಹಕ್ ಮನವಿ ಮಾಡಿದ್ದಾರೆ.

    ರಾಯಚೂರು ನಗರ ಕ್ಷೇತ್ರವೊಂದರಲ್ಲೇ 40 ಸಾವಿರ ಮತದಾರರು ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ. ಇದರ ಹಿಂದೆ ಬಿಜೆಪಿ ಸರ್ಕಾರ ಹಾಗೂ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಕೈವಾಡವಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮತಾಂತರ ಆರೋಪ- ಗ್ರಾಮಸ್ಥರಿಂದ ದೂರು

    ಇದಕ್ಕೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್, ಮತದಾರರನ್ನ ಕೈಬಿಟ್ಟಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ನಿರಂತರವಾಗಿರುತ್ತೆ. ಬಿಎಲ್‌ಓ ಗಳು ಮನೆ ಮನೆಗೆ ತೆರಳಿ ಮೃತಪಟ್ಟವರ ಮಾಹಿತಿ ಪಡೆದು ಡಿಲಿಟ್ ಮಾಡಿರುತ್ತಾರೆ. ಜೊತೆಗೆ 18 ವರ್ಷ ತುಂಬಿದ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ನಡೆದಿದೆ. ವೋಟರ್ಸ್ ಡ್ರಾಫ್ಟ್ ರೋಲನ್ನ ಪಕ್ಷಗಳಿಗೆ ನೀಡುತ್ತೇವೆ. ಡಿಲಿಟ್ ಆಗಿರೋ ಮತದಾರರ ಮಾಹಿತಿ ನೀಡಿದರೆ ಸೇರ್ಪಡೆ ಮಾಡಲು ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಯಾವುದೇ ಒತ್ತಡದಿಂದ ಮತದಾರರ ಪಟ್ಟಿ ಡಿಲಿಟ್ ಮಾಡಿಲ್ಲ ಅಂತಾ ಹೇಳಿದ್ದಾರೆ.

    ಬಿಜೆಪಿಗೆ ಮತ ಹಾಕದಿರುವ ಸಮುದಾಯ ಮತ್ತು ವ್ಯಕ್ತಿಗಳನ್ನ ಗುರುತಿಸಿ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಅನ್ನೋ ಆರೋಪವೇ ಜೋರಾಗಿದೆ. ಆಡಳಿತಾರೂಢ ಬಿಜೆಪಿ ಸರ್ಕಾರ ಇಂತಹ ಕೃತ್ಯದಲ್ಲಿ ಭಾಗಿಯಾಗಿರದಿದ್ದರೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನ ಬೆಳಕಿಗೆ ತರಲಿ ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುರುಘಾಶ್ರೀ ಕ್ಷಮಿಸಲಾಗದ ಅಕ್ಷಮ್ಯ ಅಪರಾಧ ಮಾಡಿದ್ದಾರೆ, ತಕ್ಕ ಶಿಕ್ಷೆಯಾಗಲಿ- ಮೌನ ಮುರಿದ BSY

