Tag: Karnataka Department of Health

  • ಇಂದು 63 ಹೊಸ ಕೊರೊನಾ ಪ್ರಕರಣಗಳು-ಸೋಂಕಿತರ ಸಂಖ್ಯೆ 1458ಕ್ಕೇರಿಕೆ

    ಇಂದು 63 ಹೊಸ ಕೊರೊನಾ ಪ್ರಕರಣಗಳು-ಸೋಂಕಿತರ ಸಂಖ್ಯೆ 1458ಕ್ಕೇರಿಕೆ

    -ಆರೋಗ್ಯ ಇಲಾಖೆಯ ಅನುಮಾನದ ನಡೆ

    ಬೆಂಗಳೂರು: ಇಂದು ರಾಜ್ಯದಲ್ಲಿ 63 ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 1458ಕ್ಕೆ ಏರಿಕೆಯಾಗಿದೆ.

    ಇಷ್ಟು ದಿನ ಸೋಂಕಿತರ ವಿವರವನ್ನು ಪ್ರಕಟಿಸುತ್ತಿದ್ದ ಆರೋಗ್ಯ ಇಲಾಖೆ ಇಂದು ಕೇವಲ ಒಟ್ಟು ಸಂಖ್ಯೆಯನ್ನು ಬಹಿರಂಗಪಡಿಸಿದೆ. ಇವತ್ತು ಕೊರೊನಾದಿಂದ 10 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1458 ಸೋಂಕಿರ ಪೈಕಿ ಇದುವರೆಗೂ 553 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 864 ಸಕ್ರಿಯ ಕೊರೊನಾ ಪ್ರಕರಣಗಳಿವೆ.

    ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು 4, ಮಂಡ್ಯ 8, ಕಲಬುರಗಿ 7, ಬೀದರ್ 10, ಉತ್ತರ ಕನ್ನಡ 1, ಹಾಸನ 21, ತುಮಕೂರು 4, ಯಾದಗಿರಿ ಒಂದು ಪ್ರಕರಣಗಳು ಬೆಳಕಿಗೆ ಬಂದಿದೆ. ಸೋಂಕಿತರಿಗೆ ಕೊರೊನಾ ಸೋಂಕು ಹೇಗೆ ತಗುಲಿತು ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಮುಚ್ಚಿಟ್ಟಿದೆ. ಬಹುತೇಕ ಸೋಂಕಿತರು ಮುಂಬೈ ಮೂಲದವರಾಗಿದ್ದು, ಸರ್ಕಾರ ತನ್ನ ತಪ್ಪನ್ನು ಮರೆ ಮಾಡಲು ಈ ನಿರ್ಧಾರ ಕೈಗೊಂಡಿದೆಯಾ ಅನುಮಾನಗಳು ಮೂಡಿವೆ.