Tag: Karnataka Election 2018

  • ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

    ನೀತಿ ಸಂಹಿತೆ ಉಲ್ಲಂಘನೆ: ಸಚಿವ ಎ.ಮಂಜು ವಿರುದ್ಧ ಎಫ್‍ಐಆರ್ ದಾಖಲು

    ಹಾಸನ: ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಎ. ಮಂಜು ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ನೀತಿಸಂಹಿತೆ ಜಾರಿ ಬಳಿಕವೂ ಎ ಮಂಜು ಅವರು ಸರ್ಕಾರಿ ಕಟ್ಟಡ ಬಳಸಿದ್ದಾರೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸೂಚನೆಯ ಮೇರೆಗೆ ಚುನಾವಣಾಧಿಕಾರಿ ರಾಜೇಶ್ ದೂರು ನೀಡಿದ್ದರು.

    ಮಾರ್ಚ್ 26 ರಂದು ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಅಂದೇ ನೀತಿ ಸಂಹಿತೆ ಜಾರಿಯಾಗಿತ್ತು. ಹೀಗಾಗಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರಾಗಿರುವ ಮಂಜು ವಿರುದ್ಧ ಹಾಸನ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ದೂರು ಏನಿತ್ತು?
    ಸಚಿವರ ಕಚೇರಿ ಇದ್ದ ಕಟ್ಟಡದಲ್ಲಿ ಅನಧಿಕೃತವಾಗಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೀತಿಸಂಹಿತೆ ಜಾರಿ ಬಳಿಕವೂ ಕಚೇರಿಯ ಬಾಗಿಲನ್ನು ಹೊರಗಿನಿಂದ ಬಂದ್ ಮಾಡಿ ಕೆಲ ಸಿಬ್ಬಂದಿ ಒಳಗೆ ಕೆಲಸಮಾಡುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಕೇಳಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ರೋಹಿಣಿ ಸಿಂಧೂರಿ ಅವರು ನೋಟೀಸ್ ನೀಡಿದ್ದರು.

  • ಸಿಎಂಗೆ ನಿಂಬೆ ಹಣ್ಣಿನ ಪ್ರಶ್ನೆ ಮಾಡಿದ ಪ್ರತಾಪ್ ಸಿಂಹ

    ಸಿಎಂಗೆ ನಿಂಬೆ ಹಣ್ಣಿನ ಪ್ರಶ್ನೆ ಮಾಡಿದ ಪ್ರತಾಪ್ ಸಿಂಹ

    ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪಕ್ಷದ ನಾಯಕರುಗಳು ಪರಸ್ಪರ ಟಾಂಗ್ ಕೊಡುತ್ತಿದ್ದಾರೆ. ಇದೀಗ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿಯವರಿಗೆ ಟಾಂಗ್ ನೀಡಿದ್ದಾರೆ.

    ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಸಿಎಂ ಅವರನ್ನು ಕಾಲೆಳೆದ ಸಿಂಹ, `ಮೌಢ್ಯವಿರೋಧಿಯ ಬಗ್ಗೆ ಮಾತನಾಡುವ ಸಿದ್ದರಾಮಯ್ಯ.. ಕೈಯಲ್ಲಿ ನಿಂಬೆಹಣ್ಣು ಹಿಡಿದು ಪ್ರಚಾರ ಯಾಕಯ್ಯ?. ಅಂತ ಪ್ರಶ್ನಿಸಿ ಮುಖ್ಯಮಂತ್ರಿಯವರಿಗೆ ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: ಸಿಎಂ ತಮ್ಮ ಹೆಸರನ್ನ ಸಿದ್ದರಾವಣಯ್ಯ ಎಂದು ಇಟ್ಟುಕೊಳ್ಳಲಿ: ಪ್ರತಾಪ್ ಸಿಂಹ

    `ಒಬ್ಬ ಹಿಂದೂ ವಿರೋಧಿ ಬಾಯಲ್ಲಿ ರಾಮನಿದ್ದಾನೆ ಎಂದು ಹೇಳಿಸಿದ, ಸೋಲಿನ ಭೀತಿ ಹುಟ್ಟಿಸಿ ಕೈಯಲ್ಲಿ ನಿಂಬೆ ಹಣ್ಣು ಹಿಡಿಸಿದ ಕರ್ನಾಟಕದ ಸಮಸ್ತ ಹಿಂದೂಗಳಿಗೂ ಧನ್ಯವಾದಗಳು’ ಅಂತ ಸಿಎಂ ನಿಂಬೆಹಣ್ಣು ಹಿಡಿದಿರುವ ಫೋಟೋ ಹಾಕಿ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

  • ಮೇಟಿ ವರ್ಸಸ್ ವಿಜಯಲಕ್ಷ್ಮೀ-ರಂಗೇರುತ್ತಿದೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ

    ಮೇಟಿ ವರ್ಸಸ್ ವಿಜಯಲಕ್ಷ್ಮೀ-ರಂಗೇರುತ್ತಿದೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರ

    ಬಾಗಲಕೋಟೆ: ಶಾಸಕ ಹೆಚ್ ವೈ ಮೇಟಿ ವಿರುದ್ಧ ವಿಜಯಲಕ್ಷ್ಮೀ ಸರೂರು ಚುನಾವಣಾ ಅಖಾಡಕ್ಕೆ ಸಿದ್ಧರಾಗಿದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಹೆಚ್ ವೈ ಮೇಟಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ.

