Tag: Karnataka Budget 2022

  • ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್: ಶರವಣ

    ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್: ಶರವಣ

    ಬೆಂಗಳೂರು: ರಾಜ್ಯದ ಸಮಗ್ರ ಮೂಲಭೂತ ಅಭಿವೃದ್ಧಿಗೆ ಒತ್ತು ನೀಡದೇ, ರೈತರ ಸಾಲಾ ಯೋಜನೆಯನ್ನು ಹೆಚ್ಚಿನ ಸಂಖ್ಯೆಯ ರೈತರಿಗೆ ವಿಸ್ತರಿಸದೇ, ಯಥಾಸ್ಥಿತಿ ವಾದವನ್ನು ಪ್ರತಿಪಾದಿಸುವ ಬರೀ ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್ ಎಂದು ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್ ಕುರಿತು  ಜೆಡಿಎಸ್ ಹಿರಿಯ ನಾಯಕ ಟಿ.ಎ ಶರವಣ ಗೇಲಿ ಮಾಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಇಲಾಖಾವಾರು ವಿವರ ನೀಡದೇ ಕೇವಲ ಅಂಕಿ ಅಂಶಗಳ ಚಮತ್ಕಾರ ಮಾಡುವ ಬಜೆಟ್ ಆಗಿದೆ. ಕೃಷಿ, ಕೈಗಾರಿಕೆ, ಸಮಾಜಕಲ್ಯಾಣ, ಶಿಕ್ಷಣ, ನೀರಾವರಿ, ಈ ಪ್ರಮುಖ ವಲಯದಲ್ಲಿ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದೇ, ಇರುವ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲಾಗಿದೆ ಟೀಕಿಸಿದ್ದಾರೆ. ಇದನ್ನೂ ಓದಿ: ಇದೊಂದು ನಿರಾಶಾದಾಯಕ ಬಜೆಟ್: ದಿನೇಶ್ ಗೂಳಿಗೌಡ

    ವಿಧವೆಯರಿಗೆ ಮತ್ತು ವಯೋವೃದ್ಧರಿಗೆ ಹೆಚ್ಚಿಸಿರುವ ಪಿಂಚಣಿ, ಏನೇನೂ ಸಾಲದಾಗಿದ್ದು, ಕನಿಷ್ಠ ಒಂದು ಸಾವಿರ ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ. ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಅವರಿಗೆ ಹೆಚ್ಚಿಸಿರುವ ಗೌರವ ಕೂಡ, ಅತ್ಯಂತ ಕಡಿಮೆಯಾಗಿದ್ದು, ಸರಾಸರಿ 2 ಸಾವಿರ ರೂ. ಗಳನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಪ ಸಂಖ್ಯಾತರಿಗೆ ಈ ಬಜೆಟ್ ನಲ್ಲಿ, ಸಿಕ್ಕಿರುವುದು ಬರೀ ಶೂನ್ಯ ಮಾತ್ರ. ಮೇಕೆದಾಟು ಯೋಜನೆಗೆ, ತುಂಗಭದ್ರಾ ಹೂಳೆತ್ತುವ ಯೋಜನೆ, ಮಹದಾಯಿ ಯೋಜನೆ, ಈ ಯೋಜನೆಗಳಿಗೆ ಸರ್ಕಾರ ನಿಗದಿ ಪಡಿಸಿರುವ ಹಣ ಕಣ್ಣೊರೆಸುವ ತಂತ್ರವಾಗಿದೆ. ಇದರಲ್ಲಿ 2 ಯೋಜನೆಗಳ ವಿವಾಧ ನ್ಯಾಯಾಲಯ ಮತ್ತು ಟ್ರಿಬ್ಯೂನಲ್ ನಲ್ಲಿದ್ದು, ಅವು ಇತ್ಯರ್ಥವಾಗುವವರೆಗೆ ಹಣ, ಬಿಡುಗಡೆ ಮಾಡಬೇಕಿಲ್ಲ ಎಂದು ಗೊತ್ತಿದ್ದರೂ, ಬಜೆಟ್‍ನಲ್ಲಿ ಹಣ ಘೋಷಿಸಿರುವುದು ಹಾಸ್ಯಾಸ್ಪದವಾಗಿದೆ ಎಂದಿದ್ದಾರೆ. ಇದನ್ನೂ ಓದಿ: Karnataka Budget: ತವರು ಜಿಲ್ಲೆಗೆ 15 ಕಾರ್ಯಕ್ರಮಗಳನ್ನು ಘೋಷಿಸಿದ ಸಿಎಂ

    ಬಿ ಖಾತೆಯನ್ನು ಎ ಖಾತೆಯನ್ನಾಗಿ ಬದಲಾಯಿಸವು ಕೈಗೊಂಡಿರುವಂತ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಆದರೆ ಈ ಪ್ರಕ್ರಿಯೆಯನ್ನು ಸಾಧ್ಯವಾದಷ್ಯು ಸರಳೀಕರಣಗೊಳಿಸುವಂತೆ ಅವರು ಸರ್ಕಾರಕ್ಕೆ ವಿನಂತಿಸಿದ್ದಾರೆ. ಕಾರ್ಮಿಕರಿಗೆ, ಕೃಷಿ ಕೂಲಿಕಾರರಿಗೆ, ಸರ್ಕಾರದಿಂದ ಯಾವುದೇ ನೆರವು ಘೋಷಿಸಿಲ್ಲ ಎಂದು ವಿಷಾದಿಸಿದ್ದಾರೆ.

  • ಒಲಿಂಪಿಕ್ಸ್‌ಗೆ ಸಿದ್ಧತೆ – 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ

    ಒಲಿಂಪಿಕ್ಸ್‌ಗೆ ಸಿದ್ಧತೆ – 75 ಕ್ರೀಡಾಪಟುಗಳಿಗೆ ತಲಾ 10 ಲಕ್ಷ

    ಬೆಂಗಳೂರು: 2024ರ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ಗೆ ರಾಜ್ಯದಿಂದ ಕನಿಷ್ಟ 75 ಕ್ರೀಡಾಪಟುಗಳನ್ನು ಸಿದ್ಧಪಡಿಸಲು ‘ಅಮೃತ ಕ್ರೀಡಾ ದತ್ತು ಯೋಜನೆ’ಯಡಿ ತಲಾ 10 ಲಕ್ಷ ರೂ. ಗಳವರೆಗೆ ಪ್ರತಿ ವರ್ಷ ಶ್ರೇಷ್ಠ ಮಟ್ಟದ ತರಬೇತಿ ಪಡೆಯಲು ವಿನಿಯೋಗಿಸಲು ಬಜೆಟ್‍ನಲ್ಲಿ ಸರ್ಕಾರ ಯೋಜನೆ ರೂಪಿಸಿದೆ.

    ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021ನ್ನು ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗುವುದು. ಈ ಕ್ರೀಡಾಕೂಟದಲ್ಲಿ 8,000ಕ್ಕೂ ಅಧಿಕ ಕ್ರೀಡಾಪಟುಗಳು ಹಾಗೂ 20 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ಸಂಘಟಿಸಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ. ಇದನ್ನೂ ಓದಿ: ಜಿಎಸ್‍ಟಿ ಪರಿಹಾರ 3 ವರ್ಷ ವಿಸ್ತರಿಸಿ: ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಸಿಎಂ ಹೇಳಿದ್ದೇನು?

    ಕೇಂದ್ರದ ಪ್ರಾಯೋಜಕತ್ವದ ಎನ್.ಎಸ್.ಡಿ.ಎಫ್. ಯೋಜನೆಯಡಿ ಶಿವಮೊಗ್ಗ ನಗರದಲ್ಲಿ ಹೊಸದಾಗಿ ಕ್ರೀಡಾ ಅಕಾಡೆಮಿ ಸ್ಥಾಪಿಸಲು ಉದ್ದೇಶಿಸಿದ್ದು, ಇದಕ್ಕಾಗಿ 20 ಕೋಟಿ ರೂ.ಗಳ ಅನುದಾನವನ್ನು ಒದಗಿಸಲು ಮುಂದಾಗಿದೆ. 50 ವರ್ಷ ಮೇಲ್ಪಟ್ಟ ಕಷ್ಟ ಪರಿಸ್ಥಿತಿಯಲ್ಲಿರುವ ಕುಸ್ತಿ ಕ್ರೀಡಾಪಟುಗಳಿಗೆ ನೀಡುತ್ತಿರುವ ಮಾಸಾಶನವನ್ನು 1,000 ರೂ.ನಂತೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಇದನ್ನೂ ಓದಿ: ಎಕರೆಗೆ 250 ರೂ. ಗಳಂತೆ ಡೀಸೆಲ್ ಸಹಾಯಧನ – ರೈತರಿಗೆ ಬಜೆಟ್‍ನಲ್ಲಿ ಸಿಕ್ಕಿದ್ದೇನು?

