Tag: Karnataka Election 2018

  • ಆಪ್ತರಿಗೆ ಟಿಕೆಟ್ ಕೊಡಿಸಲು ಸಿದ್ದು, ಖರ್ಗೆ ಜಟಾಪಟಿ – ದೆಹಲಿಯಲ್ಲಿಂದು ಮತ್ತೆ ಸಭೆ

    ಆಪ್ತರಿಗೆ ಟಿಕೆಟ್ ಕೊಡಿಸಲು ಸಿದ್ದು, ಖರ್ಗೆ ಜಟಾಪಟಿ – ದೆಹಲಿಯಲ್ಲಿಂದು ಮತ್ತೆ ಸಭೆ

    ನವದೆಹಲಿ: ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತು ಅದ್ಯಾಕೋ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಸಭೆಗಳ ಮೇಲೆ ಸಭೆಗಳು ನಡೆಸಿದ್ರೂ ರಾಜ್ಯ ನಾಯಕರು ಒಮ್ಮತದ ನಿರ್ಧಾರಕ್ಕೆ ಬಂದಿಲ್ಲ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಶುಕ್ರವಾರ ನಡೆದ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿಯಲ್ಲಿ ತಮಗೆ ಎರಡು ಕ್ಷೇತ್ರ, ಪುತ್ರ ಯತೀಂದ್ರ, ಆಪ್ತ ಮಹದೇವಪ್ಪ ಪುತ್ರ ಹೀಗೆ 7 ಜನ ಬಂಡಾಯ ಶಾಸಕರು, ವಲಸಿಗರಿಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಪಟ್ಟು ಹಿಡಿದ್ರೆ, ಸಿಎಂ ಡಿಮ್ಯಾಂಡ್‍ಗೆ ಮಲ್ಲಿಕಾರ್ಜುನ್ ಖರ್ಗೆ, ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮುಂದೆಯೇ ರಾಜ್ಯ ಕಾಂಗ್ರೆಸ್ ನಾಯಕರ ಭಿನ್ನಮತ ಸ್ಫೋಟಗೊಂಡಿತ್ತು. ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ನಡುವೆ ಜಟಾಪಟಿ ಏರ್ಪಟ್ಟಿದ್ದು ಯಾರು ಕೂಡಾ ಪಟ್ಟು ಸಡಿಲಿಸುವಂತೆ ಕಾಣ್ತಿಲ್ಲ ಎನ್ನಲಾಗಿತ್ತು.

    ಸಿದ್ದು-ಖರ್ಗೆ ಜಗಳ ಕಂಡು ಹೈಕಮಾಂಡ್ ದಂಗಾಗಿದ್ದು, ಮತ್ತೊಮ್ಮೆ ಕೂತು ಚರ್ಚಿಸಲು ಸೂಚಿಸಿದೆ. ಹೀಗಾಗಿ ಇಂದು ಬೆಳಗ್ಗೆ ಮತ್ತೊಂದು ಸುತ್ತಿನ ಪೂರ್ವಭಾವಿ ಸಭೆ ನಡೆಯಲಿದೆ. ಈ ಎಲ್ಲಾ ಗೊಂದಲಗಳ ನಡುವೆ ಒಂದೆ ಹಂತದಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಲು ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡಿಕೊಂಡಿದೆ. ಈಗಾಗಲೇ 137 ಅಭ್ಯರ್ಥಿಗಳ ಹೆಸರು ಅಂತಿಮವಾಗಿದ್ದು, ಬಾಕಿ 86 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮವಾಗಬೇಕಿದೆ. ಈ ಎಲ್ಲಾ ಭಿನ್ನಮತ ಶಮನವಾದ್ರೆ ಇಂದೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು.

