Tag: Karnataka Election 2018

  • ಪ್ರಧಾನಿಯ 15 ನಿಮಿಷದ ಸವಾಲಿಗೆ ಸಿಎಂ ಕೊಟ್ರು 5 ನಿಮಿಷದ ಚಾಲೆಂಜ್!

    ಪ್ರಧಾನಿಯ 15 ನಿಮಿಷದ ಸವಾಲಿಗೆ ಸಿಎಂ ಕೊಟ್ರು 5 ನಿಮಿಷದ ಚಾಲೆಂಜ್!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ 15 ನಿಮಿಷದ ಸವಾಲ್ ಹಾಕಿದ್ದರು. ಇದೀಗ ಇಂದು ಸಿದ್ದರಾಮಯ್ಯ ಮೋದಿಗೆ 5 ನಿಮಿಷದ ಸವಾಲ್ ಹಾಕಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು 15 ನಿಮಿಷ ಯಾವುದೇ ನೋಟ್ಸ್ ಸಹಾಯವಿಲ್ಲದೇ ಮಾತನಾಡುವಂತೆ ಸವಾಲು ಎಸೆದಿದ್ದರು. ಈಗ ಕರ್ನಾಟಕ ಚುನಾವಣಾ ಪ್ರಚಾರಕ್ಕಾಗಿ ಬರುತ್ತಿರುವ ಮೋದಿಗೆ ಸಿದ್ದರಾಮಯ್ಯ ಸವಾಲು ಎಸೆದಿದ್ದಾರೆ.

    ಆತ್ಮೀಯ ಪ್ರಧಾನಿ ನರೇಂದ್ರ ಮೋದಿ ಅವರೇ, ಈ ಚುನಾವಣೆಯಲ್ಲಿ ನೀವು ಭ್ರಷ್ಟಾಚಾರವನ್ನು ಮಾಡಿದ್ದೀರಿ ಎಂದು ನನಗೆ ಖುಷಿಯಾಗಿದೆ. ಏಕೆಂದರೆ ಅದು ನಿಮ್ಮ ದುರ್ಬಲ ಅಂಶವಾಗಿದೆ. ನಮ್ಮ ಸರಕಾರದ ಬಗ್ಗೆ ಭ್ರಷ್ಟಾಚಾರದ ಆಧಾರವಿಲ್ಲದೇ ಆರೋಪಗಳನ್ನು ಮಾಡುತ್ತಿದ್ದೀರಿ. ಆದ್ದರಿಂದ ಈ ಚುನಾವಣೆಯಲ್ಲಿ ಗೆಲ್ಲಬೇಕಾದರೆ ರೆಡ್ಡಿ ಬ್ರದರ್ಸ್ ಬಳಸುವ ನೈತಿಕತೆಯ ಬಗ್ಗೆ ನೀವು 5 ನಿಮಿಷಗಳ ಕಾಲ ಮಾತನಾಡಬಹುದೇ? ಎಂದು ಸಿದ್ದರಾಮಯ್ಯ ಮೋದಿಗೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ 3 ಸವಾಲೆಸೆದ ರಾಹುಲ್ ಗಾಂಧಿ!

    ರೆಡ್ಡಿ ಪಾಳಯದ 8 ಮಂದಿಗೆ ಟಿಕೆಟ್ ಕೊಟ್ರಲ್ಲ, ಆ ಬಗ್ಗೆ ಹೇಳಿ..! ಫೋರ್ಜರಿ ಸೇರಿ 23 ಭ್ರಷ್ಟಾಚಾರ ಕೇಸ್ ಇರೋ ಯಡಿಯೂರಪ್ಪರನ್ನು ಸಿಎಂ ಅಭ್ಯರ್ಥಿ ಮಾಡಿದ್ರಲ್ಲಾ..! ನಿಮ್ಮ ಪಕ್ಷದ 11 ಮಂದಿ ವಿರುದ್ಧ ಭ್ರಷ್ಟಾಚಾರದ ಕೇಸ್ ಇದೆ. 35 ಸಾವಿರ ಕೋಟಿ ರೂಪಾಯಿ ಗಣಿ ಲೂಟಿ ಹೊಡೆದ ರೆಡ್ಡಿಗಳ ಬಗ್ಗೆ ಮಾತಾಡಿ. ನೀವು ಬೇಕಾದರೆ ಪೇಪರ್ ನೋಡಿ ಮಾತಾಡಬಹುದು ಎಂದು ಕಿಡಿಕಾರಿದ್ದಾರೆ

