Tag: Karnataka Election

  • ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಸಿದ್ದರಾಮಯ್ಯ – ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರ?

    ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಸಿದ್ದರಾಮಯ್ಯ – ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರ?

    ಬೆಂಗಳೂರು: ರಾಜ್ಯಕ್ಕೆ ಅಮಿತ್ ಶಾ (Amit Shah) ಬಂದು ಹೋದಮೇಲೆ ಸಿದ್ದರಾಮಯ್ಯ (Siddaramaiah) ಮೇಲೆ ಆಗ್ರೆಸಿವ್ ಆಟ್ಯಾಕ್ ಶುರುವಾಗಿದ್ದು, ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ ಆಗುತ್ತಿದೆ. ಪೇ ಸಿಎಂ, 40 ಪರ್ಸೆಂಟ್ ಕಮಿಷನ್ ಚಾರ್ಜ್ ಮಾಡಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ಗೆ ತಿರುಗೇಟು ನೀಡಬೇಕೆಂದು ಸಂಘದ ಕಟ್ಟಾಜ್ಞೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ (BJP) ಸಂಚಲನ ಉಂಟಾಗಿದ್ದು, ಕಾಂಗ್ರೆಸ್ (Congress) ಪ್ಲ್ಯಾನ್ ಬೀಟ್‌ಗೆ ಬಿಜೆಪಿ ಗೇಮ್ ಪ್ಲ್ಯಾನ್ ಮಾಡಿದೆ.

    Siddaramaiah AmitShah

    ಸಿದ್ದರಾಮಯ್ಯ ಒಬ್ಬ ನಾಯಕನನ್ನು ನೀವು ನೋಡಿಕೊಳ್ಳಿ, ಉಳಿದಿದ್ದು ನಮಗೆ ಬಿಡಿ. ಹೀಗೆ ಕರ್ನಾಟಕಕ್ಕೆ ಅಮಿತ್ ಶಾ ಬಂದಾಗ ರಾಜ್ಯ ನಾಯಕರಿಗೆ ಸೂಕ್ಷ್ಮವಾಗಿ ಹೇಳಿದ್ದರು ಎನ್ನಲಾಗಿದೆ. ಬಿಜೆಪಿಯ ಪ್ರತಿ ಏಟಿಗೂ ಎದುರೇಟು ನೀಡುವ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಕಟ್ಟಿ ಹಾಕಿದರೆ ಎದುರಾಳಿ ಆಟ ಅರ್ಧ ಕಟ್ಟಿ ಹಾಕಿದಂತೆ ಎಂಬ ಗೇಮ್ ಪ್ಲ್ಯಾನ್ ಬಿಜೆಪಿ ಹೈಕಮಾಂಡ್‌ನದ್ದು. ಆ ಕಾರಣಕ್ಕಾಗಿಯೇ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ತಂಡ ಮುಗಿಬಿದ್ದಿದೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

    ಹಿಂದೂ ಮತಗಳ ಕ್ರೋಢೀಕರಣಕ್ಕೆ ಸಿದ್ದು ವಿರುದ್ಧ ಮುಸ್ಲಿಂ ಒಲವಿನ ಅಸ್ತ್ರ ಪ್ರಯೋಗ ನಡೆಯತ್ತಿದೆ ಎಂಬ ವಾದವೂ ಇದೆ. ಟಿಪ್ಪು ಜಯಂತಿ ಆಚರಣೆ ಮಾಡಿದ್ದ ಸಿದ್ದುಗೆ ಹಿಂದೂ ವಿರೋಧಿ ಪಟ್ಟ ಗಟ್ಟಿ ಮಾಡಲು ಪ್ಲ್ಯಾನ್ ನಡೆದಿದ್ದು, ಪ್ರತಿ ಹೆಜ್ಜೆಯಲ್ಲೂ ಸಿದ್ದರಾಮಯ್ಯ ವಿರುದ್ಧ ಹಿಂದೂ ವಿರೋಧಿ ಎಂದು ಬಿಂಬಿಸುವ ತಂತ್ರಗಾರಿಕೆ ಬಿಜೆಪಿ ಹೈಕಮಾಂಡ್‌ನದ್ದು ಎನ್ನಲಾಗುತ್ತಿದೆ. ಇದನ್ನೂ ಓದಿ: ಸಿಎಂ ಮನೆ ಮುಂದೆಯೇ ನಾವೆಲ್ಲರೂ ಸಂಕ್ರಾಂತಿ ಆಚರಿಸುತ್ತೇವೆ – ಬಸವಜಯ ಮೃತ್ಯುಂಜಯ ಸ್ವಾಮೀಜಿ

    ಪೇ ಸಿಎಂ ವಿಚಾರದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಹಿನ್ನಡೆಯಾಗಿತ್ತು, ಆಗ ಕಾಂಗ್ರೆಸ್ ಬೀಗಿತ್ತು. 40 ಪರ್ಸೆಂಟ್ ಕಮಿಷನ್ ವಿಚಾರದಲ್ಲಿ ಬಿಜೆಪಿ ವಿರುದ್ಧ ನಿರಂತರ ಚಾರ್ಜ್ಶೀಟ್ ಹಾಕಿ ಕಾಂಗ್ರೆಸ್ ಕೇಕೆ ಹಾಕಿತ್ತು. ಸರಣಿ ಚಾರ್ಜ್ಶೀಟ್‌ಗಳ ಮೂಲಕ ಬಿಜೆಪಿ ವಿರುದ್ಧ ಮುಗಿಬಿದ್ದಿದ್ದ ಕಾಂಗ್ರೆಸ್ ನಾಯಕರ ತಂತ್ರಕ್ಕೆ ಬ್ರೇಕ್ ಹಾಕಲು ಬಿಜೆಪಿಯಿಂದ ಸಿದ್ದು ನಿಜ ಕನಸುಗಳ ಅಸ್ತ್ರ ಪ್ರಯೋಗ ಮಾಡಲಾಗಿತ್ತು ಎನ್ನುವುದು ಬಲ್ಲ ಮೂಲಗಳ ಮಾಹಿತಿ.

