Tag: Karnataka Election 2018

  • ಹಿಂದೂ ರಕ್ತ ಹರಿಯುವ ಯಾವೊಬ್ಬ ವ್ಯಕ್ತಿಯೂ ಅನ್ಸಾರಿಗೆ ವೋಟ್ ಹಾಕುವುದಿಲ್ಲ- ಚೈತ್ರಾ ಕುಂದಾಪುರ

    ಹಿಂದೂ ರಕ್ತ ಹರಿಯುವ ಯಾವೊಬ್ಬ ವ್ಯಕ್ತಿಯೂ ಅನ್ಸಾರಿಗೆ ವೋಟ್ ಹಾಕುವುದಿಲ್ಲ- ಚೈತ್ರಾ ಕುಂದಾಪುರ

    ಕೊಪ್ಪಳ: ಹಿಂದೂ ರಕ್ತ ಹರಿಯುವ ಯಾವೊಬ್ಬ ವ್ಯಕ್ತಿಯೂ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿಗೆ ವೋಟ್ ಹಾಕುವುದಿಲ್ಲ ಎಂದು ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ವಾಗ್ದಾಳಿ ನಡೆಸಿದ್ದಾರೆ.

    ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿರೋ ಚೈತ್ರಾ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಗುಡುಗಿದ್ದರು. ಬಿಜೆಪಿ ಮತ್ತು ಸಂಘ ಪರಿವಾರದವರು ಹಿಂದೂಗಳಲ್ಲ ಎಂಬ ಅನ್ಸಾರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇಕ್ಬಾಲ್ ಅನ್ಸಾರಿ ಹಿಂದೂ ಸಮಾಜಕ್ಕೆ ಹೆದರಿದ್ದಾರೆ. ಯಾರ ಮೈಯಲ್ಲಿ ಹಿಂದೂ ರಕ್ತ ಹರಿಯುತ್ತದೆಯೋ ಅವರು ಯಾರು ನಿಮಗೆ ಮತ ಹಾಕುವುದಿಲ್ಲ ಎಂದು ಕಿಡಿಕಾರಿದ್ದಾರೆ.

    ಈ ಬಾರಿ ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿಗೆ ಒಂದೇ ಒಂದು ಹಿಂದೂವಿನ ವೋಟು ಬೀಳುವುದಿಲ್ಲ. ಗಂಗಾವತಿಯಲ್ಲಿ ರಾಮ ಮತ್ತು ಅಲ್ಲಾನ ನಡುವೆ ಯುದ್ಧ ನಡೆಯುತ್ತಿದೆ. ಇಲ್ಲಿ ರಾಮನೇ ಗೆಲ್ಲೋದು. ರಾವಣನ ಜಾಗದಲ್ಲಿ ನೀವು ಇದ್ದೀರಾ, ಈ ಬಾರಿ ರಾವಣನ ಸಂಹಾರ ನಡೆಯಲಿದೆ, ಭಜರಂಗಿಗಳ ಜಾಗದಲ್ಲಿ ಹಿಂದೂ ಕಾರ್ಯಕರ್ತರು ಇದ್ದಾರೆ. ನೀವು ಫೇಕ್ ಹಿಂದೂತ್ವವಾದಿ ಎಂದು ಚೈತ್ರಾ ಕುಂದಾಪೂರ ಆರೋಪಿಸಿದ್ರು.

    ದೀಪ ನಂದಿ ಹೋಗುವ ಮುನ್ನ ಬಹಳ ಉರಿಯುತ್ತದೆ. ಇದೀಗ ಕ್ಷೇತ್ರದಲ್ಲಿ ಇಕ್ಬಾಲ್ ಅನ್ಸಾರಿ ಪರಿಸ್ಥಿತಿಯೂ ಹಾಗೆ ಆಗಿದೆ ಎಂದು ಅನ್ಸಾರಿ ವಿರುದ್ಧ ವಾಗ್ದಾಳಿ ನೆಡೆಸಿದ್ದರು.

    ಈ ಹಿಂದೆ ಆಗಮಿಸಿದ್ದ ವೇಳೆ ಹಿಂದೂಗಳು ಶ್ರೀರಾಮನ ಹೆಸರಲ್ಲಿ ಕೊಲೆ ದರೋಡೆ ಮಾಡುತ್ತಾರೆ ಎಂಬ ಅನ್ಸಾರಿಯ ವಿವಾದಾತ್ಮಕ ಹೇಳಿಕೆಗೂ ಚೈತ್ರಾ ಟಾಂಗ್ ನೀಡಿದ್ದರು. ಇದೀಗ ಮತ್ತೆ ಟಾಂಗ್ ನೀಡಿರೋ ಚೈತ್ರಾ, ನಿಮ್ಮ ಕಾರ್ಯಕರ್ತರು ಧ್ವಜ ಕಟ್ಟುವ ವಿಷಯಕ್ಕೆ ಮಹಿಳೆ ಮೇಲೆ ಹಲ್ಲೆ ಮಾಡಿದಾಗಲೇ ನಿಮ್ಮ ಅಧಃಪತನದ ಕಾಲ ಆರಂಭವಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದವರಿಗೆಲ್ಲ ಇದೇ ಗತಿ ಎಂದು ಚೈತ್ರಾ ತಿರುಗೇಟು ನೀಡಿದ್ದರು.

