Tag: Karnataka Election 2018

  • ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಾಸಕರಿಗೆ ಬಿಜೆಪಿ ಟಿಕೆಟ್-ಟ್ವಿಟ್ಟರ್ ನಲ್ಲಿ ಅಸಮಾಧಾನ

    ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಾಸಕರಿಗೆ ಬಿಜೆಪಿ ಟಿಕೆಟ್-ಟ್ವಿಟ್ಟರ್ ನಲ್ಲಿ ಅಸಮಾಧಾನ

    ಯಾದಗಿರಿ: ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಹಾಪುರ ಶಾಸಕ ಗುರುಪಾಟೀಲ್‍ರಿಗೆ ಬಿಜೆಪಿ ಟಿಕೆಟ್ ನೀಡಿದೆ.

    ರಾಜ್ಯಾದ್ಯಂತ ಬಿಜೆಪಿ ಟಿಪ್ಪು ಜಯಂತಿಗೆ ಭಾರೀ ವಿರೋಧವನ್ನು ವ್ಯಕ್ತಪಡಿಸಿತ್ತು. ಆದ್ರೂ ಶಹಾಪುರ ಬಿಜೆಪಿ ಶಾಸಕ ಗುರುಪಾಟೀಲ್ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದರು. ಆದ್ರೆ ಇದೀಗ ಬಿಜೆಪಿ ಮತ್ತೊಮ್ಮೆ ಗುರುಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದು, ಸ್ಥಳೀಯ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಬಿಜೆಪಿಯ ಟಿಪ್ಪು ಜಯಂತಿ ವಿರೋಧದ ಪ್ರತಿಭಟನೆ ಕೇವಲ ರಾಜಕೀಯ ಬೂಟಾಟಿಕೆ ಆಯಿತಾ? ಇದು ಚೀಪ್ ಪೊಲಿಟಿಕ್ಸ್. ಪಕ್ಷದ ವಿರೋಧದ ನಡುವೆಯೂ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಗುರುಪಾಟೀಲ್ ಗೆ ಬಿಜೆಪಿ ಟಿಕೆಟ್ ನೀಡಿರುವುದು ಎಷ್ಟು ಸರಿ ಅಂತಾ ನಮೋ ಬ್ರಿಗೇಡ್‍ನ ಮಾಜಿ ಸದಸ್ಯ ನೀರಜ್ ಕಾಮತ್ ಟ್ವಿಟ್ಟರ್ ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

    ಈ ಹಿಂದೆ ಹೊಸಪೇಟೆಯ ಶಾಸಕ ಆನಂದ್ ಸಿಂಗ್ ಬಿಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದಕ್ಕೆ, ರಾಜ್ಯ ನಾಯಕರೆಲ್ಲಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಂತೆಯೇ ಜಯಂತಿಯಲ್ಲಿ ಭಾಗವಹಿಸಿದ್ದಕ್ಕೆ ಉತ್ತರ ನೀಡಬೇಕೆಂದು ಬಿಜೆಪಿ ಆನಂದ್ ಸಿಂಗ್ ಅವರಿಗೆ ಶೋಕಾಸ್ ನೋಟಿಸ್ ಸಹ ಜಾರಿ ಮಾಡಿತ್ತು. ಇದನ್ನೂ ಓದಿ: ಶಾಸಕ ಆನಂದ್ ಸಿಂಗ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

