Tag: Karnataka Election 2018

  • ಕಾಂಗ್ರೆಸ್- ಬಿಜೆಪಿ ಮಧ್ಯೆ ಜಟಾಪಟಿ- `ಕೈ’ ಕಾರ್ಯಕರ್ತರಿಬ್ಬರಿಗೆ ಚಾಕು ಇರಿತ!

    ಕಾಂಗ್ರೆಸ್- ಬಿಜೆಪಿ ಮಧ್ಯೆ ಜಟಾಪಟಿ- `ಕೈ’ ಕಾರ್ಯಕರ್ತರಿಬ್ಬರಿಗೆ ಚಾಕು ಇರಿತ!

    ದಾವಣಗೆರೆ: ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡಿದ್ದು, ಕಾಂಗ್ರೆಸ್ ಕಾರ್ಯಕರ್ತರಿಬ್ಬರಿಗೆ ಚಾಕು ಇರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಮಹಾಲಕ್ಷ್ಮಿ ಸರ್ಕಲ್ ನಲ್ಲಿ ಮಂಗಳವಾರ ರಾತ್ರಿ ಬಿಜೆಪಿ ವಿಜಯೋತ್ಸವದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವಾಗ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿಗೆ ಮಾತು ಬೆಳೆದು ಮಾರಾಮಾರಿ ನಡೆದಿದೆ.

    ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಗೆಲುವಿನ ಹಿನ್ನೆಲೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ ಮಂಜಪ್ಪ ನಿವಾಸದ ಎದುರು ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಈ ಆಚರಣೆ ಮಾಡುತ್ತಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಜೊತೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ವಾಗ್ವಾದ ಕೈ ಕೈ ಮೀಲಾಯಿಸುವ ಹಂತಕ್ಕೆ ತೆರಳಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯಲ್ಲಿ ಕಾಂಗ್ರೆಸ್ ನ ರಾಜು ಗುಡ್ಡಜ್ಜಿ, ಸಿದ್ದೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದರಿಂದ ಕೂಡಲೇ ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಹೊನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾತ್ರೋರಾತ್ರಿ ಜಯಗಳಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್!

    ರಾತ್ರೋರಾತ್ರಿ ಜಯಗಳಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್!

    ಧಾರವಾಡ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಕೊನೆಗೂ ತಡರಾತ್ರಿ ಘೋಷಣೆಯಾಗಿದೆ.

    ಮಂಗಳವಾರ ನಡೆದ ಮತದಾನದ ವೇಳೆ ಇವಿಎಂ ಮಷಿನ್‍ನಲ್ಲಿದ್ದ ಮತಗಳ ಹಾಗೂ ವಿವಿಪ್ಯಾಟ್‍ನಲ್ಲಿ ಬಿದ್ದಿದ್ದ ಮತಗಳ ಅಂತರ ಹೆಚ್ಚು ಕಡಿಮೆ ಕಂಡು ಬಂದಿತ್ತು. ಇದ್ರಿಂದ ಶೆಟ್ಟರ್ ಎದುರಾಳಿಯಾದ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಾಲವಾಡ ಚುನಾವಣಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು.

    ಈ ಹಿನ್ನೆಲೆ ಶಟ್ಟರ್ ಅವರ ಚುನಾವಣಾ ಗೆಲುವಿನ ಘೋಷಣೆಯನ್ನು ತಡೆ ಹಿಡಿದಿದ್ದ ಚುನಾವಣಾ ಆಯೋಗ, ತಡ ರಾತ್ರಿ ಜಗದೀಶ್ ಶೆಟ್ಟರ್ ಗೆಲುವು ಘೋಷಣೆ ಮಾಡಿದೆ. ಇನ್ನು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಮತ ಏಣಿಕೆ ಕೇಂದ್ರದ ಬಳಿ ಚುನಾವಣಾಧಿಕಾರಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

    ವಿವಿಪ್ಯಾಟ್‍ನಲ್ಲಿ ಬಿದ್ದಿರುವ ಮತಗಳಿಗೆ ಹಾಗೂ ಇವಿಎಂನಲ್ಲಿ ಬಿದ್ದ ಮತಗಳಿಗೆ 59 ಮತ ಅಂತರವಿದೆ ಎಂದ ಮಹೇಶ್ ನಾಲವಾಡ, ಶೆಟ್ಟರ್ ಹಿಂಬಾಗಿಲಿನಿಂದ ಗೆಲುವು ಸಾಧಿಸಿದ್ದು, ಇದರ ವಿರುದ್ಧ ಹೋರಾಟ ಮಾಡುವ ಮಾತನ್ನ ಹೇಳಿದರು.

