Tag: Karnataka Election 2018

  • ರಾಜ್ಯ ಚುನಾವಣೆ ಗೆಲ್ಲಲು ‘ವಾರ್ ಡೇಸ್’ ಘೋಷಿಸಿದ ಬಿಜೆಪಿ

    ರಾಜ್ಯ ಚುನಾವಣೆ ಗೆಲ್ಲಲು ‘ವಾರ್ ಡೇಸ್’ ಘೋಷಿಸಿದ ಬಿಜೆಪಿ

    ಬೆಂಗಳೂರು: ಶತಾಗತಯ ಕರ್ನಾಟಕದಲ್ಲಿ ಕಮಲ ಬಾವುಟ ಹಾರಿಸಲು ಪಣತೊಟ್ಟಿರುವ ಬಿಜೆಪಿ ವಾರ್ ಡೇಸ್ ಘೋಷಣೆ ಮಾಡಲಾಗಿದೆ. ಮೇ 1ರಿಂದ 9ರವರೆಗಿನ ಒಂಬತ್ತು ದಿನಗಳನ್ನು ‘ನವದಿನ ಯುದ್ಧ’ವಾಗಿ ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ.

    ಈ ಒಂಬತ್ತು ದಿನಗಳಂದು ಕೇಂದ್ರ ನಾಯಕರು ರಾಜ್ಯದಲ್ಲಿ ಠಿಕಾಣಿ ಹೂಡಲಿದ್ದಾರೆ. ಇತ್ತ ಬಿಜೆಪಿ ಅಧಿಕಾರದಲಿರುವ ನಾಲ್ಕು ರಾಜ್ಯಗಳ ಸಿಎಂಗಳು ಕೂಡ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕದಲ್ಲಿಯೇ ಉಳಿದುಕೊಳ್ಳಲಿದ್ದಾರೆ.

    ಮೇ 1 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, 5 ದಿನ ವಿವಿಧ ಜಿಲ್ಲೆಗಳಲ್ಲಿ ನಡೆಯುವ 15 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ವಿಶೇಷ ಏನೆಂದರೆ ಬೆಂಗಳೂರಿನಲ್ಲಿ ಎರಡು ಬೃಹತ್ ರ್ಯಾಲಿಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ.

    ಯಾವ ದಿನ? ಎಲ್ಲಿ ಕಾರ್ಯಕ್ರಮ?
    ಮೇ 01- ಚಾಮರಾಜನಗರ, ಉಡುಪಿ, ಬೆಳಗಾವಿ
    ಮೇ 03- ಕಲಬುರಗಿ, ಬಳ್ಳಾರಿ, ಬೆಂಗಳೂರು
    ಮೇ 05 – ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ
    ಮೇ 07 – ರಾಯಚೂರು, ಚಿತ್ರದುರ್ಗ, ಕೋಲಾರ
    ಮೇ 08 – ಬಿಜಾಪುರ, ಮಂಗಳೂರು, ಬೆಂಗಳೂರು

  • ಅಂಬರೀಶ್ ಸ್ಥಾನಕ್ಕೆ ಎಂಟ್ರಿ ಕೊಡ್ತಿರೋ ವ್ಯಕ್ತಿ ಯಾರು?

    ಅಂಬರೀಶ್ ಸ್ಥಾನಕ್ಕೆ ಎಂಟ್ರಿ ಕೊಡ್ತಿರೋ ವ್ಯಕ್ತಿ ಯಾರು?

    ಬೆಂಗಳೂರು: ಮಾಜಿ ಸಚಿವ, ಶಾಸಕ ಅಂಬರೀಶ್ ಗೆ ಕಾಂಗ್ರೆಸ್‍ನ ಬಿ ಫಾರಂ ಸಿಕ್ಕರೂ ಅದನ್ನು ಸ್ವೀಕರಿಸದೇ ಪಕ್ಷಕ್ಕೆ ರೆಬಲ್ ಆಗಿ ಉಳಿದುಕೊಂಡಿದ್ದಾರೆ. ಅಂಬರೀಶ್ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಅನುಮಾನ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂಬರೀಶ್ ಸ್ಥಾನಕ್ಕೆ ಯಾರು ಬರುತ್ತಾರೆಂದು ಮಂಡ್ಯದ ಜನರಲ್ಲಿ ತೀವ್ರ ಕೂತುಹೂಲ ಹುಟ್ಟುಹಾಕಿದೆ.

    ಸಿಎಂ ಸಿದ್ದರಾಮಯ್ಯ ಸಹ ಅಂಬರೀಶ್ ಜೊತೆ ಮಾತನಾಡಲು ಮುಂದಾಗದೆ ಮಂಡ್ಯದಲ್ಲಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರಂತೆ. ಮಾಜಿ ಸಚಿವ ಜಯರಾಂ ಪುತ್ರ ಅಶೋಕ್ ಜಯರಾಂ ಅವರನ್ನ ಜೆಡಿಎಸ್ ನಿಂದ ಪಕ್ಷಕ್ಕೆ ಕರೆ ತಂದು ಅಖಾಡಕ್ಕೆ ಇಳಿಸಲು ಕಾಂಗ್ರೆಸ್ ನಾಯಕರುಗಳು ಸಿದ್ಧತೆ ಆರಂಭಿಸಿದ್ದಾರೆ. ಆದ್ರೆ ಅಶೋಕ್ ಜಯರಾಂ ಇನ್ನು ತಮ್ಮ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಿಲ್ಲ.

