Tag: Karnataka Election 2018

  • ಮತ್ತೊಂದು ಕಡೆ ಪ್ರಚಾರ ಮಾಡಿ ಎಂದ ಶಾಸಕನ ವಿರುದ್ಧ ಗುಡುಗಿದ ಸಿಎಂ!

    ಮತ್ತೊಂದು ಕಡೆ ಪ್ರಚಾರ ಮಾಡಿ ಎಂದ ಶಾಸಕನ ವಿರುದ್ಧ ಗುಡುಗಿದ ಸಿಎಂ!

    ಮಂಡ್ಯ: ತಮ್ಮ ಪರವಾಗಿ ಒಂದೆರೆಡು ಕಡೆ ಪ್ರಚಾರ ಮಾಡಬೇಕು ಎಂದು ಒತ್ತಾಯ ಮಾಡಿದ ಶಾಸಕ ನರೇಂದ್ರಸ್ವಾಮಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ ಘಟನೆ ಮಂಡ್ಯದ ಮಳವಳ್ಳಿಯಲ್ಲಿ ನಡೆದಿದೆ.

    ಇಂದು ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ನರೇಂದ್ರಸ್ವಾಮಿ ಪರ ಪ್ರಚಾರ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ್ರು. ಆದ್ರೆ ಈ ವೇಳೆ ಕೇವಲ ಒಂದು ಕಡೆ ಮಾತ್ರ ಪ್ರಚಾರ ಮಾಡಿ ಹೋಗೋದಾಗಿ ಹೇಳಿದ ಸಿಎಂ ಅವರನ್ನು ಶಾಸಕ ನರೇಂದ್ರಸ್ವಾಮಿ ಮತ್ತೊಂದು ಕಡೆ ಪ್ರಚಾರಕ್ಕೆ ಬರುವಂತೆ ಪಟ್ಟು ಹಿಡಿದ್ರು.

    ಇದ್ರಿಂದ ಕೆರಳಿದ ಸಿಎಂ ಹೇಳಿದ್ರೆ ಅರ್ಥ ಆಗಲ್ವ. ನಾನು ಕೇವಲ ಅರ್ಧ ಗಂಟೆ ಮಾತ್ರ ಇರೋದು. ತುಂಬಾ ಕಡೆ ಪ್ರಚಾರ ಇದೆ, ಬೇಗ ಹೋಗ್ಬೇಕು, ಬಲವಂತ ಮಾಡಬೇಡ ಎಂದು ಆಕ್ರೋಶ ಹೊರಹಾಕಿದ್ರು.

    ಕೊನೆಗೆ ಶಾಸಕರ ಬೇಡಿಕೆಗೆ ಮಣಿದು ಎರಡು ಕಡೆ ಪ್ರಚಾರ ನಡೆಸಿ ವಾಪಸ್ಸಾದ್ರು. ಇದೇ ವೇಳೆ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಸಿಎಂ ಹೆಲಿಕಾಪ್ಟರ್ ಮತ್ತು ಪಟ್ಟಣದಲ್ಲಿ ಸಿಎಂ ಸಂಚರಿಸಿದ ಫಾರ್ಚೂನರ್ ಕಾರನ್ನು ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ರು.  ಇದನ್ನೂ ಓದಿ: ನರೇಂದ್ರಸ್ವಾಮಿ ಬದಲು ನರೇಂದ್ರ ಮೋದಿಗೆ ವೋಟ್ ಹಾಕಿ ಎಂದ ಸಿಎಂ- ವಿಡಿಯೋ ನೋಡಿ

  • ಬಹಿರಂಗವಾಗಿ ಸೇಬಿನ ಹಾರ ಹರಾಜು: ಸಂಗ್ರಹವಾದ ಹಣವನ್ನು ಅಭ್ಯರ್ಥಿಗೆ ನೀಡಿದ ಎಚ್‍ಡಿಡಿ

    ಬಹಿರಂಗವಾಗಿ ಸೇಬಿನ ಹಾರ ಹರಾಜು: ಸಂಗ್ರಹವಾದ ಹಣವನ್ನು ಅಭ್ಯರ್ಥಿಗೆ ನೀಡಿದ ಎಚ್‍ಡಿಡಿ

    ಮಂಡ್ಯ: ತಮಗೆ ಹಾಕಿದ ಸೇಬಿನ ಹಾರವನ್ನು ಹರಾಜು ಹಾಕಿ ಆ ಹಣವನ್ನು ತಮ್ಮ ಪಕ್ಷದ ನಾಗಮಂಗಲ ಕ್ಷೇತ್ರದ ಅಭ್ಯರ್ಥಿ ಸುರೇಶ್‍ಗೌಡ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ್ದಾರೆ.