    ಶ್ರೀರಾಮುಲು – 3 ಕ್ರಿಮಿನಲ್ ಕೇಸ್, ಸೋಮಶೇಖರ ರೆಡ್ಡಿ – 5 ಕ್ರಿಮಿನಲ್ ಕೇಸ್, ಸುರೇಶ್ ಬಾಬು – 6 ಕ್ರಿಮಿನಲ್ ಕೇಸ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು – 4 ಕ್ರಿಮಿನಲ್ ಕೇಸ್ , ಸಿ.ಟಿ.ರವಿ – 3 ಕ್ರಿಮಿನಲ್ ಕೇಸ್ , ಮುರುಗೇಶ್ ನಿರಾಣಿ – 2 ಕ್ರಿಮಿನಲ್ ಕೇಸ್ , ಕೃಷ್ಣಯ್ಯ ಶೆಟ್ಟಿ – 4 ಕ್ರಿಮಿನಲ್ ಕೇಸ್, ಶಿವನಗೌಡ ನಾಯಕ್ – 3 ಕ್ರಿಮಿನಲ್ ಕೇಸ್, ಅಶೋಕ್ – 2 ಕ್ರಿಮಿನಲ್ ಕೇಸ್ ಈ ಎಲ್ಲಾ ಪ್ರಕರಣದ ಬಗ್ಗೆ ಯಾವಾಗ ಮಾತನಾಡುತ್ತೀರಿ. ನಾನು ಕಾಯುತ್ತಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಮೋದಿಗೆ ಟ್ಯಾಗ್ ಮಾಡಿದ್ದಾರೆ.

  • ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

    ಪ್ರಚಾರಕ್ಕೆ ಬದಾಮಿ ಕ್ಷೇತ್ರಕ್ಕೆ ಹೋಗಲ್ಲ ಅಂದ್ರು ಯಶ್!

    ಚಿತ್ರದುರ್ಗ: ಬದಾಮಿ ಕ್ಷೇತ್ರವು ಬಾರಿ ಜಿದ್ದಾಜಿದ್ದಿನ ಕ್ಷೇತ್ರ. ಹೀಗಾಗಿ ಅಂತಹ ಜಿದ್ದಾಜಿದ್ದಿನ ಕ್ಷೇತ್ರಗಳಿಗೆ ನಾನು ಪ್ರಚಾರಕ್ಕೆ ಹೋಗಲ್ಲ ಎಂದು ನಟ ಯಶ್ ನಾಯಕನಟ್ಟಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

    ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಬಹಿರಂಗ ಪ್ರಚಾರದ ವೇಳೆ ಮಾತನಾಡಿದ ಅವರು, ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಬಹುತೇಕ ಎರಡು ಕಡೆಯ ಅಭ್ಯರ್ಥಿಗಳು ಆತ್ಮೀಯರಾಗಿತ್ತಾರೆ. ಹೀಗಾಗಿ ಅಂತಹ ಕ್ಷೇತ್ರಕ್ಕೆ ನಾನು ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಿಎಂಗೆ ಬಿಗ್ ಶಾಕ್ ನೀಡಿದ ನಟ ಕಿಚ್ಚ ಸುದೀಪ್!

    ಅಷ್ಟೇ ಅಲ್ಲದೇ ಶ್ರೀರಾಮುಲು ನನಗೆ ಆತ್ಮೀಯರು ಅವರು ಸಾಮೂಹಿಕ ಮದುವೆ, ಇತರೆ ಕಾರ್ಯಕ್ರಮದ ಮೂಲಕ ಜನಸೇವೆ ಮಾಡಿದ್ದಾರೆ. ಹೀಗಾಗಿ ಅವರ ಕೆಲಸ ಇಷ್ಟವಾಗಿ ರಾಮುಲುರವರು ಪ್ರಚಾರಕ್ಕೆ ಆಹ್ವಾನ ನೀಡಿದ್ರಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ. ಈ ಕ್ಷೇತ್ರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಬೇಕಿರುವುದರಿಂದ ಆ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ಇದಕ್ಕೆ ಹೋರಾಟ ಮಾಡುತ್ತೇನೆ ಎಂದಿದ್ದಾರೆ.

    ರಾಮುಲು ಜೊತೆ ಕೈಜೋಡಿಸಿ ಅಭಿವೃದ್ಧಿ ಪರ ನಿರಂತರ ಹೋರಾಟ ನಡೆಸುತ್ತೇನೆ. ನಾನು ಯಾವುದೇ ಪಕ್ಷದ ಪರ ಪ್ರಚಾರವಿಲ್ಲ. ನನಗೆ ಆತ್ಮೀಯ ಅಭ್ಯರ್ಥಿಗಳ ಪರ ಮಾತ್ರ ಪ್ರಚಾರ ಮಾಡುವೆ ಎಂದ್ರು. ಇದೇ ವೇಳೆ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅಜಾ ಕೂಗಿದಾಗ ಭಾಷಣವನ್ನು ನಿಲ್ಲಿಸುವಂತೆ ಮಾಜಿ ಸಂಸದೆ ಶಾಂತ ಹೇಳಿದರಿಂದ ಭಾಷಣವನ್ನು ಮೊಟಕುಗೊಳಿಸಿ ಅಜಾನ್ ಮುಗಿದ ನಂತರ ಭಾಷಣವನ್ನು ಯಶ್ ಮುಂದುವರೆಸಿ ಧಾರ್ಮಿಕ ಪ್ರಾರ್ಥನೆಗೆ ಗೌರವ ಸಲ್ಲಿಸಬೇಕು ಎಂದಿದ್ದಾರೆ.

