Tag: karnataka byelections 2019

  • ಟೀ ಮಾರಿದ್ದ ಮೋದಿ ಪ್ರಧಾನಿಯಾದ್ರು, ನಾನು ಟೀ ಗ್ಲಾಸು ತೊಳೆದ್ರೆ ತಪ್ಪೇನು- ನಾರಾಯಣ ಗೌಡ

    ಟೀ ಮಾರಿದ್ದ ಮೋದಿ ಪ್ರಧಾನಿಯಾದ್ರು, ನಾನು ಟೀ ಗ್ಲಾಸು ತೊಳೆದ್ರೆ ತಪ್ಪೇನು- ನಾರಾಯಣ ಗೌಡ

    ಮಂಡ್ಯ: ಕೆಆರ್ ಪೇಟೆ ಕದನ ಕಣದಲ್ಲಿ ಮುಂಬೈ ವಿಚಾರ ಸಖತ್ ಸದ್ದು ಮಾಡುತ್ತಿದೆ. ನಾನು ಕೂಲಿ ಮಾಡಿದ್ದೇನೆ. ಹೊಟೇಲ್‍ನಲ್ಲಿಯೂ ಕೆಲಸ ಮಾಡಿದ್ದೇನೆ. ಈಗಲೂ ನಾನು ಲೋಟ ತೊಳೆಯುತ್ತೇನೆ. ನನ್ನ ಹೊಟೇಲಿನಲ್ಲಿ ತಟ್ಟೆ, ಗ್ಲಾಸು ತೊಳೆದ್ರೆ ಏನು ತಪ್ಪು ಅಂತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪ್ರಶ್ನಿಸಿದ್ದಾರೆ.

    ಕೆಆರ್ ಪೇಟೆಯ ವಡ್ಡರಹಳ್ಳಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಟೀ ಮಾರುತ್ತಿದ್ದರು. ಈಗ ಅವರು ನಮ್ಮ ದೇಶದ ಪ್ರಧಾನಿ ಆಗಿದ್ದಾರೆ. ತಟ್ಟೆ ಗ್ಲಾಸು ತೊಳೆದ್ರೆ ಏನು ತಪ್ಪು ಅನ್ನೋ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ಗುದ್ದು ನೀಡಿದ್ದಾರೆ. ಜೊತೆಗೆ ಇದೇ ವಿಚಾರವನ್ನೇ ಪ್ರಚಾರದಲ್ಲಿ ಪ್ರಸ್ತಾಪಿಸಿ ಅನುಕಂಪ ಗಿಟ್ಟಿಸಲು ನಾರಾಯಣಗೌಡ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ದೇವೇಗೌಡರ ಬೀಗರು ಕೆಆರ್ ಪೇಟೆಯನ್ನು ಕಮಾಟಿಪುರ ಮಾಡುವುದಾಗಿ ಹೇಳುತ್ತಾರೆ. ನನ್ನ ಮನಸ್ಸಿನಲ್ಲಿ ಇದುವರೆಗೂ ಅಂತಹ ಭಾವನೆ ಬಂದಿಲ್ಲ. ಡಿ.ಸಿ.ತಮ್ಮಣ್ಣ ಕಮಾಟಿಪುರನಾ ಅವರ ತಾಲೂಕಿನಲ್ಲಿ ಮಾಡಿಕೊಳ್ಳಲಿ. ನನ್ನ ಶರೀರದಲ್ಲಿ ಉಸಿರಿರುವವರೆಗೆ ನನ್ನ ತಾಲೂಕಿನಲ್ಲಿ ಹೀಗೆ ಮಾಡೋಕೆ ಬಿಡಲ್ಲ. ರಾಜ್ಯದಲ್ಲೂ ಹೀಗೆ ಮಾಡೋಕೆ ಬಿಡಲ್ಲ. ವೀರಭದ್ರಸ್ವಾಮಿ ದೇವಸ್ಥಾನದ ಮುಂದೆ ಹೇಳುತ್ತಿದ್ದೀನಿ ಎಂದು ಪ್ರಮಾಣ ಮಾಡಿದರು. ಇದನ್ನೂ ಓದಿ: ನಾನೇನು ತಪ್ಪು ಮಾಡಿದೆ, ನನ್ನನ್ನು ಯಾಕೆ ಕೈ ಬಿಟ್ಟಿರಿ – ಮಂಡ್ಯದಲ್ಲಿ ಎಚ್‍ಡಿಕೆ ಮತ್ತೆ ಕಣ್ಣೀರು

