Tag: Karnataka Cabinet Expansion

  • ಕುತೂಹಲ ಮೂಡಿಸಿದ ರಾಜ್ಯ ಸಚಿವ ಸಂಪುಟ ಸರ್ಕಸ್ – ಸೋಮವಾರ ಬೊಮ್ಮಾಯಿ ನಡಿಗೆ ವರಿಷ್ಠರೆಡೆಗೆ

    ಕುತೂಹಲ ಮೂಡಿಸಿದ ರಾಜ್ಯ ಸಚಿವ ಸಂಪುಟ ಸರ್ಕಸ್ – ಸೋಮವಾರ ಬೊಮ್ಮಾಯಿ ನಡಿಗೆ ವರಿಷ್ಠರೆಡೆಗೆ

    ಬೆಂಗಳೂರು: ರಾಜ್ಯ ಸಚಿವ ಸಂಪುಟ ಸರ್ಕಸ್ ಮತ್ತಷ್ಟು ಕುತೂಹಲ ಮೂಡಿಸಿದೆ. ನಾಳೆ ಬೆಳಗ್ಗೆ 7 ಗಂಟೆಗೆ ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಯಾಣ ಬೆಳೆಸಲಿದ್ದಾರೆ.

    ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಈ ವೇಳೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಪ್ರಸ್ತಾಪಿಸಲಿದ್ದಾರೆ ಎನ್ನಲಾಗುತ್ತಿದೆ. ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಬೇಟಿಗೆ ಅವಕಾಶ ಸಿಕ್ಕರೆ ಚರ್ಚೆ ನಡೆಸುತ್ತೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನ- ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ರದ್ದುಪಡಿಸಿದ ಬಿಜೆಪಿ

    ಇತ್ತ ಸಚಿವಾಕಾಂಕ್ಷಿಗಳ ಲಾಬಿ ಮುಂದುವರಿದಿದೆ. ಸಚಿವ ಸ್ಥಾನ ಮೇಲೆ ನನಗೆ ಆಸೆ ಇಲ್ಲ. ಆದರೆ 13 ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಪರೋಕ್ಷವಾಗಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆಸೆ ಹೊರಹಾಕಿದ್ರು. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದ ಬಗ್ಗೆ ಕೇಂದ್ರ ವರಿಷ್ಠರು ನಿರ್ಣಯ ಮಾಡುತ್ತಾರೆ ಎಂದರು. ಇತ್ತ ಸಿಡಿ ಕೇಸ್‍ನಲ್ಲಿ ಕ್ಲೀನ್ ಚಿಟ್ ಪಡೆದ ರಮೇಶ್ ಜಾರಕಿಹೊಳಿ ಬಿಜೆಪಿ ಪ್ರಬಲ ನಾಯಕರ ಮೂಲಕ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗುತ್ತಿದ್ದು, ನಾಳೆ ದೆಹಲಿಗೂ ಕೂಡ ತೆರಳಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಪಂಚಭೂತಗಳಲ್ಲಿ ಸಂಗೀತ ಸಾಮ್ರಾಜ್ಞೆ ಲತಾ ಮಂಗೇಶ್ಕರ್ ಲೀನ

  • 1-2 ಜನಾಂಗದವರಿಗೆ 17 ಸಚಿವ ಸ್ಥಾನ ನೀಡಿದ್ರೆ ಬಾಕಿಯವರು ಏನು ಮಾಡ್ಬೇಕು?- ಅಪ್ಪಚ್ಚು ರಂಜನ್

    1-2 ಜನಾಂಗದವರಿಗೆ 17 ಸಚಿವ ಸ್ಥಾನ ನೀಡಿದ್ರೆ ಬಾಕಿಯವರು ಏನು ಮಾಡ್ಬೇಕು?- ಅಪ್ಪಚ್ಚು ರಂಜನ್

    ಮಡಿಕೇರಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಚಿವರ ಸಮಾರಂಭದ ಬಳಿಕ ಬೆಂಗಳೂರಿನಿಂದ ಮಡಿಕೇರಿಗೆ ವಾಪಸ್ ಆದ ಶಾಸಕ ಅಪ್ಪಚ್ಚು ರಂಜನ್ ಮೂಲ ಬಿಜೆಪಿ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಕೊಡಗು ಜಿಲ್ಲೆಗೆ ಒಂದು ಸ್ಥಾನ ನೀಡಬೇಕಿತ್ತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

    ಸೋಮವಾರಪೇಟೆ ತಾಲ್ಲೂಕಿನ ಹಾರಂಗಿ ಜಲಾಶಯದ ಬಳಿ ಮಾತಾನಾಡಿದ ಅವರು, ಜಿಲ್ಲೆಯಲ್ಲಿ ಇಬ್ಬರು ಶಾಸಕರು, ಒಬ್ಬರು ಎಂಎಲ್‍ಸಿ ಹಾಗೂ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಸೇರಿದಂತೆ ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿರುವುದು ಎಂದರೆ ಕೊಡಗು ಒಂದೇ. ಆದರೆ ಯಾವುದೋ ಕಾರಣಕ್ಕೆ ಕೊಡಗು ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕಿತ್ತು, ಅದು ಕೈಯಿ ತಪ್ಪಿ ಹೋಗಿದೆ ಎಂದರು.

