https://youtu.be/Y1DhUHAnRII
Tag: Karnataka Election 2018
-

ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಎಚ್‍ಡಿಡಿ ನಿವಾಸದ ಮುಂದೆ ಪ್ರತಿಭಟನೆ
ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರ ನಿವಾಸದ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಆರ್.ಆರ್.ನಗರ ಕ್ಷೇತ್ರ ಉಳಿಸಲು ಪ್ರಜ್ವಲ್‍ಗೆ ಟಿಕೆಟ್ ಕೊಡಿ ಎಂದು ಒತ್ತಾಯ ಮಾಡಿದ್ದಾರೆ. ಈ ವಿಚಾರದಲ್ಲಿ ಸ್ವಲ್ಪ ಗೊಂದಲಗಳಿವೆ ಹಾಗಾಗಿ ಈ ವಿಷಯದ ಹೆಚ್ಚಿಗೆ ಮಾತನಾಡಲ್ಲ ಅಂತಾ ದೇವೇಗೌಡ್ರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಈ ವಿಷಯವನ್ನು ಬೀದಿಗೆ ತರಬೇಡಿ ಎಂದು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ಈ ವಿಷಯವನ್ನು ಬೀದಿಗೆ ತರುವಂತೆ ಮಾಡಿದ್ದೇ ನೀವು, ಅಭ್ಯರ್ಥಿ ವಿಚಾರದಲ್ಲಿರುವ ಸಮಸ್ಯೆ ಬಗೆಹರಿಸಿ. ದೇವೇಗೌಡರು, ಕುಮಾರಸ್ವಾಮಿ ಅವರ ಮನವೊಲಿಸಿ ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.
ಮೊದಲ ಪಟ್ಟಿಯಲ್ಲಿ 35 ವರ್ಷದ ಒಳಗಿನ ವ್ಯಕ್ತಿಗೆ ಟಿಕೆಟ್ ನೀಡಿಲ್ಲ. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಲೇಬೇಕು. ಆರ್ ಆರ್ ನಗರದಲ್ಲಿ ಏಪ್ರಿಲ್ 13ರಂದು ನಡೆಯಲಿರುವ ಸಮಾವೇಶದಲ್ಲಿ ಪ್ರಜ್ವಲ್ ಹೆಸರನ್ನು ಘೋಷಿಸುವಂತೆ ಮಾಡಲು ಶರವಣ ಅವರಿಗೆ ಬೆಂಬಲಿಗರು ಆಗ್ರಹಿಸಿದರು. ಕುಟುಂಬದೊಳಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶರವಣ ತಿಳಿಸಿದ್ದಾರೆ.

ಆರ್ ಆರ್ ನಗರದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಅನ್ನುವುದು ನಮ್ಮ ಆಗ್ರಹ. ಈಗಾಗಲೇ ದೇವೇಗೌಡರಿಗೆ ಮನವಿಯನ್ನು ಸಲ್ಲಿಸಿದ್ದೇವೆ. ಈ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಚರ್ಚಿಸುವುದಾಗಿ ಅಂತಾ ದೇವೇಗೌಡರು ಹೇಳಿದ್ದಾರೆ. ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಸೋಲಿಸಲು ಸಮರ್ಥ ಅಭ್ಯರ್ಥಿಯನ್ನು ಹಾಕಬೇಕಿದೆ. ಒಂದು ವೇಳೆ ಡಮ್ಮಿ ಅಭ್ಯರ್ಥಿಯ ಹೆಸರನ್ನು ಸೂಚಿಸಿದ್ದಲ್ಲಿ, ದೇವೇಗೌಡ ಅಪ್ಪಾಜಿಯ ಆಶೀರ್ವಾದ ಪಡೆದು ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಜೆಡಿಎಸ್ ಮುಖಂಡ ನಾರಾಯಣ ಸ್ವಾಮಿ ಹೇಳಿದ್ದಾರೆ.
ದೇವೇಗೌಡರ ಮನೆ ಎದುರು ಪ್ರತಿಭಟನೆ ನಡೆದಿದ್ದು, ಎಚ್‍ಡಿಡಿ ಅವರ ಕಾರನ್ನು ಪ್ರತಿಭಟನಾಕಾರರು ತಡೆದಿದ್ದಾರೆ. ಪ್ರತಿಭಟನಾಕಾರರನ್ನು ಬಲವಂತವಾಗಿ ಪೊಲೀಸರು ತೆರವುಗೊಳಿಸಿದ ನಂತರ ಮನೆಯಿಂದ ದೇವೇಗೌಡ್ರು ಜೆಪಿ ಭವನಕ್ಕೆ ತೆರಳಿದ್ದಾರೆ. ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡು ಬಂದಿದ್ದು, ರಾಜ್ಯದ ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧೆಡೆಯಿಂದ 15 ಕ್ಕೂ ಹೆಚ್ಚು ಬಸ್‍ಗಳಲ್ಲಿ ಪ್ರಜ್ವಲ್ ಬೆಂಬಲಿಗರು ನಗರಕ್ಕೆ ಆಗಮಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ.

-

ನಾನ್ಯಾರ ನಗುವನ್ನು ಕಿತ್ತುಕೊಂಡಿಲ್ಲ, ಅವರ ನಗುವನ್ನು ಅವರೇ ಕಿತ್ತುಕೊಂಡಿದ್ದಾರೆ: ಬೇಳೂರು ಗೋಪಾಲಕೃಷ್ಣ
ಬೆಂಗಳೂರು: ನಾನು ಹಾಲಪ್ಪರ ನಗುವನ್ನು ಕಿತ್ತುಕೊಂಡಿಲ್ಲ. ತಮ್ಮ ನಗುವನ್ನು ಅವರೇ ಕಿತ್ತುಕೊಂಡಿದ್ದಾರೆ. ನಾನು ಸಿಗಂಧೂರು ದೇವಿ ಪ್ರಸಾದ ಸ್ವೀಕರಿಸಿ ಆಣೆ ಮಾಡಲು ಸಿದ್ಧನಿದ್ದೇನೆ. ಆಣೆ ಮಾಡಲು ಅವರು ದೇವಿಯ ಸನ್ನಿಧಿಗೆ ಬರಲಿ. ಯಾರನ್ನು ಮುಗಿಸಿ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ ಅಂತ ಬೇಳೂರು ಗೋಪಾಲಕೃಷ್ಣ ಗೆಳೆಯ ಅವರು ಮಾಜಿ ಸಚಿವ ಹಾಲಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ಯಾರ ಮೇಲಾದ್ರೂ ಆಪಾದನೆ ಮಾಡಿದ್ರೆ ಜಿಲ್ಲೆ ಮತ್ತು ರಾಜ್ಯದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತೆ ಅಂತ ತಿಳಿದಿದ್ದರೆ ಅದು ತಪ್ಪಾಗುತ್ತದೆ. ನಾನು ಇವತ್ತು ಮುಂದೆಯೇ ಹೇಳುತ್ತೇನೆ ನನ್ನ ಮೇಲೆ ಆಪಾದನೆಗಳಿದ್ದರೆ ಪ್ರಸಾದ ಸ್ವೀಕರಿಸಿ ಪ್ರಮಾಣ ಮಾಡ್ತೇನೆ ಅಂದ್ರು. ಇದನ್ನೂ ಓದಿ: ಬಿಎಸ್‍ವೈ, ಬಿಜೆಪಿ, ಆರ್ ಎಸ್‍ಎಸ್ ಬೈದವ್ರಿಗೆ ಟಿಕೆಟ್ – ಮಾಜಿ ಸಚಿವ ಹರತಾಳು ಹಾಲಪ್ಪ ಆಕ್ರೋಶ

