Tag: Karnataka Election 2018

  • ಸಿದ್ದರಾಮಯ್ಯ ಆಪ್ತನ ನಡೆಯಿಂದ ಕಾಂಗ್ರೆಸ್ ಮುಖಂಡರಲ್ಲಿ ಆತಂಕ!

    ಸಿದ್ದರಾಮಯ್ಯ ಆಪ್ತನ ನಡೆಯಿಂದ ಕಾಂಗ್ರೆಸ್ ಮುಖಂಡರಲ್ಲಿ ಆತಂಕ!

    ಬೆಳಗಾವಿ: ಕಾಂಗ್ರೆಸ್ ಮುಖಂಡ, ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ನಿಗೂಢ ನಡೆಯಿಂದ ಇದೀಗ ಪಕ್ಷದ ಮುಖಂಡರಲ್ಲಿ ಆತಂಕ ಮೂಡಿದೆ.

    ತಾನು ತೆರಳದೆ ತನ್ನ ಬೆಂಬಲಿಗ ಶಾಸಕರಿಗೂ ಬೆಂಗಳೂರಿಗೆ ತೆರಳದಂತೆ ಸೂಚನೆ ನಿಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಅಥಣಿ ಕಾಂಗ್ರೆಸ್ ಶಾಸಕ ಮಹೇಶ ಕುಮಟಳ್ಳಿ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲರಿಗೂ ಬೆಂಗಳೂರಿಗೆ ತೆರಳದಂತೆ ರಮೇಶ್ ಸೂಚನೆ ನೀಡಿದ್ದಾರೆ. ಹೀಗಾಗಿ ಬೆಂಗಳೂರಿಗೆ ತೆರಳಲು ರಮೇಶ ಜಾರಕಿಹೊಳಿ ಆದೇಶಕ್ಕೆ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಟಳ್ಳಿ ಕಾದು ಕುಳಿತಿದ್ದಾರೆ ಎನ್ನಲಾಗಿದೆ.

    ಇಬ್ಬರೂ ಅಭ್ಯರ್ಥಿಗಳ ಆಯ್ಕೆಗಾಗಿ ಹಗಲಿರುಳು ಶ್ರಮ ವಹಿಸಿದ್ದ ರಮೇಶ ಜಾರಕಿಹೊಳಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ. ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿ ಅವರು ನಿಗೂಢ ನಡೆಯಿಂದಾಗಿ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಆತಂಕ ಮೂಡಿದೆ ಎಂಬುದಾಗಿ ತಿಳಿದುಬಂದಿದೆ.

  • ಕಾಂಗ್ರೆಸ್ ಶಾಸಕಾಂಗ ಸಭೆಗೆ 13 ಶಾಸಕರು ಗೈರು

    ಕಾಂಗ್ರೆಸ್ ಶಾಸಕಾಂಗ ಸಭೆಗೆ 13 ಶಾಸಕರು ಗೈರು

    ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದ್ದು, 13 ಮಂದಿ ಶಾಸಕರು ಗೈರು ಹಾಜರಿ ಹಾಕಿದ್ದಾರೆ.

    66 ಜನ ಶಾಸಕರ ಹಾಜರಾತಿಯಲ್ಲಿ ಸಭೆ ಆರಂಭಗೊಂಡಿದೆ. ಶಾಸಕರು ಯಾಕೆ ಆಗಮಿಸಿಲ್ಲ ಎಂದು ಕೇಳಿದ್ದಕ್ಕೆ ದೇಶಪಾಂಡೆ, ನಿನ್ನೆ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಅವರೆಲ್ಲ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಹೀಗಾಗಿ ತಡವಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.

