Tag: Karnataka Election

  • ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿ, ಉತ್ತರ ಕೊಡೋಕೆ ಇನ್ಯಾರನ್ನೋ ಕಳಿಸಿದ್ದಾರೆ: ಜೋಶಿ ಕಿಡಿ

    ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿ, ಉತ್ತರ ಕೊಡೋಕೆ ಇನ್ಯಾರನ್ನೋ ಕಳಿಸಿದ್ದಾರೆ: ಜೋಶಿ ಕಿಡಿ

    – ಕಾಂಗ್ರೆಸ್‌ನವ್ರು ರಾಜೀವ್ ಗಾಂಧಿ ಚಿತಾಭಸ್ಮ ತೋರಿಸಿ ಮತ ಪಡೆದಿದ್ದು ನೆನಪಿದ್ಯಾ?
    – ನಾವು ಗೆದ್ರೆ ಇವಿಎಂ, ಆಯೋಗ ಸರಿಯಿಲ್ಲ ಅಂತಾರೆ ಅಂತ ಜೋಶಿ ಕಿಡಿ

    ನವದೆಹಲಿ: ರಾಹುಲ್ ಗಾಂಧಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿ, ಉತ್ತರ ಕೊಡಲು ಇನ್ಯಾರನ್ನೋ ಕಳುಹಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಿಡಿಕಾರಿದ್ದಾರೆ.

    ಮತಗಳ್ಳತನದ ಆರೋಪ ಮಾಡಿ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರಾಹುಲ್ ಗಾಂಧಿಯವರ (Rahul Gandhi) ಕುರಿತು ನವದೆಹಲಿಯಲ್ಲಿ (New Delhi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಗುರುವಾರ ಮತಗಳ್ಳತನದ ಆರೋಪ ಮಾಡಿ, ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಯಾಕೆ ಪ್ರತಿಭಟನೆ ನಡೆಸಿದ್ದಾರೆ ಎಂದು ಕೇಳಿದ್ರೆ ಅವರಿಗೆ ಗೊತ್ತಿರಲ್ಲ. ರಾಜ್ಯ ಚುನಾವಣಾ ಆಯೋಗ ಬಂದು ಸ್ಪಷ್ಟನೆ ನೀಡಿ ಎಂದು ಕೇಳಿದೆ. ಫ್ರೀಡಂ ಪಾರ್ಕ್ನಿಂದ ಆಯೋಗದ ಕಚೇರಿಗೆ ನಡೆದು ಹೋದರೆ 5 ನಿಮಿಷ. ಆದರೆ ಆಯೋಗದ ಕಚೇರಿಗೆ ಹೋಗಿಲ್ಲ. ಬೇರೆ ಯಾರನ್ನೊ ಕಳುಹಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಚಿಪ್ಪಲ್ಲಿ ಕಾಫಿ ಕೊಡೋ ಕಾಲದಲ್ಲಿ ಸಹಪಂಕ್ತಿ ಭೋಜನ ಎತ್ತಿಹಿಡಿದಿದ್ದು ವಿರೇಂದ್ರ ಹೆಗ್ಗಡೆಯವ್ರು: ಸಿ.ಟಿ ರವಿ

    ಆರೋಪ ಮಾಡಿ ಇನ್ಯಾರನ್ನೋ ಉತ್ತರ ಕೊಡಿಸಲು ಕಳಿಸಿದರೆ, ನಿಮ್ಮ ಸುಳ್ಳು ಆರೋಪಕ್ಕೆ ಆಧಾರ ಇಲ್ಲ ಅಂತ ಅರ್ಥ. ಎಲ್ಲ ರಾಜ್ಯಗಳ ಚುನಾವಣಾ ಆಯೋಗ ಅಫಿಡವಿಟ್ ಕೇಳಿವೆ. ಈವರೆಗೂ ಅಫಿಡವಿಟ್ ಫೈಲ್ ಮಾಡಿಲ್ಲ. ರಾಹುಲ್ ಸ್ಥಿತಿ ಹೇಗೆಂದರೆ ಸರ್ಕಾರದಲ್ಲಿ ಇದ್ದಾಗ ಲೂಟಿಯ ಅಂಗಡಿ. ಚುನಾವಣೆಯಲ್ಲಿ ಮಾತ್ರ ಅವರಿಗೆ ಪ್ರೀತಿಯ ಅಂಗಡಿ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ

    ರಾಹುಲ್ ಗಾಂಧಿ ಅವರನ್ನು ಅಧಿಕಾರದಿಂದ ಜನರು ಹಾಕಿದ ಮೇಲೆ ಸುಳ್ಳಿನ ಅಂಗಡಿ ತೆಗೆಯುತ್ತಾರೆ. ಇವರ ಅಜ್ಜಿ ತುರ್ತು ಪರಿಸ್ಥಿತಿ ಹೇರಿದವರು. ಇವರು ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

    ರಫೇಲ್ ವಿಚಾರದಲ್ಲೂ ರಾಹುಲ್ ಸುಳ್ಳು ಹೇಳಿದ್ದರು
    ಹಿಂದೆ ಮಹಾರಾಷ್ಟ್ರ ಚುನಾವಣೆಯಲ್ಲಿ 70 ಲಕ್ಷ ಮತದಾರರ ಸೇರ್ಪಡೆಯಾಗಿವೆ ಎಂದು ಹೇಳಿದ್ದರು. ಅದಾದ ಬಳಿಕ ಆಯೋಗ 40 ಲಕ್ಷ ಮತದಾರರ ಸೇರ್ಪಡೆಯಾಗಿದೆ ಎಂದು ಸ್ಪಷ್ಟನೆ ನೀಡಿತು. ಗುರುವಾರ ಸುದ್ದಿಗೋಷ್ಠಿಯಲ್ಲಿ ಒಂದು ಕೋಟಿ ಮತದಾರರು ಹೆಚ್ಚಾಗಿದ್ದಾರೆ ಎಂದು ಹೇಳಿದ್ದಾರೆ. ರಫೇಲ್ ವಿಚಾರದಲ್ಲೂ ಹೀಗೆ ಸುಳ್ಳು ಸಂಖ್ಯೆ ಹೇಳಿದ್ದರು. 2004, 2009ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲೂ ಮಹಾರಾಷ್ಟ್ರದಲ್ಲಿ ಮತ ಪ್ರಮಾಣ ಹೆಚ್ಚಾಗಿದೆ. ಎನ್‌ಡಿಎ ಕಾಲದಲ್ಲೂ ಇದು ಹೆಚ್ಚಾಗಿದೆ. ಈ ಹಿಂದೆ ಮಹಾರಾಷ್ಟ್ರದಲ್ಲೂ ಇವರೇ ಗೆದ್ದಿದ್ದರಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

    ಮತದಾರರ ಪಟ್ಟಿ ನೀಡಿದಾಗ ಯಾಕೆ ಪ್ರಶ್ನಿಸಿಲ್ಲ?
    ಚುನಾವಣೆಗೂ ಮುನ್ನ ಮತದಾರರ ಚೀಟಿ ಕರಡು ಪಟ್ಟಿ ನೀಡಲಾಗುತ್ತದೆ. ರಾಹುಲ್ ಗಾಂಧಿ ಪ್ರಕಾರ ಕಾಂಗ್ರೆಸ್ ಬಿಎಲ್‌ಎಗಳು ಕತ್ತೆ ಕಾಯುತ್ತಿದ್ದಾರ? ಯಾಕೆ ಅಂದೇ ತಕಾರರು ಎತ್ತಲಿಲ್ಲ. 2024ರಲ್ಲಿ ಅಕ್ರಮ ನಡೆದಿದ್ದರೆ ನಿಮ್ಮದೇ ಸರ್ಕಾರದ ಅಧಿಕಾರಿಗಳಿಂದ ನಡೆದಿರಬಹುದು. ಮತದಾರರ ಪಟ್ಟಿ ನೀಡಿದಾಗ ನೀವು ಯಾಕೆ ಈ ಬಗ್ಗೆ ಮಾತನಾಡಲಿಲ್ಲ. ಚುನಾವಣೆ ಸೋತ ಮೇಲೆ ಯಾಕೆ ಕೋರ್ಟ್ಗೆ ಅರ್ಜಿ ಸಲ್ಲಿಸಲಿಲ್ಲ. ಕಾಂಗ್ರೆಸ್ ಯಾವುದೇ ದಾಖಲೆಗಳನ್ನು ಕೇಳಿಲ್ಲ. ರಾಹುಲ್ ಗಾಂಧಿ ರೀತಿ ಕಾಂಗ್ರೆಸ್ ಅಭ್ಯರ್ಥಿ ಬೇರೆ ಲೋಕ ಅಥವಾ ದೇಶದಲ್ಲಿದ್ದರಾ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಅಜ್ಜಿಯೇ ಮತಗಳ್ಳತನದಿಂದ ಗೆದ್ದಿದ್ರು: ಆರಗ ಜ್ಞಾನೇಂದ್ರ