    ನಾಗಮಂಗಲ ಕ್ಷೇತ್ರ ವ್ಯಾಪ್ತಿಗೆ ಬರುವ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಪಕ್ಷದ ಅಭ್ಯರ್ಥಿ ಸುರೇಶ್‍ಗೌಡ ಪರವಾಗಿ ಪ್ರಚಾರ ಮಾಡಲು ಆಗಮಿಸಿದ್ದರು. ಈ ವೇಳೆ ದೇವೇಗೌಡರಿಗೆ ಅಭಿಮಾನಿಗಳು ಸುಮಾರು 200ಕೆಜಿ ತೂಕದ ಸೇಬಿನ ಹಾರ ಹಾಕಿದ್ದರು.

    ಸೇಬಿನ ಹಾರವನ್ನು ವೇದಿಕೆಯ ಮೇಲೆ ಹರಾಜು ಹಾಕಲಾಯಿತ್ತು. ಮೊದಲು ಮಾಜಿ ಶಾಸಕ ಶಿವರಾಮೇಗೌಡ ಸೇಬಿನ ಹಾರಕ್ಕೆ ಒಂದು ಲಕ್ಷ ಬೆಲೆ ಕಟ್ಟಿದ್ದರು. ನಂತರ ಬೆಟ್ಟೇಗೌಡ ಸೇಬಿನ ಹಾರಕ್ಕೆ ಮೂರು ಲಕ್ಷ ಬೆಲೆ ಕಟ್ಟಿದ್ದರು. ಅವರನ್ನೂ ಮೀರಿಸಿ ಬೆಂಗಳೂರಿನ ಜೆಡಿಎಸ್ ಮುಖಂಡರೊಬ್ಬರು ಸೇಬಿನ ಹಾರಕ್ಕೆ ಮೂರೂವರೆ ಲಕ್ಷ ಬೆಲೆ ಕಟ್ಟಿದ್ದರು.

    ನಂತರ ಐದು ಲಕ್ಷಕ್ಕೆ ಹರಾಜು ಕೂಗಲಾಯಿತ್ತು. ಅಂತಿಮವಾಗಿ ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನಸ್ವಾಮಿ ಸೇಬಿನ ಹಾರವನ್ನು ಆರು ಲಕ್ಷಕ್ಕೆ ಹರಾಜಿನಲ್ಲಿ ಕೊಂಡುಕೊಂಡರು. ಹರಾಜಿನ ನಂತರ ವೇದಿಕೆಯಲ್ಲೇ ಜೆಡಿಎಸ್ ಮುಖಂಡರು ಒಂದೊಂದು ಸೇಬನ್ನು ತಿಂದು ರುಚಿ ನೋಡಿದ್ದು ವಿಶೇಷವಾಗಿತ್ತು.

  • ಅಭಿಮಾನಿಗಳ ವಿರುದ್ಧ ರೇಗಾಡಿದ ಕುಮಾರಸ್ವಾಮಿ!

    ಅಭಿಮಾನಿಗಳ ವಿರುದ್ಧ ರೇಗಾಡಿದ ಕುಮಾರಸ್ವಾಮಿ!

    ಮಂಡ್ಯ: ಕರ್ನಾಟಕ ವಿಧಾನಸಭಾ ಚುನಾವಣೆಗೆಂದು ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಭಿಮಾನಿಗಳ ಮೇಲೆ ಕೋಪಗೊಂಡು ರೇಗಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಇಂದು ಕುಮಾರಸ್ವಾಮಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮಕ್ಕೆ ಪ್ರಚಾರಕ್ಕೆಂದು ಹೋಗಿದ್ದರು. ಆಗ ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಪದೇ ಪದೇ ಬಸ್ಸಿನಿಂದ ಕೆಳಗಿಳಿಯುವಂತೆ ಬೇಡಿಕೆಯಿಡುತ್ತಿದ್ದರು. ಈ ವೇಳೆ ಅಭಿಮಾನಿಗಳ ವಿರುದ್ಧ ಕುಮಾರಸ್ವಾಮಿ ರೇಗಾಡಿದ್ದು, ನನಗೆ ಸಮಯ ಇಲ್ಲ ಇನ್ನು ತುಂಬಾ ಗ್ರಾಮಗಳಿಗೆ ತೆರಳಬೇಕಿದೆ ಎಂದು ಹೇಳಿದ್ದಾರೆ.

    ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರವಾಗಿ ರೋಡ್ ಶೋ ಆರಂಭಿಸಿದಾಗ ಬಸ್‍ನಿಂದ ಕೆಳಗಿಳಿದು ಪ್ರಚಾರ ಮಾಡಿ. ಅಲ್ಲದೇ ವಾಹನದ ಪೂಜೆಯಲ್ಲಿ ಪಾಲ್ಗೊಳ್ಳುವಂತೆ ಅಭಿಮಾನಿಗಳು ಕೇಳಿಕೊಂಡಿದ್ದರು. ಈ ವೇಳೆ ಪ್ರಚಾರ ವಾಹನದ ಮೇಲಿದ್ದ ಕುಮಾರಸ್ವಾಮಿ ಕೆಳಗಿಳಿಯಲು ಆಗಲ್ಲ ನಾನಿನ್ನು ಸಾಕಷ್ಟು ಊರುಗಳಿಗೆ ಹೋಗಬೇಕಿದೆ. ನನ್ ಆರೋಗ್ಯದ ಗತಿ ಏನಾಗಬೇಕು. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಕಾರ್ಯಕರ್ತರ ಮನವೊಲಿಸಿ ಮುಂದೆ ಹೋಗಿದ್ದಾರೆ.

  • ರಂಗೋಲಿ ಮೂಲಕ ಮತದಾನದ ಜಾಗೃತಿ

    ರಂಗೋಲಿ ಮೂಲಕ ಮತದಾನದ ಜಾಗೃತಿ

    ಯಾದಗಿರಿ: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ವಿವಿಧ ರೀತಿಯಲ್ಲಿ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಯಾದಗಿರಿ ಜಿಲ್ಲಾಡಳಿತವು ರಂಗೋಲಿ ಹಾಕಿಸುವ ಮೂಲಕ ಮತದಾನದ ಜಾಗೃತಿ ಮೂಡಿಸಿದೆ.

    ಯಾದಗಿರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮತದಾನ ಜಾಗೃತಿಗಾಗಿ ಜಿಲ್ಲಾಡಳಿತವು ವಿವಿಧ ತರದ ರಂಗೋಲಿ ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಮಹಿಳೆಯರು ವಿವಿಧ ಚಿತ್ತಾರದ ರಂಗೋಲಿ ಬಿಡಿಸಿ ಸಂಭ್ರಮಿಸಿದ್ದಾರೆ.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಬಾಲ ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ಅತ್ಯುತ್ತಮ ರಂಗೋಲಿ ಬಿಡಿಸಿದ ಮಹಿಳೆಯರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಯಿತು. ಈ ಮೂಲಕ ಪ್ರತಿಯೊಬ್ಬರು ಮತದಾನ ಮಾಡುವುದು ಅತ್ಯವಶ್ಯಕ. ಮತದಾನ ನಮ್ಮ ಹಕ್ಕು ಎಂಬ ಬರಹ ಕಾಣುತ್ತಿತ್ತು.

  • ಮತದಾನ ಮಾಡಿ ಫ್ರೀ ಕಾಫಿ ಕುಡಿಯಿರಿ!

    ಮತದಾನ ಮಾಡಿ ಫ್ರೀ ಕಾಫಿ ಕುಡಿಯಿರಿ!

    ಬೆಂಗಳೂರು: ವೋಟ್ ಹಾಕಿ ಅಂತ ವಿಧ ವಿಧವಾಗಿ ಪ್ರಚಾರ ಮಾಡಿದರೂ ಜನ ವೋಟ್ ಹಾಕೋದೆ ಇಲ್ಲ. ಮತದಾನಕ್ಕೂ ನಮಗೂ ಸಂಬಂಧವೇ ಇಲ್ಲ ಅನ್ನೋ ರೀತಿ ಜನ ವರ್ತನೆ ಮಾಡುತ್ತಾರೆ. ಆದರೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಹೋಟೆಲ್ ಮತದಾನದ ದಿನ ಕಾಫಿ ಫ್ರೀ ಅಂತ ಬೋರ್ಡ್ ಹಾಕಿದೆ.

