Tag: Karnataka Election 2018

  • ರಾಜಕೀಯಕ್ಕೆ ಬರುವ ಮುನ್ಸೂಚನೆ ನೀಡಿದ ನಟ ರಾಕಿಂಗ್ ಸ್ಟಾರ್ ಯಶ್

    ರಾಜಕೀಯಕ್ಕೆ ಬರುವ ಮುನ್ಸೂಚನೆ ನೀಡಿದ ನಟ ರಾಕಿಂಗ್ ಸ್ಟಾರ್ ಯಶ್

    ಬೆಂಗಳೂರು: ರಾಜ್ಯದ ಯಾವುದೇ ಮೂಲೆಯಲ್ಲಿ ಸ್ಪರ್ಧೆ ಮಾಡಿದ್ರೂ ಗೆಲ್ತೀನಿ ಎಂದು ರಾಜಕೀಯಕ್ಕೆ ಬರುವ ಮುನ್ಸೂಚನೆಯನ್ನ ನಟ ರಾಕಿಂಗ್ ಸ್ಟಾರ್ ಯಶ್ ನೀಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ವಿ ನಾಗರಾಜು ಪರ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ. ಪಟ್ಟಣದ ವೀವರ್ಸ್ ಕಾಲೋನಿಯಿಂದ ಆರಂಭಗೊಂಡ ರೋಡ್ ಶೋ ಸರ್ಕಾರಿ ಬಸ್ ನಿಲ್ದಾಣದ, ಮುಖ್ಯ ಸರ್ಕಲ್‍ ವರೆಗೂ ಸಾಗಿತು. ಇದನ್ನೂ ಓದಿ: ನಟರನ್ನು ಬಚ್ಚಾ ಎಂದಿದ್ದ ಶಾಸಕ ತಿಪ್ಪೇಸ್ವಾಮಿಗೆ ಯಶ್ ತಿರುಗೇಟು

    ಈ ವೇಳೆ ಮಾತನಾಡಿದ ನಟ ಯಶ್, ನೆಲಮಂಗಲ ತಾಲೂಕಿನಲ್ಲಿರುವ 56 ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿ ಮಾಡಿ ಮತ್ತೆ ಕೆರೆಗಳನ್ನು ತುಂಬಿಸುತ್ತೇನೆ ಎಂಬ ಉತ್ಸಾಹದಲ್ಲಿ ಮಾಜಿ ಶಾಸಕ ನಾಗರಾಜು ಅವರಿದ್ದಾರೆ. ಹೀಗಾಗಿ ನಾನು ನಾಗರಾಜ್ ಪರ ಮತಯಾಚನೆ ಮಾಡಲು ಬಂದಿದ್ದೇನೆ ಎಂದರು.

    ಒಂದು ವೇಳೆ ನಾಗರಾಜ್ ಗೆದ್ದ ಮೇಲೆ ಕೆರೆಗಳನ್ನು ಅಭಿವೃದ್ಧಿ ಮಾಡದೇ ಇದ್ದರೆ, ನಾನೇ ಖುದ್ದು ಜನರ ಮಧ್ಯೆ ಕೂತು ಪ್ರತಿಭಟನೆ ಮಾಡುತ್ತೇನೆ ಎಂದು ಮತದಾರರಿಗೆ ಭರವಸೆ ನೀಡಿದರು.

    ಇದೇ ವೇಳೆ ಯಶ್ ರಾಜಕೀಯ ಪ್ರವೇಶ ಕುರಿತ ಹೇಳಿಕೆಯನ್ನು ತಮ್ಮ ಸಿನಿಮಾ ಡೈಲಾಗ್ ಮೂಲಕವೇ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. ಎಂಎಲ್‍ಎ, ಎಂಪಿ ಮಿನಿಸ್ಟರ್ ಆಗಬೇಕಾದರೆ ನಾನು ತಲೆಕೆಡಿಸಿಕೊಳ್ಳಬೇಕಿಲ್ಲ. ಕರ್ನಾಟಕ ಯಾವುದೇ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಿದರೂ ಚುನಾವಣೆಯಲ್ಲಿ ಜನ ನನ್ನನ್ನು ಗೆಲ್ಲಿಸುತ್ತಾರೆ. ಜನರು ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವಷ್ಟು ಅಭಿಮಾನ ಇಟ್ಟಿದ್ದಾರೆ. ಈ ಅಭಿಮಾನವೇ ಚುನಾವಣೆಯಲ್ಲಿ ಗೆಲ್ಲಿಸುತ್ತೆ ಅಂತ ಪರೋಕ್ಷವಾಗಿ ರಾಜಕೀಯ ಪ್ರವೇಶದ ಬಗ್ಗೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

    ಬಿಜೆಪಿ ಅಭ್ಯರ್ಥಿ ನಾಗರಾಜು ಮಾತನಾಡಿ ಯಶ್ ಬಂದ ಮೇಲೆ ನನಗೆ ಆನೆ ಬಲ ಬಂದಂತಾಗಿದೆ ಎಂದ್ರು.

  • ಬಿಜೆಪಿಯವರು ಕೇಳಿ ಐಟಿ ದಾಳಿ ಮಾಡಿಸಿಕೊಂಡಿದ್ದಾರೆ- ಸಿಎಂ ಸಿದ್ದರಾಮಯ್ಯ

    ಬಿಜೆಪಿಯವರು ಕೇಳಿ ಐಟಿ ದಾಳಿ ಮಾಡಿಸಿಕೊಂಡಿದ್ದಾರೆ- ಸಿಎಂ ಸಿದ್ದರಾಮಯ್ಯ

    ಮೈಸೂರು: ಬಿಜೆಪಿಯವರ ಕೋರಿಕೆ ಮೇರೆಗೆ ನಡೆದಿರುವ ದಾಳಿ ಇದು. ಇಷ್ಟು ದಿನ ಕಾಂಗ್ರೆಸ್ ಮೇಲೆ ಐಟಿ ದಾಳಿ ನಡೆಯುತ್ತಿದ್ದವು. ಕೊನೆ ಕ್ಷಣದಲ್ಲಿ ಬಿಜೆಪಿಯವರು ಕೇಳಿ ದಾಳಿ ಮಾಡಿಸಿಕೊಂಡಿದ್ದಾರೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀರಾಮುಲು ವಾಸ್ತವ್ಯ ಹೂಡಿದ್ದ ರೆಸಾರ್ಟ್ ಮೇಲೆ ಐಟಿ ದಾಳಿ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು 12 ಚುನಾವಣೆಗಳನ್ನು ನೋಡಿದ್ದೇನೆ. ಯಾವತ್ತೂ ಚುನಾವಣೆ ವೇಳೆ ಐಟಿ ದಾಳಿಗಳು ನಡೆಯುತ್ತಿರಲಿಲ್ಲ. ಐಟಿ ಅಧಿಕಾರಿಗಳು, ಕೇಂದ್ರ ಸರ್ಕಾರದ ನಡೆಯನ್ನು ನಾನು ಎಂದೂ ನೋಡಿರಲಿಲ್ಲ ಅಂದ್ರು.

     

    ಬೆಂಗಳೂರಿನ ಆರ್.ಟಿ.ನಗರದಲ್ಲಿ ನಕಲಿ ಮತದಾರರ ಗುರುತಿನ ಚೀಟಿ ಪತ್ತೆ ವಿಚಾರದ ಇದೇ ವೇಳೆ ಮಾತನಾಡಿದ ಅವರು, ನನಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಅದರ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಲಿ. ಈ ವಿಚಾರದ ಬಗ್ಗೆ ಅನಂತ್ ಕುಮಾರ್ ನೀಡಿರುವ ಹೇಳಿಕೆಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ ಅಂದ್ರು.

    ಚಿತ್ರ ನಟ ಸುದೀಪ್ ಚಾಮುಂಡೇಶ್ವರಿ ಪ್ರಚಾರದಿಂದ ದೂರ ಉಳಿದ ವಿಚಾರಕ್ಕೆ ಸಂಬಂಧಪಟ್ಟಂತೆ, ಸುದೀಪ್ ಪ್ರಚಾರಕ್ಕೆ ಬರಬೇಕಿತ್ತು. ಅವರಿಗೆ ಬೇರೆ ಏನೇನೋ ಕೆಲಸ ಇದ್ದ ಕಾರಣಕ್ಕೆ ಪ್ರಚಾರಕ್ಕೆ ಬಂದಿಲ್ಲ ಅಂದ್ರು.

  • ಸಿನಿಮಾ ನಿರ್ಮಾಪಕ, ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ ಪರ ದರ್ಶನ್ ಪ್ರಚಾರ!

    ಸಿನಿಮಾ ನಿರ್ಮಾಪಕ, ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ ಪರ ದರ್ಶನ್ ಪ್ರಚಾರ!

    ಮೈಸೂರು: ಚಾಲೆಂಜಿಗ್ ಸ್ಟಾರ್ ದರ್ಶನ್ ಬಿಜೆಪಿ ಅಭ್ಯರ್ಥಿ ಸಂದೇಶ್ ಸ್ವಾಮಿ ಪರ ಮತಯಾಚನೆ ಮಾಡಲಿದ್ದಾರೆ.

    ಸಂದೇಶ್ ಸ್ವಾಮಿ ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು, ಸಿನಿಮಾ ನಿರ್ಮಾಪಕ ವಿಧಾನಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಸಹೋದರ. ಹಾಗಾಗಿ ದರ್ಶನ್ ಇಂದು ಮಧ್ಯಾಹ್ನ 3 ರಿಂದ 6 ಗಂಟೆವರೆಗೂ ರ್ಯಾಲಿ ನಡೆಸಲಿದ್ದಾರೆ. ಇದನ್ನೂ ಓದಿ: ಧಿಕ್ಕಾರಕ್ಕೆ ಬಗ್ಗದ ನಟ ದರ್ಶನ್‍ರಿಂದ ಚಾಮುಂಡೇಶ್ವರಿಯಲ್ಲಿ ಅಬ್ಬರದ ಪ್ರಚಾರ

    ಮೈಸೂರಿನ ಯರಗನಹಳ್ಳಿ ರಾಘವೇಂದ್ರ ಬಡಾವಣೆ, ಕ್ಯಾತಮಾರನಹಳ್ಳಿ ಗಾಂಧಿ ನಗರ, ನರಸಿಂಹರಾಜ ಮೊಹಲ್ಲಾ ಸೇರಿದಂತೆ ಹಲವು ಕಡೆ ರೋಡ್ ಶೋ ನಡೆಸಲಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ದರ್ಶನ್ ಸಿಎಂ ಸಿದ್ದರಾಮಯ್ಯ ಪರ ಮತಯಾಚನೆ ಮಾಡಿದ್ದರು.