    ನಾವು ಗೆದ್ರೆ ಇವಿಎಂ, ಆಯೋಗ ಸರಿಯಿಲ್ಲ ಅಂತಾರೆ
    ಮಹಾದೇವಪುರದಲ್ಲಿ 25% ಮತ ಪ್ರಮಾಣ ಹೆಚ್ಚಾಗಿದೆ ಎನ್ನುವ ಆರೋಪ ಇದೆ. ದುಲೈ ಲೋಕಸಭೆ ಕ್ಷೇತ್ರದಲ್ಲಿ ಐದು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂತು. ಮಾಲೆಂಗಾವ್ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದ ಮತ ಬಂತು. ಹಾಗಿದ್ರೆ ನಾವು ಇದಕ್ಕೆ ಏನು ಹೇಳಬೇಕು. ಮಾಲೆಂಗಾವ್‌ನಲ್ಲಿ 43% ಮತದಾರರ ಪ್ರಮಾಣ ಹೆಚ್ಚಾಗಿದೆ. 2024ರಲ್ಲಿ ರಾಜ್ಯದಲ್ಲಿ ಬಿಜೆಪಿ ಸೋತಿತು. ಕಾಂಗ್ರೆಸ್ ಗೆದ್ದಾಗ ಇವಿಎಂ, ಆಯೋಗ ಎಲ್ಲ ಸರಿ ಇತ್ತು. ಲೋಕಸಭೆಯಲ್ಲಿ ನಾವು ಗೆದ್ದೆವು. ಆಗ ಆಯೋಗ ಸರಿ ಇಲ್ಲ, ಇವಿಎಂ ಸರಿ ಇಲ್ಲ. ಕುಣಿಯಲು ಬಾರದಿದ್ದರೆ ನೆಲೆ ಡೊಂಕು ಅಂದ್ರಂತೆ. ರಾಹುಲ್ ಗಾಂಧಿ ಮೂರ್ಖತನಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ಲೇವಡಿ ಮಾಡಿದ್ದಾರೆ.

    ರಾಜೀವ್ ಗಾಂಧಿ ಚಿತಾಭಸ್ಮ ತೋರಿಸಿ ಮತ ಪಡೆದಿದ್ರು
    ಈ ಹಿಂದೆ ಕಾಂಗ್ರೇಸ್ ಅವಧಿಯಲ್ಲಿ ಚುನಾವಣಾ ಆಯೋಗದ ಕಮಿಷನರ್‌ಗಳನ್ನು ರಾಜ್ಯಸಭೆಗೆ ನೇಮಕ ಮಾಡಿ, ಮಂತ್ರಿ ಮಾಡಿದ್ದೀರಿ. ರಾಜೀವ್ ಗಾಂಧಿ ಹತ್ಯೆಯಾದಾಗ ದೇಶದಲ್ಲಿ ಚುನಾವಣೆ ನಿಲ್ಲಿಸಿದ್ದರು. ಚಿತಾಭಸ್ಮ ತೋರಿಸಿ ಮತ ಪಡೆದುಕೊಂಡರು. ಆಯೋಗವನ್ನು ಹೀಗೆ ಬಳಸಿಕೊಂಡವರು ನಮಗೆ ಪಾಠ ಹೇಳುತ್ತಿದ್ದಾರೆ. ಸಿಸಿಟಿವಿ ದೃಶ್ಯ ನೀಡಿಲ್ಲ ಎಂದು ಆರೋಪ ಇದೆ. ಸಿಸಿಟಿವಿ ಸ್ಟೋರೆಜ್ 45 ದಿನಗಳಿಗೆ ಮಾತ್ರ ಇರುತ್ತದೆ. 45 ದಿನಗಳ ಬಳಿಕ ಕೇಳಿದರೆ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

    ರಾಹುಲ್ ಗಾಂಧಿ ಮನವಿ ಮೇರೆಗೆ ಬಿಹಾರದಲ್ಲಿ ಎಸ್‌ಐಆರ್ ಮಾಡಿದ್ದೆ. ಆದರೆ ಈಗ ಹೀಗೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಸತ್ಯ ಸಂಗತಿ ಜನರ ಮುಂದೆ ಬರಬೇಕು ಎಂದಿದ್ದಾರೆ.

  • ಕಾಂಗ್ರೆಸ್ ಯಾವತ್ತು ಹಿಟ್ ಅಂಡ್ ರನ್ ಮಾಡಲ್ಲ; ಕರ್ನಾಟಕದ ಮತಗಳ್ಳತನಕ್ಕೆ ಸಾಕ್ಷಿ ಇದೆ – ಪ್ರಿಯಾಂಕ್ ಖರ್ಗೆ

    ಕಾಂಗ್ರೆಸ್ ಯಾವತ್ತು ಹಿಟ್ ಅಂಡ್ ರನ್ ಮಾಡಲ್ಲ; ಕರ್ನಾಟಕದ ಮತಗಳ್ಳತನಕ್ಕೆ ಸಾಕ್ಷಿ ಇದೆ – ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಕಾಂಗ್ರೆಸ್ (Congress) ಯಾವತ್ತು ಹಿಟ್ ಅಂಡ್ ರನ್ ಮಾಡೋದಿಲ್ಲ. ಕರ್ನಾಟಕದಲ್ಲಿ ಮತಗಳ್ಳತನದ ಬಗ್ಗೆ ದಾಖಲಾತಿ ಇದೆ. ರಾಹುಲ್ ಗಾಂಧಿ ಬಿಡುಗಡೆ ಮಾಡ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸ್ಪಷ್ಟಪಡಿಸಿದ್ದಾರೆ.

    ಶುಕ್ರವಾರ ರಾಹುಲ್ ಗಾಂಧಿಯಿಂದ (Rahul Gandhi) ಚುನಾವಣೆ ಆಯೋಗದ ವಿರುದ್ಧ ಪ್ರತಿಭಟನೆ ಮಾಡ್ತಿರೋ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಇಂದು ದೆಹಲಿಯಲ್ಲಿ (Delhi) ಸುದ್ದಿಗೋಷ್ಠಿ ಮಾಡ್ತಾರೆ. ದೆಹಲಿಯಲ್ಲಿ ಮತಗಳ್ಳತನ ದಾಖಲೆ ಬಿಡುಗಡೆ ಆಗುತ್ತದೆ. ಅದಾದ ಮೇಲೆ ಚುನಾವಣೆ ಆಯೋಗ ಯಾರ ನಿಯಂತ್ರಣದಲ್ಲಿ ಕೆಲಸ ಮಾಡ್ತಿದೆ ಎಂದು ನೀವೇ ತೀರ್ಮಾನ ತೆಗೆದುಕೊಳ್ಳಿ. ಇವತ್ತು ದಾಖಲೆ ಬಿಡುಗಡೆ ಮಾಡ್ತಾರೆ. ಆ. 8ರಂದು ಕರ್ನಾಟಕದಲ್ಲಿ ದಾಖಲಾತಿ ಬಿಡುಗಡೆ ಮಾಡ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ಲ್ಲಿ ಜನರು ಕಾನೂನು ಕೈಗೆತ್ತಿಕೊಳ್ಳಬಾರದು – ಪ್ರಿಯಾಂಕ್ ಖರ್ಗೆ

    ಪ್ರತಿಭಟನೆಗೆ ಬಿಜೆಪಿ (BJP) ವಿರೋಧ ವಿಚಾರವಾಗಿ ಮಾತನಾಡಿದ ಅವರು, ನಾವು ಆರೋಪನೇ ಮಾಡಿಲ್ಲ. ಮತಗಳ್ಳತನ ಆಗಿದೆ ಸಾಕ್ಷಿ ಕೊಡುತ್ತೇವೆ ಎಂದು ಹೇಳ್ತಾ ಇದ್ದೇವೆ. ಬಿಜೆಪಿ ಅವರು ಯಾಕೆ ಚುನಾವಣೆ ಆಯೋಗದ ವಕ್ತಾರರ ರೀತಿ ಮಾತಾಡ್ತಾರೆ. ಇಡಿ, ಐಟಿ, ಎಲ್ಲಾ ಸಂಸ್ಥೆಗಳಿಗೂ ಬಿಜೆಪಿ ಅವರು ವಕ್ತಾರರಂತೆ ಆಗಿದ್ದಾರೆ. ಆಯಾ ಸಂಸ್ಥೆಗಳಿಗೆ ವಕ್ತಾರರು ಇದ್ದಾರೆ ಅವರು ಮಾತಾಡಲಿ. ಬಿಜೆಪಿ ಅವರು ಯಾಕೆ ಮಾತಾಡಬೇಕು. ಕಾಂಗ್ರೆಸ್ ಯಾವತ್ತು ಹಿಟ್ ಅಂಡ್ ರನ್ ಮಾಡಲ್ಲ. ಎಲ್ಲಾ ದಾಖಲಾತಿ ಇವೆ. ದಾಖಲಾತಿ ನಿಮ್ಮ ಮುಂದೆ ಇಡುತ್ತೇವೆ. ಅದರ ಬಗ್ಗೆ ನೀವೇ ನಿರ್ಧಾರ ಮಾಡಿ ಎಂದಿದ್ದಾರೆ.

  • ನಿಗದಿಗಿಂತ ಚುನಾವಣೆಯಲ್ಲಿ ಅಧಿಕ ವೆಚ್ಚ – ಇಬ್ಬರೂ ಬಿಜೆಪಿ ನಾಯಕರಿಗೆ ನೋಟಿಸ್

    ನಿಗದಿಗಿಂತ ಚುನಾವಣೆಯಲ್ಲಿ ಅಧಿಕ ವೆಚ್ಚ – ಇಬ್ಬರೂ ಬಿಜೆಪಿ ನಾಯಕರಿಗೆ ನೋಟಿಸ್

    ಕಾರವಾರ: ವಿಧಾನಸಭಾ ಚುನಾವಣೆಯಲ್ಲಿ (Karnataka Election) ನಿಗದಿ ಪಡಿಸಿದ ಹಣಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದ ಉತ್ತರ ಕನ್ನಡದ ಇಬ್ಬರೂ ಬಿಜೆಪಿ (BJP) ನಾಯಕರಿಗೆ ಚುನಾವಣಾ ಆಯೋಗ (Election commission) ನೋಟಿಸ್ ನೀಡಿದೆ. ನಾಯಕರು ಹೆಚ್ಚು ಹಣ ಖರ್ಚು ಮಾಡಿದ್ದರೂ ಸಹ ಸರಿಯಾದ ಲೆಕ್ಕ ನೀಡದ ಹಿನ್ನಲೆಯಲ್ಲಿ ನೋಟಿಸ್ ನೀಡಲಾಗಿದೆ.

    ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮಾಜಿ ಕಾರ್ಮಿಕ ಸಚಿವ ಹಾಗೂ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಭಟ್ಕಳ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸುನೀಲ್ ನಾಯ್ಕ ಅವರಿಗೆ ಆಯೋಗ ನೋಟಿಸ್ ಜಾರಿ ಮಾಡಿದೆ. ಈ ಇಬ್ಬರೂ ಮುಖಂಡರೂ 40 ಲಕ್ಷ ರೂ.ಗಿಂತಲೂ ಅಧಿಕ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಚುನಾವಣಾ ಆಯೋಗ ವಿಧಾನಸಭಾ ಚುನಾವಣಾ ವೆಚ್ಚಕ್ಕೆ 40 ಲಕ್ಷ ರೂ. ಮಿತಿ ಹೇರಿದೆ. ಆದರೆ ಈ ನಾಯಕರು ಅದಕ್ಕಿಂತಲೂ ಅಧಿಕ ಹಣ ಖರ್ಚು ಮಾಡಿರುವುದು ಆಯೋಗ ನೋಟಿಸ್ ನೀಡಲು ಕಾರಣವಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ವಿಪಕ್ಷಗಳ ನಾಯಕರ ಸಭೆ – ಮತ್ತೆ ದಿನಾಂಕ ಮುಂದೂಡಿಕೆ

    ಮೇ 3ರಂದು ಅಂಕೋಲಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಈ ವೇಳೆ ಜನರನ್ನು ಕರೆತರಲು ನೂರಕ್ಕೂ ಹೆಚ್ಚು ವಾಯುವ್ಯ ಸಾರಿಗೆ ಬಸ್‍ಗಳನ್ನು ಬುಕ್ ಮಾಡಿದ್ದರು. ಇದರ ಖರ್ಚನ್ನು ಆಯೋಗಕ್ಕೆ ಸಲ್ಲಿಸಿದ ಲೆಕ್ಕಪತ್ರದಲ್ಲಿ ನಮೂದು ಮಾಡಿರಲಿಲ್ಲ. ಈ ಸಮಾವೇಶದ ಸಭಾ ವೆಚ್ಚವನ್ನು ಬಿಜೆಪಿಯ ಎಲ್ಲಾ 6 ಅಭ್ಯರ್ಥಿಗಳಿಗೆ ಸಮನಾಗಿ ಹಂಚಿಕೆ ಮಾಡಲಾಗಿತ್ತು. ಒಬ್ಬೊಬ್ಬ ಅಭ್ಯರ್ಥಿಗೂ ತಲಾ 18,19,978 ರೂ. ವೆಚ್ಚದಂತೆ ಹಂಚಿಕೆ ಮಾಡಲಾಗಿದೆ.

    ಶಿರಸಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಹೊರತಾಗಿ ಉಳಿದೆಲ್ಲ ಅಭ್ಯರ್ಥಿಗಳ ವೆಚ್ಚದ ವಿವರದಲ್ಲಿ ಈ ಲೆಕ್ಕವನ್ನು ಸೇರಿಸಲಾಗಿದೆ. ಆದರೇ ಚುನಾವಣಾ ವೀಕ್ಷಕರು ಸಲ್ಲಿಸಿದ ಶಾಡೋ ಅಕೌಂಟ್ ನಲ್ಲಿ ಇವರ ಖರ್ಚು ಹೆಚ್ಚಾಗಿರುವುದು ಕಂಡು ಬಂದಿದೆ. ಶಾಸಕ ಶಿವರಾಮ್ ಹೆಬ್ಬಾರ್ ನಿಗದಿಗಿಂತ 1.5 ಲಕ್ಷ ರೂ ಹೆಚ್ಚು ಖರ್ಚು ಮಾಡಿದ್ದಾರೆ. ಸುನಿಲ್ ನಾಯ್ಕ 40 ಲಕ್ಷ ರೂ. ನಿಗದಿಗಿಂತ 5 ಲಕ್ಷ ರೂ. ಹೆಚ್ಚು ಖರ್ಚು ಮಾಡಿದ್ದಾರೆ.

    ಜಿಲ್ಲೆಯ 6 ಕ್ಷೇತ್ರದ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಖರ್ಚು ವೆಚ್ಚದ ದಾಖಲೆ ಸಲ್ಲಿಸಿದ್ದಾರೆ. ಬಿಜೆಪಿಯ ಬಹುತೇಕ ಅಭ್ಯರ್ಥಿಗಳ ವೆಚ್ಚ 32 ಲಕ್ಷ ರೂ. ದಾಟಿದ್ದರೆ, ಕಾಂಗ್ರೆಸ್‍ನ ಇಬ್ಬರು ಅಭ್ಯರ್ಥಿಗಳು 20 ಲಕ್ಷ ರೂ.ಗಿಂತ ಕಡಿಮೆ ವೆಚ್ಚ ಮಾಡಿದ್ದಾಗಿ ಮಾಹಿತಿ ಸಲ್ಲಿಸಿದ್ದಾರೆ.

    ಕಳೆದ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರಿಗೆ ಗರಿಷ್ಠ 28 ಲಕ್ಷ ರೂ. ವೆಚ್ಚದ ಮಿತಿ ನಿಗದಿಪಡಿಸಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ವೆಚ್ಚದ ಮಿತಿ ಸಡಿಲಗೊಳಿಸಿದ್ದ ಆಯೋಗ ಅದನ್ನು ಗರಿಷ್ಠ 40 ಲಕ್ಷ ರೂ.ಗೆ ಏರಿಕೆ ಮಾಡಿತ್ತು. ಜಿಲ್ಲೆಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ಆಯೋಗ ನಿಗದಿಪಡಿಸಿದ್ದ ಮಿತಿಗಿಂತ ಹೆಚ್ಚು ವೆಚ್ಚ ಮಾಡಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಆರು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಜಿಲ್ಲೆಯಲ್ಲಿ ಒಟ್ಟೂ 57 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

    ಈ ಪೈಕಿ ಬಿಜೆಪಿ ಅಭ್ಯರ್ಥಿಗಳಲ್ಲಿ ಬಹುತೇಕರು ಹೆಚ್ಚು ವೆಚ್ಚ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು ನಂತರದ ಸ್ಥಾನದಲ್ಲಿದ್ದಾರೆ. ಸಮಾವೇಶ, ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡಿದ್ದ ಬೂತ್ ಏಜೆಂಟರ ವೆಚ್ಚವನ್ನೇ ಬಹುತೇಕ ಅಭ್ಯರ್ಥಿಗಳು ಹೆಚ್ಚು ತೋರಿಸಿದ್ದಾರೆ.

