Tag: Karnataka Election 2018

  • ಕೊನೆಕ್ಷಣದಲ್ಲಿ ಬಿಜೆಪಿ ಗೇಮ್ ಪ್ಲಾನ್ ಚೇಂಜ್- ಇಂದು ಎರಡನೇ ಪಟ್ಟಿ ರಿಲೀಸ್

    ಕೊನೆಕ್ಷಣದಲ್ಲಿ ಬಿಜೆಪಿ ಗೇಮ್ ಪ್ಲಾನ್ ಚೇಂಜ್- ಇಂದು ಎರಡನೇ ಪಟ್ಟಿ ರಿಲೀಸ್

    ನವದೆಹಲಿ: ಒಂದೇ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪೊಲಿಟಿಕಲ್ ಗೇಮ್ ಪ್ಲಾನ್ ಬದಲಿಸಿಕೊಂಡಿದೆ.

    ಭಾನುವಾರ ರಾತ್ರಿ ಬಿಡುಗಡೆಯಾಗಬೇಕಿದ್ದ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ತಡೆಹಿಡಿಯುವ ಮೂಲಕ ಹೊಸ ದಾಳ ಉರುಳಿಸಲು ಪ್ಲಾನ್ ಮಾಡಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಬಿಜೆಪಿ ತನ್ನ ಎರಡನೇ ಹಂತದ ಅಭ್ಯರ್ಥಿ ಆಯ್ಕೆಯಾಗಿ ಸಭೆ ನಡೆಸಿ ರಾತ್ರಿ 80 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಯೋಚನೆ ಮಾಡಿಕೊಂಡಿತ್ತು. ಆದರೆ ಕಾಂಗ್ರೆಸ್ ಒಂದೇ ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಪಟ್ಟಿ ತಡೆಹಿಡಿಯುವ ಮೂಲಕ ಬಂಡಾಯದ ಲಾಭ ಪಡೆಯಲು ಯೋಜನೆ ರೂಪಿಸಿದೆ. ಇದನ್ನೂ ಓದಿ: ಕೊನೆಗೂ ರಿಲೀಸ್ ಆಯ್ತು ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ -ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಇಂದಿನ ಕಾಂಗ್ರೆಸ್ ಬೆಳವಣಿಗೆ ಆಧರಿಸಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಇಂದು ಬಿಜೆಪಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಎಲ್ಲಾ ಅಭ್ಯರ್ಥಿಗಳನ್ನು ಅಂತಿಮ ಮಾಡುವ ಸಾಧ್ಯತೆ ಇದೆ. ಇನ್ನು ಈ ಎಲ್ಲ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ಚಾಣಕ್ಯ ಅಮಿತ್ ಶಾ ಇಂದು ರಾತ್ರಿ ಬೆಂಗಳೂರಿಗೆ ಬರಲಿದ್ದು, 3 ದಿನ ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಇದನ್ನೂ ಓದಿ: ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡದ ಕಾಂಗ್ರೆಸ್ ಹೈಕಮಾಂಡ್

    ಪಕ್ಷದ ಕೆಲ ಪ್ರಮುಖ ಸಭೆಗಳಲ್ಲಿ ಭಾಗವಹಿಸಿ ರಾಜ್ಯ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ಚುನಾವಣೆಗೆ ಕ್ಷಣಗಣನೆ ಶುರುವಾದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ, ಮಾಧ್ಯಮ ನಿರ್ವಹಣಾ ವಿಭಾಗ, ಮಾಧ್ಯಮ ವಕ್ತಾರರ ಜೊತೆ ಸಭೆ ನಡೆಸಿ ಮತ್ತಷ್ಟು ಬಲಿಷ್ಠವಾಗಿ ಕಾರ್ಯನಿರ್ವಹಿಸುವ ಬಗ್ಗೆ ಸಲಹೆ ನೀಡಲಿದ್ದಾರೆ. ಪಕ್ಷದ ಚಟುವಟಿಕೆ ಬಳಿಕ ಹೊಸಕೋಟೆಯಲ್ಲಿ ನಡೆಯುವ ರೋಡ್ ಶೋ ಮುಗಿಸಿ ವಾಪಸ್ ದೆಹಲಿಗೆ ತೆರಳಲಿದ್ದಾರೆ.

  • ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡದ ಕಾಂಗ್ರೆಸ್ ಹೈಕಮಾಂಡ್

    ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡದ ಕಾಂಗ್ರೆಸ್ ಹೈಕಮಾಂಡ್

    ಬೆಂಗಳೂರು: 2018ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರು ಕ್ಷೇತ್ರಗಳಲ್ಲಿ ಯಾರು ಸ್ಪರ್ಧಿಸಲಿದ್ದಾರೆ ಎಂಬುದನ್ನು ರಿವೀಲ್ ಮಾಡಿಲ್ಲ.

    ಬೆಂಗಳೂರಿನ ಶಾಂತಿನಗರ, ಕಿತ್ತೂರು, ನಾಗಾಠಾಣ, ಸಿಂಧಗಿ, ರಾಯಚೂರು ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಣೆ ಮಾಡಿಲ್ಲ.