  • ಕರಾವಳಿಗೆ ಬರಲಿದ್ದಾರೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ

    ಕರಾವಳಿಗೆ ಬರಲಿದ್ದಾರೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ

    ಮಂಗಳೂರು: ಕಾಂಗ್ರೆಸ್ ಪಾಲಿನ ಸ್ಟಾರ್ ಪ್ರಚಾರಕಿ, ಇಂದಿರಾ ಗಾಂಧಿಯ ಪಡಿಯಚ್ಚು ಅಂತಲೇ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಗಾಂಧಿ ಕರಾವಳಿಗೆ ಪ್ರ್ರಚಾರಕ್ಕೆ ಬರುವುದು ಖಚಿತವಾಗಿದೆ.

    ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾರನ್ನು ಅಂತಿಮ ಹಂತದಲ್ಲಿ ಪ್ರಚಾರ ಕಣಕ್ಕಿಳಿಸುವುದು ಖಚಿತವಾಗಿದ್ದು, ಇದೇ ವೇಳೆ ಕರಾವಳಿ ಭಾಗಕ್ಕೂ ಭೇಟಿ ನೀಡಲಿದ್ದಾರೆ. ಮೇ 1ರಿಂದ ಪ್ರಧಾನಿ ನರೇಂದ್ರ ಮೋದಿಯೂ ಪ್ರಚಾರಕ್ಕೆ ಬರಲಿದ್ದು ಈಗಾಗಲೇ ಪ್ರವಾಸ ದಿನಾಂಕ ನಿಗದಿಯಾಗಿದೆ.

    ಬಿಜೆಪಿ ಕೊನೆ ಕ್ಷಣದಲ್ಲಿ ಪ್ರಧಾನಿ ಮೋದಿಯನ್ನು ಪ್ರಚಾರ ಕಣಕ್ಕಿಳಿಸುವ ಮಾದರಿಯಲ್ಲೇ ಕಾಂಗ್ರೆಸ್, ಗಾಂಧಿ ಕುಡಿ ಪ್ರಿಯಾಂಕಾರನ್ನು ಕಣಕ್ಕಿಳಿಸಲು ಸಜ್ಜಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಖಚಿತಪಡಿಸಿದರೂ, ಪ್ರವಾಸ ದಿನಾಂಕ ಮಾತ್ರ ಅಂತಿಮಗೊಂಡಿಲ್ಲ ಎಂದಿದ್ದಾರೆ.

    ಈಗಾಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎರಡು ಸುತ್ತಿನ ಪ್ರಚಾರ ನಡೆಸಿದ್ದಾರೆ. ಇದೇ ಏಪ್ರಿಲ್ 27ರಂದು ಮತ್ತೆ ದಕ್ಷಿಣ ಕನ್ನಡಕ್ಕೆ ಬರಲಿದ್ದು, ಬಂಟ್ವಾಳ ಕ್ಷೇತ್ರದಲ್ಲಿ ಪ್ರಚಾರ ಜಾಥಾ ನಡೆಸಲಿದ್ದಾರೆ. ಆದರೆ, ರಾಹುಲ್ ಗಿಂತಲೂ ಪ್ರಿಯಾಂಕಾ ವಾದ್ರಾ ವರ್ಚಸ್ವಿ ನಾಯಕಿಯಾಗಿದ್ದರಿಂದ ಕರಾವಳಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚು ನಿರೀಕ್ಷೆಯಲ್ಲಿದ್ದಾರೆ.

  • ಪತಿಯ ನಾಮಪತ್ರದ ವೇಳೆ ಪತ್ನಿಗೆ ಗೇಟ್ ಪಾಸ್!

    ಪತಿಯ ನಾಮಪತ್ರದ ವೇಳೆ ಪತ್ನಿಗೆ ಗೇಟ್ ಪಾಸ್!

    – ಕೊರಳಿಗೆ ಹಾರ ಬೀಳುವ ಮುಂಚೆಯೇ ಜಿಗಿದು ಜಿಗಿದು ಸೇಬು ಕಿತ್ಕೊಂಡ ಕಾರ್ಯಕರ್ತರು

    ಬೆಂಗಳೂರು: ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಸಪ್ತಗಿರಿ ಅವರು ನಾಮಿನೇಷನ್ ಸಲ್ಲಿಸುವಾಗ ಪತ್ನಿಗೆ ಒಳಗೆ ಹೋಗಲು ಅವಕಾಶ ನೀಡಲಿಲ್ಲ.