    ಬಿಜೆಪಿ ಹೈಕಮಾಂಡ್‌ನದ್ದು ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರ. ಕಾಂಗ್ರೆಸ್+ಸಿದ್ದರಾಮಯ್ಯ ಗುರಿಯಾಗಿಟ್ಟುಕೊಂಡು ಮಾಡಿರುವ ಗೇಮ್ ಪ್ಲ್ಯಾನ್ ಯಾವ ಸಕ್ಸಸ್ ತಂದು ಕೊಡುತ್ತೋ ಕಾದುನೋಡಬೇಕಿದೆ. ಇದನ್ನೂ ಓದಿ: ಮ್ಯೂಸಿಕ್‌ ಸೌಂಡ್‌ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್‌ಗೆ ಬಿತ್ತು ಬೀಗ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿಯಲ್ಲಿ ಚಾಣಕ್ಯನ ಟಿ20 ಟಾಸ್ಕ್, ಎಲೆಕ್ಷನ್ ಗೇಮ್- ಯಾರೆಲ್ಲ ಲೀಡರ್ಸ್, ಪ್ಲೇಯರ್ಸ್?

    ಬಿಜೆಪಿಯಲ್ಲಿ ಚಾಣಕ್ಯನ ಟಿ20 ಟಾಸ್ಕ್, ಎಲೆಕ್ಷನ್ ಗೇಮ್- ಯಾರೆಲ್ಲ ಲೀಡರ್ಸ್, ಪ್ಲೇಯರ್ಸ್?

    ಬೆಂಗಳೂರು: ಬಿಜೆಪಿ ಚಾಣಕ್ಯ ಅಮಿತ್ ಶಾ (Amit Shah) ಟಾಸ್ಕ್ ರೆಡಿಯಾಗಿದ್ದು ಟಿ20 ಗೇಮ್ ಶುರು ಆಗಿದೆ. ಬಿಜೆಪಿಯಲ್ಲಿ (BJP) 20+20 ಟಾಸ್ಕ್ ಬಗ್ಗೆ ಚರ್ಚೆ ಆಗುತ್ತಿದ್ದು, ಯಾರೆಲ್ಲ ಟಾಪ್ ಪ್ಲೇಯರ್ಸ್? ಎಂಬ ಕುತೂಹಲ ಮನೆ ಮಾಡಿದೆ. ಜನವರಿ ಕೊನೆ ವಾರದಲ್ಲಿ ಟಾಸ್ಕ್ ಫೈನಲ್ ಆಗುತ್ತಾ? ಸೂತ್ರದ ಅಸಲಿಯತ್ತೇನು? ಎಂಬ ಪ್ರಶ್ನೆಗಳು ಬಿಜೆಪಿಯಲ್ಲಿ ಸದ್ದು ಮಾಡುತ್ತಿದ್ದು, 1+1 ಸೂತ್ರದ ಬಗ್ಗೆಯೇ ಚರ್ಚೆಯಾಗುತ್ತಿದೆ.

    ಬಿಜೆಪಿಯಲ್ಲಿ ಸ್ವಂತ ಶಕ್ತಿ ಮೇಲೆ ಸುಲಭವಾಗಿ ಗೆಲ್ಲುವ ಕುದುರೆಗಳ ಹುಡುಕಾಟ ನಡೆಯುತ್ತಿದೆ. ಮುಂದಿನ ಬಾರಿ ಬರುವಾಗ ಎಲ್ಲರ ಲಿಸ್ಟ್ ರೆಡಿ ಮಾಡಿ ಎಂದು ಅಮಿತ್ ಶಾ ಸೂಚಿಸಿದ್ದಾರೆ ಎನ್ನಲಾಗಿದೆ. ಜನವರಿ 2ನೇ, 3ನೇ ವಾರದಲ್ಲಿ ಮತ್ತೆ ಅಮಿತ್ ಶಾ ಬರುವ ಸಾಧ್ಯತೆ ಇದ್ದು, ಅಲ್ಲಿ ತನಕ ಕನಿಷ್ಠ 20 ಗೆಲ್ಲುವ ಕುದುರೆಗಳನ್ನು ಗುರುತಿಸಿ ಇಡಿ ಎಂದು ಟಾಸ್ಕ್ ಕೊಟ್ಟಿದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಅಂದಾಜು 20ಕ್ಕೂ ಹೆಚ್ಚು ಕೇಕ್‌ವಾಕ್ ಗೆಲುವಿನ ಲೀರ‍್ಸ್ ಇದ್ದಾರೆ. ಆ 20 ಲೀಡರ್‌ಗಳಿಗೆ ಟಿ20 ಟಾಸ್ಕ್ ಕೊಡಲು ಅಮಿತ್ ಶಾ ಮೆಗಾ ಪ್ಲ್ಯಾನ್ ಮಾಡಿದ್ದಾರೆ ಎಂಬುದು ಬಿಜೆಪಿ ಮೂಲಗಳ ಮಾಹಿತಿ. ಇದನ್ನೂ ಓದಿ: ಕೋಲಾರ ಸ್ಪರ್ಧೆ ಫಿಕ್ಸ್- ಜನವರಿ 9ಕ್ಕೆ ಸಿದ್ದರಾಮಯ್ಯ ಫೈನಲ್ ಕಾಲ್..!?

    ಈಗಾಗಲೇ ಟಿ20 ಗೇಮ್‌ಗೆ ರೆಡಿಯಾಗಿ ಎಂದು ಅಮಿತ್ ಶಾ ಪರೋಕ್ಷ ಸಂದೇಶ ರವಾನೆ ಮಾಡಿದ್ದಾರೆ. ಪವರ್‌ಫುಲ್ 20 ಲೀಡರ್‌ಗಳಿಗೆ 20 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಟಾಸ್ಕ್ ನೀಡಲಿದ್ದು, ತಾವು ಸ್ಪರ್ಧೆ ಮಾಡುವ ಕ್ಷೇತ್ರಗಳ ಜೊತೆ ಇನ್ನೊಂದು ಕ್ಷೇತ್ರ ಜವಾಬ್ದಾರಿಗೆ ಪ್ಲ್ಯಾನ್ ನಡೆದಿದೆ. 1+1 ಸೂತ್ರದಡಿಯಲ್ಲಿ ಟಿ20 ಟಾಸ್ಕ್ ಕೊಡಲು ಬಿಜೆಪಿ ಚಾಣಕ್ಯ ಭರ್ಜರಿ ಸಿದ್ಧತೆ ನಡೆಸಿದ್ದು, ಜನವರಿ ಕೊನೇ ವಾರದಲ್ಲಿ 1+1 ಕ್ಷೇತ್ರದ ಹಂಚಿಕೆ ಆಗುತ್ತಾ? ಆ 1+1 ಸೂತ್ರದಡಿ ಟಿ20 ಟಾಸ್ಕ್‌ನಲ್ಲಿ ಇರಲಿರುವ ಆ ಲೀಡರ್‌ಗಳು ಯಾರು? ಎಂಬ ಕುತೂಹಲ ಮನೆ ಮಾಡಿದೆ. ಬಿಜೆಪಿ ಚಾಣಕ್ಯನ ಕಡೇ ಆಜ್ಞೆ ಟಿ20 ಗೇಮ್ ಅಸಲಿಯತ್ತು ಏನು ಅನ್ನೋದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ – ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ: ಶಿವರಾಮ್ ಹೆಬ್ಬಾರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿಜೆಪಿಗೆ ಜನವರಿ ವರಿ: ಅಮಿತ್ ಶಾಗೆ ಕೊಡಬೇಕು ಟಾಸ್ಕ್ ರಿಪೋರ್ಟ್!