    ನಾಗನಹಳ್ಳಿಯಲ್ಲಿ ದರ್ಶನ್ ಪ್ರಚಾರಕ್ಕೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಈಗ ದರ್ಶನ್ ಸಂದೇಶ್ ಸ್ವಾಮಿ ಪರ ಪ್ರಚಾರ ಮಾಡುತ್ತಿರುವುದು ಎಲ್ಲರಿಗೂ ಕುತೂಹಲ ಕೆರಳಿಸಿದೆ.

  • ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ- ಕಿಚ್ಚ ಸುದೀಪ್

    ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ- ಕಿಚ್ಚ ಸುದೀಪ್

    ಬೆಂಗಳೂರು: ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ, `ಸುಮಾರು ವರ್ಷಗಳ ಪರಿಚಯದ ನನ್ನ ಕೆಲವು ಗೆಳೆಯರಿಗಾಗಿ ನಾನು ಚುನಾವಣಾ ಪ್ರಚಾರಕ್ಕೆ ಸೇರಿದೆ. ಇವರು ಒಂದಲ್ಲ ಒಂದು ರೀತಿ ನನ್ನ ಜೊತೆಯಿದ್ದು, ನನ್ನ ಕಠಿಣ ಸಮಯದಲ್ಲಿ ನನ್ನ ಬೆನ್ನೆಲುಬಾಗಿ ನಿಂತವರು. ಸಣ್ಣದು ಅಥವಾ ದೊಡ್ಡದು ಎಂಬ ವಿಷಯವಲ್ಲ. ಅವರು ಅಂದು ನಿಂತದ್ದು ವಿಷಯ. ಈಗ ಅವರಿಗಾಗಿ ನಾನು ಅಲ್ಲಿರುವುದು ಬಹುಶಃ ಅವರು ನನ್ನಿಂದ ಪಡೆಯುವ ಒಂದು ಸಣ್ಣ ಬೆಂಬಲ. ಇದು ಕನಿಷ್ಟ ನಾನು ಅವರಿಗಾಗಿ ಮಾಡಬಹುದಾದದ್ದು ಕೂಡ. ಅದರಲ್ಲಿ ಯಾವುದೇ ವಿಷಾದವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಸ್ತೆ ಬದಿ ತಿಂಡಿ ತಿಂದು ಮಾಲಕಿಗೆ 10 ಸಾವಿರ ರೂ. ಕೊಟ್ಟ ಸುದೀಪ್!

    ನನ್ನ ಗೆಳೆಯರ ಹಾಗೂ ಅಭಿಮಾನಿಗಳ ಸಲುವಾಗಿ ನಾನು ಮುಂದಿನ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ. ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗೂ ನನ್ನ ಉಪಸ್ಥಿತಿಯಿಂದ ಫಲಿತಾಂಶಗಳು ಬದಲಾಗುತ್ತದೆ ಎಂದು ನಾನು ನನ್ನನ್ನು ದೊಡ್ಡ ಮಟ್ಟಕ್ಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಅಂದಿದ್ದಾರೆ. ಇದನ್ನೂ ಓದಿ: ನಟ ಸುದೀಪ್ ರೋಡ್ ಶೋ ರದ್ದು

    ನಾನು ಒಬ್ಬ ಕಲಾವಿದ ನನ್ನ ಪಯಣದಲ್ಲಿ ನನ್ನ ಜೊತೆ ಇದ್ದಂತಹ ಗೆಳೆಯರು ಹಾಗೂ ಅಭಿಮಾನಿಗಳ ಅಭಿಪ್ರಾಯ ಮುಖ್ಯವಾಗುತ್ತದೆ. ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ. ಆದರೂ ಈ ನಿರ್ಧಾರ ನನ್ನ ಜೊತೆಯಿರುವ ನನ್ನ ಅಭಿಮಾನಿಗಳು ಹಾಗೂ ಗೆಳೆಯರ ಸಲುವಾಗಿ ಕೈಗೊಳ್ಳುತ್ತಿದ್ದೇನೆ. ನಾನು ಯಾವುದೇ ರೀತಿ ನನ್ನ ಕ್ರಮಗಳಲ್ಲಿ ಅವರಿಗೆ ನೋವುಂಟು ಮಾಡಲು ಇಚ್ಛಿಸುವುದಿಲ್ಲ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್‍ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರರು!

    ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರು ತನ್ನ ಸ್ನೇಹಿತರ ಪರವಾಗಿ ಇತ್ತೀಚೆಗೆ ಪ್ರಚಾರ ನಡೆಸುತ್ತಿದ್ದರು. ಆದ್ರೆ ಆ ಬಳಿಕ ಕಿಚ್ಚ ನಡೆಗೆ ಅಭಿಮಾನಿಗಳು ಗರಂ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಚ್ಚ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಶ್ರೀರಾಮಲು ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ ಕಿಚ್ಚ ಸುದೀಪ್!

  • ಚುನಾವಣಾಧಿಕಾರಿಗಳ ಭರ್ಜರಿ ಬೇಟೆ – 32 ಲಕ್ಷಕ್ಕೂ ಹೆಚ್ಚಿನ ಹಣ ವಶ

    ಚುನಾವಣಾಧಿಕಾರಿಗಳ ಭರ್ಜರಿ ಬೇಟೆ – 32 ಲಕ್ಷಕ್ಕೂ ಹೆಚ್ಚಿನ ಹಣ ವಶ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಆಮಿಷಗಳು ಜೋರಾಗುತ್ತಿದ್ದು, ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಚುನಾವಣೆಗಾಗಿ ಸಂಗ್ರಹಿಸಿರೋ ಹಣವನ್ನು ವಶಪಡಿಸಿಕೊಂಡು ರಾಜಕೀಯ ಪಕ್ಷಗಳಿಗೆ ಸರಿಯಾದ ಏಟನ್ನು ನೀಡಿದ್ದಾರೆ.

    ರಾಜ್ಯದಲ್ಲಿ ಚುನಾವಣೆಗೆ ಕೆಲವೇ ದಿನಗಳು ಇರುವಂತೆ ರಾಜಕೀಯ ಪಕ್ಷಗಳ ಹಣದ ಸಂಗ್ರಹವನ್ನ ಹೆಚ್ಚು ಮಾಡುತ್ತಿವೆ. ಮಂಗಳವಾರ ಚುನಾವಣಾ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಅಮೃತಹಳ್ಳಿಯಲ್ಲಿರುವ ಕೃಷ್ಣ ಜ್ಯುವೆಲ್ಲರಿ ಅಂಗಡಿ ಮೇಲೆ ದಾಳಿ ಮಾಡಿ ಒಟ್ಟು 32 ಲಕ್ಷ 50 ಸಾವಿರ ಹಣವನ್ನ ವಶಪಡಿಸಿಕೊಂಡಿದ್ದಾರೆ.

    ಚುನಾವಣೆಗಾಗಿ ಮೂಗುತಿ ಮತ್ತು ಇತರೆ ಆಭರಣಗಳನ್ನು ಖರೀದಿ ಮಾಡಲು ತಂದಿದ್ದ ಹಣ ಅಂತ ಚುನಾವಣಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಹಣದ ಮಾಲೀಕ ಚೆನ್ನಕೇಶವ್ ನನ್ನ ಕೆಲ ವ್ಯವಹಾರಗಳಿಗೆ ಸಂಬಂಧಿಸಿದ ಹಣ ಇದಾಗಿದ್ದು, ಸೂಕ್ತ ದಾಖಲೆಗಳನ್ನು ನೀಡುತ್ತೇನೆ ಅಂತ ಹೇಳಿದ್ದಾರೆ.

    ಇದು ಕಾಂಗ್ರೆಸ್ ಏಜೆಂಟರಿಗೆ ಸೇರಿದ ಹಣ, ಆತನು ಸಹ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಮತದಾನದ ಸಮಯದಲ್ಲಿ ಹಣ ಹಂಚಲು ಕೆಲ ಅಂಗಡಿಗಳಲ್ಲಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಮೇರೆಗೆ ನಾನು ಚುನಾವಣಾ ಅಧಿಕಾರಿಗಳಿಗೆ ಫೋನ್ ಮುಖಾಂತರ ದೂರು ನೀಡಿದ್ದೆ. ಅಧಿಕಾರಿಗಳು ಬಂದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿರುವ ಹರೀಶ್ ಹೇಳಿದ್ದಾರೆ.

    ಮತದಾರರಿಗೆ ನಾನಾ ಆಮಿಷಗಳನ್ನು ತೋರಿಸಿ ಹಣವನ್ನ ಹಂಚಿ ಅಧಿಕಾರಿದ ಗದ್ದುಗೆ ಏರಲು ರಾಜಕೀಯ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇದಕ್ಕೆ ಚುನಾವಣೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

  • ಪ್ರಚಾರದ ವೇಳೆ ಚಕ್ಕಡಿಯಿಂದ ಬಿದ್ದು ತಲೆಗೆ ಗಾಯವಾಗಿದ್ದ ಕೈ ಅಧ್ಯಕ್ಷ ಇನಿಲ್ಲ

    ಪ್ರಚಾರದ ವೇಳೆ ಚಕ್ಕಡಿಯಿಂದ ಬಿದ್ದು ತಲೆಗೆ ಗಾಯವಾಗಿದ್ದ ಕೈ ಅಧ್ಯಕ್ಷ ಇನಿಲ್ಲ

    ಹುಬ್ಬಳ್ಳಿ: ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ ಹೆಚ್.ವಿ ಮಾಡಳ್ಳಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ನವಲಗುಂದ ತಾಲೂಕಿನ ಶಲವಡಿ ಗ್ರಾಮದಲ್ಲಿ ಮಾಡಳ್ಳಿ ಚಕ್ಕಡಿ(ಎತ್ತಿನ ಬಂಡಿ) ಹತ್ತಲು ಹೋಗಿ ಬಿದ್ದು ಗಾಯ ಮಾಡಿಕೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರ ಮಾಡುವಾಗ ಈ ಘಟನೆ ನಡೆದಿತ್ತು.

