Tag: Karnataka Election 2018

  • ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಭೇಟಿ ಬಳಿಕ ಸಿಎಂ ಪ್ರತಿಕ್ರಿಯೆ

    ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಭೇಟಿ ಬಳಿಕ ಸಿಎಂ ಪ್ರತಿಕ್ರಿಯೆ

    ಮೈಸೂರು: ಚಿತ್ರದುರ್ಗದ ಮೊಳಕಾಲ್ಮೂರು ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಅವರು ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆದಿಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಬಿಜೆಪಿ ಶಾಸಕರ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಟಿಕೆಟ್ ಕೊಡಲು ಸಮಯ ಮಿಂಚಿಹೋಗಿದೆ. ಅವರು ನನ್ನನ್ನು ಭೇಟಿ ಕಾಂಗ್ರೆಸ್ ಟಿಕೆಟ್ ಕೊಡಿಸುವಂತೆ ಕೇಳಿದ್ದಾರೆ. ಆದ್ರೆ ನಾನು ಈಗ ಸಾಧ್ಯವಿಲ್ಲ, ಕಷ್ಟ ಆಗುತ್ತೆ ಅಂತ ಹೇಳಿದ್ದೇನೆ ಅಂದ್ರು. ಇದನ್ನೂ ಓದಿ: ಕುತೂಹಲ ಮೂಡಿಸಿದೆ ಬಿಜೆಪಿ ಶಾಸಕ ತಿಪ್ಪೇಸ್ವಾಮಿ- ಸಿಎಂ ಭೇಟಿ

    ಇದೇ ವೇಳೆ ಚನ್ನಪಟ್ಟಣದಲ್ಲಿ ಹೆಚ್ ಎಂ ರೇವಣ್ಣ ಬದಲು ಸಿದ್ದರಾಮಯ್ಯರೇ ಸ್ಪರ್ಧೆ ಮಾಡಲಿ ಎಂಬ ಹೆಚ್‍ಡಿಕೆ ಸವಾಲು ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಪತ್ನಿ ಚನ್ನಪಟ್ಟಣದಲ್ಲಿ ಸೋತರು. ಆಗ ಚಾಲೆಂಜ್ ಎಲ್ಲಿ ಹೋಗಿತ್ತು ಅಂತ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.

    ಕುಮಾರಸ್ವಾಮಿಯಂತೆ ನಾನು ಕೆಳಮಟ್ಟಕ್ಕೆ ಇಳಿದು ಸವಾಲು ಹಾಕಲ್ಲ. ಅವರು ಚಿಕ್ಕಬಳ್ಳಾಪುರದಲ್ಲಿ ಯಾಕೇ ಸೋತರು. ಚಾಮುಂಡೇಶ್ವರಿಯಲ್ಲಿ ಬಂದು ಪ್ರಚಾರ ಮಾಡುವ ಅವರಿಗೆ ಕ್ಷೇತ್ರದ ಜೊತೆ ಒಳ್ಳೆ ಸಂಬಂಧ ಇದೇಯಾ? 2006ರಲ್ಲಿ ಬಂದಿದ್ದು ಬಿಟ್ಟರೆ ಇವತ್ತೆ ಬರ್ತಿರೋದು. ಮುಖ್ಯಮಂತ್ರಿಯಾಗಿದ್ದಾಗ ಕೆಲಸ ಮಾಡದೆ, ಈಗ ಬಂದು ಗ್ರಾಮಗಳನ್ನ ದತ್ತು ತೆಗೆದುಕೊಂಡರೆ ಆಗುತ್ತಾ? ಮೊದಲು ರಾಮನಗರವನ್ನ ದತ್ತು ತೆಗೆದುಕೊಳ್ಳಲಿ ಅಂತ ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮತಗಳು ಕುಮಾರಸ್ವಾಮಿ ಅಥವಾ ನನ್ನ ಜೇಬಿನಲ್ಲಿಲ್ಲ- ಸಿಎಂ ತಿರುಗೇಟು

  • ಟಿಕೆಟ್ ಗಾಗಿ ಬಿಎಸ್‍ವೈ ಕಾಲಿಗೆ ಬಿದ್ದ ಮಾಜಿ ಸಚಿವ ಬೆಳ್ಳುಬ್ಬಿ ಬಂಟ

    ಟಿಕೆಟ್ ಗಾಗಿ ಬಿಎಸ್‍ವೈ ಕಾಲಿಗೆ ಬಿದ್ದ ಮಾಜಿ ಸಚಿವ ಬೆಳ್ಳುಬ್ಬಿ ಬಂಟ

    ಬೆಂಗಳೂರು: ಬಸವನ ಬಾಗೇವಾಡಿ ಕ್ಷೇತ್ರದ ಮಾಜಿ ಸಚಿವ ಎಸ್‍ಕೆ ಬೆಳ್ಳುಬ್ಬಿ ಬೆಂಬಲಿಗರೊಬ್ಬರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ಬಿದ್ದ ಘಟನೆ ನಡೆದಿದೆ.

    ಇಂದು ಬೆಳಗ್ಗೆ ಬಿಎಸ್ ವೈ ಅವರು ವಾಯುವಿಹಾರಕ್ಕೆ ತೆರಳಿದ್ದ ವೇಳೆ ಬೆಳ್ಳುಬ್ಬಿ ಬಂಟ ಬಂದು ಟಿಕೆಟ್‍ಗಾಗಿ ಯಡಿಯೂರಪ್ಪ ಅವರ ಕಾಲು ಹಿಡಿದು ನಮಸ್ಕರಿಸಿದ್ದಾರೆ. ಈ ವೇಳೆ ಬಿಎಸ್ ವೈ ಅವರು, ನನ್ ಕಾಲಿಗೆ ಬೀಳ್ಬೇಡಪ್ಪ, ಟಿಕೆಟ್ ನಾನು ಕೊಡಲ್ಲ, ಹೈಕಮಾಂಡ್ ಕೊಡೋದು ಅಂತ ಹೇಳಿ ಮುಂದೆ ನಡೆದಿದ್ದಾರೆ.