    ಬಿಜೆಪಿಗೆ ಜನವರಿ ವರಿ: ಅಮಿತ್ ಶಾಗೆ ಕೊಡಬೇಕು ಟಾಸ್ಕ್ ರಿಪೋರ್ಟ್!

    – ರವೀಶ್‌ ಎಚ್‌.ಎಸ್‌
    ಬೆಂಗಳೂರು: ಜನವರಿಯಲ್ಲಿ ರಾಜ್ಯ ಬಿಜೆಪಿಗರಿಗೆ ಎಲೆಕ್ಷನ್ ಟಾಸ್ಕ್ ವರಿ ಶುರುವಾಗಿದೆ. ಬಿಜೆಪಿಯಲ್ಲಿ(BJP) ತ್ರಿಮೂರ್ತಿ ಚಕ್ರವ್ಯೂಹ ರಚನೆ ಆಗುತ್ತಿದ್ದು ಸ್ವತಃ ಅಮಿತ್ ಶಾ(Amit Shah) ಅವರೇ ಟಾಸ್ಕ್ ಟೆಸ್ಟ್ ಮಾಡುತ್ತಿದ್ದಾರೆ.

    ನಡ್ಡಾ, ಮೋದಿ, ಶಾ ಹವಾ ಸೃಷ್ಟಿಗೆ ಪ್ಲ್ಯಾನ್ ಆಗಿದ್ದು, ಬಿಜೆಪಿಯಲ್ಲಿ ಒಳ ತಂತ್ರದ ಗೇಮ್ ಬಿರುಸುಗೊಂಡಿದೆ. ಜನವರಿ 5, 6 ಎರಡು ದಿನಗಳ ಕಾಲ ಜೆ.ಪಿ.ನಡ್ಡಾ(JP Nadda) ಎಲೆಕ್ಷನ್ ಟಾಸ್ಕ್ ಕೊಡಲು ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಸಾರ್ವಜನಿಕ ಸಮಾವೇಶ, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

    ಅಷ್ಟೇ ಅಲ್ಲ ಮೂರು ಜಿಲ್ಲೆಗಳಲ್ಲಿ ವಿವಿಧ ಮಠಗಳಿಗೆ ಭೇಟಿ ಕೊಡುವ ನಡ್ಡಾ ವಿವಿಧ ಸಮುದಾಯಗಳ ಮೇಲೂ ಕಣ್ಣಿಟ್ಟಿದ್ದಾರೆ. ಜನವರಿ 12ರಂದು ಯುವ ಜನೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಭಾಗವಹಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ(Hubballi) ನಡೆಯಲಿರುವ ಯುವಜನೋತ್ಸವದಲ್ಲಿ ಪ್ರಧಾನಿಯಿಂದ ಮೆಗಾ ಭಾಷಣ ಇರಲಿದ್ದು, ಯುವಕರನ್ನು ಸೆಳೆಯಲು ಸಹಕಾರಿ ಆಗಲಿದೆ ಎಂದು ರಾಜ್ಯ ಬಿಜೆಪಿ ನಂಬಿ ಕುಳಿತಿದೆ. ಇದನ್ನೂ ಓದಿ: ಗುರುವಾರ ದಶಪಥ ಹೆದ್ದಾರಿ ಪರಿಶೀಲನೆ ನಡೆಸಲಿದ್ದಾರೆ ಗಡ್ಕರಿ – ಬಿಜೆಪಿ ನಾಯಕರ ನಡುವೆ ನಾಮಕರಣ ಜಟಾಪಟಿ

    ಈ ನಡುವೆ ಸಂಕ್ರಾಂತಿ ಬಳಿಕ ಮತ್ತೆ ಅಮಿತ್ ಶಾ 2 ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಜನವರಿ 2 ರಿಂದ ಆರಂಭವಾಗಿರುವ ಬೂತ್ ಅಭಿಯಾನ ಜನವರಿ 12ಕ್ಕೆ ಅಂತ್ಯಗೊಳ್ಳಲಿದೆ. ಅಲ್ಲದೆ ಸಂಕ್ರಾಂತಿ ಬಳಿಕ ವಿಜಯಸಂಕಲ್ಪ ಯಾತ್ರೆ ಆರಂಭವಾಗಿ ಜನವರಿ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ.

    ಬೂತ್ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ಅಮಿತ್ ಶಾ ವಿಜಯಸಂಕಲ್ಪ ಯಾತ್ರೆಯಲ್ಲೂ ಭಾಗವಹಿಸಲು ಪ್ಲ್ಯಾನ್ ಮಾಡಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಆಪರೇಷನ್ ಓಲ್ಡ್ ಮೈಸೂರು ಟಾಸ್ಕ್ ಕೊಟ್ಟಿರುವ ಅಮಿತ್ ಶಾಗೆ ರಾಜ್ಯ ಬಿಜೆಪಿ ನಾಯಕರು ಪ್ರಗತಿ ರಿಪೋರ್ಟ್ ಕೊಡಬೇಕಿದೆ.