    ಈ ಮೊದಲು ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಹಾಗೂ ಜೆಡಿಎಸ್ ಮುಖಂಡ ಎನ್.ಎಚ್ ಕೊನರಡ್ಡಿ ಕೂಡಾ ಮತ ಏಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಮರು ಮತದಾನಕ್ಕೆ ಆಗ್ರಹಿಸಿದ್ದರು. ಆದರೆ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ತಮ್ಮ ಕೈಯಲ್ಲಿದ್ದದ ಇಂಗ್ಲಿಷ್ ಪತ್ರದಲ್ಲಿದ್ದ ಘೋಷಣೆಯನ್ನ ತರಾತುರಿಯಲ್ಲಿ ಓದಿ ಶೆಟ್ಟರ್ ಗೆಲುವು ಎಂದು ಘೋಷಣೆ ಮಾಡಿದರು.

    ಇನ್ನು ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಕೂಡ ನಡೆಯಿತು. ಇನ್ನು ಶೆಟ್ಟರ್ ಹಾಗೂ ಮಹೇಶ್ ನಾಲವಾಡ ನಡುವೆ ಗೆಲುವಿನ ಅಂತರ 21,270 ಮತಗಳಿದೆ. ಶಟ್ಟರ್ 75,591 ಮತ ಪಡೆದರೆ, ನಾಲವಾಡ 54,321 ಮತ ಪಡೆದಿದ್ದಾರೆ.

  • ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಬೀಗಿದ ನಾರಿಮಣಿಯರು!

    ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಬೀಗಿದ ನಾರಿಮಣಿಯರು!

    ಬೆಂಗಳೂರು: ಕರ್ನಾಟಕ ಚುನಾವಣೆ-2018 ಫಲಿತಾಂಶ ಹೊರಬಿದಿದ್ದೆ. ಇನ್ನು ಈ ಚುನಾವಣೆಯಲ್ಲಿ ಕೆಲವು ಮಹಿಳಾ ಅಭ್ಯರ್ಥಿಗಳು ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪ್ರತಿಸ್ಪರ್ಧಿ ಸಂಜಯ್ ಪಾಟೀಲ್ ವಿರುದ್ಧ 51,724 ಅಂತರದ ಮತಗಳನ್ನು ಪಡೆದು ತಮ್ಮ ಜಯವನ್ನು ಸಾಧಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಒಟ್ಟು 1,02,040 ಮತಗಳನ್ನು ಪಡೆದಿದ್ದಾರೆ.

    ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಪ್ರತಿಸ್ಪರ್ಧಿ ಪಾಂಡುರಂಗ ಪಾಟೀಲ್ ವಿರುದ್ಧ 8,506 ಅಂತರದಿಂದ ನಿಪ್ಪಾಣಿ ಕ್ಷೇತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಶಿಕಲಾ ಒಟ್ಟು 87,006 ಮತಗಳನ್ನು ಪಡೆದಿದ್ದಾರೆ.

    ಕೆಜಿಎಫ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೂಪಕಲಾ ಪ್ರತಿಸ್ಪರ್ಧಿ ಅಶ್ವಿನಿ ಸಂಪಂಗಿ ವಿರುದ್ಧ 40,827 ಅಂತರದಿಂದ ಕೆಜಿಎಫ್ ಜನರ ಕೈ ಹಿಡಿದಿದ್ದಾರೆ. ರೂಪಕಲಾ ಅವರಿಗೆ ಒಟ್ಟು 87,006 ಮತಗಳನ್ನು ಪಡೆದಿದ್ದಾರೆ.

    ಹಿರಿಯೂರು ಕ್ಷೇತ್ರದಲ್ಲಿ ಕಮಲ ಅರಳಿದ್ದು, ಬಿಜೆಪಿ ಅಭ್ಯರ್ಥಿ ಕೆ. ಪೂರ್ಣಿಮಾ ತಮ್ಮ ಪ್ರತಿಸ್ಪರ್ಧಿ ಡಿ.ಸುಧಾಕರ್ ವಿರುದ್ಧ 12,875 ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಇನ್ನೂ ಕೆ. ಪೂರ್ಣಿಮಾ ಒಟ್ಟು 77,733 ಮತಗಳನ್ನು ಪಡೆದಿದ್ದಾರೆ.

    ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತನ್ನ ಪ್ರತಿಸ್ಪರ್ಧಿ ವಿಟ್ಠಲ್ ಹಳಗೇಕರ್ ವಿರುದ್ಧ 5,133 ಅಂತರದಿಂದ ಜಯಗಳಿಸಿದ್ದಾರೆ. ಅಂಜಲಿ ಒಟ್ಟು 36,649 ಮತಗಳನ್ನು ಪಡೆದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

    ಕಾರವಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್ ತನ್ನ ಪ್ರತಿಸ್ಪರ್ಧಿ ಆನಂದ ಅಸ್ನೋಟಿಕರ್ ವಿರುದ್ಧ 13,809 ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ರೂಪಾಲಿ ನಾಯ್ಕ್ ಒಟ್ಟು 59,776 ಮತಗಳನ್ನು ಪಡೆದಿದ್ದಾರೆ.

  • ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಳಿಕ ಬಿಜೆಪಿಯ ನಡೆ ನಿಗೂಢ!

    ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಳಿಕ ಬಿಜೆಪಿಯ ನಡೆ ನಿಗೂಢ!

    ಬೆಂಗಳೂರು: ರಾಜ್ಯ ಚುನಾವಣಾ ಫಲಿತಾಂಶದ ಬಳಿಕ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇತ್ತ 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಮುಂದಿನ ನಡೆ ಏನೆಂಬುದರ ಬಗ್ಗೆ ತೀವ್ರ ಕೂತುಹಲವನ್ನು ಹುಟ್ಟುಹಾಕಿದೆ.

    ಆಪರೇಷನ್ ಕಮಲ ಮಾಡಲು ಮುಂದಾಗಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಶತಾಗತಯ ಪ್ರಯತ್ನ ಮಾಡುತ್ತಿದೆ. ಇತ್ತ ರಾಜ್ಯಪಾಲರ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸರ್ಕಾರ ರಚನೆಗೆ ಎರಡು ದಿನಗಳ ಕಾಲಾವಕಾಶ ಕೋರಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಕಾಂಗ್ರೆಸ್-ಜೆಡಿಎಸ್ ನಾಯಕರ ನಿಯೋಗ ಜೊತೆಯಾಗಿ ರಾಜಭವನಕ್ಕೆ ತೆರಳಿ ಸರ್ಕಾರ ರಚಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿವೆ.

    ಸರ್ಕಾರ ರಚಿಸಲು ಬಿಜೆಪಿಯ ಮುಂದಿನ ನಡೆ ಏನು?
    * ದೊಡ್ಡ ಪಕ್ಷವಾಗಿದ್ದಕ್ಕೆ ಸರ್ಕಾರ ರಚನೆಗೆ ಅವಕಾಶ ಕೋರಿಕೆ.
    * ಒಂದು ವಾರದೊಳಗೆ ಸಂಖ್ಯಾಬಲವನ್ನು ಹೊಂದಿಸಲು ಯತ್ನ.
    * ಸರ್ಕಾರ ರಚಿಸಿದ ಬಳಿಕ ಬಹುಮತ ಸಾಬೀತುಪಡಿಸಲು ತೆಗೆದುಕೊಳ್ಳಬಹುದು.
    * ಬಹುಮತ ಸಾಬೀತಿನ ಸಮಯದಲ್ಲಿ ಜೆಡಿಎಸ್- ಕಾಂಗ್ರೆಸ್‍ನ 15ಕ್ಕೂ ಹೆಚ್ಚು ಶಾಸಕರು ಗೈರಾಗುವಂತೆ ನೋಡಿಕೊಳ್ಳುವುದು.
    * ಸಾಂವಿಧಾನಿಕ ಮತ್ತು ಕಾನೂನಾತ್ಮಕವಾಗಿ ಮುಂದಿನ ಹೆಜ್ಜೆ.
    * ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಉಲ್ಲೇಖ.
    * ಜೆಡಿಎಸ್ ಅಥವಾ ಕಾಂಗ್ರೆಸ್ ಶಾಸಕರಿಗೆ ಗಾಳ..?
    * ಮುಖ್ಯವಾಗಿ ಲಿಂಗಾಯತ ಶಾಸಕರನ್ನು ಸೆಳೆಯಲು ಪ್ಲಾನ್.
    * ಜೆಡಿಎಸ್- ಕಾಂಗ್ರೆಸ್ ಮೈತ್ರಿಗೆ ಅಸಮಾಧಾನ ತೋರುವವರ ಮೇಲೆ ಕಣ್ಣು.
    * ಜೆಡಿಎಸ್- ಕಾಂಗ್ರೆಸ್ ಸಂಧಾನದವರೆಗೆ ಕಾದು ನೋಡುವ ತಂತ್ರ.

