Tag: Karnataka Budget Session 2024

  • ವಿಧಾನ ಪರಿಷತ್‌ನಲ್ಲಿ ಗಲಾಟೆ ಸೃಷ್ಟಿಸಿದ ಕೇಂದ್ರ ಸರ್ಕಾರದ ಅನುದಾನ ಫೈಟ್

    ವಿಧಾನ ಪರಿಷತ್‌ನಲ್ಲಿ ಗಲಾಟೆ ಸೃಷ್ಟಿಸಿದ ಕೇಂದ್ರ ಸರ್ಕಾರದ ಅನುದಾನ ಫೈಟ್

    ಬೆಂಗಳೂರು: ಕೇಂದ್ರ ಸರ್ಕಾರದ ಅನುದಾನ ವಿಚಾರವಾಗಿ ವಿಧಾನ ಪರಿಷತ್ ಕಲಾಪದಲ್ಲಿ ಗದ್ದಲ ಗಲಾಟೆ ನಡೆದು ಅಧಿವೇಶನ ಮುಂದೂಡಿಕೆಯಾದ ಘಟನೆ ಇಂದು (ಗುರುವಾರ) ನಡೀತು.‌

    ವಿಧಾನ ಪರಿಷತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯರಿಗೆ (Siddaramaiah) ಕೇಂದ್ರದ ಅನುದಾನ ಬಿಡುಗಡೆ ಕುರಿತು ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ಕೊಟ್ಟ ಸಿಎಂ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ವಿಚಾರದಲ್ಲಿ ಅನ್ಯಾಯ ಆಗಿದೆ. 15 ನೇ ಹಣಕಾಸು ಆಯೋಗ ವಿಶೇಷ ಅನುದಾನ ಅಂತ 5 ಸಾವಿರ ಕೋಟಿ ಮತ್ತು ಇದರ ಜೊತೆಗೆ ಫೆರಿಫೆರಲ್ ರಿಂಗ್ ರೋಡ್ ಮತ್ತು ಕೆರೆಗಳ ಅಭಿವೃದ್ಧಿ, ಸೇರಿ 6 ಸಾವಿರ ಕೋಟಿ ಅನುದಾನ ಘೋಷಣೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈವರೆಗೂ ಒಂದು ರೂಪಾಯಿ ಹಣ ಕೊಟ್ಟಿಲ್ಲ ಎಂದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಎಂ ಸಿದ್ದರಾಮಯ್ಯ

    ರಾಜ್ಯದಿಂದ 4 ಲಕ್ಷ 30 ಸಾವಿರ ಕೋಟಿ ಈ ವರ್ಷ ತೆರಿಗೆ ಹೋಗಿದೆ. ಆದರೆ ಕೇಂದ್ರ ನಮಗೆ ಕೊಡೋದು 50 ಸಾವಿರ ಕೋಟಿ ಮಾತ್ರ. 100 ರೂಪಾಯಿ ಹಣ ಸಂಗ್ರಹ ಆದರೆ ಅದರಲ್ಲಿ ನಮ್ಮ ರಾಜ್ಯಕ್ಕೆ 12 ರಿಂದ 13 ರೂಪಾಯಿ ಮಾತ್ರ ಸಿಗುತ್ತಿದೆ ಅಂತ ಆರೋಪ ಮಾಡಿದ್ರು. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿಯೂ ಕೊಟ್ಟಿಲ್ಲ. ನಾನೇ ಕೇಂದ್ರ ಮಂತ್ರಿಗಳಿಗೆ ಮನವಿ ಮಾಡಿದ್ರೂ ಕೊಟ್ಟಿಲ್ಲ ಅಂತ ಆರೋಪ ಮಾಡಿದ್ರು.