    ಅಶೋಕ್ ಜಯರಾಂ ಜೊತೆಗೆ ಉಳಿದ ಇಬ್ಬರು ನಾಯಕರ ಜೊತೆ ನೇರವಾಗಿ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ಸಂಪರ್ಕದಲ್ಲಿದ್ದಾರೆ. ಇದೀಗ ಮಂಡ್ಯದಲ್ಲಿ ಅಂಬರೀಶ್ ಇಲ್ಲದಿದ್ದರೆ ಈ ಮೂವರಲ್ಲಿ ಒಬ್ಬರನ್ನ ಅಭ್ಯರ್ಥಿಯಾಗಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಅಂಬಿ ಹೇಳಿದ್ದು ಏನು?
    ಈ ಬಾರಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ಸ್ಪರ್ಧೆ ಬೇಡ ಎಂದು ನಿರ್ಧಾರಕ್ಕೆ ಬಂದಿದ್ದು, ಇಂದು ಸಂಜೆ ವೇಳೆ ಅಧಿಕೃತವಾಗಿ ಈ ವಿಚಾರಕ್ಕೆ ಸ್ಪಷ್ಟನೆ ನೀಡುತ್ತೇನೆ. ನಾನು ಯಾರ ಪರವಾಗಿ ಟಿಕೆಟ್ ಕೇಳುವುದಿಲ್ಲ. ಕೇಳಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನನ್ನದೇ ಆಗುತ್ತದೆ. ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಇನ್ನು, ನಾನು ಪಕ್ಷ ಬಿಡಲ್ಲ. ಯಾವುದೇ ಪಕ್ಷ ಸೇರುವುದಿಲ್ಲ. ಸಿಎಂ ಅವರನ್ನು ಭೇಟಿ ಮಾಡಲು ಆಗುವುದಿಲ್ಲ ಎಂದು ಹೇಳಿ ಬೆಂಗಳೂರಿನತ್ತ ಹೊರಟಿದ್ದಾರೆ ಎಂದು ಹೋಟೆಲ್ ನಲ್ಲಿ ನಡೆದ ಮಾತುಕತೆಯ ಸಾರವನ್ನು ಸಂದೇಶ್ ನಾಗರಾಜ್ ಅವರು ಮಾಧ್ಯಮಗಳಿಗೆ ತಿಳಿಸಿದರು.

    ಈ ಎಲ್ಲಾ ವಿದ್ಯಮಾನಗಳ ಮಧ್ಯೆ, ಅಂಬರೀಶ್ ಅವರೇ ಸ್ಪರ್ಧೆ ಮಾಡಬೇಕು. ಒಂದು ವೇಳೆ ಅಂಬರೀಶ್ ಒಪ್ಪದೇ ಇದ್ದರೆ ಅವರ ಸೂಚನೆಯಂತೆ ನಾನೇ ಸ್ಪರ್ಧೆ ಮಾಡ್ತೇನೆ ಎಂದು ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ತಿಳಿಸಿದ್ದಾರೆ.

  • ಉತ್ತರನ ಪೌರುಷ ಒಲೆ ಮುಂದೆ, ಬಿಜೆಪಿ ಪೌರುಷ ಮಾಧ್ಯಮಗಳ ಮುಂದೆ : ಸಚಿವ ರಾಮಲಿಂಗಾರೆಡ್ಡಿ

    ಉತ್ತರನ ಪೌರುಷ ಒಲೆ ಮುಂದೆ, ಬಿಜೆಪಿ ಪೌರುಷ ಮಾಧ್ಯಮಗಳ ಮುಂದೆ : ಸಚಿವ ರಾಮಲಿಂಗಾರೆಡ್ಡಿ

    ಬೆಂಗಳೂರು: ನರೇಂದ್ರ ಮೋದಿಯವರೇ ಎರಡೆರಡು ಕಡೆ ಸ್ಪರ್ಧಿಸಿದ್ರು. ಆ ಸಂದರ್ಭದಲ್ಲಿ ಮೋದಿಯವರಿಗೆ ಭಯ ಇತ್ತಾ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.

    ಮುಖ್ಯಮಂತ್ರಿ ನಿವಾಸಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು. ಈ ವೇಳೆ ಪ್ರಕಾಶ್ ಜಾವ್ಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಜನ ಸಿಎಂ ಸ್ಪರ್ಧೆ ಮಾಡಿ ಅಂತಾ ಕೇಳಿಕೊಂಡ್ರು. ಹೀಗಾಗಿ ಸಿಎಂ ಬಾದಾಮಿಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಮಾತಾಡುವಾಗ ನೋಡಿಕೊಂಡು ಮಾತಾಡಬೇಕು ಎಂದು ತಿರುಗೇಟು ನೀಡಿದ್ರು.

    ಬಿಜೆಪಿಯಲ್ಲೇ ಭಿನ್ನಮತ ಇದೆ. ಯಡಿಯೂರಪ್ಪ, ಈಶ್ವರಪ್ಪ ಬಡಿದಾಡಿಕೊಂಡಿದ್ರು. ಬಿಜೆಪಿಯಲ್ಲಿರುವಷ್ಟು ಒಳ ಜಗಳ ಬೇರೆಲ್ಲೂ ಇಲ್ಲ. ಬಿಜೆಪಿಯಲ್ಲಿ ಜೈಲಿಗೆ ಹೋಗಿ ಬಂದವರೇ ಹೆಚ್ಚು ಮಂದಿ. ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗೇ ಬಿಜೆಪಿಯವರು ಮಾಧ್ಯಮಗಳ ಮುಂದೆ ಮಾತ್ರ ಮಾತಾಡುತ್ತಾರೆ. ಕರ್ನಾಟಕದಲ್ಲಿ ಮೋದಿ ಹವಾ ಇಲ್ಲ. ಬದಲಾಗಿ ಸಿದ್ದರಾಮಯ್ಯನವರ ಹವಾ ಇದೆ ಎಂದರು.

    ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಆದ್ರೆ ಕಾಂಗ್ರೆಸ್ 50 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಅಂತ ಬೆಂಗಳೂರಿನಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದರು.

  • ಕೊಡಗು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ- `ಕೈ’ ಬಿಡಲು ಪದ್ಮಿನಿ ಪೊನ್ನಪ್ಪ ನಿರ್ಧಾರ

    ಕೊಡಗು ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ- `ಕೈ’ ಬಿಡಲು ಪದ್ಮಿನಿ ಪೊನ್ನಪ್ಪ ನಿರ್ಧಾರ

    ಮಡಿಕೇರಿ: ಕೊಡಗು ಜಿಲ್ಲೆಯ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ವಿರಾಜಪೇಟೆ ಟಿಕೆಟ್ ಕೈ ತಪ್ಪಿದ್ದಕ್ಕೆ ರಾಜ್ಯ ಅರಣ್ಯ ನಿಗಮದ ಉಪಾಧ್ಯಕ್ಷೆಯಾಗಿದ್ದ ಪದ್ಮಿನಿ ಪೊನ್ನಪ್ಪ ಪಕ್ಷದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

    ಕೈ ಅಭ್ಯರ್ಥಿ ಅರುಣ್ ಮಾಚಯ್ಯರನ್ನು ಸೋಲಿಸಲು ನಿರ್ಧರಿಸಿರುವ ಪದ್ಮಿನಿ ಪೊನ್ನಪ್ಪರನ್ನ ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಜಾತ್ಯಾತೀತ ನೆಲೆಗಟ್ಟಿನ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿಸುವ ಸಾಧ್ಯತೆ ಇದೆ.

    ಸುಮಾರು 3 ದಶಕಗಳಿಂದ ಕಾಂಗ್ರೆಸ್‍ನಲ್ಲಿ ಸೇವೆ ಸಲ್ಲಿಸಿದ್ದ ಇವರಿಗೆ ಈ ಬಾರಿಯ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡದಿದ್ದಕ್ಕೆ ಬೇಸರಗೊಂಡು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಶಾಸಕ ವರ್ತೂರ್ ಪ್ರಕಾಶ್ ರನ್ನು ಮಣಿಸಲು ಪಣ- ಕಾಂಗ್ರೆಸ್-ಜೆಡಿಎಸ್ ನಿಂದ ಸಿದ್ಧವಾಗಿದೆ `ಟಾರ್ಗೆಟ್ ವರ್ತೂರು’ ಟೀಂ

    ಶಾಸಕ ವರ್ತೂರ್ ಪ್ರಕಾಶ್ ರನ್ನು ಮಣಿಸಲು ಪಣ- ಕಾಂಗ್ರೆಸ್-ಜೆಡಿಎಸ್ ನಿಂದ ಸಿದ್ಧವಾಗಿದೆ `ಟಾರ್ಗೆಟ್ ವರ್ತೂರು’ ಟೀಂ

    ಕೋಲಾರ: ಚುನಾವಣೆಗೆ ದಿನಗಣನೆ ಆರಂಭವಾಗಿದ್ರೂ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಗೊಂದಲಕ್ಕೆ ಮಾತ್ರ ತೆರೆಬಿದ್ದಿಲ್ಲ. ಈ ಮಧ್ಯೆ ಹಾಲಿ ಶಾಸಕರನ್ನು ಸೋಲಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅತೃಪ್ತರ ತಂಡವೊಂದು ಸಿದ್ಧವಾಗಿದೆ. ಟಾರ್ಗೆಟ್ ವರ್ತೂರು ಅನ್ನೋ ಹೆಸರಲ್ಲಿ ಟೀಂ ಒಂದು ಸಖತ್ ಪ್ಲಾನ್ ಮಾಡುತ್ತಿದೆ.

    ಕೋಲಾರ ವಿಧಾನಸಭಾ ಕ್ಷೇತ್ರ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ಕ್ಷೇತ್ರ, ಮೂರು ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ವಿಚಾರದಿಂದ ಹಿಡಿದು ಬಂಡಾಯದವರೆಗೆ ಕ್ಷೇತ್ರದಲ್ಲಿ ಇನ್ನು ಭಿನ್ನಮತ ಶಮನವಾಗಿಲ್ಲ. ಈ ನಡುವೆ ಕೋಲಾರ ಕ್ಷೇತ್ರದಲ್ಲಿ ಹೊಸದೊಂದು ಆನ್ ಲೈನ್ ಟೀಂ ಸಿದ್ಧವಾಗುತ್ತಿದೆ. ಆ ಟೀಂನ ಅಜೆಂಡಾ ಒಂದೇ ಕೋಲಾರದ ಹಾಲಿ ಶಾಸಕ ವರ್ತೂರ್ ಪ್ರಕಾಶ್ ರನ್ನು ಕೋಲಾರ ಕ್ಷೇತ್ರದಿಂದ ಸೋಲಿಸಬೇಕು ಅನ್ನೋದೆ ಆಗಿದೆ.