    ಟಾಸ್ಕ್ ರಿಪೋರ್ಟ್ ಕೊಡುವುದರ ಜೊತೆ ಎಷ್ಟು ಅನುಷ್ಠಾನ ಎಂಬುದರ ಬಗ್ಗೆ ರಾಜ್ಯ ನಾಯಕರು ವರದಿ ಕೊಡಬೇಕು. ಒಟ್ಟಾರೆಯಾಗಿ ಜನವರಿಯಲ್ಲಿ ಬಿಜೆಪಿ ಎಲೆಕ್ಷನ್ ವಾರ್ಮ್‌ಅಪ್ ಬಳಿಕ ಫೆಬ್ರವರಿ ಮೊದಲ ವಾರದಿಂದ ಬಿಜೆಪಿಯ ಎಲೆಕ್ಷನ್ ಅಸಲಿ ಆಟ ಶುರು ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಸ್ತೆ, ಚರಂಡಿಯಂತಹ ಸಣ್ಣ ವಿಚಾರಗಳನ್ನು ಕೇಳ್ಬೇಡಿ, ಲವ್ ಜಿಹಾದ್‍ ಬಗ್ಗೆ ಮಾತನಾಡಿ: ಕಟೀಲ್‌

    ರಸ್ತೆ, ಚರಂಡಿಯಂತಹ ಸಣ್ಣ ವಿಚಾರಗಳನ್ನು ಕೇಳ್ಬೇಡಿ, ಲವ್ ಜಿಹಾದ್‍ ಬಗ್ಗೆ ಮಾತನಾಡಿ: ಕಟೀಲ್‌

    ಮಂಗಳೂರು: ಕರ್ನಾಟಕ ವಿಧಾನಸಭೆಯ ಚುನಾವಣೆಗೆ(Karnataka Election) ಹತ್ತಿರ ಇರುವುಗಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಆಡಿರುವ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿದೆ. ಮಂಗಳೂರಿನಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಭಿವೃದ್ಧಿ ವಿಚಾರವನ್ನು ಪಕ್ಕಕ್ಕಿಟ್ಟು ಧರ್ಮ ದಂಗಲ್ ಪ್ರಸ್ತಾಪ ಮಾಡಿದ್ದಾರೆ.

    ನಾನು ನಿಮಗೆ ಕೇಳಬಯಸುತ್ತೇನೆ. ರಸ್ತೆ, ಚರಂಡಿಯಂತಹ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಶಾಸಕರಲ್ಲಿ ಏನನ್ನು ಕೇಳ್ಬೇಡಿ. ವೇದವ್ಯಾಸ ಕಾಮತ್ ಸದನದಲ್ಲಿ ಮಾತನಾಡಲಿಲ್ಲ. ಕಟೀಲ್ ಸಂಸತ್‍ನಲ್ಲಿ ಮಾತನಾಡಲಿಲ್ಲ ಅಂತಾ ನೋಡ್ಬೇಡಿ. ನೀವು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಿ. ನಾವು ಜಿಹಾದ್ ತಡೆಯದಿದ್ರೆ ನಿಮಗೆ ಕಷ್ಟ ಆಗುತ್ತದೆ. ಲವ್ ಜಿಹಾದ್‍ಗೆ(Love Jihad) ಬ್ರೇಕ್ ಹಾಕಲು ಬಿಜೆಪಿ ಬೇಕು. ಅಮಿತ್ ಶಾ ಬೇಕು, ಮೋದಿ ಬೇಕು. ಕರ್ನಾಟಕದಲ್ಲಿ ಬೊಮ್ಮಾಯಿ ಬೇಕು. ನಿಮ್ಮನ್ನು ರಕ್ಷಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ. ನಮ್ಮನ್ನು ಮತ್ತೆ ಗೆಲ್ಲಿಸಲು ಕೆಲಸ ಮಾಡಿ ಎಂದು ನಳಿನ್ ಕುಮಾರ್ ಕಟೀಲ್ ಕರೆ ನೀಡಿದ್ದಾರೆ.

    ಡಿಕೆ ಶಿವಕುಮಾರ್(DK Shivakumar) ಮುಖ್ಯಮಂತ್ರಿಯಾದರೆ ಎಲ್ಲಾ ಭಯೋತ್ಪಾದಕರು ರಸ್ತೆಗೆ ಬರುತ್ತಾರೆ. ನಿಮಗೆ ಅದು ಬೇಕಾ ಎಂದು ಪ್ರಶ್ನಿಸಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ದೈವಗಳ ವಿಚಾರ ಮಾತನಾಡಿ ಮತ್ತೆ ಪರ ವಿರೋಧದ ಚರ್ಚೆ ಹುಟ್ಟು ಹಾಕಿದ ನಟ ಕಿಶೋರ್

    ಕಾಂಗ್ರೆಸ್‌ ಟೀಕೆ
    ಬಿಜೆಪಿ ತನ್ನ ವೈಫಲ್ಯಗಳನ್ನು, ಭ್ರಷ್ಟಾಚಾರವನ್ನು ಮರೆಮಾಚಲು ಬಳಸುವುದು ಕೋಮು ಕಲಹವನ್ನು. ರಾಜ್ಯದ ಅಭಿವೃದ್ಧಿ, ಉದ್ಯೋಗ, ಶಿಕ್ಷಣದ ವಿಷಯಗಳು ಬಿಜೆಪಿಗೆ ಸಣ್ಣ ವಿಷಯಗಳು. ಹೇಳಿಕೊಳ್ಳಲು ಅಭಿವೃದ್ಧಿಪರ ಸಾಧನೆಗಳಿಲ್ಲದ ಬಿಜೆಪಿ ಅವುಗಳ ಬಗ್ಗೆ ಮಾತೇ ಆಡಬೇಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ.

    ಬಿಜೆಪಿ ಅಧ್ಯಕ್ಷ ಕಟೀಲ್‌ ಅವರೇ, ಲವ್ ಜಿಹಾದ್ ಬಗ್ಗೆ ಆಮೇಲೆ ಮಾತಾಡುವಿರಂತೆ. ಬಿಟ್ ಕಾಯಿನ್ ಹಗರಣ, ಪಿಎಸ್‌ಐ ಅಕ್ರಮ, ಕೆಪಿಟಿಸಿಎಲ್ ಅಕ್ರಮ, ಸಾಲು ಸಾಲು ನೇಮಕಾತಿ ಅಕ್ರಮಗಳು, ಗುತ್ತಿಗೆದಾರರ ಆತ್ಮಹತ್ಯೆ, ರಸ್ತೆ ಗುಂಡಿಯ ಸಾವುಗಳು, ಹೆಚ್ಚಿದ ದಲಿತರ ಮೇಲಿನ ದೌರ್ಜನ್ಯ, ಮೊದಲು ಈ ವಿಷಯಗಳನ್ನು ಮಾತಾಡಿ ದಮ್ಮು, ತಾಕತ್ತು ತೋರಿಸಿ ಎಂದು ಕಾಂಗ್ರೆಸ್‌ ಸವಾಲು ಎಸೆದಿದೆ.

