Tag: Karnataka Covid Guidelines

  • ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಜನರು ಕೋವಿಡ್ ಗಂಭೀರವಾಗಿ ತೆಗೆದುಕೊಳ್ಳದಿದ್ರೆ ಸಾವಿನ ಸಂಖ್ಯೆ ತಡೆಯೋಕಾಗಲ್ಲ – ಆರಗ ಜ್ಞಾನೇಂದ್ರ

    ಬೆಳಗಾವಿ: ಕೋವಿಡ್-19 (Covid 19) ಬಗ್ಗೆ ಜನ ಗಂಭೀರವಾಗಿ ತೆಗೆದುಕೊಳ್ಳದೇ ಇದ್ರೆ, ಸಾವಿನ ಸಂಖ್ಯೆ ತಡೆಯೋಕಾಗಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಆತಂಕಪಟ್ಟಿದ್ದಾರೆ.

    ದೇಶದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳದ ಹಿನ್ನೆಲೆ ಬೆಳಗಾವಿಯಲ್ಲಿಂದು (Belagavi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಅನ್ನು ಜನ ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ಸಾವಿನ ಸಂಖ್ಯೆ ತಡೆಯಲು ಆಗಲ್ಲ. ಯಾರೂ ಆತಂಕ ಪಡಬಾರದು. ಹಾಗೆಯೇ ಉಡಾಫೆ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.

    ಈ ಹಿಂದೆ ಪೊಲೀಸ್ ಇಲಾಖೆಯಲ್ಲೂ (Police Department) ಬಹಳ ಜನ ಮೃತಪಟ್ಟರು. ಈ ಬಾರಿ ಕೂಡಾ ಕೋವಿಡ್ ವಿರುದ್ಧ ಹೋರಾಟ ಮಾಡ್ತಾರೆ. ಎಲ್ಲ ರೀತಿಯಲ್ಲೂ ಸೂಚನೆ ಕೊಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯಾವತ್ತೂ ದನ ಕಾಯದೇ ಇರೋರು, ಸಗಣಿ ಎತ್ತದವರು ಗೋವು ರಕ್ಷಣೆ ಅಂತಾರೆ – ಸಿದ್ದು ಲೇವಡಿ

    ಪಿಎಸ್‌ಐ (PSI) ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಿ, ಪಿಎಸ್‌ಐ ಪರೀಕ್ಷೆ ಬರೆದು ಪಾಸ್ ಆದ ವಿದ್ಯಾರ್ಥಿಗಳ (Students) ಮನವಿ ಸ್ವೀಕರಿಸಿದ್ದೇನೆ. ಆದರೆ ಈ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಹಂತದಲ್ಲಿ ಗೃಹ ಸಚಿವನಾಗಿ ನನಗೆ ನಿರ್ಧಾರ ಹೇಳಲು ಕಷ್ಟ ಆಗುತ್ತೆ. ಸಿಒಡಿ ತನಿಖಾ (COD Investigation) ವರದಿ ಬಂದ ಮೇಲೆ ನಮ್ಮ ನಿಲುವು ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾವೇ ಚೀನಾದ ವುಹಾನ್‌ಗೆ ಹೋಗಿ ವೈರಸ್ ಬಿಟ್ಟಿದ್ವಾ – ಕಾಂಗ್ರೆಸ್‌ಗೆ ಸುಧಾಕರ್ ಪ್ರಶ್ನೆ

    ಇದೇ ವೇಳೆ ಲವ್ ಜಿಹಾದ್ (Love Jihad) ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮತಾಂತರ ನಿಷೇಧ ಕಾಯ್ದೆಯಲ್ಲೇ ಲವ್ ಜಿಹಾದ್‌ಗೆ ಸಂಬಂಧಿಸಿದ ಕಾನೂನು ಅಂಶಗಳು ಅಡಕವಾಗಿದೆ. ಆದ್ದರಿಂದ ಏಕಾಏಕಿ ಯಾರು ಯಾರನ್ನೋ ಮದುವೆಯಾಗಲು ಆಗುವುದಿಲ್ಲ. ಸದ್ಯ ರಾಜ್ಯದಲ್ಲಿ ಎರಡು ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಈಗಿನ ಪರಿಸ್ಥಿತಿಯಲ್ಲಿ ಟಾಸ್ಕ್ ಫೋರ್ಸ್ ಅಗತ್ಯವಿಲ್ಲ. ಏಕೆಂದರೆ ಉತ್ತರ ಪ್ರದೇಶದ ಮಾದರಿ ಬೇರೆ, ನಮ್ಮ ರಾಜ್ಯದ ಮಾದರಿಯೇ ಬೇರೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾವೇ ಚೀನಾದ ವುಹಾನ್‌ಗೆ ಹೋಗಿ ವೈರಸ್ ಬಿಟ್ಟಿದ್ವಾ – ಕಾಂಗ್ರೆಸ್‌ಗೆ ಸುಧಾಕರ್ ಪ್ರಶ್ನೆ

