ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ವಿರುದ್ಧದ ಚಾರ್ಜ್ ಶೀಟ್ ನಲ್ಲಿ ಬಿಜೆಪಿ ಎಡವಟ್ಟು ಮಾಡಿಕೊಂಡಿದೆ.
ಸಿದ್ದರಾಮಯ್ಯ ಕಾಲದಲ್ಲಿ ಬೆಂಗಳೂರು ಕಸದ ಸಮಸ್ಯೆ ನ್ಯೂಯಾರ್ಕ್ ಟೈಮ್ಸ್ ನಲ್ಲೂ ಪ್ರಕಟ ಅಂತಾ ಬಿಜೆಪಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ. ಆದ್ರೆ 2012ರಲ್ಲಿ ಮಂಡೂರು ಕಸ ನಿರ್ವಹಣೆ ಸಮಸ್ಯೆಯಾಗಿತ್ತು. ಅಂದು ಬಿಬಿಎಂಪಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ತಮ್ಮ ಆಡಳಿತಾವಧಿಯಲ್ಲಿ ಉಂಟಾದ ಸಮಸ್ಯೆಯನ್ನು ಸಿದ್ದಾರಾಮಯ್ಯ ಸರ್ಕಾರದಲ್ಲಿ ಅಂತಾ ಹೇಳುವ ಮೂಲಕ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ. ಇದನ್ನೂ ಓದಿ:ಬೆಂಗಳೂರು ಚಾರ್ಜ್ ಶೀಟ್ ಆಯ್ತು, ಈಗ ಬಿಜೆಪಿಯ ಮತ್ತೊಂದು ಎಡವಟ್ಟು ಬಹಿರಂಗ!
ಬೆಂಗಳೂರು: ಶನಿವಾರ (ಮಾರ್ಚ್31)ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಕುಕ್ಕರ್ ಗಳ ಲಾರಿಯೊಂದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಸಂಬಂಧ ಕುಕ್ಕರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಭಾನುವಾರ ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಹ ತಮ್ಮ ಟ್ವಿಟ್ಟರ್ ನಲ್ಲಿ ಕುಕ್ಕರ್ ಫೋಟೋ ಹಾಕಿಕೊಂಡು ವ್ಯಂಗ್ಯ ಮಾಡಿದ್ದಾರೆ. ಕುಕ್ಕರ್ ಗಳನ್ನು ಸಾಗಿಸುತ್ತಿದ್ದ ಲಾರಿಯ ಎಡಿಟೆಡ್ ಫೋಟೋವನ್ನು ಪ್ರತಾಪ್ ಸಿಂಗ್ ತಮ್ಮ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಲಕ್ಷ್ಮೀ ಹೆಬ್ಬಾಳ್ಕರ್ ಭಾವಚಿತ್ರ ಇರುವ ಒಂದು ಲಾರಿ ಕುಕ್ಕರ್ ವಶಕ್ಕೆ!
ಕುಕ್ಕರ್ ಬೇಕಾ ಕುಕ್ಕರ್, ನಾನು ಲಕ್ಷ್ಮೀ ಹೆಬ್ಬಾಳ್ಕರ್, ಸುಮ್ನೆ ಬಿಡೋಲ್ಲ ವೋಟ್ ಕೊಡದೇ ಮಾಡಿದ್ರೆ ಮಕ್ಕರ್! ಅಂತಾ ಪ್ರತಾಪ್ ಸಿಂಹ ಬರೆದುಕೊಂಡಿದ್ದಾರೆ. ಇನ್ನೂ ಫೋಟೋ ಸಹ ಎಡಿಟ್ ಮಾಡಲಾಗಿದ್ದು, ಲಾರಿ ಜೊತೆ ಲಕ್ಷ್ಮೀ ಹೆಬ್ಬಾಳ್ಕರ್ ಫೋಟೋ ಸೇರಿಸಲಾಗಿದೆ. ಕುಕ್ಕರ್ ಸಿಗಲಿಲ್ಲ ಅಂತಾ ಬೇಜಾರಾಗ್ಬೇಡಿ, ನಾನೇ ಕುಕ್ ಮಾಡಿ ಬಾಕ್ಸ್ ನಲ್ಲಿ ಹಾಕಿ ಅಮೇಜಾನ್ ನಲ್ಲಿ ಡೆಲಿವರಿ ಮಾಡ್ತೇನೆ ಅಂತಾ ಬರೆಯಲಾಗಿದೆ.