    ಇದೇ ಉದ್ದೇಶದೊಂದಿಗೆ ಕಾಂಗ್ರೆಸ್ ಪಕ್ಷದ ಅತೃಪ್ತರು ಹಾಗೂ ಜೆಡಿಎಸ್ ಪಕ್ಷದ ಅತೃಪ್ತರು, ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಬೆಂಬಲಿಗರು ಸೇರಿದಂತೆ ಕೋಲಾರ ಸಂಸದ ಕೆ.ಹೆಚ್.ಮುನಿಯಪ್ಪ ವಿರೋಧಿ ಬಣ ಒಗ್ಗಟ್ಟಾಗಿ ಒಬ್ಬ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಪ್ಲಾನ್ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಘೋಷಣೆ ಮಾಡಿದ ಬೆನ್ನಲ್ಲೇ ಈ ಎಲ್ಲಾ ಅತೃಪ್ತರು ಒಂದಾಗಿದ್ದು, ಪಕ್ಷಾತೀತವಾಗಿ ಒಂದಾಗಿ ಈ ಚುನಾವಣೆಯಲ್ಲಿ ವರ್ತೂರ್ ಪ್ರಕಾಶ್‍ರನ್ನು ಸೋಲಿಸಲು ಮುಂದಾಗಿದ್ದಾರೆ. ಆದರೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಘೋಷಣೆಯಾಗದ ಹಿನ್ನೆಲೆ ಜೆಡಿಎಸ್‍ಗೆ ಬೆಂಬಲಿಸಿ ಚುನಾವಣೆ ಎದುರಿಸುವ ಪ್ಲಾನ್ ಕೂಡಾ ನಡೆದಿದೆ ಎನ್ನಲಾಗಿದೆ.

    ಅತೃಪ್ತರ ಟೀಂ ನಲ್ಲಿ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಎಂಎಸ್‍ಐಎಲ್ ಅಧ್ಯಕ್ಷ ಅನಿಲ್‍ಕುಮಾರ್, ಮಾಜಿ ಸಚಿವ ನಿಸಾರ್ ಅಹಮದ್ ಸೇರಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಟಿಕೆಟ್ ವಂಚಿತರು. ವರ್ತೂರ್ ಪ್ರಕಾಶ್‍ರವರ ವಿರೋಧಿ ಬಣ ಹಾಗೂ ಸಂಸದ ಕೆ.ಹೆಚ್. ಮುನಿಯಪ್ಪರ ವಿರೋಧಿ ಬಣ ಎಲ್ಲರೂ ಒಂದಾಗಿ ಈಗಾಗಲೇ ತಮ್ಮ ತಮ್ಮ ಬೆಂಬಲಿಗರ ಸಭೆಗಳನ್ನು ನಡೆಸಿ ರಣತಂತ್ರ ರೂಪಿಸಿದ್ದಾರೆ. ಮಾತ್ರವಲ್ಲದೆ ಇದಕ್ಕೆ ಪರೋಕ್ಷವಾಗಿ ಉಸ್ತುವಾರಿ ಸಚಿವ ರಮೇಶ್ ಕುಮಾರ್ ಬೆಂಬಲ ಕೂಡ ಇದೆ ಎನ್ನಲಾಗಿದೆ. ಶೀಘ್ರವೇ ಈ ಟೀಂನ ಅಧಿಕೃತ ಅಭ್ಯರ್ಥಿ ಹೆಸರು ಹೊರಬೀಳಲಿದೆ. ಈ ಮಧ್ಯೆ ಶಾಸಕ ವರ್ತೂರ್ ಪ್ರಕಾಶ್ ಮಾತ್ರ ಈ ಬಾರಿ ಗೆಲುವು ನಮ್ಮದೇ ಅನ್ನೋ ಉತ್ಸಾಹದಲ್ಲಿದ್ದಾರೆ.

  • ಸಂಜೆಯೊಳಗೆ ಟಿಕೆಟ್ ಕೊಡಿ, ಇಲ್ಲಾಂದ್ರೆ ನನ್ನ ದಾರಿ ನಂಗೆ- ಹೈಕಮಾಂಡ್ ಗೆ ಬೆಳ್ಳುಬ್ಬಿ ಎಚ್ಚರಿಕೆ

    ಸಂಜೆಯೊಳಗೆ ಟಿಕೆಟ್ ಕೊಡಿ, ಇಲ್ಲಾಂದ್ರೆ ನನ್ನ ದಾರಿ ನಂಗೆ- ಹೈಕಮಾಂಡ್ ಗೆ ಬೆಳ್ಳುಬ್ಬಿ ಎಚ್ಚರಿಕೆ

    ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಮೂರು ದಿನ ಬಾಕಿಯಿದ್ರೂ, ಟಿಕೆಟ್ ಕೈ ತಪ್ಪಿದ ಸಿಟ್ಟು ಶಮನವಾಗಿಲ್ಲ.

    5 ಕೋಟಿ ರೂಪಾಯಿ ಕೊಟ್ಟು ಟಿಕೆಟ್ ಗಿಟ್ಟಿಸಿಕೊಂಡಿದ್ದೇನೆ ಅಂತ ಅಭ್ಯರ್ಥಿ ಸಂಗರಾಜ ದೇಸಾಯಿಯವರೇ ಕಾರ್ಯಕರ್ತರ ಜೊತೆಗೆ ಹೇಳ್ತಿದ್ದಾರೆ ಅಂತ ಟಿಕೆಟ್ ವಂಚಿತ ಮಾಜಿ ಸಚಿವ ಎಸ್‍ಕೆ ಬೆಳ್ಳುಬ್ಬಿ ಆರೋಪಿಸಿದ್ದಾರೆ. ಅಲ್ಲದೇ ಸಂಜೆಯೊಳಗೆ ನನಗೆ ಬಸವನಬಾಗೇವಾಡಿಯಿಂದ ಟಿಕೆಟ್ ಕೊಡಬೇಕು. ಇಲ್ಲಾಂದ್ರೆ ನನ್ನ ಹಾದಿ ನನಗೆ ಅಂತ ಹೈಕಮಾಂಡ್‍ಗೆ ಎಚ್ಚರಿಸಿದ್ದಾರೆ.

    ಇತ್ತ ಮಸ್ಕಿಯಿಂದ ಟಿಕೆಟ್ ವಂಚಿತ ಯಡಿಯೂರಪ್ಪ ಆಪ್ತ ಮಹಾದೇವಪ್ಪಗೌಡ ಕೈ ಹಿಡಿದಿದ್ದು, ಅಳಿಯ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರ ಪ್ರಚಾರ ಮಾಡ್ತಾರೆ. ಮಾಜಿ ಸಂಸದ, ಕುರುಬ ಸಮುದಾಯದ ನಾಯಕ ಕೆ ವಿರುಪಾಕ್ಷಪ್ಪ ಟಿಕೆಟ್ ಸಿಗದ ಸಿಟ್ಟಲ್ಲಿ ಬಿಜೆಪಿ ಬಿಟ್ಟಿದ್ದಾರೆ. ರಾಯಣ್ಣ ಬ್ರಿಗೇಡ್ ಅಧ್ಯಕ್ಷರೂ ಆಗಿರೋ ಅವರು ಸಿಂಧನೂರಿಂದ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಕೆಜೆಪಿಗೆ ಹೋಗದ ಸೇಡಿನಿಂದಾಗಿ ನನಗೆ ಟಿಕೆಟ್ ತಪ್ಪಿಸಿದ್ರು- ಬಿಎಸ್‍ವೈ ವಿರುದ್ಧ ಮಾಜಿಸಚಿವ ಬೆಳಮಗಿ ಗರಂ

    ಸಾಗರ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಗುಡ್‍ಬೈ ಹೇಳಿದ್ದ ಬೇಳೂರು ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ತಾರೆ. ಇನ್ನು ಬಿಜೆಪಿಗೆ ಗುಡ್‍ಬೈ ಹೇಳಿರೋ ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ ಇಂದೇ ಜೆಡಿಎಸ್‍ಗೆ ಹೋಗ್ತಾರೆ ಅನ್ನೋ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಎಟಿಎಂ ಸೇರಬೇಕಿದ್ದ 2 ಕೋಟಿ 19ಲಕ್ಷ ರೂ. ಸೀಜ್ – ಬೆಂಗ್ಳೂರಿನ ಚೆಕ್‍ಪೋಸ್ಟ್ ನಲ್ಲಿ ಜಪ್ತಿ

    ಎಟಿಎಂ ಸೇರಬೇಕಿದ್ದ 2 ಕೋಟಿ 19ಲಕ್ಷ ರೂ. ಸೀಜ್ – ಬೆಂಗ್ಳೂರಿನ ಚೆಕ್‍ಪೋಸ್ಟ್ ನಲ್ಲಿ ಜಪ್ತಿ

    ಬೆಂಗಳೂರು: ಎಟಿಎಂಗೆ ತುಂಬಿಸಲು ಸಾಗಿಸ್ತಿದ್ದ 2 ಕೋಟಿ 19 ಲಕ್ಷ ರೂಪಾಯಿಯನ್ನು ಬೆಂಗಳೂರಿನ ಹಲಸೂರು ಕೆರೆಯ ಬಳಿ ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ.

    ವೈಟ್‍ಫೀಲ್ಡ್‍ನಲ್ಲಿ ಹೆಚ್‍ಡಿಎಫ್‍ಸಿ ಮತ್ತು ಐಸಿಐಸಿಐ ಬ್ಯಾಂಕ್‍ನ ಎಟಿಎಂಗಳಿಗೆ ತುಂಬಿಸಬೇಕಿತ್ತು. ರೈಟರ್ಸ್ ಸೇಫ್ ಗಾರ್ಡ್ಸ್ ಅನ್ನೋ ಸಂಸ್ಥೆಗೆ ಸೇರಿದ ಎಟಿಎಂ ಸಾಗಿಸ್ತಿದ್ದ ವಾಹನದ ದಾಖಲಾತಿಗೂ ಸಾಗಿಸ್ತಿದ್ದವರ ಬಳಿಯಿದ್ದ ದಾಖಲಾತಿಗೂ ವ್ಯತ್ಯಾಸ ಕಂಡುಬಂದಿದೆ. ಇದನ್ನೂ ಓದಿ: ಮಂಡ್ಯದ ಮಳವಳ್ಳಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣ ಸೀಜ್!

    ಸ್ಥಳಕ್ಕೆ ಬಂದ ಮ್ಯಾನೇಜರ್ ಮಧುಸೂದನ್ ನೀಡಿದ ದಾಖಲೆಯಿಂದ ಐಟಿ ಅಧಿಕಾರಿಗಳು ಸಮಾಧಾನಗೊಳ್ಳಲಿಲ್ಲ. ಹೆಚ್ಚುವರಿ ದಾಖಲೆ ಸಲ್ಲಿಸುವಂತೆ ಸೂಚಿಸಿದ್ರು. 24 ಎಟಿಎಂಗಳಿಗೆ ಬೇಕಾದಷ್ಟು ದುಡ್ಡು ಐಟಿ ವಶದಲ್ಲಿದೆ. ಇದನ್ನೂ ಓದಿ: ಅರ್ಧ ಕೋಟಿಗಿಂತಲೂ ಅಧಿಕ ನಗದು ಹಣ, 200 ಗ್ರಾಂ ಬಂಗಾರ ವಶ

    ಕರ್ನಾಟಕ ಎಲೆಕ್ಷನ್‍ನಲ್ಲಿ ಇಲ್ಲಿಯವರೆಗೆ 4 ಕೋಟಿ 13 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ 4 ಕೋಟಿ 3 ಲಕ್ಷ ರೂಪಾಯಿಯಷ್ಟು 2 ಸಾವಿರ ಮತ್ತು ಐನೂರು ರೂಪಾಯಿ ನೋಟೇ ಇದೆ ಅಂತ ಆದಾಯ ತೆರಿಗೆ ಇಲಾಖೆ ಹೇಳಿದೆ. ಎಟಿಎಂಗಳಲ್ಲಿ ಹಣ ಸಿಕ್ತಿಲ್ಲ ಅನ್ನೋವಾಗ ಇಷ್ಟೊಂದು ನೋಟು ಸಿಕ್ಕಿರೋದೇ ಸೋಜಿಗ. ಬೆಂಗಳೂರಲ್ಲಿ 2.47 ಕೋಟಿ ಮತ್ತು ಬಳ್ಳಾರಿಯಲ್ಲಿ 55 ಲಕ್ಷ ರೂಪಾಯಿ ನಗದು ಜಪ್ತಿ ಆಗಿದೆ. ರಾಜ್ಯಾದ್ಯಂತ 1.32 ಕೋಟಿ ರೂಪಾಯಿ ಮೌಲ್ಯದ 4.32 ಕೆ.ಜಿಯಷ್ಟು ಬಂಗಾರ ವಶವಾಗಿದೆ ಎಂದು ಐಟಿ ಇಲಾಖೆ ಹೇಳಿದೆ. ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7ಕೋಟಿ ರೂ. ಮೌಲ್ಯದ ನಕಲಿ ನೋಟು ಪತ್ತೆ- ಓರ್ವನ ಬಂಧನ

  • ಮಂಡ್ಯದಿಂದ ಕಣಕ್ಕೆ ಇಳೀತಾರಾ ರೆಬೆಲ್ ಸ್ಟಾರ್ – ಅಂಬಿ ಜೊತೆಗೆ ಮಾತಾಡ್ತಾರಂತೆ ಮುಖ್ಯಮಂತ್ರಿ

    ಮಂಡ್ಯದಿಂದ ಕಣಕ್ಕೆ ಇಳೀತಾರಾ ರೆಬೆಲ್ ಸ್ಟಾರ್ – ಅಂಬಿ ಜೊತೆಗೆ ಮಾತಾಡ್ತಾರಂತೆ ಮುಖ್ಯಮಂತ್ರಿ

    ಬೆಂಗಳೂರು: ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್‍ಗೆ ಕಾಂಗ್ರೆಸ್ ಮಂಡ್ಯದಿಂದ ಟಿಕೆಟ್ ಕೊಟ್ಟಿದ್ರೂ ಅವರು ಸ್ಪರ್ಧೆ ಮಾಡ್ತಾರಾ ಇಲ್ವಾ ಅನ್ನೋ ಗೊಂದಲ ಇದೆ. ಈ ಹಿನ್ನೆಲೆಯಲ್ಲಿ ಇಂದು ಮೈಸೂರಲ್ಲಿ ಸಿದ್ದರಾಮಯ್ಯ ಅಂಬರೀಶ್ ಅವರನ್ನು ಭೇಟಿ ಮಾಡ್ತಾರೆ.

    ಅಂಬರೀಶ್ ಮಂಡ್ಯದಿಂದ ಸ್ಪರ್ಧೆ ಮಾಡ್ತಾರಾ ಇಲ್ಲವಾ ಎಂಬುದು ಸಿಎಂ ಹಾಗೂ ಅಂಬರೀಶ್ ಭೇಟಿ ನಂತರ ಅಂತಿಮವಾಗಲಿದೆ. ಒಂದು ವೇಳೆ ಅಂಬರೀಶ್ ಅವರು, ನಾನು ಸ್ಪರ್ಧೆ ಮಾಡಲ್ಲ ಅಂದ್ರೆ ನಾಲ್ವರಲ್ಲಿ ಒಬ್ಬರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಮಾಜಿ ಸಚಿವ ಜಯರಾಂ ಪುತ್ರ ಅಶೋಕ್ ಜಯರಾಂ, ಶಿವಣ್ಣ ಚಂದಗಾಲು, ಹೆಚ್.ಬಿ.ರಾಮು, ಡಾ.ಶಂಕರೇಗೌಡರನ್ನ ಕಾಂಗ್ರೆಸ್ ಸಂಪರ್ಕಿಸಿದೆ.

    ಅಶೋಕ್ ಜಯರಾಂರನ್ನು ಕರೆತರುವ ಜವಾಬ್ದಾರಿ ಅಂಬರೀಶ್ ದಾದ್ರೆ ಉಳಿದ ಮೂವರ ಜೊತೆಗೆ ನೇರವಾಗಿ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ಸಂಪರ್ಕದಲ್ಲಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಲ್ಲಿ ಮಾತನಾಡಿದ್ದ ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್, ಅಂಬರೀಶ್ ಎಲೆಕ್ಷನ್‍ಗೆ ನಿಲ್ತಾರೆ, ಅವರು ನಿಂತಿಲ್ಲ ಅಂದ್ರೆ ಟಿಕೆಟ್ ನಂಗೆನೆ. ಭಾನುವಾರ ಎಲ್ಲವೂ ಸರಿಹೋಗುತ್ತೆ ಅಂತ ಹೇಳಿದ್ದರು.


    ಕಾಂಗ್ರೆಸ್ ನಲ್ಲಿ ಈ ಹಿಂದೆ ಘೋಷಿಸಲಾದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆಗೆ ತೀರ್ಮಾನ ಮಾಡಲಾಗಿದೆ. ಮಲ್ಲೇಶ್ವರಂನಲ್ಲಿ ಸಚಿವ ಎಂ ಆರ್ ಸೀತಾರಾಂ ತಮಗೆ ಟಿಕೆಟ್ ಬೇಡ ಎಂದ ಕಾರಣ ವಕೀಲ ದೀವಾಕರ್ ಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ. ಪದ್ಮನಾಭ ನಗರದಿಂದ ಗುರುವಪ್ಪ ನಾಯ್ಡು ಬದಲಿಗೆ ಮಾಜಿ ಸಚಿವ ಎಂ ಶ್ರೀನಿವಾಸ್ ಗೆ ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ತಿಪಟೂರಿನಲ್ಲಿ ಹಾಲಿ ಶಾಸಕ ಷಡಕ್ಷರಿಗೆ ಟಿಕೆಟ್ ಫಿಕ್ಸ್ ಆಗಿದ್ದು. ಜಗಳೂರಿನಲ್ಲಿ ಘೋಷಿತ ಅಭ್ಯರ್ಥಿ ಪುಷ್ಪ ಬದಲಿಗೆ ಹಾಲಿ ಶಾಸಕ ರಾಜೇಶ್ ಗೆ ಟಿಕೆಟ್ ನೀಡಲು ತೀರ್ಮಾನಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

    ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ

    ಬೆಂಗಳೂರು: ಕೆಲವು ಗಂಟೆಗಳ ಮುಂಚೆ ಕಾಂಗ್ರೆಸ್ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವ ಸ್ಟಾರ್ ಪ್ರಚಾಕರ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈಗ ಬಿಜೆಪಿ ಸಹ ತನ್ನ ಪರವಾಗಿ ಪ್ರಚಾರ ಮಾಡಲಿರುವ ಸ್ಟಾರ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದು, ಅಮಿತ್ ಶಾ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಸಿಎಂ ಅಭ್ಯರ್ಥಿಯಾಗಿರುವ ಬಿ.ಎಸ್.ಯಡಿಯೂರಪ್ಪ ಮೂರನೇ ಸ್ಥಾನದಲ್ಲಿದ್ದಾರೆ. ಬಿಜೆಪಿ ನಾಯಕರು ಹಾಗು ಕೇಂದ್ರ ಸಚಿವರು ಸಹ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರೆ.

    ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ಸದಾನಂದ ಗೌಡ, ಅನಂತ್ ಕುಮಾರ್, ನಿರ್ಮಲ ಸೀತಾರಾಮನ್, ಪ್ರಕಾಶ್ ಜಾವ್ಡೇಕರ್, ಪಿಯೂಷ್ ಗೋಯೆಲ್, ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ದೇವೇಂದ್ರ ಫಡ್ನವೀಸ್, ರವಿಶಂಕರ್ ಪ್ರಸಾದ್, ರಾಮ್ ಲಾಲ್, ಮುರುಳೀಧರ್ ರಾವ್, ಪುರಂದರೇಶ್ವರಿ, ಬಿ ಎಲ್ ಸಂತೋಷ್, ಅರುಣ್ ಕುಮಾರ್, ಸ್ಮೃತಿ ಇರಾನಿ, ತಾವರ್ ಚಂದ್ ಗೆಹ್ಲೋಟ್, ಸಾಧ್ವಿ ನಿರಂಜನ ಜ್ಯೋತಿ, ಎನ್.ರವಿಕುಮಾರ್, ಮನೋಜ್ ತಿವಾರಿ, ಹೇಮಾಮಾಲಿನಿ, ಇವರೆಲ್ಲರೂ ಕರ್ನಾಟಕ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ.

    ಇತ್ತ ರಾಜ್ಯ ನಾಯಕರುಗಳಾದ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಪ್ರಹ್ಲಾದ್ ಜೋಷಿ, ಶ್ರೀ ರಾಮುಲು, ಪಿ.ಸಿ.ಮೋಹನ್, ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಶೋಭ ಕರಂದ್ಲಾಜೆ, ಬಿ ಜೆ ಪುಟ್ಟಸ್ವಾಮಿ, ಡಿ ಎಸ್ ವೀರಯ್ಯ, ತಾರಾ ಅನುರಾಧ, ಶೃತಿ ಸಹ ಸ್ಟಾರ್ ಕ್ಯಾಂಪೇನ್ ಲಿಸ್ಟ್ ನಲ್ಲಿದ್ದಾರೆ.

    ನಟಿ ಹಾಗು ಬಿಜೆಪಿ ವಕ್ತಾರೆಯಾದ ಮಾಳವೀಕಾ ಅವಿನಾಶ್ ಮತ್ತು ನಟ ಗಣೇಶ್ ಪತ್ನಿ ಶಿಲ್ಪಾರ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನಮೂದಿಸಲಾಗಿಲ್ಲ.

     

  • ನಾನು ಗೆದ್ದರೆ ಮೋದಿಯನ್ನು ಬೆಂಬಲಿಸುತ್ತೇನೆ- ಶಿರೂರು ಸ್ವಾಮೀಜಿ

    ನಾನು ಗೆದ್ದರೆ ಮೋದಿಯನ್ನು ಬೆಂಬಲಿಸುತ್ತೇನೆ- ಶಿರೂರು ಸ್ವಾಮೀಜಿ

    ಉಡುಪಿ: ಪಕ್ಷೇತರ ಅಭ್ಯರ್ಥಿಯಾಗಿ ಶೀರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳು ಕಣಕ್ಕಿಳಿದು ಉಡುಪಿ ವಿಧಾನಸಭೆ ಕ್ಷೇತ್ರಕ್ಕೆ ರಂಗು ಹಚ್ಚಿದ್ದಾರೆ. ಇವತ್ತು ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಗಳು ಉಮೇದುವಾರಿಕೆ ಸಲ್ಲಿಸಿದ್ರು. ಪಜೇರೋ ಸ್ಪೋರ್ಟ್ಸ್ ಕಾರಲ್ಲಿ ಬಂದು ಸ್ವಾಮೀಜಿ ನಾಮಪತ್ರ ಸಲ್ಲಿಸಿದರು.

    ಶಿರೂರು ಸ್ವಾಮೀಜಿ ಚುನಾವಣಾ ಅಖಾಡಕ್ಕೆ ಇಳಿಯುವ ಮೂಲಕ ಕಣ ಈ ಬಾರಿ ರಂಗೇರಿದೆ. ಮಧ್ಯಾಹ್ನ ಹನ್ನೆರಡೂವರೆ ಗಂಟೆ ಸುಮಾರಿಗೆ ತಾಲೂಕು ಕಚೇರಿಗೆ ಆಗಮಿಸಿದ ಶ್ರೀಗಳು ಚುನಾವಾಧಿಕಾರಿಗಳಿಗೆ ನಾಮಪತ್ರ ನೀಡಿದರು. ಇದಕ್ಕೂ ಮುನ್ನ ಶ್ರೀಗಳು ಕಡಿಯಾಳಿಯ ಮಹಿಷಮರ್ಧಿನಿ ದೇವಸ್ಥಾನಕ್ಕೆ ಭೇಟಿ ಕೊಟ್ರು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

    ಶಿರೂರು ಶ್ರೀ ,ಅಲ್ಲಿಂದ ನೇರ ಕಾರು ಹತ್ತಿ ತಾಲೂಕು ಕಚೇರಿಗೆ ಬಂದರು. ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ಪಜೇರೋ ಸ್ಪೋರ್ಟ್ಸ್  ಕಾರಿನಲ್ಲಿ ಆಗಮಿಸಿದ್ರು. ಈ ಸಂದರ್ಭ ಸ್ವಾಮೀಜಿ ಕೆಲಕಾಲ ಅಸ್ವಸ್ಥರಾದರು. ನಿರ್ಜಲೀಕರ ಶ್ರೀಗಳನ್ನು ಬಾಧಿಸಿತ್ತು.

    ಸುಮಾರು ಐದು ಎಳನೀರು ನೀಡಿ ಸ್ವಾಮೀಜಿಯವರ ಆರೋಗ್ಯ ಸ್ಥಿತಿಯನ್ನು ಶಿಷ್ಯರು ಹತೋಟಿಗೆ ತಂದರು. ಅಸ್ವಸ್ಥರಾಗಿದ್ದರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೊಂಚ ವಿಳಂಬವಾಯ್ತು.

    ಈ ವೇಳೆ ಮಾತನಾಡಿದ ಅವರು ,ನಾನು ಪಕ್ಷೇತರನಾಗಿ ನಾಮಪಪತ್ರ ಸಲ್ಲಿಸ್ತಿದ್ದೇನೆ. ಈಗಾಗಲೇ ಪ್ರಚಾರ ಶುರು ಮಾಡಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಅಂದ್ರು. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಅಂತ ಹೇಳಿದರು.

    ಮೋದಿ ಅಥವಾ ಅಮಿತ್ ಶಾ ಮನವೊಲಿಸಿದ್ರೆ ಈ ಕುರಿತು ಚಿಂತನೆ ನಡೆಸುತ್ತೇನೆ. ಪಕ್ಷೇತರನಾಗಿ ಗೆದ್ದರೆ ಪ್ರಧಾನಿ ಮೋದಿಯವರಿಗೆ ಬೆಂಬಲ ನೀಡ್ತೇನೆ ಅಂತ ಪ್ರತಿಕ್ರಿಯೆ ನೀಡಿದ್ರು. ಉಡುಪಿ ಬಿಜೆಪಿ ಸರಿಯಿಲ್ಲ, ಅದನ್ನು ಸರಿಮಾಡಬೇಕು ಎಂಬ ಇಚ್ಚೆಯೇ ರಾಜಕೀಯ ಪ್ರವೇಶಕ್ಕೆ ಕಾರಣ ಅಂತ ಹೇಳಿದರು.

    ನಾನು 40 ವರ್ಷದ ಬಿಜೆಪಿ ವೋಟರ್. ಎರಡು ಬಾರಿ ಕಾಂಗ್ರೆಸ್ ನ ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿದ್ದು ಬಿಟ್ಟರೆ, ಮತ್ತೆಂದೂ ಕಾಂಗ್ರೆಸ್ ಕಡೆ ಮುಖ ಹಾಕಿಲ್ಲ ಅಂತ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಬಿಜೆಪಿ ಅಭ್ಯರ್ಥಿ ರಘುಪತಿ ಭಟ್ ಬಗ್ಗೆ ಮಾತನಾಡಲ್ಲ ಅಂತ ಹೇಳಿದರು.