    ನಾವೇ ಚೀನಾದ ವುಹಾನ್‌ಗೆ ಹೋಗಿ ವೈರಸ್ ಬಿಟ್ಟಿದ್ವಾ – ಕಾಂಗ್ರೆಸ್‌ಗೆ ಸುಧಾಕರ್ ಪ್ರಶ್ನೆ

    ಚಿಕ್ಕಬಳ್ಳಾಪುರ: ಇಡೀ ವಿಶ್ವದಲ್ಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ರೆ ಕಾಂಗ್ರೆಸ್‌ನವರು ನಾವೇ ಚೀನಾದ (China) ವುಹಾನ್‌ಗೆ ಹೋಗಿ ಕೊರೊನಾ ವೈರಸ್ (Corona Virus) ಬಿಟ್ಟಂತೆ ಮಾತನಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ (K Sudhakar) ಕಿಡಿಕಾರಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ಕೋವಿಡ್‌ನಿಂದ ಏನಾಗ್ತಿದೆ ಅಂತ ಜನಸಾಮಾನ್ಯರಿಗೆ ಗೊತ್ತಾಗುತ್ತಿದೆ. ಆದ್ರೆ ಕಾಂಗ್ರೆಸ್ (Congress) ನಾಯಕರಿಗೆ ಏಕೆ ಗೊತ್ತಾಗುತ್ತಿಲ್ಲ? ಯಾವುದೇ ಸರ್ಕಾರ ಇರಲಿ, ಜನರ ರಕ್ಷಣೆಗೆ ಅದ್ಯತೆ ನೀಡಬೇಕು. ಸಹಕಾರ ಕೊಡದಿದ್ರೂ ಪರವಾಗಿಲ್ಲ ಸುಮ್ಮನಾದರೂ ಇರಿ. ಆದರೆ ಜನರ ಆರೋಗ್ಯದ ಜೊತೆ ಚೆಲ್ಲಾಟ ಆಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಇನ್ನೂ ಭಾರತ್ ಬಯೋಟೆಕ್‌ನ ನಸೆಲ್ ಸ್ಪೈ (Incovacc) ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ನೆಜಲ್ ಸ್ಪೈ ವ್ಯಾಕ್ಸಿನೇಷನ್ ನಿಂದಾಗಿ ಮೂಗಿನ ಮೂಲಕ ಡ್ರಾಪ್ಸ್ ಹಾಕಿಕೊಳ್ಳಲು ಅವಕಾಶ ಆಗಲಿದೆ. ಇದು ಲಸಿಕೆ (Vaccine) ನೀಡುವ ವೇಗವನ್ನು ಹೆಚ್ಚಿಸುತ್ತದೆ. ಇದು ಕೂಡ ಬಹಳ ಪ್ರಭಾವಿತವಾಗಿ ಕೆಲಸ ಮಾಡಲಿದೆ ಅಂತಾ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಸ್, ಸಿನಿಮಾ ಥಿಯೇಟರ್, ಪಬ್ ಬಾರ್‌ಗಳಲ್ಲೂ ಮಾಸ್ಕ್ ಅಗತ್ಯ – ರಾಜ್ಯ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?

    ರಾಜ್ಯದಲ್ಲಿ ಕೋವಿಡ್ ಲಸಿಕೆಗಳಿಗೆ ಯಾವುದೇ ಕೊರತೆಯಿಲ್ಲ. ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಸ್ಟಾಕ್ ಇದೆ. ಇನ್ನೂ ನಸೆಲ್ ಸ್ಪೈ ಕೋವ್ಯಾಕ್ಸಿನ್, ಕೋವಿಶೀಲ್ಡ್, ಕಾರ್ಬೆವ್ಯಾಕ್ಸ್‌ಗೆ ಕೇಂದ್ರಕ್ಕೆ ಮನವಿ ಮಾಡಲಿದ್ದೇನೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಪರೀಕ್ಷೆ ಹೆಚ್ಚಿಸಿ.. ಎಲ್ಲರೂ ಮಾಸ್ಕ್ ಧರಿಸಿ – ಮೋದಿ ಸಲಹೆ

    Live Tv
    [brid partner=56869869 player=32851 video=960834 autoplay=true]

  • ಬಸ್, ಸಿನಿಮಾ ಥಿಯೇಟರ್, ಪಬ್ ಬಾರ್‌ಗಳಲ್ಲೂ ಮಾಸ್ಕ್ ಅಗತ್ಯ – ರಾಜ್ಯ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?

    ಬಸ್, ಸಿನಿಮಾ ಥಿಯೇಟರ್, ಪಬ್ ಬಾರ್‌ಗಳಲ್ಲೂ ಮಾಸ್ಕ್ ಅಗತ್ಯ – ರಾಜ್ಯ ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ನಲ್ಲಿ ಏನೇನಿದೆ?