    ಬಿಜೆಪಿ ಅಭ್ಯರ್ಥಿಗಳು ನಿಗದಿಗಿಂತ ಹೆಚ್ಚು ಖರ್ಚು ಮಾಡಿದ್ದಾರೆ. ಈ ಕುರಿತು ಚುನಾವಣಾ ಆಯೋಗ ಮತ್ತೊಮ್ಮೆ ತನಿಖೆ ಮಾಡಬೇಕು ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾದ ಶಂಭು ಶಟ್ಟಿ ಅವರು ಆಗ್ರಹಿಸಿದ್ದಾರೆ.

    ಅಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ತಲಾ 30 ಲಕ್ಷ ರೂ. ಬಿಜೆಪಿ ತಲಾ 20 ಲಕ್ಷ ರೂ. ಪಕ್ಷದ ನಿಧಿಯಿಂದ ನೀಡಿದ್ದಾಗಿ ಆಯಾ ಪಕ್ಷಗಳ ಅಭ್ಯರ್ಥಿಗಳು ಘೋಷಿಸಿದ್ದಾರೆ. ಆದರೆ ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಹಾಗೂ ಶಿವರಾಮ ಹೆಬ್ಬಾರ್ ತಾವು ಪಕ್ಷದ ನಿಧಿ ಪಡೆದಿಲ್ಲ ಎಂದು ಘೋಷಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳೆಲ್ಲರೂ ಪಕ್ಷದಿಂದ ಯಾವುದೇ ನಿಧಿ ಪಡೆದಿಲ್ಲ ಎಂದೂ ಹೇಳಿಕೊಂಡಿದ್ದಾರೆ.

    ಹೆಚ್ಚು ವೆಚ್ಚ ಮಾಡಿರುವ ಆರೋಪ ಸಾಬೀತಾದಲ್ಲಿ ಯಲ್ಲಾಪುರ ಶಾಸಕ ಹೆಬ್ಬಾರ್ ರವರು ಶಾಸಕ ಸ್ಥಾನದಿಂದ ಅನರ್ಹಗೊಳ್ಳಲಿದ್ದಾರೆ. ಅಲ್ಲದೇ ಭಟ್ಕಳ ಬಿಜೆಪಿ ಮಾಜಿ ಶಾಸಕ ಸುನೀಲ್ ನಾಯ್ಕ 6 ವರ್ಷ ಚುನಾವಣೆ ಸ್ಪರ್ಧೆಯಿಂದ ಅನರ್ಹರಾಗಲಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ- ವಿಸ್ತೃತ ವರದಿ ಕೇಳಿದ ಸುಪ್ರೀಂ ಕೋರ್ಟ್

    ಪ್ರಮುಖ ಅಭ್ಯರ್ಥಿಗಳ ವೆಚ್ಚದ ವಿವರ
    ಆರ್.ವಿ.ದೇಶಪಾಂಡೆ, ಹಳಿಯಾಳ, ಕಾಂಗ್ರೆಸ್ – 31,96,648 ರೂ.
    ಸುನೀಲ್ ಹೆಗಡೆ – ಹಳಿಯಾಳ, ಬಿಜೆಪಿ – 38,37,316 ರೂ.
    ಎಸ್.ಎಲ್.ಘೋಟ್ನೇಕರ್, ಹಳಿಯಾಳ, ಜೆಡಿಎಸ್ -20,52,429 ರೂ.
    ರೂಪಾಲಿ ನಾಯ್ಕ, ಕಾರವಾರ, ಬಿಜೆಪಿ – 32,02,558 ರೂ.
    ಸತೀಶ್ ಸೈಲ್, ಕಾರವಾರ, ಕಾಂಗ್ರೆಸ್ – 13,68,526 ರೂ.

    ಚೈತ್ರಾ ಕೊಠಾರಕರ್, ಕಾರವಾರ, ಜೆಡಿಎಸ್ – 6,89,545 ರೂ.
    ದಿನಕರ ಶೆಟ್ಟಿ, ಕುಮಟಾ, ಬಿಜೆಪಿ – 37,02,136 ರೂ.
    ನಿವೇದಿತ್ ಆಳ್ವ, ಕುಮಟಾ, ಕಾಂಗ್ರೆಸ್ – 32,37,114 ರೂ.
    ಸೂರಜ್ ನಾಯ್ಕ ಸೋನಿ, ಕುಮಟಾ, ಜೆಡಿಎಸ್, 14,90,730 ರೂ.
    ಸುನೀಲ ನಾಯ್ಕ, ಭಟ್ಕಳ, ಬಿಜೆಪಿ – 30,48,984 ರೂ.
    ಮಂಕಾಳ ವೈದ್ಯ, ಭಟ್ಕಳ, ಕಾಂಗ್ರೆಸ್ – 17,82,563 ರೂ.
    ನಾಗೇಂದ್ರ ನಾಯ್ಕ, ಭಟ್ಕಳ, ಜೆಡಿಎಸ್ – 3,67,031 ರೂ.

    ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ, ಬಿಜೆಪಿ – 15,58,089 ರೂ.
    ಭೀಮಣ್ಣ ನಾಯ್ಕ, ಶಿರಸಿ, ಕಾಂಗ್ರೆಸ್ – 29,18,360 ರೂ.
    ಉಪೇಂದ್ರ ಪೈ, ಶಿರಸಿ, ಜೆಡಿಎಸ್ – 5,09,050 ರೂ.
    ಶಿವರಾಮ ಹೆಬ್ಬಾರ್, ಯಲ್ಲಾಪುರ, ಬಿಜೆಪಿ – 38,16,363 ರೂ.
    ವಿ.ಎಸ್.ಪಾಟೀಲ್, ಯಲ್ಲಾಪುರ, ಕಾಂಗ್ರೆಸ್ – 18, 61,276 ರೂ.
    ನಾಗೇಶ ನಾಯ್ಕ, ಯಲ್ಲಾಪುರ, ಜೆಡಿಎಸ್ – 8,95,016 ರೂ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂತ್ರಿಗಿರಿ ಲಾಬಿಗೆ ಲೋಕಸಭೆ ದಾಳ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್‌

    ಮಂತ್ರಿಗಿರಿ ಲಾಬಿಗೆ ಲೋಕಸಭೆ ದಾಳ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್‌

    ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Government) ಸಂಪುಟ ವಿಸ್ತರಣೆಗೂ ಲೋಕಸಭಾ ಚುನಾವಣೆಗೂ (Lok Sabha Election) ಸಂಬಂಧ ಇದ್ಯಾ ಎಂಬ ಪ್ರಶ್ನೆ ಮೂಡಿದೆ. ಈಗ ಸಚಿವರಾದರೆ ಸಾಲದು ಲೋಕಸಭೆ ಚುನಾವಣೆಗೂ ಸಿದ್ದರಿರಬೇಕು ಎಂದು ಕನಿಷ್ಠ 10 ರಿಂದ 15 ಜನ ಸಚಿವರಿಗೆ ಈಗಲೇ ಬಿಗ್ ಟಾಸ್ಕ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ.

    ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಹಲವು ಶಾಸಕರು ಹೈಕಮಾಂಡ್ (High Command) ಬೆನ್ನು ಬಿದ್ದಿದ್ದಾರೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ವಿಚಾರದಲ್ಲಿ ಹೈಕಮಾಂಡ್ ಲೋಕಸಭೆಯ ದಾಳ ಉರುಳಿಸಲು ಮುಂದಾಗಿದೆ. ಲೋಕಸಭೆ ಗೆಲುವಿನ ಲೆಕ್ಕಾಚಾರ ಹಾಕಿಯೇ ಈ ಬಾರಿ ಸಚಿವ ಸ್ಥಾನದ ಅವಕಾಶ ನೀಡಲಾಗುತ್ತದೆ ಎಂಬುದು ಕಾಂಗ್ರೆಸ್ ವಲಯದ ಮಾತು.


    2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25+1, ಕಾಂಗ್ರೆಸ್‌ 1, ಜೆಡಿಎಸ್‌ 1 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಟಾರ್ಗೆಟ್‌ ಹಾಕಿಕೊಂಡಿದೆ. ಇದನ್ನೂ ಓದಿ: ನಮ್ಮ ಪೊಲೀಸರು ಯಾವತ್ತೂ ಕೇಸರೀಕರಣ ಮಾಡಿಲ್ಲ – ಸಿಎಂ, ಡಿಸಿಎಂ ವಿರುದ್ಧ ಬೊಮ್ಮಾಯಿ ಕಿಡಿ

    ಹೈಕಮಾಂಡ್‌ ಷರತ್ತು ಏನು?
    ಈಗ ಯಾವ ಜಾತಿ? ಯಾವ ಜಿಲ್ಲೆ ಎನ್ನುವುದು ಮುಖ್ಯ ಅಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಡುವ ಸಾಮರ್ಥ್ಯ ಇರುವವರು ಎಷ್ಟು ಜನ ಎನ್ನುವುದೇ ಮಾನದಂಡ. ಅಗತ್ಯ ಬಿದ್ದರೆ ಅವರೇ ಅಖಾಡಕ್ಕಿಳಿದು ಗೆದ್ದು ತೋರಿಸಬೇಕು.

    ಸಚಿವ ಸ್ಥಾನ ಕೇಳುವವರು ಲೋಕಸಭಾ ಟಾಸ್ಕ್ ಪಡೆಯಲೇಬೇಕು. ಯಾವ ಜಿಲ್ಲೆಯಲ್ಲಿ ಯಾವ ಪ್ರಭಾವಿ ಶಾಸಕನಿಗೆ ಸಚಿವಸ್ಥಾನ ಕೊಟ್ಟರೆ ಲೋಕಸಭೆಗೆ ನೆರವಾಗಲಿದೆ? ಯಾರನ್ನ ಮಂತ್ರಿ ಮಾಡಿದರೆ ಲೋಕಸಭೆಗೆ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಅನುಕೂಲವಾಗಲಿದೆ? ಈ ಲೆಕ್ಕಾಚಾರದ ಮೇಲೆ 10-15 ಮಂತ್ರಿಸ್ಥಾನ ನಿರ್ಧಾರವಾಗಲಿದೆ ಎಂಬ ವಿಚಾರ ಈಗ ಲಭ್ಯವಾಗಿದೆ.

  • ಗ್ಯಾರಂಟಿ ಜಾರಿ ಯಾವಾಗ? – ಗೊಂದಲದಲ್ಲಿ ಮತದಾರ, ಬಿಲ್‌ ಕಟ್ಟಿ ಎನ್ನುತ್ತಿದೆ ಬೆಸ್ಕಾಂ

    ಗ್ಯಾರಂಟಿ ಜಾರಿ ಯಾವಾಗ? – ಗೊಂದಲದಲ್ಲಿ ಮತದಾರ, ಬಿಲ್‌ ಕಟ್ಟಿ ಎನ್ನುತ್ತಿದೆ ಬೆಸ್ಕಾಂ

    ಬೆಂಗಳೂರು: ಚುನಾವಣೆಯಲ್ಲಿ (Karnataka Election) ಜನತೆಗೆ ನೀಡಿದ ಕಾಂಗ್ರೆಸ್‌ ಗ್ಯಾರಂಟಿ (Congress Guarantee Scheme) ಭರವಸೆಗಳಿಗೆ ಸಿದ್ದರಾಮಯ್ಯ (Siddaramaiah) ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದರಿಂದ ಈಗ ಗೊಂದಲ ಉಂಟಾಗಿದೆ.

    ಚುನಾವಣಾ ಪ್ರಚಾರ ಸಮಯದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ ನಾಯಕರು ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲಿ ಇದನ್ನು ಜಾರಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಶನಿವಾರ ಸರ್ಕಾರದ ಮೊದಲ ಕ್ಯಾಬಿನೆಟ್‌ ಸಭೆ ನಡೆದಿದ್ದು ಕೇವಲ ತಾತ್ವಿಕ ಒಪ್ಪಿಗೆ ಮಾತ್ರ ನೀಡಲಾಗಿದೆ. ಈ ಕಾರಣಕ್ಕೆ ಈ ಗ್ಯಾರಂಟಿ ಯೋಜನೆ ಯಾವಾಗ ಜಾರಿಯಾಗಬಹುದು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.  ಇದನ್ನೂ ಓದಿ: ಸೋನಿಯಾ, ರಾಹುಲ್‍ರಿಂದ ರಾಜ್ಯ ನಾಯಕರಿಗೆ ಖಡಕ್ ಸಂದೇಶ

    ಈ ಗ್ಯಾರಂಟಿಗಳ ಪೈಕಿ ಅತಿ ಹೆಚ್ಚು ಜನರ ಗಮನ ಸೆಳೆದಿದ್ದು ʼಗೃಹಜ್ಯೋತಿʼ ಘೋಷಣೆ. ಜೂನ್‌ ತಿಂಗಳಿನಿಂದ ಯಾರೂ ಕರೆಂಟ್‌ ಬಿಲ್‌ (Electricity Tariff) ಕಟ್ಟಬೇಕಿಲ್ಲ ಎಂದು ಕೈ ನಾಯಕರು ಆಶ್ವಾಸನೆ ನೀಡಿದ್ದರು. ಈ ಕಾರಣಕ್ಕೆ ಜನ ಈಗ ವಿದ್ಯುತ್‌ ಬಿಲ್‌ ಕಟ್ಟಬೇಕಾ ಬೇಡವೇ ಎಂಬ ಗೊಂದಲದಲ್ಲಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಾವು ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಗ್ರಾಮೀಣ ಭಾಗದ ಜನತೆ ತಿಳಿಸುತ್ತಿದ್ದಾರೆ.

     

    ಬೆಸ್ಕಾಂ ಹೇಳೋದು ಏನು?
    ನಮಗೆ 200 ಯೂನಿಟ್ ಉಚಿತ ವಿದ್ಯುತ್‌ ನೀಡುವ ಯಾವುದೇ ಆದೇಶ ಬಂದಿಲ್ಲ. ಸಾರ್ವಜನಿಕರಿಗೆ ಮನವೊಲಿಸಿ ಬಿಲ್ ಕಟ್ಟಿಸಿಕೊಳ್ಳುತ್ತಿದ್ದೇವೆ. ಸರ್ಕಾರದ ಆದೇಶ ಯಾವ ರೀತಿ ಇರಲಿದೆ ಎಂಬದುನ್ನು ನೋಡಬೇಕಿದೆ. ಆದೇಶ ಅಧಿಕೃತವಾಗಿ ಜಾರಿಯಾಗುವವರೆಗೂ ಯಾರೂ ಸಹ ಬಿಲ್ ಕಟ್ಟದೇ ಇರುವಂತಿಲ್ಲ ಎಂದು ಪಬ್ಲಿಕ್ ಟಿವಿಗೆ ಬೆಸ್ಕಾಂ (BESCOM) ಉನ್ನತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಮುಖ 6 ಖಾತೆಗಾಗಿ ಸಚಿವರ ಮಧ್ಯೆ ಪೈಪೋಟಿ

     

    ವಿದ್ಯುತ್‌ ಬಳಕೆ ಹೆಚ್ಚಳ ಸಾಧ್ಯತೆ:
    ಗ್ರಾಮೀಣ ಭಾಗದಲ್ಲಿ ಸರಾಸರಿ ಪ್ರತಿ ಮನೆಯಲ್ಲಿ ತಿಂಗಳಿಗೆ 60 ರಿಂದ 100 ಯೂನಿಟ್‌ ವಿದ್ಯುತ್‌ ಬಳಕೆ ಮಾಡುತ್ತಿದ್ದಾರೆ. 200ಕ್ಕೂ ಅಧಿಕ ಯೂನಿಟ್‌ ವಿದ್ಯುತ್‌ ಬಳಕೆ ಮಾಡುವವರ ಸಂಖ್ಯೆ ಬಹಳ ವಿರಳ.

    ಈಗ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವುದರಿಂದ ಬಳಕೆ ಮತ್ತಷ್ಟು ಹೆಚ್ಚಾಗಲಿದೆ ಜೊತೆಗೆ ಬೇಕಾಬಿಟ್ಟಿ ಬಳಕೆಯಾಗುವ ಅಪಾಯವೂ ಇದೆ. ಈಗಿನ ಲೆಕ್ಕದಲ್ಲಿ ವಿದ್ಯುತ್‌ ಶುಲ್ಕ ಅಂದಾಜು 1,600 ರೂ.ಗಿಂತಲೂ ಹೆಚ್ಚು ಬರುವ ಸಾಧ್ಯತೆಯಿದೆ. ಈ ಕಾರಣಕ್ಕೆ ಈಗ ಬಳಕೆಯಾಗುತ್ತಿರುವ ವಿದ್ಯುತ್‌ ಪ್ರಮಾಣವನ್ನು ಮಾನದಂಡವಾಗಿಸಿ ಈ ಯೋಜನೆಗೆ ಎಷ್ಟು ಹಣ ಬೇಕಾಗಬಹುದು ಎಂಬದುನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಸರ್ಕಾರದ ಬೊಕ್ಕಸದಿಂದ ಮತ್ತಷ್ಟು ಹಣವನ್ನು ಈ ಯೋಜನೆಗೆ ಮೀಸಲಿಡಬೇಕಾಗುತ್ತದೆ.

  • ಹೈಕಮಾಂಡ್ ಅಂಗಳದಲ್ಲಿ ಸಿಎಂ ಚೆಂಡು – ಸಿದ್ದು ಅಥವಾ ಡಿಕೆಶಿ ಪರ ಹೆಚ್ಚು ಶಾಸಕರಿದ್ದರೆ ಏನಾಗಬಹುದು?

    ಹೈಕಮಾಂಡ್ ಅಂಗಳದಲ್ಲಿ ಸಿಎಂ ಚೆಂಡು – ಸಿದ್ದು ಅಥವಾ ಡಿಕೆಶಿ ಪರ ಹೆಚ್ಚು ಶಾಸಕರಿದ್ದರೆ ಏನಾಗಬಹುದು?

    ಬೆಂಗಳೂರು: ಕರ್ನಾಟಕ ಚುನಾವಣೆಯಲ್ಲಿ (Karnataka Election) ನಿರೀಕ್ಷೆಗಿಂತಲೂ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್ (Congress) ಪಕ್ಷಕ್ಕೆ ಇದೀಗ ಮುಖ್ಯಮಂತ್ರಿ ಆಯ್ಕೆ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ನಡುವೆ ಸಿಎಂ ಹುದ್ದೆಗೆ ನಡೆಯುತ್ತಿರುವ ತೀವ್ರ ಪೈಪೋಟಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

    ಭಾನುವಾರ ನಡೆದ ಸಿಎಲ್‍ಪಿ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಸಿಎಂ ಹುದ್ದೆಗೆ ಪಟ್ಟು ಹಿಡಿದ ಕಾರಣ, ನೂತನ ನಾಯಕನ ಆಯ್ಕೆಯನ್ನು ಹೈಕಮಾಂಡ್ ವಿವೇಚನೆಗೆ ಬಿಡಲಾಗಿತ್ತು. ಸದ್ಯ ಹೈಕಮಾಂಡ್ ಅಂಗಳದಲ್ಲಿ ಸಿಎಂ ಆಯ್ಕೆಯ ಚೆಂಡು ಇದೆ. ಭಿನ್ನ, ವಿಭಿನ್ನ ಮಾದರಿಗಳಲ್ಲಿ ಲಾಬಿಗಳು ಮುಂದುವರೆದಿವೆ. ಯಾರೂ ಊಹಿಸಲಾಗದ ರೀತಿಯಲ್ಲಿ ಹೊಸ ಹೊಸ ಆಟಗಳು ಶುರುವಾಗಿವೆ.

     

    ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ದೆಹಲಿಗೆ ಹಾರಿದ್ದರೆ ಇತ್ತ ಕಡೆ ಕ್ಷಣದಲ್ಲಿ ಡಿಕೆ ಶಿವಕುಮಾರ್ ಅನಾರೋಗ್ಯದ ನೆಪ ಹೇಳಿ ಮನೆಯಲ್ಲಿ ಉಳಿದಿದ್ದು, ಇಂದು ಡಿಕೆ ಶಿವಕುಮಾರ್‌ ದೆಹಲಿಗೆ ತೆರಳಲಿದ್ದಾರೆ. ಶಿಮ್ಲಾಗೆ ತೆರಳಿರುವ ಸೋನಿಯಾ ಗಾಂಧಿ ಇಂದು ದೆಹಲಿಗೆ ಆಗಮಿಸಲಿದ್ದಾರೆ. ಇಂದು ಡಿಕೆಶಿ ಮತ್ತು ಸಿದ್ದರಾಮಯ್ಯ ಸಮ್ಮುಖದಲ್ಲೇ ಖರ್ಗೆ ನಿವಾಸದಲ್ಲೇ ಬ್ಯಾಲೆಟ್‌ ಬಾಕ್ಸ್‌ ತೆರೆಯಲಾಗುತ್ತದೆ. ಶಾಸಕರು ಯಾರಿಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದಾರೋ ಅವರಿಗೆ ಸಿಎಂ ಪಟ್ಟ ಸಿಗುವ ಸಾಧ್ಯತೆಯಿದೆ. ಇದಾದ ಬಳಿಕ ಇಬ್ಬರ ಜೊತೆ ಸಂಧಾನ ಸಭೆ ನಡೆದು ಸಿಎಂ ಯಾರಾಗಬೇಕು ಎಂಬ ನಿರ್ಧಾರ ಅಂತಿಮವಾಗಲಿದೆ. ಇದನ್ನೂ ಓದಿ: ಕಾಂಗ್ರೆಸ್‌ ಒಕ್ಕಲಿಗರನ್ನ ಸಿಎಂ ಮಾಡಲಿ – ಡಿಕೆಶಿ ಪರ ಬ್ಯಾಟ್‌ ಬೀಸಿದ ಮಾಜಿ ಸಚಿವ ಸುಧಾಕರ್‌

    ಸಿದ್ದು ಪರ ಹೆಚ್ಚು ಶಾಸಕರ ಒಲವಿದ್ದರೆ ಏನಾಗಬಹುದು?
    ಇದು ನನ್ನ ಕೊನೆ ಚುನಾವಣೆಯಾಗಿದ್ದು ನನ್ನನ್ನೇ 5 ವರ್ಷ ಸಿಎಂ ಮಾಡಿ ಎಂದು ಸಿದ್ದು ಪಟ್ಟು ಹಿಡಿಯಬಹುದು. ಡಿಸಿಎಂ ಸೇರಿ ಸಂಪುಟದಲ್ಲಿ ಫ್ರೀ ಹ್ಯಾಂಡ್ ಕೊಡುವಂತೆ ಕೇಳಬಹುದು . ಸಿಎಂ ಸ್ಥಾನದ ವಿಚಾರದಲ್ಲಿ ರಾಜೀ ಸಂಧಾನಕ್ಕೆ ಒಪ್ಪದೇ ಇರಬಹುದು.

     

    ಡಿಕೆಶಿ ಪರ ಹೆಚ್ಚು ಶಾಸಕರಿದ್ದರೆ ಏನಾಗಬಹುದು?
    ನನ್ನನ್ನೇ 5 ವರ್ಷ ಸಿಎಂ ಮಾಡಿ ಎಂದು ಸಿದ್ದು ಪಟ್ಟು ಹಿಡಿಯಬಹುದು. ಸಿಎಂ ಅವಧಿಯ ಸಂಧಾನಕ್ಕೆ ಸಿದ್ಧವಿಲ್ಲ ಎಂದು ಹಠ ಹಿಡಿದು ಪೂರ್ಣ ಅವಧಿಯ ಸಿಎಂ ಎಂದು ಘೋಷಿಸುವಂತೆ ಬೇಡಿಕೆ ಇಡಬಹುದು.

    ಸಂಧಾನ ಸೂತ್ರ ಏನಾಗಬಹುದು?
    * ಸಿದ್ದುಗೆ ಬಹುಮತ ಸಿಕ್ಕರೆ ಡಿಕೆ ಅಸಮಾಧಾನ ಶಮನಕ್ಕೆ ಡಿಸಿಎಂ ಸೇರಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮುಂದುವರಿಸುವ ಸಾಧ್ಯತೆ.
    * 50:50 ಫಾರ್ಮುಲ ಅಡಿ ತಲಾ 2.5 ವರ್ಷದ ಅವಧಿ ನಿಗದಿಪಡಿಸಬಹುದು.
    * ಮೊದಲ 2 ವರ್ಷ ಸಿದ್ದರಾಮಯ್ಯ ಕೊನೆಯ 3 ವರ್ಷ ಡಿಕೆಶಿ ಸಂಧಾನದ ಸೂತ್ರ.
    * ಡಿಕೆಶಿ ಪಟ್ಟು ಹಿಡಿದರೆ ಲೋಕಸಭಾ ಚುನಾವಣೆವರೆಗೆ ಸಿದ್ದರಾಮಯ್ಯ ಸೂತ್ರ.
    * ಡಿಕೆಶಿಗೆ ಹೆಚ್ಚಿನ ಶಾಸಕರ ಬೆಂಬಲವಿದ್ದರೆ ಸಿದ್ದುಗೆ 1 ವರ್ಷ ಅವಕಾಶ ನೀಡುವುದು.
    * ಸಿದ್ದುಗೆ ಬಿಟ್ಟು ಕೊಡಲು ಡಿಕೆಶಿ ಒಪ್ಪದಿದ್ದರೆ ಸಿದ್ದು ಮನವೊಲಿಕೆಗೆ ಪ್ರಯತ್ನ.
    * ಯಾವುದಾದರು 1 ಅವಧಿಗೆ ಒಪ್ಪಿಕೊಳ್ಳುವಂತೆ ಡಿಕೆಶಿಯನ್ನು ಮನವೊಲಿಸಬಹುದು.

  • ಬಜರಂಗದಳಕ್ಕೆ ಪಿಎಫ್‍ಐ ಹೋಲಿಕೆ –  ಖರ್ಗೆಗೆ ಕೋರ್ಟ್ ಸಮನ್ಸ್

    ಬಜರಂಗದಳಕ್ಕೆ ಪಿಎಫ್‍ಐ ಹೋಲಿಕೆ – ಖರ್ಗೆಗೆ ಕೋರ್ಟ್ ಸಮನ್ಸ್

    ಚಂಡೀಗಢ: ಬಜರಂಗದಳದ (Bajrang Dal) ವಿರುದ್ಧ ಹೇಳಿಕೆ ನೀಡಿದ ವಿಚಾರವಾಗಿ ಪಂಜಾಬ್‍ನ (Punjab) ಸಂಗ್ರೂರ್‌ ಸ್ಥಳೀಯ ನ್ಯಾಯಾಲಯ (Local Court) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ (Mallikarjun Kharge) ಸಮನ್ಸ್ ಜಾರಿ ಮಾಡಿದೆ. ಜುಲೈ 10 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

    ಕಾಂಗ್ರೆಸ್ (Congress) ಬಜರಂಗದಳವನ್ನು ದೇಶವಿರೋಧಿ ಸಂಘಟನೆಗಳೊಂದಿಗೆ ಹೋಲಿಸಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ. ಇದು ಅಪಾರ ಕಾರ್ಯಕರ್ತರಿಗೆ ಮಾಡಿರುವ ಅಪಮಾನವಾಗಿದೆ ಎಂದು ಹಿಂದೂ ಸುರಕ್ಷಾ ಪರಿಷತ್ ಭಜರಂಗದಳ ಸಂಸ್ಥಾಪಕ ಸಂಗ್ರೂರ್ ಮೂಲದ ಹಿತೇಶ್ ಭಾರದ್ವಾಜ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯನ್ನು ಸೋಲಿಸಿದ್ದಕ್ಕೆ ಡಿವಿಎಸ್‌, ಕಟೀಲ್‌ ಫೋಟೋಗೆ ಚಪ್ಪಲಿ ಹಾರ ಹಾಕಿದ ಹಿಂದೂ ಕಾರ್ಯಕರ್ತರು

    ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣಾ (Karnataka Election) ಪ್ರಚಾರದ ವೇಳೆ ಖರ್ಗೆಯವರು ಪಿಎಫ್‍ಐ ಜೊತೆ ಬಜರಂಗದಳವನ್ನು ಹೋಲಿಸಿ ಟೀಕಿಸಿದ್ದಾರೆ. ಇದು ಅವಹೇಳನಕಾರಿ ವಿಚಾರವಾಗಿದೆ ಎಂದು ಅರ್ಜಿದಾರರು ಆರೋಪಿಸಿ ನ್ಯಾಯಾಲಯದಲ್ಲಿ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

    ಹಿತೆಶ್ ಅವರ ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಮೂರ್ತಿ ರಮಣದೀಪ್ ಕೌರ್ ಖರ್ಗೆಯವರಿಗೆ ಸಮನ್ಸ್ ನೀಡಿದ್ದಾರೆ. ಇದನ್ನೂ ಓದಿ: ಹಿಂಡನ್‍ಬರ್ಗ್ ವರದಿ ವಿವಾದ – ತನಿಖೆಗೆ 3 ತಿಂಗಳ ಗಡುವು ನೀಡಿದ ಸುಪ್ರೀಂ

  • ಡಿಕೆಶಿ ಒಬ್ಬರೇ ಕೆಲಸ ಮಾಡಿದ್ದರೆ ನಾನ್ಯಾಕೆ ಪ್ರಚಾರದಲ್ಲಿ ತೊಡಗಬೇಕಿತ್ತು?- ಸಿಎಂ ಕುರ್ಚಿಗೆ ಸಿದ್ದು ವಾದ

    ಡಿಕೆಶಿ ಒಬ್ಬರೇ ಕೆಲಸ ಮಾಡಿದ್ದರೆ ನಾನ್ಯಾಕೆ ಪ್ರಚಾರದಲ್ಲಿ ತೊಡಗಬೇಕಿತ್ತು?- ಸಿಎಂ ಕುರ್ಚಿಗೆ ಸಿದ್ದು ವಾದ

    ಬೆಂಗಳೂರು: ಬಹುಮತಗಳಿಂದ ಗೆದ್ದು ಗದ್ದುಗೆ ಏರಲು ತಯಾರಾಗಿರುವ ಕಾಂಗ್ರೆಸ್‍ಗೆ (Congress) ಈಗ ಮುಖ್ಯಮಂತ್ರಿ ಕುರ್ಚಿ ತಲೆನೋವಾಗಿ ಪರಿಣಮಿಸಿದೆ. ಒಂದು ಕಡೆ ಡಿ.ಕೆ ಶಿವಕುಮಾರ್ (D.K Shivakumar)ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದರೆ ಇನ್ನೊಂದು ಕಡೆ ಸಿದ್ದರಾಮಯ್ಯ (Siddaramaiah) ಕುರ್ಚಿಗಾಗಿ ಪಟ್ಟು ಹಿಡಿದಿದ್ದಾರೆ.

    ಸಿದ್ದರಾಮಯ್ಯ ವಾದ ಏನು?
    ಎಲ್ಲಾ ಕೆಲಸವನ್ನು ಪಕ್ಷದ ಅಧ್ಯಕ್ಷರೆ ಮಾಡಿದ್ದಾರೆ ಎನ್ನುವುದಾದರೆ, ಅವರು ಒಬ್ಬರೇ ಪ್ರಚಾರ ಮಾಡಬಹುದಿತ್ತು. ನಾನು ಚುನಾವಣಾ (Election) ಪ್ರಚಾರಕ್ಕೆ ಹೋಗುವ ಅಗತ್ಯ ಇರಲಿಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ನನ್ನ ಮುಖ್ಯಮಂತ್ರಿ ಅವಧಿಯಲ್ಲಿ ಜನಪರವಾಗಿ ಮಾಡಲಾದ ಕೆಲಸಗಳು ಕೈ ಹಿಡಿದಿವೆ. ನನ್ನ ವರ್ಚಸ್ಸು ಜನರನ್ನು ಕಾಂಗ್ರೆಸ್ ಕಡೆಗೆ ತಿರುಗುವಂತೆ ಮಾಡಿದೆ ಎಂದು ಸಿದ್ದರಾಮಯ್ಯ ವಾದಿಸಿದ್ದಾರೆ. ಇದನ್ನೂ ಓದಿ: ನನ್ನ ಶ್ರಮಕ್ಕೆ ಫಲ ಕೇಳುತ್ತಿದ್ದೇನೆ ಅಷ್ಟೇ: ಸಿಎಂ ಹುದ್ದೆಗೆ ಡಿಕೆಶಿ ಪಟ್ಟು

    ಒಬ್ಬರ ನೇತೃತ್ವದಲ್ಲಿ ಚುನಾವಣೆ ನಡೆದಿಲ್ಲ. ನಾನು ಡಿ.ಕೆ ಶಿವಕುಮಾರ್ ಸೇರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದೇವೆ. ನನ್ನ ಕೈಲಾದ ಮಟ್ಟಿಗೆ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ನೀಡಿದ್ದೇನೆ. ಇಬ್ಬರ ಶ್ರಮದಿಂದ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಾನು ಪೂರ್ಣ 5 ವರ್ಷದ ಅವಧಿಗೆ ಸಿಎಂ ಸ್ಥಾನ ಕೇಳುತ್ತಿಲ್ಲ. ನಾನು ರಾಜಿ ಆಗಿದ್ದೇನೆ, ಡಿಕೆಶಿಯೂ ರಾಜಿ ಆಗಬೇಕು ಎಂದಿದ್ದಾರೆ.

