Tag: Karnataka Election 2018

  • ನಾವು ರಾಹುಲ್ ಬಾಬಾಗೆ ಏಕೆ ಹೇಳ್ಬೇಕು?: ಅಮಿತ್ ಶಾ

    ನಾವು ರಾಹುಲ್ ಬಾಬಾಗೆ ಏಕೆ ಹೇಳ್ಬೇಕು?: ಅಮಿತ್ ಶಾ

    ವಿಜಯಪುರ: ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರ ಸರ್ಕಾರ 216 ರೈತಪರ ಯೋಜನೆಗಳ ಮೂಲಕ 1 ಲಕ್ಷ 20 ಸಾವಿರ ಕೋಟಿ ರೂ.ಗಳನ್ನು ಜಾರಿಗೆ ತಂದಿದೆ. ಆದರೆ ರಾಹುಲ್ ಬಾಬಾ ನಾಲ್ಕು ವರ್ಷಗಳಲ್ಲಿ ಮೋದಿ ಅವರ ಕೊಡುಗೆ ಏನು ಎಂದು ಕೇಳ್ತಾರೆ, ನಾವು ರಾಹುಲ್ ಬಾಬಾಗೆ ಏಕೆ ಹೇಳ್ಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಜಿಲ್ಲೆಯ ಬಬಲೇಶ್ವರ ಮತ ಕ್ಷೇತ್ರದ ತಿಕೋಟಾದಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದ ಅಮಿತ್ ಶಾ, ರಾಜ್ಯದಲ್ಲಿ ಬಿಜೆಪಿ ಅಲೆ ನಿರ್ಮಾಣವಾಗಿತ್ತು. ಈಗ ಅದು ಸುನಾಮಿಯಾಗಿದೆ. ಇದು ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೆಸೆಯಲಿದೆ. ರಾಹುಲ್ ಬಾಬಾ ಅವರು 1 ರಿಂದ ಅಂಕಿ ಎಣಿಸಿ ದೇಶದಲ್ಲಿ ಎಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಎಲ್ಲೆಡೆ ನಿದ್ರೆ ಮಾಡುವ ಕೆಲಸ ಮಾಡುತ್ತಾರೆ. ರಾಜ್ಯದ ಮುಖ್ಯ ಮಂತ್ರಿಗಳು ನಿದ್ರೆ ಮಾಡಿದರೆ ಎಲ್ಲಿ ಅಭಿವೃದ್ಧಿಯಾಗುತ್ತದೆ ಎಂದು ರಾಹುಲ್ ಬಾಬಾರನ್ನು ಕೇಳಿ ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.

    2014 ನಂತರ 15 ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕದಲ್ಲಿ ಕೂಡ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ನಿಮಗೆ ಕಮಿಟೆಡ್ ಸರ್ಕಾರ ಬೇಕಾ, ಕಮಿಷನ್ ಸರ್ಕಾರ ಬೇಕಾ. ಕಮಿಟೆಡ್ ಸರ್ಕಾರ ಬೇಕಿದ್ದರೆ ಬಿಜೆಪಿಯನ್ನು ಬೆಂಬಲಿಸಿ. ರಾಜ್ಯದಲ್ಲಿ ಕಾಂಗ್ರೆಸ್ ರೈತರಿಗೆ ಅನ್ಯಾಯ ಮಾಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಈ ಸರ್ಕಾರ ಅವಧಿಯಲ್ಲಿ 24 ಅಧಿಕಾರಿಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.

    ರಾಹುಲ್ ಬಾಬಾ ರೈತರ ಬಗ್ಗೆ ಟಿವಿಯಲ್ಲಿ ಕಾಳಜಿ ತೋರಿ ಮೋದಿ ಸರ್ಕಾರ ರೈತರಿಗೆ 4 ವರ್ಷದಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಆದರೆ ಕೇಂದ್ರ ಸರ್ಕಾರ 37 ಸಾವಿರ ಕೋಟಿ ರೂ. ಮುದ್ರಾ ಯೋಜನೆ ಅಡಿ ಬ್ಯಾಂಕ್‍ನಿಂದ ರೈತರಿಗೆ ನೀಡಿದೆ ಅಂತಾ ತಿಳಿಸಿದ್ರು.

  • ವಯಸ್ಸಾದ ಯಡಿಯೂರಪ್ಪ ಯಾಕೆ ಸಿಎಂ ಅಭ್ಯರ್ಥಿ? ಸಂವಾದದಲ್ಲಿ ಸ್ಮೃತಿ ಇರಾನಿಗೆ ಯುವತಿ ಪ್ರಶ್ನೆ

    ವಯಸ್ಸಾದ ಯಡಿಯೂರಪ್ಪ ಯಾಕೆ ಸಿಎಂ ಅಭ್ಯರ್ಥಿ? ಸಂವಾದದಲ್ಲಿ ಸ್ಮೃತಿ ಇರಾನಿಗೆ ಯುವತಿ ಪ್ರಶ್ನೆ

    ಬೆಳಗಾವಿ: ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತದೆ. ಆದರೇ ಬಿಜೆಪಿ ಯಾಕೆ ವಯಸ್ಸಾದ ಯಡಿಯೂರಪ್ಪ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ ಎಂದು ಯುವತಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪ್ರಶ್ನೆ ಮಾಡಿದ್ದಾರೆ.

    ನಗರದ ಕೆಎಲ್‍ಇ ಜಿರಿಗೆ ಭವವನದಲ್ಲಿ ನಡೆದ ಕರುನಾಡ ಜಾಗೃತಿ ಮಹಿಳಾ ಸಂವಾದದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಇಂತಹದೊಂದು ಪ್ರಶ್ನೆಯನ್ನು ಕೇಳಲಾಗಿದೆ. ಪ್ರಶ್ನೆಗೆ ಉತ್ತರಿಸಿದ ಸ್ಮೃತಿ ಇರಾನಿ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ಉದಾಹರಣೆ ನೀಡಿ ವಯಸ್ಸಿಗಿಂತ ಅನುಭವ ಮುಖ್ಯ ಅಂದ್ರು.

    ಇದೇ ಸಂವಾದ ಕಾರ್ಯಕ್ರಮದಲ್ಲಿ ದೇಶದಲ್ಲಿ ಡಿಜಿಟಲ್ ಇಂಡಿಯಾದ ಬಗ್ಗೆ ಮಾತನಾಡುತ್ತೀರಿ ಆದರೇ ಎಂಟಿಎಂ ನಲ್ಲಿ ಹಣ ಕೊರತೆ ಉಂಟಾಗಿದೆ ಅಲ್ಲ ಇದಕ್ಕೆ ಎನಂತಿರಿ ಅಂತಾ ಪ್ರಶ್ನೆ ಕೇಳಲಾಯಿತು. ಎಟಿಎಂಗಳಲ್ಲಿ ಹಣವಿದ್ದು, ನೋಟ್ ಅಮಾನೀಕರಣದ ವೇಳೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಇನ್ನೂ ಕೆಲವರು ಕೃತಕ ಅಭಾವ ಸೃಷ್ಠಿಸಲು ಹೊರಟ್ಟಿದ್ದಾರೆ. ರಾಜಕಾರಣಿಗಳು ಹಣ ಹಂಚಿಕೆ ಮಾಡಲು ಹಣ ಸಂಗ್ರಹ ಮಾಡಿರುವ ಅನುಮಾನವಿದೆ ಅಂತಾ ತಿಳಿಸಿದ್ರು.

  • ಕನ್ನಡದ ಕಂದ ಸಿದ್ದರಾಮಯ್ಯ ಮರಾಠಿ ಜಪ – ಬೆಳಗಾವಿಯಲ್ಲಿ ಭಾಷೆ ಬರಲ್ಲ ಎಂದು ಕ್ಷಮೆಯಾಚನೆ

    ಕನ್ನಡದ ಕಂದ ಸಿದ್ದರಾಮಯ್ಯ ಮರಾಠಿ ಜಪ – ಬೆಳಗಾವಿಯಲ್ಲಿ ಭಾಷೆ ಬರಲ್ಲ ಎಂದು ಕ್ಷಮೆಯಾಚನೆ

    ಬೆಳಗಾವಿ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ತನಗೆ ಮರಾಠಿ ಮಾತನಾಡಲು ಬರಲ್ಲ ಅದ್ದರಿಂದ ಕ್ಷಮಿಸಿ ಎಂದು ಹೇಳಿದ್ದಾರೆ.

    ಬೆಳಗಾವಿಯ ಚಿಕ್ಕೋಡಿ ಹಾಗೂ ನಿಪ್ಪಾಣಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಈ ವೇಳೆ ಕಾರ್ಯಕ್ರಮಕ್ಕೆ 3 ಗಂಟೆ ತಡವಾಗಿ ಬಂದ ಅವರು ವೇದಿಕೆಗೆ ಆಗಮಿಸಿ ಕ್ಷಮೆ ಕೋರಿದರು. ಆದರೆ ಮಹಾರಾಷ್ಟ್ರ ಗಡಿ ಪ್ರದೇಶವಾದ ಕಾರಣ ಅವರು ಮತ್ತೆ ತನಗೆ ಮರಾಠಿ ಭಾಷೆ ಬರಲ್ಲ ಎಂದು ಕ್ಷಮೆ ಕೇಳಿದರು.

    ಈ ಹಿಂದೆ ಬಿಜೆಪಿ ಕೇಂದ್ರ ನಾಯಕರ ವಿರುದ್ಧ ಕನ್ನಡ ಭಾಷೆಯ ಅಸ್ತ್ರ ಪ್ರಯೋಗಿಸಿ ತನಗೆ ಹಿಂದಿ ಭಾಷೆ ಬರಲ್ಲ ಎಂದು ಕಾಳೆಲೆದಿದ್ದರು. ಆದರೆ ಇಂದು ನಿಪ್ಪಾಣಿ ಕ್ಷೇತ್ರದಲ್ಲಿ ಮರಾಠಿ ಭಾಷಿಕರ ಮನವೊಲಿಸಲು ಕ್ಷಮೆ ಕೇಳಿದ್ದಾರೆ.

    ಬಳಿಕ ಸಮಾವೇಶದಲ್ಲಿ ಮಾತನಾಡಿದ ಅವರು ವಿರೋಧಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ, ಜೆಡಿಎಸ್ ಅವರಪ್ಪನ ಆಣೆ ಅಧಿಕಾರಕ್ಕೆ ಬರುವುದಿಲ್ಲ ಎಂದರು. ಇದೇ ವೇಳೆ ತಾವು ಅಧಿಕಾರಕ್ಕೆ ಬಂದರೆ ಕುರಿಗಾಹಿಗಳ ಎಲ್ಲ ಸಾಲ ಮನ್ನಾ ಮಾಡಲು ತೀರ್ಮಾನಿಸಿದ್ದೇವೆ ಎಂದು ಘೋಷಿಸಿದರು.

    https://www.youtube.com/watch?v=mOOgdKVxZZg

  • ಕಾಂಗ್ರೆಸ್‍ನಿಂದ ಬೆಂಗಳೂರು ವಿಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ

    ಕಾಂಗ್ರೆಸ್‍ನಿಂದ ಬೆಂಗಳೂರು ವಿಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆ

    ಬೆಂಗಳೂರು: ಶುಕ್ರವಾರ ಮಂಗಳೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ರು. ಆದ್ರೆ ಇಂದು ಬೆಂಗಳೂರು ವಲಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

    ಪ್ರತ್ಯೇಕ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನಗರಕ್ಕೆ ಸಾಕಷ್ಟು ಭರವಸೆಗಳನ್ನು ನೀಡಿದೆ. ನಗರದ ಜ್ಞಾನ ಜ್ಯೋತಿ ಸಂಭಾಗಣದಲ್ಲಿ ವೀರಪ್ಪ ಮೊಯ್ಲಿ, ಬಿಕೆ ಹರಿಪ್ರಸಾದ್, ಮಾಜಿ ಪ್ರಧಾನಿಗಳ ಸಲಹೆಗಾರ ಶ್ಯಾಮ್ ಪೀತ್ರೋಡ್, ಕೆಜೆ ಜಾರ್ಜ್, ದಿನೇಶ್ ಗೂಂಡುರಾವ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ರು.

    ಪ್ರಣಾಳಿಕೆಯ ಪ್ರಮುಖ ಭರವಸೆಗಳು ಹೀಗಿವೆ.
    * ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಕ್ಕೆ ಒಂದು ಲಕ್ಷ ಕೋಟಿ ವಿಶೇಷ ಪ್ಯಾಕೇಜ್.
    * ಟೆಂಡರ್ ಶ್ಯೂರ್ ರಸ್ತೆಗಳ ವ್ಯಾಪ್ತಿ ವಿಸ್ತರಣೆ.
    * ಮೆಟ್ರೊ ಸೌಲಭ್ಯ ವಿಸ್ತರಣೆ.
    * ಜನದಟ್ಟಣೆ ಪ್ರದೇಶದಲ್ಲಿ ಸ್ಕೈವಾಕ್ ನಿರ್ಮಾಣ.
    * ಹಸಿರು ಮನೆಗಳ ಉತ್ತೇಜನಕ್ಕೆ ಉದ್ಯಾನವನಗಳ ನವೀಕರಣ.
    * ಲಕ್ಷ್ಮಣರಾವ್ ವರದಿ ಪ್ರಕಾರ ಕೆರೆಗಳ ಜೀರ್ಣೋದ್ಧಾರ
    * ನಗರ ಪ್ರಮುಖ ರಸ್ತೆಗಳಲ್ಲಿ ವೈಟ್ ಟ್ಯಾಪಿಂಗ್ ಪೂರ್ಣ.
    * ಬೆಂಗಳೂರಿನ ಪಕ್ಕದ ಜಿಲ್ಲೆಗಳಿಗೆ ಮೆಟ್ರೊ ವಿಸ್ತರಣೆ.
    * ಖಾಸಗಿ ಬಸ್‍ಗಳು ನಗರ ಪ್ರವೇಶಿಸದಂತೆ ನಿರ್ಬಂಧ.
    * ಬೆಂಗಳೂರು ಹೊರವಲಯದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ.
    * ಡೆಲ್ಲಿ ಮೆಟ್ರೊ ಅಂಡರ್ ಗ್ರೌಂಡ್  ಮಾದರಿಯಲ್ಲಿ ಅಂಡರ್ ಗ್ರೌಂಡ್  ಪಥ ನಿರ್ಮಾಣ.
    * ಎಲ್ಲಾ ಪ್ರಮುಖ ಜಂಕ್ಷನ್‍ಗಳಲ್ಲಿ ಸಿಸಿಟಿವಿ.
    * ಆಂಬ್ಯುಲೆನ್ಸ್, ಅಗ್ನಿಶಾಮಕ ವಾಹನಗಳಿಗೆ ಪ್ರತ್ಯೇಕ ಪಥ.
    * ಘನತ್ಯಾಜ್ಯ ಬೇರ್ಪಡಿಸುವಿಕೆ ಕಡ್ಡಾಯ.
    * ಮೇಕೆದಾಟು ಅಣೆಕಟ್ಟು ನಿರ್ಮಾಣ – ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ.
    * ಬೆಂಗಳೂರು ಅಭಿವೃದ್ಧಿಗಾಗಿ ಮೆಟ್ರೊಪಾಲಿಟಿನ್ ಯೋಜನೆ.
    * ಪ್ರತಿ ಮನೆಗಳಿಗೆ 125 ಎಮ್‍ಎಲ್‍ಡಿ ನೀರು ನೀಡುವುದು.
    * ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ.
    * ಸಾರಿಗೆ ಅನೂಕಲಕ್ಕೆ ಹೆಚ್ಚಿನ ಫ್ಲೈ ಓವರ್ ನಿರ್ಮಾಣ.
    * ಹೆಚ್ಚಿನ ತಂತ್ರಜ್ಞಾನದ ಒಳಚರಂಡಿ, ನೀರು ಶುದ್ದೀಕರಣ ಘಟಕ, ಕೆರೆಗಳ ಅಭಿವೃದ್ಧಿ.

    ಒಟ್ಟಿನಲ್ಲಿ ಕಾಂಗ್ರೆಸ್ ಬೆಂಗಳೂರಿನ ಎಲ್ಲಾ ಕ್ಷೇತ್ರಗಳನ್ನು ಪಾರುಪತ್ಯ ಸಾಧಿಸಲು ಭರಪೂರ ಭರವಸೆಗಳನ್ನ ನೀಡಿದೆ.

  • ಮೋದಿಯವರೇ ಗಂಡಸ್ತನ ಇದ್ದರೆ ಸಿದ್ದರಾಮಯ್ಯರ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿ: ಸಿ.ಎಂ.ಇಬ್ರಾಹಿಂ

    ಮೋದಿಯವರೇ ಗಂಡಸ್ತನ ಇದ್ದರೆ ಸಿದ್ದರಾಮಯ್ಯರ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿ: ಸಿ.ಎಂ.ಇಬ್ರಾಹಿಂ

    ಬೆಳಗಾವಿ: ಕರ್ನಾಟಕದಲ್ಲಿ ಬಿಜೆಪಿ ನಾಯಕರು ಭ್ರಷ್ಟ ಸರ್ಕಾರ, ಭ್ರಷ್ಟ ಸರ್ಕಾರ ಅಂತ ಬರೀ ಭಾಷಣ ಮಾಡ್ತಾರೆ. ಚುನಾವಣೆಗೆ ಇನ್ನೂ 15 ದಿನಗಳ ಕಾಲವಿದ್ದು, ಮೋದಿಯವರೇ ಗಂಡಸ್ತನ ಇದ್ದರೆ ಸಿಎಂ ಸಿದ್ದರಾಮಯ್ಯರ ವಿರುದ್ಧ ಮಾಡುವ ಒಂದಾದ್ರೂ ಭ್ರಷ್ಟಾಚಾರದ ಆರೋಪವನ್ನು ಸಾಬೀತು ಮಾಡಿ ತೋರಿಸಿ ಅಂತಾ ಮಾಜಿ ಸಚಿವ ಸಿ.ಎಂ ಇಬ್ರಾಹಿಂ ಬಹಿರಂಗ ಸವಾಲು ಹಾಕಿದ್ದಾರೆ.

    ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಬೇಡಿಕಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ವೇಳೆ ಮೋದಿ ಅವರು ಸಿದ್ದರಾಮಯ್ಯರ ಭ್ರಷ್ಟಾಚಾರದ ಆರೋಪವನ್ನು ಸಾಬೀತು ಮಾಡಿದ್ದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಅಂತಾ ಶಪಥ ಮಾಡಿದ್ರು.

    ಹತ್ತು ಪೆರ್ಸೆಂಟ್ ಆರೋಪ ನಿಮಗೆ ಶೋಭೆ ತರಲ್ಲ. ಪೆಟ್ರೋಲ್ ಬೆಲೆ ಗಗನಕ್ಕೆ ಏರಿದ್ದು, 400 ರೂಪಾಯಿ ಇದ್ದ ಸಿಲಿಂಡರ್ ಬೆಲೆ 800 ರೂ. ಆಗಿದೆ. ಬದಾಮಿಯಲ್ಲಿ ಸಿಎಂ ಗೆಲುವು ನಿಶ್ಚಿತವಾಗಿದೆ. 5 ವರ್ಷ ಕೂಲಿ ಮಾಡಿದ್ದೇವೆ ನಮಗೆ ಆಶೀರ್ವಾದ ಮಾಡಿ, ಮುಂದೆ ರಾಹುಲ್ ಗಾಂಧಿ ಪ್ರಧಾನಿ ಆಗುವುದು ಸಹ ನಿಶ್ಚಿತ. ಮೋದಿ ಅವರ ಮನೆಯಲ್ಲಿ ಯಾರಾದರೂ ದೇಶಕ್ಕಾಗಿ ಸತ್ತಿದ್ದಾರಾ? ಆದರೆ ಗಾಂಧೀ ಕುಟುಂಬದವರು ದೇಶಕ್ಕಾಗಿ ಸಾವನ್ನಪ್ಪಿದ್ದಾರೆ. ಬಿಜೆಪಿ ಅವರು ಯಾರಾದರೂ ದೇಶಕ್ಕಾಗಿ ಸಾವನ್ನಪ್ಪಿದ್ದಾರಾ ಎಂದು ಪ್ರಶ್ನಿಸಿದ್ರು.

  • ಹೆಲ್ಮೆಟ್ ಹಾಕಿದ್ರೆ ತಲೆ ಉಳಿಯುತ್ತೆ, ಮತ ಹಾಕಿದ್ರೆ ದೇಶ ಉಳಿಯುತ್ತೆ- ಸಿದ್ದಗಂಗಾ ಕಿರಿಯ ಶ್ರೀಗಳಿಂದ ಮತದಾನದ ಜಾಗೃತಿ

    ಹೆಲ್ಮೆಟ್ ಹಾಕಿದ್ರೆ ತಲೆ ಉಳಿಯುತ್ತೆ, ಮತ ಹಾಕಿದ್ರೆ ದೇಶ ಉಳಿಯುತ್ತೆ- ಸಿದ್ದಗಂಗಾ ಕಿರಿಯ ಶ್ರೀಗಳಿಂದ ಮತದಾನದ ಜಾಗೃತಿ

    ತುಮಕೂರು: ಮತದಾನ ನಮ್ಮ ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು. ಅದನ್ನು ಯಾವುದೇ ಕಾರಣದಿಂದ ಕಳೆದುಕೊಳ್ಳಬಾರದು. ಮತದ ಪಾವಿತ್ರತೆಯನ್ನು ಕಾಪಾಡಿಕೊಳ್ಳಿ ಎಂದು ಸಿದ್ದಗಂಗಾ ಕಿರಿಯ ಶ್ರೀಗಳು ಸಾರ್ವಜನಿಕರಲ್ಲಿ ಮನವಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

    ಕುಣಿಗಲ್ ನ ಕೆಂಪನಹಳ್ಳಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ದಯವಿಟ್ಟು ಯಾರೂ ಮನೆಯಲ್ಲಿ ಕೂರದೇ ಕಡ್ಡಾಯವಾಗಿ ಮತಗಟ್ಟೆಗೆ ಹೋಗಿ ತಮಗೆ ಇಚ್ಛೆ ಬಂದ ಅಭ್ಯರ್ಥಿಗೆ ಮತದಾನ ಮಾಡಿ. ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ಪ್ರಜೆಗಳಾಗಿ ನಮ್ಮ ಮೇಲೆ ಇರುವ ಜವಾಬ್ದಾರಿ ಎಂದು ಭಕ್ತರಲ್ಲಿ ವಿನಂತಿ ಮಾಡಿಕೊಂಡರು.

    ಹೆಲ್ಮೆಟ್ ಹಾಕಿದರೆ ತಲೆ ಉಳಿಯುತ್ತೆ ಮತ ಹಾಕಿದರೆ ದೇಶ ಉಳಿಯುತ್ತೆ ಎಂದು ಹೇಳುತ್ತಾರೆ. ಉತ್ತಮ ನಾಯಕನನ್ನು ಆಯ್ಕೆ ಮಾಡುವುದು ಪ್ರಜೆಗಳಾದ ನಮ್ಮ ಮೇಲೆ ಇರುವ ಜವಾಬ್ದಾರಿ. ಮತದಾನ ಮಾಡುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ ಎಂದು ಹೇಳಿದರು.

    ತಾನೂ ಪ್ರತೀ ನಿತ್ಯ ಬಾಗಿಯಾಗುವ ಎಲ್ಲಾ ವೇದಿಕೆಯಲ್ಲಿ ಸಿದ್ದಲಿಂಗಸ್ವಾಮಿಗಳು ಮತದಾನದ ಮಹತ್ವದ ಕುರಿತು ಅರಿವು ಮೂಡಿಸುತಿದ್ದಾರೆ.

  • ಅಮಿತ್ ಶಾ ಹೆಲಿಪ್ಯಾಡ್ ಗಾಗಿ ಅಮಾಯಕನ ಹೊಲ ನಾಶಗೊಳಿಸಿದ ಬಿಜೆಪಿಗರು!

    ಅಮಿತ್ ಶಾ ಹೆಲಿಪ್ಯಾಡ್ ಗಾಗಿ ಅಮಾಯಕನ ಹೊಲ ನಾಶಗೊಳಿಸಿದ ಬಿಜೆಪಿಗರು!

    ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಲಿಪ್ಯಾಡ್ ಗಾಗಿ ಅಮಾಯಕ ರೈತರೊಬ್ಬರ ಹೊಲ ನಾಶ ಮಾಡಿರೋ ಆರೋಪವೊಂದು ಕೇಳಿ ಬಂದಿದೆ.

    ಬಿಜೆಪಿಯವರು ಜಗದೀಶ್ ಕರಡಿ ಎಂಬ ರೈತರ ಹೊಲದ ಬದುಗಳನ್ನು ಒಡೆದು ಜಾಗ ಸಮ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ರೈತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಗರದ ನಾಗೂರು ರಸ್ತೆ ಬಳಿಯ ಹೆಲಿಪ್ಯಾಡ್ ಬಳಿ ಸರ್ವೆ ನಂಬರ್ 111 ರ ಹೊಲವನ್ನು ಬಿಜೆಪಿಯವರು ನಾಶ ಮಾಡಿದ್ದಾರೆ.

    ಹುನಗುಂದ ಶಾಸಕ ದೊಡ್ಡನಗೌಡ ಪಾಟಿಲ್, ಮಂಜು ಶೆಟ್ಟರ್, ಮಲ್ಲಯ್ಯ ಮೂಗನೂರಮಠ, ಸುಗೂರೇಶ್ ನಾಗಲೋಟಿ, ಶ್ಯಾಮಸುಂದರ ಎಂಬವರ ವಿರುದ್ಧ ರೈತ ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

    ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾ ಇಂದು ಬಾಗಲಕೋಟೆಗೆ ಆಗಮಿಸಿದ್ದು, ಬಸವಣ್ಣನವರ ಐಕ್ಯ ಮಂಟಪಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಶಾ ಅವರಿಗೆ ಶಾಸಕ ಲಕ್ಷ್ಮಣ ಸವದಿ ಹಾಗೂ ಹುನಗುಂದ ಮುಖಂಡರು ಸಾಥ್ ನಿಡಿದ್ರು. ನಂತರ ಆರ್. ವೀರಮಣಿ ಕ್ರೀಡಾಂಗಣಕ್ಕೆ ಆಗಮಿಸಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಉರಿಬಿಸಿಲಿನಲ್ಲಿಯೇ ಅಭ್ಯರ್ಥಿ ದೊಡ್ಡಣಗೌಡ ಜಿ ಪಾಟೀಲ್ ಪರ ಪ್ರಚಾರ ಕಾರ್ಯದಲ್ಲಿ ತೊಡಿಗಿದ್ರು.

  • ಕೊನೆಗೂ ಹುಚ್ಚ ವೆಂಕಟ್ ಗೆ `ಎಕ್ಕಡ’ ದಯಪಾಲಿಸಿದ ಚುನಾವಣಾ ಆಯೋಗ!

    ಕೊನೆಗೂ ಹುಚ್ಚ ವೆಂಕಟ್ ಗೆ `ಎಕ್ಕಡ’ ದಯಪಾಲಿಸಿದ ಚುನಾವಣಾ ಆಯೋಗ!

    ಬೆಂಗಳೂರು: ನನ್ ಮಗಂದ್ ನನ್ ಎಕ್ಕಡ ಅಂತಾ ತಲೆ ತುಂಬಾ ಇರುವ ಕೂದಲನ್ನು ಕೆದರಿಸಿ ಕೆದರಿಸಿ ಹೇಳುವ ಹುಚ್ಚಾ ವೆಂಕಟ್ ಗೆ ಕೊನೆಗೂ ಚುನಾವಣಾ ಆಯೋಗ ಎಕ್ಕಡವನ್ನು ದಯಪಾಲಿಸಿದೆ.

    ನಟ, ನಿರ್ದೇಶಕ ಹುಚ್ಚ ವೆಂಕಟ್ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎಲ್ಲಾ ಪಕ್ಷದವರು ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಚುನಾವಣೆ ಪ್ರಚಾರವನ್ನು ಶುರು ಮಾಡಿದ್ದಾರೆ.

    ಹುಚ್ಚ ವೆಂಕಟ್ ಆರ್ ಆರ್ ನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಚುನಾವಣೆ ಆಯೋಗವು ಅಭ್ಯರ್ಥಿಗಳ ಗುರುತನ್ನ, ಚಿಹ್ನೆಯನ್ನು ಘೋಷಣೆ ಮಾಡಿದೆ. ಆದರೆ ನಿಮ್ಮಪ್ಪನ ಚಪ್ಪಲಿ ಸೈಜ್ ಗೊತ್ತಾ, ಅಪ್ಪಂಗೆ ಯಾವತ್ತಾದ್ದರೂ ಚಪ್ಪಲಿ ಕೊಡಿಸಿದ್ದೀರಾ ಅಂತಾ ಪದೇ ಪದೇ ಟಿವಿಯೆದುರು ಕುಂತಾಗ ಸೆಂಟಿಮೆಂಟ್ ಡೈಲಾಗ್ ಹೇಳುವ ವೆಂಕಟ್ ಗೆ ಚಿಹ್ನೆಯಾಗಿ ಎಕ್ಕಡವೆ ತನ್ನ ಗುರುತಾಗಿ ಸಿಕ್ಕಿದೆ.

    ಎಕ್ಕಡನಾ ಕಾಡಿಬೇಡಿ ವೆಂಕಟ್ ಪಡೆದುಕೊಂಡರೋ ಅಥವಾ ಚುನಾವಣಾಧಿಕಾರಿಗಳೇ ವೆಂಕಟ್ ಎಕ್ಕಡಾ ಡೈಲಾಗ್ ಗೆ ಫಿದಾ ಆಗಿ ಇದೇ ಚಿಹ್ನೆ ಕೊಟ್ಟರೋ ಗೊತ್ತಿಲ್ಲ. ಆದರೆ ಎಕ್ಕಡದೊಂದಿಗೆ ಕಣಕ್ಕಿಳಿದಿರುವ ವೆಂಕಟ್ ಆರ್ ಆರ್ ನಗರದಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.

  • ಖಾನಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಐಟಿ ಶಾಕ್

    ಖಾನಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಐಟಿ ಶಾಕ್

    ಬೆಳಗಾವಿ: ಖಾನಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ಮಾಡುವ ಮೂಲಕ ಶಾಕ್ ಕೊಟ್ಟಿದ್ದಾರೆ.

    ಖಾನಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ ಭಾಗವಾನ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಇರುವ ಮನೆ ಮತ್ತು ಹುಬ್ಬಳ್ಳಿಯಲ್ಲಿರುವ ಮನೆಯ ಮೇಲೂ 13 ಮಂದಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

    ನಾಸೀರ ಭಾಗವಾನ್ ಕರ್ನಾಟಕ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಸುಮಾರು 191 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಣೆ ಮಾಡಿದ್ದರು. ಅಷ್ಟೇ ಅಲ್ಲದೇ ತಮ್ಮ ಬಳಿ ಯಾವುದೇ ವಾಹನ ಇಲ್ಲ ಎಂದು ಹೇಳಿದ್ದರು. ಅಂದು ಹೇಳಿದ್ದ ಹೇಳಿಕೆಯೇ ಇಂದು ಅವರಿಗೆ ಮುಳುವಾಗಿದೆ ಎನ್ನಲಾಗಿದೆ.

    ಆದ್ರೆ ಇತ್ತ ಅಧಿಕಾರಿಗಳು ಮಾತ್ರ ಇನ್ನು ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಲಿಲ್ಲ.