    ಘಟನೆಯಲ್ಲಿ ಮಾಡಳ್ಳಿ ಅವರಿಗೆ ತಲೆಗೆ ಗಂಭೀರ ಗಾಯವಾಗಿದ್ದರಿಂದ ಎರಡು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲೇ ಇದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

  • ಕಾಂಗ್ರೆಸ್ ಆಯ್ತು ಈಗ ಬಿಜೆಪಿಗೂ ಐಟಿ ಶಾಕ್ – ಶ್ರೀರಾಮುಲು ತಂಗ್ತಿದ್ದ ಹೋಟೆಲ್ ಮೇಲೂ ರೇಡ್

    ಕಾಂಗ್ರೆಸ್ ಆಯ್ತು ಈಗ ಬಿಜೆಪಿಗೂ ಐಟಿ ಶಾಕ್ – ಶ್ರೀರಾಮುಲು ತಂಗ್ತಿದ್ದ ಹೋಟೆಲ್ ಮೇಲೂ ರೇಡ್

    ಚಿತ್ರದುರ್ಗ: ಬದಾಮಿಯಲ್ಲಿ ಸೋಮವಾರ ರಾತ್ರಿ ಕಾಂಗ್ರೆಸ್ ಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು ಇದೀಗ ಬಿಜೆಪಿಯವರಿಗೂ ಶಾಕ್ ನೀಡಿದ್ದಾರೆ.

    ಸಂಸದ ಶ್ರೀರಾಮುಲು ಬದಾಮಿಗೆ ಹೋದಾಗಲೆಲ್ಲಾ ವಾಸ್ತವ್ಯ ಹೂಡುತ್ತಿದ್ದ ಕೋರ್ಟ್ ಹೋಟೆಲ್‍ಗೆ ಐಟಿ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಿಢೀರ್ ದಾಳಿ ನಡೆಸಿ ರೂಂ ಗಳನ್ನ ಜಾಲಾಡಿದ್ದಾರೆ. ಹೋಟೆಲ್ ರಿಜಿಸ್ಟರ್ ಪುಸ್ತಕವನ್ನ ಪರಿಶೀಲಿಸಿದ್ದಾರೆ.

    ಇದಕ್ಕೂ ಮುನ್ನ ಚುನಾವಣಾ ಅಕ್ರಮ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಮುಲು ಆಪ್ತ ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಟಿ.ರೇವಣ್ಣ ಅವರ ಕೊಂಡ್ಲಹಳ್ಳಿ ತೋಟದ ಮನೆ ಹಾಗೂ ಧನಂಜಯ ರೆಡ್ಡಿ ಅವರ ದೊಡ್ಡ ಉಳ್ಳಾರ್ತಿ ಮನೆ ಮೇಲೂ ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ದಾವಣಗೆರೆಯ ಮಾಡಾಳು ಗ್ರಾಮ ಚನ್ನಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಡಾಳ್ ವಿರೂಪಾಕ್ಷಪ್ಪ ನಿವಾಸದ ಮೇಲೂ ರೇಡ್ ಮಾಡಿದ್ದಾರೆ. ಮೂರು ಜನ ಅಧಿಕಾರಿಗಳ ತಂಡದಿಂದ ಮಹತ್ವ ಪ್ರಮಾಣದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬದಾಮಿ ಕಾಂಗ್ರೆಸ್‍ಗೆ ಮಿಡ್‍ನೈಟ್ ಐಟಿ ಶಾಕ್!

    ಈ ವಿಚಾರ ತಿಳಿಯುತ್ತಿದ್ದಂತೆ ವಿರೂಪಾಕ್ಷಪ್ಪ ಮನೆ ಮುಂಭಾಗ ಅಪಾರ ಪ್ರಮಾಣದಲ್ಲಿ ಬೆಂಬಲಿಗರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ, ವಿರೂಪಾಕ್ಷಪ್ಪ, ಇದೆಲ್ಲಾ ವಿಪಕ್ಷದವರ ಕುತಂತ್ರ. ನನ್ನ ಜನಪ್ರಿಯತೆ ಸಹಿಸಲಾರದೆ ದೂರು ನೀಡಿದ್ದಾರೆ. ಯಾರು ಏನೇ ಮಾಡಿದರೂ ನಾನೇ ಗೆಲ್ಲೋದು ಅಂದ್ರು.

    ಗದಗ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಪ್ರಚಾರ ವೇಳೆ, ಈ ಬಗ್ಗೆ ಮಾತನಾಡಿದ ಬಿ.ಶ್ರೀರಾಮುಲು, ಹಣ ಹಂಚಿ ಗೆಲುವು ಸಾಧಿಸಲು ಸಿ.ಎಂ ಹಿಂಬಾಲಕರು ಬದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ. ಸೋಮವಾರ ರೇಡ್ ನಡೆದ ಸಂದರ್ಭದಲ್ಲಿ ಸಿ.ಎಂ. ಇಬ್ರಾಹಿಂ. ಎಸ್ ಆರ್ ಪಾಟೀಲ್ ಹಾಗೂ ಅವರ ಹಿಂಬಾಲಕರು ಬಚ್ಚಿಟ್ಟ ಹಣ ಸಿಕ್ಕಿದೆ. ಬದಾಮಿಯ ಕೃಷ್ಣ ಹೆರಿಟೇಜ್ ನಲ್ಲಿ ರೇಡ್ ಆದಾಗ ಸಿಎಂ ಹಿಂಬಾಲಕರು ಹಣ ಸಮೇತ ಪರಾರಿ ಆಗಿದ್ದಾರೆ. ಜತೆಗೆ ಸಾಕಷ್ಟು ಹಣವೂ ರೇಡ್ ನಲ್ಲಿ ಸಿಕ್ಕಿದೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ತಿರುವು ಪಡೆದುಕೊಂಡ ಬದಾಮಿ ಐಳಿ ದಾಳಿ ಪ್ರಕರಣ

    ಸಿಎಂ ಅವರೇ ಲೋಹಿಯಾ ಸಿದ್ಧಾಂತದ ಕುರಿತು ಮಾತಾಡುತ್ತೀರಿ. ಹಣ ಹಂಚೋ ಕೆಲಸ ನಿಮಗೆ ಕೆಟ್ಟದ್ದು, ಅನ್ನಿಸಲಿಲ್ವಾ?. ಸಂವಿಧಾನದ ಮೇಲೆ ಗೌರವ ಇದ್ದರೆ ಹಿಂಬಾಲಕರನ್ನು ಹಿಂದಕ್ಕೆ ಕರೆಸಿಕೊಳ್ಳಿ ಹಣದಿಂದ ಚುನಾವಣೆ ನಡೆಸುವ ಸಂಪ್ರದಾಯ ಪ್ರಾರಂಭಿಸಿದ್ದೀರಿ. ಅಕ್ರಮ ಮಾರ್ಗದಿಂದ ಚುನಾವಣೆ ಮಾಡಿದರೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ರೋಲ್ ಮಾಡೆಲ್ ಆಗಬೇಕು ಎಂದು ಗದಗ್ ನಲ್ಲಿ ಶ್ರಿರಾಮುಲು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

  • ನಟರನ್ನು ಬಚ್ಚಾ ಎಂದಿದ್ದ ಶಾಸಕ ತಿಪ್ಪೇಸ್ವಾಮಿಗೆ ಯಶ್ ತಿರುಗೇಟು

    ನಟರನ್ನು ಬಚ್ಚಾ ಎಂದಿದ್ದ ಶಾಸಕ ತಿಪ್ಪೇಸ್ವಾಮಿಗೆ ಯಶ್ ತಿರುಗೇಟು

    ಬೆಂಗಳೂರು: ನಟ, ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು ಎಂದು ಹೇಳಿಕೆ ನೀಡಿದ್ದ ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿಗೆ ರಾಕಿಂಗ್ ಸ್ಟಾರ್ ತಿರುಗೇಟು ನೀಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಎಂ.ವಿ.ನಾಗರಾಜು ಪರ ನಟ ಯಶ್ ಮತಯಾಚನೆ ಮಾಡಿದ್ದಾರೆ. ನಂತರ ತಿಪ್ಪೇಸ್ವಾಮಿ ಯಶ್ ಬಚ್ಚಾ ಎನ್ನುವ ವಿಚಾರದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ರಾಜಕೀಯ ಒಂದು ಗೇಮ್. ಅದು ನಿಜ ಇರಬೇಕು. ಅವರ ವಯಸ್ಸೇನು, ಅವರು ತುಂಬಾ ಹಿರಿಯರು, ಅವರ ಮುಂದೆ ನಾನು ಬಚ್ಚಾನೆ. ಅದನ್ನ ಜನ ಡಿಸೈಡ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಈ ಸುದೀಪ್, ಯಶ್ ಇವರೆಲ್ಲ ನನ್ನ ಮುಂದೆ ಇನ್ನು ಬಚ್ಚಾಗಳು: ತಿಪ್ಪೇಸ್ವಾಮಿ

    ರಾಜಕೀಯದಲ್ಲಿ ಒಬ್ಬ ಗೆಲ್ಲಬೇಕಾದರೆ ನಾಲ್ಕು ಜನ ಸೋಲಲೇಬೇಕು. ಶ್ರೀರಾಮುಲು ನನಗೆ ಪರಿಚಯ ಹೀಗಾಗಿ ಅವರ ಹಾಗೂ ನನ್ನ ಅಭಿಮಾನಿಗಳಿಗೋಸ್ಕರ ಪ್ರಚಾರ ಮಾಡಿದೆ. ಜನಕ್ಕೆ ಏನೂ ಮಾಡಬೇಕು ಅನ್ನೋದು ನನ್ನ ಬುದ್ಧಿವಂತಿಕೆ, ವ್ಯವಸ್ಥೆಯನ್ನು ಬದಲಾಯಿಸುವ ನಂಬಿಕೆ ನನ್ನಲ್ಲಿಲ್ಲ. ಶಕ್ತಿವಂತರು, ಬುದ್ಧಿವಂತರು, ಜನರ ಪ್ರೀತಿಗಳಿಸಲು ಪ್ರಯತ್ನ ಪಡುವವರಿಗೆ ನಾನು ಸಹಕಾರಿಯಾಗುತ್ತೇನೆ. ನಾನು ಪ್ರಚಾರ ಮಾಡುವ ಸ್ಥಳಗಳಲ್ಲಿ ವಿರೋಧಿಗಳಿಗೆ ಭಯ ಹುಟ್ಟಿರಬಹುದು ಎಂದು ತಿರುಗೇಟು ನೀಡಿದ್ರು.

    ನಾನು ಪ್ರಚಾರ ಮಾಡುತ್ತಿರುವ ಅಭ್ಯರ್ಥಿಗಳ ಗೆಲುವು ಸೋಲಿಗಿಂತ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದು ಮುಖ್ಯ. ಕಲಾವಿದನಾಗಿ ಜನ ನನಗೆ ಪ್ರೀತಿ ತೋರಿಸುತ್ತಾ ಇದ್ದಾರೆ. ಅದಕ್ಕೆ ನಾನು ಏನು ಮಾಡಬೇಕು ಅಂತಾ ಅವರ ಪರವಾಗಿ ಯೋಚನೆ ಮಾಡುತ್ತಾ ಇದ್ದೇನೆ. ನನಗೆ ಒಳ್ಳೆಯವನು ಕೆಟ್ಟವನು ಅನ್ನಿಸಿಕೊಳ್ಳುವ ಬಗ್ಗೆ ಯೋಚನೆ ಇಲ್ಲ. ಎಸ್ಟೋ ಸಲ ಕೆಟ್ಟೋನು ಎಂದವರು ನಂತರ ಒಳ್ಳೆಯವನು ಅಂದಿದ್ದಾರೆ ಎಂದು ವಿರೋಧಿಗಳಿಗೆ ಯಶ್ ಟಾಂಗ್ ನೀಡಿದ್ದಾರೆ.

