Tag: Karnataka Budget 2025

  • ಎಲ್ಲ ಸಮುದಾಯಗಳಿಗೆ ಪೂರಕವಾದ ಬಜೆಟ್ ನೀಡಿದ್ದೇವೆ – ಎಂ.ಬಿ ಪಾಟೀಲ್

    ಎಲ್ಲ ಸಮುದಾಯಗಳಿಗೆ ಪೂರಕವಾದ ಬಜೆಟ್ ನೀಡಿದ್ದೇವೆ – ಎಂ.ಬಿ ಪಾಟೀಲ್

    ವಿಜಯಪುರ: 2025-26ನೇ ಸಾಲಿನ ಬಜೆಟ್‌ನಲ್ಲಿ ಎಲ್ಲ ಸಮುದಾಯಗಳಿಗೆ ಪೂರಕವಾದ ಬಜೆಟ್ ನೀಡಿದ್ದೇವೆ. ಹಿಂದುಳಿದವರು, ದಲಿತರಿಗೆ ಕೊಟ್ಟಿದ್ದೇವೆ. ಮುಸ್ಲಿಂ ಬಜೆಟ್ ಎನ್ನುವವರ ಕಣ್ಣು ಹಳದಿಯಾಗಿದೆ ಎಂದು ಸಚಿವ ಎಂ.ಬಿ ಪಾಟೀಲ್ (MB Patil) ಹೇಳಿದರು.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮಗೆ ಮುಸ್ಲಿಮರಿಗೆ ನೀಡಿದ್ದು ಮಾತ್ರ ಯಾಕೆ ಕಾಣುತ್ತದೆ? ಬಿಜೆಪಿಯವರು ನಾಲ್ಕು ವರ್ಷ ಏನು ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಿಯಾಂಕ್ ಖರ್ಗೆ (Priyank Kharge) ಸರಿಯಾಗಿ ಹೇಳಿದ್ದಾರೆ ಎಂದರು.ಇದನ್ನೂ ಓದಿ: ನನ್ನ ಜೀವನವು ಕೋಟ್ಯಂತರ ತಾಯಂದಿರ ಆಶೀರ್ವಾದ: ಲಕ್‌ಪತಿ ದೀದಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಮಾತು

    ಹಲಾಲ್ ಬಜೆಟ್ ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರೇ ಹಲಾಲ್ ತಿನ್ನುತ್ತಿರುತ್ತಾರೆ ಎಂದು ಟಾಂಗ್ ಕೊಟ್ಟರು.

    ಇನ್ನೂ ನಾಳೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಕುರಿತು ಮಾತನಾಡಿದ ಅವರು, ಭಾರತ ತಂಡ ಫೈನಲ್‌ನಲ್ಲಿ ಗೆಲ್ಲಲಿದೆ. ಇದೀಗ ಟೀಂ ಇಂಡಿಯಾ ಒಳ್ಳೆಯ ಫಾರ್ಮ್ನಲ್ಲಿದೆ. ತಂಡದಲ್ಲಿ ಯಾರು ಒಳ್ಳೆಯ ಆಟ ಆಡುತ್ತಾರೆ ಎನ್ನುವುದರ ಮೇಲೆ ಗೆಲುವು ನಿಂತಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.ಇದನ್ನೂ ಓದಿ: ಮೈಸೂರು | ಲವ್ ಜಿಹಾದ್‌ಗೆ ನಕಲಿ ವಿಳಾಸ ಬಳಕೆ – ಹಿಂದೂ ಯುವತಿ ಮದ್ವೆಗೆ ಅನ್ಯಕೋಮಿನ ಯುವಕ ಯತ್ನ

     

  • ಮುಸ್ಲಿಂ ಲೀಗ್ ಬಜೆಟ್.. ಜಿನ್ನಾ ಆತ್ಮವೇ ಸಿದ್ದರಾಮಯ್ಯಗೆ ಪ್ರಚೋದನೆ ಕೊಟ್ಟಿರಬಹುದು: ಸಿ.ಟಿ.ರವಿ

    ಮುಸ್ಲಿಂ ಲೀಗ್ ಬಜೆಟ್.. ಜಿನ್ನಾ ಆತ್ಮವೇ ಸಿದ್ದರಾಮಯ್ಯಗೆ ಪ್ರಚೋದನೆ ಕೊಟ್ಟಿರಬಹುದು: ಸಿ.ಟಿ.ರವಿ

    – ಮುಲ್ಲಾ, ಮುಸ್ಲಿಂ ಗುರುಗಳ ಗೌರವಧನ ಹೆಚ್ಚಿಸಿದ್ದಾರೆ
    – ಕೃಷ್ಣ ಮೇಲ್ದಂತೆ, ತುಂಗಭದ್ರಾ ಯೋಜನೆಗೆ ಬಿಡಿಗಾಸು ಕೊಟ್ಟಿಲ್ಲ ಎಂದು ಎಂಎಲ್‌ಸಿ ಕಿಡಿ

    ಬೆಳಗಾವಿ: ಇದು ಮುಸ್ಲಿಂ ಲೀಗ್ ಬಜೆಟ್. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅವರಿಗೆ ಪ್ರಚೋದನೆ ಕೊಟ್ಟಿರಬಹುದು ಎಂದು ರಾಜ್ಯ ಬಜೆಟ್ ಬಗ್ಗೆ ಎಂಎಲ್‌ಸಿ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.

    ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು 16ನೇ ದಾಖಲೆ ಬಜೆಟ್ ಮಂಡಿಸಿದ್ದಾರೆ. ಅತೀ ಹೆಚ್ಚು ಸಾಲ ಮಾಡಿದ ಕೀರ್ತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ. ಈವರೆಗಿನ ಸಿಎಂ ಮಾಡಿದ ಸಾಲಕ್ಕಿಂತಲೂ ಹೆಚ್ಚಿನ ಸಾಲ ಮಾಡಿದ್ದಾರೆ. 4 ಲಕ್ಷ ಕೋಟಿ ಅಷ್ಟು ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿ ಸಾಲ 1.27 ಲಕ್ಷ ಕೋಟಿ. ಮೂಲಸೌಕರ್ಯ ಯೋಜನೆಗಳಿಗೆ ಉತ್ತೇಜನ ಕೊಟ್ಟಿದ್ದರೆ ತೆರಿಗೆ ಸಂಗ್ರಹ ಆಗ್ತಿತ್ತು. ಕಳೆದ ವರ್ಷ 3.22 ಲಕ್ಷ ಕೋಟಿ ಖರ್ಚು ಮಾಡ್ತೇವಿ ಅಂತಾ ಹೇಳಿದ್ರು. ಇದುವರೆಗೂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಶೇ.55 ರಷ್ಟು ಖರ್ಚು ಮಾಡಿದ್ದಾರೆ. ಇನ್ನುಳಿದ 45 ದಿನದಲ್ಲಿ ಉಳಿದ 45 ರಷ್ಟು ಖರ್ಚು ಮಾಡಲು ಸಾಧ್ಯವಾಯ್ತು ಎಂದು ಬೇಸರ ಹೊರಹಾಕಿದ್ದಾರೆ.

    ಸರ್ಕಾರದ ಎಲ್ಲದರ ಮೇಲೂ ತೆರಿಗೆ ಹೆಚ್ಚಳ ಮಾಡಿದೆ. ನೀರು, ವಿದ್ಯುತ್, ಪ್ರಾಪರ್ಟಿ, ಬಿತ್ತನೆ, ಬೀಯರ್, ಹಾಲು, ಪೆಟ್ರೋಲ್ ಬೆಲೆ ಹೆಚ್ಚಳ ಮಾಡಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನುವುದು ಚಾರುವಾಕನ ನೀತಿ ಆಗಿತ್ತು. ನಾನು ಸಿಎಂ ಕೇಳ್ತೀನಿ, ನೀವು ಸಾಲ ಮಾಡಿದ್ದೀರಿ. ತುಪ್ಪ ಯಾರು ತಿನ್ನುತ್ತಿದ್ದಾರೆ? ಜನರ ಮೇಲೆ ಸಾಲ ಹೊರಿಸಿದೀರಿ. ನಿಮ್ಮ ಸರ್ಕಾರದಲ್ಲಿ ತುಪ್ಪ ತಿಂತಿರೋರು ಯಾರು ಎಂದು ಪ್ರಶ್ನಿಸಿದ್ದಾರೆ.

    ಈ ಬಜೆಟ್‌ನಲ್ಲಿ ಕೆಲವರಿಗೆ ಖುಷಿಯಾಗಿದೆ. ಇದು ಕಾಂಗ್ರೆಸ್ ಬಜೆಟ್ ಅಥವಾ ಮುಸ್ಲಿಂ ಲೀಗ್ ಬಜೆಟ್. ಜಿನ್ನಾ ಆತ್ಮವೇ ಸಿದ್ದರಾಮಯ್ಯ ಅವರಿಗೆ ಪ್ರಚೋದನೆ ಕೊಟ್ಟಿರಬಹುದು. ಸರ್ಕಾರಿ ಗುತ್ತಿಗೆಯಲ್ಲಿ ಮೀಸಲಾತಿ, ವೋಟ್ ಬ್ಯಾಂಕ್‌ಗಾಗಿ ಮತೀಯ ಆಧಾರದ ಮೇಲೆ ಮೀಸಲಾತಿ ನೀಡಲಾಗಿದೆ. ಕಾಂಗ್ರೆಸ್‌ನ ಕೋಮುವಾದಿ ರಾಜಕಾರಣ ತೋರಿಸುತ್ತದೆ. ಮುಸ್ಲಿಮರ ಸರಳ ಮದುವೆಗೆ ಐವತ್ತು ಸಾವಿರ. ವೋಟ್ ತಗೊಳ್ಳೋವಾಗ ಹಿಂದೂಗಳು ಬೇಕು ನಿಮಗೆ. ಅಧ್ಯಕ್ಷರು ನಾವು ಹಿಂದೂವಾಗಿ ಹುಟ್ಟಿದ್ದೇವೆ ಅಂತಾರೆ. ಮುಸ್ಲಿಮರಿಗೆ ಪಾಕಿಸ್ತಾನ ಕೊಟ್ಟಿದ್ದು ಸಾಕಾಗಿಲ್ವಾ? ಬೇರೆ ಜಾತಿಯಲ್ಲಿ ಬಡವರು ಇಲ್ವಾ? ಅವರಿಗೆ ಯಾಕೆ ಶುಲ್ಕ ಕಡಿತವಿಲ್ಲ? ಮುಸ್ಲಿಂ ಲೀಗ್‌ನ ಪ್ರೇತಾತ್ಮ ಕಾಂಗ್ರೆಸ್‌ನ ಪ್ರವೇಶಿಸಿರಬೇಕು ಎಂದು ಸರ್ಕಾರದ ಕಾಲೆಳೆದಿದ್ದಾರೆ.

    ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೇಲಿನ ಕೇಸ್ ವಾಪಸ್ ತೆಗೆಯುತ್ತೀರಿ. ಮುಸ್ಲಿಮರಿಗೆ ಬಜೆಟ್‌ನಲ್ಲಿ ಆದ್ಯತೆ ಕೊಡಲಾಗಿದೆ. ಇದೊಂದು ಕಮ್ಯುನಲ್ ಬಜೆಟ್ ಆಗಿದೆ. ಮುಲ್ಲಾ, ಮುಸ್ಲಿಂ ಗುರುಗಳ ಗೌರವ ಧನ ಹೆಚ್ಚಳ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ, ತುಂಗಭದ್ರಾ ಯೋಜನೆಗೆ ಒಂದು ರೂಪಾಯಿ ಕೊಟ್ಟಿಲ್ಲ. ಕಳೆದ ವರ್ಷವೂ ಬಜೆಟ್‌ನಲ್ಲಿ ಹೇಳಿದ್ರು, ಆದ್ರೆ ಏನೂ ಮಾಡಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟರೂ ಇವರು ಆರೋಪ ಮಾಡ್ತಿದ್ದಾರೆ. ಮೇಕೆದಾಟು ಯೋಜನೆ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಇದು ಕಾಂಗ್ರೆಸ್ ಪಕ್ಷದ ಬಜೆಟ್ ಅಲ್ಲ. ಹುಚ್ಚನಿಗೆ ಹೆಚ್ಚು ತಿನ್ನಿಸಿದ್ರೆ ಆತನ ಹುಚ್ಚು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಟಾಂಗ್ ಕೊಟ್ಟಿದ್ದಾರೆ.

  • ಚಿಕ್ಕಬಳ್ಳಾಪುರ ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು? ಮಿಸ್ ಆಗಿದ್ದು ಏನು..?

    ಚಿಕ್ಕಬಳ್ಳಾಪುರ ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು? ಮಿಸ್ ಆಗಿದ್ದು ಏನು..?

    ಚಿಕ್ಕಬಳ್ಳಾಪುರ: ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದು 16ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆಯ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಜನ ಸಹ ಈ ಬಾರಿಯ ಬಜೆಟ್ ನಲ್ಲೂ ಸಾಕಷ್ಟು ನೀರಿಕ್ಷೆಗಳನ್ನ ಇಟ್ಟುಕೊಂಡಿದ್ದು ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿಕ್ಕಿದ್ದೇನು..?
    1. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಡಿ ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪನೆ.
    2. ಚಿಂತಾಮಣಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಘಟಕ 150 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ.
    3. ಗೌರಿಬಿದನೂರು ಶಿಕ್ಷಣ ತಜ್ಞ ಡಾ.ಹೆಚ್.ಎನ್ ನರಸಿಂಹಯ್ಯ ಪ್ರಾಧಿಕಾರ ರಚನೆ- ವ್ಯಾಸಂಗ ಮಾಡಿದ ಶಾಲೆಯ ಉನ್ನತೀಕರಣ.
    4. ಶಿಡ್ಲಘಟ್ಟ ಹಾಗೂ ರಾಮನಗರ ರೇಷ್ಮಗೂಡು ಮಾರುಕಟ್ಟೆಯ 2ನೇ ಹಂತದ ಕಾಮಗಾರಿಗೆ 250 ಕೋಟಿ ರೂ. ಅನುದಾನ.
    5. ನೂತನ ಚೇಳೂರು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ.
    6. ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ಹಾಗೂ ಚೇಳೂರು ನೂತನ ತಾಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ಕ್ರಮ.
    7. ಹೆಚ್.ಎನ್ ವ್ಯಾಲಿ ಯೋಜನೆ ವಿಸ್ತರಣೆಗೆ 70 ಕೋಟಿ ರೂ. ಅನುದಾನ.

    ಚಿಕ್ಕಬಳ್ಳಾಪುರ ಜಿಲ್ಲೆಯ ನೀರಿಕ್ಷೆಗಳು ಇದ್ದದ್ದು ಏನು..?
    1. ಅಂತಾರಾಷ್ಟ್ರೀಯ ಹೂವಿನ ಮಾರುಕಟ್ಟೆಗೆ ಅನುದಾನ ನಿರೀಕ್ಷೆಯಿತ್ತು. ಆದ್ರೆ ಪಿಪಿಪಿ ಮಾಡೆಲ್ ಎಂಬುದಾಗಿ ಘೋಷಣೆ ಮಾಡಲಾಗಿದೆ.
    2. ಬಾಗೇಪಲ್ಲಿಯ ಗಂಟಲಮಲ್ಲಮ್ಮ ಜಲಾಶಯದ ಡ್ಯಾಂ ನಿರ್ಮಾಣಕ್ಕೆ ಅನುದಾನ ನಿರೀಕ್ಷೆ ಇತ್ತು, ಅನುದಾನದ ಬಗ್ಗೆ ಉಲ್ಲೇಖವಿಲ್ಲ.
    3. ಶಿಡ್ಲಘಟ್ಟದಲ್ಲಿ ಹೈಟೆಕ್ ಸಿಲ್ಕ್ ಮಾರುಕಟ್ಟೆಗೆ ಅನುದಾನ ನಿರೀಕ್ಷೆಯಿತ್ತು – ರಾಮನಗರ ಸೇರಿಸಿ 250 ಕೋಟಿ ಅನುದಾನ ನೀಡಲಾಗಿದೆ.
    4. ಗೌರಿಬಿದನೂರಿನ ಹೆಚ್.ನರಸಿಂಹಯ್ಯ ಶಾಲೆ ಹಾಗೂ ಸ್ಮಾರಕ ಅಭಿವೃದ್ಧಿಗೆ ಅನುದಾನದ ನಿರೀಕ್ಷೆ – ಘೋಷಣೆ ಮಾಡಲಾಗಿದೆ.
    5. ಹೆಚ್.ಎನ್.ವ್ಯಾಲಿ ಯೋಜನೆ ವಿಸ್ತರಣೆಗೆ ಅನುದಾನ 70 ಕೋಟಿ ಮೊತ್ತದ ಅನುದಾನ ಹಾಗೂ ತೃತೀಯ ಹಂತದ ಸಂಸ್ಕರಣೆ ಘೋಷಣೆ- ತೃತೀಯ ಹಂತದ ಸಂಸ್ಕರಣೆ ಇಲ್ಲ.
    6. ಚಿಕ್ಕಬಳ್ಳಾಪುರ ನಂದಿ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡದ ಬಾಕಿ ಹಣ ಹಾಗೂ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳು, ಆಸ್ಪತ್ರೆ ಅರಂಭಕ್ಕೆ ಅನುದಾನ ಇಲ್ಲ.
    7 ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನೂತನವಾಗಿ ಆರಂಭವಾಗಿರುವ ಸರ್ಕಾರಿ ಇಂಜನಿಯರಿಂಗ್ ಕಾಲೇಜಿಗೆ ಅನುದಾನದ ನಿರೀಕ್ಷೆ ಇತ್ತು ಮಾಡಲಾಗಿದೆ.
    8. ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಅನುದಾನದ ನಿರೀಕ್ಷೆ, ಶಾಶ್ವತ ನೀರಾವರಿ ಯೋಜನೆ ಜಾರಿ ವಿಚಾರ ಪ್ರಸ್ತಾಪ ಇಲ್ಲ.