    ಪ್ರಶ್ನೋತ್ತರ ಅವಧಿಯಲ್ಲಿ ಸಿಎಂ ಸುದೀರ್ಘ ಉತ್ತರ ಕೊಡ್ತಿದ್ದರು. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು‌. ಪ್ರಶ್ನೋತ್ತರ ಅವಧಿ ಒಂದು ಪ್ರಶ್ನೆಗೆ 4 ನಿಮಿಷ ಅಂತ ಕೋಟಾ ಶ್ರೀನಿವಾಸ ಪೂಜಾರಿ ಕಿಡಿಕಾರಿದರು. ಇದೇ ವೇಳೆ ಸಿಎಂ ಹೇಳಿಕೆಗೆ ಕ್ಲಾರಿಫಿಕೇಶನ್‌ ಕೇಳೋಕೆ ಅಂತ ಬಿಜೆಪಿ ಸದಸ್ಯ ರುದ್ರೇಗೌಡ ಕೈ ಎತ್ತಿದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಿಟ್ಟಾಗಿ, ಏಯ್ ಕುಳಿತಿಕೊಳ್ಳಿ ಅಂದರು. ಬಿಜೆಪಿ ಸದಸ್ಯರಿಂದ ಸಿಎಂ ಮಾತಿಗೆ ವಿರೋಧ ಮಾಡಿದ್ದಕ್ಕೆ ಸಿಟ್ಟಾದ ಸಿಎಂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ, ಬಿಜೆಪಿ ಅವರು ಕನ್ನಡಿಗರ ವಿರೋಧಿಗಳು. ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ತಿದ್ದಾರೆ. ಬಿಜೆಪಿ ಅವರು 7 ಕೋಟಿ ಕನ್ನಡಿಗರ ವಿರುದ್ಧ ಇದ್ದಾರೆ. ‌ಇದು ಶೇಮ್ ಶೇಮ್ ಎಂದರು. ಸುಳ್ಳಿಗೆ ಮತ್ತೊಂದು ಹೆಸರು ಬಿಜೆಪಿ. ಈಗ ಜೆಡಿಎಸ್ ಸೇರಿಕೊಂಡಿದೆ. ಸತ್ಯ ಯಾವತ್ತು ಸತ್ಯವೇ. ಬಿಜೆಪಿ ಅವರಿಗೆ ತಡೆದುಕೊಳ್ಳೋಕೆ ಆಗ್ತಿಲ್ಲ. ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್ ಡಿಸ್ಟರ್ಬ್ ಆಗಿದ್ದಾರೆ. ಅದಕ್ಕೆ ಹೀಗೆ ಮಾತಾಡ್ತಿದ್ದಾರೆ. ಸತ್ಯ ಯಾವತ್ತು ಸುಳ್ಳು ಆಗೊಲ್ಲ ಎಂದ ಸಿದ್ದರಾಮಯ್ಯ ಕಿಡಿಕಾರಿದರು. ಇದನ್ನೂ ಓದಿ: ಜಮ್ಮು & ಕಾಶ್ಮೀರದಲ್ಲಿ ಏಕಾಂಗಿಯಾಗಿ ಸ್ಪರ್ಧೆ- NDA ಸೇರುವ ಸುಳಿವು ಕೊಟ್ರಾ ಫಾರೂಕ್ ಅಬ್ದುಲ್ಲಾ?

    ಈ ವೇಳೆ ಬೇಡ ಬೇಡ ಭಾಷಣ ಬೇಡ ಅಂತ ಬಿಜೆಪಿ ಸದಸ್ಯರ ಘೋಷಣೆ ಕೂಗಿದರು‌. ಸಿದ್ದರಾಮಯ್ಯ ಉತ್ತರಕ್ಕೆ ಬಿಜೆಪಿ ವಿರೋಧ ಮಾಡ್ತು. ಈ ವೇಳೆ ಸದನದಲ್ಲಿ ಗದ್ದಲ ಗಲಾಟೆ ಆಯ್ತು‌. ಬಿಜೆಪಿ ಗಲಾಟೆಗೆ ಸಿಎಂ ಆಕ್ರೋಶಗೊಂಡ್ರು.

    ಈ ವೇಳೆ ಮಾತನಾಡಿದ ಸಿಎಂ, ಏನು ಗೂಂಡಾಗಿರಿ ಮಾಡ್ತೀರಾ. ಇದಕ್ಕೆಲ್ಲಾ ನಾವು ಹೆದರೊಲ್ಲ. ರಾಜ್ಯದ ಜನ ನೋಡ್ತಿದ್ದಾರೆ‌. ರಾಜ್ಯಕ್ಕೆ ಹೇಗೆ ಅನ್ಯಾಯ ಮಾಡ್ತಿದ್ದೀರಾ ಅಂತ ಜನ ನೋಡ್ತಿದ್ದಾರೆ‌ ಅಂತ ಕಿಡಿಕಾರಿದರು.