    ಬೆಂಗಳೂರು: ಚೀನಾ (China) ಸೇರಿ ಹಲವು ದೇಶಗಳಲ್ಲಿ ಕೋವಿಡ್ (Covid) ಆರ್ಭಟ ಜೋರಾಗಿದ್ದು, ಕೇಂದ್ರ ಸರ್ಕಾರದ ಬೆನ್ನಲ್ಲೇ ರಾಜ್ಯಗಳೂ ಅಲರ್ಟ್ ಆಗಿವೆ. ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿರೋ ಬೆನ್ನಲ್ಲೇ, ಇತ್ತ ರಾಜ್ಯ ಸರ್ಕಾರ ಕೂಡ ಸಿಎಂ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಸಭೆ ಸೇರಿ ಕೆಲವೊಂದು ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದು, ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನ (Karnataka Covid Guidelines) ಬಿಡುಗಡೆ ಮಾಡಿದೆ.

    ಹೊಸ ಮಾರ್ಗಸೂಚಿಯಲ್ಲಿ ಏನಿದೆ?
    ಪಬ್, ಬಾರ್, ರೆಸ್ಟೋರೆಂಟ್, ಸಿನಿಮಾ ಹಾಲ್‌ಗಳು, ಶಾಪಿಂಗ್ ಮಾಲ್, ಕಚೇರಿಗಳು ಸೇರಿದಂತೆ ಬಸ್, ರೈಲು, ಮೆಟ್ರೋ, ವಿಮಾನಯಾನ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಅಗತ್ಯವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ವೃದ್ಧರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಒಳಾಂಗಣದಲ್ಲಿದ್ದಾಗಲೂ ಮಾಸ್ಕ್ ಧರಿಸುವುದು ಉತ್ತಮ. ಇದನ್ನೂ ಓದಿ: ಕೋವಿಡ್ ಪರೀಕ್ಷೆ ಹೆಚ್ಚಿಸಿ.. ಎಲ್ಲರೂ ಮಾಸ್ಕ್ ಧರಿಸಿ – ಮೋದಿ ಸಲಹೆ

    ಅರ್ಹರೆಲ್ಲರೂ ಕೋವಿಡ್-19 ಲಸಿಕೆಯ ಬೂಸ್ಟರ್ ಡೋಸ್ ಅನ್ನು ಶೀಘ್ರವಾಗಿ ಪಡೆದುಕೊಳ್ಳಬೇಕು. ಉಸಿರಾಟದ ಸಮಸ್ಯೆ ಹಾಗೂ ಕೋವಿಡ್-19 ಸೋಂಕಿನ ಲಕ್ಷಣಗಳನ್ನು ಹೊಂದಿರುವವರು, ಸ್ವಯಂ ಪ್ರತ್ಯೇಕವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಫಲಿತಾಂಶದ ಆಧಾರದ ಮೇಲೆ ಚಾಲ್ತಿಯಲ್ಲಿರುವ ಪ್ರಮಾಣೀಕೃತ ಶಿಷ್ಠಾಚಾರದ ಅನ್ವಯ ಕ್ರಮಗಳನ್ನು ಪಾಲಿಸುವುದು.

    ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಮಧ್ಯಮ ಪ್ರಮಾಣದ ವ್ಯಾಯಾಮ, ಉಸಿರಾಟದ ವ್ಯಾಯಾಮಗಳು ಹಾಗೂ ಧ್ಯಾನವನ್ನು ಮಾಡಬಹುದಾಗಿದೆ. ಮುಂದುವರೆದು, ಸಭೆ ಹಾಗೂ ಸಮಾರಂಭಗಳ ಆಯೋಜಕರು ಈ ಕೆಳಗಿನ ಮಾರ್ಗಸೂಚಿಯನ್ನು ಪಾಲಿಸುವಂತೆ ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಪ್ರೇಮಿಗಳ ಸ್ವರ್ಗ ತಾಜ್‌ಮಹಲ್ ಭೇಟಿಗೂ ಕೋವಿಡ್ ಪರೀಕ್ಷೆ ಕಡ್ಡಾಯ

    ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆದಷ್ಟೂ ಹೊರಾಂಗಣದಲ್ಲಿ ಮತ್ತು ಒಳ್ಳೆಯ ಗಾಳಿ ಬೆಳಕಿನ ವ್ಯವಸ್ಥೆ ಇರುವ ಸ್ಥಳಗಳಲ್ಲಿ, ಹಗಲು ಹೊತ್ತಿನಲ್ಲಿ ನಡೆಸುವುದರಿಂದ ಆರೋಗ್ಯದ ಮೇಲೆ ಮುಂಜಾನೆ ಹಾಗೂ ಸಂಜೆಯ ಶೀತ ಗಾಳಿಯ ಪರಿಣಾಮವನ್ನು ತಡೆಗಟ್ಟಬಹುದು. ಒಳಾಂಗಣ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಲಾಗಿದ್ದು, ದೈಹಿಕ ಅಂತರವನ್ನು ಪಾಲಿಸುವುದು ಅಗತ್ಯವಾಗಿದೆ. ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು, ವಿಶೇಷವಾಗಿ ಒಳಾಂಗಣಗಳಲ್ಲಿ ಗುಂಪುಗೂಡುವಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]