Tag: Karnataka Election 2018

  • ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಗಳ ಪಟ್ಟಿ ಬಿಡುಗಡೆ

    ಕಾಂಗ್ರೆಸ್ ಸ್ಟಾರ್ ಕ್ಯಾಂಪೇನರ್ ಗಳ ಪಟ್ಟಿ ಬಿಡುಗಡೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳು ತಮ್ಮ ಪರವಾಗಿ ಚುನಾವಣಾ ಪ್ರಚಾರಕ್ಕಾಗಿ ಸಿನಿಮಾ ನಟ, ನಟಿಯರು, ಪ್ರಚಲಿತ ನಾಯಕರನ್ನು ಕರೆತರುತ್ತಿದ್ದಾರೆ.

    ಕಾಂಗ್ರೆಸ್ ಇಂದು ಕಾಂಗ್ರೆಸ್ ಪರವಾಗಿ ಕ್ಯಾಂಪೇನ್ ಮಾಡುವವರ ಪಟ್ಟಿಯನ್ನು ಪ್ರಕಟ ಮಾಡಿದೆ. ಒಟ್ಟು 40 ಸ್ಟಾರ್ ಗಳು ಈ ಪಟ್ಟಿಯಲ್ಲಿದ್ದಾರೆ. ಗುಲಾಂ ನಬಿ ಆಜಾದ್, ಸುಶೀಲ್ ಕುಮಾರ್ ಶಿಂಧೆ, ಸಚಿನ್ ಪೈಲಟ್, ಚಿರಂಜೀವಿ, ಖುಷ್ಬು, ನವಜೋತ್ ಸಿಂಗ್ ಸಿದ್ದು, ಅಶೋಕ್ ಚೌಹಾಣ್, ಮೊಹಮ್ಮದ್ ಅಜರುದ್ದೀನ್, ಅಶೋಕ್ ಗೆಹ್ಲೋಟ್, ನಗ್ಮಾ, ಪ್ರಿಯಾ ದತ್, ಜ್ಯೋತಿರಾದಿತ್ಯ, ಸುಷ್ಮಿತ್ ದೇವ್, ರೇಣುಕಾ ಚೌಧರಿ, ರಣದೀಪ್ ಸುರ್ಜೆವಾಲಾ, ಒಮ್ಮನ್ ಚಾಂಡಿ, ಅಮಿತ್ ದೇಶ್‍ಮುಖ್, ಧೀರಜ್ ದೇಶ್‍ಮುಖ್, ರಾಜ್ ಬಬ್ಬರ್, ಶಶಿತರೂರ್ ಸ್ಟಾರ್ ಪ್ರಚಾರಕಾರಗಿ ಕರ್ನಾಟಕ ಚುನಾವಣ ರಣರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

    ಇವರೆಲ್ಲ ಜೊತೆ ನಟಿ ಖುಷ್ಬೂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ತೆಲುಗು ನಟ ಚಿರಂಜೀವಿ, ನಟಿ ಮಾಲಾಶ್ರೀ, ಅಂಬರೀಶ್ ಮತ್ತು ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಸಹ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.

  • ಸಿದ್ದರಾಮಯ್ಯರಿಗೆ ಬನಶಂಕರಿ ಆಶೀರ್ವಾದ ದಕ್ಕಲ್ಲ ಅಂದ್ರು ಹೆಚ್‍ಡಿಕೆ

    ಸಿದ್ದರಾಮಯ್ಯರಿಗೆ ಬನಶಂಕರಿ ಆಶೀರ್ವಾದ ದಕ್ಕಲ್ಲ ಅಂದ್ರು ಹೆಚ್‍ಡಿಕೆ

    ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಆಶೀರ್ವಾದ ಸಿಕ್ಕಿಲ್ಲ. ಆದ್ದರಿಂದ ಬನಶಂಕರಿ ದೇವಿಯ ಆಶೀರ್ವಾದ ಪಡೆಯಲು ಬರುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದರು.

    ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಬನಶಂಕರಿ ಆಶೀರ್ವಾದ ಪಡೆಯೋಕೆ ಬರುತ್ತಿದ್ದಾರೆ. ಆದರೆ ಬನಶಂಕರಿ ದೇವಿ ಆಶೀರ್ವಾದ ಕೂಡ ಸಿದ್ದರಾಮಯ್ಯಗೆ ದಕ್ಕೋದಿಲ್ಲ. ಬಾದಾಮಿ ಮತ್ತು ಚಾಮುಂಡೇಶ್ವರಿ ಎರಡು ಕ್ಷೇತ್ರದಲ್ಲಿ ಸಿಎಂಗೆ ಸೋಲು ಖಚಿತ ಎಂದರು.