    ಬೆಂಗಳೂರಿನ ಹೃದಯ ಭಾಗ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೋಟೆಲ್ ಚುನಾವಣೆಯಲ್ಲಿ ಎಲ್ಲರೂ ತಮ್ಮ ಹಕ್ಕನ್ನ ಚಲಾಯಿಸಲಿ ಅನ್ನೊ ದೃಷ್ಟಿಯಿಂದ ಮತದಾನದ ದಿನ ಫ್ರೀ ಕಾಫಿ ನೀಡಲು ನಿರ್ಧರಿಸಿದೆ.

    ವೋಟ್ ಹಾಕಿ ಬಂದು ಶಾಯಿಯನ್ನ ತೊರಿಸಿ ಫ್ರೀ ಕಾಫಿ ಕುಡಿಬಹುದು. ಹೋಟೆಲ್ ಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಚರ್ಚೆ ಮಾಡುತ್ತಾರೆ. ಆದರೆ ವೋಟ್ ಹಾಕುವ ವಿಚಾರ ಬಂದ್ರೆ ಯಾರ್ ಹಾಕುತ್ತಾರೆ ಹೋಗಿ ಅಂತಾರೆ. ಅದಕ್ಕೆ ಮತದಾನದ ಜಾಗೃತಿ ಮೂಡಿಸಲು ಈ ರೀತಿ ಕಾಫಿ ಫ್ರೀ ಅಂತ ಅರಿವು ಮೂಡಿಸುತ್ತಿದ್ದೇವೆ ಎಂದು ಹೋಟೆಲ್ ಮಾಲೀಕರಾದ ಕೃಷ್ಣ ಕುಮಾರ್ ಹೇಳಿದ್ದಾರೆ.

    ಈ ಬಗ್ಗೆ ಗ್ರಾಹಕರು ಖುಷಿ ವ್ಯಕ್ತಪಡಿಸಿದ್ದು, ಹೋಟೆಲ್ ನಲ್ಲಿ ಈ ರೀತಿ ಅರಿವು ಮೂಡಿಸುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು, ಈ ಹೋಟೆಲಿಗೆ ನಾನು ರೆಗ್ಯುಲರ್ ಆಗಿ ಬರುತ್ತಿದ್ದೆ. ಈಗ ವೋಟ್ ಹಾಕಿ ಫ್ಯಾಮಿಲಿ ಸಮೇತ ಬಂದು ಫ್ರೀ ಕಾಫಿ ಕುಡಿರಿ ಅಂತ ಮಾಲೀಕರು ಹೇಳುತ್ತಿದ್ದಾರೆ ಎಂದು ಗ್ರಾಹಕರು ಹೇಳಿದ್ದಾರೆ.

  • ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು: ತಿಪ್ಪೇಸ್ವಾಮಿ

    ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು: ತಿಪ್ಪೇಸ್ವಾಮಿ

    ಚಿತ್ರದುರ್ಗ: ನಟ ಕಿಚ್ಚ ಸುದೀಪ್ ಹಾಗೂ ಗಣಿದಣಿ ಜನಾರ್ದನ ರೆಡ್ಡಿ ವಿರುದ್ಧ ಪಕ್ಷೇತರ ಅಭ್ಯರ್ಥಿ ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ನಾಯಕನಟ್ಟಿಯಲ್ಲಿ ನಟ ಕಿಚ್ಚ ಸುದೀಪ್, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಮತಯಾಚನೆಗಾಗಿ ಆಗಮಿಸಿದ್ದಕ್ಕಾಗಿ ಆಕ್ರೋಶಗೊಂಡ ತಿಪ್ಪೇಸ್ವಾಮಿ, ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು. ನಾನು ಇವರಿಗಿಂತ ಮೊದಲೇ ಬಣ್ಣ ಹಚ್ಚಿದ ಕಲಾವಿದ. ಹೀಗಾಗಿ ಇವರೆಲ್ಲಾ ಬಂದು ಪ್ರಚಾರ ಮಾಡಿದರೆ ನಮ್ ಜನ ಮರಳಾಗಲ್ಲ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀ ರಾಮುಲು ಈ ಗೆಲ್ಲಲ್ಲ. ಅಂತ ಸುದೀಪ್ ವಿರುದ್ಧ ಕಿಡಿಕಾರಿದ್ದಾರೆ.

    ಬಳ್ಳಾರಿಯವರ ಅಟ ಇಲ್ಲಿ ನಡೆಯಲ್ಲ. ಆ ಜನಾರ್ದನ ರೆಡ್ಡಿಗೆ ನಾಚಿಕೆಯಾಗಬೇಕು. ಅವರಿಗೆ ಬಿಜೆಪಿಯೊಂದಿಗೆ ಬರಬೇಡ ಅಂದರೂ ನಾಚಿಕೆ ಇಲ್ಲದೇ ಬರುತ್ತಾರೆ. ಕದ್ದು ಮುಚ್ಚಿ ಪ್ರಚಾರ ಮಾಡುತ್ತಾರೆ. ನಾಚಿಕೆಯಾಗಲ್ವಾ ಅವರಿಗೆ ಅಂತ ಪ್ರಶ್ನಿಸಿದ್ರು.

    ತಿಪ್ಪೇಸ್ವಾಮಿ ಒಲವು ಸಿಎಂ ಸಿದ್ದರಾಮಯ್ಯ ಕಡೆ ವಾಲಿದ್ದೂ, ಬದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ. ಶ್ರೀರಾಮುಲು ಸೋಲುತ್ತಾರೆ. ಆದರೆ ಬದಾಮಿಯಲ್ಲಿ ಪ್ರಚಾರ ಮಾಡಲ್ಲ ಅಂದಿದ್ದ ನಟ ಸುದೀಪ್, ಮೊಳಕಾಲ್ಮೂರು ಕ್ಷೇತ್ರಕ್ಕೆ ಯಾಕೆ ಬಂದ್ರು ಅಂತ ಕಿಡಿಕಾರಿದ್ದಾರೆ.

    ಜೊತೆಗೆ ನಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಸುದೀಪ್ ರೋಡ್ ಶೋ ವೇಳೆಯೇ ದೇಗುಲದ ಆವರಣದಲ್ಲಿ ಬಂಡಾಯ ಶಾಸಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದೂ, ಅವರ ಗುರುತಾದ ನೂರಾರು ಟ್ರಾಕ್ಟರ್ ಗಳಲ್ಲಿ ಅಪಾರ ಜನಸ್ತೋಮವನ್ನು ಸೇರಿಸಿ ಬಹಿರಂಗ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ಬಹುಕೋಟಿ ವಂಚನೆಗೈದು ದೇಶ ತೊರೆದ ಉದ್ಯಮಿ ಜೊತೆ ನಂಟು: ಬಿಜೆಪಿಗೆ ಸಿಎಂ ತಿರುಗೇಟು

    ಬಹುಕೋಟಿ ವಂಚನೆಗೈದು ದೇಶ ತೊರೆದ ಉದ್ಯಮಿ ಜೊತೆ ನಂಟು: ಬಿಜೆಪಿಗೆ ಸಿಎಂ ತಿರುಗೇಟು

    ಬೆಂಗಳೂರು: ಉದ್ಯಮಿ ವಿಜಯ್ ಈಶ್ವರನ್ ಜೊತೆ ಸಿದ್ದರಾಮಯ್ಯ ಅವರಿಗೆ ನಂಟಿದೆ ಎಂದು ಆರೋಪ ಮಾಡಿದ ಬಿಜೆಪಿಗೆ ಇಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

    ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ದಾಖಲೆಗಳನ್ನು ಬಿಡುಗಡೆಗೊಳಿಸಿ ಉದ್ಯಮಿ ವಿಜಯ್ ಈಶ್ವರನ್ ಜೊತೆ ಸಿದ್ದರಾಮಯ್ಯ ನಂಟು ಹೊಂದಿದ್ದಾರೆ ಎಂದು ಆರೋಪಿಸಿದ್ದರು.

    ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನನ್ನ ಮೇಲೆ ಆರೋಪ ಹೊರಿಸಲು ಬಿಜೆಪಿ ಈ ಫೋಟೋವನ್ನು ಉಪಯೋಗಿಸಿದ್ದರೆ, ದಾವೋಸ್‍ನಲ್ಲಿ ನೀರವ್ ಮೋದಿ ಜೊತೆಯಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫೋಟೋವನ್ನು ತೋರಿಸಿ ನಾನು ಆರೋಪಿಸಬಹುದು ಎಂದು ಸಿಎಂ ಟ್ವೀಟ್ ಮಾಡಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

    ಬಿಜೆಪಿ ಆರೋಪ ಏನು?
    ಆಗಸ್ಟ್ 13, 2013ರಂದು ಸಿಎಂ ಚೀನಾಕ್ಕೆ ತೆರಳಿದ್ದ ವೇಳೆ ವಿಜಯ್ ಈಶ್ವರನ್‍ನನ್ನು ಭೇಟಿ ಮಾಡಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದರು. ಪ್ರಸ್ತುತ ಮಲೇಷ್ಯಾದಲ್ಲಿರುವ ವಿಜಯ್ ಈಶ್ವರನ್ ತಮಿಳುನಾಡಿನಲ್ಲಿ 35 ಸಾವಿರಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ದೇಶದೆಲ್ಲೆಡೆ 100ಕ್ಕೂ ಹೆಚ್ಚು ಕಡೆ ಎಫ್‍ಐಆರ್ ದಾಖಲಾಗಿದೆ.