    ಗೈರು ಹಾಜರಿ ಹಾಕಿರುವ ಶಾಸಕರು:
    ಗಣೇಶ್ ಹುಕ್ಕೇರಿ(ಚಿಕ್ಕೋಡಿ ಸದಲಗ), ಆನಂದ ಸಿಂಗ್(ವಿಜಯನಗರ), ನಾಗೇಂದ್ರ(ಕೂಡ್ಲಿಗಿ), ಭೀಮಾನಾಯಕ್(ಹಗರಿ ಬೊಮ್ಮನಹಳ್ಳಿ) ಜಮೀರ್ ಅಹಮ್ಮದ್(ಚಾಮರಾಜಪೇಟೆ), ಅಖಂಡ ಶ್ರೀನಿವಾಸಮೂರ್ತಿ(ಪುಲಿಕೇಶಿ ನಗರ), ತುಕಾರಾಂ(ಸಂಡೂರು), ಮಹಂತೇಶ್ ಕೌಜಲಗಿ (ಬೈಲಹೊಂಗಲ), ಶಿವಾನಂದ ಪಾಟೀಲ್(ಬಸವನಬಾಗೇವಾಡಿ), ಯಶವಂತ ರಾಯಗೌಡ(ಇಂಡಿ), ರಾಜೇಗೌಡ(ಶೃಂಗೇರಿ), ಸತೀಶ್ ಜಾರಕಿಹೊಳಿ(ಯಮಕನಮರಡಿ), ರಮೇಶ್ ಜಾರಕಿಹೊಳಿ(ಗೋಕಾಕ್), ಬಸವನಗೌಡ ದದ್ದಲ(ರಾಯಚೂರು ಗ್ರಾಮಾಂತರ), ದುರ್ಗಪ್ಪ ಹೂಲಗೇರಿ(ಲಿಂಗಸಗೂರು).

  • ಬಿಜೆಪಿಯ 6 ಶಾಸಕರು ನಮ್ಮ ಟಚ್ ನಲ್ಲಿದ್ದಾರೆ- ಸಚಿವ ಎಂಬಿ ಪಾಟೀಲ್

    ಬಿಜೆಪಿಯ 6 ಶಾಸಕರು ನಮ್ಮ ಟಚ್ ನಲ್ಲಿದ್ದಾರೆ- ಸಚಿವ ಎಂಬಿ ಪಾಟೀಲ್

    ಬೆಂಗಳೂರು: ಬಿಜೆಪಿಯ ಆರು ಮಂದಿ ನಮ್ಮ ಟಚ್ ನಲ್ಲಿದ್ದಾರೆ ಅಂತ ಸಚಿವ ಎಂಬಿ ಪಾಟೀಲ್ ಹೇಳಿದ್ದು, ಇದೀಗ ತೀವ್ರ ಕುತೂಹಲ ಮೂಡಿಸಿದೆ.

    ಕಾಂಗ್ರೆಸ್ ಶಾಸಕರು ಎಲ್ಲರೂ ಒಗ್ಗಟ್ಟಾಗಿದ್ದಾರೆ. ನಮ್ಮಲ್ಲಿ ಯಾವ ಶಾಸಕರ ಮೇಲೂ ಅನುಮಾನವಿಲ್ಲ. ಎಲ್ಲರೂ ಗಟ್ಟಿಯಾಗಿದ್ದಾರೆ. ಶಾಸಕಾಂಗದ ಸಭೆಗೆ ಕೆಲವರು ಬರುತ್ತಾ ಇದ್ದಾರೆ. ಇನ್ನುಳಿದವರು ಈಗಾಗಲೇ ಬಂದಿದ್ದಾರೆ. ಹೀಗಾಗಿ ಹರಿದಾಡುತ್ತಿರುವ ಊಹಾಪೋಹಗಳೆಲ್ಲ ಸುಳ್ಳು. ಉಲ್ಟಾ ಬಿಜೆಪಿಯ 6 ಮಂದಿ ಶಾಸಕರು ನಮ್ಮೊಂದಿಗಿದ್ದಾರೆ. ಆದ್ರೆ ಅವರು ಯಾರು ಅಂತ ಹೇಳಕ್ಕಾಗಲ್ಲ ಅಂತ ಹೇಳುವ ಮೂಲಕ ಸಚಿವರು ನುಣುಚಿಕೊಂಡರು.

    ರಾಜ್ಯ ಚುನಾವಣಾ ಫಲಿತಾಂಶ ಮಂಳವಾರ ಹೊರಬಿದ್ದಿದ್ದು, ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದ್ರೆ ಸರ್ಕಾರ ರಚನೆಗೆ ಸಾಧ್ಯವಾಗದೆ ಜೆಡಿಎಸ್- ಕಾಂಗ್ರೆಸ್ ಮೈತ್ರಿಗೆ ಮುಂದಾಗಿವೆ. ಈ ಮಧ್ಯೆ ಬಿಜೆಪಿ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ನಾಳೆಯೇ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಅಂತ ಹೇಳುತ್ತಿದ್ದಾರೆ. ಅಲ್ಲದೇ ಅಪರೇಷನ್ ಫ್ಲವರ್ ಎಂಬ ಹೆಸರಿನಡಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯನ್ನು ಮುರಿಯಲು ಪ್ರಯತ್ನಿಸುತ್ತಿದೆ. ಇತ್ತ ಆಪರೇಷನದ ಕಮಲಕ್ಕೆ ಬೆದರಿದ ಕಾಂಗ್ರೆಸ್, ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ರೆಸಾರ್ಟ್ ನತ್ತ ಮುಖಮಾಡಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭಿಸಿದೆ.

  • ಹೈಜಾಕ್ ಆಗಲಿ, ಏನೇ ಆಗಲಿ ಕುಮಾರಸ್ವಾಮಿಯೇ ಸಿಎಂ-  ಹೆಚ್.ಡಿ.ರೇವಣ್ಣ

    ಹೈಜಾಕ್ ಆಗಲಿ, ಏನೇ ಆಗಲಿ ಕುಮಾರಸ್ವಾಮಿಯೇ ಸಿಎಂ- ಹೆಚ್.ಡಿ.ರೇವಣ್ಣ

    ಬೆಂಗಳೂರು: ಯಾವುದೇ ಹೈಜಾಕ್ ಆಗಲಿ ಏನೇ ಆಗಲಿ, ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಸರ್ಕಾರ ರಚನೆಯಾಗುತ್ತದೆ. ಅವರೇ ಸಿಎಂ ಆಗುವುದು ನಿಶ್ಚಿತ ಎಂದು ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.

    ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡರ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಬಾರಿ ನಮ್ಮ ಪಕ್ಷದಿಂದ ಆಯ್ಕೆಯಾದ 38 ಶಾಸಕರು ಎಲ್ಲಿಯೂ ಹೋಗುವುದಿಲ್ಲ. ನಿಷ್ಠೆಯಿಂದ ಪಕ್ಷದ ಜೊತೆಗಿರುತ್ತಾರೆ. ಕುಮಾರಸ್ವಾಮಿ ಸಿಎಂ ಆಗೋದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸದ ಕಡೆಗೆ ಎಲ್ಲರ ಚಿತ್ತ ಹರೆದಿದ್ದು, ಎಚ್.ಡಿ.ರೇವಣ್ಣ ಅವರು ದೇವರ ಪ್ರಸಾದ ಹಿಡಿದು ದೇವೇಗೌಡರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ದಾಸರಹಳ್ಳಿ ಶಾಸಕ ಮಂಜುನಾಥ್, ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಹಾಜರಿದ್ದರು.

    ದೇವೇಗೌಡರು ಈಗಾಗಲೇ ಜೆಡಿಎಸ್ ಶಾಸಕರ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕು ಎಂದು ಶ್ರೀಕಂಠೇಗೌಡರಿಗೆ ನಿರ್ದೇಶನ ನೀಡಿದ್ದಾರೆ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕೇಳಿಬಂದಿದೆ.

    ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಂಶೆಂಪುರ್ ಮತ್ತು ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

  • ಬಿಜೆಪಿಗೆ ಸೆಳೆಯಲು ಯತ್ನಿಸಿದ ಈಶ್ವರಪ್ಪಗೆ ಖಡಕ್ ತಿರುಗೇಟು ಕೊಟ್ಟ ಕಾಂಗ್ರೆಸ್ ಶಾಸಕ

    ಬಿಜೆಪಿಗೆ ಸೆಳೆಯಲು ಯತ್ನಿಸಿದ ಈಶ್ವರಪ್ಪಗೆ ಖಡಕ್ ತಿರುಗೇಟು ಕೊಟ್ಟ ಕಾಂಗ್ರೆಸ್ ಶಾಸಕ

    ಚಾಮರಾಜನಗರ: ಕ್ಷೇತ್ರದ ಕಾಂಗ್ರೆಸ್ ಶಾಸಕರೊಬ್ಬರನ್ನು ಬಿಜೆಪಿಗೆ ಸೆಳೆಯಲು ವಿಪಕ್ಷ ನಾಯಕ ಈಶ್ವರಪ್ಪ ಯತ್ನಿಸುತ್ತಿದ್ದಾರೆ.

    ಸಚಿವ ಸ್ಥಾನ ನೀಡುತ್ತೇವೆ ಬನ್ನಿ ಎಂದು ಈಶ್ವರಪ್ಪ ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿಯನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ್ದಾರೆ. ಆದರೆ ಈಶ್ವರಪ್ಪ ಅವರ ಆಫರ್ ಗೆ ಶಾಸಕ ಪುಟ್ಟರಂಗಶೆಟ್ಟಿ ಒಪ್ಪಿಗೆ ನೀಡುತ್ತಿಲ್ಲ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಈಶ್ವರಪ್ಪ ಅವರು ಕಾಂಗ್ರೆಸ್ ಶಾಸಕ ಸಿ. ಪುಟ್ಟರಂಗಶೆಟ್ಟಿಯನ್ನು ಬೆಳಗ್ಗೆಯಿಂದ ಐದು ಬಾರಿ ದೂರವಾಣಿ ಕರೆ ಮಾಡಿದ್ದಾರೆ. ಅಂತಿಮ ಕರೆಯಲ್ಲಿ ನನಗೆ ಇನ್ನೊಮ್ಮೆ ಕರೆ ಮಾಡಬೇಡಿ ಎಂದು ಪುಟ್ಟರಂಗಶೆಟ್ಟಿ ಅವರು ಈಶ್ವರಪ್ಪ ಗೆ ಬೈದಿದ್ದಾರೆ.

  • ನಾಳೆಯೇ ಪ್ರಮಾಣ ವಚನ ಸ್ವೀಕಾರ ಮಾಡ್ತೀನಿ: ಬಿ.ಎಸ್.ಯಡಿಯೂರಪ್ಪ

    ನಾಳೆಯೇ ಪ್ರಮಾಣ ವಚನ ಸ್ವೀಕಾರ ಮಾಡ್ತೀನಿ: ಬಿ.ಎಸ್.ಯಡಿಯೂರಪ್ಪ

    ಬೆಂಗಳೂರು: ಬಿಜೆಪಿ ಈ ಬಾರಿ ಚುನಾವಣೆಯಲ್ಲಿ 104 ಸೀಟ್ ಪಡೆದ್ರೂ ಸರ್ಕಾರ ರಚನೆಗೆ ಸಾಧ್ಯವಾಗಿಲ್ಲ. ಆದ್ರೂ ನಾಳೆಯೇ ಪ್ರಮಾಣ ವಚನ ಸ್ವೀಕರಿಸಲು ಕಾಲಾವಕಾಶ ನೀಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಅಂತಾ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯಲಿದ್ದು, ಅಲ್ಲಿ ಎಲ್ಲರ ಸಮ್ಮುಖದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಶಾಸಕಾಂಗದ ನಾಯಕನಾಗಿ ಆಯ್ಕೆಯಾದ ಬಳಿಕ ನೇರವಾಗಿ ರಾಜಭವನಕ್ಕೆ ಹೋಗುತ್ತೇವೆ. ರಾಜ್ಯಪಾಲರನ್ನು ಭೇಟಿ ಮಾಡಿ ನಮ್ಮ ಬೇಡಿಕೆಯನ್ನು ಸಲ್ಲಿಸುತ್ತೇವೆ. ಕಾಂಗ್ರೆಸ್‍ನ್ನು ಜನರು ತಿರಸ್ಕರಿಸಿದ್ರೂ ಹಿಂಬಾಗಿಲಿನಿಂದ ಬರಲು ಪ್ರಯತ್ನ ಮಾಡುತ್ತಿದೆ ಅಂತಾ ಗರಂ ಆದ್ರು.

    ಬೆಳಗ್ಗೆ 8ಗಂಟೆಯಿಂದಲೂ ಯಡಿಯೂರಪ್ಪರ ನಿವಾಸಕ್ಕೆ ಸಾಲು ಸಾಲು ನಾಯಕರು ಭೇಟಿ ನೀಡುತ್ತಿದ್ದಾರೆ. ಕೆ.ಎಸ್.ಈಶ್ವರಪ್ಪ, ಗೋವಿಂದ್ ಕಾರಜೋಳ, ಸಿಎಂ ಉದಾಸಿ, ಜಿ.ಎಂ.ಸಿದ್ದೇಶ್ವರ, ಅರಗ ಜ್ಞಾನೇಂದ್ರ, ಕನನಗಿರಿ ಬಸವರಾಜ ಮತ್ತಿತರ ನಾಯಕರು ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸುತ್ತಿದ್ದಾರೆ.

    ಇದೇ ವೇಳೆ ಮಾತನಾಡಿದ ಶಾಸಕ ಗೋವಿಂದ ಕಾರಜೋಳ, ಬಿಜೆಪಿ ಪಕ್ಷವನ್ನ ಬೆಂಬಲಿಸಿದ್ದಕ್ಕೆ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಸಂವಿಧಾನ ಬದ್ಧವಾಗಿ ನಾವೇ ಸರ್ಕಾರ ರಚನೆ ಮಾಡ್ತೀವಿ ಅಂತಾ ಹೇಳಿದ್ರು.

  • ಆಪರೇಷನ್ ಕಮಲದ ಭೀತಿ: 102 ರೂಮ್ ಬುಕ್ ಮಾಡಿದ ಕಾಂಗ್ರೆಸ್ ಶಾಸಕರು

    ಆಪರೇಷನ್ ಕಮಲದ ಭೀತಿ: 102 ರೂಮ್ ಬುಕ್ ಮಾಡಿದ ಕಾಂಗ್ರೆಸ್ ಶಾಸಕರು

    ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಸರ್ಕಾರ ರಚನೆಯ ಹಿನ್ನೆಲೆಯಲ್ಲಿ ಶಾಸಕಾಂಗ ಪಕ್ಷದ ಸಭೆ ಬಳಿಕ ಎಲ್ಲಾ ಶಾಸಕರು ಈಗಲ್ ಟನ್ ರೆಸಾರ್ಟ್ ಗೆ ತೆರಳಲಿದ್ದಾರೆ.

    ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಶಾಸಕರು ರೆಸಾರ್ಟ್ ಕಡೆ ಮುಖ ಮಾಡಿದ್ದಾರೆ. ಹೀಗಾಗಿ ಈಗಾಗಲೇ ರೆಸಾರ್ಟ್ ನಲ್ಲಿ 102 ರೂಮ್ ಗಳನ್ನು ಕೆಪಿಸಿಸಿ ಬುಕ್ ಮಾಡಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಈ ಮೊದಲು ಶಾಸಕರನ್ನು ಕೊಚ್ಚಿಗೆ ಕರೆದುಕೊಂಡು ಹೋಗುವುದಾಗಿ ಹೇಳಲಾಗಿತ್ತು. ಹೀಗಾಗಿ ಅಲ್ಲಿನ ಕೆಲ ರೆಸಾರ್ಟ್ ಗಳಲ್ಲಿ ಕೂಡ ರೂಂ ಬುಕ್ ಮಾಡಲಾಗಿತ್ತು. ಆದ್ರೆ ಇದೀಗ ಕಾಂಗ್ರೆಸ್ ನಾಯಕರುಗಳು ಮತ್ತೊಂದು ತಂತ್ರಗಾರಿಕೆ ಮಾಡುತ್ತಿದ್ದು, ಬಿಡದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ನತ್ತ ಮುಖ ಮಾಡಿದ್ದಾರೆ.

    ಈ ರೆಸಾರ್ಟ್ ಡಿಕೆ ಸುರೇಶ್ ಹಾಗೂ ಡಿಕೆ ಶಿವಕುಮಾರ್ ಅವರ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೇ ಕುಮಾರಸ್ವಾಮಿ ಅವರ ಕ್ಷೇತ್ರ ರಾಮನಗರದ ಪಕ್ಕದಲ್ಲಿದೆ. ಇನ್ನು ಬೆಂಗಳೂರಿಗೆ ಕೂಡ ಹತ್ತಿರವಾಗಿರುವುದರಿಂದ ಶಾಸಕರು ಕರೆದುಕೊಂಡು ಬರಲು ಹೀಗೆ ಎಲ್ಲದಕ್ಕೂ ಅನುಕೂಲವಾಗಲಿದೆ. ಹೀಗಾಗಿ ಈ ರೆಸಾರ್ಟ್ ಅನ್ನು ನಾಯಕರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಇನ್ನೊಂದು ಪ್ರಮುಖ ಅಂಶವೆಂದರೆ ಇಲ್ಲಿ ಕೇವಲ ಕಾಂಗ್ರೆಸ್ ಶಾಸಕರಿಗಷ್ಟೇ ರೂಂ ಗಳನ್ನು ಬುಕ್ ಮಾಡಲಾಗಿದೆ. ಆದ್ರೆ ಜೆಡಿಎಸ್ ಶಾಸಕರು ಎಲ್ಲಿ ಹೋಗುತ್ತಾರೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

  • ನಾವು ರಾಜಕಾರಣಿಗಳು, ನಮಗೂ ರಾಜಕೀಯ ಮಾಡೋದಕ್ಕೆ ಬರುತ್ತೆ: ಡಿಕೆ ಶಿವಕುಮಾರ್

    ನಾವು ರಾಜಕಾರಣಿಗಳು, ನಮಗೂ ರಾಜಕೀಯ ಮಾಡೋದಕ್ಕೆ ಬರುತ್ತೆ: ಡಿಕೆ ಶಿವಕುಮಾರ್

    ಬೆಂಗಳೂರು: ನಾವು ರಾಜಕಾರಣಿಗಳು, ನಮಗೂ ರಾಜಕೀಯ ಮಾಡೋದಕ್ಕೆ ಬರುತ್ತದೆ. ಬಿಜೆಪಿ ನಮ್ಮ ಹಾಗು ಜೆಡಿಎಸ್ ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡುತ್ತಿದೆ ಅಂತಾ ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

    ನಮ್ಮ ಯಾವ ಶಾಸಕರು ಕಾಂಗ್ರೆಸ್ ತೊರೆಯುವುದಿಲ್ಲ. ಇತ್ತ ಜೆಡಿಎಸ್ ಶಾಸಕರು ಪಕ್ಷದಿಂದ ದೂರ ಹೋಗಲ್ಲ. ಎಲ್ಲರೂ ನಮ್ಮ ಶಾಸಕರ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ ನಮ್ಮ ಬಹುಮತವಿದ್ದು, ನಾವೇ ಸರ್ಕಾರ ರಚಿಸಲಿದ್ದೇವೆ ಅಂತಾ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

    ಬಯ್ಯಾಪುರ್ ಒಬ್ಬರೆ ಅಲ್ಲಾ, ಎಲ್ಲಾ ಕಾಂಗ್ರೆಸ್ ಶಾಸಕರಿಗೂ ಬಿಜೆಪಿಯವರು ಕರೆ ಮಾಡುತ್ತಿದ್ದಾರೆ. ಆದರೆ ನಮ್ಮ ಶಾಸಕರೇನು ದಡ್ಡರಲ್ಲ. ವೋಟು ಹಾಕಿದ ಹಳ್ಳಿ ಜನ ಅಷ್ಟು ಸುಲಭವಾಗಿ ಬೇರೆ ಪಕ್ಷಕ್ಕೆ ಹೋಗೋಕೆ ಬಿಡಲ್ಲ. ನಾವು ರಾಜಕಾರಣಿಗಳು, ರಾಜಕೀಯ ಮಾಡೋಕೆ ನಮಗು ಬರುತ್ತೆ. ಬಿಜೆಪಿ ಯಾವ ಯಾವ ನಾಯಕರಿಗೆ ಕರೆ ಮಾಡಿದ್ದಾರೆ ಎನ್ನುವ ಪಟ್ಟಿಯನ್ನು ಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

  • ಬಿಜೆಪಿ ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದೆ: ದಿನೇಶ್ ಗುಂಡೂರಾವ್

    ಬಿಜೆಪಿ ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿ ಬ್ಲಾಕ್ ಮೇಲ್ ತಂತ್ರವನ್ನು ಅನುಸರಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

    ಸರ್ಕಾರ ರಚನೆಗೆ ಬೇರೆಯವರಿಗೆ ಅವಕಾಶ ನೀಡುವ ಮಾತೇ ಇಲ್ಲ ಅಂತಾ ಪ್ರಧಾನಿ ಮೋದಿ ಹೇಳ್ತಾರೆ ಅಂದ್ರೆ ಎಂತಹ ಲೆವಲ್ ಗೆ ಇಳಿದಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಕರ್ನಾಟಕದ ಜನತೆ ಅವರಿಗೆ ಸಂಪೂರ್ಣ ಬಹುಮತ ನೀಡಿಲ್ಲ. ಹೀಗಾಗಿ ಸರ್ಕಾರ ರಚನೆಯಿಂದ ದೂರ ಇದ್ರೆ ಸರಿಯಾಗುತ್ತೆ ಅಂತಾ ತಿಳಿಸಿದ್ರು. ಇದನ್ನೂ ಓದಿ: ವೀರಶೈವ ಮುಖಂಡರು ಬಿಜೆಪಿ ಸೇರ್ತಾರಾ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ

    ವಾಮಾ ಮಾರ್ಗ, ಬ್ಲಾಕ್ ಮೇಲ್, ಕುದುರೆ ವ್ಯಾಪಾರ ಮೂಲಕ ಕಾಂಗ್ರೆಸ್ ಹಾಗು ಜೆಡಿಎಸ್ ಶಾಸಕರನ್ನು ಖರೀದಿಸುವ ಹೇಸಿಗೆ ತರಿಸುವಂತ ವಾತಾವರಣವನ್ನು ಕರ್ನಾಟಕದಲ್ಲಿ ನಿರ್ಮಾಣ ಮಾಡಬೇಡಿ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಬಹುಮತವನ್ನು ಪಡೆದುಕೊಂಡಿದೆ. ಈ ಹಿಂದೆಯೂ ಕರ್ನಾಟಕದ ಜನರು ಆಪರೇಷನ್ ಕಮಲದಂತಹ ಕೀಳುಮಟ್ಟದ ರಾಜಕೀಯವನ್ನು ನೋಡಿದ್ದಾರೆ. ಒಂದು ವೇಳೆ ಸ್ವಯಂ ಪ್ರೇರಿತವಾಗಿ ಶಾಸಕರು ನಿಮ್ಮ ಬಳಿ ಬಂದ್ರೆ ಕರೆದುಕೊಂಡು ಹೋಗಿ ನಮ್ಮದೇನು ವಿರೋಧವಿಲ್ಲ ಅಂತಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಸ್ಫೋಟಕ ಮಾಹಿತಿ ಹೊರಗೆಡವಿದ ಕೆ.ಎಸ್ ಈಶ್ವರಪ್ಪ

  • ಸ್ಫೋಟಕ ಮಾಹಿತಿ ಹೊರಗೆಡವಿದ ಕೆ.ಎಸ್ ಈಶ್ವರಪ್ಪ

    ಸ್ಫೋಟಕ ಮಾಹಿತಿ ಹೊರಗೆಡವಿದ ಕೆ.ಎಸ್ ಈಶ್ವರಪ್ಪ

    ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಬೆನ್ನಲ್ಲೇ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸ್ಫೋಟಕ ಮಾಹಿತಿಯನ್ನು ರಿವೀಲ್ ಮಾಡಿದ್ದಾರೆ.

    ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಯನ್ನು ಸಂಪರ್ಕಿಸುತ್ತಿದ್ದಾರೆ. ಆ ಶಾಸಕರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಬೇಕಿಲ್ಲವಂತೆ. ಅವರಾಗಿಯೇ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಯಾರು ಎಷ್ಟು ಅಂತಾ ಈಗ ಹೇಳಲ್ಲ ಎಂದ ಈಶ್ವರಪ್ಪ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಹಿಂಬಾಗಿಲಿನ ಮೂಲಕ ಬಿಎಸ್‍ವೈ ಮನೆಗೆ ಎಂಟ್ರಿ ಕೊಟ್ಟ ಪಕ್ಷೇತರ ಶಾಸಕ

    ಇತ್ತ ಈಶ್ವರಪ್ಪ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಬಿ.ಎಸ್.ಯಡಿಯೂರಪ್ಪರ ಮನೆಗೆ ಕರೆತಂದಿದ್ದಾರೆ. ಈಶ್ವರಪ್ಪರ ದೂರದ ಸಂಬಂಧಿಯಾಗಿರುವ ಆರ್.ಶಂಕರ್ ಬಿಜೆಪಿಗೆ ಬೆಂಬಲ ನೀಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಳಿಕ ಬಿಜೆಪಿಯ ನಡೆ ನಿಗೂಢ!