    ಪಕ್ಷ ಘೋಷಿಸಿದ್ದ ಗ್ಯಾರಂಟಿಗಳು ಚುನಾವಣೆಯಲ್ಲಿ ಕೈ ಹಿಡಿದಿದೆ. ಬಡವರ ಪರವಾದ ಆ ಯೋಜನೆಗಳ ಜಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಈಡೇರಿಸುತ್ತಾರೆ ಎಂದು ಜನ ಮತ ಹಾಕಿದ್ದಾರೆ. ಅಹಿಂದ ವರ್ಗದ ಮತಗಳು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿದೆ. ನಮಗೆ ಸಿಕ್ಕ ಮತಗಳ ವಿವರವನ್ನು ಪರಿಶೀಲಿಸಿದರೆ ಈ ಬಗ್ಗೆ ಅರಿವಾಗುತ್ತದೆ. ಅಲ್ಲದೆ ಶಾಸಕರ ಹೆಚ್ಚಿನ ಬೆಂಬಲ ನನಗೆ ಇದೆ ಎನ್ನುವ ನಂಬಿಕೆ ಇದೆ. ಬೇಕಾದರೆ ಬಹಿರಂಗವಾಗಿ ಇನ್ನೊಮ್ಮೆ ಆಯ್ಕೆ ನಡೆಯಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಒಲಿಯುತ್ತಾ ಸಿಎಂ ಪಟ್ಟ? – ಕಾಲಜ್ಞಾನಿ ಗುರೂಜಿಯಿಂದ ಮುಹೂರ್ತ ಫಿಕ್ಸ್

  • ನನ್ನ ಶ್ರಮಕ್ಕೆ ಫಲ ಕೇಳುತ್ತಿದ್ದೇನೆ ಅಷ್ಟೇ: ಸಿಎಂ ಹುದ್ದೆಗೆ ಡಿಕೆಶಿ ಪಟ್ಟು

    ನನ್ನ ಶ್ರಮಕ್ಕೆ ಫಲ ಕೇಳುತ್ತಿದ್ದೇನೆ ಅಷ್ಟೇ: ಸಿಎಂ ಹುದ್ದೆಗೆ ಡಿಕೆಶಿ ಪಟ್ಟು

    ಬೆಂಗಳೂರು: ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್‍ನಲ್ಲಿ (Congress) ಈಗ ಮುಖ್ಯಮತ್ರಿ ಪಟ್ಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ನಡುವೆ ಬಿಗ್ ಫೈಟ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಬಳಿ ಸಿಎಂ ಹುದ್ದೆ ನನಗೆ ನೀಡುವಂತೆ ಡಿಕೆ ಶಿವಕುಮಾರ್ ಪಟ್ಟು ಹಿಡಿದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಡಿಕೆಶಿ ವಾದ ಏನು?
    ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನನ್ನ ಶ್ರಮ ಎಲ್ಲರಿಗೂ ಗೊತ್ತಿದೆ. ಅಲ್ಲದೆ ಪಕ್ಷದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಮುಖ್ಯಮಂತ್ರಿ ಮಾಡುವ ಪದ್ಧತಿಯಿದೆ. ಅದರಂತೆ ನನ್ನನ್ನು ಮುಖ್ಯಮಂತ್ರಿ ಮಾಡುವುದು ಸರಿಯಾದ ನಿರ್ಧಾರ. ಇದನ್ನೂ ಓದಿ: ಡಿಕೆಶಿಗೆ ಒಲಿಯುತ್ತಾ ಸಿಎಂ ಪಟ್ಟ? – ಕಾಲಜ್ಞಾನಿ ಗುರೂಜಿಯಿಂದ ಮುಹೂರ್ತ ಫಿಕ್ಸ್

    ಕಾಂಗ್ರೆಸ್ ಕಷ್ಟ ಅನುಭವಿಸುವಾಗ ಎಲ್ಲರೂ ಪಕ್ಷವನ್ನು ಕೈ ಬಿಟ್ಟು ನಡೆದರು. ಆಗ ನಾನು ಪಕ್ಷದ ನೇತೃತ್ವವನ್ನು ವಹಿಸಿಕೊಂಡು ಮುನ್ನೆಡೆಸಿಕೊಂಡು ಹೋಗಿದ್ದೇನೆ. ಅಲ್ಲದೇ ಭಾರತ್ ಜೋಡೋ (Bharat Jodo Yatra), ಮೇಕೆ ದಾಟು (Mekedatu) ಸೇರಿದಂತೆ ಪಕ್ಷದ ಹಲವು ಕಾರ್ಯಕ್ರಮಗಳಿಗೆ ನನ್ನ ಕೈಯಿಂದ ಹಣ ಹಾಕಿ ಯಶಸ್ವಿ ಮಾಡಿದ್ದೇನೆ.

    ಚುನಾವಣೆಯಲ್ಲಿ ಅಭ್ಯರ್ಥಿಗಳ ಆರ್ಥಿಕ ಸಂಕಷ್ಟ ನೋಡಿ ಏನು ಮಾಡಬೇಕೋ ಅದನ್ನ ಮಾಡಿದ್ದೇನೆ. ಐಟಿ, ಇಡಿ ಹಾಗೂ ಸಿಬಿಐ ಸಂಕಷ್ಟದ ನಡುವೆ ಪಕ್ಷದ ಅಭ್ಯರ್ಥಿಗಳಿಗೆ ಹಣ ಹೊಂದಿಸಿ ಕೊಡಲು ನನ್ನ ವೈಯುಕ್ತಿಕ ಆಸ್ತಿಗಳನ್ನು ಅಡವಿಟ್ಟಿದ್ದೇನೆ. ನಾನು ಅಷ್ಟೆಲ್ಲ ಶ್ರಮಪಟ್ಟು ವೈಯಕ್ತಿಕ ಹಿತಾಸಕ್ತಿಯನ್ನು ತೊರೆದಿದ್ದರ ಫಲವಾಗಿ ಪಕ್ಷ ಅಧಿಕಾರಕ್ಕೆ ಬಂದಿದೆ. ಈಗ ನನ್ನ ಶ್ರಮಕ್ಕೆ ಪ್ರತಿ ಫಲ ಕೇಳುತ್ತಿದ್ದೇನೆ ಅಷ್ಟೇ ಎಂದು ಡಿಕೆಶಿ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ನನ್ನನ್ನ ಬಿಜೆಪಿಯಿಂದ ಸಿ.ಟಿ.ರವಿ ಕಳಿಸಿದ್ರು, ಅವರು ಕ್ಷೇತ್ರವನ್ನೇ ಖಾಲಿ ಮಾಡಬೇಕಾಯ್ತು: ಎಂ.ಪಿ. ಕುಮಾರಸ್ವಾಮಿ

  • ಕೇವಲ ಒಂದು ಸಾಲಿನ ನಿರ್ಣಯ ಅಂಗೀಕರಿಸಿದ ಸಿಎಲ್‌ಪಿ ಸಭೆ

    ಕೇವಲ ಒಂದು ಸಾಲಿನ ನಿರ್ಣಯ ಅಂಗೀಕರಿಸಿದ ಸಿಎಲ್‌ಪಿ ಸಭೆ

    ಬೆಂಗಳೂರು: ಕರ್ನಾಟಕದ ಮುಂದಿನ ಮುಖ್ಯಮಂತ್ರಿ (Karnataka Chief Minister) ಆಯ್ಕೆಯ ಚೆಂಡು ಈಗ ಹೈಕಮಾಂಡ್‌ ಅಂಗಳಕ್ಕೆ ತಲುಪಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಿರ್ಧಾರ ಬಿಡಲಾಗಿದೆ.

    ಭರ್ಜರಿ ಬಹುಮತ ಪಡೆದ ಅಧಿಕಾರಕ್ಕೆ ಏರಿದ ಹಿನ್ನೆಲೆಯಲ್ಲಿ ಇಂದು ನಗರದ ಖಾಸಗಿ ಹೋಟೆಲಿನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಪಕ್ಷದ ಸಭೆ (CLP Meeting) ನಡೆಯಿತು.  ಇದನ್ನೂ ಓದಿ: 42 ಕಡೆ 5 ಸಾವಿರಕ್ಕೂ ಕಡಿಮೆ ಅಂತರದ ಗೆಲುವು – 2023, 2018ರಲ್ಲಿ ಯಾರಿಗೆ ಎಷ್ಟು ಮತ?

    ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಅಭಿನಂದನೆ ಸಲ್ಲಿಸಿ ಹೈಕಮಾಂಡ್ ನಿರ್ಧಾರಕ್ಕೆ ಸಿಎಂ ಆಯ್ಕೆಯನ್ನು ಶಾಸಕರು ಬಿಟ್ಟಿದ್ದಾರೆ. ಒಂದು ಒಂದು ಸಾಲಿನ ನಿರ್ಣಯ ಅಂಗೀಕರಿಸಿದ ಸಭೆ ಎಐಸಿಸಿ ಅಧ್ಯಕ್ಷರ ತೀರ್ಮಾನಕ್ಕೆ ಬಿಡಲಾಗಿದೆ.  ಇದನ್ನೂ ಓದಿ: ಸಿಎಂ ಕುರ್ಚಿ ಫೈಟ್‌; 50-50 ಪ್ಲಾನ್‌ ಡಿಕೆಶಿ ಮುಂದಿಡ್ತಾರಾ ಸಿದ್ದು?

    ಸಭೆ ನಡೆಯುವ ಮೊದಲೇ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್‌ (DK Shivakumar) ಬೆಂಬಲಿಗರು ಹೋಟೆಲ್‌ ಹೊರಗಡೆ ಆಗಮಿಸಿ ನಾಯಕರ ಪರ ಘೋಷಣೆ ಕೂಗಿದ್ದಾರೆ. ಇಬ್ಬರು ನಾಯಕರ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಸೇರಿದ ಹಿನ್ನೆಲೆಯಲ್ಲಿ ಭದ್ರತೆಗೆ ನೂರಕ್ಕೂ ಅಧಿಕ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.