    ಜಿಲ್ಲೆಗೆ ಬಜೆಟ್ ನಲ್ಲಿ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಾಶ್ವತ ನೀರಾವರಿ ಹೋರಾಟದ ಆಧ್ಯಕ್ಷ ಆರ್. ಆಂಜನೇಯರೆಡ್ಡಿ, ಬಯಲುಸೀಮೆಗೆ ಶಾಶ್ವತ ನೀರಾವರಿ ಎಂಬುದಿನ್ನು ಮರೀಚಿಕೆ. ಅಂತರ್ಜಲ ಪಾತಾಳ ತಲುಪಿದೆ, ಕುಡಿಯುವ ನೀರಿನ ಮೂಲಗಳು ವಿಷಮಯವಾಗಿವೆ, ಆದರೂ ಎತ್ತಿನಹೊಳೆಯ ಭ್ರಮೆಯಿಂದ ಹೊರಬಾರದ, ಕೆಸಿ ವ್ಯಾಲಿ ಮತ್ತು ಹೆಚ್ ಎನ್ ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೂ ಮುಂದಾಗದ, ಜೀವನಾಡಿಗಳಾದ ಕೆರೆ ಕುಂಟೆ ಕಾಲುವೆಗಳ ಸಮಗ್ರ ಅಭಿವೃದ್ಧಿಗೂ ಗಮನ ಕೊಡದ, ಕೃಷ್ಣ-ಪೆನ್ನಾರ್ ನದಿ ಜೋಡಣೆ ಬಗ್ಗೆಯೂ ಚಕಾರವೆತ್ತದ ನಿರಾಶಾದಾಯಕ ಬಜೆಟ್ ಆಗಿದೆ ಎಂದು ವ್ಯಾಖ್ಯಾನ ಮಾಡಿದ್ದಾರೆ. ಮತ್ತೊಂದೆಡೆ ಸಂಸದ ಸುಧಾಕರ್ ಸಹ ಬಜೆಟ್ ನಲ್ಲಿ ಮಹಾ ಅನ್ಯಾಯ ಆಗಿದೆ ಅಂತ ಟೀಕಿಸಿದ್ದಾರೆ.

  • ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಡೆಗಣನೆ: ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್

    ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಡೆಗಣನೆ: ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್

    – ರಾಜ್ಯ ಬಜೆಟ್‌ನಲ್ಲಿ ಪುತ್ತೂರು ಮೆಡಿಕಲ್ ಕಾಲೇಜು ಘೋಷಣೆ ಸ್ವಾಗತಾರ್ಹ

    ಮಂಗಳೂರು: ರಾಜ್ಯ ಬಜೆಟ್‌ನಲ್ಲಿ ಪುತ್ತೂರು ಮೆಡಿಕಲ್‌ ಕಾಲೇಜು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದರೆ, ಕರಾವಳಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್‌ ಸಾದತ್‌ ಬೇಸರ ವ್ಯಕ್ತಪಡಿಸಿದ್ದಾರೆ.

    ಬಜೆಟ್‌ ಕುರಿತು ಪ್ರತಿಕ್ರಿಯಿಸಿರುವ ಅವರು, ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆ ಈಡೇರಿದಂತಾಗಿದೆ. ಖಾಸಗಿ ಕಾಲೇಜುಗಳ ಲಾಬಿ ಜೋರಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಸ್ವಾಗತಾರ್ಹ. ಈ ಮೂಲಕ ಜಿಲ್ಲೆಯ ಜನತೆಯ ಹಕ್ಕೊತ್ತಾಯಕ್ಕೆ ಸರ್ಕಾರ ಮನ್ನಣೆ ನೀಡಿದೆ. ಆದರೆ ಜಿಲ್ಲೆಯ ಇತರ ಕ್ಷೇತ್ರಗಳನ್ನು ರಾಜ್ಯ ಬಜೆಟ್‌ನಲ್ಲಿ ಎಂದಿನಂತೆ ಕಡೆಗಣಿಸಲಾಗಿದೆ. ಎಲ್ಲಾ ಬಜೆಟ್‌ನಲ್ಲೂ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರ ಅನುಸರಿಸುತ್ತಿರುವ ಮಲತಾಯಿ ಧೋರಣೆ ಈ ಬಜೆಟ್‌ನಲ್ಲೂ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

    ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸೇರಿದಂತೆ ಕರಾವಳಿಯನ್ನು ಪ್ರವಾಸೋದ್ಯಮವಾಗಿ ಅಭಿವೃದ್ಧಿ ಪಡಿಸುವಂತೆ, ಅಡಿಕೆ ಬೆಲೆ, ಕಾನೂನು ಕಾಲೇಜು, ಪ್ರಮುಖವಾಗಿ ಪುತ್ತೂರು ಜಿಲ್ಲೆ ಘೋಷಣೆಯ ಬಗ್ಗೆಯೂ ಎಸ್‌ಡಿಪಿಐ ಹಕ್ಕೊತ್ತಾಯ ಹಾಗೂ ಮನವಿಗಳನ್ನು ಸಲ್ಲಿಸಿತ್ತು. ಇದು ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಬೇಡಿಕೆಯೂ ಆಗಿತ್ತು. ಆದರೆ ಅವುಗಳನ್ನು ನಿರಾಕರಿಸುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ನಿರಾಸೆ ಹುಟ್ಟಿಸಿದೆ ಎಂದಿದ್ದಾರೆ.

    ಇತ್ತೀಚಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಾರ್ಕಳದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಹಾಗೂ ಎರಡು ದಿನಗಳ ಹಿಂದೆ ಅಧಿವೇಶನದ ಚರ್ಚೆಯಲ್ಲೂ ಪ್ರವಾಸೋದ್ಯಮ ಕುರಿತು ಚರ್ಚೆ ಮಾಡಿದ್ದರು. ಹಾಗಾಗಿ ಕರಾವಳಿಯ ಜನತೆ ಈ ಬಾರಿಯ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಸರ್ಕಾರ ಹಣ ಮೀಸಲಿಡಲಿದೆ ಎಂದೇ ಭಾವಿಸಿದ್ದರು. ಆದರೆ ಇದು ಸುಳ್ಳಾಗಿದೆ. ಭೌಗೋಳಿಕ ದೃಷ್ಟಿಯಿಂದ ಪುತ್ತೂರನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂಬ ಪ್ರಮುಖ ಬೇಡಿಕೆಯನ್ನು ಕೂಡ ಈ ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಕರಾವಳಿ ಜನತೆಯ ಜೀವನಾಡಿಯಾದ ಅಡಿಕೆಗೆ ಎಲೆಚುಕ್ಕಿ, ಹಳದಿ ರೋಗ ಹಾಗೂ ಹವಾಮಾನದ ವೈಪರೀತ್ಯದಿಂದ ವರ್ಷ ಹೋದಂತೆ ಫಸಲು ಕಡಿಮೆಯಾಗುತ್ತಿದೆ. ಖರ್ಚು ವೆಚ್ಚಗಳು ಅಧಿಕ ವಾಗುತ್ತಿದೆ. ಹಾಗಾಗಿ ಅಡಿಕೆಗೆ ಬೆಂಬಲ ನೀಡಬೇಕೆಂಬ ಬೇಡಿಕೆಯನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ. ಈಗಾಗಲೇ ಪುತ್ತೂರಿಗೆ ಘೋಷಣೆಯಾದ ಮೆಡಿಕಲ್ ಕಾಲೇಜಿನ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಕೂಡಲೇ ಕಾರ್ಯರೂಪಕ್ಕೆ ತರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

  • ರಾಯಚೂರು ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

    ರಾಯಚೂರು ಜಿಲ್ಲೆಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು?

    ರಾಯಚೂರು: ಬಿಸಿಲನಾಡು ರಾಯಚೂರು (Raichuru) ಜಿಲ್ಲೆಯ ಜನ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಭಾರೀ ನಿರೀಕ್ಷೆಗಳನ್ನು ಹೊಂದಿದ್ದರು. ನಿರೀಕ್ಷೆಯಂತೆ ಒಂದಷ್ಟು ಖುಷಿ ವಿಚಾರಗಳಿದ್ದರೆ, ಉಳಿದಿದ್ದೆಲ್ಲಾ ಹಳೆಯ ಘೋಷಣೆಗಳು ಪುನರಾವರ್ತನೆಯಾಗಿವೆ.ಇದನ್ನೂ ಓದಿ: ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ 26 ಸಾವಿರ ರೂ. ದಂಡ

    ಬಜೆಟ್ ಘೋಷಣೆಗಳೇನು?
    ನಗರದ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಕ್ಯಾನ್ಸರ್ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ಕಿದ್ವಾಯಿ ಫೆರಿಫೆರಲ್ ಚಿಕಿತ್ಸಾ ಕೇಂದ್ರದ ಸ್ಥಾಪನೆ ಹಾಗೂ ಇದಕ್ಕೆ ಬಜೆಟ್‌ನಲ್ಲಿ 50 ಕೋಟಿ ರೂ. ಅನುದಾನ ಮೀಸಲಿಡುವುದಾಗಿ ಘೋಷಿಸಲಾಗಿದೆ.

    ಕೆಕೆಆರ್‌ಡಿಬಿ ಅನುದಾನದ ಅಡಿಯಲ್ಲಿ ರಾಯಚೂರು ಹಾಗೂ ಸಿಂಧನೂರಿನಲ್ಲಿ ಜಿಟಿಟಿಸಿ ಕಾಲೇಜು ಸ್ಥಾಪನೆಗೆ ಕ್ರಮ ತೆಗೆದುಕೊಳ್ಳುವುದು.

    ರಾಯಚೂರು ನಗರಸಭೆಯನ್ನು, ಮಹಾನಗರ ಪಾಲಿಕೆಗಳನ್ನಾಗಿ ಮೇಲ್ದರ್ಜೇಗೇರಿಸಲಾಗಿದ್ದು, ಅಭಿವೃದ್ದಿಗೆ ಅನುದಾನ ನೀಡುವ ಘೋಷಣೆ ಮಾಡಲಾಗಿದೆ.

    219 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರಾಯಚೂರು ವಿಮಾನ ನಿಲ್ದಾಣದ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲು 53 ಕೋಟಿ ರೂ. ಬಜೆಟ್‌ನಲ್ಲಿ ನೀಡಲಾಗಿದೆ.

    1,696 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ರಾಯಚೂರು – ಸಿಂಧನೂರು 20 ಕಿ.ಮೀ ರಸ್ತೆ ಕಾಮಗಾರಿಯನ್ನು ಪ್ರಸ್ತುತ ವರ್ಷದಲ್ಲಿ ಮುಗಿಸುವ ಘೋಷಣೆ ಮಾಡಲಾಗಿದೆ. ರಾಯಚೂರು ನಗರದ ಸುತ್ತ ರಿಂಗ್ ರೋಡ್ ನಿರ್ಮಾಣ ಬಗ್ಗೆ ಘೋಷಿಸಲಾಗಿದೆ.