    ಮುರುಘಾಶ್ರೀ ಕ್ಷಮಿಸಲಾಗದ ಅಕ್ಷಮ್ಯ ಅಪರಾಧ ಮಾಡಿದ್ದಾರೆ, ತಕ್ಕ ಶಿಕ್ಷೆಯಾಗಲಿ- ಮೌನ ಮುರಿದ BSY

    ಉಡುಪಿ: ಮುರುಘಾಶ್ರೀ ವಿರುದ್ಧ ಲೈಂಗಿಕ (POCSO Case) ಕಿರುಕುಳ ಪ್ರಕರಣದ ಕುರಿತು ಕೊನೆಗೂ ಮೌನ ಮುರಿದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಶ್ರೀಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಉಡುಪಿಯ (Udupi) ಕೊಲ್ಲೂರಿಗೆ ಇಂದು ಭೇಟಿ ನೀಡಿದ್ದ ಬಿಎಸ್‌ವೈ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾಂಗಣದಲ್ಲಿ ನಡೆದ ಮೂಕಾಂಬಿಕಾ ದೇವಿಯ ಉತ್ಸವದಲ್ಲಿ ಭಾಗಿಯಾದರು. ಬಳಿಕ ಮುರುಘಾಶ್ರೀಗಳ ಲೈಂಗಿಕ ಕಿರುಕುಳ ಕೇಸ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಮುರುಘಾ ಶ್ರೀ (Sri Shivamurthy Murugha Sharanaru) ಕ್ಷಮಿಸಲಾಗದ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಎಲ್ಲರೂ ಇದನ್ನು ಖಂಡಿಸಬೇಕು. ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಗಳೂರು, ಉಡುಪಿಯವರು ಶಿಸ್ತಿನ ಜನಗಳು: ಹಾಡಿಹೊಗಳಿದ ಬಿಎಸ್‍ವೈ

    ರಾಜ್ಯದಲ್ಲಿ ಬಿಜೆಪಿ 140 ಸೀಟು: ಈ ಬಾರಿಯ ಚುನಾವಣೆಯಲ್ಲಿ (Election 2023) ರಾಜ್ಯದಲ್ಲಿ ಬಿಜೆಪಿ 140 ಸೀಟು ಗೆಲ್ಲಲಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕರಾವಳಿ ಭಾಗದಲ್ಲಿ ಪ್ರವಾಸ ಮಾಡಿದ್ದೇವೆ. ನಮಗೆ ಹಿಂದೆಂದೂ ಇಲ್ಲದ ಸ್ವಾಗತ ಸಿಕ್ಕಿದೆ. ಕರಾವಳಿ ಭಾಗದಲ್ಲಿ ನೂರಕ್ಕೆ ನೂರು ನಮ್ಮ ಎಲ್ಲಾ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: 

    ಸತೀಶ್ ಜಾರಕಿಹೊಳಿ ಗರಂ: ಸತೀಶ್ ಜಾರಕಿಹೊಳಿ (Satish Jarkiholi) `ಹಿಂದೂ’ (Hindu) ಪದ ಅಶ್ಲೀಲ ಹೇಳಿಕೆ ವಿಚಾರಕ್ಕೆ ಕಿಡಿ ಕಾರಿದ ಬಿಎಸ್‌ವೈ, ಹಿಂದೂಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಕಾಂಗ್ರೆಸ್‌ನವರೇ ಇದನ್ನು ಖಂಡಿಸಿದ್ದಾರೆ. ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮೆ ಕೇಳಬೇಕು. ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅಂದುಕೊಂಡಿದ್ದರೆ ಅದೊಂದು ಭ್ರಮೆ. ಸತೀಶ್ ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಬೇಕು. ಹಿಂದುಗಳಿಗೆ ಅಪಮಾನ ಆಗುವ ಹಾಗೆ ವರ್ತನೆ ಮಾಡಬಾರದು ಎಂದು ತಿಳುವಳಿಕೆ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚುನಾವಣೆಗೆ ಟಿಆರ್‌ಎಸ್‌ ಜೊತೆ ಜೆಡಿಎಸ್‌ ಮೈತ್ರಿ – ಎಚ್‌ಡಿಕೆ ಅಧಿಕೃತ ಘೋಷಣೆ

    ಚುನಾವಣೆಗೆ ಟಿಆರ್‌ಎಸ್‌ ಜೊತೆ ಜೆಡಿಎಸ್‌ ಮೈತ್ರಿ – ಎಚ್‌ಡಿಕೆ ಅಧಿಕೃತ ಘೋಷಣೆ

    ಹೈದರಾಬಾದ್‌: 2023ರ ಕರ್ನಾಟಕ ವಿಧಾನಸಭೆ(Karnataka Election) ಮತ್ತು 2024ರ ಲೋಕಸಭಾ ಚುನಾವಣೆಗೆ ಜೆಡಿಎಸ್- ಟಿಆರ್‌ಎಸ್(JDS TRS) ಮೈತ್ರಿ ಮಾಡಿಕೊಂಡಿದೆ.