ಕ್ಷೇತ್ರದಲ್ಲಿ ಬೇಳೂರುದ್ದೇ ಆದ ಶಕ್ತಿ ಮತ್ತು ಸಂಘಟನೆ ಇದೆ. ಅದನ್ನು ನಾನು ಯಾರಿಂದ ಕಲಿತು ಬಂದಿದ್ದೇನೆ ಎಂಬುದು ನನಗೆ ಗೊತ್ತಿದೆ. ಹಾಲಪ್ಪ ಅವರು ನನ್ನ ಬಗ್ಗೆ ಏನಾದ್ರೂ ತಿಳಿದುಕೊಂಡಿದ್ದರೆ ಅದು ತಪ್ಪಾಗುತ್ತದೆ. ನನ್ನ ಬಗ್ಗೆ ಏನಾದ್ರೂ ಆರೋಪಗಳಿದ್ದರೆ ಕ್ಷೇತ್ರದ ಜನ ಹೇಳಿದ್ರೆ ತಲೆ ಬಾಗಿಸುತ್ತೇನೆ ವಿನಃ ಬೇರೆ ಯಾರಾದ್ರೂ ಹೇಳಿದ್ರೆ ಕೇಳುವ ಪ್ರಶ್ನೆ ಇಲ್ಲ. ಹಾಲಪ್ಪ ಆಪಾದನೆ ಮಾಡುತ್ತಿರುವುದು ಸತ್ಯಕ್ಕೆ ದೂರವಾದದ್ದು ಅಂತ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಾಗರದಲ್ಲಿ ಬಿಜೆಪಿ ಟಿಕೆಟ್‍ಗಾಗಿ ಹರತಾಳು ಹಾಲಪ್ಪ, ಬೇಳೂರು ಗೋಪಾಲಕೃಷ್ಣ ನಡುವೆ ಪೈಪೋಟಿ
ಈ ಹಿಂದೆ ಸಾಗರ ಕ್ಷೇತ್ರದಿಂದ ಟಿಕೆಟ್ ಸಿಗದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವ್ರಿಗೆ ಬೈದವರಿಗೆ ಟಿಕೆಟ್ ನೀಡಲಾಗುತ್ತಿದೆ ಅಂತ ಪರೋಕ್ಷವಾಗಿ ಬೇಳೂರು ಗೋಪಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದ್ದರು.
https://youtu.be/Hs0JxZBSuK8

-

ಕ್ಷೇತ್ರವನ್ನು ಮಿನಿಸಿಂಗಾಪುರ್ ಮಾಡ್ತೀನಿ ಅಂದಿದ್ದ ಶಾಸಕ ಖೇಣಿಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್
ಬೀದರ್: ಇಲ್ಲಿನ ದಕ್ಷಿಣ ಶಾಸಕ ಅಶೋಕ್ ಖೇಣಿಯವರಿಗೆ ಬಗದಲ್ ಗ್ರಾಮಸ್ಥರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಶಾಸಕರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆಯೇ ಘೇರಾವ್ ಹಾಕಿದ ಗ್ರಾಮಸ್ಥರು, ಏನ್ ಸ್ವಾಮೀ ಕ್ಷೇತ್ರವನ್ನು ಮಿನಿ ಸಿಂಗಾಪುರ್ ಮಾಡ್ತೀವಿ ಅಂಥ ಹೇಳಿದ್ರಿ. ಈ ರಸ್ತೆ ನೋಡಿ, ಇದೇನಾ ಮಿನಿ ಸಿಂಗಾಪುರ್.. ಇದೇನಾ ನಿಮ್ಮ ಅಭಿವೃದ್ಧಿ.. ಅಂತ ಕಿಡಿಕಾರುವ ಮೂಲಕ ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಗ್ರಾಮಸ್ಥರ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾಗಿ ಎಸಿ ಕಾರ್‍ನಲ್ಲೇ ಕುಳಿತ ಶಾಸಕರು, ಜನರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ಸೈಲೆಂಟ್ ಆಗಿ ಜಾಗ ಖಾಲಿ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
-

ಇಂದೂ ರಾಜ್ಯದಲ್ಲಿ ರಾಗಾ ಪ್ರವಾಸ- ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಬೃಹತ್ ಸಮಾವೇಶ
ಕೋಲಾರ, ಚಿಕ್ಕಬಳ್ಳಾಪುರ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಕೊನೆಯ ಜನಾಶೀರ್ವಾದ ಯಾತ್ರೆ ನಡೆಸಲಿದ್ದಾರೆ.
ರಾಹುಲ್ ಅವರು ಬೆಳಗ್ಗೆ 11 ಗಂಟೆಗೆ ಕೋಲಾರದ ಮುಳಬಾಗಿಲಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸಿ, ಕುರುಡುಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಮುಳಬಾಗಿಲು ಆಂಜನೇಯಸ್ವಾಮಿ ಹಾಗೂ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ರೋಡ್ ಶೋ ನಡೆಸಲಿದ್ದಾರೆ. ಇದನ್ನೂ ಓದಿ: ದೂರದಿಂದ್ಲೇ ಗುರಿಯಿಟ್ಟು ರಾಹುಲ್ ಕೊರಳಿಗೆ ಹಾರ ಎಸೆದ ಅಭಿಮಾನಿ- ವಿಡಿಯೋ ಫುಲ್ ವೈರಲ್

ಮುಳಬಾಗಿಲಿನಿಂದ ಕೆಜಿಎಫ್ ಕ್ಯಾಸಂಬಳ್ಳಿಯಲ್ಲಿರುವ ಕೆ.ಸಿ.ರೆಡ್ಡಿ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಮಹಿಳಾ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅದಾದ ನಂತರ ಬಂಗಾರಪೇಟೆ ಹಾಗೂ ಕೋಲಾರದಲ್ಲಿ ರೋಡ್ ಶೋ ನಡೆಸಲಿದ್ದಾರೆ. ನಂತರ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿ ಅಲ್ಲೂ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಉಚಿತ ಅಕ್ಕಿ ನೀಡಿದ್ರು, ಬಿಎಸ್‍ವೈ ಏನು ಮಾಡಿದ್ದಾರೆ : ರಾಹುಲ್ ಗಾಂಧಿ


-

ನಾನು ಪ್ರಚಾರ ಮಾಡದೇ ಇದ್ರೂ ಗೆಲ್ತೀನಿ – ಸಿಎಂಗೆ ಯಡಿಯೂರಪ್ಪ ತಿರುಗೇಟು
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರನ್ನು ಸೋಲಿಸಲು ನಾನು ಒಂದು ದಿನ ಕ್ಯಾಂಪೇನ್ ಮಾಡಿದ್ರೆ ಸಾಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಎಸ್‍ವೈ ತಿರುಗೇಟು ನೀಡಿದ್ದಾರೆ.
ನಗರದ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರ ಕ್ಷೇತ್ರಕ್ಕೆ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಿದ್ರು. ನಾನು ಶಿಕಾರಿಪುರ ಪ್ರಚಾರ ಮಾಡದೇ ಇದ್ದರೂ ಜನ ಗೆಲ್ಲಿಸ್ತಾರೆ ಎನ್ನುವ ವಿಶ್ವಾಸ ಇದೆ. ಆದ್ರೆ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಗೆಲ್ಲಲಿ ಅಂತ ಸಿಎಂ ಗೆ ಪಂಥಾಹ್ವಾನ ನೀಡಿದರು.
ನಾನು ಶಿಕಾರಿಪುರ ಪ್ರಚಾರ ಮಾಡದೆ ಇದ್ರೂ ಜನ ನನ್ನ ಆಯ್ಕೆ ಮಾಡುತ್ತಾರೆ. ಒಮ್ಮೆ ನಾಮಪತ್ರ ಸಲ್ಲಿಸೋಕೆ ಹೋಗ್ತೇನೆ. ಆನಂತರ ಒಂದು ದಿನ ಮಾತ್ರ ಪ್ರಚಾರ ಮಾಡ್ತೇನೆ. ನನ್ನ ಜಿಲ್ಲೆಯ ಜನ ಈ ಹಿಂದೆ 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿದ್ರು. ಸಿದ್ದರಾಮಯ್ಯಗೆ ಬೇರೆ ಕ್ಷೇತ್ರ ಇರಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲು ಗೆಲ್ಲಲಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ, ಎಚ್‍ಡಿಕೆಯನ್ನು ಸೋಲಿಸಲು ನಾನು ಒಂದು ದಿನ ಪ್ರಚಾರ ಮಾಡಿದ್ರೆ ಸಾಕು: ಸಿಎಂ
ಚಾಮುಂಡೇಶ್ವರಿಯಲ್ಲಿ ಸಿಎಂ ಸ್ಪರ್ಧಿಸೋಕೆ ಹಿಂದು-ಮುಂದು ನೋಡ್ತಿದ್ದಾರೆ. ಬೇರೆ ಕ್ಷೇತ್ರವನ್ನ ಹುಡುಕ್ತಿರೋದು ಯಾರು? ಅವರೇ ಆ ಚಿಂತನೆ ಮಾಡ್ತಿದ್ದಾರೆ. ಮೊದಲು ಸಿಎಂ ಚಾಮುಂಡೇಶ್ವರಿಯಲ್ಲಿ, ಅವರ ಪುತ್ರ ಯತೀಂದ್ರ ವರುಣಾದಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಬಿಎಸ್‍ವೈ ಸವಾಲು ಹಾಕಿದರು.
ಇದೇ ವೇಳೆ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಭೇಟಿ ವಿಚಾರದ ಕುರಿತು ಮಾತನಾಡಿದ ಅವರು, ರಾಜ್ಯಕ್ಕೆ ರಾಮ್ ಮಾಧವ್ ಬಂದಿದ್ದಾರೆ. ಚುನಾವಣೆ ಪ್ರಚಾರ ಕುರಿತು ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. ಬಿಜೆಪಿ ಪ್ರಮುಖ ನಾಯಕರಿಗೆ ಮಾಹಿತಿ ನೀಡಿಯೇ ರಾಜ್ಯಕ್ಕೆ ಬಂದಿದ್ದಾರೆ. ರಾಜ್ಯ ನಾಯಕರಿಗೆ ಮಾಹಿತಿ ನೀಡದೆ ಬಂದಿದ್ದಾರೆ ಅನ್ನೋದು ಸತ್ಯಕ್ಕೆ ದೂರವಾದುದು. ಮುಂದೆಯೂ ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆ ಸಿದ್ಧತೆ ಕೈಗೊಳ್ಳಲಿದ್ದಾರೆ. ಅಮಿತ್ ಶಾ ಜೊತೆ ಸೇರಿ ಪಕ್ಷವನ್ನು ಗೆಲ್ಲಿಸುವಲ್ಲಿ ರಾಮ್ ಮಾಧವ್ ನಿಸ್ಸೀಮರು ಅಂತ ಹೇಳಿದ್ರು.
-