ಬೆಂಗಳೂರು: ವಿಧಾನಸಭಾ ಚುನಾವಣೆಗಾಗಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಪಕ್ಷಗಳ ಬಾಗಿಲನ್ನು ನಿರಂತರವಾಗಿ ತಟ್ಟುತ್ತಿದ್ದಾರೆ. ಇತ್ತ ಬಿಜೆಪಿ ಸಹ ಇದೇ ತಿಂಗಳ ಎರಡನೇ ವಾರದಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಅಂತಾ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್ ನಾಯಕರ ಜೊತೆ ರಹಸ್ಯ ಮಾತುಕತೆಯನ್ನ ನಡೆಸುತ್ತಿದ್ದಾರೆ.
ಮಾಜಿ ಸಚಿವ ಹಾಗು ಬಿಜೆಪಿ ಮುಖಂಡ ವಿ.ಸೋಮಣ್ಣ ಮಾತ್ರ ತಮಗೆ ಯಾವ ಕ್ಷೇತ್ರದಿಂದ ಟಿಕೆಟ್ ಲಭಿಸಲಿದೆ ಎಂಬುದರ ಗೊಂದಲದಲ್ಲಿ ಇದ್ದಾರಂತೆ. ಈ ಹಿಂದೆ ಸೋಮಣ್ಣ ಹನೂರು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೆ ನಂತರ ಗುಂಡ್ಲುಪೇಟೆ ಕ್ಷೇತ್ರದಿಂದ ಟಿಕೆಟ್ ಸಿಗಲಿದೆ ಎಂಬ ಸುದ್ದಿಯೊಂದು ಬಿಜೆಪಿ ಅಂಗಳದಲ್ಲಿ ಕೇಳಿ ಬಂದಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಹನೂರು ಕ್ಷೇತ್ರವೇ ಫಿಕ್ಸ್ ಅಂತಾ ಸಹ ತಿಳಿದು ಬಂದಿತ್ತು. ಇದನ್ನೂ ಓದಿ:ಹನೂರು ಕ್ಷೇತ್ರದಿಂದಲೇ ಸ್ವರ್ಧಿಸುವ ಬಯಕೆ, ಯಾವುದೇ ಷರತ್ತು ಇಲ್ಲದೇ ಪರಿಮಳಾ ನಾಗಪ್ಪ ಪಕ್ಷಕ್ಕೆ ಬರಲಿ: ಮಾಜಿ ಸಚಿವ ವಿ.ಸೋಮಣ್ಣ
ಭಾನುವಾರ ಕೇಂದ್ರ ಸಚಿವ ಅನಂತಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸೋಮಣ್ಣ ಅವರನ್ನು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಕಣಕ್ಕೆ ಇಳಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ನಿಮಗೆ ಇನ್ನು 4 ವರ್ಷ ಪರಿಷತ್ ಸದಸ್ಯ ಸ್ಥಾನ ಇದೆ. ನಮ್ಮ ಸರ್ಕಾರ ಬಂದ್ರೆ ಸಚಿವರಾಗುವುದು ಗ್ಯಾರೆಂಟಿ, ನೀವು ಗೋವಿಂದರಾಜನಗದಲ್ಲಿ ಸ್ಪರ್ಧೆ ಮಾಡಿ, ಇಲ್ಲ ಈ ಎಲೆಕ್ಷನ್ ನಲ್ಲಿ ಸುಮ್ಮನಿದ್ದು ಬಿಡಿ ಎಂದ ಅನಂತಕುಮಾರ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸರ್ವೆ ಬಿಜೆಪಿಗೆ ಎಚ್ಚರಿಕೆ ಗಂಟೆ: ವಿ.ಸೋಮಣ್ಣ
ಅನಂತಕುಮಾರ್ ಅವರು ನೀಡಿದ ಸಲಹೆಯನ್ನು ಸೋಮಣ್ಣ ಬಹುತೇಕ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಇನ್ನೇರೆಡು ದಿನಗಳಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತಾ ಸೋಮಣ್ಣ ಹೈಕಮಾಂಡ್ ಗೆ ತಿಳಿಸಿದ್ದಾರೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.