    ಇದೇ ವೇಳೆ ಮಾಜಿ ಸಚಿವರ ಬೆಂಬಲಿಗರು ಬೆಳ್ಳುಬ್ಬಿ ಅವರಿಗೆ ಟಿಕೆಟ್ ಕೊಡುವಂತೆ ಒತ್ತಡ ಹಾಕಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ – ಏಪ್ರಿಲ್ 24ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ

    ವಿಧಾನಸಭೆ ಚುನಾವಣೆಗೆ ಇಂದು ಅಧಿಸೂಚನೆ – ಏಪ್ರಿಲ್ 24ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ

    ಬೆಂಗಳೂರು: ಇಂದಿನಿಂದ ಕರ್ನಾಟಕ ಕುರುಕ್ಷೇತ್ರ ಮತ್ತಷ್ಟು ಬಿಸಿಯೇರಲಿದೆ. ಕಾರಣ ಮೇ 12 ರಂದು ನಡೆಯೋ ವಿಧಾನಸಭೆ ಚುನಾವಣೆಗೆ ಇವತ್ತು ಅಧಿಸೂಚನೆ ಹೊರಬೀಳಲಿದ್ದು, ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಲಿದೆ. ಇಂದಿನಿಂದ ಏಪ್ರಿಲ್ 24ರವರೆಗೂ ವಿಧಾನಸಭೆ ಚುನಾವಣೆಗೆ ಉಮೇದುವಾರು ನಾಮಪತ್ರ ಸಲ್ಲಿಸಬಹುದಾಗಿದೆ.

    ಈಗಾಗಲೇ ಕಾಂಗ್ರೆಸ್ ಬಹುತೇಕ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಮಾಡಿದ್ದು, ಬಿಜೆಪಿ ಜೆಡಿಎಸ್ ಪಕ್ಷಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದ್ರೂ, ಬಿ ಫಾರಂ ಹಂಚಿಕೆಯಲ್ಲಿ ಬಿಜೆಪಿ ಫಸ್ಟ್ ಇದೆ. ಗೌರಿಬಿದನೂರಿನ ಜೈಪಾಲ್ ರೆಡ್ಡಿ, ನೆಲಮಂಗಲ ನಾಗರಾಜು, ಹರಿಹರದ ಬಿ.ಪಿ. ಹರೀಶ್, ಕುಣಿಗಲ್‍ನ ಕೃಷ್ಣಕುಮಾರ್ ಬಿ.ಫಾರಂ ಪಡೆದುಕೊಂಡಿದ್ದಾರೆ. ಬಿ ಪಾರಂ ಹಂಚಿಕೆ ಪ್ರಕ್ರಿಯೆ ಇವತ್ತು ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ.

    ಮೊದಲ ದಿನವಾದ ಇವತ್ತು ಹಲವರು ನಾಮಪತ್ರ ಸಲ್ಲಿಸೋ ಸಾಧ್ಯತೆಗಳಿವೆ. ಸಿಎಂ ಸಿದ್ದರಾಮಯ್ಯ ಇದೇ 20ಕ್ಕೆ ನಾಮಿನೇಷನ್ ಹಾಕಲಿದ್ದಾರೆ. ಏಪ್ರಿಲ್ 25ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 27ರಂದು ನಾಮಪತ್ರ ಹಿಂಪಡೆಯಲು ಕಡೇ ದಿನವಾಗಿದೆ. ಅಂದ ಹಾಗೇ, ಉಮೇದುವಾರರು ನಾಮಪತ್ರ ಸಲ್ಲಿಸಲು ಕೆಲ ಷರತ್ತುಗಳನ್ನು ಪೂರೈಸಲೇಬೇಕಾಗುತ್ತದೆ.

    ನಾಮಪತ್ರ ಸಲ್ಲಿಕೆಗೆ ಷರತ್ತುಗಳು:
    * ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ.
    * ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಯ ಜೊತೆಯಲ್ಲಿ ಐವರು ಬೆಂಬಲಿಗರಿಗೆ ಅವಕಾಶ.
    * ನಾಮತ್ರ ಸಲ್ಲಿಸಲು ಒಬ್ಬ ಅಭ್ಯರ್ಥಿ ಕೇವಲ ಮೂರು ವಾಹನಗಳ ಜೊತೆ ಮಾತ್ರ ಬರಬೇಕು.
    * ನಾಮಪತ್ರ ಸಲ್ಲಿಸುವವರು ಬೇರೆ ಕ್ಷೇತ್ರದ ಅಭ್ಯರ್ಥಿ ಆಗಿದ್ದರೆ, ಎರಡು ರೀತಿಯ ಅಫಿಡವಿಟ್ ಸಲ್ಲಿಸಬೇಕು.
    * ಅರ್ಜಿಯಲ್ಲಿ ಎಲ್ಲಾ ಮಾಹಿತಿ ನೀಡೋದು ಕಡ್ಡಾಯ.. ಇಲ್ಲದಿದ್ರೆ ನಾಮಪತ್ರ ತಿರಸ್ಕøತಗೊಳ್ಳುತ್ತದೆ.
    * ನಾಮಪತ್ರ ಸಲ್ಲಿಸುವ ಎಸ್.ಸಿ, ಎಸ್.ಟಿ ಅಭ್ಯರ್ಥಿಗಳು ಐದು ಸಾವಿರ ಹಣ ಠೇವಣಿ ಇಡಬೇಕು.
    * ಇತರೆ ವರ್ಗದ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತು ಸಾವಿರ ಡೆಪಾಸಿಟ್ ಹಣ ಕಟ್ಟಬೇಕು.
    * ಅಭ್ಯರ್ಥಿಗಳು ಹೊಸ ಬ್ಯಾಂಕ್ ಅಕೌಂಟ್ ತೆರೆದು, ಅಲ್ಲಿಂದಲೇ ಹಣ ಖರ್ಚು ಮಾಡಬೇಕು.