ರಾಜ್ಯಕ್ಕೆ ಬಿಜೆಪಿ ಗೆಲುವಿನ ಸೂತ್ರಧಾರ ಎಂಟ್ರಿ – ಆರ್ ಎಸ್‍ಎಸ್ ನಾಯಕರ ಜೊತೆ ರಾಮ್ ಮಾಧವ್ ಗುಪ್ತ ಸಭೆ
ಬೆಂಗಳೂರು: ತ್ರಿಪುರಾ ಮತ್ತು ಜಮ್ಮುಕಾಶ್ಮೀರದಲ್ಲಿ ಬಿಜೆಪಿ ಗೆಲುವಿನ ಸೂತ್ರಧಾರರಾಗಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಇದೀಗ ರಾಜ್ಯ ಚುನಾವಣಾ ಅಖಾಡಕ್ಕಿಳಿದಿದ್ದಾರೆ.
ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ನಿಡದೇ ಆರ್ ಎಸ್‍ಎಸ್ ನಾಯಕರ ಜೊತೆ ಗುಪ್ತ ಸಭೆ ನಡೆಸಿದ್ದಾರೆ. ತಡರಾತ್ರಿವರೆಗೂ ನಡೆದ ಈ ಮಹತ್ವದ ಸಭೆಯಲ್ಲಿ ಚುನಾವಣೆ ಪ್ರಚಾರ ಕುರಿತಾಗಿ ಚರ್ಚಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಮೋದಿ ಭಾಗವಹಿಸುವ ಬೃಹತ್ ಸಮಾವೇಶ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ. ರಾಜ್ಯದಲ್ಲಿ ಸದ್ಯದ ವಿಪಕ್ಷಗಳ ಪ್ರಚಾರ ತಂತ್ರ ಕುರಿತು ಆರ್‍ಎಸ್‍ಎಸ್ ನಾಯಕರಿಂದ ಮಾಹಿತಿ ಪಡೆದಿದ್ದಾರೆ. ಬಹಿರಂಗ ಸಭೆ ಅವಧಿ ಮುಕ್ತಾಯ ದಿನಾಂಕದವರೆಗೆ ಕೈಗೊಳ್ಳಬೇಕಾದ ಪ್ರಚಾರ ತಂತ್ರ ಕುರಿತು ಚರ್ಚಿಸಿದ್ದು, ಇನ್ನು ಎರಡು ದಿನಗಳ ಕಾಲ ರಾಮ್ ಮಾಧವ್ ಅವರು ರಾಜ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
-

