Tag: karnataka covid19 1

  • 1,152 ಪಾಸಿಟಿವ್‌, 15 ಸಾವು – 2,147 ಡಿಸ್ಚಾರ್ಜ್‌

    1,152 ಪಾಸಿಟಿವ್‌, 15 ಸಾವು – 2,147 ಡಿಸ್ಚಾರ್ಜ್‌

    ಬೆಂಗಳೂರು: ಇಂದು ಕರ್ನಾಟಕದಲ್ಲಿ 1,152 ಮಂದಿಗೆ ಕೊರೊನಾ ಬಂದಿದ್ದು, ಆಸ್ಪತ್ರೆಯಿಂದ 2,147 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ. ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ.

    ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,08,275ಕ್ಕೆ ಏರಿಕೆ ಆಗಿದೆ. ಈ ಪೈಕಿ 8,81,882 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 14,370 ಸಕ್ರಿಯ ಪ್ರಕರಣಗಳಿವೆ.

    ಇಲ್ಲಿಯವರೆಗೆ ಒಟ್ಟು 12,004 ಮಂದಿ ಕೊರೊನಾಗೆ ಬಲಿಯಾಗಿದ್ದು, ಸದ್ಯ 223 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು 12,900 ಆಂಟಿಜನ್‌ ಟೆಸ್ಟ್‌, 1,02,250 ಆರ್‌ಟಿ ಪಿಸಿಆರ್‌ ಸೇರಿದಂತೆ 1,15,150 ಪರೀಕ್ಷೆ ಮಾಡಲಾಗಿದೆ. ಒಟ್ಟು ರಾಜ್ಯದಲ್ಲಿ ಇಲ್ಲಿಯವರೆಗೆ 1,29,37,540 ಕೊರೊನಾ ಪರೀಕ್ಷೆ ಮಾಡಲಾಗಿದೆ.

    ಎಂದಿನಂತೆ ಬೆಂಗಳೂರು ನಗರದಲ್ಲಿ 586 ಮಂದಿಗೆ ಸೋಂಕು ಬಂದಿದ್ದು 10 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಮೈಸೂರು 66, ಕಲಬುರಗಿ 50, ದಕ್ಷಿಣ ಕನ್ನಡದಲ್ಲಿ 34 ಮಂದಿಗೆ ಸೋಂಕು ಬಂದಿದೆ.

    ಐಸಿಯುನಲ್ಲಿಒಟ್ಟು 223 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಬೆಂಗಳೂರು ನಗರದಲ್ಲಿ 104, ತುಮಕೂರು 12, ಕಲಬುರಗಿಯಲ್ಲಿ 16 ಮಂದಿ ಇದ್ದಾರೆ.