    ನಾನು ಇದುವರೆಗೂ ಸರಿಯಾಗಿ ಕಮಾಟಿಪುರ ನೋಡೇ ಇಲ್ಲ. ಕಾರಲ್ಲಿ ಹೋಗುವಾಗ ನಾನು ದೂರದಿಂದ ನೋಡಿದ್ದೇನೆ ಅಷ್ಟೇ. ಕಮಾಟಿಪುರನಾ ಹತ್ತಿರದಿಂದ ತಮ್ಮಣ್ಣ ಅವರು ನೋಡಿಕೊಂಡು ಬಂದಿದ್ದಾರೆ. ಅದಕ್ಕೆ ಬೇಕಿದ್ರೆ ಅವರ ತಾಲೂಕಿನಲ್ಲಿ ಮಾಡಿಕೊಳ್ಳಲಿ. ನಾನು ಬಿಜೆಪಿ ಸೇರಿದ್ದೇನೆ ಎಂದು ಜೆಡಿಎಸ್ ಕುಟುಂಬ ಮನೆ ಮನೆಗೆ ಪ್ರಚಾರಕ್ಕೆ ಬರುತ್ತಾ ಇದೆ. ಅಂದು ನಾನು ಎಲೆಕ್ಷನ್‍ನಲ್ಲಿ ನಿಂತಾಗ ಯಾಕೆ ಅವರು ಬರಲಿಲ್ಲ. ನನ್ನ ಸೋಲಿಸಲು ಗ್ರೂಪ್ ಮಾಡಿಕೊಂಡು ತಿರುಗಿದರು ಎಂದು ವಾಗ್ದಾಳಿ ನಡೆಸಿದರು.

    ನನ್ನ ಬಾಂಬೆ ಕಳ್ಳ ಅಂತಾರೇ. ಹಾಗಿದ್ರೆ ನನ್ನ ಮನೆಗೆ 15 ವರ್ಷದಿಂದ ಯಾಕೆ ಬರ್ತಾ ಇದ್ರಿ. ಇಡೀ ಕುಟುಂಬ ಯಾಕೆ ನನ್ನ ಹತ್ತಿರ ಬರ್ತಾ ಇದ್ರಿ. ಇಡೀ ಕುಟುಂಬ ಬಾಂಬೆಗೆ ಬಂದ್ರೆ ನನಗೆ ಹೇಳ್ತಾ ಇದ್ರಿ. ಆಗ ನಾನು ಕಳ್ಳ ಆಗಿರಲಿಲ್ವಾ. ನಾನು ಬಿಜೆಪಿಗೆ ಸೇರಿದ ಮೇಲೆ ಕಳ್ಳನಾ. ಬಿಜೆಪಿ ಪಕ್ಷ ಕಳ್ಳತನದ ಪಕ್ಷ ಅಲ್ಲ. ನಾನು ಚೆಕ್ ಮಾಡಿದ್ದೇನೆ. ಮಹಾರಾಷ್ಟ್ರ, ದೆಹಲಿ ಎಲ್ಲಾ ಕಡೆ ಚೆಕ್ ಮಾಡಿದ್ದೇನೆ. ಬಿಜೆಪಿ ಪ್ರಮಾಣಿಕರ ಪಕ್ಷ ಎಂದರು.

     

  • ಹಳ್ಳಿಹಕ್ಕಿಗೆ ಹೆಚ್ಚಾಯ್ತು ಸಿದ್ದು ಮೇಲೆ ಪ್ರೀತಿ – ದೇವೇಗೌಡ್ರನ್ನು ದೇವರೆಂದ ವಿಶ್ವನಾಥ್

    ಹಳ್ಳಿಹಕ್ಕಿಗೆ ಹೆಚ್ಚಾಯ್ತು ಸಿದ್ದು ಮೇಲೆ ಪ್ರೀತಿ – ದೇವೇಗೌಡ್ರನ್ನು ದೇವರೆಂದ ವಿಶ್ವನಾಥ್

    ಮೈಸೂರು: ಹಳ್ಳಿಹಕ್ಕಿಗೆ ಇತ್ತೀಚೆಗೆ ಯಾಕೋ ಏನೋ ಸಿದ್ದು ಮೇಲೆ ಪ್ರೀತಿ ಜಾಸ್ತಿ ಆದಂಗೆ ಕಾಣಿಸುತ್ತಿದೆ. ಸಿದ್ದರಾಮಯ್ಯರನ್ನು ಕಂಡ್ರೆ ಉರಿದು ಬೀಳ್ತಿದ್ದ ವಿಶ್ವನಾಥ್ ಈಗ ಸಿದ್ದು ನಾನು ಅಣ್ತಮ್ಮ ಅಂತಿದ್ದಾರೆ. ಹಳ್ಳಿಹಕ್ಕಿಯ ಈ ನಡೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

    ಒಂದ್ಕಡೆ ಹುಣಸೂರು ಚುನಾವಣಾ ಕಣ ರಂಗೇರ್ತಿದೆ. ಮತ್ತೊಂದು ಕಡೆ ಹಳ್ಳಿಹಕ್ಕಿ ಪ್ರಚಾರ ಕಣದಲ್ಲಿ ಹೊಸ ಹೊಸ ರಾಗ ತೆಗೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್ ಯಾವಾಗ ಯಾರನ್ನ ಟೀಕಿಸ್ತಾರೋ, ಯಾರನ್ನು ಹೊಗಳ್ತಾರೋ ಅನ್ನೋದು ಗೊತ್ತಾಗಲ್ಲ. ಯಾಕಂದ್ರೆ ಅಷ್ಟರ ಮಟ್ಟಿಗೆ ವಿಶ್ವನಾಥ್ ವರ್ತನೆ ಬದಲಾಗ್ತಿದೆ. ವಿಶ್ವನಾಥ್ ಬೈ ಎಲೆಕ್ಷನ್ ಅಖಾಡದಲ್ಲಿ ಅಚ್ಚರಿಯ ಸ್ಟೇಟ್‍ಮೆಂಟ್‍ಗಳನ್ನು ಕೊಡುತ್ತಿದ್ದು, ರಾಜಕೀಯವಲಯದಲ್ಲಿ ಕುತೂಹಲ ಕೆರಳಿಸಿದೆ.

    ಸಿದ್ದರಾಮಯ್ಯರನ್ನು ಯಾವಾಗ್ಲೂ ಟೀಕಿಸುತ್ತಿದ್ದ ವಿಶ್ವನಾಥ್ ದಿಢೀರನೇ ಪ್ಲೇಟ್ ಚೇಂಜ್ ಮಾಡಿದ್ದಾರೆ. ಸಿದ್ದರಾಮಯ್ಯರನ್ನು ನಾನು ಇಷ್ಟಪಡ್ತಿನಿ. ಯಾಕಂದ್ರೆ ಅವರೊಬ್ಬ ಒಬ್ಬ ಉತ್ತಮ ಆಡಳಿತಗಾರ. ಭ್ರಷ್ಟಾಚಾರಿ ಅಲ್ಲ. ಅಂತ ಹೊಸ ಹೊಸ ಹೇಳಿಕೆಗಳನ್ನು  ಕೊಡುತ್ತಿದ್ದಾರೆ.

    ವಿಶ್ವನಾಥ್ ಈ ಹೊಸ ವರಸೆಗೆ ಕುರುಬ ಸಮುದಾಯದ ಮತಗಳು ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಹುಣಸೂರು ಕ್ಷೇತ್ರದಲ್ಲಿ 40 ಸಾವಿರ ಕುರುಬ ಸಮುದಾಯದ ಮತಗಳಿವೆ. ಸಿದ್ದರಾಮಯ್ಯ ಪರವಾಗಿ ಈ ಮತಗಳು ಹೆಚ್ಚು ಕಾಂಗ್ರೆಸ್ಸಿನತ್ತ ಹೋಗುವ ಸಾಧ್ಯತೆ ಇದೆ. ಹಾಗಾಗಿ ಇದನ್ನು ತಡೆಯುವ ಸಲುವಾಗಿ ವಿಶ್ವನಾಥ್, ಸಿದ್ದರಾಮಯ್ಯರನ್ನು ಗುಣಗಾನ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಇಷ್ಟು ಮಾತ್ರವಲ್ಲ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ್ರಿಗೂ ವಿಶ್ವನಾಥ್ ದೇವರ ಸ್ಥಾನ ನೀಡಿದ್ದಾರೆ. ದೇವೇಗೌಡ್ರ ಫೋಟೋವನ್ನು ದೇವರ ಮನೆಯಲ್ಲಿ ಇಡ್ತೀನಿ. ದೇವೇಗೌಡ್ರು ನನ್ನ ಹೃದಯದಲ್ಲಿದ್ದಾರೆ ಎನ್ನುತ್ತಿದ್ದಾರೆ. ಇಲ್ಲಿ ಮತಗಳಿಕೆಯ ಲೆಕ್ಕಕ್ಕಿಂತ ಆ ಮತಗಳು ಪಕ್ಷದಲ್ಲೇ ಉಳಿಸುವ ತಂತ್ರ ಎದ್ದು ಕಾಣ್ತಿದೆ.