  • ಜೆಡಿಎಸ್-ಕಾಂಗ್ರೆಸ್ ಮೈತ್ರಿಗಾಗಿ ನಡೆದ ಸಂಧಾನದಲ್ಲಿ ಏನೆಲ್ಲಾ ಚರ್ಚೆಯಾಯ್ತು?

    ಜೆಡಿಎಸ್-ಕಾಂಗ್ರೆಸ್ ಮೈತ್ರಿಗಾಗಿ ನಡೆದ ಸಂಧಾನದಲ್ಲಿ ಏನೆಲ್ಲಾ ಚರ್ಚೆಯಾಯ್ತು?

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮತದಾರ ಯಾವ ಪಕ್ಷಕ್ಕೂ ಬಹುಮತವನ್ನು ನೀಡಿಲ್ಲ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಜೊತೆಯಾಗಿ ಸರ್ಕಾರ ರಚನೆಗೆ ಮುಂದಾಗಿವೆ. ಇನ್ನು 104 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಮಂಗಳವಾರ ರಾಜ್ಯಪಾಲರನ್ನು ಭೇಟಿಯಾಗಿ ಎರಡು ದಿನಗಳ ಕಾಲಾವಕಾಶ ಕೋರಿದೆ.

    ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳ ನಡುವೆ ಸಂಧಾನ ನಡೆದಿದೆ. ಇಂದು ಎರಡೂ ಪಕ್ಷಗಳ ನಿಯೋಗ ಜೊತೆಯಾಗಿ ಸೇರಿ ಜಂಟಿ ಸಭೆ ನಡೆಸಲಿವೆ. ಆದರೆ ಮೈತ್ರಿಗಾಗಿ ನಡೆದ ಸಂಧಾನದಲ್ಲಿ ಏನೆಲ್ಲಾ ಚರ್ಚೆಯಾಯ್ತು?

    ಜೆಡಿಎಸ್- ಕಾಂಗ್ರೆಸ್ ಸಂಧಾನ
    ಸೂತ್ರ- 1
    ಜೆಡಿಎಸ್‍ಗೆ ಮುಖ್ಯಮಂತ್ರಿ ಹುದ್ದೆ
    ಕಾಂಗ್ರೆಸ್‍ಗೆ ದಲಿತ ಡಿಸಿಎಂ ಸ್ಥಾನ

    ಸೂತ್ರ- 2
    ಪೂರ್ಣಾವಧಿಗೆ ಜೆಡಿಎಸ್‍ಗೆ ಬೆಂಬಲ
    ತಲಾ 16 ಸಚಿವ ಸ್ಥಾನಗಳ ಹಂಚಿಕೆ

    ಸೂತ್ರ- 3
    ಉಭಯ ಪ್ರಣಾಳಿಕೆ ಅನುಷ್ಠಾನಕ್ಕೆ ಸಮನ್ವಯ ಸಮಿತಿ
    ಇಬ್ಬರಿಗೂ ಒಪ್ಪಿಗೆ ಆಗುವ ಭರವಸೆಗಳ ಈಡೇರಿಕೆ

    ಇತ್ತ ಬಿಜೆಪಿ ಸರ್ಕಾರ ರಚನೆಗೆ ಎರಡು ದಿನಗಳ ಅವಕಾಶ ಕೋರದಿ ಹಿನ್ನೆಲೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಪಕ್ಷದ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ರೆಸಾರ್ಟ್ ರಾಜಕೀಯದ ಮೊರೆ ಹೋಗಬಹುದು. ಬಿಜೆಪಿ ಬಹುಮತ ಸಾಬೀತು ಮಾಡೋವರೆಗೆ ತಮ್ಮ ಶಾಸಕರನ್ನು ಅವರಿಗೆ ಸಿಗದಂತೆ ನೋಡಿಕೊಳ್ಳುವಂತೆ ಮಾಡುವ ಸಾಧ್ಯತೆಗಳಿವೆ.