    ಹೈದರಾಬಾದ್‌ನಲ್ಲಿ ಕೆ ಚಂದ್ರಶೇಖರ್‌ ರಾವ್‌(KCR) ಅವರ ರಾಷ್ಟ್ರೀಯ ಪಕ್ಷ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಎಚ್‌ಡಿ ಕುಮಾರಸ್ವಾಮಿ(HD Kumaraswamy) ಮೈತ್ರಿ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಕೇರಳ, ತಮಿಳುನಾಡು, ಅಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕದಲ್ಲಿ ಮೈತ್ರಿ ಜೊತೆಗೆ ಚುನಾವಣೆ ಎದುರಿಸುವುದಾಗಿ ಕುಮಾರಸ್ವಾಮಿ ಪ್ರಕಟಿಸಿದ್ದಾರೆ.

    ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರದಲ್ಲಿ ʼಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯʼ ಸ್ಥಿತಿ ಇದೆ. ಅದೇ ಸ್ಥಿತಿಯನ್ನು ರಾಜ್ಯದಲ್ಲೂ ತರಲು ನಾನು, ಕೆಸಿಆರ್ ನಿರ್ಧಾರ ಮಾಡಿದ್ದೇವೆ. 2023ರ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳ ಹೊರತಾದ ಸ್ವತಂತ್ರ ಸರಕಾರ ತರಲು ಎರಡೂ ಪಕ್ಷಗಳು ಸದೃಢವಾಗಿ ಕೆಲಸ ಮಾಡಲಿವೆ. ನಮಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕೆಸಿಆರ್ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ ಕನ್ನಡಿಗರದ್ದೇ ಆದ ಸ್ವಾಭಿಮಾನದ ಸರ್ಕಾರ ಬೇಕು. ಈ ನಿಟ್ಟಿನಲ್ಲಿ ನಾವಿಬ್ಬರೂ ಚರ್ಚಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಭಾರತ್ ರಾಷ್ಟ್ರ ಸಮಿತಿ – ರಾಷ್ಟ್ರೀಯ ಪಕ್ಷ ಪ್ರಾರಂಭಿಸಿದ KCR

    ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯವಿತ್ತು. ಕೆಲ ಪಕ್ಷಗಳ ʼರಾಜಕೀಯ ಏಕಸ್ವಾಮ್ಯತೆʼ ದೇಶಕ್ಕೆ ಮಾರಕ. ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಹೊಸ ರಾಜಕೀಯ ಶಕ್ತಿ ಬೇಕಿತ್ತು. ಬಿಆರ್ ಎಸ್ ಒಂದು ʼಪ್ರಬಲ ಪರ್ಯಾಯʼ ಎನ್ನುವುದು ನನ್ನ ಭಾವನೆ. ಬಿಆರ್ ಎಸ್ ಸ್ಥಾಪನೆಯನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ಬಿಆರ್ ಎಸ್ ಸ್ಥಾಪನೆ ಬಗ್ಗೆ ಎಚ್‌ಡಿ ದೇವೇಗೌಡ ಮತ್ತು ನನ್ನ ಜತೆ ಕೆಸಿಆರ್ ಸಮಾಲೋಚಿಸಿದ್ದರು. ಕೆಲ ದಿನಗಳ ಹಿಂದೆ ಸ್ವತಃ ನಾನೇ ಹೈದರಾಬಾದ್ʼಗೆ ತೆರಳಿ ಚರ್ಚಿಸಿದ್ದೆ. ನಮ್ಮನ್ನು ಪರಿಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಅವರು ಈ ದಿಟ್ಟಹೆಜ್ಜೆ ಇರಿಸಿದ್ದಾರೆ ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 6 ಕ್ಷೇತ್ರ ಗೆದ್ದರಷ್ಟೇ ಬಿಎಸ್‍ವೈ ಸಿಎಂ ಕುರ್ಚಿ ಭದ್ರ

    6 ಕ್ಷೇತ್ರ ಗೆದ್ದರಷ್ಟೇ ಬಿಎಸ್‍ವೈ ಸಿಎಂ ಕುರ್ಚಿ ಭದ್ರ

    ಬೆಂಗಳೂರು: ಅನರ್ಹ ಶಾಸಕರಿಗೆ ಸುಪ್ರೀಂ ಕೋರ್ಟಿನಿಂದ ಬಿಗ್ ರಿಲೀಫ್ ಸಿಕ್ಕಿದರೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮುಂದುವರಿಯಬೇಕಾದರೆ 15 ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕನಿಷ್ಟ 6 ಕ್ಷೇತ್ರಗಳನ್ನು ಗೆಲ್ಲಬೇಕಿದೆ.