    ಮುಂದಿನ ದಿನಗಳಲ್ಲಿ ಜಿಲ್ಲೆಗೆ ಸಚಿವ ಸ್ಥಾನ ನೀಡಬೇಕು ಎಂದರು ಪಕ್ಷದ ಹಿರಿಯಲ್ಲಿ ಆಗ್ರಹಿಸಿದ್ದೇನೆ. ಅಲ್ಲದೇ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಕೊಡಬಹುದು ಎಂಬ ನೀರಿಕ್ಷೆ ಇದೆ. ಈಗ 14 ಜಿಲ್ಲೆಗಳಿಗೆ ಮಂತ್ರಿಗಳು ಇಲ್ಲ. ಸಾಮಾಜಿಕ ನ್ಯಾಯದ ಸಮತೋಲನ ಕಾಪಾಡಬೇಕು. ಒಂದು ಅಥವಾ ಎರಡು ಜನಾಂಗದವರಿಗೆ 17 ಸಚಿವ ಸ್ಥಾನ ನೀಡಲಾಗಿದೆ. ಬಾಕಿ ಇರುವವರು ಏನು ಮಾಡಬೇಕು? ಅದನ್ನು ಸರಿಪಡಿಸುವ ಕೆಲಸ ಆಗಬೇಕು. ಹಿರಿಯರು ಅದನ್ನು ಮಾಡುತ್ತಾರೆ ಎಂಬ ನಂಬಿಕೆ ನಮಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಅಮಿತ್ ಶಾ ಮಾತನಾಡಿದ್ದೇ 2 ನಿಮಿಷ- ಮರು ಮಾತಿಲ್ಲದೆ ಬಿಎಸ್‍ವೈ ವಾಪಸ್

    ಅಮಿತ್ ಶಾ ಮಾತನಾಡಿದ್ದೇ 2 ನಿಮಿಷ- ಮರು ಮಾತಿಲ್ಲದೆ ಬಿಎಸ್‍ವೈ ವಾಪಸ್

    ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿಯ ಬೆನ್ನಲ್ಲೇ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.

    ಕೃಷ್ಣ ಮೆನನ್ ಮಾರ್ಗ್ ನಲ್ಲಿರುವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಪ್ರಸ್ತಾಪ ಸಲ್ಲಿಸಿದರು. ಬಳಿಕ ಸಚಿವ ಪಟ್ಟಿಯನ್ನು ಶಾ ಕೈಗೆ ಇಟ್ಟರು. ಆಗ ಅಮಿತ್ ಶಾ, ಈ ಬಗ್ಗೆ ಆಮೇಲೆ ಹೇಳುತ್ತೇವೆ ಎಂದರು. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಮರು ಮಾತನಾಡದೇ ಕೇವಲ ಎರಡೇ ನಿಮಿಷದಲ್ಲಿ ಅಲ್ಲಿಂದ ವಾಪಸ್ ಆದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಕೇವಲ 10 ನಿಮೀಷದಲ್ಲೇ ಜೆ.ಪಿ.ನಡ್ಡಾ, ಬಿಎಸ್‍ವೈ ಚರ್ಚೆ ಅಂತ್ಯ- ನಾಳೆ ಬೆಳಗ್ಗೆ ಬರುವಂತೆ ಸೂಚನೆ

    ಅಮಿತ್ ಶಾ ಭೇಟಿಯ ಬಳಿಕೆ ಮಾತನಾಡಿ ಸಿಎಂ, ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಜೆ.ಪಿ.ನಡ್ಡಾ ಹಾಗೂ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಶುಕ್ರವಾರ ಬೆಳಗ್ಗೆ ಬರಲು ಹೇಳಿದ್ದಾರೆ. ಹಾಗಾಗಿ ನಾಳೆ ಮತ್ತೆ ಬಂದು ಭೇಟಿಯಾಗಿ ಸಂಪುಟ ಫೈನಲ್ ಮಾಡಿಕೊಂಡು ಬೆಂಗಳೂರಿಗೆ ಹೋಗುತ್ತೇನೆ ಎಂದು ತಿಳಿಸಿದರು.