  • ಬಿಜೆಪಿ 2ನೇ ಪಟ್ಟಿ ಔಟ್- ವಿಶೇಷತೆಗಳು ಏನು? ಯಾರಿಗೆ ಟಿಕೆಟ್ ಇಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

    ಬಿಜೆಪಿ 2ನೇ ಪಟ್ಟಿ ಔಟ್- ವಿಶೇಷತೆಗಳು ಏನು? ಯಾರಿಗೆ ಟಿಕೆಟ್ ಇಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

    ಬೆಂಗಳೂರು: ರಾಜ್ಯ ವಿಧಾಸನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಕ್ಕೆ ಒಂದು ದಿನ ಬಾಕಿ ಇರುವಂತೆ ಬಿಜೆಪಿ ಎರಡನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಬಿಜೆಪಿ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಚಾಮುಂಡೇಶ್ವರಿ, ವರುಣಾ, ವಿರಾಜಪೇಟೆ ಹಾಗೂ ಚಾಮರಾಜಪೇಟೆಗೆ ಅಭ್ಯರ್ಥಿ ಹೆಸರನ್ನು ಪ್ರಕಟಿಸಿಲ್ಲ. ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅಳಿಯ ಹರ್ಷರ್ದನ್, ಬಳ್ಳಾರಿಯಲ್ಲಿ ರೆಡ್ಡಿ, ರಾಮುಲು ಕುಟುಂಬ, 8 ಮಾಜಿ ಸಚಿವರಿಗೆ ಎರಡನೇ ಲಿಸ್ಟ್‍ನಲ್ಲಿ ಟಿಕೆಟ್ ಕೊಡಲಾಗಿದೆ. ಅಲ್ಲದೆ ಕಳಂಕಿತ ಆರೋಪದಡಿ ಕಳೆದ ಬಾರಿ ಟಿಕೆಟ್ ನಿರಾಕರಿಸಿದ್ದ ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಕೃಷ್ಣಯ್ಯ ಶೆಟ್ಟಿಗೂ ಎರಡನೇ ಪಟ್ಟಿಯಲ್ಲಿ ಟಿಕೆಟ್ ಕರುಣಿಸಲಾಗಿದೆ. ಕೊನೆ ಕ್ಷಣದಲ್ಲಿ ಹರತಾಳು ಹಾಲಪ್ಪಗೆ ಟಿಕೆಟ್ ನೀಡಲಾಗಿದೆ. ಮತ್ತೊಂದು ಅಚ್ಚರಿ ಎಂಬಂತೆ ಸಾಗರದಲ್ಲಿ ಬೇಳೂರು ಬದಲಿಗೆ ಹರತಾಳು ಹಾಲಪ್ಪ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

    2ನೇ ಲಿಸ್ಟ್ ನಲ್ಲಿ ಇರುವ ಪ್ರಮುಖರ ಹೆಸರು:

    * ಬಳ್ಳಾರಿ ನಗರ  – ಸೋಮಶೇಖರ ರೆಡ್ಡಿ
    * ಬಳ್ಳಾರಿ ಗ್ರಾ.  – ಫಕೀರಪ್ಪ
    * ಶಿವಾಜಿನಗರ  – ಕಟ್ಟಾ ಸುಬ್ರಮಣ್ಯ ನಾಯ್ಡು
    * ಮಾಲೂರು  – ಕೃಷ್ಣಯ್ಯ ಶೆಟ್ಟಿ
    * ಮಳವಳ್ಳಿ  – ಬಿ. ಸೋಮಶೇಖರ್
    * ಸೊರಬ  – ಕುಮಾರ ಬಂಗಾರಪ್ಪ
    * ಸಾಗರ  – ಹರತಾಳು ಹಾಲಪ್ಪ
    * ಬೀದರ್  – ಸೂರ್ಯಕಾಂತ ನಾಗಮಾರಪಳ್ಳಿ
    * ಹೊನ್ನಾಳ್ಳಿ  – ರೇಣುಕಾಚಾರ್ಯ
    * ಬೀಳಗಿ  – ಮುರುಗೇಶ್ ನಿರಾಣಿ

    ಯಾವ ಪ್ರಮುಖರಿಗೆ ಟಿಕೆಟ್ ಇಲ್ಲ:

        ಕ್ಷೇತ್ರ                                     ಯಾರಿಗೆ ಇಲ್ಲ ..!                                        ಯಾರಿಗೆ ಸಿಕ್ತು..?
    * ತುಮಕೂರು ನಗರ                   – ಸೊಗಡು ಶಿವಣ್ಣ                                          – ಜ್ಯೋತಿ ಗಣೇಶ್
    * ಬ್ಯಾಡಗಿ                                 – ಸುರೇಶ್‍ಗೌಡ ಪಾಟೀಲ್ /ಶಿವರಾಜ್ ಸಜ್ಜನ್     – ವಿರೂಪಕ್ಷಪ್ಪ ಬಳ್ಳಾರಿ
    * ಸಾಗರ                                  – ಬೇಳೂರು ಗೋಪಾಲ ಕೃಷ್ಣ                            – ಹರತಾಳು ಹಾಲಪ್ಪ
    * ಕಲಬರುಗಿ ಉತ್ತರ                   – ಶಶಿಲ್ ನಮೋಶಿ                                          – ಚಂದ್ರಕಾಂತ್ ಬಿ. ಪಾಟೀಲ್
    * ದೇವರ ಹಿಪ್ಪರಗಿ                      – ಮಹದೇವಿ ನಡಹಳ್ಳಿ                                    – ಸೋಮನ್‍ಗೌಡ ಪಾಟೀಲ್
    * ಗದಗ                                    – ಶ್ರೀಶೈಲಪ್ಪ ಬಿದರೂರು                                 – ಅನಿಲ್ ಮೆಣಸಿನಕಾಯಿ
    * ಇಂಡಿ                                    – ರವಿಕಾಂತ್ ಪಾಟೀಲ್                                   – ದಯಾಸಾಗರ್
    * ನವಲಗುಂದ                          – ಮೋಹನ್ ಲಿಂಬಿಕಾಯಿ                                 – ಶಂಕರ್ ಮುನೇನಕೊಪ್ಪ ಪಾಟೀಲ್

    2ನೇ ಪಟ್ಟಿಯಲ್ಲಿನ ಹೊಸಮುಖಗಳು:

    * ನಂಜನಗೂಡು   – ಹರ್ಷವರ್ಧನ್ (ಮಾಜಿ ಶಾಸಕ ಶ್ರೀನಿವಾಸ್ ಪ್ರಸಾದ್ ಅಳಿಯ)
    * ವಿಜಯನಗರ   – ರವೀಂದ್ರ (ಬಿಬಿಎಂಪಿ ಮಾಜಿ ಕಾರ್ಪೊರೇಟರ್)
    * ಗದಗ  – ಅನಿಲ್ ಮೆಣಸಿನಕಾಯಿ
    * ಚಳ್ಳಕೆರೆ   – ಕೆ.ಟಿ ಕುಮಾರಸ್ವಾಮಿ (ಮಾಜಿ ಶಾಸಕ ತಿಪ್ಪೇಸ್ವಾಮಿ ಪುತ್ರ)
    * ಕಲಘಟಗಿ   – ಮಹೇಶ್ ತೆಂಗಿನಕಾಯಿ (ಉದ್ಯಮಿ)

    ಪಕ್ಷಾಂತರಿಗಳಿಗೂ ಬಿಜೆಪಿ ಟಿಕೆಟ್ :

    * ಸೊರಬ – ಕುಮಾರ ಬಂಗಾರಪ್ಪ
    * ಮಹಾಲಕ್ಷ್ಮೀ ಲೇಔಟ್ – ನೆ.ಲ. ನರೇಂದ್ರ ಬಾಬು
    * ನರಸಿಂಹರಾಜ – ಸಂದೇಶ್ ಸ್ವಾಮಿ

    2ನೇ ಪಟ್ಟಿಯಲ್ಲಿನ ವಿಶೇಷತೆಯಾಗಿ ಬಿಜೆಪಿ ಗಂಡ ಹೆಂಡತಿ ಇಬ್ಬರಿಗೂ ಟಿಕೆಟ್ ನೀಡಿದೆ. ಮೊದಲ ಪಟ್ಟಿಯಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಪತ್ನಿ ಶಶಿಕಲಾ ಜೊಲ್ಲೆ ಟಿಕೆಟ್ ಪಡೆದರೆ, 2ನೇ ಪಟ್ಟಿಯಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಟಿಕೆಟ್ ಪಡೆದಿದ್ದಾರೆ.

    ಬಿಜೆಪಿಯ ಮೊದಲ ಮತ್ತು ಎರಡನೇ ಪಟ್ಟಿ ಸೇರಿ ಒಟ್ಟು 152 ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಈ ಪಟ್ಟಿಯಲ್ಲಿ ಹೆಚ್ಚು ಲಿಂಗಾಯತರಿಗೆ ಟಿಕೆಟ್ ನೀಡಲಾಗಿದೆ.

    ಯಾವ ಜಾತಿಯವರಿಗೆ ಎಷ್ಟು ಟಿಕೆಟ್?
    * ಲಿಂಗಾಯತ – 53
    * ಒಕ್ಕಲಿಗ – 27
    * ಎಸ್‍ಸಿ – 21
    * ಎಸ್‍ಟಿ – 13
    * ಒಬಿಸಿ – 21
    * ಬ್ರಾಹ್ಮಣ – 11
    * ರೆಡ್ಡಿ – 04
    * ಜೈನ – 01
    * ಕೊಡವ – 01

  • ಟಿಕೆಟ್ ತಪ್ಪಿದ್ದಕ್ಕೆ ಗೋಳೊ ಅಂತಾ ಗಳಗಳನೇ ಕಣ್ಣೀರಿಟ್ಟ ಬಿಜೆಪಿ ಮಾಜಿ ಎಂಎಲ್‍ಸಿ

    ಟಿಕೆಟ್ ತಪ್ಪಿದ್ದಕ್ಕೆ ಗೋಳೊ ಅಂತಾ ಗಳಗಳನೇ ಕಣ್ಣೀರಿಟ್ಟ ಬಿಜೆಪಿ ಮಾಜಿ ಎಂಎಲ್‍ಸಿ

    ಕಲಬುರಗಿ: ಇಂದು ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಯಾಗಿದೆ. ಪಟ್ಟಿಯಲ್ಲಿ ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ತಪ್ಪಿದ್ದಕ್ಕೆ ಮಾಜಿ ಎಂಎಲ್‍ಸಿ ಶಶೀಲ್ ನಮೋಶಿ ಗಳಗಳನೇ ಅತ್ತಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಲಬುರಗಿ ಉತ್ತರದ ಕ್ಷೇತ್ರದಿಂದ ನನಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆ ಇತ್ತು. ಆದ್ರೆ ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಚಂದ್ರಕಾಂತ್ ಬಿ. ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಎಲ್ಲ ವಿಭಾಗಗಳಲ್ಲಿಯೂ ನಾನು ಸಮರ್ಥ ಅಭ್ಯರ್ಥಿಯಾಗಿದ್ದು, 1992ರಿಂದಲೂ ಪಕ್ಷದಲ್ಲಿದ್ದೇನೆ ಎಂದು ಹೇಳಿ ಭಾವುಕರಾಗಿ ಕಣ್ಣೀರು ಹಾಕಿದರು.

    ಇದಾದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ನಾನು ಯಾರ ವಿರುದ್ಧವೂ ಹೇಳಿಕೆಗಳನ್ನು ನೀಡಲ್ಲ. ಆದ್ರೆ ನನಗೆ ಮೋಸ ಆಗಿದ್ದು ಮಾತ್ರ ಸತ್ಯ. ಬಿಜೆಪಿ ಹೈಕಮಾಂಡ್ ನಡೆಸಿದ ಸರ್ವೆಯಲ್ಲಿ ನನ್ನ ಹೆಸರು ಉಲ್ಲೇಖಿಸಲಾಗಿದೆ ಎಂಬ ಮಾಹಿತಿಗಳು ನನಗೆ ಸಿಕ್ಕಿದ್ದವು. ಬೆಂಬಲಿಗರು ಹಾಗೂ ಕಾರ್ಯಕರ್ತರ ಸಭೆಯನ್ನು ಕೆರೆದು ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

  • ಬಿಜೆಪಿಯ ಎರಡನೇ ಲಿಸ್ಟ್ ಬಿಡುಗಡೆ: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

    ಬಿಜೆಪಿಯ ಎರಡನೇ ಲಿಸ್ಟ್ ಬಿಡುಗಡೆ: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

    ಬೆಂಗಳೂರು: ಒಂದೇ ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಹಿನ್ನಲೆಯಲ್ಲಿ ಬಿಜೆಪಿ ತನ್ನ ಪೊಲಿಟಿಕಲ್ ಗೇಮ್ ಪ್ಲಾನ್ ಬದಲಿಸಿಕೊಂಡಿದ್ದು ಇಂದು ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 82 ಮಂದಿಗೆ ಟಿಕೆಟ್ ಸಿಕ್ಕಿದೆ.

    ರಾಜ್ಯಾಧ್ಯಕ್ಷ , ಸಂಸದರಾದ ಬಿ.ಎಸ್. ಯಡಿಯೂರಪ್ಪ, ಬಿ. ಶ್ರೀರಾಮುಲು, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಈ ಬಾರಿ ಕಣಕ್ಕಿಳಿಯಲಿರುವ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಏಪ್ರಿಲ್ 8ರಂದು ಬಿಡುಗಡೆ ಮಾಡಿತ್ತು.

     

    1. ಚಿಕ್ಕೊಡಿ-ಸದಲಗಾ -ಅಣ್ಣಾ ಸಾಹೇಬ್ ಜೊಲ್ಲೆ
    2. ಗೋಕಾಕ್ -ಅಶೋಕ್ ಪೂಜಾರಿ
    3. ಯಮಕನಮರಡಿ(ಎಸ್.ಟಿ) -ಮಾರುತಿ ಅಷ್ಟಗಿ
    4. ರಾಮದುರ್ಗ -ಮಹದೇವಪ್ಪ ಎಸ್
    5. ತೇರದಾಳ -ಸಿದ್ದು ಸವದಿ
    6. ಜಮಖಂಡಿ -ಶ್ರೀಕಾಂತ್ ಕುಲಕರ್ಣಿ
    7. ಬೀಳಗಿ -ಮುರುಗೇಶ್ ನಿರಾಣಿ
    8. ಬಾಗಲಕೋಟೆ -ವೀರಣ್ಣ ಚರಂತಿಮಠ್
    9. ಹುನಗುಂದ- ದೊಡ್ಡನಗೌಡ ಜಿ.ಪಾಟೀಲ್
    10. ದೇವರಹಿಪ್ಪರಗಿ -ಸೋಮನಗೌಡ ಪಾಟೀಲ್ ಸಾಸನೂರು

    11.ಇಂಡಿ -ದಯಾಸಾಗರ್ ಪಾಟೀಲ್
    12.ಜೇವರ್ಗಿ -ದೊಡ್ಡನಗೌಡ ಪಾಟೀಲ್ ನರಿಬೋಳ
    13.ಯಾದಗಿರಿ-ವೆಂಕಟರೆಡ್ಡಿ ಮುದನಾಳ್
    14.ಗುರುಮಿಟ್ಕಲ್ -ಸಾಯಿಬಣ್ಣ ಬೋರ್ ಬಂಡ
    15.ಸೇಡಂ-ರಾಜಕುಮಾರ್ ತೇಲ್ಕೂರು
    16. ಕಲ್ಬುರ್ಗಿ ಉತ್ತರ-ಚಂದ್ರಕಾಂತ್ ಬಿ.ಪಾಟೀಲ್
    17. ಬೀದರ್ -ಸೂರ್ಯಕಾಂತ್ ನಾಗರಮರಪಲ್ಲಿ
    18. ಭಾಲ್ಕಿ- ಡಿ.ಕೆ.ಸಿದ್ದರಾಮ
    19. ಮಸ್ಕಿ(ಎಸ್.ಟಿ)- ಬಸವನಗೌಡ ತುರಿವಿಹಳ್
    20. ಕನಕಗಿರಿ (ಎಸ್ ಸಿ) – ಬಸವರಾಜ್ ದಡೇಸಾಗೂರ್

    21. ಗಂಗಾವತಿ- ಕರಣ್ಣ ಮುನವಳ್ಳಿ
    22. ಯಲಬುರ್ಗಾ-ಹಾಲಪ್ಪ ಬಸಪ್ಪ ಆಚಾರ್
    23. ಕೊಪ್ಪಳ – ಸಿ.ವಿ.ಚಂದ್ರಶೇಖರ್
    24. ಶಿರಹಟ್ಟಿ (ಎಸ್ ಸಿ)-ರಾಮಣ್ಣ ಲಮಾಣಿ
    25. ಗದಗ -ಅನಿಲ್ ಮೆಣಸಿನಕಾಯಿ
    26. ರೋಣ-ಕಳಕಪ್ಪ ಬಂಡಿ
    27. ನರಗುಂದ- ಸಿ.ಸಿ.ಪಾಟೀಲ್
    28. ನವಲಗುಂದ- ಶಂಕರ್ ಗೌಡ ಪಾಟೀಲ್ ಮುನೇನಕೊಪ್ಪ
    29. ಕಲಘಟಕಿ- ಮಹೇಶ್ ತೆಂಗಿನಕಾಯಿ
    30. ಹಳಯಾಳ-ಸುನಿಲ್ ಹೆಗಡೆ

    31. ಭಟ್ಕಳ್- ಸುನಿಲ್ ನಾಯಕ್
    32. ಯಲ್ಲಾಪುರ-ವಿ.ಎಸ್.ಪಾಟೀಲ್
    33. ಬೈದಗಿ- ವೀರೂಪಾಕ್ಷಪ್ಪ ಬಳ್ಳಾರಿ
    34. ಹಡಗಲಿ (ಎಸ್ ಸಿ) -ಚಂದ್ರನಾಯಕ್
    35. ಹಗರಿಬೊಮ್ಮನಹಳ್ಳಿ (ಎಸ್ ಸಿ)- ನೇಮಿರಾಜ್ ನಾಯಕ್
    36. ಸಿರಗುಪ್ಪ (ಎಸ್ ಟಿ)- ಎಂ.ಎಸ್.ಸೋಮಲಿಂಗಪ್ಪ
    37. ಬಳ್ಳಾರಿ (ಎಸ್ ಟಿ)- ಸಣ್ಣಫಕೀರಪ್ಪ
    38. ಬಳ್ಳಾರಿ ನಗರ- ಜಿ. ಸೋಮಶೇಖರ ರೆಡ್ಡಿ
    39. ಚಳ್ಳಕೆರೆ (ಎಸ್ ಟಿ) -ಕೆ.ಟಿ.ಕುಮಾರಸ್ವಾಮಿ
    40. ಹೊಳಲ್ಕೆರೆ (ಎಸ್ ಸಿ)- ಎಂ.ಚಂದ್ರಪ್ಪ

    41. ಚನ್ನಗಿರಿ- ಮದಾರು ವಿರೂಪಾಕ್ಷಪ್ಪ
    42. ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ
    43. ಶಿವಮೊಗ್ಗ ಗ್ರಾಮಾಂತರ (ಎಸ್ ಸಿ)- ಅಶೋಕ್ ನಾಯಕ್
    44. ತೀರ್ಥಹಳ್ಳಿ – ಆರಗ ಜ್ಞಾನೇಂದ್ರ
    45. ಸೊರಬ – ಕುಮಾರ್ ಬಂಗಾರಪ್ಪ
    46. ಸಾಗರ – ಹರತಾಳ್ ಹಾಲಪ್ಪ
    47. ಬೈಂದೂರು – ಬಿ.ಸುಕುಮಾರ್ ಶೆಟ್ಟಿ
    48. ಕಡೂರು – ಬೆಳ್ಳಿ ಜಯಪ್ರಕಾಶ್
    49. ಚಿಕ್ಕನಾಯಕನಹಳ್ಳಿ – ಜೆ.ಸಿ.ಮಧುಸ್ವಾಮಿ
    50. ತಿಪಟೂರು – ಬಿ.ಸಿ.ನಾಗೇಶ್
    50. ತುರುವೇಕರೆ – ಮಸಾಲೆ ಜಯರಾಂ

    51. ತುಮಕೂರು ನಗರ – ಜಿ.ಬಿ.ಜ್ಯೋತಿ ಗಣೇಶ್
    52. ಕೊರಟಗೆರೆ (ಎಸ್ ಸಿ) – ವೈ.ಹುಚ್ಚಯ್ಯ
    53. ಗುಬ್ಬಿ – ಬೆಟ್ಟಸ್ವಾಮಿ
    54. ಸಿರಾ – ಬಿ.ಕೆ.ಮಂಜುನಾಥ್
    55. ಮಧುಗಿರಿ- ಎಂ.ಆರ್.ಹುಳಿನಾಯ್ಕರ್
    56. ಚಿಕ್ಕಬಳ್ಳಾಪುರ- ಡಾ.ಮಂಜುನಾಥ್
    57. ಬಂಗಾರಪೇಟೆ(ಎಸ್.ಸಿ) – ಬಿ.ಪಿ.ವೆಂಟಕಮುನಿಯಪ್ಪ
    58. ಕೋಲಾರ- ಓಂ ಶಕ್ತಿ ಚಲಪತಿ
    59. ಮಾಲೂರು- ಎಸ್.ಎನ್. ಕೃಷ್ಣಯ್ಯ ಶೆಟ್ಟಿ
    60. ಕೆ.ಆರ್. ಪುರಂ -ನಂದೀಶ್ ರೆಡ್ಡಿ

    61. ಬ್ಯಾಟರಾಯನಪುರ – ಎ. ರವಿ
    62. ಮಹಾಲಕ್ಷ್ಮಿಲೇಔಟ್- ಎನ್.ಎಲ್.ನರೇಂದ್ರಬಾಬು
    63. ಶಿವಾಜಿನಗರ- ಕಟ್ಟಾಸುಬ್ರಮಣ್ಯ ನಾಯ್ಡು
    64. ಶಾಂತಿನಗರ- ವಾಸುದೇವಮೂರ್ತಿ
    65. ವಿಜಯನಗರ- ಹೆಚ್.ರವೀಂದ್ರ
    66. ದೊಡ್ಡಬಳ್ಳಾಪುರ- ಜೆ.ನರಸಿಂಹ ಸ್ವಾಮಿ
    67. ಮಾಗಡಿ- ಹನುಮಂತರಾಜು
    68. ಮಳವಳ್ಳಿ (ಎಸ್.ಸಿ)- ಬಿ.ಸೋಮಶೇಖರ್
    69. ಅರಕಲಗೂಡು- ಹೆಚ್.ಯೋಗಾ ರಮೇಶ್
    70. ಬೆಳ್ತಂಗಡಿ- ಹರೀಶ್ ಪೂಂಜಾ

    71. ಮೂಡಬಿದ್ರಿ- ಉಮಾನಾಥ್ ಕೋಟ್ಯಾನ್
    72. ಬಂಟ್ವಾಳ- ಯು.ರಾಜೇಶ್ ನಾಯಕ್
    73. ಪುತ್ತೂರು- ಸಂಜೀವ್ ಮಠಂದೂರು
    74. ಪಿರಿಯಾಪಟ್ಟಣ- ಎಸ್.ಮಂಜುನಾಥ್
    75. ಹೆಗ್ಗಡದೇವನಕೋಟೆ- ಸಿದ್ದರಾಜು
    76. ನಂಜನಗೂಡು(ಎಸ್.ಸಿ)- ಹರ್ಷವರ್ಧನ
    77. ನರಸಿಂಹರಾಜ- ಎಸ್.ಸತೀಶ್(ಸಂದೇಶ್ ಸ್ವಾಮಿ)
    78. ಹನೂರು- ಡಾ.ಪ್ರೀತಂ ನಾಗಪ್ಪ
    79. ಕೊಳ್ಳೇಗಾಲ- ಜಿ.ಎನ್. ನಂಜುಂಡಸ್ವಾಮಿ
    80. ಚಾಮರಾಜನಗರ -ಪ್ರೊ. ಮಲ್ಲಿಕಾರ್ಜುನಪ್ಪ
    81. ಗುಂಡ್ಲುಪೇಟೆ- ಹೆಚ್.ಎಸ್.ನಿರಂಜನ್ ಕುಮಾರ್

  • ಚಾಮುಂಡೇಶ್ವರಿಯಲ್ಲಿ 50 ಸಾವಿರ ಮತಗಳಲ್ಲಿ ಸಿಎಂ ವಿನ್ ಆಗ್ತಾರೆ: ಎಂ ಬಿ ಪಾಟೀಲ್ ಭವಿಷ್ಯ

    ಚಾಮುಂಡೇಶ್ವರಿಯಲ್ಲಿ 50 ಸಾವಿರ ಮತಗಳಲ್ಲಿ ಸಿಎಂ ವಿನ್ ಆಗ್ತಾರೆ: ಎಂ ಬಿ ಪಾಟೀಲ್ ಭವಿಷ್ಯ

    ವಿಜಯಪುರ: ಮೈಸೂರಿನ ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಲ್ಲಿ ಸಿದ್ದರಾಮಯ್ಯ ಗೆಲುವು ನಿಶ್ಚಿತ ಅಂತ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಸ್ಪರ್ಧೆ ಮಾಡ್ತೀನಿ ಅಂತಾ ಹೇಳಿಲ್ಲ. ನಾವು ಅವರನ್ನು ಒತ್ತಾಯ ಮಾಡಿದ್ವಿ. ಸಿಎಂ ಸಿದ್ದರಾಮಯ್ಯ ಬಾದಾಮಿಯಿಂದ ನಿಂತರೆ ಉತ್ತರ ಕರ್ನಾಟಕ ಅಭ್ಯರ್ಥಿಗಳಿಗೆ ಬಲ ಬರುತ್ತದೆ ಒತ್ತಾಯ ಮಾಡಿದ್ವಿ ಎಂದರು.

    ಎರಡು ಕಡೆ ನಿಂತರೆ ಅಪಪ್ರಚಾರ ಮಾಡೋರು ತುಂಬಾ ಜನ ಇದ್ದಾರೆ. ಅದಕ್ಕೆ ಹೈಕಮಾಂಡ್ ನಿರ್ಧಾರ ಮಾಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್ ನೀಡಿದೆ ಎಂದರು. ನಾಗಠಾಣ ಹಾಲಿ ಶಾಸಕ ರಾಜು ಆಲಗೂರು ಸ್ಪರ್ಧೆ ಮಾಡಲ್ಲ ಅಂತಾ ತಿಳಿಸಿದರು.