    1. ಶಾಂತಿನಗರ: 2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಎನ್.ಎ.ಹ್ಯಾರೀಸ್ ಗೆಲುವನ್ನು ಸಾಧಿಸಿದ್ದಾರೆ. 2013ರ ಚುನಾವಣೆಯಲ್ಲಿ ಜೆಡಿಎಸ್‍ನ ಕೆ.ವಾಸುದೇವ ಮೂರ್ತಿ 34,137 ಮತಗಳಿಸಿದ್ರೆ, ಹ್ಯಾರಿಸ್ 54,342 ಮತಗಳನ್ನು ಪಡೆದಿದ್ರು.

    2. ಕಿತ್ತೂರು: ಕಾಂಗ್ರೆಸ್‍ನ ಹಾಲಿ ಶಾಸಕರಾಗಿರುವ ಬಸನಗೌಡ ಇನಾಮದಾರ ಅವರ ಟಿಕೆಟ್ ನ್ನು ಹೈಕಮಾಂಡ್ ಘೋಷಣೆ ಮಾಡಿಲ್ಲ. 2013ರ ಚುನಾವಣೆಯಲ್ಲಿ ಬಿಜೆಪಿ ಸುರೇಶ್ ಶಿವರುದ್ರಪ್ಪ ಮಾರಿಹಾಳ 35,634 ಮತ ಪಡೆದಿದ್ರೆ, ಬಸನಗೌಡ ಇನಾಮದಾರ 53,924 ವೋಟ್ ಪಡೆದು ಗೆಲವನ್ನು ತಮ್ಮದಾಗಿಸಿಕೊಂಡಿದ್ರು.

    3. ನಾಗಠಾಣಾ: 2008ರಲ್ಲಿ ರಚಿತವಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, 2008ರಲ್ಲಿ ಬಿಜೆಪಿಯ ವಿಠಲ್ ದೋಂಡಿಬಾ ಜಯ ಸಾಧಿಸಿದ್ದರೆ, 2013ರಲ್ಲಿ ಕಾಂಗ್ರೆಸ್ ನ ರಾಜು ಆಲಗೂರ ಗೆಲು ಸಾಧಿಸಿದ್ರು. 2013ರಲ್ಲಿ ಕಾಂಗ್ರೆಸ್ ನ ರಾಜು ಆಲಗೂರು 45,570 ಮತಗಳನ್ನು ಪಡೆದಿದ್ದರೆ ಜೆಡಿಎಸ್‍ನ ದೇವಾನಂದ್ ಚವ್ಹಾನ್ 44,903 ಮತ ಪಡೆದಿದ್ರು.

    4. ಸಿಂಧಗಿ: 2004, 2008 ಮತ್ತು 2013ರ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳೆ ಗೆಲವನ್ನು ಸಾಧಿಸಿದ್ದಾರೆ. ಈ ಮೂರು ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳಿಗೆ ಜೆಡಿಎಸ್ ನ ಮಲ್ಲಪ್ಪ ಮನಗೂಳಿ ಪ್ರಬಲ ಪೈಪೋಟಿಯನ್ನು ನೀಡುತ್ತಾ ಬಂದಿದ್ದಾರೆ. 2013ರ ಚುನಾವಣೆಯಲ್ಲಿ ಹಾಲಿ ಶಾಸಕ ರಮೇಶ್ ಭುಸನೂರ 37,834 ಮತ ಪಡೆದ್ರೆ, ಸಮೀಪದ ಸ್ಪರ್ಧಿ ಮಲ್ಲಪ್ಪ ಮನಗೂಳಿ 37,082 ಮತ ಪಡೆದಿದ್ದರು.

    5. ರಾಯಚೂರು: ರಾಯಚೂರು ವಿಧಾನಸಭಾ ಕ್ಷೇತ್ರದಿಂದ 2013ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸೈಯದ್ ಯಾಸೀನ್, ಜೆಡಿಎಸ್ ನ ಶಿವರಾಜ್ ಪಾಟೀಲ್ ಎದುರು ಸೋಲಿನ ರುಚಿಯನ್ನು ಕಂಡಿದ್ದರು. ಸೈಯದ್ ಯಾಸೀನ್ 37,392 ಮತ ಪಡೆದಿದ್ರೆ, ಶಿವರಾಜ್ ಪಾಟೀಲ್ 45,263 ಮತಗಳನ್ನು ಗಳಿಸಿ ಶಾಸಕರಾಗಿದ್ದರು.

    6.ಮೇಲುಕೋಟೆ: ಈ ವಿಧಾನಸಭಾ ಕ್ಷೇತ್ರದಲ್ಲಿ ರೈತಪರ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ರು. 2008ರಲ್ಲಿ ರಚಿತವಾದ ವಿಧಾನಸಭಾ ಕ್ಷೇತ್ರ ಇದಾಗಿದ್ದು, 2013ರಲ್ಲಿ ಪುಟ್ಟಣ್ಣಯ್ಯ ವಿರುದ್ಧ ಜೆಡಿಎಸ್ ಸಿಎಸ್ ಪುಟ್ಟರಾಜು ಸ್ಪರ್ಧಿಸಿ ಸೋಲನ್ನಪ್ಪಿದ್ದರು.

    ಈ ಆರು ಕ್ಷೇತ್ರಗಳ ಟಿಕೆಟ್ ಮಾತ್ರ ಕಾಂಗ್ರೆಸ್ ಘೋಷಣೆ ಮಾಡಿಲ್ಲ.

  • ಕೊನೆಗೂ ರಿಲೀಸ್ ಆಯ್ತು ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ -ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಕೊನೆಗೂ ರಿಲೀಸ್ ಆಯ್ತು ಕಾಂಗ್ರೆಸ್ 218 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ -ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    – ಸಿಎಂಗೆ ಬದಾಮಿ ಇಲ್ಲ; ಚಾಮುಂಡಿಯೇ ಗತಿ

    ನವದೆಹಲಿ: ಮಧ್ಯಾಹ್ನ 3 ಗಂಟೆಗೆ ಕಾಂಗ್ರೆಸ್ ಪಟ್ಟಿ ರಿಲೀಸ್ ಆಗುತ್ತೆ ಅಂತಾ ಹೇಳಲಾಗುತ್ತಿತ್ತು, ಆದೆ ಈಗ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಎಲ್ಲಾ 218 ಕ್ಷೇತ್ರಗಳ ಪಟ್ಟಿ ರಿಲೀಸ್ ಮಾಡಿದೆ. ಆದ್ರೆ ಆರು ಕ್ಷೇತ್ರಗಳ ಪಟ್ಟಿ ಮಾತ್ರ ರಿಲೀಸ್ ಆಗಿಲ್ಲ. ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿಯಿಂದ ಮಾತ್ರ ಕಣಕ್ಕಿಳಿಯುತ್ತಾರೆ. ಬದಾಮಿಯಿಂದ ಸಿಎಂಗೆ ಟಿಕೆಟ್ ಕೊಡೋದು ಬೇಡ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ.

    ಹೆಚ್.ಎಂ.ರೇವಣ್ಣಗೆ ಚನ್ನಪಟ್ಟಣದ ಟಿಕೆಟ್ ಸಿಕ್ಕಿದೆ. ಇನ್ನೋರ್ವ ಎಂಎಲ್‍ಸಿ ಎಂ.ಆರ್.ಸೀತಾರಾಮ್ ಮಲ್ಲೇಶ್ವರಂನಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಇನ್ನು ವಯಸ್ಸು, ಆರೋಗ್ಯ ಮತ್ತು ಇತರೆ ಕಾರಣಗಳ ನೆಪ ಒಡ್ಡಿ ಓರ್ವ ಮಂತ್ರಿಯೂ ಸೇರಿದಂತೆ ಹಲವು ಮಾಜಿ ಮಂತ್ರಿಗಳು, ಶಾಸಕರಿಗೆ ಟಿಕೆಟ್ ನೀಡಿಲ್ಲ. ಆದಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ.

    ಸಿಎಂ ಸಿದ್ದರಾಮಯ್ಯ ಸೇರಿ ಹಲವು ರಾಜಕಾರಣಿಗಳ ಮಕ್ಕಳಿಗೆ ಟಿಕೆಟ್ ಸಿಕ್ಕಿದೆ. ಮಕ್ಕಳನ್ನು ಗೆಲ್ಲಿಸಿಕೊಂಡು ಬರುವ ರಾಜಕಾರಣಿಗಳ ಬಲಾಬಲವನ್ನು ಅಳೆದೂತೂಗಿದ ಸ್ಕ್ರೀನಿಂಗ್ ಕಮಿಟಿ ಕೆಲವರ ಮಕ್ಕಳಿಗೆ ಮಾತ್ರ ಟಿಕೆಟ್ ನೀಡಿದೆ.

     

  • ಬೆಂಗ್ಳೂರು, ದಾವಣಗೆರೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಣ-ಬೆಳಗಾವಿಯಲ್ಲಿ ಬಿಜೆಪಿ, ಎಂಇಪಿಯ ಶಾಲು, ಕ್ಯಾಪ್ ವಶಕ್ಕೆ

    ಬೆಂಗ್ಳೂರು, ದಾವಣಗೆರೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಣ-ಬೆಳಗಾವಿಯಲ್ಲಿ ಬಿಜೆಪಿ, ಎಂಇಪಿಯ ಶಾಲು, ಕ್ಯಾಪ್ ವಶಕ್ಕೆ