  • ಚುನಾವಣೆ ಗೆಲ್ಲೋಕೆ ಯುಗಾದಿ ಹಬ್ಬದಿಂದಲೇ ಊಟ ಬಿಟ್ಟ ಅಭ್ಯರ್ಥಿ

    ಚುನಾವಣೆ ಗೆಲ್ಲೋಕೆ ಯುಗಾದಿ ಹಬ್ಬದಿಂದಲೇ ಊಟ ಬಿಟ್ಟ ಅಭ್ಯರ್ಥಿ

    ಚಿಕ್ಕಬಳ್ಳಾಪುರ: ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಯೊಬ್ಬರು ಸಿನಿಮಾ ಸ್ಟೈಲಲ್ಲಿ ಪವರ್ ಫುಲ್ ಡೈಲಾಗ್ ಹೇಳುತ್ತಾ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಪ್ರಬಲ ಪಕ್ಷೇತರ ಅಭ್ಯರ್ಥಿಗಳನ್ನು ನಾನು ಸೋಲಿಸಿ ಎಂಎಲ್‍ಎ ಆಗುತ್ತೇನೆ ಅಂತಾ ಹೇಳುತ್ತಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕು ಅಂಕಾಲಮಡುಗು ಗ್ರಾಮದ ಭಾಸ್ಕರ್ ರೆಡ್ಡಿ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಚಿಂತಾಮಣಿ ಕ್ಷೇತ್ರದ ಎಲ್ಲ ಅಭ್ಯರ್ಥಿಗಳನ್ನು ಸೋಲಿಸುತ್ತೇನೆ ಅಂತಾ ಸವಾಲು ಹಾಕುತ್ತಾರೆ. ಇದೇ ಏಪ್ರಿಲ್ 17ರಂದು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದು, ಚಿಂತಾಮಣಿಯಲ್ಲಿ ಈ ಬಾರಿ ನನ್ನದೇ ಗೆಲುವು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸ್ತಾರೆ.

    ಭಾಸ್ಕರ್ ರೆಡ್ಡಿ ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥಸ್ವಾಮಿಯ ಭಕ್ತ ಎಂದು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆಗೆ ನಿಲ್ಲೋಕೆ ಅಂತಲೇ ಯುಗಾದಿ ಹಬ್ಬದಿಂದ ಊಟ ಬಿಟ್ಟು ಬರೀ ಹಣ್ಣು-ಹಂಪಲು, ಹಾಲು ಸೇವಿಸಿ ಬದುಕುತ್ತಿದ್ದಾರೆ. ಹೊಸ ವರ್ಷ ಆರಂಭದಿಂದಲೇ ಈ ಬಾರಿ ಚುನಾವಣೆಗೆ ನಿಲುತ್ತೀನಿ ಎಂದು ಮದ್ಯಪಾನ, ಮಾಂಸಾಹಾರ ಬಿಟ್ಟು ಗಾಂಧಿತತ್ವ ಪಾಲಿಸುತ್ತಿದ್ದಾರೆ. ಭಾಸ್ಕರ್ ರೆಡ್ಡಿ ಒಂದು ರೀತಿಯಲ್ಲಿ ಡಿಫೆರೆಂಟ್ ಹೇಳಿಕೆ ಕೊಡುತ್ತಿದ್ದು, ಸಸಿಗಳನ್ನ ನೆಟ್ಟು, ಅಂಗಾಗ ಹಾಗೂ ದೇಹ ದಾನ ಮಾಡುವ ಮೂಲಕ ನಾಮಪತ್ರ ಸಲ್ಲಿಸುವುದಾಗಿ ಎಂದು ತಿಳಿಸಿದ್ದಾರೆ.

    ಚಿಂತಾಮಣಿ ಕ್ಷೇತ್ರದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನ ಅಭ್ಯರ್ಥಿಗಳು, ಜನ ವಿರೋಧಿ, ಭ್ರಷ್ಟಚಾರ ನಡೆಸಿದ್ದಾರೆ ಎಂದು ಭಾಸ್ಕರ್ ರೆಡ್ಡಿ ಆರೋಪಿಸಿದ್ದಾರೆ.

  • 224 ಕ್ಷೇತ್ರದ ಹೆಸರನ್ನು ತಪ್ಪಿಲ್ಲದಂತೆ ಹೇಳ್ತಾನೆ 6ರ ಪೋರ- ವಿಡಿಯೋ ನೋಡಿ

    224 ಕ್ಷೇತ್ರದ ಹೆಸರನ್ನು ತಪ್ಪಿಲ್ಲದಂತೆ ಹೇಳ್ತಾನೆ 6ರ ಪೋರ- ವಿಡಿಯೋ ನೋಡಿ

    ಶಿವಮೊಗ್ಗ: ಒಂದು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಹೇಳಲು ಬಹುತೇಕ ಮಂದಿ ಕಷ್ಟ ಪಡುತ್ತಾರೆ. ಆದ್ರೆ ಶಿವಮೊಗ್ಗದ ವಿನೋಬ ನಗರದ 6 ವರ್ಷದ ಇಂದ್ರಜಿತ್ ಒಂದೇ ಉಸಿರಿನಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳ ಹೆಸರನ್ನು ಕ್ರಮಬದ್ಧವಾಗಿ ಹೇಳುತ್ತಾನೆ.

    ವಿಧಾನಸಭಾ ಕ್ಷೇತ್ರ ಸಂಖ್ಯೆ ಒಂದು ನಿಪ್ಪಾಣಿಯಿಂದ ಆರಂಭಿಸಿ 224 ನೇ ಕ್ಷೇತ್ರವಾದ ಗುಂಡ್ಲುಪೇಟೆವರೆಗೆ ತಪ್ಪಿಲ್ಲದಂತೆ ಹೇಳುವ ಈ ಬಾಲಕ ಅದರೊಂದಿಗೆ ಎಲ್ಲರೂ ಮೇ 12ರಂದು ನಡೆಯುವ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವಂತೆ ಮನವಿಯನ್ನೂ ಮಾಡಿದ್ದಾನೆ.

    ಶಿವಮೊಗ್ಗದ ರಾಯಲ್ ಡೈಮಂಡ್ ಶಾಲೆಯ ಒಂದನೇ ತರಗತಿ ಓದುತ್ತಿರುವ ಇಂದ್ರಜಿತ್ ನನ್ನು ಜಿಲ್ಲಾಧಿಕಾರಿ ಎಂ.ಲೋಕೇಶ್ ಅವರು ಜಿಲ್ಲೆಯ ಚುನಾವಣಾ ಜಾಗೃತಿ ಅಭಿಯಾನದ ಐಕಾನ್ ಆಗಿ ಈ ಪುಟ್ಟ ಪೋರ ಇಂದ್ರಜಿತ್ ನನ್ನು ಘೋಷಿಸಿದ್ದಾರೆ.

  • ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಫಿನಿಶ್ – ಸಿಎಂ ಮಗನಿಗೆ ಟಿಕೆಟ್ ಸಲುವಾಗಿ ಸಖತ್  ಫೈಟ್

    ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಫಿನಿಶ್ – ಸಿಎಂ ಮಗನಿಗೆ ಟಿಕೆಟ್ ಸಲುವಾಗಿ ಸಖತ್ ಫೈಟ್

    ನವದೆಹಲಿ: ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಅಂತ್ಯವಾಗಿದೆ. ಎರಡು ಹಂತಗಳಲ್ಲಿ ನಡೆದ ಸಭೆಯಲ್ಲಿ ಹಾಲಿ ಶಾಸಕರು ಸೇರಿದಂತೆ ಕಳೆದ ಬಾರಿ ಕಡಿಮೆ ಅಂತರದಿಂದ ಸೋತ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ತಿರ್ಮಾನಕ್ಕೆ ಬಂದಿದ್ದಾರೆ.

    ಇದರ ಜೊತೆ ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರಿದ ಜೆಡಿಎಸ್ ಬಂಡಾಯ ಶಾಸಕರು, ಆನಂದ್ ಸಿಂಗ್, ಅಶೋಕ್ ಖೇಣಿ ಹಾಗೂ ನಾಗೇಂದ್ರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚಿಸಲಾಗಿದೆ. ಸಿಎಂ ಸಿದ್ದರಾಮಯ್ಯ ಮಗ ಯತೀಂದ್ರಗೆ ಟಿಕೆಟ್ ಸಲುವಾಗಿ ಸಭೆಯಲ್ಲಿ ಸಖತ್ ಫೈಟ್ ನಡೆದಿದ್ದು, ಒಮ್ಮತದ ನಿರ್ಧಾರಕ್ಕೆ ಬರಲಿಲ್ಲ. ಹೀಗಾಗಿ ಮುಖಂಡರ ಮಕ್ಕಳಿಗೆ ಟಿಕೆಟ್ ನೀಡುವ ವಿಚಾರನ್ನು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದಾರೆ ಎನ್ನಲಾಗಿದೆ.

    ಇಂದು ಕಾಂಗ್ರೆಸ್ ಹಿರಿಯ ನಾಯಕರು ಹಾಗೂ ಕಾಂಗ್ರೆಸ್ ಸಂಸದರ ಜೊತೆ ಚುನಾವಣಾ ಪರಿಶೀಲನಾ ಸಮಿತಿ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಸಭೆ ನಡೆಸಲಿದ್ದಾರೆ. ಗುರುವಾರ ಸಂಜೆ ವೇಳೆಗೆ ಸ್ಕ್ರೀನಿಂಗ್ ಕಮಿಟಿ ತನ್ನ ಅಂತಿಮ ವರದಿಯನ್ನು ಹೈಕಮಾಂಡ್‍ಗೆ ನೀಡಲಿದೆ. ಏಪ್ರಿಲ್ 13 ಶುಕ್ರವಾರದಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ, ಅಭ್ಯರ್ಥಿಗಳ ಆಯ್ಕೆಗೆ ಅಂಕಿತ ಹಾಕಲಿದೆ. ಅಂದೇ ಮೊದಲ ಹಂತದಲ್ಲಿ 130 ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಸಾಧ್ಯತೆ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳೀದುಬಂದಿದೆ.

  • ಅವರಪ್ಪನ ಮೇಲೆ ಆಣೆ ಹಾಕಲ್ಲ ಅಂತಾರೆ, ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಜಮೀರ್ ಅಹಮದ್

    ಅವರಪ್ಪನ ಮೇಲೆ ಆಣೆ ಹಾಕಲ್ಲ ಅಂತಾರೆ, ನಮ್ಮಪ್ಪನಾಣೆ ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಜಮೀರ್ ಅಹಮದ್

    ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಅವರ ತಂದೆ ಮೇಲೆ ಆಣೆ ಹಾಕದೆ, ನಮ್ಮ ತಂದೆ ಮೇಲೆ ಯಾಕೆ ಆಣೆ ಮಾಡ್ತಾರೆ ಅಂತಾ ಹೆಚ್.ಡಿ.ಕುಮಾರಸ್ವಾಮಿ ಹೇಳ್ತಾರೆ. ತಗೊಳ್ಳಿ ಇಂದು ನಮ್ಮಪ್ಪಾಣೆ ಈ ಬಾರಿ ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ ಅಂತಾ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದ ಜಮೀರ್ ಅಹಮದ್ ಭವಿಷ್ಯ ನುಡಿದಿದ್ದಾರೆ.

    ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಜಮೀರ್ ಅಹಮದ್, ಜೆಡಿಎಸ್ ಪಕ್ಷ ಸೆಕ್ಯೂಲರ್ ಅಲ್ಲವೇ ಅಲ್ಲ. ಕುಮಾರಸ್ವಾಮಿ ಅವರಲ್ಲಿ ಶೇ.10 ರಷ್ಟು ಜಾತ್ಯಾತೀತ ಅಂಶಗಳಿಲ್ಲ. ಈ ಚುನಾವಣೆಯಲ್ಲಿ ಏನಾದ್ರೂ ಜೆಡಿಎಸ್ 115 ಸೀಟ್ ಬಂದ್ರೆ, ನಮ್ಮ ತಾಯಾಣೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುವುದರ ಜೊತೆಗೆ ರಾಜ್ಯ ಬಿಟ್ಟು ಹೋಗ್ತೇನೆ ಅಂತ ಹೇಳಿದ್ದಾರೆ.

    ನಾವು ಈ ಬಾರಿ 20 ರಿಂದ 30 ಕ್ಷೇತಗಳಲ್ಲಿ ಗೆಲವು ಸಾಧಿಸುತ್ತೇವೆ ಎಂಬುವುದು ಕುಮಾರಸ್ವಾಮಿ ಅವರಿಗೂ ಗೊತ್ತಿದೆ. ಸಿದ್ದರಾಮಯ್ಯ ಯಾವಾಗಲೂ ಹುಲಿ. ಅವರಿಗೆ ಹಿಂದೆ ಹೋಗುವುದು ಗೊತ್ತಿಲ್ಲ. ಭಯ ಬಂದಿರೋದು ಕುಮಾರಸ್ವಾಮಿ ಅವರಿಗೆ, ಹೀಗಾಗಿ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಅಂತಾ ವ್ಯಂಗ್ಯ ಮಾಡಿದರು.

  • ಭಿನ್ನಮತ ಗಲಾಟೆಯಲ್ಲೂ ಬಿಎಸ್‍ವೈ ರಾಜ್ಯ ಪ್ರವಾಸ- ಎಲೆಕ್ಷನ್ ಮುಗಿಯೋವರೆಗೆ ಹೆಲಿಕಾಪ್ಟರ್ ನಲ್ಲೇ ಸಂಚಾರ

    ಭಿನ್ನಮತ ಗಲಾಟೆಯಲ್ಲೂ ಬಿಎಸ್‍ವೈ ರಾಜ್ಯ ಪ್ರವಾಸ- ಎಲೆಕ್ಷನ್ ಮುಗಿಯೋವರೆಗೆ ಹೆಲಿಕಾಪ್ಟರ್ ನಲ್ಲೇ ಸಂಚಾರ

    ಬೆಂಗಳೂರು: 2018ರ ಕರ್ನಾಟಕ ಚುನಾವಣೆಗೆ ಬಿಜೆಪಿಯಿಂದ ಬಿಡುಗಡೆಯಾಗಿದ್ದ ಫಸ್ಟ್ ಲಿಸ್ಟ್ ನಿಂದ ಭುಗಿಲೆದ್ದಿರೋ ಭಿನ್ನಮತದ ನಡುವೆಯೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ರಾಜ್ಯಪ್ರವಾಸ ಮಾಡಲಿದ್ದಾರೆ.

    ಇಂದಿನಿಂದ ಹೆಲಿಕಾಪ್ಟರ್ ಮೂಲಕ ರಾಜ್ಯ ಸುತ್ತಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಕೊಪ್ಪಳದ ಗಂಗಾವತಿಯಲ್ಲಿ ಭತ್ತ ಬೆಳೆಗಾರರ ಜೊತೆ ಸಂವಾದ ನಡೆಸಲಿದ್ದು, ಮಧ್ಯಾಹ್ನ 2 ಗಂಟೆ ಶಿರಹಟ್ಟಿ, ಬಿದರೇಹಳ್ಳಿಯ ಲಂಬಾಣಿ ತಾಂಡಗಳಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಮತ್ತೊಂದು ಹಂತದಲ್ಲಿ 224 ಕ್ಷೇತ್ರಗಳಲ್ಲೂ ಬಿಎಸ್‍ವೈ ಪ್ರಚಾರ ಮಾಡಲಿದ್ದಾರೆ. ಚುನಾವಣೆ ಬಹಿರಂಗ ಸಭೆ ಮುಕ್ತಾಯದವರೆಗೂ ರಾಜ್ಯ ಪ್ರವಾಸಕ್ಕೆ ಹೈಕಮಾಂಡ್ ಸೂಚನೆ ನೀಡಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಬಹುತೇಕ ಹಾಲಿ ಶಾಸಕರ ಟಿಕೆಟ್‍ಗೆ ಗ್ರೀನ್‍ಸಿಗ್ನಲ್

    ದೆಹಲಿಯಲ್ಲಿ ಭಾನುವಾರ ರಾತ್ರಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ದೀರ್ಘ ಚರ್ಚೆ ನಡೆದು ಬಳಿಕ ಮೊದಲ ಲಿಸ್ಟ್ ನಲ್ಲಿ 72 ಜನರ ಹೆಸರು ಪ್ರಕಟ ಮಾಡಲಾಗಿತ್ತು. ಈ ಪಟ್ಟಿಯಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳನ್ನು ಕೈಬಿಟಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಭಿನ್ನಮತ ಬುಗಿಲೆದ್ದಿದೆ.

  • ಬಿಜೆಪಿ ಚಿಕ್ಕಪೇಟೆ ಟಿಕೆಟ್ 2 ಕೋಟಿ ರೂ.ಗೆ ಸೇಲಂತೆ – ವೈರಲ್ ಆಯ್ತು ಮೆಸೇಜ್

    ಬಿಜೆಪಿ ಚಿಕ್ಕಪೇಟೆ ಟಿಕೆಟ್ 2 ಕೋಟಿ ರೂ.ಗೆ ಸೇಲಂತೆ – ವೈರಲ್ ಆಯ್ತು ಮೆಸೇಜ್

    ಬೆಂಗಳೂರು: ಭಾನುವಾರ ನವದೆಹಲಿಯಲ್ಲಿ ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 72 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಭಿನ್ನಮತ ಸ್ಫೋಟಗೊಂಡಿದೆ.

    ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಕಾಂಕ್ಷಿಯಾಗಿದ್ದ ಎನ್.ಆರ್.ರಮೇಶ್ ಬದಲಾಗಿ ಉದಯ್ ಗರುಡಾಚಾರ್ ಟಿಕೆಟ್ ಸಿಕ್ಕಿದೆ. ತ್ತ ಎನ್.ಆರ್.ರಮೇಶ್ ಅವರಿಗೆ ಟಿಕೆಟ್ ಲಭಿಸದ ಹಿನ್ನೆಲೆಯಲ್ಲಿ ಕಾರ್ಯಕರ್ತರೆಲ್ಲಾ ಮಾಜಿ ಡಿಸಿಎಂ ಆರ್.ಅಶೋಕ್ ಮನೆ ಮುಂದೆ ಧರಣಿ ನಡೆದಿದ್ದಾರೆ. ಟಿಕೆಟ್‍ಗಾಗಿ ಭಿನ್ನಮತ ಸ್ಫೋಟಗೊಳ್ಳುತ್ತಿದ್ದಂತೆ ಫೇಸ್‍ಬುಕ್ ಮತ್ತು ವಾಟ್ಸಪ್ ಗಳಲ್ಲಿ ಕೆಲವು ಮೆಸೇಜ್ ಗಳು ಹರಿದಾಡಲು ಆರಂಭವಾಗಿವೆ. ಇದನ್ನೂ ಓದಿ: ಎನ್‍ಆರ್ ರಮೇಶ್‍ಗೆ ಟಿಕೆಟ್ ಸಿಗದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

    ವೈರಲ್ ಮೇಸೆಜ್‍ನಲ್ಲಿ ಏನಿದೆ?
    ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಆರ್.ವಿ.ದೇವರಾಜ್ ಅವರೇ ತಮ್ಮ ಎದುರಾಳಿಯನ್ನು ನಿರ್ಧರಿಸಿಕೊಂಡಿದ್ದು, 2 ಕೋಟಿ ರೂ. ಹಣವನ್ನ ನೀಡಿ ಗೆಲವನ್ನು ಸುಲಭ ಮಾಡಿಕೊಂಡಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿವೆ. ಟಿಕೆಟ್ ಗಾಗಿ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ 2 ಕೋಟಿ ರೂ. ನೀಡಲಾಗಿದೆ ಎಂಬ ಮೆಸೇಜ್‍ಗಳು ಹರಿದಾಡುತ್ತಿವೆ. ಇದನ್ನೂ ಓದಿ: ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

    ಬಿಜೆಪಿ ವಿರುದ್ಧ ಮೆಸೇಜ್‍ಗಳು ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 2 ಕೋಟಿಗೆ ಟಿಕೆಟ್ ಸೇಲ್ ಆಗಿದೆ ಎಂಬ ಆರೋಪಗಳೆಲ್ಲಾ ಸುಳ್ಳು. ಎನ್.ಆರ್.ರಮೇಶ್ ಹಾಗೆಲ್ಲಾ ಮಾತನಾಡಲ್ಲ. ಅವರನ್ನು ಕರೆಸಿಕೊಂಡು ನಾನು ಮಾತನಾಡಿ ತಪ್ಪು ಗ್ರಹಿಕೆಯಾಗಿದ್ರೆ ಅದನ್ನ ಸರಿಪಡಿಸುತ್ತೇನೆ. ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಅಸಮಾಧಾನವಿಲ್ಲ ಅಂತಾ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

  • ಎನ್‍ಆರ್ ರಮೇಶ್‍ಗೆ ಟಿಕೆಟ್ ಸಿಗದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

    ಎನ್‍ಆರ್ ರಮೇಶ್‍ಗೆ ಟಿಕೆಟ್ ಸಿಗದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

    ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್ ಆರ್ ರಮೇಶ್ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ರಾಜೇಂದ್ರ ನಾಯ್ಡು ಎಂಬವರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯಗೆ ಯತ್ನಿಸಿದ ರಮೇಶ್ ಅಭಿಮಾನಿಯಾಗಿದ್ದು, ಇದೀಗ ಸಚಿವ ಆರ್ ಅಶೋಕ್ ವಿರುದ್ಧ ಸ್ಪರ್ಧಿಸಿ ಅಂತ ಅಭಿಮಾನಿಗಳ ಒತ್ತಡ ಹಾಕುತ್ತಿದ್ದಾರೆ. ಇದನ್ನೂ ಓದಿ: ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