    ಅಮಿತ್ ಶಾ ಅವರು ಕರೆದರೆ ಮಾತ್ರ ನಾಳೆ ಮಧ್ಯಾಹ್ನದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾತುಕತೆ ನಡೆಯಲಿದೆ. ಹಾಗಾಗಿ ನಾಳೆ ಸಂಜೆ ತನಕ ದೆಹಲಿಯಲ್ಲಿ ಕಾದುನೋಡುವ ತಂತ್ರಕ್ಕೆ ಯಡಿಯೂರಪ್ಪ ಶರಣಾಗಿದ್ದಾರೆ.

  • ಕೇವಲ 10 ನಿಮೀಷದಲ್ಲೇ ಜೆ.ಪಿ.ನಡ್ಡಾ, ಬಿಎಸ್‍ವೈ ಚರ್ಚೆ ಅಂತ್ಯ- ನಾಳೆ ಬೆಳಗ್ಗೆ ಬರುವಂತೆ ಸೂಚನೆ

    ಕೇವಲ 10 ನಿಮೀಷದಲ್ಲೇ ಜೆ.ಪಿ.ನಡ್ಡಾ, ಬಿಎಸ್‍ವೈ ಚರ್ಚೆ ಅಂತ್ಯ- ನಾಳೆ ಬೆಳಗ್ಗೆ ಬರುವಂತೆ ಸೂಚನೆ

    – ಸಂಪುಟ ವಿಸ್ತರಣೆ ಬಗ್ಗೆ ಶಾ ಜೊತೆ ಚರ್ಚಿಸಿ- ನಡ್ಡಾ

    ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚೆ  ನಡೆಸಿದರು. ಆದರೆ ಉಭಯ ನಾಯಕರು ಕೇವಲ 10 ನಿಮಿಷಗಳಲ್ಲಿ ಚರ್ಚೆ ಮುಗಿಸಿದರು.

    ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ಹೀಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಬಿಎಸ್‍ವೈ ಮೊದಲು ಭೇಟಿಯಾಗಲು ಕಾಯುತ್ತಿದ್ದರು. ಇತ್ತ ದೆಹಲಿ ಚುನಾವಣಾ ಪ್ರಚಾರದ ಹಿನ್ನೆಲೆ ಜೆ.ಪಿ.ನಡ್ಡಾ ಅವರು ರೊಹೀನಿ ವಿಧಾನಸಭೆ ಕ್ಷೇತ್ರದ ಡಿಸಿ ಚೌಕ್‍ನ ಸಮಾವೇಶದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅವರು ತಡವಾಗಿ ದೆಹಲಿಯ ಮೋತಿ ಲಾಲ್ ನೆಹರು ಮಾರ್ಗ್ ನಿವಾಸಕ್ಕೆ ಆಗಮಿಸಿದರು ತಡವಾಗಿ ನಿವಾಸಕ್ಕೆ ಆಗಮಿಸಿದರು.

    ಜೆ.ಪಿ.ನಡ್ಡಾ ಅವರು ನಿವಾಸಕ್ಕೆ ಆಗಮಿಸಿದ ವಿಚಾರ ತಿಳಿದು ಸಿಎಂ ಯಡಿಯೂರಪ್ಪ ನಡ್ಡಾ ಅವರ ನಿವಾಸಕ್ಕೆ ಆಗಮಿಸಿದರು. ಜೆ.ಪಿ.ನಡ್ಡಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರು ಭೇಟಿಯಾಗಿದ್ದರು. ಹೀಗಾಗಿ ಅವರನ್ನು ಬಿಎಸ್ ಯಡಿಯೂರಪ್ಪ ಅವರು ಸನ್ಮಾನಿಸಿದರು. ಆದರೆ ಉಭಯ ನಾಯಕರು ಕೇವಲ 10 ನಿಮಿಷಗಳಲ್ಲಿ ಚರ್ಚೆ ಮುಗಿಸಿದರು.

    ಚರ್ಚೆ ವೇಳೆ ಜೆ.ಪಿ.ನಡ್ಡಾ ಅವರು, ಸಂಪುಟ ವಿಸ್ತರಣೆ ಮತ್ತು ಪುನರ್ ರಚನೆ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಿ. ಅವರೇ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರು ಅಮಿತ್ ಶಾ ಅವರ ನಿವಾಸದತ್ತ ಪ್ರಯಾಣ ಬೆಳೆಸಿದರು.

    ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ನಾಳೆ ಬೆಳಗ್ಗೆ ಬರುವಂತೆ ನಡ್ಡಾ ಅವರು ಸೂಚಿಸಿದ್ದಾರೆ. ಹೀಗಾಗಿ ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರನ್ನು ನಾಳೆ ಭೇಟಿಯಾಗಿ ಸಚಿವ ಪಟ್ಟಿಯನ್ನು ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.