  • ಕರ್ನಾಟಕದಲ್ಲಿ ಅತಂತ್ರ ಅಸೆಂಬ್ಲಿ: ಮೋದಿ ಎಂಟ್ರಿಯಿಂದ ರಾಜಕೀಯ ಲೆಕ್ಕಾಚಾರ ಬುಡಮೇಲಾಗುತ್ತಾ?

    ಕರ್ನಾಟಕದಲ್ಲಿ ಅತಂತ್ರ ಅಸೆಂಬ್ಲಿ: ಮೋದಿ ಎಂಟ್ರಿಯಿಂದ ರಾಜಕೀಯ ಲೆಕ್ಕಾಚಾರ ಬುಡಮೇಲಾಗುತ್ತಾ?

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಲಿದ್ದು, ಮುಂದಿನ ವಾರ ಫಲಿತಾಂಶ ಪ್ರಕಟವಾಗಲಿದೆ. ಚುನವಾಣೆಯ ದಿನ ಹತ್ತಿರ ಬರುತ್ತಿದ್ದಂತೆ ಚದುರಂಗದಾಟದ ಲೆಕ್ಕಾಚಾರ ಜೋರಾಗುತ್ತಿದೆ.

    ಪಬ್ಲಿಕ್ ಟಿವಿ ಈ ಹಿಂದೆ ಎರಡು ಸಮೀಕ್ಷೆಗಳನ್ನು (ಏಪ್ರಿಲ್ ಎರಡನೇ ವಾರ, ಏಪ್ರಿಲ್ ಕೊನೆಯ ವಾರ) ನಡೆಸಿತ್ತು. ಆ ಸಮೀಕ್ಷೆಯಲ್ಲಿ ಮೋದಿ ಭಾಷಣವನ್ನು ಪರಿಗಣಿಸಲು ಸಾಧ್ಯವಾಗಿರಲಿಲ್ಲ. ಈ ಸಮೀಕ್ಷೆಯನ್ನು ಮೋದಿ ಎರಡನೇ ಬಾರಿ(ಮೇ 3) ರಾಜ್ಯಕ್ಕೆ ಭೇಟಿ ನೀಡಿದ ನಂತರ ನಡೆಸಿದ್ದೇವೆ.

    ಕ್ವಾರ್ಟರ್ ಫೈನಲ್ ಫೈನಲ್ ಮತ್ತು ಸೆಮಿ ಫೈನಲ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಆದರೆ ಪ್ರಧಾನಿ ಮೋದಿ ಅವರ ಎಂಟ್ರಿ ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ಸ್ವಲ್ಪ ಮಟ್ಟಿಗೆ ಬುಡಮೇಲು ಮಾಡಿದೆ. ಹಾಗಂತ, ಬಿಜೆಪಿ ಅತಿ ದೊಡ್ಡ ಪಾರ್ಟಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಅದೇ ರೀತಿ, ಕಾಂಗ್ರೆಸ್ ಬಹುಮತ ಸಿಕ್ಕಿಲ್ಲ. ಇಬ್ಬರ ಮಧ್ಯೆಯೂ ಉಗುರು ಕಚ್ಚುವಂಥ ಫೈಟ್ ಇರಲಿದೆ. ಸರ್ಕಾರ ರಚಿಸಬೇಕಾದರೆ ಇಬ್ಬರಿಗೂ ಜೆಡಿಎಸ್ ಅನಿವಾರ್ಯ. ಹೀಗಾಗಿ, ನಿರೀಕ್ಷೆಯಂತೆ ಜೆಡಿಎಸ್ ಕಿಂಗ್ ಮೇಕರ್ ಆಗೋದರಲ್ಲಿ ಸಂಶಯವೇ ಇಲ್ಲ ಎನ್ನುವುದು ಇವತ್ತಿನ ಮೆಗಾ ಫೈನಲ್ ಸರ್ವೇಯಲ್ಲಿ ಬಹಿರಂಗವಾಗಿದೆ.

    ಸಮೀಕ್ಷೆ ನಡೆಸಿದ್ದು ಹೇಗೆ?
    ಸರ್ವೆಯ ವಿವರಗಳನ್ನು ನಿಮ್ಮ ಮುಂದೆ ಇಡುವುದಕ್ಕೂ ಮುನ್ನ ನಾವು ಈ ಸರ್ವೆಯನ್ನು ಹೇಗೆ ಮಾಡಿದ್ದೇವೆ ಅನ್ನೋದನ್ನ ಹೇಳುವುದು ನಮ್ಮ ಕರ್ತವ್ಯ. ಸರ್ವೆಯನ್ನು ಮಾಡಿದ ಪ್ರತಿನಿಧಿಗಳನ್ನು ಜಿಪಿಎಸ್ ತಂತ್ರಜ್ಞಾನದ ಮೂಲಕ ನಿಗಾ ವಹಿಸಿದ್ದೆವು. ಗೂಗಲ್ ಅರ್ಥ್ ಬಳಸಿ ಸರ್ವೆ ಮಾಡಿದ ಪ್ರತಿನಿಧಿ ಎಲ್ಲೆಲ್ಲಿ ಸಂಚರಿಸಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೆವು.  ಇದನ್ನೂ ಓದಿ:  ಪಬ್ಲಿಕ್ ಟಿವಿ ಸಮೀಕ್ಷೆ- ಸೆಮಿ ಫೈನಲ್

    ನಾವು ಈ ಸರ್ವೆಯನ್ನು ಆರಂಭಿಸಿದಾಗ, ನೀವು 2013ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಿದಿರಿ ಎಂದು ಸಂಕೋಚವಿಲ್ಲದೆ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿ ‘ಹೌದು’ ‘ಇಲ್ಲ’ ಆಯ್ಕೆಗಳನ್ನು ನೀಡಲಾಗಿತ್ತು. ಈ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರ ನೀಡಿದವರಿಗೆ ಧನ್ಯವಾದ ಹಳಿ ಸಂದರ್ಶನವನ್ನು ಅಂತ್ಯಗೊಳಿಸಿದ್ದೇವೆ. ಇದರ ಜೊತೆಯಲ್ಲಿ ಮುಂದಿನ ಚುನಾವಣೆಯಲ್ಲಿ ನೀವು ಮತ ಹಾಕುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದವರನ್ನು ಸಮೀಕ್ಷೆಗೆ ಪರಿಗಣಿಸಿಲ್ಲ.  ಇದನ್ನೂ ಓದಿ: ಕರ್ನಾಟಕ ಕುರುಕ್ಷೇತ್ರ -ಸಮೀಕ್ಷೆಯಲ್ಲಿ ಕರುನಾಡ ಕಿಂಗ್ ಯಾರು ? ಕ್ವಾರ್ಟರ್ ಫೈನಲ್ ಸಮೀಕ್ಷೆ

    ಸರ್ವೆ ಮಾಡಿದ್ದು ಹೇಗೆ?
    ರಾಜ್ಯದ ಎಲ್ಲಾ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ಮಾಹಿತಿ ಸಂಗ್ರಹಿಸಿದ್ದು, ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4 ಪ್ರದೇಶಗಳಲ್ಲಿ ಮಾಹಿತಿ ಸ್ವೀಕರಿಸಿದ್ದೇವೆ. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಿಂದಲೂ ಸಮೀಕ್ಷಾ ಮಾಹಿತಿ ಸಂಗ್ರಹಿಸಲಾಗಿದೆ. ಈ ಸರ್ವೆಯಲ್ಲಿ 60:40ರ ಅನುಪಾತದಲ್ಲಿ ಪುರುಷ ಹಾಗೂ ಮಹಿಳೆಯರಿಂದ ಮಾಹಿತಿಯನ್ನು ಪಡೆಯಲಾಗಿದೆ.

    ಸರ್ವೆಯ ಗುಣಮಟ್ಟ ಹೇಗೆ?
    – ಒಂದು ಸ್ಯಾಂಪಲ್ ಮುಗಿಸಲು ತೆಗೆದುಕೊಂಡ ಅವಧಿ
    – ಒಂದು ಸ್ಯಾಂಪಲ್‍ನಿಂದ ಇನ್ನೊಂದು ಸ್ಯಾಂಪಲ್ ಸಂಗ್ರಹದ ನಡುವಿನ ಅವಧಿ
    – ಜಿಪಿಎಸ್ ತಂತ್ರಜ್ಞಾನ ಆಧರಿಸಿ ನಡೆಸಿದ ಸರ್ವೆ
    – ಜಿಪಿಎಸ್ ಹಾಗೂ ಸ್ಯಾಂಪಲ್‍ನಲ್ಲಿ ನೀಡಿದ ವಿಳಾಸಗಳ ನಿಖರತೆ ಖಚಿತಪಡಿಸುವಿಕೆ
    – ಗೂಗಲ್ ಎಪಿಐ ಬಳಸಿ ಸ್ಯಾಂಪಲ್‍ಗಳ ನಿಖರತೆ ಪರಿಶೀಲನೆ
    – ಕೊನೆಯಲ್ಲಿ ಗೂಗಲ್ ಅರ್ಥ್ ಬಳಸಿ ಪರಿಶೀಲನೆ

    ಸ್ಯಾಂಪಲ್ ಎಷ್ಟು?
    ಈ ಸಮೀಕ್ಷೆಗೆ ಒಟ್ಟು 24,835 ಸ್ಯಾಂಪಲ್ ಗಳನ್ನು ಪಡೆದುಕೊಂಡಿದ್ದೇವೆ. ಇದರಲ್ಲಿ 3,218 ಸ್ಯಾಂಪಲ್ ಗಳಲ್ಲಿ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಕೈ ಬಿಟ್ಟಿದ್ದೇವೆ. ಅಂತಿಮವಾಗಿ 21,617 ಸ್ಯಾಂಪಲ್ ಗಳನ್ನು ಪರಿಗಣಿಸಿದ್ದೇವೆ.

    1. ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು?