    ಹೌದು. ಕರ್ನಾಟಕ ವಿಧಾನಸಭೆ ಬಲಾಬಲ 224 ಆಗಿದ್ದು ಒಬ್ಬರು ಅಂಗ್ಲೋ ಇಂಡಿಯನ್ ಸದಸ್ಯರಿದ್ದಾರೆ. 17 ಮಂದಿ ಶಾಸಕರು ಅನರ್ಹಗೊಂಡ ಪರಿಣಾಮ ಬಲ 207ಕ್ಕೆ ಕುಸಿದಿದೆ. ಬಹುಮತ ಸಾಧಿಸಲು 104 ಶಾಸಕರು ಬೆಂಬಲ ಬೇಕಿದ್ದ ಪರಿಣಾಮ ಬಿಜೆಪಿ 105 ಜನ ಶಾಸಕರ ಜೊತೆ ಓರ್ವ ಪಕ್ಷೇತರ ಶಾಸಕರ ಬೆಂಬಲ ಇದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 66, ಜಿಡಿಎಸ್ 34 ಶಾಸಕರಿದ್ದರೆ ಬಿಎಸ್‍ಪಿಯಿಂದ ಉಚ್ಚಾಟಿದ ಶಾಸಕ ಮಹೇಶ್ ಇದ್ದಾರೆ.

    15 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿರುವ ಪರಿಣಾಮ ವಿಧಾನಸಭೆಯ ಬಲಾಬಲ 222+1 ಏರಿಕೆ ಆಗಲಿದೆ. ಹೀಗಾಗಿ ಬಿಜೆಪಿ ಸರ್ಕಾರಕ್ಕೆ 112 ಶಾಸಕರ ಬೆಂಬಲ ಬೇಕಿದ್ದು, ಬಿಎಸ್‍ವೈ ಸಿಎಂ ಪಟ್ಟ ಉಳಿಸಿಕೊಳ್ಳಬೇಕಾದರೆ ಕನಿಷ್ಟ 6 ಕ್ಷೇತ್ರಗಳಲ್ಲಿ ಜಯಗಳಿಸಲೇಬೇಕಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಡಿ.5 ರಂದು ಮತದಾನ ನಡೆಯಲಿದ್ದು ಡಿ.9 ಸೋಮವಾರದಂದು ಫಲಿತಾಂಶ ಪ್ರಕಟವಾಗಲಿದೆ.

    ಈ 15 ಕ್ಷೇತ್ರಗಳ ಪೈಕಿ ಉತ್ತರ ಕರ್ನಾಟಕ ಮತ್ತು ಬೆಂಗಳೂರು ನಗರ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿಡಿತವಿದೆ. ಆದರೆ ಹಳೆ ಮೈಸೂರು ಭಾಗವಾದ ಕೆ.ಆರ್.ಪೇಟೆ, ಹುಣಸೂರು, ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ನೇರವಾದ ಸ್ಪರ್ಧೆ ಇದೆ. ಆದರೆ ಲೋಕಸಭೆಯಲ್ಲಿ ಚಿಕ್ಕಬಳ್ಳಾಪುರ, ಮೈಸೂರಿನಲ್ಲಿ ಬಿಜೆಪಿ ಗೆದ್ದಿದ್ದು, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆದ್ದಿದ್ದಾರೆ.