  • ನಂದಿಬೆಟ್ಟ, ಚಾಮುಂಡಿ ಬೆಟ್ಟ, ಮುಳ್ಳಯ್ಯನಗಿರಿಯಲ್ಲಿ ರೋಪ್ ವೇ

    ನಂದಿಬೆಟ್ಟ, ಚಾಮುಂಡಿ ಬೆಟ್ಟ, ಮುಳ್ಳಯ್ಯನಗಿರಿಯಲ್ಲಿ ರೋಪ್ ವೇ

    ಬೆಂಗಳೂರು: ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿ ಪಡಿಸಲು ಬಜೆಟ್‍ನಲ್ಲಿ ಕೆಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.

    * ಪ್ರವಾಸೋದ್ಯಮ ಅಭಿವೃದ್ಧಿ ಹಂಪಿ-ಬಾದಾಮಿ-ಐಹೊಳೆ-ಪಟ್ಟದಕಲ್ಲು-ವಿಜಯಪುರ ಪ್ರವಾಸಿ ವೃತ್ತವನ್ನು ಮತ್ತು ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು-ಹಳೇಬೀಡು ಪ್ರವಾಸಿ ವೃತ್ತವನ್ನಾಗಿ ಅಭಿವೃದ್ಧಿಗೆ ಕ್ರಮ. ಇದನ್ನೂ ಓದಿ : ಏಳು ತಿಂಗಳ ಗರ್ಭಿಣಿಗೆ ಇದೆಂಥ ಟಾರ್ಚರ್? : ಶಾಕ್ ನಲ್ಲಿ ನಟಿ ಸಂಜನಾ

    * ಶ್ರೀರಂಗಪಟ್ಟಣ, ಬೇಲೂರು, ಹಳೇಬೀಡು, ಸೋಮನಾಥಪುರಗಳನ್ನು ಒಳಗೊಂಡಂತೆ ಹೊಯ್ಸಳರ ಸ್ಮಾರಕಗಳನ್ನು ಪ್ರಸಕ್ತ ಸಾಲಿನಲ್ಲಿ ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸಲು ಕ್ರಮ.


    * ಜೋಗ ಜಲಪಾತದಲ್ಲಿ 116 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೋಟೆಲ್ ಹಾಗೂ ರೋಪ್‍ವೇ ಅಭಿವೃದ್ಧಿ.
    * ನಂದಿ ಬೆಟ್ಟದಲ್ಲಿ 93 ಕೋಟಿ ರೂ. ವೆಚ್ಚದಲ್ಲಿ ರೋಪ್‍ವೇ ನಿರ್ಮಾಣಕ್ಕೆ ಅನುಮೋದನೆ.
    * ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ರೋಪ್‍ವೇ ನಿರ್ಮಾಣಕ್ಕೆ ಕ್ರಮ.

    * ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ.
    * ಪರ್ವತ ಮಾಲಾ ಯೋಜನೆಯಡಿ ಚಾಮುಂಡಿ ಬೆಟ್ಟ ಹಾಗೂ ಮುಳ್ಳಯ್ಯನಗಿರಿ ದತ್ತಪೀಠಗಳಲ್ಲಿ ರೋಪ್‍ವೇ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ.
    * ಕಡಲತೀರದ ಪ್ರವಾಸೋದ್ಯಮ ಉತ್ತೇಜನಕ್ಕೆ ಸಿ.ಆರ್.ಜಡ್ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಅನುಮೋದನೆ ಪಡೆಯಲು ಕ್ರಮ.

    * ತದಡಿ ಬಂದರಿನಲ್ಲಿ ಸಮಗ್ರ ಪರಿಸರ-ಪ್ರವಾಸೋದ್ಯಮ ಕೇಂದ್ರ ಅಭಿವೃದ್ಧಿ.


    * ಪಾರಂಪರಿಕ ಪ್ರವಾಸಿ ತಾಣಗಳಾದ ಬೀದರ್ ಹಾಗೂ ಕಲಬುರಗಿ ಕೋಟೆಗಳ ಪುನರುಜ್ಜೀವನಕ್ಕೆ ಕ್ರಮ.
    * ರಾಜ್ಯದ ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು Adopt a Monument ಯೋಜನೆ ಜಾರಿ.
    * ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಾಗೂ ಚಿಕ್ಕಮಗಳೂರಿನ ಮುಳ್ಳಯ್ಯಗಿರಿ ದತ್ತಪೀಠ ಬೆಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೋಪ್‍ವೇ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದ “ಪರ್ವತಮಾಲಾ” ಯೋಜನೆಯಡಿ ಪ್ರಸ್ತಾವನೆಯನ್ನು ಸಲ್ಲಿಕೆ

  • ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ – 10 ಸಾವಿರ ಮಂದಿಗೆ ಉದ್ಯೋಗ

    ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ – 10 ಸಾವಿರ ಮಂದಿಗೆ ಉದ್ಯೋಗ

    ಬೆಂಗಳೂರು: ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್‍ನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಮುಂದಾಗಿದ್ದು, ಇದರಿಂದ ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗವಕಾಶ ಲಭಿಸಲಿದೆ ಎಂದು ಬಸವರಾಜ ಬೊಮ್ಮಾಯಿ ಬಜೆಟ್‍ನಲ್ಲಿ ಘೋಷಿಸಿದ್ದಾರೆ.

    ನವ ಕರ್ನಾಟಕ ನವಬಾರತ ನಿರ್ಮಾಣ ಎಂಬ ಧ್ಯೇಯದಡಿಯಲ್ಲಿ ನವಕರ್ನಾಟಕ ನಿರ್ಮಾಣದ ಪರಿಕಲ್ಪನೆಯನ್ನು ಯೋಜನಾ ಬಧ್ಧವಾಗಿ ಪರಿಸರ ಸ್ನೇಹಿ ನವನಗರಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಚಿನ್ನ ಮತ್ತು ಆಭರಣದ ಕುಶಲಕರ್ಮಿಗಳ ಹಾಗೂ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸೌಲಭ್ಯವನ್ನು ಒದಗಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್‍ನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಮುಂದಾಗಿದ್ದು, ಇದರಿಂದ ಸುಮಾರು ಹತ್ತು ಸಾವಿರ ಜನರಿಗೆ ಉದ್ಯೋಗವಕಾಶ ಲಭಿಸಲಿದೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನ

    ರಾಜ್ಯಕ್ಕೆ ವಿದೇಶಿ ಹೊಡಿಕೆಗಳನ್ನು ಆಕರ್ಷಿಸಲು ಬೆಂಗಳೂರಿನಲ್ಲಿ 2022ರ ನವೆಂಬರ್ 2 ರಿಂದ 4ರವರೆಗೆ “ಇನ್ವೆಸ್ಟ್ ಕರ್ನಾಟಕ-2022” ಜಾಗತಿಕ ಹೂಡಿಕೆದಾರರ ಸಭೆಯನ್ನು ಆಯೋಜಿಸಲಾಗಿದೆ. 2019-20ರಿಂದ ಸ್ಥಗಿತಗೊಂಡಿರುವುವ ಮೈಶುಗರ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಮುಂದಿನ ಎರಡು ವರ್ಷಗಳ ಕಾಲ ಪ್ರಾಯೋಗಿಕವಾಗಿ ಸರ್ಕಾರದ ವತಿಯಿಂದ ಮೈಶುಗರ್ ಕಾರ್ಖಾನೆಯನ್ನು ನಡೆಲಾಗುವುದು. ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿಗಾಗಿ 50 ಕೋಟಿ ರೂ.ಗಳನ್ನು ಒದಗಿಸುವುದಲ್ಲದೆ ಹಣಕಾಸು ಸಂಸ್ಥೆಗಳಿಂದ ದುಡಿಯುವ ಬಂಡವಾಳವನ್ನು ಪಡೆಯಲು ವ್ಯವಸ್ಥೆ ಮಾಡಲು ತೀರ್ಮಾನಿಸಿದೆ.

    ಕಲಬುರಗಿ ಮತ್ತು ವಿಜಯಪುರದಲ್ಲಿ ಮೆಗಾ-ಟೆಕ್ಸ್‌ಟೈಲ್ ಪಾರ್ಕ್‍ಗಳನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ಸ್ಥಾಪಿಸಲು ಪ್ರಸ್ತಾವನೆಯನ್ನು ಸಲ್ಲಿಸಲು ಸರ್ಕಾರ ಮುಂದಾಗಿದೆ. ಬಳ್ಳಾರಿಯಲ್ಲಿ ಜೀನ್ಸ್ ಮತ್ತು ಉಡುಪುಗಳನ್ನು ಉತ್ತೇಜಿಸಲು ಟೆಕ್ಸ್‌ಟೈಲ್ ಪಾರ್ಕ್‍ನ್ನು ಪ್ರಾರಂಭಿಸಲು ಉದ್ದೇಶಿಸಿದೆ.‌ ಇದನ್ನೂ ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲ

    ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನನಲ್ಲಿ ನೂತನ ಜವಳಿ ಪಾರ್ಕ್‍ಗಳನ್ನು ಸಾರ್ವಜನಿಕ -ಖಾದಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಗುವುದು ಇದರಿಂದ್ ಸುಮಾರು 5, ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಕಲಬುರಗಿ ಜಿಲ್ಲೆಯ ಪ್ರಸಿದ್ಧ ಶಹಬಾದ್ ಕಲ್ಲನ್ನು ಹೊಸ ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಅಳವಡಿಸಿ ವ್ಯಾಪಕ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸಲಾಗುವುದು. ಇದೇ ಮಾದರಿಯಲ್ಲಿ ಇಳ್ಕಲ್ ಗ್ರಾನೈಟ್, ಶಿವರಪಟ್ಟಣದಲ್ಲಿ ಶಿಲ್ಪಕಲೆ ಮತ್ತು ಚಳ್ಳಕೆರೆಯಲ್ಲಿನ ಖಾದ್ಯ ತೈಲ ಉದ್ಯಮಗಳಿಗೆ ಪ್ರೋತ್ಸಾಹಿಸಲು ಮುಂದಾಗಿದೆ.

    2021ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಹೂಡಿಕೆಯ (ಎಫ್‍ಡಿಐ) ಹರಿವಿನ ಪ್ರಮಾಣದಲ್ಲಿ ಕರ್ನಾಟಕವು ಶೇ.40ರಷ್ಟುನ್ನು (1.27 ಕೋಟಿ ರೂ.) ಆಕರ್ಷಿಸಿದ್ದು, ರಾಷ್ಟ್ರದಲ್ಲಿಯೇ ಅಗ್ರಸ್ಥಾನದಲ್ಲಿದೆ. ಇದನ್ನೂ ಓದಿ: 125 ಸಿನಿಮಾಗಳಿಂದ 200 ಚಿತ್ರಗಳಿಗೆ ಸಬ್ಸಿಡಿ ಏರಿಕೆ: ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ ಘೋಷಣೆ

    ಭಾರತ ಸರ್ಕಾರದ 76 ಕೋಟಿ ರೂ. ವೆಚ್ಚದ ಸೆಮಿಕಂಡಕ್ಟರ್ ಭಾರತ್ ಅಭಿಯಾನದ ಗರಿಷ್ಠ ಲಾಭ ಪಡೆದುಕೊಂಡು ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಗೆ ಹೂಡಿಕೆಗಳನ್ನು ಆಕರ್ಷಿಸಲು ರಾಜ್ಯ ಸರ್ಕಾರ ವತಿಯಿಂದ ವಿಶೇಷ ಪ್ರೋತ್ಸಾಹಗಳನ್ನು ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಬೊಮ್ಮಾಯಿ ಬಜೆಟ್ ಭಾಷಣದಲ್ಲಿ ತಿಳಿಸಿದರು.

  • ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನ

    ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನ

    ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆ ಬೆನ್ನಲ್ಲೇ ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

    ರಾಜ್ಯ ಮಹತ್ವಾಕಾಂಕ್ಷಿ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಪ್ರಥಮ ಹಂತದ ಕಾಮಗಾರಿಗಳನ್ನು ಪ್ರಸ್ತಕ ಸಾಲಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸುವುದು. ಈ ಯೋಜೆನೆಗೆ 2ನೇ ಹಂತದ 260 ಕಿ.ಮೀ ಉದ್ದ ಗುರತ್ವ ಕಾಲುವೆ ಟಿ.ಜಿ ಹಳ್ಳಿ- ರಾಮನಗರ ಫೀಡರ್, ಮಧುಗಿರಿ ಫೀಡರ್ ಹಾಗೂ ಟಿ.ಜಿ ಗೌರೀಬಿದನೂರು ಫೀಡರ್ ಕಾಲುವೆ ಕಾಮಗಾರಿಗಳನ್ನು ಪ್ರಸ್ತಕ ಸಾಲಿನಲ್ಲಿ ಪೂರ್ಣಗೊಳಿಸಿ, ಮುಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಸಲು ಕ್ರಮ ಜರುಗಿಸಲು ಹಾಗೂ ಯೋಜೆನಗೆ ಉಳಿಗೆ ಕಾಮಗಾರಿಗಳನ್ನು ಹಂತ, ಹಂತವಾಗಿ ಕಾರ್ಯಗತಗೊಳಿಸಲು ಕ್ರಮವಹಿಸಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ 3,000 ಕೋಟಿ ರೂಪಾಯಿ ಅನುದಾನ ಒದಗಿಲಸಾಗುವುದು. ಇದನ್ನೂ ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲ

    ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನಾ ವರದಿಗೆ ಕೇಂದ್ರ ಸರ್ಕಾರದ ಸಮಕ್ಷ ಪ್ರಾಧಿಕಾರಿಗಳ ತೀರುವಳಿಗನ್ನು ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯ ಅನುಷ್ಠಾನಕ್ಕೆ ಪ್ರಸ್ತಕ ಸಾಲಿನಲ್ಲಿ 1,000 ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗುವುದು. ಇದನ್ನೂ ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲ

    ನೀರಾವರಿಗೆ ಆದ್ಯತೆ:
    * ಕೃಷ್ಣಾ ಮೇಲ್ದಂಡೆ ಯೋಜೆನೆ ಹಂತ 3ಕ್ಕೆ- 5000 ಕೋಟಿ ರೂ.
    * ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ- 1000 ಕೋಟಿ ರೂ
    * ಭದ್ರಾ ಮೇಲ್ದಂಡೆ ಯೋಜನೆ- 3000 ಕೋಟಿ ರೂ ಅನುದಾನ
    * ಮೇಕೆದಾಟು ಯೋಜನೆಗೆ 1,000 ಕೋಟಿ ಅನುದಾನ
    * ಎತ್ತನಹೊಳೆ ಯೋಜನೆ- 3,000 ಕೋಟಿ ರೂ ಅನುದಾನ

  • Karnataka Budget  – ರೈತರ ಡೀಸೆಲ್‌ ಬಳಕೆಗೆ ಸಬ್ಸಿಡಿ

    Karnataka Budget – ರೈತರ ಡೀಸೆಲ್‌ ಬಳಕೆಗೆ ಸಬ್ಸಿಡಿ

    ಬೆಂಗಳೂರು: ರೈತರ ಡಿಸೇಲ್ ಬಳಕೆಗೆ ಸಬ್ಸಿಡಿ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಚೊಚ್ಚಲ ಬಜೆಟ್‌ ಮಂಡಿಸುತ್ತಿದ್ದಾರೆ. 2,65,720 ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.

    ಬಜೆಟ್‌ ಮುಖ್ಯಾಂಶಗಳು
    – ರೈತರಿಗೆ ಡಿಸೇಲ್ ಬಳಕೆಗೆ ಸಬ್ಸಿಡಿ.
    – 7 ಹೊಸ ವಿವಿ ಘೋಷಣೆ. ಗೋವುಗಳ ದತ್ತು ಪಡೆಯಲು ಪುಣ್ಯ ಕೋಟಿ ಯೋಜನೆ
    – ಅಕ್ರಮ ಸಕ್ರಮ ಯೋಜನೆ ಘೋಷಣೆ. ಬಿ ಖಾತೆಯಿಂದ ಎ ಖಾತೆ ವರ್ಗಾವಣೆಗೆ ಅವಕಾಶ
    – ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ

    – ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 33,700 ಕೋಟಿ
    – ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ವಿಸ್ತರಣೆ
    – 200 ಕನ್ನಡ ಚಲನ ಚಿತ್ರಗಳಿಗೆ ಸಹಾಯಧನ ಘೋಷಣೆ  ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

    – ಧಾರ್ಮಿಕ ದತ್ತಿ ಇಲಾಖೆ ತಸ್ತೀಕ್ 60, ಸಾವಿರ ರೂ ಗಳಿಗೆ ಹೆಚ್ಚಳ. ಮುಜರಾಯಿ ದೇವಸ್ಥಾನ ಗಳಿಗೆ ಸ್ವಾಯತ್ತ ತೆ ನೀಡಲು ಕ್ರಮ
    – ಕೆ ಎಸ್ ಆರ್ ಪಿ ಮಹಿಳಾ ಕಂಪನಿ ಆರಂಭ. ಕಾರಾಗೃಹದಲ್ಲಿ ಅತ್ಯಾಧುನಿಕ ಮಾದರಿಯ ಉಪಕರಣ ಅಳವಡಿಕೆ
    – ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ನೆರವು