    ಬಿಎಸ್ ವೈ ಮತ್ತು ಸಿದ್ದರಾಮಯ್ಯ ಮುಂದಿನ ಸಿಎಂ ನಾನೇ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ನಾನು ಸಿಎಂ ಆಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಿಮ್ಮ ಸಮಸ್ಯೆಗೆ ಸ್ಪಂದಿಸಲು ನನ್ನ ಸಿಎಂ ಮಾಡಿ ಜನರ ಮುಂದೆ ಮನವಿ ಮಾಡಿದ್ದೇನೆ. ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದೇನೆ ಎಂದರು.

    ನಮ್ಮ ಅಭ್ಯರ್ಥಿ ಹನುಮಂತ ಮಾವಿನಮರದ ಜನಸಾಮಾನ್ಯರ ಮನಸ್ಸಿನಲ್ಲಿದ್ದಾರೆ ಎಂದ ಹೆಚ್ ಡಿ ಕೆ, ಕಾಂಗ್ರೆಸ್, ಬಿಜೆಪಿಯಲ್ಲಿ ಯಾರೆ ಬಂದರೂ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನು ಬಾದಾಮಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ಕೆಂಪಯ್ಯ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್‍ಡಿಕೆ, ನಮ್ಮ ಅಭ್ಯರ್ಥಿ ಕೆಂಪಯ್ಯ ಜೊತೆ ಸಂಪರ್ಕ ಹೊಂದಿಲ್ಲ. ಹಾಗೇನಾದರೂ ಸಂಪರ್ಕ ಹೊಂದಿದ್ದೆ ಆದರೆ ಅದು ಸಿದ್ದರಾಮಯ್ಯನವರನ್ನು ಮುಗಿಸೋದಕ್ಕೆ ಕೆಂಪಯ್ಯ ಮಾಡಿದ ಪ್ಲಾನ್ ಆಗಿರಬಹುದು. ಕೆಂಪಯ್ಯ ಬಹಳ ಜನರ ಕಥೆ ಮುಗಿಸಿದ್ದಾರೆ ಎಂದು ಖಾರವಾಗಿ ನುಡಿದ್ರು.

  • ಪಬ್ಲಿಕ್ ಟಿವಿ ಸಂದರ್ಶನದಲ್ಲಿ ರಾಜಕೀಯ ರಹಸ್ಯ ಬಿಚ್ಚಿಟ್ಟ ಬಿಎಸ್‍ವೈ

    ಪಬ್ಲಿಕ್ ಟಿವಿ ಸಂದರ್ಶನದಲ್ಲಿ ರಾಜಕೀಯ ರಹಸ್ಯ ಬಿಚ್ಚಿಟ್ಟ ಬಿಎಸ್‍ವೈ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಬ್ಲಿಕ್ ಟಿವಿಗೆ ವಿಶೇಷ ಸಂದರ್ಶನ ನೀಡಿದ್ದು, ಹಲವು ರಾಜಕೀಯ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಕೇಳಿದ ನೇರಾ-ನೇರ ಪ್ರಶ್ನೆಗಳಿಗೆ ಯಡಿಯೂರಪ್ಪ ಉತ್ತರ ನೀಡಿದ್ದಾರೆ.

    ಪ್ರಶ್ನೆ: ಯಡಿಯೂರಪ್ಪ ಬದಲಾಗಿದ್ದಾರೆ?
    ಬಿಎಸ್‍ವೈ: ಇವತ್ತಿನ ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿದ್ದರಿಂದ ಕೋಪವನ್ನು ತೊರೆದು ಶಾಂತ ಸ್ವಭಾವ ಬೆಳಸಿಕೊಂಡಿದ್ದೇನೆ. ನನ್ನ ಸ್ವಭಾವ ಮುಂದಿನ ದಿನಗಳಲ್ಲಿ ಒಳಿತು ಮಾಡಲಿದೆ.

    ಪ್ರಶ್ನೆ: 2013ರ ಚುನಾವಣೆಯ ನೆನಪುಗಳನ್ನು ಮರೆತು ಮತ್ತೆ ಪಕ್ಷಕ್ಕೆ ಯಡಿಯೂರಪ್ಪ ಒಗ್ಗಿಕೊಂಡ್ರಾ?
    ಬಿಎಸ್‍ವೈ: 2013ರಲ್ಲಿ ಐದು ವರ್ಷದ ನಂತರ ಇಂದು ಯಡಿಯೂರಪ್ಪ ಹೀಗೆ ಇರ್ತಾರಾ ಅಂತಾ ಖುದ್ದು ನಾನೇ ಕಲ್ಪನೆ ಮಾಡಿಕೊಂಡಿರಲಿಲ್ಲ. ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನನ್ನ ಮೇಲೆ ಅದಮ್ಯವಾದ ವಿಶ್ವಾಸವನ್ನಿಟ್ಟು ಪಕ್ಷದ ಅಧ್ಯಕ್ಷ ಮತ್ತು ಸಿಎಂ ಅಭ್ಯರ್ಥಿ ಅಂತಾ ಘೋಷಣೆ ಮಾಡಿದ್ರು. ಇಂದು ನಾನು ಅವರ ನಂಬಿಕೆಯನ್ನು ಸತ್ಯಮಾಡಲು ಹೊರಟಿದ್ದೇನೆ.

    ಪ್ರಶ್ನೆ: ಇಂದು ಟಿಕೆಟ್ ಸಿಗದೇ ಅಸಮಾಧಾನಗೊಂಡ ಅಭ್ಯರ್ಥಿಗಳಿಗೆ ನಿಮ್ಮ ಉತ್ತರವೇನು?
    ಬಿಎಸ್‍ವೈ: ಕೆಜೆಪಿ ಬಗ್ಗೆ ಪ್ರಶ್ನೆ ಇಂದು ಹುಟ್ಟಿಕೊಳ್ಳುವುದಿಲ್ಲ. ಕೆಜೆಪಿಯಲ್ಲಿ ಇದ್ದವನಿಗೆ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಾಡಿದ್ದರಿಂದ ಈ ಪ್ರಶ್ನೆ ಬರಲ್ಲ. ಈ ಬಾರಿ ವಿಶೇಷವಾಗಿ ಎರಡ್ಮೂರು ಸಮೀಕ್ಷೆಗಳನ್ನು ನಡೆಸಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ನಾನು ಯೋಚನೆ ಮಾಡಿದ ಹಾಗೆ ಶೇ.90ರಷ್ಟು ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ.

    ಪ್ರಶ್ನೆ: ಇತ್ತೀಚೆಗೆ ಕೆಲವು ಸಮೀಕ್ಷೆಗಳ ಪ್ರಕಾರ ಬಿಜೆಪಿ ನೂರರ ಗಡಿ ದಾಟ್ತಿಲ್ಲ ಯಾಕೆ?
    ಬಿಎಸ್‍ವೈ: ಇಂದು ನಾನು ಹೇಳುತ್ತಿದ್ದೇನೆ ನಮ್ಮದು ಮಿಷನ್ 150. ಈವಾಗ್ಲೂ ನಾವು 150 ಸೀಟ್ ಗೆಲ್ಲುತ್ತೇವೆ. ಇನ್ನೂ ಅಭ್ಯರ್ಥಿಗಳ ಘೋಷಣೆಯಾಗದೇ ಇರುವ ಸ್ಥಿತಿಯಲ್ಲಿ ಸಮೀಕ್ಷೆಗಳು ನಡೆದಿವೆ. ಇದಕ್ಕೆ ಉತ್ತರ ಮೇ 15ರಂದು ಸಿಗಲಿದೆ.

    ಪ್ರಶ್ನೆ: ಈ ಬಾರಿ ಜನರು ಯಡಿಯೂರಪ್ಪ ಅವರಿಗೆ ಮತ ಏಕೆ ನೀಡ್ಬೇಕು?
    ಬಿಎಸ್‍ವೈ: ನಾವು ಅಧಿಕಾರ ಬಂದ ಮೇಲೆ ನಮ್ಮ ಮೊದಲ ಆದ್ಯತೆ ನಾಡಿನ ರೈತರು ಮತ್ತು ನೀರಾವರಿ ಅಭಿವೃದ್ಧಿ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು, ರೈತರ ಜಮೀನಿಗೆ ನೀರಿನ ಸೌಲಭ್ಯ ಒದಗಿಸುವುದು. ಕೈಗಾರಿಕೆಗಳಿಗೆ ವಿದ್ಯುತ್ ಕಡಿಮೆಯಾದ್ರೆ, ರೈತರಿಗೆ 12 ಗಂಟೆ ವಿದ್ಯುತ್ ನೀಡುವುದು ನನ್ನ ಸಂಕಲ್ಪ. ರಾಜ್ಯದ ಜನರು ಸಿದ್ದರಾಮಯ್ಯರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಕಾಂಗ್ರೆಸ್ ನಾಯಕರಲ್ಲಿಯೇ ಹೊಂದಾಣಿಕೆ ಇಲ್ಲ. ಆದ್ರೆ ಸಿಎಂ ಸಿದ್ದರಾಮಯ್ಯ ಎಲ್ಲೆ ನಿಂತ್ರೂ ಸೋಲುವುದು ಗ್ಯಾರಂಟಿ ಅಂದ್ರು.

    ಪ್ರಶ್ನೆ: ವೀರಶೈವ ಲಿಂಗಾಯತ ವಿವಾದ ಬಿಜೆಪಿಗೆ ತಿರುಗು ಬಾಣವಾಗುವ ಸಾಧ್ಯತೆ ಇದೆನಾ?
    ಬಿಎಸ್‍ವೈ: ಇದೂವರೆಗೂ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಇದೂವರೆಗೂ ಯಾರು ಸಹ ಲಿಂಗಾಯತ ಧರ್ಮದ ಬಗ್ಗೆ ಪ್ರಶ್ನೆ ಕೇಳಿಲ್ಲ. ಆದ್ರೆ ಕಾಂಗ್ರೆಸ್ 55 ರಿಂದ 60 ಸೀಟ್ ಮಾತ್ರ ಗೆಲ್ಲಲಿದೆ.

    ಪ್ರಶ್ನೆ: ಜೆಡಿಎಸ್ ಬಗ್ಗೆ ಬಿಜೆಪಿಗೆ ಸಾಫ್ಟ್ ಕಾರ್ನರ್ ಇದೆನಾ?
    ಬಿಎಸ್‍ವೈ: ನಮಗೂ ಜೆಡಿಎಸ್ ಗೂ ಯಾವುದೇ ಸಂಬಂಧವಿಲ್ಲ. ಇತ್ತೀಚೆಗೆ ರಾಹುಲ್ ಗಾಂಧಿ ಜೆಡಿಎಸ್ ಬಗ್ಗೆ ಮಾತನಾಡಿ ಇರುವ ಅಲ್ಪ ಸ್ವಲ್ಪ ಗೌಡ ಸಮುದಾಯದ ಮತಗಳನ್ನು ಕಳೆದುಕೊಂಡಿದ್ದಾರೆ. ಈ ಎರಡು ತಿಂಗಳ ಹಿಂದೆ ಹೆಚ್.ಡಿ.ದೇವೇಗೌಡರು ಮತ್ತು ಹೆಚ್.ಡಿ.ಕುಮಾರಸ್ವಾಮಿ ನನ್ನ ಬಗ್ಗೆ ಏನೇ ಮಾತನಾಡಿದ್ರು ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪ್ರಶ್ನೆ: ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದ್ರೆ ಏನಾಗುತ್ತದೆ?
    ಬಿಎಸ್‍ವೈ: ಇಂದಿನ ಯುವ ಜನತೆ ಪ್ರಧಾನಿಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಸಹಜವಾಗಿಯೇ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ. ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದಷ್ಟು ನಮಗೆ ಲಾಭವಾಗಲಿದೆ. ಮೋದಿ ಪ್ರವಾಸದಿಂದ ಗೆಲ್ಲುವ ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ.

    ಪ್ರಶ್ನೆ: ವಿಧಾನಸಭಾ ಚುನಾವಣೆಗೆ ಶೋಭಾ ಕರಂದ್ಲಾಜೆ ಸ್ಪರ್ಧೆ ಮಾಡ್ತಾರಾ?
    ಬಿಎಸ್‍ವೈ: ಶೋಭಾ ಕರಂದ್ಲಾಜೆ ಸಂಸದೆಯಾಗಿದ್ದು, ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಈ ಬಾರಿ ಕೇವಲ ಸಂಸದರಾಗಿರುವ ನನಗೆ ಮತ್ತು ಶ್ರೀರಾಮುಲು ಅವರಿಗೆ ಮಾತ್ರ ಹೈಕಮಾಂಡ್ ಟಿಕೆಟ್ ನೀಡಿದೆ ಅಂದ್ರು.

  • ಅಂಬರೀಶ್‌ಗೆ ಟಿಕೆಟ್ ಕೊಟ್ಟಿದ್ದೀವಿ, ಅವರು ನಿಂತ್ಕೋಬೇಕು ಅಷ್ಟೇ: ಸಿಎಂ ಸಿದ್ದರಾಮಯ್ಯ

    ಅಂಬರೀಶ್‌ಗೆ ಟಿಕೆಟ್ ಕೊಟ್ಟಿದ್ದೀವಿ, ಅವರು ನಿಂತ್ಕೋಬೇಕು ಅಷ್ಟೇ: ಸಿಎಂ ಸಿದ್ದರಾಮಯ್ಯ

    ಮೈಸೂರು: ನಾನು ಅಂಬರೀಶ್ ಅವರನ್ನು ಭೇಟಿ ಮಾಡುವುದಕ್ಕೆ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಅವರು, ರೆಬಲ್ ಸ್ಟಾರ್ ಅಂಬರೀಶ್‍ಗೆ ಮಂಡ್ಯದ ಬಿ ಫಾರಂ ಕೊಟ್ಟಿದ್ದೀವಿ. ಅವರು ನಿಂತುಕೊಳ್ಳಬೇಕು ಅಷ್ಟೇ. ಅಲ್ಲದೇ ಸ್ಪರ್ಧಿಸೋದು ಬಿಡೋದು ಅವರಿಗೆ ಬಿಟ್ಟಿದ್ದು. ಅಂಬರೀಶ್ ಬಿ ಫಾರಂ ರಿಸೀವ್ ಮಾಡ್ತಿಲ್ಲ ಎಂಬ ವಿಚಾರ ನನಗೆ ಗೊತ್ತಿಲ್ಲ. ಪಕ್ಷದ ಅಧ್ಯಕ್ಷರು ಬಿ ಫಾರಂ ಕೊಡ್ತಾರೆ ಹೊರತು ನಾನಲ್ಲ ಅಂತಾ ಅಂದ್ರು.

    ಇದೇ ವೇಳೆ ಅಂಬರೀಶ್‍ರನ್ನು ಭೇಟಿ ಮಾಡುತ್ತೀರಿ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾನು ಅಂಬರೀಶ್ ಭೇಟಿ ಮಾಡುವುದಿಲ್ಲ. ಯಾರೋ ತಪ್ಪಾಗಿ ಮಾಹಿತಿ ನೀಡಿದ್ದಾರೆ ಎಂದು ಕೋಪದಿಂದ ಹೇಳಿದ್ರು.

  • ಹಣ ಪಡೆದು ಟಿಕೆಟ್ ಬಿಟ್ಟ ಆರೋಪ-  ಬಳ್ಳಾರಿಯಲ್ಲಿ ಆರಂಭವಾಗಿದೆ ಆಣೆ ಪ್ರಮಾಣ ಪಾಲಿಟಿಕ್ಸ್!

    ಹಣ ಪಡೆದು ಟಿಕೆಟ್ ಬಿಟ್ಟ ಆರೋಪ- ಬಳ್ಳಾರಿಯಲ್ಲಿ ಆರಂಭವಾಗಿದೆ ಆಣೆ ಪ್ರಮಾಣ ಪಾಲಿಟಿಕ್ಸ್!

    ಬಳ್ಳಾರಿ: ಇಲ್ಲಿನ ಸಿರಗುಪ್ಪ ಕ್ಷೇತ್ರದಲ್ಲೀಗ ಆಣೆ ಪ್ರಮಾಣ ರಾಜಕೀಯ ಆರಂಭವಾಗಿದೆ. ಶಾಸಕ ಬಿಎಂ ನಾಗರಾಜ್ ಹಣ ಪಡೆದು ಟಿಕೆಟ್ ಬಿಟ್ಟು ಕೊಟ್ಟಿದ್ದಾರೆ ಅನ್ನೋ ಆರೋಪ ಇದೀಗ ಆಣೆ ಪ್ರಮಾಣ ಮಾಡೋ ಲೇವಲ್‍ಗೆ ಹೋಗಿದೆ.

    ಸಿಂದನೂರಿನ ದಡೆಸೂಗೂರು ದರ್ಗಾದಲ್ಲಿ ಶಾಸಕ ನಾಗರಾಜ್ ಮತ್ತು ನಾಗೇಂದ್ರ ಆಣೆ ಪ್ರಮಾಣ ಮಾಡಿದ್ರು. ತಾವು ಹಣ ಪಡೆದಿಲ್ಲ ಅಂತಾ ನಾಗರಾಜ್ ದೇವರ ಮುಂದೆ ಆಣೆ ಮಾಡಿದ್ರೆ, ನಾಗೇಂದ್ರ ತಾವು ಹಣ ಕೊಟ್ಟಿಲ್ಲ ಅಂತ ಪ್ರಮಾಣ ಮಾಡಿದ್ರು.

    ನಾಗೇಂದ್ರ ಸೋದರಳಿಯನಿಗೆ ಟಿಕೆಟ್ ಘೋಷಣೆ ಆದ್ಮೇಲೆ, ಎಂಎಲ್‍ಎ ಬಿಎಂ ನಾಗರಾಜ್ ಟಿಕೆಟ್‍ಗೆ ಪ್ರಯತ್ನಿಸಿದ್ರು. ನಾಗರಾಜ್ ಬೆಂಬಲಿಗರು ಸಿಎಂ ಕಾರ್‍ಗೆ ಮುತ್ತಿಗೆ ಹಾಕಿ ಬೈಯಿಸಿಕೊಂಡಿದ್ರು. ಅವನೇ ಟಿಕೆಟ್ ಬೇಡ ಅಂದಿದ್ದಾನೆ.  ಹೀಗಾಗಿ ಬಿಎಂ ನಾಗರಾಜ್ ಹಣ ಪಡೆದು ಟಿಕೆಟ್ ಬಿಟ್ಟುಕೊಟ್ಟಿದ್ದಾರೆ ಅನ್ನೋ ವದಂತಿ ಹರಡಿತ್ತು.

  • ಇಂದೂ ರಾಜ್ಯದಲ್ಲಿ ನಾಮಿನೇಷನ್ ಭರಾಟೆ – ಉಡುಪಿಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಶಿರೂರು ಶ್ರೀ

    ಇಂದೂ ರಾಜ್ಯದಲ್ಲಿ ನಾಮಿನೇಷನ್ ಭರಾಟೆ – ಉಡುಪಿಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಶಿರೂರು ಶ್ರೀ

    ಬಳ್ಳಾರಿ: ಮೊಳಕಾಲ್ಮೂರಿನಲ್ಲಿ ಸಂಸದ ಶ್ರೀರಾಮುಲು, ಬಳ್ಳಾರಿಯಲ್ಲಿ ಸೋಮಶೇಖರ ರೆಡ್ಡಿ, ಸಣ್ಣ ಫಕ್ಕೀರಪ್ಪ, ಉಡುಪಿಯಲ್ಲಿ ಪಕ್ಷೇತರರಾಗಿ ಶಿರೂಶ್ರೀಗಳು ಸೇರಿದಂತೆ ಹಲವರು ನಾಮಪತ್ರ ಸಲ್ಲಿಸಲಿದ್ದಾರೆ.

    ಶ್ರೀರಾಮುಲು ನಾಮಪತ್ರ ಸಲ್ಲಿಕೆ ವೇಳೆ ಯಡಿಯೂರಪ್ಪ, ಎಂಪಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಜನಾರ್ದನರೆಡ್ಡಿ ಸೇರಿದಂತೆ ಹಲವು ಹಿರಿ ನಾಯಕರು ಉಪಸ್ಥಿತರಿರಲಿದ್ದಾರೆ.

    ಮೊಳಕಾಲ್ಮೂರಿನಲ್ಲಿ ಹೆಲಿಕಾಪ್ಟರ್ ಇಳಿಸಲು ಚುನಾವಣಾಧಿಕಾರಿಗಳು ಇನ್ನೂ ಅವಕಾಶ ನೀಡಿಲ್ಲ. ಇದು ಬಿಜೆಪಿ ನಾಯಕರಿಗೆ ತಲೆಬಿಸಿಯಾಗಿದೆ. ಶ್ರೀರಾಮುಲು ನಾಮಪತ್ರ ಸಲ್ಲಿಕೆಗೆ ಮುನ್ನ ಚಿತ್ರದುರ್ಗದ ಎಲ್ಲಾ ಮಠಗಳಿಗೆ ಭೇಟಿ ನೀಡಲಿದ್ದಾರೆ. ನಂತ್ರ ಸಾವಿರಾರು ಕಾರ್ಯಕರ್ತರ ಜೊತೆ ರೋಡ್ ಶೋ ಮೂಲಕ ಮೊಳಕಾಲ್ಮೂರಿಗೆ ತೆರಳಿ ನಾಮಿನೇಷನ್ ಫೈಲ್ ಮಾಡಲಿದ್ದಾರೆ. ಈ ಮೂಲಕ ಗಲಾಟೆ ಮಾಡಿಸಿದ್ದ ತಿಪ್ಪೇಸ್ವಾಮಿಗೆ ತಿರುಗೇಟು ನೀಡಲಿದ್ದಾರೆ.

    ಶ್ರೀರಾಮುಲು ಬಳ್ಳಾರಿ ನಿವಾಸದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಬೆಳಗ್ಗೆಯಿಂದಲೇ ನಡೆಯುತ್ತಿವೆ.

  • 3ನೇ ಪಟ್ಟಿ ರಿಲೀಸ್ ಬೆನ್ನಲ್ಲೇ ಬಿಜೆಪಿಯಲ್ಲಿ ಬಂಡಾಯದ ಬಿಸಿ- ಕಾಂಗ್ರೆಸ್‍ಗೆ ಬೇಳೂರು, ಕಟಕದೊಂಡ

    3ನೇ ಪಟ್ಟಿ ರಿಲೀಸ್ ಬೆನ್ನಲ್ಲೇ ಬಿಜೆಪಿಯಲ್ಲಿ ಬಂಡಾಯದ ಬಿಸಿ- ಕಾಂಗ್ರೆಸ್‍ಗೆ ಬೇಳೂರು, ಕಟಕದೊಂಡ

    ಬೆಂಗಳೂರು: ಬಿಜೆಪಿಯ ಮೂರನೇ ಪಟ್ಟಿ ರಿಲೀಸ್ ಬೆನ್ನಲ್ಲೇ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭಿನ್ನಮತ ಭುಗಿಲೆದ್ದಿದೆ. ಟಿಕೆಟ್ ವಂಚಿತರು ಪಕ್ಷಕ್ಕೆ ರಾಜೀನಾಮೆ ನೀಡಿ ಜಂಪಿಂಗ್ ಜಪಾಂಗ್ ಎನ್ನುತ್ತಿದ್ದಾರೆ.

    ಸಾಗರ ಟಿಕೆಟ್ ವಂಚಿತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರೋದು ಬಹುತೇಕ ಖಚಿತವಾಗಿದೆ. ನಾಗಠಾಣಾ ಟಿಕೆಟ್ ವಂಚಿತ ವಿಜಯಪುರ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವಿಠಲ ಕಟಕದೊಂಡ ಬಿಜೆಪಿ ತೊರೆದು ಎಂ ಬಿ ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ನಾಗಠಾಣಾದಲ್ಲಿ ಕಾರಜೋಳ ಪುತ್ರನಿಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಬಿಜೆಪಿಯ ಮೂರನೇ ಪಟ್ಟಿ ಬಿಡುಗಡೆ: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?

    ಕಲಬುರ್ಗಿ ಗ್ರಾಮೀಣ ಟಿಕೆಟ್ ಸಿಗದ ಕಾರಣ ಮಾಜಿ ಸಚಿವ ಬೆಳಮಗಿ ಇಂದು ಜೆಡಿಎಸ್ ಸೇರೋ ಸಾಧ್ಯತೆಗಳು ಹೆಚ್ಚಿವೆ. ಬೆಳಮಗಿ ಪುತ್ರಿ ಸುನಿತಾ, ಬಿಜೆಪಿಯಲ್ಲಿ ಟಿಕೆಟ್ ಕೋಟಿ ಕೋಟಿಗೆ ಬಿಕರಿಯಾಗ್ತಿವೆ ಅಂತಾ ಆರೋಪಿಸಿದ್ದಾರೆ. ಇದನ್ನೂ ಓದಿ: ಎಚ್‍ಡಿ ಕುಮಾರಸ್ವಾಮಿ ಪರ ನಟಿ ರಚಿತಾ ರಾಮ್ ಪ್ರಚಾರ

    ಮಾಯಕೊಂಡದಲ್ಲಿ ಮಾಜಿ ಶಾಸಕ ಬಸವರಾಜ ನಾಯ್ಕ್ ಕೂಡ ತೆನೆ ಹೊರಲು ರೆಡಿ ಆಗಿದ್ದಾರೆ. ಬೆಂಗಳೂರಿನ ಪುಲಕೇಶಿನಗರದ ಮಾಜಿ ಶಾಸಕ ಪ್ರಸನ್ನಕುಮಾರ್ ಕಾಂಗ್ರೆಸ್‍ಗೆ ಕೈ ಕೊಟ್ಟು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್‍ಗೆ ಜೈ ಎಂದಿದ್ದಾರೆ. ದೇವೇಗೌಡರ ಸಮ್ಮುಖದಲ್ಲಿ ತೆನೆ ಹೊತ್ತಿದ್ದಾರೆ. ಮಳೆ ಹುಡುಗಿ ಪೂಜಾ ಗಾಂಧಿ ಕೂಡ ಇಂದು ಜೆಡಿಎಸ್ ಸೇರಲಿದ್ದಾರೆ. ಇನ್ನು ನಟಿ ರಚಿತಾರಾಮ್ ಜೆಡಿಎಸ್‍ಗೆ ವೋಟ್ ನೀಡಿ ಅಂತಿದ್ದಾರೆ.

  • ಮಂಡ್ಯದ ಮಳವಳ್ಳಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣ ಸೀಜ್!

    ಮಂಡ್ಯದ ಮಳವಳ್ಳಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣ ಸೀಜ್!

    ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ ರಾತ್ರಿ ಹೈಡ್ರಾಮಾವೊಂದು ನಡೆದಿದೆ. ಎಸ್‍ಬಿಐ ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ.

    ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಶ್ರೀರಂಗಪಟ್ಟಣದ ಎಸ್‍ಬಿಐ ಬ್ಯಾಂಕ್‍ನಿಂದ ಕೆಎ 11, 8489 ನಂಬರಿನ ಐಷರ್ ವಾಹನದಲ್ಲಿ 20 ಕೋಟಿ ಹಣ ತೆಗೆದುಕೊಂಡು ಬ್ಯಾಂಕ್ ಸಿಬ್ಬಂದಿ ಹೊರಟಿದ್ದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿತ್ತು. ಕೂಡಲೇ ವಾಹನ ಹಿಂಬಾಲಿಸಿದ ಜನರು ಮಳವಳ್ಳಿಯ ಎಸ್‍ಬಿಐ ಬ್ಯಾಂಕ್‍ವರೆಗೂ ಬಂದಿದ್ದರು. ಈ ವೇಳೆಗಾಗಲೇ ವಿಷಯ ತಿಳಿದು ನೂರಾರು ಮಂದಿ ಬ್ಯಾಂಕ್ ಮುಂದುಗಡೆ ಜಮಾಯಿಸಿದ್ರು.

    ಹಗಲಲ್ಲಿ ಹಣ ಸಾಗಿಸದೇ ಮಧ್ಯರಾತ್ರಿ ಏಕೆ ಸಾಗಿಸಿದ್ದೀರಾ ಅಂತಾ ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು. ಮಾಜಿ ಶಾಸಕ ಅನ್ನದಾನಿ, ಚುನಾವಣಾಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ರಾತ್ರಿಯೆಲ್ಲಾ 20 ಕೋಟಿ ಹಣದ ಎಣಿಕೆ ಕೂಡ ನಡೆಯಿತು. ನಂತರ ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಿ ಚುನಾವಣಾಧಿಕಾರಿಗಳು ಹಣವನ್ನು ಸೀಜ್ ಮಾಡಿದ್ದಾರೆ.

    ರಾತ್ರಿ ವೇಳೆಯಲ್ಲಿ ಹಣ ಸಾಗಾಟಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಅನ್ನದಾನಿ ಅನುಮಾನ ವ್ಯಕ್ತಪಡಿಸಿದ್ದು, ಬ್ಯಾಂಕ್ ಹೆಸರಲ್ಲಿ ಚುನಾವಣೆ ಖರ್ಚಿಗೆ ಹಣ ವರ್ಗಾವಣೆ ಆಗುತ್ತಿದೆ ಅಂತಾ ಆರೋಪಿಸಿದ್ದಾರೆ.

  • ಅಂಬಿ ಮನವೊಲಿಸಲು ಮುಂದಾದ ಸಿಎಂ-ಮಂಡ್ಯದಿಂದ ಅಂಬರೀಶ್ ಸ್ಪರ್ಧೆ ಮಾಡ್ತಾರಾ?

    ಅಂಬಿ ಮನವೊಲಿಸಲು ಮುಂದಾದ ಸಿಎಂ-ಮಂಡ್ಯದಿಂದ ಅಂಬರೀಶ್ ಸ್ಪರ್ಧೆ ಮಾಡ್ತಾರಾ?

    ಬೆಂಗಳೂರು: ಕೆಲವರು ಬಿ ಫಾರಂ ಸಿಗ್ತಿಲ್ಲ ಅಂತಾ ಒದ್ದಾಡುತ್ತಿದ್ರೆ, ಇತ್ತ ಮಾಜಿ ಶಾಸಕ ಅಂಬರೀಶ್ ಮಾತ್ರ ಬಿ ಫಾರಂ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಮೂಲಗಳ ಪ್ರಕಾರ ಅಂಬರೀಶ್ ಹೆಸರನ್ನು ನಮೂದಿಸದ ಫಾರಂ ಕೇಳ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಏನಿದು ಬಿ ಫಾರಂ? ಫಾರಂ-26 ಏನು?

    ಯಾವುದೇ ಹೇಳಿಕೆ ನೀಡದೇ ತಟಸ್ಥವಾಗಿ ಉಳಿದಿರುವ ಅಂಬರೀಶ್ ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರು ಪ್ರಯತ್ನ ಪಡುತ್ತಿದ್ದಾರೆ. ಅದೇ ರೀತಿ ಬಿಫಾರಂ ನೀಡಲು ಕಾಂಗ್ರೆಸ್ ನಾಯಕರು ಕಸರತ್ತು ಮುಂದುವರೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಫೋನ್ ಮಾಡಿದ್ರೂ, ಸಚಿವ ಕೆಜೆ ಜಾರ್ಜ್ ಅಂಬಿ ಮನೆಗೆ ಹೋಗಿ ಬಿ ಫಾರಂ ತಗೊಳಿ ಅಂದ್ರೂ ತಗೊಂಡಿರಲಿಲ್ಲ. ಸಿಎಂ ಬರ್ಲಿ ಮಾತಾಡ್ತಿನಿ ಅಂತಾ ಹೇಳಿದ್ದರಂತೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇದನ್ನೂ ಓದಿ: ಅಂಬಿ ಸ್ಪರ್ಧೆ: ಮಂಡ್ಯದಲ್ಲಿ ಭಾರೀ ಚರ್ಚೆ ಆಗ್ತಿದೆ 4 ವದಂತಿ

    ಇಂದು ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ನೇರವಾಗಿ ಅಂಬರೀಶ್ ನಿವಾಸಕ್ಕೆ ತೆರಳಲಿದ್ದಾರೆ. ಈ ವೇಳೆ ಸಿಎಂ ಅಂಬರೀಶ್ ಅವರಿಗೆ ಬಿ ಫಾರಂ ತೆಗೆದುಕೊಳ್ಳುವಂತೆ ಮನವೊಲಿಸುವ ಕೆಲಸ ಮಾಡಲಿದ್ದಾರೆ. ಮಂಡ್ಯದಿಂದ ಅಂಬರೀಶ್ ಕಣಕ್ಕಿಳಿತಾರೋ ಇಲ್ವೋ ಅನ್ನೋ ಸಸ್ಪೆನ್ಸ್ ಇನ್ನೂ ಹಾಗೇ ಮುಂದುವರೆದಿದೆ. ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್‍ಗೆ ಹೊಸ ಬೇಡಿಕೆಯಿಟ್ಟ ಮಂಡ್ಯದ ಗಂಡು ಅಂಬರೀಶ್