    2 ಕ್ಷೇತ್ರಗಳಿಗೆ ಇಲ್ಲ:
    ಆನರ್ಹ ಶಾಸಕರ 17 ಕ್ಷೇತ್ರದ ಪೈಕಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಹಾಗೂ ರಾಯಚೂರಿನ ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆ ಚುನಾವಣೆ ನಡೆಯುತ್ತಿಲ್ಲ. 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾಲಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಸಾವಿರಾರು ಗುರುತಿನ ಚೀಟಿ ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಅನರ್ಹ ಶಾಸಕ ಮುನಿರತ್ನ ಹೆಸರನ್ನು ಜಾಲಹಳ್ಳಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಕೈಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಪಿ.ಎಂ ಮುನಿರಾಜುಗೌಡ 7ನೇ ಎಸಿಎಂಎಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮುನಿರತ್ನ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂಬುವುದು ಅವರ ವಾದವಾಗಿದೆ. ಈ ಪ್ರಕರಣ ಕೋರ್ಟಿನಲ್ಲಿ ಇರುವುದರಿಂದ ಈ ಕ್ಷೇತ್ರದ ಉಪ ಚುನಾವಣೆ ತಡೆ ಹಿಡಿಯಲಾಗಿದೆ.

    ಇನ್ನು ಬೋಗಸ್ ಮತದಾನ ಪ್ರಕರಣ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆಯಿಲ್ಲ. ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ 213 ಮತದ ಅಂತರದಿಂದ ಸೋತಿದ್ದ ಬಸನಗೌಡ ತುರ್ವಿಹಾಳ ಅವರು ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ. ಪ್ರತಾಪ್ ಗೌಡ ಪುತ್ರಿ ವಿದೇಶದಲ್ಲಿದ್ದರು ಕೂಡ ಅವರ ಮತ ಚಲಾವಣೆಯಾಗಿತ್ತು. ಹೀಗಾಗಿ ಶಾಸಕತ್ವ ಅಸಿಂಧುಗೊಳಿಸುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ. ಉಚ್ಚ ನ್ಯಾಯಾಲಯದಲ್ಲಿ ಈ ಪ್ರಕರಣ ಬಾಕಿಯಿದ್ದು, ಬೋಗಸ್ ಮತದಾನ ನಡೆಯದಿದ್ದರೆ ನಾನೇ ಗೆಲ್ಲುತ್ತಿದ್ದೆ ಎನ್ನುವುದು ಬಸನಗೌಡ ತುರ್ವಿಹಾಳ ವಾದ. ಹೀಗಾಗಿ ಎರಡು ಪ್ರಕರಣ ಕೋರ್ಟಿನಲ್ಲಿ ಇರುವ ಕಾರಣದಿಂದ 2 ಕ್ಷೇತ್ರಗಳ ಉಪಚುನಾವಣೆ ಕೋರ್ಟ್ ತೀರ್ಪು ಬರುವವರೆಗೂ ಕೈ ಬಿಡಲಾಗಿದೆ.

  • ದೆಹಲಿಯಲ್ಲಿ ಲುಂಗಿ ಉಡಲು ಬಾರದವರಿಂದ ಮೇಯರ್ ಪಟ್ಟ ಕನ್ನಡಿಗರಿಗೆ ಕೈ ತಪ್ಪಿತು : ಭೀಮಾಶಂಕರ್ ಪಾಟೀಲ್

    ದೆಹಲಿಯಲ್ಲಿ ಲುಂಗಿ ಉಡಲು ಬಾರದವರಿಂದ ಮೇಯರ್ ಪಟ್ಟ ಕನ್ನಡಿಗರಿಗೆ ಕೈ ತಪ್ಪಿತು : ಭೀಮಾಶಂಕರ್ ಪಾಟೀಲ್

    ಬೆಂಗಳೂರು: ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಬಿಬಿಎಂಪಿ ಮೇಯರ್ ಪಟ್ಟ ಒಲಿಯದೇ ಹೋಯಿತು ಎಂದು ಕರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಕಿಡಿಕಾರಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಈ ಬಾರಿ ಕನ್ನಡಿಗರನ್ನೇ ಆಯ್ಕೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಟ್ಟಿ ನಿಲುವು ತಾಳಿದ್ದರು. ಆದರೆ ದೆಹಲಿಯಲ್ಲಿ ಕುಳಿತು ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಈ ಪಟ್ಟ ಒಲಿಯದೇ ಹೋಯಿತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇಂದು ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆದ್ದಿದ್ದರೂ ಅಧಿಕಾರದಿಂದ ವಂಚಿತಗೊಂಡಿದ್ದ ಬಿಜೆಪಿ ಈ ಬಾರಿ ಬಿಬಿಎಂಪಿ ಮೇಯರ್ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

