Tag: Karnataka Election

  • ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ನಾನೇ ಅಭ್ಯರ್ಥಿ: ಭವಾನಿ ರೇವಣ್ಣ

    ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ನಾನೇ ಅಭ್ಯರ್ಥಿ: ಭವಾನಿ ರೇವಣ್ಣ

    ಹಾಸನ: ತೀವ್ರ ಕುತೂಹಲ ಕೆರಳಿಸಿರುವ ಹಾಸನ (Hassan) ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ (JDS) ಅಭ್ಯರ್ಥಿ ಯಾರು ಎಂಬ ಗೊಂದಲ ಮುಂದುವರಿದಿರುವಾಗಲೇ, ನಾನೇ ಅಭ್ಯರ್ಥಿ ಎಂದು ಜಿ.ಪಂ.ಮಾಜಿ ಸದಸ್ಯೆ ಭವಾನಿ ರೇವಣ್ಣ (Bhavani Revanna) ಹೇಳಿಕೊಂಡಿದ್ದಾರೆ.

    ಹಾಸನ ತಾಲೂಕಿನ ಸಾಲಗಾಮೆ ಹೋಬಳಿ ಕಕ್ಕೇಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಣ್ಣಪ್ಪ ಸ್ವಾಮಿ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ಪಲ್ಪ ದಿನಗಳಲ್ಲೇ ನನ್ನ ಹೆಸರು ಘೋಷಣೆಯಾಗಲಿದೆ ಎಂದಿದ್ದಾರೆ.

    ಜನರ ಪರಿಚಯ ಇದ್ದರೆ, ಊರಿನ ಪರಿಚಯ ಆಗುತ್ತದೆ. ಮುಂದಿನ ದಿನಗಳಲ್ಲಿ ಕೆಲಸ ಮಾಡಲು ನನಗೂ ಒಳ್ಳೆಯದು, ಅನುಕೂಲ ಆಗಲಿದೆ. ಅದಕ್ಕಾಗಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಕೆಲಸ ಮಾಡಲು, ಭಗವಂತ ನನಗೆ ಆಶೀರ್ವಾದ ಮಾಡಲಿ ಎಂದು ಬೇಡುವೆ. ಮತ್ತೊಮ್ಮೆ ಈ ಊರಿಗೆ ಬರುವೆ, ನಿಮ್ಮನ್ನು ಮತ್ತೆ ಭೇಟಿ ಮಾಡುವೆ ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮೆಟ್ರೋ ಮೊಂಡಾಟ- ಅನಾಹುತ ಆಗಿದ್ರೂ ಕಳ್ಳ ಮಾರ್ಗದಲ್ಲಿ ಸೆಟ್ಲ್ಮೆಂಟ್!

    ಮಾತಿನ ಆರಂಭದಲ್ಲಿ ಗ್ರಾಮಕ್ಕೆ ಈ ಹಿಂದೆ ಮಾಜಿ ಸಚಿವ ರೇವಣ್ಣ ಅವರು ಮಾಡಿರುವ ಕೆಲಸ ಕಾರ್ಯಗಳನ್ನು ಪ್ರಸ್ತಾಪಿಸಿರುವ ಭವಾನಿ, ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ನಮ್ಮ ಕೈತಪ್ಪಿ ಹೋಗಿದ್ದರಿಂದ ಅನೇಕ ಕೆಲಸ ಕಾರ್ಯಗಳು ಹಾಗೆಯೇ ಉಳಿದಿವೆ. ಅವುಗಳನ್ನು ಪೂರ್ಣಗೊಳಿಸಬೇಕಿದೆ. ಮುಂದಿನ 90 ದಿನಗಳಲ್ಲಿ ಚುನಾವಣೆ ಮುಗಿದು ಹೋಗಲಿದ್ದು, ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ: ಆವರಣದಲ್ಲೇ ವಿದ್ಯಾರ್ಥಿನಿ ಕೊಲೆ ಪ್ರಕರಣ- ಬೆಂಗಳೂರು ಗ್ರಾಮಾಂತರ ಕಾಲೇಜುಗಳಿಗೆ ಹೊಸ ಗೈಡ್‍ಲೈನ್ಸ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್ದರಾಮಯ್ಯಗೆ ಪಾಕಿಸ್ತಾನವೇ ಸೇಫ್ ಜಾಗ: ಸಿಟಿ ರವಿ ವ್ಯಂಗ್ಯ

    ಸಿದ್ದರಾಮಯ್ಯಗೆ ಪಾಕಿಸ್ತಾನವೇ ಸೇಫ್ ಜಾಗ: ಸಿಟಿ ರವಿ ವ್ಯಂಗ್ಯ

    ಹಾವೇರಿ: ನನ್ನ ಲೆಕ್ಕಾಚಾರದ ಪ್ರಕಾರ ಸಿದ್ದರಾಮಯ್ಯ (Siddaramaiah) ಅವರಿಗೆ ಸೇಫ್ ಎಂದರೆ ಪಾಕಿಸ್ತಾನ (Pakistan). ಅವರ ಮನಸ್ಥಿತಿಗೆ ಸೇಫ್ ಆಗಿರೋದು ಪಾಕಿಸ್ತಾನವೇ ಎಂದು ವಿಧಾನಸಭಾ ಚುನಾವಣೆಗೆ (Assembly election) ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟಕ್ಕೆ ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.

    ಪಾಕಿಸ್ತಾನದಲ್ಲಿ ಮೋದಿ, ಬೊಮ್ಮಾಯಿ, ಯಡಿಯೂರಪ್ಪನವರು ಇರುವುದಿಲ್ಲ. ಅಲ್ಲಿ ಹೋದರೆ ಕಾಟ ಕೊಡೋದಕ್ಕೆ ಡಿಕೆ ಶಿವಕುಮಾರ್, ಖರ್ಗೆಯೂ ಇರಲ್ಲ. ಹೀಗಾಗಿ ಪಾಕಿಸ್ತಾನವೇ ಅವರಿಗೆ ಸೇಫ್ ಜಾಗ ಎಂದು ಸಿಟಿ ರವಿ ಲೇವಡಿ ಮಾಡಿದ್ದಾರೆ.

    ಬಿಜೆಪಿ ಹಾಲಿ ಶಾಸಕರೇ ಕಾಂಗ್ರೆಸ್ ಸೇರಲು ರೆಡಿ ಇದ್ದಾರೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ಕಿಡಿಕಾರಿದ ಅವರು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಕಾಂಗ್ರೆಸ್‌ನವರೂ ತುದಿಗಾಲ ಮೇಲೆ ನಿಂತಿದ್ದಾರೆ. ನಾವು ಬೇಕೆಂದರೆ ಸೆಲೆಕ್ಟ್ ಮಾಡಿ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಗುಜರಾತ್‌ನಲ್ಲಿ 77 ಸ್ಥಾನಗಳಲ್ಲಿ ಕಾಂಗ್ರೆಸ್ ಏನು ಸಾಧನೆ ಮಾಡಿದೆ? ಉತ್ತರ ಪ್ರದೇಶದಲ್ಲಿ 2 ಸ್ಥಾನ ಗೆದ್ದಿದೆ. ಕರ್ನಾಟಕದಲ್ಲಿ ನೋಡಿ, ಕಾಂಗ್ರೆಸ್‌ನಲ್ಲಿ ಮಹಾಭಾರತವೇ ಶುರುವಾಗುತ್ತದೆ ಎಂದರು.