    Live Tv
    [brid partner=56869869 player=32851 video=960834 autoplay=true]

  • ಮೂರು ವಿಷಯಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ ಸಿಎಂ

    ಮೂರು ವಿಷಯಗಳ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಲಿದ್ದಾರೆ ಸಿಎಂ

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಅವರು ಇಂದು ದೆಹಲಿಗೆ(Delhi) ಪ್ರಯಾಣಿಸಿ ಹೈಕಮಾಂಡ್‌ ನಾಯಕರ ಜೊತೆ ಮೂರು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

    ಕರ್ನಾಟಕ ಚುನಾವಣೆಯಲ್ಲಿ(Karnataka Election) 150+ ಸ್ಥಾನವನ್ನು ಗೆಲ್ಲುವ ಗುರಿಯನ್ನು ಹಾಕಿರುವ ಬಿಜೆಪಿಗೆ(BJP) ಈಗ ಮೂರು ವಿಷಯಗಳು ತಲೆನೋವನ್ನು ತಂದಿಟ್ಟಿದೆ. ಚುನಾವಣೆ ತಿಂಗಳು ಹತ್ತಿರ ಬರುತ್ತಿದ್ದಂತೆ ಯಾವುದೇ ವಿಷಯವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಕಾರಣಕ್ಕೆ ಈ ಭೇಟಿ ಈಗ ಮಹತ್ವ ಪಡೆದಿದೆ. ಇದನ್ನೂ ಓದಿ: ರೆಡ್ಡಿ ಪಕ್ಷದಿಂದ ಬಿಜೆಪಿಗೆ ಸಂಕಷ್ಟ ಆಗುತ್ತಾ? – ಅಂಕಿ ಸಂಖ್ಯೆ ಏನು ಹೇಳುತ್ತೆ?

     
    3 ವಿಷಯಗಳು ಯಾವುದು?
    ಈಶ್ವರಪ್ಪ, ರಮೇಶ್ ಜಾರಕಿಹೊಳಿಗೆ ಮರಳಿ ಸಚಿವ ಸ್ಥಾನ ಕೊಡಿಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2ಎ ಪ್ರವರ್ಗ ಸೇರ್ಪಡೆ ಬಗ್ಗೆ ಹೈಕಮಾಂಡ್ ನಿಲುವು ಕೇಳಲಿದ್ದಾರೆ.  ಇದರ ಜೊತೆ  ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಸಿಎಂ ವಿವರ ನೀಡಲಿದ್ದಾರೆ.

    ಈಶ್ವರಪ್ಪ ಬಿಜೆಪಿಯ ಹಿರಿಯ ನಾಯಕ ಶಿವಮೊಗ್ಗದಲ್ಲಿ ಪ್ರಭಾವಿ ಹೊಂದಿದ್ದಾರೆ. ರಮೇಶ್‌ ಜಾರಕಿಹೊಳಿ ಬೆಳಗಾವಿ ಭಾಗದಲ್ಲಿ ಹಿಡಿತ ಹೊಂದಿದ್ದಾರೆ. ಈಶ್ವರಪ್ಪ ಕೆಲ ದಿನಗಳಿಂದ ಮಂತ್ರಿ ಸ್ಥಾನ ನೀಡದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಹೈಕಮಾಂಡ್‌ ನಡೆ ಏನು ಎನ್ನುವ ಕೂತೂಹಲ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ವೇದಿಕೆಯಲ್ಲೇ ಎಂಟಿಬಿ, ಶರತ್ ಬಚ್ಚೇಗೌಡ ಮಧ್ಯೆ ಟಾಕ್‌ ಫೈಟ್‌

    ವೇದಿಕೆಯಲ್ಲೇ ಎಂಟಿಬಿ, ಶರತ್ ಬಚ್ಚೇಗೌಡ ಮಧ್ಯೆ ಟಾಕ್‌ ಫೈಟ್‌

    ಆನೇಕಲ್‌: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೇಗೌಡ(Sharath Bachegowda) ಹಾಗೂ ಸಚಿವ ಎಂಟಿಬಿ ನಾಗರಾಜ್(MTB Nagaraj) ವೇದಿಕೆಯಲ್ಲಿ ಪರಸ್ಪರ ಮಾತಿನ ಚಕಮಕಿಯನ್ನು ನಡೆಸಿದ್ದಾರೆ.

    ಹೊಸಕೋಟೆ(Hosakote) ತಾಲೂಕಿನ ಮುತ್ಸಂದ್ರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗವಹಿಸಿದ್ದರು. ಸಚಿವರು ಭಾಷಣ ಮಾಡಿ ವೇದಿಕೆಯಿಂದ ಹೊರಡುತ್ತಿದ್ದ ವೇಳೆಯಲ್ಲಿ ಶಾಸಕರಾದ ಶರತ್ ಬಚ್ಚೇಗೌಡ ಹೊಸಕೋಟೆ ಸಮಸ್ಯೆಗಳನ್ನು ನಾನು ಹೇಳುತ್ತೇನೆ ಕೇಳಿಸಿಕೊಂಡು ಹೋಗಬೇಕು. ಮುಖ್ಯಮಂತ್ರಿಗಳಿಗೆ ಸಭೆಯಲ್ಲಿ ಇದನ್ನು ಹೇಳಿ ಬಗೆಹರಿಸಿ ಕೊಡಿ ಎಂದು ಹೇಳಿದ್ದಾರೆ. ಈ ವೇಳೆಯಲ್ಲಿ ಸಚಿವರು ಹಾಗೂ ಶಾಸಕ ಶರತ್ ಬಚ್ಚೇಗೌಡ ನಡುವೆ ವೇದಿಕೆಯ ಮೇಲೆ ವಾಕ್ ಸಮರ ನಡೆಯಿತು. ಇದನ್ನೂ ಓದಿ: ಸಿಟಿ ರವಿಗಿಂತ ಹೆಚ್ಚಿನ ಹಿಂದೂ ನಾನು – ಕರಾವಳಿಯಲ್ಲಿ ಸಿದ್ದರಾಮಯ್ಯ ಹಿಂದೂ ಜಪ

