Tag: Karnataka Election 2018

  • ಎಚ್‍ಡಿಕೆ- ಅಂಬರೀಶ್ ಭೇಟಿ ವಿಷ್ಯ ನಂಗೆ ಗೊತ್ತಿಲ್ಲ: ಎಚ್.ಡಿ. ದೇವೇಗೌಡ

    ಎಚ್‍ಡಿಕೆ- ಅಂಬರೀಶ್ ಭೇಟಿ ವಿಷ್ಯ ನಂಗೆ ಗೊತ್ತಿಲ್ಲ: ಎಚ್.ಡಿ. ದೇವೇಗೌಡ

    ರಾಯಚೂರು: ಮಾಜಿ ಶಾಸಕ, ನಟ ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದ ವಿಚಾರ ನನಗೆ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬರೀಶ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿದ್ದ ವಿಚಾರ ನನಗೆ ಗೊತ್ತಿಲ್ಲ. ಅವರು ಹಳೆಯ ಸ್ನೇಹಿತರು, ಉತ್ತಮ ಒಡನಾಟ ಹೊಂದಿದ್ದಾರೆ. ಅವರು ಪಕ್ಷ ಸೇರುವ ಬಗ್ಗೆ ಚರ್ಚೆ ಆಗಿಲ್ಲ. ಕಾಂಗ್ರೆಸ್, ಬಿಜೆಪಿ ಯಾವ ಪಕ್ಷದಲ್ಲಿ ಇದ್ದರು ನಮ್ಮ ಜೊತೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಹೆಚ್.ಡಿ. ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ.  ಇದನ್ನೂ ಓದಿ: ರೆಬೆಲ್ ಸ್ಟಾರ್ ಅಂಬರೀಶ್ ಭೇಟಿ ಬಗ್ಗೆ ಹೆಚ್‍ಡಿಕೆ ಪ್ರತಿಕ್ರಿಯೆ


    ಇದೇ ವೇಳೆ ನಾವು ಯಾರ ಪರವೂ ಇಲ್ಲ, ಜನರ ಪರ ಇದ್ದೇವೆ. ಮೋದಿ ಬಂದಾಗ ನಾವು ಬರಬಾರದೇ? ನಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ನಾವು, ಅವರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಪ್ರಚಾರ ಮಾಡುತ್ತಾರೆ. ಯಾರಿಗೆ ಬಹುಮತ ಎಂಬುದನ್ನು ಜನ ನಿರ್ಧರಿಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಅಂಬಿ-ಹೆಚ್‍ಡಿಕೆ ಭೇಟಿ: ಪಾಪ ಮೀಟ್ ಆಗ್ಲಿ ಬಿಡಿ ಬೇಡ ಅಂದೋರು ಯಾರು?-ಸಿಎಂ

    ಈ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಅಂಬರೀಶ್ ಅವರಿಗೆ ದೇವೇಗೌಡರು ಮತ್ತು ನಮ್ಮ ಬಗ್ಗೆ ಅಭಿಮಾನ ಇದೆ. ನಿನ್ನೆ ಭೇಟಿ ಮಾಡಿ ಚರ್ಚಿಸಿದ್ದೇನೆ. ನನ್ನನ್ನು ತಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಜನಹಿತಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ಅವರ ಅಭಿಲಾಷೆ. ರಾಜ್ಯದಲ್ಲಿಯ ರಾಜಕೀಯ ಆಗುಹೋಗು ಗಮನಿಸಿ ಸೂಕ್ತ ತೀರ್ಮಾನಕೈಗೊಳ್ಳುತ್ತಾರೆ ಎನ್ನುವ ಭರವಸೆ ಇದೆ. ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವ ಭಾವನೆ ಅವರ ಮನಸ್ಸಿನಲ್ಲಿದೆ ಅಂತ ಹೇಳಿದ್ದರು.

     

  • ಟೀಕೆ ಮಾಡೋದು ಸ್ಟಂಟ್ ಆಗಿದೆ, ಯಾವನ್ದೋ ಪ್ರಶ್ನೆಗೆ ನಾನೇನು ಹೇಳಲಿ: ಬಿಎಸ್‍ವೈ ಕಿಡಿ

    ಟೀಕೆ ಮಾಡೋದು ಸ್ಟಂಟ್ ಆಗಿದೆ, ಯಾವನ್ದೋ ಪ್ರಶ್ನೆಗೆ ನಾನೇನು ಹೇಳಲಿ: ಬಿಎಸ್‍ವೈ ಕಿಡಿ

    ದಾವಣಗೆರೆ: ಈಗ ಟೀಕೆ ಮಾಡೋದು ಒಂದು ಸ್ಟಂಟ್ ಆಗಿದೆ. ಯಾವನ್ದೋ ಪ್ರಶ್ನೆಗೆ ನಾನೇನು ಹೇಳಲಿ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದ್ದಾರೆ.