    ಬೆಂಗಳೂರು/ದಾವಣಗೆರೆ/ಬೆಳಗಾವಿ: ಚುನಾವಣಾ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ನೆಲಮಂಗಲದ ತ್ಯಾಮಗೊಂಡ್ಲು ಸಮೀಪದ ಮುದ್ದಲಿಂಗಹಳ್ಳಿ ಹಾಗೂ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಿಲುನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ವಾಹನ ತಪಾಸಣೆ ವೇಳೆ ಬೈಕ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮುದ್ದಲಿಂಗನಹಳ್ಳಿ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳ ತಂಡ ಕಾರ್ಯಚರಣೆ ನಡೆಸಿದ್ದಾರೆ. ತುಮಕೂರಿನ ಕೊಳಾಲ ಬಳಿಯ ಎಲೆರಾಂಪುರದ ಸ್ವಾಮಿ ಎಂಬವರ ಬಳಿಯಲ್ಲಿನ ಕೈ ಚೀಲದಲ್ಲಿದ್ದ 1 ಲಕ್ಷ 52 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮದುವೆ ಸಾಮಾಗ್ರಿಗಳನ್ನು ಖರೀದಿಸಲು ಹಣ ಸಾಗಾಟ ಮಾಡುತ್ತಿರುವುದಾಗಿ ಸ್ವಾಮಿ ಹೇಳಿಕೆ ನೀಡಿದ್ದಾರೆ. ಚುನಾವಣಾಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಿಲುನಲ್ಲಿ ಖಾಸಗಿ ಬಸ್ ಮೇಲೆ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಬಸ್‍ನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 2.48 ಲಕ್ಷ ಹಣ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಣವನ್ನು ತಾಲೂಕು ಖಜಾನೆಯಲ್ಲಿ ಅಧಿಕಾರಿಗಳು ಇರಿಸಲಾಗಿದೆ.

    ಬೆಳಗಾವಿ: ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ ಬಿಜೆಪಿಯ 3 ಸಾವಿರ ಶಾಲು ಮತ್ತು ಎಂಇಪಿ ಪಕ್ಷಕ್ಕೆ ಸೇರಿದ 40 ಸಾವಿರ ಕ್ಯಾಪ್ ಗಳನ್ನು ಜಿಲ್ಲೆಯ ನಿಪ್ಪಾಣಿಯ ಕರ್ನಾಟಕ ಮತ್ತು ಮಹಾ ಗಡಿಯ ಚೆಕ್ ಪೋಸ್ಟ್ ನಲ್ಲಿ ನಿಪ್ಪಾಣಿ ಪೊಲೀಸ್ರು ವಶ ಪಡಿಸಿಕೊಂಡಿದ್ದಾರೆ. ಶಾಲು ಮತ್ತು ಕ್ಯಾಪ್ ಗಳನ್ನು ಮುಂಬೈನಿಂದ ಬೆಳಗಾವಿಗೆ ತರಲಾಗುತ್ತಿತ್ತು ಎಂಬ ಮಾಹಿತಿಗಳು ಲಭ್ಯವಾಗಿದ್ದು, ಬಸ್ ಡ್ರೈವರ್, ಕ್ಲೀನರ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

  • ನಾಲ್ಕು ಕಡೆ ಕಲ್ಲು ತೂರಾಡಿ, ಇಲ್ಲದಿದ್ರೆ ಸುಮ್ಮನಿರಿ…- ತಿಪ್ಪೇಸ್ವಾಮಿಯಿಂದ ಬೆಂಬಲಿಗರಿಗೆ ಪ್ರಚೋದನೆ

    ನಾಲ್ಕು ಕಡೆ ಕಲ್ಲು ತೂರಾಡಿ, ಇಲ್ಲದಿದ್ರೆ ಸುಮ್ಮನಿರಿ…- ತಿಪ್ಪೇಸ್ವಾಮಿಯಿಂದ ಬೆಂಬಲಿಗರಿಗೆ ಪ್ರಚೋದನೆ

    ಬಳ್ಳಾರಿ: ಶಾಸಕ ತಿಪ್ಪೇಸ್ವಾಮಿಗೆ ಟಿಕೆಟ್ ತಪ್ಪಿದಕ್ಕೆ ಅವರ ಬೆಂಬಲಿಗರು ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮೇಲೆ ಕಲ್ಲು, ಚಪ್ಪಲಿ ತೂರಾಡಿದ್ದಾರೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ.

    ಈ ಗಲಾಟೆಗೆ ಸ್ವತಃ ತಿಪ್ಪೇಸ್ವಾಮಿಯಿಂದಲೇ ಪ್ರಚೋದನೆ ನೀಡಿದ್ದು, ಹೋಗಿ ಗಲಾಟೆ ಮಾಡ್ರೋ.. ಹೋಗಿ ಕಲ್ಲು ತೂರಾಟ ನಡೆಸಿ… ಇಲ್ಲದಿದ್ರೆ ಸುಮ್ಮನಿರಿ… ಬೆಂಬಲಿಗರಿಗೆ ಹೇಳಿದ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ; ಶಾಸಕ ತಿಪ್ಪೇಸ್ವಾಮಿಗೆ ಬಹಿರಂಗ ಸವಾಲೆಸೆದ ಶ್ರೀರಾಮುಲು

    ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗ ಎಸ್‍ಪಿ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲು ಮುಂದಾಗಿದ್ದು, ತಿಪ್ಪೇಸ್ವಾಮಿಯನ್ನು ಕೂಡಲೇ ಬಂಧಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನೀನು ಗಂಡಸಾಗಿದ್ರೆ, ಮೊಳಕಾಲ್ಮೂರಲ್ಲಿ ಗೆದ್ದು ತೋರ್ಸು ನಾನು ನೋಡ್ತಿನಿ-ಶ್ರೀರಾಮುಲುಗೆ ಸವಾಲೆಸೆದ ಶಾಸಕ ತಿಪ್ಪೇಸ್ವಾಮಿ

    ಇತ್ತೀಚೆಗೆ ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಮಾಡಲು ಆಗಮಿಸಿದ್ದ ವೇಳೆ ಶಾಸಕ ತಿಪ್ಪೇಸ್ವಾಮಿ ಬೆಂಬಲಿಗರು ಕಲ್ಲು, ಚಪ್ಪಲಿ, ಪೊರಕೆಯ ಸ್ವಾಗತ ನಿಡಿದ್ದರು. ಇದನ್ನೂ ಓದಿ: ನನ್ನ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಒಳ್ಳೆಯದಾಗಲಿ, ದೂರು ನೀಡಲ್ಲ: ಶ್ರೀರಾಮುಲು

    https://www.youtube.com/watch?v=-yKLC0zlBY8

    https://www.youtube.com/watch?v=i_4AzaKDoT8

  • ಕಾಂಗ್ರೆಸ್‍ಗೆ ಕಗ್ಗಂಟಾದ ಟಿಕೆಟ್ ಆಯ್ಕೆ!

    ಕಾಂಗ್ರೆಸ್‍ಗೆ ಕಗ್ಗಂಟಾದ ಟಿಕೆಟ್ ಆಯ್ಕೆ!

    ಬೆಂಗಳೂರು: ರಾಜ್ಯದ ಕಾಂಗ್ರೆಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಟಿಕೆಟ್ ಹಂಚಿಕೆ ಬಗ್ಗೆ ಗೊಂದಲ ಉಂಟಾಗಿದೆ.

    ಕಳೆದ 3-4 ದಿನಗಳಿಂದ ಮ್ಯಾರಥಾನ್ ಸಭೆ ನಡೆಸುತ್ತಿದ್ದರೂ ಅಭ್ಯರ್ಥಿಗಳ ಆಯ್ಕೆ ಇನ್ನೂ ಕೂಡ ಕಗ್ಗಂಟಾಗೇ ಉಳಿದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿರುವ ಪರಿಣಾಮವಾಗಿ ಸಭೆಗಳ ಮೇಲೆ ಸಭೆ ನಡೆಸಿದ್ರೂ ಕೂಡ ಕಾಂಗ್ರೆಸ್ ಪಟ್ಟಿಗೆ ಅಂಕಿತ ಬಿದ್ದಿಲ್ಲ. ಇದನ್ನೂ ಓದಿ: ಟಿಕೆಟ್ ‘ಕೈ’ ತಪ್ಪಿದ ಹಿನ್ನೆಲೆ – ವಿ.ಆರ್.ಸುದರ್ಶನ್ ರಾಜೀನಾಮೆ

    ಈ ಹಿನ್ನೆಲೆಯಲ್ಲಿ ಇಂದು ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಮಧ್ಯಾಹ್ನ 3 ಗಂಟೆ ಒಳಗೆ ಎಲ್ಲಾ 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡೋ ಸಾಧ್ಯತೆ ಇದೆ.


    ಸ್ಟಾರ್ ಪ್ರಚಾರಕರು: ಇತ್ತ ಕಾಂಗ್ರೆಸ್‍ನ ಸ್ಟಾರ್ ಪ್ರಚಾರಕರ ಪಟ್ಟಿ ಸಿದ್ಧವಾಗಿದೆ. ತೆಲುಗು ಪ್ರಭಾವ ಇರೋ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರದಲ್ಲಿ ಮೆಗಾಸ್ಟಾರ್ ಚಿರಂಜೀವಿ, ಬೆಂಗಳೂರಿನ ತಮಿಳು ಭಾಷಿಕರಿರೋ ಪ್ರದೇಶಗಳಲ್ಲಿ ನಟಿ ಖುಷ್ಬೂ, ಸಿಖ್ ಭಾಷಿಕರಿರೋ ಕಡೆ ಪಂಜಾಬ್ ಮಿನಿಸ್ಟರ್ ಕಮ್ ಕ್ರಿಕೆಟರ್ ಸಿಧು ಕ್ಯಾಂಪೇನ್‍ಗೆ ಬರಲಿದ್ದಾರೆ. ಇವರ ಜೊತೆಗೆ, ಜಯಮಾಲ, ಉಮಾಶ್ರೀ, ಮಾಲಾಶ್ರೀ, ರಮ್ಯಾ, ಭಾವನ, ಶಶಿಕುಮಾರ್, ಸಾಧುಕೋಕಿಲ ಅವರ ಹೆಸರನ್ನ ಹೈಕಮಾಂಡ್‍ಗೆ ರವಾನಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ನಾವು ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್- ಸರ್ವೆ ಬಗ್ಗೆ ಎಚ್‍ಡಿಕೆ ಗರಂ