  • ಬೆಂಡೆಕಾಯಿಗೆ ಮತ ಹಾಕಿದ್ರೆ ಭ್ರಷ್ಟರ ಬೆಂಡೆತ್ತುವೆ: ಅನುಪಮಾ ಶೆಣೈ

    ಬೆಂಡೆಕಾಯಿಗೆ ಮತ ಹಾಕಿದ್ರೆ ಭ್ರಷ್ಟರ ಬೆಂಡೆತ್ತುವೆ: ಅನುಪಮಾ ಶೆಣೈ

    ಉಡುಪಿ: ಡಿವೈಎಸ್ ಪಿ ಆಗಿದ್ದಾಗ ನಾನು ಅಪರಾಧಿಗಳ ಬೆಂಡೆತ್ತುತ್ತಿದ್ದೆ. ಈಗ ನಾನು ಎಲ್ಲಾ ರಾಜಕೀಯ ಪಕ್ಷಗಳನ್ನು, ಭ್ರಷ್ಟ ರಾಜಕಾರಣಿಗಳನ್ನು ಬೆಂಡೆತ್ತಬೇಕು. ಈ ಕಾರಣಕ್ಕಾಗಿ ಬೆಂಡೆಕಾಯಿ ಚಿಹ್ನೆ ಆಯ್ಕೆ ಮಾಡಲಾಗಿದೆ. ಬೆಂಡೆಕಾಯಿಗೆ ಮತನೀಡಿ ಎಂದು ಅನುಪಮಾ ಶೆಣೈ ಮನವಿ ಮಾಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನನಗೆ ದ್ವೇಷದ ರಾಜಕಾರಣ ಮಾಡುವ ಉದ್ದೇಶವಿಲ್ಲ. ಪರಮೇಶ್ವರ್ ನಾಯಕ್ ನಿಮಿತ್ತ ಮಾತ್ರ. ಕಾಪು ನನಗೆ ಸೇಫರ್ ಝೋನ್. ದುಡ್ಡಿದ್ದು ರಾಜಕೀಯಕ್ಕೆ ಬಂದಿಲ್ಲ. ಮನೆಯ ಮಗಳನ್ನು ಕಾಪುವಿನ ಜನ ಕೈ ಬಿಡಲ್ಲ ಅಂತ ಅಂದುಕೊಂಡಿದ್ದೇನೆ ಎಂದು ಶೆಣೈ ಹೇಳಿದರು. ಇದನ್ನೂ ಓದಿ; ಬಸವ ನಾಡಿನಲ್ಲಿ ಪಕ್ಷದ ಲಾಂಛನ ಬಿಡುಗಡೆ ಮಾಡಿದ ಅನುಪಮಾ ಶೆಣೈ

    ನಾನು ರಾಜಕೀಯಕ್ಕೆ ಬರಲು ಕಾಂಗ್ರೆಸ್ ಸರ್ಕಾರ ಪ್ರೇರಣೆ. ಹೆಸರು ಸೆಲೆಕ್ಷನ್ ಕೂಡಾ ಬಹಳ ಚರ್ಚೆ ಮಾಡಿ ಫಿಕ್ಸ್ ಮಾಡಲಾಯ್ತು. ಭಾರತೀಯವೂ ಇದೆ. ಕಾಂಗ್ರೆಸ್ಸೂ ಇದೆ. ಜನ ಎರಡನ್ನೂ ನಮ್ಮ ಪಕ್ಷದಲ್ಲಿ ಕಾಣುತ್ತಾರೆ ಎಂದರು. ಎರಡೂ ಪಕ್ಷದ ಸಜ್ಜನರ ಬೆಂಬಲ ನಮಗೆ ಬೇಕು ಎಂದು ಹೇಳಿದರು.

    ತಲಾಖ್ ವಿರುದ್ಧ ಪ್ರಧಾನಿ ಮೋದಿ ಮಾತನಾಡುತ್ತಾರೆ. ಹಾಗಾದ್ರೆ ಹೆಂಡತಿಯನ್ನು ಬಿಟ್ಟ ಮೋದಿಗೂ ಶಿಕ್ಷೆಯಾಗಬೇಕು. ಫೇಸ್ ಬುಕ್ ನಲ್ಲಿ ನಾನು ಪ್ರಧಾನಿಯನ್ನು ಟೀಕಿಸುವುದರ ಬಗ್ಗೆ ಬಹಳ ಚರ್ಚೆಗಳಾಗುತ್ತದೆ ಎಂದು ಹೇಳಿದರು. ದೇಶಕ್ಕೆ ಒಳ್ಳೆದಾಗುತ್ತದೆ ಎಂದು ಹೇಳುವ ಪ್ರಧಾನಿ ಮೋದಿ, ದೇಶದಲ್ಲಿ ಎಲ್ಲರಿಗೂ ಸಮಾನ ಕಾನೂನು ಜಾರಿ ಮಾಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ; ಪ್ರಧಾನಿ ಪತ್ನಿ ತೊರೆದ ವಿರುದ್ಧ ಅನುಪಮಾ ಶೆಣೈ ಸ್ಟೇಟಸ್- ಮೋದಿ ಅಭಿಮಾನಿಗಳು ಗರಂ

    ಜಿಲ್ಲೆ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಸ್ವ-ಕ್ಷೇತ್ರಗಳಲ್ಲೇ ಎಲ್ಲಾ ಅಭ್ಯರ್ಥಿಗಳು ಕಣಕ್ಕಿಳಿದರೆ ಉತ್ತಮ ಎಂಬ ಭಾವನೆಯಿದೆ. ನಾನು ಬಳ್ಳಾರಿಯಿಂದ ಸ್ಪರ್ಧಿಸಲ್ಲ ಅಂತ ಮಾಜಿ ಡಿವೈ ಎಸ್ ಪಿ ಅನುಪಮಾ ಹೆಗ್ಡೆ ಘೋಷಣೆ ಮಾಡಿದ್ದಾರೆ.