    ಒಟ್ಟು 129 ಮತಗಳನ್ನು ಪಡೆಯುವ ಮೂಲಕ ಜೋಗುಪಾಳ್ಯ ವಾರ್ಡಿನ ಬಿಜೆಪಿ ಸದಸ್ಯ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆ ಆಗಿದ್ದರೆ, ಬೊಮ್ಮನಹಳ್ಳಿ ವಾರ್ಡಿನ ರಾಮ್ ಮೋಹನ್ ರಾಜು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದ್ದರೂ ಕೊನೆ ಕ್ಷಣದಲ್ಲಿ ಪಕ್ಷೇತರ ಪಾಲಿಕೆ ಸದಸ್ಯರ ಜೊತೆಗಿನ ಮಾತುಕತೆ ಯಶಸ್ವಿಯಾಗದ ಪರಿಣಾಮ ಮೇಯರ್ ಹುದ್ದೆ ಕೈ ತಪ್ಪಿತ್ತು. ಆದರೆ ಈ ಬಾರಿ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ ಪರಿಣಾಮ ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರವನ್ನು ಹಿಡಿದಿದೆ.

    ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ 257 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದರೂ 249 ಮಂದಿ ಹಾಜರಾಗಿದ್ದರು. 8 ಮಂದಿ ಗೈರಾಗಿರುವ ಕಾರಣ ಬಹುಮತಕ್ಕೆ 125 ಸದಸ್ಯರ ಬೆಂಬಲ ಬೇಕಿತ್ತು. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದ ಪದ್ಮನಾಭ ರೆಡ್ಡಿ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು.

  • ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಕ್ಷೇತ್ರ, ಗೆದ್ದವರ ಹೆಸರು, ಯಾವ ಪಕ್ಷದವರು ಅನ್ನೋದನ್ನು ಸಲೀಸಾಗಿ ಹೇಳ್ತಾಳೆ ಬೆಂಗ್ಳೂರಿನ ಪುಟ್ಟ ಪೋರಿ!

    ಬೆಂಗಳೂರು: 15ನೇ ವಿಧಾನಸಭಾ ಚುನಾವಣೆಯೂ ಮುಗಿತು. ಸರ್ಕಾರ ರಚನೆಯೂ ಆಯ್ತು. ಈಗಿನ ರಾಜಕೀಯ ನಾಯಕರಿಗೆನೇ 224 ವಿಧಾನ ಸಭಾ ಕ್ಷೇತ್ರದ ಹೆಸರುಗಳು ನೆನಪಿರೋಲ್ಲ. ಆದ್ರೇ ಇಲ್ಲೊಬ್ಬಳು ಪುಟಾಣಿ ಪೋರಿ 224 ಕ್ಷೇತ್ರದ ಜೊತೆ ಗೆದ್ದ ಅಭ್ಯರ್ಥಿ ಯಾರು ಮತ್ತು ಯಾವ ಪಕ್ಷದವರು ಅಂತಾ ಸಲೀಸಾಗಿ ಹೇಳುತ್ತಾಳೆ.