    ಗೂಂಡಾಗಿರಿ ಪದ ಬಳಕೆ ಮಾಡಿದ ಸಿಎಂ ಮಾತಿಗೆ ವಿಪಕ್ಷ ನಾಯಕ ಪೂಜಾರಿ ವಿರೋಧ ಮಾಡಿದ್ರು. ಮತ್ತೆ ನಿಮ್ಮ ಗೂಂಡಾಗಿರಿಗೆ ನಾವು ಹೆದರೊಲ್ಲ ಎಂದ ಸಿಎಂ, ನೀವು ಏನೇ ಹೇಳಿದ್ರು ಸತ್ಯ ಹೇಳ್ತೀವಿ‌. ರಾಜ್ಯದ ಜನ ನಿಮಗೆ ಛೀ..ಥೂ.. ಅಂತ ಉಗಿಯುತ್ತಿದ್ದಾರೆ. ‌ನಾಚಿಕೆ ಆಗೊಲ್ಲ ಎಂದರು. ಗದ್ದಗ ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನ 10 ನಿಮಿಷ ಮುಂದೂಡಿದೆ. ಕಲಾಪ ಸಭಾಪತಿಗಳು ಮುಂದೂಡಿಕೆ ಮಾಡಿದ್ರು. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಬಹಿರಂಗಪಡಿಸಿದ ಸೋನಿಯಾ ಗಾಂಧಿ

    ಮತ್ತೆ ಸದನದ ಕಲಾಪ ಪ್ರಾರಂಭವಾದಾಗ, ಸಿಎಂ ಸಿದ್ದರಾಮಯ್ಯ ನಮ್ಮನ್ನ ಗೂಂಡಾಗಳು ‌ಅಂದಿದ್ದಾರೆ. ಹೀಗಾಗಿ ಸಿಎಂ ಕ್ಷಮೆ ಕೇಳಬೇಕು‌ ಅಂತ ವಿಪಕ್ಷಗಳು ಬಿಗಿಪಟ್ಟು ಹಿಡಿದವು. ರುದ್ರೇಗೌಡರಿಗೆ ಸಿಎಂ ಹಾಗೇ ಮಾತಾಡೋದು ಸರಿಯಲ್ಲ ಅಂತ ಬಿಜೆಪಿ ಕಿಡಿಕಾರಿತು. ಮಧ್ಯೆ ಪ್ರವೇಶ ಮಾಡಿದ ಸಭಾಪತಿ, ಗೂಂಡಾ ಎಂಬ ಪದವನ್ನ ಕಡತದಿಂದ ತೆಗೆದು ಹಾಕಲು ಸೂಚನೆ‌ ಕೊಟ್ಟರು. ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಸಿಎಂ ಕ್ಷಮೆ ಕೇಳಬೇಕು ಅಂತ ಪಟ್ಟು ಹಿಡಿದರು. ಆದರೆ ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಲು‌ ನಿರಾಕರಿಸಿದರು. ‌ಈ ವೇಳೆ ಪ್ರಶ್ನೋತ್ತರ ಕಲಾಪವನ್ನ ಸಭಾಪತಿಗಳು ಮೊಟಕುಗೊಳಿಸಿದರು. ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳದ ಹಿನ್ನೆಲೆಯಲ್ಲಿ, ಬಿಜೆಪಿ, ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದ್ರು.

  • ತೆರಿಗೆ ತಾರತಮ್ಯ; ರಾಜ್ಯಪಾಲರ ಭಾಷಣ ಮೂಲಕ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಕಿಡಿ

    ತೆರಿಗೆ ತಾರತಮ್ಯ; ರಾಜ್ಯಪಾಲರ ಭಾಷಣ ಮೂಲಕ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಕಿಡಿ

    – ಗ್ಯಾರಂಟಿಗಳ ಜಾರಿ ಸಾರ್ವತ್ರಿಕ ದಾಖಲೆ ಎಂದ ರಾಜ್ಯಪಾಲರು

    ಬೆಂಗಳೂರು: ಕರ್ನಾಟಕ ವಿಧಾನಮಂಡಲ ಬಜೆಟ್‌ ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನಸಭೆ ಮತ್ತು ಪರಿಷತ್‌ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಭಾಷಣ ಮಾಡಿದರು.

    ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಪ್ರಸ್ತಾಪಿಸಿ ಮಾತನಾಡಿದ ಅವರು, ಸರ್ಕಾರ ನುಡಿದಂತೆ ನಡೆದಿದೆ. ಕೊಟ್ಟ ವಚನ ಪಾಲಿಸಿದೆ. ಜನರ ಪ್ರೀತಿ, ವಿಶ್ವಾಸ, ಭರವಸೆಗಳಿಗೆ ಧಕ್ಕೆಯಾಗದೇ ನಡೆದುಕೊಂಡಿದೆ. ಸರ್ಕಾರ ಏಳು ಕೋಟಿ ಜನರ ಬದುಕಿನಲ್ಲಿ ಬದಲಾವಣೆ ಗಾಳಿ ಬೀಸುವಂತೆ ಮಾಡಿದೆ. ಸರ್ಕಾರದ ಪಂಚ ಗ್ಯಾರಂಟಿಗಳು ಆರ್ಥಿಕ ಅಸಮಾನತೆಯಿಂದ ಬಸವಳಿದ ಜನರಿಗೆ ಸಾಂತ್ವನ ನೀಡಿದೆ ಎಂದು ಬಣ್ಣಿಸಿದ್ದಾರೆ.

    ರಾಜ್ಯದಲ್ಲಿ ಬರಗಾಲವಿದ್ದರೂ ರೈತರ ಆತ್ಮಹತ್ಯೆ ಕಳೆದ ವರ್ಷಕ್ಕಿಂತ ಕಡಿಮೆ ಆಗಿದೆ. ಸರ್ಕಾರ 8 ತಿಂಗಳಲ್ಲೇ ಗಮನಾರ್ಹ ಸಾಧನೆ ಮಾಡಿದೆ. ಯೋಜನೆಗಳು ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೇ ಜನರಿಗೆ ತಲುಪುತ್ತಿವೆ. ಗ್ಯಾರಂಟಿಗಳನ್ನು ಗೊಂದಲ ಇಲ್ಲದೇ ಜಾರಿ ಮಾಡಲಾಗಿದೆ. ಗ್ಯಾರಂಟಿಗಳ ಜಾರಿ ಸಾರ್ವತ್ರಿಕ ದಾಖಲೆ. ಸರ್ಕಾರದ ಗ್ಯಾರಂಟಿಗಳ ಬಗ್ಗೆ ದೇಶ-ವಿದೇಶಗಳ ಮಾಧ್ಯಮಗಳೂ ಶ್ಲಾಘನೆ ಮಾಡಿವೆ ಎಂದು ಹೇಳಿದ್ದಾರೆ.

    ಜಂಟಿ ಅಧಿವೇಶನದಲ್ಲಿ ಕೇಂದ್ರದ ತೆರಿಗೆ ತಾರತಮ್ಯ ಪ್ರಸ್ತಾಪಿಸಲಾಯಿತು. ವಿವಿಧ ಮೂಲಗಳಿಂದ ಸಿಗಬೇಕಾದಷ್ಟು ಸಂಪನ್ಮೂಲಗಳು ಸಿಗುತ್ತಿಲ್ಲ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ತೆರಿಗೆಯ ಪಾಲು ಪಡೆಯುವ ವಿಚಾರದಲ್ಲಿ 10ನೇ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯಲು ನನ್ನ ಸರ್ಕಾರವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ಮೂಲಕ ಕೇಂದ್ರಕ್ಕೆ ರಾಜ್ಯ ಸರ್ಕಾರ ಟಾಂಗ್‌ ಕೊಟ್ಟಿದೆ.