    ಹುಣಸೂರು ಮತಕ್ಷೇತ್ರದಲ್ಲಿ 45 ಸಾವಿರ ಒಕ್ಕಲಿಗ ಮತಗಳಿದ್ದರೂ, ಆ ಮತಗಳ ಮೇಲೆ ವಿಶ್ವನಾಥ್‍ಗೆ ವಿಶ್ವಾಸವಿದ್ದಂತೆ ಕಾಣ್ತಿಲ್ಲ. ಹಾಗಾಗಿ ತಮಗೆ ಆ ವೋಟ್ ಬೀಳದಿದ್ರೂ ಪರವಾಗಿಲ್ಲ, ಕಾಂಗ್ರೆಸ್ ಪಾಲಾಗಬಾರದು. ಆ ವೋಟುಗಳು ಜೆಡಿಎಸ್ ಬುಟ್ಟಿಯನ್ನಷ್ಟೆ ಸೇರಬೇಕು ಎಂಬುದು ಇವರ ಲೆಕ್ಕ. ಆದರೆ ಹಳ್ಳಿ ಹಕ್ಕಿಯ ಈ ಲೆಕ್ಕಾಚಾರದ ಗುರಿ ಸರಿಯಾಗಿ ತಲುಪುತ್ತಾ, ಇಲ್ಲ ಮತದಾರ ಇನ್ಯಾವ ಸ್ಟ್ರಾಟಜಿಯಲ್ಲಿ ಇದ್ದಾನೋ ಕಾದು ನೋಡಬೇಕಿದೆ.

  • ಬಿಎಸ್‍ವೈಗೆ ತನ್ನ ಕೈಯಾರೆ ಶೂ ತಂದು ಕೊಟ್ಟ ಆನಂದ್ ಸಿಂಗ್

    ಬಿಎಸ್‍ವೈಗೆ ತನ್ನ ಕೈಯಾರೆ ಶೂ ತಂದು ಕೊಟ್ಟ ಆನಂದ್ ಸಿಂಗ್

    ಬಳ್ಳಾರಿ: ಪ್ರಚಾರಕ್ಕೆ ತೆರಳಿದ್ದ ವೇಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಶೂ ಹಾಕಲು ಸಹಾಯ ಮಾಡಿದ ಪ್ರಸಂಗ ಇಂದು ನಡೆಯಿತು.

    ಹೊಸಪೇಟೆಯಲ್ಲಿ ಬಿಜೆಪಿ ಮುಖಂಡ ಭರಮಲಿಂಗನಗೌಡ ನಿವಾಸಕ್ಕೆ ಬಿಎಸ್‍ವೈ ಭೇಟಿ ನೀಡಿದ್ದರು. ಮತ ಕೇಳಿದ ಬಳಿಕ ಬಿಎಸ್‍ವೈ ಅವರಿಗೆ ಆನಂದ್ ಸಿಂಗ್ ತಮ್ಮ ಕೈಯಾರೆ ಶೂ ತಂದು ಕೊಟ್ಟರು. ಇದನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.

    ಒಟ್ಟಿನಲ್ಲಿ ಡಿಸೆಂಬರ್ 5 ರಂದು ನಡೆಯುವ ಉಪಚುನಾವಣೆಗೆ ಅಭ್ಯರ್ಥಿಗಳು ರೆಡಿಯಾಗಿದ್ದು, ಭರ್ಜರಿ ಪ್ರಚಾರಕ್ಕೆ ಧುಮುಕಿದ್ದಾರೆ. ಇತ್ತ ಪಕ್ಷದ ನಾಯಕರು ಕೂಡ ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.