    ಮಹದಾಯಿ ವಿಚಾರವನ್ನು ಇತ್ಯರ್ಥ ಮಾಡಲಾಗುವುದು ಅಂತ ಪ್ರಧಾನಿಗಳು ಶನಿವಾರ ಗದಗ್ ನಲ್ಲಿ ತಿಳಿಸಿದ್ದಾರೆ. ಆದ್ರೆ ಸಿಎಂ ಮಾತ್ರ ಪ್ರಧಾನಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಈ ರೀತಿಯ ಹೇಳಿಕೆಯನ್ನು ನೀಡ್ತಿದ್ದಾರೆ ಅಂತಾ ತಿರುಗೇಟು ಕೊಟ್ಟಿದ್ದರು. ಈ ಸಂಬಂಧ ಯಡಿಯೂರಪ್ಪ, ಸಿಎಂ ತಿರುಗೇಟಿಗೆ ಏಕವಚನದಲ್ಲಿಯೇ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮೋದಿ ಮಹದಾಯಿ ಹೇಳಿಕೆ ನೀಡಿದ್ದಾರೆ: ಸಿಎಂ ತಿರುಗೇಟು

    ಗದಗ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದ ವೇಳೆ, ಕಾಂಗ್ರೆಸ್ ಮಹದಾಯಿ ವಿಷಯದಲ್ಲಿ ರಾಜಕಾರಣ ಮಾಡ್ತಿದೆ. ಈ ಹಿಂದೆ ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ರೂ ಮಹದಾಯಿ ವಿವಾದ ಬಗೆಹರಿಸುವ ಪ್ರಯತ್ನ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಈ ವಿವಾದವನ್ನು ಬಗೆಹರಿಸುವ ಸಂಕಲ್ಪ ಮಾಡಿದೆ ಅಂತ ಹೇಳಿದ್ರು. ಇದನ್ನೂ ಓದಿ: ನೀರು ಪ್ರತಿಯೊಬ್ಬರ ಹಕ್ಕು, ಮಹದಾಯಿ ಸಮಸ್ಯೆ ಬಗೆಹರಿಸುವ ಸಂಕಲ್ಪ ಮಾಡ್ತಿದ್ದೇನೆ: ಮೋದಿ

  • ಅಂಬಿ-ಹೆಚ್‍ಡಿಕೆ ಭೇಟಿ: ಪಾಪ ಮೀಟ್ ಆಗ್ಲಿ ಬಿಡಿ ಬೇಡ ಅಂದೋರು ಯಾರು?-ಸಿಎಂ

    ಅಂಬಿ-ಹೆಚ್‍ಡಿಕೆ ಭೇಟಿ: ಪಾಪ ಮೀಟ್ ಆಗ್ಲಿ ಬಿಡಿ ಬೇಡ ಅಂದೋರು ಯಾರು?-ಸಿಎಂ

    ಬಾಗಲಕೋಟೆ: ರಾಜಕೀಯದಿಂದ ದೂರ ಉಳಿದಿರುವ ಮಾಜಿ ಸಚಿವ ಅಂಬರೀಶ್‍ರನ್ನು ಶನಿವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದರು. ಈ ಕುರಿತು ಪ್ರತಿಕಿಯಿಸಿರುವ ಸಿಎಂ ಸಿದ್ದರಾಮಯ್ಯ, ಪಾಪ ಭೇಟಿಯಾಗ್ಲಿ ಬಿಡಿ ಯಾರು ಬೇಡ ಅಂದೋರು ಅಂತಾ ಹೇಳಿದ್ದಾರೆ.

    ಬಾದಾಮಿಯಲ್ಲಿ ಸುದ್ದಿಗಾರರಿಗೆ ಈ ಕುರಿತು ಗರಂ ಆದ ಸಿಎಂ, ಕುಮಾರಸ್ವಾಮಿ ಯಾವ ಕಾರಣಕ್ಕಾಗಿ ಭೇಟಿಯಾಗಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಯಾರು ಯಾರನ್ನೋ ಭೇಟಿಯಾದ್ರೆ ನಾನೇನು ಹೇಳಲಿ. ಭೇಟಿಯಾಗಿದ್ದಾರೆ ಭೇಟಿಯಾಗಿದ್ದಾರೆ ಅಷ್ಟೇ ಮತ್ತೇನಿಲ್ಲ. ಯಾತಕ್ಕಾಗಿ ಭೇಟಿಯಾಗಿದ್ದಾರೆ ಏನ್ ಮಾತನಾಡಿಕೊಂಡಿದ್ದಾರೆ ಗೊತ್ತಿಲ್ಲ. ಬೇರೆ ಪಕ್ಷದವರನ್ನ ಭೇಟಿಯಾಗಬಾರದು ಅಂತ ಕಾನೂನು ಏನಾದ್ರು ಇದೆಯಾ ಅಂತಾ ಸಿಎಂ ಪ್ರಶ್ನಿಸಿದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಶನಿವಾರ ರಾತ್ರಿ ಬೆಂಗಳೂರಿನ ಗಾಲ್ಫ್ ಕ್ಲಬ್‍ನಲ್ಲಿರುವ ಅಂಬಿ ಮನೆಗೆ ಕುಮಾರಸ್ವಾಮಿ ತೆರಳಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಮಂಡ್ಯದಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಿ ಅಂತ ಹೆಚ್ ಡಿಕೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ಅಂಬಿ ಕಾಂಗ್ರೆಸ್‍ನಲ್ಲಿ ನನಗೆ ಅವಮಾನ ಮಾಡಿದ್ದಾರೆ. ಹೇಳದೇ ಕೇಳದೇ ಸಚಿವ ಸ್ಥಾನದಿಂದ ತೆಗೆದುಹಾಕಿದ್ದಾರೆ. ಅದೇ ಕಾರಣಕ್ಕೆ ಚುನಾವಣೆಗೆ ನಿಲ್ಲುತ್ತಿಲ್ಲ ಅಂತ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ಹಿಂದೆ ಜೆಡಿಎಸ್ ಬಗ್ಗೆ ಅಂಬಿ ಹೊಗಳಿದ್ದರು. ಆದರೆ ಈಗ ಜೆಡಿಎಸ್ ಸೇರ್ಪಡೆ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೀನಿ ಎಂದು ಹೇಳಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಇದನ್ನೂ ಓದಿ: ಆರೋಗ್ಯ ಸರಿಯಿಲ್ಲ, ವಯಸ್ಸು ಸಹಕರಿಸ್ತಿಲ್ಲ, ಹೋಗ್ ಹೋಗಿ ನಾನೆಲ್ಲೂ ಬರಕಿಲ್ಲ- ಅಂಬರೀಶ್

    ಇದನ್ನೂ ಓದಿ: ಅಂಬರೀಶ್, ನಾನು ಅಣ್ಣ-ತಮ್ಮಂದಿರಿದ್ದಂತೆ: ಕುಮಾರಸ್ವಾಮಿ

    ಇದನ್ನೂ ಓದಿ:  ನಾನು ಯಾವತ್ತಿದ್ರೂ ಸ್ಟಾರ್, ರಾಜಕೀಯ, ಚಿತ್ರರಂಗದಲ್ಲಿ ಉನ್ನತ ಸ್ಥಾನ ಕೊಟ್ಟ ಮಂಡ್ಯ ಜನತೆಗೆ ಚಿರಋಣಿ: ಅಂಬರೀಶ್

  • ಬಾಯಾರಿದಾಗ ನೀರು ಕೊಡಲಿಲ್ಲ, ಈಗ್ಯಾಕೆ ಬಂದ್ರಿ?- ಸಚಿವೆ ಗೀತಾ ಮಹದೇವಪ್ರಸಾದ್ ವಿರುದ್ಧ ಮಹಿಳೆಯರು ಕಿಡಿ

    ಬಾಯಾರಿದಾಗ ನೀರು ಕೊಡಲಿಲ್ಲ, ಈಗ್ಯಾಕೆ ಬಂದ್ರಿ?- ಸಚಿವೆ ಗೀತಾ ಮಹದೇವಪ್ರಸಾದ್ ವಿರುದ್ಧ ಮಹಿಳೆಯರು ಕಿಡಿ

    ಚಾಮರಾಜನಗರ: ಮತ ಕೇಳಲು ಹೋದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಗೀತಾಮಹದೇವಪ್ರಸಾದ್ ಅವರು ಮಹಿಳೆಯರಿಂದಲೇ ತರಾಟೆಗೆ ಒಳಗಾದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದ ಹಿರಿಕಾಟಿ ಗ್ರಾಮದಲ್ಲಿ ಜರುಗಿದೆ.