    ಹೌದು. ಈಗಿನ ಸಮಿಶ್ರ ಸರ್ಕಾರದ ಬಹುತೇಕ ಶಾಸಕರಿಗೆ ಸಡನ್ ಆಗಿ ಕೇಳಿದ್ರೇ, ತಮಗೆ ಬೆಂಬಲ ನೀಡಿರೋ 118 ಶಾಸಕರ ಹೆಸರನ್ನ ಹೇಳೊದಕ್ಕೆ ತಡವರಿಸುತ್ತಾರೆ. ಇನ್ನು 224 ಕ್ಷೇತ್ರದ ಬಗ್ಗೆ ಹೇಳೊದು ಅಂದ್ರೆ ತಮಾಷೆಯ ವಿಷಯವಲ್ಲ. ಆದ್ರೆ 224 ಕ್ಷೇತ್ರದ ಹೆಸರನ್ನ ಮಗ್ಗಿ ಹೇಳೊತರ ಹೇಳಿದ್ದ ಶಿವಮೊಗ್ಗದ ಬಾಲಕ ಇಂದ್ರಜೀತ್ ನ ನೋಡಿದ್ರಿ. ಆದ್ರೇ ಆ ಬಾಲಕನನ್ನ ಕೂಡ ಮೀರಿಸೋ ಪುಟಾಣಿ ಈ ಹುಡುಗಿಯಾಗಿದ್ದು, ಈಕೆ ಈ ಬಾರಿ ಕ್ಷೇತ್ರವಲ್ಲ, ಅಲ್ಲಿ ಗೆದ್ದಿರೋರು ಯಾರು ಮತ್ತು ಯಾವ ಪಕ್ಷದವರು ಅಂತಾ ಹೇಳುತ್ತಾಳೆ.

    ಈ ಪುಟಾಣಿಯ ಹೆಸರು ಸಂಭ್ರಮ. ಬೆಂಗಳೂರಿನ ಸುಂಕದಕಟ್ಟೆಯ ಬಳಿ ಇರೋ ಅಂಜನಾನಗರದ ನಿವಾಸಿಗಳಾದ ಜಾನಕಿ ಮತ್ತು ಶ್ರೀನಿವಾಸ್ ದಂಪತಿಯ ಮುದ್ದಿನ ಮಗಳು. ಖಾಸಗಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರೋ ಈ ಪುಟಾಣಿ ಚತುರೇ ಮುಂದೆ ಶಿಕ್ಷಕಿಯಾಗಬೇಕೆಂಬ ಆಸೆ ಹೊಂದಿದ್ದಾಳೆ. ತಂದೆ ಶ್ರೀನಿವಾಸ್ ತಮ್ಮ ಬಿಡುವಿನ ವೇಳೆಯಲ್ಲಿ ಮಗಳಿಗೆ ಇದನ್ನೆಲ್ಲ ಹೇಳಿಕೊಟ್ಟಿದ್ದಾರೆ. ಸಂಭ್ರಮಳಾ ಈ ಸಾಧನೆಯ ಬಗ್ಗೆ ಕಾರು ಚಾಲಕನಾಗಿರೋ ತಂದೆ ಸಂಭ್ರಮದಿಂದ ಹೇಳೊದು ಹೀಗೆ, ಬರೀ ಇಷ್ಟೇ ಅಲ್ಲ ನನ್ನ ಮಗಳು 5 ನಿಮಿಷದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜೀವನ ಚರಿತ್ರೆಯನ್ನು ಹೇಳುತ್ತಾಳೆ. ಜೊತೆಗೆ 1000ಕ್ಕೂ ಹೆಚ್ಚು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಾಳೆ.

    ಎಂಟೇ ವರ್ಷದಲ್ಲಿ ಈ ರೀತಿಯ ಸಾಧನೆ ಮಾಡಿರೋ ಈ ಪುಟ್ಟ ಬಾಲಕಿಯ ನೆನಪಿನ ಶಕ್ತಿ ನೋಡಿದ್ರೇ, ಮುಂದೊಂದು ದಿನ ಸಾಧಕಿ ಆಗೊದ್ರಲ್ಲಿ ಅನುಮಾನವಿಲ್ಲ.