    ತುಂಗಭದ್ರಾ ಎಡದಂಡೆಕಾಲುವೆ ಕೊನೆ ಭಾಗಕ್ಕೆ ನೀರು ಒದಗಿಸಲು ನವಲಿ ಜಲಾಶಯ ನಿರ್ಮಾಣ ಮಾಡುವ ಬಗ್ಗೆ ಬಜೆಟ್‌ನಲ್ಲಿ ಘೋಷಿಸಲಾಗಿದೆ.ಇದನ್ನೂ ಓದಿ: ಜನವರಿ, ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಹಣ ಸದ್ಯದಲ್ಲೇ ಕ್ಲಿಯರ್‌: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

     

     

     

  • ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಬಂಪರ್‌ – 3 ಲಕ್ಷ ರೂ. ವರೆಗೆ ಸಹಾಯಧನ

    ಹಿಂದುಳಿದ ವರ್ಗಗಳ ನಿರುದ್ಯೋಗಿಗಳಿಗೆ ಬಂಪರ್‌ – 3 ಲಕ್ಷ ರೂ. ವರೆಗೆ ಸಹಾಯಧನ

    ಬೆಂಗಳೂರು: ದಾಖಲೆಯ 16ನೇ ಬಜೆಟ್‌ನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತುಕೊಟ್ಟಿರುವ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಿದ್ದಾರೆ.

    ಹೌದು. ಹಿಂದುಳಿದ ವರ್ಗಗಳ (Backward class) ನಿರುದ್ಯೋಗಿಗಳಿಗೆ ವಿದ್ಯುತ್‌ ಚಾಲಿತ ನಾಲ್ಕು ಚಕ್ರದ ವಾಹನ ಖರೀದಿಸಿ, ಆಹಾರ ಕಿಯೋಸ್ಕ್‌ (ಆಹಾರ ಮಳಿಗೆ) ಆರಂಭಿಸಲು ಗರಿಷ್ಠ 3 ಲಕ್ಷ ರೂ. ಸಹಾಯಧನವನ್ನ ನಿಗಮಗಳ ಮೂಲಕ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Karnataka Budget 2025: ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?

    ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಗೆ 2025-26ನೇ ಸಾಲಿನಲ್ಲಿ 422 ಕೋಟಿ ರೂ. ಅನುದಾನ ಒದಗಿಸಲಾಗುವುದು ತಿಳಿಸಿದ್ದಾರೆ. ಇದನ್ನೂ ಓದಿ: Karnataka Budget 2025 | ಕೊಡಗು ಜಿಲ್ಲೆಯ ಆಸ್ಪತ್ರೆಗಳ ಅಭಿವೃದ್ಧಿಗೆ ಸಿಎಂ ಆದ್ಯತೆ

    ಮುಂದುವರಿದು.. ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಕಟ್ಟಡ ದುರಸ್ತಿ ಮಾಡಲು 25 ಕೋಟಿ ರೂ. ಒದಗಿಸಲಾಗುವುದು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು IAS, IPS, KAS, KSPS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಢಲು ಬೆಂಗಳೂರು ನಗರದಲ್ಲಿ ಎರಡು ಸುಸಜ್ಜಿತ ವಸತಿ ನಿಲಯಗಳನ್ನು ಪ್ರಾರಂಬಿಸಲಾಗವುದು ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಮಡಾ ಕೇಸ್‌| ಸಿಎಂ ಪತ್ನಿ, ಬೈರತಿಗೆ ಸುರೇಶ್‌ಗೆ ಬಿಗ್‌ ರಿಲೀಫ್‌ – ಇಡಿ ತನಿಖೆಯೇ ರದ್ದು

  • Karnataka Budget: ಒಂದು ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ?

    Karnataka Budget: ಒಂದು ರೂಪಾಯಿ ಬಂದಿದ್ದು ಎಲ್ಲಿಂದ? ಹೋಗಿದ್ದು ಎಲ್ಲಿಗೆ?

    ಬೆಂಗಳೂರು: 2025-26ರ ಆಯವ್ಯಯವನ್ನು (Karnataka Budget 2025) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ಮಂಡಿಸಿದರು. 4.09 ಲಕ್ಷ ಕೋಟಿ ಗಾತ್ರದ ಬಜೆಟ್‌ನ ಒಟ್ಟು ಆದಾಯ ಗಳಿಕೆ ಮತ್ತು ವೆಚ್ಚವನ್ನು ರೂಪಾಯಿಯಲ್ಲಿ ಲೆಕ್ಕಾಚಾರ ಮಾಡಲಾಗಿದೆ. ಸರ್ಕಾರಕ್ಕೆ ಆದಾಯ ಎಲ್ಲಿಂದ ಬರುತ್ತದೆ ಮತ್ತು ಯಾವುದಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ವಿವರ ಹೀಗಿದೆ.

    ಸರ್ಕಾರಕ್ಕೆ ಆದಾಯ ಹೇಗೆ ಬರುತ್ತದೆ? (ಪೈಸೆಗಳಲ್ಲಿ)
    ರಾಜ್ಯ ತೆರಿಗೆ ಆದಾಯ- 52 ಪೈಸೆ
    ಸಾಲ- 27 ಪೈಸೆ
    ಕೇಂದ್ರದ ತೆರಿಗೆ ಪಾಲು- 13 ಪೈಸೆ
    ಕೇಂದ್ರ ಸರ್ಕಾರದ ಸಹಾಯಾನುದಾನ- 4 ಪೈಸೆ
    ರಾಜ್ಯ ತೆರಿಗೆಯೇತರ ರಾಜಸ್ವ- 4 ಪೈಸೆ
    ಒಟ್ಟು- 100 ಪೈಸೆ (ಒಂದು ರೂಪಾಯಿ)

    ಯಾವ ಭಾಗಕ್ಕೆ ಎಷ್ಟು ಹಂಚಿಕೆ? (ಪೈಸೆಗಳಲ್ಲಿ)
    ಸಾಲ ಮರುಪಾವತಿ- 18 ಪೈಸೆ
    ಇತರ ಸಾಮಾನ್ಯ ಸೇವೆ- 18 ಪೈಸೆ
    ಸಮಾಜ ಕಲ್ಯಾಣ- 15 ಪೈಸೆ
    ಇತರ ಆರ್ಥಿಕ ಸೇವೆಗಳು- 14 ಪೈಸೆ
    ಕೃಷಿ, ನೀರಾವರಿ, ಗ್ರಾಮೀಣ ಅಭಿವೃದ್ಧಿ- 14 ಪೈಸೆ
    ಶಿಕ್ಷಣ- 10 ಪೈಸೆ
    ಆರೋಗ್ಯ- 5 ಪೈಸೆ
    ಇತರ ಸಾಮಾಜಿಕ ಸೇವೆಗಳು- 3 ಪೈಸೆ
    ನೀರು ಪೂರೈಕೆ ಮತ್ತು ನೈರ್ಮಲ್ಯ- 3 ಪೈಸೆ
    ಒಟ್ಟು- 100 ಪೈಸೆ (ಒಂದು ರೂಪಾಯಿ)

  • Karnataka Budget 2025 | ಕೊಡಗು ಜಿಲ್ಲೆಯ ಆಸ್ಪತ್ರೆಗಳ ಅಭಿವೃದ್ಧಿಗೆ ಸಿಎಂ ಆದ್ಯತೆ

    Karnataka Budget 2025 | ಕೊಡಗು ಜಿಲ್ಲೆಯ ಆಸ್ಪತ್ರೆಗಳ ಅಭಿವೃದ್ಧಿಗೆ ಸಿಎಂ ಆದ್ಯತೆ

    ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿರುವ 16ನೇ ಬಜೆಟ್‌ನಲ್ಲಿ ಕೊಡಗು ಜಿಲ್ಲೆಯ ವಿವಿಧ ಆಸ್ಪತ್ರೆಗಳ (Kodagu Hospitals) ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ.

    ಈ ಬಾರಿ ಬಜೆಟ್‌ನಲ್ಲಿ (Karnataka Budget 2025) ರಾಜ್ಯದ ವಿವಿಧ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಒಟ್ಟು 650 ಕೋಟಿ ರೂ. ಘೋಷಿಸಲಾಗಿದೆ. ಈ ಪೈಕಿ ಪೊನ್ನಂಪೇಟೆಯಲ್ಲಿ ಹೊಸ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸಲಾಗುವುದು, ಕುಶಾಲನಗರ ತಾಲೂಕು ಆಸ್ಪತ್ರೆಯನ್ನು ನವೀಕರಣಗೊಳಿಸಲಾಗುವುದು ಹಾಗೂ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಪರವಾದ ಅತ್ಯುತ್ತಮ ದಾಖಲೆಯ ಬಜೆಟ್ – ಕೆ.ಹೆಚ್ ಮುನಿಯಪ್ಪ

    ಅಲ್ಲದೇ ಗೋಣಿಕೋಪ್ಪ, ವಿರಾಜಪೇಟೆ ಮಡಿಕೇರಿ ರಸ್ತೆ ಮತ್ತು ಸೇತುವೆ ಅಭಿವೃದ್ಧಿಗೆ 20 ಕೋಟಿ ರೂ. ವೆಚ್ಚದಲ್ಲಿ ಬುಡಕಟ್ಟು ಜನಾಂಗದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ 78 ಬುಡಕಟ್ಟು ವಸತಿ ಶಾಲೆಗಳಲ್ಲಿ 2025-26ನೇ ಸಾಲಿನಿಂದ 7ನೇ ತರಗತಿ ಪ್ರಾರಂಭಿಸಲಾಗುವುದು. ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿನ ಐದು ವಸತಿ ಶಾಲೆಗಳನ್ನು 12ನೇ ತರಗತಿಯವರೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: Karnataka Budget 2025: ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?

    2025-26ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ನಂತರದ 20 ವಿದ್ಯಾರ್ಥಿನಿಲಯಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಸಂಸ್ಕರಿಸಲು ನೆರವಾಗುವಂತೆ ಲ್ಯಾಂಪ್ಸ್ (LAMPS) ಸಹಕಾರ ಸಂಘಗಳಿಗೆ ದುಡಿಯುವ ಬಂಡವಾಳ ರೂಪದಲ್ಲಿ ತಲಾ 5 ಲಕ್ಷ ರೂ. ಸಹಾಯಧನ ನೀಡಲಾಗುವುದು ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ಈ ವರ್ಷ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಅನುದಾನ

  • ಈ ವರ್ಷ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಅನುದಾನ

    ಈ ವರ್ಷ ಗೃಹಲಕ್ಷ್ಮಿ ಯೋಜನೆಗೆ 28,608 ಕೋಟಿ ರೂ. ಅನುದಾನ

    – ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ 1,000 ರೂ. ಹೆಚ್ಚಳ

    ಬೆಂಗಳೂರು: ಕಳೆದ ಮೂರು ತಿಂಗಳಿನಿಂದಲೂ ʻಗೃಹಲಕ್ಷ್ಮಿʼ ಯೋಜನೆಯ (Gruha Lakshmi Scheme) ಫಲಾನುಭವಿಗಳಿಗೆ ನೀಡುತ್ತಿದ್ದ ಹಣ ಸ್ಥಗಿತಗೊಂಡಿದೆ. ಇದೇ ವಿಚಾರವಾಗಿ ಆಡಳಿತ-ವಿಪಕ್ಷಗಳ ನಡುವೆ ವಾಗ್ಯುದ್ಧ ನಡೆಯುತ್ತಲೇ ಇದೆ. ಈ ನಡುವೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ತಮ್ಮ ಬಜೆಟ್‌ನಲ್ಲಿ ಪ್ರಸಕ್ತ ವರ್ಷ ಯೋಜನೆಗೆ 28,608 ಅನುದಾನ ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ.

    ಹೌದು. ಗೃಹಲಕ್ಷ್ಮಿ ಯೋಜನೆಯನ್ನು 2023-24ನೇ ಸಾಲಿನಿಂದ ಜಾರಿಗೊಳಿಸಲಾಗಿದ್ದು, 2024-25ನೇ ಸಾಲಿನಲ್ಲಿ 1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಧನಸಹಾಯ ಒದಗಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ 28,608 ಕೋಟಿ ರೂ. ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಪತ್ರಕರ್ತರಿಗೆ ‘ಮಾಧ್ಯಮ ಸಂಜೀವಿನಿ’ ಯೋಜನೆ – 5 ಲಕ್ಷ ರೂ. ನಗದು ರಹಿತ ಚಿಕಿತ್ಸೆ

    ಅಲ್ಲದೇ ರಾಜ್ಯದ 37 ಲಕ್ಷ ಮಕ್ಕಳ ಆರೈಕೆ ಮತ್ತು ಕಲಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ (Anganwadi workers) ಗೌರವ ಧನವನ್ನು 1,000 ರೂ.ಗೆ ಹಾಗೂ ಸಹಾಯಕಿಯರ ಗೌರವ ಧನವನ್ನ 750 ರೂ. ಹೆಚ್ಚಲಾಗುವುದು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಪುತ್ತೂರಿಗೆ ಮೆಡಿಕಲ್ ಕಾಲೇಜು: ಬಜೆಟ್‌ನಲ್ಲಿ ವೈದ್ಯಕೀಯ, ಶಿಕ್ಷಣ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳೇನು?

    ಸಕ್ಷಮ ಅಂಗನವಾಡಿ ಯೋಜನೆಯಡಿ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು 175 ಕೋಟಿ ರೂ. ನೆರವು ಒದಗಿಸಲಾಗುವುದು, ಅಂಗನವಾಡಿ ಕಟ್ಟಡಗಳಿಗೆ ಸಿ.ಎ. ನಿವೇಶನ ಖರೀದಿಗಾಗಿ 10 ಕೋಟಿ ರೂ. ಮೀಸಲಿಡಲಾಗುದೆ. ವಿಕಲಚೇತನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ವಿಕಲಚೇತನರ ಸಮೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

    ಇದರೊಂದಿಗೆ ಮೈಸೂರಿನ ದೃಷ್ಟಿದೋಷವುಳ್ಳ ಮಕ್ಕಳ ಸರ್ಕಾರಿ ವಸತಿಯುತ ಶಾಲೆ ಹಾಗೂ ಬೆಳಗಾವಿಯಲ್ಲಿರುವ ಶ್ರವಣದೋಷವುಳ್ಳ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳ ಅಭಿವೃದ್ಧಿಗೆ 5 ಕೋಟಿ ರೂ. ನೀಡಲಿದ್ದು, ಇವುಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು ಅಂತ ಸಿಎಂ ಘೋಷಿಸಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ವಿಶ್ವದರ್ಜೆಯ ಫಿಲ್ಮ್ ಸಿಟಿ ನಿರ್ಮಾಣಕ್ಕೆ 500 ಕೋಟಿ ಮೀಸಲು – ತವರು ಜಿಲ್ಲೆಗೆ ಸಿಎಂ ಭರ್ಜರಿ ಗಿಫ್ಟ್

    ಮುಖ್ಯವಾಗಿ 2025-26ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 94,084 ಕೋಟಿ ರೂ., ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 62,033 ಕೋಟಿ ರೂ. ಒದಗಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಇದನ್ನೂ ಓದಿ:  ಬೆಂಗಳೂರು| ನಂದಿನಿ ಲೇಔಟ್‌ನ 2.5 ಎಕರೆ ಜಾಗದಲ್ಲಿ ಮಲ್ಟಿಪ್ಲೆಕ್ಸ್‌ ಅಭಿವೃದ್ಧಿ

  • ಬೆಂಗಳೂರು| ನಂದಿನಿ ಲೇಔಟ್‌ನ 2.5 ಎಕರೆ ಜಾಗದಲ್ಲಿ ಮಲ್ಟಿಪ್ಲೆಕ್ಸ್‌ ಅಭಿವೃದ್ಧಿ

    ಬೆಂಗಳೂರು| ನಂದಿನಿ ಲೇಔಟ್‌ನ 2.5 ಎಕರೆ ಜಾಗದಲ್ಲಿ ಮಲ್ಟಿಪ್ಲೆಕ್ಸ್‌ ಅಭಿವೃದ್ಧಿ

    ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಈ ಬಾರಿ ಕನ್ನಡ ಚಿತ್ರರಂಗಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಒಂದಷ್ಟು ಘೋಷಣೆಗಳನ್ನು ಮಾಡಿದ್ದಾರೆ.

    ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ ಒಡೆತನದ 2.5 ಎಕರೆ ಜಾಗದಲ್ಲಿ ಪಿಪಿಪಿ ಅಡಿಯಲ್ಲಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ) ಮಲ್ಟಿಪ್ಲೆಕ್ಸ್‌ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

    ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ, ಕೈಗಾರಿಕಾ ನೀತಿಯಡಿ ಒದಗಿಸಲಾಗುವ ಸೌಲಭ್ಯ ಕಲ್ಪಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಅಲ್ಲದೇ, ಎಲ್ಲಾ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್‌ ದರವನ್ನು 200 ರೂ. ಫಿಕ್ಸ್‌ ಮಾಡಲಾಗಿದೆ ಎಂದು ಬಜೆಟ್‌ನಲ್ಲಿ ಸಿಎಂ ಘೋಷಿಸಿದ್ದಾರೆ.