    ಚೆನ್ನೈ ಮತ್ತು ಮುಂಬೈ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದ ವಿಜಯ್ ಈಶ್ವರನ್ 2009ರಿಂದ ದೇಶವನ್ನು ತೊರೆದು ಪರಾರಿಯಾಗಿದ್ದನು. ಈ ವ್ಯಕ್ತಿಯನ್ನು ಭೇಟಿ ಮಾಡಿದ್ದು ಯಾಕೆ? ಈ ಭೇಟಿ ವೇಳೆ ಈಶ್ವರನ್ ಗಿಫ್ಟ್ ನೀಡಿದ್ದು, ಆ ಗಿಫ್ಟ್ ಹ್ಯುಬ್ಲೊಟ್ ವಾಚ್ ಇರಬಹುದಲ್ಲವೇ ಎಂದು ಬಿಜೆಪಿ ಪ್ರಶ್ನಿಸಿತ್ತು. ಇದನ್ನೂ ಓದಿ: ಬಹುಕೋಟಿ ವಂಚನೆಗೈದು ದೇಶ ತೊರೆದ ಉದ್ಯಮಿಯ ಜೊತೆಗೆ ಸಿಎಂ ನಂಟು!

  • ಬಿಜೆಪಿ ಅಭ್ಯರ್ಥಿ ಭಾಷಣದ ಮಧ್ಯೆ ‘ಕಾಂಗ್ರೆಸ್‍ಗೆ ಜೈ’ ಅಂದ ಗ್ರಾಮಸ್ಥರು-ವಿಡಿಯೋ ನೋಡಿ

    ಬಿಜೆಪಿ ಅಭ್ಯರ್ಥಿ ಭಾಷಣದ ಮಧ್ಯೆ ‘ಕಾಂಗ್ರೆಸ್‍ಗೆ ಜೈ’ ಅಂದ ಗ್ರಾಮಸ್ಥರು-ವಿಡಿಯೋ ನೋಡಿ

    ಬೆಳಗಾವಿ: ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿಯಾಗಿರುವ ರಾಜು ಕಾಗೆ ಅವರ ಭಾಷಣದ ಮಧ್ಯೆ ಗ್ರಾಮಸ್ಥರು ಕಾಂಗ್ರೆಸ್‍ಗೆ ಜೈ ಅಂತಾ ಘೋಷಣೆ ಕೂಗಿದ್ದಾರೆ.

    ರಾಜು ಕಾಗೆ ಅವರು ಜಿಲ್ಲೆಯ ಅಥಣಿ ತಾಲೂಕಿನ ಶಿರೂರು ಗ್ರಾಮಕ್ಕೆ ಚುನಾವಣೆ ಪ್ರಚಾರಕ್ಕೆ ತೆರಳಿದ ವೇಳೆ ಮುಜುಗರಕ್ಕೆ ಒಳಗಾಗಿದ್ದಾರೆ. ಶಾಸಕರು ಭಾಷಣ ಮಾಡುತ್ತಿದ್ದಂತೆ ಕೆಲ ಗ್ರಾಮುಸ್ಥರು ಅಡ್ಡಿಪಡಿಸಿದ್ರು. ನಮ್ಮ ಊರಿಗೆ ಯಾಕೆ ಬಂದಿದ್ದೀರಿ? 15 ವರ್ಷಗಳಲ್ಲಿ ನಮ್ಮೂರಲ್ಲಿ ಏನು ಮಾಡಿದ್ರಿ ಅಂತಾ ರಾಜು ಕಾಗ ಅವ್ರಿಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ರು.