    ಅಶೋಕ್ ರಿಂದಾಗಿಯೇ ಅನ್ಯಾಯವಾಗಿದೆ ಅಂತ ಆಕ್ರೋಶ ವ್ಯಕ್ತವಾಗುತ್ತಿದ್ದು, ಹಿರಿಯ ಅಭಿಮಾನಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ಒಟ್ಟಿನಲ್ಲಿ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಟಿಕೆಟ್ ವಿಚಾರದಲ್ಲಿ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಯಡಿಯೂರು ವಾರ್ಡ್, ಎನ್ ಆರ್ ಕಾಲೊನಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಗುರುವಾರ ರಾತ್ರಿ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ದೆಹಲಿಯಲ್ಲಿ ಬಿಡುಗಡೆ ಮಾಡಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ದೀರ್ಘ ಚರ್ಚೆ ನಡೆದಿದ್ದು, ಮೊದಲ ಲಿಸ್ಟ್ ನಲ್ಲಿ 72 ಜನರ ಹೆಸರು ಪ್ರಕಟವಾಗಿದೆ.ಈ ಪಟ್ಟಿಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಉದಯ್ ಗರುಡಾಚರ್ ಟಿಕೆಟ್ ಸಿಕ್ಕಿದೆ.ರಾಜ್ಯದಲ್ಲಿ ನಡೆಸಲಾಗಿರುವ ಸುಮಾರು 16 ರೀತಿಯ ಸಮೀಕ್ಷೆಗಳನ್ನ ಆಧರಿಸಿ ವರಿಷ್ಠರು ಟಿಕೆಟ್ ಫೈನಲ್ ಮಾಡಿದ್ದಾರೆ ಎನ್ನಲಾಗಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಇತ್ತ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ? 

    2013ರ ಫಲಿತಾಂಶ ಏನಿತ್ತು?
    2013ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ. ದೇವರಾಜ್ 13,059 ಮತಗಳ ಅಂತರದಿಂದ ಜಯಗಳಿಸಿದ್ದರು. ದೇವರಾಜ್ ಪರವಾಗಿ 44,174 ಮತಗಳು ಬಿದ್ದಿದ್ದರೆ, ಉದಯ್ ಗರುಡಾಚರ್ ಅವರಿಗೆ 31,655 ಮತಗಳು ಬಿದ್ದಿತ್ತು.

  • ಸಿದ್ದರಾಮಯ್ಯ ಗೇಮ್‍ಗೆ, ರೀ ಗೇಮ್ ಆಡಲು ಅಮಿತ್ ಶಾ ಚಿಂತನೆ!

    ಸಿದ್ದರಾಮಯ್ಯ ಗೇಮ್‍ಗೆ, ರೀ ಗೇಮ್ ಆಡಲು ಅಮಿತ್ ಶಾ ಚಿಂತನೆ!

    ಬೆಂಗಳೂರು: ಬಿಜೆಪಿ ಭಾನುವಾರ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದ್ರೆ ಈ ಬಾರಿ ಚುನಾವಣೆಯಲ್ಲಿ ತೀವ್ರ ಕುತೂಹಲ ಹುಟ್ಟಿಸಿರುವ ಮೈಸೂರಿನ ವರುಣಾ ಮತ್ತು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಮಾತ್ರ ಘೋಷಣೆ ಮಾಡಿಲ್ಲ.  ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಕಾಂಗ್ರೆಸ್‍ನಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿಎಂ ಸಿದರಾಮಯ್ಯ ಮತ್ತು ವರುಣಾದಿಂದ ಪುತ್ರ ಯತೀಂದ್ರ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ವರುಣಾ ಕ್ಷೇತ್ರದ ಟಿಕೆಟ್ ಫೈನಲ್ ಮಾಡೋದು ಬೇಡ. ಸಿಎಂ ಸಿದ್ದರಾಮಯ್ಯ ಅವರನ್ನ ವರುಣಾ ಅಥವಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಕಟ್ಟಿ ಹಾಕಬೇಕು. ನಾವು ಸಿದ್ದರಾಮಯ್ಯ ಗೇಮ್ ಗೆ ನಾವು ರೀ ಗೇಮ್ ಆಡೋಣ ಅಂತಾ ಅಮಿತ್ ಶಾ ಹೇಳಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ. ಇದನ್ನೂ ಓದಿ: ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

    ಭಾನುವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಮಿತ್ ಶಾ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಪಟ್ಟಿ ಪ್ರಕಟ ಬಳಿಕ ಸಿದ್ದರಾಮಯ್ಯ ಮತ್ತು ಯತೀಂದ್ರ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸ್ತಾರೆ ಎಂಬುದು ಖಾತ್ರಿಯಾದ ಮೇಲೆ ಅಲ್ಲಿಯ ಅಭ್ಯರ್ಥಿಯ ಹೆಸರು ಘೋಷಣೆ ಮಾಡಲು ಅಮಿತ್ ಶಾ ಚಿಂತಿಸಿದ್ದಾರೆ ಎನ್ನಲಾಗಿದೆ.