Tag: Karnataka Election 2018

  • ಕಾಲಿನ ಮೂಲಕವೇ ವೋಟ್ ಮಾಡೋ `ಪಬ್ಲಿಕ್ ಹೀರೋ’ ಇದೀಗ ಚುನಾವಣೆಯ ಅಂಬಾಸಿಡರ್!

    ಕಾಲಿನ ಮೂಲಕವೇ ವೋಟ್ ಮಾಡೋ `ಪಬ್ಲಿಕ್ ಹೀರೋ’ ಇದೀಗ ಚುನಾವಣೆಯ ಅಂಬಾಸಿಡರ್!

    ಬಳ್ಳಾರಿ: ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ನಲ್ಲಿ ಪ್ರಸಾರ ಮಾಡುವ ಪಬ್ಲಿಕ್ ಹೀರೋ ಒಬ್ಬರು ಇದೀಗ ಚುನಾವಣೆಯ ಅಂಬಾಸಿಡರ್ ಆಗಿ ಆಯ್ಕೆ ಆಗಿದ್ದಾರೆ.

    ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚು ಮಾಡಲು ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ರಾಯಭಾರಿಯನ್ನಾಗಿ ಮಾಡಿರುವಂತೆ ಗಣಿ ನಾಡು ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಇದೀಗ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡಮುಣುಗು ಗ್ರಾಮದ ಎರಡು ಕೈಗಳಿಲ್ಲದ ದಿವ್ಯಾಂಗದ ಅತಿಥಿ ಶಿಕ್ಷಕಿ ಎನ್. ಲಕ್ಷ್ಮೀದೇವಿ ಅವರನ್ನು ಚುನಾವಣಾ ಆಯೋಗ ರಾಯಭಾರಿಯನ್ನಾಗಿ ಮಾಡಿದೆ.

    ಲಕ್ಷ್ಮೀದೇವಿ ಇಂದು ತಮಗೆ ಎರಡು ಕೈಗಳಿಲ್ಲದಿದ್ದರೂ ಯಾರ ಸಹಾಯವಿಲ್ಲದೆ ತಮ್ಮ ಕಾಲಿನಿಂದಲೇ ಓಟು ಮಾಡುವ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀದೇವಿ, ನಾನು ಕಳೆದ ಎಂಟು ವರ್ಷಗಳಿಂದ ಕಾಲಿನಿಂದಲೇ ಮತದಾನ ಮಾಡುತ್ತಿದ್ದೇನೆ. ಇದು ನನಗೆ ಸಂತಸ ತಂದಿದೆ. ನನ್ನ ಮತದಾನದ ಹಕ್ಕನ್ನು ನಾನು ಚಲಾಯಿಸುತ್ತಿದ್ದು, ಎಲ್ಲಾ ವಿಶೇಷ ಚೇತನರೂ ಇದೇ ರೀತಿ ಯಾರ ಸಹಾಯವಿಲ್ಲದೆ ಮತಗಟ್ಟೆಗೆ ಬಂದು ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ಎಂದರು.

    https://www.youtube.com/watch?v=alu2Mb7d-AI&feature=youtu.be

  • ಯತೀಂದ್ರ ಸಿಎಂ ಮಗ ಅನ್ನೋದು ಬಿಟ್ರೆ ಬೇರೆ ಯಾವುದರಲ್ಲೂ ನನಗೆ ಸರಿಸಮಾನನಿಲ್ಲ-ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಯತೀಂದ್ರ ಸಿಎಂ ಮಗ ಅನ್ನೋದು ಬಿಟ್ರೆ ಬೇರೆ ಯಾವುದರಲ್ಲೂ ನನಗೆ ಸರಿಸಮಾನನಿಲ್ಲ-ವರುಣಾ ಬಿಜೆಪಿ ಅಭ್ಯರ್ಥಿ ಬಸವರಾಜು

    ಬೆಂಗಳೂರು: ಯತೀಂದ್ರ ಸಿಎಂ ಸಿದ್ದರಾಮಯ್ಯರ ಮಗ ಅನ್ನೋದು ಬಿಟ್ಟರೆ, ಬೇರೆ ಯಾವುದರಲ್ಲೂ ನನಗೆ ಸರಿ ಸಮಾನನಿಲ್ಲ ಅಂತಾ ವರುಣಾ ಕೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜು ಹೇಳಿದ್ದಾರೆ.

    ನಗರದ ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿದ ಬಳಿಕ ನೀಡಿದ ಮಾತನಾಡಿದ ಬಸವರಾಜು, ನೂರಕ್ಕೆ ನೂರರಷ್ಟು ವರುಣಾದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಸದ್ಯ ವರುಣಾದಲ್ಲಿ ಪರಿಸ್ಥಿತಿ ಸರಿ ಇಲ್ಲ, ಆದ್ರೆ ಇನ್ನೆರೆಡು ದಿನ ಬಿಟ್ಟು ಕ್ಷೇತ್ರದಲ್ಲಿ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರು ಬಂದು ಪ್ರಚಾರ ಮಾಡಲಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟು ಬಿಜೆಪಿ ಶಕ್ತಿ ಏನು ಅನ್ನೋದನ್ನ ತೋರಿಸುವುದಕ್ಕೆ ಮುಂದಾಗಿದೆ ಅಂತಾ ಹೇಳಿದ್ರು. ಇದನ್ನೂ ಓದಿ: ವಿಜಯೇಂದ್ರಗೆ ಟಿಕೆಟ್ ತಪ್ಪಿದ ಎಫೆಕ್ಟ್-ನೋಟಾ ಚಲಾವಣೆ ಅಭಿಯಾನದ ಕರಪತ್ರ ಫುಲ್ ವೈರಲ್

    ಯಾರೋ ಕೆಲ ಕಿಡಿಗೇಡಿಗಳು ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ನೋಟಾ ಅಭಿಯಾನ ಮಾಡ್ತಿದ್ದಾರೆ. ಆದ್ರೆ ಅವರು ಯಾರು ಬಿಜೆಪಿ ಕಾರ್ಯಕರ್ತರಲ್ಲ. ನಮ್ಮ ಪಕ್ಷದ ಕಾರ್ಯಕರ್ತರು ಅಂತಹ ಕೆಲಸ ಮಾಡಲ್ಲ ಅಂತಾ ಸ್ಪಷ್ಟನೆ ನೀಡಿದ್ರು.

  • ಅಲೇರ ಪಂಜುರ್ಲಿ ದೈವದ ಮೊರೆ ಹೋದ ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳು

    ಅಲೇರ ಪಂಜುರ್ಲಿ ದೈವದ ಮೊರೆ ಹೋದ ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳು

    ಉಡುಪಿ: ಚುನಾವಣೆ ಘೋಷಣೆಯಾದ ಕೂಡಲೇ ಅಭ್ಯರ್ಥಿಗಳು ನಾಯಕರು ಬಿರುಸಿನ ಪ್ರಚಾರ ಶುರು ಮಾಡಿದ್ದಾರೆ. ದೈವ, ದೇವರೂ ಕೂಡ ಮಾಮೂಲಿಗಿಂತ ಹೆಚ್ಚಾಗಿ ರಾಜಕಾರಣಿಗಳಿಗೆ ಈಗ ನೆನಪಾಗುತ್ತಿದ್ದಾರೆ. ಉಡುಪಿ ಜಿಲ್ಲೆ ಕಾಪುವಿನ ಇಬ್ಬರು ಅಭ್ಯರ್ಥಿಗಳು ಒಂದೇ ದೈವದ ಮೊರೆ ಹೋಗಿ ಗೆಲುವಿನ ವರ ಕೇಳಿದ್ದಾರೆ.

    ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಉಡುಪಿ ಜಿಲ್ಲೆಯ ಪೈಕಿ ಜಿದ್ದಿನ ಕಣ. ಕಾಂಗ್ರೆಸ್ ನಿಂದ ವಿನಯಕುಮಾರ್ ಸೊರಕೆ, ಬಿಜೆಪಿಯಿಂದ ಲಾಲಾಜಿ ಮೆಂಡನ್ ಕಣದಲ್ಲಿದ್ದಾರೆ. ಈ ಬಾರಿ ಇಬ್ಬರಿಗೂ ನೆಕ್ ಟೂ ನೆಕ್ ಫೈಟ್ ಇದೆ. ಕಳೆದ ಬಾರಿ ಒಂದೂವರೆ ಸಾವಿರ ಮತಗಳಿಂದ ಸೋತ ಲಾಲಾಜಿ ಈ ಬಾರಿ ರಾಜಕೀಯ ಮರುಜೀವದ ಪಣ ತೊಟ್ಟಿದ್ದಾರೆ. ಅಭಿವೃದ್ಧಿ ಕಾರ್ಯ ನನ್ನ ಗೆಲುವಿಗೆ ಕಾರಣವಾಗುತ್ತದೆ ಎಂದು ಸೊರಕೆ ಹೇಳಿದ್ದಾರೆ.

    ಈ ನಡುವೆ ಇಬ್ಬರೂ ನಾಯಕರು ಒಂದೇ ದೈವದ ಮೊರೆ ಹೋಗಿದ್ದು, ಈ ಬಾರಿ ಆಶೀರ್ವಾದ ಮಾಡಿ ಅಂತ ಬೇಡಿಕೊಂಡಿದ್ದಾರೆ. ಶಿರ್ವ ಗ್ರಾಮದ ಸೊರ್ಪು ಶ್ರೀ ಬ್ರಹ್ಮ ಮುಗೇರ್ಕಳ ದೈವಸ್ಥಾನದಲ್ಲಿ ವರ್ಷಾವಧಿ ಕೋಲ ಸೇವೆ ನಡೆದಿದೆ. ಅಲೇರ ಪಂಜುರ್ಲಿ ಕೋಲ ನಡೆಯುತ್ತಿರುವ ಸಂದರ್ಭ ಮಾಜಿ ಸಚಿವ ಸೊರಕೆ ದೈವದ ಬಳಿ ಆಶೀರ್ವಾದ ಕೇಳಿದ್ದಾರೆ. ಇದಕ್ಕೆ ದೈವ ಒಳ್ಳೆಯದಾಗುತ್ತದೆ ಎಂದು ಅಭಯ ನೀಡಿದೆ.

    ಕೆಲವೇ ಕ್ಷಣಗಳಲ್ಲಿ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ದೈವಸ್ಥಾನಕ್ಕೆ ಬಂದಿದ್ದಾರೆ. ದೈವ ಮತ್ತು ದರ್ಶನಪಾತ್ರಿ ಗೆ ಕೈ ಮುಗಿದು ಈ ಬಾರಿ ಆಶೀರ್ವಾದ ಮಾಡಬೇಕು. ಜನಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ದೈನ್ಯತೆಯಿಂದ ವಿನಂತಿ ಮಾಡಿದ್ದಾರೆ. ದೈವ ಹಾಗೂ ಪಾತ್ರಿ ಲಾಲಾಜಿ ಮೆಂಡನ್ ಗೂ ಆಶೀರ್ವಾದ ನೀಡಿದೆ. ಗೆಲುವಿನ ಉತ್ಸಾಹದೊಂದಿದೆ ಲಾಲಾಜಿ ಮೆಂಡನ್ ತೆರಳಿದ್ದಾರೆ.

    ಒಳ್ಳೆಯದ್ದು ಮಾಡಿದ್ರೆ ಒಳ್ಳೆಯದಾಗುತ್ತದೆ, ನಿಮ್ಮ ಬೆನ್ನ ಹಿಂದೆ ನಾನಿದ್ದೇನೆ. ಸತ್ಯ, ಧರ್ಮ ನ್ಯಾಯವಿದ್ದಲ್ಲಿ ಗೆಲುವು ಇದೆ ಎಂದು ನುಡಿ ಕೊಟ್ಟಿದೆ. ಹೀಗಾಗಿ ಇಬ್ಬರೂ ನಾಯಕರೂ ಪ್ರಸಾದ ಸ್ವೀಕರಿಸಿ ಅಲ್ಲಿಂದ ತೆರಳಿದ್ದಾರೆ. ದೈವ, ದೇವರ ಬಳಿ ಹೋದ ಎಲ್ಲರಿಗೂ ಒಳ್ಳೆದಾಗಲಿ ಎಂಬ ಆಶೀರ್ವಾದ ಸಿಗುತ್ತದೆ. ಆದ್ರೆ ಮೇ 12 ರಂದು ಜನ ಯಾರಿಗೆ ಆಶೀರ್ವಾದ ಮಾಡುತ್ತಾರೆ ಎಂಬ ಮೇಲೆ ಇಬ್ಬರು ನಾಯಕರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

  • ವಿಶೇಷ ಕಾರಣದಿಂದ ವಿಜಯೇಂದ್ರಗೆ ಟಿಕೆಟ್ ತಪ್ಪಿದೆ: ಬಿಎಸ್‍ವೈ

    ವಿಶೇಷ ಕಾರಣದಿಂದ ವಿಜಯೇಂದ್ರಗೆ ಟಿಕೆಟ್ ತಪ್ಪಿದೆ: ಬಿಎಸ್‍ವೈ

    ಶಿವಮೊಗ್ಗ: ವರುಣಾ ಕ್ಷೇತ್ರದಿಂದ ಪುತ್ರ ವಿಜಯೇಂದ್ರ ಟಿಕೆಟ್ ತಪ್ಪಿಕ್ಕೆ ವಿಶೇಷ ಕಾರಣವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಶಿವಮೊಗ್ಗ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗ ವಿಜಯೇಂದ್ರ ಕೂಡ ಸಂತೋಷದಿಂದ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ವಿಶೇಷ ಕಾರಣದಿಂದ ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಿದೆ ಅಷ್ಟೇ. ಸದ್ಯಕ್ಕೆ ಪ್ರಧಾನಿ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಅಭ್ಯರ್ಥಿಗಳ ಜೊತೆ ಮಾತನಾಡುತ್ತಿದ್ದಾರೆ. ಚುನಾವಣೆ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜಕೀಯ ಯುದ್ಧ ಕಾಲದಲ್ಲಿ ಮಾಜಿ ಸಿಎಂ ಸೈಲೆಂಟ್-ಪ್ರಚಾರಕ್ಕೂ ಹೋಗದೇ ಮನೆಯಲ್ಲಿ ಕುಳಿತ ಬಿಎಸ್‍ವೈ

    ಈ ವೇಳೆ ಮೋದಿ ಕುರಿತು ರಾಹುಲ್ ಗಾಂಧಿ ಮಾಡಿದ್ದ ಟ್ವೀಟ್ ಗೆ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಒಬ್ಬ ತಲೆತಿರುಕ. ಆತನ ಮಾತಿಗೆ ಒತ್ತು ನೀಡುವ ಅಗತ್ಯವಿಲ್ಲ. ರಾಹುಲ್ ಗೆ ಯಾರ ಬಗ್ಗೆ ಏನು ಮಾತನಾಡಬೇಕು ಎಂಬ ಜ್ಞಾನವಿಲ್ಲ. ತನ್ನ ಸುತ್ತಮುತ್ತ ರಾಜ್ಯ ಹಾಳು ಮಾಡಿದವರನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ. ತಾನು ಏನು ಎಂದು ತಿಳಿಯದೆ ಮಾತನಾಡುವುದು ಸರಿಯಲ್ಲ. ಇನ್ನೊಬ್ಬರ ಬಗ್ಗೆ ಮಾತಾಡುವುದಕ್ಕೆ ಅವರಿಗೆ ನೈತಿಕತೆ ಇಲ್ಲ. ರಾಹುಲ್ ಹಾಗೂ ಸಿದ್ದರಾಮಯ್ಯ ಅವರಿಗೆ ಜನ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ. ವರುಣಾದಲ್ಲಿ ನೋಟಾ ಕೈಬಿಟ್ಟು ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಕೋರಿದ್ದೇನೆ ಎಂದ್ರು.

    ಈಗಾಗಲೇ ಯಡಿಯೂರಪ್ಪ 224 ಕ್ಷೇತ್ರದಲ್ಲಿ ಪರಿವರ್ತನಾ ಯಾತ್ರೆ ಮಾಡಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದು, ಕೇವಲ ಆಪ್ತರ 100 ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಪ್ಲಾನ್ ರೂಪಿಸಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

  • ಸಿಎಂ ಜೊತೆ ಮಾತಿನ ಜಟಾಪಟಿ ನಡೆಸಿದ್ದ ಮರಿಸ್ವಾಮಿಗೆ ಎಚ್‍ಡಿಕೆಯಿಂದ ಸನ್ಮಾನ

    ಸಿಎಂ ಜೊತೆ ಮಾತಿನ ಜಟಾಪಟಿ ನಡೆಸಿದ್ದ ಮರಿಸ್ವಾಮಿಗೆ ಎಚ್‍ಡಿಕೆಯಿಂದ ಸನ್ಮಾನ

    ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದ ವೇಳೆ ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದ ಪಕ್ಷದ ಕಾರ್ಯಕರ್ತ ಮರಿಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಸನ್ಮಾನಿಸಿದ್ದಾರೆ.

    ತಾವು ತಂಗಿದ್ದ ಖಾಸಗಿ ರೆಸಾರ್ಟ್ ಗೆ ಕರೆಸಿಕೊಂಡು ಎಚ್‍ಡಿ ಕುಮಾರಸ್ವಾಮಿ ಅವರು ಹಳೆಕೆಸರೆ ಗ್ರಾಮದ ಗ್ರಾ.ಪಂ. ಸದಸ್ಯ ಮರಿಸ್ವಾಮಿ ಅವರನ್ನು ಸನ್ಮಾನಿಸಿದ್ದಾರೆ.

    ವರುಣಾ ಮತ್ತು ಟಿ.ನರಸೀಪುರ ನಡೆದಿರುವಷ್ಟು ಅಕ್ರಮಗಳು ಇನ್ನೆಲ್ಲೂ ನಡೆದಿಲ್ಲ. ಯಾವುದೇ ಕಾರಣಕ್ಕೂ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ದೇವೇಗೌಡರ ಆಶೀರ್ವಾದ ಇಲ್ಲ. ಅಕ್ರಮ ಮಾಡಿರುವವರಿಗೆ ನಾವು ಯಾಕೆ ಆಶೀರ್ವಾದ ಮಾಡಬೇಕು? ದೇವೇಗೌಡರ ಆಶೀರ್ವಾದ ತಮಗೆ ಇದೆ ಎಂದು ಸುಳ್ಳು ಹೇಳಿ ಮಹಾದೇವಪ್ಪ ತಿರುಗುತ್ತಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

    ಬುಧವಾರ ಹಳೆಕೆಸರೆ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಗ್ರಾಮ ಪಂಚಾಯಿತಿಯ ಜೆಡಿಎಸ್ ಸದಸ್ಯ ಮರಿಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ನಡೆದಿತ್ತು.

    ಏ ಮರಿಸ್ವಾಮಿ… ನೀ ನನ್ನ ಜೊತೆ ಇದ್ದಲ್ಲಯ್ಯ ಬಾ ಅಂತ ಸಿಎಂ ಕರೆದ್ರು. ಆಗ ಮರಿಸ್ವಾಮಿ, ನಾನು ಜೆಡಿಎಸ್‍ನಲ್ಲಿದ್ದೇನೆ ಬರೋಲ್ಲ ಎಂದರು. ಆಗ ಸಿದ್ದರಾಮಯ್ಯ, ಆಯ್ತು ನೀ ಬರಬೇಡ ವೋಟು ಹಾಕು ಅಂದ್ರು. ಇದಕ್ಕೆ ಮರಿಸ್ವಾಮಿ, ನಾ ಬರೋದು ಇಲ್ಲ, ವೋಟು ಹಾಕೋಲ್ಲ ಎಂದ್ರು. ಅದಕ್ಕೆ ಸಿಎಂ ಆಯ್ತು ಬರಬೇಡ ಹೋಗು ಎಂದರು.

    ಸಿಎಂ ಮಾತಿನಿಂದ ಗರಂ ಆದ ಮರಿಸ್ವಾಮಿ, ನೀವು ನಮ್ಮ ಊರಿನಲ್ಲಿ ಇರೋದು. ಮೊದ್ಲು ನೀವೇ ಹೋಗಿ. ನಿಮ್ಮನ್ನ ಉಪಮುಖ್ಯಮಂತ್ರಿ ಮಾಡಿದ ಮಹಾಸ್ವಾಮಿಗೆ ದೊಡ್ಡ ನಮಸ್ಕಾರ ಎಂದು ತಿರುಗೇಟು ನೀಡಿದ್ದರು.

  • ಕರ್ನಾಟಕದ ಅಭಿವೃದ್ಧಿಯೇ ಬಿಜೆಪಿ ಅಜೆಂಡಾ -ಅಭ್ಯರ್ಥಿಗಳಿಗೆ ಮೋದಿ ಪ್ರಚಾರ ಪಾಠ

    ಕರ್ನಾಟಕದ ಅಭಿವೃದ್ಧಿಯೇ ಬಿಜೆಪಿ ಅಜೆಂಡಾ -ಅಭ್ಯರ್ಥಿಗಳಿಗೆ ಮೋದಿ ಪ್ರಚಾರ ಪಾಠ

    -ಕಾಂಗ್ರೆಸ್‍ ಸಂಸ್ಕೃತಿಯನ್ನು ಹೊಡೆದುರುಳಿಸಿ

    ಬೆಂಗಳೂರು: ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲ ಪಕ್ಷಗಳು ಪ್ರಚಾರ ಕಾರ್ಯಗಳಲ್ಲಿ ತೊಡಗಿಕೊಂಡಿವೆ. ಇನ್ನು ಪಕ್ಷದ ಹಿರಿಯ ನಾಯಕರು ತಮ್ಮ ಕಾರ್ಯಕರ್ತರಿಗೆ ಯಾವ ರೀತಿ ಪ್ರಚಾರದಲ್ಲಿ ಭಾಗಿಯಾಗಬೇಕೆಂಬುದರ ಬಗ್ಗೆ ತರಬೇತಿಯನ್ನು ನೀಡುತ್ತಿವೆ.

    ಪ್ರಧಾನಿ ನರೇಂದ್ರ ಮೋದಿ ಸಹ ಇಂದು ನಮೋ ಆಪ್ ಮೂಲಕ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಜೊತೆ ಸಂವಾದ ನಡೆಸಿದ್ರು. ಇಂದು ಬೆಳಗ್ಗೆ 9 ಗಂಟೆಗೆ ಪಕ್ಷದ ಸಂಸದರು, ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದರು.

    ಸಂವಾದದ ಪ್ರಮುಖ 10 ಅಂಶಗಳು:
    1. ಸಂವಾದದ ಆರಂಭದಲ್ಲಿಯೇ ಪ್ರಧಾನಿ ಮೋದಿ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಪಕ್ಷದ ಅಜೆಂಡಾ ಅಂದ್ರು.
    2. ಬಿಜೆಪಿ ರಾಜಕೀಯಕ್ಕಿಂತೂ ಅಭಿವೃದ್ಧಿಗೆ ಮೊದಲ ಆದ್ಯತೆಯನ್ನು ನೀಡುತ್ತದೆ.
    3. ವಿಧಾನಸಭಾ ಕ್ಷೇತ್ರ ಗೆಲ್ಲೋದು ನಮ್ಮ ಗುರಿ ಅಲ್ಲ. ಪ್ರತಿಯೊಂದು ಬೂತ್ ಗಳನ್ನು ಗೆಲ್ಲುವುದರ ಜೊತೆಗೆ ಅಲ್ಲಿಯ ಜನರೊಂದಿಗೆ ಬೆರೆಯಬೇಕು. ಎಷ್ಟು ಪುರುಷ ಕಾರ್ಯಕರ್ತರಿದ್ದಾರೋ, ಅಷ್ಟೇ ಮಹಿಳಾ ಕಾರ್ಯಕರ್ತರು ಇರಬೇಕು.
    4. ಕರ್ನಾಟಕದ ಚುನಾವಣೆಯನ್ನು ನಮ್ಮ ಶಕ್ತಿಯ ಆಧಾರದ ಮೇಲೆ ಜಯಿಸಬೇಕು.
    5. ಇತ್ತೀಚಿನ ಕೆಲವು ಚುನಾವಣೆಗಳನ್ನು ಗಮನಿಸಿದಾಗ ಕೆಲವೊಂದು ಪಕ್ಷಗಳು ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿವೆ. ಇದ್ರಿಂದ ಜನರು ಧರ್ಮ ಮತ್ತು ರಾಜಕಾರಣದಲ್ಲಿ ಸಿಲುಕಿದ್ದಾರೆ.
    6. ಕಾಂಗ್ರೆಸ್ 4 ವರ್ಷಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಕೇವಲ 380 ಕೋಟಿ ರೂ. ಬಳಸಿದೆ. ಆದ್ರೆ 1600 ಕೋಟಿಯನ್ನು ಮೂಲ ಸೌಕರ್ಯ ಅಭಿವೃದ್ಧಿಗಾಗಿ ಬಳಸಿದ್ದೇವೆ.
    7. ಚುನಾವಣಾ ಪ್ರಚಾರದ ಕೆಲಸವನ್ನು ವಿದೇಶಿ ಏಜೆಂಟ್‍ಗಳನ್ನು ನೇಮಿಸುವ ಜನರನ್ನು ಕಾಂಗ್ರೆಸ್ ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸುತ್ತಿದೆ.
    8. ಬಿಜೆಪಿ ಕಾರ್ಯಕರ್ತರು ಮತದಾರರೊಂದಿಗೆ ಉತ್ತಮ ಬಾಂಧವ್ಯನ್ನು ಹೊಂದಬೇಕು.
    9. ಕೇಂದ್ರ ಸರ್ಕಾರ ಕರ್ನಾಟಕದ ರಸ್ತೆ ಅಭಿವೃದ್ಧಿಗಾಗಿ 14,000 ಕೋಟಿ ರೂ. ಹಣವನ್ನು ಮೀಸಲಿರಿಸಿದೆ. ಕೇವಲ 4 ವರ್ಷಗಳಲ್ಲಿ 1,750 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ, ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಸಬ್ ಅರ್ಬನ್ ರೈಲುಗಳನ್ನು ಘೋಷಣೆ ಮಾಡಲಾಗಿದೆ.
    10. ಇದೇ ವೇಳೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದ ಅಪಘಾತಕ್ಕೆ ಸಂತಾಪ ಸೂಚಿಸಿದ್ರು. ಘಟನೆ ಸಂಬಂಧ ರೈಲ್ವೆ ಇಲಾಖೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದೆ ಅಂತಾ ಅಂದ್ರು.

    ಭಾರತೀಯ ರಾಜಕೀಯ ದೋಷಗಳ ಮೂಲ ಕಾಂಗ್ರೆಸ್. ಹಾಗಾಗಿ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸ್ಕೃತಿಯನ್ನು ತೆಗೆದು ಹಾಕಿದ್ರೆ ಮಾತ್ರ ರಾಜಕೀಯ ವ್ಯವಸ್ಥೆಯನ್ನು ಶುದ್ಧಿಕರಿಸಲು ಸಾಧ್ಯ ಅಂತಾ ತಿಳಿಸಿದರು.

  • ಅಂಬರೀಶ್, ನಾನು ಅಣ್ಣ-ತಮ್ಮಂದಿರಿದ್ದಂತೆ: ಕುಮಾರಸ್ವಾಮಿ

    ಅಂಬರೀಶ್, ನಾನು ಅಣ್ಣ-ತಮ್ಮಂದಿರಿದ್ದಂತೆ: ಕುಮಾರಸ್ವಾಮಿ

    ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಾನು ಸಹೋದರರಿದ್ದಂತೆ. ರಾಜ್ಯ ರೈತರ ಹಿತದದೃಷ್ಟಿಯಿಂದ ಅಂಬರೀಶ್ ಅವರು ನಮ್ಮ ಪಕ್ಷಕ್ಕೆ ಬೆಂಬಲಕೊಟ್ಟರೆ ಸಂಪೂರ್ಣ ಸ್ವಾಗತವಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

    ಮದ್ದೂರಿನಲ್ಲಿ ಮಾತನಾಡಿದ ಅವರು, ಅಂಬರೀಶ್ ಅವರಿಗೆ ದೇವೇಗೌಡರ ಜೊತೆ ಉತ್ತಮ ಬಾಂಧವ್ಯ ಹಾಗೂ ಗೌರವ ಇದೆ. ರಾಜ್ಯದಲ್ಲಿ ಒಳ್ಳೆಯ ಸರ್ಕಾರ ತರುವ ದೃಷ್ಟಿಯಿಂದ ಅಂಬರೀಶ್ ನಮ್ಮ ಪಕ್ಷಕ್ಕೆ ಬರುವುದಾದರೆ ಅವರಿಗೆ ನಮ್ಮ ಕಡೆಯಿಂದ ಸ್ವಾಗತವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಪ ಜನರಿಗೆ ನ್ಯಾಯ ದೊರಕಿಸಿಕೊಡಲು ಆಗಲ್ಲ ಅಂತ ಹಿಂದೆ ಸರಿದಿದ್ದಾರೆ- ಅಂಬಿಯನ್ನು ಹಾಡಿಹೊಗಳಿದ ಡಿಕೆಶಿ

    ಅಂಬರೀಶ್ ಅವರು ನಾನು ಅಣ್ಣ ತಮ್ಮಂದಿರಿದ್ದ ಹಾಗೆ. ಅವರು ಯಾವುದೇ ಪಕ್ಷದಲ್ಲಿದ್ದರೂ ಅಜಾತಶತ್ರು. ಅವರು ಎಲ್ಲರ ಜೊತೆ ಸ್ನೇಹ ಜೀವಿಯಾಗಿರಬೇಕೆಂದು ಬಯಸುತ್ತಾರೆ. ಅವರು ಕಾಂಗ್ರೆಸ್ ಜೊತೆಯಲ್ಲಿದ್ದರು ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ರಾಜ್ಯ ಮತ್ತು ರೈತರ ಹಿತದೃಷ್ಟಿಯಿಂದ ಅಂಬರೀಶ್ ಅವರು ನಮ್ಮ ಪಕ್ಷಕ್ಕೆ ಬೆಂಬಲ ಕೊಟ್ಟರೆ ಸಂಪೂರ್ಣ ಸ್ವಾಗತವಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.