    ನಿಮ್ಮ ಭಾಷಣ ಕೇಳಿದ್ದೇನೆ. ನನ್ನ ಭಾಷಣದಲ್ಲಿ ಸಮಸ್ಯೆಗಳ ಪಟ್ಟಿಯನ್ನು ಓದುತ್ತೇನೆ ಕೇಳಿಸಿಕೊಂಡು ಸಿಎಂ ಸಭೆಯಲ್ಲಿಟ್ಟು ಪರಿಹರಿಸಿ ಅಂತಾ ಎಂಟಿಬಿಗೆ ವೇದಿಕೆಯಲ್ಲೇ ಠಕ್ಕರ್‌ ಕೊಟ್ಟಿದ್ದಾರೆ. ಇದಕ್ಕೆ ಮತ್ತೊಂದು ಮೈಕ್‌ನಲ್ಲಿ ಸಮಸ್ಯೆಗಳ ಪಟ್ಟಿಕೊಡಿ ಎಂದು ಹೇಳಿ ಎಂಟಿಬಿ ವೇದಿಕೆಯಿಂದ ಇಳಿದಿದ್ದಾರೆ.

    ಎಂಟಿಬಿ ಇಳಿಯತ್ತಿದ್ದಂತೆ ವೇದಿಕೆ ಮೇಲೆಯಿಂದಲೇ ಸಚಿವರಿಗೆ ಶರತ್ ಬಚ್ಚೇಗೌಡ ಧಿಕ್ಕಾರ ಕೂಗಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಸಭೆಗೆ ಬಂದಿದ್ದ ಜನರ ಬಳಿ ಸಮಸ್ಯೆ ಹೇಳಿಕೊಳ್ಳಬಾರದೇ? ಸಿಎಂ ಹತ್ರ ಇವರು ಕೆಲಸ ಮಾಡಿಸಲಿ ಎಂದು ತಿರುಗೇಟು ನೀಡಿದ್ದಾರೆ.


    ಕಂದಾಯ ಇಲಾಖೆ ವತಿಯಿಂದ ನಡೆಸುವ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಗೈರಾಗಿದ್ದರೂ ಕನಿಷ್ಠಪಕ್ಷ ಶಾಸಕರು ಹಾಗೂ ಸಚಿವರು ಸಮಸ್ಯೆಯನ್ನು ಬಗೆಹರಿಸಬಹುದು ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರು ಮನವಿ ಮಾಡಲು ಸ್ಥಳಕ್ಕೆ ಬಂದಿದ್ದರು. ಆದರೆ ಕಿತ್ತಾಟವನ್ನು ನೋಡಿದ ಸಾರ್ವಜನಿಕರು ಬೇಸರದಿಂದ ವಾಪಸ್ ತೆರಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್‌ ಸಮೀಕ್ಷೆ ರಿಸಲ್ಟ್‌ ಔಟ್‌

    ಬಿಜೆಪಿಗೆ 66-70 ಸ್ಥಾನ ಸಿಗುತ್ತೆ, ನಾವು ಗೆಲ್ತೀವಿ – ಡಿಕೆಶಿಯಿಂದ ಕಾಂಗ್ರೆಸ್‌ ಸಮೀಕ್ಷೆ ರಿಸಲ್ಟ್‌ ಔಟ್‌

    ಬೆಂಗಳೂರು: ನಮ್ಮ ಸಮೀಕ್ಷೆಯ ಪ್ರಕಾರ ಕರ್ನಾಟಕ ಚುನಾವಣೆಯಲ್ಲಿ(Karnataka Election) ನಾವು 136 ಕ್ಷೇತ್ರ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌(DK Shivakumr) ಹೇಳಿದ್ದಾರೆ.

    ಪ್ರೆಸ್‌ ಕ್ಲಬ್‌ನಲ್ಲಿ ಕರ್ನಾಟಕ ಚುನಾವಣೆ, ವೋಟರ್‌ ಐಡಿ ಹಗರಣ, ಪ್ರಸ್ತುತ ರಾಜಕೀಯ ವಿಚಾರದ ಬಗ್ಗೆ ಡಿಕೆಶಿ ಮಾತನಾಡುತ್ತಿದ್ದರು. ಕಾಂಗ್ರೆಸ್‌ಗೆ 136 ಸ್ಥಾನ ಸಿಗಲಿದೆ. ಬಿಜೆಪಿಗೆ 66 -70 ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕುಮಾರಸ್ವಾಮಿ(Kumarasswamy) ಜೊತೆ ಎಷ್ಟು ಅಂತಾ ಕುಸ್ತಿ ಮಾಡಲಿ? ಆ ವೇಳೆ ಅವಾಗ ಏನೋ ಹುಡುಗ ಇದ್ದೆ. ಕುಸ್ತಿ ಮಾಡಿದ್ದೆವು. ಈಗ ಕೂದಲು ಎಲ್ಲಾ ಬೆಳ್ಳಗೆ ಅಗಿದೆ. ಈವಾಗ ಕುಸ್ತಿ ಮಾಡೋಕೆ ಆಗುತ್ತಾ? ಆದರೆ ಅವರ ವಿರುದ್ದ ಸೈದ್ಧಾಂತಿಕವಾಗಿ ಕುಸ್ತಿ ಮಾಡುತ್ತೇನೆ ಎಂದು ಹೇಳಿ ಡಿಕೆಶಿ ನಕ್ಕಿದ್ದಾರೆ. ಇದನ್ನೂ ಓದಿ: ಮಗನಿಂದಲೇ ತಾಯಿಗೆ ಮಹಾಮೋಸ – ಮಂಚದ ಮೇಲೆ ಮಲಗಿಸಿಕೊಂಡು ಕೋರ್ಟ್‍ಗೆ ಕರೆತಂದ ಮಗಳು

    ಆಪರೇಷನ್ ಕಮಲಕ್ಕೆ ಒಳಗಾದ ಕೆಲ ಶಾಸಕರು,ಮರಳಿ ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆಗೆ, ಅದನ್ನ ಈಗ ಹೇಳಲು ಆಗಲ್ಲ. ಸಂಕ್ರಾಂತಿ ಬರಲಿ ಗೊತ್ತಾಗುತ್ತದೆ. ಗುಟ್ಟು ಗುಟ್ಟಾಗಿಯೇ ಇರುತ್ತದೆ ಎಂದು ಡಿಕೆಶಿ ಮಾರ್ಮಿಕ ಉತ್ತರ ನೀಡಿದರು.

