Tag: Karnataka Election Results

  • ಭಟ್ಕಳ-ಹೊನ್ನಾವರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತಾಟ – ಬೆಂಕಿಗೆ ಸುಟ್ಟು ಕರಕಲಾದ ಅಂಗಡಿ

    ಭಟ್ಕಳ-ಹೊನ್ನಾವರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಕಿತ್ತಾಟ – ಬೆಂಕಿಗೆ ಸುಟ್ಟು ಕರಕಲಾದ ಅಂಗಡಿ

    ಕಾರವಾರ: ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress), ಬಿಜೆಪಿ (BJP) ಚುನಾವಣೆ ಸಂದರ್ಭದಲ್ಲಿ ಶುರುವಾದ ಜಗಳಗಳು ಫಲಿತಾಂಶ ಬಂದಮೇಲೂ ಮುಂದುವರಿದಿದೆ. ಬಿಜೆಪಿಯ ಸುನೀಲ್ ನಾಯ್ಕರನ್ನ ಕಾಂಗ್ರೆಸ್‌ನ ಮಂಕಾಳುವೈದ್ಯ ದೊಡ್ಡ ಅಂತರದಲ್ಲಿ ಸೋಲಿಸಿದ ನಂತರ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಒಳ ಜಗಳ ಇದೀಗ ಬೀದಿಗೆ ಬಂದಿದೆ.

    ಜಿಲ್ಲೆಯ ಹೊನ್ನಾವರದ ಮೂರ್ಕಣಿ ಗ್ರಾಮದಲ್ಲಿ ಕಿಡಿಗೇಡಿಗಳು ಬಿಜೆಪಿ ಕಾರ್ಯಕರ್ತ ಮಾರುತಿ ನಾಯ್ಕ ಎಂಬವರ ಎಲೆಕ್ಟ್ರಿಕ್ ಮಳಿಗೆಗೆ ಬೆಂಕಿ ಹಚ್ಚಿದ್ದು ಲಕ್ಷಾಂತರ ರು. ನಷ್ಟವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮುಖಂಡ ನರಸಿಂಹ ಸಣ್ಣತಮ್ಮ ಎಂಬುವವರ ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು ಪಟಾಕಿ ಕಿಡಿ ಕಾರಿನ ಶಡ್‌ಗೆ ಬೆಂಕಿ ಹೊತ್ತಿಕೊಂಡು ಕಾರು ಅಲ್ಪಪ್ರಮಾಣದಲ್ಲಿ ಸುಟ್ಟಿದ್ದು ಬೆಂಕಿ ನಂದಿಸಲಾಗಿದೆ. ಆದ್ರೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಇದನ್ನೂ ಓದಿ: Karnataka Election 2023: ಇವರೇ ನಿಮ್ಮ ಜಿಲ್ಲೆಯ ಶಾಸಕರು, ಒಂದು ಕ್ಲಿಕ್‌ನಲ್ಲಿದೆ ಸಂಪೂರ್ಣ ಮಾಹಿತಿ

    ಇನ್ನೂ ಮುರುಡೇಶ್ವರ ವ್ಯಾಪ್ತಿಯ ಶಿರಾಲಿಯ ಬಿಜೆಪಿ ಮುಖಂಡ ರಾಮಚಂದ್ರ ನಾಯ್ಕ ಎಂಬವರ ಮನೆಗೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ಮಾಡಿ ಹಲ್ಲೆ ಮಾಡಿದ್ದು ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಮುರುಡೇಶ್ವರ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

    ಸದ್ಯ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟ ಚುನಾವಣಾ ಫಲಿತಾಂಶದ ನಂತರ ಹಲ್ಲೆ, ಗಲಾಟೆಗೆ ತಿರುಗಿದ್ದು ಮುಂದಿನ ದಿನದಲ್ಲಿ ಯಾವ ಹಂತ ತಲುಪಲಿದೆಯೋ ಎಂಬ ಆತಂಕ ಸಾಮಾನ್ಯ ಜನರನ್ನ ಕಾಡುವಂತೆ ಮಾಡಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳು ಬಿಜೆಪಿಗೆ ದೊಡ್ಡಪೆಟ್ಟು ಬಿದ್ದಿದೆ: ಎಂ.ಪಿ ರೇಣುಕಾಚಾರ್ಯ

  • 59 ಕ್ಷೇತ್ರಗಳಲ್ಲಿ ಮುನ್ನಡೆ ಅಂತರ ಕೇವಲ 1 ಸಾವಿರ!