  • ಸಿಡಿ ಬಿಡುಗಡೆ ಮಾಡ್ತೀನಿ ಎಂದಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

    ಸಿಡಿ ಬಿಡುಗಡೆ ಮಾಡ್ತೀನಿ ಎಂದಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

    ರಾಮನಗರ: ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ ಬಾಲಕೃಷ್ಣ ನನ್ನ ವಿರುದ್ಧ ಸಿಡಿ ಬಿಡುಗಡೆ ಮಾಡುತ್ತೀನಿ ಎಂದಿದ್ದು ಬಹುಶಃ `ಜಾಗ್ವಾರ್’ ಚಿತ್ರದ ಸಿಡಿ ಇರಬೇಕು ಎಂದು ಜೆಡಿಎಸ್ ಯುವನಾಯಕ ನಿಖಿಲ್ ಕುಮಾರಸ್ವಾಮಿ ಹೆಚ್ ಸಿ ಬಾಲಕೃಷ್ಣಗೆ ಟಾಂಗ್ ಕೊಟ್ಟಿದ್ದಾರೆ.

    ಮಾಗಡಿಯಲ್ಲಿ ಮಾತನಾಡಿದ ನಿಖಿಲ್, ನಾನು ಸಿಡಿ ಬಿಡುಗಡೆ ಮಾಡಿಸಿಕೊಳ್ಳುವ ಕೆಲಸವೇನು ಮಾಡಿಲ್ಲ. ಇಂತಹ ದೊಡ್ಡ ಕುಟುಂಬದಲ್ಲಿ ಹುಟ್ಟಿದ್ದು, ಗೌರವಯುತವಾಗಿ ಬದುಕುತ್ತಿದ್ದೇನೆ. ಯಾವುದೇ ಸಿಡಿಗಾಗಿ ನಾನು ಹೆದರಲ್ಲ. ಯಾವುದೇ ಮಾಡಿದರೂ ಅದರಲ್ಲಿ ಸತ್ಯಾಂಶ ಇರಬೇಕು ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣಗೆ ಸವಾಲ್ ಎಸೆದ ನಟ ನಿಖಿಲ್ ಕುಮಾರಸ್ವಾಮಿ

    ಶ್ಯಾನಭೋಗನಹಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದ್ದ ಎಚ್.ಸಿ ಬಾಲಕೃಷ್ಣ ರವರು ನಿಖಿಲ್ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಿನಿಮಾ ನಟರು ಬಂದು ನಾವು ಬೆನ್ನಿಗೆ ಚೂರಿ ಹಾಕ್ತಾರೆ ಅಂತಾ ಹೇಳ್ತಾರೆ. ಅವರು ಬಂದು ಕೇವಲ ಪ್ರಚಾರ ಮಾಡಿಕೊಂಡು ಮತ ಕೇಳಿಕೊಂಡು ಹೋಗಬೇಕು. ಅದನ್ನ ಬಿಟ್ಟು ಅವರೇನಾದರೂ ಮಾತನಾಡಿದರೆ, ನಮ್ಮ ಬಳಿ ಬೇಜಾನ್ ಕ್ಯಾಸೆಟ್‍ಗಳಿವೆ ನಾನು ಹೊರಗೆ ತೆಗೆಯುತ್ತೇನೆ ಎಂದು ಹೇಳಿದ್ದರು.

    ಆದ್ರೆ ಬಳಿಕ ಬಿಡದಿ ಹೋಬಳಿಯಲ್ಲಿ ಇಂದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ ವೇಳೆ ಮಾತನಾಡಿದ ಬಾಲಕೃಷ್ಣ, ಚುನಾವಣೆ ಮುಗಿಯುವರೆಗೂ ಸಹ ಸಿಡಿ ವಿಚಾರವಾಗಿ ನಾನು ಮಾತನಾಡಲ್ಲ. ಚುನಾವಣೆ ಮುಗಿದ ಬಳಿಕ ಅದರ ಬಗ್ಗೆ ಮಾತನಾಡುತ್ತೇನೆ. ಉತ್ತರ ಕೊಡ್ತೀನಿ. ಹೀಗಾಗಿ ಈಗ ಅದರ ಅವಶ್ಯಕತೆ ಇಲ್ಲ. ನಿಖಿಲ್ ಕುಮಾರಸ್ವಾಮಿ ಒಬ್ಬ ಫಿಲಂ ಆಕ್ಟರ್, ಫಿಲಂ ಆಕ್ಟರ್ ತರಹ ಡೈಲಾಗ್ ಹೊಡೆದುಕೊಂಡು ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದ್ರು.

  • ಯಾದಗಿರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಕಿಚ್ಚ ಸುದೀಪ್!

    ಯಾದಗಿರಿಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಕಿಚ್ಚ ಸುದೀಪ್!

    ಯಾದಗಿರಿ: ಗಿರಿಗಳ ನಾಡು ಯಾದಗಿರಿ ಜಿಲ್ಲೆಯಲ್ಲಿ ಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆಯೇ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾನಾ ರೀತಿಯಲ್ಲಿ ಪ್ರಚಾರದ ಕಸರತ್ತು ನಡೆಸುತ್ತಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರವೆಂದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಜಿದ್ದಾಜಿದ್ದಿಯ ಪ್ರತಿಷ್ಠೆಯ ರಣರಂಗವಾಗಿ ಮಾರ್ಪಟ್ಟಿದೆ. ಇದೀಗ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ನರಸಿಂಹ ನಾಯಕ ಪರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಿತ್ರನಟಿ ತಾರಾ ಸುರಪುರನ ಕಕ್ಕೇರಾ, ಹುಣಸಗಿ, ಕೊಡೆಕಲ್, ಸುರಪುರ ವಿವಿಧ ಕಡೆ ರೋಡ್ ಶೋ ಮಾಡುವ ಮೂಲಕ ಮತದಾರರ ಗಮನ ಸೆಳೆಯಲು ಮುಂದಾಗಿದ್ದಾರೆ.