    ಮುಂಬೈ ಕರ್ನಾಟಕ
    ಅತ್ಯುತ್ತಮ – 28.20%
    ಉತ್ತಮ – 12.40%
    ಸುಮಾರು – 12.10%
    ಕಳಪೆ – 33.00%
    ತೀರಾ ಕಳಪೆ -14.30%

    ಹೈದರಾಬಾದ್ ಕರ್ನಾಟಕ
    ಅತ್ಯುತ್ತಮ – 32.00%
    ಉತ್ತಮ – 25.20%
    ಸುಮಾರು – 21.40%
    ಕಳಪೆ – 18.60%
    ತೀರಾ ಕಳಪೆ – 2.80%

    ಮಧ್ಯ ಕರ್ನಾಟಕ
    ಅತ್ಯುತ್ತಮ – 11.70%
    ಉತ್ತಮ – 18.00%
    ಸುಮಾರು – 11.00%
    ಕಳಪೆ – 52.70%
    ತೀರಾ ಕಳಪೆ – 6.60%

    ಕರಾವಳಿ ಕರ್ನಾಟಕ
    ಅತ್ಯುತ್ತಮ – 23.30%
    ಉತ್ತಮ – 33.70%
    ಸುಮಾರು – 22.00%
    ಕಳಪೆ – 20.20%
    ತೀರಾ ಕಳಪೆ – 0.80%

    ಹಳೆ ಮೈಸೂರು
    ಅತ್ಯುತ್ತಮ – 14.90%
    ಉತ್ತಮ – 24.70%
    ಸುಮಾರು – 37.50%
    ಕಳಪೆ – 19.80%
    ತೀರಾ ಕಳಪೆ – 3.20%

    ಬೆಂಗಳೂರು ನಗರ
    ಅತ್ಯುತ್ತಮ – 19.90%
    ಉತ್ತಮ – 27.70%
    ಸುಮಾರು – 21.20%
    ಕಳಪೆ – 26.60%
    ತೀರಾ ಕಳಪೆ – 4.60%

    ಸಮಗ್ರ
    ಅತ್ಯುತ್ತಮ – 22.00%
    ಉತ್ತಮ – 22.00%
    ಸುಮಾರು – 22.00%
    ಕಳಪೆ – 27.00%
    ತೀರಾ ಕಳಪೆ -7.00%

    2. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಮಗೆ ತೃಪ್ತಿ ತಂದಿದೆಯಾ?
    ಮುಂಬೈ ಕರ್ನಾಟಕ
    ಹೌದು – 37.10%
    ಇಲ್ಲ – 52.30%
    ಏನೂ ಹೇಳಲ್ಲ – 10.60%

    ಹೈದರಾಬಾದ್ ಕರ್ನಾಟಕ
    ಹೌದು – 52.80%
    ಇಲ್ಲ – 41.40%
    ಏನೂ ಹೇಳಲ್ಲ – 5.80%

    ಮಧ್ಯ ಕರ್ನಾಟಕ
    ಹೌದು – 29.60%
    ಇಲ್ಲ – 66.80%
    ಏನೂ ಹೇಳಲ್ಲ -3.60%

    ಕರಾವಳಿ ಕರ್ನಾಟಕ
    ಹೌದು – 53.50%
    ಇಲ್ಲ – 34.10%
    ಏನೂ ಹೇಳಲ್ಲ – 12.40%

    ಹಳೆ ಮೈಸೂರು
    ಹೌದು – 42.00%
    ಇಲ್ಲ – 48.20%
    ಏನೂ ಹೇಳಲ್ಲ – 9.80%

    ಬೆಂಗಳೂರು ನಗರ
    ಹೌದು – 39.90%
    ಇಲ್ಲ – 47.20%
    ಏನೂ ಹೇಳಲ್ಲ – 12.90%

    ಸಮಗ್ರ
    ಹೌದು – 42.00%
    ಇಲ್ಲ – 49.00%
    ಏನೂ ಹೇಳಲ್ಲ – 9.00%

    3. ರಾಜ್ಯ ಸರ್ಕಾರ ಯಾವ ಯೋಜನೆಯ ಲಾಭವನ್ನು ನೀವು ಪಡೆದಿದ್ದೀರಿ?
    ಮುಂಬೈ ಕರ್ನಾಟಕ
    ಅನ್ನಭಾಗ್ಯ – 46.80%
    ಕ್ಷೀರ ಭಾಗ್ಯ – 14.50%
    ವಿದ್ಯಾಸಿರಿ – 12.90%
    ಇಂದಿರಾ ಕ್ಯಾಂಟೀನ್ – 3.90%
    ಯಾವೂದು ಇಲ್ಲ – 21.80%
    ಇತರೆ – 0.10%

    ಹೈದರಾಬಾದ್ ಕರ್ನಾಟಕ
    ಅನ್ನಭಾಗ್ಯ – 51.80%
    ಕ್ಷೀರ ಭಾಗ್ಯ – 12.20%
    ವಿದ್ಯಾಸಿರಿ – 6.30%
    ಇಂದಿರಾ ಕ್ಯಾಂಟೀನ್ – 6.50%
    ಯಾವೂದು ಇಲ್ಲ – 46.30%
    ಇತರೆ -0.00%

    ಮಧ್ಯ ಕರ್ನಾಟಕ
    ಅನ್ನಭಾಗ್ಯ – 37.10%
    ಕ್ಷೀರ ಭಾಗ್ಯ – 5.70%
    ವಿದ್ಯಾಸಿರಿ – 6.00%
    ಇಂದಿರಾ ಕ್ಯಾಂಟೀನ್ – 4.90%
    ಯಾವೂದು ಇಲ್ಲ – 46.30%
    ಇತರೆ – 0.00%

    ಕರಾವಳಿ ಕರ್ನಾಟಕ
    ಅನ್ನಭಾಗ್ಯ – 43.40%
    ಕ್ಷೀರ ಭಾಗ್ಯ – 18.50%
    ವಿದ್ಯಾಸಿರಿ – 14.40%
    ಇಂದಿರಾ ಕ್ಯಾಂಟೀನ್- 3.10%
    ಯಾವೂದು ಇಲ್ಲ – 19.80%
    ಇತರೆ – 0.80%

    ಹಳೆ ಮೈಸೂರು
    ಅನ್ನಭಾಗ್ಯ – 49.60%
    ಕ್ಷೀರ ಭಾಗ್ಯ – 6.50%
    ವಿದ್ಯಾಸಿರಿ – 12.80%
    ಇಂದಿರಾ ಕ್ಯಾಂಟೀನ್ -5.40%
    ಯಾವೂದು ಇಲ್ಲ -25.60%
    ಇತರೆ – 0.10%

    ಬೆಂಗಳೂರು ನಗರ
    ಅನ್ನಭಾಗ್ಯ -25.20%
    ಕ್ಷೀರ ಭಾಗ್ಯ -12.50%
    ವಿದ್ಯಾಸಿರಿ -11.10%
    ಇಂದಿರಾ ಕ್ಯಾಂಟೀನ್ – 22.70%
    ಯಾವೂದು ಇಲ್ಲ -28.50%
    ಇತರೆ -0.00%

    ಸಮಗ್ರ
    ಅನ್ನಭಾಗ್ಯ – 44.00%
    ಕ್ಷೀರ ಭಾಗ್ಯ -11.00%
    ವಿದ್ಯಾಸಿರಿ – 11.00%
    ಇಂದಿರಾ ಕ್ಯಾಂಟೀನ್ -7.00%
    ಯಾವೂದು ಇಲ್ಲ -27.00%
    ಇತರೆ -0.00%

    4. ಮೇಲಿನ ಯೋಜನೆಗಳು ಕಾಂಗ್ರೆಸ್ ಮತ ಚಲಾಯಿಸಲು ನಿಮ್ಮ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಾ?
    ಮುಂಬೈ ಕರ್ನಾಟಕ
    ಹೌದು -42.50%
    ಇರಬಹುದು -19.80%
    ಇಲ್ಲ -30.20%
    ಪರಿಣಾಮ ಬೀರಲ್ಲ -7.50%

    ಹೈದರಾಬಾದ್ ಕರ್ನಾಟಕ
    ಹೌದು -49.90%
    ಇರಬಹುದು -23.50%
    ಇಲ್ಲ -23.30%
    ಪರಿಣಾಮ ಬೀರಲ್ಲ 3.30%

    ಮಧ್ಯ ಕರ್ನಾಟಕ
    ಹೌದು -28.60%
    ಇರಬಹುದು -17.20%
    ಇಲ್ಲ -36.70%
    ಪರಿಣಾಮ ಬೀರಲ್ಲ -17.50%

    ಕರಾವಳಿ ಕರ್ನಾಟಕ
    ಹೌದು – 38.30%
    ಇರಬಹುದು – 36.20%
    ಇಲ್ಲ – 21.20%
    ಪರಿಣಾಮ ಬೀರಲ್ಲ – 4.30%

    ಹಳೆ ಮೈಸೂರು
    ಹೌದು – 36.50%
    ಇರಬಹುದು -28.30%
    ಇಲ್ಲ -31.70%
    ಪರಿಣಾಮ ಬೀರಲ್ಲ -3.50%

    ಬೆಂಗಳೂರು ನಗರ
    ಹೌದು – 36.60%
    ಇರಬಹುದು -23.30%
    ಇಲ್ಲ – 36.80%
    ಪರಿಣಾಮ ಬೀರಲ್ಲ – 3.30%

    ಸಮಗ್ರ
    ಹೌದು – 39.00%
    ಇರಬಹುದು – 24.00%
    ಇಲ್ಲ – 30.00%
    ಪರಿಣಾಮ ಬೀರಲ್ಲ -7.00%

    5. ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ ಬರುತ್ತಾ?
    ಮುಂಬೈ ಕರ್ನಾಟಕ
    ಹೌದು – 44.00%
    ಇಲ್ಲ – 45.10%
    ಏನೂ ಹೇಳಲ್ಲ -10.90%

    ಹೈದರಾಬಾದ್ ಕರ್ನಾಟಕ
    ಹೌದು – 50.30%
    ಇಲ್ಲ – 42.30%
    ಏನೂ ಹೇಳಲ್ಲ -7.40%

    ಮಧ್ಯ ಕರ್ನಾಟಕ
    ಹೌದು – 62.80%
    ಇಲ್ಲ – 26.90%
    ಏನೂ ಹೇಳಲ್ಲ -10.30%

    ಕರಾವಳಿ ಕರ್ನಾಟಕ
    ಹೌದು – 47.90%
    ಇಲ್ಲ – 31.00%
    ಏನೂ ಹೇಳಲ್ಲ – 21.10%

    ಹಳೆ ಮೈಸೂರು
    ಹೌದು – 36.80%
    ಇಲ್ಲ – 42.70
    ಏನೂ ಹೇಳಲ್ಲ – 20.50

    ಬೆಂಗಳೂರು ನಗರ
    ಹೌದು – 40.00%
    ಇಲ್ಲ – 40.20%
    ಏನೂ ಹೇಳಲ್ಲ – 19.80%

    ಸಮಗ್ರ
    ಹೌದು – 45.00%
    ಇಲ್ಲ – 40.00%
    ಏನೂ ಹೇಳಲ್ಲ – 15.00%

    6. ಕಳೆದ 5 ವರ್ಷಗಳಲ್ಲಿ ವಿಪಕ್ಷಗಳು ಸರಿಯಾಗಿ ಕಾರ್ಯನಿರ್ವಹಿಸಿವೆಯಾ?
    ಹೌದು – 52.00%
    ಇಲ್ಲ _ 35.00%
    ಏನು ಹೇಳಲ್ಲ – 13.00%

