Tag: Karnataka Budget 2024

  • ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಹಣ ಮೀಸಲು

    ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಹಣ ಮೀಸಲು

    – ಕಳೆದ ಸಾಲಿನಲ್ಲಿ ಗ್ಯಾರಂಟಿಗೆ ಸರ್ಕಾರ ಮೀಸಲಿಟ್ಟಿದ್ದೆಷ್ಟು? ಖರ್ಚಾಗಿರೋದೆಷ್ಟು?

    ಬೆಂಗಳೂರು: 2024-25 ಸಾಲಿಗೆ ಕಾಂಗ್ರೆಸ್‌ (Congress) ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (Guarantee Schemes) 52,009 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.

    ಯಾವುದಕ್ಕೆ ಎಷ್ಟು ಹಣ ಮೀಸಲು?
    ಗೃಹಜ್ಯೋತಿ – 9,657 ಕೋಟಿ ರೂ.
    ಅನ್ನಭಾಗ್ಯ – 8,079 ಕೋಟಿ
    ಶಕ್ತಿ – 5,015 ಕೋಟಿ
    ಯುವನಿಧಿ – 650 ಕೋಟಿ
    ಗೃಹಲಕ್ಷ್ಮಿ – 28,608 ಕೋಟಿ ರೂ.

    2023-24ರಲ್ಲಿ ಗ್ಯಾರಂಟಿ ಯೋಜನೆ ಕಾರ್ಯ ಸಾಧನೆಯ ವಿವರವನ್ನೂ ಸರ್ಕಾರ ಹಂಚಿಕೊಂಡಿದೆ. ಈ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ನಿಗದಿ ಮಾಡಿದ್ದು, 35,410 ಕೋಟಿ ರೂ. ಇದನ್ನೂ ಓದಿ: Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

    ಗೃಹಲಕ್ಷ್ಮಿ – 8,181 ಕೋಟಿ ರೂ.‌ ಖರ್ಚು (ನಿಗದಿ ಮಾಡಿದ್ದು – 17,500 ಕೋಟಿ ರೂ.)
    ಅನ್ನಭಾಗ್ಯ – 2,900.12 ಕೋಟಿ ಖರ್ಚು (10,000 ಕೋಟಿ ಮೀಸಲು) (ಅಕ್ಕಿ ಕೊಡೋಕೆ ಪ್ಲ್ಯಾನ್ ಇತ್ತು. ಹೀಗಾಗಿ ಹಣ ನಿಗದಿ ಮಾಡಿರಲಿಲ್ಲ).
    ಗೃಹಜ್ಯೋತಿ – 2,900 ಕೋಟಿ (ನಿಗದಿ – 13,910 ಕೋಟಿ)
    ಶಕ್ತಿ- 2,800 ಕೋಟಿ ಖರ್ಚು (ನಿಗದಿ – 2,800 ಕೋಟಿ)
    ಯುವನಿಧಿ – 250 ಕೋಟಿ ನಿಗದಿ (ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ ಆಗಿದೆ).

    ಗೃಹಜ್ಯೋತಿ ಗ್ಯಾರಂಟಿ ಯೋಜನೆಗೆ ಆಗಸ್ಟ್‌ ತಿಂಗಳಲ್ಲಿ ಚಾಲನೆ ಸಿಕ್ಕಿತ್ತು. ಎಲ್ಲಾ ಎಸ್ಕಾಂಗಳಿಗೆ ಪ್ರತಿ ತಿಂಗಳು 500-700 ಕೋಟಿ ರೂ. ಸರ್ಕಾರ ಮುಂಗಡ ಹಣ ಬಿಡುಗಡೆ ಮಾಡುತ್ತಿತ್ತು. ಸೆಪ್ಟೆಂಬರ್‌ನಿಂದ ಡಿಸೆಂಬರ್/ಜನವರಿ ವರೆಗೆ (4 ತಿಂಗಳು) 2,900 ಕೋಟಿ ರೂ. ಈವರೆಗೂ ಸರ್ಕಾರ ಇಂಧನ ಇಲಾಖೆಗೆ ಹಣ ಬಿಡುಗಡೆ ‌ಮಾಡಿದೆ.

    ಅನ್ನಭಾಗ್ಯ ಯೋಜನೆಗೆ ಸರ್ಕಾರ 5ಕೆಜಿ ಅಕ್ಕಿಗೆ ಮೊದಲು ಹಣ ಕೊಡುವ ನಿರ್ಧಾರ ಮಾಡಿರಲಿಲ್ಲ. ಹೀಗಾಗಿ ಹಣ ಎಷ್ಟು ಅಂತ ನಿಗದಿಯಾಗಿರಲಿಲ್ಲ. ಸುಮಾರು 10 ಸಾವಿರ ಕೋಟಿ ಅನ್ನಭಾಗ್ಯಕ್ಕೆ ಮೀಸಲು ಅಂತ ಮೊದಲು ಹೇಳಲಾಗಿತ್ತು. ಡಿಸೆಂಬರ್-ಜನವರಿ ವರೆಗೆ 2,900.12 ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆ ‌ಮಾಡಿದೆ. ಇದನ್ನೂ ಓದಿ: ಗ್ರಾಮೀಣ ಪತ್ರಕರ್ತರ ಕನಸು ನನಸು- ಬಜೆಟ್‍ನಲ್ಲಿ ಉಚಿತ ಬಸ್ ಪಾಸ್ ಘೋಷಣೆ

  • ರಾಮನ ಮನೆಯ ತೆರಿಗೆ ರಹೀಮನ ಮನೆಗೆ: ಶಾಸಕ ಚನ್ನಬಸಪ್ಪ

    ರಾಮನ ಮನೆಯ ತೆರಿಗೆ ರಹೀಮನ ಮನೆಗೆ: ಶಾಸಕ ಚನ್ನಬಸಪ್ಪ

    – ಗಾಂಧಿ ತತ್ವ ಗಾಳಿಗೆ ತೂರಿ ಮದ್ಯ ಮಾರಾಟಕ್ಕೆ ಅವಕಾಶ

    ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸಭೆಯಲ್ಲಿ ಮಂಡಿಸಿದ ತಮ್ಮ 15ನೇ ಬಜೆಟ್‍ನಲ್ಲಿ ಗ್ಯಾರೆಂಟಿಗಳ ಅರ್ಥವಿಲ್ಲದ ಆರ್ಥಿಕ ಕೂಪದಲ್ಲಿ ಬಿದ್ದಿರುವುದು ಎದ್ದು ಕಾಣುತ್ತಿದೆ. ಹಿಂದೂಗಳಿಗೆ ಬಿಡಿಗಾಸು ನೀಡದೆ ತಮ್ಮ ಅಚ್ಚುಮೆಚ್ಚಿನ ಪಂಗಡಕ್ಕೆ ಅಪಾರ ಅನುದಾನ ಘೋಷಿಸಿ ತಮ್ಮ ಬಾಂಧವರಿಗೆ ನಿಷ್ಠೆಯನ್ನು ತೋರಿಸಿದ್ದಾರೆ. ಈ ಮೂಲಕ ರಾಮನ ಮನೆ ತೆರಿಗೆಯನ್ನು ರಹೀಮನಿಗೆ ಕೊಟ್ಟಿದ್ದಾರೆ ಎಂದು ಶಾಸಕ ಎಸ್.ಎನ್ ಚನ್ನಬಸಪ್ಪ (MLA Channabasappa) ವ್ಯಂಗ್ಯವಾಡಿದ್ದಾರೆ.

    ಈ ಬಗ್ಗೆ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಸಿಎಂ ತಮ್ಮ ತಪ್ಪಿಗೆ ತೇಪೆ ಹಾಕಲು ಕೇಂದ್ರದೆಡೆಗೆ ಬೆಟ್ಟು ಮಾಡುವ ಚಾಳಿಯನ್ನು ಮೈಗೂಡಿಸಿಕೊಂಡಿದ್ದಾರೆ. ಕೇಂದ್ರದ ಪಾಲು ಬಂದಿಲ್ಲವೆಂದು ಒಂದು ಸುಳ್ಳನ್ನೇ ನೂರು ಸಾರಿ ಪದೇ ಪದೇ ಹೇಳುತ್ತಾರೆ. ಇದರಿಂದ ಜನರನ್ನು ತಮ್ಮ ಸುಳ್ಳಿನಿಂದ ನಂಬಿಸಬಹುದು ಎಂದು ಅವರು ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಐದು ಗ್ಯಾರಂಟಿ ಯೋಜನೆ ಪೂರೈಸಲು ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ: ನಿಖಿಲ್

    ಬಜೆಟ್‍ನಲ್ಲಿ (Karnataka Budget 2024) ಅಜನಾಂದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಕೊಡುತ್ತೇನೆ ಎಂದಿದ್ದು ನಮ್ಮ ಬಿಜೆಪಿ (BJP) ಸರ್ಕಾರದ ಕೊಡುಗೆಯನ್ನೇ ಪುನರುಚ್ಚರಿಸಿದ್ದಾರೆ. ಹಿಂದೂಗಳಿಗೆ ಬಿಡಿಗಾಸು ನೀಡದೆ ತಮ್ಮ ಅಚ್ಚುಮೆಚ್ಚಿನ ಪಂಗಡಕ್ಕೆ ಅಪಾರ ಅನುದಾನ ಘೋಷಿಸಿ ತಮ್ಮ ಬಾಂಧವರಿಗೆ ನಿಷ್ಠೆಯನ್ನು ತೋರಿಸಿದ್ದಾರೆ. ಆ ಮೂಲಕ ರಾಮನ ಮನೆ ತೆರಿಗೆಯನ್ನು ರಹೀಮನಿಗೆ ಕೊಟ್ಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಮಧ್ಯರಾತ್ರಿ ಒಂದು ಗಂಟೆವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಗಾಂಧಿ ತತ್ವವನ್ನು ಗಾಳಿಗೆ ತೂರಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆಗೆ ದೊಡ್ಡ ಪೆಟ್ಟನ್ನು ನೀಡಲು ಹೊರಟಿದ್ದಾರೆ. ಈ ಸರ್ಕಾರದಲ್ಲಿ ಯಾವುದೂ ನೆಟ್ಟಗಿಲ್ಲ ಎಂಬುದು ಬುರುಡೆ ಬಜೆಟ್‍ನಲ್ಲಿ ಕಾಣಬಹುದು ಎಂದಿದ್ದಾರೆ. ಇದನ್ನೂ ಓದಿ: 1983ರಿಂದ ನಾನು ವಿಧಾನಸಭೆಯಲ್ಲಿದ್ದೇನೆ.. ಬಜೆಟ್ ಮಂಡಿಸುವಾಗ ಯಾರೂ ವಾಕ್‌ಔಟ್ ಮಾಡಿರಲಿಲ್ಲ: ಬಿಜೆಪಿ ವಿರುದ್ಧ ಸಿಎಂ ಗರಂ

  • 1983ರಿಂದ ನಾನು ವಿಧಾನಸಭೆಯಲ್ಲಿದ್ದೇನೆ.. ಬಜೆಟ್ ಮಂಡಿಸುವಾಗ ಯಾರೂ ವಾಕ್‌ಔಟ್ ಮಾಡಿರಲಿಲ್ಲ: ಬಿಜೆಪಿ ವಿರುದ್ಧ ಸಿಎಂ ಗರಂ

    1983ರಿಂದ ನಾನು ವಿಧಾನಸಭೆಯಲ್ಲಿದ್ದೇನೆ.. ಬಜೆಟ್ ಮಂಡಿಸುವಾಗ ಯಾರೂ ವಾಕ್‌ಔಟ್ ಮಾಡಿರಲಿಲ್ಲ: ಬಿಜೆಪಿ ವಿರುದ್ಧ ಸಿಎಂ ಗರಂ

    – ಸಿದ್ದರಾಮಯ್ಯ ಬಜೆಟ್ ಮಂಡಿಸುವಾಗ ಸದನದಿಂದ ಹೊರನಡೆದಿದ್ದ ಬಿಜೆಪಿ ನಾಯಕರು

    ಬೆಂಗಳೂರು: 1983 ರಿಂದ ನಾನು ವಿಧಾನಸಭೆಯಲ್ಲಿ ಇದ್ದೇನೆ. ಆಡಳಿತ ಮತ್ತು ವಿರೋಧ ಪಕ್ಷದಲ್ಲೂ ಇದ್ದೆ. ಬಜೆಟ್ ಮಂಡಿಸುವಾಗ ವಾಕೌಟ್ ಮಾಡಿದ ನಿದರ್ಶನ ಇಲ್ಲ ಎಂದು ಬಿಜೆಪಿ ನಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

    ಬಜೆಟ್ ಮಂಡನೆ ವೇಳೆ ಬಿಜೆಪಿ ನಾಯಕರು ವಾಕ್‌ಔಟ್ ಮಾಡಿದ್ದಕ್ಕೆ ಕಿಡಿಕಾರಿದ ಸಿಎಂ, 1983 ರಿಂದ ನಾನು ವಿಧಾನಸಭೆಯಲ್ಲಿ ಇದ್ದೇನೆ. ಆಡಳಿತ ಮತ್ತು ವಿರೋಧ ಪಕ್ಷ ಎರಡರಲ್ಲೂ ಇದ್ದೆ. ಬಜೆಟ್ ಮಂಡನೆ ಮಾಡುವಾಗ ಯಾರು ಕೂಡ ವಾಕ್‌ಔಟ್ ಮಾಡಿರಲಿಲ್ಲ ಯಾರು ವಾಕ್ ಔಟ್ ಮಾಡಿರಲಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯ ಬಜೆಟ್‌ನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್

    ಗ್ಯಾರಂಟಿ ಕೊಟ್ಟು ಆರ್ಥಿಕವಾಗಿ ದಿವಾಳಿ ಆಗಿದೆ. ಇದು ಬಿಟ್ಟಿ ಗ್ಯಾರಂಟಿ ಅಂತ (ಬಿಜೆಪಿ) ಹೇಳಿದರು. ಅದರೆ ಬಜೆಟ್ ಗಾತ್ರ 13% ಹೆಚ್ಚಳ ಆಗಿದ್ದು, ಆರ್ಥಿಕತೆ ಸುಭದ್ರವಾಗಿದೆ. 36 ಸಾವಿರ ಕೋಟಿ ಗ್ಯಾರಂಟಿ ಕೊಟ್ಟರು. ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಬರ ಬಂದಿದೆ. ಒಟ್ಟು 35 ಸಾವಿರ ಕೋಟಿ ನಷ್ಟ ಆಗಿದೆ. ಕೇಂದ್ರಕ್ಕೆ 18,171 ಕೋಟಿ ಬರ ಪರಿಹಾರ ನಿಯಮದ ಪ್ರಕಾರ, ಎನ್‌ಡಿಆರ್‌ಎಫ್ ಪ್ರಕಾರ ಕೇಳಿದ್ದೇವೆ. ಇದು ನಮ್ಮ ತೆರಿಗೆ ಹಣ ಅದಕ್ಕೆ ಕೇಳ್ತಿದ್ದೇವೆ. ಇದುವರೆಗೂ ಕೇಂದ್ರ ಸರ್ಕಾರ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ ಎಂದು ಬೇಸರಿಸಿದ್ದಾರೆ.

    ನಾನು ಬಜೆಟ್ ಓದೋಕೆ ಪ್ರಾರಂಭ ಮಾಡಿದಾಗ ಸುನೀಲ್ ಏನಿಲ್ಲ… ಏನಿಲ್ಲ ಅಂತ ಹೇಳಿದ್ರು. ಅವರ ತಲೆಯಲ್ಲಿ ಏನು ಇಲ್ಲ. ಅವರಿಗೆ ಸಂವಿಧಾನ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ಬಿಜೆಪಿ ಅವರಿಗೆ ರಾಜಕೀಯ ಮಂಜು ಆಗಿದೆ. ಕಾಮಾಲೆ ರೋಗದವರಿಗೆ ಕಾಣೋದೆಲ್ಲ ಹಳದಿಯಂತೆ ಅವರಿಗೆ ಆಗಿದೆ. ಬಿಜೆಪಿ ಅವರು ರಾಜಕೀಯ ಮಾಡಲಿ. ಯಾವುದೇ ಟೀಕೆಗಳು, ಆರೋಗ್ಯಕರವಾಗಿ ಇರಬೇಕು. ಟೀಕೆ ಮಾಡೋದಕ್ಕೆ ಇವರು ಟೀಕೆ ಮಾಡ್ತಾರೆ. ಏನಿಲ್ಲ.. ಏನಿಲ್ಲ.. ಅಂತ ಶುರು ಮಾಡಿದ್ರು. ಆಮೇಲೆ ಪ್ಲೇಕಾರ್ಡ್ ಹಿಡಿದುಕೊಂಡು ಬಂದಿದ್ದರು. ಇದು ಪ್ಲ್ಯಾನ್ ಮಾಡಿದ್ದು ಅಲ್ಲವಾ? ನಾನು ವಸ್ತುಸ್ಥಿತಿ ಹೇಳಿದ್ರೆ ಅವರಿಗೆ ನುಂಗಲಾರದ ತುತ್ತು. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದರು ಎಂಬ ಗಾದೆಯಂತೆ ಬಿಜೆಪಿಗೆ. ಬಿಜೆಪಿ ಅವರಿಗೆ ಸತ್ಯ ಹೇಳಿದ್ರೆ ತಡೆದುಕೊಳ್ಳಲು ಆಗೊಲ್ಲ. ಕರ್ನಾಟಕಕ್ಕೆ ಆಗಿದ ಅನ್ಯಾಯ ಹೇಳೋದು ನನ್ನ ಜವಾಬ್ದಾರಿ. ಕೇಂದ್ರದಿಂದ ಆದ ಅನ್ಯಾಯ ಹೇಳೋದು ನನ್ನ ಜವಾಬ್ದಾರಿ. ಬಿಜೆಪಿ ಅವರು ಕೋಲೆ ಬಸವನ ತರಹ ತಲೆ ಅಳ್ಳಾಡಿಸದೇ ಕೇಂದ್ರದ ಬಳಿ ಕೇಳಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ ಕೈ ಹಿಸುಕಿಕೊಂಡಿದ್ದಾರೆ: ಡಿಕೆಶಿ

  • ರಾಜ್ಯ ಬಜೆಟ್‌ನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್

    ರಾಜ್ಯ ಬಜೆಟ್‌ನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನ್ನು ಬಿಜೆಪಿ (BJP) ಶಾಸಕ ಎಸ್.ಟಿ ಸೋಮಶೇಖರ್ (S.T Somashekar) ಹಾಡಿ ಹೊಗಳಿದ್ದಾರೆ. ಈ ಬಜೆಟ್ 7 ಕೋಟಿ ಜನರ ಬಜೆಟ್ ಆಗಿದೆ. ನಾನು ಸಿಎಂ ಮತ್ತು ಡಿಸಿಎಂ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ.

    ನಗರದಲ್ಲಿ (Be ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಬಗ್ಗೆ ಮಾತ್ರ ನಾನು ಮಾತಾನಾಡುತ್ತೇನೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಕಸದ ಘಟಕಗಳು ಇದ್ದವು. ಅವುಗಳನ್ನ ಹೊರಗೆ ಹಾಕುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಜನರ ಸಂಕಷ್ಟ ನಿವಾರಣೆಗೆ ಸಿಎಂ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಶಾಲಾ-ಕಾಲೇಜುಗಳ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ; ಸಿಎಂಗೆ ಮಧು ಬಂಗಾರಪ್ಪ ಅಭಿನಂದನೆ

    110 ಹಳ್ಳಿಗಳಿಗೆ ಕಾವೇರಿ ನೀರಿನ ಸೌಲಭ್ಯ ಮಾಡುವ ಭರವಸೆ ನೀಡಿದ್ದಾರೆ. ಸಂಚಾರ ಸಮಸ್ಯೆ ನಿವಾರಣೆ ಬಗ್ಗೆ ಹೇಳಿದ್ದಾರೆ. ವೈಟ್ ಟ್ಯಾಪಿಂಗ್ ಕ್ಲಿಯರ್ ಮಾಡುವ ಬಗ್ಗೆ ಬಜೆಟ್‌ನಲ್ಲಿ ತಿಳಿಸಿದ್ದಾರೆ. ಇನ್ನೂ ಬೆಂಗಳೂರು ಬಿಟ್ಟು ಹೊರಗೆ ಏನಿದೆ ಎಂದು ನೋಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ ಕೈ ಹಿಸುಕಿಕೊಂಡಿದ್ದಾರೆ: ಡಿಕೆಶಿ

  • ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ʻಚಿನ್ನʼ ಗೆದ್ದವರಿಗೆ 6 ಕೋಟಿ ರೂ. ಗಿಫ್ಟ್‌ – ಬೆಂಗ್ಳೂರಿಗೇ ಬರಲಿದೆ ʻಕ್ರೀಡಾ ನಗರʼ

    ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ʻಚಿನ್ನʼ ಗೆದ್ದವರಿಗೆ 6 ಕೋಟಿ ರೂ. ಗಿಫ್ಟ್‌ – ಬೆಂಗ್ಳೂರಿಗೇ ಬರಲಿದೆ ʻಕ್ರೀಡಾ ನಗರʼ

    – ಬೆಳ್ಳಿ ಪದಕ ವಿಜೇತರಿಗೆ 6 ಕೋಟಿ ರೂ, ಕಂಚಿನ ಪದಕ ವಿಜೇತರಿಗೆ 3 ಕೋಟಿ ರೂ. ಪ್ರೋತ್ಸಾಹಧನ

    ಬೆಂಗಳೂರು: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics 2024) ಚಿನ್ನದ ಪದಕ ಗಳಿಸುವ ಕ್ರೀಡಾಪಟುಗಳಿಗೆ 6 ಕೋಟಿ ರೂ., ಬೆಳ್ಳಿ ಪದಕ ಪಡೆಯುವ ಕ್ರೀಡಾಪಟುಗಳಿಗೆ 4 ಕೋಟಿ ರೂ. ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುಗಳಿಗೆ 03 ಕೋಟಿ ರೂ. ಪ್ರೋತ್ಸಾಹಧನ ಘೋಷಣೆ. ಇದನ್ನೋ ಓದಿ: Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

    ಇದೇ 2024ರ ಜುಲೈ 26ರಿಂದ ಆಗಸ್ಟ್‌ 11ರ ವರೆಗೆ ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ಕ್ರೀಡಾಹಬ್ಬ ನಡೆಯಲಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ. ಇದನ್ನೋ ಓದಿ: ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    ಕ್ರೀಡಾ ಕ್ಷೇತ್ರಕ್ಕೆ ಸಿಎಂ ಕೊಡುಗೆ ಅಪಾರ:

    * ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಶೇ.2 ರಷ್ಟು ಹುದ್ದೆ ಮೀಸಲು.

    * ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿ 70 ಎಕರೆ ಪ್ರದೇಶದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾ ನಗರ (Sports City) ಸ್ಥಾಪನೆ ಹಾಗೂ 4 ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳ ನಿರ್ಮಾಣ.

    * ರಾಜ್ಯದ ವಿವಿಧ ಕ್ರೀಡಾ ಸಂಘ ಸಂಸ್ಥೆಗಳಿಗೆ 12 ಕೋಟಿ ರೂ. ಅನುದಾನ

    * ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಕ್ರೀಡಾಪಟುಗಳಿಗೆ 6 ಕೋಟಿ ರೂ., ಬೆಳ್ಳಿ ಪದಕ ಪಡೆಯುವ ಕ್ರೀಡಾಪಟುಗಳಿಗೆ 4 ಕೋಟಿ ರೂ. ಹಾಗೂ ಕಂಚಿನ ಪದಕ ಪಡೆಯುವ ಕ್ರೀಡಾಪಟುಗಳಿಗೆ 03 ಕೋಟಿ ರೂ. ಪ್ರೋತ್ಸಾಹಧನ ಘೋಷಣೆ.

    • ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಿಗೆ 35 ಲಕ್ಷ ರೂ., ಬೆಳ್ಳಿ ಪದಕ ವಿಜೇತ ಕ್ರೀಡಾಪಟುಗಳಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತ ಕ್ರೀಡಾಪಟುಗಳಿಗೆ 15 ಲಕ್ಷ ರೂ. ಪ್ರೋತ್ಸಾಹಧನ ನೀಡಲು ಕ್ರಮ.

    * ರಾಜ್ಯದ 14 ಸ್ಥಳಗಳಲ್ಲಿ ಮುಂದಿನ ಎರಡು ವರ್ಷದೊಳಗೆ 35 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯ, ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ ಹಾಗೂ 10 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ.

  • ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ ಕೈ ಹಿಸುಕಿಕೊಂಡಿದ್ದಾರೆ: ಡಿಕೆಶಿ

    ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ ಕೈ ಹಿಸುಕಿಕೊಂಡಿದ್ದಾರೆ: ಡಿಕೆಶಿ

    – ನನ್ನ ನೋಡಿದ್ರೆ ಬ್ರಾಂಡ್ ಕಾಣಲ್ವಾ?

    ಬೆಂಗಳೂರು: ಬಜೆಟ್ (Karnataka Budget 2024) ಮೊತ್ತ 3 ಲಕ್ಷ ಕೋಟಿ 71 ಸಾವಿರ ರೂ. ಮುಟ್ಟಿದ್ದು, ಈ ನಂಬರ್ ನೋಡಿ ವಿರೋಧ ಪಕ್ಷದವರು ಕುಳಿತುಕೊಳ್ಳಲು ಆಗದೆ, ಇಂಥ ಬಜೆಟ್ ಕೊಡಲು ಆಗಲಿಲ್ಲ ಎಂದು ಕೈ ಹಿಸುಕಿಕೊಂಡ್ರು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಬಿಜೆಪಿಗರ (BJP) ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಬಜೆಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಬಜೆಟ್‍ಗೆ ಅವಮಾನ ಮಾಡಿ ಹೋಗಿರಲಿಲ್ಲ. ಬಜೆಟ್ ಬೈಕಾಟ್ ಮಾಡೋದು ರಾಜ್ಯದ ಜನತೆಗೆ ಮಾಡಿದ ಅವಮಾನವಾಗಿದೆ. ಅಲ್ಲದೇ ಅನ್ನಭಾಗ್ಯ, ಗೃಹಜ್ಯೋತಿ, ಫಲಾನುಭವಿಗಳಿಗೆ, ಫ್ರೀಯಾಗಿ ಬಸ್ಸಲ್ಲಿ ಓಡಾಡುವವರಿಗೆ ಹಾಗೂ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿ – ಜಿಲ್ಲೆಗೊಂದು ಡೇ ಕೇರ್ ಕಿಮೋಥೆರಪಿ ಕೇಂದ್ರ

    ಈ ಬಜೆಟ್ ಜನರ ಬದುಕನ್ನು ಬದಲಾಯಿಸುವ ಬಜೆಟ್ ಆಗಿದೆ. ನೀರಾವರಿ, ಕಳಸಾ ಬಂಡೂರಿಗೆ ಟೆಂಡರ್ ಕರೆದಿದ್ದೇವೆ, ಬೆಂಗಳೂರಿನ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಬೆಂಗಳೂರಿಗೆ ಐದು ಟೌನ್ ಶಿಪ್ ಕೊಟ್ಟಿದ್ದೇವೆ. ಜನರ ಮನೆ ಬಾಗಿಲಿಗೆ ಅಕ್ಕಿ ತಲುಪಿಸುತ್ತಿದ್ದೇವೆ ಎಂದು ಬಜೆಟ್‍ನ್ನು ಸಮರ್ಥಿಸಿಕೊಂಡಿದ್ದಾರೆ.

    ಯಾರ ಮೇಲೂ ಹೆಚ್ಚಿಗೆ ತೆರಿಗೆ ಹೊಣೆ ಕೊಟ್ಟಿಲ್ಲ, ಗ್ಯಾರಂಟಿ ಸ್ಕೀಮ್ ಕೊಟ್ಟಿದ್ದೇವೆ. ನನ್ನ ಇಲಾಖೆ ಬಗ್ಗೆ ಮಾತನಾಡ್ತಾ ಇಲ್ಲ, ನಾನು ಸಮಗ್ರ ಕಲ್ಯಾಣ ಕರ್ನಾಟಕದವನು. ಇದು ರಾಜ್ಯದ ಬಜೆಟ್, ಇದರಿಂದ ಬಿಜೆಪಿ ಶಾಸಕರಿಗೂ ಖುಷಿಯಾಗಿದೆ ಅವರಿಗೆ ಹೇಳಿಕೊಳ್ಳಲು ಆಗಲ್ಲ ಎಂದಿದ್ದಾರೆ.

    ನನ್ನ ಇಲಾಖೆ ಬಿಡಿ, ರಾಜ್ಯದ ಬಗ್ಗೆ ನೋಡಿ. ಯಡಿಯೂರಪ್ಪ ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ. ಅವರ ಕ್ಷೇತ್ರಕ್ಕೂ ಮಾಡಿದ್ದೇವೆ. ಎಸ್.ಟಿ ಸೋಮಶೇಖರ್ ಸಹ 110 ಊರುಗಳಿಗೆ ನೀರು ಕೇಳಿದ್ರು, ಅವರಿಂದಲೇ ಸೇರಿಸಿದ್ದೇವೆ. ಇದು ಫಸ್ಟ್ ಕ್ಲಾಸ್ ಬಜೆಟ್ ಆಗಿದೆ. ನಮ್ಮಲ್ಲಿರೋ ಆರ್ಥಿಕ ಶಕ್ತಿ, ಆರ್ಥಿಕ ಶಿಸ್ತಿನ ಮೇಲೆ ಸಾಲ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಬಜೆಟ್‍ನಲ್ಲಿ ಬ್ರಾಂಡ್ ಬೆಂಗಳೂರು ಕಾಣ್ತಿಲ್ಲ ಎನ್ನುವ ಹೆಚ್‍ಡಿಕೆ ಆರೋಪಕ್ಕೆ, ನನ್ನ ನೋಡಿದ್ರೆ ಬ್ರಾಂಡ್ ಕಾಣ್ತಿಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರಿಗೆ ಅಸೆಂಬ್ಲಿಗೆ ಬರಲು ಆಗಿಲ್ಲ. ಅವರು ಬಂದು ಕೂತು ನೋಡಿದ್ರೆ ಗೊತ್ತಾಗಿರೋದು. ಎಲ್ಲೋ ಕೂತು ನೋಡಿ, ಮಾಧ್ಯಮಕ್ಕೆ ಹೇಳಿಕೆ ಕೊಡ್ತಾರೆ. ಬಂದು ನೋಡಿದ್ರೆ ನಾವು ಎಂತಹ ಬಜೆಟ್ ಕೊಡ್ತೀವಿ ಎಂದು ಗೊತ್ತಾಗುತ್ತಿತ್ತು ಎಂದಿದ್ದಾರೆ.

    ರಾಜ್ಯಸಭೆ ನಾಮಪತ್ರ ವಿಚಾರವಾಗಿ, ಕುಪೇಂದ್ರ ರೆಡ್ಡಿ ಹಾಕಿದಾರಲ್ಲಾ. ಅವರು ಗೆದ್ದಂಗೆ ಎಂದಿದ್ದಾರೆ. ಇದನ್ನೂ ಓದಿ: Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

  • Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

    Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದು 15 ಬಾರಿ ಬಜೆಟ್‌ ಮಂಡಿಸಿ ರಾಜ್ಯ ರಾಜಕೀಯದ ಇತಿಹಾಸದಲ್ಲೇ ದಾಖಲೆ ಬರೆದಿದ್ದಾರೆ. ಒಟ್ಟು 3,71,383 ಕೋಟಿ ರೂ. ಗಾತ್ರದ ಬಜೆಟ್‌ ಅನ್ನು ಶುಕ್ರವಾರ ಮಂಡಿಸಿದ್ದಾರೆ. ಇದನ್ನೂ ಓದಿ: 7 ವರ್ಷದಲ್ಲಿ ರಾಜ್ಯಕ್ಕೆ 59,274 ಕೋಟಿ ಜಿಎಸ್‌ಟಿ ನಷ್ಟ: ಬಜೆಟ್‌ನಲ್ಲಿ ಕೇಂದ್ರಕ್ಕೆ ತಿವಿದ ಸಿದ್ದರಾಮಯ್ಯ

    ಬಜೆಟ್‌ ಗಾತ್ರದ ಪೈಕಿ ಒಟ್ಟು ಸ್ವೀಕೃತಿ 3,68,674 ಕೋಟಿ ರೂ., ರಾಜಸ್ವ ಸ್ವೀಕೃತಿ 2,63,178 ಕೋಟಿ ರೂ.ಗಳಿದ್ದು, ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ ಮತ್ತು 1 ರೂ. ಹೋಗಿದ್ದು ಎಲ್ಲಿಗೆ ಎನ್ನುವ ವಿವರ ಇಲ್ಲಿದೆ. ಇದನ್ನೂ ಓದಿ: ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    1 ರೂಪಾಯಿ ಹೋಗಿದ್ದು ಎಲ್ಲಿಗೆ?
    (ಪೈಸೆಗಳಲ್ಲಿ ನೀಡಲಾಗಿದೆ)

    * ನೀರು ಪೂರೈಕೆ ಮತ್ತು ನೈರ್ಮಲ್ಯ – 3
    * ಸಾಲ ತೀರಿಕೆ – 18
    * ಇತರ ಸಾಮಾನ್ಯ ಸೇವೆಗಳು – 17
    * ಸಮಾಜ ಕಲ್ಯಾಣ – 15
    * ಇತರ ಆರ್ಥಿಕ ಸೇವೆಗಳು – 15
    * ಕೃಷಿ ಮತ್ತು ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ – 14
    * ಶಿಕ್ಷಣ – 11
    * ಆರೋಗ್ಯ – 4
    * ಇತರ ಸಾಮಾಜಿಕ ಸೇವೆಗಳು – 3

    1 ರೂಪಾಯಿ ಬಂದಿದ್ದು ಎಲ್ಲಿಂದ?
    (ಪೈಸೆಗಳಲ್ಲಿ ನೀಡಲಾಗಿದೆ)

    * ರಾಜ್ಯದ ತೆರಿಗೆಯೇತರ ರಾಜಸ್ವದಿಂದ – 4
    * ರಾಜ್ಯ ತೆರಿಗೆ ಆದಾಯದಿಂದ – 52
    * ಸಾಲದಿಂದ – 28
    * ಕೇಂದ್ರ ತೆರಿಗೆ ಪಾಲಿನಿಂದ – 12
    * ಕೇಂದ್ರ ಸರ್ಕಾರದ ಸಹಾಯಾನುಧಾನ – 4

    ರಾಜ್ಯದ ಸ್ವಂತ ತೆರಿಗೆಗಳ ವಿವರ (ಕೋಟಿ ರೂ.ಗಳಲ್ಲಿ)
    * ಮೋಟಾರು ವಾಹನ ತೆರಿಗೆ – 13,000 (7%)
    * ನೋಂದಣಿ ಮತ್ತು ಮುದ್ರಾಂಕ – 26,000 (14%)
    * ರಾಜ್ಯ ಅಬಕಾರಿ – 38,525 (20%)
    * ವಾಣಿಜ್ಯ ತೆರಿಗೆಗಳು – 1,10,000 (58%)
    * ಇತರೇ – 2,368 (1%)

  • ಕೆಫೆ ಸಂಜೀವಿನಿ: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರೇ ನಡೆಸುವ ಕ್ಯಾಂಟೀನ್ ಶುರು

    ಕೆಫೆ ಸಂಜೀವಿನಿ: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರೇ ನಡೆಸುವ ಕ್ಯಾಂಟೀನ್ ಶುರು

    ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರೇ ನಡೆಸುವ ಒಟ್ಟು 50 ‘ಕೆಫೆ ಸಂಜೀವಿನಿ’ (Cafe Sanjeevini) ಕ್ಯಾಂಟೀನ್‌ ಶುರುವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಶುಚಿ-ರುಚಿಯಾಗಿ ಕೈಗೆಟುಕುವ ದರದಲ್ಲಿ ನೀಡಲು ಮಹಿಳೆಯರೇ ನಡೆಸುವ ಕ್ಯಾಂಟೀನ್‌ ‘ಕೆಫೆ ಸಂಜೀವಿನಿ’ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ.

    ಬಜೆಟ್‌ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ (Si, ಈ ವರ್ಷ 50 ಕೆಫೆಗಳನ್ನು 7.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದಾಗಿ ಹೇಳಿದ್ದಾರೆ.  ಇದನ್ನೂ ಓದಿ: ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?

    ಈಗಾಗಲೇ ರಾಜ್ಯದಲ್ಲಿ ಕೈಗೆಟುಕುವ ದರದಲ್ಲಿ ಆಹಾರ ನೀಡಲು ಇಂದಿರಾ ಕ್ಯಾಂಟೀನ್‌ಗಳಿವೆ. ಇದರ ಜೊತೆಗೆ ಈಗ ಕೆಫೆ ಸಂಜೀವಿನಿಯೂ ಸ್ಥಳೀಯ ಆಹಾರಗಳನ್ನು ಜನರಿಗೆ ಪೂರೈಸಲಿದೆ.

  • ಗ್ರಾಮೀಣ ಪತ್ರಕರ್ತರ ಕನಸು ನನಸು- ಬಜೆಟ್‍ನಲ್ಲಿ ಉಚಿತ ಬಸ್ ಪಾಸ್ ಘೋಷಣೆ

    ಗ್ರಾಮೀಣ ಪತ್ರಕರ್ತರ ಕನಸು ನನಸು- ಬಜೆಟ್‍ನಲ್ಲಿ ಉಚಿತ ಬಸ್ ಪಾಸ್ ಘೋಷಣೆ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ತಮ್ಮ ಬಜೆಟ್‍ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ (Free Bus Pass) ಘೋಷಣೆ ಮಾಡಿದ್ದಾರೆ. ಈ ಮೂಲಕ ಗ್ರಾಮೀಣ ಭಾಗದ ಪತ್ರಕರ್ತರ ದಶಕಗಳ ಕನಸು ನನಸಾಗಿದೆ.

    ಗ್ರಾಮೀಣ ಪತ್ರಕರ್ತರಿಗೆ (Rural Journalist) ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯ ನೀಡಲಾಗುವುದು ಎಂದು ಸಿಎಂ ಹೇಳಿದ್ದಾರೆ. ಇದನ್ನೂ ಓದಿ: Karnataka Budget: ರಾಜ್ಯದ ಗ್ರಾಮೀಣ ರಸ್ತೆಗಳಿನ್ನು ಪ್ರಗತಿ ಪಥ, ಕಲ್ಯಾಣ ಪಥ.!

    ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ವಿಶೇಷ ಕಾರ್ಯಕ್ರಮ ಆಯೋಜನೆಗೆ 2 ಕೋಟಿ ರೂ. ಅನುದಾನ ನೀಡಲಾಗುವುದು. ಜೊತೆಗೆ ಸಾಮಾಜಿಕ ನ್ಯಾಯದ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಪತ್ರಕರ್ತರಿಗೆ “ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ” ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

  • ಬೆಳಗಾವಿ ಜಿಲ್ಲೆಯ ವಿಭಜನೆ – ಹುಸಿಯಾದ ಚಿಕ್ಕೋಡಿ ಭಾಗದ ಜನರ ನಿರೀಕ್ಷೆ

    ಬೆಳಗಾವಿ ಜಿಲ್ಲೆಯ ವಿಭಜನೆ – ಹುಸಿಯಾದ ಚಿಕ್ಕೋಡಿ ಭಾಗದ ಜನರ ನಿರೀಕ್ಷೆ

    ಬೆಳಗಾವಿ: ಬಜೆಟ್‌ನಲ್ಲಿ (Karnataka Budget 2024) ಚಿಕ್ಕೋಡಿ (Chikkodi )ಪ್ರತ್ಯೇಕ ಜಿಲ್ಲೆಯಾಗುವ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. ಈ ಸಲುವಾಗಿ ಚಿಕ್ಕೋಡಿಯಲ್ಲಿ ಹೋರಾಟ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಳೆದ 30 ವರ್ಷಗಳಿಂದ ಸತತವಾಗಿ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸುವ ಕೆಲಸ ಮಾಡಿಲ್ಲ. ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ಜಿಲ್ಲೆ ಘೋಷಣೆ ಆಗುತ್ತೆ ಎಂಬ ನಿರೀಕ್ಷೆ ಇತ್ತು. ಜಿಲ್ಲೆಯ ವಿಭಜನೆ ಆಗದೇ ಇರುವುದು ಚಿಕ್ಕೋಡಿ ಭಾಗದ ಜನರ ನಿರೀಕ್ಷೆಯನ್ನು ಹುಸಿಯಾಗಿಸಿದೆ ಎಂದು ಹೋರಾಟಗಾರರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜ್ಯದ ಅಭಿವೃದ್ಧಿಯನ್ನು 20 ವರ್ಷ ಹಿಂದಕ್ಕೆ ಕೊಂಡೊಯ್ಯುವ ಬಜೆಟ್: ವಿಜಯೇಂದ್ರ ವಾಗ್ದಾಳಿ

    ಮುಂದಿನ ದಿನಗಳಲ್ಲಿ ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಇನ್ನು ಮುಂದೆ ಜನ ಪ್ರತಿನಿಧಿಗಳು ಜಿಲ್ಲಾ ವಿಭಜನೆ ಕುರಿತು ಮಾತನಾಡಬಾರದು. ಮಾತನಾಡಿದರೆ ಅಂತವರ ವಿರುದ್ಧ ಧಿಕ್ಕಾರ ಕೂಗುವ ಕೆಲಸ ಮಾಡುತ್ತೇವೆ. ಜನ ಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟನೆ ಮಾಡುವ ಕೆಲಸ ಮಾಡುತ್ತೇವೆ ಎಂದು ಹೋರಾಟ ಸಮಿತಿ ಸದಸ್ಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈಸೂರು ಏರ್‌ಪೋರ್ಟ್‌ ರನ್‌ವೇ ವಿಸ್ತರಣೆಗೆ ಅನುದಾನ ಘೋಷಣೆ – ತವರು ಜಿಲ್ಲೆಗೆ ಸಿಎಂ ಕೊಡುಗೆ ಏನು?