    ಸಿದ್ದರಾಮಯ್ಯ(Siddaramaiah) ಜೊತೆಗಿನ ಕಿತ್ತಾಟದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಗ್ರೆಸ್ ಪಾರ್ಟಿ ಅವರವರ ಭಾವನೆಯನ್ನು ವಿಶ್ವಾಸ ವ್ಯಕ್ತಪಡಿಸುವುದಕ್ಕೆ ಅಡ್ಡಿ ಪಡಿಸುವುದಿಲ್ಲ. ಸಿದ್ದರಾಮಯ್ಯ ನಾನು ಕಿತ್ತಾಟ ಮಾಡಿದ ಸಣ್ಣ ಉದಾಹರಣೆ ತೋರಿಸಿ ನೋಡೋಣ. ನಿಮಗೆ ಬೇಕು ಎಂಬ ಕಾರಣಕ್ಕೆ ಸಿಎಂ ವಿಚಾರ ಮಾತನಾಡುತ್ತೀರಿ ಎಂದು ಮಾಧ್ಯಮಗಳನ್ನೇ ಡಿಕೆಶಿ ದೂರಿದರು.

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‌ನಲ್ಲಿ ಕನಕಪುರದ ಬಂಡೆ ಭಾಗವಾಗಿದೆ – ಶ್ರೀರಾಮುಲು ವ್ಯಂಗ್ಯ

    ಕಾಂಗ್ರೆಸ್‌ನಲ್ಲಿ ಕನಕಪುರದ ಬಂಡೆ ಭಾಗವಾಗಿದೆ – ಶ್ರೀರಾಮುಲು ವ್ಯಂಗ್ಯ

    ರಾಯಚೂರು: ಕಾಂಗ್ರೆಸ್ ಪಕ್ಷದಲ್ಲೀಗ ಸಿದ್ದರಾಮಯ್ಯ (Siddaramaiah) -ಡಿ.ಕೆ ಶಿವಕುಮಾರ್ (Dk Shivakumar) ಬಣಗಳು ಸೃಷ್ಟಿಯಾಗಿದ್ದು, ಕನಕಪುರದ ಬಂಡೆ ಒಂದು ಭಾಗವಾಗಿದೆ ಎಂದು ಸಚಿವ ಶ್ರೀರಾಮುಲು (Sriramulu) ವ್ಯಂಗ್ಯವಾಡಿದ್ದಾರೆ.

    ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಪರಿಶಿಷ್ಟ ಪಂಗಡಗಳ ವಸತಿ ಶಾಲೆ ಹಾಗೂ ನೂತನ ಬಸ್ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ (Congress) ಪಕ್ಷ ದೇಶದಲ್ಲಿ ಬ್ರೇಕ್ ಫೇಲ್ ಆದ ಪಕ್ಷ. ಈ ಬ್ರೇಕ್ ಇಲ್ಲದ ಪಾರ್ಟಿ ಯಾವತ್ತಾದರೂ ಒಂದು ದಿನ ಅಪಘಾತವಾಗಿ (Accident) ಜೀವ ಕಳೆದುಕೊಳ್ಳುತ್ತದೆ ಅಂತ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಮನಗರದಿಂದ ಅಯೋಧ್ಯೆಗೆ ಬೆಳ್ಳಿ ಇಟ್ಟಿಗೆ ಅರ್ಪಣೆ

    ಗುಜರಾತ್ ಮಾಡಲ್ ಗೊಂದಲ ಸೃಷ್ಟಿಸಲು ಕಾಂಗ್ರೆಸ್ಸಿಗರು ನಿಪುಣರು. ಅವರಿಗೆ ತಮ್ಮ ಪಕ್ಷದ ಗೊಂದಲಗಳನ್ನೇ ಸರಿಪಡಿಸಿಕೊಳ್ಳಲು ಆಗ್ತಿಲ್ಲ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರಿಂದ ಸೇರಿ ಪಾರ್ಟಿಯಲ್ಲಿ ಬಣಗಳು ಸೃಷ್ಟಿಯಾಗಿವೆ. ಒಂದನೇ ಭಾಗ ಕನಕಪುರ ಬಂಡೆ. ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರದ್ದು ಮತ್ತೊಂದು ಭಾಗ. ತುಮಕೂರು ಭಾಗದಲ್ಲಿ ಪರಮೇಶ್ವರ್ ಅವರ ಭಾಗ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಬಳಿಕ ಅವರದೊಂದು ಗುಂಪಾಗಿದೆ. ಈ ಗುಂಪುಗಳು ಸೃಷ್ಟಿಯಾಗಿ ಕಾಂಗ್ರೆಸ್ ಕೋಮಾ ಸ್ಥಿತಿಯಲ್ಲಿದೆ ಎಂದಿದ್ದಾರೆ.

    ಕಾಂಗ್ರೆಸ್ ಇಡೀ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಆದ್ರೆ ಬಿಜೆಪಿ (BJP) ಬಹಳ ಸ್ಪಷ್ಟವಾಗಿದೆ. 2023ರಲ್ಲಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಸದನದ ಬಗ್ಗೆ ಹಗುರವಾಗಿ ಯಾರೂ ಮಾತನಾಡಬಾರದು, ಅದನ್ನು ಸಹಿಸಲಸಾಧ್ಯ: ಕಾಗೇರಿ

    Live Tv
    [brid partner=56869869 player=32851 video=960834 autoplay=true]

  • ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ರಾಜ್ಯ ಚುನಾವಣೆ: ಶಾಸಕ ಕೆ.ಜಿ ಬೋಪಯ್ಯ

    ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ರಾಜ್ಯ ಚುನಾವಣೆ: ಶಾಸಕ ಕೆ.ಜಿ ಬೋಪಯ್ಯ

    ಮಡಿಕೇರಿ: ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ಕರ್ನಾಟಕ ಚುನಾವಣೆ (Karnataka Election) ನಡೆಯುತ್ತದೆ ಎಂದು ರಾಜ್ಯ ಚುನಾವಣೆ ಬಗ್ಗೆ ಮಾಜಿ ಸ್ಪೀಕರ್, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ (KG Bopaiah) ಸುಳಿವು ನೀಡಿದರು.

    ಗುಜರಾತ್ ಚುನಾವಣೆ (Gujarat Election) ಮುಗಿದ ಬಳಿಕ ಕರ್ನಾಟಕದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯ ಚುನಾವಣೆ ಬಗ್ಗೆ ಮಡಿಕೇರಿಯಲ್ಲಿ (Madikeri) ‌ಮಾತನಾಡಿದ ಅವರು‌, ಏಪ್ರಿಲ್ 23 ಅಥವಾ ಮೇ ಮೊದಲ ವಾರದಲ್ಲಿ ಎಲೆಕ್ಷನ್ ಇದೆ. ನಮಗೆ ಮೊದಲೇ ಗೊತ್ತಿತ್ತು. ಹೀಗಾಗಿ ಕೊಡಗು ಜಿಲ್ಲೆಯಲ್ಲೂ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಪಕ್ಷ ಚುನಾವಣೆಗೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಸನ್ನದ್ಧವಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಭಾರತದ ಪ್ರಥಮ 3ಡಿ ಬಯೋಪ್ರಿಂಟಿಂಗ್‌ ಉತ್ಕೃಷ್ಟತಾ ಕೇಂದ್ರಕ್ಕೆ ಸಚಿವ ಅಶ್ವಥ್‌ ನಾರಾಯಣ ಚಾಲನೆ

    ಗುಜರಾತ್ (Gujarat ) ಮಾದರಿಯಲ್ಲಿ ರಾಜ್ಯದಲ್ಲೂ ಹೊಸ ಮುಖಗಳಿಗೆ ಆದ್ಯತೆ ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಅದು ಪಕ್ಷದ ನಿರ್ಧಾರ ಇದರ ಬಗ್ಗೆ ಹೆಚ್ಚು ಮಾತಾನಾಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿ ಆ್ಯಕ್ಟಿವ್ ಇದ್ದಾರೆ, ರಾತ್ರಿ-ಹಗಲು ಪಕ್ಷಕ್ಕಾಗಿ ಕೆಲಸ ಮಾಡ್ತಿದ್ದಾರೆ: ಸತೀಶ್ ಜಾರಕಿಹೊಳಿ

    Live Tv
    [brid partner=56869869 player=32851 video=960834 autoplay=true]

  • ನನಗೆ ಟಿಕೆಟ್ ಕೊಟ್ರೆ ಮಾತ್ರ ಬಿಜೆಪಿ ಗೆಲ್ಲುತ್ತೆ – ಕೆ.ಎಂ ಮುನಿಯಪ್ಪ

    ನನಗೆ ಟಿಕೆಟ್ ಕೊಟ್ರೆ ಮಾತ್ರ ಬಿಜೆಪಿ ಗೆಲ್ಲುತ್ತೆ – ಕೆ.ಎಂ ಮುನಿಯಪ್ಪ

    ತುಮಕೂರು: ಕೊರಟಗೆರೆ ಕ್ಷೇತ್ರದಲ್ಲಿ ನಡೆದ ಬಿಜೆಪಿ (BJP) ಜನಸಂಕಲ್ಪ ಯಾತ್ರೆಗೆ ಉತ್ತಮ ಸ್ಪಂದನೆ ದೊರೆತ ಬೆನ್ನಲ್ಲೇ ಟಿಕೆಟ್ (Election Ticket) ಫೈಟ್ ಜೋರಾಗಿದೆ. ಆಕಾಂಕ್ಷಿಗಳಾದ ಕೆ.ಎಂ.ಮುನಿಯಪ್ಪ (KM Muniyappa) ಹಾಗೂ ಅನಿಲ್ ಕುಮಾರ್ ನಡುವೆ ಟಿಕೆಟ್ ಗಾಗಿ ಫೈಟ್ ನಡೆಯುತ್ತಿದೆ.

    ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಎಂ.ಮುನಿಯಪ್ಪ, ಕೊರಟಗೆರೆ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದ ಗೆಲುವಿಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ: ಖರ್ಗೆ

    ಜನಸಂಕಲ್ಪ ಯಾತ್ರೆಗೆ ಜನಸ್ತೋಮವೇ ಹರಿದು ಬಂದಿದ್ದು ನನ್ನ ಪರಿಶ್ರಮದ ಪ್ರತಿಫಲ. ಕಳೆದ ನಾಲ್ಕು ವರ್ಷಗಳಿಂದ ನಾನು ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರೊಂದಿಗೆ ವಿಧಾನಸಭಾ ಕ್ಷೇತ್ರದಲ್ಲಿ ಬಂದು ಕೆಲಸ ಮಾಡುತ್ತಿದ್ದೇನೆ. ಈ ನನ್ನ ಪರಿಶ್ರಮದಿಂದಾಗಿ ಸಾಗರೋಪಾದಿಯಲ್ಲಿ ಜನರು ಯಲಹಂಕ ಯಾತ್ರೆಗೆ ಹರಿದು ಬಂದು ಯಶಸ್ವಿಗೊಳಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಟಿಆರ್‌ಎಸ್‌ ಅಲ್ಲ, ಇನ್ಮುಂದೆ ಬಿಆರ್‌ಎಸ್‌ – ಕೆಸಿಆರ್‌ ಪಕ್ಷದ ಹೆಸರು ಬದಲಾವಣೆಗೆ ಚುನಾವಣಾ ಆಯೋಗ ಒಪ್ಪಿಗೆ

    ಯಾರಿಗೆ ಟಿಕೆಟ್ ಕೊಟ್ಟರೂ ಕೊರಟಗೆರೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ಮಾತು ಸುಳ್ಳು. ನನಗೆ ಟಿಕೆಟ್ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲುತ್ತೆ, ಇಲ್ಲದಿದ್ರೆ ಸೋಲುತ್ತದೆ. ಹೈಕಮಾಂಡ್ ನನಗೆ ಟಿಕೆಟ್ ಕೊಡುವ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]