    ನಾವು ಚಿಕ್ಕಮಗಳೂರು ಉತ್ಸವ ಮಾಡಿದ್ದೆವು. ಯಾರಿಗೂ ಸಾರಿಗೆಯ ವ್ಯವಸ್ಥೆ ಮಾಡಿರಲಿಲ್ಲ. ಸ್ವಯಂ ಪ್ರೇರಿತರಾಗಿ ಜನರು ಉತ್ಸವಕ್ಕೆ ಬಂದಿದ್ದರು. ಇದು ಜನರ ತಾಕತ್ತು. ರಾತ್ರಿಯವರೆಗೂ ಜನರು ಕಾರ್ಯಕ್ರಮ ನೋಡಿದ್ದರು. 6-7 ಸಾವಿರ ಜನ ಸೇರಿಸಿದರೆ ಪ್ರಜಾಧ್ವನಿ ಹೇಗಾಗುತ್ತೆ? ಇದು ಪ್ರಜಾಧ್ವನಿ ಅಲ್ಲ, ಕಾಂಗ್ರೆಸ್ ಧ್ವನಿ. ಪ್ರಜೆಗಳು ನಮ್ಮ ಜೊತೆ ಇರೋದಕ್ಕೆ ಕಾಂಗ್ರೆಸ್‌ನವರಿಗೆ ಭಯ ಇದೆ. ಪ್ರಜೆಗಳನ್ನು ಲೂಟಿ ಮಾಡಿದ ಕಾಂಗ್ರೆಸ್‌ನವರು ನಮ್ಮ ವಿರುದ್ಧ ಮಾತನಾಡುತ್ತಾರೆ. ಹೀಗಾಗಿ ಅವರದು ಸೌಂಡು, ನಮ್ಮದು ಗ್ರೌಂಡು. ಕಾಂಗ್ರೆಸ್‌ನವರು ಯಾವಾಗಲೂ ಸೌಂಡ್ ಮಾಡ್ತಾರೆ ಎಂದರು.

    ಮೋದಿಯವರು ಪ್ರಧಾನಿ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು. ಆದರೆ ಮೋದಿ 2 ಬಾರಿ ಗೆಲ್ಲಲಿಲ್ಲವಾ? ಜೆಡಿಎಸ್ – ಕಾಂಗ್ರೆಸ್ ಸರ್ಕಾರ ಇತ್ತು. ಯಾರು ಅಧಿಕಾರಕ್ಕಾಗಿ ಬಿಜೆಪಿಗೆ ಬಂದು ಸೇರಿಕೊಂಡರು? ಮೋದಿಯವರ ಆಡಳಿತ ನೋಡಿ ಕರ್ನಾಟಕದಲ್ಲಿಯೂ ಬಿಜೆಪಿ ಗೆಲ್ಲುತ್ತದೆ ಎನ್ನುವುದು ಗೊತ್ತಿದೆ. ಮುಳುಗುವ ಹಡಗಿನಲ್ಲಿ ಯಾರು ಇರ್ತಾರೆ? ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನ ನಂಬುವ ಪರಿಸ್ಥಿತಿಯಲ್ಲಿ ಜನರಿಲ್ಲ: ಹೆಚ್‍ಡಿಕೆ

    ನಮ್ಮದು ತತ್ವದ ರಾಜಕಾರಣ, ಹಿಂದುತ್ವದ ರಾಜಕಾರಣ. ನಾವು ಜಾತಿ ರಾಜಕಾರಣ ಮಾಡಿಲ್ಲ. ಚುನಾವಣೆ ಹಿಂದೂಗಳು ನಾವಲ್ಲ. ಇದಕ್ಕಾಗಿ ತರಹೇವಾರಿ ವೇಷ ನಾವು ಹಾಕಲ್ಲ. ಅಭಿವೃದ್ಧಿ ಕೆಲಸಕ್ಕೆ ಬಂದಾಗ, ಕಷ್ಟ ಅಂತ ಬಂದಾಗ ಯಾವ ಜಾತಿನೂ ನಾವು ನೋಡಿಲ್ಲ. ಅದಕ್ಕಾಗಿ 4 ಬಾರಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನೆಂಟರು ಎಂದರೆ ಊಟ ಹಾಕ್ತೀವಿ, ಕೋಳಿ ಸಾರು, ಚೆನ್ನರಾಯ ಪಟ್ಟಣ ಮಟನ್ ಸಾರು, ಇದನ್ನು ತಿನ್ನಲ್ಲ ಎಂದರೆ ಪುಲ್ಚಾರು ಹಾಕುತ್ತೇವೆ. ಹೀಗಾಗಿ ನಾವು ನೆಂಟರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಆದರೆ ವೋಟ್‌ಗಳನ್ನು ಮಾತ್ರ ಬಿಲ್ಕುಲ್ ಗೆಲ್ಲೋಕೆ ಆಗಲ್ಲ. ಚಿಕ್ಕಮಗಳೂರು ಜನರು ಕಾಂಗ್ರೆಸ್‌ಗೆ ವೋಟ್ ಹಾಕಲ್ಲ ಎಂದರು.

    ಶಂಕರ್ ಅನರ್ಹ ಎಂದಾಗ ಎಂಎಲ್‌ಸಿ ಮಾಡಿದ್ದೇವೆ. ಅವರಿಗೆ ಮಂತ್ರಿ ಆಗಬೇಕು ಎಂಬ ಆಸೆ ಇತ್ತು. ತಾಳ್ಮೆಯಿಂದ ಇದ್ದು ಬಿಜೆಪಿಯಲ್ಲಿ ಉಳಿದುಕೊಂಡು ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೆ ಬಡ್ಡಿ ಸಮೇತ ಬರುತ್ತದೆ. ಬಿಟ್ಟು ಹೋದರೆ ಡೆಪಾಸಿಟ್ ಕೂಡಾ ಹೋಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದಲ್ಲಿ PHD ಪಡೆದಿದ್ದಾರೆ, ಬೆಂಗ್ಳೂರನ್ನ ಹಾಳು ಮಾಡಿದ್ದಾರೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಿಟ್ಲರ್ ಸ್ವಲ್ಪ ದಿನ ಮೆರೆದ ಮೇಲೆ ಏನಾಯ್ತು? ಮೋದಿ 100 ಬಾರಿ ಬಂದರೂ ಬಿಜೆಪಿ ಬರಲ್ಲ: ಸಿದ್ದರಾಮಯ್ಯ

    ಹಿಟ್ಲರ್ ಸ್ವಲ್ಪ ದಿನ ಮೆರೆದ ಮೇಲೆ ಏನಾಯ್ತು? ಮೋದಿ 100 ಬಾರಿ ಬಂದರೂ ಬಿಜೆಪಿ ಬರಲ್ಲ: ಸಿದ್ದರಾಮಯ್ಯ

    ಉಡುಪಿ: ಹಿಟ್ಲರ್ ಸ್ವಲ್ಪ ದಿನ ಮೆರೆದ ಆಮೇಲೆ ಏನಾಯ್ತು? ಮೋದಿ (Narendra Modi) 100 ಬಾರಿ ಬಂದರೂ ಬಿಜೆಪಿ (BJP) ಬರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಅದರ ಅಜೆಂಡಾದ ಕ್ಲಿಯರ್ ಇದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಜನರು ಅದನ್ನು ನಂಬುವುದಿಲ್ಲ. ಹಿಟ್ಲರ್ (Hitler) ಸ್ವಲ್ಪ ದಿನ ಮೆರೆದ ಆಮೇಲೆ ಏನಾಯ್ತು? ಮುಸಲೋನಿಯ ಕಥೆ ಏನಾಯ್ತು? ಫ್ರ್ಯಾಂಕೋ ಏನಾದ? ಸ್ವಲ್ಪ ದಿನ ಮೆರೆಯುತ್ತಾರೆ. ಆ ಮೇಲೆ ಜನ ಬುದ್ಧಿ ಕಳಿಸುತ್ತಾರೆ ಎಂದರು.

    ಬಿಜೆಪಿಗೆ ಅಭಿವೃದ್ಧಿ ಕೆಲಸದಲ್ಲಿ ನಂಬಿಕೆ ಇಲ್ಲ. ಅಭಿವೃದ್ಧಿ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಕಟೀಲ್ ಹೇಳಿದ್ದರು. ಅಭಿವೃದ್ಧಿ ಬಡವರ ಕಾರ್ಯಕ್ರಮದ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಬಿಜೆಪಿಯಿಂದ ಕರಾವಳಿ, ಕರ್ನಾಟಕ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ಬಿಜೆಪಿಯ ಮನಸ್ಸು ಮತ್ತು ಮನಸ್ಥಿತಿ ಜನಕ್ಕೆ ಅರ್ಥ ಆಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಮತ್ತೆ ಪ್ರಧಾನಿ ರಾಜ್ಯಕ್ಕೆ ಪ್ರವಾಸ ಕೈಗೊಳ್ಳುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೋದಿ ದೇಶದ ಪ್ರಧಾನಿ. ಅವರು ರಾಜ್ಯಕ್ಕೆ ಬರಬಹುದು. ಆದರೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಬಂದರೆ ಅಸಾಧ್ಯ. ಕರ್ನಾಟಕಕ್ಕೆ 100 ಬಾರಿ ಬಂದರು ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ರಾಜ್ಯದ ರಾಜ್ಯದ ಜನಕ್ಕೆ ಬಿಜೆಪಿ ಮೇಲೆ ಭ್ರಮನಿರಸನವಾಗಿದೆ ಎಂದು ವ್ಯಂಗ್ಯವಾಡಿದರು.