    ಕುಡಿಯಲು ನೀರು ಕೊಡೋಕೆ ನಿಮಗೆ ಆಗಲಿಲ್ಲ. ಈಗ ನಮ್ಮ ಗ್ರಾಮಕ್ಕೆ ಮತ ಕೇಳಲು ಯಾಕೆ ಬಂದಿದ್ದೀರಾ. ನಮಗೆ ಬಾಯಾರಿಕೆ ಆದಾಗ ನೀವು ನೀರು ಕೊಡಲಿಲ್ಲ. ನಾವು ಈಗ ನಿಮಗೆ ಮತ ನೀಡಬೇಕಾ ಎಂದು ಹಿರಿಕಾಟಿ ಗ್ರಾಮದ ಮಹಿಳೆಯರು ಸಚಿವೆ ಗೀತಾಮಹದೇವಪ್ರಸಾದ್ ಅವರನ್ನು ತರಾಟೆಗೆ ತೆಗೆದುಕೊಂಡ್ರು.

    ಗ್ರಾಮದ ಪ್ರವೇಶ ದ್ವಾರದಲ್ಲೇ ಗೀತಾಮಹದೇವಪ್ರಸಾದ್ ರನ್ನು ನಿಲ್ಲಿಸಿ, ಉಪಚುನಾವಣೆಯಲ್ಲಿ ಗೆದ್ದ ನಂತರ ಇತ್ತ ನೀವು ತಲೆ ಹಾಕಿಲ್ಲ. ಇದೀಗ ಚುನಾವಣೆ ಬಂದ ಮೇಲೆ ನಮ್ಮ ಗ್ರಾಮಕ್ಕೆ ನೀವು ಬರ್ತಾ ಇದ್ದೀರಾ. ನೀರು ಕೊಡದ ನಿಮಗೆ ನಾವು ಯಾಕೆ ಮತ ಹಾಕಬೇಕು ಎಂದು ಮಹಿಳೆಯರು ಸಚಿವೆಗೆ ಪ್ರಶ್ನೆಗಳ ಸುರಿಮಳೆಗೈದರು.

    ಈ ವೇಳೆ ಮಹಿಳೆಯರನ್ನು ಮನವೊಲಿಸಲು ಮುಂದಾದ ಸಚಿವೆಯ ಹಿಂಬಾಲಕನ್ನು ಸಹ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದರು. ಅವರು ನೀರು ಕೊಡಲಿಲ್ಲ ಅಂದರೆ ನೀವ್ ಕೊಡ್ತೀರಾ..? ನಾವು ಅವರನ್ನು ಕೇಳ್ತಾ ಇರೋದು ನೀವು ಮಾತಾಡಬೇಡಿ ಎಂದು ಹಿಂಬಾಲಕರ ವಿರುದ್ಧ ಕಿಡಿ ಕಾರಿದ್ದಾರೆ.

  • ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?

    ಬೆಂಗಳೂರು: ಚುನಾವಣಾ ಸನ್ಯಾಸ ಘೋಷಿಸಿರುವ ಹಿರಿಯ ನಟ ಮತ್ತು ಮಾಜಿ ಸಚಿವ ರೆಬೆಲ್ ಸ್ಟಾರ್ ಅಂಬರೀಶ್‍ರನ್ನು ಶನಿವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ.

    ಬೆಂಗಳೂರಿನ ಗಾಲ್ಫ್ ಕ್ಲಬ್‍ನಲ್ಲಿರುವ ಅಂಬಿ ಮನೆಗೆ ಕುಮಾರಸ್ವಾಮಿ ತೆರಳಿ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಮಂಡ್ಯದಲ್ಲಿ ನಮ್ಮ ಪಕ್ಷವನ್ನು ಬೆಂಬಲಿಸಿ ಅಂತ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

    ಈ ವೇಳೆ ಅಂಬಿ ಕಾಂಗ್ರೆಸ್‍ನಲ್ಲಿ ನನಗೆ ಅವಮಾನ ಮಾಡಿದ್ದಾರೆ. ಹೇಳದೇ ಕೇಳದೇ ಸಚಿವ ಸ್ಥಾನದಿಂದ ತೆಗೆದುಹಾಕಿದ್ದಾರೆ. ಅದೇ ಕಾರಣಕ್ಕೆ ಚುನಾವಣೆಗೆ ನಿಲ್ಲುತ್ತಿಲ್ಲ ಅಂತ ತಮ್ಮ ನೋವು ತೋಡಿಕೊಂಡಿದ್ದಾರೆ. ಈ ಹಿಂದೆ ಜೆಡಿಎಸ್ ಬಗ್ಗೆ ಅಂಬಿ ಹೊಗಳಿದ್ದರು. ಆದರೆ ಈಗ ಜೆಡಿಎಸ್ ಸೇರ್ಪಡೆ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೀನಿ ಎಂದು ಹೇಳಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಬದಾಮಿಯಲ್ಲಿ ಸುದೀಪ್ ಪ್ರಚಾರಕ್ಕೆ ಸ್ಪಷ್ಟನೆ ನೀಡಿದ ಸಂಸದ ಶ್ರೀರಾಮುಲು