    ಪಕ್ಷೇತರವಾಗಿ ಚುನಾವಣೆಗೆ ನಿಲ್ಲೋಕೆ ಮುಂದಾಗಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯೋದಿಲ್ಲ. ಯಾವುದೇ ಆಸೆ ಆಮಿಷಗಳಿಗೂ ಮಣಿಯೋದಿಲ್ಲ ಸ್ಪರ್ಧೆ ಖಚಿತ. ನಾನು ಸಾಕಷ್ಟು ನೊಂದಿದ್ದೇನೆ. ನನ್ನಂತೆ ನೊಂದ ಮಹಿಳೆಯರ ಪರ ಕೆಲಸ ಮಾಡುತ್ತೇನೆ. ಜನರಿಂದಲೇ ಸಹಾಯ ಕೇಳಿ ಕಾಲುಬಿದ್ದು ಮತ ಕೇಳುತ್ತೇನೆ ಎಂದು ವಿಜಯಲಕ್ಷ್ಮೀ ಸರೂರು ತಿಳಿಸಿದ್ದಾರೆ.

    ಹೆಚ್ ವೈ ಮೇಟಿ ಮತ್ತು ವಿಜಯಲಕ್ಷ್ಮೀ ಸರೂರ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಮ್ಮ ಸಮುದಾಯದ ಜನತೆ ನನ್ನ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ. ಇನ್ನು ಮೇಟಿ ಅವರನ್ನು ಸೋಲಿಸಲು ಇತರೆ ಪ್ರಬಲ ಪಕ್ಷದವರು ವಿಜಯಲಕ್ಷ್ಮೀ ಸರೂರ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗುತ್ತಿದೆ. ವಿಜಯಲಕ್ಷ್ಮೀ ಸರೂರಗೆ ಎಮ್ ಇ ಪಿ ಪಕ್ಷದಿಂದ ಆಫರ್ ಬಂದಿದೆಯಂತೆ. ಆದರೆ ನಾನು ಸದ್ಯಕ್ಕೆ ನಿರ್ಧಾರ ಕೈಗೊಂಡಿಲ್ಲ. ಪಕ್ಷೇತರ ಸ್ಪರ್ಧೆ ವಿಚಾರ ಮಾತ್ರ ಇದೆ. ಮೇಟಿಯವರನ್ನು ಸೋಲಿಸೋದೆ ನನ್ನ ಗುರಿ ಎಂದಿದ್ದಾರೆ.

  • ಬಳ್ಳಾರಿ ರಾಜಕಾರಣದ ಬಿಗ್ ಬ್ರೇಕಿಂಗ್-ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ‘ಕೈ’ ಕೊಡಲು ರೆಡ್ಡಿ ಟೀಂ ರಣತಂತ್ರ

    ಬಳ್ಳಾರಿ ರಾಜಕಾರಣದ ಬಿಗ್ ಬ್ರೇಕಿಂಗ್-ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ‘ಕೈ’ ಕೊಡಲು ರೆಡ್ಡಿ ಟೀಂ ರಣತಂತ್ರ

    ಬಳ್ಳಾರಿ: ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆಯೇ ವಿರೋಧಿಗಳನ್ನು ಸೋಲಿಸಲು ನಾಯಕರು ರಾಜಕೀಯ ತಂತ್ರ-ರಣತಂತ್ರಗಳನ್ನು ರಚಿಸುತ್ತಿದ್ದಾರೆ. ಬಳ್ಳಾರಿಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನಾರ್ದನ ರೆಡ್ಡಿ, ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀರಾಮುಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.

    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಗೂ ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಅಂತ ಅಚ್ಚರಿಯ ಹೇಳಿಕೆ ನೀಡಿದ್ದರು. ಅಮಿತ್ ಶಾ ಹೇಳಿಕೆಯ ನಂತರ ಬಳ್ಳಾರಿ ರಾಜಕಾರಣದಲ್ಲಿ ಭಾರೀ ಸಂಚಲನವೇ ಸೃಷ್ಟಿಯಾಗಿತ್ತು. ಆದ್ರೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವಶ್ಯಕತೆ, ಅವರ ಶಕ್ತಿ, ತಂತ್ರ ಪ್ರತಿ-ತಂತ್ರಗಳ ಮಾಸ್ಟರ್ ಪ್ಲಾನ್ ಬಗ್ಗೆ ಚುನಾವಣಾ ಚಾಣಕ್ಯ ಅಮಿತ್ ಶಾಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಶ್ರೀರಾಮುಲು ಮೂಲಕ ಮನವರಿಕೆ ಮಾಡಿಕೊಡುವಲ್ಲಿ ಯಶ್ವಸಿಯಾಗಿದ್ದಾರೆ ಅಂತ ತಿಳಿದು ಬಂದಿದೆ.

    ಜನಾರ್ದನ ರೆಡ್ಡಿ ಅವರ ತಂತ್ರಗಾರಿಕೆ ಮೂಲಕವೇ ಚುನಾವಣೆಯನ್ನು ಎದುರಿಸುತ್ತೇವೆ. ಅಲ್ಲದೇ ಜನಾರ್ದನ ರೆಡ್ಡಿ ಬಿಜೆಪಿಯೊಂದಿಗೆ ಇರ್ತಾರೆ ಅಂತ ಶ್ರೀರಾಮುಲು ಹೇಳಿದ್ದಾರೆ. ಶ್ರೀರಾಮುಲು ಸಂಸದರಾಗಿದ್ದರು ಅವರನ್ನು ಕೂಡ್ಲಿಗಿ ಅಥವಾ ಸಂಡೂರು ಕ್ಷೇತ್ರಗಳ ಪೈಕಿ ಒಂದರಲ್ಲಿ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

    ಬಳ್ಳಾರಿ ನಗರದಿಂದ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ್ ರೆಡ್ಡಿ, ಕಂಪ್ಲಿಯಿಂದ ಸುರೇಶಬಾಬು, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಶ್ರೀರಾಮುಲು ಸಹೋದರ ಸಣ್ಣ ಫಕ್ಕೀರಪ್ಪ ಇಲ್ಲವೇ ಸಹೋದರಿ ಜೆ ಶಾಂತಾರನ್ನು ಕಣಕ್ಕೆ ಇಳಿಸಲು ಯೋಚಿಸಿದ್ದಾರೆ. ಇತ್ತ ಹಡಗಲಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಸೂಚಿಸಿದವರನ್ನೇ ಕಣಕ್ಕೆ ಇಳಿಸಲು ಬಿಜೆಪಿ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂತ ಹೇಳಲಾಗಿದೆ.

    ಒಟ್ಟಿನಲ್ಲಿ ನೇರವಾಗಿ ರಾಜಕೀಯದಲ್ಲಿ ಕಾಣಿಸಿಕೊಳ್ಳದಿದ್ದರೂ ಜನಾರ್ದನ ರೆಡ್ಡಿ ಅವರ ಅನತಿಯಂತೆ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗ್ತಿದೆ. ಇದರ ಜೊತೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಳ್ಳಾರಿಯಲ್ಲಿ ಸೋಲಿಸಲು ಜರ್ನಾದನ ರೆಡ್ಡಿ ತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  • ಕಾಂಗ್ರೆಸ್ ಗೆ ಕಗ್ಗಂಟಾದ ಅಂಬರೀಶ್ ಮೌನ- `ಕೈ’ ಬಿಡ್ತಾರಾ ಮಂಡ್ಯದ ಗಂಡು!

    ಕಾಂಗ್ರೆಸ್ ಗೆ ಕಗ್ಗಂಟಾದ ಅಂಬರೀಶ್ ಮೌನ- `ಕೈ’ ಬಿಡ್ತಾರಾ ಮಂಡ್ಯದ ಗಂಡು!

    ಮಂಡ್ಯ: ರೆಬೆಲ್ ಸ್ಟಾರ್, ಶಾಸಕ ಅಂಬರೀಶ್ ಮೌನ ವಹಿಸಿರುವುದು ಇದೀಗ ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆಯೊಂದು ರಾಜಕೀಯ ವಲಯದಲ್ಲಿ ಎದ್ದಿದೆ.