ಬೆಂಗಳೂರಿನ 13 ಕ್ಷೇತ್ರಗಳಲ್ಲಿ ಯಾರು ನಿಲ್ಲಬೇಕು – ಬಿಜೆಪಿ ಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೆಂಗಳೂರು: ಯಲಹಂಕದ ರೆಸಾರ್ಟ್‍ನಲ್ಲಿ ನಿನ್ನೆಯಿಂದ ನಡೆಯುತ್ತಿರುವ ಬಿಜೆಪಿ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಇವತ್ತು ಬೆಂಗಳೂರಿನ 13 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ.
ಇವತ್ತು ಹಾವೇರಿ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ವಿಜಯಪುರ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಯಥಾ ಪ್ರಕಾರ ನಾಯಕರ ಪರವಾಗಿ ಕಾರ್ಯಕರ್ತರ ಲಾಬಿ ಜೋರಾಗಿತ್ತು. ಕೆಲವರು ನಾಯಕರ ಕಾಲಿಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ನಿನ್ನೆ ಬೆಂಗಳೂರಿನ 13 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಚರ್ಚೆ ಆಗಿತ್ತು. ಇವತ್ತು ಮತ್ತೆ 13 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರಿನ 14 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್
ಮುಖ್ಯವಾಗಿ ವಿ.ಸೋಮಣ್ಣ ಹೆಸರು ಗೋವಿಂದರಾಜನಗರದಿಂದ ಪ್ರಸ್ತಾಪವಾಗಿದೆ. ಆದರೂ, ಹನೂರಿನಿಂದಲೇ ಟಿಕೆಟ್ ಕೊಡಬೇಕು. ಪ್ರೀತಮ್ ನಾಗಪ್ಪ ಗೆಲುವು ಅಸಾಧ್ಯ ಅಂತ ನಾಯಕರಿಗೆ ಸೋಮಣ್ಣ ಬೆಂಬಲಿಗರು ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.
ಯಾವ ಕ್ಷೇತ್ರದಲ್ಲಿ ಯಾರು ಆಕಾಂಕ್ಷಿಗಳು?
1. ಗೋವಿಂದರಾಜನಗರ – ವಿ.ಸೋಮಣ್ಣ/ ಉಮೇಶ್ ಶೆಟ್ಟಿ
2. ಮಹಾಲಕ್ಷ್ಮಿ ಲೇಔಟ್ – ಹರೀಶ್/ ನೆ.ಲ.ನರೇಂದ್ರ ಬಾಬು/ ನಾಗರಾಜ್
3. ಸರ್ವಜ್ಞ ನಗರ – ಪದ್ಮನಾಭ ರೆಡ್ಡಿ/ ಎಂ.ಎನ್.ರೆಡ್ಡಿ
4. ವಿಜಯನಗರ – ರವೀಂದ್ರ/ ಅಶ್ವಥ್ ನಾರಾಯಣ್
5. ಬಿ.ಟಿ.ಎಂ.ಲೇಔಟ್ – ಲಲ್ಲೇಶ್ ರೆಡ್ಡಿ/ ವಿವೇಕ್ ರೆಡ್ಡಿ/ ಜಯದೇವ
6. ಬ್ಯಾಟರಾಯನಪುರ – ರವಿ/ ರಾಜಗೋಪಾಲ್/ ಮುನೀಂದ್ರ ಕುಮಾರ್
7. ಶಾಂತಿನಗರ – ವಾಸುದೇವ್ ಮೂರ್ತಿ/ ಬಿ.ಎನ್.ಎಸ್ ರೆಡ್ಡಿ/ ಶ್ರೀಧರ್
8. ರಾಜರಾಜೇಶ್ವರಿನಗರ – ಮುನಿರಾಜುಗೌಡ/ ಹನುಮಂತರಾಯಪ್ಪ/ ಶಿಲ್ಪಾ ಗಣೇಶ್
9. ಗಾಂಧಿನಗರ – ಶಿವಕುಮಾರ್/ ಸಪ್ತಗಿರಿಗೌಡ
10. ಪುಲಿಕೇಶಿ ನಗರ – ಮುನಿಕೃಷ್ಣ/ ಸೋಮಶೇಖರ್
11. ಶಿವಾಜಿನಗರ – ಕಟ್ಟಾ ಸುಬ್ರಹ್ಮಣ್ಯ ನಾಯ್ಡು
12. ಚಿಕ್ಕಪೇಟೆ – ಉದಯ್ ಗರುಡಾಚಾರ್/ ಎನ್.ಆರ್.ರಮೇಶ್
13. ಆನೇಕಲ್ – ನಾರಾಯಣಸ್ವಾಮಿ -

ಬಿಜೆಪಿ ಹಣಿಯಲು ರಾಜ್ಯ ಕಾಂಗ್ರೆಸ್‍ಗೆ `ಚಂದ್ರ’ದೆಸೆ!
ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ನಾನಾ ತಂತ್ರಗಳನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಈಗ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಜೊತೆ ಕೈ ಜೋಡಿಸಿದ ವಿಚಾರ ಬೆಳಕಿಗೆ ಬಂದಿದೆ.
ಹೌದು. ರಾಜ್ಯ ಕಾಂಗ್ರೆಸ್ ನಾಯಕರ ಗಮನಕ್ಕೂ ಬಾರದಂತೆ ಕಾಂಗ್ರೆಸ್ ಹೈಕಮಾಂಡ್ ಮೆಗಾ ಪ್ಲಾನ್ ಮಾಡಿದೆ. ಬುಧವಾರ ರಾತ್ರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಮಾನ ಹತ್ತುವ ಮುನ್ನ ಸಿದ್ದರಾಮಯ್ಯ, ಪರಮೇಶ್ವರ್ ಅವರಲ್ಲಿ ಈ ವಿಚಾರ ತಿಳಿಸಿದಾಗ ಇಬ್ಬರು ನಾಯಕರು ಫುಲ್ ಖುಷ್ ಆಗಿದ್ದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಪ್ಲಾನ್ ಏನು?
ರಾಹುಲ್ ಗಾಂಧಿ ಹಾಗೂ ಚಂದ್ರಬಾಬು ನಾಯ್ಡು ಎರಡು ಸುತ್ತು ರಹಸ್ಯ ಮಾತುಕತೆ ನಡೆಸಿದ್ದಾರೆ. ಆಂಧ್ರ ಗಡಿ ಭಾಗದ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ತೆಲುಗುದೇಶಂ ಪಾರ್ಟಿಯ ಕಾರ್ಯಕರ್ತರು ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಬೇಕೆಂಬ ರಾಹುಲ್ ಪ್ರಸ್ತಾಪಕ್ಕೆ ನಾಯ್ಡು ಒಪ್ಪಿಗೆ ನೀಡಿದ್ದಾರೆ.ತೆಲುಗು ಭಾಷಾ ಪ್ರೇಮ ಹಾಗೂ ಸಂಬಂಧಗಳನ್ನು ಹೊಂದಿರುವ ಆಂಧ್ರ ದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಗಡಿ ಜಿಲ್ಲೆಯ ಜನರೊಂದಿಗೆ ಹೊಂದಿರುವ ಬಾಂಧವ್ಯವನ್ನೆ ಬಳಸಿ ಪ್ರಚಾರ ಮಾಡಲಿದ್ದಾರೆ. ಸದ್ಯಕ್ಕೆ ಬಹಿರಂಗ ಮೈತ್ರಿ ಬೇಡ. ಕರ್ನಾಟಕ ಚುನಾವಣೆಯಲ್ಲಿ ನಮ್ಮಿಂದ ಆಂತರಿಕ ಬೆಂಬಲ ಸಿಗಲಿದೆ ಎಂದು ಚಂದ್ರಬಾಬು ನಾಯ್ಡು ರಾಹುಲ್ ಗಾಂಧಿಗೆ ಮಾತು ಕೊಟ್ಟಿದ್ದಾರೆ. ಅದರಂತೆ ಅವರ ಕಾರ್ಯಕರ್ತರ ಹಾಗೂ ಮುಖಂಡರ ತಂಡ ಕರ್ನಾಟಕದಲ್ಲಿ ಆಕ್ಟೀವ್ ಆಗಲಿದೆ. ಈ ರಹಸ್ಯ ಮೈತ್ರಿ ಬಗ್ಗೆ ನಿನ್ನೆ ರಾತ್ರಿ ವಿಮಾನ ಹತ್ತುವ ಮುನ್ನ ರಾಹುಲ್ ಗಾಂಧಿ ಸಿಎಂ ಹಾಗೂ ಪರಮೇಶ್ವರ್ ಬಳಿ ಹೇಳಿದ್ದು ಕಾಂಗ್ರೆಸ್ ಪಾಳಯದಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ.