    ನಾವು ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್- ಸರ್ವೆ ಬಗ್ಗೆ ಎಚ್‍ಡಿಕೆ ಗರಂ

    ಮೈಸೂರು: ಇಂಡಿಯಾ ಟುಡೆ ಸಮೀಕ್ಷೆ ಯಾರು, ಏಕೆ ಮಾಡಿಸಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಪಾತ್ರ ಇದರಲ್ಲಿ ಎಷ್ಟಿದೆ ಎನ್ನುವ ಮಾಹಿತಿ ನನ್ನ ಬಳಿ ಇದೆ ಎಂದು ಜೆಎಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

    ಸಮೀಕ್ಷೆ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್, ಬಿಜೆಪಿ ಟಿಕೆಟ್ ಘೋಷಣೆಯಾಗದೆ ಸಮೀಕ್ಷೆ ನಡೆಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಸಮೀಕ್ಷೆ ಉಲ್ಟಾ ಪಲ್ಟಾ ಆಗುವುದು ಖಚಿತ. ಜೆಡಿಎಸ್ ಕಿಂಗ್ ಮೇಕರ್ ಅಲ್ಲಾ, ಕಿಂಗ್ ಆಗುತ್ತದೆ. ಸರ್ವೆಯಲ್ಲಿ ಮೂರನೇ ಸ್ಥಾನದಲ್ಲಿರುವ ನಾವು, ಮೊದಲನೇ ಸ್ಥಾನಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿಎಂ ಸಿದ್ದರಾಮಯ್ಯ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಒಂದು ತಿಂಗಳು ಕ್ಯಾಂಪ್ ಮಾಡಲಿ. ಆ ಎರಡು ಕ್ಷೇತ್ರಗಳಿಗೆ ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಅವರೇನು ಮಾಡುತ್ತಾರೆ ಮಾಡಿಕೊಳ್ಳಲಿ. ಅಲ್ಲಿ ನಾನೇ ಗೆಲ್ಲುವುದು ಎಂದು ಸಿದ್ದರಾಮಯ್ಯ ಅವರಿಗೆ ಎಚ್‍ಡಿಕೆ ಸವಾಲು ಹಾಕಿದರು. ಇದನ್ನೂ ಓದಿ: ಕರ್ನಾಟಕ ಕುರುಕ್ಷೇತ್ರ -ಸಮೀಕ್ಷೆಯಲ್ಲಿ ಕರುನಾಡ ಕಿಂಗ್ ಯಾರು ?

    ರಾಮನಗರದಲ್ಲಿ ನನ್ನ ನಡವಳಿಕೆಗೂ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರ ನಡವಳಿಕೆಗೂ ಹೋಲಿಕೆ ಮಾಡಬೇಡಿ. ಸಿದ್ದರಾಮಯ್ಯ ಅವರಿಗೂ ರಾಮನಗರಕ್ಕೂ ಏನು ಸಂಬಂಧ?. ಅವರು ರಾಮನಗರಕ್ಕೆ ಬಂದರೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನಾನು ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವುದಕ್ಕೆ ವಿಶೇಷ ಅರ್ಥ ಬೇಡ. ಇತರೆ ಮತಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿರುವಂತೆ ಇಲ್ಲಿಯೂ ಪ್ರಚಾರ ಮಾಡುತ್ತಿರುವೆ. 100 ಹಳ್ಳಿಗೆ ಭೇಟಿ ನೀಡಲು ನನ್ನ ಸಮಯ ನಿಗದಿ ಮಾಡಿಕೊಂಡಿದ್ದೇನೆ. ಚಾಮುಂಡೇಶ್ವರಿ ಮತಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರಿಗಿಂತ ನನ್ನ ಕೊಡುಗೆ ಹೆಚ್ಚು. ಇದಕ್ಕೆ ಜಿ.ಟಿ.ದೇವೆಗೌಡರು ಕಾರಣ ಎಂದರು. ಇದನ್ನೂ ಓದಿ: ಖಾಸಗಿ ವಾಹಿನಿ ಸರ್ವೆಗೆ ಕೈ-ಕಮಲ ಫುಲ್ ಟೆನ್ಷನ್ – ಸೀಟು ಹೆಚ್ಚಳಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್

    ತೆಲಗು ಭಾಷಾ ಕನ್ನಡಿಗರ ಮತ ಕ್ರೂಢೀಕರಣಕ್ಕೆ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಜೆಡಿಎಸ್ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅಲ್ಲದೇ, ಬಿಎಸ್‍ಪಿ ನಾಯಕಿ ಮಾಯಾವತಿ ಕೂಡ ಮೈಸೂರು ಸೇರಿದಂತೆ ನಾಲ್ಕು ಕಡೆ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದ್ರು.

    https://www.youtube.com/watch?v=ErQsGS7ogzA

  • ಮತ ಕೇಳಲು ಬಂದಿದ್ದ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಗೆ 500ರೂ. ನೀಡಿದ ಮತದಾರ!