    ಚುನಾವಣಾ ದಿನಾಂಕ ಘೋಷಣೆಯಾದ್ರೂ ಮಾಜಿ ಸಚಿವ ಅಂಬರೀಶ್ ಮಾತ್ರ ಮಂಡ್ಯದ ಅಖಾಡಕ್ಕೆ ಇಳಿದಿಲ್ಲ. ಆದ್ರೆ ಇಂದಲ್ಲ ನಾಳೆ ಅಂಬಿ ಅಖಾಡಕ್ಕೆ ಇಳಿಯಬಹುದೆಂದು ಕಾಂಗ್ರೆಸ್ ನಾಯಕರು ನಿರೀಕ್ಷೆಯಲ್ಲಿದ್ದರೆ, ಇತ್ತ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮದೇ ಆದ ಲೆಕ್ಕಾಚಾರದಲ್ಲಿದ್ದಾರೆ ಎಂಬುದಾಗಿ ರಾಜಕೀಯ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರದಿಂದ ದೂರ ಉಳಿದ ಮಂಡ್ಯದ ಗಂಡು-ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದ ಅಂಬಿ ನಡೆ

    ಎರಡು ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಅಂಬರೀಶ್‍ರನ್ನು ಪಕ್ಷದತ್ತ ಸೆಳೆಯಲು ಮುಂದಾಗಿವೆ. ಬಿಜೆಪಿ ಕೇಂದ್ರ ನಾಯಕರುಗಳೇ ಅಂಬರೀಶ್ ರನ್ನ ಸೆಳೆಯಲು ಮುಂದಾಗಿದ್ದು, ಕೇಂದ್ರದ ಮಾಜಿ ಸಚಿವ ಕೃಷ್ಣಂ ರಾಜು ಶುಕ್ರವಾರ ಬೆಂಗಳೂರಿಗೆ ಆಗಮಿಸಿ ಅಂಬರೀಶ್ ಜೊತೆ ಮಾತುಕತೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಅಂಬರೀಶ್‍ರನ್ನು ಬಿಜೆಪಿ ತೆಕ್ಕೆಗೆ ತರುವಂತೆ ಸ್ವತಃ ಬಿಜೆಪಿ ಹೈಕಮಾಂಡ್ ಕೃಷ್ಣಂ ರಾಜುರನ್ನು ಕಳುಹಿಸಿ ಕೊಡುತ್ತಿದೆ ಎಂಬುದಾಗಿ ಬಿಜೆಪಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಕಾಂಗ್ರೆಸ್ ಪಟ್ಟಿ ಔಟ್: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

    ಇನ್ನೊಂದೆಡೆ ಬಿಜೆಪಿ ವರಿಷ್ಠ ದೇವೇಗೌಡ ಅವರು ಅಂಬರೀಶ್‍ರೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಶುಕ್ರವಾರದವರೆಗೆ ಕಾದು ನೋಡುವ ತಂತ್ರಕ್ಕೆ ದೇವೇಗೌಡರು ಮೊರೆ ಹೋಗಿದ್ದಾರೆ. ಅಂಬರೀಶ್ ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆದು ಎಲ್ಲವೂ ಸರಿಯಾದ್ರೆ ಸುಮ್ಮನಾಗುವುದು. ಇಲ್ಲಾ ಶುಕ್ರವಾರದ ನಂತರ ಅಂಬರೀಶ್‍ರನ್ನ ಭೇಟಿ ಮಾಡಿ ಮಾತುಕತೆ ನಡೆಸಲು ತೀರ್ಮಾನಿಸಿದ್ದಾರೆ. ಆದರೆ ಇದೂವರೆಗೆ ಅಂಬರೀಶ್ ಎಲ್ಲೂ ಪಕ್ಷ ಬಿಡುವ ಮಾತನಾಡಿಲ್ಲ. ಚುನಾವಣೆಗೆ ಸ್ಪರ್ಧಿಸುವ ಇಲ್ಲವೆ ಸ್ಪರ್ಧಿಸದೇ ಇರುವ ಬಗ್ಗೆಯು ಹೇಳಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ನಾಯಕರ ವಿರುದ್ಧವೇ ಮುನಿಸಿಕೊಂಡ ರೆಬೆಲ್ ಸ್ಟಾರ್!

    ಈ ನಡುವೆ ಅಂಬರೀಶ್ ಮತ್ತು ಸಿಎಂ ಭೇಟಿ ಮುಂದಕ್ಕೆ ಹೋಗಿದ್ದು, ಇಂದು ಅಂಬರೀಶ್ ಸಿಎಂ ಸಿದ್ದರಾಮಯ್ಯ ಭೇಟಿ ಆಗುವ ಸಾಧ್ಯತೆ ಇದೆ. ಇಂದೂ ಕೂಡ ಸಿಎಂ ಅಂಬರೀಶ್ ಭೇಟಿ ಸಾಧ್ಯವಾಗದಿದ್ದರೆ ಅಂಬರೀಶ್ ಬೇರೆ ನಿರ್ಧಾರ ಮಾಡ್ತಾರಾ ಎಂಬ ಪ್ರಶ್ನೆ ಎದ್ದಿದೆ. ಒಟ್ಟಿನಲ್ಲಿ ಅಂಬರೀಶ್ ಅವರ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.