    ಹೈ ಕಮಾಂಡ್ ನವರು ರಾಜು ಆಲಗೂರು ಅವರೇ ಸ್ಪರ್ಧೆ ಮಾಡಲು ಹೇಳಿದ್ದಾರೆ. ಆದ್ದರಿಂದಲೇ ಸಿಂದಗಿ ಹಾಗೂ ನಾಗಠಾಣ ಪೆಂಡಿಗ್ ಇಡಲಾಗಿದೆ. ಅಲ್ಲದೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ವೀರಪ್ಪ ಮೊಯ್ಲಿ, ಪರಮೇಶ್ವರ್ ಹಾಗೂ ನಾನು ಸೇರಿ ಒಗ್ಗಟ್ಟಿನ ನಿರ್ಧಾರದಿಂದ ಟಿಕೆಟ್ ಬಿಡುಗಡೆ ಮಾಡಿದ್ದೇವೆ. ಹೀಗಾಗಿ ಟಿಕೆಟ್ ಘೋಷಣೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಸ್ಪಷ್ಟ ಪಡಿಸಿದರು.

  • ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ

    ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ

    ಚಿಕ್ಕಮಗಳೂರು: ಇಂದು ಬೆಳಗ್ಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಕಾಂಗ್ರೆಸ್ ಮುಖಂಡರ  ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಮುರುಳಿ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರಾದ ಸುಬ್ರಹ್ಮಣ್ಯ ಶೆಟ್ಟಿ ಮತ್ತು ಸತೀಶ್ ಎಂಬವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಕೊಪ್ಪದ ತಿಲಕ್ ನಗರದ ಬಳಿ ಇರುವ ಸುಧೀರ್ ಅವರ ಮನೆ ಮೇಲೆ ದಾಳಿ ನಡೆದಿದೆ.

    ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಕೊಪ್ಪದಲ್ಲಿ ಐಟಿ ದಾಳಿ ನಡೆದಿದ್ದು, ಐಟಿ ಅಧಿಕಾರಿಗಳು ಮೂವರು ಕಾಂಗ್ರೆಸ್ ಮುಖಂಡರ ಮನೆಯಲ್ಲಿ ದಾಖಲೆ ಪತ್ರ ಪರಿಶೀಲನೆ ನಡೆಸುತ್ತಿದ್ದಾರೆ.

  • ಕುಚುಕು ಗೆಳೆಯನ ಗೆಲುವಿಗೆ ರಣತಂತ್ರ- ಶೀಘ್ರವೇ ಮೊಳಕಾಲ್ಮೂರು ಕ್ಷೇತ್ರಕ್ಕೆ ಜನಾರ್ದನ ರೆಡ್ಡಿ ಶಿಫ್ಟ್

    ಕುಚುಕು ಗೆಳೆಯನ ಗೆಲುವಿಗೆ ರಣತಂತ್ರ- ಶೀಘ್ರವೇ ಮೊಳಕಾಲ್ಮೂರು ಕ್ಷೇತ್ರಕ್ಕೆ ಜನಾರ್ದನ ರೆಡ್ಡಿ ಶಿಫ್ಟ್

    ಚಿತ್ರದುರ್ಗ: ಇದೂವರೆಗೂ ಮೌನವಾಗಿದ್ದ ಗಣಿಧಣಿ, ಮಾಜಿ ಸಚಿವ ಜನಾರ್ದನರೆಡ್ಡಿ ಗೆಳೆಯ ಶ್ರೀರಾಮುಲು ಗೆಲುವಿಗಾಗಿ ರಣತಂತ್ರ ರೂಪಿಸಲು ಸಜ್ಜಾಗಿದ್ದು, ಮೊಳಕಾಲ್ಮೂರು ಕ್ಷೇತ್ರಕ್ಕೆ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ.

    ಹಾನಗಲ್ ಬಳಿಯ ತೋಟದ ಮನೆಯಲ್ಲಿ ಜನಾರ್ದನರೆಡ್ಡಿ ವಾಸ್ತವ್ಯಕ್ಕೆ ಸಕಲ ಸಿದ್ಧತೆ ನಡೆದಿದೆ. ನುಂಕಿಮಲೆ ಬೆಟ್ಟದ ರಸ್ತೆಯಲ್ಲಿರೋ ಎರಡು ಮಹಡಿಯ ಹವಾ ನಿಯಂತ್ರಿತ ತೋಟದ ಮನೆಗೆ ಸೋಮಶೇಖರ ರೆಡ್ಡಿಯವರಿಂದ ಕೇವಲ 101 ರೂ. ಬಾಡಿಗೆ ಪಡೆದಿರುವ ಡಾ.ವೆಂಕಟೇಶ್, ರಾಜಕೀಯ ವಲಯಕ್ಕೆ ಅಗತ್ಯವಿರುವಂತೆ ಮನೆಯ ಮುಂಭಾಗದಲ್ಲಿ ನೆರಳಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇದನ್ನೂ ಓದಿ: ಕುಚುಕು ಗೆಳೆಯನ ಪರವಾಗಿ ಪ್ರಚಾರಕ್ಕೆ ಬರ್ತಾರಂತೆ ಗಾಲಿ ಜರ್ನಾದನ ರೆಡ್ಡಿ

    ಮೂರ್ನಾಲ್ಕು ದಿನದಲ್ಲಿ ತೋಟದ ಮನೆಗೆ ಜನಾರ್ದನರೆಡ್ಡಿ ಶಿಫ್ಟ್ ಆಗುವ ಸಾಧ್ಯತೆ ಇದೆ. ಜನಾರ್ದನರೆಡ್ಡಿ ಎಂಟ್ರಿಯಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನತ್ತ ಎಲ್ಲರ ಚಿತ್ತ ಸೆಳೆದಿದೆ. ಇದನ್ನೂ ಓದಿ: ಬಿಜೆಪಿಗೂ, ರೆಡ್ಡಿಗೂ ಸಂಬಂಧವಿಲ್ಲ ಅಂದ ಶಾ ಹೇಳಿಕೆಗೆ ಶ್ರೀರಾಮುಲು ಹೀಗಂದ್ರು