  • ಮೋದಿ ಒಕೆ, ಯಡಿಯೂರಪ್ಪ ಟೀಮ್ ಯಾಕೆ?- ಅಸಮಾಧಾನ ಹೊರಹಾಕಿದ ಕಾರಜೋಳ ಪುತ್ರ

    ಮೋದಿ ಒಕೆ, ಯಡಿಯೂರಪ್ಪ ಟೀಮ್ ಯಾಕೆ?- ಅಸಮಾಧಾನ ಹೊರಹಾಕಿದ ಕಾರಜೋಳ ಪುತ್ರ

    ವಿಜಯಪುರ: ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆಯೇ ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಮಗ ಉಮೇಶ್ ಕಾರಜೋಳ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಸಾಮಾಜಿಕ ಜಾಲತಾಣ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿರುವ ಅವರು, ಮೋದಿ ಒಕೆ, ಯಡಿಯೂರಪ್ಪ ಟೀಮ್ ಯಾಕೆ ಅಂತಾ ಪ್ರಶ್ನೆ ಹಾಕಿದ್ದಾರೆ. ಈ ಮೂಲಕ ಯಡಿಯೂರಪ್ಪ ತಮಗೆ ಬೇಕಾದವರಿಗೆ ಮಣೆ ಹಾಕಿದ್ದಾರೆ ಎಂದು ಉಮೇಶ್ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಉಮೇಶ್ ಕಾರಜೋಳ ವಿಜಯಪುರ ಜಿಲ್ಲೆಯ ನಾಗಠಾಣ ಮೀಸಲು ಮತ ಕ್ಷೇತ್ರದ ಆಕಾಂಕ್ಷಿ ಆಗಿದ್ದು, ತಮಗೆ ಟಿಕೆಟ್ ಕೈ ತಪ್ಪುವ ಭೀತಿಯಲ್ಲಿ ಈ ರೀತಿ ಹಾಕಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.

  • ಪ್ರತ್ಯೇಕ ಲಿಂಗಾಯತ ವಿವಾದದಲ್ಲಿ ಸಿಲುಕಿರುವ ಸಿದ್ದು ಸರ್ಕಾರಕ್ಕೆ ಮತ್ತೊಂದು ತಲೆನೋವು!

    ಪ್ರತ್ಯೇಕ ಲಿಂಗಾಯತ ವಿವಾದದಲ್ಲಿ ಸಿಲುಕಿರುವ ಸಿದ್ದು ಸರ್ಕಾರಕ್ಕೆ ಮತ್ತೊಂದು ತಲೆನೋವು!

    ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಷ್ಟ್ರೀಯ ಪಕ್ಷಗಳು ಎಲ್ಲ ಕೋನಗಳಿಂದಲು ಲೆಕ್ಕ ಹಾಕಿ, ವಿಮರ್ಶಿಸಿ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡ್ತಿವೆ. ಈ ನಡುವೆ ಬಿಜೆಪಿ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಹಜವಾಗಿ ಟಿಕೆಟ್ ವಂಚಿತರು ಪಕ್ಷದ ವಿರುದ್ಧ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    ಲಿಂಗಾಯತ ಪ್ರತ್ಯೇಕ ಧರ್ಮದ ಕ್ರೆಡಿಟ್ ಪಡೆಯಲು ಮುಂದಾದ ಸಿಎಂ ಸಿದ್ದರಾಮಯ್ಯಗೆ ಬ್ರಾಹ್ಮಣರು ಸವಾಲು ಹಾಕ್ತಾರಾ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಬೆಂಗಳೂರಿನ ರಾಜಾಜಿನಗರದಲ್ಲಿ ಲಿಂಗಾಯತರಿಗೆ ಹಾಗೂ ಬಸವನಗುಡಿಯಲ್ಲಿ ಬ್ರಾಹ್ಮಣ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಸಮುದಾಯ ಮುಖಂಡರಿಂದ ಸಿಎಂ ಹಾಗೂ ಪರಮೇಶ್ವರ್ ಮೇಲೆ ಹೆಚ್ಚಾಗಿದೆ ಎನ್ನಲಾಗಿದೆ. ಆದರೆ ಈ ಬೇಡಿಕೆಗೆ ಸಿಎಂ ಹಾಗೂ ಪರಮೇಶ್ವರ್ ರಿಂದ ಸಮರ್ಪಕ ಪ್ರತಿಕ್ರಿಯೆ ಇದೂವರೆಗೆ ಸಿಕ್ಕಿಲ್ಲವಂತೆ.