    7. ನಿಮ್ಮ ಮತದಾನದ ಮೇಲೆ ಪರಿಣಾಮ ಬೀರುವ ಅಂಶ ಯಾವುದು?
    ಮುಂಬೈ ಕರ್ನಾಟಕ
    ಅಭಿವೃದ್ಧಿ – 65.10%
    ಮುಂದಿನ ಸಿಎಂ -22.90%
    ಧಾರ್ಮಿಕ ಧ್ರುವೀಕರಣ -2.80%
    ಪಕ್ಷ -9.20%
    ಇತರೇ -0.00%

    ಹೈದರಾಬಾದ್ ಕರ್ನಾಟಕ
    ಅಭಿವೃದ್ಧಿ – 52.90%
    ಮುಂದಿನ ಸಿಎಂ – 24.70%
    ಧಾರ್ಮಿಕ ಧ್ರುವೀಕರಣ – 6.70%
    ಪಕ್ಷ – 15.70%
    ಇತರೇ- 0.00%

    ಮಧ್ಯ ಕರ್ನಾಟಕ
    ಅಭಿವೃದ್ಧಿ -71.90%
    ಮುಂದಿನ ಸಿಎಂ -17.30%
    ಧಾರ್ಮಿಕ ಧ್ರುವೀಕರಣ – 0.00%
    ಪಕ್ಷ -10.80%
    ಇತರೇ -0.00%

    ಕರಾವಳಿ ಕರ್ನಾಟಕ
    ಅಭಿವೃದ್ಧಿ -70.20%
    ಮುಂದಿನ ಸಿಎಂ -17.30 %
    ಧಾರ್ಮಿಕ ಧ್ರುವೀಕರಣ -5.30%
    ಪಕ್ಷ -7.20%
    ಇತರೇ -0.00%

    ಹಳೆ ಮೈಸೂರು
    ಅಭಿವೃದ್ಧಿ – 65.90%
    ಮುಂದಿನ ಸಿಎಂ -16.30%
    ಧಾರ್ಮಿಕ ಧ್ರುವೀಕರಣ -1.40%
    ಪಕ್ಷ – 16.30%
    ಇತರೇ – 0.10%

    ಬೆಂಗಳೂರು ನಗರ
    ಅಭಿವೃದ್ಧಿ -50.90%
    ಮುಂದಿನ ಸಿಎಂ – 31.70%
    ಧಾರ್ಮಿಕ ಧ್ರುವೀಕರಣ -5.20%
    ಪಕ್ಷ -12.20%
    ಇತರೇ – 0.00%

    ಸಮಗ್ರ
    ಅಭಿವೃದ್ಧಿ – 63.00%
    ಮುಂದಿನ ಸಿಎಂ – 21.00%
    ಧಾರ್ಮಿಕ ಧ್ರುವೀಕರಣ -3.00%
    ಪಕ್ಷ -13.00%
    ಇತರೇ – 0.00%

    8. ಚುನಾವಣೆ ನಂತರ ಯಾವ ರೀತಿಯ ಸರ್ಕಾರ ರಚನೆ ಆಗುತ್ತೆ?
    ಮುಂಬೈ ಕರ್ನಾಟಕ
    ಬಹುಮತದ ಸರ್ಕಾರ -23.40%
    ಸಮ್ಮಿಶ್ರ ಸರ್ಕಾರ – 68.30%
    ಏನೂ ಹೇಳಲ್ಲ – 8.30%

    ಹೈದರಾಬಾದ್ ಕರ್ನಾಟಕ
    ಬಹುಮತದ ಸರ್ಕಾರ -27.50%
    ಸಮ್ಮಿಶ್ರ ಸರ್ಕಾರ – 65.90%
    ಏನೂ ಹೇಳಲ್ಲ – 6.60%

    ಮಧ್ಯ ಕರ್ನಾಟಕ
    ಬಹುಮತದ ಸರ್ಕಾರ -31.40%
    ಸಮ್ಮಿಶ್ರ ಸರ್ಕಾರ -59.90%
    ಏನೂ ಹೇಳಲ್ಲ – 8.70%

    ಕರಾವಳಿ ಕರ್ನಾಟಕ
    ಬಹುಮತದ ಸರ್ಕಾರ -18.20%
    ಸಮ್ಮಿಶ್ರ ಸರ್ಕಾರ -47.60%
    ಏನೂ ಹೇಳಲ್ಲ -34.20%

    ಹಳೆ ಮೈಸೂರು
    ಬಹುಮತದ ಸರ್ಕಾರ -34.80%
    ಸಮ್ಮಿಶ್ರ ಸರ್ಕಾರ -62.10%
    ಏನೂ ಹೇಳಲ್ಲ -13.10%

    ಬೆಂಗಳೂರು ನಗರ
    ಬಹುಮತದ ಸರ್ಕಾರ – 31.10%
    ಸಮ್ಮಿಶ್ರ ಸರ್ಕಾರ -52.20%
    ಏನೂ ಹೇಳಲ್ಲ -17.70%

    ಸಮಗ್ರ
    ಬಹುಮತದ ಸರ್ಕಾರ -26.00%
    ಸಮ್ಮಿಶ್ರ ಸರ್ಕಾರ -61.00%
    ಏನೂ ಹೇಳಲ್ಲ – 13.00%

    9. ಜೆಡಿಎಸ್ ಈ ಬಾರಿ ಕಿಂಗ್ ಮೇಕರ್ ಆಗುತ್ತಾ?
    ಮುಂಬೈ ಕರ್ನಾಟಕ
    ಹೌದು – 46.80%
    ಇಲ್ಲ – 42.50%
    ಏನೂ ಹೇಳಲ್ಲ – 10.70%

    ಹೈದರಾಬಾದ್ ಕರ್ನಾಟಕ
    ಹೌದು – 54.80%
    ಇಲ್ಲ – 35.80
    ಏನೂ ಹೇಳಲ್ಲ – 9.40%

    ಮಧ್ಯ ಕರ್ನಾಟಕ
    ಹೌದು – 43.70%
    ಇಲ್ಲ – 36.10%
    ಏನೂ ಹೇಳಲ್ಲ -20.20%

    ಕರಾವಳಿ ಕರ್ನಾಟಕ
    ಹೌದು – 36.20%
    ಇಲ್ಲ – 37.10%
    ಏನೂ ಹೇಳಲ್ಲ – 26.70%

    ಹಳೆ ಮೈಸೂರು
    ಹೌದು – 36.10%
    ಇಲ್ಲ – 43.40%
    ಏನೂ ಹೇಳಲ್ಲ – 20.50%

    ಬೆಂಗಳೂರು ನಗರ
    ಹೌದು – 32.20%
    ಇಲ್ಲ – 41.30%
    ಏನೂ ಹೇಳಲ್ಲ – 25.90%

    ಸಮಗ್ರ
    ಹೌದು – 42.00%
    ಇಲ್ಲ – 40.00%
    ಏನೂ ಹೇಳಲ್ಲ – 18.00%

     

    ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯವುದು?
    ಮುಂಬೈ ಕರ್ನಾಟಕ
    ಬಿಜೆಪಿ+ಕಾಂಗ್ರೆಸ್ – 8.60%
    ಕಾಂಗ್ರೆಸ್+ಜೆಡಿಎಸ್ – 40.20%
    ಬಿಜೆಪಿ+ಜೆಡಿಎಸ್ -43.10%
    ಏನೂ ಹೇಳಲ್ಲ -8.10%

    ಹೈದರಾಬಾದ್ ಕರ್ನಾಟಕ
    ಬಿಜೆಪಿ+ಕಾಂಗ್ರೆಸ್ -8.30%
    ಕಾಂಗ್ರೆಸ್+ಜೆಡಿಎಸ್ -39.30%
    ಬಿಜೆಪಿ+ಜೆಡಿಎಸ್ -25.60%
    ಏನೂ ಹೇಳಲ್ಲ -26.80%

    ಮಧ್ಯ ಕರ್ನಾಟಕ
    ಬಿಜೆಪಿ+ಕಾಂಗ್ರೆಸ್ -2.90%
    ಕಾಂಗ್ರೆಸ್+ಜೆಡಿಎಸ್ -29.10%
    ಬಿಜೆಪಿ+ಜೆಡಿಎಸ್ -54.30%
    ಏನೂ ಹೇಳಲ್ಲ -13.70%

    ಕರಾವಳಿ ಕರ್ನಾಟಕ
    ಬಿಜೆಪಿ+ಕಾಂಗ್ರೆಸ್ – 9.90%
    ಕಾಂಗ್ರೆಸ್+ಜೆಡಿಎಸ್ -45.10%
    ಬಿಜೆಪಿ+ಜೆಡಿಎಸ್ – 19.40%
    ಏನೂ ಹೇಳಲ್ಲ – 25.60%

    ಹಳೆ ಮೈಸೂರು
    ಬಿಜೆಪಿ+ಕಾಂಗ್ರೆಸ್ – 8.30%
    ಕಾಂಗ್ರೆಸ್+ಜೆಡಿಎಸ್ -42.40%
    ಬಿಜೆಪಿ+ಜೆಡಿಎಸ್ -36.00%
    ಏನೂ ಹೇಳಲ್ಲ -13.00%

    ಬೆಂಗಳೂರು ನಗರ
    ಬಿಜೆಪಿ+ಕಾಂಗ್ರೆಸ್ – 4.10%
    ಕಾಂಗ್ರೆಸ್+ಜೆಡಿಎಸ್ -38.60%
    ಬಿಜೆಪಿ+ಜೆಡಿಎಸ್ – 34.90%
    ಏನೂ ಹೇಳಲ್ಲ – 22.40%

    ಸಮಗ್ರ
    ಬಿಜೆಪಿ+ಕಾಂಗ್ರೆಸ್ -7.00%
    ಕಾಂಗ್ರೆಸ್+ಜೆಡಿಎಸ್ – 40.00%
    ಬಿಜೆಪಿ+ಜೆಡಿಎಸ್ – 36.00%
    ಏನೂ ಹೇಳಲ್ಲ – 17.00%

    11. ಚುನಾವಣೆ ವೇಳೆ ಮತದಾನಕ್ಕೆ ನಿಮ್ಮ ಆದ್ಯತೆ ಏನು?
    ಪಕ್ಷ – 64.00%
    ಅಭ್ಯರ್ಥಿ – 36.00%

    12.ಅಭ್ಯರ್ಥಿಯ ಜಾತಿ ನಿಮ್ಮ ಮತವನ್ನು ನಿರ್ಧರಿಸುತ್ತಾ?
    ಹೌದು – 55.00%
    ಇಲ್ಲ – 35.00%
    ಏನು ಹೇಳಲ್ಲ – 10%

    13. ನೋಟ್ ಬ್ಯಾನ್ ಹಾಗೂ ಜಿಎಸ್‍ಟಿ ನಿಮ್ಮ ಮತವನ್ನು ನಿರ್ಧರಿಸುತ್ತಾ?
    ಹೌದು -37.00%
    ಇಲ್ಲ -47.00%
    ಏನೂ ಹೇಳಲ್ಲ -16.00%

    14. ಕಳೆದ 4 ವರ್ಷಗಳ ಮೋದಿ ಸರ್ಕಾರದ ಸಾಧನೆ ನಿಮ್ಮ ಮತವನ್ನು ನಿರ್ಧರಿಸುತ್ತಾ?
    ಹೌದು – 43.00%
    ಇಲ್ಲ – 43.00%
    ಏನೂ ಹೇಳಲ್ಲ – 14.00%

    15. ಯಾರಿಗೆ ಓಟು ಹಾಕಬೇಕು ಎಂದು ನಿರ್ಧರಿಸಿದ್ದೀರಾ?
    ನಿರ್ಧರಿಸಿದ್ದೇವೆ – 85.00%
    ಹಣ, ಗಿಫ್ಟ್ ನೋಡಿ ನಿರ್ಧಾರ – 6.00%
    ಮತದಾನದ ವೇಳೆ ನಿರ್ಧಾರ – 9.00%

    16. ಮುಂದಿನ ಸಿಎಂ ಯಾರಾಗಬೇಕು?
    ಮುಂಬೈ ಕರ್ನಾಟಕ
    ಸಿದ್ದರಾಮಯ್ಯ -38.00%
    ಯಡಿಯೂರಪ್ಪ -43.10%
    ಕುಮಾರಸ್ವಾಮಿ -19.40%
    ಖರ್ಗೆ -2.60%
    ಪರಮೇಶ್ವರ್ -1.00%
    ಹೊಸ ಮುಖ -0.10%

    ಹೈದರಾಬಾದ್ ಕರ್ನಾಟಕ
    ಸಿದ್ದರಾಮಯ್ಯ – 43.50%
    ಯಡಿಯೂರಪ್ಪ – 38.80%
    ಕುಮಾರಸ್ವಾಮಿ -13.90%
    ಖರ್ಗೆ -2.90%
    ಪರಮೇಶ್ವರ್ -0.30%
    ಹೊಸ ಮುಖ -0.60%

    ಮಧ್ಯಕರ್ನಾಟಕ
    ಸಿದ್ದರಾಮಯ್ಯ -27.60%
    ಯಡಿಯೂರಪ್ಪ -47.90%
    ಕುಮಾರಸ್ವಾಮಿ -22.40%
    ಖರ್ಗೆ -0.40%
    ಪರಮೇಶ್ವರ್ -1.60%
    ಹೊಸ ಮುಖ -0.00%

    ಕರಾವಳಿ ಕರ್ನಾಟಕ
    ಸಿದ್ದರಾಮಯ್ಯ – 52.60%
    ಯಡಿಯೂರಪ್ಪ – 39.50%
    ಕುಮಾರಸ್ವಾಮಿ -5.90%
    ಖರ್ಗೆ – 0.20%
    ಪರಮೇಶ್ವರ್ – 1.00%
    ಹೊಸ ಮುಖ – 0.80%

    ಹಳೆ ಮೈಸೂರು
    ಸಿದ್ದರಾಮಯ್ಯ -30.10%
    ಯಡಿಯೂರಪ್ಪ -23.00%
    ಕುಮಾರಸ್ವಾಮಿ -44.10%
    ಖರ್ಗೆ -1.80%
    ಪರಮೇಶ್ವರ್ -0.80%
    ಹೊಸ ಮುಖ -0.20%

    ಬೆಂಗಳೂರು ನಗರ
    ಸಿದ್ದರಾಮಯ್ಯ -38.40%
    ಯಡಿಯೂರಪ್ಪ -38.40%
    ಕುಮಾರಸ್ವಾಮಿ -19.40%
    ಖರ್ಗೆ -2.40%
    ಪರಮೇಶ್ವರ್ -0.90%
    ಹೊಸ ಮುಖ -0.50%

    ಸಮಗ್ರ
    ಸಿದ್ದರಾಮಯ್ಯ -34.00%
    ಯಡಿಯೂರಪ್ಪ -37.00%
    ಕುಮಾರಸ್ವಾಮಿ -26.00%
    ಖರ್ಗೆ -2.00%
    ಪರಮೇಶ್ವರ್ -1.00%
    ಹೊಸ ಮುಖ -0.00%

    17. ನಿಮ್ಮ ಪ್ರಕಾರ ಹೆಚ್ಚು ಭ್ರಷ್ಟ ಸರ್ಕಾರ ಯಾವುದು?
    ಸಿದ್ದರಾಮಯ್ಯ ಸರ್ಕಾರ – 44.00%
    ಮೋದಿ ಸರ್ಕಾರ -34.00%
    ಏನೂ ಹೇಳಲ್ಲ – 22.00%

    18. ಗುಜರಾತ್, ತ್ರಿಪುರಾ ಗೆಲುವು ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗುತ್ತಾ?
    ಹೌದು -38.00%
    ಇಲ್ಲ – 48.00%
    ಏನೂ ಹೇಳಲ್ಲ – 14.00%

    19. ಸಿದ್ದರಾಮಯ್ಯ, ಎಚ್‍ಡಿಕೆ ಮುಂತಾದ ಪ್ರಮುಖ ನಾಯಕರ ಎರಡೂ ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಏನಂತೀರಿ?
    ಸ್ಪರ್ಧಿಸಲಿ – 45.00%
    ಸ್ಪರ್ಧಿಸಬಾರದು – 38.00%
    ಏನೂ ಹೇಳಲ್ಲ – 18.00%

    20. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ರಾಹುಲ್ ಘೋಷಣೆ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗುತ್ತಾ?
    ಹೌದು – 40.00%
    ಇಲ್ಲ – 44.00%
    ಏನು ಹೇಳಲ್ಲ -16.00%

    21. ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕಾಂಗ್ರೆಸ್ ಅಹಿಂದ ಮತಗಳಿಗೆ ಹೊಡೆತ ನೀಡುತ್ತಾ?
    ಹೌದು – 41.00%
    ಇಲ್ಲ – 31.00%
    ಏನೂ ಹೇಳಲ್ಲ -28.00%

    22. ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷವೇ?
    ಹೌದು – 43.00%
    ಇಲ್ಲ – 35.00%
    ಏನೂ ಹೇಳಲ್ಲ – 22.00%

    23. ಬಿಜೆಪಿ, ಕಾಂಗ್ರೆಸ್ ಟಿಕೆಟ್ ಕಿತ್ತಾಟ ಜೆಡಿಎಸ್‍ಗೆ ಸಹಕಾರಿಯಾಗುವುದೇ?
    ಹೌದು -38.00%
    ಇಲ್ಲ – 40.00%
    ಏನೂ ಹೇಳಲ್ಲ -22.00%

    24. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಟೆಂಪಲ್ ರನ್‍ನಿಂದ ಕಾಂಗ್ರೆಸ್ ಗೆ ಲಾಭವಾಗುತ್ತಾ?
    ಹೌದು-36.00%
    ಇಲ್ಲ-45.00%
    ಏನೂ ಹೇಳಲ್ಲ-19.00%

    25. ಅಮಿತ್ ಶಾ ಹಾಗೂ ಬಿಜೆಪಿ ನಾಯಕರ ಟೆಂಪಲ್ ರನ್‍ನಿಂದ ಬಿಜೆಪಿಗೆ ಲಾಭವಾಗುತ್ತಾ?
    ಹೌದು- 33.00%
    ಇಲ್ಲ- 44.00%
    ಏನೂ ಹೇಳಲ್ಲ- 23.00%

    26. ಮೋದಿ ಅಮಿತ್ ಶಾ ಎದುರಿಸುವ ಶಕ್ತಿ ಸಿದ್ದರಾಮಯ್ಯ ಹೊಂದಿದ್ದಾರಾ?
    ಹೌದು-37.00%
    ಇಲ್ಲ-40.00%
    ಏನೂ ಹೇಳಲ್ಲ-23.00%

    27. ರಾಜ್ಯದ ಹಿತಾಸಕ್ತಿ ಕಾಪಾಡಲು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷವೇ ಉತ್ತಮ ಎಂದು ಭಾವಿಸುವಿರಾ?
    ಹೌದು – 47.00%
    ಇಲ್ಲ – 35.00%
    ಏನೂ ಹೇಳಲ್ಲ -18.00%

    28. ಕಳೆದ 4 ವರ್ಷಗಳ ಕೇಂದ್ರ ಸರ್ಕಾರ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
    ಅತ್ಯುತ್ತಮ -18.00%
    ಉತ್ತಮ -28.00%
    ಸುಮಾರು -33.00%
    ಕಳಪೆ -18.00%
    ತೀರಾ ಕಳಪೆ -3.00%

    29. ಟಿಪ್ಪು ಜಯಂತಿ ಆಚರಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಸರಿಯೇ?
    ಮುಂಬೈ ಕರ್ನಾಟಕ
    ಹೌದು -29.20%
    ಇಲ್ಲ – 45.80%
    ಏನೂ ಹೇಳಲ್ಲ -25.00%

    ಹೈದರಾಬಾದ್ ಕರ್ನಾಟಕ
    ಹೌದು – 33.10%
    ಇಲ್ಲ – 41.40%
    ಏನೂ ಹೇಳಲ್ಲ -25.50%

    ಮಧ್ಯ ಕರ್ನಾಟಕ
    ಹೌದು -16.20%
    ಇಲ್ಲ -63.30%
    ಏನೂ ಹೇಳಲ್ಲ -20.50%

    ಕರಾವಳಿ ಕರ್ನಾಟಕ
    ಹೌದು -11.70%
    ಇಲ್ಲ – 60.40%
    ಏನೂ ಹೇಳಲ್ಲ -27.90%

    ಹಳೆ ಮೈಸೂರು
    ಹೌದು -18.70%
    ಇಲ್ಲ -40.50%
    ಏನೂ ಹೇಳಲ್ಲ -40.80%

    ಬೆಂಗಳೂರು ನಗರ
    ಹೌದು -22.30%
    ಇಲ್ಲ -27.40%
    ಏನೂ ಹೇಳಲ್ಲ – 50.30%

    ಸಮಗ್ರ
    ಹೌದು -23.00%
    ಇಲ್ಲ -45.00%
    ಏನೂ ಹೇಳಲ್ಲ – 32.00%

    30. ನಾನೇ ಮುಂದಿನ ಮುಖ್ಯಮಂತ್ರಿ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಆತ್ಮವಿಶ್ವಾಸನಾ ಅಥವಾ ಅತಿಯಾದ ಆತ್ಮವಿಶ್ವಾಸನಾ?
    ಆತ್ಮ ವಿಶ್ವಾಸ -42.00%
    ಅತಿಯಾದ ಆತ್ಮ ವಿಶ್ವಾಸ – 48.00%
    ಏನು ಹೇಳಲ್ಲ -10.00%

    ವಲಯವಾರು ಪ್ರಶ್ನೆ

    31. ವೀರಶೈವ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದು ಕಾಂಗ್ರೆಸ್‍ಗೆ ಚುನಾವಣೆಯಲ್ಲಿ ಲಾಭ ತರುತ್ತಾ?

    ಮುಂಬೈ ಕರ್ನಾಟಕ
    ಹೌದು – 26.10%
    ಇಲ್ಲ – 59.30%
    ಏನೂ ಹೇಳಲ್ಲ -14.60%

    ಹೈದರಬಾದ್ ಕರ್ನಾಟಕ
    ಹೌದು – 43.80%
    ಇಲ್ಲ -42.10%
    ಏನೂ ಹೇಳಲ್ಲ -14.10%

    32. ಚುನಾವಣೆ ವೇಳೆ ಮತದಾರರ ಮನಗೆಲ್ಲಲು ಪಕ್ಷಗಳು ಮಹದಾಯಿ/ ಕಾವೇರಿ ವಿಚಾರಗಳನ್ನು ಪ್ರಸ್ತಾಪಿಸುತ್ತಿವೆ ಎಂದು ಭಾವಿಸುತ್ತೀರಾ?
    ಮುಂಬೈ ಕರ್ನಾಟಕ
    ಹೌದು -69.50%
    ಇಲ್ಲ -24.70%
    ಏನು ಹೇಳಲ್ಲ – 5.80%

    ಹಳೆ ಮೈಸೂರು
    ಹೌದು – 57.80%
    ಇಲ್ಲ -23.90%
    ಏನೂ ಹೇಳಲ್ಲ – 18.30%

    ಮುಂಬೈ ಕರ್ನಾಟಕ
    33. ಮಹದಾಯಿ ವಿವಾದವನ್ನು ಪರಿಹರಿಸುವುದು ಯಾವ ಸರ್ಕಾರ?
    ಬಿಜೆಪಿ – 38.60%
    ಕಾಂಗ್ರೆಸ್ -37.90%
    ಜೆಡಿಎಸ್- 21.40%
    ಏನೂ ಹೇಳಲ್ಲ – 0.90%
    ಕೇಂದ್ರ ಸರ್ಕಾರ -1.10%
    ಇತರೇ -0.10%

    ಕರಾವಳಿ ಕರ್ನಾಟಕ
    34. ಹಿಂದೂತ್ವದ ಪ್ರಯೋಜವನ್ನು ಹೆಚ್ಚು ಪಡೆಯುವ ರಾಜಕೀಯ ಪಕ್ಷ ಯಾವುದು?
    ಕಾಂಗ್ರೆಸ್ – 30.00%
    ಬಿಜೆಪಿ – 43.40%
    ಜೆಡಿಎಸ್- 5.60%
    ಏನೂ ಹೇಳಲ್ಲ – 21.00%

    ವೋಟ್ ಶೇರ್/ ಸೀಟ್ ಶೇರ್ ಲೆಕ್ಕಾಚಾರ
    ಮುಂಬೈ ಕರ್ನಾಟಕ
    ಕಾಂಗ್ರೆಸ್ – 38%
    ಬಿಜೆಪಿ – 38%
    ಜೆಡಿಎಸ್ – 15%
    ಇತರೇ – 10%

    ಸೀಟ್ ಶೇರ್
    ಕಾಂಗ್ರೆಸ್ – 21
    ಬಿಜೆಪಿ – 26
    ಜೆಡಿಎಸ್ – 02
    ಇತರೇ -01
    ಒಟ್ಟು – 50

    ಹೈದರಾಬಾದ್ ಕರ್ನಾಟಕ
    ಕಾಂಗ್ರೆಸ್- 39%
    ಬಿಜೆಪಿ – 37%
    ಜೆಡಿಎಸ್ -16%
    ಇತರೇ -8%

    ಸೀಟ್ ಶೇರ್
    ಕಾಂಗ್ರೆಸ್ -17
    ಬಿಜೆಪಿ -20
    ಜೆಡಿಎಸ್ -02
    ಇತರೇ -01
    ಒಟ್ಟು – 40

    ಮಧ್ಯ ಕರ್ನಾಟಕ
    ಕಾಂಗ್ರೆಸ್ -35%
    ಬಿಜೆಪಿ -36%
    ಜೆಡಿಎಸ್ – 22%
    ಇತರೇ -07%

    ಸೀಟ್ ಶೇರ್
    ಕಾಂಗ್ರೆಸ್ – 06
    ಬಿಜೆಪಿ -14
    ಜೆಡಿಎಸ್ -06
    ಇತರೇ -0
    ಒಟ್ಟು -26

    ಕರಾವಳಿ ಕರ್ನಾಟಕ
    ಕಾಂಗ್ರೆಸ್ -42%
    ಬಿಜೆಪಿ -39%
    ಜೆಡಿಎಸ್ -08%
    ಇತರೇ -10%

    ಸೀಟ್ ಶೇರ್
    ಕಾಂಗ್ರೆಸ್ -10
    ಬಿಜೆಪಿ -08
    ಜೆಡಿಎಸ್ -01
    ಇತರೇ -00
    ಒಟ್ಟು -19

    ಹಳೆ ಮೈಸೂರು
    ಕಾಂಗ್ರೆಸ್ -31%
    ಬಿಜೆಪಿ -20%
    ಜೆಡಿಎಸ್ -36%
    ಇತರೇ -13%

    ಸೀಟ್ ಶೇರ್
    ಕಾಂಗ್ರೆಸ್ -21
    ಬಿಜೆಪಿ -08
    ಜೆಡಿಎಸ್ -28
    ಇತರೇ – 04
    ಒಟ್ಟು – 61

    ಬೆಂಗಳೂರು ನಗರ
    ಕಾಂಗ್ರೆಸ್ – 37%
    ಬಿಜೆಪಿ -38%
    ಜೆಡಿಎಸ್ -20%
    ಇತರೇ -05%

    ಸೀಟ್ ಶೇರ್
    ಕಾಂಗ್ರೆಸ್ -14
    ಬಿಜೆಪಿ -12
    ಜೆಡಿಎಸ್ -01
    ಇತರೇ -00
    ಒಟ್ಟು -27

    ಕ್ವಾರ್ಟರ್ ಫೈನಲ್ ಲೆಕ್ಕಾಚಾರ ಸಮಗ್ರ(ಏಪ್ರಿಲ್ ಎರಡನೇ ವಾರ)
    ಕಾಂಗ್ರೆಸ್ 85-95
    ಬಿಜೆಪಿ 75-85
    ಜೆಡಿಎಸ್ 40-45
    ಇತರೇ 0-5

    ಸೆಮಿಫೈನಲ್ ಸೀಟು ಲೆಕ್ಕಾಚಾರ(ಏಪ್ರಿಲ್ ಕೊನೆಯ ವಾರ)
    ಕಾಂಗ್ರೆಸ್ 95-100
    ಬಿಜೆಪಿ 80-85
    ಜೆಡಿಎಸ್ 40-45
    ಇತರೇ 0-05

    ವೋಟ್ ಶೇರ್
    ಕಾಂಗ್ರೆಸ್ -36%
    ಬಿಜೆಪಿ -33%
    ಜೆಡಿಎಸ್ -23%
    ಇತರೇ – 8%

    ಸೀಟ್
    ಕಾಂಗ್ರೆಸ್ 89-94
    ಬಿಜೆಪಿ 86 -91
    ಜೆಡಿಎಸ್ 38-43
    ಇತರೇ 0-6

  • ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿ ಬಿದ್ದ ರಾಹುಲ್ ಗಾಂಧಿ

    ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿ ಬಿದ್ದ ರಾಹುಲ್ ಗಾಂಧಿ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಅವರು ಜಿಲ್ಲೆಯ ಗೌರಿಬಿದನೂರು ಪಟ್ಟಣಕ್ಕೆ ಬಂದಿದ್ದರು. ನಗರದ ಗಾಂಧಿ ವೃತ್ತದಲ್ಲಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವಾಗ ಧ್ವನಿವರ್ಧಕದ ಕರ್ಕಶ ಶಬ್ದಕ್ಕೆ ಅರೆಕ್ಷಣ ಬೆಚ್ಚಿಬಿದ್ದಾರೆ.

    ರಾಹುಲ್ ಗಾಂಧಿ ಭಾಷಣ ಆರಂಭಿಸುವಾಗ ಮೈಕ್ ಕೈಕೊಟ್ಟಿದೆ. ನಂತರ ಧ್ವನಿವರ್ಧಕದಿಂದ ದಿಢೀರ್ ಬಂದ ಕರ್ಕಶ ಶಬ್ದದಿಂದ ಅವರು ಅರೆಕ್ಷಣ ಬೆಚ್ಚಿದ್ದಾರೆ. ಕರ್ಕಶ ಧ್ವನಿ ನಿಂತ ನಂತರ ರಾಹುಲ್ ಗಾಂಧಿ ನಗುಮುಖದಿಂದ ನಮಸ್ಕಾರ ಎಂದು ಭಾಷಣ ಆರಂಭಿಸಿದ್ದಾರೆ.

    ರಾಹುಲ್ ಗಾಂಧಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್ ಶಿವಶಂಕರರೆಡ್ಡಿ ಪರವಾಗಿ ರೋಡ್ ಶೋ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಂಸದ ಮೊಯಿಲಿ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಬಸವಣ್ಣನವರ ವಚನದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಹೊಗಳಿದರು.