Tag: Karnataka CM

  • ವಿಜ್ಞಾನ ಓದಿಯೂ ಮೌಢ್ಯ ನಂಬಿದರೆ ವಿದ್ಯಾರ್ಥಿಗಳು ಓದಿದ್ದೇ ದಂಡ: ಸಿದ್ದರಾಮಯ್ಯ

    ವಿಜ್ಞಾನ ಓದಿಯೂ ಮೌಢ್ಯ ನಂಬಿದರೆ ವಿದ್ಯಾರ್ಥಿಗಳು ಓದಿದ್ದೇ ದಂಡ: ಸಿದ್ದರಾಮಯ್ಯ

    ಬೆಂಗಳೂರು: ವಿಜ್ಞಾನ ಓದಿಯೂ ಮೌಢ್ಯ ನಂಬುತ್ತೀರಿ ಅಂದರೆ ವಿದ್ಯಾರ್ಥಿಗಳು ಓದಿದ್ದೇ ದಂಡ. ಜಾತಿ ತಾರತಮ್ಯದ ಸಮಾಜದಲ್ಲಿ ಚಲನೆ ಇಲ್ಲ. ಚಲನೆ ಸಿಗಬೇಕಾದರೆ ವೈಜ್ಞಾನಿಕ ಮನೋಭಾವ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ (CM Siddaramaiaha) ಹೇಳಿದರು.

    ನೃಪತುಂಗ ವಿಶ್ವವಿದ್ಯಾಲಯದ (Nrupathunga University) ಆವರಣದಲ್ಲಿ ನಿರ್ಮಾಣ ಆಗಿದ್ದ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಅವರು, ವಿದ್ಯೆ ಮತ್ತು ಪ್ರತಿಭೆ ಯಾರ ಅಪ್ಪನ ಮನೆ ಸ್ವತ್ತಲ್ಲ. ಅವಕಾಶ ಸಿಗಬೇಕು ಅಷ್ಟೆ. ರಾಮಾಯಣ ಬರೆದ ವಾಲ್ಮೀಕಿ ಬೇಡರ ಜಾತಿಯವರಾದರೆ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ಹೀಗಾಗಿ ವಿದ್ಯೆ, ಪ್ರತಿಭೆ ಯಾರ ಸ್ವತ್ತೂ ಅಲ್ಲ. ಅವಕಾಶಗಳು ಬೇಕು ಅಷ್ಟೆ. ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಂಡರೆ ನಿಮ್ಮ ಹಾಗೂ ಸಮಾಜದ ಪ್ರಗತಿ ಸಾಧ್ಯ. ಈ ದಿಕ್ಕಿನಲ್ಲಿ ವಿಜ್ಞಾನದ ವಿದ್ಯಾರ್ಥಿಗಳು ಸಮಾಜವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.ಇದನ್ನೂ ಓದಿ: ಆರ್‌ಎಸ್‌ಎಸ್‌ನವರು ಅತಿರೇಕ ಮಾಡೋದು ಬಿಡಬೇಕು: ಬೇಳೂರು ಗೋಪಾಲಕೃಷ್ಣ

    ವಿಜ್ಞಾನದ ಓದು ಮತ್ತು ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು ಅಪಾಯದ ಸಂಗತಿ. ವೈಜ್ಞಾನಿಕ ಮನೋಭಾವ ಮತ್ತು ವಿಜ್ಞಾನದ ಶಿಕ್ಷಣ ಸಮಾಜದ ಮತ್ತು ದೇಶದ ಪ್ರಗತಿಗೆ ಅತ್ಯಗತ್ಯ. ವಿಜ್ಞಾನ ಓದಿದವರೂ ಮೂಢನಂಬಿಕೆ ಮತ್ತು ಕಂದಾಚಾರಕ್ಕೆ ಗಂಟು ಬೀಳುವುದು ಶಿಕ್ಷಣ ಕಲಿಕೆಯಲ್ಲಿನ ಕೊರತೆಯಾಗಿದೆ. ಬಹಳ ಹಿಂದೆಯೇ ಬಸವಾದಿ ಶರಣರು ಮೌಢ್ಯ, ಕಂದಾಚಾರಗಳ ವಿರುದ್ಧ ಕರೆ ನೀಡಿದರು. ಆದರೆ ಇವತ್ತಿಗೂ ಮೌಢ್ಯ ಹೋಗಿಲ್ಲ. ಏಕೆಂದರೆ ನಮ್ಮದು ಜಾತಿ ತಾರತಮ್ಯದ ಸಮಾಜ ಆಗಿರುವುದರಿಂದ ಇದಕ್ಕೆ ಚಲನೆ ಇಲ್ಲ. ಪಟ್ಟಭದ್ರರು ತಾರತಮ್ಯವನ್ನು ಗಟ್ಟಿಗೊಳಿಸುವ ಸಲುವಾಗಿಯೇ ಮೌಢ್ಯವನ್ನು ಬಿತ್ತುತ್ತಾರೆ. ನಾನು ಮೊದಲ ಬಾರಿ ಮುಖ್ಯಮಂತ್ರಿ ಆದಾಗ “ಮೌಢ್ಯ ನಿಷೇಧ ಕಾಯ್ದೆ” ಜಾರಿಗೆ ತರಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅಷ್ಟರಮಟ್ಟಿಗೆ ಮೌಢ್ಯ ಮತ್ತು ಮೌಢ್ಯ ಹಂಚುವ ಪಟ್ಟಭದ್ರರು ಆಳವಾಗಿ ಬೇರು ಬಿಟ್ಟಿದ್ದಾರೆ ಎಂದರು.

    ವಿಜ್ಞಾನ ಓದಿದವರಿಗೆಲ್ಲಾ ವೈಜ್ಞಾನಿಕ ಮನೋಭಾವ ಇಲ್ಲದಿರುವುದು ದುರಂತ. ವಿಜ್ಞಾನ ಓದಿಯೂ ಹಣೆಬರಹ ಮತ್ತು ಕರ್ಮ ಸಿದ್ಧಾಂತ, ಗ್ರಹಚಾರಗಳನ್ನೆಲ್ಲಾ ನಂಬುತ್ತಾರೆ ಎಂದರೆ ಇವರು ವಿಜ್ಞಾನ ಓದಿದ್ದೇ ದಂಡ ತಾನೇ ಎಂದು ಪ್ರಶ್ನಿಸಿದರು. ದೇಶದ ಪ್ರಧಾನಿ ಆಗಿದ್ದ ಜವಾಹರಲಾಲ್ ನೆಹರು ಅವರು ದೇಶದ ಯುವ ಜನತೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲಿ ಎನ್ನುವ ದೂರದೃಷ್ಟಿ ಹೊಂದಿದ್ದರು. ಇದಕ್ಕೆ ಅಗತ್ಯವಾದ ಶೈಕ್ಷಣಿಕ ಸಾಧನೆಗಳಿಗೆ ಕಾರಣರಾಗಿದ್ದರು ಎಂದು ತಿಳಿಸಿದರು.

    52 ಕೋಟಿ ರೂ. ಅಂದಾಜಿನಲ್ಲಿ 7 ಅಂತಸ್ತಿನ ನೂತನ ಕಟ್ಟಡ ಉದ್ಘಾಟಿಸಲಾಗಿದೆ. ಎಂಟನೇ ಅಂತಸ್ತನ್ನು ನಿರ್ಮಿಸಲು 8 ಕೋಟಿ ರೂ. ಬೇಡಿಕೆ ಸಲ್ಲಿಸಿದ್ದು, ಸರ್ಕಾರ ಕೊಡಲು ಸಿದ್ಧವಿದೆ ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಎಂ.ಸಿ.ಸುಧಾಕರ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.ಇದನ್ನೂ ಓದಿ: ಯುಪಿ, ಮಹಾರಾಷ್ಟ್ರದಲ್ಲಿ ಟೀಕೆ ಟಿಪ್ಪಣಿ ಮಾಡಿದ್ರೆ ಜೈಲಿಗೆ ಹೋಗ್ತಿದ್ರು – ಕಿರಣ್ ಮಜುಂದಾರ್ ಷಾ ಟ್ವೀಟ್‌ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

  • ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ರಿಲೀಸ್ – ಸಿಎಂ ಸಿದ್ದರಾಮಯ್ಯಗೆ ಮೂರನೇ ಸ್ಥಾನ

    ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ರಿಲೀಸ್ – ಸಿಎಂ ಸಿದ್ದರಾಮಯ್ಯಗೆ ಮೂರನೇ ಸ್ಥಾನ

    -ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಬಿಡುಗಡೆ

    ನವದೆಹಲಿ: ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮೂರನೇ ಸ್ಥಾನದಲ್ಲಿದ್ದಾರೆ.

    ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms) ಬಿಡುಗಡೆ ಮಾಡಿದ ಪಟ್ಟಿಯಲ್ಲಿ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪೈಕಿ ಸಿಎಂ ಸಿದ್ದರಾಮಯ್ಯ ಅವರು 51 ಕೋಟಿ ರೂ. ಆಸ್ತಿ ಹೊಂದುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಗಣೇಶ ಹಬ್ಬ ಮುಗಿಯೋ ತನಕ ರೇಣುಕಾಚಾರ್ಯರನ್ನ ಜೈಲಿಗೆ ಹಾಕಿ – ಮಾಜಿ ಶಾಸಕ ರಾಮಪ್ಪ ಆಗ್ರಹ

    ದೇಶಾದ್ಯಂತ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ಪ್ರಸ್ತುತ ಮುಖ್ಯಮಂತ್ರಿಗಳು ಸಲ್ಲಿಸಿರುವ ಪ್ರಮಾಣಪತ್ರಗಳನ್ನು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿ ಈ ಮಾಹಿತಿಯನ್ನು ನೀಡಿದೆ. ವಿಶ್ಲೇಷಣೆಯ ಪ್ರಕಾರ, ಮಣಿಪುರವನ್ನು ಹೊರತುಪಡಿಸಿ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 30 ಮುಖ್ಯಮಂತ್ರಿಗಳ ಸರಾಸರಿ ಆಸ್ತಿ 54.42 ಕೋಟಿ ರೂ.ಗಳಷ್ಟಿದೆ ಎಂದು ತಿಳಿದುಬಂದಿದೆ.

    30 ಸಿಎಂಗಳ ಒಟ್ಟು ಆಸ್ತಿ 1,632 ಕೋಟಿ ರೂ.ಗಳಷ್ಟಿದ್ದು, ಆಂಧ್ರಪ್ರದೇಶದ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರು ಒಟ್ಟು 931 ಕೋಟಿ ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ. ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಅವರು 332 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 51 ಕೋಟಿ ರೂ. ಮೌಲ್ಯದ ಆಸ್ತಿ ಹೊಂದುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 1.18 ಕೋಟಿ ರೂ., ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 55.24 ಲಕ್ಷ ರೂ. ಗೂ ಹೆಚ್ಚು ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15.38 ಲಕ್ಷ ರೂ.ಗೂ ಹೆಚ್ಚು ಆಸ್ತಿ ಹೊಂದುವ ಮೂಲಕ ಅತಿ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳಾಗಿದ್ದಾರೆ.

    ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (1.46 ಕೋಟಿ ರೂ.), ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (1.54 ಕೋಟಿ ರೂ.), ಬಿಹಾರದ ನಿತೀಶ್ ಕುಮಾರ್ (1.64 ಕೋಟಿ ರೂ.), ಪಂಜಾಬ್‌ನ ಭಗವಂತ್ ಮಾನ್ (1.97 ಕೋಟಿ ರೂ.), ಒಡಿಶಾದ ಮೋಹನ್ ಚರಣ್ ಮಾಝಿ (1.97 ಕೋಟಿ ರೂ.) ಮತ್ತು ಛತ್ತೀಸ್‌ಗಢದ ವಿಷ್ಣು ದೇವ್ ಸಾಯಿ (3.80 ಕೋಟಿ ರೂ.) ಕಡಿಮೆ ಆಸ್ತಿ ಹೊಂದಿರುವ ಇತರ ಸಿಎಂಗಳಾಗಿದ್ದಾರೆ.ಇದನ್ನೂ ಓದಿ: ಮಾಸ್ಕ್‌ಮ್ಯಾನ್‌ ಚಿನ್ನಯ್ಯನ ಅಣ್ಣ ಪೊಲೀಸರ ವಶಕ್ಕೆ

  • ಸಿದ್ದು ನಂತರ ರಾಜ್ಯದಲ್ಲಿ ಅಂತಹ ನಾಯಕನಿದ್ರೆ ಅದು ಸತೀಶ್ ಜಾರಕಿಹೊಳಿ ಮಾತ್ರ: ಹೆಚ್.ಡಿ.ತಮ್ಮಯ್ಯ

    ಸಿದ್ದು ನಂತರ ರಾಜ್ಯದಲ್ಲಿ ಅಂತಹ ನಾಯಕನಿದ್ರೆ ಅದು ಸತೀಶ್ ಜಾರಕಿಹೊಳಿ ಮಾತ್ರ: ಹೆಚ್.ಡಿ.ತಮ್ಮಯ್ಯ

    ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ನಂತರ ರಾಜ್ಯ ಕಾಂಗ್ರೆಸ್ (Congress) ಪಕ್ಷದಲ್ಲಿ ಅಂತಹ ನಾಯಕರು ಯಾರಾದರೂ ಇದ್ದರೆ ಅದು ಸತೀಶ್ ಜಾರಕಿಹೊಳಿಯವರು ಮಾತ್ರ ಎಂದು ಚಿಕ್ಕಮಗಳೂರು ಕಾಂಗ್ರೆಸ್ ಶಾಸಕ ಹೆಚ್.ಡಿ.ತಮ್ಮಯ್ಯ, (HD Tammaiah) ಸತೀಶ್ ಜಾರಕಿಹೊಳಿ (Satish Jarkoholi) ಪರ ಬ್ಯಾಟಿಂಗ್ ಮಾಡಿದರು.

    ಜಿಲ್ಲೆಯ ತರೀಕೆರೆ (Tarikere) ತಾಲ್ಲೂಕಿನಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದರು. ರಾಜ್ಯದಲ್ಲಿ ದಲಿತ ಸಿಎಂ ಕೂಗು, ಸಿಎಂ ಬದಲಾವಣೆ, ರಾಜೀನಾಮೆ, ನಾಯಕರ ಪ್ರತ್ಯೇಕ ಸಭೆ, ಡಿನ್ನರ್, ಮೀಟಿಂಗ್ ಹೆಚ್ಚಾಗುತ್ತಿರುವ ಹಿನ್ನೆಲೆ ಬಹಿರಂಗ ವೇದಿಕೆಯಲ್ಲಿ ಸತೀಶ್ ಜಾರಕಿಹೊಳಿ ಪರ ಹೇಳಿಕೆ ನೀಡಿದರು.ಇದನ್ನೂ ಓದಿ: ಮೆಟ್ರೋ ರೈಲು ಪ್ರಯಾಣ ದರ ಹೆಚ್ಚಿಸಬೇಡಿ: ಸಿಎಂಗೆ ಪತ್ರ ಬರೆದ ಮುಖ್ಯಮಂತ್ರಿ ಚಂದ್ರು

    ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿದರೆ ಸತೀಶ್ ಜಾರಕಿಹೊಳಿಯವರೇ ಭವಿಷ್ಯದ ನಾಯಕರು. ಸತೀಶ್ ಜಾರಕಿಹೊಳಿಯವರ ರೀತಿ ಸರಳ-ಸಜ್ಜನ ಮನುಷ್ಯ ಮತ್ತೊಬ್ಬರಿಲ್ಲ. ಸಿದ್ದು ನಂತರ ರಾಜ್ಯ ಕಾಂಗ್ರೆಸ್ (Congress) ಪಕ್ಷದಲ್ಲಿ ಅಂತಹ ನಾಯಕನಿದ್ದರೆ ಅದು ಸತೀಶ್ ಜಾರಕಿಹೊಳಿಯವರೇ ಎಂದರು.

    ಒಂದು ಕಡೆ ಡಿಕೆಶಿ ಸಿಎಂ ಕನಸು ಕಾಣುತ್ತಿದ್ದಾರೆ. ಇನ್ನೊಂದು ಕಡೆ ಸತೀಶ್ ಜಾರಕಿಹೊಳಿಯವರ ಹೆಸರು ಮುನ್ನೆಲೆಯಲ್ಲಿದೆ. ಈ ಮಧ್ಯೆ ತೆರೆಮರೆಯಲ್ಲಿ ಖರ್ಗೆ-ಪರಮೇಶ್ವರ್ ಕಸರತ್ತಿನ ವದಂತಿಗಳು ಜೋರಾಗಿವೆ.

    ಸಿಎಂ ರಾಜೀನಾಮೆ ನೀಡುತ್ತಾರೆ ಎನ್ನುವ ರಾಜ್ಯ ವಿಪಕ್ಷ ನಾಯಕರ ಹೇಳಿಕೆಗಳ ನಡುವೆ ದಲಿತ ಸಿಎಂ ಕೂಗು ಹೆಚ್ಚಾಗುತ್ತಿದೆ. ರಾಜ್ಯ ಕಾಂಗ್ರೆಸ್ ನಾಯಕರ ದೆಹಲಿ ಭೇಟಿ ಇದೆಲ್ಲವೂ ಇನ್ನಷ್ಟು ಕೂತುಹಲ ಮೂಡಿಸುತ್ತಿದೆ. ಜೊತೆಗೆ ಮಂಗಳವಾರ ಸತೀಶ್ ಜಾರಕಿಹೊಳಿ ಸಿಎಂ ಆಪ್ತ ಮಹದೇವಪ್ಪ ಅವರನ್ನು ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು.ಇದನ್ನೂ ಓದಿ: ಮೋದಿ ಬದಲಾವಣೆಗೆ ಆರ್‌ಎಸ್‌ಎಸ್‌ ಸಭೆ: ಸಂತೋಷ್ ಲಾಡ್

  • ಡಿಕೆಶಿ ನಿಷ್ಠಾವಂತರು, ಸಿಎಂ ಆಗಲು ಅರ್ಹರಿದ್ದಾರೆ – ಸಚಿವ ಕೆ.ಎನ್ ರಾಜಣ್ಣ

    ಡಿಕೆಶಿ ನಿಷ್ಠಾವಂತರು, ಸಿಎಂ ಆಗಲು ಅರ್ಹರಿದ್ದಾರೆ – ಸಚಿವ ಕೆ.ಎನ್ ರಾಜಣ್ಣ

    ಹಾಸನ: ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಮುಖ್ಯಮಂತ್ರಿ ಆಗೋದಕ್ಕೆ ಅರ್ಹರಾಗಿದ್ದಾರೆ. ಆದ್ರೆ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆನ್ನುವುದು ಬಹುಜನರ ಬಯಕೆ ಎಂದು ಸಚಿವ ಕೆ.ಎನ್.ರಾಜಣ್ಣ (KN Rajanna) ತಿಳಿಸಿದ್ದಾರೆ.

    ಹಾಸನದಲ್ಲಿ ಸದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ (Chief Minister) ಆಗಬೇಕು ಅನ್ನೋದರಲ್ಲಿ ತಪ್ಪೇನಿದೆ. ಮನುಷ್ಯರ ಅನಿಸಿಕೆಗಳು ಇದ್ದೇ ಇರುತ್ತೆ. ಒಬ್ಬೊಬ್ಬರಿಗೆ ಒಂದೊಂದು ಹುದ್ದೆಯಲ್ಲಿ ಆಸೆ ಜಾಸ್ತಿ ಇರಬಹುದು, ಒಂದರಲ್ಲಿ ಕಡಿಮೆ ಇರಬಹುದು. ಹಾಗಾಗಿ ಅವರು ಹೇಳೋದ್ರಲ್ಲಿ ತಪ್ಪೇನಿಲ್ಲ. ಮುಖ್ಯಮಂತ್ರಿ ಆಗಲು ಶಿವಕುಮಾರ್‌ಗೂ ಕೂಡ ಎಲ್ಲಾ ಅರ್ಹತೆ ಇದೆ. ಅವರು ಒಳ್ಳೆಯ ಸಂಘಟನೆ ಮಾಡ್ತಾರೆ. ಮೊದಲಿನಿಂದಲೂ ಪಕ್ಷದಲ್ಲಿ ನಿಷ್ಠಾವಂತರಿದ್ದಾರೆ. ಮುಖ್ಯಮಂತ್ರಿ ಆಗುವಂತಹ ಅರ್ಹತೆ ಶಿವಕುಮಾರ್‌ಗೂ ಕೂಡ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬುದ್ಧಿವಂತ.. ಗಲ್ಫ್‌ ರಾಷ್ಟ್ರದಲ್ಲಿ ಒಳ್ಳೆ ಸಂಬಳದ ಕೆಲಸ ಬಿಟ್ಟು ಬಾಂಬ್‌ ಸ್ಫೋಟಿಸಿದ್ಯಾಕೆ; ತಲೆ ಕೆಡಿಸಿಕೊಂಡ ಪೊಲೀಸರು

    ಕಾಂಗ್ರೆಸ್ ಪಕ್ಷದಲ್ಲಿ ಅದೇ ರೀತಿ ಅರ್ಹತೆ ಇರುವಂತಹವರು ಎರಡು ಡಜನ್ ಜನ ಇದ್ದಾರೆ. ಅವರು ಮುಖ್ಯಮಂತ್ರಿ ಆಗ್ತಾರೆ ಅಂದ್ರೆ ಸಂತೋಷ ಪಡುವುದರಲ್ಲಿ ನಾನು ಒಬ್ಬ. ಆದ್ರೆ ನಮ್ಮ ರಾಜ್ಯದಲ್ಲಿ 5 ವರ್ಷಗಳ ಕಾಲ ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆನ್ನುವುದು ಬಹುಜನರ ಬಯಕೆ. ಬಹುತೇಕ ಶಾಸಕರ ಬಯಕೆಯೂ ಅದೇ ಇದೆ. ಆ ಬಯಕೆಯನ್ನು ನಾವು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾರು ಅಪಘಾತ- ಸಹಾಯಕ್ಕಾಗಿ ಬಂದು ಎಣ್ಣೆ ಬಾಟ್ಲಿಯೊಂದಿಗೆ ಯುವಕರು ಎಸ್ಕೇಪ್

    ಇದೇ ವೇಳೆ ಹೆಚ್.ಡಿ ಕುಮಾರಸ್ವಾಮಿ ಅಣೆ-ಪ್ರಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಣೆ-ಪ್ರಮಾಣ ಮಾಡಿಕೊಳ್ಳುವವರು ಮಾಡಿಕೊಳ್ಳಲಿ ನಮ್ಮದೇನು ಅಡ್ಡಿ ಇಲ್ಲ. ನಮ್ಮ ಎಲೆಯಲ್ಲಿ ನೊಣ ಸತ್ತು ಬಿದ್ದಿದೆ, ಅವರ ಎಲೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ. ಆದ್ರೆ ನೊಣದವರ ಬಗ್ಗೆ ಹೆಚ್ಚು ಪ್ರಸ್ತಾಪ ಮಾಡ್ತಾರೆ. ಆದ್ದರಿಂದ ಸಂಯಮ ಇರುವುದು ಒಳ್ಳೆಯದು, ಏಕೆಂದರೆ ರಾಜಕಾರಣದಲ್ಲಿ ಯಾರೂ ಸತ್ಯಹರಿಶ್ಚಂದ್ರರಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ದಾಳಿ; ಹಮಾಸ್‌ ಕಮಾಂಡರ್‌ ಸೇರಿ 60ಕ್ಕೂ ಹೆಚ್ಚು ಮಂದಿ ಬಲಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿದ್ದರಾಮಯ್ಯರನ್ನ ಅಲುಗಾಡಿಸಲು ಸಾಧ್ಯವಿಲ್ಲ, ಅವರೇ ಸಿಎಂ ಅಂತ ಹೈಕಮಾಂಡ್‌ ಹೇಳಿದೆ – ಶಿವಲಿಂಗೇಗೌಡ

    ಸಿದ್ದರಾಮಯ್ಯರನ್ನ ಅಲುಗಾಡಿಸಲು ಸಾಧ್ಯವಿಲ್ಲ, ಅವರೇ ಸಿಎಂ ಅಂತ ಹೈಕಮಾಂಡ್‌ ಹೇಳಿದೆ – ಶಿವಲಿಂಗೇಗೌಡ

    ಹಾಸನ: ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯದಲ್ಲಿ ಬಂಡೆಯಂತಹ ಸರ್ಕಾರವಿದ್ದು, ಬಂಡೆ ರೂಪದಲ್ಲಿಯೇ ಅವರು ಕೆಲಸ ಮಾಡುತ್ತಿದ್ದಾರೆ. ಸಿಎಂ ಬದಲಾವಣೆ ಪ್ರಶ್ನೆ ಪ್ರಸ್ತುತ ಇಲ್ಲಾ ಎಂದು ಶಾಸಕ ಕೆ.ಎಂ ಶಿವಲಿಂಗೇಗೌಡ (Shivalinge Gowda) ಹೇಳಿದ್ದಾರೆ.

    ಹಾಸನ (Hassan) ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗೀಜಿಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸಿಎಂ ಇದ್ದಾರೆ. ನಮ್ಮದು ನೂರಾರು ವರ್ಷಗಳ ಇತಿಹಾಸವಿರುವ ಪಕ್ಷ, ಹೈಕಮಾಂಡ್ (Congress High Command) ಭದ್ರವಾಗಿದೆ. ಆದ್ದರಿಂದ ಯಾರು ಮುಖ್ಯಮಂತ್ರಿ ಆಗಬೇಕು, ಬಿಡಬೇಕು ಅನ್ನೋದು ಹೈಕಮಾಂಡ್‌ ತೀರ್ಮಾನ. ಸಿದ್ದರಾಮಯ್ಯ ಅವರೇ ಸಿಎಂ ಅಂತ ಮುಕ್ತವಾಗಿ ಹೈಕಮಾಂಡ್ ಹೇಳಿ ಕಳುಹಿಸಿದೆ. ‌68 ಸಾವಿರ ಕೋಟಿ ಬಡಜನಕ್ಕೆ ಗ್ಯಾರಂಟಿ ಕೊಟ್ಟಿರುವ ಇತಿಹಾಸ ಈ ಭಾರತ ದೇಶದಲ್ಲಿ ಇದ್ದರೆ ಅದು ಕರ್ನಾಟಕ ರಾಜ್ಯ ಮಾತ್ರ. ಯಾರಿಂದಲೂ ಸಿದ್ದರಾಮಯ್ಯ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಗೃಹಸಚಿವ ಪರಮೇಶ್ವರ್ (G Parameshwar) ಅವರು ಸಮಯ, ಸಂದರ್ಭ ಸಿಕ್ಕಾಗ ಅವರ ಮನೆಯಲ್ಲಿ ಎಲ್ಲ ಊಟಕ್ಕೆ ಸೇರಿಕೊಳ್ತಾರೆ. ಕೆಲವೊಂದು ವಿಚಾರಗಳನ್ನು ಮಾತಾಡ್ತಾರೆ. ಗೃಹಸಚಿವರ ಜೊತೆ ಮಾತನಾಡಿದ್ದಕ್ಕೆಲ್ಲಾ ತಪ್ಪು ಅರ್ಥ ಕಲ್ಪಿಸಿದರೆ ಹೇಗೆ? ಯಾಕೆ ತಪ್ಪು ಅರ್ಥ ಕಲ್ಪಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣ- ಮಹಾರಾಷ್ಟ್ರದ ಬಸ್ ಕರ್ನಾಟಕಕ್ಕೂ ಬರುತ್ತೆ: ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್

    ಕಾಂಗ್ರೆಸ್‌ನಿಂದ 3 ಜನ ಬರ್ತಾರೆ, 6 ಜನ ಬರ್ತಾರೆ ಅಂತ ಹೇಳೋದೆಲ್ಲಾ ಸುಳ್ಳು. ನಾನು ಕಾಫಿ ಕುಡಿಯುವಾಗ ಬರೋದು ಫೋಟೋ ತೆಗೆದುಕೊಳ್ಳೋದು, ಆಮೇಲೆ ನನ್ನ ಟಚ್‌ನಲ್ಲಿದ್ದಾನೆ ಅಂತಾ ಹೇಳುವ ಕೆಲಸ ಮಾಡ್ತಿದ್ದಾರೆ. ಅವರಿಗೆ ತಾಕತ್‌ ಇದ್ದರೆ ಕಾಂಗೆಸ್‌ ಬಿಟ್ಟು ಬಿಜೆಪಿಗೆ ಹೋಗ್ತಿನಿ ಅಂತಾ ಒಬ್ಬ ಎಂಎಲ್‌ಎ ಕೈಲಿ ಹೇಳಿಸಲಿ ಅಂತ ಸವಾಲ್‌ ಹಾಕಿದರಲ್ಲದೇ, ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ಬಿಚಾರ. ಪಕ್ಷದೊಳಗೆ ಯಾವುದೇ ಗೊಂದಲವಿಲ್ಲ. ಇವರು ಹೇಳುತ್ತಿರುವುದಕ್ಕೆಲ್ಲಾ ಎರಡೂವರೆ ವರ್ಷ ಆದ್ಮೇಲೆ ಉತ್ತರ ಸಿಗುತ್ತೆ ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರದಿಂದ ಐಫೋನ್‌ ಕದ್ದಾಲಿಕೆಗೆ ಯತ್ನ – ಎಚ್ಚರಿಕೆ ಸಂದೇಶ ಬಂದಿದ್ದಾಗಿ ಪ್ರತಿಪಕ್ಷ ನಾಯಕರ ಆರೋಪ  

    ಹೈಕಮಾಂಡ್‌ನವರು ಏನು ಹೇಳಿದ್ದಾರೆ ಅನ್ನೋದು ಇವರಿಗೆ ಗೊತ್ತಾ? ರಾಹುಲ್‌ಗಾಂಧಿ, ಸೋನಿಯಾಗಾಂಧಿ, ಸುರ್ಜೆವಾಲ ಬಂದು ಇವರಿಗೆ ಅನೌನ್ಸ್ ಮಾಡಿದ್ರಾ? ಯಾರೋ ಡಿ.ಕೆ ಶಿವಕುಮಾರ್ ಅಭಿಮಾನಿಗಳು ಎರಡೂವರೆ ವರ್ಷ ಆದ್ಮೇಲೆ ಸಿಎಂ ಆಗ್ತಾರೆ ಅಂದಿರಬಹುದು. ಅದು ಅವರ ವೈಯುಕ್ತಿಕ ಅಭಿಪ್ರಾಯವೇ ಹೊರತು ಹೈಕಮಾಂಡ್ ಅಭಿಪ್ರಾಯ ಅಲ್ಲ. ಹೈಕಮಾಂಡ್ ಬಾಯಿಬಿಟ್ಟ ಮೇಲೆ ಇದೆಲ್ಲಾ ಮಾತನಾಡಬೇಕು. ಬರೀ ಗಾಳಿ ಸುದ್ದಿಯಲ್ಲೇ ಈ ದೇಶ ಹಾಳಾಗಿ ಹೋಗಿದೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮತೀಯ ದ್ವೇಷಕ್ಕೆ ಪ್ರಚೋದನೆ ಆರೋಪ – ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇಸ್‌  

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗ್ಯಾರಂಟಿ ನಂಬಿ BPL ಕಾರ್ಡ್‌ಗೆ ಮುಗಿಬಿದ್ದ ಜನ – ಅರ್ಜಿ ಸ್ವೀಕರಿಸೋದನ್ನೇ ನಿಲ್ಲಿಸಿದ ಇಲಾಖೆ!

    ಗ್ಯಾರಂಟಿ ನಂಬಿ BPL ಕಾರ್ಡ್‌ಗೆ ಮುಗಿಬಿದ್ದ ಜನ – ಅರ್ಜಿ ಸ್ವೀಕರಿಸೋದನ್ನೇ ನಿಲ್ಲಿಸಿದ ಇಲಾಖೆ!

    ಮಡಿಕೇರಿ: ಕಾಂಗ್ರೆಸ್ ಸರ್ಕಾರ (Congress Government) ವಿಧಾನಸಭೆ ಚುನಾವಣೆ ವೇಳೆ ಜನರಿಗೆ ನೀಡಿದ್ದ ಉಚಿತ ಕೊಡುಗೆಗಳ ಭರವಸೆಗಳನ್ನ ಈಡೇರಿಸುವುದು ನಿಚ್ಚಳವಾಗಿದೆ. ಆದ್ರೆ ಆ ಕೊಡುಗೆಗಳನ್ನ ಬಡವರಿಗೆ ಮಾತ್ರ ಸೀಮಿತಗೊಳಿಸುವ ಎಲ್ಲ ಸಾಧ್ಯತೆ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ಉಚಿತ ಕೊಡುಗೆಗಳ ಲಾಭ ಪಡೆಯಲು ಉತ್ಸುಕರಾಗಿರುವ ಜನರು, ಬಿಪಿಎಲ್ ಕಾರ್ಡ್‌ (BPL Card) ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.

    ಇದರಿಂದ ಬಿಪಿಎಲ್ ಕಾರ್ಡ್‌ಗೆ ಮುಗಿಬಿದ್ದ ಜನರಿಗೆ ಇದೀಗ ಅರ್ಜಿ ಸ್ವೀಕಾರವನ್ನೇ ಅಹಾರ ಇಲಾಖೆ ಸ್ಥಗಿತಗೊಳಿಸಿದೆ. ಇದರಿಂದ ಕಾಂಗ್ರೆಸ್ ಪಕ್ಷವನ್ನು ‌ನಂಬಿಕೆಟ್ಟವು ಅನ್ನೋ ಅನುಮಾನ ಜನರಲ್ಲಿ ಕಾಡತೋಡಗಿದೆ. ಇದನ್ನೂ ಓದಿ: ಕೊನೆಗೂ ಡಿಕೆಶಿಗೆ ಸಿಕ್ತು ಅದೃಷ್ಟದ ಮನೆ – ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್ – ಯಾರಿಗೆ ಯಾವ ಮನೆ?

    ಕಾಂಗ್ರೆಸ್ ಪಕ್ಷ ಅಧಿಕಾರ ಬಂದ ಕೂಡಲೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಪ್ರತಿ ಮನೆಗೂ 200 ಯೂನಿಟ್‌ ವಿದ್ಯುತ್‌ ಉಚಿತ, ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ, ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ, ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ ನೀಡುವುದಾಗಿ 5 ಗ್ಯಾರಂಟಿಗಳನ್ನ ಕಾಂಗ್ರೆಸ್ ಘೋಷಣೆ ಮಾಡಿದೆ. ಈಗಾಗಲೇ ಮೊದಲ ಕ್ಯಾಬಿನೆಟ್‌ ಸಭೆಯಲ್ಲೇ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದು, ಮುಂದಿನ ಸಭೆಯಲ್ಲೇ ಅನುಷ್ಠಾನಗೊಳಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

    ಇದಕ್ಕೆ ಪೂರಕವಾಗಿ ನೂತನ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡುವ ನಿರ್ಧಾರಗಳನ್ನು ಕೈಗೊಂಡು ಅಧಿಕೃತ ಆದೇಶಗಳನ್ನ ಹೊರಡಿಸಿದ್ದಾರೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾತ್ರ, ಹಾದಿಬೀದಿಯಲ್ಲಿ ಹೋಗುವವರಿಗೆಲ್ಲ ಈ ಯೋಜನೆಗಳ ಲಾಭ ಸಿಗುವುದಿಲ್ಲ. ನಿಜಕ್ಕೂ ಬಡವರಿಗೆ, ಅರ್ಹರಿಗೆ ಮಾತ್ರ ಸಿಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಶುರುವಾಯ್ತು ಬಿಜೆಪಿ ಕಾಲದ ಅಕ್ರಮದ ತನಿಖೆ – ಮೊದಲ ಎಫ್‌ಐಆರ್‌ ದಾಖಲು

    ಇದೆಲ್ಲವನ್ನೂ ಗಮನಿಸಿರುವ ಕೊಡಗಿನ ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವೆಬ್ ಸೈಟ್ ಗೆ ಮೊರೆ ಹೋಗಿದ್ದಾರೆ. ಕೆಲವರು ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ಗಳ ಸಹಾಯದಿಂದ ಆಹಾರ ahar.kar.nic.in ವೆಬ್ ಸೈಟ್ ಓಪನ್ ಮಾಡಲು ಪ್ರಯತ್ನಿಸುತ್ತಿದ್ದರೆ, ಇನ್ನೂ ಕೆಲವರು ಸಮೀಪದ ಸೈಬರ್ ಸೆಂಟರ್ ಗಳಿಗೆ ಹೋಗಿ ಬಿಪಿಎಲ್ ಕಾರ್ಡ್ ಗಳನ್ನೂ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಹೆಚ್ಚಿನ ಜನರು ಏಕಕಾಲಕ್ಕೆ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದು, ಇಲಾಖೆ ತಾತ್ಕಾಲಿಕವಾಗಿ ಅರ್ಜಿ ಸ್ವೀಕಾರವನ್ನ ಸ್ಥಗಿತಗೊಳಿಸಿದೆ ಎಂದು ತಮ್ಮ ವೆಬ್ ಸೈಟ್ ನಲ್ಲೆ ಸ್ಪಷ್ಟವಾಗಿ ನಮೂದಿಸಿಬಿಟ್ಟಿದ್ದಾರೆ.

    ಇನ್ನೂ ಈ ಸಮಸ್ಯೆ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳನ್ನು ಕೇಳಿದ್ರೆ. ಬಿಪಿಎಲ್ ಕಾರ್ಡ್ ತಿದ್ದುಪಡಿ ಸಂಬಂಧಿಸಿದಂತೆ ಆಹಾರ ಇಲಾಖೆಯಲ್ಲಿ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕಾರ್ಡ್ ತಿದ್ದುಪಡಿಗೆ ಸರ್ವರ್‌ ಒಪನ್ ಇತ್ತು. ಮಾಚ್ 9ರಿಂದ ನೀತಿ ಸಂಹಿತೆ ಜಾರಿಯಾಗುವ ವರೆಗೂ GSC ಅಪ್ಲಿಕೇಶನ್ ಹಾಕುವುದಕ್ಕೆ ಅವಕಾಶ ನೀಡಲಾಗಿತ್ತು. ಮೇ ತಿಂಗಳಲ್ಲೂ 17 ಹಾಗೂ 18ರ ವರೆಗೂ ಸರ್ವರ್ ಒಪನ್ ಇತ್ತು. ಇದೀಗ ಸ್ಥಗಿತಗೊಳಿಸಲಾಗಿದೆ. ಮುಂದೆ ಸರ್ಕಾರ ನಿರ್ದೇಶನ ನೀಡುವವರೆಗೂ ಅರ್ಜಿಗಳನ್ನ ಸ್ಥಗಿತಗೊಳಿಸಲಾಗುತ್ತದೆ. ದೂರದ ಊರಿನ ಬಂದವರು ವಾಪಸ್‌ ಹೋಗುತ್ತಿದ್ದಾರೆ. ಸರ್ಕಾರದ ಅದೇಶ ಬರುವವರೆಗೂ ಜನರು ಕಾಯಲೇಬೇಕು ಎಂದು ಇಲಾಖೆಯ ಆಧಿಕಾರಿಗಳು ತಿಳಿಸಿದ್ದಾರೆ.

  • ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ – ಸಚಿವ ಎಂ.ಬಿ ಪಾಟೀಲ್‌

    ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ – ಸಚಿವ ಎಂ.ಬಿ ಪಾಟೀಲ್‌

    ಮೈಸೂರು: ಲೋಕಸಭೆ ಚುನಾವಣೆಯ (LokSabha Elections) ಬಳಿಕ ಪಕ್ಷದಲ್ಲಿ ಯಾವುದೇ ಬದಲಾವಣೆಯಿಲ್ಲ. ಮುಂದಿನ 5 ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರಲಿದ್ದಾರೆ ಎಂದು ನೂತನ ಸಚಿವ ಎಂ.ಬಿ ಪಾಟೀಲ್‌ (MB Patil), ಸಿಎಂ ಸಿದ್ದರಾಮಯ್ಯ (Siddaramaiah) ಅವರ ಪರ ಬ್ಯಾಟ್‌ ಬೀಸಿದ್ದಾರೆ.

    ಎಂ.ಬಿ ಪಾಟೀಲ್‌ ದಂಪತಿಗಳಿಂದು ಮೈಸೂರಿನ ಸುತ್ತೂರು ಶ್ರೀಮಠಕ್ಕೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಬಿಪಿ, ರಾಜ್ಯದಲ್ಲಿ ಸಿದ್ದರಾಮಯ್ಯ ಅವರೇ 5 ವರ್ಷ ಪೂರ್ಣಾವಧಿ ಸಿಎಂ ಆಗಿರಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಹೇಳಿದ್ದಾರೆ.

    ಲೋಕಸಭೆ ಚುನಾವಣೆ ಬಳಿಕ ಯಾವುದೇ ಬದಲಾವಣೆ ಇಲ್ಲ. ಸಿಎಂ ಬದಲಾವಣೆ ಮಾಡುವ ಬಗ್ಗೆ ಎಐಸಿಸಿ ಮಟ್ಟದಲ್ಲಿ ಚರ್ಚೆಯೂ ನಡೆದಿಲ್ಲ, ಸಿದ್ದರಾಮಯ್ಯ ಅವರೇ ಮುಂದಿನ 5 ವರ್ಷ ಸಿಎಂ ಆಗಿರಲಿದ್ದಾರೆ. ಈ ಬಗ್ಗೆ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್‌ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಣ್ಣ ಬಹಳ ಕಷ್ಟಪಟ್ಟಿದ್ದಾನೆ, ನಾವ್ಯಾವತ್ತೂ ವಿಧಾನಸೌಧಕ್ಕೆ ಹೋಗಲ್ಲ: ಸಿದ್ದರಾಮಯ್ಯ ಸಹೋದರ

    ಮುಂದುವರಿದು, ಬಿಜೆಪಿ ಅಧಿಕಾರವಧಿಯಲ್ಲಿ ನಡೆದ ಎಲ್ಲಾ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ. ಪಿಎಸ್‌ಐ ಹಗರಣ, ಆರೋಗ್ಯ ಇಲಾಖೆ, ನೀರಾವರಿ ಇಲಾಖೆ ಹಾಗೂ ಇತರೆ ಇಲಾಖೆಗಳಲ್ಲಿ ನಡೆದ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ. ಎಲ್ಲಾ ಹಗರಣಗಳನ್ನ ಲಾಜಿಕ್ ಎಂಡ್ ಗೆ ತೆಗೆದುಕೊಂಡು ಹೋಗುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ, ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಬ್ಯಾರಿಕೇಡ್ ಯಾಕೆ ಹಾಕಿಲ್ಲ?- ಪೊಲೀಸರಿಗೆ ಸಿದ್ದರಾಮಯ್ಯ ಕ್ಲಾಸ್

    ಕಾಂಗ್ರೆಸ್‌ ಗ್ರಾರಂಟಿ ಕಾರ್ಡ್‌ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚೆಯಾಗಿದ್ದು, ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಈ ವಿಚಾರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  • ವಿಚಾರವಾದಿ ಎನಿಸಿಕೊಳ್ಳುವ ಸಿದ್ದು ಅವ್ರು ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರಾ? – ನಟ ಚೇತನ್ ಲೇವಡಿ

    ವಿಚಾರವಾದಿ ಎನಿಸಿಕೊಳ್ಳುವ ಸಿದ್ದು ಅವ್ರು ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರಾ? – ನಟ ಚೇತನ್ ಲೇವಡಿ

    ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರರೂ ಆಗಿರುವ ಚೇತನ್ ಅಹಿಂಸಾ (Chetan Kumar) ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಇದರಿಂದ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಅವರು ಪ್ರಮಾಣವಚನ ಸ್ವೀಕರಿದ ವಿಚಾರವನ್ನೂ ಟೀಕಿಸಿದ್ದಾರೆ.

    ಶನಿವಾರ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದನ್ನು ಪ್ರಶ್ನಿಸಿ ನಟ ಚೇತನ್ ಫೇಸ್‌ಬುಕ್ ಪುಟದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದೇವರ ಹೆಸರಿನಲ್ಲಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ

    ‘ವಿಚಾರವಾದಿ’ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಕರ್ನಾಟಕದ ಸಿಎಂ ಆಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರಾ? ಯಾವ/ಯಾರು ದೇವರು? ದೇವರು ಎಲ್ಲಿದ್ದಾನೆ/ಳೆ/ರೆ? ಇದು ನಿರ್ದಿಷ್ಟವಾದ ಸೈದ್ಧಾಂತಿಕ ಆರಂಭವಲ್ಲ ಎಂದಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ತಾತ್ವಿಕ ಒಪ್ಪಿಗೆ – ಮುಂದಿನ ಕ್ಯಾಬಿನೆಟ್‌ನಲ್ಲಿ ಆದೇಶ

    ಸತೀಶ್ ಜಾರಕಿಹೊಳಿ ಅವರನ್ನೂ ಟೀಕಿಸಿದ್ದು, ಶಾಸಕ ಸತೀಶ ಜಾರಕಿಹೊಳಿ ಅವರು ‘ಬುದ್ಧ-ಬಸವ-ಅಂಬೇಡ್ಕರ್’ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷವು ತನ್ನ ಸ್ವ-ಲಾಭದಾಯಕ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಸಮಾನತೆಯ ಐಕಾನ್‌ಗಳನ್ನು ಯಾವಾಗಲೂ ಹೈಜಾಕ್ ಮಾಡಿದೆ. ಎಸ್ಟಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಶೋಷಿತ ಎಸ್ಟಿಗಳಿಗೆ ಒಳಮೀಸಲಾತಿಯನ್ನು ಬೆಂಬಲಿಸುತ್ತಾರೆಯೇ? ಅಥವಾ ಬುದ್ಧ-ಬಸವ-ಅಂಬೇಡ್ಕರ್ ಕೇವಲ ಗಿಮಿಕ್ ಮಾತ್ರವೇ? ಎಂದು ಪ್ರಶ್ನಿಸಿದ್ದಾರೆ.

  • 100% ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನ ಕಾಂಗ್ರೆಸ್‌ ಈಡೇರಿಸಲಿದೆ – ರಮ್ಯಾ

    100% ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನ ಕಾಂಗ್ರೆಸ್‌ ಈಡೇರಿಸಲಿದೆ – ರಮ್ಯಾ

    ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನ ಪಡೆದು ಬಹುಮತದೊಂದಿಗೆ ಕಾಂಗ್ರೆಸ್‌ ಸರ್ಕಾರ ಅಧಿಕಾರದ ಗದ್ದುಗೆ ಏರಿದೆ. ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ ಶಿವಕುಮಾರ್‌ (DK Shivakumar) ಶನಿವಾರ ಪ್ರಮಾಣವಚನ ಸ್ವೀಕರಿಸಿದರು.

    ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸಿದ್ದರಾಮಯ್ಯ ಸಂಪುಟ ದರ್ಜೆ ಸಚಿವರಾಗಿ 8 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಇದನ್ನೂ ಓದಿ: ಕುರಿ ಲೆಕ್ಕ ಹಾಕಲು ಬಾರದವನಿಗೆ ಹಣಕಾಸು ಖಾತೆ ಯಾಕೆ ಎಂದಿದ್ದವರಿಗೆ 13 ಬಜೆಟ್‌ ಮಂಡಿಸಿ ಠಕ್ಕರ್‌ ಕೊಟ್ಟ ‘ಟಗರು’!

    ಕಾರ್ಯಕ್ರಮದ ಬಳಿಕ ಪಬ್ಲಿಕ್‌ ಟಿವಿಯೊಂದಿಗೆ (Public TV) ಮಾತನಾಡಿದ ಕಾಂಗ್ರೆಸ್‌ ಮಾಜಿ ಸಂಸದೆ ಹಾಗೂ ನಟಿ ರಮ್ಯಾ (Ramya), ಕಾಂಗ್ರೆಸ್‌ ತನ್ನ 5 ಗ್ಯಾರಂಟಿಗಳನ್ನು 100 ಪರ್ಸೆಂಟ್‌ ಪೂರೈಸಲಿದೆ ಎಂದು ಹೇಳಿದರು.

    ಈ ಬಾರಿ ಬಹುಮತದೊಂದಿಗೆ ಕಾಂಗ್ರೆಸ್‌ ಸರ್ಕಾರ (Congress Government) ಅಧಿಕಾರಕ್ಕೆ ಬಂದಿರೋದು ತುಂಬಾ ಖುಷಿಯಾಗಿದೆ. ಈ ಹಿಂದೆ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ 5 ವರ್ಷ ಉತ್ತಮ ಆಡಳಿತ ಕೊಟ್ಟಿದ್ದಾರೆ. ಈ ಬಾರಿಯೂ 5 ವರ್ಷ ಭ್ರಷ್ಟರಹಿತ ಆಡಳಿತವನ್ನ ಕಾಂಗ್ರೆಸ್‌ ಸರ್ಕಾರ ನೀಡಲಿದೆ. ಕೊಟ್ಟ ಮಾತಿನಂತೆ 5 ಗ್ಯಾರಂಟಿಗಳನ್ನೂ ಪೂರೈಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ತಂದೆಗೆ ಮಗ ಡಾಕ್ಟರ್‌ ಆಗ್ಬೇಕು ಅನ್ನೋ ಆಸೆ; ಆದ್ರೆ ಸಿದ್ದು ಆಗಿದ್ದು ವಕೀಲ, ಮಾಡಿದ್ದು ರಾಜಕೀಯ

    ಕಾಂಗ್ರೆಸ್‌ನವರು ಸುಮ್ಮನೆ ಮಾತು ಕೊಡಲ್ಲ, ಮಾತು ಕೊಟ್ಮೇಲೆ ಖಂಡಿತಾ ಈಡೇರಿಸುತ್ತಾರೆ. ಕಾಂಗ್ರೆಸ್‌ ಮೇಲೆ ವಿಶ್ವಾಸವಿಡಬೇಕು. ಈಗಷ್ಟೇ ಅಧಿಕಾರಕ್ಕೆ ಬಂದಿರುವುದರಿಂದ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದ್ರೆ 100% ಕೊಟ್ಟ ಭರವಸೆಗಳನ್ನ ಈಡೇರಿಸಲಿದೆ ಎಂದರು.

  • ಆ ಒಂದು ಘಟನೆ ‘ಅನ್ನಭಾಗ್ಯ’ ಯೋಜನೆ ತರಲು ಸಿದ್ದರಾಮಯ್ಯರನ್ನ ಪ್ರೇರೇಪಿಸಿತ್ತು!

    ಆ ಒಂದು ಘಟನೆ ‘ಅನ್ನಭಾಗ್ಯ’ ಯೋಜನೆ ತರಲು ಸಿದ್ದರಾಮಯ್ಯರನ್ನ ಪ್ರೇರೇಪಿಸಿತ್ತು!

    2013 ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರು (Siddaramaiah) ಅನೇಕ ಜನಪರ, ಬಡವರ ಪರ ಯೋಜನೆಗಳನ್ನು ಜಾರಿಗೆ ತಂದರು. ಬಡಜನರಿಗೆ ಹಲವು ಭಾಗ್ಯಗಳನ್ನೇ ನೀಡಿದರು. ಅದರಲ್ಲಿ ಪ್ರಮುಖವಾದದ್ದು ಅನ್ನಭಾಗ್ಯ. ರೈತ ಕುಟುಂಬದಿಂದ ಬಂದ ಸಿದ್ದರಾಮಯ್ಯನವರು ಅಪ್ಪಟ ಹಳ್ಳಿಹೈದ. ತನ್ನ ಸುತ್ತಲಿನ ಬಡತನ, ಅನಕ್ಷರತೆ, ಶೋಷಣೆ, ಮೂಢನಂಬಿಕೆ, ಜನರ ಸಂಕಷ್ಟ, ನೋವು-ನಲಿವುಗಳನ್ನು ಕಣ್ಣಾರೆ ಕಂಡವರು. ಅವರೇ ಹೇಳಿಕೊಳ್ಳುವಂತೆ, “ಇಂಥ ದುಃಸ್ಥಿತಿಯ ವಾತಾವರಣ ನನ್ನೊಳಗೆ ನೋವು, ಸಿಟ್ಟು ಹೆಪ್ಪುಗಟ್ಟದೆ ಹೋಗಿದ್ದರೆ, ಬಹುಶಃ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ”. ಇವುಗಳೆಲ್ಲಾ ಕಣ್ಣೆದುರಿಗೆ ಬಂದಾಗ, ಈ ಸಾಮಾಜಿಕ ಸ್ಥಿತಿ ಯಾವ ತೆರನದು? ಅದರ ಫಲಾನುಭವತೆ ಯಾವ ಸ್ವರೂಪದ್ದು? ಈ ಸಾಮಾಜಿಕ ನ್ಯಾಯ ಸ್ಥಿರತೆಗೊಳಿಸುವುದು ಹೇಗೆ? ನೊಂದವರ, ಶೋಷಿತರ, ಬಡವರ ಮಡಿಲಿಗೆ ತಲುಪಿಸುವುದು ಹೇಗೆ? ಸಮಸಮಾಜ ನಿರ್ಮಾಣದ ಬಗೆಗೆ ಅವರ ಮನ ಸದಾ ತುಡಿಯುತ್ತಲೇ ಇತ್ತು.

    ಸಿದ್ದರಾಮಯ್ಯ ಅವರು ಅನ್ನಭಾಗ್ಯ (Anna Bhagya Scheme) ಯೋಜನೆ ಪ್ರಕಟಿಸಿದಾಗ ಗ್ರಾಮೀಣ ಭಾಗದ ಬಡಜನರು ಸಂತೋಷ ಪಟ್ಟರು. ಆದರೆ ಕೆಲವರು ಈ ಯೋಜನೆ ವಿರುದ್ಧ ಕುಹಕದ ಮಾತುಗಳನ್ನಾಡಿದ್ದರು. “ಜನರನ್ನು ಸೋಂಬೇರಿಗಳನ್ನಾಗಿ ಮಾಡುತ್ತೀರಿ. ಈ ಭಾಗ್ಯಗಳಿಗೆ ಹಣ ಎಲ್ಲಿಂದ ತರುತ್ತೀರಿ” ಎಂದೆಲ್ಲ ಪ್ರಶ್ನೆ ಮಾಡಿದ್ದರು. ಎಲ್ಲಾ ಕುಹಕ, ಲೇವಡಿ ಮಾತುಗಳನ್ನು ಸಹಿಸಿಕೊಂಡು ಸಿದ್ದರಾಮಯ್ಯ ತಾವು ನೀಡಿದ ಭರವಸೆಗಳಿಗೆ ಬದ್ಧರಾಗಿ ಯೋಜನೆ ಜಾರಿಗೆ ತಂದರು. ಬಹುಮುಖ್ಯವಾಗಿ ಅವರು ಅನ್ನಭಾಗ್ಯ ಜಾರಿಗೆ ತರಲು ಆ ಒಂದು ಘಟನೆ ಪ್ರಮುಖ ಕಾರಣವಾಗಿತ್ತು. ಇದನ್ನೂ ಓದಿ: ತಂದೆಗೆ ಮಗ ಡಾಕ್ಟರ್‌ ಆಗ್ಬೇಕು ಅನ್ನೋ ಆಸೆ; ಆದ್ರೆ ಸಿದ್ದು ಆಗಿದ್ದು ವಕೀಲ, ಮಾಡಿದ್ದು ರಾಜಕೀಯ

    ಅಪ್ಪಟ ಹಳ್ಳಿಹೈದ ಹುಡುಗನಾಗಿದ್ದ ಸಿದ್ದರಾಮಯ್ಯ ತನ್ನ ಸುತ್ತಮುತ್ತಲ ಜನರ ಕಷ್ಟ-ಕಾರ್ಪಣ್ಯಗಳನ್ನು ಕಣ್ಣಾರೆ ಕಂಡು ಬೆಳೆದವರು. “ಚಿಕ್ಕ ಹುಡುಗನಾಗಿದ್ದಾಗ 2 ಘಟನೆಗಳು ನನ್ನ ಜೀವನದಲ್ಲಿ ದೊಡ್ಡ ಪರಿಣಾಮ ಬೀರಿದರು. ನಮ್ಮ ಊರಿನಲ್ಲಿ ಬಹಳ ಜನರಿಗೆ ಕುಷ್ಕಿ ಜಮೀನು ಇತ್ತು. ಕೆಲವೇ ಜನರಿಗೆ ಮಾತ್ರ ತರೀ ಜಮೀನು ಇತ್ತು. ಭತ್ತ ಬೆಳೆಯುತ್ತಿದ್ದವರು ಅವರ ಮನೆಯಲ್ಲಿ ಆಗಾಗ ಅನ್ನ ಮಾಡಿಕೊಂಡು ತಿನ್ನುತ್ತಿದ್ದರು. ಕುಷ್ಕಿ ಜಮೀನು ಇದ್ದವರು, ಹಬ್ಬ-ಹರಿದಿನಗಳಲ್ಲಿ ನೆಂಟರು ಬಂದಾಗ ಮಾತ್ರ ಅನ್ನ ಮಾಡಿಕೊಂಡು ತಿನ್ನುತ್ತಿದ್ದರು. ಇವರ ಮನೆಯಲ್ಲಿ ಮಕ್ಕಳಿಗೆ ಸಣ್ಣಪುಟ್ಟ ಕಾಯಿಲೆ ಅಥವಾ ಜ್ವರ ಬಂದರೆ, ಅನ್ನ ಮಾಡುವವರ ಮನೆ ಬಳಿ ಹೋಗಿ ಅನ್ನಕ್ಕಾಗಿ ಕಾಯುತ್ತಿದ್ದರು. ಜ್ವರ ಬಂದವರಿಗೆ, ಕಾಯಿಲೆ ಇದ್ದವರಿಗೆ ಮುದ್ದೆ ತಿನ್ನಿಸೋಕೆ ಆಗಲ್ಲ. ಆಗ ಒಂದಿಷ್ಟು ಅನ್ನಕ್ಕೆ ಬೇರೆಯವರ ಮನೆಯಲ್ಲಿ ಬೇಡುತ್ತಿದ್ದರು. ಏನಪ್ಪ ಇದು.. ಸಮಾಜದಲ್ಲಿ ಹೀಗೆಲ್ಲ ಪರಿಸ್ಥಿತಿ ಇದೆಯಲ್ಲಾ? ಮಕ್ಕಳಿಗೆ ಅನ್ನ ಕೊಡಲು ಜನ ಕಷ್ಟ ಪಡ್ತಾರಲ್ಲ ಅಂತ ಯೋಚಿಸಿದ್ದೆ. ಇಂತಹ ಸನ್ನಿವೇಶಗಳನ್ನು ಕಣ್ಣಾರೆ ಕಂಡಿದ್ದ ನಾನು ಮುಖ್ಯಮಂತ್ರಿಯಾದಾಗ, ಕರ್ನಾಟಕದಲ್ಲಿ ಯಾರು ಕೂಡ ಹಸಿದು ಮಲಗಬಾರದು. 2 ಹೊತ್ತು ಊಟ ಮಾಡಲೇಬೇಕು. ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕು ಅಂತ ಈ ಯೋಜನೆ ಜಾರಿಗೆ ತಂದೆ” ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.

    ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಮೊದಲು ಬಿಪಿಎಲ್‌ ಕುಟುಂಬದ ಒಬ್ಬ ಸದಸ್ಯನಿಗೆ ಕನಿಷ್ಠ 4 ಕೆ.ಜಿ ಅಕ್ಕಿ ಮತ್ತು 1 ಕೆ.ಜಿ ಗೋಧಿಯಂತೆ ಒಂದು ಕುಟುಂಬಕ್ಕೆ ಗರಿಷ್ಠ 20 ಕೆ.ಜಿ ಅಕ್ಕಿ ಮತ್ತು 3 ಕೆ.ಜಿ ಗೋಧಿಯನ್ನು ವಿತರಿಸಲಾಗುತ್ತಿತ್ತು. ಅನ್ನಭಾಗ್ಯ ಯೋಜನೆ ಜಾರಿಗೆ ಬಂದಾಗ, ಅರ್ಹ ಬಿಪಿಎಲ್‌ ಏಕ ಸದಸ್ಯ ಕುಟುಂಬಗಳಿಗೆ 10 ಕೆ.ಜಿ, ದ್ವಿ ಸದಸ್ಯ ಕುಟುಂಬಗಳಿಗೆ 20 ಕೆ.ಜಿ, 3 ಮತ್ತು ಹೆಚ್ಚಿನ ಸದಸ್ಯರನ್ನು ಹೊಂದಿರುವ ಕುಟುಂಬಗಳಿಗೆ 30 ಕೆ.ಜಿ ಆಹಾರಧಾನ್ಯವನ್ನು ಪ್ರತಿ ಕೆ.ಜಿ.ಗೆ 1 ರೂ. ದರದಂತೆ ವಿತರಿಸಲಾಯಿತು. ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಪ್ರಮಾಣವನ್ನು ಕಡಿಮೆ ಮಾಡಲಾಯಿತು. ಇದನ್ನೂ ಓದಿ: ಹಳ್ಳಿಗಾಡಿನ ಜೀವನ, ದನ ಕಾಯುತ್ತಿದ್ದ ಹುಡುಗನಿಂದ ಮುಖ್ಯಮಂತ್ರಿ ಗಾದಿವರೆಗೆ; ಸಿದ್ದರಾಮಯ್ಯ ಸಾಗಿಬಂದ ಹಾದಿ..

    2023ರ ಚುನಾವಣೆ ಹೊತ್ತಿನಲ್ಲಿ ಅನ್ನಭಾಗ್ಯ ಯೋಜನೆ ಕುರಿತು ಕಾಂಗ್ರೆಸ್‌ ಮತ್ತೆ ಘೋಷಣೆ ಹೊರಡಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದರು. ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಿಸಿದ್ದ 5 ಗ್ಯಾರಂಟಿಗಳಲ್ಲಿ ಇದು ಒಂದು ಭರವಸೆಯಾಗಿದೆ. ಅದರಂತೆ ಈಗ ಕಾಂಗ್ರೆಸ್‌ 135 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದೆಗೆ ಏರಲು ಸಿದ್ಧವಾಗಿದೆ.