    ನಾನು ನಾಮಿನೇಷನ್ ಸಲ್ಲಿಕೆಗೆ ಬಂದಿದ್ದೆ. ನನ್ನ ಜೊತೆ ಪಿ.ಸಿ ಮೋಹನ್, ತಂದೆ ರಾಮಚಂದ್ರೇಗೌಡ ಸೇರಿದಂತೆ ಇಬ್ಬರು ಬೆಂಬಲಿಗರು ಕೇಂದ್ರದೊಳಗೆ ಬಂದಿದ್ದರು. ಆದರೆ ನನ್ನ ಪತ್ನಿ ಕೊಂಚ ತಡವಾಗಿ ಬಂದು ಒಳಹೋಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸರು ಗೇಟ್‍ನಲ್ಲೆ ತಡೆದಿದ್ದಾರೆ. ನಾನವರ ಪತ್ನಿ ಕಣ್ರೀ ಅಂತಾ ದುಂಬಾಲು ಬಿದ್ದರೂ `ರೂಲ್ಸ್ ಈಸ್ ರೂಲ್ಸ್’ ಅಂತಾ ಹೊರಕಳಿಸಿದ್ದಾರೆ ಎಂದು ಗಾಂಧಿನಗರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ ಹೇಳಿದ್ದಾರೆ.

    ವಿಜಯನಗರದಲ್ಲಿ ಎಂ.ಕೃಷ್ಣಪ್ಪ ನಾಮಪತ್ರ ಸಲ್ಲಿಕೆ ವೇಳೆ ಬೆಂಬಲಿಗರು, ಕೃಷ್ಣಪ್ಪರಿಗೂ ಹಾಗೂ ಮಗ ಪ್ರಿಯಾಕೃಷ್ಣಗೂ ಸೇಬಿನ ಹಾರ ಹಾಕಿದ್ದರು. ಆದರೆ ಸೇಬಿನ ಹಾರ ಅವರ ಕೊರಳಿಗೆ ಬೀಳುವ ಮುಂಚೆ ಕಾರ್ಯಕರ್ತರು ಆಪಲ್ ಕಿತ್ತುಕೊಳ್ಳುವುದಕ್ಕೆ ಸೆಣಸಾಡಿದ್ದಾರೆ. ಅಷ್ಟೇ ಅಲ್ಲದೆ ಕೃಷ್ಣಪ್ಪ ಮತ್ತು ಪ್ರಿಯಾಕೃಷ್ಣ ಕೊರಳಿಗೆ ಎಗರಿ ಎಗರಿ ಸೇಬು ಕಿತ್ತುಕೊಂಡಿದ್ದಾರೆ.

    ಚಾಮರಾಜಪೇಟೆಯ ಅಲ್ತಾಫ್ ಖಾನ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ಬೆಂಬಲಿಗರು ಕೇಂದ್ರದೊಳಗೆ ನುಗ್ಗಲು ಪೊಲೀಸರ ಜೊತೆ ಜಟಾಪಟಿ ನಡೆಸಿದ್ದಾರೆ. ಹೆಬ್ಬಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಸುರೇಶ್ ನಾಮಪತ್ರ ಸಲ್ಲಿಕೆಯಲ್ಲಿ ಮಹಿಳಾಮಣಿಗಳು ಗ್ರೌಂಡ್‍ನಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

  • ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಕಾರ್ ಗೆ ಬೆಂಕಿ- ಸುಟ್ಟು ಕರಕಲಾಯ್ತು ಇನ್ನೋವಾ!

    ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಕಾರ್ ಗೆ ಬೆಂಕಿ- ಸುಟ್ಟು ಕರಕಲಾಯ್ತು ಇನ್ನೋವಾ!

    ಕೋಲಾರ: 2018ರ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗುತ್ತಿದ್ದಂತೆ ಕೋಲಾರದಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ.

    ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಇನ್ನೋವಾ ಕಾರ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಪರಿಣಾಮ ಮನೆಮುಂದೆ ನಿಲ್ಲಿಸಿದ್ದ ಇನ್ನೋವಾ ಹೊತ್ತಿ ಉರಿದಿದೆ. ಜೊತೆಗೆ ಇನ್ನೋವಾ ಕಾರ್ ಪಕ್ಕದಲ್ಲಿದ್ದ ಮತ್ತೊಂದು ಮಾರುತಿ-800 ಕಾರ್ ಗೂ ಬೆಂಕಿ ಆವರಿಸಿ ಎರಡು ಕಾರ್ ಗಳು ಸುಟ್ಟು ಕರಕಲಾಗಿವೆ.