    ಡಿ ಪಾರ್ಟಿ ಎಸ್ ಪಾರ್ಟಿ ಆರ್. ಅಶೋಕ್ ಆರೋಪ ವಿಚಾರವಾಗಿ ಮಾತನಾಡಿ, ಎಸ್ ಪಾರ್ಟಿ, ಡಿ ಪಾರ್ಟಿ ಇದೆಲ್ಲಾ ಸುಮ್ಮನೆ ಹುಟ್ಟು ಹಾಕಿದ ಸುಳ್ಳಾಗಿದ್ದು, ಶಾಸಕರಿಗೆ 500 600 ಕೋಟಿ ಕೊಡೋದು ಎಂದರೆ ನಂಬಲು ಸಾಧ್ಯವಿಲ್ಲ. ಆರೋಪಗಳನ್ನು ನಂಬಲು ಸಾಧ್ಯವಿಲ್ಲ ಇದೆಲ್ಲ ಸುಳ್ಳು. ಬರಿ ಸುಳ್ಳು. ಯತ್ನಾಳ್ ಮೇಲೆ ಬಿಜೆಪಿ ಯಾಕೆ ಕ್ರಮ ಕೈಗೊಂಡಿಲ್ಲ? ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆಯೋ ಇಲ್ಲವೋ? ನಡ್ಡಾ ಕಾರ್ಯಕ್ರಮಕ್ಕೆ ಹೋಗಿಲ್ಲ ಯಾಕೆ? ಅಶೋಕ ಹೇಳಿಬಿಟ್ಟ ಕೂಡಲೇ ಗುಂಪುಗಾರಿಕೆ ಆಗಲು ಸಾಧ್ಯವೇ? ರಾಜ್ಯದಲ್ಲಿ ಕನಿಷ್ಠ 130 ಗರಿಷ್ಠ 150 ಸೀಟ್ ಗೆಲ್ಲುತ್ತೇವೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಕಾವು ಪಡೆದ ರಾಜಕೀಯ – ಕನಕಪುರದ ಬಂಡೆ ಮದ್ದೂರಿನಲ್ಲಿ ಸ್ಪರ್ಧೆ?

    ಅಮಿತ್ ಶಾರಿಂದ ಆಪರೇಷನ್ ಹಳೆ ಮೈಸೂರು ವಿಚಾರಕ್ಕೆ ಪ್ರತಿಕ್ರಿಯಿಸಿ, ಹೇಳ್ಬಿಟ್ಟ ತಕ್ಷಣ ಆಪರೇಷನ್ ಆಗಿಬಿಡುತ್ತಾ? ಬಾಯಲ್ಲಿ ಹೇಳಿದ್ದೆಲ್ಲ ಆಗಿ ಬಿಡಲು ಸಾಧ್ಯವೇ? ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಎಷ್ಟು ಬಾರಿ ಹೋದರು ಅಲ್ಲಿ ಏನಾಯ್ತು? ಮಮತಾ ಬ್ಯಾನರ್ಜಿಯನ್ನು ಅಧಿಕಾರಿಂದ ಕೆಳಗಿಳಿಸಲು ಸಾಧ್ಯವಾಯಿತಾ? ಕರ್ನಾಟಕಕ್ಕೆ ಬಂದರೂ ಅಮಿತ್ ಶಾಗೆ ಅದೇ ಗತಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕೋಲಾರದಲ್ಲಿ ಸಿದ್ದು ಸೋಲಿಸಲು ಬೂತ್ ಮಟ್ಟದಿಂದಲೇ ಖೆಡ್ಡಾ ತೋಡಲು ಬಿಜೆಪಿ ಸ್ಕೆಚ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮತ ಭೇಟೆ – ಏನಿದು ಬಿಜೆಪಿ ರಣತಂತ್ರ?

    ಕಲ್ಯಾಣ ಕರ್ನಾಟಕದಲ್ಲಿ ಮೋದಿ ಮತ ಭೇಟೆ – ಏನಿದು ಬಿಜೆಪಿ ರಣತಂತ್ರ?

    ಬೆಂಗಳೂರು: ಕಲ್ಯಾಣ ಕರ್ನಾಟಕವನ್ನು (Kalyana Karnataka) ಗೆಲ್ಲಲು ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಬಾರಿ ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಅಖಾಡಕ್ಕೆ ಇಳಿದಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಗೆ (Mallikarjun Kharge) ಸೋಲಿನ ರುಚಿ ತೋರಿಸಿರುವ ಪ್ರಧಾನಿ ಮೋದಿ ಈಗ ಎಐಸಿಸಿ ಅಧ್ಯಕ್ಷರಾದ ಹಿನ್ನೆಲೆ ಅವರ ತವರಲ್ಲೇ ಕಮಲ ಅರಳಿಸಲು ಪ್ಲ್ಯಾನ್ ಮಾಡಿದ್ದಾರೆ.

    ಕರಾವಳಿ, ಮಧ್ಯ ಕರ್ನಾಟಕದಲ್ಲಿ ಬಿಜೆಪಿ (BJP) ಹೆಚ್ಚು ಸ್ಥಾನ ಪಡೆದರೂ ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಬುಟ್ಟಿಗೆ ಕ್ಷೇತ್ರಗಳು ಹೆಚ್ಚು ಬರುತ್ತಿಲ್ಲ. ಬಿಜೆಪಿ ಹೆಚ್ಚು ಸ್ಥಾನ ಪಡೆದಾಗಲೂ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‌ (Congress) ಹೆಚ್ಚು ಸ್ಥಾನ ಪಡೆದಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಬಿಜೆಪಿ ವಿಫಲವಾಗಿತ್ತು. ಇದನ್ನೂ ಓದಿ: ಯಾದಗಿರಿ, ಕಲಬುರಗಿಗೆ ಮೋದಿ – ಎಲ್ಲಿ, ಎಷ್ಟು ಗಂಟೆಗೆ ಏನು ಕಾರ್ಯಕ್ರಮ?

    ಕಲ್ಯಾಣ ಕರ್ನಾಟಕದಲ್ಲಿ 18 ಸ್ಥಾನಗಳನ್ನ ಗೆದ್ದು ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಆದರೆ ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್‍ಗಿಂತ ಐದಾರು ಸೀಟ್ ಹೆಚ್ಚು ಗೆಲ್ಲಬೇಕೆಂಬ ಹೈಕಮಾಂಡ್‌ ಟಾಸ್ಕ್ ನೀಡಿದೆ. ಮುಂಬೈ ಕರ್ನಾಟಕದ ರೀತಿ ಕಲ್ಯಾಣ ಕರ್ನಾಟಕದಲ್ಲೂ ಗೆದ್ದರೆ ಸ್ವತಂತ್ರ ಅಧಿಕಾರದ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

    ಯಡಿಯೂರಪ್ಪ (Yediyurappa) ನಾಯಕತ್ವ ಇದ್ದರೂ ಈ ಭಾಗದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಈಗ ಯಡಿಯೂರಪ್ಪ ನಾಯಕತ್ವದಿಂದ ನಿರ್ಗಮಿಸಿರುವಾಗ ಪರಿಸ್ಥಿತಿ ಇನ್ನಷ್ಟು ಭಿನ್ನ. ಹಾಗಾಗಿ ಇರುವ ಸೀಟ್ ಉಳಿಸಿಕೊಳ್ಳುವ ಜೊತೆಗೆ ಮತ್ತಷ್ಟು ಸೀಟ್‌ ಗೆಲ್ಲಲು ಟಾರ್ಗೆಟ್‌ ಹಾಕಿಕೊಂಡಿದೆ. ಈ ಕಾರಣಕ್ಕೆ ಈ ಬಾರಿಯ ಚುನಾವಣೆಯಲ್ಲಿ ಶತಾಯಗತಾಯ ಕಮಲ ಇಲ್ಲಿ ಅರಳಿಸಲೇಬೇಕೆಂದು ಬಿಜೆಪಿ ಪಣತೊಟ್ಟಿದೆ. ಒಟ್ಟು 41 ಕ್ಷೇತ್ರಗಳಲ್ಲಿ 35 ಸ್ಥಾನದಲ್ಲಿ ಕಮಲ ಅರಳಿಸಲು ಈಗಾಗಲೇ ಬ್ಲೂ ಪ್ರಿಂಟ್ ತಯಾರಾಗಿದೆ. ಆ ಬ್ಲ್ಯೂ ಪ್ರಿಂಟ್ ಜಾರಿ ತರಲು ಮೋದಿ ಖುದ್ದು ಅಖಾಡಕ್ಕೆ ಇಳಿದಿದ್ದಾರೆ.

    ಲಿಂಗಾಯತ ಸಮುದಾಯದ ಜೊತೆ ಪರಿಶಿಷ್ಟ ಜಾತಿ ಸೆಳೆಯಲು ಬಿಜೆಪಿ ಪ್ಲ್ಯಾನ್‌ ಮಾಡಿಕೊಂಡಿದೆ. ಲಂಬಾಣಿ, ಮಾದಿಗ ಹಾಗೂ ಗೊಲ್ಲ ಸಮುದಾಯಕ್ಕೆ ಮೋದಿ ಗಾಳ ಹಾಕಿದ್ದಾರೆ. ಲಂಬಾಣಿ, ಗೊಲ್ಲ ಸಮುದಾಯದ ಸೂರು ವಂಚಿತ 51,900 ಕುಟುಂಬಗಳಿಗೆ ಹಕ್ಕು ಪತ್ರ ನೀಡಲಿದ್ದಾರೆ.

    ಲಂಬಾಣಿ ಸಮುದಾಯದ ಜೊತೆಗೆ ಮಾದಿಗ ಸಮುದಾಯದ ಮೇಲು ಬಿಜೆಪಿ ಕಣ್ಣಿಟ್ಟಿದ್ದು, ನ್ಯಾ. ಸದಾಶಿವ ಆಯೋಗ ವರದಿ ಜಾರಿಗೆ ತರಲು ಕೇಸರಿ ಪಡೆ ಸಿದ್ದತೆ ನಡೆಸಿದೆ. ಕಲ್ಯಾಣ ಕರ್ನಾಟಕದ ಬಹುತೇಕ ಕ್ಷೇತ್ರಗಳಲ್ಲಿ ನಿರ್ಣಾಯಕ ಜಾತಿ ಸೆಳೆಯಲು ಸಜ್ಜು ಮಾಡಿದೆ. ಈಗಾಗಲೇ ಕೋಳಿ ಸಮುದಾಯವನ್ನು ಎಸ್‍ಟಿಗೆ ಸೇರಿಸಿರುವ ಬಿಜೆಪಿ ಲಿಂಗಾಯತ, ಕೋಳಿ, ಲಂಬಾಣಿ, ಮಾದಿಗ, ಭೋವಿ ಜೊತೆ ಹಿಂದುಳಿದ ವರ್ಗದ ಮೇಲೂ ಕಣ್ಣಿಟ್ಟಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಸಿ ರೂಂನಲ್ಲಿ ನಾಯಿ‌ ಸಾಕೋರಿಗೆ ಕಾಂಗ್ರೆಸ್ ಉಚಿತ ಕರೆಂಟ್ ನೀಡುತ್ತಿದೆ: ಸಿ.ಎಂ ಇಬ್ರಾಹಿಂ ಕಿಡಿ

    ಎಸಿ ರೂಂನಲ್ಲಿ ನಾಯಿ‌ ಸಾಕೋರಿಗೆ ಕಾಂಗ್ರೆಸ್ ಉಚಿತ ಕರೆಂಟ್ ನೀಡುತ್ತಿದೆ: ಸಿ.ಎಂ ಇಬ್ರಾಹಿಂ ಕಿಡಿ

    ಬೆಂಗಳೂರು : ಬಡ ಜನರಿಗೆ ಕರೆಂಟ್ ಕೊಡದ ಕಾಂಗ್ರೆಸ್ (Congress) ಅವ್ರು ಎಸಿಯಲ್ಲಿ ನಾಯಿ ಸಾಕೋರಿಗೆ ಕರೆಂಟ್ ಕೊಡ್ತೀರಾ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಕಿಡಿಕಾರಿದರು.

    ಕಾಂಗ್ರೆಸ್‌ನ 200 ಯುನಿಟ್ ವಿದ್ಯುತ್ ಘೋಷಣೆ ಮತ್ತು 2 ಸಾವಿರ ಗೃಹಿಣಿಯರಿಗೆ ಹಣ ಘೋಷಣೆಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆಯಲ್ಲಿ ಮತ ಪಡೆಯಲು ಈ ರೀತಿಯ ಆಶ್ವಾಸನೆ ನೀಡುತ್ತಿದ್ದಾರೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಛತ್ತೀಸ್‌ಗಢದಲ್ಲಿ ಅವರ ಸರ್ಕಾರವೇ ಇದೆ. ಅಲ್ಲಿ ಮಾಡಿ ತೋರಿಸಬೇಕಿತ್ತು. ಅವರು ಅಲ್ಲಿ ಮಾಡದೇ ಇಲ್ಲಿ‌ ಹೇಗೆ ಮಾಡುತ್ತಾರೆ. ಇವೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

    ರೈತರಿಗೆ ವಿದ್ಯುತ್ ಕೊಡುವುದಕ್ಕೆ ಆಗುವುದಿಲ್ಲ ನಿಮಗೆ. ನಗರದಲ್ಲಿ ಎಸಿ ರೂಂನಲ್ಲಿ ನಾಯಿ ಸಾಕಲು ಕರೆಂಟ್ ಕೊಡುತ್ತೀರಾ. ಬರೀ‌ ನಗರ ಪ್ರದೇಶದ ಜನರಿಗೆ ಕೊಟ್ಟರೆ ಹಳ್ಳಿ ಜನರಿಗೆ ಏನ್ ಕೊಡ್ತೀರಾ? ಎಂದು ಪ್ರಶ್ನೆ ಮಾಡಿದರು.

    ಕಾಂಗ್ರೆಸ್ ‌ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಏನು ಮಾಡದೆ ಈಗ ಇಲ್ಲಿ ಮಾಡುತ್ತೇವೆ ಎನ್ನುತ್ತಾರೆ. ಗೃಹಲಕ್ಷ್ಮಿ, ಸಂತಾನ ಲಕ್ಷ್ಮಿ, ಅಷ್ಠಲಕ್ಷ್ಮಿ ಎಲ್ಲ ಮೊದಲು ಅಧಿಕಾರ ಇರುವ ರಾಜ್ಯದಲ್ಲಿ ‌ಮಾಡಿ ತೋರಿಸಿ. ಆ ಮೇಲೆ ಇಲ್ಲಿ ಮಾಡುವರಂತೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್, ಬಿಜೆಪಿ ಸರ್ಕಾರ ಬಂದಾಗ ರಾಜ್ಯದಲ್ಲಿ ದರಿದ್ರ ಲಕ್ಷ್ಮಿ ಬರುತ್ತದೆ. ಕಾಂಗ್ರೆಸ್ ಅವರು 120 ರಿಂದ 70ಕ್ಕೆ ಬಂದರೂ ಈಗ 58ಕ್ಕೆ ಕಾಂಗ್ರೆಸ್ ಇಳಿಯುತ್ತದೆ ಎಂದು ಭವಿಷ್ಯ ನುಡಿದರು.

    ಜನರಿಗೆ ಟೋಪಿ ಹಾಕುವ ಕೆಲಸ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಹೋಗಿ ಕ್ಯಾಂಪೇನ್ ಮಾಡಿದರೂ ಏನಾಯ್ತು ಅಲ್ಲಿ. ಊರಿನಲ್ಲಿ ನಡೆದಿಲ್ಲ ಅಂದರೆ ಪರರ ಊರಲ್ಲಿ ನಡೆಯುತ್ತಾ. ರೈತರಿಗೆ 3 ಫೇಸ್, 8 ಗಂಟೆ ಕರೆಂಟ್ ಕೊಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಕುಮಾರಸ್ವಾಮಿ ಬದ್ಧತೆ ಎಂದು ಹೇಳಿದರು. ಇದನ್ನೂ ಓದಿ: ಜ.20ರಂದು ಬೆಂಗಳೂರಿನಲ್ಲಿ ಹಂಪಿ ಉತ್ಸವದ ಲೋಗೋ ಬಿಡುಗಡೆ: ಸಚಿವೆ ಶಶಿಕಲಾ ಜೊಲ್ಲೆ

    ರೈತರ ಬಗ್ಗೆ ಪ್ರಿಯಾಂಕಾ ಗಾಂಧಿ ಅಮ್ಮ ಮಾತನಾಡಿಲ್ಲ. ರೈತರ ಬಗ್ಗೆ ಅವರಿಗೆ ಗೊತ್ತೆ ಇಲ್ಲ. ಕನಿಷ್ಠ ರೈತರ ಕಷ್ಟದ ಬಗ್ಗೆ ಡಿ.ಕೆ ಶಿವಕುಮಾರ್ ಆದರೂ ಹೇಳಿಕೊಡಬೇಕಿತ್ತು. ಸಿಟಿಯಲ್ಲಿರುವ ಮನೆಗೆ ಕರೆಂಟ್ ಕೊಟ್ಟರೆ ಸಾಕು. ರೈತರ ಮನೆಯಲ್ಲಿ ದೀಪ ಹಚ್ಚಬಾರದಾ? ರೈತರ ಪಂಪ್‌ಸೆಟ್‌‌ಗಳಿಗೆ ವಿದ್ಯುತ್ ಇಲ್ಲ ಅಂದರೆ ಹೇಗೆ ಎಂದು ಕಿಡಿಕಾರಿದರು. ಇದನ್ನೂ ಓದಿ: 2023ರ ಚುನಾವಣೆ ಗೆಲುವಿಗೆ ‘ಕೈ’ ಪಾಳಯಕ್ಕೆ ಸ್ತ್ರೀ ಶಕ್ತಿಯೇ ಆಧಾರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2023ರ ಚುನಾವಣೆ ಗೆಲುವಿಗೆ ‘ಕೈ’ ಪಾಳಯಕ್ಕೆ ಸ್ತ್ರೀ ಶಕ್ತಿಯೇ ಆಧಾರ

    2023ರ ಚುನಾವಣೆ ಗೆಲುವಿಗೆ ‘ಕೈ’ ಪಾಳಯಕ್ಕೆ ಸ್ತ್ರೀ ಶಕ್ತಿಯೇ ಆಧಾರ

    ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಪಾಳಯ ಈ ಬಾರಿ ಮಹಿಳಾ (Women) ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಹಟಕ್ಕೆ ಬಿದ್ದಿದೆ ಎನ್ನಲಾಗಿದೆ. ಮಹಿಳಾ ಮತದಾರರು ʼಕೈʼ ಹಿಡಿದರಷ್ಟೇ ಗೆಲುವು ಎಂಬ ಲೆಕ್ಕಾಚಾರದಲ್ಲಿ ನಾರಿಯರ ಮನ ಗೆಲ್ಲಲು ಕೈ ಪಾಳಯದಲ್ಲಿ ಸಿದ್ದತೆ ಜೋರಾಗಿದೆ.

    ರಾಜ್ಯದ ಮಹಿಳಾ‌ ಮತದಾರರ ಮನವೊಲಿಕೆಗೆ ಇನ್ನಷ್ಟು ಯೋಜನೆ ಘೋಷಣೆ ಮಾಡಲು ʼಕೈʼ ಪಾಳಯ ಮುಂದಾಗಿದೆ ಎನ್ನಲಾಗುತ್ತಿದೆ. ರಾಜ್ಯದ ಮಹಿಳಾ ಮತದಾರರ ಮನಗೆಲ್ಲುವ ಭರವಸೆ ಘೋಷಣೆಯ ಟಾಸ್ಕ್‌ನ್ನು ಪ್ರಿಯಾಂಕಾ ಗಾಂಧಿ (Priyanka Gandhi) ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 3 ಮಂತ್ರಗಳ ತಂತ್ರಕ್ಕೆ ಮೊರೆ ಹೋಗಲು ಕಾಂಗ್ರೆಸ್ ಸಿದ್ಧತೆ

    ಪ್ರಚಾರಕ್ಕೆ ನಾನು ಬರ್ತೀನಿ. ನೀವು ಮಹಿಳಾಪರ ವಿಚಾರವನ್ನ ಮಹಿಳೆಯರ ಮುಂದಿಡಿ ಎಂದು ಪ್ರಿಯಾಂಕಾ ಗಾಂಧಿ ಸೂಚಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಿಯಾಂಕಾ ಗಾಂಧಿ ಮಹಿಳಾ ಮಂತ್ರ ಜಪ ಮಾಡಿದ್ದಾರೆ ಎನ್ನಲಾಗಿದೆ.

    ಕಾಂಗ್ರೆಸ್ (Congress) ಈಗಾಗಲೇ ಘೋಷಿಸಿರುವ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಎರಡು ಕೂಡ ಮಹಿಳೆಯರ ಮನಗೆಲ್ಲುವಂತಿದೆ. ಈ ಹಿಂದೆ ರಾಜ್ಯದಲ್ಲಿ ಸ್ರೀಶಕ್ತಿ ಸಂಘ ಹುಟ್ಟು ಹಾಕಿದ್ದು ಕಾಂಗ್ರೆಸ್. ಅದರ ಲಾಭ ಪಡೆದಿದ್ದು ಬಿಜೆಪಿ. ಈ ಬಾರಿ ಹಾಗಾಗಬಾರದು. ಹಾಗಾಗದಂತೆ ಎಚ್ಚರ ವಹಿಸಿ. ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವಷ್ಟು ದಿನ ನಮ್ಮ‌ ಯೋಜನೆ ನೇರವಾಗಿ ಜನರಿಗೆ ತಲುಪಬೇಕು.‌ ಅದರಲ್ಲೂ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ದೊಡ್ಡ ದೊಡ್ಡ ಯೋಜನೆ ರೂಪಿಸಿ ಪ್ರಣಾಳಿಕೆಗೆ ತನ್ನಿ ರಾಜ್ಯ ನಾಯಕರಿಗೆ ಮಹಿಳಾ ಶಕ್ತಿ ಬಳಸಿಕೊಳ್ಳಲು ಪ್ರಿಯಾಂಕಾ ಗಾಂಧಿ ಈ ಟಿಪ್ಸ್ ನೀಡಿದ್ದಾರೆ ಎನ್ನುತ್ತಿದೆ ಕೈ ಪಾಳಯದ ಮೂಲಗಳು. ಇದನ್ನೂ ಓದಿ: ಕರ್ನಾಟಕದ 4 ದಿಕ್ಕುಗಳ ರಥಯಾತ್ರೆಗೆ ಬಿಜೆಪಿ ಬ್ಲೂಪ್ರಿಂಟ್ ಏನು? ಯಾರು ಯಾವ ಕಡೆ!?

    ಮಹಿಳಾ ಮತದಾರರ ಮನಗೆಲ್ಲುವ ಹೆಚ್ಚೆಚ್ಚು ಯೋಜನೆ ಘೋಷಣೆ ಮಾಡಿ. ಅಗತ್ಯ ಇದ್ದಲ್ಲಿ ಪ್ರಚಾರಕ್ಕೆ ನಾನು ಬಂದೇ ಬರುತ್ತೇನೆ. ಮಹಿಳಾ ಮತದಾರರ ಮನಗೆಲ್ಲಲು ಅಗತ್ಯ ಯೋಜನೆ ಮುಂದಿಡಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜ್ಯದಲ್ಲಿ ಶುರುವಾಯ್ತು ಎಲೆಕ್ಷನ್ ‘ಲಕ್ಷ್ಮಿ’ ಕಟಾಕ್ಷ – ಇದು ಯುಪಿ ಮಾಡೆಲ್?

    ರಾಜ್ಯದಲ್ಲಿ ಶುರುವಾಯ್ತು ಎಲೆಕ್ಷನ್ ‘ಲಕ್ಷ್ಮಿ’ ಕಟಾಕ್ಷ – ಇದು ಯುಪಿ ಮಾಡೆಲ್?

    ಬೆಂಗಳೂರು: ಅಂದು ಭಾಗ್ಯಗಳ ಯೋಜನೆ. ಈಗ ಜ್ಯೋತಿ, ಲಕ್ಷ್ಮಿ ಯೋಜನೆಯಂತಹ ಹೊಸ ಭರವಸೆಗಳಿಂದ ಕರ್ನಾಟಕದ ಕಾಂಗ್ರೆಸ್ (Karnataka Congress) ಅದೃಷ್ಟ ಬದಲಾಗುತ್ತಾ? ಎಂಬ ಪ್ರಶ್ನೆಗಳು ಹರಿದಾಡುತ್ತಿವೆ. ಬಿಜೆಪಿಯ ಉತ್ತರ ಪ್ರದೇಶ (Uttar Pradesh) ಮಾಡೆಲ್‌ಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

    ಉತ್ತರ ಪ್ರದೇಶದ ಚುನಾವಣೆಯಲ್ಲಿ ಮಹಿಳಾ ಮತದಾರರೇ (Women Voters) ಬಿಜೆಪಿ ಕೈಹಿಡಿದಿದ್ದಾರೆ ಎಂಬ ವಿಶ್ಲೇಷಣೆ ಕೇಳಿ ಬಂದಿತ್ತು. ಕೆಲ ಖಾಸಗಿ ಸರ್ವೇಗಳಲ್ಲಿ ಶೇ.54ಕ್ಕೂ ಹೆಚ್ಚು ಮಹಿಳೆಯರು ಬಿಜೆಪಿಗೆ ಮತದಾನ ಮಾಡಿದ್ದಾರೆ ಎಂಬ ವರದಿಗಳಿವೆ. ಮಹಿಳೆಯರಿಗೆ ಸಂಬಂಧಿತ ಹಲವು ಯೋಜನೆ ಜಾರಿಗೆ ತಂದಿದ್ದ ಯೋಗಿ ಆದಿತ್ಯನಾಥ್ ನಡೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಮಹಿಳಾಪರ ಯೋಜನೆಗಳ ಜಾರಿಯಿಂದಾಗಿಯೇ ಬಿಜೆಪಿ ಪರ ಒಲವು ಹೆಚ್ಚಿತ್ತು ಎಂದು ಸಮೀಕ್ಷೆಗಳು ತಿಳಿಸಿದ್ದವು. ಇದನ್ನೂ ಓದಿ: ಕಾಂಗ್ರೆಸ್ ‘ಗೃಹಲಕ್ಷ್ಮಿ’ಗೆ ಬೊಮ್ಮಾಯಿ ಬಜೆಟ್ ಕೌಂಟರ್?

    ಈಗ ಕರ್ನಾಟಕದಲ್ಲಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಯೋಜನೆ ಭರವಸೆಗಳ ಸುರಿಮಳೆ ಶುರುವಾಗಿದೆ. ವಾರದೊಳಗೆ ಎರಡು ಪ್ರಮುಖ ಭರವಸೆಗಳನ್ನ ಘೋಷಣೆ ಮಾಡಿದೆ ಕಾಂಗ್ರೆಸ್. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಅನ್ನ ಭಾಗ್ಯ, ಕ್ಷೀರಭಾಗ್ಯ, ಶಾದಿ ಭಾಗ್ಯ ಹೀಗೆ ಹಲವು ಯೋಜನೆ ಜಾರಿ ಮಾಡಿದ್ದರು. ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೃಹಜ್ಯೋತಿ, ಗೃಹಲಕ್ಷ್ಮೀ ಜಾರಿಗೆ ಎಂಬ ಹೊಸ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಇನ್ನಷ್ಟು ಗೃಹ ಸಂಬಂಧಿತ ಯೋಜನೆಗಳ ಜಾರಿ ಮಾಡುವ ಭರವಸೆಗಳನ್ನ ಘೋಷಣೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

    ಈ ಭರವಸೆಗಳೇ 2023ರ ಕಾಂಗ್ರೆಸ್ ಅದೃಷ್ಟ ಬದಲಾವಣೆಗೆ ಮುನ್ನುಡಿ ಬರೆಯಲು ಸಾಧ್ಯವೇ ಎಂಬ ಚರ್ಚೆ ನಡೆಯುತ್ತಿದೆ. ಯೋಜನೆಗಳ ಸ್ವರೂಪ, ವ್ಯಾಪ್ತಿಯ ಬಗ್ಗೆ ಸ್ಪಷ್ಟವಾಗಿ ತಿಳಿಸದೇ ಕಾಂಗ್ರೆಸ್ ಯೋಜನೆ ಘೋಷಣೆ ಮಾಡಿ ಜಾಣ ನಡೆ ಪ್ರದರ್ಶನ ಮಾಡಿದೆ ಎಂಬ ಮಾತುಗಳಿವೆ. ಕಾಂಗ್ರೆಸ್ ಭರವಸೆಗಳನ್ನೇ ನಂಬಿ ಮಹಿಳಾ ಮತದಾರರು ಕಾಂಗ್ರೆಸ್‌ನತ್ತ ವಾಲುತ್ತಾರಾ ಎಂಬ ಪ್ರಶ್ನೆಗೆ ಮೇ ತಿಂಗಳಿನಲ್ಲಿ ಪ್ರಕಟವಾಗುವ ಚುನಾವಣಾ ಫಲಿತಾಂಶ ಉತ್ತರ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್ ‘ಗೃಹಲಕ್ಷ್ಮಿ’ಗೆ ಬೊಮ್ಮಾಯಿ ಬಜೆಟ್ ಕೌಂಟರ್?

    ಕಾಂಗ್ರೆಸ್ ‘ಗೃಹಲಕ್ಷ್ಮಿ’ಗೆ ಬೊಮ್ಮಾಯಿ ಬಜೆಟ್ ಕೌಂಟರ್?

    ಬೆಂಗಳೂರು: ಕಾಂಗ್ರೆಸ್‌ಗೆ (Congress) ಬಿಗ್ ಕೌಂಟರ್‌ಗೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವೇದಿಕೆ ಸಿದ್ಧ ಮಾಡುತ್ತಿದ್ದಾರೆ ಎನ್ನಲಾಗಿದೆ.

    ಫೆಬ್ರವರಿ ಮೂರನೇ ವಾರದಲ್ಲಿ ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಪ್ಲ್ಯಾನ್ ನಡೆದಿದೆ. ಫೆಬ್ರವರಿ ಮೂರನೇ ವಾರ ಬಜೆಟ್ ದಿನವೇ ಬಿಗ್ ಶಾಕ್ ಕೊಡಲು ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ ಎಂಬುದು ಬಿಜೆಪಿ (BJP) ಮೂಲಗಳು ತಿಳಿಸಿವೆ.

    ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಗರಿಷ್ಠ ಮಾಸಿಕ 2 ಸಾವಿರ ಘೋಷಣೆ ಮಾಡಿ ಜಾರಿ ಮಾಡುವ ಬಗ್ಗೆ ಚರ್ಚೆಯ ಹಂತದಲ್ಲಿದೆ ಎನ್ನಲಾಗಿದೆ. ಗೃಹ ನಿರ್ವಹಣೆಗೆ ಮಹಿಳೆಯರಿಗೆ ಆರ್ಥಿಕ ನೆರವು ನೀಡುವುದಾಗಿ ಜನವರಿ 14ರಂದು ಸಿಎಂ ಮಾಹಿತಿ ನೀಡಿದ್ದರು. ಒಂದು ಕುಟುಂಬದ ಮಹಿಳೆ ಸ್ವತಂತ್ರವಾಗಿ ಕನಿಷ್ಠ ಮನೆ ನಿರ್ವಹಣೆಗೆ ಅಗತ್ಯವಿರುವ ಆರ್ಥಿಕ ನೆರವು ಯೋಜನೆ ಘೋಷಣೆ ಸುಳಿವು ಕೊಟ್ಟಿದ್ದರು. ಕುಟುಂಬದ ಅಗತ್ಯವನ್ನು ನೋಡಿಕೊಂಡು 1000, 1500, 2000 ರೂ. ಮಾಸಿಕ ಗೌರವಧನ ನೀಡುವ ಬಗ್ಗೆ ಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ಹಿಂದೆ ಇರೋ ಮುಖವಾಡಗಳು ಕಳಚಿ ಬೀಳಬೇಕು – ಆರಗ ಜ್ಞಾನೇಂದ್ರ

    ಈಗಾಗಲೇ ಘೋಷಣೆ ಮಾಡಿರುವ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿಗೂ ಸಿದ್ಧತೆ ನಡೆದಿದೆ. ಪ್ರತಿ ಗ್ರಾಮದಲ್ಲಿ 2 ಸ್ತ್ರೀ ಶಕ್ತಿ ಸಂಘಕ್ಕೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡುವ ಯೋಜನೆ ಇದಾಗಿದೆ. ಜನವರಿ ಅಂತ್ಯಕ್ಕೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಚಾಲನೆ ನೀಡಲು ಸಿಎಂ ಪ್ಲ್ಯಾನ್ ಮಾಡಿದ್ದಾರೆ.

    ಈ ನಡುವೆ ಗೃಹಲಕ್ಷ್ಮಿ ಯೋಜನೆ ಭರವಸೆಯನ್ನು ಕಾಂಗ್ರೆಸ್ ಘೋಷಣೆ ಮಾಡುವ ಸುಳಿವು ಸಿಎಂಗೆ ಮೊದಲೇ ಸಿಕ್ಕಿತ್ತಾ ಎಂಬ ಚರ್ಚೆ ಶುರುವಾಗಿದೆ. ಕಾಂಗ್ರೆಸ್ ಘೋಷಣೆಗೂ ಮುನ್ನವೇ ಯೋಜನೆ ಘೋಷಣೆ ಮಾಡುವುದಾಗಿ ಸಿಎಂ ಹೇಳಿದ್ದು ಏಕೆ? ಇಲ್ಲ, ಸಿಎಂ ಬಜೆಟ್‌ನಲ್ಲಿ ಘೋಷಣೆ ಮಾಡ್ತಾರೆ ಎಂಬುದು ಕಾಂಗ್ರೆಸ್‌ಗೆ ಮೊದಲೇ ಗೊತ್ತಿತ್ತಾ ಎಂಬ ಪ್ರಶ್ನೆಗಳ ಜೊತೆ ಬಗ್ಗೆ ಪರ ವಿರೋಧ ಮಾತುಗಳು ಕೇಳಿಬಂದಿವೆ. ಆದರೆ ಯಾರು ಮೊದಲು, ಯಾರು ಯಾರನ್ನು ಹೈಜಾಕ್ ಮಾಡಿದ್ರು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಸಿಕ್ಕಿಲ್ಲ. ಇದನ್ನೂ ಓದಿ: 2 ಸಾವಿರ ರೂ. ಕೊಟ್ಟೇ `ನಾ ನಾಯಕಿ’ ಸಮಾವೇಶಕ್ಕೆ ಮಹಿಳೆಯರನ್ನ ಕರೆತರಲಾಗಿದೆ – ಟ್ವೀಟ್‌ನಲ್ಲಿ ಕಾಲೆಳೆದ BJP

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯತ್ನಾಳ್ ಆಟಾಟೋಪಕ್ಕೆ ಬಿಜೆಪಿ ವರಿಷ್ಠರು ಸುಸ್ತು- ಲಗಾಮು ಹಾಕದಷ್ಟು ವೀಕ್ ಆಯ್ತಾ ಹೈಕಮಾಂಡ್?

    ಯತ್ನಾಳ್ ಆಟಾಟೋಪಕ್ಕೆ ಬಿಜೆಪಿ ವರಿಷ್ಠರು ಸುಸ್ತು- ಲಗಾಮು ಹಾಕದಷ್ಟು ವೀಕ್ ಆಯ್ತಾ ಹೈಕಮಾಂಡ್?

    ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ರ (Basangouda Patil Yatnal) ಕಿರಿಕ್ ಹೇಳಿಕೆಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಹೋಗುತ್ತಿದೆ. ಎಲ್ಲಿಯವರೆಗೆ ಬಂದಿದೆ ಎಂದರೆ ಸದ್ಯದ ಹಂತದಲ್ಲಿ ಯತ್ನಾಳ್ ವರ್ಸಸ್ ಹೈಕಮಾಂಡ್ (High Command) ಅನ್ನೋ ರೀತಿ ಈಗಿನ ಚಿತ್ರಣ ಬಿಂಬಿತವಾಗುತ್ತಿದೆ. ಏಕೆಂದರೆ ಖುದ್ದು ಹೈಕಮಾಂಡ್‌ಗೆ ಯತ್ನಾಳ್ ಸುಮ್ಮನಿರಿಸೋದೇ ದೊಡ್ಡ ಸವಾಲಾಗಿದೆ.

    ಬಿಎಸ್‌ವೈ ಸಿಎಂ ಆಗಿದ್ದಾಗಿಂದಲೂ ಹೈಕಮಾಂಡ್‌ಗೆ ಯತ್ನಾಳ್ ದೊಡ್ಡ ತಲೆನೋವಾಗಿದ್ದಾರೆ. ಇದೀಗ ಯತ್ನಾಳ್ ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಆಗಲ್ಲ, ತಮ್ಮನ್ನು ತುಳಿಯಲು ಆಗಲ್ಲ ಅಂತ ಓಪನ್ ಚಾಲೆಂಜ್ ಮಾಡಿದರೂ, ಹೈಕಮಾಂಡ್ ಸೈಲೆಂಟ್ ಆಗಿರೋದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿದೆ.

    ಶಾಸಕ ಯತ್ನಾಳ್ ಬಂಡಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದನ್ನು ಸರಿಪಡಿಸುವುದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ. ಯತ್ನಾಳ್ ಬಂಡಾಯಕ್ಕೆ ಪೂರ್ಣವಿರಾಮ ಹಾಕುವ ಪ್ರಯತ್ನ ಬಿಜೆಪಿಯಲ್ಲಿ ನಡೆಯುತ್ತಿಲ್ಲ ಎಂಬುವುದು ಸ್ಪಷ್ಟವಾಗುತ್ತಿದೆ. ಇದು ಎಲ್ಲಿಗೆ ತಲುಪಲಿದೆ ಎಂಬುವುದು ಸದ್ಯದ ಕುತೂಹಲ.

    ಯಾರ ಹಿಡಿತಕ್ಕೂ ಸಿಗದ ಯತ್ನಾಳ್‌ಗೆ ಮೂಗುದಾರ ಕಟ್ಟಲಾಗದೇ ವರಿಷ್ಠರು ಒದ್ದಾಡುತ್ತಿದ್ದಾರೆ. ಪಕ್ಷದ ಶಿಸ್ತು ಮೀರಿದ ಶಾಸಕನ ವಿರುದ್ಧ ಇದುವರೆಗೂ ಶಿಸ್ತು ಕ್ರಮವೇ ಆಗಿಲ್ಲ. ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮಕ್ಕಾಗಲೀ ಅಥವಾ ಅವರ ಬಾಯಿಗೆ ಕಡಿವಾಣ ಹಾಕುವುದಕ್ಕಾಗಲಿ ವರಿಷ್ಠರು ಮುಂದಾಗದಿರುವುದು ದೊಡ್ಡ ಅಚ್ಚರಿ, ಅನುಮಾನ ಹುಟ್ಟಿಸಿದೆ. ಇದನ್ನೂ ಓದಿ: ನಿನ್ನ ಬ್ಯಾನರ್ ಇಲ್ಯಾಕೆ..?- ವಿಜಯನಗರ ವಿಧಾನಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಗಲಾಟೆ

    ಯತ್ನಾಳ್‌ರ ಬಂಡಾಯ, ಮುಜುಗರದ ಹೇಳಿಕೆಗಳಿಗೆ ಪೂರ್ಣವಿರಾಮ ಯಾವಾಗ ಅನ್ನೋದು ಯಾರಿಗೂ ಸ್ಪಷ್ಟತೆ ಇಲ್ಲ. ಪೂರ್ಣ ವಿರಾಮ ಹಾಕುವ ಪ್ರಯತ್ನ ಬಿಜೆಪಿಯಲ್ಲಿ ನಡೆಯುತ್ತಿದೆಯಾ ಅನ್ನೋದೂ ಸ್ಪಷ್ಟವಿಲ್ಲ. ಒಬ್ಬ ಶಾಸಕನಿಗೆ ಕಡಿವಾಣ ಹಾಕೋದು ಅಷ್ಟೊಂದು ಕಷ್ಟನಾ, ಬಿಜೆಪಿ ಹೈಕಮಾಂಡ್ ಇಷ್ಟೊಂದು ವೀಕ್ ಆಗಿ ಹೋಯ್ತಾ ಎಂಬ ಪ್ರಶ್ನೆಗಳನ್ನು ಈಗ ಖುದ್ದು ಬಿಜೆಪಿಯವರೇ ಕೇಳಿಕೊಳ್ಳುತ್ತಿದ್ದಾರೆ.