    ಬದಾಮಿಯಲ್ಲಿ ಸುದೀಪ್ ಪ್ರಚಾರಕ್ಕೆ ಸ್ಪಷ್ಟನೆ ನೀಡಿದ ಸಂಸದ ಶ್ರೀರಾಮುಲು

    ಕೊಪ್ಪಳ: ನಟ ಸುದೀಪ್ ನಮ್ಮ ಸಮಾಜದ ಓರ್ವ ಕಲಾವಿದ. ಸಿನಿಮಾದಲ್ಲಿ ಸುದೀಪ್ ಅದ್ಭುತವಾಗಿ ನಟನೆ ಮಾಡುವ ಮೇಲಕ್ಕೆ ಬಂದಿದ್ದಾರೆ. ಶ್ರೀರಾಮುಲು ಸಮಾಜಪರ ಕೆಲಸಗಳಿಂದ ರಾಜಕಾರಣದಲ್ಲಿ ಮೇಲೆ ಬಂದಿದ್ದೇನೆ. ಇಂದು ಬೆಳಗ್ಗೆ ಸುದೀಪ್ ಅವರ ಫೋನ್ ನಲ್ಲಿ ಮಾತನಾಡಿದ್ದು, ಬದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂತಾ ತಿಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಇಂದು ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಚುನಾವಣಾ ಪ್ರಚಾರಕ್ಕೆ ಶ್ರೀರಾಮುಲು ಆಗಮಿಸಿದ್ರು. ಈ ವೇಳೆ ಸುದ್ದಿಗಾರರರೊಂದಿಗೆ ಮಾತನಾಡಿದ ಸಂಸದರು, ನನ್ನ ವಿರುದ್ಧ ಪ್ರಚಾರ ಮಾಡಲ್ಲ ಅಂತಾ ಸುದೀಪ್ ಈಗಾಗಲೇ ಟ್ವೀಟ್ ಮಾಡಿದ್ದಾರೆ. ಶ್ರೀರಾಮುಲು ವಿರುದ್ಧ ಪ್ರಚಾರ ಮಾಡುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯಗಳು ಬಂದಿದ್ದರಿಂದ ಹಿಂದೆ ಸರಿದಿದ್ದಾರೆ. ಇಂದು ಬೆಳಗ್ಗೆ ಎಂತಹ ಪರಿಸ್ಥಿತಿಯಲ್ಲೂ ನನ್ನ ವಿರುದ್ಧದ ಚುನಾವಣೆ ಪ್ರಚಾರಕ್ಕೆ ಬರಲ್ಲ ಅಂತಾ ಹೇಳಿದ್ದಾರೆ ಎಂದು ತಿಳಿಸಿದ್ರು.

    ಮೋದಿ ವಿರುದ್ಧ ಸಿಎಂ ಟ್ವೀಟ್ ಮಾಡಿರುವ ವಿಚಾರವಾಗಿ ಪ್ರತಿಕ್ರಿಸಿದ ಶ್ರೀರಾಮುಲು, ಗಾಜಿನ ಮನೆ ಮೇಲೆ ನಿಂತು ಇನ್ನೊಬ್ಬರ ಮನೆ ಮೇಲೆ ಕಲ್ಲು ಹೊಡೆಯುವ ಕೆಲಸವನ್ನು ಸಿಎಂ ಮಾಡ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ಭ್ರಷ್ಟ ಮಂತ್ರಿಗಳು ತುಂಬಿಕೊಂಡಿದ್ದಾರೆ. ಮೂರು ಬಿಟ್ಟವರೇ ಅಂದ್ರೆ ಕಾಂಗ್ರೆಸ್‍ನವರು ಅಂತಾ ಟೀಕಿಸಿದ್ರು.

  • ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲ: ಜಿಗ್ನೇಶ್ ಮೇವಾನಿ

    ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲ: ಜಿಗ್ನೇಶ್ ಮೇವಾನಿ

    ರಾಯಚೂರು: ಪ್ರಧಾ ಮೋದಿ ದೊಡ್ಡ ಕಲಾವಿದ ಅವರ ಮುಂದೆ ಪ್ರಕಾಶ ರೈ ಏನೂ ಅಲ್ಲಾ ಅಂತ ಗುಜರಾತನ ಶಾಸಕ ಜಿಗ್ನೇಶ್ ಮೇವಾನಿ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.

    ರಾಯಚೂರಿನಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಗ್ನೇಶ್, ನಾಟಕ ಬಂದ್ ಮಾಡಿ ಬಡವರಿಗೆ ಹಾಗು ದಲಿತರಿಗೆ ಊಟ ನೀಡಿ ಅಂತ ಪ್ರಧಾನಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಿಗಳಿಗೆ ಈಗ ದಲಿತರ ಬಗ್ಗೆ ಪ್ರೇಮವಾಗಿದೆ. ಗುಜರಾತ್ ದಲಿತರ ಮೇಲೆ ದೌರ್ಜನ್ಯ ನಡೆದಾಗ ಮೋದಿ ಹಾಗು ಬಿಜೆಪಿ ಮುಖಂಡರು ಎಲ್ಲಿಗೆ ಹೋಗಿದ್ದರು ಅಂತ ಪ್ರಶ್ನಿಸಿದರು. ಇದನ್ನೂ ಓದಿ: ಪ್ರಧಾನಿ ವಿರುದ್ಧ ಮಾತನಾಡಲು ಆರಂಭಿಸಿದ್ದ ದಿನದಿಂದ ಬಾಲಿವುಡ್ ಆಫರ್ ಗಳೇ ಬಂದಿಲ್ಲ: ಪ್ರಕಾಶ್ ರೈ

    ಕರ್ನಾಟಕ ಚುನಾವಣೆ ಬಂದಾಗ ದಲಿತರ ಮನೆಯಲ್ಲಿ ಊಟ ಮಾಡುತ್ತಿದ್ದಾರೆ. ಸಫಾಯಿ ಕರ್ಮಚಾರಿ ಕೆಲಸ ಮಾಡುವುದನ್ನು ಬಿಡಿಸಲು ಟೆಕ್ನಾಲಾಜಿ ತೆಗೆದುಕೊಂಡು ಬನ್ನಿ. ರೋಹಿತ್ ವೇಮಲು ಹತ್ಯೆ ಮಾಡಿ ಈಗ ನಾಟಕ ಮಾಡುತ್ತೀರಿ, ನೀವು ಮನುವಾದಿ. ಪ್ರಧಾನ ಮಂತ್ರಿ ಮೋದಿ ನಾಲ್ಕು ವರ್ಷ ಬ್ಯಾಂಕುಗಳ ಕೊಳ್ಳೆ ಹೊಡೆದಿದ್ದಾರೆ. ಇವರು ಚೌಕಿದಾರರಲ್ಲ ದೇಶದ ನಂಬರ್ ಕಳ್ಳ ಅಂತಾ ಕಟು ಪದಗಳಿಂದ ಟೀಕಿಸಿದ್ರು.

  • ಪ್ರಧಾನಿ ಮೋದಿ ನನ್ನನ್ನು ಹೊಗಳಿದ್ದು ಯಾಕೆ ಗೊತ್ತು ಅಂತಾ ಅಂದ್ರು ಹೆಚ್‍ಡಿಡಿ

    ಪ್ರಧಾನಿ ಮೋದಿ ನನ್ನನ್ನು ಹೊಗಳಿದ್ದು ಯಾಕೆ ಗೊತ್ತು ಅಂತಾ ಅಂದ್ರು ಹೆಚ್‍ಡಿಡಿ

    ಚಿಕ್ಕಮಗಳೂರು: ಪ್ರಧಾನಿ ಮೋದಿ ನನ್ನನ್ನು ಯಾಕೆ ಹೊಗಳಿದ್ದು ಯಾಕೆ ಅಂತಾ ಗೊತ್ತಿದೆ ಅಂತಾ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡರು ಜಿಲ್ಲೆಯ ಕಡೂರಿನಲ್ಲಿ ನಡೆದ ಸಮಾವೇಶದಲ್ಲಿ ತಿಳಿಸಿದ್ದಾರೆ.

    ಪ್ರಧಾನಿ ಮೋದಿ ನನ್ನನು ಮೊದಲು ಹೊಗಳಿ, ನಂತರ ಜೆಡಿಎಸ್ ಗೆ ವೋಟ್ ಹಾಕ್ಬೇಡಿ ಅಂತಾ ಅಂದ್ರು. ಒಬ್ಬ ಕನ್ನಡಿಗ ಪ್ರಧಾನ ಮಂತ್ರಿ ಸ್ಥಾನದಲ್ಲಿದ್ದರು, ಮತ್ತೊಮ್ಮೆ ನಮ್ಮ ರಾಜ್ಯದ ನಾಯಕ ಪ್ರಧಾನಿ ಆಗುವ ಸಾಧ್ಯತೆಗಳು ಕಡಿಮೆ ಇವೆ. ಈ ಹಿನ್ನೆಲೆಯಲ್ಲಿ ಒಬ್ಬ ಮಾಜಿ ಪ್ರಧಾನಿಗಳ ಬಗ್ಗೆ ಅಗೌರವದಿಂದ ಮಾತನಾಡಬೇಡಿ ಅಂತಾ ಕಾಂಗ್ರೆಸ್ ನಾಯಕರಿಗೆ ತಿಳಿಸುವದಕ್ಕಾಗಿ ನನ್ನನ್ನು ಹೊಗಳಿದ್ದಾರೆ ಅಂತಾ ಸ್ಪಷ್ಟನೆ ನೀಡಿದ್ರು.

    ಒಬ್ಬ ಕನ್ನಡಿಗ ಪ್ರಧಾನಿ ಆಗಿದ್ದಾರೆ ಅಂತಾ ಜೆ.ಹೆಚ್.ಪಟೇಲ್ ರು ಮುಖ್ಯಮಂತ್ರಿ ಕಚೇರಿ ನನ್ನ ಫೋಟೋ ಹಾಕಿದ್ದರು. ನಂತರ ಬಂದ ಎಸ್.ಎಂ.ಕೃಷ್ಣ, ಧರಂಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡರು ನನ್ನ ಫೋಟೋ ತೆಗೆಯಲಿಲ್ಲ. ಆದ್ರೆ ಸಿದ್ದರಾಮಯ್ಯ ಬಂದ ಕೂಡಲೇ ನನ್ನ ಫೋಟೋ ತೆಗೆದು ಹಾಕಿದ್ರು, ಆ ಅನಾಗರಿಕತೆಗೆ ಮೋದಿ ಸಿಎಂಗೆ ನನ್ನ ಬಗ್ಗೆ ಹೇಳಿದ್ದಾರೆ ಅಂತಾ ಹೇಳಿದ್ರು.

    ಜೆಡಿಎಸ್‍ಗೆ ಮತ ಹಾಕಿದ್ರೆ ಬಿಜೆಪಿಗೆ ಹೋಗುತ್ತದೆ ಅಂತಾ ನಮ್ಮ ಗೌರವಯುತ ಮಹಾನ್ ದೊಡ್ಡ ಮುಖ್ಯಮಂತ್ರಿ ಹೇಳ್ತಾರೆ. ಸಿಎಂ ಹೇಳುವ ಶೈಲಿಯನ್ನ ನಾನು ಮಾಡಿ ತೋರಿಸಬಲ್ಲೆ, ಆದ್ರೆ ಅದು ತಪ್ಪಾಗುತ್ತದೆ. ಸಿದ್ದರಾಮಯ್ಯರನ್ನು ನಾವು ರಾಜಕೀಯವಾಗಿ ತಲೆ ಮೇಲೆ ಹೊತ್ತು ಮೆರೆದಿದ್ದೇವೆ. ಈತ ವ್ಯಕ್ತಿಯಲ್ಲ, ಶಕ್ತಿ ಎಂದು ಹೇಳಿದ ನನಗೇ ಬುದ್ದಿ ಹೇಳ್ತಾರೆ ಅಂತಾ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್ ಮೈತ್ರಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ದೇವೇಗೌಡ್ರು ತಿರುಗೇಟು ನೀಡಿದ್ರು.

  • ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ ಅಂದ್ರು ನಟ ಯಶ್

    ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ ಅಂದ್ರು ನಟ ಯಶ್

    ಕಾರವಾರ: ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರ ಭರ್ಜರಿಯಿಂದ ಸಾಗುತ್ತಿದ್ದು, ಸ್ಟಾರ್ ನಾಯಕರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ.

    ಇಂದು ನಟ ರಾಕಿಂಗ್ ಸ್ಟಾರ್ ಯಶ್, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ನಟ ಯಶ್ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ.

    ಸಿದ್ದಾಪುರದ ತಿಮ್ಮಪ್ಪ ನಾಯ್ಕ ಸರ್ಕಲ್‍ನಲ್ಲಿ ರೋಡ್ ಶೋ ವೇಳೆ ಯಶ್ ಮಾತನಾಡಿದ್ದು, ಸಮಾಜ, ರಾಜಕಾರಣಿಗಳು ಹಾಗೂ ನಾವು ಸೇರಿದರೆ ಅಭಿವೃದ್ಧಿ ಸಾಧ್ಯ. ನಿಮ್ಮೂರೇ ನನಗೆ ಸ್ಫೂರ್ತಿ. ಶಿವಾನಂದ ಕಳವೆ ಅವರ ಕೆಲಸಗಳು ನನಗೆ ಸ್ಫೂರ್ತಿ ಕೊಟ್ಟಿದೆ. ನಾನು ಉತ್ತಮ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದೇನೆ. ಶಿಲೆ ನಮ್ಮೂರಲ್ಲೇ ಇದ್ದರೂ ನಮಗೆ ಕಾಣುವುದಿಲ್ಲ. ಅದೇ ರೀತಿ ಕಾಗೇರಿ ಅವರ ವ್ಯಕ್ತಿತ್ವ.  ಕಾಗೇರಿಯವರನ್ನ ಗೆಲ್ಲಿಸಿ. ಕಾಗೇರಿ ಅವರ ಮುಖಾಂತರ ನಾನು ಬಂದು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ. ಜನಗಳಿಗೋಸ್ಕರ ನಾನು ಬಂದೆ ಎಂದು ಹೇಳಿದ್ದಾರೆ.

    ಇದೇ ವೇಳೆ ಅವರು ಸಿನಿಮಾ ಡೈಲಾಗ್ ಹೇಳಿದ್ದು, ನಾವು ಮಾಡುವ ಒಂದು ವೋಟಿಂದ 5 ವರ್ಷ ನಮ್ಮ ಭವಿಷ್ಯ ಇರುತ್ತದೆ. `ಬಿರುಗಾಳಿ ಸುಂಟರಗಾಳಿ ಯಾವಾಗ್ಲೋ ಒಂದು ಸಾರಿ ಬರುವುದು. ಅದು ಬರುತ್ತೆ ಅಂದಾಗ ಭಯ ಇರುತ್ತೆ. ಬಂದು ಹೋದ ಮೇಲೆ ಅದರ ಹವಾ ಇರುತ್ತದೆ. ನಾನು ಬರೋವರೆಗೆ ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಮ್ದೆ ಹವಾ’ ಎಂದು ಹೇಳಿದ್ದಾರೆ.

  • ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಬಂಡಿಸಿದ್ದೇಗೌಡ ವಿರುದ್ಧ ದೂರು

    ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಬಂಡಿಸಿದ್ದೇಗೌಡ ವಿರುದ್ಧ ದೂರು

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಬಂಡಿಸಿದ್ದೇಗೌಡ ವಿರುದ್ಧ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

    ರಮೇಶ್‍ಬಾಬು ಬಂಡಿಸಿದ್ದೇಗೌಡ ನಾಮಪತ್ರದ ವೇಳೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಸರಿಯಾದ ಆಸ್ತಿ ಘೋಷಣೆ ಮಾಡಿಕೊಂಡಿಲ್ಲವೆಂದು ಆರೋಪಿಸಿ ಆರ್‍ಟಿಐ ಕಾರ್ಯಕರ್ತ ರವೀಂದ್ರ, ರಾಜ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: 10 ವರ್ಷದಿಂದ ಇಲ್ಲದವರು ಈಗ್ಯಾಕೆ ಬಂದ್ರಿ- ಗ್ರಾಮಸ್ಥರ ಸಿಟ್ಟಿಗೆ ಬೆದರಿ ಕಾಂಗ್ರೆಸ್ ಅಭ್ಯರ್ಥಿ ವಾಪಸ್

    ರಮೇಶ್‍ಬಾಬು ಬಂಡಿಸಿದ್ದೇಗೌಡ ತಮ್ಮ ಹೆಸರಿನಲ್ಲಿ ಮಂಡ್ಯ ನಗರದಲ್ಲಿರುವ ಒಂದು ನಿವೇಶನ ಹಾಗೂ ತಮ್ಮ ಪತ್ನಿ ಸುಮತಿ ಹೆಸರಲ್ಲಿ ಕಿರಂಗೂರು ಗ್ರಾಮದ ಬಳಿ ಇರುವ 85 ನಿವೇಶನಗಳ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಆಸ್ತಿ ವಿವರದ ಬಗ್ಗೆ ಮಾಹಿತಿ ಬಚ್ಚಿಟ್ಟಿರುವ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು ಬಂಡಿಸಿದ್ದೇಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಿ, ನಾಮಪತ್ರವನ್ನು ಅಸಿಂಧುಗೊಳಿಸಬೇಕೆಂದು ಆರ್‍ಟಿಐ ಕಾರ್ಯಕರ್ತ ರವೀಂದ್ರ ಚುನಾವಣಾ ಆಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.