    ಈ ಬಾರಿ ಕಾಂಗ್ರೆಸ್‍ಗೆ ಗೆಲವು ಮುಖ್ಯವಾಗಿದ್ದರಿಂದ ಬೆಂಗಳೂರಿನಂತಹ ನಗರದ ಕ್ಷೇತ್ರಗಳಲ್ಲಿ ಜಾತಿ ಲೆಕ್ಕಾಚಾರ ಸಾಧ್ಯವಿಲ್ಲ. ರಾಜಾಜಿನಗರದ ಬದಲು ಮಲ್ಲೇಶ್ವರಂ ಅಥವಾ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಲಿಂಗಾಯತ ಅಭ್ಯರ್ಥಿಗೆ ಅವಕಾಶ ನೀಡುವ ಕುರಿತು ಪರಿಶೀಲಿಸುವುದಾಗಿ ಭರವಸೆಯನ್ನು ಸಿಎಂ ನೀಡಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಆದರೆ ಮಹಾಲಕ್ಷ್ಮಿ ಲೇಔಟ್ ಹಾಗೂ ಮಲ್ಲೇಶ್ವರಂನಲ್ಲಿ ಸಮುದಾಯದ ಮತ ಇಲ್ಲದ ಕಾರಣ ಗೆಲುವು ಕಷ್ಟ ಎಂದು ಲಿಂಗಾಯತ ಮುಖಂಡರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಸವನಗುಡಿಯಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋತ ಪ್ರೊ.ಬಿ.ಕೆ.ಚಂದ್ರಶೇಖರ್ ಬ್ರಾಹ್ಮಣರ ಕೋಟಾದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಯತ್ನಿಸಿದ್ದಾರೆ. ಆದ್ರೆ ಚಂದ್ರಶೇಖರ್ ಅವರಿರೆ ಸಿಎಂ ಮತ್ತು ಪರಮೇಶ್ವರ್ ಟಿಕೆಟ್ ನೀಡಲು ಆಸಕ್ತಿ ತೋರಿಸ್ತಿಲ್ಲ ಅಂತಾ ಹೇಳಲಾಗ್ತಿದೆ. ಹೀಗಾಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‍ಗಾಗಿ ಚಂದ್ರಶೇಖರ್ ಹಾಗೂ ಬೋರೇಗೌಡರ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ.

    ಇತ್ತ ರಾಜಾಜಿನಗರದಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನು ಪರಿಗಣಿಸಬೇಕೆಂದು ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ಜಿಲ್ಲಾ ಘಟಕ ಸಿಎಂ ಹಾಗೂ ಪರಮೇಶ್ವರ್ ಗೆ ಪತ್ರ ಬರೆದು ಮನವಿ ಮಾಡಿಕೊಂಡಿದೆ ಎನ್ನಲಾಗಿದೆ.

  • ಉತ್ತರ ಕರ್ನಾಟಕದಲ್ಲಿ ಅಮಿತ್ ಶಾ- ಗದಗ, ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ

    ಉತ್ತರ ಕರ್ನಾಟಕದಲ್ಲಿ ಅಮಿತ್ ಶಾ- ಗದಗ, ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ

    ಧಾರವಾಡ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ರಾತ್ರಿ 1.45ರ ಸುಮಾರಿಗೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದಿಳಿದಿದ್ದಾರೆ.

    ಇಂದು ಮತ್ತು ನಾಳೆ ಎರಡು ದಿನ ರಾಜ್ಯದಲ್ಲೇ ಉಳಿಯಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಮಾಡಲಿದ್ದಾರೆ. ಇವತ್ತು ಹುಬ್ಬಳ್ಳಿ-ಧಾರವಾಡ, ಗದಗ, ನಾಳೆ ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ ನಡೆಸಲಿದ್ದಾರೆ. ಪ್ರಚಾರ ಕಾರ್ಯಕ್ರಮಗಳ ಮಧ್ಯೆ ಮಠ ಹಾಗೂ ದೇವಾಲಯಗಳಿಗೂ ಭೇಟಿ ನೀಡಲಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಬಿಜೆಪಿಯವರು ನಡೆಸುತ್ತಿರುವ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲೂ ಅಮಿತ್ ಶಾ ಭಾಗಿಯಾಗಲಿದ್ದಾರೆ.

    ಅಮಿತ್ ಶಾ ಇವತ್ತು ಎಲ್ಲೆಲ್ಲಿ ಹೋಗ್ತಾರೆ?
    * ಬೆಳಗ್ಗೆ 9.30ಕ್ಕೆ ಹುಬ್ಬಳ್ಳಿಯ ಸಿದ್ಧಾರೂಢ ಮಠ
    * ಬೆಳಗ್ಗೆ 10.30ಕ್ಕೆ ಧಾರವಾಡದ ಸಾಧನಕೇರಿಯ ದ.ರಾ. ಬೇಂದ್ರೆ ಸ್ಮಾರಕಕ್ಕೆ ಮಾಲಾರ್ಪಣೆ
    * ಧಾರವಾಡ ಮುರುಘಾ ಮಠಕ್ಕೆ ಭೇಟಿ, ಸಮಾಲೋಚನೆ
    * ಧಾರವಾಡದ ಡಿಸಿ ಕಚೇರಿ ಎದುರು 11 ಗಂಟೆಗೆ 1 ತಾಸು ಉಪವಾಸ
    * ಮಧ್ಯಾಹ್ನ 12.30ಕ್ಕೆ ಗದಗನ ಅಬ್ಬಿಗೇರಿಯಲ್ಲಿ ಮುಷ್ಟಿ ಧಾನ್ಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿ
    * ಮಧ್ಯಾಹ್ನ 3 ಗಂಟೆಗೆ ಗದಗನ ಪುಟ್ಟರಾಜ ಗವಾಯಿಗಳ ಆಶ್ರಮಕ್ಕೆ ಭೇಟಿ
    * ಸಂಜೆ 4 ಗಂಟೆಗೆ ಗದಗನ ವೀರನಾರಾಯಣನ ದೇವಸ್ಥಾನದಲ್ಲಿ ಪೂಜೆ
    * ಸಂಜೆಗೆ ಮತ್ತೆ ಧಾರವಾಡಕ್ಕೆ ವಾಪಸ್, ಮೂರು ಸಾವಿರ ಮಠಕ್ಕೆ ಭೇಟಿ
    * ಧಾರವಾಡ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ
    * ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ರೈತರೊಂದಿಗೆ ಸಭೆ
    * ರಾತ್ರಿ ಹುಬ್ಬಳ್ಳಿಯಲ್ಲಿ ಉದ್ಯಮಿಗಳ ಜೊತೆ ಸಂವಾದ
    * ನಾಳೆ ಬಾಗಲಕೋಟೆ, ಬೆಳಗಾವಿಯಲ್ಲಿ ಸಮಾವೇಶ ಮುಗಿಸಿ ವಾಪಸ್