    ಸುರಪುರ ಮತಕ್ಷೇತ್ರದಲ್ಲಿ ವಾಲ್ಮಿಕಿ ಸಮಾಜದ ಸುಮಾರು 65 ಸಾವಿರ ಮತಗಳಿವೆ. ಕಿಚ್ಚ ಸುದೀಪ್ ರೋಡ್ ಶೋ ಮಾಡಿದರೆ ಬಿಜೆಪಿಗೆ ಮತಗಳ ವರದಾನವಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಸುರಪುರ ಕಾಂಗ್ರೆಸ್ ಅಭ್ಯರ್ಥಿ ರಾಜವೆಂಕಟಪ್ಪ ನಾಯಕ್ ಪರ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ. ಇಬ್ರಾಹಿಂ ಅವರು ಸುರಪುರನ ಕಕ್ಕೇರಾ ಪಟ್ಟಣದಲ್ಲಿ ಪ್ರಚಾರ ಮಾಡಲಾಗಿತ್ತು.

    ಆದರೆ ಇದೀಗ ಬಿಸಿಲಿನ ತಾಪ ಹೆಚ್ಚಾದಂತೆ ಬಿಸಿಲು ನಾಡು ಯಾದಗಿರಿಯಲ್ಲಿ ಕಿಚ್ಚ ಸುದೀಪ್ ಪ್ರಚಾರದ ಕಾವು ಬಿಜೆಪಿಗೆ ಯಾವ ರೀತಿ ವರ್ಕೌಟ್ ಆಗುತ್ತೆ ಎನ್ನುವುದು ಕಾದು ನೋಡಬೇಕು.

  • ಫೀಲ್ಡ್ ನಲ್ಲಿ ಸೈಲೆಂಟಾಗು, ಇಲ್ಲದಿದ್ದರೆ ಮನೆಗೆ ಹೋಗಲ್ಲ- ಬೈಂದೂರು ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ!

    ಫೀಲ್ಡ್ ನಲ್ಲಿ ಸೈಲೆಂಟಾಗು, ಇಲ್ಲದಿದ್ದರೆ ಮನೆಗೆ ಹೋಗಲ್ಲ- ಬೈಂದೂರು ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ!

    ಉಡುಪಿ: ಕರ್ನಾಟಕ ವಿಧಾನ ಸಭಾ ಚುನಾಚಣಾ ಕಣದಿಂದ ಹಿಂದೆ ಸರಿಯುವಂತೆ ಜಿಲ್ಲೆಯ ಬೈಂದೂರಿನ ಜೆಡಿಎಸ್ ಅಭ್ಯರ್ಥಿಗೆ ದುಬೈನಿಂದ ಕೊಲೆ ಬೆದರಿಕೆ ಕರೆ ಬಂದಿದೆ.

    ಬೈಂದೂರು ಅಭ್ಯರ್ಥಿ ರವಿ ಶೆಟ್ಟಿಗೆ ದುಬೈನಿಂದ ದುಷ್ಕರ್ಮಿಗಳು ಕೊಲೆ ಬೆದರಿಕೆ ಹಾಕಿದ್ದಾರೆ. ರವಿ ಶೆಟ್ಟಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಿದ್ದು, ಪೊಲೀಸರು ರವಿ ಶೆಟ್ಟಿಗೆ ಗನ್ ಮ್ಯಾನ್ ನೀಡಿದ್ದಾರೆ.

    ಫೀಲ್ಡ್ ನಲ್ಲಿ ಸೈಲೆಂಟ್ ಆಗು. ಇಲ್ಲದಿದ್ದರೆ ಮನೆಗೆ ಹೋಗಲ್ಲ ಅಂತ ಇಂಟರ್ನೆಟ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ನಮೂದಿಸಲಾಗಿದೆ. ಕಾರ್ಮಿಕ ರಕ್ಷಣಾ ವೇದಿಕೆ ಅಧ್ಯಕ್ಷನಾಗಿರುವ ರವಿ ಶೆಟ್ಟಿ ಕಳೆದ ಒಂದು ವರ್ಷದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

    ಎದುರಾಳಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಡುಕ ಹುಟ್ಟಿದ್ದು, ತಮ್ಮ ಮತಗಳ ವಿಭಜನೆಯಾಗಬಹುದೆಂದು ಈ ವಾಮಮಾರ್ಗ ಅನುಸರಿಸುತ್ತಿದ್ದಾರೆ ಎಂದು ರವಿ ಶೆಟ್ಟಿ ದೂರಿದ್ದಾರೆ. ಆದ್ರೆ ನಾನು ಯಾವುದೇ ಗೊಡ್ಡು ಬೆದರಿಕೆಗೆ ಬಗ್ಗಲ್ಲ, ಅಂತ ಜೆಡಿಎಸ್ ಅಭ್ಯರ್ಥಿ ರವಿ ಶೆಟ್ಟಿ ಹೇಳಿದ್ದಾರೆ.

    ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮಾತನಾಡಿ, ಬೈಂದೂರು ಜಿಲ್ಲೆಯ ಪೈಕಿ ಅತೀ ಹೆಚ್ಚು ಜೆಡಿಎಸ್ ಮತದಾರರು ಇರುವ ಕ್ಷೇತ್ರ. ನಮ್ಮ ಅಭ್ಯರ್ಥಿ ಪ್ರತೀ ಮನೆಗಳಿಗೂ ಭೇಟಿ ನೀಡಿ ಪ್ರಚಾರ ಮಾಡಿದ್ದಾರೆ. ನೈತಿಕ ಸ್ಥೈರ್ಯ ಕಸಿದುಕೊಳ್ಳಲು ಯತ್ನ ನಡೆಯುತ್ತಿದ್ದು, ಇದಕ್ಕೆಲ್ಲಾ ನಮ್ಮ ಪಕ್ಷ ಜಗ್ಗುವುದಿಲ್ಲ ಅಂತ ಹೇಳಿದ್ದಾರೆ. ಇನ್ನೂ ಉತ್ಸಾಹದಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ.

  • ಪ್ರಚಾರಕ್ಕಾಗಿ ಬಾಚಣಿಕೆ, ಕತ್ತರಿ ಹಿಡಿದ ಕಾಂಗ್ರೆಸ್ ಅಭ್ಯರ್ಥಿ

    ಪ್ರಚಾರಕ್ಕಾಗಿ ಬಾಚಣಿಕೆ, ಕತ್ತರಿ ಹಿಡಿದ ಕಾಂಗ್ರೆಸ್ ಅಭ್ಯರ್ಥಿ

    ಬೀದರ್: ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಅವರು ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತದಾರರನ್ನು ಸೆಳೆಯಲು ವಿಚಿತ್ರ ವರಸೆ ಸುರು ಮಾಡಿದ್ದಾರೆ.

    ನೈಸ್ ಖ್ಯಾತಿಯ ಅಶೋಕ್ ಖೇಣಿ ಬೀದರ್ ದಕ್ಷಿಣ ಕ್ಷೇತ್ರದ ಅಣದೂರು ಗ್ರಾಮದಲ್ಲಿ ಗುರುವಾರ ಮತಯಾಚನೆ ಮಾಡುವ ವೇಳೆ, ಸೆಲೂನ್ ಅಂಗಡಿಯಲ್ಲಿ ಕ್ಷೌರ ಮಾಡುವ ಮೂಲಕ ಮೊತ್ತೊಮ್ಮೆ ಮತದಾರರನ್ನು ಸೆಳೆಯುವ ನಾಟಕ ಮಾಡಿದ್ದಾರೆ. ಇದನ್ನೂ ಓದಿ: ಮತ ಕೇಳಲು ಹೋದ ಶಾಸಕ ಅಶೋಕ್ ಖೇಣಿಗೆ ಬೆವರಿಳಿಸಿದ ಬೀದರ್ ಮತದಾರರು!

    ಬಾಚಣಿಕೆ, ಕತ್ತರಿ ಹಿಡಿಯುವ ಮೂಲಕ ಸವಿತ ಸಮಾಜದ ಮತಗಳ ಬೇಟೆಗಾಗಿ ವಿಚಿತ್ರ ಗಿಮಿಕ್ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮದುವೆ, ಮುಂಜಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಜನರನ್ನು ಮೊತ್ತೊಮ್ಮೆ ಮೂರ್ಖರನ್ನಾಗಿಸುತ್ತಿದ್ದಾರೆ ಎಂದು ರೋಸಿ ಹೋಗಿರುವ ಮತದಾರ ಪ್ರಭು ಕಿಡಿ ಕಾರಿದ್ದಾರೆ.

    ಕಳೆದ ಬಾರಿ ಚುನಾವಣೆಯಲ್ಲಿ ಬೀದರ್ ದಕ್ಷಿಣವನ್ನು ಮಿನಿ ಸಿಂಗಾಪೂರ್ ಮಾಡುವುದಾಗಿ ಕಲರ್ ಕಲರ್ ಕಾಗೆ ಹಾರಿಸಿದ್ದರು. ನಂತರ ಗೆದ್ದು ಐದು ವರ್ಷ ಕಣ್ಮರೆಯಾಗಿದ್ದ ಖೇಣಿ ಈಗ ಮತ್ತೆ ಬಂದಿರುವುದರಿಂದ ಅವರ ವಿರುದ್ಧ ಕ್ಷೇತ್ರದ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

  • ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಮತಯಾಚನೆಗೆ ಮುಂದಾದ ಯಶ್

    ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ಪರ ಮತಯಾಚನೆಗೆ ಮುಂದಾದ ಯಶ್

    ಚಿತ್ರದುರ್ಗ: ಕರ್ನಾಟಕ ವಿಧಾನಸಭಾ ಚುಣಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿ ಮತ್ತು ಜೆಡಿಎಸ್ ಪರ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿರೋ ನಟ ಯಶ್ ಇಂದು ಮೊಳಕಾಲ್ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡಲಿದ್ದಾರೆ.

    ಯಶ್ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆ ನಡೆಸಲಿದ್ದಾರೆ. ಇಂದು ಸಂಜೆ ಸುಮಾರು 5 ಗಂಟೆಗೆ ನಾಯಕನಟ್ಟಿಯಲ್ಲಿ ಬಹಿರಂಗ ಪ್ರಚಾರ ಆರಂಭಿಸಿ ನಾಯಕನಟ್ಟಿ, ಕೊಂಡ್ಲಹಳ್ಳಿ, ಮೊಳಕಾಲ್ಮೂರು ಹಾಗು ರಾಂಪುರದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಬಾರಿ ಸಂಸದ ಶ್ರೀರಾಮುಲು ಸ್ಪರ್ಧೆಯಿಂದಾಗಿ ಮೊಳಕಾಲ್ಮೂರು ಕ್ಷೇತ್ರ ಬಾರಿ ಹೈ ವೊಲ್ಟೇಜ್ ಎನ್ನಿಸಿಕೊಂಡಿದೆ. ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಪರ ಪ್ರಚಾರಕ್ಕಿಳಿದು ಮತದಾರರ ಗೊಂದಲಕ್ಕೆ ತೆರೆ ಎಳೆದ ಯಶ್

    ಉತ್ತಮ ಕೆಲಸ ಮಾಡುವ ವ್ಯಕ್ತಿಗಳು ಮುಖ್ಯ. ಅದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಮಾಡುತ್ತಿದ್ದೇನೆ. ಯಾರು ಜನಪರ ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕಿ ಅಂತ ಹೇಳಿದ್ದ ನಟ ಯಶ್ ಈಗ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪರ ಬಹಿರಂಗವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

    ನಟ ಯಶ್, ನಾನು ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದರಿಂದ ಮತದಾರರಿಗೆ ಗೊಂದಲವಾಗಿರಬಹುದೆಂದು ನಿನ್ನೆಯಷ್ಟೇ ಸಮರ್ಥನೆ ನೀಡಿದ್ದರು. ನನ್ನ ಪ್ರಚಾರ ಯಾವುದೇ ಪಕ್ಷದ ಪರ ಅಲ್ಲ. ನನಗೆ ಇಷ್ಟವಾಗುವ ವ್ಯಕ್ತಿಗಳ ಪರ ಮತಯಾಚನೆ ಮಾಡುವೆ. ನಾನು ರಾಜ್ಯದ ಎಲ್ಲಿ ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ಆದರೆ ಆ ಬಗ್ಗೆ ನಾನು ಚಿಂತಿಸಿಲ್ಲ ಅಂತ ಹೇಳಿದ್ದರು.

  • ಕಾಂಗ್ರೆಸ್ ಸಭೆಗೆ ಬಂದು ಗಲಾಟೆ ಮಾಡಿದ್ರೆ ಮಾನನಷ್ಟ ಕೇಸ್ – ಬಿಜೆಪಿಗರಿಗೆ ಸಚಿವ ರಾಯರೆಡ್ಡಿ ಅವಾಜ್

    ಕಾಂಗ್ರೆಸ್ ಸಭೆಗೆ ಬಂದು ಗಲಾಟೆ ಮಾಡಿದ್ರೆ ಮಾನನಷ್ಟ ಕೇಸ್ – ಬಿಜೆಪಿಗರಿಗೆ ಸಚಿವ ರಾಯರೆಡ್ಡಿ ಅವಾಜ್

    ಕೊಪ್ಪಳ: ಬಿಜೆಪಿಯವರು ಯಾರಾದರೂ ಕಾಂಗ್ರೆಸ್ ಸಭೆಗೆ ಬಂದು ಮಾತಾಡಿದರೆ ಕೇಸ್ ಹಾಕಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಬಿಜೆಪಿಗರಿಗೆ ಅವಾಜ್ ಹಾಕಿದ್ದಾರೆ.

    ಗುರುವಾರ ನಡೆದ ಯಲಬುರ್ಗಾ ತಾಲೂಕಿನ ಮುರುಡಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸಭೆಯಲ್ಲಿ ನೀವು ಮಾತಾಡಿದ್ರೆ ಕೇಸ್ ಹಾಕಬೇಕಾಗತ್ತೆ. ಅಷ್ಟೇ ಅಲ್ಲದೇ ಬಿಜೆಪಿ ಕಾರ್ಯಕರ್ತರಿಗೆ ಮಾನನಷ್ಟ ಕೇಸ್ ಹಾಕಿಸುತ್ತೇನೆ ಎಂದಿದ್ದಾರೆ.

    ಇದು ಕಾಂಗ್ರೆಸ್ ಮೀಟಿಂಗ್, ಬಿಜೆಪಿಯವರು ಹೊರಗೆ ಹೋಗಿ ಎಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಯವರನ್ನ ಹೊರ ಹಾಕಿ ಎಂದಿದ್ದಾರೆ.  ಬಸವರಾಜ್ ರಾಯರೆಡ್ಡಿ ಸಭೆಯಲ್ಲಿ ಪ್ರಶ್ನೆ ಮಾಡಿದ್ದಕ್ಕೆ, ನೀವು ಹೋಗಿ ಬಿಜೆಪಿ ಸಭೆಯಲ್ಲಿ ಕೇಳಿ ಎಂದು ಉಡಾಫೆಯ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ಮೀಟಿಂಗ್ ನೀವು ಇಲ್ಲಿ ಮಾತಾಡಬೇಡಿ ಎಂದಿದ್ದಾರೆ.

     

  • ವಾಲ್ಮಿಕಿ ಸಮುದಾಯದ ಮತ ಸೆಳೆಯಲು ಕಿಚ್ಚನನ್ನು ಅಸ್ತ್ರವಾಗಿಸಲು ಸಿಎಂ ಪ್ಲಾನ್!

    ವಾಲ್ಮಿಕಿ ಸಮುದಾಯದ ಮತ ಸೆಳೆಯಲು ಕಿಚ್ಚನನ್ನು ಅಸ್ತ್ರವಾಗಿಸಲು ಸಿಎಂ ಪ್ಲಾನ್!

    ಬಾಗಲಕೋಟೆ: ಹೈ-ವೊಲ್ಟೇಜ್ ಕಣ ಬದಾಮಿಯಲ್ಲಿ ಜಾತಿಗಣಿತದ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಕೈ ತಪ್ಪಿ ಹೋಗಲಿರುವ ವಾಲ್ಮಿಕಿ ಸಮುದಾಯದ ಮತಗಳ ಧೃವೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

    ಬದಾಮಿಯಲ್ಲಿ ನಟ ಕಿಚ್ಚ ಸುದೀಪ್ ಅವರನ್ನು ಸಿಎಂ ಪರ ಪ್ರಚಾರ ಮಾಡಿಸುವ ಮೂಲಕ ಕೈ ತಪ್ಪಿ ಹೊಗಲಿರುವ ಮತಗಳ ಸೆಳೆಯಲು ಕಾರ್ಯತಂತ್ರ ರೂಪಿಸಿದೆ. ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ಮಾಡಲು ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದು, ಒಡೆದು ಹೋಗುವಂತಿದ್ದ ವಾಲ್ಮಿಕಿ ಮತಗಳು ಮತ್ತೆ ಕಾಂಗ್ರೆಸ್ ನತ್ತ ವಾಲುವ ಸಾಧ್ಯತೆ ಇದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

    ಬಿಜೆಪಿಯಿಂದ ರಾಮುಲು ಸ್ವರ್ಧೆ ಮಾಡಿದ ಹಿನ್ನೆಲೆ ಕಾಂಗ್ರೆಸ್‍ಗೆ ನಿರ್ಣಾಯಕವಾಗಿದ್ದ ಸುಮಾರು ಇಪ್ಪತ್ತು ಸಾವಿರ ವಾಲ್ಮಿಕಿ ಸಮುದಾಯದ ಮತಗಳು ಬಿಜೆಪಿಗೆ ಶಿಫ್ಟ್ ಆಗುವ ಸಾಧ್ಯತೆ ಇತ್ತು. ಬಹುತೇಕ ವಾಲ್ಮಿಕಿ ಸಮುದಾಯದ ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಂಡಿದ್ದ ಬಿಜೆಪಿ, ರಾಮುಲು ಪರ ಮತ ಚಲಾಯಿಸುವಂತೆ ಮನವಿ ಮಾಡಿತ್ತು. ಸ್ವಜಾತಿ ಅಭ್ಯರ್ಥಿ ಸ್ವರ್ಧೆಯಿಂದ ವಾಲ್ಮಿಕಿ ಸಮುದಾಯದ ಮುಖಂಡರು ಕೂಡಾ ರಾಮುಲು ಬೆಂಬಲಕ್ಕೆ ನಿಂತಿದ್ದು ಕಾಂಗ್ರೆಸ್‍ನ್ನು ಇಕ್ಕಟ್ಟಿನ ಸಿಲುಕಿಸಿತ್ತು.

    ಈ ಭಾಗದ ಎಸ್ಟಿ ಪ್ರಭಾವಿ ನಾಯಕ ಸತೀಶ್ ಜಾರಕಿಹೋಳಿ ಸಮುದಾಯದ ಮನವೊಲಿಸಿದ್ರು. ವಾಲ್ಮಿಕಿ ಸಮುದಾಯ ಬಿಜೆಪಿ ಬೆಂಬಲಿಸುವ ಸ್ಪಷ್ಟ ನಿರ್ಧಾರ ಸೂಚಿಸಿತ್ತು. ಇದರಿಂದ ಕೊಂಚ ಹಿನ್ನೆಡೆ ಆಗುವ ಸಾಧ್ಯತೆ ಅರಿತ ಕಾಂಗ್ರೆಸ್, ನಟ ಕಿಚ್ಚ ಸುದೀಪ್ ಮೂಲಕ ಸಿಎಂ ಪರ ಪ್ರಚಾರ ಮಾಡಿಸಲು ಪ್ಲಾನ್ ಮಾಡಿದೆ.

    ಇದರಿಂದ ಬಿಜೆಪಿ ಪಾಲಾಗಲಿದ್ದ ಇಪ್ಪತ್ತು ಸಾವಿರ ಮತಗಳ ಪೈಕಿ ಒಂದಷ್ಟು ಮತ್ತೆ ಕಾಂಗ್ರೆಸ್ ತೆಕ್ಕೆಗೆ ವಾಪಸ್ ಆಗುವ ಸಾಧ್ಯತೆ ಒಂದು ಕಡೆಯಾದರೆ, ಮತ್ತೊಂದು ಕಡೆ ಸ್ಟಾರ್ ಕ್ಯಾಂಪೇನ್‍ನಿಂದಾಗಿ ಇತರೆ ವರ್ಗದ ಒಂದಿಷ್ಟು ಮತಗಳನ್ನು ಸೆಳೆಯಬಹುದು ಎಂಬುದು ಕಾಂಗ್ರೆಸ್ ಯೋಜನೆಯಾಗಿದೆ. ಬಿಜೆಪಿ ಮತದ ಬುಟ್ಟಿಗೆ ಕಾಂಗ್ರೆಸ್ ಕೈ ಹಾಕಿರುವ ಹಿನ್ನೆಲೆ ಪ್ರತಿತಂತ್ರವಾಗಿ ಬಿಜೆಪಿ ಏನು ಮಾಡಲಿದೆ ಎಂಬ ಕುತೂಹಲ ಮೂಡಿದೆ.

  • ಗಮನಿಸಿ, ವೈರಲ್ ಆಗಿರುವ ಸಮೀಕ್ಷೆ ಪಬ್ಲಿಕ್ ಟಿವಿಯದ್ದಲ್ಲ!

    ಗಮನಿಸಿ, ವೈರಲ್ ಆಗಿರುವ ಸಮೀಕ್ಷೆ ಪಬ್ಲಿಕ್ ಟಿವಿಯದ್ದಲ್ಲ!

    ಬೆಂಗಳೂರು: ಪಬ್ಲಿಕ್ ಟಿವಿಯ ಮೆಗಾ ಪಬ್ಲಿಕ್ ಸರ್ವೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ಹರಿದಾಡುತ್ತಿದೆ.

    ಮೇ 2ರ ಬುಧವಾರ ಪಬ್ಲಿಕ್ ಟಿವಿ ಕರ್ನಾಟಕ ಚುನಾವಣೆ ಸೆಮಿಫೈನಲ್ ಸಮೀಕ್ಷೆಯನ್ನು ಪ್ರಸಾರ ಮಾಡಿತ್ತು. ಆದರೆ ಈ ಸಮೀಕ್ಷೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ 72-77, ಕಾಂಗ್ರೆಸ್ 75-80, ಜೆಡಿಎಸ್ +ಬಿಎಸ್‍ಪಿ 62-67, ಇತರೇ 3-5 ಸ್ಥಾನ ಗೆದ್ದಿರುವಂತೆ ತೋರಿಸುವ ಸಮೀಕ್ಷಾ ವರದಿಯ ಫೋಟೋವನ್ನು ಜೆಡಿಎಸ್ ಯುವಬ್ರಿಗೇಡ್ ಹೆಸರಿನ ಟ್ವಿಟ್ಟರ್ ಖಾತೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಹರಿಯಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿ ಲೆಟರ್ ಹೆಡ್ ನೊಂದಿಗೆ ಈ ಮಾಹಿತಿ ಇರುವ ಕಾರಣ ಈ ಸಮೀಕ್ಷೆಯನ್ನು ನೀವು ಮಾಡಿರುವುದೇ ಎಂಬ ಪ್ರಶ್ನೆ ಶುರುವಾಗಿತ್ತು. ಈ ಫೋಟೋದಲ್ಲಿರುವ ಅಂಕಿ ಸಂಖ್ಯೆಗೂ ಪಬ್ಲಿಕ್ ಟಿವಿಯ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಅಲ್ಲದೆ ಪಬ್ಲಿಕ್ ಟಿವಿಯ ನಕಲಿ ಲೆಟರ್ ಹೆಡ್ ಸೃಷ್ಟಿಸಿ ಈ ಕೃತ್ಯವೆಸಗಲಾಗಿದೆ.

    ಈ ಚಿತ್ರದಲ್ಲಿರುವುದು ಪಬ್ಲಿಕ್ ಟಿವಿ ಸಮೀಕ್ಷೆಯಲ್ಲಿ ಪ್ರಕಟವಾದ ಸಮೀಕ್ಷೆಯ ಸಂಖ್ಯೆಗಳಲ್ಲ. ಇದೊಂದು ನಕಲಿ ಸರ್ವೆಯಾಗಿದೆ. ಪಬ್ಲಿಕ್ ಟಿವಿಯ ಹೆಸರು ದುರ್ಬಳಕೆ ಮಾಡಿದ ಹಿನ್ನೆಲೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ಪಬ್ಲಿಕ್ ಟಿವಿಯ ಆಡಳಿತ ವರ್ಗ ನಿರ್ಧರಿಸಿದೆ.

    ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಪ್ರಾಂತ್ಯವಾರು ಸಮೀಕ್ಷೆಯ ಸುದ್ದಿ ಓದಲು ಕ್ಲಿಕ್ ಮಾಡಿ:  ಪಬ್ಲಿಕ್ ಟಿವಿ ಸಮೀಕ್ಷೆ- ಸೆಮಿ ಫೈನಲ್