    ಹೈಕಮಾಂಡ್ ಮೌನ ಯಾರಿಗೂ ಅರ್ಥವಾಗುತ್ತಿಲ್ಲ. ಹೈಕಮಾಂಡ್‌ನದ್ದು ಮೌನನಾ, ಜಾಣ ನಡೆನಾ ಅಥವಾ ಕಾದು ಹೊಡೆಯಲು ಸಮಯ ಎದುರು ನೋಡುತ್ತಿರೋದಾ ಎನ್ನುವುದು ಸದ್ಯಕ್ಕೆ ಗೊತ್ತಾಗುತ್ತಿಲ್ಲ. ಏನೇ ಆದರೂ ಯತ್ನಾಳ್ ಹೈಡ್ರಾಮಾ ಮುಂದೆ ಎಲ್ಲಿಗೆ ತಲುಪಲಿದೆ, ಏನಾಗಲಿದೆ ಎಂಬ ಪ್ರಶ್ನೆಗಳು ಈಗ ಪಕ್ಷದೊಳಗೂ ಹೊರಗೂ ಎಲ್ಲರನ್ನೂ ಕಾಡುತ್ತಿವೆ. ಇದನ್ನೂ ಓದಿ: ಸ್ವಪಕ್ಷದವರ ವಿರುದ್ಧ ಯತ್ನಾಳ್ ಗದಾಪ್ರಹಾರ- ನಿರಾಣಿ, ಯತ್ನಾಳ್ ಕಚ್ಚಾಟಕ್ಕೆ ಡ್ರೈವರ್ ಕೊಲೆ ಥಳುಕು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚುನಾವಣಾ ಪ್ರಚಾರಕ್ಕೆ ಮೋದಿ ಕಿಕ್‍ಸ್ಟಾರ್ಟ್ – ಅಸಲಿಗೆ ಕಾರ್ಯಕ್ರಮ ಪಟ್ಟಿಯಲ್ಲಿ ರೋಡ್‌ ಶೋ ಇರಲಿಲ್ಲ

    ಚುನಾವಣಾ ಪ್ರಚಾರಕ್ಕೆ ಮೋದಿ ಕಿಕ್‍ಸ್ಟಾರ್ಟ್ – ಅಸಲಿಗೆ ಕಾರ್ಯಕ್ರಮ ಪಟ್ಟಿಯಲ್ಲಿ ರೋಡ್‌ ಶೋ ಇರಲಿಲ್ಲ

    ಹುಬ್ಬಳ್ಳಿ: ರಾಜ್ಯದಲ್ಲಿ ಎಲೆಕ್ಷನ್ ಪ್ರಚಾರಕ್ಕೆ ಇವತ್ತು ಕಿಕ್‍ಸ್ಟಾರ್ಟ್ ಸಿಕ್ಕಿದೆ. ಮತದಾರರನ್ನು ಸೆಳೆಯಲು ಗುಜರಾತ್ ಚುನಾವಣೆಯ (Gujarat Election) ಕೊನೆಯ ಹಂತದಲ್ಲಿ ಬಳಸಿದ್ದ ಅಸ್ತ್ರವನ್ನು, ಕರ್ನಾಟಕದಲ್ಲಿ ಚುನಾವಣೆ (Karnataka Election) ಘೋಷಣೆಗೆ ಮುನ್ನವೇ ಪ್ರಧಾನಿ ಮೋದಿ (PM Narendra Modi) ಪ್ರಯೋಗಿಸಿದ್ದಾರೆ.

    ರಾಷ್ಟ್ರೀಯ ಯುವಜನೋತ್ಸವ (Yuvajanotsava) ಉದ್ಘಾಟಿಸಲು ಹುಬ್ಬಳ್ಳಿಗೆ ಬಂದಿಳಿದ ಪ್ರಧಾನಿ ಮೋದಿ, ಭರ್ಜರಿ ರೋಡ್ ಶೋ (Road Show) ನಡೆಸಿದ್ದಾರೆ. ಅದು ಒಂದೆರಡು ಕಿಲೋಮೀಟರ್ ಅಲ್ಲ. ಬರೋಬ್ಬರಿ 9 ಕಿಲೋಮೀಟರ್ ರೋಡ್‍ ಶೋ ಮಾಡಿದ್ದಾರೆ.

    ವಿಮಾನ ನಿಲ್ದಾಣದಿಂದ ಶುರುವಾದ ರೋಡ್ ಶೋ, ಕಾರ್ಯಕ್ರಮ ನಡೆಯುವ ರೈಲ್ವೇ ಮೈದಾನದವರೆಗೂ ಒಂದು ಗಂಟೆ ಕಾಲ ಸಾಗಿತು. ಮಧ್ಯಾಹ್ನ 3.35ಕ್ಕೆ ಶುರುವಾದ ಮೋದಿ ರೋಡ್ ಶೋ ಸಂಜೆ 4.40ಕ್ಕೆ ಮುಗಿಯಿತು. ಮೋದಿ ರೋಡ್‍ಶೋಗೆ ಭರ್ಜರಿ ಸ್ಪಂದನೆ ಸಿಕ್ಕಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಸಾವಿರಾರು ಜನ “ಮೋದಿ ಮೋದಿ” ಎಂದು ಘೋಷಣೆ ಕೂಗಿದರು. ಮಾರ್ಗದುದ್ದಕ್ಕೂ ಮೋದಿಗೆ ಹೂಮಳೆಯ ಸ್ವಾಗತ ಸಿಕ್ಕಿತು. ಅಭಿಮಾನಿಗಳು ಕೇಸರಿ ಬಟ್ಟೆ ಧರಿಸಿ ಮೋದಿ ಭಾವ ಚಿತ್ರ ಹಿಡಿದು ನಿಂತಿದ್ದರು. ಇದನ್ನೂ ಓದಿ: ರನ್‌ವೇ ಸಿದ್ದವಾಗಿದೆ, ಕೌಶಲ್ಯಗಳನ್ನು ಕಲಿತು ಟೇಕಾಫ್‌ ಆಗಿ – ಯುವ ಜನತೆಗೆ ಮೋದಿ ಕರೆ

    ಒಂದು ಗಂಟೆ ಕಾಲ ಮೋದಿ ಕೈಬೀಸುತ್ತಲೇ ಇದ್ದರು. ಯಾವುದೇ ಹಂತದಲ್ಲಿ ಮೋದಿಯಲ್ಲಿ ಒಂದಿನಿತು ದಣಿವು ಕಂಡುಬರಲಿಲ್ಲ. ಈ ರೋಡ್‍ಶೋ ಮೂಲಕ ಅಸೆಂಬ್ಲಿ ಚುನಾವಣೆಯ ಪ್ರಚಾರಕ್ಕೆ ಪ್ರಧಾನಿ ಮೋದಿ ಪರೋಕ್ಷವಾಗಿ ಚಾಲನೆ ನೀಡಿದರು.

    ಅಸಲಿಗೆ ಇಂದಿನ ಮೋದಿ ಕಾರ್ಯಕ್ರಮದಲ್ಲಿ ರೋಡ್ ಶೋ ಬಗ್ಗೆ ಉಲ್ಲೇಖವೇ ಇರಲಿಲ್ಲ. ಕೆಲವರು ಮೋದಿ ರೋಡ್‍ಶೋ ಮಾಡಲಿದ್ದಾರೆ ಅಂದರೆ ಕೆಲವರು ರೋಡ್ ಶೋ ಇಲ್ಲ ಎಂದು ಕೊನೆ ಕ್ಷಣದವರೆಗೂ ಹೇಳುತ್ತಲೇ ಬಂದಿದ್ದರು. ಈ ವಿಚಾರದಲ್ಲಿ ಜಿಲ್ಲಾಡಳಿತವೂ ಗೊಂದಲದಲ್ಲಿ ಇದ್ದಂತೆ ಕಂಡುಬಂತು. ಮೋದಿ ರೋಡ್ ಶೋಗೆ ಸಿಕ್ಕ ಪ್ರತಿಕ್ರಿಯೆ ಕಂಡು ಬಿಜೆಪಿ ಖುಷಿಯಾಗಿದೆ. ಇದನ್ನು ಕಾರ್ಯಕ್ರಮ ವೇದಿಕೆಯಲ್ಲಿ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ, ಪ್ರಧಾನಿ ಮೋದಿಯ ಮುಂದೆಯೇ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k