    ಕೋಲಾರ ನಗರದ ಕಠಾರಿಪಾಳ್ಯದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಬಿಜೆಪಿ ಅಭ್ಯರ್ಥಿ ಓಂ ಶಕ್ತಿ ಚಲಪತಿಗೆ ಸೇರಿದ ಇನ್ನೋವಾ ಕಾರ್ ಇದಾಗಿದ್ದು, ಸೋಮವಾರವಷ್ಟೇ ನಾಮಪತ್ರ ಸಲ್ಲಿಕೆ ಮಾಡಿದ್ರು. ಯಾರೋ ಕಿಡಿಗೇಡಿಗಳು ಬೇಕಂತಲೆ ಈ ಕೃತ್ಯವೆಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

    ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದರಾದ್ರು, ಎರಡು ಕಾರ್ ಸಂಪೂರ್ಣವಾಗಿ ಸುಟ್ಟು ಕರಕಾಲಾಗಿವೆ. ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    https://www.youtube.com/watch?v=lVl-4mh01gQ

     

  • ಇಂದು ಸಿದ್ದರಾಮಯ್ಯ, ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಕೆ

    ಇಂದು ಸಿದ್ದರಾಮಯ್ಯ, ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಕೆ

    ಬೆಂಗಳೂರು: ಕನ್ನಡ ನಾಡನ್ನು ಆಳಿದ್ದ ಚಾಲುಕ್ಯರ ರಾಜಧಾನಿ ಬಾದಾಮಿ ಈಗ ಕರ್ನಾಟಕ ಕುರುಕ್ಷೇತ್ರದಲ್ಲಿ ಮತ್ತೊಮ್ಮೆ ಅಕ್ಷರಶಃ ರಾಜಕೀಯ ರಾಜಧಾನಿಯಾಗಿ ಮಾರ್ಪಟ್ಟಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರೋ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸವಾಲೆಸೆದಿರೋ ಸಂಸದ ಶ್ರೀರಾಮುಲು ನಾಮಪತ್ರ ಸಲ್ಲಿಸ್ತಾರೆ.

    ಹುಬ್ಬಳ್ಳಿಯಿಂದ ಹೆಲಿಕಾಪ್ಟರ್‍ನಲ್ಲಿ 12.30ಕ್ಕೆ ಬಾದಾಮಿಗೆ ಬರೋ ಸಿಎಂ ಮೊದಲು ಬನಶಂಕರಿ ದೇವಿಯ ದರ್ಶನ ಪಡೀತಾರೆ. ಅಲ್ಲಿಂದ ಬಾದಾಮಿಯಲ್ಲಿ ಬೃಹತ್ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡ್ತಾರೆ. ಮಧ್ಯಾಹ್ನ 2 ರಿಂದ 2.30ಕ್ಕೆ ಚುನಾವಣಾಧಿಕಾರಿ ಉಮೇದುವಾರಿಕೆ ಸಲ್ಲಿಸ್ತಾರೆ. ಈ ವೇಳೆ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಸಚಿವರು, ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‍ಆರ್ ಪಾಟೀಲ್, ಆಪ್ತ ಸಿಎಂ ಇಬ್ರಾಹಿಂ ಸೇರಿದಂತೆ ದೊಡ್ಡ ದಂಡೇ ಜೊತೆಗಿರಲಿದೆ. ಇದನ್ನೂ ಓದಿ: ರಾಷ್ಟ್ರೀಯ ವಾಹಿನಿಗಳ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ಸ್ಥಿತಿ, ಯಾರಿಗೆ ಎಷ್ಟು ಸ್ಥಾನ?

    ಇತ್ತ ಬೆಳಗ್ಗೆ 11 ಗಂಟೆಗೆ ಬಾದಾಮಿಯ ಬಸವೇಶ್ವರ ವೃತ್ತದಿಂದ ಬೃಹತ್ ರೋಡ್ ಶೋ ಮೂಲಕ ಬಲ ಪ್ರದರ್ಶನ ಮಾಡಲಿರೋ ರಾಮುಲು ಮಧ್ಯಾಹ್ನ 12.30ಕ್ಕೆ ನಾಮಪತ್ರ ಸಲ್ಲಿಸ್ತಾರೆ. ಈ ವೇಳೆ ಮಾಜಿ ಸಿಎಂ ಯಡಿಯೂರಪ್ಪ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಾಗಲಕೋಟೆ ಸಂಸದ ಪಿ ಸಿ ಗದ್ದಿಗೌಡರ್ ಸೇರಿದಂತೆ ಬಿಜೆಪಿ ಗುಂಪೇ ಜೊತೆಗಿರಲಿದೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಬಿಎಸ್‍ವೈ ಮತ್ತು ಸಿದ್ದರಾಮಯ್ಯಗೆ ಇರೋ ವ್ಯತ್ಯಾಸ ಇದೇ: ಸಿಎಂ ಕಾಲೆಳೆದ ಮುರುಳೀಧರ್ ರಾವ್

  • ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

    ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

    ಮೈಸೂರು: ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸಿಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ನಿಲ್ತಾರೆ ಅಂತಾ ಹೇಳಲಾಗುತ್ತಿತ್ತು. ವಿಜಯೇಂದ್ರ ಇಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಸಹ ಮುಂದಾಗಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಬಿಎಸ್‍ವೈ ಪುತ್ರನಿಗೆ ಬಿ ಫಾರಂ ತಪ್ಪಿದೆ.

    ನಂಜನಗೂಡು ಕ್ಷೇತ್ರದಲ್ಲಿ ಇಂದು ಬಿಜೆಪಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿತ್ತು. ಹೆಲಿಕಾಪ್ಟರ್ ನಿಂದ ಬಂದಿಳಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಫೋನ್ ಕಾಲ್ ಬಂದಿತ್ತು. ಹೈಕಮಾಂಡ್ ಒಪ್ಪಿಗೆ ಇಲ್ಲದೇ ವಿಜಯೇಂದ್ರ ನಾಮಪತ್ರವನ್ನು ಸಲ್ಲಿಸುವಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‍ಲಾಲ್ ಬಿಎಸ್‍ವೈಗೆ ಖಡಕ್ ಸೂಚನೆ ನೀಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.

    ನಾವು ಪಟ್ಟಿ ಫೈನಲ್ ಮಾಡುವರೆಗೂ ನಿಮ್ಮ ಪುತ್ರ ನಾಮಪತ್ರವನ್ನು ಸಲ್ಲಿಸಬಾರದು. ಒಂದು ವೇಳೆ ನೀವು ಬಿ ಫಾರಂ ಕೊಟ್ಟರೂ, ನಾವು ಸಿ ಫಾರಂ ಕೊಡುತ್ತೇವೆ ಎಂದು ಕರೆ ಮಾಡಿ ತಿಳಿಸಿದ್ದಾರೆ.

    ರಾಮ್‍ಲಾಲ್ ಅವರ ಕರೆ ಬರುತ್ತಿದ್ದಂತೆ ಸಮಾವೇಶದಲ್ಲಿ ವರುಣಾ ಕ್ಷೇತ್ರದಿಂದ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಲಾಗುವುದು ಅಂತಾ ಯಡಿಯೂರಪ್ಪ ಘೋಷಣೆ ಮಾಡಿದ್ರು. ಯಡಿಯೂರಪ್ಪ ಹೇಳಿಕೆ ನೀಡುತ್ತಿದ್ದಂತೆ ಕಾರ್ಯಕರ್ತರೆಲ್ಲಾ ಆಕ್ರೋಶಗೊಂಡು ವಿಜಯೇಂದ್ರ ಅವರನ್ನು ಮುತ್ತಿಗೆ ಹಾಕಿದ್ರು.

    ರಾಮ್‍ಲಾಲ್ ಕರೆ ಮಾಡಿರುವ ವಿಚಾರ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಹ ತಿಳಿದಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿದೆ. ನಂಜನಗೂಡಿನಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆಗೆ ಅಮಿತ್ ಶಾ ವರದಿಯನ್ನು ಕೇಳಿದ್ದಾರೆ ಎನ್ನಲಾಗಿದೆ.

    ಷಡ್ಯಂತ್ರ: ಬಿ.ಎಸ್.ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಆರ್‍ಎಸ್‍ಎಸ್ ನಾಯಕರು ಹೈಕಮಾಂಡ್ ಮೂಲಕ ನಾಮಪತ್ರ ಸಲ್ಲಿಸಬಾರದೆಂದು ಹೇಳಿಸಿತಾ ಅಥವಾ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ನಡೆಸಿದ ಷಡ್ಯಂತ್ರಕ್ಕೆ ವಿಜಯೇಂದ್ರ ಬಲಿಯಾದ್ರಾ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಈಗ ಹರಿದಾಡುತಿದ್ದು, ಕೊನೆ ಗಳಿಗೆಯಲ್ಲಿ ಈ ಬದಲಾವಣೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈಗ ರಾಜ್ಯ ನಾಯಕರು ಉತ್ತರ ನೀಡಬೇಕಿದೆ. ಇದನ್ನೂ ಓದಿ: ಆರ್‍ಎಸ್‍ಎಸ್ ವರ್ಸಸ್ ಯಡಿಯೂರಪ್ಪ: ಆಕ್ರೋಶಕ್ಕೆ ತಿರುಗಿದ ಬಿಜೆಪಿ ಭಿನ್ನಮತ

  • ನನ್ನ ಬಗ್ಗೆ ಮಾತಾಡಿದ್ರೆ ಹಳ್ಳಿ ಜನರು ನಿನ್ನನ್ನು ಚಪ್ಪಲಿಯಲ್ಲಿ ಹೊಡಿತಾರೆ: ಶಾಸಕ ಅನ್ಸಾರಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಗುಡುಗು

    ನನ್ನ ಬಗ್ಗೆ ಮಾತಾಡಿದ್ರೆ ಹಳ್ಳಿ ಜನರು ನಿನ್ನನ್ನು ಚಪ್ಪಲಿಯಲ್ಲಿ ಹೊಡಿತಾರೆ: ಶಾಸಕ ಅನ್ಸಾರಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಗುಡುಗು

    ಕೊಪ್ಪಳ: ಮುಂದಿನ ದಿನಗಳಲ್ಲಿ ನನ್ನ ಬಗ್ಗೆ ಮಾತಾಡಿದ್ರೆ ಹಳ್ಳಿಯ ಜನರು ನಿನ್ನನ್ನು ಚಪ್ಪಲಿ ತಗೊಂಡು ಹೊಡೀತಾರೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕರಿಯಣ್ಣ ಸಂಗಟಿ ಏಕವಚನದಲ್ಲಿಯೇ ಗುಡುಗಿದ್ದಾರೆ.

    ಕೊಪ್ಪಳದ ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಇಕ್ಬಾಲ್ ಅನ್ಸಾರಿ, ಎರಡು ದಿನದ ಹಿಂದೆ ಸುದ್ದಿಗೋಷ್ಠಿ ಕರೆದು ಗಂಗಾವತಿಯ ಜೆಡಿಎಸ್ ಅಭ್ಯರ್ಥಿಯಾದ ಕರಿಯಣ್ಣ ಸಂಗಟಿ ಒಬ್ಬ ಅಮಾಯಕ, ಜೆಡಿಎಸ್ ಪಕ್ಷಕ್ಕೆ ಬಲಿಯಾಗೋಕೆ ಬಂದಿದ್ದಾನೆ ಎಂದು ಅಪಹಾಸ್ಯ ಮಾಡಿದ್ದರು. ಇಕ್ಬಾಲ್ ಅನ್ಸಾರಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಸಂಗಟಿ ಇನ್ನೊಂದು ಸಲ ನನ್ನ ಬಗ್ಗೆ ಈ ರೀತಿ ಮಾತಾಡಿದ್ರೆ ಕ್ಷೇತ್ರದ ಜನರೇ ಬುದ್ದಿ ಕಲಿಸ್ತಾರೆ ಅಂತಾ ತಿರುಗೇಟು ನೀಡಿದ್ದಾರೆ.

    ಕ್ಷೇತ್ರದಲ್ಲಿ ನನಗೆ ಜನ ಬೆಂಬಲವಿದೆ. ಮುಂದಿನ ದಿನಗಳಲ್ಲಿ ಜನರು ನನಗೆ ಆಶೀರ್ವಾದ ಮಾಡ್ತಾರೆ. ಆದ್ರೆ ನಿನ್ನ ಬಾಯಿಂದ ಬರೋ ಶಬ್ಧಗಳೇ ನಿನ್ನ ಸೋಲಿಗೆ ಕಾರಣವಾಗುತ್ತದೆ ಎಂದು ಅನ್ಸಾರಿ ಅವರಿಗೆ ಎಚ್ಚರಿಕೆ ನೀಡಿದರು.

  • ‘ಇದು ಹಿಂದೂ ಮನೆ, ಕಾಂಗ್ರೆಸ್ಸಿಗರಿಗೆ ಮತವಿಲ್ಲ’- ಮನೆಗಳ ಮುಂದೆ ಬೋರ್ಡ್ ಹಾಕಿಕೊಂಡ ಗ್ರಾಮಸ್ಥರು

    ‘ಇದು ಹಿಂದೂ ಮನೆ, ಕಾಂಗ್ರೆಸ್ಸಿಗರಿಗೆ ಮತವಿಲ್ಲ’- ಮನೆಗಳ ಮುಂದೆ ಬೋರ್ಡ್ ಹಾಕಿಕೊಂಡ ಗ್ರಾಮಸ್ಥರು

    ಮಂಗಳೂರು: ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಮತಕ್ಕಾಗಿ ಏನೆಲ್ಲ ಕಸರತ್ತು ಮಾಡೋದನ್ನು ನೋಡಿದ್ದೀವಿ. ಆದರೆ ಇಲ್ಲೊಂದು ಗ್ರಾಮದಲ್ಲಿ ಊರಿನ ಜನರೇ ಒಂದು ಪಕ್ಷದ ನಾಯಕರಿಗೆ ಬಹಿಷ್ಕಾರ ಹಾಕಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನ್ಯಾನ ಗ್ರಾಮದಲ್ಲಿ 200ಕ್ಕಿಂತಲೂ ಹೆಚ್ಚು ಹಿಂದೂಗಳ ಮನೆಯ ಗೋಡೆ ಮೇಲೆ ಕಾಂಗ್ರೆಸ್ ನಾಯಕರಿಗೆ ಪ್ರವೇಶವಿಲ್ಲ ಅನ್ನುವ ವಿಚಿತ್ರ ಬೋರ್ಡ್ ಹಾಕಲಾಗಿದೆ.

    ಬೋರ್ಡ್ ನಲ್ಲಿ ಏನು ಬರೆಯಲಾಗಿದೆ?: ಇದು ಹಿಂದೂಗಳ ಮನೆ, ಗಣ್ಯಶ್ರೀ ಎಂಬ ಹೆಣ್ಮಗಳನ್ನು ಕಪಟ ಪ್ರೇಮದಿಂದ ಮತಾಂತರ ಮಾಡಲು ಬೆಂಬಲಿಸಿದ ಕಾಂಗ್ರೆಸಿಗರಿಗೆ ಈ ಮನೆಗೆ ಪ್ರವೇಶವಿಲ್ಲ. ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ ಎಂಬ ಎಚ್ಚರಿಕೆಯ ಫಲಕವನ್ನು ಮನೆ ಮುಂದಿನ ಗೋಡೆಯಲ್ಲಿ ನೇತು ಹಾಕಲಾಗಿದೆ.

    ಒಂದು ವರ್ಷದ ಹಿಂದೆ ಗಣ್ಯಶ್ರೀ ಎಂಬ ಯುವತಿಯನ್ನು ಪ್ರೀತಿಸುವ ನಾಟಕವಾಡಿ ಅನ್ಯಮತೀಯ ಯುವಕನೊಬ್ಬ ಕೊನೆಗೆ ಮತಾಂತರ ಮಾಡಿದ್ದ. ಈ ಪ್ರಕರಣದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರು ಯುವಕನಿಗೆ ಸಹಾಯ ಮಾಡಿದ್ದರೆನ್ನಲಾಗಿದ್ದು, ಇದೀಗ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಹಿಂದೂ ಕುಟುಂಬಗಳು ಕಾಂಗ್ರೆಸ್ ನಾಯಕರಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ಕೇರಳದಲ್ಲಿರೋ ಮನೆಗಳಲ್ಲಿ ‘ನಮ್ಮ ಮನೆಗಳಲ್ಲಿ ಹೆಣ್ಮಕ್ಕಳಿದ್ದಾರೆ, ಬಿಜೆಪಿ ನಾಯಕರಿಗೆ ಪ್ರವೇಶ ಇಲ್ಲ’ ಅನ್ನೋ ಪತ್ರ ಅಂಟಿಸಿದ್ದು ವೈರಲ್ ಆಗಿತ್ತು. ಈಗ ಹಿಂದೂಗಳ ಮನೆಗೆ ಕಾಂಗ್ರೆಸ್ ನಾಯಕರು ಬರುವಂತಿಲ್ಲ ಅನ್ನುವ ಎಚ್ಚರಿಕೆ ನೋಟಿಸ್ ಅಂಟಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

  • ಬಿಜೆಪಿಗೆ ಶಾಕ್ ನೀಡಿದ ಹಿಂದೂ ಸಂಘಟನೆಗಳು

    ಬಿಜೆಪಿಗೆ ಶಾಕ್ ನೀಡಿದ ಹಿಂದೂ ಸಂಘಟನೆಗಳು

    ದಾವಣಗೆರೆ: ಹಿಂದೂ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳು ಬಿಜೆಪಿಗೆ ಸೆಡ್ಡು ಹೊಡೆದಿವೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಟ್ಟು 90ರಿಂದ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಅಂತಾ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ರಾಜು ಹೇಳಿದ್ದಾರೆ.

    ಈಗಾಗಲೇ ಎಲ್ಲ ಹಿಂದೂ ಸಂಘಟನೆಗಳಿಂದ 90 ರಿಂದ 100 ಜನ ಅಭ್ಯರ್ಥಿಗಳು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಎಲ್ಲ ಹಿಂದೂ ಸಂಘಟನೆಗಳು ಬಿಜೆಪಿಗೆ ಬೆಂಬಲ ನೀಡಿದ್ದವು. ಇಂದು ಕೇಂದ್ರದಲ್ಲಿ ಬಿಜೆಪಿ ಬರೋದಕ್ಕೆ ನಮ್ಮೆಲ್ಲರ ಶ್ರಮವಿದೆ. ಆ ಶ್ರಮಕ್ಕೆ ತಕ್ಕ ಪ್ರತಿಫಲ ಮಾತ್ರ ದೊರೆತಿಲ್ಲ. ನಾಡಿನ ಜನತೆಗೆ ಒಂದು ಒಳ್ಳೆಯ ಆಡಳಿತ ನೀಡುವಲ್ಲಿ ಬಿಜೆಪಿ ಇಂದು ವಿಫಲವಾಗಿದೆ. ಕರ್ನಾಟಕ ಚುನಾವಣೆಯಲ್ಲಿ ಭ್ರಷ್ಟ ಮುಖ್ಯಮಂತ್ರಿ ಸೇರಿದಂತೆ ಹಲವು ಮಾಜಿ ಸಚಿವರಿಗೆ ಬಿಜೆಪಿ ಟಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಹಿಂದೂ ಸಂಘಟನೆಗಳು ಜೊತೆಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇವೆ ಅಂತಾ ಸುಬ್ರಹ್ಮಣ್ಯ ರಾಜು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ರಾಜು

    ಈ ಬಾರಿ ಚುನಾವಣೆಯಲ್ಲಿ ನಮಗೆ ಬಹುಮತ ಸಿಗುತ್ತೆ ಎಂಬ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ಸ್ಪರ್ಧೆಯಿಂದ ಬಿಜೆಪಿಗೆ ನಷ್ಟವಾದ್ರೆ, ಅವರು ಮಾಡಿದ ಪಾಪಕ್ಕೆ ಫಲ ಅನುಭವಿಸಿದಂತಾಗುತ್ತದೆ. ನಮ್ಮ ಹೋರಾಟ ಇರೋದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ವಿರುದ್ಧ. ರಾಷ್ಟ್ರೀಯ ಪಕ್ಷಗಳ ನಾಯಕರ ನಡವಳಿಕೆಗಳು ಮತ್ತು ಅಪರಾಧಗಳ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಅಂತಾ ಅಂದ್ರು.

  • ಪ್ರಚಾರದ ಭರಾಟೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಿಜಯೇಂದ್ರ

    ಪ್ರಚಾರದ ಭರಾಟೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ವಿಜಯೇಂದ್ರ

    ಮೈಸೂರು: ಚುನಾವಣಾ ಪ್ರಚಾರದ ಭರದಲ್ಲಿ ಮಾಜಿ ಸಿಎಂ ಪುತ್ರ ವಿಜಯೇಂದ್ರ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಾರೆ.

    ವರುಣಾ ವಿಧಾನಸಭಾ ಕ್ಷೇತ್ರದ ಹಿರಿಯೂರು ಗ್ರಾಮದಲ್ಲಿ ಹೆಲ್ಮೆಟ್ ಇಲ್ಲದೇ ಬೈಕ್ ನಲ್ಲಿ ಪ್ರಚಾರ ನಡೆಸಿದ್ರು. ಬೈಕ್ ಸವಾರ ಹಾಗೂ ಹಿಂಬದಿ ಸವಾರ ಖಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬ ನಿಯಮವಿದೆ. ಆದ್ರೂ ನಿಯಮವನ್ನ ಗಾಳಿಗೆ ತೂರಿದ ವಿಜಯೇಂದ್ರ ಬೈಕ್ ನ ಹಿಂಬದಿಯಲ್ಲಿ ಕುಳಿತು ಸಾಗಿದರು.

    ಬಿಜೆಪಿ ಮೂರನೇ ಪಟ್ಟಿಯಲ್ಲೂ ವಿಜಯೇಂದ್ರ ಅವರ ಹೆಸರು ಘೋಷಣೆ ಆಗಿಲ್ಲ. ಆದ್ರೂ ಬಿ.ವೈ ವಿಜಯೇಂದ್ರ ನಾಮಪತ್ರ ಸಲ್ಲಿಕೆಗೆ ಮುಹೂರ್ತ ನಿಗದಿ ಮಾಡಲಾಗಿದೆ. ಇಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆ ವೇಳೆ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಂಸದ ಶ್ರೀ ರಾಮುಲು, ಮಾಜಿ ಸಚಿವರುಗಳಾದ ವಿ.ಶ್ರೀನಿವಾಸ್ ಪ್ರಸಾದ್, ಗೋವಿಂದ್ ಕಾರಜೋಳ, ಶಿಕಾರಿಪುರದ ಶಾಸಕ ಬಿ.ವೈ. ರಾಘವೇಂದ್ರ, ನಿವೃತ್ತ ಪೊಲೀಸ್ ಅಧಿಕಾರಿ ಎಲ್. ರೇವಣ್ಣ ಸಿದ್ದಯ್ಯ, ಹಿಂದುಳಿದ ಮೋರ್ಚ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಲಿದ್ದಾರೆ.