    ಮತ ಕೇಳಲು ಬಂದಿದ್ದ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಗೆ 500ರೂ. ನೀಡಿದ ಮತದಾರ!

    ಕಾರವಾರ: ಚುನಾವಣೆ ಬಂದರೆ ರಾಜಕಾರಣಿಗಳು ಮತ ಬೇಟೆಗಾಗಿ ಮತದಾರರಿಗೆ ಹಣ ಚೆಲ್ಲುತ್ತಾರೆ. ಆದರೆ, ಚುನಾವಣಾ ಪ್ರಚಾರಕ್ಕೆ ಬಂದ ಅಭ್ಯರ್ಥಿಗೆ ಮತದಾರನೋರ್ವ ತಾನೇ ಹಣ ನೀಡಿರುವುದು ಅಂಕೋಲದಲ್ಲಿ ನಡೆದಿದೆ.

    ಪಟ್ಟಣದ ಲಕ್ಷ್ಮೀಶ್ವರ ನಗರದ ಪ್ರಕಾಶ್ ನಾಯ್ಕ ಅವರ ಮನೆಗೆ ಮತ ಕೇಳಲು ಹೋಗಿದ್ದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರಿಗೆ ಐನೂರು ರೂಪಾಯಿಯನ್ನು ತನ್ನ ಜೇಬಿನಿಂದ ತೆಗೆದು ಕೊಟ್ಟು, ಮತದಾನ ಜಾಗೃತಿ ಮೂಡಿಸಿ ಜನಸಾಮಾನ್ಯರಿಂದ ಮೆಚ್ಚುಗೆ ಪಡೆದಿದ್ದಾರೆ.

    ಚುನಾವಣೆ ಬಂದರೆ ಅಭ್ಯರ್ಥಿಗಳು ಮತದಾರರಿಗೆ ಹಣದ ಆಮಿಷ ಒಡ್ಡುತ್ತಾರೆ. ಇದು ನಿಲ್ಲಬೇಕು ಎನ್ನುವ ಉದ್ದೇಶದಿಂದ ಅಭ್ಯರ್ಥಿಗಳಿಗೆ ಹಣ ನೀಡಿ ಜಾಗೃತಿ ಮೂಡಿಸುತ್ತಿರುವೆ ಎಂದು ಪ್ರಕಾಶ್ ನಾಯ್ಕ ಹೇಳಿದ್ದಾರೆ.

  • ಜೆಡಿಎಸ್ ಪರ ಪ್ರಚಾರ ಮಾಡಲು ಬಂದಿದ್ದ ಮಾಜಿ ಸಚಿವರನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು!

    ಜೆಡಿಎಸ್ ಪರ ಪ್ರಚಾರ ಮಾಡಲು ಬಂದಿದ್ದ ಮಾಜಿ ಸಚಿವರನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು!

    ಮಂಡ್ಯ: ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ಮಾಜಿ ಸಚಿವ ವಿಶ್ವನಾಥ್ ಅವರಿಗೆ ಪ್ರಚಾರ ಮಾಡುವುದಕ್ಕೆ ಅಡ್ಡಿ ಪಡಿಸಿ ಗ್ರಾಮದಿಂದ ವಾಪಸ್ ಕಳುಹಿಸಿರುವ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಏಪ್ರಿಲ್ 12 ರಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅನ್ನದಾನಿ ಪರವಾಗಿ ಪ್ರಚಾರ ಕೈಗೊಂಡಿದ್ದ ಹೆಚ್ ವಿಶ್ವನಾಥ್, ತಾಲೂಕಿನ ಮಂಚನಹಳ್ಳಿಗೆ ಆಗಮಿಸಿದ್ದರು. ಈ ವೇಳೆ ಅವರ ಕಾರನ್ನು ಅಡ್ಡ ಹಾಕಿದ ಗ್ರಾಮಸ್ಥರು, ಗ್ರಾಮದ ಒಳಗಡೆ ಬರಲು ಬಿಡದೆ ವಾಪಸ್ ಕಳುಹಿಸಿದ್ದಾರೆ.

    ಆದ್ರೆ ವಿಶ್ವನಾಥ್ ಅವರನ್ನು ಯಾವ ಕಾರಣಕ್ಕೆ ಪ್ರಚಾರ ಮಾಡಲು ಬಿಡದೆ ವಾಪಸ್ ಕಳುಹಿಸಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಗ್ರಾಮಸ್ಥರ ಮಾತಿಗೆ ಮರು ಮಾತನಾಡದ ಹೆಚ್ ವಿಶ್ವನಾಥ್ ಅಲ್ಲಿಂದ ಕಾರ್ ಹತ್ತಿ ವಾಪಸ್ ಹೋಗಿದ್ದಾರೆ ಎನ್ನಲಾಗಿದೆ.