  • ಕ್ಷೇತ್ರದ ಜನರು ಜಾತಿ, ಧರ್ಮ ನೋಡದೇ ಅಭಿವೃದ್ಧಿಗೆ ಮತ ನೀಡಿದ್ದಾರೆ: ಮುನಿರತ್ನ

    ಕ್ಷೇತ್ರದ ಜನರು ಜಾತಿ, ಧರ್ಮ ನೋಡದೇ ಅಭಿವೃದ್ಧಿಗೆ ಮತ ನೀಡಿದ್ದಾರೆ: ಮುನಿರತ್ನ

    ಬೆಂಗಳೂರು: ರಾಜರಾಜೇಶ್ವರಿ ಚುನಾವಣೆಯ ಫಲಿತಾಂಶ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಕಾರಣ ಕ್ಷೇತ್ರದ ಜನರು ಜಾತಿ, ಧರ್ಮ ನೋಡದೇ ಅಭಿವೃದ್ಧಿಗೆ ಮತ ನೀಡಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ರೆ ಯಾವ ವ್ಯಕ್ತಿಯೂ ಸಾರ್ವಜನಿಕ ಜೀವನದಲ್ಲಿ ಯಶಸ್ವಿಯಾಗಹುಬುದು ಎಂಬುದಕ್ಕೆ ಇಂದು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಉದಾಹರಣೆಯಾಗಿದೆ ಎಂದು ಕಾಂಗ್ರೆಸ್ ಶಾಸಕ ಮುನಿರತ್ನ ಹೇಳಿದ್ದಾರೆ.

    ಅಭಿವೃದ್ಧಿ ಕೆಲಸಗಳನ್ನು ಗುರುತಿಸಿ ಇವತ್ತು ಮತದಾರರು ನನ್ನ ಕೈ ಹಿಡಿದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪನವರು ಹಣ ಬಲದಿಂದ ಗೆದ್ದಿದ್ದಾರೆ ಅಂತಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರೋದನ್ನು ನೋಡಿದ್ದೇನೆ. ಜನಾದೇಶವನ್ನು ಹಣದೊಂದಿಗೆ ಹೋಲಿಸಿ ಮತದಾರರನ್ನು ಅವಮಾನಿಸಬೇಡಿ. ತಾವು ಹಿರಿಯರು ಎಚ್ಚರಿಕೆಯಿಂದ ಮಾತನಾಡಬೇಕು. ಒಂದು ಬಾರಿ ನನ್ನ ಕ್ಷೇತ್ರಕ್ಕೆ ಬಂದು ನೋಡಿ ಮುನಿರತ್ನ ಹೇಗೆ ಗೆಲುವು ಕಂಡಿದ್ದು ನಿಮಗೆ ಗೊತ್ತಾಗುತ್ತದೆ ಅಂತಾ ವಾಗ್ದಾಳಿ ನಡೆಸಿದ್ರು.

    ಚುನಾವಣೆ ಮುಂದೂಡಿದ್ದು ನಮಗೆ ಒಳ್ಳೆದಾಯಿತು. ನಕಲಿ ಮತದಾರರನ್ನು ತಡೆದಿದ್ದರಿಂದ ಲಾಭವಾಗಿದೆ. ಆ ಮತಗಳನ್ನು ತಡೆಯದೇ ಇದ್ದಿದ್ರೆ ಇಂದು ನಮಗೆ ತೊಂದರೆ ಆಗುತ್ತಿತ್ತು. ಕ್ಷೇತ್ರದ ಜನರಿಗಾಗಿ ಮುಂದಿನ ದಿನಗಳಲ್ಲಿಯೂ ನನ್ನ ಅಭಿವೃದ್ಧಿ ಕೆಲಸಗಳು ಮುಂದುವರೆಯಲಿವೆ ಅಂತಾ ಹೇಳಿದ್ರು.

    25,492 ಸಾವಿರ ಮತಗಳ ಅಂತರದಿಂದ ಮುನಿರತ್ನ ಗೆಲ್ಲುವ ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಮುನಿರತ್ನ ಅವರಿಗೆ 1,08,064 ಮತಗಳು ಬಿದ್ದರೆ ಬಿಜೆಪಿ ಮುನಿರಾಜು ಗೌಡ ಅವರಿಗೆ 82,572 ಮತಗಳು ಬಿದ್ದಿವೆ. ಜೆಡಿಎಸ್‍ನ ರಾಮಚಂದ್ರ ಅವರಿಗೆ 60,360 ಮತಗಳು ಬಿದ್ದಿವೆ.