  • ನಾವ್ಯಾಕೆ ರೆಸಾರ್ಟ್ ಗೆ ಹೋಗೋಣ: ಸಿದ್ದರಾಮಯ್ಯ

    ನಾವ್ಯಾಕೆ ರೆಸಾರ್ಟ್ ಗೆ ಹೋಗೋಣ: ಸಿದ್ದರಾಮಯ್ಯ

    ಬೆಂಗಳೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡಲಿದೆ. ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಮಾಹಿತಿ ನನಗಿಲ್ಲ. ನಾವ್ಯಾಕೆ ರೆಸಾರ್ಟ್ ಗೆ ಹೋಗಬೇಕೆಂದು ಹಂಗಾಮಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಬುಧವಾರ ಕಾಂಗ್ರೆಸ್-ಜೆಡಿಎಸ್ ಶಾಸಕಾಂಗದ ಸಭೆ ನಡೆಯಲಿದೆ. ಸಭೆಯಲ್ಲಿ ಒಮ್ಮತದ ತೀರ್ಮಾಣ ತೆಗೆದುಕೊಳ್ಳಲಾಗುವುದು. ಈಗಾಗಲೇ ರಾಜ್ಯಪಾಲರಿಗೆ ಸರ್ಕಾರ ರಚನೆ ಮಾಡಲಿದ್ದೇವೆ ಅಂತಾ ಪತ್ರ ಬರೆಯಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ದೇವೇಗೌಡರಿಗೂ ನಮ್ಮ ಬೆಂಬಲವಿದೆ ಅಂತಾ ಪತ್ರದ ಮೂಲಕ ತಿಳಿಸಿದ್ದೇವೆ ಅಂತಾ ಸ್ಪಷ್ಟಪಡಿಸಿದರು. ಇದನ್ನೂ ಓದಿ: ರಾಜ್ಯಪಾಲರ ಅಂಗಳದಲ್ಲೀಗ ಸರ್ಕಾರದ ಚೆಂಡು: ಯಾವ ಸಮಯದಲ್ಲಿ ಏನಾಯ್ತು?

    ಇನ್ನು ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯರ ಆರೋಪಗಳಿಗೆ ಪ್ರತಿಕ್ರಿಯಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ, ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಮಾಡೋದು ಸಹಜ. ಆದ್ರೆ ಆ ವಿಚಾರ ಈಗ ಅಪ್ರಸ್ತುತ. ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ. ಸರ್ಕಾರ ರಚನೆಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದೆ. ಯಾವ ಆಪರೇಷನ್ ಕಮಲ ಕೂಡ ನಡೆಯಲ್ಲ ಅಂತಾ ತಿಳಿಸಿದ್ದಾರೆ.

  • ಜಗದೀಶ್ ಶೆಟ್ಟರ್ ಗೆಲುವು ಘೋಷಣೆಗೆ ಆಯೋಗದಿಂದ ತಡೆ

    ಜಗದೀಶ್ ಶೆಟ್ಟರ್ ಗೆಲುವು ಘೋಷಣೆಗೆ ಆಯೋಗದಿಂದ ತಡೆ

    ಧಾರವಾಡ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆಲುವಿಗೆ ಚುನಾವಣಾ ಅಧಿಕಾರಿಗಳು ತಡೆ ನೀಡಿದ್ದಾರೆ.

    ಬಿಜೆಪಿಯಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡಿದ್ರು. ಇವಿಎಂ ಮಷೀನ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಫಲಿತಾಂಶ ಘೋಷಣೆಯನ್ನು ತಡೆ ಹಿಡಿದಿದ್ದಾರೆ.

    ಇವಿಎಂ ಯಂತ್ರದಲ್ಲಿ ದಾಖಲಾಗಿರುವ ಮತಗಳು ಮತ್ತು ವಿವಿ ಪ್ಯಾಟ್ ಮತಗಳಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ ವೋಟ್‍ಗಳ ಪುನರ್ ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೂ ಕೆಲ ವಿವಿ ಪ್ಯಾಟ್ ಹಾಳೆಗಳು ಮುದ್ರಣವಾಗದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಹು-ಧಾ ಸೆಂಟ್ರಲ್ ಕ್ಷೇತ್ರದ ಮತದಾನದಲ್ಲಿ ಎಣಿಕೆಯಲ್ಲಿ ತಪ್ಪಾಗಿದ್ದು, ಸ್ಲೀಪ್ ಕವರ್‍ಗಳ ಮೇಲ್ ಸೀಲ್ ಇರಲಿಲ್ಲ. ಆದ್ರೆ ಸೀಲ್ ಇರುವ ಕವರ್ ಗಳಲ್ಲಿ ಖಾಲಿ ಸ್ಲೀಪ್‍ಗಳು ಕಂಡು ಬಂದಿದ್ದು, ಮಷೀನ್ ನಲ್ಲಿ ದಾಖಲಾದ ಮತದ ಸಂಖ್ಯೆ ಮತ್ತು ಪೂಲಿಂಗ್ ಆಫೀಸರ ಕೊಟ್ಟ ಸಂಖ್ಯೆಗೆ ವ್ಯತ್ಯಾಸವಿದೆ. ಇವಿಎಂ ಸಂಖ್ಯೆ 135 (ಎ) ತೆಗಿಸಿದಾಗ 450 ಮತ ಬಂದಿವೆ, ಆದ್ರೆ ವಿವಿ ಪ್ಯಾಟ್‍ದಲ್ಲಿ 459 ಮತ ಬಂದಿದ್ದು 204 ಖಾಲಿ ಹಾಳೆ ಬಿದ್ದಿವೆ. ಮಷಿನ್ ನಲ್ಲಿ 91 ಮತ ನನಗೆ ಬಿದ್ದಿದ್ರೆ, ವಿವಿ ಪ್ಯಾಟ್ ನಲ್ಲಿ 89 ತೋರಿಸುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಾಲವಾಡ್ ಆರೋಪಿಸಿದ್ದಾರೆ.

    ಹು-ಧಾ ಸೆಂಟ್ರಲ್ ಕ್ಷೇತ್ರದ ಫಲಿತಾಂಶ ಘೋಷಣೆ ಮಾಡಬಾರದು ಹಾಗು ಮರು ಎಣಿಕೆ ನಡೆಸಬೇಕು. ಈ ಕೆಲಸದಲ್ಲಿ ಬಿಜೆಪಿಯ ಕೈವಾಡವಿದ್ದು, ಇದೆಲ್ಲ ಗೊತ್ತಿದ್ದರಿಂದ ಅಮಿತ್ ಶಾ ಸಹ ಕೇವಲ ಅಭ್ಯರ್ಥಿ ಹಾಕಿ ಅಂದಿದ್ರು. ನಾವು ಮರು ಎಣಿಕೆಗೆ ಒತ್ತಾಯ ಮಾಡಿದ್ದೇವೆ ಅಂತಾ ಮಹೇಶ್ ನಾಲವಾಡ್ ಹೇಳಿದ್ದಾರೆ.

    ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್ ಶೆಟ್ಟರ್, ಇವಿಎಂ ಯಂತ್ರಗಳಲ್ಲಿ ಯಾವುದೇ ತಾಂತ್ರಿಕ ದೋಷಗಳಿಲ್ಲ. ಸೋಲಿನ ಹತಾಶೆಯಿಂದ ಕಾಂಗ್ರೆಸ್ ಈ ರೀತಿ ಆರೋಪಗಳನ್ನು ಮಾಡ್ತಿದೆ. 20 ಸಾವಿರ ಮತಗಳ ಅಂತದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದೇನೆ. ಇವಿಎಂ ಮತ್ತು ವಿವಿ ಪ್ಯಾಟ್ ಗಳಿಗೆ ಸಂಬಂಧಿಸಿದ ಗೊಂದಲಗಳನ್ನು ಚುನಾವಣಾ ಅಧಿಕಾರಿಗಳು ಬಗೆಹರಿಸುತ್ತಾರೆ ಅಂತಾ ಸ್ಪಷ್ಟನೆ ಕೊಟ್ಟಿದ್ದಾರೆ.

  • ಗದಗ – ಮೂರು ಕ್ಷೇತ್ರದಲ್ಲಿ ಅರಳಿತು ಕಮಲ

    ಗದಗ – ಮೂರು ಕ್ಷೇತ್ರದಲ್ಲಿ ಅರಳಿತು ಕಮಲ

    ಗದಗ: ವಿಧಾನಸಭಾ ಚುನಾವಣೆಯ ಒಟ್ಟು ನಾಲ್ಕು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

    ಗದಗ ಜಿಲ್ಲೆ ನಾಲ್ಕು ವಿಧಾನಸಭಾ ಮತಕ್ಷೇತ್ರಗಳಿದ್ದು, 3 ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದ್ದು, 1 ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸಿದೆ.

    ಗದಗದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ ಪಾಟೀಲ್ 77,699 ಮತಗಳನ್ನು ಪಡೆದು 1,850 ಮತಗಳ ಅಂತರದಿಂದ ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಅನಿಲ್ ಮೆಣಸಿನಕಾಯಿ(75,849) ರನ್ನು ಸೋಲಿಸಿದ್ದಾರೆ.

    ರೋಣ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ 83,735 ಮತಗಳನ್ನು ಪಡೆದು 7,334 ಮತಗಳಿಂದ ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಆದ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್ ಪಾಟೀಲ್ 76,401 ಮತಗಳನ್ನು ಪಡೆದರು.

    ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ್ 73,045 ಮತಗಳನ್ನು ಪಡೆದು 7,979 ಅಂತರದಿಂದ ಗೆಲವು ತಮ್ಮದಾಗಿಸಿಕೊಂಡಿದ್ದಾರೆ. ಪ್ರತಿಸ್ಪರ್ಧಿ ಆಗಿದ್ದ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್ ಯಾವಗಲ್ 65,066 ಮತಗಳನ್ನು ಪಡೆದಿದ್ದಾರೆ.

    ಬಿಜೆಪಿ ಅಭ್ಯರ್ಥಿ ರಾಮಣ್ಣ ಲಮಾಣಿ ಶಿರಹಟ್ಟಿಯಲ್ಲಿ 91,967 ಮತಗಳನ್ನು ಪಡೆಯುವುದರ ಮೂಲಕ 29,993 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ 61,974 ಮತಗಳಿಂದ ಸೋಲನ್ನಪ್ಪಿದ್ದಾರೆ.

  • ರಾಜ್ಯದ ಜನತೆ ಡೀಲ್ ಪಾರ್ಟಿಗೆ ಸ್ಪಷ್ಟ ಅಧಿಕಾರ ನೀಡಿಲ್ಲ: ಹೆಚ್.ಆಂಜನೇಯ

    ರಾಜ್ಯದ ಜನತೆ ಡೀಲ್ ಪಾರ್ಟಿಗೆ ಸ್ಪಷ್ಟ ಅಧಿಕಾರ ನೀಡಿಲ್ಲ: ಹೆಚ್.ಆಂಜನೇಯ

    ಚಿತ್ರದುರ್ಗ: ಕರ್ನಾಟಕ ಜನತೆ ಡೀಲ್ ಪಾರ್ಟಿಗೆ ಸ್ಪಷ್ಟ ಅಧಿಕಾರ ನೀಡಿಲ್ಲ. ನಮ್ಮ ಸರ್ಕಾರ ಅಭಿವೃದ್ಧಿ ಕಾರ್ಯಗಳ ವಿರುದ್ಧ ಅಪಪ್ರಚಾರ ಮಾಡಲಾಯಿತು. ಪ್ರಧಾನಿ ಮೋದಿ ಕೂಡ ಆಧಾರ ರಹಿತವಾಗಿ ಆರೋಪ ಮಾಡಿದ್ರು ಅಂತಾ ಮಾಜಿ ಸಮಾಜ ಕಲ್ಯಾಣ ಸಚಿವ ಆಂಜನೇಯ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿಗೆ ಬಹುಮತ ಸಿಗದಿರುವುದು ನಮಗೆ ನೆಮ್ಮದಿ ತಂದಿದೆ. ವಾಮ ಮಾರ್ಗದ ಮೂಲಕ ಗೆಲುವು ಸಾಧಿಸಲು ಹೊರಟ್ಟಿದ್ದ ಬಿಜೆಪಿ ಯತ್ನಕ್ಕೆ ವಿಫಲವಾಗಿದೆ. ಪ್ರಜಾಪ್ರಭುತ್ವಕ್ಕೆ ಅಪಚಾರವೆಸಗಿ, ಅಪಕೀರ್ತಿಗೆ ಒಳಗಾಗಿರುವ ಬಿಜೆಪಿಗೆ ಅಧಿಕಾರ ನೀಡದಿರುವುದು ಸ್ವಾಗತಾರ್ಹ. ಕರ್ನಾಟಕದ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದ್ರು.

    ಚುನಾವಣೆಯಲ್ಲಿ ಸೋಲು-ಗೆಲುವನ್ನು ಎರಡನ್ನೂ ಸಮಾನಾಗಿ ಸ್ವೀಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಹೋರಾಟ ಮಾಡಲಿದ್ದು, ನಮ್ಮ ಬೆಂಬಲವನ್ನು ಜೆಡಿಎಸ್ ಗೆ ನೀಡುತ್ತೇವೆ ಅಂತಾ ತಿಳಿಸಿದ್ರು.

    ಈ ಬಾರಿ ಹೆಚ್. ಆಂಜನೇಯ ಹೊಳಲ್ಕರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು. ಆದ್ರೆ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ ವಿರುದ್ಧ 40 ಸಾವಿರ ಮತಗಳಿಂದ ಪರಾಭವಗೊಂಡಿದ್ದಾರೆ.

  • ಕ್ಷೇತ್ರದ ಜನ ನನ್ನನ್ನ ಮನೆ ಮಗ ಅಂತಾ ಆಶೀರ್ವದಿಸಿದ್ದಾರೆ: ಜಮೀರ್ ಅಹ್ಮದ್

    ಕ್ಷೇತ್ರದ ಜನ ನನ್ನನ್ನ ಮನೆ ಮಗ ಅಂತಾ ಆಶೀರ್ವದಿಸಿದ್ದಾರೆ: ಜಮೀರ್ ಅಹ್ಮದ್

    ಬೆಂಗಳೂರು: ಕ್ಷೇತ್ರದ ಜನ ನನ್ನನ್ನು ಮನೆ ಮಗ ಅಂತಾ ಆಶೀರ್ವದಿಸಿ ಗೆಲ್ಲಿಸಿದ್ದಾರೆ ಎಂದು ಚಾಮರಾಜಪೇಟೆಯ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

    ಕ್ಷೇತ್ರದ ಜನ ನನ್ನನ್ನು ರಾಜಕೀಯ ವ್ಯಕ್ತಿ ಎಂದು ಭಾವಿಸಿಲ್ಲ. ಮುಂದಿನ ದಿನಗಳಲ್ಲಿ ಅವರ ಸೇವೆ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸುತ್ತೇನೆ. ಮುಂಬರುವ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ ಇನ್ನು ಅನೇಕ ಅಭಿವೃದ್ಧಿ ಕೆಲಸ ಕಾರ್ಯ ಮಾಡುತ್ತೇನೆ ಅಂತಾ ಅಂದ್ರು.

    ನನ್ನ ಮತ್ತು ಕುಮಾರಸ್ವಾಮಿ ಅವರ ನಡುವೆ ವ್ಯತ್ಯಾಸವಿದೆ. ನಾನಾಗಿಯೇ ಜೆಡಿಎಸ್ ಬಿಟ್ಟಿಲ್ಲ, ನನ್ನನ್ನು ಪಕ್ಷ ಬಿಡುವಂತೆ ಮಾಡಲಾಯಿತು. ಬಿಜೆಪಿ ಕೋಮವಾದಿ ಪಕ್ಷವಾಗಿದ್ದು, ಜೆಡಿಎಸ್ ಸೆಕ್ಯೂಲರ್ ಆಗಿದೆ. ಇಂದಿಗೂ ನಾನು ಜೆಡಿಎಸ್ ಬಿಟ್ಟಿದ್ದನ್ನು ಇಂದಿಗೂ ಸಮರ್ಥಿಸಿಕೊಳ್ಳುತ್ತೇನೆ ಅಂತಾ ಸ್ಪಷ್ಟಪಡಿಸಿದ್ರು.