    59 ಕ್ಷೇತ್ರಗಳಲ್ಲಿ ಮುನ್ನಡೆ ಅಂತರ ಕೇವಲ 1 ಸಾವಿರ!

    ಬೆಂಗಳೂರು: ಕರ್ನಾಟಕ ಚುನಾವಣೆಯ ಮತ ಎಣಿಕೆ (Karnataka Election Result) ನಡೆಯುತ್ತಿದ್ದು, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮಧ್ಯೆ ಭಾರೀ ಸ್ಪರ್ಧೆ ನಡೆಯುತ್ತಿದೆ.

    ಬೆಳಗ್ಗೆ 10:30 ಟ್ರೆಂಡ್ಸ್‌ ಪ್ರಕಾರ ಒಟ್ಟು 59 ಕ್ಷೇತ್ರಗಳಲ್ಲಿ ಮುನ್ನಡೆ 1 ಸಾವಿರ ಮತಗಳ ಅಂತರದಲ್ಲಿದೆ. ಹಲವು ಕಡೆ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ಇದ್ದರೆ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮಧ್ಯೆ ಭಾರೀ ಸ್ಪರ್ಧೆಯಿದೆ.

    ಬೆಳಗ್ಗೆ 10:30ರ ಟ್ರೆಂಡ್‌ ಪ್ರಕಾರ ಕಾಂಗ್ರೆಸ್‌ 115, ಬಿಜೆಪಿ 75, ಜೆಡಿಎಸ್‌ 28, ಇತರರು 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 115, ಬಿಜೆಪಿ 77, ಜೆಡಿಎಸ್‌ 27 ಮುನ್ನಡೆ LIVE Updates

  • ನನ್ನದು ಸಣ್ಣ ಪಕ್ಷ, ಈವರೆಗೆ ನನ್ನನ್ನ ಯಾವ ನಾಯಕರು ಸಂಪರ್ಕ ಮಾಡಿಲ್ಲ : ಹೆಚ್‍ಡಿಕೆ

    ನನ್ನದು ಸಣ್ಣ ಪಕ್ಷ, ಈವರೆಗೆ ನನ್ನನ್ನ ಯಾವ ನಾಯಕರು ಸಂಪರ್ಕ ಮಾಡಿಲ್ಲ : ಹೆಚ್‍ಡಿಕೆ

    ಬೆಂಗಳೂರು: ಈವರೆಗೆ ನನ್ನನ್ನ ಯಾವ ನಾಯಕರು ಸಂಪರ್ಕ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್‍.ಡಿ ಕುಮಾರಸ್ವಾಮಿ (HD Kumaraswamy) ತಿಳಿಸಿದರು.

    ಚುನಾವಣಾ ಸಮೀಕ್ಷೆ (Election Polls) ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನದೊಂದು ಸಣ್ಣ ಪಕ್ಷ ನೀವೇ 12-13 ಕೊಟ್ಟಿದ್ದೀರಾ. ಹೇಗೆ ಅತಂತ್ರ, ಎಲ್ಲಿಂದ ಬರುತ್ತೆ- ನೀವು ಹೇಳಿದ್ದು ನಾನು ನೋಡ್ತಾ ಇದ್ದೇನೆ. ಕಾಂಗ್ರೆಸ್ (Congress), ಬಿಜೆಪಿಯವರು (BJP) ಸೂಟ್ ಹೋಲಿಸಿಕೊಂಡು ಓಡಾಡ್ತಾ ಇದ್ದಾರೆ. ನನ್ನದು ಸಣ್ಣ ಪಕ್ಷ, 12-20 ರಲ್ಲಿ ಇಟ್ಟಿದ್ದೀರಾ, ನನ್ನ ಕೇಳಿದ್ರೆ ಏನ್ ಹೇಳೋದು ಎಂದು ಗರಂ ಆದರು. ಇದನ್ನೂ ಓದಿ: Karnataka Election 2023 Result – ಕರುನಾಡ ತೀರ್ಪು LIVE Updates

    ಈವರೆಗೆ ನನ್ನನ್ನ ಯಾವ ನಾಯಕರು ಸಂಪರ್ಕ ಮಾಡಿಲ್ಲ. 20 ಸೀಟ್ ಇಟ್ಕೊಂಡು ಕಂಡೀಷನ್ ಹಾಕಲು ಸಾಧ್ಯನಾ? ಜನಗಳಿಗೆ ಒಂದು ಅವಕಾಶ ಕೇಳಿದ್ದೆ, ಕೊಡೋದು ಬಿಡೋದು ಅವರಿಗೆ ಬಿಟ್ಟದ್ದು. ಜನ ಏನ್ ತೀರ್ಮಾನ ತಗೊಂಡಿದ್ದಾರೆ ನೋಡೊಣ ಬನ್ನಿ. ಸಿದ್ದರಾಮಯ್ಯ, ಯಡಿಯೂರಪ್ಪ ಕ್ಲಿಯರ್ ಮೆಜಾರೀಟಿ ಅಂದಿದ್ದಾರೆ, ಅವರಿಗ್ಯಾಕೆ ನನ್ನ ಅವಶ್ಯಕತೆ? ಈಗ ಇವಿಎಂ (EVM) ಚೇಂಜ್ ಆಯಿತಾ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕರ್ನಾಟಕ ಕುರುಕ್ಷೇತ್ರದಲ್ಲಿ ಗೆಲ್ಲೋದ್ಯಾರು? ಸೋಲೋದ್ಯಾರು –  ಇಂದು ಪ್ರಕಟವಾಗಲಿದೆ ಮಹಾತೀರ್ಪು

  • ಗೂಗಲ್ ರಾಜಕೀಯ ಸುದ್ದಿಯಲ್ಲಿ ಕರ್ನಾಟಕ ಚುನಾವಣೆ ನಂಬರ್ 1!

    ಗೂಗಲ್ ರಾಜಕೀಯ ಸುದ್ದಿಯಲ್ಲಿ ಕರ್ನಾಟಕ ಚುನಾವಣೆ ನಂಬರ್ 1!

    ಬೆಂಗಳೂರು: ಗೂಗಲ್ 2018ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಾಡಿದ ಟ್ರೆಡಿಂಗ್ ಟಾಪಿಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ರಾಜಕೀಯ ಸುದ್ದಿಯಲ್ಲಿ ಕರ್ನಾಟಕ ಚುನಾವಣೆ ದೇಶದಲ್ಲೇ ನಂಬರ್ ಒನ್ ಸ್ಥಾನವನ್ನು ಪಡೆದಿದೆ.

    ಗೂಗಲ್‍ನ ರಾಜಕೀಯ ವಿಭಾಗದ ಸುದ್ದಿಯಲ್ಲಿ ಟಾಪ್ 1 ಟ್ರೆಂಡಿಂಗ್ ನಲ್ಲಿ ಕರ್ನಾಟಕದ ಫಲಿತಾಂಶ ಸ್ಥಾನ ಗಿಟ್ಟಿಸಿಕೊಂಡಿದೆ. ಓವರ್ ಆಲ್ ಸುದ್ದಿ ವಿಭಾಗದಲ್ಲಿ ಕರ್ನಾಟಕ ಚುನಾವಣೆ 2ನೇ ಸ್ಥಾನ ಪಡೆದುಕೊಂಡಿದೆ. ಒಟ್ಟಾರೆ ವಿಭಾಗದಲ್ಲಿ ಟಾಪ್ 4 ಸ್ಥಾನದಲ್ಲಿದೆ.

    ಸುದ್ದಿ ವಿಭಾಗ:
    ಫಿಫಾ ವರ್ಲ್ಡ್ ಕಫ್ ಮೊದಲನೇ ಸ್ಥಾನದಲ್ಲಿದೆ. ಇದನ್ನು ಬಿಟ್ಟರೆ ಭಾರತದಲ್ಲಿ ಹೆಚ್ಚು ಜನರು ಕರ್ನಾಟಕ ಚುನಾವಣಾ ಸುದ್ದಿಯ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಮೂರನೇ ಸ್ಥಾನ ಪ್ರಿಯಾಂಕ ಚೋಪ್ರಾ ಮದುವೆ ಸಿಕ್ಕಿದರೆ ನಾಲ್ಕನೇಯ ಸ್ಥಾನ ಏಕತಾ ಪ್ರತಿಮೆಗೆ ಸಿಕ್ಕಿದೆ.

    ಒಟ್ಟಾರೆ ವಿಭಾಗ:
    ಈ ವಿಭಾಗದಲ್ಲಿಯೂ ಫಿಫಾ ವರ್ಲ್ಡ್ ಕಫ್ ಮೊದಲನೇ ಸ್ಥಾನದಲ್ಲಿದೆ. ಟಾಪ್ 2ನಲ್ಲಿ ಲೈವ್ ಸ್ಕೋರ್ ಹಾಗೂ ಟಾಪ್ 3ನಲ್ಲಿ ಐಪಿಎಲ್ 2018 ಇದೆ. ಇದರ ನಂತರ ಸ್ಥಾನದಲ್ಲಿ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಫಲಿತಾಂಶವಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv