Tag: Karnataka Election 2018

  • ರಾಜಕೀಯ ಯುದ್ಧ ಕಾಲದಲ್ಲಿ ಮಾಜಿ ಸಿಎಂ ಸೈಲೆಂಟ್-ಪ್ರಚಾರಕ್ಕೂ ಹೋಗದೇ ಮನೆಯಲ್ಲಿ ಕುಳಿತ ಬಿಎಸ್‍ವೈ

    ರಾಜಕೀಯ ಯುದ್ಧ ಕಾಲದಲ್ಲಿ ಮಾಜಿ ಸಿಎಂ ಸೈಲೆಂಟ್-ಪ್ರಚಾರಕ್ಕೂ ಹೋಗದೇ ಮನೆಯಲ್ಲಿ ಕುಳಿತ ಬಿಎಸ್‍ವೈ

    ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಚಾರಕ್ಕೂ ತೆರಳದೇ ಶಿಕಾರಿಪುರದ ಮನೆಯಲ್ಲಿ ಕುಳಿತಕೊಂಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಪುತ್ರ ವಿಜಯೇಂದ್ರ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡ ಯಡಿಯೂರಪ್ಪ ಮನೆಯಲ್ಲಿದ್ದಾರೆ ಅಂತಾ ಹೇಳಲಾಗುತ್ತಿದೆ.

    ಪುತ್ರ ವಿಜಯೇಂದ್ರ ಟಿಕೆಟ್ ತಪ್ಪಿಸಲು ಕಾರಣ ಅಂತಾ ಹೇಳಲಾಗುತ್ತಿರುವ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ ವಿರುದ್ಧ ಆಪ್ತರ ಜೊತೆ ಬಿಎಸ್‍ವೈ ಆಕ್ರೋಶ ಹೊರ ಹಾಕಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ಈಗಾಗಲೇ ಯಡಿಯೂರಪ್ಪ 224 ಕ್ಷೇತ್ರದಲ್ಲಿ ಪರಿವರ್ತನಾ ಯಾತ್ರೆ ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದು, ಕೇವಲ ಆಪ್ತರ 100 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಪ್ಲಾನ್ ರೂಪಿಸಿದ್ದಾರೆ ಎಂದುಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ. ಇದನ್ನೂ ಓದಿ:  ವರಿಷ್ಟರು ಮುಂಚೆಯೇ ತಿಳಿಸಿದ್ದರೆ, ವಿಜಯೇಂದ್ರ ವರುಣಾಕ್ಕೆ ತೆರಳುತ್ತಿರಲಿಲ್ಲ-ಬಿಜೆಪಿ ಹೈಕಮಾಂಡ್ ವಿರುದ್ಧ ಈಶ್ವರಪ್ಪ ಗರಂ!

    ಹಾಸನ, ಅರಕಲಗೂಡು, ತುಮಕೂರು, ನೆಲಮಂಗಲದಲ್ಲಿ ಪ್ರಚಾರ ಪ್ರವಾಸದ ವೇಳಾಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ವೇಳಾಪಟ್ಟಿಯಂತೆ ಯಡಿಯೂರಪ್ಪ ಪ್ರಚಾರದಲ್ಲಿ ಭಾಗಿಯಾಗ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ನಿಮ್ಮ ಮಗನಿಗಿಂತ ನಮಗೆ ಪಕ್ಷವೇ ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಬಿಎಸ್‍ವೈಗೆ ಅಮಿತ್ ಶಾ ಸೂಚನೆ

  • ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ಮೈಸೂರು: ವರುಣಾದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಮಗ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದ್ರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಭುಗಿಲೆದ್ದಿರೋ ಸಿಟ್ಟು ಶಮನವಾಗಿಲ್ಲ. ಪ್ರತೀಕಾರವಾಗಿ ಪಕ್ಷದ ಅಧಿಕೃತ ಅಭ್ಯರ್ಥಿ ಬಸವರಾಜ್‍ರನ್ನೇ ಸೋಲಿಸಿ ಮರು ಚುನಾವಣೆ ನಡೆಸೋ ಸಲುವಾಗಿ ನೋಟಾ ಚಲಾಯಿಸಬೇಕೆಂಬ ಅಭಿಯಾನ ಶುರುವಾಗಿದೆ. ಇದನ್ನೂ ಓದಿ: ಇದೊಂದು ಧರ್ಮಯುದ್ದ ಇದ್ದಂತೆ, ಪಕ್ಷಾತೀತವಾಗಿ ವಿಜಯೇಂದ್ರ ಬೆಂಬಲಿಸಿ:ಜಿಟಿ ದೇವೇಗೌಡ

    ವಿಜಯೇಂದ್ರ ಅವರು ನಾಮಪತ್ರ ಸಲ್ಲಿಸುವಾಗ 40 ರಿಂದ 50 ಸಾವಿರ ಜನರಿದ್ದರು. ಆದ್ರೆ ಅನಂತ್‍ಕುಮಾರ್, ಸಂತೋಷ್ ಕಡೆಯ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಸುವಾಗ ಕೇವಲ 6 ಜನರಿದ್ದರು. ಇವರಿಬ್ಬರ ಗರ್ವಭಂಗ ಆಗ್ಬೇಕು. ವೀರಶೈವ-ಲಿಂಗಾಯತರ ಸ್ವಾಭಿಮಾನವನ್ನ ನೋಟಾ ಮೂಲಕ ತೋರಿಸಬೇಕಿದ್ದು, ಅವರ ಸ್ವಾಭಿಮಾನಕ್ಕೆ ಪೆಟ್ಟು ಕೊಡ್ಬೇಕಾದ್ರೆ ಬಿಜೆಪಿ ನೂರು ಸಲ ಯೋಚಿಸಬೇಕು. ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಿಸೋದ್ರಿಂದ ಚಾಮರಾಜನಗರ ಮತ್ತು ಮೈಸೂರಿನ 9 ಕ್ಷೇತ್ರಗಳಲ್ಲಿ ಗೆಲುವಿಗೆ ಭಂಗ ಆಗುತ್ತದೆ ಅಂತ ಅನಂತ್‍ಕುಮಾರ್, ಸಂತೋಷ್ ನಿಮಗೆ ಗೊತ್ತಿಲ್ವೆ ಎಂದು ಪ್ರಶ್ನಿಸಿರೋ ಕರಪತ್ರ ವೈರಲ್ ಆಗಿದೆ. ಇದನ್ನೂ ಓದಿ: ಟಿಕೆಟ್ ಮಿಸ್ ಬೆನ್ನಲ್ಲೇ ವಾಪಸ್ ಬರ್ತೀನಿ ಅಂತ ಮೈಸೂರಿಗೆ ಬಾಯ್.. ಬಾಯ್.. ಅಂದ್ರು ಬಿಎಸ್‍ವೈ ಪುತ್ರ ವಿಜಯೇಂದ್ರ!

    ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧವೇ 25 ಸಾವಿರಕ್ಕಿಂತ ಹೆಚ್ಚು ನೋಟಾ ವೋಟ್ ಚಲಾಯಿಸುವಂತೆ ಪಕ್ಷದ ಕಾರ್ಯಕರ್ತರೇ ವಾಟ್ಸಾಪ್‍ನಲ್ಲಿ ಪ್ರಚಾರ ಮಾಡ್ತಿದ್ದಾರೆ. ಆದ್ರೆ, ಒಟ್ಟು ಮತಗಳ ಅರ್ಧಕ್ಕಿಂತಲೂ ಹೆಚ್ಚು ನೋಟಾ ಚಲಾಯಿಸಿದ್ರೂ ಮರು ಚುನಾವಣೆ ನಡೆಯಲ್ಲ. ಇದನ್ನೂ ಓದಿ:  ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

  • ಪ್ರತ್ಯಂಗಿರಾ ಹೋಮದ ಮೊರೆ ಹೋದ ರಾಜಕೀಯ ಕಲಿಗಳು

    ಪ್ರತ್ಯಂಗಿರಾ ಹೋಮದ ಮೊರೆ ಹೋದ ರಾಜಕೀಯ ಕಲಿಗಳು

    ಬೆಂಗಳೂರು: ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯ ನಾಯಕರು ಹೋಮ ಹವನ ಮಾಡಿಸಲು ನಾ ಮುಂದೆ ತಾ ಮುಂದೆ ಎಂದು ಮುಗಿ ಬೀಳುತ್ತಿದ್ದಾರೆ. ಚುನಾವಣೆ ಎದುರಿಸಲು ರಾಜಕೀಯ ನಾಯಕರುಗಳು ಪ್ರತ್ಯಂಗಿರಾ ಹೋಮ ಹವನದ ಮೊರೆ ಹೋಗುತ್ತಿದ್ದಾರೆ.

    ರಾಜಕೀಯ ಜೀವನದಲ್ಲಿ ಅಡ್ಡಿಯಾಗುವ ಶತ್ರುಗಳನ್ನ ಸಂಹಾರ ಮಾಡಿಸಲು ಪ್ರತ್ಯಂಗಿರಾ ಹೋಮವನ್ನ ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಪವರ್ ಮಿನಿಸ್ಟರ್ ಡಿ.ಕೆ ಶಿವಕುಮಾರ್ ಬುಧವಾರ ಬೆಳಗ್ಗೆ ಬೆಂಗಳೂರಿನ ಉತ್ತರಹಳ್ಳಿಯ ತುರಹಳ್ಳಿಯಲ್ಲಿರುವ ಪ್ರತ್ಯಂಗಿರಾ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ದಾರೆ.

    ಸಂಜೆ ಸುಮಾರು ಏಳು ಗಂಟೆಗೆ ಶಾಸಕ ಅಖಂಡ ಶ್ರೀನಿವಾಸ್ ಕೂಡ ಪ್ರತ್ಯಂಗಿರಾ ಹೋಮ ಮಾಡಿಸಿದ್ದಾರೆ. ರಾಜಕೀಯ ಶತ್ರುಗಳನ್ನ ಮಟ್ಟ ಹಾಕಲು ಪ್ರತ್ಯಂಗಿರಾ ಹೋಮ ರಾಮಬಾಣವಾಗಿರುವುದರಿಂದ ಸಿಎಂ ಪಿಎ ವೆಂಕಟೇಶ್ ಕೂಡ ಪ್ರತ್ಯಂಗಿರಾ ಹೋಮ ಮಾಡಿಸಲು ಅನುಮತಿ ಕೇಳಿದ್ದಾರಂತೆ.

    ಇನ್ನು ಕೆಲ ಬಿಜೆಪಿ ನಾಯಕರು ಕೂಡ ಪ್ರತ್ಯಂಗಿರಾ ಹೋಮ ಮಾಡಿಕೊಡುವಂತೆ ದೇವಸ್ಥಾನದ ಅರ್ಚಕರಿಗೆ ದುಂಬಾಲು ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

  • ಅಧಿಕಾರ ಇಲ್ಲದಾಗ ಅಲ್ಲೋಗಿ ಹರಿತೀನಿ ಅಂತಿದ್ದಾರೆ- ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

    ಅಧಿಕಾರ ಇಲ್ಲದಾಗ ಅಲ್ಲೋಗಿ ಹರಿತೀನಿ ಅಂತಿದ್ದಾರೆ- ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

    ಚಿತ್ರದುರ್ಗ: ಅಧಿಕಾರ ಇದ್ದಾಗ ಬಿಜೆಪಿಯವರು ಸಾಧನೆ ಮಾಡಲಿಲ್ಲ. ಅಧಿಕಾರ ಇದ್ದಾಗ ಶ್ರೀರಾಮುಲು ಏನು ಮಾಡಲಿಲ್ಲ, ಶಾಸಕ ಎನ್.ವೈ.ಗೋಪಾಲಕೃಷ್ಣ ಏನು ಮಾಡಲಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

    ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯೊಗೀಶ್ ಬಾಬು ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುವ ವೇಳೆ ಬಿಜೆಪಿ ವಿರುದ್ಧ ಡಿಕೆಶಿ ಗುಡುಗಿದ್ದು, ಬಿಜೆಪಿ ಅಧಿಕಾರದಲ್ಲಿದ್ದಾಗ ಶ್ರೀರಾಮುಲು ಅವರಿಗೆ ಏನು ಮಾಡಲು ಆಗಲಿಲ್ಲ ಎಂದು ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಶಾಸಕ ಎನ್.ವೈ.ಗೋಪಾಲಕೃಷ್ಣ ಕೂಡ ಅಧಿಕಾರ ಸಿಕ್ಕಾಗ ಏನು ಮಾಡಲಿಲ್ಲ. ಇನ್ನು ಅಧಿಕಾರ ಇಲ್ಲದ ವೇಳೆ ಅಲ್ಲೋಗಿ ಹರಿತೀನಿ, ಹರಿತೀನಿ ಅಂತಿದ್ದಾರೆ. `ಕೊಟ್ಟ ಕುದುರೆಯನೇರಲು ಅರಿಯದವರು ಮತ್ತೊಂದು ಕುದುರೆಯನ್ನೇರಲು ಬಯಸುವವನು ವೀರನೂ ಅಲ್ಲ, ಶೂರನು ಅಲ್ಲ’ ಎನ್ನುವ ವಚನವನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

    ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಅಂತೆ ಬಿಎಸ್‍ವೈ ಗೆ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಿಲ್ಲ ಅಂತ ವ್ಯಂಗ್ಯವಾಡಿದ್ರು.

  • ಬಿಜೆಪಿ ಹೈಕಮಾಂಡ್ ವಿರುದ್ಧ ಈಶ್ವರಪ್ಪ ಗರಂ!

    ಬಿಜೆಪಿ ಹೈಕಮಾಂಡ್ ವಿರುದ್ಧ ಈಶ್ವರಪ್ಪ ಗರಂ!

    ಶಿವಮೊಗ್ಗ: ವರುಣಾ ಕ್ಷೇತ್ರದ ಕುರಿತು ವರಿಷ್ಟರು ಮುಂಚೆಯೇ ತಿಳಿಸಿದ್ದರೆ, ವಿಜಯೇಂದ್ರ ವರುಣಾಕ್ಕೆ ತೆರಳುತ್ತಿರಲಿಲ್ಲ. ಈಗ ವರುಣಾದಲ್ಲಿ ಏರ್ಪಟ್ಟಿದ್ದ ಗೊಂದಲ ಬಗೆ ಹರಿದಿದೆ ಅಂತ ಅಮಿತ್ ಶಾ ಸಂದಾನ ಬಳಿಕ ಮೊದಲ ಬಾರಿ ಬಿಎಸ್‍ವೈ ಮನೆಗೆ ಭೇಟಿ ಕೊಟ್ಟ ಈಶ್ವರಪ್ಪ ಹೇಳಿದರು.

    ಬಾದಾಮಿ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಮಾಡಿಕೊಂಡಿರುವ ಸಿದ್ದರಾಮಯ್ಯ, ನಾಮಪತ್ರ ಸಲ್ಲಿಸಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಟೀಕಿಸಿದ್ದಾರೆ. ಸಿಎಂ ಅವರು ಇಲ್ಲಿ ಯಶಸ್ವಿ ಆಗೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅವರ ಸಮುದಾಯದವರು ಹೆಚ್ಚು ಇದ್ದರೂ ಕೂಡ ಬದಾಮಿ ಕ್ಷೇತ್ರದಲ್ಲಿ ಗೆಲ್ಲುವುದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರೇ ಅಂದ್ರು. ಇದನ್ನೂ ಓದಿ; ವರುಣಾ ಕ್ಷೇತ್ರದಿಂದ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಇಲ್ಲ

    ವಿಜಯೇಂದ್ರ 20 ದಿನಗಳಲ್ಲಿ ವರುಣಾ ಕ್ಷೇತ್ರದಲ್ಲಿ ಹೆಚ್ಚಿನ ಜನಬೆಂಬಲ ಗಳಿಸಿರುವ ಹಿನ್ನೆಲೆಯಲ್ಲಿ, ರಾಷ್ಟ್ರಿಯ ನಾಯಕರು ವಿಜಯೇಂದ್ರರನ್ನ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ: ವಿಜಯೇಂದ್ರ

     

  • ಅಂಬರೀಶ್ ಅವರನ್ನು ನಾನು ನಂಬಿದ್ದೆ, ಆದ್ರೂ ಟಿಕೆಟ್ ತಪ್ತು: ಭಾವುಕರಾದ ಅಮರಾವತಿ ಚಂದ್ರಶೇಖರ್

    ಅಂಬರೀಶ್ ಅವರನ್ನು ನಾನು ನಂಬಿದ್ದೆ, ಆದ್ರೂ ಟಿಕೆಟ್ ತಪ್ತು: ಭಾವುಕರಾದ ಅಮರಾವತಿ ಚಂದ್ರಶೇಖರ್

    ಮಂಡ್ಯ: ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ಸ್ಪರ್ಧೆಯಿಂದ ಶಾಸಕ ಅಂಬರೀಶ್ ಹಿಂದೆ ಸರಿದಿದ್ದು, ರವಿಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದೆ.

    ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಂಬರೀಶ್, ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ ಹಾಗೂ ಯಾರ ಹೆಸರನ್ನು ನಾನು ಶಿಫಾರಸು ಮಾಡಲ್ಲ. ಹಾಗಾಗಿ ಹೈಕಮಾಂಡ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಅಂತಾ ಸ್ಪಷ್ಟಪಡಿಸಿದ್ರು.

    ಇಂದು ಕಾಂಗ್ರೆಸ್ ನಾಯಕರ ಜೊತೆ ನಡೆದ ಮಾತುಕತೆಯಲ್ಲಿ ನನ್ನ ಹೆಸರನ್ನು ಅಂಬರೀಶ್ ಶಿಫಾರಸ್ಸು ಮಾಡಲಿಲ್ಲ. ಒಂದು ವೇಳೆ ಅಭ್ಯರ್ಥಿಯನ್ನು ಸೂಚಿಸಿದ್ರೆ, ಅವರನ್ನು ಗೆಲ್ಲಸಿಕೊಂಡು ಬರುವ ಜವಾಬ್ದಾರಿ ನನ್ನ ಮೇಲಿರುತ್ತದೆ. ಬೇರೆಯವರಿಗೆ ಟಿಕೆಟ್ ಕೊಡಿಸಿದ್ರೆ ನಾನೇ ಪ್ರಚಾರ ಮಾಡಬೇಕಾಗುತ್ತದೆ. ಪ್ರಚಾರ ಮಾಡುವುದಿದ್ದರೆ ನಾನೇ ಸ್ಪರ್ಧೆ ಮಾಡಬಹುದು ಎಂದು ಹೇಳುವ ಮೂಲಕ ನನ್ನನ್ನು ಬೇರೆಯವನ ರೀತಿ ನೋಡಿದ್ರು ಅಂತಾ ಅಮರಾವತಿ ಚಂದ್ರೇಖರ್ ಹೇಳಿದ್ದಾರೆ. ಇದನ್ನೂ ಓದಿ: ನಾನು ಯಾವತ್ತಿದ್ರೂ ಸ್ಟಾರ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಚಿರಋಣಿ: ಅಂಬರೀಶ್

    ಈ ಹಿಂದೆ ನಾನು ಚುನಾವಣೆಗೆ ನಿಲ್ಲಲ್ಲ, ನೀನೇ ನಿಲ್ಲು ಅಂತಾ ಹಲವು ಬಾರಿ ಅಂಬರೀಶ್ ಹೇಳುತ್ತಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ನಮ್ಮ ಹಿತೈಷಿಗಳು ಮಾಡಿದ ಪಿತೂರಿನಿಂದ ನನಗೆ ಟಿಕೆಟ್ ತಪ್ಪಿರುವ ಸಾಧ್ಯತೆಗಳಿವೆ. ಜನರ ಬೆಂಬಲದಿಂದಲೇ ಮಂಡ್ಯದಲ್ಲಿ ಆರು ಚುನಾವಣೆಗಳನ್ನು ಮಾಡಿ ಅವುಗಳಲ್ಲಿ ಯಶಸ್ವಿಯಾಗಿದ್ದೇನೆ. ನಾನು ಇಂದು ಬೆಳಗ್ಗೆವರೆಗೂ ಅಂಬರೀಶ್ ಅವರೇ ಚುನಾವಣೆಗೆ ಸ್ಪರ್ಧಿಸಬೇಕೆಂದು ಹೇಳುತ್ತಾ ಬಂದಿದ್ದೆ, ನಾನು ಎಂದು ಅವರ ವಿರುದ್ಧ ನಿಲ್ಲಬೇಕೆಂದು ಪಿತೂರಿ ಮಾಡಿದವನಲ್ಲ ಅಂತಾ ಭಾವುಕರಾದ್ರು. ಇದನ್ನು ಓದಿ: ಅಮರಾವತಿಗೆ ಅಂಬರೀಷ್ ಮಂಗಳಾರತಿ!

    ಸೋಮವಾರ ಅಂಬರೀಶ್ ಚುನಾವಣೆಯಿಂದ ಸ್ಪರ್ಧೆ ಮಾಡುತ್ತಿಲ್ಲ. ಹಾಗಾಗಿ ನಾನೇ ಚುನಾವಣೆಗೆ ಸ್ಪರ್ಧೆ ಮಾಡಲಿದ್ದೇನೆ ಅಂತಾ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಹೇಳಿದ್ದರು.

    https://youtu.be/j5sNdOb1D40

  • ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ವಿಜಯೇಂದ್ರ ಕ್ಷೇತ್ರಕ್ಕೆ ಬಂದು 20 ದಿನ ಆಯ್ತು, ನಾನು 37 ವರ್ಷಗಳಿಂದ ಬಿಜೆಪಿಗೆ ದುಡಿದಿದ್ದೇನೆ: ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ವರುಣಾ ಕ್ಷೇತ್ರಕ್ಕೆ ಬಂದು ಕೇವಲ 20 ದಿನ ಆಯ್ತು. ನಾನು 37 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ ಎಂದು ವರುಣಾ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿ ಬಸವರಾಜು ಹೇಳಿದ್ದಾರೆ. ಇದನ್ನೂ ಓದಿ: ಕೊನೆ ಘಳಿಗೆಯಲ್ಲಿ ಬಿಎಸ್‍ವೈಗೆ ಕರೆ ಮಾಡಿದ ಆ ನಾಯಕ ಯಾರು?

    ವರುಣಾದಲ್ಲಿ ವಿಜಯೇಂದ್ರ ಅಭ್ಯರ್ಥಿಯಾಗಿ ಪ್ರಚಾರ ಮಾಡಿಲ್ಲ. ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು ಅಷ್ಟೇ. ರಾಜ್ಯದ ಜನತೆ ನನಗೆ ಕೊನೆ ಕ್ಷಣದಲ್ಲಿ ಟಿಕೆಟ್ ಸಿಕ್ಕಿದೆ ಅಂತಾ ತಿಳಿದುಕೊಂಡಿರಬಹುದು. ಆದ್ರೆ ಹೈಕಮಾಂಡ್ ಈ ಮೊದಲೇ ನಾನೇ ವರುಣಾ ಕ್ಷೇತ್ರದ ಅಭ್ಯರ್ಥಿಯೆಂದು ಹೇಳಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ನಿಮ್ಮ ಮಗನಿಗಿಂತ ನಮಗೆ ಪಕ್ಷವೇ ಮುಖ್ಯ, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಬಿಎಸ್‍ವೈಗೆ ಅಮಿತ್ ಶಾ ಸೂಚನೆ

    ಯಡಿಯೂರಪ್ಪನವರು ಶಾಸಕರಾದ ಸಂದರ್ಭದಿಂದ ನಾವು ಕೆಲಸ ಮಾಡಿದ್ದೇನೆ. ಬಿಜೆಪಿಯ ಆಶೀರ್ವಾದ ನನ್ನ ಮೇಲಿದೆ. ನನಗೆ ಟಿಕೆಟ್ ನೀಡುವುದು ಎಲ್ಲ ನಾಯಕರ ತೀರ್ಮಾನವಾಗಿದ್ದು, ಕೇವಲ ಒಬ್ಬರು, ಇಬ್ಬರ ಹೆಸರು ಹೇಳೋದಕ್ಕೆ ಆಗಲ್ಲ ಅಂತಾ ಹೇಳಿದ್ರು. ಇದನ್ನೂ ಓದಿ: ಇದೊಂದು ಧರ್ಮಯುದ್ದ ಇದ್ದಂತೆ, ಪಕ್ಷಾತೀತವಾಗಿ ವಿಜಯೇಂದ್ರ ಬೆಂಬಲಿಸಿ:ಜಿಟಿ ದೇವೇಗೌಡ

    20 ದಿನಗಳಿಂದ ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಮಾಡ್ತಾರೆ ಅಂತಾ ಹೇಳಲಾಗುತ್ತಿತ್ತು. ಸೋಮವಾರ ವಿಜಯೇಂದ್ರ ಸಹ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ಕೊನೆ ಕ್ಷಣದಲ್ಲಿ ನನ್ನ ಪುತ್ರ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಅಂತಾ ನಂಜನಗೂಡಿನಲ್ಲಿ ನಡೆದ ಸಮಾವೇಶದಲ್ಲಿ ಬಿಎಸ್‍ವೈ ಹೇಳಿದ್ರು. ಇದನ್ನೂ ಓದಿ: ವಿಜಯೇಂದ್ರ ಸ್ಪರ್ಧೆ ಅನಿವಾರ್ಯ, ಟಿಕೆಟ್ ನೀಡುವಂತೆ ಹೈಕಮಾಂಡ್‍ಗೆ ಒತ್ತಾಯ: ಪ್ರತಾಪ್ ಸಿಂಹ

    ಸದ್ಯ ವರುಣಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದಿರೋ ಬಸವರಾಜು ಅವರು ಕೇಂದ್ರ ಸಚಿವ ಅನಂತಕುಮಾರ್ ಮತ್ತು ಕೇಂದ್ರ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಆಪ್ತ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಈಗ ಹರಿದಾಡುತ್ತಿದೆ. ಇದನ್ನೂಓದಿ: ಬಿಎಸ್‍ವೈ ಪುತ್ರನಿಗೆ ವರುಣಾ ಟಿಕೆಟ್ ಕೈ ತಪ್ಪಿಸಿದ್ದು ಯಾರು?: ಕುದಿಮೌನ ತಾಳಿದ ಬಿಎಸ್‍ವೈ

  • ಮೈಸೂರು, ಬೆಂಗಳೂರಿನಲ್ಲಿ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ನಿವಾಸಗಳ ಮೇಲೆ ಐಟಿ ದಾಳಿ

    ಮೈಸೂರು, ಬೆಂಗಳೂರಿನಲ್ಲಿ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ನಿವಾಸಗಳ ಮೇಲೆ ಐಟಿ ದಾಳಿ

    ಬೆಂಗಳೂರು: ಬೆಳ್ಳಂಬೆಳಗ್ಗೆ ಮೈಸೂರಿನ 10 ಕಡೆ, ಬೆಂಗಳೂರಿನ 10 ಕಡೆ ಐಟಿ ದಾಳಿ ನಡೆದಿದೆ.
    ವಿವಿಧ ಇಲಾಖೆಗಳ ಅಧಿಕಾರಿಗಳ ನಿವಾಸ, ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ.
    ಆರಂಭದಲ್ಲಿ ಮಹಾದೇವಪ್ಪನವರ ನಿವಾಸದ ಮೇಲೆ ದಾಳಿ ನಡೆದಿದೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಆದರೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಹಾದೇವಪ್ಪ ಅವರ ನಿವಾಸದ ಮೇಲೆ ಯಾವುದೇ ದಾಳಿ ನಡೆಸಿಲ್ಲ ಎಂದು ತಿಳಿಸಿದ್ದಾರೆ.
  • ವರುಣಾ ಕ್ಷೇತ್ರದಿಂದ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಇಲ್ಲ

    ವರುಣಾ ಕ್ಷೇತ್ರದಿಂದ ವಿಜಯೇಂದ್ರಗೆ ಬಿಜೆಪಿ ಟಿಕೆಟ್ ಇಲ್ಲ

    ಮೈಸೂರು: ಕೊನೆಗೂ ವರಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಹಗ್ಗಜಗ್ಗಾಟಕ್ಕೆ ತೆರೆ ಬಿದ್ದಿದ್ದು, ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುತ್ತಿಲ್ಲ ಎಂದು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಹೇಳಿದ್ದಾರೆ.

    ವಿಜಯೇಂದ್ರಗೆ ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಬಿಎಸ್‍ವೈ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳಿಧರ್ ರಾವ್ ಹಾಗೂ ಪ್ರಕಾಶ್ ಜಾವ್ಡೇಕರ್ ಅವರು ಒಂದು ಸುತ್ತಿನ ಮಾತುಕತೆ ಮುಕ್ತಾಯಗೊಂಡಿದೆ. ಆದರೆ ಮತ್ತೆ ಮೈಸೂರು ಮತ್ತು ಚಾಮರಾಜನಗರ ಅಭ್ಯರ್ಥಿಗಳ ಜೊತೆಯಲ್ಲೂ ರಾಷ್ಟ್ರೀಯ ನಾಯಕರು ಸಭೆ ನಡೆಸಿದ್ದಾರೆ.

    ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಎಸ್‍ವೈ, ಬೆಳಗ್ಗೆಯಿಂದ ಸತತ ಎರಡು ಗಂಟೆಯ ಕಾಲ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ನಮ್ಮ ಅಭ್ಯರ್ಥಿಗಳು ಮತ್ತು ಮುಖಂಡರನ್ನ ಕರೆದು ಸಮಾಲೋಚನೆ ಮಾಡಲಾಗಿದೆ. ಇವತ್ತು ಬೇರೆ ಬೇರೆ ವಿಚಾರಗಳಿಂದಾಗಿ ವರುಣಾ ಕ್ಷೇತ್ರದಿಂದ ಬೇರೆ ಅವರನ್ನು ಸ್ಪರ್ಧೆ ಮಾಡಲು ಹೇಳಿದ್ದೇವೆ. ಮತ್ತೆ ವಿಜಯೇಂದ್ರ 20 ದಿನ ಇಲ್ಲೆ ಇದ್ದು ಮೈಸೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನು ಪ್ರವಾಸ ಮಾಡುತ್ತಾರೆ ಅಂತಾ ತಿಳಿಸಿದ್ರು.

    ನಾನೇದರೂ ತಪ್ಪು ಮಾಡಿದ್ದರೆ ಕ್ಷಮಿಸಿ. ಆದರೆ ಯಾವುದೇ ಬಿಜೆಪಿ ಅಭ್ಯರ್ಥಿ ಇರಲಿ, ಇಲ್ಲೆ ಇದ್ದು ಅವರನ್ನು ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ವಿಜಯೇಂದ್ರ ಒಪ್ಪಿಕೊಂಡಿದ್ದಾರೆ. ಅವರ ಕಡೆಯಿಂದ ಏನು ಗೊಂದಲವಿಲ್ಲ. ಆದ್ದರಿಂದ ನಮ್ಮ ಮತದಾರರು ಕೇಂದ್ರದ ತೀರ್ಮಾನವನ್ನು ಒಪ್ಪಿಕೊಳ್ಳಬೇಕು ಎಂದು ಯಡಿಯೂರಪ್ಪ ಕೈ ಮುಗಿದು ಮನವಿ ಮಾಡಿಕೊಂಡ್ರು.

    ಈ ವೇಳೆ ಮುರುಳಿಧರ್ ರಾವ್ ಮಾತನಾಡಿ, ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಐತಿಹಾಸಿಕ ತಿರ್ಮಾನವನ್ನು ನಾವು ಒಪ್ಪಿಕೊಂಡಿದ್ದೇವೆ. ವಿಜಯೇಂದ್ರ ಅವರಿಗೆ ಬಿಜೆಪಿಯ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಇನ್ನು ಮುಂದಿನ 20 ದಿನಗಳ ಕಾಲ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡು ಪ್ರಚಾರ ಮಾಡುತ್ತಾರೆ ಎಂದು ತಿಳಿಸಿದರು.