    ವಿಶ್ವನಾಥ್ ಕಾರ್ ಹತ್ತುತ್ತಿದ್ದಂತೆ ಶಾಸಕ ನರೇಂದ್ರಸ್ವಾಮಿ ಪರವಾಗಿ ಕೆಲವು ಯುವಕರು ಘೋಷಣೆ ಕೂಗುತ್ತಾರೆ. ಇದನ್ನ ನೋಡಿದ ಅಭ್ಯರ್ಥಿ ಅನ್ನದಾನಿ ಬೆಂಬಲಿಗರೂ ಸಹ ಹೆಚ್ ವಿಶ್ವನಾಥ್ ಗೆ ಜೈ ಕಾರ ಹಾಕುತ್ತಾರೆ. ಈ ನಡುವೆ ಸ್ಥಳದಲ್ಲಿದ್ದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಈಗ ಈ ವಿಡಿಯೋ ವಾಟ್ಸಪ್ ಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗ ಲಭಿಸಿದೆ.

  • ಖಾಸಗಿ ವಾಹಿನಿ ಸರ್ವೆಗೆ ಕೈ-ಕಮಲ ಫುಲ್ ಟೆನ್ಷನ್ – ಸೀಟು ಹೆಚ್ಚಳಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್

    ಖಾಸಗಿ ವಾಹಿನಿ ಸರ್ವೆಗೆ ಕೈ-ಕಮಲ ಫುಲ್ ಟೆನ್ಷನ್ – ಸೀಟು ಹೆಚ್ಚಳಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್

    ನವದೆಹಲಿ: ರಾಷ್ಟ್ರಮಟ್ಟದ ಖಾಸಗಿ ವಾಹಿನಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ವರದಿಯನ್ನ ಸಂಪೂರ್ಣ ಅಧ್ಯಯನ ನಡೆಸಿದ ಅಮಿತ್ ಶಾ, ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ವಾರ್ನ್ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಸೀಟು ಹೆಚ್ಚಳಕ್ಕೆ ಬಿಜೆಪಿ ಮಾಡಿರುವ ಮಾಸ್ಟರ್ ಪ್ಲಾನ್ ಏನು ಅಂತ ನೋಡೋದಾದ್ರೆ ಪ್ರಧಾನಿ ಮೋದಿ ಅವರನ್ನು ಪ್ರಚಾರಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕ ಕುರುಕ್ಷೇತ್ರ -ಸಮೀಕ್ಷೆಯಲ್ಲಿ ಕರುನಾಡ ಕಿಂಗ್ ಯಾರು ?

    ಪ್ರಧಾನಿ ನರೇಂದ್ರ ಮೋದಿಯೇ ನಮಗಿರುವ ಆಸರೆ. ಸೆಂಚುರಿ ದಾಟಿಸಲು ಪ್ರಧಾನಿಯವರೇ ಬೇಕು ಅಂತ ಅಮಿತ್  ಶಾ ನಡೆಸಿದ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ. ಪ್ರಧಾನಿ ಮೋದಿ ಜಾಥಾ, ರೋಡ್ ಶೋ ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವಾರದ ಅಂತ್ಯದಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಬರಲಿದ್ದಾರೆ. 16ಕ್ಕೂ ಹೆಚ್ಚು ಸಮಾವೇಶ, 5ಕ್ಕೂ ಹೆಚ್ಚು ರೋಡ್ ಶೋನಲ್ಲಿ ಮೋದಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಕರ್ನಾಟಕ ಕುರುಕ್ಷೇತ್ರದಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು ಎನ್ನುವುದನ್ನು ಮತದಾರರು ನಿರ್ಧರಿಸಲು ಇನ್ನು 29 ದಿನಗಳು ಮಾತ್ರ ಬಾಕಿ ಇದೆ. ಇದರ ಮಧ್ಯೆ, ಚದುರಂಗದಾಟದ ಲೆಕ್ಕಾಚಾರ ಜೋರಾಗ್ತಿದೆ. ಕರ್ನಾಟಕದ ಚುನಾವಣೆ ಕುರಿತು ದೇಶಾದ್ಯಂತ ಭರ್ಜರಿ ಸರ್ವೆಗಳು ನಡೀತಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಖಾಸಗಿ ವಾಹಿನಿ ಇಂಡಿಯಾ ಟುಡೇ ನಡೆಸಿದ ಖಾರ್ವಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ. ಮಾರ್ಚ್ 17 ರಿಂದ ಏಪ್ರಿಲ್ 05 ರ ಅವಧಿಯಲ್ಲಿ ಜಂಟಿ ಸಮೀಕ್ಷೆ ನಡೆಸಿದ್ದು, 27 ಸಾವಿರಕ್ಕೂ ಹೆಚ್ಚು ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಿದೆ.