Tag: Karnataka Election 2018

  • ಚುನಾವಣೆ ನಂತರ ಪತ್ನಿ ಜೊತೆ ಅರ್ಧಶತಕ ಬಾರಿಸಿದ ಖರ್ಗೆ!

    ಚುನಾವಣೆ ನಂತರ ಪತ್ನಿ ಜೊತೆ ಅರ್ಧಶತಕ ಬಾರಿಸಿದ ಖರ್ಗೆ!

    ಕಲಬುರಗಿ: ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಎಲೆಕ್ಷನ್ ಮೂಡ್ ನಿಂದ ಆನಿವರ್ಸರಿ ಮೂಡ್‍ಗೆ ತೆರಳಿದ್ದಾರೆ.

    ಮಲ್ಲಿಕಾರ್ಜುನ್ ಖರ್ಗೆ ಚುನಾವಣೆ ಬಳಿಕ ಕುಟುಂಬದೊಂದಿಗೆ ತಮ್ಮ 50ನೇ ವರ್ಷದ ಮದುವೆಯ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದಾರೆ. ಕಲಬುರಗಿಯ ಲುಂಬಿನಿ ನಿವಾಸದಲ್ಲಿ ಖರ್ಗೆ ಮದುವೆ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ.

    ಮಲ್ಲಿಕಾರ್ಜುನ್ ಖರ್ಗೆ ಹಾಗೂ ತನ್ನ ಪತ್ನಿ ರಾಧಾಬಾಯಿ 50ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿವಾಹ ವಾರ್ಷಿಕೋತ್ಸವದಲ್ಲಿ ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಅಫಜಲ್ ಪುರ ಕಾಂಗ್ರೆಸ್ ಅಭ್ಯರ್ಥಿ ಎಂ.ವೈ ಪಾಟೀಲ್ ಕೂಡ ಭಾಗಿಯಾಗಿದ್ದಾರೆ.

    ಸಮೀಕ್ಷೆಗಳೆಲ್ಲವು ಸುಳ್ಳಾಗಲಿವೆ. ಸಮೀಕ್ಷೆಗಳ ಮೇಲೆ ನನಗೆ ನಂಬಿಕೆಯಿಲ್ಲ. ನಮ್ಮದೇ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೆ ಬರುತ್ತದೆ. 120ಕ್ಕೂ ಅಧಿಕ ಸ್ಥಾನ ಗೆಲ್ಲುತ್ತೇವೆ. ಅತಂತ್ರ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಅಧಿಕಾರಕ್ಕೆ ಏರಿದರೆ ಸಿಎಂ ಯಾರಾಗುತ್ತಾರೆ ಎಂದು ಕೇಳಿದ್ದಕ್ಕೆ, ಸಿಎಂ ಅಭ್ಯರ್ಥಿ ಬಗ್ಗೆ ನಾ ಕಮೆಂಟ್ ಮಾಡಲ್ಲ, ಹೈ ಕಮಾಂಡ್ ನಿರ್ಧರಿಸುತ್ತದೆ ಎಂದು ಉತ್ತರಿಸಿದರು.

  • ಮೇ 15ಕ್ಕೆ ದೆಹಲಿಗೆ ಹೋಗ್ತಿನಿ, 17ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಿನಿ: ಬಿ.ಎಸ್ ವೈ

    ಮೇ 15ಕ್ಕೆ ದೆಹಲಿಗೆ ಹೋಗ್ತಿನಿ, 17ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಿನಿ: ಬಿ.ಎಸ್ ವೈ

    ಬೆಂಗಳೂರು: ಬಿಜೆಪಿ 125-130 ಸ್ಥಾನ ಪಡೆಯೋದು ಖಚಿತ. ನಾವೇ ಈ ಬಾರಿ ಕರ್ನಾಟಕದಲ್ಲಿ ಸರ್ಕಾರ ರಚಿಸೋದು. ಈ ಎರಡು ದಿನ ಕಾರ್ಯಕರ್ತರನ್ನು ಭೇಟಿ ಮಾಡಿ ವರದಿ ಪಡೆದುಕೊಂಡು ಮೇ 15 ರಂದು ದೆಹಲಿಗೆ ಹೋಗಿ 17ರಂದು ಪ್ರಮಾಣ ವಚನಕ್ಕೆ ದಿನಾಂಕ ಫಿಕ್ಸ್ ಮಾಡಿಕೊಂಡು ಬರ್ತೀನಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

    ಮತದಾನ ಮಾಡಿದ ರಾಜ್ಯದ ಜನತೆಗೆ ವಿನಯ ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಜನತೆ ಈ ಬಾರಿ ಪರಿವರ್ತನೆಗಾಗಿ ಮತ ಚಲಾಯಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ನಮಗೆ ಪೂರಕ ಪ್ರತಿಕ್ರಿಯೆ ಲಭ್ಯವಾಗಿದೆ. ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಜನ ಕ್ಷಮಿಸೊಲ್ಲ. ಹೀಗಾಗಿ ಕಾಂಗ್ರೆಸ್ 70 ಸೀಟ್‍ಗಿಂತ ಹೆಚ್ಚು ಗೆಲ್ಲೊಲ್ಲ ಅಂದ್ರು.

    ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ 20-25 ಸೀಟ್ ಬರಬಹುದು. ನಮಗೆ 130 ಕ್ಷೇತ್ರಗಳಲ್ಲಿ ಗೆಲುವು ಖಂಡಿತ, ಬೇಕಾದ್ರೆ ಯಾವ ಯಾವ ಕ್ಷೇತ್ರಗಳು ಅಂತಾ ಬೇಕಾದ್ರೂ ಹೇಳಬಲ್ಲೆ ಎಂದು ಆಗಾಧ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

    ನಮ್ಮ ಪ್ರಣಾಳಿಕೆ ಶೇ.3 ರಷ್ಟು ಮತಗಳನ್ನು ಹೆಚ್ಚಳ ಮಾಡಿದ್ದು, ಎಕ್ಸಿಟ್ ಪೋಲ್‍ಗಳ ಬಗ್ಗೆ ಮಾತನಾಡಲ್ಲ. ಈ ಹಿಂದೆ ಉತ್ತರ ಪ್ರದೇಶದ ರಿಸಲ್ಟ್ ಏನಾಯ್ತು. ಇದೇ ರೀತಿ ಕರ್ನಾಟಕದಲ್ಲಿ ಫಲಿತಾಂಶ ಬರಲಿದೆ. ಇನ್ನು ಎರಡು ದಿನ ಕಾದು ನೋಡಿ, ನೂರಕ್ಕೆ ನೂರು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಸಿದ್ದರಾಮಯ್ಯ ಮೆಂಟಲಿ ಅಪ್ಸೆಟ್ ಆಗಿದ್ದಾರೆ. ಅದಕ್ಕೆ ಅವರು ಹಾಗೇ ಮಾತಾಡ್ತಾರೆ ಎಂದು ವಿಕ್ಟರಿ ಸಿಂಬಲ್ ತೋರಿಸಿದ್ರು.

  • ಫಲಿತಾಂಶಕ್ಕೂ ಮೊದ್ಲೇ ಬಿಜೆಪಿ ಅಭ್ಯರ್ಥಿಯಿಂದ ವಿಜಯೋತ್ಸವ!

    ಫಲಿತಾಂಶಕ್ಕೂ ಮೊದ್ಲೇ ಬಿಜೆಪಿ ಅಭ್ಯರ್ಥಿಯಿಂದ ವಿಜಯೋತ್ಸವ!

    ಕಲಬುರಗಿ: ಸಂಗೋಳಗಿ (ಜಿ) ಗ್ರಾಮದಲ್ಲಿ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ವಿಜಯೋತ್ಸವ ಆಚರಿಸಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನಲ್ಲಿ ನಡೆದಿದೆ.

    ಆಳಂದ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಗೆಲುವು ನಿಶ್ಚಿತ ಎಂದು ವಿಜಯೋತ್ಸವ ಆಚರಿಸುತ್ತಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

    ಆಳಂದ ತಾಲೂಕಿನಾದ್ಯಂತ ಬಿಜೆಪಿ ಅಲೆಯಿದ್ದು, ಗೆಲುವು ಖಚಿತ ಎಂದು ಸಂಭ್ರಮಿಸುತ್ತಿದ್ದಾರೆ.