ಕಲಬುರಗಿ: ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಜೊತೆ ಹೊಂದಾಣಿಕೆ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅಗತ್ಯವಾದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಮಾಲೀಕಯ್ಯ ಜೊತೆ ಸೇರಲ್ಲ ಅಂತ ಅಫಜಲಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಶಾಸಕ ಎಂ.ವೈ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಕಲಬುರಗಿಯ ತಮ್ಮ ನಿವಾಸದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂ.ವೈ.ಪಾಟೀಲ್, ಮಾಲೀಕಯ್ಯ ಗುತ್ತೇದಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಲೀಕಯ್ಯ ಗುತ್ತೇದಾರ ಬಿಜೆಪಿ ಗುತ್ತಿಗೆ ಪಡೆದುಕೊಂಡಂತೆ ಮಾತನಾಡುತ್ತಿದ್ದಾರೆ. ನನಗೆ ಎಂ.ಎಲ್.ಸಿ ಕೊಡಿಸುವೆ ಎನ್ನುತ್ತಾರೆ. ಇಂತಹ ಗಂಜಿ ಕೇಂದ್ರಗಳ ಅಗತ್ಯ ನನಗೆ ಇಲ್ಲ. ಇಂದು ಅಫಜಲಪುರ ದಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದರು.
ಯಡಿಯೂರಪ್ಪ ಗೆ ಜೆಡಿಎಸ್ ಅನ್ಯಾಯ ಮಾಡಿದೆ ಎನ್ನುವ ಕಾರಣಕ್ಕೆ ನಾನು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದೆ. ಆದ್ರೆ ಈಗ ಯಡಿಯೂರಪ್ಪರಿಂದಲೇ ಅನ್ಯಾಯವಾಗುತ್ತಿದೆ. ನನಗೆ ಬಹಳ ನೋವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಯಾವುದೇ ಸಂಬಧವಿಲ್ಲ ಅಂತ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬಹಿರಂಗವಾಗಿ ಸ್ಪಷ್ಟಪಡಿಸಿದ್ದು, ಈ ವಿಚಾರವಾಗಿ ಸಂಸದ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.
ಶಾ ಹೇಳಿಕೆ ಕುರಿತು ಬಳ್ಳಾರಿಯ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಬಿಜೆಪಿಯೊಂದಿಗೆ ಇದ್ದಾರೆ. ಅವರು ಬೇರೆಯಲ್ಲ ನಾನು ಬೇರೆಯಲ್ಲ. ಆದ್ರೆ ಇದೀಗ ಅವರ ವಿಚಾರದ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡೋಕೆ ನಾನು ಇಷ್ಟಪಡಲ್ಲವೆಂದು ಹೇಳಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?
ಜನಾರ್ದನ ರೆಡ್ಡಿ ಬಿಜೆಪಿಯ ಅಭಿಮಾನಿ. ಹೀಗಾಗಿ ಅವರ ಬೆಂಬಲಿಗರು ಅಭಿಮಾನಿಗಳು ಬಿಜೆಪಿಯೊಂದಿಗೆ ಇದ್ದಾರೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಬೇರೆಯಲ್ಲ ಜನಾರ್ದನ ರೆಡ್ಡಿ ಬೇರೆಯಲ್ಲ ಹೀಗಾಗಿ ನಾನು ಮತ್ತು ರೆಡ್ಡಿ ಕುಟುಂಬ ಒಂದೇ ಆಗಿದೆ. ಜನಾರ್ದನ ರೆಡ್ಡಿ ವಿಚಾರದ ಬಗ್ಗೆ ಬಹಿರಂಗ ಚರ್ಚೆ ಮಾಡಲು ನಾನು ಇಷ್ಟಪಡಲ್ಲ. ಹಿರಿಯ ನಾಯಕರ ಜೊತೆ ನಾನು ಮಾತನಾಡಿ ಎಲ್ಲ ಸರಿಪಡಿಸುವೆ. ನಮ್ಮ ಗುರಿ ಇದೀಗ ಬಳ್ಳಾರಿಯ 9 ಕ್ಷೇತ್ರಗಳಲ್ಲಿ ಗೆಲ್ಲೋದಾಗಿದೆ ಅಂದ್ರು. ಇದನ್ನೂ ಓದಿ: ಸಾರ್ವಜನಿಕ ಜೀವನ ಪರಿಗಣಿಸಿ ಬಿಜೆಪಿ ಟಿಕೆಟ್?- ರೆಡ್ಡಿ, ರಾಮುಲು ಆಪ್ತರಿಗೂ ಟಿಕೆಟ್ ಡೌಟ್
ಕೂಡ್ಲಿಗಿ ಶಾಸಕ ನಾಗೇಂದ್ರಗೆ ಅಧಿಕಾರ ಮತ್ತು ಹಣ ಬಲ ಹೆಚ್ಚಾದ ಪರಿಣಾಮ ನಮ್ಮಿಂದ ದೂರವಾಗಿದ್ದಾರೆ. ಅವರ ಬಗ್ಗೆ ಮಾತನಾಡಲು ಇಷ್ಟಪಡಲ್ಲವೆಂದು ಅಂತ ಹೇಳಿದ್ರು. ಇದನ್ನೂ ಓದಿ: ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್
ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಅಂತ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಟಿಕೆಟ್ ಹಂಚಿಕೆ ವೇಳೆ ಅಭ್ಯರ್ಥಿಗಳ ಸಾರ್ವಜನಿಕ ಜೀವನವನ್ನು ಪರಿಗಣಿಸೋದಾಗಿ ಹೇಳಿದ್ದಾರೆ.
ಈ ವಿಚಾರ ರೆಡ್ಡಿ, ರಾಮುಲು ಬಣವನ್ನ ತಲ್ಲಣಗೊಳಿಸಿದೆ. ಯಾಕಂದ್ರೆ ಸಾರ್ವಜನಿಕ ಜೀವನ ಪರಿಗಣಿಸಿ ಟಿಕೆಟ್ ನೀಡಿದ್ರೆ, ರೆಡ್ಡಿ ಸಹೋದರ ಹಾಗೂ ಶ್ರೀರಾಮುಲು ಸಹೋದರ, ಸಹೋದರಿ ಹಾಗೂ ಸೋದರಳಿಯನಿಗೆ ಟಿಕೆಟ್ ಸಿಗೋದು ಅನುಮಾನ. ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಬೇಲ್‍ಡೀಲ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಸಂಸದ ಶ್ರೀರಾಮುಲು ಸೋದರಳಿಯ ಹಾಗೂ ಕಂಪ್ಲಿ ಶಾಸಕ ಸುರೇಶ್‍ಬಾಬು ಸಹ ಬೇಲ್ ಡೀಲ್ ಮತ್ತು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿದ್ದಾರೆ. ಇದನ್ನೂ ಓದಿ: ಜನಾರ್ದನ ರೆಡ್ಡಿ ರಾಜಕೀಯ ಜೀವನ ಅಂತ್ಯವಾಯ್ತಾ?- ಅಮಿತ್ ಶಾ ಮಾತಿನ ಹಿಂದಿನ ಮರ್ಮವೇನು?
ಶ್ರೀರಾಮುಲು ಸಹೋದರ ಹಾಗೂ ಮಾಜಿ ಸಂಸದ ಸಣ್ಣಫಕ್ಕೀರಪ್ಪ ವಿರುದ್ಧವೂ ಕೆಲ ಪ್ರಕರಣಗಳಿವೆ. ಸಹೋದರಿ ಜೆ.ಶಾಂತಾ ಈ ಹಿಂದೆ ಬಿಜೆಪಿ ತೊರೆದು ಬಿಎಸ್‍ಆರ್ ಕಾಂಗ್ರೆಸ್ ಸೇರ್ಪಡೆ ವೇಳೆ ಬಿಜೆಪಿ ನಾಯಕರ ಬಗ್ಗೆ ಹರಿಹಾಯ್ದಿದ್ದನ್ನು ಬಿಜೆಪಿಗರು ಇನ್ನೂ ಮರೆತಿಲ್ಲ. ಜನಾರ್ದನ ರೆಡ್ಡಿ, ರಾಮುಲು ಸಹೋದರರ ಸಂಪರ್ಕದಿಂದ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ದೂರವುಳಿದಿದ್ದಾರೆ. ಜೊತೆಗೆ ಬಳ್ಳಾರಿ ನಗರ ಕ್ಷೇತ್ರದಿಂದ ಸೋಮಶೇಖರ್ ರೆಡ್ಡಿ ಬದಲಾಗಿ ಸುಷ್ಮಾ ಸ್ವರಾಜ್ ಕುಟುಂಬದ ಪರಮಾಪ್ತ, ವೈದ್ಯ ಬಿಕೆ ಸುಂದರ್ ಗೆ ಟಿಕೆಟ್ ನೀಡಬೇಕು ಅನ್ನೋ ಒತ್ತಾಯ ಕೂಡಾ ಕೇಳಿಬಂದಿದೆ. ಇದನ್ನೂ ಓದಿ: ಅಮಿತ್ ಶಾ – ಹೆಚ್.ಆರ್.ರಂಗನಾಥ್ ಫೇಸ್ 2 ಫೇಸ್
-ಏಪ್ರಿಲ್ 2ಕ್ಕೆ ಸ್ಪರ್ಧೆ ಬಗ್ಗೆ ರೆಬೆಲ್ ಸ್ಟಾರ್ ನಿರ್ಧಾರ
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಮತ್ತು ಮುಖಂಡರು ತಮ್ಮ ಸ್ವಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದ್ರೆ ಮಂಡ್ಯದ ಗಂಡು, ಶಾಸಕರಾಗಿರುವ ಅಂಬರೀಶ್ ಮಾತ್ರ ಚುನಾವಣಾ ಪ್ರಚಾರದಿಂದ ದೂರ ಉಳಿದಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನವನ್ನು ಮೂಡಿಸಿದೆ.
ಚುನಾವಣೆಗೆ ಸ್ಪರ್ಧಿಸಬೇಕೆಂದು ಒತ್ತಾಯಿಸಿ ಇಂದು ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಅಂಬರೀಶ್‍ನ್ನು ಸ್ಯಾಂಕಿ ರಸ್ತೆಯಲ್ಲಿರುವ ಎಸ್.ಎಸ್.ಮಲ್ಲಿಕಾರ್ಜುನ್ ನಿವಾಸದಲ್ಲಿ ಭೇಟಿಮಾಡಿದ್ರು. ಚುನಾವಣೆ ಘೋಷಣೆ ಆಗಿದ್ದರು ಅಂಬರೀಶ್ ಇದುವರೆಗೆ ಕೆಪಿಸಿಸಿ ನಾಯಕರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಭೇಟಿ ಮಾಡಿ, ಚುನಾವಣೆಗೆ ಸ್ಪರ್ಧೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಈ ವೇಳೆ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಂಬರೀಶ್, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಪ್ರತಿಯೊಂದು ಹೆಜ್ಜೆಯನ್ನು ತುಂಬಾ ಎಚ್ಚರಿಕೆಯಿಂದ ಇಡಬೇಕಾಗುತ್ತದೆ. ಒಂದು ಸಣ್ಣ ತಪ್ಪಿನಿಂದಾಗಿ 45 ವರ್ಷದ ರಾಜಕೀಯ ಜೀವನವನ್ನು ನಾನು ಹಾಳು ಮಾಡಿಕೊಳ್ಳಲಾರೆ. ನಾನು ಸಿಂಗಪೂರ್‍ಗೆ ಹೋಗಿ ಬಂದ ಮೇಲೆ ಹಿಂದಿನ ಶಕ್ತಿ ಉಳಿದಿಲ್ಲ. ಆದರೂ ಏಪ್ರಿಲ್ 2 ರಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಅಂತಾ ಅಂದ್ರು.
ಮೈಸೂರು: ಬಿಜೆಪಿ ಕಾರ್ಯಕರ್ತ ರಾಜು ಕುಟುಂಬಕ್ಕೆ ಬಿಜೆಪಿ ಪರಿಹಾರ ನೀಡಿದೆ ಅಂತ ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಮಾಡಿರುವ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ಕೆಂಡಾಮಂಡಲರಾಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಹ, ಅಮಿತ್ ಶಾ ಅವರನ್ನು ಕ್ರಿಮಿನಲ್ ಅಂತ ಕರೆದು ಗಡಿಪಾರು ಮಾಡಬೇಕುಂತ ಹೇಳಿ ಕರೆ ಕೊಟ್ಟು ಚುನಾವಣಾ ಆಯೋಗಕ್ಕೆ ದಿನೇಶ್ ಗುಂಡೂರಾವ್ ಅವರು ದೂರು ಕೊಟ್ಟಿದ್ದಾರೆ. ಇದರ ಜೊತೆಗೆ ಬಿಜೆಪಿ ನಾಯಕರು ಇಲ್ಲಿಯವರೆಗೆ ಏನ್ ಮಾಡಿದ್ದಾರೆ ಅನ್ನೋ ಪ್ರಶ್ನೆಯನ್ನು ಕೂಡ ಹಾಕಿದ್ದಾರೆ. ನಾನು ಮೈಸೂರಿನವನು, ಮೈಸೂರು ಬಗ್ಗೆ ಪ್ರೀತಿಯಿದೆ ಅಂತ ಬಾಡೂಟ, ಮೀನೂಟ ಹಾಗೂ ಮದುವೆ ಮುಂಜಿ ಅಂತ ಮೈಸೂರಿಗೆ ಆಗಾಗ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜು ಹತ್ಯೆಯಾಗಿ ಒಂದೂವರೆ ವರ್ಷ ಕಳೆದ್ರೂ, ಅವರ ತಾಯಿಯ ಕಣ್ಣೀರು ಒರೆಸುವ ಅಥವಾ ಸಾಂತ್ವಾನ ಹೇಳುವ ಕೆಲಸವನ್ನು ಮಾಡಿದ್ದಾರೆಯೇ ಅಂತ ಗುಂಡೂರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜುವನ್ನು ಹತ್ಯೆ ಮಾಡಿದ ಅಬೀಬ್ ಪಾಷಾ ಮೇಲಿನ ಚಾರ್ಜ್ ಶೀಟನ್ನು ವೀಕ್ ಮಾಡಿ ಆತನ ಬಿಡುಗಡೆಯಾಗುವವರೆಗೆ ನೋಡಿಕೊಂಡರು. ಅಲ್ಲದೇ ಆತ ಜೈಲಿನಿಂದ ಬಿಡುಗಡೆಯಾದ ಬಳಿಕ ಆತನನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿದ್ದಾರೆ. ಈ ಎಲ್ಲಾ ಘಟನೆಗಳನ್ನು ನೋಡಿಯೂ ಕಣ್ಮುಚ್ಚಿಕೊಂಡು ಕುಳಿತಿದ್ದಾರೆ. ಇಂದು ಅದೇ ಅಬೀಬ್ ಪಾಷಾ ಯಾರೋ ಒಬ್ಬ ಸಂಸದರನ್ನು ಹತ್ಯೆ ಮಾಡಲು ಹೊಂಚುಹಾಕಿದ್ದಾನೆ ಎಂಬುವುದನ್ನು ಮಾಧ್ಯಮಗಳು ವರದಿ ಮಾಡಿದ್ದವು. ದಿನೇಶ್ ಗುಂಡೂರಾವ್ ಅವರಿಗೆ ಕನಿಷ್ಠ ಸೌಜನ್ಯ, ನೈತಿಕತೆ ಇದ್ದಿದ್ದೇ ಆದ್ರೆ ಅವರ ಮುಖ್ಯಮಂತ್ರಿ ನಡೆದುಕೊಳ್ಳುವ ರೀತಿಯ ಬಗ್ಗೆ ಮಾತನಾಡಲಿ ಅಂತ ಸಚಿವರ ವಿರುದ್ಧ ಕೆಂಡಾಮಂಡಲರಾದ್ರು. ಇದನ್ನೂ ಓದಿ: ಅಮಿತ್ ಶಾ ರಿಂದ ನೀತಿ ಸಂಹಿತೆ ಉಲ್ಲಂಘನೆ – ಗಡಿಪಾರಿಗೆ ಆಗ್ರಹಿಸಿದ ದಿನೇಶ್ ಗುಂಡೂರಾವ್
ಚುನಾವಣಾ ಆಯೋಗಕ್ಕೆ ದೂರು: ರಾಜು ಕುಟುಂಬಕ್ಕೆ ಪರಿಹಾರ ಕೊಟ್ಟಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡ್ತೀವಿ ಅಂತ ಹೇಳ್ತಾ ಇರೋ ನೀವುಗಳು, ನಮ್ಮ ಕಾರ್ಯಕರ್ತ ಸತ್ತಾಗ ಅವರ ಬೆಂಬಲಕ್ಕೆ ಯಾರು ನಿಂತಿದ್ದರು ಎಂಬುವುದು ನಿಮಗೆ ತಿಳಿದಿದೆಯಾ?. ನಿನ್ನೆ ಅಮಿತ್ ಶಾ ಅವರು ಏನೂ ಪರಿಹಾರ, ದುಡ್ಡು ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದೇವೆ ಅಂತಾನೇ ತಿಳ್ಕೊಳ್ಳಿ. ನಾವು ಕಾಂಗ್ರೆಸ್ ಅಥವಾ ಸಾರ್ವಜನಿಕರ ಹಣ ಕೊಟ್ಟಿಲ್ಲ. ನಮ್ಮ ಪಕ್ಷದ ಕಾರ್ಯಕರ್ತನ ಕಷ್ಟಕ್ಕೆ ಸ್ಪಂದಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ನಮ್ಮ ಪಕ್ಷದ ಹಣವನ್ನೇ ನೀಡಿದ್ದೇವೆ ಅಂತ ತಿಳ್ಕೊಳ್ಳಿ. ಇದರಿಂದ ನಿಮಗೇನು ತೊಂದ್ರೆ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.
ಕಾಂಗ್ರೆಸ್ ನ ರಾಜಕಾರಣ ಏನು ಎಂಬುದು ನಮಗೆ ತಿಳಿದಿದೆ. ಒಬ್ಬ ಮಗನನ್ನು ಕಳೆದುಕೊಂಡ ತಾಯಿಯ ಆ ದುಃಖವನ್ನು ಅರ್ಥಮಾಡಿಕೊಳ್ಳಿ. ಚುನಾವಣೆಗೂ ಈ ವಿಚಾರಕ್ಕೂ ಸಂಬಂಧ ಕಲ್ಪಿಸಬೇಡಿ. ರಾಷ್ಟ್ರೀಯ ಅಧ್ಯಕ್ಷರು ಇಲ್ಲಿಗೆ ಬಂದಿರುವ ಸಂದರ್ಭದಲ್ಲಿ ರಾಜು ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವಾನ ಹೇಳಿ, ಧೈರ್ಯ ತುಂಬಿದ್ದಾರೆ ಅಷ್ಟೇ ಅಂತ ಸ್ಪಷ್ಟಪಡಿಸಿದ್ದಾರೆ.
24 ಜನರನ್ನ ಕಳೆದುಕೊಂಡ ನೋವು ನಮಗಿದೆ: ಒಟ್ಟಿನಲ್ಲಿ ಶಾ ಅವರು ರಾಜು ಮನೆಗೆ ಭೇಟಿ ನೀಡಿದ್ದರ ಕುರಿತು ಕೇಸ್ ಹಾಕೋದಾದ್ರೆ ಹಾಕಿ. ಇದರಿಂದ ನಮಗೇನೂ ಬೇಜಾರಿಲ್ಲ. 24 ಜನ ಕಾರ್ಯಕರ್ತರನ್ನು ಕಳೆದುಕೊಂಡ ನಮ್ಮ ನೋವು ಬೇರೆ ಇದೆ. ಹೀಗಾಗಿ ನಮ್ಮ ನೋವನ್ನು ಅರ್ಥ ಮಾಡಿಕೊಳ್ಳಲು ಯಾವ ನೀತಿ ಸಂಹಿತೆಗೂ ಸಾಧ್ಯವಿಲ್ಲ. ಸಿಎಂ ಅವರು ಅರ್ಧ ಗಂಟೆ ಸಮಯ ನಿಗದಿ ಮಾಡಿಕೊಂಡು ರಾಜು ಮನೆಗೆ ಹೊಗಿಲ್ಲ. 8 ಕೊಲೆ ಪ್ರಕರಣದ ಆರೋಪಿಯಾಗಿರುವ ಅಬೀಬ್ ಪಾಷಾ ಬಿಡುಗಡೆಗೆ ಅನುಕೂಲ ಮಾಡಿದ್ರಿ ಅಂತ ಸಿಎಂ ಅವರನ್ನು ಪ್ರಶ್ನಿಸಿದ್ರು. ಇದನ್ನೂ ಓದಿ: ರಾಜಮಾತೆ ಪ್ರಮೋದಾ ದೇವಿ ಜೊತೆ ಶಾ ಮಹತ್ವದ ಚರ್ಚೆ – ಇನ್‍ಸೈಡ್ ಸ್ಟೋರಿ ಇಲ್ಲಿದೆ
ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ಮೈಸೂರಿಗೆ ಬೇಟಿ ನಿಡಿದ್ದು, ಇದೇ ವೇಳೆ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ರಾಜು ಮನೆಗೆ ಭೇಟಿ ನೀಡಿ ಅವರ ತಾಯಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದರು. ಈ ಸಂದರ್ಭದಲ್ಲಿ ರಾಜು ಕುಟುಂಬಕ್ಕೆ ಬಿಜೆಪಿ ಪರಿಹಾರ ನೀಡಿದೆ ಅಂತ ಕಾಂಗ್ರೆಸ್ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿತ್ತು.