  • ಚುನಾವಣಾ ಆಯೋಗದ ಹೊಸ ರೂಲ್ಸ್ ಗೆ ಜನಸಾಮಾನ್ಯರು, ಬ್ಯಾಂಕ್‍ನವರು ಸುಸ್ತು!

    ಚುನಾವಣಾ ಆಯೋಗದ ಹೊಸ ರೂಲ್ಸ್ ಗೆ ಜನಸಾಮಾನ್ಯರು, ಬ್ಯಾಂಕ್‍ನವರು ಸುಸ್ತು!

    -ಕಟ್ಟೆಚ್ಚರದ ನಡುವೆಯೂ ಚುನಾವಣಾ ಅಕ್ರಮ

    ಬೆಂಗಳೂರು: ರಾಜಕೀಯ ಕುಳಗಳ ಅಕ್ರಮ ಹಣದ ಹರಿವಿಗೆ ಬ್ರೇಕ್ ಹಾಕಲು ಚುನಾವಣಾ ಆಯೋಗ ಮತ್ತೆ ಚಾಣಕ್ಯ ತಂತ್ರ ಅನುಸರಿಸಿದೆ. ಇಲ್ಲಿಯವರೆಗೆ ಹತ್ತು ಲಕ್ಷ ದುಡ್ಡು ಡ್ರಾ ಮಾಡಿದವರ ವಿವರವನ್ನು ಬ್ಯಾಂಕ್ ಅಧಿಕಾರಿಗಳಿಂದ ಕಲೆ ಹಾಕುತ್ತಿದ್ದ ಆಯೋಗ ಈಗ ಈ ಪ್ರಮಾಣವನ್ನು ಎರಡು ಲಕ್ಷದಿಂದ ಶುರು ಮಾಡಿದೆ.

    ಇನ್ಮುಂದೆ ಎರಡು ಲಕ್ಷಕ್ಕಿಂತ ಅಧಿಕ ದುಡ್ಡು ಪಡೆದವರ ಎಲ್ಲಾ ವಿವರವೂ ಐಟಿ ಹಾಗೂ ಎಲೆಕ್ಷನ್ ಕಮೀನಷನ್‍ಗೆ ಸಲ್ಲಿಕೆಯಾಗಲಿದೆ. ಈಗಾಗಲೇ ಬ್ಯಾಂಕ್ ಅಧಿಕಾರಿಗಳಿಗೆ ಸುತ್ತೋಲೆ ನೀಡಿದ್ದು ಇಂದಿನಿಂದ ಮಾಹಿತಿ ರವಾನೆಯಾಗಲಿದೆ. ಚುನಾವಣಾ ಆಯೋಗ ಅಕ್ರಮ ದುಡ್ಡು ಸಾಗಾಟ ತಡೆಗೆ ಎಷ್ಟೇ ಪ್ರಯತ್ನ ಪಟ್ರು, ಚೆಕ್‍ಪೋಸ್ಟ್ ನಲ್ಲಿ ಮಾತ್ರ ನಿತ್ಯ ಕೋಟಿ ಕೋಟಿ ದುಡ್ಡು ಪತ್ತೆಯಾಗುತ್ತಿರೋದ್ರಿಂದ ಈ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

    ಈ ನಡುವೆ ಜನಸಾಮಾನ್ಯರಿಗೆ ಬ್ಯಾಂಕ್‍ನಲ್ಲಿ ದುಡ್ಡು ಸಿಗದೇ ಇರೋದ್ರ್ರಿಂದ ಮದುವೆ, ಫಂಕ್ಷನ್, ಗೃಹಪ್ರವೇಶ ಸೇರಿದಂತೆ ಎಲ್ಲಾ ಶುಭ ಸಮಾರಂಭಗಳನ್ನು ಮುಂದೂಡುವ ಪರಿಸ್ಥಿತಿ ಬಂದಿದೆ. ಇನ್ನು ಬ್ಯಾಂಕ್‍ನವರು ಕೂಡ ಆರ್‍ಬಿಐ ದುಡ್ಡು ವಿತರಣೆ ಮಾಡುತ್ತಿಲ್ಲ. ಆದ್ದರಿಂದ ಜನರಿಗೆ ದುಡ್ಡು ನೀಡೋದಕ್ಕೆ ಆಗ್ತಿಲ್ಲ. ಒಂದು ಲಕ್ಷ ಕೇಳಿದ್ರೇ ಹಂತಹಂತವಾಗಿ ದುಡ್ಡು ವಿತರಿಸುತ್ತೇವೆ ಅಂತ್ತಿದ್ದಾರಂತೆ.

  • ಶನಿದೆಸೆಯಿಂದ ಸಿಎಂ ಆಗಿದ್ದ ಸಿದ್ದರಾಮಯ್ಯ, ಅದ್ರಿಂದಲೇ ಸೋಲ್ತಾರೆ- ಶರವಣ ಭವಿಷ್ಯ

    ಶನಿದೆಸೆಯಿಂದ ಸಿಎಂ ಆಗಿದ್ದ ಸಿದ್ದರಾಮಯ್ಯ, ಅದ್ರಿಂದಲೇ ಸೋಲ್ತಾರೆ- ಶರವಣ ಭವಿಷ್ಯ

    ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಡೇ ಸಾಥ್ ಶನಿ ಕಾಟ. ಹೀಗಾಗಿ ಶನಿ ದೆಸೆಯಿಂದ್ಲೇ ಸಿಎಂ ಆಗಿದ್ದ ಸಿದ್ದರಾಮಯ್ಯ ಈಗ ಶನಿ ಕಾಟದಿಂದ್ಲೇ ಸೋಲ್ತಾರೆ ಅಂತ ಜೆಡಿಎಸ್ ಎಂಎಲ್‍ಸಿ ಶರವಣ ಭವಿಷ್ಯ ನುಡಿದಿದ್ದಾರೆ.

    ಮಧುಗಿರಿಯಲ್ಲಿ ಮಾತಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಶನಿ ದೆಸೆ ಶುರುವಾಗಿತ್ತು. ಇದೀಗ ಅವರಿಗೆ ಏಳೂವರೆ ಶನಿಕಾಟ ನಡೀತಿದೆ. ಹೀಗಾಗಿ ಶನಿಯೇ ಸಿಎಂ ಬಾಯಲ್ಲಿ ದುರಹಂಕಾರದ ಮಾತುಗಳನ್ನಾಡಿಸ್ತಿದ್ದಾನೆ. ಸಿಎಂಗೆ ಜನರೇ ಸೋಲಿನ ಭಾಗ್ಯ ಕೊಡ್ತಾರೆ. ಬಾದಾಮಿಗೆ ಹೋಗಿ ಸ್ಪರ್ಧಿಸಿದ್ರೂ ಜನರೇ ತಕ್ಕಪಾಠ ಕಲಿಸ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ, ಎಚ್‍ಡಿಕೆಯನ್ನು ಸೋಲಿಸಲು ನಾನು ಒಂದು ದಿನ ಪ್ರಚಾರ ಮಾಡಿದ್ರೆ ಸಾಕು: ಸಿಎಂ

    ನಮ್ಮ ವರಿಷ್ಠರನ್ನು ಎಳೆಯುತ್ತಿರುವಂತದ್ದು ಹಾಗೂ ಕುಮಾರಣ್ಣನ ಬಗ್ಗೆ ಮಾತನಾಡಿದಾಗ ನಿಮ್ಮಪ್ಪನಾಣೆ, ನಿಮ್ಮಪ್ಪನಾಣೆ ಅಂತ ಹೇಳುವುದನ್ನು ನಿಲ್ಲಿಸಬೇಕು. ನಿಮಗೆ ಏನಾದ್ರೂ ಸಂಸ್ಕೃತಿ ಇದ್ದರೆ, ನಿಮ್ಮ ರಾಜಕೀಯ ಗುರು ದೇವೇಗೌಡರು. ನೀವು ಯಾರ ಗರಡಿಯಲ್ಲಿ ಬೆಳೆದಿದ್ದೀರಾ ಸ್ವಾಮಿ? ಎಲ್ಲಿಂದ ಬಂದ್ರಿ? ಇಂತಹ ದುರಹಂಕರಾದ ಮಾತುಗಳನ್ನು ನೀವು ಬಿಡಬೇಕು ಅಂತ ಸಿಎಂ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಪಿಎಂ ಆಗಿರೋವಾಗ ಅವರು ಉಲ್ಲಂಘಿಸಿರಬೇಕು : ಎಚ್‍ಡಿಡಿಗೆ ಸಿಎಂ ತಿರುಗೇಟು

    ಗುರುಗಳು ದೇವರಿಗೆ ಸಮಾನ. ನಿಮ್ಮ ರಾಜಕೀಯ ಗುರುಗಳವರು. ನಿಮ್ಮ ಸಂಸ್ಕೃತಿಯೇನು? ಇಂದು ನೀವು ಮಾತನಾಡುತ್ತಿರುವ ಸಂಸ್ಕೃತಿಯೇನು? ಎಂಬುದನ್ನು ಹೇಳಬೇಕಾಗುತ್ತದೆ ಅಂತ ಗರಂ ಆದ್ರು.

  • ಚುನಾವಣಾಧಿಕಾರಿಗಳ ದಿಕ್ಕು ತಪ್ಪಿಸುತ್ತೀರೊ ಕಿಡಿಗೇಡಿಗಳು

    ಚುನಾವಣಾಧಿಕಾರಿಗಳ ದಿಕ್ಕು ತಪ್ಪಿಸುತ್ತೀರೊ ಕಿಡಿಗೇಡಿಗಳು

    ಚಿಕ್ಕಬಳ್ಳಾಪುರ: ರಾಜ್ಯ ಚುನಾವಣಾ ದಿನಾಂಕ ಘೋಷಣೆಯಾದಂದೇ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣಾ ಅಧಿಕಾರಿಗಳು ಹಗಲು-ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ಕೆಲ ಕಿಡಿಗೇಡಿಗಳು ಅಧಿಕಾರಿಗಳ ದಿಕ್ಕು ತಪ್ಪಿಸಲು ಕರೆ ಮಾಡಿ ಸುಳ್ಳು ದೂರುಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

    ದೂರು ಪ್ರಾಧಿಕಾರಕ್ಕೆ ಬರುವ ಬಹುತೇಕ ಕರೆಗಳಿಂದ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ದೂರು ಪ್ರಾಧಿಕಾರಕ್ಕೆ ಬರ್ತಿರೋ ಶೇ 70 ರಷ್ಟು ಕರೆಗಳು ಸುಳ್ಳು ಮಾಹಿತಿ ಅನ್ನೋದು ಈಗ ಬಯಲಾಗಿದೆ. ದೂರುಗಳು ಬಂದ ಮೇಲೆ ಪರಿಶೀಲನೆಗೆ ತೆರಳಿದಾಗ ಅಲ್ಲಿ ಏನು ಇರದೇ ಹಿಂದಿರುಗವ ಸ್ಥಿತಿ ಬಂದಿದೆ. ಕೆಲವರು ಈ ರೀತಿಯಾಗಿ ಫೇಕ್ ಕಾಲ್ ಮಾಡಿ ಅಧಿಕಾರಿಗಳ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರಾದ್ರೂ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರೆ ಅಂತ ಚುನಾವಣಾ ದೂರು ನಿರ್ವಹಣಾ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ದೂರು ನಿರ್ವಹಣಾ ಕೇಂದ್ರಕ್ಕೆ ಕರೆ ಅಥವಾ ವಾಟ್ಸಪ್ ಸಂದೇಶದ ಮೂಲಕ ಕಂಪ್ಲೇಂಟ್ ನೀಡಬಹುದು. ಆದ್ರೆ ಇದೀಗ ಜನರು ನಮಗೆ ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ.

    ಜಿಲ್ಲೆಯಲ್ಲಿ ದೂರು ಪ್ರಾಧಿಕಾರಕ್ಕೆ ಬರುವ ಕರೆಗಳನ್ನ ಆಧರಿಸಿ ದಾಳಿ ಮಾಡೋಕೆ ಅಂತಲೇ 37 ಸಂಚಾರಿ ತಂಡಗಳನ್ನ ನೇಮಕ ಮಾಡಲಾಗಿದ್ದು, ಪ್ರತಿ ತಂಡದಲ್ಲೂ ಒರ್ವ ತಾಲೂಕು ಮಟ್ಟದ ಆಧಿಕಾರಿ, ಇಬ್ಬರು ಪೊಲೀಸರು, ಒರ್ವ ಅಬಕಾರಿ ಇಲಾಖೆಯ ಸಿಬ್ಬಂದಿ ಸೇರಿ 200 ಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ ಕರೆ ಬಂದ ಮಾಹಿತಿ ಆಧರಿಸಿ ಹೋದ್ರೆ ಅಲ್ಲಿ ಏನೂ ಇಲ್ಲ ಬರೀ ಸುಳ್ಳು ಅಂತ ಅಧಿಕಾರಿಗಳು ಸುಸ್ತಾಗಿ ಹೋಗ್ತಿದ್ದಾರೆ

  • ಅಕ್ಷಯ ತೃತೀಯದಂದು ಮಹಿಳಾ ಮತದಾರರನ್ನು ಸೆಳೆಯಲು ನಡೆಯುತ್ತಿದ್ಯಂತೆ ಸಖತ್ ಪ್ಲಾನ್

    ಅಕ್ಷಯ ತೃತೀಯದಂದು ಮಹಿಳಾ ಮತದಾರರನ್ನು ಸೆಳೆಯಲು ನಡೆಯುತ್ತಿದ್ಯಂತೆ ಸಖತ್ ಪ್ಲಾನ್

    ಬೆಂಗಳೂರು: ಅಕ್ಷಯ ತೃತೀಯ ಹತ್ತಿರ ಬರುತ್ತಿದೆ. ಈ ಬಾರಿ ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ನಾಯಕರಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ.

    ಬಂಗಾರದ ಹಬ್ಬಕ್ಕೆ ಚಿನ್ನ ಮನೆಗೆ ಬಂದ್ರೆ ಮಹಿಳೆಯರನ್ನು ಹಿಡಿಯೋಕ್ಕೆ ಆಗುತ್ತಾ? ಇದನ್ನೇ ಎನ್‍ಕ್ಯಾಶ್ ಮಾಡಿಕೊಂಡು ಈ ಬಾರಿ ಅಕ್ಷಯ ತೃತೀಯಗೆ ಮಹಿಳಾ ಮತದಾರರಿಗಾಗಿ ಬಂಗಾರದ ಗಿಫ್ಟ್ ಗಳನ್ನು ಕೆಲ ರಾಜಕೀಯ ನಾಯಕರು ಮಾಡಿಕೊಂಡಿದ್ದಾರಂತೆ.

    ಏಪ್ರಿಲ್ 18 ರಂದು ಅಕ್ಷಯ ತೃತೀಯವಾಗಿದ್ದು, ಚಿನ್ನದ ವ್ಯಾಪಾರಿಗಳ ನಿರೀಕ್ಷೆಗೂ ಮೀರಿ ಈ ಬಾರಿ ವ್ಯಾಪಾರ ವೃದ್ಧಿಯಾಗುವ ಲಕ್ಷಣ ಕಾಣುತ್ತಿದೆ. ಈಗಾಗಲೇ ಬಂಗಾರದ ಬುಕ್ಕಿಂಗ್ ಜೋರಾಗಿದ್ಯಯಂತೆ. ಹಾಗೆ ನೋಡಿದ್ರೇ ಕಳೆದ ವರ್ಷಕ್ಕಿಂತ ಈ ಬಾರಿ ಚಿನ್ನದ ದರ ಏರಿಕೆ ಕಂಡಿದೆ. ಆದ್ರೇ ವ್ಯಾಪಾರಕ್ಕೆ ನೋ ಪ್ರಾಬ್ಲಂ, ರಾಜಕೀಯ ನಾಯಕರು, ಅವರ ಬೆಂಬಲಿಗರೇ ಹೆಚ್ಚಾಗಿ ಚಿನ್ನದ ಖರೀದಿಯಲ್ಲಿ ತೊಡಗಿದ್ದಾರೆ ಅನ್ನೋದು ಚಿನ್ನದಂಗಡಿ ಮಾಲೀಕರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

  • ಚುನಾವಣಾಧಿಕಾರಿಗಳಿಂದ ಬಿಎಸ್‍ವೈ ಪ್ರಯಾಣಿಸಿದ ಕಾರ್ ಜಪ್ತಿ

    ಚುನಾವಣಾಧಿಕಾರಿಗಳಿಂದ ಬಿಎಸ್‍ವೈ ಪ್ರಯಾಣಿಸಿದ ಕಾರ್ ಜಪ್ತಿ

    ಕೊಪ್ಪಳ: ಪರವಾನಗಿ ಇಲ್ಲದೇ ಬಿ.ಎಸ್.ಯಡಿಯೂರಪ್ಪ ಕರೆತಂದಿದ್ದ ಕಾರನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ನಗರದಲ್ಲಿ ರೈತ ಸಂವಾದ ಕಾರ್ಯಕ್ರಮಕ್ಕೆ ಬಿಎಸ್‍ವೈರನ್ನು ಹೆಲಿಪ್ಯಾಡ್‍ನಿಂದ ಸಂವಾದ ಸ್ಥಳಕ್ಕೆ ಪರವಾನಗಿ ಇಲ್ಲದ ಕಾರಲ್ಲಿ ಕರೆತಲಾಗಿತ್ತು. ಕಾರು ತಡೆಯಲು ಹೋದಾಗ ಕಾರು ಚಾಲಕ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ.

    ಕಾರಿನ ಹಿಂಬದಿ ನಂಬರ್ ಪ್ಲೇಟಿನಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಹಾಕಲಾಗಿತ್ತು. ಪ್ರಕರಣ ಸಂಬಂಧ ಚುನಾವಣಾ ಅಧಿಕಾರಿಗಳು, ಪರಶುರಾಮ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ.

    ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಬಿಜೆಪಿ ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದ್ದು, ಸಣ್ಣ- ಪುಟ್ಟ ಗೊಂದಲಗಳ ನಡುವೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ಹೆಲಿಕಾಪ್ಟರ್ ಮೂಲಕ ಬಿಎಸ್ ವೈ ರಾಜ್ಯ ಸುತ್ತಲಿದ್ದು, ಮೊದಲನೇ ದಿನವಾದ ಮಂಗಳವಾರ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ರೈತರ ಸಂವಾದ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಕಷ್ಟ- ನಷ್ಟಗಳನ್ನು ಕೇಳಿ ತಿಳಿದುಕೊಂಡ್ರು.