    ಒಂದು ಕಡೆ ಗ್ರಾಮಸ್ಥರು ಪ್ರಶ್ನೆ ಮಾಡುತ್ತಿದ್ದರೆ, ಕೆಲ ಬಿಜೆಪಿಗೆ ಜೈ, ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಲು ಆರಂಭಿಸಿದ್ರು. ಕೂಡಲೇ ಪ್ರಶ್ನೆ ಕೇಳುತ್ತಿದ್ದ ಗ್ರಾಮಸ್ಥರು ಅವರ ವಿರುದ್ಧವಾಗಿ ಕಾಂಗ್ರೆಸ್‍ಗೆ ಜೈ ಅಂತಾ ಕೂಗುವ ಮೂಲಕ ತಿರುಗೇಟು ನೀಡಿದ್ರು.

    ಇದೇ ಮೊದಲೇನಲ್ಲ: ನಾಲ್ಕು ದಿನಗಳ ಹಿಂದೆ ಚಮಕೇರಿ ಗ್ರಾಮಕ್ಕೆ ತೆರಳಿದಾಗಲೂ ರಾಜು ಕಾಗೆ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ನಾಲ್ಕು ಬಾರಿ ಕಾಗವಾಡ ಕ್ಷೇತ್ರದಿಂದ ಶಾಸಕರಾದ್ರೂ ಗ್ರಾಮಗಳ ಅಭಿವೃದ್ಧಿ ಆಗಿಲ್ಲ ಅಂತಾ ಗ್ರಾಮಸ್ಥರು ಆರೋಪಿಸಿದ್ದಾರೆ.

    ರಾಜು ಕಾಗೆ ಒಟ್ಟು ನಾಲ್ಕು ಬಾರಿ ಕಾಗವಾಡ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2000ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಯು ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ರು. ನಂತರದ ದಿನಗಳಲ್ಲಿ ಬಿಜೆಪಿ ಸೇರ್ಪಡೆಯಾದ ರಾಜು ಕಾಗೆ ಸತತವಾಗಿ ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಶಾಸಕರಾಗಿದ್ದಾರೆ.

  • ಚಿಕ್ಕಬಳ್ಳಾಪುರದಲ್ಲಿ ನಟ ದಿಗಂತ್- ಐಂದ್ರಿತಾ ರೈ, ಪ್ರಜ್ವಲ್ ದೇವರಾಜ್- ಹರ್ಷಿಕಾ ಪೂಣಚ್ಚರಿಂದ ಜೋಡಿ ಪ್ರಚಾರ!

    ಚಿಕ್ಕಬಳ್ಳಾಪುರದಲ್ಲಿ ನಟ ದಿಗಂತ್- ಐಂದ್ರಿತಾ ರೈ, ಪ್ರಜ್ವಲ್ ದೇವರಾಜ್- ಹರ್ಷಿಕಾ ಪೂಣಚ್ಚರಿಂದ ಜೋಡಿ ಪ್ರಚಾರ!

    ಚಿಕ್ಕಬಳ್ಳಾಪುರ: ನಟ ದಿಗಂತ್, ನಟಿ ಐಂದ್ರಿತಾ ರೈ ಸೇರಿದಂತೆ ಹರ್ಷಿಕಾ ಪೂಣಚ್ಚ ಹಾಗೂ ಪ್ರಜ್ವಲ್ ದೇವರಾಜ್ ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.

    ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ.ಸುಧಾಕರ್ ಪರವಾಗಿ ನಟ ದಿಗಂತ್ ಹಾಗೂ ಐಂದ್ರಿತಾ ರೈ ಚಿಕ್ಕಬಳ್ಳಾಪುರ ನಗರದ ವಿವಿಧ ವಾರ್ಡ್‍ಗಳ ಮನೆ-ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

    ಇನ್ನೂ ಮತ್ತೊಂದೆಡೆ ನಟಿ ಹರ್ಷಿಕಾ ಪೂಣಚ್ಚ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಗರದ ಎಂ.ಜಿ ರಸ್ತೆಯಲ್ಲಿ ಮತಯಾಚನೆ ನಡೆಸುತ್ತಿದ್ದಾರೆ. ಉಳಿದಂತೆ ಮತ್ತೊಂದು ವಾರ್ಡಿನಲ್ಲಿ ನಟ ಪ್ರಜ್ವಲ್ ಮನೆ ಮನೆಗೆ ತೆರಳಿ ಶಾಸಕ ಸುಧಾಕರ್ ಪರವಾಗಿ ಮತಯಾಚನೆಯಲ್ಲಿ ತೊಡಗಿದ್ದಾರೆ.

    ಇನ್ನೂ ಬಿಸಲಿನ ತಾಪದಿಂದ ಪಾರಾಗಲು ನಟಿ ಐಂದ್ರಿತಾ ರೈ ಛತ್ರಿ ಹಿಡಿದುಕೊಂಡು ಮತಯಾಚನೆ ಮಾಡುತ್ತಿದ್ದಾರೆ.

  • ರಸ್ತೆ ಬದಿ ತಿಂಡಿ ತಿಂದು ಮಾಲಕಿಗೆ 10 ಸಾವಿರ ರೂ. ಕೊಟ್ಟ ಸುದೀಪ್!

    ರಸ್ತೆ ಬದಿ ತಿಂಡಿ ತಿಂದು ಮಾಲಕಿಗೆ 10 ಸಾವಿರ ರೂ. ಕೊಟ್ಟ ಸುದೀಪ್!

    ಚಿತ್ರದುರ್ಗ: ಹೆಬ್ಬುಲಿ ಕಿಚ್ಚ ಸುದೀಪ್ ಗೆ ಸಾವಿರಾರು ಅಭಿಮಾನಿಗಳಿದ್ದಾರೆ, ಆದರೆ ಸುದೀಪ್ ಮಾತ್ರ ಅತ್ಯಂತ ಸರಳ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರೋಡ್ ಬದಿಯಲ್ಲಿರುವ ಹೋಟೆಲ್ ನಲ್ಲಿ ತಿಂಡಿ ಸವಿದು, ಟೀ ಕುಡಿದು ಸುದೀಪ್ ಸರಳತೆ ಮೆರೆದಿದ್ದಾರೆ.

    ಬಳ್ಳಾರಿಯಲ್ಲಿಂದು ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಪ್ರಚಾರಕ್ಕೆ ಬಂದ ವೇಳೆ ಸುದೀಪ್ ಮೊಳಕಾಲ್ಮೂರು ಗೆ ತೆರಳುವ ಮುನ್ಮ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೊಟೇಲ್‍ನಲ್ಲಿ ತಿಂಡಿ ತಿಂದು ಟೀ ಕುಡಿದರು.

    ರಾಧಾ ಎನ್ನುವ ಬಡ ಮಹಿಳೆಯ ಚಪ್ಪರದ ಹೊಟೇಲಿನಲ್ಲಿ ಸುದೀಪ್ ಚಿತ್ರಾನ್ನ, ಟೀ ಕುಡಿದರು. ಬಳಿಕ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ. ಈ ವೇಳೆ ಮಹಿಳೆ ಹಣ ಪಡೆಯಲು ನಿರಾಕರಿಸಿದಾಗ ಒತ್ತಾಯಪೂರ್ವಕವಾಗಿ ಸುದೀಪ್, ಈ ಹಣದಲ್ಲಿ ಮಕ್ಕಳಿಗೆ ಎನಾದರೂ ಗಿಫ್ಟ್ ತಗೆದುಕೊಳ್ಳಿ ಎಂದು ಹೇಳಿದರು.

    ಹೋಟೆಲ್ ಮಾಲಕಿ ರಾಧಾ ಅವರು 2 ಸಾವಿರ ರೂ. ಸಾಕು ಎಂದರೂ ಸುದೀಪ್ 10 ಸಾವಿರ ರೂ. ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ಚುನಾವಣಾ ಪ್ರಚಾರದ ದೃಷ್ಟಿಯಿಂದ ನಾನು ಕೊಟ್ಟಿಲ್ಲ. ಪ್ರೀತಿಯಿಂದ ನಾನು ಕೊಟ್ಟದ್ದೇನೆ ಅಷ್ಟೇ ಎಂದರು.

    ಈ ವೇಳೆ ಮ್ಯಾನೇಜರ್ ಕಾಸ್ಟ್ಲಿ ಕಪ್ ನಲ್ಲಿ ಟೀ ಕೊಡಲು ಮುಂದಾದ ವೇಳೆ ಸುದೀಪ್ ಪೇಪರ್ ಕಪ್‍ನಲೇ ಟೀ ಕುಡಿದು ಸರಳತೆ ಮೆರೆದರು. ಈ ವೇಳೆ ಸುದೀಪ್ ಗುರುತಿಸಿ ಅಭಿಮಾನಿಗಳು ಅವರ ಜೊತೆ ಸೆಲ್ಫಿ ಕೂಡ ತಗೆಸಿಕೊಂಡು ಹರ್ಷ ವ್ಯಕ್ತಪಡಿಸಿದರು.